Fri 20 Jan 2017, 5:03AM

ಹೆಚ್ಚಿನ ಸುದ್ದಿಗಳು

 ಗ್ರಾಹಕರಿಗೆ ತನ್ನ 4ಜಿ ಸಿಮ್ ಕೊಡುಗೆ ಅಗಣಿತ ಉಚಿತ ಧ್ವನಿ ಮತ್ತು ಉಚಿತ ಅನಿಯಮಿತ ಡೇಟಾ, ಎಸ್.ಎಂ.ಎಸ್, ವಿಡಿಯೋ ಕರೆ, ಉಚಿತ ರೋಮಿಂಗ್ ಇತ್ಯಾದಿ ಸೇವೆಗಳನ್ನು ನೀಡುವ ಮೂಲಕ ಟೆಲಿಕಾಂ ರಂಗದಲ್ಲಿ ಸಂಚಲನ ಸೃಷ್ಠಿಸಿದ್ದ ರಿಲಯನ್ಸ್ ಜಿಯೋ ಡಿಸೆಂಬರ್ ಅಂತ್ಯಕ್ಕೆ 72.4 ಮಿಲಿಯನ್ ಗ್ರಾಹಕರನ್ನು ಹೊಂದಿದೆ. ಡಿಸೆಂಬರ್ 31ರವರೆಗೆ ಸುಮಾರು 72.4 ಮಿಲಿಯನ್ ಗ್ರಾಹಕರು ರಿಲಯನ್ಸ್ ಜಿಯೋ ಸೇವೆಗಳನ್ನು ಬಳಸುತ್ತಿದ್ದು, ಪ್ರತಿ ದಿನ ಲಕ್ಷಕ್ಕೂ ಹೆಚ್ಚು ಮಂದಿ ಜಿಯೋ ಗ್ರಾಹಕರಾಗುತ್ತಿದ್ದಾರೆ ಎಂದು ಜಿಯೋ ಕಾರ್ಯತಂತ್ರ ಮತ್ತು ಯೋಜನೆ ಮುಖ್ಯಸ್ಥ ಅನ್ಯುಮಾನ್ ಠಾಕೂರ್ ಹೇಳಿದ್ದಾರೆ.

 ಐ.ಐ.ಟಿಯಲ್ಲಿ ವಿದ್ಯಾರ್ಥಿನಿಯರಿಗೆ ಮೀಸಲಾತಿ ನೀಡಲು ಸಮಿತಿ ಶಿಫಾರಸ್ಸು ಮಾಡಿದೆ. ಪ್ರತಿಷ್ಠಿತ ಸಂಸ್ಥೆಗೆ ವಿದ್ಯಾರ್ಥಿನಿಯರ ಪ್ರವೇಶವನ್ನು ಕುಸಿಯದಂತೆ ತಡೆಯಲು ಸಮಿತಿ ಈ ಶಿಫಾರಸ್ಸು ಮಾಡಿದೆ. ಶೇ.20 ಮೀಸಲಾತಿ ನೀಡಬೇಕೆಂದು ಜಂಟಿ ಪ್ರವೇಶ ಮಂಡಳಿಯ ಉಪಸಮಿತಿ ನಿರ್ಧರಿಸಿದ್ದು, 2018ರ ವರ್ಷದಿಂದ ಮೀಸಲಾತಿ ಜಾರಿಗೆ ಬರುವುದೇ ಎಂದು ನಿರ್ಧರವಾಗಿಲ್ಲ. ವಿದ್ಯಾರ್ಥಿನಿಯರ ಸಂಖ್ಯೆಯಲ್ಲಿ ಹೆಚ್ಚಳ ತರಲು ಈ ಶಿಫಾರಸ್ಸಿಗೆ ಅನುಮೋದನೆ ಸಿಗುವ ಸಾಧ್ಯತೆಯಿದೆ ಎಂದು ಉಪ ಸಮಿತಿ ಅಧ್ಯಕ್ಷ ಪ್ರೊಫೆಸರ್ ತಿಮೋತಿ ಗೋನ್ಸಾಲ್ವಿಸ್ ಹೇಳಿದ್ದಾರೆ.

  ಎ.ಟಿ.ಎಂನಿಂದ ಹಣ ವಿಥ್‌ಡ್ರಾ ಮಾಡುವ ಮಿತಿಯನ್ನು ಆರ್.ಬಿ.ಐ ಏರಿಸಿದ್ದು, ಇನ್ನು ದಿನಕ್ಕೆ ಎ.ಟಿ.ಎಂನಿಂದ 10 ಸಾವಿರ ರೂ ವಿಥ್‌ಡ್ರಾ ಮಾಡಬಹುದು. ಆರಂಭದಲ್ಲಿ 2 ಸಾವಿರ ರೂ ವಿಥ್‌ಡ್ರಾ ಮಾಡಲು ಅವಕಾಶ ಇತ್ತು. ಬಳಿಕ ಜನವರಿ 1 ರಿಂದ 4,500 ರೂ ವಿಥ್‌ಡ್ರಾ ಮಾಡಲು ಅವಕಾಶ ಕಲ್ಪಿಸಲಾಗಿತ್ತು. ಇದೀಗ ವಿಥ್‌ಡ್ರಾ ಮಿತಿಯನ್ನು 10 ಸಾವಿರ ರೂಗಳಿಗೆ ಏರಿಕೆ ಮಾಡಲಾಗಿದೆ. ದಿನನಿತ್ಯ ಎ.ಟಿ.ಎಂನಿಂದ ವಿಥ್‌ಡ್ರಾ ಮಿತಿಯನ್ನು ಏರಿಸಲಾಗಿದ್ದರೂ ಉಳಿತಾಯ ಖಾತೆಯಿಂದ ವಾರಕ್ಕೆ 24 ಸಾವಿರ ರೂ ಮಾತ್ರ ವಿಥ್‌ಡ್ರಾ ಮಾಡಬಹುದಾಗಿದೆ. ಭಾರತೀಯ ರಿಸರ್ವ್ ಬ್ಯಾಂಕ್‌ನ ಈ ಆದೇಶ ಸೋಮವಾರ ಮಧ್ಯರಾತ್ರಿಯಿಂದ ಜಾರಿಯಾಗಿದೆ. ಚಾಲ್ತಿ ಖಾತೆಯಿಂದ ವಿಥ್‌ಡ್ರಾ ಮಿತಿಯನ್ನು ವಾರಕ್ಕೆ 50 ಸಾವಿರ ರೂ ಗಳಿಂದ 1 ಲಕ್ಷ ರೂ ತನಕ ಏರಿಕೆ ಮಾಡಲಾಗಿದೆ.

 ಡ್ರೈವಿಂಗ್ ಲೈಸೆನ್ಸ್ ಮಾಡಿಸುವುದು ಎಂದರೆ ಸುಲಭವಲ್ಲ. ಸಾವಿರಾರು ರೂಪಾಯಿ ಹಣವನ್ನು ಖರ್ಚು ಮಾಡಿ ತಿಂಗಳುಗಟ್ಟಲೆ ಕಾಯಬೇಕು ಎಂದು ಎಲ್ಲರ ಭಾವನೆ. ಆದರೆ, ಸರಿಯಾದ ಮಾರ್ಗದಲ್ಲಿ ಡಿಎಲ್ ಮಾಡಿಸುವುದು ಬಹಳ ಸುಲಭ ಮತ್ತು ಕಡಿಮೆ ಬೆಲೆಯ ಕೆಲಸ ಎನ್ನಬಹುದು. ಹಾಗಾಗಿ ಇನ್ನುಮುಂದೆ ಆನ್‌ಲೈನ್‌ನಲ್ಲಿಯೇ ಡಿಎಲ್‌ಗೆ ಅಪ್ಲಿಕೇಶನ್ ತುಂಬಿ ಕೇವಲ ೩೦ ರೂಪಾಯಿ ಖರ್ಚಿನಲ್ಲಿ ಅತೀ ಶೀಘ್ರದಲ್ಲೇ ಹೇಗೆ ಡಿಎಲ್ ಮಾಡಿಸಬಹುದೆಂಬ ಮಾಹಿತಿ sarathi.nic.in ವೆಬ್‌ಸೈಟ್‌ನಲ್ಲಿ ಲಭ್ಯ. ಈ ವೆಬ್‌ಸೈಟ್ ಮೂಲಕ ಆನ್‌ಲೈನ್ ಅಪ್ಲಿಕೇಶನ್ ತುಂಬಿ ನೀವು ಸುಲಭವಾಗಿ ಡಿಎಲ್ ಪಡೆಯಬಹುದಾಗಿದೆ. ಆ ಮೂಲಕ ದಲ್ಲಾಳಿಗಳಿಂದ ಮೋಸ ಹೋಗುವುದನ್ನು ತಪ್ಪಿಸಿಕೊಳ್ಳಿ.

  ಎಸ್.ಎಸ್.ಎಲ್.ಸಿ ವಿದ್ಯಾರ್ಥಿಗಳು ಈ ಬಾರಿ ಎಚ್ಚರಿಕೆಯಿಂದ ಪರೀಕ್ಷೆಗೆ ಹಾಜರಾಗಬೇಕಾಗಿದೆ. ಒಂದು ನಿಮಿಷ ತಡವಾದರೂ ಪರೀಕ್ಷಾ ಕೊಠಡಿಗೆ ವಿದ್ಯಾರ್ಥಿಗಳಿಗೆ ಪ್ರವೇಶಕ್ಕೆ ಅವಕಾಶ ಇಲ್ಲವೆಂದು ಎಸ್.ಎಸ್.ಎಲ್.ಸಿ ಪರೀಕ್ಷಾ ಮಂಡಳಿ ಸುತ್ತೋಲೆ ಹೊರಡಿಸಿದೆ. ಪ್ರಶ್ನೆಪತ್ರಿಕೆ ಲೀಕ್ ತಡೆಗಟ್ಟಲು ಹಾಗೂ ಪರೀಕ್ಷೆಯನ್ನು ಪಾರದರ್ಶಕವಾಗಿ ನಡೆಸುವ ನಿಟ್ಟಿನಲ್ಲಿ ಎಸ್.ಎಸ್.ಎಲ್.ಸಿ ಪರೀಕ್ಷಾ ಮಂಡಳಿ ಈ ಕಟ್ಟುನಿಟ್ಟಿನ ಕ್ರಮ ಕೈಗೊಂಡಿರುವುದಾಗಿ ವರದಿ ತಿಳಿಸಿದೆ. ಎಸ್.ಎಸ್.ಎಲ್.ಸಿ ಪರೀಕ್ಷೆಗೆ ಬೆಳಗ್ಗೆ 6.15ರಿಂದ 6.30ರೊಳಗೆ ಪರೀಕ್ಷಾ ಕೇಂದ್ರಕ್ಕೆ ವಿದ್ಯಾರ್ಥಿಗಳಿಗೆ ಹಾಜರಾಗುವುದು ಕಡ್ಡಾಯವಾಗಿದೆ. 6.30ರ ನಂತರ ತಡವಾಗಿ ಬರುವ ವಿದ್ಯಾರ್ಥಿಗಳಿಗೆ ಪ್ರವೇಶವಕಾಶವಿಲ್ಲ ಎಂದು ಎಲ್ಲ ಶಾಲೆಗಳಿಗೂ ಸುತ್ತೋಲೆ ಕಳುಹಿಸಿದೆ.

   ರಾಜ್ಯದ ಎಲ್ಲಾ ಖಾಸಗಿ ಆಸ್ಪತ್ರೆಗಳಲ್ಲಿ ಬಿ.ಪಿ.ಎಲ್ ಕಾರ್ಡ್ ರೋಗಿಗಳಿಗೆ ಚಿಕಿತ್ಸೆಗೆ ದಾಖಲಿಸಿಕೊಳ್ಳದಿರಲು ನಿರ್ಧರಿಸಲಾಗಿದೆ. ಸರ್ಕಾರಿ ವೈದ್ಯಕೀಯ ವಿಮಾ ಯೋಜನೆಗಳಾದ ವಾಜಪೇಯಿ ಆರೋಗ್ಯ ಶ್ರೀ ಮತ್ತು ಸುವರ್ಣ ಆರೋಗ್ಯ ಟ್ರಸ್ಟ್‌ಗಳಡಿಯಲ್ಲಿ ಖಾಸಗಿ ಆಸ್ಪತ್ರೆಗಳಲ್ಲಿ ಬಿ.ಪಿ.ಎಲ್ ಕಾರ್ಡ್ ಹೊಂದಿರುವ ರೋಗಿಗಳನ್ನು ಅಡ್ಮಿಟ್ ಮಾಡಿಕೊಳ್ಳದೇ ಇರಲು ನಿರ್ಧರಿಸಲಾಗಿದೆ ಎಂದು ಫೆಡರೇಷನ್ ಆಫ್ ಹೆಲ್ತ್ ಕೇರ್ ಅಸೋಸಿಯೇಷನ್ ತಿಳಿಸಿದೆ. ಹಾಗೆಯೇ ರಾಜ್ಯ ಸರ್ಕಾರಿ ನೌಕರರು ಎ.ಪಿ.ಎಲ್ ಕಾರ್ಡ್‌ನಲ್ಲಿ ಪಡೆಯಬಹುದಾಗಿದ್ದ ಚಿಕಿತ್ಸೆಗೂ ಕೂಡ ನಿರ್ಬಂಧ ಹೇರಲಾಗಿದೆ. ಸರ್ಕಾರ ಖಾಸಗಿ ಆಸ್ಪತ್ರೆಗಳಿಗೆ 34.25 ಕೋಟಿ ಹಣ ಬಿಡುಗಡೆ ಮಾಡಿದೆ. ಸರ್ಕಾರ ಇನ್ನೂ 86.71 ಕೋಟಿ ರೂ ಹಣ ಬಾಕಿ ಉಳಿಸಿಕೊಂಡಿದೆ. ಈ ಹಿನ್ನೆಲೆಯಲ್ಲಿ ಸರ್ಕಾರ ಬಾಕಿ ಹಣ ಪಾವತಿಸುವವರೆಗೂ ಬಿ.ಪಿ.ಎಲ್ ಕಾರ್ಡ್ ಹೊಂದಿರುವ ಹೊಸ ರೋಗಿಗಳನ್ನು ಆಸ್ಪತ್ರೆಗೆ ದಾಖಲಿಸಿಕೊಳ್ಳದೇ ಇರಲು ನಿರ್ಧರಿಸಲಾಗಿದೆ. ಈ ಸಂಬಂಧ ಆರೋಗ್ಯ ಸಚಿವರ ಜೊತೆ ಇಂದು ಚರ್ಚೆ ನಡೆಸಲಿದೆ.

 ಕೇಂದ್ರ ಸರ್ಕಾರ ಹೊಸ ರೂಪದಲ್ಲಿ ಪಾನ್‌ಕಾರ್ಡ್ ವಿತರಣೆಗೆ ಮುಂದಾಗಿದೆ. ಹೊಸ ವಿನ್ಯಾಸದ ಪಾನ್‌ಕಾರ್ಡ್‌ನಲ್ಲಿ ಹೆಚ್ಚಿನ ಭದ್ರತಾ ಗುಣಲಕ್ಷಣಗಳಿದ್ದು ಅಕ್ಷರಗಳನ್ನು ತಿದ್ದಲು ಅಥವಾ ನಕಲು ಮಾಡಲಾಗದಂತೆ ಅತ್ಯಾಧುನಿಕ ತಂತ್ರಜ್ಞಾನ ಬಳಸಿ ಸಿದ್ಧಪಡಿಸಲಾಗಿದೆ ಎಂದು ಆದಾಯ ತೆರಿಗೆ ಇಲಾಖೆ ಹೇಳಿದೆ. ಹೊಸ ಪಾನ್‌ಕಾರ್ಡ್‌ನಲ್ಲಿ ವಿವರವನ್ನು ಹಿಂದಿ ಮತ್ತು ಆಂಗ್ಲ ಭಾಷೆಯಲ್ಲಿ ಮುದ್ರಿಸಲಾಗಿದೆ. ಈ ಪಾನ್‌ಕಾರ್ಡ್‌ಗಳನ್ನು ಎನ್‌ಎಸ್‌ಡಿಎಲ್ ಹಾಗೂ ಯುಟಿಐಐಟಿಎಸ್‌ಎಲ್ (ಯುಟಿಐ ಇನ್‌ಫ್ರಾಸ್ಟ್ರಕ್ಚರ್ ಅಂಡ್ ಸರ್ವೀಸಸ್ ಲಿಮಿಟೆಡ್)ನಲ್ಲಿ ಮುದ್ರಿಸಲಾಗುತ್ತಿದ್ದು, ಜನವರಿ 1ರಿಂದಲೇ ಹೊಸ ಪಾನ್‌ಕಾರ್ಡ್ ವಿತರಣೆ ಆರಂಭವಾಗಿದೆ. ಈ ಪಾನ್‌ಕಾರ್ಡ್ ಹೊಸ ಅರ್ಜಿದಾರರಿಗೆ ವಿತರಿಸಲಾಗುತ್ತಿದ್ದು, ಈಗಾಗಲೇ ಪಾನ್‌ಕಾರ್ಡ್‌ಗಳನ್ನು ಹೊಂದಿರುವವರು ಕೂಡ ಹೊಸಕಾರ್ಡ್‌ಗಳಿಗೆ ಅರ್ಜಿ ಸಲ್ಲಿಸಬಹುದೆಂದು ಆದಾಯ ತೆರಿಗೆ ಇಲಾಖೆ ಹೇಳಿದೆ.

ujireಬೆಳ್ತಂಗಡಿ : ಉಜಿರೆಯಲ್ಲಿ ನಡೆಯುವ ಈ ಬಾರಿಯ ಸಾಹಿತ್ಯ ಸಮ್ಮೇಳನವನ್ನು ವಿಭಿನ್ನವಾಗಿ ರೂಪಿಸುವ ನಿಟ್ಟಿನಲ್ಲಿ ಸಾಕಷ್ಟು ವಿನೂತನ ಯೋಜನೆಗಳನ್ನು ಹಮ್ಮಿಕೊಳ್ಳಲಾಗಿದ್ದು, ಜ. ೨೮ರಂದು ಬೆಳಿಗ್ಗೆ 10 ರಿಂದ 1 ರವರೆಗೆ ಉಜಿರೆಯ ಶ್ರೀ.ಧ.ಮ ಕಾಲೇಜಿನ ಇಂದ್ರಪ್ರಸ್ಥ ಒಳ-ಕ್ರೀಡಾಂಗಣದಲ್ಲಿ ಮಕ್ಕಳ ಸಾಹಿತ್ಯ ಸಂಸ್ಕ್ರತಿ ಸಂಭ್ರಮ ಆಯೋಜಿಸಲಾಗಿದೆ. ಜಿಲ್ಲಾ ಮಟ್ಟದಲ್ಲಿ ಇದೇ ಮೊದಲ ಬಾರಿಗೆ ಈ ಪ್ರಯತ್ನ ನಡೆಯುತ್ತಿದ್ದು, ಪ್ರಾಥಮಿಕ ಶಿಕ್ಷಣ ಪಡೆಯುತ್ತಿರುವ ವಿದ್ಯಾರ್ಥಿಗಳಿಗೆ ಸಾಹಿತ್ಯಾಸಕ್ತಿ ಹೆಚ್ಚಿಸುವ ನಿಟ್ಟಿನಲ್ಲಿ ಕಾರ‍್ಯಕ್ರಮ ರೂಪಿಸಲಾಗಿದೆ.
ಧರ್ಮಸ್ಥಳ ಧರ್ಮಾಧಿಕಾರಿ ಡಾ.ಡಿ.ವೀರೇಂದ್ರ ಹೆಗ್ಗಡೆ ದಂಪತಿಗಳ ಪರಿಕಲ್ಪನೆಯಲ್ಲಿ ಮೂಡಿಬರುತ್ತಿರುವ ಈ ವಿನೂತನ ಕಾರ‍್ಯಕ್ರಮ ಮಕ್ಕಳಿಗೆ ಸಾಹಿತ್ಯ ಅಭಿರುಚಿಯನ್ನು ಹೆಚ್ಚಿಸುವ ನಿಟ್ಟಿನಲ್ಲಿ ಪ್ರಯೋಜನವಾಗಲಿದೆ. ಸಾಮಾನ್ಯವಾಗಿ ನಡೆಯುವ ಮಕ್ಕಳ ಸಾಹಿತ್ಯ ಸಮ್ಮೇಳನದ ಯಾವ ಛಾಯೆಯೂ ಇಲ್ಲದ, ಸುಮಾರು ೧೫೦೦ ಮಕ್ಕಳ ಸಮಾನ ಭಾಗವಹಿಸುವಿಕೆ ಇದರ ಮೂಲ ಉದ್ದೇಶ.
ಕನ್ನಡ ಸಾಹಿತ್ಯ ಪರಿಷತ್ತಿನ ಬೆಳ್ತಂಗಡಿ ತಾಲೂಕು ಘಟಕದ ಅಧ್ಯಕ್ಷ ಡಾ.ಬಿ.ಯಶೋವರ್ಮ ಅವರ ಮಾರ್ಗದರ್ಶದಲ್ಲಿ ನಡೆಯುತ್ತಿರುವ ಕಾರ‍್ಯಕ್ರಮದಲ್ಲಿ ವಿದ್ಯಾರ್ಥಿಗಳ ಸ್ವರಚಿತ ಕವನ/ಕಥೆ ವಾಚನ, ಭಾವಗೀತೆ/ ಮಕ್ಕಳ ಗೀತೆಗಳ ಹಾಡು ಮತ್ತು ಅಭಿನಯ ಗೀತೆ, ಸಾಹಿತ್ಯದ ಕುರಿತು ಅರಿವು ಮೂಡಿಸುವ ಮತ್ತು ಜ್ಞಾನಪೀಠ ಪ್ರಶಸ್ತಿ ಪುರಸ್ಕ್ರತರ ಕುರಿತು ರಸಪ್ರಶ್ನೆ ಕಾರ‍್ಯಕ್ರಮ, ತಜ್ಞರಿಂದ ಕಥೆ ಮತ್ತು ಕವನ ರಚಿಸುವ ಬಗೆಗೆ ಮಾಹಿತಿ ಕಾರ‍್ಯಾಗಾರಗಳು ನಡೆಯಲಿದೆ.
ಕಾರ‍್ಯಕ್ರಮದಲ್ಲಿ ವಿದ್ಯಾರ್ಥಿ ಸಮ್ಮೇಳನಾಧ್ಯಕ್ಷತೆ ಇರುವುದಿಲ್ಲ ಎಂಬುದರ ಜೊತೆಗೆ ಯಾವುದೇ ಸಾಹಿತ್ಯ ಸ್ಪರ್ಧೆಗಳೂ ಇಲ್ಲಿ ನಡೆಯುವುದಿಲ್ಲ. ಈಗಾಗಲೇ ಜಿಲ್ಲೆಯ ಮೂಲೆಮೂಲೆಗಳಿಂದ ಸ್ವರಚಿತ ಕಥೆ ಮತ್ತು ಕವನ ಆಹ್ವಾನಿಸಲಾಗಿದ್ದು ಇದರಲ್ಲಿ ಆಯ್ಕೆಯಾದ ಕವನ /ಕಥೆಗಳ ವಾಚನಕ್ಕೆ ಅವಕಾಶ ನೀಡಲಾಗಿದೆ.
– ಪವಿತ್ರ ಬಿದ್ಕಲ್‌ಕಟ್ಟೆ, ಭರತ್ ಭಾರದ್ವಾಜ್ ದ್ವಿತೀಯ ಪತ್ರಿಕೋದ್ಯಮ

ujire ಬೆಳ್ತಂಗಡಿ : ಜ್ಞಾನದ ಭಂಡಾರವಾಗಿರುವ ಪುಸ್ತಕಗಳು ಪರಸ್ಪರ ಹಂಚಿಕೆಯಾದಲ್ಲಿ ಅದರಲ್ಲಿರುವ ಅಮೂಲ್ಯ ಸಾಹಿತ್ಯ ಪ್ರಸಾರಗೊಂಡು ಅನೇಕರಿಗೆ ಪ್ರಯೋಜನವಾಗುತ್ತದೆ. ಈಗಾಗಲೇ ಕೆಲವಾರು ಮಂದಿ ಪುಸ್ತಕ ಪ್ರೇಮಿಗಳು ಸಂಗ್ರಹಿಸಿಕೊಂಡಿರುವ ಪುಸ್ತಕಗಳನ್ನು ಜನವರಿ 27, 28, 29ರಂದು ಉಜಿರೆ ಶ್ರೀ ಜನಾರ್ಧನ ದೇವಸ್ಥಾನದ ವಠಾರದಲ್ಲಿ ಜರುಗುವ 21ನೇ ದ.ಕ. ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಪ್ರದರ್ಶನ ಮತ್ತು ಕನಿಷ್ಠ ಬೆಲೆಗೆ ಮಾರಾಟ ಮಾಡುವ ಯೋಜನೆ ಹಾಕಿಕೊಳ್ಳಲಾಗಿರುತ್ತದೆ. ಕಲಿಕೆ ನಿರಂತರ, ಹೀಗಾಗಿ ಪುಸ್ತಕ ಪ್ರೇಮಿಗಳ ಮನೆಯಲ್ಲಿ ಸಂಗ್ರಹವಿರುವ ಪುಸ್ತಕಗಳನ್ನು ಸಾಹಿತ್ಯ ಸಮ್ಮೇಳನದ ವ್ಯವಸ್ಥಾಪಕರಿಗೆ ನೀಡಬಹುದು. ಹೀಗೆ ಸಂಗ್ರಹವಾಗುವ ಪುಸ್ತಕಗಳನ್ನು ರಿಯಾಯಿತಿ ದರದಲ್ಲಿ ಮಾರಾಟ ಮಾಡುವ ಮೂಲಕ ಜ್ಞಾನದ ಹಸಿವನ್ನು ನೀಗಿಸುವ ವಿನೂತನ ಪ್ರಯತ್ನ ಮಾಡಲಾಗುತ್ತಿದೆ.  ಇದರೊಂದಿಗೆ ಪುಸ್ತಕ ಮಳಿಗೆಗಳಿಗೆ ಮತ್ತು ಇತರ ಮಾರಾಟ ಮಳಿಗೆಗಳಿಗೆ ಅವಕಾಶವಿದೆ. ಆದುದರಿಂದ ಸಾಹಿತ್ಯಾಸಕ್ತರಲ್ಲಿ ಇರುವ ಹಳೆಯ ಪುಸ್ತಕಗಳ ಪ್ರದರ್ಶನ ಮತ್ತು ಮಾರಾಟಕ್ಕೆ ಬಯಸಿದ್ದಲ್ಲಿ ಪ್ರದರ್ಶನ ಸಮಿತಿಯ ಸಂಯೋಜಕರಾಗಿರುವ ಕೃಷ್ಣ ಶೆಟ್ಟಿ (9449488976) ಇವರನ್ನು ಸಂಪರ್ಕಿಸುವಂತೆ ಕೋರಲಾಗಿದೆ.

ujire ಉಜಿರೆ : ತುಳುನಾಡಿನ ಸಾಹಿತ್ಯ ಸಂಸ್ಕೃತಿಯ ಹಿಂದಿನ ಪರಂಪರೆಯನ್ನು ಪ್ರತಿಬಿಂಬಿಸುವ ಚಿಂತನ ಮಂಥನವನ್ನು ನಡೆಸುವುದೇ 21ನೇ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನದ ಉದ್ದೇಶವಾಗಿದೆ ಎಂದು ದ.ಕ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್‌ನ ಅಧ್ಯಕ್ಷರಾದ ಎಸ್. ಪ್ರದೀಪ್ ಕುಮಾರ್ ಕಲ್ಕೂರ ಹೇಳಿದರು.
ಉಜಿರೆಯ ಶ್ರೀ ಜನಾರ್ದನ ಸ್ವಾಮಿ ದೇವಸ್ಥಾನದ ವಠಾರದಲ್ಲಿ ನಡೆದ 21ನೇ ದಕ್ಷಿಣ ಕನ್ನಡ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನದ ಸಮಾಲೋಚನಾ ಸಭೆಯಲ್ಲಿ ಭಾಗವಹಿಸಿ ಮಾತನಾಡಿದರು.
ಧರ್ಮಸ್ಥಳದ ಮಂಜಯ್ಯ ಹೆಗ್ಗಡೆಯವರು ಈ ಹಿಂದೆ ನಡೆಸಿದ್ದ ತಾಲೂಕು ಸಾಹಿತ್ಯ ಸಮ್ಮೇಳನ ಪರಂಪರೆಯಿಂದ ಇಂದು ಉಜಿರೆಯಲ್ಲಿ ನಡೆಯಲಿರುವ ಸಾಹಿತ್ಯ ಸಮ್ಮೇಳನಕ್ಕೆ ಹೊಸ ಆಯಾಮ ಸಿಕ್ಕಂತಾಗಿದೆ, ಜಿಲ್ಲಾ ಸಾಹಿತ್ಯ ಸಮ್ಮೇಳನಕ್ಕೆ ಕೃಷಿಕರ, ವ್ಯಾಪಾರಸ್ಥರ, ಚಿಂತಕರ ಮತ್ತು ಸ್ಥಳೀಯ ನಾಗರಿಕರ ತನು ಮನ, ಧನದ ಸಹಕಾರದಿಂದಾಗಿ ಉಜಿರೆ ಮನೆಯಂಗಳದಲ್ಲಿ ಸಾಹಿತ್ಯ ಸಮ್ಮೇಳನ ನಡೆಯುವಂತಾಗಿದೆ ಎಂದು ಅಭಿಪ್ರಾಯಪಟ್ಟರು.
ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನಕ್ಕಾಗಿ ಅಭೂತಪೂರ್ವವಾದ ಬೆಂಬಲ ದೊರೆತ್ತಿದ್ದು, ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಮಟ್ಟಕ್ಕೆ ಅಚ್ಚುಕಟ್ಟಾಗಿ ವ್ಯವಸ್ಥೆ ಮಾಡಲಾಗುತ್ತಿದೆ. ಧರ್ಮಸ್ಥಳ ಧರ್ಮಾಧಿಕಾರಿ ಡಾ. ಡಿ. ವೀರೇಂದ್ರ ಹೆಗ್ಗಡೆಯವರ ಮಾರ್ಗದರ್ಶನ, ಜನಾರ್ದನ ಸ್ವಾಮಿ ದೇವಸ್ಥಾನದ ಮೊಕ್ತೇಸರ ಹಾಗೂ ಸಾಹಿತ್ಯ ಸಮ್ಮೇಳನದ ಸ್ವಾಗತ ಸಮಿತಿಯ ಅಧ್ಯಕ್ಷರಾದ ವಿಜಯರಾಘವ ಪಡೆಟ್ನಾಯರವರ ಮಾರ್ಗದರ್ಶನದ ಜೊತೆಗೆ, ತಾಲೂಕು ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷರಾದ ಡಾ. ಬಿ. ಯಶೋವರ್ಮ ಅವರ ಚಿಂತನ ಶೀಲತೆ ಸಮ್ಮೇಳನಕ್ಕೆ ಬಲ ಬಂದತಾಗಿದೆ ಎಂದು ಆಶಯ ವ್ಯಕ್ತಪಡಿಸಿದರು.
ಸ್ಥಳೀಯರು ಜನಪದ ವಿದ್ವಾಂಸರು, ಕೃಷಿಕರರಾದ ಡಾ. ಕೆ. ಚಿನ್ನಪ್ಪ ಗೌಡ ಅಧ್ಯಕ್ಷತೆಯಲ್ಲಿ ನಡೆಯುವ ಸಾಹಿತ್ಯ ಸಮ್ಮೇಳನದಲ್ಲಿ ನೆಲ, ಜಲ, ಭಾಷೆ, ಸಂಸ್ಕೃತಿ ಬಗ್ಗೆ ಬೆಳಕು ಚೆಲ್ಲುವಂತಹ ಚಿಂತನ ಗೋಷ್ಠಿಗಳನ್ನು ಏರ್ಪಡಿಸಲಾಗಿದೆ. ಅದೇ ರೀತಿ ಹೆಗ್ಗಡೆಯವರ ಆಶಯದಂತೆ ಮಕ್ಕಳ ಸಾಹಿತ್ಯ ಸಮ್ಮೇಳನವನ್ನು ವಿಶೇಷವಾಗಿ ಆಯೋಜಿಸಲಾಗಿದೆ. ಜೊತೆಗೆ ಸದಭಿರುಚಿಯ ವಸ್ತು ಪ್ರರ್ದಶನ ಮತ್ತು ವೈವಿಧ್ಯಮಯ ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗಲಿವೆ. ಅದಕ್ಕಾಗಿ ಜಿಲ್ಲೆಯ ಸಾಹಿತ್ಯಾಸಕ್ತರು, ಕನ್ನಡ ಅಭಿಮಾನಿಗಳು, ಸಂಘ-ಸಂಸ್ಥೆಗಳು, ನಾಗರಿಕರು ಭಾಗವಹಿಸಿ ಯಶಸ್ವಿಗೊಳಿಸಬೇಕೆಂದು ತಿಳಿಸಿದರು.
ಸಭೆಯಲ್ಲಿ ಸಾಹಿತ್ಯ ಸಮ್ಮೇಳನದ ಸ್ವಾಗತ ಸಮಿತಿಯ ಅಧ್ಯಕ್ಷರಾದ ವಿಜಯರಾಘವ ಪಡ್ವೆಟ್ನಾಯ, ತಾಲೂಕ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷರಾದ ಡಾ. ಬಿ ಯಶೋವರ್ಮ ಉಪಸ್ಥಿತರಿದ್ದರು. ಕಾರ್ಯಕ್ರಮವನ್ನು ಸಂಯೋಜಕರಾದ ಡಾ. ಎಂ. ಪಿ. ಶ್ರೀನಾಥ್ ನಿರ್ವಹಿಸಿದರು.

ujireಉಜಿರೆ : ಉಜಿರೆಯಲ್ಲಿ ಜನವರಿ 27 ರಿಂದ 28ರ ವರೆಗೆ ನಡೆಯಲಿರುವ 21ನೇ ದ.ಕ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನದ ಅಂಗವಾಗಿ ಸಿದ್ದತೆಗಳು ಭರದಿಂದ ಸಾಗಿದ್ದು ದಿನಗಣನೆ ಆರಂಭವಾಗಿದೆ.
ವಾಗ್ಮಿ, ಚಿಂತಕ, ಸಂಶೋದಕ ಹಾಗೂ ಜನಪದ ವಿದ್ವಾಂಸ ಡಾ. ಚಿನ್ನಪ್ಪಗೌಡ ಅವರು ಸಮ್ಮೇಳನಾಧ್ಯಕ್ಷರಾಗಿ ಆಯ್ಕೆಯಾಗಿದ್ದು, ಸಮ್ಮೇಳನದ ಲಾಂಚನವನ್ನು ಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿ ಡಾ ಡಿ. ವೀರೇಂದ್ರ ಹೆಗ್ಗಡೆಯವರು ಬಿಡುಗಡೆಗೊಳಿಸಿ ಶುಭ ಕೋರಿದ್ದಾರೆ.
ಸಮ್ಮೇಳನ ಅರ್ಥಪೂರ್ಣ ಹಾಗೂ ಸ್ಮರಣೀಯವಾಗಬೇಕೆಂಬ ಸಂಕಲ್ಪದೊಂದಿಗೆ ಉಜಿರೆಯಲ್ಲಿ ಸಿದ್ದತೆಗಳು ನಡೆದಿವೆ. ಸುಮಾರು 23 ಸಮಿತಿಗಳು ಈ ದೀಸೆಯಲ್ಲಿ ಕಾರ್ಯೊನ್ಮುಖವಾಗಿವೆ. ಸಮ್ಮೇಳನದ ದಿನದಂದು ಸಮ್ಮೇಳನಾಧ್ಯಕ್ಷರ ಮೆರವಣಿಗೆ ಸಿದ್ದತೆ ನಡೆದಿದ್ದು, ಸ್ಮರಣ ಸಂಚಿಕೆ, ಪುಸ್ತಕ ಮಳಿಗೆ, ಸಾಂಸ್ಕೃತಿಕ ಉತ್ಸವ, ವೈಚಾರಿಕ ಗೋಷ್ಠಿಗಳು ಸಮ್ಮೇಳನದ ಪ್ರಮುಖ ಅಂಶಗಳಾಗಲಿವೆ. ಸಾಹಿತ್ಯಾಭಿಮಾನಿಗಳಿಗೆ ಊಟೋಪಚಾರದ ವ್ಯವಸ್ಥೆ ಕೂಡಾ ಕಲ್ಪಿತವಾಗಲಿದೆ. ಬೆಳ್ತಂಗಡಿ ತಾಲೂಕಿನ ಸಾಹಿತ್ಯಾಭಿಮಾನಿಗಳು, ನಾಗರಿಕರು ಸಮ್ಮೇಳನದ ಯಶಸ್ಸಿಗೆ ಅತ್ಯುತ್ಸಾಹದ ಸಹಕಾರ ವ್ಯಕ್ತಪಡಿಸಿದ್ದು ಸ್ಥಳೀಯ ಶಾಸಕ ವಸಂತ ಬಂಗೇರ ಅವರ ನೇತೃತ್ವದಲ್ಲಿ ನಡೆದ ಸರಕಾರಿ ಅಧಿಕಾರಿಗಳ ಹಾಗೂ ತಾಲೂಕಿನ ಸಂಘ ಸಂಸ್ಥೆಗಳ ಪ್ರತಿನಿಧಿಗಳ ಸಭೆಯಲ್ಲೂ ಸಮ್ಮೇಳನಕ್ಕೆ ಸಂಪೂರ್ಣ ಸಹಕಾರ ವ್ಯಕ್ತವಾಗಿದೆ. ತಾಲೂಕಿನ ಶಿಕ್ಷಕ ಸಂಘಟನೆಯವರೂ ಕೂಡಾ ಸಮ್ಮೇಳನಕ್ಕೆ ಪೂರ್ಣ ಮನಸ್ಸಿನ ಬೆಂಬಲ ವ್ಯಕ್ತಪಡಿಸಿದ್ದಾರೆ.
ಪ್ರಾಥಮಿಕ ಹಾಗೂ ಪ್ರೌಢ ಶಾಲಾ ಹಂತದ ಮಕ್ಕಳ ಪಾಲ್ಗೂಳ್ಳುವಿಕೆಯ ಪ್ರತ್ಯೇಕ ಮಕ್ಕಳ ಸಮ್ಮೇಳನ ಈ ಸಾರಿಯ ಸಾಹಿತ್ಯ ಸಮ್ಮೇಳನದ ವೈಶಿಷ್ಟ್ಯಗಳಲ್ಲೊಂದಾಗಿದ್ದು ಇದು ಜ.೨೮ ರಂದು ಬೆಳಗ್ಗೆ ಉಜಿರೆ ಕಾಲೇಜಿನ ಇಂದ್ರಪ್ರಸ್ಥದಲ್ಲಿ ನಡೆಯಲಿದೆ. ಉಜಿರೆ ಶ್ರೀ ಜನಾರ್ಧನ ಸ್ವಾಮಿ ದೇವಾಲಯದ ಆವರಣದಲ್ಲಿ ವಿಶಾಲ ಪ್ರದೇಶದಲ್ಲಿ ಸಮ್ಮೇಳನ ವೇದಿಕೆ, ಊಟದ ವ್ಯವಸ್ಥೆ, ಮಳಿಗೆಗಳ ಬಗ್ಗೆ ನೀಲನಕ್ಷೆ ರೂಪುಗೊಂಡಿದ್ದು ಜಿಲ್ಲೆಯಾದ್ಯಂತ ಬಹುಸಂಖ್ಯೆಯಲ್ಲಿ ಸಾಹಿತ್ಯಾಸಕ್ತರು ಪಾಲ್ಗೊಂಡು ಸಮ್ಮೇಳನವನ್ನು ಯಶಸ್ವಿಗೊಳಿಸಬೇಕೆಂದು ಸಂಘಟಕರು ಪ್ರಕಟಣೆಯಲ್ಲಿ ವಿನಂತಿಸಿದ್ದಾರೆ.

harish karinja 1 copyಬೆಳ್ತಂಗಡಿ : ಕುಲಾಲ ಯುವ ವೇದಿಕೆ ರಾಜ್ಯ ಸಂಘಟನಾ ಕಾರ್ಯದರ್ಶಿಯಾಗಿ ಇಂಜಿನಿಯರ್ ಹರೀಶ್ ಕಾರಿಂಜ ನೇಮಕಗೊಂಡಿದ್ದಾರೆ.
2011ರಿಂದ 2017ರವರೆಗೆ ಕುಲಾಲ ಯುವ ವೇದಿಕೆಯ ಜಿಲ್ಲೆ ಹಾಗೂ ವಿಭಾಗದ ಜವಾಬ್ದಾರಿಯ ಜೊತೆ ಬೆಳ್ತಂಗಡಿ ತಾಲೂಕು ಯುವ ವೇದಿಕೆಯ ಅಧ್ಯಕ್ಷರಾಗಿ ಯುವ ಘಟಕವನ್ನು ರಾಜ್ಯದಲ್ಲೇ ಮಾದರಿ ಘಟಕವಾಗಿ ಕಟ್ಟಿ ಬೆಳೆಸಿದ್ದಾರೆ. ಇವರ ಸಾಧನೆಯನ್ನು ಗುರುತಿಸಿ ಈಗ ರಾಜ್ಯ ಯುವ ವೇದಿಕೆಯ ಸಂಘಟನಾ ಕಾರ್ಯದರ್ಶಿಯಾಗಿ ನೇಮಕ ಮಾಡಲಾಗಿದೆ.

nataka spardhe udghatane copyಪುಂಜಾಲಕಟ್ಟೆ : ನೀತಿಯುಕ್ತ ಉತ್ತಮ ಸಂದೇಶ ಭರಿತ ನಾಟಕಗಳಿಂದ ಸಮಾಜದಲ್ಲಿ ಪರಿವರ್ತನೆ ಸುಧಾರಣೆಯನ್ನು ಕಾಣಲು ಸಾಧ್ಯವಿದೆ. ಅಂತಹ ನಾಟಕ ಕಲೆಯನ್ನು ಪ್ರೋತ್ಸಾಹಿಸಿ ಬೆಳೆಸುವ ಶ್ರೀ ಮುರುಘೇಂದ್ರ ಮಿತ್ರ ಮಂಡಳಿ ಅಭಿನಂದನಾರ್ಹರು ಎಂದು ರಾಜ್ಯ ಅರಣ್ಯ ಸಚಿವ ಬಿ.ರಮಾನಾಥ ರೈ ಹೇಳಿದರು.
ಅವರು ಜ.14 ರಂದು ರಾತ್ರಿ ಪುಂಜಾಲಕಟ್ಟೆ ಬಂಗ್ಲೆ ಮೈದಾನದಲ್ಲಿ ಶ್ರೀ ಮುರುಘೇಂದ್ರ ಮಿತ್ರ ಮಂಡಳಿ ಮತ್ತು ಶ್ರೀ ಮುರುಘೇಂದ್ರ ವನಿತಾ ಸಮಾಜ ಇದರ ಆಶ್ರಯದಲ್ಲಿ, ಕರ್ನಾಟಕ ರಾಜ್ಯ ತುಳು ಸಾಹಿತ್ಯ ಅಕಾಡೆಮಿ ಇವರ ಸಹಕಾರದೊಂದಿಗೆ ದ.ಕ., ಉಡುಪಿ, ಕಾಸರಗೋಡು ಜಿಲ್ಲಾ ಮಟ್ಟದ ಒಂದು ವಾರದ ತುಳು ನಾಟಕ ಸ್ಪರ್ಧೆಯ ಉದ್ಘಾಟನಾ ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಮಂಗಳೂರು ವಿಶ್ವವಿದ್ಯಾನಿಲಯ ಬ್ರಹ್ಮಶ್ರೀ ನಾರಾಯಣಗುರು ಅಧ್ಯಯನ ಪೀಠದ ಅಧ್ಯಕ್ಷ ಮುದ್ದು ಮೂಡುಬೆಳ್ಳೆ ನಾಟಕ ಸ್ಪರ್ಧೆಯನ್ನು ಉದ್ಘಾಟಿಸಿ ಭೂತಾರಾಧನೆ, ಯಕ್ಷಗಾನದಂತೆ ರಂಗಭೂಮಿಯು ಶಕ್ತಿಶಾಲಿ ಮಾಧ್ಯಮವಾಗಿದೆ ಎಂದರು. ಮಡಂತ್ಯಾರು ಸೇಕ್ರೆಡ್ ಹಾರ್ಟ್ ಚರ್ಚ್‌ನ ಧರ್ಮಗುರು ಫಾ| ಲಾರೆನ್ಸ್ ಮಸ್ಕರ‍್ಹೇನಸ್ ಮಾತನಾಡಿ ಸ್ಪರ್ಧಾತ್ಮಕ ಜಗತ್ತಿನಲ್ಲಿ ಸಮಯದ ಅಭಾವವಿದ್ದರೂ ಕುಟುಂಬಕ್ಕೆ ಮಾತ್ರ ಸೀಮಿತವಾಗದೇ ಕಲೆಗೆ ಪ್ರೋತ್ಸಾಹ ಕೊಡುವ ಮೂಲಕ ಸುಂದರ ಸಮಾಜದ ನಿರ್ಮಾಣಕ್ಕೆ ಸಹಕಾರಿಯಾಗಬೇಕು ಎಂದು ಹೇಳಿದರು. ಜಿ.ಪಂ.ಸದಸ್ಯರಾದ ಬಿ.ಪದ್ಮಶೇಖರ ಜೈನ್, ಎಂ.ತುಂಗಪ್ಪ ಬಂಗೇರ, ಚಂದ್ರಪ್ರಕಾಶ್ ಶೆಟ್ಟಿ, ತಾಲೂಕು ಅಕ್ರಮ ಸಕ್ರಮ ಸಮಿತಿ ಅಧ್ಯಕ್ಷ ಕೆ.ಮಾಯಿಲಪ್ಪ ಸಾಲ್ಯಾನ್, ಪಿಲಾತಬೆಟ್ಟು ಗ್ರಾ.ಪಂ.ಅಧ್ಯಕ್ಷ ಚಂದ್ರಶೇಖರ ಶೆಟ್ಟಿ, ಪ್ರಗತಿಪರ ಕೃಷಿಕ ಉದಯ್ ಕುಮಾರ್ ಕಟ್ಟೆಮನೆ, ಬಂಟ್ವಾಳ ಕಾರ್ಯನಿರತ ಪರ್ತಕರ್ತ ಸಂಘದ ಅಧ್ಯಕ್ಷ ಮೌನೇಶ್ ವಿಶ್ವಕರ್ಮ, ದ.ಕ., ಉಡುಪಿ ಜಿಲ್ಲೆ ಹಾಪ್‌ಕಾಮ್ಸ್ ಅಧ್ಯಕ್ಷ ಲಕ್ಷ್ಮೀ ನಾರಾಯಣ ಉಡುಪ, ಉದ್ಯಮಿ ಹರೀಂದ್ರ ಪೈ ಶುಭ ಹಾರೈಸಿದರು. ಸಂಘದ ಗೌರವಾಧ್ಯಕ್ಷ ಸಂತೋಷ್ ಮೂರ್ಜೆ, ಅಧ್ಯಕ್ಷ ಮೋಹನ ಸಾಲ್ಯಾನ್, ವನಿತಾ ಸಮಾಜದ ಗೌರವಾಧ್ಯಕ್ಷೆ ಶಶಿಕಲಾ ಗೋಪಾಲ್, ಅಧ್ಯಕ್ಷೆ ಅಮೃತಾ ಎಸ್., ಕಾರ್ಯದರ್ಶಿ ವಿನಿತ್‌ಕುಮಾರ್ ಉಪಸ್ಥಿತರಿದ್ದರು. ಸಂಘದ ಸದಸ್ಯ ರಾಜೇಂದ್ರ ಕೆ.ವಿ. ಸ್ವಾಗತಿಸಿ ಪ್ರಸ್ತಾವಿಸಿದರು. ಸದಸ್ಯ ರತ್ನದೇವ್ ಪುಂಜಾಲಕಟ್ಟೆ ಆಶಯ ಭಾಷಣ ಮಾಡಿದರು.ಶಿಕ್ಷಕ ಉದಯ ಕುಮಾರ್ ಶೆಟ್ಟಿ ವಂದಿಸಿದರು. ಸಂತೋಷ್ ಸಿದ್ದಕಟ್ಟೆ ಕಾರ್ಯಕ್ರಮ ನಿರೂಪಿಸಿದರು.

maji sanikara sangha copy  ಶಾಸಕರಿಗೆ ವಿಶೇಷ ರೀತಿಯಲ್ಲಿ ಅಭಿನಂದನೆ.

ಮಾಜಿ ಸೈನಿಕರ ಸಂಘ ಮತ್ತು ರೋಟರಿ ಕ್ಲಬ್ ಜಂಟಿ ಕಾರ್ಯಕ್ರಮ.
ಕೇಕ್ ಕತ್ತರಿಸಿ ಶಾಸಕರ 71ನೇ ಹುಟ್ಟುಹಬ್ಬ ಆಚರಣೆ.

ಬೆಳ್ತಂಗಡಿ : ಸೈನಿಕರ ಪ್ರಾಮಾಣಿಕ ಸೇವೆಯಿಂದಾಗಿ ಈ ದೇಶ ಶತ್ರುಗಳ ಆಕ್ರಮಣದಿಂದ ಸುರಕ್ಷಿತವಾಗಿದ್ದು ಆದ್ದರಿಂದಾಗಿ ದೇಶವಾಸಿಗಳಾದ ನಾವೂ ಕೂಡ ನಿಶ್ಚಿಂತೆಯಿಂದ ಬಾಳುವಂತಾಗಿದೆ. ನಿಜವಾದ ಅರ್ಥದಲ್ಲಿ ನಮ್ಮ ದೇಶದ ಸೈನಿಕರು ಸರ್ವ ಅಭಿನಂದನಾಪಾತ್ರರು ಎಂದು ಶಾಸಕ ವಸಂತ ಬಂಗೇರ ಹೇಳಿದರು.
ಮಾಜಿ ಸೈನಿಕರ ಸಂಘ ಮತ್ತು ರೋಟರಿ ಕ್ಲಬ್ ಜಂಟಿಯಾಗಿ ಜ.15ರಂದು ಇಲ್ಲಿನ ರೋಟರಿ ಭವನದಲ್ಲಿ ಹಮ್ಮಿಕೊಂಡಿದ್ದ ಸೈನಿಕರ ದಿನಾಚರಣೆಯಲ್ಲಿ ಅವರು ಮಾತನಾಡಿದರು.
ಹಣ್ಣುಹಂಪಲು ವಿತರಣೆ, ಶಾಸಕರಿಗೆ ಸನ್ಮಾನ, ಹುಟ್ಟುಹಬ್ಬ ಆಚರಣೆ:
ಇದಕ್ಕೂ ಮೊದಲು ಬೆಳ್ತಂಗಡಿ ಸರಕಾರಿ ಆಸ್ಪತ್ರೆಯಲ್ಲಿ ರೋಗಿಗಳಿಗೆ ಹಣ್ಣುಹಂಪಲು ವಿತರಿಸಲಾಯಿತು. ಬಳಿಕ ರೋಟರಿ ಭವನದಲ್ಲಿ ನಡೆದ ಕಾರ್ಯಕ್ರಮದಲ್ಲಿ ೭೧ನೇ ವಸಂತಕ್ಕೆ ಕಾಲಿಟ್ಟ ಶಾಸಕ ವಸಂತ ಬಂಗೇರ ಅವರ ಹುಟ್ಟುಹಬ್ಬವನ್ನು ಕೇಕ್ ಕತ್ತರಿಸುವ ಮೂಲಕ ಆಚರಿಸಲಾಯಿತು. ಕರ್ನಾಟಕ ರಾಜ್ಯ ಸಣ್ಣ ಕೈಗಾರಿಕಾ ಅಭಿವೃದ್ಧಿ ನಿಗಮದ ಅಧ್ಯಕ್ಷರಾಗಿ ಸರಕಾರದಿಂದ ನೇಮಕಗೊಂಡ ಶಾಸಕರನ್ನು ಮೈಸೂರು ಪೇಟ ತೊಡಿಸಿ ವಿಶೇಷವಾಗಿ ಸನ್ಮಾನಿಸಲಾಯಿತು.
ಅಧ್ಯಕ್ಷತೆಯನ್ನು ಮಾಜಿ ಸೈನಿಕರ ಸಂಘದ ಅಧ್ಯಕ್ಷ ಕಾಂಚೋಡು ಗೋಪಾಲಕೃಷ್ಣ ಭಟ್ ವಹಿಸಿದ್ದು ಸ್ವಾಗತಿಸಿದರು. ಮುಖ್ಯ ಅತಿಥಿಗಳಾಗಿದ್ದ ಪಟ್ಟಣ ಪಂಚಾಯತ್ ಅಧ್ಯಕ್ಷ ಮುಗುಳಿ ನಾರಾಯಣ ರಾವ್ ಶುಭ ಕೋರಿದರು. ಲಯನ್ಸ್ ಕ್ಲಬ್ ಅಧ್ಯಕ್ಷೆ ಸುಶೀಲಾ ಎಸ್ ಹೆಗ್ಡೆ, ಪತ್ರಕರ್ತ ಅಶ್ರಫ್ ಆಲಿಕುಂಞಿ ಮುಂಡಾಜೆ, ರೋಟರಿ ಕ್ಲಬ್ ಪರವಾಗಿ ಶ್ರೀಧರ ಕೆ.ವಿ. ಉಜಿರೆ, ಎಸ್‌ಡಿಎಂ ಕಾಲೇಜು ಉಜಿರೆ ರಾಮ್‌ರಮೇಶ್, ಚಾರ್ಟರ್ಡ್ ಎಕೌಂಟೆಂಟ್ ಗಾಯಾತ್ರಿ ರಾವ್ ಕಾರ್ಯಕ್ರಮದ ಪರವಾಗಿ ಮಾತನಾಡಿದರು. ವೇದಿಕೆಯಲ್ಲಿ ರೋಟರಿ ಕ್ಲಬ್ ಅಧ್ಯಕ್ಷ ಡಿ.ಎಂ. ಗೌಡ ಉಪಸ್ಥಿತರಿದ್ದರು. ಸಂಘದ ಪದಾಧಿಕಾರಿಗಳು ಕಾರ್ಯಕ್ರಮಕ್ಕೆ ಸಹಕಾರ ನೀಡಿದರು.
ಮಾಜಿ ಅಧ್ಯಕ್ಷ ಸುನಿಲ್ ಶೆಣೈ ಕಾರ್ಯಕ್ರಮ ನಿರೂಪಿಸಿದರು.
ನಮ್ಮ ನೆರೆಯ ಜಿಲ್ಲೆಯವರಾದ ಕೊಡಗಿನ ಜನರಲ್ ಕಾರ್ಯಪ್ಪ ಅವರು ಭಾರತೀಯ ಸೇನೆಯಲ್ಲಿ ಅತ್ಯುನ್ನತ ಸ್ಥಾನ ಅಲಂಕರಿಸಿದ ಜ.15ನ್ನು ಸೈನಿಕರ ದಿನಾಚರಣೆಯಾಗಿ ಆಚರಿಸಲಾಗುತ್ತಿದೆ ಎಂದು ಸುನಿಲ್ ಶೆಣೈ ವಿವರಣೆ ನೀಡಿದರು.

ಮಚ್ಚಿನ ದೇವರಗುಂಡಿಯಲ್ಲಿ 25ನೇ ವರ್ಷದ ಶ್ರೀ ಸತ್ಯನಾರಾಯಣ ಪೂಜೆmachina majigalige sanmana copyಸಂಘದ ಮಾಜಿ ಅಧ್ಯಕ್ಷರುಗಳಿಗೆ ಸನ್ಮಾನ

ಮಚ್ಚಿನ : ಇಲ್ಲಿನ ಒಳಪ್ರದೇಶವಾದ ದೇವರಗುಂಡಿ ಎಂಬಲ್ಲಿನ ಸಾರ್ವಜನಿಕ ಶ್ರೀ ದೇವರ ಕಟ್ಟೆಯ ಬಳಿ 25ನೇ ವರ್ಷದ ಸಾಮೂಹಿಕ ಶ್ರೀ ಸತ್ಯನಾರಾಯಣ ಪೂಜೆ ಮತ್ತು ಪೂಜೆ ಪ್ರಾರಂಭಿಸಿದ ಪ್ರಮುಖ ನಾಲ್ವರನ್ನು ಗುರುತಿಸುವ ಕಾರ್ಯಕ್ರಮ ಜ.೧೪ ರಂದು ನಡೆಯಿತು.
ಇದರ ಅಂಗವಾಗಿ ನಡೆದ ಧಾರ್ಮಿಕ ಸಭಾಕಾರ್ಯಕ್ರಮದ ಅಧ್ಯಕ್ಷತೆ ವಹಿಸಿಕೊಂಡಿದ್ದ ಪ್ರಸ್ತುತ ವರ್ಷದ ಸಾಮೂಹಿಕ ಶ್ರೀ ಸತ್ಯನಾರಾಯಣ ಪೂಜಾ ಸಮಿತಿ ಅಧ್ಯಕ್ಷ ಕೆ. ಗುರುಪ್ರಸಾದ್ ಸ್ವಾಗತಿಸಿ ಪ್ರಾಸ್ತಾವಿಕವಾಗಿ ಮಾತನಾಡಿದ್ದಲ್ಲದೆ, ಕೊನೆಯಲ್ಲಿ ಅಧ್ಯಕ್ಷೀಯ ಮಾತುಗಳನ್ನಾಡಿದರು.
ದಿಕ್ಸೂಚಿ ಭಾಷಣವನ್ನು ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನ ಸಮಿತಿ ಪ್ರ. ಕಾರ್ಯದರ್ಶಿಯೂ ಆಗಿರುವ ಕೆವಿಜಿ ದಂತ ಮಹಾವಿದ್ಯಾಲಯದ ದಂತ ವಿಭಾಗದ ಮುಖ್ಯಸ್ಥರೂ ಹಾಗು ಪ್ರೊಫೆಸರ್ ಡಾ| ಎಂ.ಎಂ. ದಯಾಕರ್ ನೆರವೇರಿಸಿದರು.
ಅತಿಥಿಗಳಾಗಿ ಹಾಲು ಒಕ್ಕೂಟದ ನಿರ್ದೇಶಕ ಪದ್ಮನಾಭ ಶೆಟ್ಟಿ ಅರ್ಕಜೆ, ತಾ.ಪಂ. ಮಡಂತ್ಯಾರು ಕ್ಷೇತ್ರದ ಸದಸ್ಯೆ ವಸಂತಿ, ಮಚ್ಚಿನ ಗ್ರಾ.ಪಂ. ಉಪಾಧ್ಯಕ್ಷ ಚಂದ್ರಶೇಖರ ಬಿ.ಎಸ್, ಮಡಂತ್ಯಾರಿನ ಹಿರಿಯ ವೈದ್ಯ ಡಾ| ಕೆ.ಎಮ್. ಶೆಟ್ಟಿ ಶುಭ ಕೋರಿದರು. ವೇದಿಕೆಯಲ್ಲಿ ಗ್ರಾ.ಪಂ. ಸದಸ್ಯೆ ಸೋಮಾವತಿ, ಶಿವರಾಮ ಕಾರಂದೂರು, ಶಿವಪ್ಪ ಮಾಣೂರು ಉಪಸ್ಥಿತರಿದ್ದರು. ಮಚ್ಚಿನ ಶ್ರೀ ಅನಂತೇಶ್ವರ ದೇವಸ್ಥಾನದ ಅನುವಂಶಿಯ ಆಡಳಿತ ಮೊಕ್ತೇಸರ ಎಂ. ಹರ್ಷ ಸಂಪಿಗೆತ್ತಾಯ ಶುಭಾಶಯ ಕೋರಿದರು. ಕುಮಾರಿ ಚರಿತ್ರಾ ಪ್ರಾರ್ಥನೆ ಹಾಡಿದರು. ಉಪಾಧ್ಯಕ್ಷ ರಮೇಶ್ ಮೂಲ್ಯ, ಕಾರ್ಯದರ್ಶಿ ಭಾಸ್ಕರ ಮೂಲ್ಯ, ಕೋಶಾಧಿಕಾರಿ ಧರ್ಣಪ್ಪ ಮೂಲ್ಯ ಸೇರಿದಂತೆ ಎಲ್ಲ ಸದಸ್ಯರು ಸಹಕಾರ ನೀಡಿದರು. ಸಹ ಕಾರ್ಯದರ್ಶಿ ಶೈಲೇಶ್ ಕುಮಾರ್ ಧನ್ಯವಾದವಿತ್ತರು.
ಸಾಮೂಹಿಕ ಶ್ರೀ ಸತ್ಯನಾರಾಯಣ ಪೂಜೆ ನಡೆದು ಪ್ರಸಾದ ವಿತರಣೆ ಹಾಗೂ ಸಾರ್ವಜನಿಕ ಅನ್ನಸಂತರ್ಪಣೆ ನಡೆಯಿತು.
ಸ್ಥಾಪಕರಿಗೆ ಗೌರವಾರ್ಪಣೆ :
ಸದ್ರಿ ಸ್ಥಳದಲ್ಲಿ ಅಯೋಧ್ಯೆಯ ವಿವಾದದ ಸಂದರ್ಭ ಕ್ಷೋಭೆಯಾಗದಿರಲು ಮತ್ತು ಜನರ ಭಾವನೆಯ ಒಗ್ಗಟ್ಟಿಗೆ ಸಂಬಂಧಿಸಿದಂತೆ ಪ್ರಾರಂಭಿಸಲಾಗಿರುವ ಈ ಸಾಮೂಹಿಕ ಶ್ರೀ ಸತ್ಯನಾರಾಯಣ ಪೂಜಾ ಕೈಂಕರ್ಯ ಸ್ಥಾಪಿಸಿದ ಗುರುಪ್ರಸಾದ್, ರಾಮಣ್ಣ ಮೂಲ್ಯ, ಗಂಗಾಧರ ಕುಲಾಲ್ ಅವರನ್ನು ಸನ್ಮಾನಿಸಲಾಯಿತು. ಗೋಪಾಲ ಪೂಜಾರಿ ಕೋಲಾಜೆ ಕಾರ್ಯಕ್ರಮ ನಿರೂಪಿಸಿದರು. ರಾತ್ರಿ ತಲಕಳ ಶ್ರೀ ಕಾಶೀ ವಿಶ್ವನಾಥೇಶ್ವರ ಮಹಾಗಣಪತಿ ಯಕ್ಷಗಾನ ಮಂಡಳಿಯಿಂದ ಶ್ರೀ ಶಬರಿಮಲೆ ಅಯ್ಯಪ್ಪ ಯಕ್ಷಗಾನ ಬಯಲಾಟ ನಡೆಯಿತು.

dharmasthala lead prayana tanda beti copyಧರ್ಮಸ್ಥಳ : ವಿದ್ಯೆಯು ಬದಲಾವಣೆಯ ದಾರಿಯಾಗಿದೆ, ವಿದ್ಯೆಯನ್ನು ಸದುಪಯೋಗ ಮಾಡಿಕೊಂಡು ಪ್ರತಿಯೊಂದು ಹಂತದಲ್ಲಿ ಯೋಜಿತ ರೀತಿಯಲ್ಲಿ ಆಧುನಿಕ ಬದಲಾವಣೆ ಮಾಡಿದಲ್ಲಿ ಯಾವುದೇ ಕಾರ್ಯಕ್ರಮಗಳು ಯಶಸ್ವಿಯಾಗುತ್ತವೆ. ಶ್ರೀ ಕ್ಷೇತ್ರದ ಎಲ್ಲಾ ಕಾರ್ಯಕ್ರಮಗಳು ಯಶಸ್ವಿಯಾಗಲು ಇದೇ ಮಾದರಿಯನ್ನು ಅನುಸರಿಸಲಾಗುತ್ತಿದೆ. ಚರ್ತುದಾನಗಳ ಮೂಲಕ ಸಮಾಜದ ಉದ್ಧಾರಕ್ಕಾಗಿ ಸಮರ್ಪಣ ಭಾವದಿಂದ ಕೆಲಸವನ್ನು ನಿರ್ವಹಿಸಿದಾಗ ನಮ್ಮ ಜೀವನದಲ್ಲಿ ಯಶಸ್ಸುಗಳಿಸಲು ಸಾಧ್ಯ, ಆದುದರಿಂದ ವಿದ್ಯಾರ್ಥಿಗಳು ತಮ್ಮ ಜೀವನದಲ್ಲಿ ಸ್ವಾರ್ಥದ ಬದಲು ಸಮಾಜ ಸೇವೆಯೊಂದಿಗೆ ಕೆಲಸ ಮಾಡಿ ಎಂದು ಶ್ರೀ ಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿ ಡಾ| ಡಿ. ವೀರೇಂದ್ರ ಹೆಗ್ಗಡೆ ಹೆಳೀದರು.
ಅವರು ದೇಶ್‌ಪಾಂಡೆ ಫೌಂಡೇಶನ್ ವತಿಯಿಂದ ಲೀಡ್ ಪ್ರಯಾಣ ಕಾರ್ಯಕ್ರಮದಡಿಯಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳಕ್ಕೆ ಆಗಮಿಸಿದ ವಿವಿಧ ರಾಜ್ಯಗಳ 135 ಮಂದಿ ವಿದ್ಯಾರ್ಥಿಗಳನ್ನು ಉದ್ದೇಶಿಸಿ ಮಾತನಾಡಿದರು. ಭಗವದ್ಗೀತೆ ಹಾಗೂ ಪುರಾಣಗಳಲ್ಲಿ ಉಲ್ಲೇಖಿಸಿರುವ ಮೌಲ್ಯಗಳು ಮನುಷ್ಯನ ಜೀವನದ ಪ್ರತಿ ಹೆಜ್ಜೆಗೂ ಅನ್ವಯವಾಗುತ್ತದೆ.
ಯಶಸ್ಸಿನ ದಾರಿಯಲ್ಲಿ ಸವಾಲುಗಳು, ಸಮಸ್ಯೆಗಳು, ಸಂತೋಷಗಳು ಸಹಜ ಇವೆಲ್ಲವನ್ನೂ ಧೈರ್ಯದಿಂದ ಎದುರಿಸುವಂತೆ ಕರೆ ನೀಡಿದರು.
ಯೋಜನೆಯ ಕಾರ್ಯನಿರ್ವಾಹಕ ನಿರ್ದೇಶಕ ಡಾ|ಎಲ್.ಎಚ್. ಮಂಜುನಾಥ್ ಕಾರ್ಯಕ್ರಮವನ್ನು ಉದ್ಘಾಟಿಸಿ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಕಾರ್ಯವೈಖರಿ, ಕ್ಷೇತ್ರದ ಚರ್ತುದಾನಗಳ ಪರಂಪರೆ ಹಾಗೂ ವಿದ್ಯಾರ್ಥಿಗಳಲ್ಲಿ ನಾಯಕತ್ವ ಬೆಳೆಸಿಕೊಳ್ಳುವ ಬಗ್ಗೆ ವಿಶೇಷ ಮಾಹಿತಿ ನೀಡಿದರು.
ಕಾರ್ಯಕ್ರಮದಲ್ಲಿ ದೇಶ್‌ಪಾಂಡೆ ಫೌಂಡೇಶನ್‌ನ ಅಭಿನಂದನ್, ಯೋಜನೆಯ ಮಾನವ ಸಂಪನ್ಮೂಲ ವಿಭಾಗದ ನಿರ್ದೇಶಕಿ ಶ್ರೀಮತಿ ಮಮತಾರಾವ್, ಗ್ರಾಮೀಣ ಶ್ರೇಷ್ಠತಾ ಕೇಂದ್ರದ ಪ್ರಾಂಶುಪಾಲ ಸುರೇಶ್ ಸಾಲಿಯಾನ್, ಕೇಂದ್ರ ಕಛೇರಿಯ ಪ್ರಬಂಧಕ ತೋಷತ್ ಕುಮಾರ್, ತರಬೇತಿ ಕೇಂದ್ರದ ಉಪನ್ಯಾಸಕ ಬಾಲಕೃಷ್ಣ, ರಾಜೇಶ್ ಉಪಸ್ಥಿತರಿದ್ದರು.
ಲೀಡ್ ಪ್ರಯಾಣ ತಂಡವು ಜ.17 ಹಾಗೂ ಜ.181 ರಂದು ಶ್ರೀ ಕ್ಷೇತ್ರ ಧರ್ಮಸ್ಥಳದಲ್ಲಿ ಶ್ರೀ ಮಂಜುನಾಥ ಸ್ವಾಮಿ ದೇವಳ ಹಾಗೂ ಪ್ರೇಕ್ಷಣಿಯ ಸ್ಥಳಗಳು, ಸಿರಿ ಗ್ರಾಮೋದ್ಯೋಗ ಸಂಸ್ಥೆ, ರುಡ್‌ಸೆಟ್, ಕೃಷಿ ತಾಕುಗಳ ಭೇಟಿ, ಶ್ರೀ ಕ್ಷೇತ್ರ ಧರ್ಮಸ್ಥಳ ಮಂಜುನಾಥೇಶ್ವರ ಶಿಕ್ಷಣ ಸಂಸ್ಥೆಗಳು, ಜನಜಾಗೃತಿ ವೇದಿಕೆ ಭೇಟಿ ಮಾಡಿದ್ದಾರೆ. ಶ್ರೀ ಕ್ಷೇತ್ರ ಧರ್ಮಸ್ಥಳದ ಸುತ್ತಲಿನ ಪರಿಸರದಲ್ಲಿ ವಿದ್ಯಾರ್ಥಿಗಳಿಂದ ನಗದು ರಹಿತ ವ್ಯವಹಾರ ಕುರಿತು ಜಾಗೃತಿ ಕಾರ್ಯಕ್ರಮಗಳು ನಡೆಯಿತು.

Kumba sambrama copyಕುಂಬಾರರ ಸೇವಾ ಸಂಘದಿಂದ ಮಾಗಣೆ ಸಭೆ ‘ಕುಂಭ ಸಂಭ್ರಮ’

ವೃತ್ತಿ ನಿರತರಿಗೆ, ನಾಟಿವೈದ್ಯರಿಗೆ, ಸಾಧಕರಿಗೆ ಸನ್ಮಾನ
ಈ ಸಂದರ್ಭದಲ್ಲಿ ಕುಂಬಾರಿಕೆ ವೃತ್ತಿ ಮಾಡುತ್ತಿರುವ ದಿ| ಮೋನಪ್ಪ ಕುಂಬಾರ (ಮರಣೋತ್ತರ) ಅವರ ಪತ್ನಿ ವಾರಿಜ ಮಾಯಿಲಪ್ಪ ಕುಂಬಾರ ಉಜಿರೆ, ಉಮಣ ಕುಂಬಾರ ನಾವೂರು, ಚೆನ್ನ ಕುಂಬಾರ ಬಂಗಾಡಿ, ಧರ್ಣಪ್ಪ ಕುಂಬಾರ ಚಾರ್ಮಾಡಿ, ಬೊಮ್ಮಣ್ಣ ಕುಂಬಾರ ಕಳೆಂಜ, ವೆಂಕಪ್ಪ ಕುಂಬಾರ ಬಂದಾರು, ಶಿವಪ್ಪ ಕುಂಬಾರ ಇಳಂತಿಲ, ಸೇಸಪ್ಪ ಪಟ್ರಮೆ, ವೆಂಕಪ್ಪ ಕುಂಬಾರ ಚಾರ್ವಾಕ, ಚೆನ್ನಪ್ಪ ಕುಂಬಾರ ಕಡಬ, ಉಮ್ಮಪ್ಪ ಕುಂಬಾರ ಅಲಂಕಾರು, ನಾಟಿ ವೈದ್ಯರಾದ ಜಿನ್ನಪ್ಪ ಕುಂಬಾರ ಚಾರ್ಮಾಡಿ, ಜಿನ್ನಪ್ಪ ಕುಂಬಾರ ಇಚಿಲಂಪಾಡಿ, ಮುಂಡಪ್ಪ ಕುಂಬಾರ ಕಡಬ, ಸಾಧಕಿ ಕು| ಹರ್ಷಿತಾ ಇವರನ್ನು ಸನ್ಮಾನಿಸಲಾಯಿತು. ಮಾಗಣೆಯ ಗುರಿಕಾರರನ್ನು, ಗ್ರಾ.ಪಂ ಅಧ್ಯಕ್ಷ, ಸದಸ್ಯರನ್ನು, ಸಂಘದ ಅಧ್ಯಕ್ಷ ಹಾಗೂ ಪದಾಧಿಕಾರಿಗಳನ್ನು ಗೌರವಿಸಲಾಯಿತು. ಸನ್ಮಾನಿತರ ಪರವಾಗಿ ವೆಂಕಪ್ಪ ಬಂದಾರು ಮತ್ತು ತಿಮ್ಮಪ್ಪ ಚಾರ್ವಾಕ ಅನಿಸಿಕೆ ವ್ಯಕ್ತಪಡಿಸಿದರು.

ಬೆಳ್ತಂಗಡಿ : ಕುಂಬಾರರ ಸೇವಾ ಸಂಘ ಬೆಳ್ತಂಗಡಿ ಇದರ ವತಿಯಿಂದ ಸ್ವಜಾತಿ ಬಾಂಧವರ ಮಾಗಣೆ ಸಭೆ, ಕುಂಬಾರಿಕೆ ವೃತ್ತಿ ನಿರತ ಮಾಗಣೆಯ ಹಿರಿಯರಿಗೆ, ನಾಟೀ ವೈದ್ಯರಿಗೆ ಮತ್ತು ಸ್ವಜಾತಿ ವಿವಿಧ ಕ್ಷೇತ್ರಗಳ ಸಾಧಕರಿಗೆ ಸನ್ಮಾನ, ಪ್ರತಿಭಾ ಪ್ರದರ್ಶನ ಮೊದಲಾದ ವೈವಿಧ್ಯಮಯ ಕಾರ್ಯಕ್ರಮಗಳ ಸಮ್ಮೀಳನ ಕುಂಭ ಸಂಭ್ರಮ-2017 ಜ.15ರಂದು ಬೆಳ್ತಂಗಡಿ ಶ್ರೀ ಗುರುನಾರಾಯಣ ಸಭಾ ಭವನದಲ್ಲಿ ವೈಭವ ಪೂರ್ಣವಾಗಿ ನಡೆಯಿತು.
ಕಾರ್ಯಕ್ರಮವನ್ನು ಬೆಳ್ತಂಗಡಿ ಮಾಗಣೆಯ ಗುರಿಕಾರರಾದ ಅಣ್ಣಪ್ಪ ಕುಲಾಲ್ ಉದ್ಘಾಟಿಸಿದರು. ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದ ಕರ್ನಾಟಕ ರಾಜ್ಯ ಕುಂಬಾರರ ಮಹಾ ಸಂಘ ಬೆಂಗಳೂರಿನ ಕಾರ್ಯಾಧ್ಯಕ್ಷ ಡಾ| ಅಣ್ಣಯ್ಯ ಕುಲಾಲ್ ಅವರು ಮಾತನಾಡಿ, ಪಂಚಭೂತಗಳಿಲ್ಲದೆ ಕುಂಬಾರರ ಬದುಕಿಲ್ಲ, ಮಣ್ಣು, ನೀರು, ಅಗ್ನಿ, ಆಕಾಶ ಕುಂಬಾರಿಕೆಗೆ ಅಗತ್ಯ, ಕುಂಬಾರರು ಪ್ರಕೃತಿಯ ಜೊತೆ ವಾಸಿಸುವ ನಿಜವಾದ ಮಣ್ಣಿನ ಮಕ್ಕಳು ಎಂದರು. ಸರಕಾರದ ಯಾವುದೇ ಸೌಲಭ್ಯಗಳಿಲ್ಲದೆ ಕೊಪ್ಪದಲ್ಲಿ ಬದುಕಿ ಮಣ್ಣಿನ ಮಡಕೆ ಮಾಡಿ ಸಂಕಷ್ಟದಲ್ಲಿ ಜೀವಿಸುತ್ತಿರುವವರು ಕುಂಬಾರರು. ಎಲ್ಲಾ ರೀತಿಯಲ್ಲಿಯೂ ಕಡೆಗಣಿಸಲ್ಪಟ್ಟಿದ್ದಾರೆ. ಇವರು ಸಾಮಾಜಿಕ ನ್ಯಾಯದಿಂದ ವಂಚಿತರಾಗಿದ್ದಾರೆ. ಇಂತಹ ಕುಂಬಾರ ಸಮಾಜವನ್ನು ಪರಿಶಿಷ್ಟ ಪಂಗಡಕ್ಕೆ ಸೇರಿಸುವ ಕೆಲಸನ್ನು ಸರಕಾರ ಮಾಡಬೇಕು. ಕುಂಬಾರ ಸಮುದಾಯಕ್ಕೆ ರಾಜಕೀಯ ಸ್ಥಾನಮಾನ ನೀಡಬೇಕು ಎಂದು ಒತ್ತಾಯಿಸಿದರು. ಗುರಿಕಾರರು ಹಿಂದಿನ ಕಟ್ಟು ಪಾಡುಗಳನ್ನು ಉಳಿಸುವ ಕೆಲಸ ಮಾಡುತ್ತಿರುವುದರಿಂದ ನಮ್ಮ ಸಂಸ್ಕೃತಿ-ಸಂಪ್ರಾದಾಯಗಳು ಉಳಿದಿದೆ. ಇವರು ಧರ್ಮರಾಯನ ರೀತಿಯಲ್ಲಿ ನ್ಯಾಯ ಒದಗಿಸುವ ಕೆಲಸ ಮಾಡಬೇಕು ಮೂಡ ನಂಬಿಕೆಯನ್ನು ಬಿಟ್ಟು ಮೂಲ ನಂಬಿಕೆಯೊಂದಿಗೆ ಸಂಘಟಿತರಾಗಬೇಕು, ಮೂಲ್ಯರು, ಕುಂಬಾರರು, ಕುಲಾಲರು ಒಟ್ಟು ಸೇರಿ ಸಂಘಟನೆಯನ್ನು ಬಲಪಡಿಸಿ, ಹೋರಾಟದ ಕಿಚ್ಚನ್ನು ಹೆಚ್ಚಿಸಿದಾಗ ಮಾತ್ರ ನಮ್ಮ ಹಕ್ಕೋತ್ತಾಯಗಳು ಈಡೇರಲು ಸಾಧ್ಯವಿದೆ ಎಂದು ಕರೆ ನೀಡಿದರು. ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿದ ಕುಂಬಾರರ ಸೇವಾ ಸಂಘ ಬೆಳ್ತಂಗಡಿ ಇದರ ಅಧ್ಯಕ್ಷ ಹೆಚ್. ಪದ್ಮಕುಮಾರ್ ಅವರು ಮಾತನಾಡಿ ಶ್ರಿಂಗೇರಿ ಕೊಪ್ಪ ಮೂಲದವರಾದ ಕುಂಬಾರರಿಗೆ ಮಣ್ಣೇ ಬದುಕಿನ ಜೀವಾಳವಾಗಿದೆ. ಅತ್ಯಂತ ನಿಷ್ಠಾವಂತರಾಗಿ, ಸತ್ಯವಂತರಾಗಿ ಬದುಕಿದ ಕುಂಬಾರು ಬೆಳ್ತಂಗಡಿಯಲ್ಲಿ ೭ ಮಾಗಣೆ ಮತ್ತು ಪುತ್ತೂರಿನಲ್ಲಿ ೫ ಮಾಗಣೆಯನ್ನು ಹೊಂದಿದ್ದಾರೆ. ನಾವು ಸಂಘಟಿತರಾಗಬೇಕು, ಸಮಾಜದ ಮುಖ್ಯ ವಾಹಿನಿಗೆ ಬರಬೇಕು. ಸರಕಾರ ಕುಂಬಾರಿಕೆ ವೃತ್ತಿ ನಿರತರಿಗೆ ಮಾಶಾಸನ ಮತ್ತು ಕುಂಬಾರಿಗೆ ಸಹಾಯಧನ ನೀಡಬೇಕು ಈ ನಿಟ್ಟಿನಲ್ಲಿ ಈ ಸಮಾವೇಶ ನಡೆಯುತ್ತಿದೆ ಎಂದರು.
ಮುಖ್ಯ ಅತಿಥಿಗಳಾಗಿದ್ದ ಯುವ ಘಟಕ ರಾಜ್ಯ ಸಂಘಟನಾ ಕಾರ್ಯದರ್ಶಿ ಹರೀಶ್ ಕಾರಿಂಜ ಮಾತನಾಡಿ ಮೂಲ್ಯ, ಕುಲಾಲ, ಕುಂಬಾರರು ಒಟ್ಟಾಗಿ ಸಂಘಟಿತರಾಗಿ ನಮ್ಮ ಬಲ ಪ್ರದರ್ಶನ ಮಾಡಿದಾಗ ಮಾತ್ರ ನಮಗೆ ಸೌಲಭ್ಯಗಳು ದೊರೆಯಲು ಸಾಧ್ಯವಿದೆ ಎಂದು ಅಭಿಪ್ರಾಯಪಟ್ಟರು. ಮೂಲ್ಯರ ಯಾನೆ ಕುಂಬಾರರ ತಾಲೂಕು ಸಂಘದ ಉಪಾಧ್ಯಕ್ಷ ದಿನಕರ ಬಂಗೇರ ಮಾತನಾಡಿ ಕುಂಬಾರರ ಕಲೆ, ಸಂಸ್ಕೃತಿಯನ್ನು ಉಳಿಸಿ ಬೆಳೆಸುವಲ್ಲಿ ಪ್ರಮುಖವಾದ ಮಾಗಣೆಯ ಮಹತ್ವ ಇಂದು ಈ ಸಮ್ಮೇಳನದ ಮೂಲಕ ಎಲ್ಲರಿಗೂ ತಿಳಿಯುವಂತಾಯಿತು. ನಾವೆಲ್ಲ ನಮ್ಮಲ್ಲಿರುವ ಭಿನ್ನಾಭಿಪ್ರಾಯವನ್ನು ಮರೆತು ಒಟ್ಟಾಗಿ ನಮ್ಮ ಶ್ರೋಯೋಭಿವೃದ್ಧಿಗೆ ಹೋರಾಟ ಮಾಡೋಣ ಎಂದು ಕರೆ ನೀಡಿದರು. ಶೈಕ್ಷಣಿಕ ಕ್ಷೇತ್ರ-ಡಾ| ರಮೇಶ್ ನೇತ್ರ ತಜ್ಞರು ಸರಕಾರಿ ಆಸ್ಪತ್ರೆ ಚಿಕ್ಕಮಗಳೂರು, ಸಾಮಾಜಿಕ ಕ್ಷೇತ್ರ- ಮಹೇಶ್ ಕೆ. ಗ್ರಾ.ಪಂ. ಸದಸ್ಯರು ಲಾಲ, ಧಾರ್ಮಿಕ ಕ್ಷೇತ್ರ-ವಿಜಯ ಗೌರವಾಧ್ಯಕ್ಷರು ಕುಂಭಶ್ರೀ ಗೆಳೆಯರ ಬಳಗ ಕಾಯರ್ತಡ್ಕ ಇವರು ಉಪನ್ಯಾಸ ನೀಡಿದರು. ಸಮಾರೋಪ ಸಮಾ ರಂಭದಲ್ಲಿ ಸರಕಾರದಿಂದ ಸಿಗುವ ಸೌಲಭ್ಯಗಳ ಕುರಿತು ಬಂದಾರು ಗ್ರಾ.ಪಂ. ಅಧ್ಯಕ್ಷ ಉದಯ ಕುಮಾರ್ ಬಿ.ಕೆ, ಸಂಘಟನೆ ಕುರಿತು ಯಕ್ಷಗಾನ ಕಲಾವಿದ ಪದ್ಮನಾಭ ಇಳಂತಿಲ, ಮಹಿಳಾ ಸಬಲೀಕರಣ ಕುರಿತು ಸಂಘದ ಸದಸ್ಯೆ ಶ್ರೀಮತಿ ಉಷಾ ಸಂಜೀವ ಬಿ.ಹೆಚ್, ಕುಂಬಾರರ ಕಟ್ಟುಪಾಡುಗಳ ಕುರಿತು ಸಂಘದ ಗೌರವಾಧ್ಯಕ್ಷ ಸಂಜೀವ ಕುಂಬಾರ, ಮಹಿಳೆ ಮತ್ತು ಮಕ್ಕಳ ಪಾಲನೆ ಬಗ್ಗೆ ಸಂಜಯನಗರ ಅಂಗನವಾಡಿ ಕಾರ್ಯಕರ್ತೆ ಶ್ರೀಮತಿ ಜಲಜ ಸಂಜೀವ ಎನ್. ಇವರು ವಿಷಯ ಮಂಡಿಸಿದರು. ಈ ಸಂದರ್ಭದಲ್ಲಿ ಸಂಜೀವ ಕಾಯರ್ತಡ್ಕ ಇವರ ಮಾಹಿತಿಯಲ್ಲಿ ರಚನೆಯಾದ ಕುಂಬಾರರ ಕಟ್ಟುಪಾಡುಗಳು ಪುಸ್ತಕವನ್ನು ಪದ್ಮಕುಮಾರ್ ಬಿಡುಗಡೆಗೊಳಿಸಿದರು.
ವೇದಿಕೆಯಲ್ಲಿ ಉಪಾಧ್ಯಕ್ಷ ಕೃಷ್ಣಪ್ಪ, ಕಾರ್ಯದರ್ಶಿ ಜಗದೀಶ್, ಖಜಾಂಚಿ ಸಂಜೀವ ಬಿ.ಹೆಚ್, ಜೊತೆ ಕಾರ್ಯದರ್ಶಿ ಸಾಗರ್, ಸಂಘ ಟನಾ ಕಾರ್ಯದರ್ಶಿಗಳಾದ ದಯಾನಂದ ಮುತ್ತಪ್ಪ, ಜನಾರ್ದನ ಸಂಜೀವ ಎನ್. ಉಪಸ್ಥಿತ ರಿದ್ದರು. ಪಿಡ್ಲ್ಯೂಡಿ ಗುತ್ತಿಗೆದಾರ ದಯಾನಂದ ಸ್ವಾಗತಿಸಿ, ಹೆಚ್. ಪದ್ಮಕುಮಾರ್ ಪ್ರಾಸ್ತಾವಿಕವಾಗಿ ಮಾತನಾಡಿದರು. ಜಗದೀಶ್ ಕುಂಬಾರ ವರದಿ ವಾಚಿಸಿದರು. ಬಿ.ಹೆಚ್. ರಾಜೀವ್ ಮತ್ತು ಚಿದಾನಂದ ಕಾರ್ಯಕ್ರಮ ನಿರೂಪಿಸಿದರು. ಸಾಗರ್ ಧನ್ಯವಾದವಿತ್ತರು.

 ಬೆಳ್ತಂಗಡಿ : ಗುರುವಾಯನಕೆರೆ, ಬೆಳ್ತಂಗಡಿ, ಧರ್ಮಸ್ಥಳ ವಿದ್ಯುತ್ ಲೈನ್‌ನಲ್ಲಿ ತುರ್ತುಕಾಮಗಾರಿಯನ್ನು ಕೈಗೊಳ್ಳಬೇಕಾದ ಹಿನ್ನಲೆಯಲ್ಲಿ ಜ.20ರಂದು ಬೆಳಿಗ್ಗೆ 6.30ರಿಂದ ಸಂಜೆ 5.30ರ ತನಕ ಬೆಳ್ತಂಗಡಿ, ಧರ್ಮಸ್ಥಳ ಮತ್ತು ವಗ್ಗ (ಬಂಟ್ವಾಳ ತಾಲೂಕು) ವಿದ್ಯುತ್ ಉಪಕೇಂದ್ರದಿಂದ ಹೊರಡುವ ಎಲ್ಲಾ ಫೀಡರ್‌ಗಳಲ್ಲಿ ಹಾಗೂ ಮಡಂತ್ಯಾರ್ ಹಾಗೂ ಬಳ್ಳಮಂಜ ಫೀಡರ್‌ಗಳಲ್ಲಿ ವಿದ್ಯುತ್ ನಿಲುಗಡೆಯಾಗಲಿದೆ ಎಂದು ಮೆಸ್ಕಾಂ ಪ್ರಕಟಣೆಯಲ್ಲಿ ತಿಳಿಸಿದೆ.

Untitled-1 copy

ಇನಾಸ್ ಡಿಸೋಜ              ಫೆಡ್ರಿಕ್ ರೊಡ್ರಿಗಸ್

ಇಂದಬೆಟ್ಟು : ಸಂತ ಫ್ರಾನ್ಸಿಸ್ ಕ್ಷೇವಿಯರ್ ಚರ್ಚ್ ಇಂದಬೆಟ್ಟು ಇದರ ಚರ್ಚ್ ಪಾಲನಾ ಮಂಡಳಿಯ ಉಪಾಧ್ಯಕ್ಷರಾಗಿ ಪ್ರಗತಿಪರ ಕೃಷಿಕ ಯುವ ಮುಂದಾಳು ಇನಾಸ್ ಡಿಸೋಜ ಹಾಗೂ ಕಾರ್ಯದರ್ಶಿಯಾಗಿ ಭಾರತೀಯ ಜೀವ ವಿಮಾ ನಿಗಮದ ಚೇರ್‌ಮೆನ್ ಕ್ಲಬ್ ಮೆಂಬರ್ ಫೆಡ್ರಿಕ್ ರೊಡ್ರಿಗಸ್ ಆಯ್ಕೆಯಾಗಿದ್ದಾರೆ.

badinade darmika shabe copyಬಳಂಜ ಬದಿನಡೆ ಶ್ರೀ ಶಾಸ್ತಾರ ನಾಗಬ್ರಹ್ಮ ದೇವಸ್ಥಾನದ ಸಿರಿಗಳ ಕ್ಷೇತ್ರದಲ್ಲಿ ವರ್ಷಾವಧಿ ಜಾತ್ರೋತ್ಸವ

ಸಭೆಯನ್ನುದ್ದೇಶಿಸಿ ಬಿಜೆಪಿ ಯುವ ಮೋರ್ಚಾ ತಾಲೂಕು ಅಧ್ಯಕ್ಷ ಸಂಪತ್ ಬಿ.ಸುವರ್ಣ ಮಾತನಾಡುತ್ತಿರುವುದು

ಸನ್ಮಾನ ಗುರುತಿಸುವಿಕೆ : ಕಳೆದ 40 ವರ್ಷಗಳಿಂದ ಬಳಂಜ ಗ್ರಾಮ ಪಂಚಾಯತ್‌ನಲ್ಲಿ ನಿಷ್ಟವಂತರಾಗಿ, ಪ್ರಾಮಾಣಿಕರಾಗಿ ಗ್ರಾಮ ಸಹಾಯಕರಾಗಿ ಸೇವೆ ಸಲ್ಲಿಸಿ ನಿವೃತ್ತರಾಗಿರುವ ಕೃಷ್ಣ ದೇವಾಡಿಗ ರವರನ್ನು, ಬಳಂಜ ಬದಿನಡೆ ದೇವಸ್ಥಾನದ ಬ್ರಹ್ಮಕಲಶೋತ್ಸವದಲ್ಲಿ ಉತ್ತಮ ಕೊಡುಗೆಗಳೊಂದಿಗೆ ಆರ್ಥಿಕ ನೆರವನ್ನು ನೀಡಿ ಬ್ರಹ್ಮಕಲಶೋತ್ಸವದ ಅಧ್ಯಕ್ಷ ಉದ್ಯಮಿ ರವಿ ಪೂಜಾರಿ ಮಜಲುರವರನ್ನು ದೇವಸ್ಥಾನದ ವತಿಯಿಂದ ಸನ್ಮಾನಿಸಲಾಯಿತು. ಹಾಗೆಯೇ ಜಾತ್ರೋತ್ಸವಕ್ಕೆ ಪ್ರಾಯೋಜಕತ್ವ ನೀಡಿದ ಸತೀಶ್ ರೈ ಬಾರ್ದಡ್ಕ, ಜಾತ್ರೋತ್ಸವ ಸಮಿತಿ ಅಧ್ಯಕ್ಷ ಹರೀಶ್ ವೈ ಚಂದ್ರಮ, ಸರ್ವೊದಯ ಫ್ರೆಂಡ್ಸ್ ಅಟ್ಪಾಜೆ ತಂಡದ ಸದಸ್ಯರನ್ನು, ವಾಣಿ ಆಂಗ್ಲ ಮಾಧ್ಯಮ ಶಾಲೆಯ ಮುಖ್ಯೋಪಾಧ್ಯಾಯರಾದ ಲಕ್ಷ್ಮೀ ನಾರಾಯಣ ಕೆ., ಕೃಷ್ಣವೇಣಿ ಇವರುಗಳನ್ನು ಬಳಂಜ  ಬದಿನಡೆ ದೇವಸ್ಥಾನದ ಜಾತ್ರಾಮಹೋತ್ಸವದಲ್ಲಿ ಗುರುತಿಸಲಾಯಿತು.

ಬಳಂಜ : ತುಳುನಾಡಿನ ಆಚಾರ-ವಿಚಾರಗಳು ದೇಶದಲ್ಲಿಯೇ ಅತ್ಯಂತ ಶ್ರೇಷ್ಟವಾದುದು. ಯಾಕೆಂದರೆ ನಾವು ನಾಗನನ್ನು ಪ್ರತ್ಯಕ್ಷ ದೇವರು ಎಂದು ಪೂಜಿಸುತ್ತೇವೆ. ಇಂತಹ ತುಳುನಾಡಿನ ಸಂಸ್ಕೃತಿ, ನಾಗರಾಧನೆ ಜಗತ್ತಿಗೆ ಆದರ್ಶ ಎಂದು ಬೆಂಗಳೂರು ಕಸ್ತೂರಿ ನ್ಯೂಸ್ ಚಾನೆಲ್‌ನ ಖ್ಯಾತ ಜೋತಿಷಿ ಶ್ರೀನಾಥ್ ಜೋಶಿ ಸೂಳಬೆಟ್ಟು ಅಭಿಪ್ರಾಯಪಟ್ಟರು.
ಅವರು ಜ.13ರಂದು ಬಳಂಜ ಬದಿನಡೆ ಶ್ರೀ ಶಾಸ್ತಾರ ನಾಗಬ್ರಹ್ಮ ದೇವಸ್ಥಾನ ಮತ್ತು ಸಿರಿಗಳ ಕ್ಷೇತ್ರದ ವರ್ಷಾವದಿ ಜಾತ್ರಾಮಹೋತ್ಸವದಲ್ಲಿ ನಡೆದ ಧಾರ್ಮಿಕ ಸಭಾ ಸಮಾರಂಭದಲ್ಲಿ ಧಾರ್ಮಿಕ ಉಪನ್ಯಾಸ ನೀಡಿದರು.
ಶ್ರದ್ಧಾ ಭಕ್ತಿಯಿಂದ ದೇವರ ಸ್ಮರಣೆ ಮಾಡಬೇಕು. ಆವಾಗ ಮಾತ್ರ ದೇವರ ಅನುಗ್ರಹ ಪ್ರಾಪ್ತಿಯಾಗುತ್ತದೆ. ನಮ್ಮ ಜಿಲ್ಲೆಯ ವಿವಿಧ ಕ್ಷೇತ್ರಗಳು ನಾಗದೋಷ ಪರಿಹಾರಕ್ಕೆ ಸಾಕ್ಷಿಯಾಗಿದ್ದು ಮುಂದೊಂದು ದಿನ ಬದಿನಡೆ ಕ್ಷೇತ್ರವು ನಾಗದೋಷ ನಿವಾರಣೆಗೆ ಪವಿತ್ರ ಕ್ಷೇತ್ರವಾಗಲಿದೆ ಎಂದರು.
ಸಮಾರಂಭದ ಅಧ್ಯಕ್ಷತೆಯನ್ನು ಬೆಳ್ತಂಗಡಿ ಬಿಜೆಪಿ ಯುವಮೋರ್ಚಾದ ತಾಲೂಕು ಅಧ್ಯಕ್ಷ ಸಂಪತ್ ಬಿ. ಸುವರ್ಣ ವಹಿಸಿ ಮಾತನಾಡಿ ದೈವ, ದೇವರು, ನಾಗರಾಧನೆ, ಕಲೆ-ಸಂಸ್ಕೃತಿಯಲ್ಲಿ ತುಳುನಾಡು ಪ್ರಸಿದ್ಧಿಯಾಗಿದ್ದು ಬದಿನಡೆ ಕ್ಷೇತ್ರ ಕೂಡ ಪ್ರಸಿದ್ಧವಾಗಿದೆ ಎಂಬುದಕ್ಕೆ ಇಲ್ಲಿ ಸೇರಿರುವ ಭಕ್ತವೃಂದವೇ ಸಾಕ್ಷಿ. ಯಾವುದೇ ಒಂದು ಕಾರ್ಯಕ್ರಮ ಮಾಡುವುದಾದರೆ ಹಣ ಇದ್ದರೆ ಸಾಲದು ಮನಸ್ಸು ಇರಬೇಕು ಅಂತಹ ಮನಸ್ಸುಗಳು ಒಟ್ಟಾಗಿ ಸಮಾಜಮುಖಿ ಕಾರ್ಯಕ್ರಮ ಗಳನ್ನು ಮಾಡಿದರೆ ಯಶಸ್ಸು ಸಾಧ್ಯ ಎಂದರು.
ಮುಖ್ಯ ಅತಿಥಿ ನೆಲೆಯಲ್ಲಿ ಬೆಳ್ತಂಗಡಿ ಯುವವಾಹಿನಿ ಘಟಕದ ಅಧ್ಯಕ್ಷ ಸದಾನಂದ ಪೂಜಾರಿ ಉಂಗಿಲಬೈಲು ಮಾತನಾಡಿ ಜೀವನದಲ್ಲಿರುವ ಜಂಜಾಟವನ್ನು ಹೋಗಲಾಡಿಸಲು ದೇವರ ಆರಾಧನೆ, ಸ್ಮರಣೆ ಮುಖ್ಯ. ಬದಿನಡೆ ಕ್ಷೇತ್ರವು ಪವಿತ್ರ ಕ್ಷೇತ್ರವಾಗಿದ್ದು ಇಲ್ಲಿ ವರ್ಷದುದ್ದಕ್ಕೂ ಅನೇಕ ಕಾರ್ಯಕ್ರಮಗಳು ಜರುಗುತ್ತಿದೆ. ಇದರಿಂದ ಊರಿನಲ್ಲಿ ಶಾಂತಿ ನೆಲೆಸಿ ಅಭಿವೃದ್ಧಿ ಹೊಂದಲು ಸಾಧ್ಯ ಎಂದರು.
ಜಿ.ಪಂ ಸದಸ್ಯೆ ಮಮತ ಎಂ.ಶೆಟ್ಟಿ, ಮಂಗಳೂರು ಉದ್ಯಮಿ ರವಿ ಪೂಜಾರಿ ಮಜಲು, ನ್ಯಾಯವಾದಿ ಸತೀಶ್ ರೈ ಬಾರ್ದಡ್ಕ, ಪಡಂಗಡಿ ಗ್ರಾ.ಪಂ ಮಾಜಿ ಸದಸ್ಯ ಅಶೋಕ್ ಗೋವಿಯಾಸ್, ಜೆಸಿಐ ಬೆಳ್ತಂಗಡಿ ಮಂಜುಶ್ರೀ ಅಧ್ಯಕ್ಷ ಸಂತೋಷ್ ಪಿ. ಕೋಟ್ಯಾನ್ ಬಳಂಜ, ಉಜಿರೆ ಎಸ್.ಸಿ.ಡಿ.ಸಿ.ಸಿ ಬ್ಯಾಂಕ್‌ನ ವ್ಯವಸ್ಥಾಪಕರಾದ ಮಾಲಾ ಎಂ.ಕೆ. ಜಾತ್ರೋತ್ಸವ ಸಮಿತಿ ಅಧ್ಯಕ್ಷ ಹರೀಶ್ ವೈ ಚಂದ್ರಮ, ನಿವೃತ್ತ ಉಗ್ರಾಣಿ ಕೃಷ್ಣ ದೇವಾಡಿಗ ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಜಾತ್ರೋತ್ಸವ ಸಮಿತಿ ಗೌರವ ಸಲಹೆಗಾರ ಸದಾನಂದ ಸಾಲಿಯಾನ್ ಸ್ವಾಗತಿಸಿ, ಶಿಕ್ಷಕಿ ಮೋಹಿನಿ ನಿರೂಪಿಸಿ, ದೇವಸ್ಥಾನದ ಧರ್ಮದರ್ಶಿ ಜಯಸಾಲಿಯಾನ್ ವಂದಿಸಿದರು.
ಅಟ್ಲಾಜೆ ಅಂಗನವಾಡಿ ಕೇಂದ್ರದ ಪುಟಾಣಿಗಳಿಂದ ನೃತ್ಯ ಕಾರ್ಯಕ್ರಮ, ದೀಕ್ಷಿತ್ ಇವರಿಂದ ಮಿಮಿಕ್ರಿ ಹಾಗೂ ಬಳಂಜ ಬೊಳ್ಳಿಲು ತಂಡದ ಸದಸ್ಯರು ಮತ್ತು ಬೆಳ್ತಂಗಡಿ ವಾಣಿ ಆಂಗ್ಲ ಮಾಧ್ಯಮ ಶಾಲಾ ವಿದ್ಯಾರ್ಥಿಗಳಿಂದ ವಿವಿಧ ವೈವಿಧ್ಯಮಯ ಸಾಂಸ್ಕೃತಿಕ ನೃತ್ಯ ಸಂಭ್ರಮ ನಡೆದು ನಂತರ ಪಿಂಗಾರ ಕಲಾವಿದರು ಮೂಡಬಿದ್ರೆ ಇವರಿಂದ ನಮ ನಮ್ಮಾತೆಗೆ ತುಳು ಹಾಸ್ಯಮಯ ನಾಟಕ ಜರುಗಿತು.

ಚಿತ್ರ : ನೇಸರ ಕಟ್ಟೆ

marodi mara copyಮರೋಡಿ: ಮರೋಡಿ ಗ್ರಾಮದ ಕೂಕ್ರಬೆಟ್ಟು ಶಾಲಾ ಬಳಿ ಲಾರಿಯಲ್ಲಿ ಅಕ್ರಮವಾಗಿ ಮರದ ದಿಮ್ಮಿಗಳನ್ನು ಸಾಗಾಟ ಮಾಡುತ್ತಿದ್ದ ಬಗ್ಗೆ ಖಚಿತ ಮಾಹಿತಿ ಪಡೆದ ವೇಣೂರು ಅರಣ್ಯ ಇಲಾಖಾಧಿಕಾರಿಗಳು ಜ.18ರ ಮುಂಜಾನೆ ದಾಳಿ ನಡೆಸಿ ಸ್ವತ್ತುಗಳನ್ನು ವಶಕ್ಕೆ ಪಡೆದು ಪ್ರಕರಣ ದಾಖಲಿಸಿಕೊಂಡಿದ್ದಾರೆ.
ವಶಪಡಿಸಿಕೊಂಡ ಒಟ್ಟು ಸ್ವತ್ತುಗಳ ಮೌಲ್ಯ ಲಾರಿ ಸಹಿತ ರೂ. 4 ಲಕ್ಷ ಎಂದು ಅಂದಾಜಿಸಲಾಗಿದೆ. ವೇಣೂರು ವಲಯ ಅರಣ್ಯಾಧಿಕಾರಿ ಸುಬ್ರಹ್ಮಣ್ಯ ಆಚಾರ್ಯ, ಉಪ ವಲಯ ಅರಣ್ಯಾಧಿಕಾರಿ ರಾಜೇಶ್ ಅವರ ನೇತೃತ್ವದಲ್ಲಿ ಕಾರ್ಯಾಚರಣೆ ಕೈಗೊಂಡಿದ್ದು, ಅರಣ್ಯ ರಕ್ಷಕರಾದ ರವಿಕುಮಾರ್ ಡಿ., ಸಂದೀಪ್, ಜನಾರ್ದನ ಗೌಡ, ಶಶಿಕಾಂತ್ ಅರಣ್ಯ ವೀಕ್ಷಕರಾದ ಹರೀಶ್, ಪ್ರಶಾಂತ್ ವಾಹನ ಚಾಲನ ಆಶ್ಲೇಷ ಕಾರ್ಯಾಚರಣೆಯಲ್ಲಿ ಸಹಕರಿಸಿದರು. ಪ್ರಕರಣದ ಮುಂದಿನ ತನಿಖೆಯನ್ನು ಕುಂದಾಪುರ ವಿಭಾಗದ ಉಪ ಅರಣ್ಯ ಸಂರಕ್ಷಣಾಧಿಕಾರಿಗಳಾದ ಎ.ವಿ. ಅಮರ್‌ನಾಥ್ ಇವರ ನಿರ್ದೇಶನದಂತೆ ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಸುಬ್ರಹ್ಮಣ್ಯ ಎಚ್.ಆರ್. ಅವರು ಕೈಗೊಂಡಿದ್ದಾರೆ. ಮರೋಡಿ, ಕಾಶಿಪಟ್ಣ ಪರಿಸರದಲ್ಲಿ ಮರಗಳ್ಳರು ರಾತ್ರಿ ವೇಳೆ ಅತ್ಯಧಿಕವಾಗಿ ಕಾರ್ಯಾಚರಿಸುತ್ತಿರುವುದು ಹಲವು ದಿನಗಳಿಂದ ದಾಖಲಾಗುತ್ತಿರುವ ಪ್ರಕರಣಗಳೇ ಸಾಕ್ಷಿಯಾಗಿದೆ. ಕಳ್ಳರ ಈ ದುಷ್ಕೃತ್ಯದಿಂದ ಅರಣ್ಯ ಬರಡಾಗುತ್ತಿದ್ದು, ಪ್ರಕೃತಿಯ ಸಮತೋಲನವೇ ನಲುಗಿ ಹೋಗಿದೆ. ಪ್ರಕೃತಿಯ ಮೇಲೆ ಇಂತಹ ಅನಾಚಾರ ಎಸಗುವ ದುಷ್ಕರ್ಮಿಗಳನ್ನು ಜೈಲುಗಟ್ಟಿ ಕಠಿಣ ಕಾನೂನು ಕ್ರಮ ಕೈಗೊಳ್ಳಬೇಕೆಂಬ ಆಗ್ರಹ ಸಾರ್ವಜನಿಕರಿಂದ ಕೇಳಿ ಬಂದಿದೆ.

sushi

sushii

ಬೆಳ್ತಂಗಡಿ : ಇಲ್ಲಿಯ ಪ್ರಸನ್ನ ಕಾಲೇಜು ಲಾಯಿಲ ಬಳಿ ನೂತನವಾಗಿ ಪ್ರಾರಂಭಗೊಂಡ ಸುಶಿ ಕೆಫೆ ಮತ್ತು ಬಿಸ್ಟ್ರೋ ಉದ್ಘಾಟನೆಯನ್ನು ಜ.19ರಂದು ಕರ್ನಾಟಕ ಮಾಜಿ ಸಚಿವರಾದ ಗಂಗಾಧರ ಗೌಡ ಉದ್ಘಾಟಿಸಿ ಸಂಸ್ಥೆ ಉತ್ತರೋತ್ತರವಾಗಿ ಬೆಳೆಯಲಿ ಎಂದು ಶುಭ ಹಾರೈಸಿದರು.
ಈ ಸಂದರ್ಭದಲ್ಲಿ ಮಾಲಕರಾದ ರೂಪೇಶ್ ಮತ್ತು ದಂಪತಿಗಳು ಹಾಗೂ ಜಯಲಕ್ಷ್ಮೀ ಇಂಜಿನಿಯರಿಂಗ್ ಮಾಲಕ ವಿಶ್ವನಾಥ್ ಶೆಟ್ಟಿ, ಎಸ್.ವಿ.ಸಿ ಸ್ಟುಡಿಯೋ ಮತ್ತು ವಿಡಿಯೋ ಮಾಲಕ ಲೋಕೇಶ್ ಶೆಟ್ಟಿ, ವಿಶ್ವನಾಥ ಆರ್.ನಾಯಕ್, ಜಯಪ್ರಕಾಶ್ ಶೆಟ್ಟಿ, ಗಿರಿಧರ ಶೆಟ್ಟಿ, ಮುಂಡಪ್ಪ ಶೆಟ್ಟಿ, ಭಾನುಪ್ರಸನ್ನ, ಶಂಕರ ಹೆಗ್ಡೆ, ರಂಜನ್ ರಾವ್, ಗೌರೀಶ್ ರೈ, ಮುಂತಾದವರು ಉಪಸ್ಥಿತರಿದ್ದರು. ಸಿ.ಹೆಚ್ ಪ್ರಭಾಕರ ಸ್ವಾಗತಿಸಿ, ಜಯಲಕ್ಷ್ಮೀ ಇಂಜಿನಿಯರಿಂಗ್ ಮಾಲಕರಾದ ವಿಶ್ವನಾಥ ಶೆಟ್ಟಿ ಧನ್ಯವಾದವಿತ್ತರು.

aladangady copyಅಳದಂಗಡಿ : ಯುವ ವಾಹಿನಿ ಬೆಳ್ತಂಗಡಿ ಘಟಕದ ಆಶ್ರಯದಲ್ಲಿ ಶ್ರೀ ನಾರಾಯಣ ಗುರುಗಳ ತತ್ವ ಸಂದೇಶ ಕಾರ್ಯಕ್ರಮವು ಜ.15ರಂದು ಅಳದಂಗಡಿ ಸ್ವರಾಜ್ ಟವರ‍್ಸ್‌ನ ಸಭಾಭವನದಲ್ಲಿ ಜರಗಿತು.
ಕಾರ್ಯಕ್ರಮವನ್ನು ದೀಪ ಬೆಳಗಿಸಿ ಉದ್ಘಾಟಿಸಿ ಶ್ರೀ ನಾರಾಯಣ ಗುರುಗಳ ಆದರ್ಶ ತತ್ವಗಳ ಬಗ್ಗೆ ಸುದೀರ್ಘವಾಗಿ ಆಶೀರ್ವಚನ ನೀಡಿದ ಕೇರಳ ಶಿವಗಿರಿ ಮಠದ ಶ್ರೀ ಸತ್ಯಾನಂದ ತೀರ್ಥ ಸ್ವಾಮೀಜಿಯವರು. ನಾರಾಯಣ ಗುರುಗಳ ಸಾರ್ವಕಾಲಿಕ ಚಿಂತನೆಗಳಾದ ವಿದ್ಯೆ, ಉದ್ಯೋಗ, ಸಂಪರ್ಕ ಧ್ಯೇಯ ವಾಕ್ಯದಡಿ ಯುವವಾಹಿನಿ ಬಳಗವು ಹಲವು ಸಮಾಜಮುಖಿ ಕೆಲಸಗಳನ್ನು ಮಾಡುತ್ತಿರುವುದು ಸ್ಲಾಘನೀಯವಾಗಿದ್ದು ಬಿಲ್ಲವ ಸಮಾಜದ ಯುವಕರು ದುಶ್ಚಟಗಳಿಂದ ಆದಷ್ಟು ದೂರ ಇದ್ದು ನಾರಾಯಣ ಗುರುಗಳ ತತ್ವ ಸಂದೇಶಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಎಂದು ಕರೆ ನೀಡಿದರು.
ಯುವ ವಾಹಿನಿ ಬೆಳ್ತಂಗಡಿ ಘಟಕದ ಅಧ್ಯಕ್ಷ ಸದಾನಂದ ಪೂಜಾರಿ ಉಂಗಿಲಬೈಲು ಸ್ವಾಗತಿಸಿ ಪ್ರಾಸ್ತಾವಿಕವಾಗಿ ಮಾತನಾಡಿದರು.
ಎ.ಪಿ.ಎಂ.ಸಿ ಚುನಾವಣೆಯಲ್ಲಿ ವಿಜೇತರಾದ ಬಿಲ್ಲವ ಸಮಾಜದ ಚಿದಾನಂದ ಪೂಜಾರಿ ಎಲ್ದಕ್ಕ, ಪಲ್ಲವಿರಾಜು, ಸತೀಶ್ ಕೆ ಕಾಶಿಪಟ್ಣ ಇವರನ್ನು ಸನ್ಮಾನಿಸಲಾಯಿತು. ವೇದಿಕೆಯಲ್ಲಿ ಗೆಜ್ಜೆಗಿರಿ ನಂದನಬಿತ್ತಿಲ್ ಅಭಿವೃದ್ಧಿ ಸಮಿತಿಯ ತಾಲೂಕು ಸಮಿತಿ ಅಧ್ಯಕ್ಷ ಸೋಮನಾಥ ಬಂಗೇರ ವರ್ಪಾಳೆ, ಸುಧಿರ್ ಆರ್ ಸುವರ್ಣ, ಯುವ ವಾಹಿನಿ ಕೇಂದ್ರ ಸಮಿತಿಯ ತುಕರಾಮ್, ಅಮ್ಮಾಜಿ ಶಿರ್ಲಾಲು, ಅಳದಂಗಡಿ ಗ್ರಾ.ಪಂ ಅಧ್ಯಕ್ಷ ಸತೀಶ್ ಮಿತ್ತಮಾರ್, ಸಂಜೀವ ಪೂಜಾರಿ ಕೊಡಂಗೆ, ವಿಶ್ವನಾಥ ಪೂಜಾರಿ ಕುದ್ಯಾಡಿ ಉಪಸ್ಥಿತರಿದ್ದರು.
ಸ್ಮಿತೇಶ್ ಬಾರ್ಯ ಕಾರ್ಯಕ್ರಮ ನಿರೂಪಿಸಿ, ಯುವ ವಾಹಿನಿ ಸಂಚಲನ ಸಮಿತಿಯ ಪುರುಷೋತ್ತಮ ಧನ್ಯವಾದ ಸಲ್ಲಿಸಿದರು.

  ಉಜಿರೆ : ಉಜಿರೆಯ ಉದ್ಯಮಿ ಶ್ರೀ ದುರ್ಗಾ ನಿಲಯದ ಶ್ರೀಮತಿ ಸುನಂದಾ ಮತ್ತು ಯು. ಸದಾಶಿವ ಶೆಟ್ಟಿ ಮತ್ತು ಕುಟುಂಬಸ್ಥರು ಶ್ರದ್ಧಾ ಭಕ್ತಿಯೊಂದಿಗೆ ಉಜಿರೆಯ ಶ್ರೀ ಜನಾರ್ದನ ದೇವರಿಗೆ ಸೇವಾ ರೂಪವಾಗಿ ನೂತನ ಚಂದ್ರ ಮಂಡಲ ರಥವನ್ನು ಸಮರ್ಪಿಸಲು ಸಂಕಲ್ಪ ಮಾಡಿದ್ದಾರೆ.
ಅತ್ಯಂತ ವಿನೂತನವಾಗಿ ಕಾಷ್ಠ ಶಿಲ್ಪಗಳ ಆಕರ್ಷಕ ಕೆತ್ತನೆಗಳೊಂದಿಗೆ ನಿರ್ಮಿಸಲಾದ ಈ ನೂತನ ಚಂದ್ರಮಂಡಲ ರಥವನ್ನು ದೇವರಿಗೆ ಸಮರ್ಪಿಸುವ ಕಾರ್ಯಕ್ರಮ ಇಂದು (ಜ.19ರಂದು) ಗುರುವಾರ ಸಂಜೆ ಶುಭ ಮೂಹೂರ್ತದಲ್ಲಿ ಸದಾಶಿವ ಶೆಟ್ಟಿ, ಅವರ ಧರ್ಮಪತ್ನಿ ಶ್ರೀಮತಿ ಸುನಂದಾ, ಪುತ್ರರಾದ ರಮೇಶ್ ಶೆಟ್ಟಿ, ಉಮೇಶ್ ಶೆಟ್ಟಿ, ಮಕ್ಕಳು, ಅಳಿಯಂದಿರು ಹಾಗೂ ಕುಟುಂಬಸ್ಥರು ಹಾಗೂ ಭಕ್ತರ ಉಪಸ್ಥಿತಿಯಲ್ಲಿ ವಿವಿಧ ಧಾರ್ಮಿಕ ವಿಧಿ-ವಿಧಾನಗಳೊಂದಿಗೆ ನಡೆಯಲಿದೆ.
ಕಾರ್ಯಕ್ರಮದ ಪೂರ್ವಾಭಾವಿಯಾಗಿ ಇಂದು ಬೆಳಗ್ಗೆ ಗಂಟೆ 9ಕ್ಕೆ ಮಡಂತ್ಯಾರು ಸೇಕ್ರೆಡ್ ಹಾರ್ಟ್ ಕಾಲೇಜು ಬಳಿಯ ಶ್ರೀ ದುರ್ಗಾ ವುಡ್ ಇಂಡಸ್ಟ್ರೀಸ್‌ನಿಂದ ವಾಹನ ಜಾಥಾದೊಂದಿಗೆ ಚಂದ್ರ ಮಂಡಲ ರಥವನ್ನು ಉಜಿರೆಯ ದುರ್ಗಾ ನಿಲಯಕ್ಕೆ ತರಲಾಯಿತು. ಅಲ್ಲಿಂದ ಸಂಜೆ 4.30ಕ್ಕೆ ಭವ್ಯ ಮೆರವಣಿಗೆಯಲ್ಲಿ ಉಜಿರೆ ಜನಾರ್ದನ ದೇವಸ್ಥಾನಕ್ಕೆ ತರಲಾಗುವುದು. ಈ ಸಂದರ್ಭ ನಡೆಯುವ ಧರ್ಮ ಸಭೆಯಲ್ಲಿ ವಜ್ರದೇಹಿ ಮಠ ಗುರುಪುರದ ಶ್ರೀ ರಾಜಶೇಖರಾನಂದ ಸ್ವಾಮೀಜಿ ಆಶೀರ್ವಚನ ನೀಡಲಿದ್ದಾರೆ. ಶ್ರೀ ಜನಾರ್ದನ ದೇವಸ್ಥಾನದ ಅನುವಂಶಿಯ ಆಡಳಿತ ಮೊಕ್ತೇಸರ ಯು. ವಿಜಯರಾಘವ ಪಡ್ವೆಟ್ನಾಯ, ಶ್ರೀ ಕ್ಷೇತ್ರ ಧರ್ಮಸ್ಥಳದ ಡಿ. ಹರ್ಷೇಂದ್ರ ಕುಮಾರ್ ಇವರ ಗೌರವ ಉಪಸ್ಥಿತಿಯಲ್ಲಿ ಸಭೆ ನಡೆಯಲಿದೆ. ಜ.೨೦ರಂದು ಶುಕ್ರವಾರ ರಾತ್ರಿ ನೂತನ ಚಂದ್ರಮಂಡಲ ರಥದಲ್ಲಿ ದೇವರ ರಥೋತ್ಸವ ಕಾರ್ಯಕ್ರಮ ಜರುಗಲಿದೆ.

venur palanubhavigala guruthisuvike shibira copyವೇಣೂರು: ಫಲಾನುಭವಿಗಳ ಗುರುತಿಸುವಿಕೆ ಶಿಬಿರ 

ವೇಣೂರು: ವಿಕಲಚೇತನರಲ್ಲಿ ಶೇಕಡಾವಾರು ಅಂಗವೈಕಲ್ಯತೆಯನ್ನು ಗುರುತಿಸುವಲ್ಲಿ ವೈದ್ಯರುಗಳು ಎಡವದೆ ಜಾಗರೂಕರಾಗಬೇಕು. ಸರ್ಕಾರದ ಯೋಜನೆ, ಸವಲತ್ತುಗಳನ್ನು ಅವರಿಗೆ ತಲುಪುವಂತೆ ಸಹಕಾರಿಯಾಗುವ ಪ್ರಾಮಾಣಿಕ ಪ್ರಯತ್ನ ನಿಮ್ಮದಾಗಬೇಕು ಎಂದು ಬೆಳ್ತಂಗಡಿ ಶಾಸಕ ಕೆ. ವಸಂತ ಬಂಗೇರ ಹೇಳಿದರು.
ಅವರು ಜ. 15ರಂದು ವೇಣೂರು ಪ್ರಾಥಮಿಕ ಆರೋಗ್ಯ ಕೇಂದ್ರದ ಆವರಣದಲ್ಲಿ ಜರಗಿದ ವಿಕಲಚೇತನರ ಉಚಿತ ತಪಾಸಣೆ, ಸಾಧನ ಸಲಕರಣೆಗಳ ವಿತರಣೆಗಾಗಿ ಫಲಾನುಭವಿಗಳ ಗುರುತಿಸುವಿಕೆಯ ಶಿಬಿರದಲ್ಲಿ ಉದ್ಘಾಟನೆಯನ್ನು ನೆರವೇರಿಸಿ ಮಾತನಾಡಿದರು.
ಶಿಬಿರದಲ್ಲಿ ವಿಕಲಚೇತನ ಫಲಾನುಭವಿಗಳನ್ನು ಗುರುತಿಸಿ ಅವರಿಗೆ ಅವಶ್ಯವಿರುವ ಸಾಧನಾ ಸಲಕರಣೆಗಳನ್ನು ವಿತರಿಸಲಾಯಿತು. ವೇಣೂರು ಗ್ರಾ.ಪಂ. ಅಧ್ಯಕ್ಷೆ ಮೋಹಿನಿ ವಿ. ಶೆಟ್ಟಿ ಅಧ್ಯಕ್ಷತೆ ವಹಿಸಿದ್ದರು. ಅಳದಂಗಡಿ ಜಿ.ಪಂ. ಸದಸ್ಯ ಶೇಖರ ಕುಕ್ಕೇಡಿ, ಕುಕ್ಕೇಡಿ ಗ್ರಾ.ಪಂ. ಅಧ್ಯಕ್ಷೆ ತೇಜಾಕ್ಷಿ, ವೇಣೂರು ಗ್ರಾ.ಪಂ. ಉಪಾಧ್ಯಕ್ಷ ಅರುಣ್ ಕ್ರಾಸ್ತ, ಆರಂಬೋಡಿ ಗ್ರಾ.ಪಂ. ಉಪಾಧ್ಯಕ್ಷೆ ಆಶಾ ಎಸ್. ಶೆಟ್ಟಿ, ಪ್ರವೀಣ್ ಕುಮಾರ್ ಇಂದ್ರ, ವೇಣೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಆಡಳಿತಾಧಿಕಾರಿ ಜಯಕೀರ್ತಿ ಜೈನ್, ವೇಣೂರು ಲಯನ್ಸ್ ಕ್ಲಬ್ ಅಧ್ಯಕ್ಷ ವೆಂಕಟೇಶ್ ಎಂ.ಬಿ., ವೇಣೂರು ವರ್ತಕರ ಸಂಘದ ಕೋಶಾಧಿಕಾರಿ ಲುಕಾಸ್ ಕೊರೆಯಾ, ದ.ಕ. ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿ ಡಾ| ರಾಮಕೃಷ್ಣ, ಮಂಗಳೂರು ವೆನ್ಲಾಕ್ ಆಸ್ಪತ್ರೆಯ ವೈದ್ಯ ಡಾ| ಯುವಿ ಶೆಣೈ, ಮಂಗಳೂರು ಯೆನೆಪೋಯ ವೈದ್ಯಕೀಯ ಮಹಾವಿದ್ಯಾಲಯದ ಡಾ| ಸಂಸದ್ ಖಾನ್, ಬೆಳ್ತಂಗಡಿ ತಾಲೂಕು ಆರೋಗ್ಯಾಧಿಕಾರಿ ಡಾ| ಕಲಾಮಧು, ವೇಣೂರು ಪ್ರಾ.ಆ.ಕೇಂದ್ರದ ವೈದ್ಯಾಧಿಕಾರಿ ಡಾ| ಭವಿಷ್ಯಕೀರ್ತಿ, ವಿವಿಧ ಗ್ರಾ.ಪಂ. ಸದಸ್ಯರು, ಸಂಘ-ಸಂಸ್ಥೆಗಳ ಪದಾಧಿಕಾರಿಗಳು, ವೈದ್ಯಕೀಯ ಸಿಬ್ಬಂದಿ, ಆಶಾ ಕಾರ್ಯಕರ್ತೆಯರು ಉಪಸ್ಥಿತ ರಿದ್ದರು. ಬೆಳ್ತಂಗಡಿ ಕ್ಷೇತ್ರ ಆರೋಗ್ಯ ಶಿಕ್ಷಣಾಧಿಕಾರಿ ಅಮ್ಮಿ ಸ್ವಾಗತಿಸಿ ವೇಣೂರು ಪ್ರಾ.ಆ.ಕೇಂದ್ರದ ಸಿಬ್ಬಂದಿ ಸುರೇಶ್ ವಂದಿಸಿದರು. ಅನೂಪ್ ಜೆ. ಪಾಯಿಸ್ ಕಾರ್ಯಕ್ರಮ ನಿರೂಪಿಸಿದರು.

Melanthabettu sarveshwari pooje copyಮೇಲಂತಬೆಟ್ಟು : ಮೇಲಂತಬೆಟ್ಟು ಶ್ರೀ ದೇವಿ ಭಗವತಿ ಅಮ್ಮನವರ ದೇವಸ್ಥಾನದಲ್ಲಿ ಮಕರ ಸಂಕ್ರಾಂತಿಯ ಪ್ರಯುಕ್ತ ಶ್ರೀ ಸರ್ವೇಶ್ವರಿ ದೇವಿಯ ಪೂಜೆ ಕೇರಳ ಶಿವಗಿರಿ ಮಠ ವರ್ಕಳದ ಶ್ರೀ ಸತ್ಯಾನಂದ ತೀರ್ಥ ಸ್ವಾಮೀಜಿಯವರ ನೇತೃತ್ವದಲ್ಲಿ ಅಪಾರ ಸಂಖ್ಯೆಯ ಭಕ್ತರ ಉಪಸ್ಥಿತಿಯಲ್ಲಿ ವೈಭವ ಪೂರ್ಣವಾಗಿ ಜರುಗಿತು.
ಸಂಜೆ 5 ಗಂಟೆಯಿಂದ ಶ್ರೀ ದೇವಿ ಭಗವತಿ ಅಮ್ಮ ಭಜನಾ ಮಂಡಳಿ ಮತ್ತು ಶ್ರೀ ಕ್ಷೇ.ಧ.ಗ್ರಾ.ಯೋಜನೆ ಪ್ರಗತಿಬಂಧು ಸ್ವಸಹಾಯ ಸಂಘಗಳ ಒಕ್ಕೂಟದ ವತಿಯಿಂದ ವಿಶೇಷ ಭಜನಾ ಕಾರ್ಯಕ್ರಮ ನಡೆಯಿತು. ನಂತರ ಸ್ವಾಮೀಜಿರವರ ನೇತೃತ್ವದಲ್ಲಿ ಸರ್ವೇಶ್ವರಿ ದೇವಿಯ ಪೂಜೆ ಜರುಗಿತು. ಈ ಸಂದರ್ಭ ಆಶೀರ್ವಚನ ನೀಡಿದ ಸ್ವಾಮೀಜಿಯವರು ಸರ್ವೇಶ್ವರಿ ದೇವಿಯ ಪೂಜೆಯಿಂದ ನಮ್ಮ ಜೀವನದ ಕಷ್ಟ, ನಷ್ಟಗಳು ದೂರವಾಗಿ ನಮ್ಮಲ್ಲಿ ಆತ್ಮವಿಶ್ವಾಸ ಸಕಲ ಅಷ್ಟೈಶ್ವರ್ಯಗಳು ನೆಲೆಯಾಗುತ್ತದೆ. ಮನೆಯಲ್ಲಿ ಬೆಳೆ ಧವಸ ಧಾನ್ಯಾಧಿಗಳು ತುಂಬಿ ನಮ್ಮ ಸಂಸಾರದಲ್ಲಿ ಸುಖ, ನೆಮ್ಮದಿ ನೆಲೆಯಾಗುತ್ತದೆ. ವಿವಾಹ ತೊಂದರೆಗಳು, ಮನಃಕ್ಲೇಶ, ಧನವ್ಯಯ ಮೊದಲಾದ ಸಂಕಷ್ಟಗಳು ನಿವಾರಣೆಯಾಗುತ್ತದೆ ಎಂದು ಹೇಳಿ ಮನೆಯಲ್ಲಿ ಮಹಿಳೆಯರು ಆಚರಿಸಿಕೊಂಡು ಬರಬೇಕಾದ ನಿಯಮಗಳು, ಸಾಂಪ್ರಾದಾಯಗಳನ್ನು ವಿವರಿಸಿದರು. ಮಹಿಳೆಯವರು ಹೆಚ್ಚಿನ ಸಂಖ್ಯೆಯಲ್ಲಿ ಪೂಜಾ ಕಾರ್ಯದಲ್ಲಿ ಭಾಗವಹಿಸಿದರು.
ರಾತ್ರಿ ೮.೩೦ಕ್ಕೆ ವಿಶೇಷವಾಗಿ ರಂಗಪೂಜೆ, ಶ್ರೀ ಅಯ್ಯಪ್ಪ ಸ್ವಾಮಿ ಪೂಜೆ, ಸಂಕ್ರಾಂತಿ ಪೂಜೆ, ಶ್ರೀ ದೇವಿಗೆ ಹೂವಿನ ಪೂಜೆ ಮೊದಲಾದ ಧಾರ್ಮಿಕ ಕಾರ್ಯಕ್ರಮಗಳು ನಡೆಯಿತು. ರಘುನಾಥ ಶಾಂತಿ ಅರ್ಚಕರು ಬೆಳ್ತಂಗಡಿ, ಹೆಜಮಾಡಿ ಮಹೇಶ್ ಶಾಂತಿ ಅರ್ಚಕರು, ರಾಜೇಶ್ ಶಾಂತಿ ಇಂದಬೆಟ್ಟು, ಕ್ಷೇತ್ರದ ಪ್ರಧಾನ ಅರ್ಚಕ ಯಶವಂತ ಶಾಂತಿ ಪೂಜಾ ವಿಧಿಗಳನ್ನು ನೆರವೇರಿಸಿದರು. ದೇವಸ್ಥಾನದ ಆಡಳಿತ ಮೊಕ್ತೇಸರ ಯೋಗೀಶ್ ಪೂಜಾರಿ, ಪೂಜಾ ಸಮಿತಿ ಅಧ್ಯಕ್ಷ ರಮೇಶ್ ಬಂಗೇರ ಅಂಕಾಜೆ, ಭಜನಾ ಸಮಿತಿ ಅಧ್ಯಕ್ಷ ತಿಮ್ಮಪ್ಪ ಪೂಜಾರಿ ಮಾಪಾಲಾಡಿ, ಸಮಿತಿಯ ಪದಾಧಿಕಾರಿಗಳು, ಸದಸ್ಯರುಗಳು ಕಾರ್ಯಕ್ರಮದ ಯಶಸ್ವಿಗೆ ಸಹಕರಿಸಿದರು. ಊರ ಪರವೂರ ಭಕ್ತರು, ಸರಕಾರಿ ಇಲಾಖಾಧಿಕಾರಿಗಳು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿದ್ದರು.

puduvettu ambedkar bhavanashanku stapane copyಪುದುವೆಟ್ಟು : ಪುದುವೆಟ್ಟು ಗ್ರಾಮ ಪಂಚಾಯತ್‌ಗೆ ಒಳಪಟ್ಟ ಮಿಯ್ಯಾರು ಎಂಬಲ್ಲಿ 12 ಲಕ್ಷ ವೆಚ್ಚದ ಅಂಬೇಡ್ಕರ್ ಭವನದ ಕಾಮಗಾರಿ ಶಂಕು ಸ್ಥಾಪನೆಯನ್ನು ಜ.17 ರಂದು ಕರ್ನಾಟಕ ರಾಜ್ಯ ಕೈಗಾರಿಕ ನಿಗಮ ಮಂಡಳಿ ಅಧ್ಯಕ್ಷರು ಹಾಗೂ ಶಾಸಕ ವಸಂತ ಬಂಗೇರ ನೆರವೇರಿಸಿ ಪುದುವೆಟ್ಟಿನ ಮಿಯ್ಯಾರು ಎಂಬಲ್ಲಿ 25 ಲಕ್ಷ ವೆಚ್ಚದ ಕಾಮಗಾರಿಯ ನೀರಿನ ಟ್ಯಾಂಕ್ ನಳ್ಳಿ ನೀರಿನ ಉದ್ಘಾಟನೆ ಮಾಡಿ ಶ್ರೀ ವನದುರ್ಗಾ ದೇವಸ್ಥಾನ ಮಿಯ್ಯಾರು ಮತ್ತು ಎಸ್.ಎನ್.ಡಿ.ಪಿ ಮಿಯ್ಯಾರು ಇಲ್ಲಿಗೆ ಭೇಟಿ ನೀಡಿದರು.
ಶ್ರೀಮತಿ ನಮಿತಾ ಜಿ.ಪಂ ಸದಸ್ಯರು ಉಜಿರೆ ಕ್ಷೇತ್ರ, ಸೆಭಾಸ್ಟೀಯನ್ ವಿ.ಟಿ ತಾಲೂಕು ಪಂಚಾಯತ್ ಸದಸ್ಯರು ನೆರಿಯ ಕ್ಷೇತ್ರ, ಅಬ್ದುಲ್ ಗಫೂರ್ ಎ.ಪಿ.ಎಮ್.ಸಿ ಸದಸ್ಯರು ನೆರಿಯ ಕ್ಷೇತ್ರ, ಪುದುವೆಟ್ಟು ಗ್ರಾ.ಪಂ ಅಧ್ಯಕ್ಷೆ ಶ್ರೀಮತಿ ನೀಲಮ್ಮ, ಉಪಾಧ್ಯಕ್ಷ ಬೊಮ್ಮಣ್ಣ ಗೌಡ, ವಸಂತ ಬಿ.ಕೆ ಬೆಳ್ತಂಗಡಿ, ಪುದುವೆಟ್ಟು ಗ್ರಾಮ ಸಂಚಾಲಕ ಸೋಮ ಬಿ.ಡಿ, ಗ್ರಾ.ಪಂ ಸದಸ್ಯೆ ಶ್ರೀಮತಿಉಷಾ, ನೆರಿಯ ಗ್ರಾ.ಪಂ ಸದಸ್ಯ ಅಶ್ರಫ್, ಸ್ಥಳೀಯ ಮುಖಂಡರಾದ ಶಶಿಕುಮಾರ್, ಅಶೋಕನ್, ಕಿರಣ್ ಕುಮಾರ್, ವಸಂತ ಮಾಡ್ತಾರ್, ಸುಕುಮಾರ್ ಮೇರ್ಲ, ಗ್ರಾ.ಪಂ ಅಭಿವೃದ್ಧಿ ಅಧಿಕಾರಿ, ಸಿಬ್ಬಂದಿ ವರ್ಗ ಉಪಸ್ಥಿತರಿದ್ದರು. ಪುದುವೆಟ್ಟು ಗ್ರಾ.ಪಂ ಸದಸ್ಯ ರೋಯಿ ಜೋಸೆಫ್ ಸ್ವಾಗತಿಸಿ, ನಿರೂಪಿಸಿದರು.

gardady padagrahana1 copy

ಗರ್ಡಾಡಿ: ಗ್ರಾಮಾಭಿವೃದ್ಧಿ ಯೋಜನೆ ಒಕ್ಕೂಟಗಳ ಪದಗ್ರಹಣ

ಗರ್ಡಾಡಿ: ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾ. ಯೋಜನೆ ಗರ್ಡಾಡಿ, ಪ್ರಗತಿ ಬಂಧು ಸ್ವಸಹಾಯ ಸಂಘಗಳ ಒಕ್ಕೂಟ ಗರ್ಡಾಡಿ ಇವುಗಳ ಸಂಯುಕ್ತ ಆಶ್ರಯದಲ್ಲಿ ಗರ್ಡಾಡಿ ಪ್ರಗತಿಬಂಧು ಎ ಮತ್ತು ಬಿ ಒಕ್ಕೂಟದ ನೂತನ ಪದಾಧಿಕಾರಿಗಳ ಪದಗ್ರಹಣ ಸಮಾರಂಭವು ಗರ್ಡಾಡಿ ನಂದಿಬೆಟ್ಟ ಶ್ರೀ ನಂದಿಕೇಶ್ವರ ದೇವಸ್ಥಾನದ ಸಭಾಂಗಣದಲ್ಲಿ ಜರಗಿತು.
ನಂದಿಬೆಟ್ಟ ಶ್ರೀ ನಂದಿಕೇಶ್ವರ ದೇವಸ್ಥಾನದ ಆಡಳಿತ ಮೊಕ್ತೇಸರ ಜಯರಾಮ ಶೆಟ್ಟಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಶುಭ ಹಾರೈಸಿದರು. ಮುಖ್ಯ ಅತಿಥಿಗಳಾಗಿ ಉಪಸ್ಥಿತರಿದ್ದ ಬೆಂಗಳೂರು ಉಚ್ಛ ನ್ಯಾಯಾಲಯ ನ್ಯಾಯವಾದಿ ಹರೀಶ್ ಪೂಂಜ ಮಾತನಾಡಿ, ಧರ್ಮಸ್ಥಳ ಯೋಜನೆಯ ಕಾರ್ಯವೈಖರಿಯಿಂದ ಇಂದು ಮಹಿಳೆಯರ ಬದುಕು ಹಸನಾಗಿದೆ ಅಲ್ಲದೆ ಆರ್ಥಿಕವಾಗಿ ಸದೃಢರಾಗಿದ್ದಾರೆ. ಸಾಮಾಜಿಕವಾಗಿ ಗುರುತಿಸಿಕೊಳ್ಳುತ್ತಿರುವ ಮಹಿಳೆಯರು ಸ್ವಾಲಂಬನೆಯ ಬದುಕು ಕಂಡುಕೊಂಡಿದ್ದಾರೆ. ಪದಗ್ರಹಣ ಸಮಾರಂಭ ಇದಕ್ಕೆ ಮತ್ತಷ್ಟು ಪ್ರೇರಣೆಯಾಗಲಿದೆ ಎಂದರು.
ಗ್ರಾಮಾಭಿವೃದ್ಧಿ ಯೋಜನೆಯ ತಾಲೂಕು ಯೋಜನಾಧಿಕಾರಿ ರೂಪಾ ಜಿ. ಜೈನ್, ಕುಂಡದಬೆಟ್ಟು ಜುಮ್ಮಾ ಮಸೀದಿಯ ಧರ್ಮಗುರು ಕೆ.ಎಂ. ಹನೀಫ್ ಸಖಾಫಿ ಬಂಗೇರಕಟ್ಟೆ, ಒಕ್ಕೂಟಗಳ ವೇಣೂರು ವಲಯಧ್ಯಕ್ಷ ಅಶೋಕ್ ಕಜಿಪಟ್ಟ, ಗರ್ಡಾಡಿ ಪ್ರಗತಿ ಬಂಧು ಒಕ್ಕೂಟಗಳ ಅಧ್ಯಕ್ಷರುಗಳಾದ ಜಯರಾಮ ಶೆಟ್ಟಿ, ಉಸ್ಮಾನ್, ಆನಂದ ಶೆಟ್ಟಿ, ಪದ್ಮನಾಭ ಶೆಟ್ಟಿ ಉಪಸ್ಥಿತರಿದ್ದರು.
ಅತ್ಯುತ್ತಮವಾಗಿ ಕಾರ್ಯನಿರ್ವಹಿಸಿದ ಶ್ವೇತಾಶ್ರೀ ಸ್ವಸಹಾಯ ಸಂಘ ಮತ್ತು ಪಾರೊಟ್ಟು ಪ್ರಗತಿ ಬಂಧು ತಂಡವನ್ನು ಗೌರವಿಸಲಾಯಿತು. ಉತ್ತಮ ಕಾರ್ಯದಕ್ಷತೆಗಾಗಿ ಸೇವಾಪ್ರತಿನಿಧಿ ಹೇಮಲತಾ ಅವರನ್ನು ಸ್ಮರಣಿಕೆ ನೀಡಿ ಅಭಿನಂದಿಸಲಾಯಿತು.
ಗರ್ಡಾಡಿ ಸೇವಾಪ್ರತಿನಿಧಿ ಹೇಮಲತಾ ವರದಿ ವಾಚಿಸಿ ಒಕ್ಕೂಟದ ಕಾರ್ಯದರ್ಶಿ ಪ್ರೇಮಾ ಸ್ವಾಗತಿಸಿ ಕೃಷ್ಣಪ್ಪ ವಂದಿಸಿದರು. ವೇಣೂರು ವಲಯ ಮೇಲ್ವಿಚಾರಕ ಶ್ರೀನಿವಾಸ ಗೌಡ ಕಾರ್ಯಕ್ರಮ ನಿರ್ವಹಿಸಿದರು. ಗರ್ಡಾಡಿ ಸ್ವಸಹಾಯ ಸಂಘಗಳ ಸದಸ್ಯರು ಹಾಗೂ ಒಕ್ಕೂಟದ ಪದಾಧಿಕಾರಿಗಳು ಸಹಕರಿಸಿದರು.

  ಗುರುವಾಯನಕೆರೆ : ದಕ್ಷಿಣ ಕನ್ನಡ ಜಿಲ್ಲೆಯ ಪ್ರತಿಷ್ಠಿತ ನಿಟ್ಟೆ ಶಿಕ್ಷಣ ಸಂಸ್ಥೆ ಕೊಡಮಾಡುತ್ತಿರುವ ದಿ|| ನಿಟ್ಟೆ ಶಂಕರ ಅಡ್ಯಂತಾಯ ಸ್ಮಾರಕ ಅತ್ಯುತ್ತಮ ಶಾಲಾ ಪ್ರಶಸ್ತಿಗೆ ಸರಕಾರಿ ಪ್ರೌಢ ಶಾಲೆ, ಗುರುವಾಯನಕೆರೆಗೆ ಆಯ್ಕೆಯಾಗಿದ್ದು, ಪ್ರಶಸ್ತಿಯೊಂದಿಗೆ 10 ಲಕ್ಷ ರೂ. ನಗದು ಪುರಸ್ಕಾರವನ್ನು ನೀಡಲಾಗುತ್ತಿದೆ.
ಕಳೆದ 5 ವರ್ಷಗಳಿಂದ ಎಸ್.ಎಸ್.ಎಲ್.ಸಿ. ವಾರ್ಷಿಕ ಪರೀಕ್ಷೆಯಲ್ಲಿ 100% ಫಲಿತಾಂಶವನ್ನು ದಾಖಲಿಸುತ್ತಿರುವ ನಮ್ಮೂರ ಪ್ರೌಢ ಶಾಲೆ ಗುರುವಾಯನಕೆರೆ, ಅತ್ಯುತ್ತಮ ಗುಣಮಟ್ಟದ ಶಿಕ್ಷಣ, ಶಿಸ್ತು, ಕಲಿಕಾ ಶ್ರದ್ಧೆಯುಳ್ಳ ತಾಲೂಕಿನ ಉತ್ತಮ ಶಿಕ್ಷಣ ಸಂಸ್ಥೆಗಳಲ್ಲಿ ಒಂದಾಗಿದೆ. ಕಳೆದ ವರ್ಷದ ಎಸ್.ಎಸ್.ಎಲ್.ಸಿ. ವಾರ್ಷಿಕ ಪರೀಕ್ಷೆಯಲ್ಲಿ ಹಾಜರಾದ 82 ವಿದ್ಯಾರ್ಥಿಗಳಲ್ಲಿ 81 ವಿದ್ಯಾರ್ಥಿಗಳು ಪ್ರಥಮ ದರ್ಜೆ ಅಂಕಗಳೊಂದಿಗೆ ಉತ್ತೀರ್ಣರಾಗಿದ್ದು ಫಲಿತಾಂಶದ ಗುಣಮಟ್ಟದ ಅಂಕಿ ಅಂಶಗಳಲ್ಲಿ ದಕ್ಷಿಣ ಕನ್ನಡದ ಸರಕಾರಿ ಪ್ರೌಢ ಶಾಲೆಗಳಲ್ಲಿಯೇ ಅತ್ಯುತ್ತಮ ಗುಣಮಟ್ಟದ ಫಲಿತಾಂಶ ಪಡೆದ ಶಾಲೆಯೆಂಬ ಹೆಗ್ಗಳಿಕೆಗೆ ಪಾತ್ರವಾಗಿದೆ. ಶಿಕ್ಷಕರ ನಿಷ್ಠೆ, ಕಾರ್ಯಶ್ರದ್ಧೆ, ವಿದ್ಯಾರ್ಥಿಗಳ ಶಿಸ್ತು, ಚಟುವಟಿಕೆ ಆಧಾರಿತ ಕಲಿಕೆ ಹಾಗೂ ಚಿತ್ರಕಲಾ ಅಧ್ಯಾಪಕ ವಿ.ಕೆ. ವಿಟ್ಲ ಅವರ ಕಲಾ ಕುಂಚದಲ್ಲಿ ಅರಳಿರುವ ಶಾಲೆಯ ವರ್ಣಮಯ ಚಿತ್ರಗಳುಳ್ಳ ಗೋಡೆಗಳು ಹಾಗೂ ಸ್ವಚ್ಛ, ನಿರ್ಮಲ ವಠಾರ ಎಲ್ಲರ ಮನಸೂರೆಗೊಳ್ಳುತ್ತದೆ.
ಪ್ರಕೃತ 240 ವಿದ್ಯಾರ್ಥಿಗಳಿರುವ ಈ ಶಾಲೆಯಲ್ಲಿ ಮುಖ್ಯೋಪಾಧ್ಯಾಯರ ಹುದ್ದೆ, ಗಣಿತ ಶಿಕ್ಷಕರು, ದೈಹಿಕ ಶಿಕ್ಷಣ ಶಿಕ್ಷಕರ ಕೊರತೆಯೊಂದಿಗೆ ದ್ವಿತೀಯ ದರ್ಜೆ ಸಹಾಯಕರ ಹುದ್ದೆಗಳು ಖಾಲಿ ಇದೆ. ಅದಾಗ್ಯೂ ಶಾಲೆಯಲ್ಲಿ ಭರಪೂರ ಶಿಕ್ಷಣೋತ್ಸಾಹ, ಚಟುವಟಿಕೆ, ಸಮೃದ್ಧ ವಾತಾವರಣ ಇದೆ. ಈಗಾಗಲೇ ಈ ಶಾಲೆಯು ಹಲವಾರು ಪ್ರಶಸ್ತಿ ಅಭಿನಂದನೆಗಳಿಗೆ ಭಾಜನವಾಗಿದೆ. ಶಾಲಾಭಿವೃದ್ಧಿ ಸಮಿತಿಯ ಅಧ್ಯಕ್ಷರೂ ಆಗಿರುವ ಶಾಸಕ ವಸಂತ ಬಂಗೇರ, ಕುವೆಟ್ಟು ಕ್ಷೇತ್ರ ಜಿಲ್ಲಾ ಪಂಚಾಯತ್ ಸದಸ್ಯೆ ಶ್ರೀಮತಿ ಮಮತಾ ಎಂ. ಶೆಟ್ಟಿ, ತಾಲೂಕು ಪಂಚಾಯತ್ ಸದಸ್ಯ ಗೋಪಿನಾಥ ನಾಯಕ್ ಹಾಗೂ ಕುವೆಟ್ಟು ಗ್ರಾಮ ಪಂಚಾಯತ್ ಅಧ್ಯಕ್ಷ ಅಶೋಕ್ ಕೋಟ್ಯಾನ್, ಎಸ್‌ಡಿಎಂಸಿ ವೃಂದ, ಶಾಲಾಭಿಮಾನಿಗಳು ಹಾಗೂ ಉದಾರದಾನಿಗಳಾಗಿರುವ ಅಲ್ಫೋನ್ಸ್ ಫ್ರಾಂಕೊ ಮತ್ತು ಆನಂದ ಶೆಟ್ಟಿ ಐಸಿರಿ ಅವರ ನೆರವನ್ನು ಶಾಲಾ ಶಿಕ್ಷಕವೃಂದ ನೆನೆದುಕೊಳ್ಳುತ್ತದೆ. ಅಲ್ಲದೆ ಶಾಸಕರು ಪ್ರತೀವರ್ಷ ಅಭಿನಂದನಾ ಕಾರ್ಯಕ್ರಮ ಏರ್ಪಡಿಸಿ ಶಿಕ್ಷಕರನ್ನು ಮತ್ತು ಮಕ್ಕಳನ್ನು ಇನ್ನಷ್ಟು ಪ್ರೋತ್ಸಾಹಿಸುವ ಕಾರ್ಯ ಮಾಡುತ್ತಾ ಬರುತ್ತಿದ್ದಾರೆ.
ಶಾಶ್ವತ ಕಾಮಗಾರಿಗೆ ಅನುದಾನ ಬಳಕೆಗೆ ನಿರ್ಧಾರ:
ಇದೀಗ ಪ್ರಶಸ್ತಿಯೊಂದಿಗೆ ಶಾಲೆಗೆ ದೊರೆತಿರುವ ರೂ.10 ಲಕ್ಷ ಅನುದಾನವನ್ನು ಸಮುದಾಯದ ಸಹಭಾಗಿತ್ವದಲ್ಲಿ ಸುಸಜ್ಜಿತ ಸಭಾಂಗಣ, ಶಾಲಾ ಕ್ರೀಡಾಂಗಣ ವಿಸ್ತರಣೆ, ಆಧುನಿಕ ತಂತ್ರಜ್ಞಾನ ಅಳವಡಿಸಿ ಇ-ಇಜಟಿ ತರಗತಿ, ಶುದ್ಧ ಕುಡಿಯುವ ನೀರಿನ ಸೌಲಭ್ಯವನ್ನು ನೀಡುವ ಯೋಜನೆಗಳನ್ನು ಹಮ್ಮಿಕೊಂಡು ವಿನಿಯೋಗಿಸುವ ಕ್ರಮಗಳನ್ನು ಮಂಡಳಿ ಕೈಗೊಳ್ಳಲು ತೀರ್ಮಾನ ಮಾಡಿದೆ.

bus

buss

busss

ಬೆಳ್ತಂಗಡಿ : ಬೆಳ್ತಂಗಡಿ ಬಸ್ ನಿಲ್ದಾಣದ ಬಳಿ ಸರಕಾರಿ ಬಸ್ ಬೈಕ್‌ಗೆ ಹಿಂಬದಿಯಿಂದ ಡಿಕ್ಕಿಯಾದ ಘಟನೆ ಇಂದು ಬೆಳಗ್ಗೆ ನಡೆದಿದೆ. ಅಪಘಾತದಿಂದಾಗಿ ಬೈಕ್ ಬಸ್‌ನಡಿಯಲ್ಲಿ ಸಿಲುಕಿಕೊಂಡಿದ್ದು, ಬೈಕ್ ಪ್ರಯಾಣಿಕ ಬೈಕ್‌ನಿಂದ ಜಿಗಿದು ಹೆಚ್ಚಿನ ಅಪಾಯದಿಂದ ಪಾರಾಗಿದ್ದಾರೆ.

ಜ.20ರಂದು ವಿದ್ಯುತ್ ನಿಲುಗಡೆ

ಜ.20ರಂದು ವಿದ್ಯುತ್ ನಿಲುಗಡೆ

Thursday, January 19th, 2017 | Suddi Belthangady | no responses ಬೆಳ್ತಂಗಡಿ : ಗುರುವಾಯನಕೆರೆ, ಬೆಳ್ತಂಗಡಿ, ಧರ್ಮಸ್ಥಳ ವಿದ್ಯುತ್ ಲೈನ್‌ನಲ್ಲಿ ತುರ್ತುಕಾಮಗಾರಿಯನ್ನು ಕೈಗೊಳ್ಳಬೇಕಾದ ಹಿನ್ನಲೆಯಲ್ಲಿ… ಮುಂದೆ ಓದಿ

ಉಜಿರೆ ಶ್ರೀ ಜನಾರ್ದನ ದೇವರಿಗೆ ನೂತನ ಚಂದ್ರ ಮಂಡಲ ರಥ ಸಮರ್ಪಣೆ

Thursday, January 19th, 2017 | Suddi Belthangady | no responses ಉಜಿರೆ : ಉಜಿರೆಯ ಉದ್ಯಮಿ ಶ್ರೀ ದುರ್ಗಾ ನಿಲಯದ ಶ್ರೀಮತಿ ಸುನಂದಾ ಮತ್ತು… ಮುಂದೆ ಓದಿ

ಧರ್ಮಸ್ಥಳದಲ್ಲಿ 46ನೇ ವರ್ಷದ ಉಚಿತ ಸಾಮೂಹಿಕ ವಿವಾಹ

Monday, January 16th, 2017 | Suddi Belthangady | no responses ನಾಡಿನ ಪವಿತ್ರ ಕ್ಷೇತ್ರ ಧರ್ಮಸ್ಥಳದಲ್ಲಿ ಮೇ 4 ರಂದು ಗುರುವಾರ ಸಾಯಂಕಾಲ 6.50ಕ್ಕೆ… ಮುಂದೆ ಓದಿ

ಜ. 15: ವಿಕಲ ಚೇತನರ ಉಚಿತ ತಪಾಸಣೆ-ಫಲಾನುಭವಿಗಳ ಆಯ್ಕೆ

Friday, January 13th, 2017 | Suddi Belthangady | no responses ವೇಣೂರು : ವಿವಿಧ ಸಂಘ ಸಂಸ್ಥೆಗಳ ಸಹಯೋಗದೊಂದಿಗೆ ವಿಕಲ ಚೇತನರ ಉಚಿತ ತಪಾಸಣೆ… ಮುಂದೆ ಓದಿ

ಜ.13-15 ಬೆಳ್ತಂಗಡಿ ತಾಲೂಕು  ಮಟ್ಟದ ಸ್ಕೌಟ್ ರ‍್ಯಾಲಿ

Friday, January 13th, 2017 | Suddi Belthangady | no responses ಮಡಂತ್ಯಾರು : ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ಮಡಂತ್ಯಾರು ಸಂಸ್ಥೆಯ 2016-17ರ ಸಾಲಿನ… ಮುಂದೆ ಓದಿ

ಜ.23: ನಂದಿನಿ ಕಿರಿಯ ಕಲಾವಿದ ಚಿತ್ರಕಲಾ ಸ್ಪರ್ಧೆ

Friday, January 13th, 2017 | Suddi Belthangady | no responses ದ.ಕ ಸಹಕಾರಿ ಹಾಲು ಉತ್ಪಾದಕರ ಒಕ್ಕೂಟದ ಆಶ್ರಯದಲ್ಲಿ ನಂದಿನಿ ಕಿರಿಯ ಕಲಾವಿದ ಚಿತ್ರಕಲೆ… ಮುಂದೆ ಓದಿ

ಜ.14: ಭಗವತಿ ಕ್ಷೇತ್ರದಲ್ಲಿ ಸರ್ವೇಶ್ವರೀ ದೇವಿ ಪೂಜೆ

Friday, January 13th, 2017 | Suddi Belthangady | no responses ಮೇಲಂತಬೆಟ್ಟು : ಮೇಲಂತಬೆಟ್ಟು ಶ್ರೀ ದೇವಿ ಭಗವತಿ ಅಮ್ಮನವರ ದೇವಸ್ಥಾನದಲ್ಲಿ ಮಕರ ಸಂಕ್ರಾಂತಿಯ… ಮುಂದೆ ಓದಿ

ಉಜಿರೆ : ನೀನಾಸಂ ನಾಟಕಗಳು

ಉಜಿರೆ : ನೀನಾಸಂ ನಾಟಕಗಳು

Friday, January 13th, 2017 | Suddi Belthangady | no responses ಉಜಿರೆ: ಇಲ್ಲಿಯ ಸಮೂಹ ಸಂಸ್ಥೆಯ ಜ.30 ಹಾಗೂ 31ರಂದು ಉಜಿರೆಯಲ್ಲಿ ಕಾಲಂದುಗೆ ಗೆಜ್ಜೆ… ಮುಂದೆ ಓದಿ

ಜ.15: ಕುಂಭ ಸಂಭ್ರಮ-2017

ಜ.15: ಕುಂಭ ಸಂಭ್ರಮ-2017

Friday, January 13th, 2017 | Suddi Belthangady | no responses ಬೆಳ್ತಂಗಡಿ: ಕುಂಬಾರರ ಸೇವಾ ಸಂಘ ಬೆಳ್ತಂಗಡಿ ಇದರ ವತಿಯಿಂದ ಸ್ವಜಾತಿ ಬಾಂಧವರ ಮಾಗಣೆ… ಮುಂದೆ ಓದಿ

ವೇಣೂರು ಪ್ರೌಢ ಶಾಲೆಗೆ ಉತ್ತಮ ಶಾಲಾ ಪ್ರಶಸ್ತಿ

ವೇಣೂರು ಪ್ರೌಢ ಶಾಲೆಗೆ ಉತ್ತಮ ಶಾಲಾ ಪ್ರಶಸ್ತಿ

Tuesday, January 10th, 2017 | Suddi Belthangady | no responses ವೇಣೂರು: ವೇಣೂರು ಸರ್ಕಾರಿ ಪ್ರೌಢ ಶಾಲೆಯು ಮಂಗಳೂರು ದೇರಳಕಟ್ಟೆಯ ನಿಟ್ಟೆ ಎಜ್ಯುಕೇಶನ್ ಟ್ರಸ್ಟ್‌ನಿಂದ… ಮುಂದೆ ಓದಿ

ಜೈನರ ಪ್ರಸಿದ್ಧ ತೀರ್ಥ ಕ್ಷೇತ್ರ ಬಂಗಾಡಿಯಲ್ಲಿ ಜ.08ರಂದು ರಥೋತ್ಸವ

Saturday, January 7th, 2017 | Suddi Belthangady | no responses ಉಜಿರೆ: ಬೆಳ್ತಂಗಡಿ ತಾಲ್ಲೂಕಿನಲ್ಲಿರುವ ಜೈನರ ಪ್ರಸಿದ್ಧ ತೀರ್ಥ ಕ್ಷೇತ್ರ ಬಂಗಾಡಿಯಲ್ಲಿ ಭಗವಾನ್ ಶ್ರೀ… ಮುಂದೆ ಓದಿ

ಬೆಳ್ತಂಗಡಿ : ಜ.೦8ರಂದು ಸ್ವಯಂ ಪ್ರೇರಿತ ರಕ್ತದಾನ ಶಿಬಿರ

Monday, January 2nd, 2017 | Suddi Belthangady | no responses ಬೆಳ್ತಂಗಡಿ : ಶ್ರೀ ಗುರುನಾರಾಯಣ ಸ್ವಾಮಿ ಸೇವಾ ಸಂಘ ಬೆಳ್ತಂಗಡಿ, ಮಂಜುಶ್ರೀ ಜೇಸಿಸ್… ಮುಂದೆ ಓದಿ

21ನೆಯ ದ.ಕ ಜಿಲ್ಲಾ ಸಾಹಿತ್ಯ ಸಮ್ಮೇಳನ : ಪಸ್ತಕಗಳ ಮುದ್ರಣ ಮತ್ತು ಬಿಡುಗಡೆಗೆ ಅವಕಾಶ

Saturday, December 31st, 2016 | Suddi Belthangady | no responses ಜನವರಿ 27, 28, 29 ಮೂರು ದಿನಗಳ ಕಾಲ ಉಜಿರೆಯಲ್ಲಿ ಜರಗಲಿರುವ ದಕ್ಷಿಣ… ಮುಂದೆ ಓದಿ

ಮುಂಡೂರು : ಕಾಲಾವಧಿ ನೇಮೋತ್ಸವ

ಮುಂಡೂರು : ಕಾಲಾವಧಿ ನೇಮೋತ್ಸವ

Friday, December 30th, 2016 | suddiblt | no responses ಮುಂಡೂರು  : ಮುಂಡೂರು ಶ್ರೀ ನಾಗಕಲ್ಲುರ್ಟಿ, ಶ್ರೀ ಕ್ಷೇತ್ರ ಮಂಗಳಗಿರಿಯಲ್ಲಿ ಕಾಲಾವಧಿ ನೇಮೋತ್ಸವವು… ಮುಂದೆ ಓದಿ

ಜ.3: ಮದ್ದಡ್ಕದಲ್ಲಿ ಪೇರೋಡ್ ಉಸ್ತಾದ್ ಸ್ನೇಹ ಸಂದೇಶ ಯಾತ್ರೆಗೆ ಭವ್ಯ ಸ್ವಾಗತ ಸಿರಾಜುಲ್ ಹುದಾ ಕುಟ್ಯಾಡಿ ಬೆಳ್ಳಿಹಬ್ಬದ ಪ್ರಚಾರ ಸಮ್ಮೇಳನ

Friday, December 30th, 2016 | Suddi Belthangady | no responses ಬೆಳ್ತಂಗಡಿ : ಕೇರಳದ ಪ್ರಸಿದ್ಧ ಧಾರ್ಮಿಕ ಲೌಕಿಕ ಸಮನ್ವಯ ಶಿಕ್ಷಣ ಕೇಂದ್ರ ಸಿರಾಜುಲ್… ಮುಂದೆ ಓದಿ

ಡಿ.31: ಅಂಡಿಂಜೆ ಫ್ರೆಂಡ್ಸ್ ವತಿಯಿಂದ ಸೂಪರ್ ಸಿಕ್ಸ್ ಕ್ರಿಕೆಟ್ ಪಂದ್ಯ

Friday, December 30th, 2016 | Suddi Belthangady | no responses ಅಂಡಿಂಜೆ: ಅಂಡಿಂಜೆ ಫ್ರೆಂಡ್ಸ್ ವತಿಯಿಂದ 5ನೇ ವರ್ಷದ ಹೊನಲು ಬೆಳಕಿನ 7 ಜನರ… ಮುಂದೆ ಓದಿ

ಉಜಿರೆ : ಗ್ರಂಥ ಲೋಕಾರ್ಪಣೆ

ಉಜಿರೆ : ಗ್ರಂಥ ಲೋಕಾರ್ಪಣೆ

Friday, December 30th, 2016 | Suddi Belthangady | no responses ಉಜಿರೆ : ಉಜಿರೆ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಕಾಲೇಜಿನ ಇತಿಹಾಸ ವಿಭಾಗ ಮುಖ್ಯಸ್ಥ… ಮುಂದೆ ಓದಿ

ಕಲಾಶ್ರೀ ಪ್ರಶಸ್ತಿಗೆ ಅರ್ಜಿ ಆಹ್ವಾನ

ಕಲಾಶ್ರೀ ಪ್ರಶಸ್ತಿಗೆ ಅರ್ಜಿ ಆಹ್ವಾನ

Friday, December 30th, 2016 | Suddi Belthangady | no responses ಬೆಳ್ತಂಗಡಿ : ಕಲಾಶ್ರೀ ಪ್ರಶಸ್ತಿಗಾಗಿ ತಾಲೂಕು, ಜಿಲ್ಲೆ, ರಾಜ್ಯ ಮಟ್ಟದ ಸ್ಪರ್ಧೆಯ ಆಯ್ಕೆ… ಮುಂದೆ ಓದಿ

ಬೈಲಹೊಂಗಲದಲ್ಲಿ ಕೃಷಿ ಮೇಳ

ಬೈಲಹೊಂಗಲದಲ್ಲಿ ಕೃಷಿ ಮೇಳ

Friday, December 30th, 2016 | Suddi Belthangady | no responses ಉಜಿರೆ: ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಆಶ್ರಯದಲ್ಲಿ ಜನವರಿ  25ರಿಂದ 27ರ ವರೆಗೆ ಬೆಳಗಾವಿ… ಮುಂದೆ ಓದಿ

21ನೇ ದ.ಕ. ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ಲಾಂಛನ ಆಹ್ವಾನ

Friday, December 30th, 2016 | Suddi Belthangady | no responses ಬೆಳ್ತಂಗಡಿ : ಉಜಿರೆಯಲ್ಲಿ ಜನವರಿ ತಿಂಗಳ ಕೊನೆಯ ವಾರದಲ್ಲಿ 3 ದಿನಗಳ ಕಾಲ… ಮುಂದೆ ಓದಿ

ಜ.9-12 : ಉಜಿರೆ ಶ್ರೀ ರತ್ನವರ್ಮ ಹೆಗ್ಗಡೆ ಕ್ರೀಡಾಂಗಣದಲ್ಲಿ ರಾಷ್ಟ್ರ ಮಟ್ಟದ ಬಾಲಕಿಯರ ವಾಲಿಬಾಲ್ ಪಂದ್ಯಾಟ

Thursday, December 29th, 2016 | Suddi Belthangady | no responses ಬೆಳ್ತಂಗಡಿ : ಪದವಿ ಪೂರ್ವ ಶಿಕ್ಷಣ ಇಲಾಖೆ ಹಾಗೂ ಶ್ರೀ ಧ.ಮಂ. ಪದವಿ… ಮುಂದೆ ಓದಿ

ಮಾಣೂರು ಶ್ರೀ ಶಾಸ್ತಾವು ದೇವಸ್ಥಾನ ಜ.2ರಂದು 108 ಕಾಯಿಗಳ ಗಣಯಾಗ-ರಂಗಪೂಜೆ

Thursday, December 29th, 2016 | Suddi Belthangady | no responses ಪತ್ರಿಕಾಗೋಷ್ಠಿ * ದೇವಸ್ಥಾನದ ಈಶಾನ್ಯ ಭಾಗದಲ್ಲಿ ನಾಗದೇವರ ಸನ್ನಿಧಾನ.
* ಪ್ರಧಾನ ದೈವವಾಗಿ ಮುಂದೆ ಓದಿ

ಡಿ.30 : ರೆಖ್ಯ ದೇವಸ್ಥಾನ ಬ್ರಹ್ಮಕಲಶೋತ್ಸವ  ಪ್ರಯುಕ್ತ ವಿವಿಧ ಕಾಮಗಾರಿಗಳ ಉದ್ಘಾಟನೆ

Thursday, December 29th, 2016 | Suddi Belthangady | no responses ರೆಖ್ಯ : ರೆಖ್ಯ ಗುಡ್ರಾದಿ ಶ್ರೀ ಗುಡ್ರಾಮಲ್ಲೇಶ್ವರ ದೇವಸ್ಥಾನದಲ್ಲಿ ಅಷ್ಟಬಂಧ ಬ್ರಹ್ಮಕಲಶೋತ್ಸವ ಹಾಗೂ… ಮುಂದೆ ಓದಿ

ಡಿ.27-31: ಬೆಳ್ತಂಗಡಿ ಅಯ್ಯಪ್ಪ ದೀಪೋತ್ಸವ

ಡಿ.27-31: ಬೆಳ್ತಂಗಡಿ ಅಯ್ಯಪ್ಪ ದೀಪೋತ್ಸವ

Thursday, December 29th, 2016 | Suddi Belthangady | no responses ಬೆಳ್ತಂಗಡಿ : ಶ್ರೀ ಅಯ್ಯಪ್ಪ ಸ್ವಾಮಿ ದೇವಸ್ಥಾನ ರಾಮನಗರ ಶ್ರೀ ಅಯ್ಯಪ್ಪ ಸ್ವಾಮಿ… ಮುಂದೆ ಓದಿ

ಡಿ. 24-25 : ಮೈರೋಳ್ತಡ್ಕದಲ್ಲಿ ತಾಲೂಕು ಯುವಜನ ಮೇಳ

Thursday, December 22nd, 2016 | Suddi Belthangady | no responses ಮೈರೋಳ್ತಡ್ಕ : ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಮೂಲಕ ತಾಲೂಕು ಯುವಜನ… ಮುಂದೆ ಓದಿ

ಬೈಕ್ ಮತ್ತು ಕಾರು ಮೆಕ್ಯಾನಿಕ್ ಉಚಿತ ತರಬೇತಿ

ಬೈಕ್ ಮತ್ತು ಕಾರು ಮೆಕ್ಯಾನಿಕ್ ಉಚಿತ ತರಬೇತಿ

Friday, December 16th, 2016 | Suddi Belthangady | no responses SKF Bearings Company ರವರ ವತಿಯಿಂದ ಉಚಿತವಾಗಿ 6 ತಿಂಗಳ ಬೈಕ್ ಮತ್ತು… ಮುಂದೆ ಓದಿ

ಜೈನ್ ಮಿಲನ್-  ಕರಾವಳಿ ಮಿಲನೋತ್ಸವ

ಜೈನ್ ಮಿಲನ್-  ಕರಾವಳಿ ಮಿಲನೋತ್ಸವ

Friday, December 16th, 2016 | Suddi Belthangady | no responses ಬೆಳ್ತಂಗಡಿ :ಮೂಡಬಿದರೆ ಜೈನ್ ಮಿಲನ್ ಆತಿಥ್ಯದಲ್ಲಿ ಮಂಗಳೂರು ವಿಭಾಗದ ಜೈನ್ ಮಿಲನ್ ಡಿ.… ಮುಂದೆ ಓದಿ

ಬರಯ: ಮಹಾದ್ವಾರಕ್ಕೆ ಶಿಲಾನ್ಯಾಸ

ಬರಯ: ಮಹಾದ್ವಾರಕ್ಕೆ ಶಿಲಾನ್ಯಾಸ

Friday, December 16th, 2016 | Suddi Belthangady | no responses ಬೆಳ್ತಂಗಡಿ: ಅಳದಂಗಡಿ ಸನಿಹದ ಬರಯ ಶ್ರೀ ಗೋಪಾಲಕೃಷ್ಣ ದೇವಸ್ಥಾನದಲ್ಲಿ ಧನುರ್ಮಾಸ ಪ್ರಯುಕ್ತ ಧನುಪೂಜೆ… ಮುಂದೆ ಓದಿ

ರುಡ್‌ಸೆಟ್‌ನಲ್ಲಿ ಉಚಿತ ತರಬೇತಿಗಳು

ರುಡ್‌ಸೆಟ್‌ನಲ್ಲಿ ಉಚಿತ ತರಬೇತಿಗಳು

Friday, December 16th, 2016 | Suddi Belthangady | no responses ಉಜಿರೆ: ಉಜಿರೆಯ ರುಡ್‌ಸೆಟ್ ಸಂಸ್ಥೆಯಲ್ಲಿ ಮುಂದಿನ ತಿಂಗಳುಗಳಲ್ಲಿ ನಡೆಯುವ ತರಬೇತಿಗಳ ವಿವರಗಳು:
1.… ಮುಂದೆ ಓದಿ

ಡಿ.17: ತಾಲೂಕು ಮಟ್ಟದ ಜನಸಂಪರ್ಕ ಸಭೆ

ಡಿ.17: ತಾಲೂಕು ಮಟ್ಟದ ಜನಸಂಪರ್ಕ ಸಭೆ

Thursday, December 15th, 2016 | Suddi Belthangady | no responses ಬೆಳ್ತಂಗಡಿ : ಸರಕಾರದ ವಿವಿಧ ಯೋಜನೆಗಳ ಸಮರ್ಪಕ ಅನುಷ್ಠಾನ ಹಾಗೂ ಸಾರ್ವಜನಿಕ ಕುಂದುಕೊರತೆಗಳ… ಮುಂದೆ ಓದಿ

 ಗ್ರಾಹಕರಿಗೆ ತನ್ನ 4ಜಿ ಸಿಮ್ ಕೊಡುಗೆ ಅಗಣಿತ ಉಚಿತ ಧ್ವನಿ ಮತ್ತು ಉಚಿತ ಅನಿಯಮಿತ ಡೇಟಾ, ಎಸ್.ಎಂ.ಎಸ್, ವಿಡಿಯೋ ಕರೆ, ಉಚಿತ ರೋಮಿಂಗ್ ಇತ್ಯಾದಿ ಸೇವೆಗಳನ್ನು ನೀಡುವ ಮೂಲಕ ಟೆಲಿಕಾಂ ರಂಗದಲ್ಲಿ ಸಂಚಲನ ಸೃಷ್ಠಿಸಿದ್ದ ರಿಲಯನ್ಸ್ ಜಿಯೋ ಡಿಸೆಂಬರ್ ಅಂತ್ಯಕ್ಕೆ 72.4 ಮಿಲಿಯನ್ ಗ್ರಾಹಕರನ್ನು ಹೊಂದಿದೆ. ಡಿಸೆಂಬರ್ 31ರವರೆಗೆ ಸುಮಾರು 72.4 ಮಿಲಿಯನ್ ಗ್ರಾಹಕರು ರಿಲಯನ್ಸ್ ಜಿಯೋ ಸೇವೆಗಳನ್ನು ಬಳಸುತ್ತಿದ್ದು, ಪ್ರತಿ ದಿನ ಲಕ್ಷಕ್ಕೂ ಹೆಚ್ಚು ಮಂದಿ ಜಿಯೋ ಗ್ರಾಹಕರಾಗುತ್ತಿದ್ದಾರೆ ಎಂದು ಜಿಯೋ ಕಾರ್ಯತಂತ್ರ ಮತ್ತು ಯೋಜನೆ ಮುಖ್ಯಸ್ಥ ಅನ್ಯುಮಾನ್ ಠಾಕೂರ್ ಹೇಳಿದ್ದಾರೆ.

 ಐ.ಐ.ಟಿಯಲ್ಲಿ ವಿದ್ಯಾರ್ಥಿನಿಯರಿಗೆ ಮೀಸಲಾತಿ ನೀಡಲು ಸಮಿತಿ ಶಿಫಾರಸ್ಸು ಮಾಡಿದೆ. ಪ್ರತಿಷ್ಠಿತ ಸಂಸ್ಥೆಗೆ ವಿದ್ಯಾರ್ಥಿನಿಯರ ಪ್ರವೇಶವನ್ನು ಕುಸಿಯದಂತೆ ತಡೆಯಲು ಸಮಿತಿ ಈ ಶಿಫಾರಸ್ಸು ಮಾಡಿದೆ. ಶೇ.20 ಮೀಸಲಾತಿ ನೀಡಬೇಕೆಂದು ಜಂಟಿ ಪ್ರವೇಶ ಮಂಡಳಿಯ ಉಪಸಮಿತಿ ನಿರ್ಧರಿಸಿದ್ದು, 2018ರ ವರ್ಷದಿಂದ ಮೀಸಲಾತಿ ಜಾರಿಗೆ ಬರುವುದೇ ಎಂದು ನಿರ್ಧರವಾಗಿಲ್ಲ. ವಿದ್ಯಾರ್ಥಿನಿಯರ ಸಂಖ್ಯೆಯಲ್ಲಿ ಹೆಚ್ಚಳ ತರಲು ಈ ಶಿಫಾರಸ್ಸಿಗೆ ಅನುಮೋದನೆ ಸಿಗುವ ಸಾಧ್ಯತೆಯಿದೆ ಎಂದು ಉಪ ಸಮಿತಿ ಅಧ್ಯಕ್ಷ ಪ್ರೊಫೆಸರ್ ತಿಮೋತಿ ಗೋನ್ಸಾಲ್ವಿಸ್ ಹೇಳಿದ್ದಾರೆ.

  ಎ.ಟಿ.ಎಂನಿಂದ ಹಣ ವಿಥ್‌ಡ್ರಾ ಮಾಡುವ ಮಿತಿಯನ್ನು ಆರ್.ಬಿ.ಐ ಏರಿಸಿದ್ದು, ಇನ್ನು ದಿನಕ್ಕೆ ಎ.ಟಿ.ಎಂನಿಂದ 10 ಸಾವಿರ ರೂ ವಿಥ್‌ಡ್ರಾ ಮಾಡಬಹುದು. ಆರಂಭದಲ್ಲಿ 2 ಸಾವಿರ ರೂ ವಿಥ್‌ಡ್ರಾ ಮಾಡಲು ಅವಕಾಶ ಇತ್ತು. ಬಳಿಕ ಜನವರಿ 1 ರಿಂದ 4,500 ರೂ ವಿಥ್‌ಡ್ರಾ ಮಾಡಲು ಅವಕಾಶ ಕಲ್ಪಿಸಲಾಗಿತ್ತು. ಇದೀಗ ವಿಥ್‌ಡ್ರಾ ಮಿತಿಯನ್ನು 10 ಸಾವಿರ ರೂಗಳಿಗೆ ಏರಿಕೆ ಮಾಡಲಾಗಿದೆ. ದಿನನಿತ್ಯ ಎ.ಟಿ.ಎಂನಿಂದ ವಿಥ್‌ಡ್ರಾ ಮಿತಿಯನ್ನು ಏರಿಸಲಾಗಿದ್ದರೂ ಉಳಿತಾಯ ಖಾತೆಯಿಂದ ವಾರಕ್ಕೆ 24 ಸಾವಿರ ರೂ ಮಾತ್ರ ವಿಥ್‌ಡ್ರಾ ಮಾಡಬಹುದಾಗಿದೆ. ಭಾರತೀಯ ರಿಸರ್ವ್ ಬ್ಯಾಂಕ್‌ನ ಈ ಆದೇಶ ಸೋಮವಾರ ಮಧ್ಯರಾತ್ರಿಯಿಂದ ಜಾರಿಯಾಗಿದೆ. ಚಾಲ್ತಿ ಖಾತೆಯಿಂದ ವಿಥ್‌ಡ್ರಾ ಮಿತಿಯನ್ನು ವಾರಕ್ಕೆ 50 ಸಾವಿರ ರೂ ಗಳಿಂದ 1 ಲಕ್ಷ ರೂ ತನಕ ಏರಿಕೆ ಮಾಡಲಾಗಿದೆ.

 ಡ್ರೈವಿಂಗ್ ಲೈಸೆನ್ಸ್ ಮಾಡಿಸುವುದು ಎಂದರೆ ಸುಲಭವಲ್ಲ. ಸಾವಿರಾರು ರೂಪಾಯಿ ಹಣವನ್ನು ಖರ್ಚು ಮಾಡಿ ತಿಂಗಳುಗಟ್ಟಲೆ ಕಾಯಬೇಕು ಎಂದು ಎಲ್ಲರ ಭಾವನೆ. ಆದರೆ, ಸರಿಯಾದ ಮಾರ್ಗದಲ್ಲಿ ಡಿಎಲ್ ಮಾಡಿಸುವುದು ಬಹಳ ಸುಲಭ ಮತ್ತು ಕಡಿಮೆ ಬೆಲೆಯ ಕೆಲಸ ಎನ್ನಬಹುದು. ಹಾಗಾಗಿ ಇನ್ನುಮುಂದೆ ಆನ್‌ಲೈನ್‌ನಲ್ಲಿಯೇ ಡಿಎಲ್‌ಗೆ ಅಪ್ಲಿಕೇಶನ್ ತುಂಬಿ ಕೇವಲ ೩೦ ರೂಪಾಯಿ ಖರ್ಚಿನಲ್ಲಿ ಅತೀ ಶೀಘ್ರದಲ್ಲೇ ಹೇಗೆ ಡಿಎಲ್ ಮಾಡಿಸಬಹುದೆಂಬ ಮಾಹಿತಿ sarathi.nic.in ವೆಬ್‌ಸೈಟ್‌ನಲ್ಲಿ ಲಭ್ಯ. ಈ ವೆಬ್‌ಸೈಟ್ ಮೂಲಕ ಆನ್‌ಲೈನ್ ಅಪ್ಲಿಕೇಶನ್ ತುಂಬಿ ನೀವು ಸುಲಭವಾಗಿ ಡಿಎಲ್ ಪಡೆಯಬಹುದಾಗಿದೆ. ಆ ಮೂಲಕ ದಲ್ಲಾಳಿಗಳಿಂದ ಮೋಸ ಹೋಗುವುದನ್ನು ತಪ್ಪಿಸಿಕೊಳ್ಳಿ.

  ಎಸ್.ಎಸ್.ಎಲ್.ಸಿ ವಿದ್ಯಾರ್ಥಿಗಳು ಈ ಬಾರಿ ಎಚ್ಚರಿಕೆಯಿಂದ ಪರೀಕ್ಷೆಗೆ ಹಾಜರಾಗಬೇಕಾಗಿದೆ. ಒಂದು ನಿಮಿಷ ತಡವಾದರೂ ಪರೀಕ್ಷಾ ಕೊಠಡಿಗೆ ವಿದ್ಯಾರ್ಥಿಗಳಿಗೆ ಪ್ರವೇಶಕ್ಕೆ ಅವಕಾಶ ಇಲ್ಲವೆಂದು ಎಸ್.ಎಸ್.ಎಲ್.ಸಿ ಪರೀಕ್ಷಾ ಮಂಡಳಿ ಸುತ್ತೋಲೆ ಹೊರಡಿಸಿದೆ. ಪ್ರಶ್ನೆಪತ್ರಿಕೆ ಲೀಕ್ ತಡೆಗಟ್ಟಲು ಹಾಗೂ ಪರೀಕ್ಷೆಯನ್ನು ಪಾರದರ್ಶಕವಾಗಿ ನಡೆಸುವ ನಿಟ್ಟಿನಲ್ಲಿ ಎಸ್.ಎಸ್.ಎಲ್.ಸಿ ಪರೀಕ್ಷಾ ಮಂಡಳಿ ಈ ಕಟ್ಟುನಿಟ್ಟಿನ ಕ್ರಮ ಕೈಗೊಂಡಿರುವುದಾಗಿ ವರದಿ ತಿಳಿಸಿದೆ. ಎಸ್.ಎಸ್.ಎಲ್.ಸಿ ಪರೀಕ್ಷೆಗೆ ಬೆಳಗ್ಗೆ 6.15ರಿಂದ 6.30ರೊಳಗೆ ಪರೀಕ್ಷಾ ಕೇಂದ್ರಕ್ಕೆ ವಿದ್ಯಾರ್ಥಿಗಳಿಗೆ ಹಾಜರಾಗುವುದು ಕಡ್ಡಾಯವಾಗಿದೆ. 6.30ರ ನಂತರ ತಡವಾಗಿ ಬರುವ ವಿದ್ಯಾರ್ಥಿಗಳಿಗೆ ಪ್ರವೇಶವಕಾಶವಿಲ್ಲ ಎಂದು ಎಲ್ಲ ಶಾಲೆಗಳಿಗೂ ಸುತ್ತೋಲೆ ಕಳುಹಿಸಿದೆ.

   ರಾಜ್ಯದ ಎಲ್ಲಾ ಖಾಸಗಿ ಆಸ್ಪತ್ರೆಗಳಲ್ಲಿ ಬಿ.ಪಿ.ಎಲ್ ಕಾರ್ಡ್ ರೋಗಿಗಳಿಗೆ ಚಿಕಿತ್ಸೆಗೆ ದಾಖಲಿಸಿಕೊಳ್ಳದಿರಲು ನಿರ್ಧರಿಸಲಾಗಿದೆ. ಸರ್ಕಾರಿ ವೈದ್ಯಕೀಯ ವಿಮಾ ಯೋಜನೆಗಳಾದ ವಾಜಪೇಯಿ ಆರೋಗ್ಯ ಶ್ರೀ ಮತ್ತು ಸುವರ್ಣ ಆರೋಗ್ಯ ಟ್ರಸ್ಟ್‌ಗಳಡಿಯಲ್ಲಿ ಖಾಸಗಿ ಆಸ್ಪತ್ರೆಗಳಲ್ಲಿ ಬಿ.ಪಿ.ಎಲ್ ಕಾರ್ಡ್ ಹೊಂದಿರುವ ರೋಗಿಗಳನ್ನು ಅಡ್ಮಿಟ್ ಮಾಡಿಕೊಳ್ಳದೇ ಇರಲು ನಿರ್ಧರಿಸಲಾಗಿದೆ ಎಂದು ಫೆಡರೇಷನ್ ಆಫ್ ಹೆಲ್ತ್ ಕೇರ್ ಅಸೋಸಿಯೇಷನ್ ತಿಳಿಸಿದೆ. ಹಾಗೆಯೇ ರಾಜ್ಯ ಸರ್ಕಾರಿ ನೌಕರರು ಎ.ಪಿ.ಎಲ್ ಕಾರ್ಡ್‌ನಲ್ಲಿ ಪಡೆಯಬಹುದಾಗಿದ್ದ ಚಿಕಿತ್ಸೆಗೂ ಕೂಡ ನಿರ್ಬಂಧ ಹೇರಲಾಗಿದೆ. ಸರ್ಕಾರ ಖಾಸಗಿ ಆಸ್ಪತ್ರೆಗಳಿಗೆ 34.25 ಕೋಟಿ ಹಣ ಬಿಡುಗಡೆ ಮಾಡಿದೆ. ಸರ್ಕಾರ ಇನ್ನೂ 86.71 ಕೋಟಿ ರೂ ಹಣ ಬಾಕಿ ಉಳಿಸಿಕೊಂಡಿದೆ. ಈ ಹಿನ್ನೆಲೆಯಲ್ಲಿ ಸರ್ಕಾರ ಬಾಕಿ ಹಣ ಪಾವತಿಸುವವರೆಗೂ ಬಿ.ಪಿ.ಎಲ್ ಕಾರ್ಡ್ ಹೊಂದಿರುವ ಹೊಸ ರೋಗಿಗಳನ್ನು ಆಸ್ಪತ್ರೆಗೆ ದಾಖಲಿಸಿಕೊಳ್ಳದೇ ಇರಲು ನಿರ್ಧರಿಸಲಾಗಿದೆ. ಈ ಸಂಬಂಧ ಆರೋಗ್ಯ ಸಚಿವರ ಜೊತೆ ಇಂದು ಚರ್ಚೆ ನಡೆಸಲಿದೆ.

 ಕೇಂದ್ರ ಸರ್ಕಾರ ಹೊಸ ರೂಪದಲ್ಲಿ ಪಾನ್‌ಕಾರ್ಡ್ ವಿತರಣೆಗೆ ಮುಂದಾಗಿದೆ. ಹೊಸ ವಿನ್ಯಾಸದ ಪಾನ್‌ಕಾರ್ಡ್‌ನಲ್ಲಿ ಹೆಚ್ಚಿನ ಭದ್ರತಾ ಗುಣಲಕ್ಷಣಗಳಿದ್ದು ಅಕ್ಷರಗಳನ್ನು ತಿದ್ದಲು ಅಥವಾ ನಕಲು ಮಾಡಲಾಗದಂತೆ ಅತ್ಯಾಧುನಿಕ ತಂತ್ರಜ್ಞಾನ ಬಳಸಿ ಸಿದ್ಧಪಡಿಸಲಾಗಿದೆ ಎಂದು ಆದಾಯ ತೆರಿಗೆ ಇಲಾಖೆ ಹೇಳಿದೆ. ಹೊಸ ಪಾನ್‌ಕಾರ್ಡ್‌ನಲ್ಲಿ ವಿವರವನ್ನು ಹಿಂದಿ ಮತ್ತು ಆಂಗ್ಲ ಭಾಷೆಯಲ್ಲಿ ಮುದ್ರಿಸಲಾಗಿದೆ. ಈ ಪಾನ್‌ಕಾರ್ಡ್‌ಗಳನ್ನು ಎನ್‌ಎಸ್‌ಡಿಎಲ್ ಹಾಗೂ ಯುಟಿಐಐಟಿಎಸ್‌ಎಲ್ (ಯುಟಿಐ ಇನ್‌ಫ್ರಾಸ್ಟ್ರಕ್ಚರ್ ಅಂಡ್ ಸರ್ವೀಸಸ್ ಲಿಮಿಟೆಡ್)ನಲ್ಲಿ ಮುದ್ರಿಸಲಾಗುತ್ತಿದ್ದು, ಜನವರಿ 1ರಿಂದಲೇ ಹೊಸ ಪಾನ್‌ಕಾರ್ಡ್ ವಿತರಣೆ ಆರಂಭವಾಗಿದೆ. ಈ ಪಾನ್‌ಕಾರ್ಡ್ ಹೊಸ ಅರ್ಜಿದಾರರಿಗೆ ವಿತರಿಸಲಾಗುತ್ತಿದ್ದು, ಈಗಾಗಲೇ ಪಾನ್‌ಕಾರ್ಡ್‌ಗಳನ್ನು ಹೊಂದಿರುವವರು ಕೂಡ ಹೊಸಕಾರ್ಡ್‌ಗಳಿಗೆ ಅರ್ಜಿ ಸಲ್ಲಿಸಬಹುದೆಂದು ಆದಾಯ ತೆರಿಗೆ ಇಲಾಖೆ ಹೇಳಿದೆ.

ujireಬೆಳ್ತಂಗಡಿ : ಉಜಿರೆಯಲ್ಲಿ ನಡೆಯುವ ಈ ಬಾರಿಯ ಸಾಹಿತ್ಯ ಸಮ್ಮೇಳನವನ್ನು ವಿಭಿನ್ನವಾಗಿ ರೂಪಿಸುವ ನಿಟ್ಟಿನಲ್ಲಿ ಸಾಕಷ್ಟು ವಿನೂತನ ಯೋಜನೆಗಳನ್ನು ಹಮ್ಮಿಕೊಳ್ಳಲಾಗಿದ್ದು, ಜ. ೨೮ರಂದು ಬೆಳಿಗ್ಗೆ 10 ರಿಂದ 1 ರವರೆಗೆ ಉಜಿರೆಯ ಶ್ರೀ.ಧ.ಮ ಕಾಲೇಜಿನ ಇಂದ್ರಪ್ರಸ್ಥ ಒಳ-ಕ್ರೀಡಾಂಗಣದಲ್ಲಿ ಮಕ್ಕಳ ಸಾಹಿತ್ಯ ಸಂಸ್ಕ್ರತಿ ಸಂಭ್ರಮ ಆಯೋಜಿಸಲಾಗಿದೆ. ಜಿಲ್ಲಾ ಮಟ್ಟದಲ್ಲಿ ಇದೇ ಮೊದಲ ಬಾರಿಗೆ ಈ ಪ್ರಯತ್ನ ನಡೆಯುತ್ತಿದ್ದು, ಪ್ರಾಥಮಿಕ ಶಿಕ್ಷಣ ಪಡೆಯುತ್ತಿರುವ ವಿದ್ಯಾರ್ಥಿಗಳಿಗೆ ಸಾಹಿತ್ಯಾಸಕ್ತಿ ಹೆಚ್ಚಿಸುವ ನಿಟ್ಟಿನಲ್ಲಿ ಕಾರ‍್ಯಕ್ರಮ ರೂಪಿಸಲಾಗಿದೆ.
ಧರ್ಮಸ್ಥಳ ಧರ್ಮಾಧಿಕಾರಿ ಡಾ.ಡಿ.ವೀರೇಂದ್ರ ಹೆಗ್ಗಡೆ ದಂಪತಿಗಳ ಪರಿಕಲ್ಪನೆಯಲ್ಲಿ ಮೂಡಿಬರುತ್ತಿರುವ ಈ ವಿನೂತನ ಕಾರ‍್ಯಕ್ರಮ ಮಕ್ಕಳಿಗೆ ಸಾಹಿತ್ಯ ಅಭಿರುಚಿಯನ್ನು ಹೆಚ್ಚಿಸುವ ನಿಟ್ಟಿನಲ್ಲಿ ಪ್ರಯೋಜನವಾಗಲಿದೆ. ಸಾಮಾನ್ಯವಾಗಿ ನಡೆಯುವ ಮಕ್ಕಳ ಸಾಹಿತ್ಯ ಸಮ್ಮೇಳನದ ಯಾವ ಛಾಯೆಯೂ ಇಲ್ಲದ, ಸುಮಾರು ೧೫೦೦ ಮಕ್ಕಳ ಸಮಾನ ಭಾಗವಹಿಸುವಿಕೆ ಇದರ ಮೂಲ ಉದ್ದೇಶ.
ಕನ್ನಡ ಸಾಹಿತ್ಯ ಪರಿಷತ್ತಿನ ಬೆಳ್ತಂಗಡಿ ತಾಲೂಕು ಘಟಕದ ಅಧ್ಯಕ್ಷ ಡಾ.ಬಿ.ಯಶೋವರ್ಮ ಅವರ ಮಾರ್ಗದರ್ಶದಲ್ಲಿ ನಡೆಯುತ್ತಿರುವ ಕಾರ‍್ಯಕ್ರಮದಲ್ಲಿ ವಿದ್ಯಾರ್ಥಿಗಳ ಸ್ವರಚಿತ ಕವನ/ಕಥೆ ವಾಚನ, ಭಾವಗೀತೆ/ ಮಕ್ಕಳ ಗೀತೆಗಳ ಹಾಡು ಮತ್ತು ಅಭಿನಯ ಗೀತೆ, ಸಾಹಿತ್ಯದ ಕುರಿತು ಅರಿವು ಮೂಡಿಸುವ ಮತ್ತು ಜ್ಞಾನಪೀಠ ಪ್ರಶಸ್ತಿ ಪುರಸ್ಕ್ರತರ ಕುರಿತು ರಸಪ್ರಶ್ನೆ ಕಾರ‍್ಯಕ್ರಮ, ತಜ್ಞರಿಂದ ಕಥೆ ಮತ್ತು ಕವನ ರಚಿಸುವ ಬಗೆಗೆ ಮಾಹಿತಿ ಕಾರ‍್ಯಾಗಾರಗಳು ನಡೆಯಲಿದೆ.
ಕಾರ‍್ಯಕ್ರಮದಲ್ಲಿ ವಿದ್ಯಾರ್ಥಿ ಸಮ್ಮೇಳನಾಧ್ಯಕ್ಷತೆ ಇರುವುದಿಲ್ಲ ಎಂಬುದರ ಜೊತೆಗೆ ಯಾವುದೇ ಸಾಹಿತ್ಯ ಸ್ಪರ್ಧೆಗಳೂ ಇಲ್ಲಿ ನಡೆಯುವುದಿಲ್ಲ. ಈಗಾಗಲೇ ಜಿಲ್ಲೆಯ ಮೂಲೆಮೂಲೆಗಳಿಂದ ಸ್ವರಚಿತ ಕಥೆ ಮತ್ತು ಕವನ ಆಹ್ವಾನಿಸಲಾಗಿದ್ದು ಇದರಲ್ಲಿ ಆಯ್ಕೆಯಾದ ಕವನ /ಕಥೆಗಳ ವಾಚನಕ್ಕೆ ಅವಕಾಶ ನೀಡಲಾಗಿದೆ.
– ಪವಿತ್ರ ಬಿದ್ಕಲ್‌ಕಟ್ಟೆ, ಭರತ್ ಭಾರದ್ವಾಜ್ ದ್ವಿತೀಯ ಪತ್ರಿಕೋದ್ಯಮ

ujire ಬೆಳ್ತಂಗಡಿ : ಜ್ಞಾನದ ಭಂಡಾರವಾಗಿರುವ ಪುಸ್ತಕಗಳು ಪರಸ್ಪರ ಹಂಚಿಕೆಯಾದಲ್ಲಿ ಅದರಲ್ಲಿರುವ ಅಮೂಲ್ಯ ಸಾಹಿತ್ಯ ಪ್ರಸಾರಗೊಂಡು ಅನೇಕರಿಗೆ ಪ್ರಯೋಜನವಾಗುತ್ತದೆ. ಈಗಾಗಲೇ ಕೆಲವಾರು ಮಂದಿ ಪುಸ್ತಕ ಪ್ರೇಮಿಗಳು ಸಂಗ್ರಹಿಸಿಕೊಂಡಿರುವ ಪುಸ್ತಕಗಳನ್ನು ಜನವರಿ 27, 28, 29ರಂದು ಉಜಿರೆ ಶ್ರೀ ಜನಾರ್ಧನ ದೇವಸ್ಥಾನದ ವಠಾರದಲ್ಲಿ ಜರುಗುವ 21ನೇ ದ.ಕ. ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಪ್ರದರ್ಶನ ಮತ್ತು ಕನಿಷ್ಠ ಬೆಲೆಗೆ ಮಾರಾಟ ಮಾಡುವ ಯೋಜನೆ ಹಾಕಿಕೊಳ್ಳಲಾಗಿರುತ್ತದೆ. ಕಲಿಕೆ ನಿರಂತರ, ಹೀಗಾಗಿ ಪುಸ್ತಕ ಪ್ರೇಮಿಗಳ ಮನೆಯಲ್ಲಿ ಸಂಗ್ರಹವಿರುವ ಪುಸ್ತಕಗಳನ್ನು ಸಾಹಿತ್ಯ ಸಮ್ಮೇಳನದ ವ್ಯವಸ್ಥಾಪಕರಿಗೆ ನೀಡಬಹುದು. ಹೀಗೆ ಸಂಗ್ರಹವಾಗುವ ಪುಸ್ತಕಗಳನ್ನು ರಿಯಾಯಿತಿ ದರದಲ್ಲಿ ಮಾರಾಟ ಮಾಡುವ ಮೂಲಕ ಜ್ಞಾನದ ಹಸಿವನ್ನು ನೀಗಿಸುವ ವಿನೂತನ ಪ್ರಯತ್ನ ಮಾಡಲಾಗುತ್ತಿದೆ.  ಇದರೊಂದಿಗೆ ಪುಸ್ತಕ ಮಳಿಗೆಗಳಿಗೆ ಮತ್ತು ಇತರ ಮಾರಾಟ ಮಳಿಗೆಗಳಿಗೆ ಅವಕಾಶವಿದೆ. ಆದುದರಿಂದ ಸಾಹಿತ್ಯಾಸಕ್ತರಲ್ಲಿ ಇರುವ ಹಳೆಯ ಪುಸ್ತಕಗಳ ಪ್ರದರ್ಶನ ಮತ್ತು ಮಾರಾಟಕ್ಕೆ ಬಯಸಿದ್ದಲ್ಲಿ ಪ್ರದರ್ಶನ ಸಮಿತಿಯ ಸಂಯೋಜಕರಾಗಿರುವ ಕೃಷ್ಣ ಶೆಟ್ಟಿ (9449488976) ಇವರನ್ನು ಸಂಪರ್ಕಿಸುವಂತೆ ಕೋರಲಾಗಿದೆ.

ujire ಉಜಿರೆ : ತುಳುನಾಡಿನ ಸಾಹಿತ್ಯ ಸಂಸ್ಕೃತಿಯ ಹಿಂದಿನ ಪರಂಪರೆಯನ್ನು ಪ್ರತಿಬಿಂಬಿಸುವ ಚಿಂತನ ಮಂಥನವನ್ನು ನಡೆಸುವುದೇ 21ನೇ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನದ ಉದ್ದೇಶವಾಗಿದೆ ಎಂದು ದ.ಕ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್‌ನ ಅಧ್ಯಕ್ಷರಾದ ಎಸ್. ಪ್ರದೀಪ್ ಕುಮಾರ್ ಕಲ್ಕೂರ ಹೇಳಿದರು.
ಉಜಿರೆಯ ಶ್ರೀ ಜನಾರ್ದನ ಸ್ವಾಮಿ ದೇವಸ್ಥಾನದ ವಠಾರದಲ್ಲಿ ನಡೆದ 21ನೇ ದಕ್ಷಿಣ ಕನ್ನಡ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನದ ಸಮಾಲೋಚನಾ ಸಭೆಯಲ್ಲಿ ಭಾಗವಹಿಸಿ ಮಾತನಾಡಿದರು.
ಧರ್ಮಸ್ಥಳದ ಮಂಜಯ್ಯ ಹೆಗ್ಗಡೆಯವರು ಈ ಹಿಂದೆ ನಡೆಸಿದ್ದ ತಾಲೂಕು ಸಾಹಿತ್ಯ ಸಮ್ಮೇಳನ ಪರಂಪರೆಯಿಂದ ಇಂದು ಉಜಿರೆಯಲ್ಲಿ ನಡೆಯಲಿರುವ ಸಾಹಿತ್ಯ ಸಮ್ಮೇಳನಕ್ಕೆ ಹೊಸ ಆಯಾಮ ಸಿಕ್ಕಂತಾಗಿದೆ, ಜಿಲ್ಲಾ ಸಾಹಿತ್ಯ ಸಮ್ಮೇಳನಕ್ಕೆ ಕೃಷಿಕರ, ವ್ಯಾಪಾರಸ್ಥರ, ಚಿಂತಕರ ಮತ್ತು ಸ್ಥಳೀಯ ನಾಗರಿಕರ ತನು ಮನ, ಧನದ ಸಹಕಾರದಿಂದಾಗಿ ಉಜಿರೆ ಮನೆಯಂಗಳದಲ್ಲಿ ಸಾಹಿತ್ಯ ಸಮ್ಮೇಳನ ನಡೆಯುವಂತಾಗಿದೆ ಎಂದು ಅಭಿಪ್ರಾಯಪಟ್ಟರು.
ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನಕ್ಕಾಗಿ ಅಭೂತಪೂರ್ವವಾದ ಬೆಂಬಲ ದೊರೆತ್ತಿದ್ದು, ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಮಟ್ಟಕ್ಕೆ ಅಚ್ಚುಕಟ್ಟಾಗಿ ವ್ಯವಸ್ಥೆ ಮಾಡಲಾಗುತ್ತಿದೆ. ಧರ್ಮಸ್ಥಳ ಧರ್ಮಾಧಿಕಾರಿ ಡಾ. ಡಿ. ವೀರೇಂದ್ರ ಹೆಗ್ಗಡೆಯವರ ಮಾರ್ಗದರ್ಶನ, ಜನಾರ್ದನ ಸ್ವಾಮಿ ದೇವಸ್ಥಾನದ ಮೊಕ್ತೇಸರ ಹಾಗೂ ಸಾಹಿತ್ಯ ಸಮ್ಮೇಳನದ ಸ್ವಾಗತ ಸಮಿತಿಯ ಅಧ್ಯಕ್ಷರಾದ ವಿಜಯರಾಘವ ಪಡೆಟ್ನಾಯರವರ ಮಾರ್ಗದರ್ಶನದ ಜೊತೆಗೆ, ತಾಲೂಕು ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷರಾದ ಡಾ. ಬಿ. ಯಶೋವರ್ಮ ಅವರ ಚಿಂತನ ಶೀಲತೆ ಸಮ್ಮೇಳನಕ್ಕೆ ಬಲ ಬಂದತಾಗಿದೆ ಎಂದು ಆಶಯ ವ್ಯಕ್ತಪಡಿಸಿದರು.
ಸ್ಥಳೀಯರು ಜನಪದ ವಿದ್ವಾಂಸರು, ಕೃಷಿಕರರಾದ ಡಾ. ಕೆ. ಚಿನ್ನಪ್ಪ ಗೌಡ ಅಧ್ಯಕ್ಷತೆಯಲ್ಲಿ ನಡೆಯುವ ಸಾಹಿತ್ಯ ಸಮ್ಮೇಳನದಲ್ಲಿ ನೆಲ, ಜಲ, ಭಾಷೆ, ಸಂಸ್ಕೃತಿ ಬಗ್ಗೆ ಬೆಳಕು ಚೆಲ್ಲುವಂತಹ ಚಿಂತನ ಗೋಷ್ಠಿಗಳನ್ನು ಏರ್ಪಡಿಸಲಾಗಿದೆ. ಅದೇ ರೀತಿ ಹೆಗ್ಗಡೆಯವರ ಆಶಯದಂತೆ ಮಕ್ಕಳ ಸಾಹಿತ್ಯ ಸಮ್ಮೇಳನವನ್ನು ವಿಶೇಷವಾಗಿ ಆಯೋಜಿಸಲಾಗಿದೆ. ಜೊತೆಗೆ ಸದಭಿರುಚಿಯ ವಸ್ತು ಪ್ರರ್ದಶನ ಮತ್ತು ವೈವಿಧ್ಯಮಯ ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗಲಿವೆ. ಅದಕ್ಕಾಗಿ ಜಿಲ್ಲೆಯ ಸಾಹಿತ್ಯಾಸಕ್ತರು, ಕನ್ನಡ ಅಭಿಮಾನಿಗಳು, ಸಂಘ-ಸಂಸ್ಥೆಗಳು, ನಾಗರಿಕರು ಭಾಗವಹಿಸಿ ಯಶಸ್ವಿಗೊಳಿಸಬೇಕೆಂದು ತಿಳಿಸಿದರು.
ಸಭೆಯಲ್ಲಿ ಸಾಹಿತ್ಯ ಸಮ್ಮೇಳನದ ಸ್ವಾಗತ ಸಮಿತಿಯ ಅಧ್ಯಕ್ಷರಾದ ವಿಜಯರಾಘವ ಪಡ್ವೆಟ್ನಾಯ, ತಾಲೂಕ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷರಾದ ಡಾ. ಬಿ ಯಶೋವರ್ಮ ಉಪಸ್ಥಿತರಿದ್ದರು. ಕಾರ್ಯಕ್ರಮವನ್ನು ಸಂಯೋಜಕರಾದ ಡಾ. ಎಂ. ಪಿ. ಶ್ರೀನಾಥ್ ನಿರ್ವಹಿಸಿದರು.

ujireಉಜಿರೆ : ಉಜಿರೆಯಲ್ಲಿ ಜನವರಿ 27 ರಿಂದ 28ರ ವರೆಗೆ ನಡೆಯಲಿರುವ 21ನೇ ದ.ಕ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನದ ಅಂಗವಾಗಿ ಸಿದ್ದತೆಗಳು ಭರದಿಂದ ಸಾಗಿದ್ದು ದಿನಗಣನೆ ಆರಂಭವಾಗಿದೆ.
ವಾಗ್ಮಿ, ಚಿಂತಕ, ಸಂಶೋದಕ ಹಾಗೂ ಜನಪದ ವಿದ್ವಾಂಸ ಡಾ. ಚಿನ್ನಪ್ಪಗೌಡ ಅವರು ಸಮ್ಮೇಳನಾಧ್ಯಕ್ಷರಾಗಿ ಆಯ್ಕೆಯಾಗಿದ್ದು, ಸಮ್ಮೇಳನದ ಲಾಂಚನವನ್ನು ಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿ ಡಾ ಡಿ. ವೀರೇಂದ್ರ ಹೆಗ್ಗಡೆಯವರು ಬಿಡುಗಡೆಗೊಳಿಸಿ ಶುಭ ಕೋರಿದ್ದಾರೆ.
ಸಮ್ಮೇಳನ ಅರ್ಥಪೂರ್ಣ ಹಾಗೂ ಸ್ಮರಣೀಯವಾಗಬೇಕೆಂಬ ಸಂಕಲ್ಪದೊಂದಿಗೆ ಉಜಿರೆಯಲ್ಲಿ ಸಿದ್ದತೆಗಳು ನಡೆದಿವೆ. ಸುಮಾರು 23 ಸಮಿತಿಗಳು ಈ ದೀಸೆಯಲ್ಲಿ ಕಾರ್ಯೊನ್ಮುಖವಾಗಿವೆ. ಸಮ್ಮೇಳನದ ದಿನದಂದು ಸಮ್ಮೇಳನಾಧ್ಯಕ್ಷರ ಮೆರವಣಿಗೆ ಸಿದ್ದತೆ ನಡೆದಿದ್ದು, ಸ್ಮರಣ ಸಂಚಿಕೆ, ಪುಸ್ತಕ ಮಳಿಗೆ, ಸಾಂಸ್ಕೃತಿಕ ಉತ್ಸವ, ವೈಚಾರಿಕ ಗೋಷ್ಠಿಗಳು ಸಮ್ಮೇಳನದ ಪ್ರಮುಖ ಅಂಶಗಳಾಗಲಿವೆ. ಸಾಹಿತ್ಯಾಭಿಮಾನಿಗಳಿಗೆ ಊಟೋಪಚಾರದ ವ್ಯವಸ್ಥೆ ಕೂಡಾ ಕಲ್ಪಿತವಾಗಲಿದೆ. ಬೆಳ್ತಂಗಡಿ ತಾಲೂಕಿನ ಸಾಹಿತ್ಯಾಭಿಮಾನಿಗಳು, ನಾಗರಿಕರು ಸಮ್ಮೇಳನದ ಯಶಸ್ಸಿಗೆ ಅತ್ಯುತ್ಸಾಹದ ಸಹಕಾರ ವ್ಯಕ್ತಪಡಿಸಿದ್ದು ಸ್ಥಳೀಯ ಶಾಸಕ ವಸಂತ ಬಂಗೇರ ಅವರ ನೇತೃತ್ವದಲ್ಲಿ ನಡೆದ ಸರಕಾರಿ ಅಧಿಕಾರಿಗಳ ಹಾಗೂ ತಾಲೂಕಿನ ಸಂಘ ಸಂಸ್ಥೆಗಳ ಪ್ರತಿನಿಧಿಗಳ ಸಭೆಯಲ್ಲೂ ಸಮ್ಮೇಳನಕ್ಕೆ ಸಂಪೂರ್ಣ ಸಹಕಾರ ವ್ಯಕ್ತವಾಗಿದೆ. ತಾಲೂಕಿನ ಶಿಕ್ಷಕ ಸಂಘಟನೆಯವರೂ ಕೂಡಾ ಸಮ್ಮೇಳನಕ್ಕೆ ಪೂರ್ಣ ಮನಸ್ಸಿನ ಬೆಂಬಲ ವ್ಯಕ್ತಪಡಿಸಿದ್ದಾರೆ.
ಪ್ರಾಥಮಿಕ ಹಾಗೂ ಪ್ರೌಢ ಶಾಲಾ ಹಂತದ ಮಕ್ಕಳ ಪಾಲ್ಗೂಳ್ಳುವಿಕೆಯ ಪ್ರತ್ಯೇಕ ಮಕ್ಕಳ ಸಮ್ಮೇಳನ ಈ ಸಾರಿಯ ಸಾಹಿತ್ಯ ಸಮ್ಮೇಳನದ ವೈಶಿಷ್ಟ್ಯಗಳಲ್ಲೊಂದಾಗಿದ್ದು ಇದು ಜ.೨೮ ರಂದು ಬೆಳಗ್ಗೆ ಉಜಿರೆ ಕಾಲೇಜಿನ ಇಂದ್ರಪ್ರಸ್ಥದಲ್ಲಿ ನಡೆಯಲಿದೆ. ಉಜಿರೆ ಶ್ರೀ ಜನಾರ್ಧನ ಸ್ವಾಮಿ ದೇವಾಲಯದ ಆವರಣದಲ್ಲಿ ವಿಶಾಲ ಪ್ರದೇಶದಲ್ಲಿ ಸಮ್ಮೇಳನ ವೇದಿಕೆ, ಊಟದ ವ್ಯವಸ್ಥೆ, ಮಳಿಗೆಗಳ ಬಗ್ಗೆ ನೀಲನಕ್ಷೆ ರೂಪುಗೊಂಡಿದ್ದು ಜಿಲ್ಲೆಯಾದ್ಯಂತ ಬಹುಸಂಖ್ಯೆಯಲ್ಲಿ ಸಾಹಿತ್ಯಾಸಕ್ತರು ಪಾಲ್ಗೊಂಡು ಸಮ್ಮೇಳನವನ್ನು ಯಶಸ್ವಿಗೊಳಿಸಬೇಕೆಂದು ಸಂಘಟಕರು ಪ್ರಕಟಣೆಯಲ್ಲಿ ವಿನಂತಿಸಿದ್ದಾರೆ.

harish karinja 1 copyಬೆಳ್ತಂಗಡಿ : ಕುಲಾಲ ಯುವ ವೇದಿಕೆ ರಾಜ್ಯ ಸಂಘಟನಾ ಕಾರ್ಯದರ್ಶಿಯಾಗಿ ಇಂಜಿನಿಯರ್ ಹರೀಶ್ ಕಾರಿಂಜ ನೇಮಕಗೊಂಡಿದ್ದಾರೆ.
2011ರಿಂದ 2017ರವರೆಗೆ ಕುಲಾಲ ಯುವ ವೇದಿಕೆಯ ಜಿಲ್ಲೆ ಹಾಗೂ ವಿಭಾಗದ ಜವಾಬ್ದಾರಿಯ ಜೊತೆ ಬೆಳ್ತಂಗಡಿ ತಾಲೂಕು ಯುವ ವೇದಿಕೆಯ ಅಧ್ಯಕ್ಷರಾಗಿ ಯುವ ಘಟಕವನ್ನು ರಾಜ್ಯದಲ್ಲೇ ಮಾದರಿ ಘಟಕವಾಗಿ ಕಟ್ಟಿ ಬೆಳೆಸಿದ್ದಾರೆ. ಇವರ ಸಾಧನೆಯನ್ನು ಗುರುತಿಸಿ ಈಗ ರಾಜ್ಯ ಯುವ ವೇದಿಕೆಯ ಸಂಘಟನಾ ಕಾರ್ಯದರ್ಶಿಯಾಗಿ ನೇಮಕ ಮಾಡಲಾಗಿದೆ.

nataka spardhe udghatane copyಪುಂಜಾಲಕಟ್ಟೆ : ನೀತಿಯುಕ್ತ ಉತ್ತಮ ಸಂದೇಶ ಭರಿತ ನಾಟಕಗಳಿಂದ ಸಮಾಜದಲ್ಲಿ ಪರಿವರ್ತನೆ ಸುಧಾರಣೆಯನ್ನು ಕಾಣಲು ಸಾಧ್ಯವಿದೆ. ಅಂತಹ ನಾಟಕ ಕಲೆಯನ್ನು ಪ್ರೋತ್ಸಾಹಿಸಿ ಬೆಳೆಸುವ ಶ್ರೀ ಮುರುಘೇಂದ್ರ ಮಿತ್ರ ಮಂಡಳಿ ಅಭಿನಂದನಾರ್ಹರು ಎಂದು ರಾಜ್ಯ ಅರಣ್ಯ ಸಚಿವ ಬಿ.ರಮಾನಾಥ ರೈ ಹೇಳಿದರು.
ಅವರು ಜ.14 ರಂದು ರಾತ್ರಿ ಪುಂಜಾಲಕಟ್ಟೆ ಬಂಗ್ಲೆ ಮೈದಾನದಲ್ಲಿ ಶ್ರೀ ಮುರುಘೇಂದ್ರ ಮಿತ್ರ ಮಂಡಳಿ ಮತ್ತು ಶ್ರೀ ಮುರುಘೇಂದ್ರ ವನಿತಾ ಸಮಾಜ ಇದರ ಆಶ್ರಯದಲ್ಲಿ, ಕರ್ನಾಟಕ ರಾಜ್ಯ ತುಳು ಸಾಹಿತ್ಯ ಅಕಾಡೆಮಿ ಇವರ ಸಹಕಾರದೊಂದಿಗೆ ದ.ಕ., ಉಡುಪಿ, ಕಾಸರಗೋಡು ಜಿಲ್ಲಾ ಮಟ್ಟದ ಒಂದು ವಾರದ ತುಳು ನಾಟಕ ಸ್ಪರ್ಧೆಯ ಉದ್ಘಾಟನಾ ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಮಂಗಳೂರು ವಿಶ್ವವಿದ್ಯಾನಿಲಯ ಬ್ರಹ್ಮಶ್ರೀ ನಾರಾಯಣಗುರು ಅಧ್ಯಯನ ಪೀಠದ ಅಧ್ಯಕ್ಷ ಮುದ್ದು ಮೂಡುಬೆಳ್ಳೆ ನಾಟಕ ಸ್ಪರ್ಧೆಯನ್ನು ಉದ್ಘಾಟಿಸಿ ಭೂತಾರಾಧನೆ, ಯಕ್ಷಗಾನದಂತೆ ರಂಗಭೂಮಿಯು ಶಕ್ತಿಶಾಲಿ ಮಾಧ್ಯಮವಾಗಿದೆ ಎಂದರು. ಮಡಂತ್ಯಾರು ಸೇಕ್ರೆಡ್ ಹಾರ್ಟ್ ಚರ್ಚ್‌ನ ಧರ್ಮಗುರು ಫಾ| ಲಾರೆನ್ಸ್ ಮಸ್ಕರ‍್ಹೇನಸ್ ಮಾತನಾಡಿ ಸ್ಪರ್ಧಾತ್ಮಕ ಜಗತ್ತಿನಲ್ಲಿ ಸಮಯದ ಅಭಾವವಿದ್ದರೂ ಕುಟುಂಬಕ್ಕೆ ಮಾತ್ರ ಸೀಮಿತವಾಗದೇ ಕಲೆಗೆ ಪ್ರೋತ್ಸಾಹ ಕೊಡುವ ಮೂಲಕ ಸುಂದರ ಸಮಾಜದ ನಿರ್ಮಾಣಕ್ಕೆ ಸಹಕಾರಿಯಾಗಬೇಕು ಎಂದು ಹೇಳಿದರು. ಜಿ.ಪಂ.ಸದಸ್ಯರಾದ ಬಿ.ಪದ್ಮಶೇಖರ ಜೈನ್, ಎಂ.ತುಂಗಪ್ಪ ಬಂಗೇರ, ಚಂದ್ರಪ್ರಕಾಶ್ ಶೆಟ್ಟಿ, ತಾಲೂಕು ಅಕ್ರಮ ಸಕ್ರಮ ಸಮಿತಿ ಅಧ್ಯಕ್ಷ ಕೆ.ಮಾಯಿಲಪ್ಪ ಸಾಲ್ಯಾನ್, ಪಿಲಾತಬೆಟ್ಟು ಗ್ರಾ.ಪಂ.ಅಧ್ಯಕ್ಷ ಚಂದ್ರಶೇಖರ ಶೆಟ್ಟಿ, ಪ್ರಗತಿಪರ ಕೃಷಿಕ ಉದಯ್ ಕುಮಾರ್ ಕಟ್ಟೆಮನೆ, ಬಂಟ್ವಾಳ ಕಾರ್ಯನಿರತ ಪರ್ತಕರ್ತ ಸಂಘದ ಅಧ್ಯಕ್ಷ ಮೌನೇಶ್ ವಿಶ್ವಕರ್ಮ, ದ.ಕ., ಉಡುಪಿ ಜಿಲ್ಲೆ ಹಾಪ್‌ಕಾಮ್ಸ್ ಅಧ್ಯಕ್ಷ ಲಕ್ಷ್ಮೀ ನಾರಾಯಣ ಉಡುಪ, ಉದ್ಯಮಿ ಹರೀಂದ್ರ ಪೈ ಶುಭ ಹಾರೈಸಿದರು. ಸಂಘದ ಗೌರವಾಧ್ಯಕ್ಷ ಸಂತೋಷ್ ಮೂರ್ಜೆ, ಅಧ್ಯಕ್ಷ ಮೋಹನ ಸಾಲ್ಯಾನ್, ವನಿತಾ ಸಮಾಜದ ಗೌರವಾಧ್ಯಕ್ಷೆ ಶಶಿಕಲಾ ಗೋಪಾಲ್, ಅಧ್ಯಕ್ಷೆ ಅಮೃತಾ ಎಸ್., ಕಾರ್ಯದರ್ಶಿ ವಿನಿತ್‌ಕುಮಾರ್ ಉಪಸ್ಥಿತರಿದ್ದರು. ಸಂಘದ ಸದಸ್ಯ ರಾಜೇಂದ್ರ ಕೆ.ವಿ. ಸ್ವಾಗತಿಸಿ ಪ್ರಸ್ತಾವಿಸಿದರು. ಸದಸ್ಯ ರತ್ನದೇವ್ ಪುಂಜಾಲಕಟ್ಟೆ ಆಶಯ ಭಾಷಣ ಮಾಡಿದರು.ಶಿಕ್ಷಕ ಉದಯ ಕುಮಾರ್ ಶೆಟ್ಟಿ ವಂದಿಸಿದರು. ಸಂತೋಷ್ ಸಿದ್ದಕಟ್ಟೆ ಕಾರ್ಯಕ್ರಮ ನಿರೂಪಿಸಿದರು.

maji sanikara sangha copy  ಶಾಸಕರಿಗೆ ವಿಶೇಷ ರೀತಿಯಲ್ಲಿ ಅಭಿನಂದನೆ.

ಮಾಜಿ ಸೈನಿಕರ ಸಂಘ ಮತ್ತು ರೋಟರಿ ಕ್ಲಬ್ ಜಂಟಿ ಕಾರ್ಯಕ್ರಮ.
ಕೇಕ್ ಕತ್ತರಿಸಿ ಶಾಸಕರ 71ನೇ ಹುಟ್ಟುಹಬ್ಬ ಆಚರಣೆ.

ಬೆಳ್ತಂಗಡಿ : ಸೈನಿಕರ ಪ್ರಾಮಾಣಿಕ ಸೇವೆಯಿಂದಾಗಿ ಈ ದೇಶ ಶತ್ರುಗಳ ಆಕ್ರಮಣದಿಂದ ಸುರಕ್ಷಿತವಾಗಿದ್ದು ಆದ್ದರಿಂದಾಗಿ ದೇಶವಾಸಿಗಳಾದ ನಾವೂ ಕೂಡ ನಿಶ್ಚಿಂತೆಯಿಂದ ಬಾಳುವಂತಾಗಿದೆ. ನಿಜವಾದ ಅರ್ಥದಲ್ಲಿ ನಮ್ಮ ದೇಶದ ಸೈನಿಕರು ಸರ್ವ ಅಭಿನಂದನಾಪಾತ್ರರು ಎಂದು ಶಾಸಕ ವಸಂತ ಬಂಗೇರ ಹೇಳಿದರು.
ಮಾಜಿ ಸೈನಿಕರ ಸಂಘ ಮತ್ತು ರೋಟರಿ ಕ್ಲಬ್ ಜಂಟಿಯಾಗಿ ಜ.15ರಂದು ಇಲ್ಲಿನ ರೋಟರಿ ಭವನದಲ್ಲಿ ಹಮ್ಮಿಕೊಂಡಿದ್ದ ಸೈನಿಕರ ದಿನಾಚರಣೆಯಲ್ಲಿ ಅವರು ಮಾತನಾಡಿದರು.
ಹಣ್ಣುಹಂಪಲು ವಿತರಣೆ, ಶಾಸಕರಿಗೆ ಸನ್ಮಾನ, ಹುಟ್ಟುಹಬ್ಬ ಆಚರಣೆ:
ಇದಕ್ಕೂ ಮೊದಲು ಬೆಳ್ತಂಗಡಿ ಸರಕಾರಿ ಆಸ್ಪತ್ರೆಯಲ್ಲಿ ರೋಗಿಗಳಿಗೆ ಹಣ್ಣುಹಂಪಲು ವಿತರಿಸಲಾಯಿತು. ಬಳಿಕ ರೋಟರಿ ಭವನದಲ್ಲಿ ನಡೆದ ಕಾರ್ಯಕ್ರಮದಲ್ಲಿ ೭೧ನೇ ವಸಂತಕ್ಕೆ ಕಾಲಿಟ್ಟ ಶಾಸಕ ವಸಂತ ಬಂಗೇರ ಅವರ ಹುಟ್ಟುಹಬ್ಬವನ್ನು ಕೇಕ್ ಕತ್ತರಿಸುವ ಮೂಲಕ ಆಚರಿಸಲಾಯಿತು. ಕರ್ನಾಟಕ ರಾಜ್ಯ ಸಣ್ಣ ಕೈಗಾರಿಕಾ ಅಭಿವೃದ್ಧಿ ನಿಗಮದ ಅಧ್ಯಕ್ಷರಾಗಿ ಸರಕಾರದಿಂದ ನೇಮಕಗೊಂಡ ಶಾಸಕರನ್ನು ಮೈಸೂರು ಪೇಟ ತೊಡಿಸಿ ವಿಶೇಷವಾಗಿ ಸನ್ಮಾನಿಸಲಾಯಿತು.
ಅಧ್ಯಕ್ಷತೆಯನ್ನು ಮಾಜಿ ಸೈನಿಕರ ಸಂಘದ ಅಧ್ಯಕ್ಷ ಕಾಂಚೋಡು ಗೋಪಾಲಕೃಷ್ಣ ಭಟ್ ವಹಿಸಿದ್ದು ಸ್ವಾಗತಿಸಿದರು. ಮುಖ್ಯ ಅತಿಥಿಗಳಾಗಿದ್ದ ಪಟ್ಟಣ ಪಂಚಾಯತ್ ಅಧ್ಯಕ್ಷ ಮುಗುಳಿ ನಾರಾಯಣ ರಾವ್ ಶುಭ ಕೋರಿದರು. ಲಯನ್ಸ್ ಕ್ಲಬ್ ಅಧ್ಯಕ್ಷೆ ಸುಶೀಲಾ ಎಸ್ ಹೆಗ್ಡೆ, ಪತ್ರಕರ್ತ ಅಶ್ರಫ್ ಆಲಿಕುಂಞಿ ಮುಂಡಾಜೆ, ರೋಟರಿ ಕ್ಲಬ್ ಪರವಾಗಿ ಶ್ರೀಧರ ಕೆ.ವಿ. ಉಜಿರೆ, ಎಸ್‌ಡಿಎಂ ಕಾಲೇಜು ಉಜಿರೆ ರಾಮ್‌ರಮೇಶ್, ಚಾರ್ಟರ್ಡ್ ಎಕೌಂಟೆಂಟ್ ಗಾಯಾತ್ರಿ ರಾವ್ ಕಾರ್ಯಕ್ರಮದ ಪರವಾಗಿ ಮಾತನಾಡಿದರು. ವೇದಿಕೆಯಲ್ಲಿ ರೋಟರಿ ಕ್ಲಬ್ ಅಧ್ಯಕ್ಷ ಡಿ.ಎಂ. ಗೌಡ ಉಪಸ್ಥಿತರಿದ್ದರು. ಸಂಘದ ಪದಾಧಿಕಾರಿಗಳು ಕಾರ್ಯಕ್ರಮಕ್ಕೆ ಸಹಕಾರ ನೀಡಿದರು.
ಮಾಜಿ ಅಧ್ಯಕ್ಷ ಸುನಿಲ್ ಶೆಣೈ ಕಾರ್ಯಕ್ರಮ ನಿರೂಪಿಸಿದರು.
ನಮ್ಮ ನೆರೆಯ ಜಿಲ್ಲೆಯವರಾದ ಕೊಡಗಿನ ಜನರಲ್ ಕಾರ್ಯಪ್ಪ ಅವರು ಭಾರತೀಯ ಸೇನೆಯಲ್ಲಿ ಅತ್ಯುನ್ನತ ಸ್ಥಾನ ಅಲಂಕರಿಸಿದ ಜ.15ನ್ನು ಸೈನಿಕರ ದಿನಾಚರಣೆಯಾಗಿ ಆಚರಿಸಲಾಗುತ್ತಿದೆ ಎಂದು ಸುನಿಲ್ ಶೆಣೈ ವಿವರಣೆ ನೀಡಿದರು.

ಮಚ್ಚಿನ ದೇವರಗುಂಡಿಯಲ್ಲಿ 25ನೇ ವರ್ಷದ ಶ್ರೀ ಸತ್ಯನಾರಾಯಣ ಪೂಜೆmachina majigalige sanmana copyಸಂಘದ ಮಾಜಿ ಅಧ್ಯಕ್ಷರುಗಳಿಗೆ ಸನ್ಮಾನ

ಮಚ್ಚಿನ : ಇಲ್ಲಿನ ಒಳಪ್ರದೇಶವಾದ ದೇವರಗುಂಡಿ ಎಂಬಲ್ಲಿನ ಸಾರ್ವಜನಿಕ ಶ್ರೀ ದೇವರ ಕಟ್ಟೆಯ ಬಳಿ 25ನೇ ವರ್ಷದ ಸಾಮೂಹಿಕ ಶ್ರೀ ಸತ್ಯನಾರಾಯಣ ಪೂಜೆ ಮತ್ತು ಪೂಜೆ ಪ್ರಾರಂಭಿಸಿದ ಪ್ರಮುಖ ನಾಲ್ವರನ್ನು ಗುರುತಿಸುವ ಕಾರ್ಯಕ್ರಮ ಜ.೧೪ ರಂದು ನಡೆಯಿತು.
ಇದರ ಅಂಗವಾಗಿ ನಡೆದ ಧಾರ್ಮಿಕ ಸಭಾಕಾರ್ಯಕ್ರಮದ ಅಧ್ಯಕ್ಷತೆ ವಹಿಸಿಕೊಂಡಿದ್ದ ಪ್ರಸ್ತುತ ವರ್ಷದ ಸಾಮೂಹಿಕ ಶ್ರೀ ಸತ್ಯನಾರಾಯಣ ಪೂಜಾ ಸಮಿತಿ ಅಧ್ಯಕ್ಷ ಕೆ. ಗುರುಪ್ರಸಾದ್ ಸ್ವಾಗತಿಸಿ ಪ್ರಾಸ್ತಾವಿಕವಾಗಿ ಮಾತನಾಡಿದ್ದಲ್ಲದೆ, ಕೊನೆಯಲ್ಲಿ ಅಧ್ಯಕ್ಷೀಯ ಮಾತುಗಳನ್ನಾಡಿದರು.
ದಿಕ್ಸೂಚಿ ಭಾಷಣವನ್ನು ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನ ಸಮಿತಿ ಪ್ರ. ಕಾರ್ಯದರ್ಶಿಯೂ ಆಗಿರುವ ಕೆವಿಜಿ ದಂತ ಮಹಾವಿದ್ಯಾಲಯದ ದಂತ ವಿಭಾಗದ ಮುಖ್ಯಸ್ಥರೂ ಹಾಗು ಪ್ರೊಫೆಸರ್ ಡಾ| ಎಂ.ಎಂ. ದಯಾಕರ್ ನೆರವೇರಿಸಿದರು.
ಅತಿಥಿಗಳಾಗಿ ಹಾಲು ಒಕ್ಕೂಟದ ನಿರ್ದೇಶಕ ಪದ್ಮನಾಭ ಶೆಟ್ಟಿ ಅರ್ಕಜೆ, ತಾ.ಪಂ. ಮಡಂತ್ಯಾರು ಕ್ಷೇತ್ರದ ಸದಸ್ಯೆ ವಸಂತಿ, ಮಚ್ಚಿನ ಗ್ರಾ.ಪಂ. ಉಪಾಧ್ಯಕ್ಷ ಚಂದ್ರಶೇಖರ ಬಿ.ಎಸ್, ಮಡಂತ್ಯಾರಿನ ಹಿರಿಯ ವೈದ್ಯ ಡಾ| ಕೆ.ಎಮ್. ಶೆಟ್ಟಿ ಶುಭ ಕೋರಿದರು. ವೇದಿಕೆಯಲ್ಲಿ ಗ್ರಾ.ಪಂ. ಸದಸ್ಯೆ ಸೋಮಾವತಿ, ಶಿವರಾಮ ಕಾರಂದೂರು, ಶಿವಪ್ಪ ಮಾಣೂರು ಉಪಸ್ಥಿತರಿದ್ದರು. ಮಚ್ಚಿನ ಶ್ರೀ ಅನಂತೇಶ್ವರ ದೇವಸ್ಥಾನದ ಅನುವಂಶಿಯ ಆಡಳಿತ ಮೊಕ್ತೇಸರ ಎಂ. ಹರ್ಷ ಸಂಪಿಗೆತ್ತಾಯ ಶುಭಾಶಯ ಕೋರಿದರು. ಕುಮಾರಿ ಚರಿತ್ರಾ ಪ್ರಾರ್ಥನೆ ಹಾಡಿದರು. ಉಪಾಧ್ಯಕ್ಷ ರಮೇಶ್ ಮೂಲ್ಯ, ಕಾರ್ಯದರ್ಶಿ ಭಾಸ್ಕರ ಮೂಲ್ಯ, ಕೋಶಾಧಿಕಾರಿ ಧರ್ಣಪ್ಪ ಮೂಲ್ಯ ಸೇರಿದಂತೆ ಎಲ್ಲ ಸದಸ್ಯರು ಸಹಕಾರ ನೀಡಿದರು. ಸಹ ಕಾರ್ಯದರ್ಶಿ ಶೈಲೇಶ್ ಕುಮಾರ್ ಧನ್ಯವಾದವಿತ್ತರು.
ಸಾಮೂಹಿಕ ಶ್ರೀ ಸತ್ಯನಾರಾಯಣ ಪೂಜೆ ನಡೆದು ಪ್ರಸಾದ ವಿತರಣೆ ಹಾಗೂ ಸಾರ್ವಜನಿಕ ಅನ್ನಸಂತರ್ಪಣೆ ನಡೆಯಿತು.
ಸ್ಥಾಪಕರಿಗೆ ಗೌರವಾರ್ಪಣೆ :
ಸದ್ರಿ ಸ್ಥಳದಲ್ಲಿ ಅಯೋಧ್ಯೆಯ ವಿವಾದದ ಸಂದರ್ಭ ಕ್ಷೋಭೆಯಾಗದಿರಲು ಮತ್ತು ಜನರ ಭಾವನೆಯ ಒಗ್ಗಟ್ಟಿಗೆ ಸಂಬಂಧಿಸಿದಂತೆ ಪ್ರಾರಂಭಿಸಲಾಗಿರುವ ಈ ಸಾಮೂಹಿಕ ಶ್ರೀ ಸತ್ಯನಾರಾಯಣ ಪೂಜಾ ಕೈಂಕರ್ಯ ಸ್ಥಾಪಿಸಿದ ಗುರುಪ್ರಸಾದ್, ರಾಮಣ್ಣ ಮೂಲ್ಯ, ಗಂಗಾಧರ ಕುಲಾಲ್ ಅವರನ್ನು ಸನ್ಮಾನಿಸಲಾಯಿತು. ಗೋಪಾಲ ಪೂಜಾರಿ ಕೋಲಾಜೆ ಕಾರ್ಯಕ್ರಮ ನಿರೂಪಿಸಿದರು. ರಾತ್ರಿ ತಲಕಳ ಶ್ರೀ ಕಾಶೀ ವಿಶ್ವನಾಥೇಶ್ವರ ಮಹಾಗಣಪತಿ ಯಕ್ಷಗಾನ ಮಂಡಳಿಯಿಂದ ಶ್ರೀ ಶಬರಿಮಲೆ ಅಯ್ಯಪ್ಪ ಯಕ್ಷಗಾನ ಬಯಲಾಟ ನಡೆಯಿತು.

dharmasthala lead prayana tanda beti copyಧರ್ಮಸ್ಥಳ : ವಿದ್ಯೆಯು ಬದಲಾವಣೆಯ ದಾರಿಯಾಗಿದೆ, ವಿದ್ಯೆಯನ್ನು ಸದುಪಯೋಗ ಮಾಡಿಕೊಂಡು ಪ್ರತಿಯೊಂದು ಹಂತದಲ್ಲಿ ಯೋಜಿತ ರೀತಿಯಲ್ಲಿ ಆಧುನಿಕ ಬದಲಾವಣೆ ಮಾಡಿದಲ್ಲಿ ಯಾವುದೇ ಕಾರ್ಯಕ್ರಮಗಳು ಯಶಸ್ವಿಯಾಗುತ್ತವೆ. ಶ್ರೀ ಕ್ಷೇತ್ರದ ಎಲ್ಲಾ ಕಾರ್ಯಕ್ರಮಗಳು ಯಶಸ್ವಿಯಾಗಲು ಇದೇ ಮಾದರಿಯನ್ನು ಅನುಸರಿಸಲಾಗುತ್ತಿದೆ. ಚರ್ತುದಾನಗಳ ಮೂಲಕ ಸಮಾಜದ ಉದ್ಧಾರಕ್ಕಾಗಿ ಸಮರ್ಪಣ ಭಾವದಿಂದ ಕೆಲಸವನ್ನು ನಿರ್ವಹಿಸಿದಾಗ ನಮ್ಮ ಜೀವನದಲ್ಲಿ ಯಶಸ್ಸುಗಳಿಸಲು ಸಾಧ್ಯ, ಆದುದರಿಂದ ವಿದ್ಯಾರ್ಥಿಗಳು ತಮ್ಮ ಜೀವನದಲ್ಲಿ ಸ್ವಾರ್ಥದ ಬದಲು ಸಮಾಜ ಸೇವೆಯೊಂದಿಗೆ ಕೆಲಸ ಮಾಡಿ ಎಂದು ಶ್ರೀ ಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿ ಡಾ| ಡಿ. ವೀರೇಂದ್ರ ಹೆಗ್ಗಡೆ ಹೆಳೀದರು.
ಅವರು ದೇಶ್‌ಪಾಂಡೆ ಫೌಂಡೇಶನ್ ವತಿಯಿಂದ ಲೀಡ್ ಪ್ರಯಾಣ ಕಾರ್ಯಕ್ರಮದಡಿಯಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳಕ್ಕೆ ಆಗಮಿಸಿದ ವಿವಿಧ ರಾಜ್ಯಗಳ 135 ಮಂದಿ ವಿದ್ಯಾರ್ಥಿಗಳನ್ನು ಉದ್ದೇಶಿಸಿ ಮಾತನಾಡಿದರು. ಭಗವದ್ಗೀತೆ ಹಾಗೂ ಪುರಾಣಗಳಲ್ಲಿ ಉಲ್ಲೇಖಿಸಿರುವ ಮೌಲ್ಯಗಳು ಮನುಷ್ಯನ ಜೀವನದ ಪ್ರತಿ ಹೆಜ್ಜೆಗೂ ಅನ್ವಯವಾಗುತ್ತದೆ.
ಯಶಸ್ಸಿನ ದಾರಿಯಲ್ಲಿ ಸವಾಲುಗಳು, ಸಮಸ್ಯೆಗಳು, ಸಂತೋಷಗಳು ಸಹಜ ಇವೆಲ್ಲವನ್ನೂ ಧೈರ್ಯದಿಂದ ಎದುರಿಸುವಂತೆ ಕರೆ ನೀಡಿದರು.
ಯೋಜನೆಯ ಕಾರ್ಯನಿರ್ವಾಹಕ ನಿರ್ದೇಶಕ ಡಾ|ಎಲ್.ಎಚ್. ಮಂಜುನಾಥ್ ಕಾರ್ಯಕ್ರಮವನ್ನು ಉದ್ಘಾಟಿಸಿ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಕಾರ್ಯವೈಖರಿ, ಕ್ಷೇತ್ರದ ಚರ್ತುದಾನಗಳ ಪರಂಪರೆ ಹಾಗೂ ವಿದ್ಯಾರ್ಥಿಗಳಲ್ಲಿ ನಾಯಕತ್ವ ಬೆಳೆಸಿಕೊಳ್ಳುವ ಬಗ್ಗೆ ವಿಶೇಷ ಮಾಹಿತಿ ನೀಡಿದರು.
ಕಾರ್ಯಕ್ರಮದಲ್ಲಿ ದೇಶ್‌ಪಾಂಡೆ ಫೌಂಡೇಶನ್‌ನ ಅಭಿನಂದನ್, ಯೋಜನೆಯ ಮಾನವ ಸಂಪನ್ಮೂಲ ವಿಭಾಗದ ನಿರ್ದೇಶಕಿ ಶ್ರೀಮತಿ ಮಮತಾರಾವ್, ಗ್ರಾಮೀಣ ಶ್ರೇಷ್ಠತಾ ಕೇಂದ್ರದ ಪ್ರಾಂಶುಪಾಲ ಸುರೇಶ್ ಸಾಲಿಯಾನ್, ಕೇಂದ್ರ ಕಛೇರಿಯ ಪ್ರಬಂಧಕ ತೋಷತ್ ಕುಮಾರ್, ತರಬೇತಿ ಕೇಂದ್ರದ ಉಪನ್ಯಾಸಕ ಬಾಲಕೃಷ್ಣ, ರಾಜೇಶ್ ಉಪಸ್ಥಿತರಿದ್ದರು.
ಲೀಡ್ ಪ್ರಯಾಣ ತಂಡವು ಜ.17 ಹಾಗೂ ಜ.181 ರಂದು ಶ್ರೀ ಕ್ಷೇತ್ರ ಧರ್ಮಸ್ಥಳದಲ್ಲಿ ಶ್ರೀ ಮಂಜುನಾಥ ಸ್ವಾಮಿ ದೇವಳ ಹಾಗೂ ಪ್ರೇಕ್ಷಣಿಯ ಸ್ಥಳಗಳು, ಸಿರಿ ಗ್ರಾಮೋದ್ಯೋಗ ಸಂಸ್ಥೆ, ರುಡ್‌ಸೆಟ್, ಕೃಷಿ ತಾಕುಗಳ ಭೇಟಿ, ಶ್ರೀ ಕ್ಷೇತ್ರ ಧರ್ಮಸ್ಥಳ ಮಂಜುನಾಥೇಶ್ವರ ಶಿಕ್ಷಣ ಸಂಸ್ಥೆಗಳು, ಜನಜಾಗೃತಿ ವೇದಿಕೆ ಭೇಟಿ ಮಾಡಿದ್ದಾರೆ. ಶ್ರೀ ಕ್ಷೇತ್ರ ಧರ್ಮಸ್ಥಳದ ಸುತ್ತಲಿನ ಪರಿಸರದಲ್ಲಿ ವಿದ್ಯಾರ್ಥಿಗಳಿಂದ ನಗದು ರಹಿತ ವ್ಯವಹಾರ ಕುರಿತು ಜಾಗೃತಿ ಕಾರ್ಯಕ್ರಮಗಳು ನಡೆಯಿತು.

Kumba sambrama copyಕುಂಬಾರರ ಸೇವಾ ಸಂಘದಿಂದ ಮಾಗಣೆ ಸಭೆ ‘ಕುಂಭ ಸಂಭ್ರಮ’

ವೃತ್ತಿ ನಿರತರಿಗೆ, ನಾಟಿವೈದ್ಯರಿಗೆ, ಸಾಧಕರಿಗೆ ಸನ್ಮಾನ
ಈ ಸಂದರ್ಭದಲ್ಲಿ ಕುಂಬಾರಿಕೆ ವೃತ್ತಿ ಮಾಡುತ್ತಿರುವ ದಿ| ಮೋನಪ್ಪ ಕುಂಬಾರ (ಮರಣೋತ್ತರ) ಅವರ ಪತ್ನಿ ವಾರಿಜ ಮಾಯಿಲಪ್ಪ ಕುಂಬಾರ ಉಜಿರೆ, ಉಮಣ ಕುಂಬಾರ ನಾವೂರು, ಚೆನ್ನ ಕುಂಬಾರ ಬಂಗಾಡಿ, ಧರ್ಣಪ್ಪ ಕುಂಬಾರ ಚಾರ್ಮಾಡಿ, ಬೊಮ್ಮಣ್ಣ ಕುಂಬಾರ ಕಳೆಂಜ, ವೆಂಕಪ್ಪ ಕುಂಬಾರ ಬಂದಾರು, ಶಿವಪ್ಪ ಕುಂಬಾರ ಇಳಂತಿಲ, ಸೇಸಪ್ಪ ಪಟ್ರಮೆ, ವೆಂಕಪ್ಪ ಕುಂಬಾರ ಚಾರ್ವಾಕ, ಚೆನ್ನಪ್ಪ ಕುಂಬಾರ ಕಡಬ, ಉಮ್ಮಪ್ಪ ಕುಂಬಾರ ಅಲಂಕಾರು, ನಾಟಿ ವೈದ್ಯರಾದ ಜಿನ್ನಪ್ಪ ಕುಂಬಾರ ಚಾರ್ಮಾಡಿ, ಜಿನ್ನಪ್ಪ ಕುಂಬಾರ ಇಚಿಲಂಪಾಡಿ, ಮುಂಡಪ್ಪ ಕುಂಬಾರ ಕಡಬ, ಸಾಧಕಿ ಕು| ಹರ್ಷಿತಾ ಇವರನ್ನು ಸನ್ಮಾನಿಸಲಾಯಿತು. ಮಾಗಣೆಯ ಗುರಿಕಾರರನ್ನು, ಗ್ರಾ.ಪಂ ಅಧ್ಯಕ್ಷ, ಸದಸ್ಯರನ್ನು, ಸಂಘದ ಅಧ್ಯಕ್ಷ ಹಾಗೂ ಪದಾಧಿಕಾರಿಗಳನ್ನು ಗೌರವಿಸಲಾಯಿತು. ಸನ್ಮಾನಿತರ ಪರವಾಗಿ ವೆಂಕಪ್ಪ ಬಂದಾರು ಮತ್ತು ತಿಮ್ಮಪ್ಪ ಚಾರ್ವಾಕ ಅನಿಸಿಕೆ ವ್ಯಕ್ತಪಡಿಸಿದರು.

ಬೆಳ್ತಂಗಡಿ : ಕುಂಬಾರರ ಸೇವಾ ಸಂಘ ಬೆಳ್ತಂಗಡಿ ಇದರ ವತಿಯಿಂದ ಸ್ವಜಾತಿ ಬಾಂಧವರ ಮಾಗಣೆ ಸಭೆ, ಕುಂಬಾರಿಕೆ ವೃತ್ತಿ ನಿರತ ಮಾಗಣೆಯ ಹಿರಿಯರಿಗೆ, ನಾಟೀ ವೈದ್ಯರಿಗೆ ಮತ್ತು ಸ್ವಜಾತಿ ವಿವಿಧ ಕ್ಷೇತ್ರಗಳ ಸಾಧಕರಿಗೆ ಸನ್ಮಾನ, ಪ್ರತಿಭಾ ಪ್ರದರ್ಶನ ಮೊದಲಾದ ವೈವಿಧ್ಯಮಯ ಕಾರ್ಯಕ್ರಮಗಳ ಸಮ್ಮೀಳನ ಕುಂಭ ಸಂಭ್ರಮ-2017 ಜ.15ರಂದು ಬೆಳ್ತಂಗಡಿ ಶ್ರೀ ಗುರುನಾರಾಯಣ ಸಭಾ ಭವನದಲ್ಲಿ ವೈಭವ ಪೂರ್ಣವಾಗಿ ನಡೆಯಿತು.
ಕಾರ್ಯಕ್ರಮವನ್ನು ಬೆಳ್ತಂಗಡಿ ಮಾಗಣೆಯ ಗುರಿಕಾರರಾದ ಅಣ್ಣಪ್ಪ ಕುಲಾಲ್ ಉದ್ಘಾಟಿಸಿದರು. ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದ ಕರ್ನಾಟಕ ರಾಜ್ಯ ಕುಂಬಾರರ ಮಹಾ ಸಂಘ ಬೆಂಗಳೂರಿನ ಕಾರ್ಯಾಧ್ಯಕ್ಷ ಡಾ| ಅಣ್ಣಯ್ಯ ಕುಲಾಲ್ ಅವರು ಮಾತನಾಡಿ, ಪಂಚಭೂತಗಳಿಲ್ಲದೆ ಕುಂಬಾರರ ಬದುಕಿಲ್ಲ, ಮಣ್ಣು, ನೀರು, ಅಗ್ನಿ, ಆಕಾಶ ಕುಂಬಾರಿಕೆಗೆ ಅಗತ್ಯ, ಕುಂಬಾರರು ಪ್ರಕೃತಿಯ ಜೊತೆ ವಾಸಿಸುವ ನಿಜವಾದ ಮಣ್ಣಿನ ಮಕ್ಕಳು ಎಂದರು. ಸರಕಾರದ ಯಾವುದೇ ಸೌಲಭ್ಯಗಳಿಲ್ಲದೆ ಕೊಪ್ಪದಲ್ಲಿ ಬದುಕಿ ಮಣ್ಣಿನ ಮಡಕೆ ಮಾಡಿ ಸಂಕಷ್ಟದಲ್ಲಿ ಜೀವಿಸುತ್ತಿರುವವರು ಕುಂಬಾರರು. ಎಲ್ಲಾ ರೀತಿಯಲ್ಲಿಯೂ ಕಡೆಗಣಿಸಲ್ಪಟ್ಟಿದ್ದಾರೆ. ಇವರು ಸಾಮಾಜಿಕ ನ್ಯಾಯದಿಂದ ವಂಚಿತರಾಗಿದ್ದಾರೆ. ಇಂತಹ ಕುಂಬಾರ ಸಮಾಜವನ್ನು ಪರಿಶಿಷ್ಟ ಪಂಗಡಕ್ಕೆ ಸೇರಿಸುವ ಕೆಲಸನ್ನು ಸರಕಾರ ಮಾಡಬೇಕು. ಕುಂಬಾರ ಸಮುದಾಯಕ್ಕೆ ರಾಜಕೀಯ ಸ್ಥಾನಮಾನ ನೀಡಬೇಕು ಎಂದು ಒತ್ತಾಯಿಸಿದರು. ಗುರಿಕಾರರು ಹಿಂದಿನ ಕಟ್ಟು ಪಾಡುಗಳನ್ನು ಉಳಿಸುವ ಕೆಲಸ ಮಾಡುತ್ತಿರುವುದರಿಂದ ನಮ್ಮ ಸಂಸ್ಕೃತಿ-ಸಂಪ್ರಾದಾಯಗಳು ಉಳಿದಿದೆ. ಇವರು ಧರ್ಮರಾಯನ ರೀತಿಯಲ್ಲಿ ನ್ಯಾಯ ಒದಗಿಸುವ ಕೆಲಸ ಮಾಡಬೇಕು ಮೂಡ ನಂಬಿಕೆಯನ್ನು ಬಿಟ್ಟು ಮೂಲ ನಂಬಿಕೆಯೊಂದಿಗೆ ಸಂಘಟಿತರಾಗಬೇಕು, ಮೂಲ್ಯರು, ಕುಂಬಾರರು, ಕುಲಾಲರು ಒಟ್ಟು ಸೇರಿ ಸಂಘಟನೆಯನ್ನು ಬಲಪಡಿಸಿ, ಹೋರಾಟದ ಕಿಚ್ಚನ್ನು ಹೆಚ್ಚಿಸಿದಾಗ ಮಾತ್ರ ನಮ್ಮ ಹಕ್ಕೋತ್ತಾಯಗಳು ಈಡೇರಲು ಸಾಧ್ಯವಿದೆ ಎಂದು ಕರೆ ನೀಡಿದರು. ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿದ ಕುಂಬಾರರ ಸೇವಾ ಸಂಘ ಬೆಳ್ತಂಗಡಿ ಇದರ ಅಧ್ಯಕ್ಷ ಹೆಚ್. ಪದ್ಮಕುಮಾರ್ ಅವರು ಮಾತನಾಡಿ ಶ್ರಿಂಗೇರಿ ಕೊಪ್ಪ ಮೂಲದವರಾದ ಕುಂಬಾರರಿಗೆ ಮಣ್ಣೇ ಬದುಕಿನ ಜೀವಾಳವಾಗಿದೆ. ಅತ್ಯಂತ ನಿಷ್ಠಾವಂತರಾಗಿ, ಸತ್ಯವಂತರಾಗಿ ಬದುಕಿದ ಕುಂಬಾರು ಬೆಳ್ತಂಗಡಿಯಲ್ಲಿ ೭ ಮಾಗಣೆ ಮತ್ತು ಪುತ್ತೂರಿನಲ್ಲಿ ೫ ಮಾಗಣೆಯನ್ನು ಹೊಂದಿದ್ದಾರೆ. ನಾವು ಸಂಘಟಿತರಾಗಬೇಕು, ಸಮಾಜದ ಮುಖ್ಯ ವಾಹಿನಿಗೆ ಬರಬೇಕು. ಸರಕಾರ ಕುಂಬಾರಿಕೆ ವೃತ್ತಿ ನಿರತರಿಗೆ ಮಾಶಾಸನ ಮತ್ತು ಕುಂಬಾರಿಗೆ ಸಹಾಯಧನ ನೀಡಬೇಕು ಈ ನಿಟ್ಟಿನಲ್ಲಿ ಈ ಸಮಾವೇಶ ನಡೆಯುತ್ತಿದೆ ಎಂದರು.
ಮುಖ್ಯ ಅತಿಥಿಗಳಾಗಿದ್ದ ಯುವ ಘಟಕ ರಾಜ್ಯ ಸಂಘಟನಾ ಕಾರ್ಯದರ್ಶಿ ಹರೀಶ್ ಕಾರಿಂಜ ಮಾತನಾಡಿ ಮೂಲ್ಯ, ಕುಲಾಲ, ಕುಂಬಾರರು ಒಟ್ಟಾಗಿ ಸಂಘಟಿತರಾಗಿ ನಮ್ಮ ಬಲ ಪ್ರದರ್ಶನ ಮಾಡಿದಾಗ ಮಾತ್ರ ನಮಗೆ ಸೌಲಭ್ಯಗಳು ದೊರೆಯಲು ಸಾಧ್ಯವಿದೆ ಎಂದು ಅಭಿಪ್ರಾಯಪಟ್ಟರು. ಮೂಲ್ಯರ ಯಾನೆ ಕುಂಬಾರರ ತಾಲೂಕು ಸಂಘದ ಉಪಾಧ್ಯಕ್ಷ ದಿನಕರ ಬಂಗೇರ ಮಾತನಾಡಿ ಕುಂಬಾರರ ಕಲೆ, ಸಂಸ್ಕೃತಿಯನ್ನು ಉಳಿಸಿ ಬೆಳೆಸುವಲ್ಲಿ ಪ್ರಮುಖವಾದ ಮಾಗಣೆಯ ಮಹತ್ವ ಇಂದು ಈ ಸಮ್ಮೇಳನದ ಮೂಲಕ ಎಲ್ಲರಿಗೂ ತಿಳಿಯುವಂತಾಯಿತು. ನಾವೆಲ್ಲ ನಮ್ಮಲ್ಲಿರುವ ಭಿನ್ನಾಭಿಪ್ರಾಯವನ್ನು ಮರೆತು ಒಟ್ಟಾಗಿ ನಮ್ಮ ಶ್ರೋಯೋಭಿವೃದ್ಧಿಗೆ ಹೋರಾಟ ಮಾಡೋಣ ಎಂದು ಕರೆ ನೀಡಿದರು. ಶೈಕ್ಷಣಿಕ ಕ್ಷೇತ್ರ-ಡಾ| ರಮೇಶ್ ನೇತ್ರ ತಜ್ಞರು ಸರಕಾರಿ ಆಸ್ಪತ್ರೆ ಚಿಕ್ಕಮಗಳೂರು, ಸಾಮಾಜಿಕ ಕ್ಷೇತ್ರ- ಮಹೇಶ್ ಕೆ. ಗ್ರಾ.ಪಂ. ಸದಸ್ಯರು ಲಾಲ, ಧಾರ್ಮಿಕ ಕ್ಷೇತ್ರ-ವಿಜಯ ಗೌರವಾಧ್ಯಕ್ಷರು ಕುಂಭಶ್ರೀ ಗೆಳೆಯರ ಬಳಗ ಕಾಯರ್ತಡ್ಕ ಇವರು ಉಪನ್ಯಾಸ ನೀಡಿದರು. ಸಮಾರೋಪ ಸಮಾ ರಂಭದಲ್ಲಿ ಸರಕಾರದಿಂದ ಸಿಗುವ ಸೌಲಭ್ಯಗಳ ಕುರಿತು ಬಂದಾರು ಗ್ರಾ.ಪಂ. ಅಧ್ಯಕ್ಷ ಉದಯ ಕುಮಾರ್ ಬಿ.ಕೆ, ಸಂಘಟನೆ ಕುರಿತು ಯಕ್ಷಗಾನ ಕಲಾವಿದ ಪದ್ಮನಾಭ ಇಳಂತಿಲ, ಮಹಿಳಾ ಸಬಲೀಕರಣ ಕುರಿತು ಸಂಘದ ಸದಸ್ಯೆ ಶ್ರೀಮತಿ ಉಷಾ ಸಂಜೀವ ಬಿ.ಹೆಚ್, ಕುಂಬಾರರ ಕಟ್ಟುಪಾಡುಗಳ ಕುರಿತು ಸಂಘದ ಗೌರವಾಧ್ಯಕ್ಷ ಸಂಜೀವ ಕುಂಬಾರ, ಮಹಿಳೆ ಮತ್ತು ಮಕ್ಕಳ ಪಾಲನೆ ಬಗ್ಗೆ ಸಂಜಯನಗರ ಅಂಗನವಾಡಿ ಕಾರ್ಯಕರ್ತೆ ಶ್ರೀಮತಿ ಜಲಜ ಸಂಜೀವ ಎನ್. ಇವರು ವಿಷಯ ಮಂಡಿಸಿದರು. ಈ ಸಂದರ್ಭದಲ್ಲಿ ಸಂಜೀವ ಕಾಯರ್ತಡ್ಕ ಇವರ ಮಾಹಿತಿಯಲ್ಲಿ ರಚನೆಯಾದ ಕುಂಬಾರರ ಕಟ್ಟುಪಾಡುಗಳು ಪುಸ್ತಕವನ್ನು ಪದ್ಮಕುಮಾರ್ ಬಿಡುಗಡೆಗೊಳಿಸಿದರು.
ವೇದಿಕೆಯಲ್ಲಿ ಉಪಾಧ್ಯಕ್ಷ ಕೃಷ್ಣಪ್ಪ, ಕಾರ್ಯದರ್ಶಿ ಜಗದೀಶ್, ಖಜಾಂಚಿ ಸಂಜೀವ ಬಿ.ಹೆಚ್, ಜೊತೆ ಕಾರ್ಯದರ್ಶಿ ಸಾಗರ್, ಸಂಘ ಟನಾ ಕಾರ್ಯದರ್ಶಿಗಳಾದ ದಯಾನಂದ ಮುತ್ತಪ್ಪ, ಜನಾರ್ದನ ಸಂಜೀವ ಎನ್. ಉಪಸ್ಥಿತ ರಿದ್ದರು. ಪಿಡ್ಲ್ಯೂಡಿ ಗುತ್ತಿಗೆದಾರ ದಯಾನಂದ ಸ್ವಾಗತಿಸಿ, ಹೆಚ್. ಪದ್ಮಕುಮಾರ್ ಪ್ರಾಸ್ತಾವಿಕವಾಗಿ ಮಾತನಾಡಿದರು. ಜಗದೀಶ್ ಕುಂಬಾರ ವರದಿ ವಾಚಿಸಿದರು. ಬಿ.ಹೆಚ್. ರಾಜೀವ್ ಮತ್ತು ಚಿದಾನಂದ ಕಾರ್ಯಕ್ರಮ ನಿರೂಪಿಸಿದರು. ಸಾಗರ್ ಧನ್ಯವಾದವಿತ್ತರು.

 ಬೆಳ್ತಂಗಡಿ : ಗುರುವಾಯನಕೆರೆ, ಬೆಳ್ತಂಗಡಿ, ಧರ್ಮಸ್ಥಳ ವಿದ್ಯುತ್ ಲೈನ್‌ನಲ್ಲಿ ತುರ್ತುಕಾಮಗಾರಿಯನ್ನು ಕೈಗೊಳ್ಳಬೇಕಾದ ಹಿನ್ನಲೆಯಲ್ಲಿ ಜ.20ರಂದು ಬೆಳಿಗ್ಗೆ 6.30ರಿಂದ ಸಂಜೆ 5.30ರ ತನಕ ಬೆಳ್ತಂಗಡಿ, ಧರ್ಮಸ್ಥಳ ಮತ್ತು ವಗ್ಗ (ಬಂಟ್ವಾಳ ತಾಲೂಕು) ವಿದ್ಯುತ್ ಉಪಕೇಂದ್ರದಿಂದ ಹೊರಡುವ ಎಲ್ಲಾ ಫೀಡರ್‌ಗಳಲ್ಲಿ ಹಾಗೂ ಮಡಂತ್ಯಾರ್ ಹಾಗೂ ಬಳ್ಳಮಂಜ ಫೀಡರ್‌ಗಳಲ್ಲಿ ವಿದ್ಯುತ್ ನಿಲುಗಡೆಯಾಗಲಿದೆ ಎಂದು ಮೆಸ್ಕಾಂ ಪ್ರಕಟಣೆಯಲ್ಲಿ ತಿಳಿಸಿದೆ.

Untitled-1 copy

ಇನಾಸ್ ಡಿಸೋಜ              ಫೆಡ್ರಿಕ್ ರೊಡ್ರಿಗಸ್

ಇಂದಬೆಟ್ಟು : ಸಂತ ಫ್ರಾನ್ಸಿಸ್ ಕ್ಷೇವಿಯರ್ ಚರ್ಚ್ ಇಂದಬೆಟ್ಟು ಇದರ ಚರ್ಚ್ ಪಾಲನಾ ಮಂಡಳಿಯ ಉಪಾಧ್ಯಕ್ಷರಾಗಿ ಪ್ರಗತಿಪರ ಕೃಷಿಕ ಯುವ ಮುಂದಾಳು ಇನಾಸ್ ಡಿಸೋಜ ಹಾಗೂ ಕಾರ್ಯದರ್ಶಿಯಾಗಿ ಭಾರತೀಯ ಜೀವ ವಿಮಾ ನಿಗಮದ ಚೇರ್‌ಮೆನ್ ಕ್ಲಬ್ ಮೆಂಬರ್ ಫೆಡ್ರಿಕ್ ರೊಡ್ರಿಗಸ್ ಆಯ್ಕೆಯಾಗಿದ್ದಾರೆ.

badinade darmika shabe copyಬಳಂಜ ಬದಿನಡೆ ಶ್ರೀ ಶಾಸ್ತಾರ ನಾಗಬ್ರಹ್ಮ ದೇವಸ್ಥಾನದ ಸಿರಿಗಳ ಕ್ಷೇತ್ರದಲ್ಲಿ ವರ್ಷಾವಧಿ ಜಾತ್ರೋತ್ಸವ

ಸಭೆಯನ್ನುದ್ದೇಶಿಸಿ ಬಿಜೆಪಿ ಯುವ ಮೋರ್ಚಾ ತಾಲೂಕು ಅಧ್ಯಕ್ಷ ಸಂಪತ್ ಬಿ.ಸುವರ್ಣ ಮಾತನಾಡುತ್ತಿರುವುದು

ಸನ್ಮಾನ ಗುರುತಿಸುವಿಕೆ : ಕಳೆದ 40 ವರ್ಷಗಳಿಂದ ಬಳಂಜ ಗ್ರಾಮ ಪಂಚಾಯತ್‌ನಲ್ಲಿ ನಿಷ್ಟವಂತರಾಗಿ, ಪ್ರಾಮಾಣಿಕರಾಗಿ ಗ್ರಾಮ ಸಹಾಯಕರಾಗಿ ಸೇವೆ ಸಲ್ಲಿಸಿ ನಿವೃತ್ತರಾಗಿರುವ ಕೃಷ್ಣ ದೇವಾಡಿಗ ರವರನ್ನು, ಬಳಂಜ ಬದಿನಡೆ ದೇವಸ್ಥಾನದ ಬ್ರಹ್ಮಕಲಶೋತ್ಸವದಲ್ಲಿ ಉತ್ತಮ ಕೊಡುಗೆಗಳೊಂದಿಗೆ ಆರ್ಥಿಕ ನೆರವನ್ನು ನೀಡಿ ಬ್ರಹ್ಮಕಲಶೋತ್ಸವದ ಅಧ್ಯಕ್ಷ ಉದ್ಯಮಿ ರವಿ ಪೂಜಾರಿ ಮಜಲುರವರನ್ನು ದೇವಸ್ಥಾನದ ವತಿಯಿಂದ ಸನ್ಮಾನಿಸಲಾಯಿತು. ಹಾಗೆಯೇ ಜಾತ್ರೋತ್ಸವಕ್ಕೆ ಪ್ರಾಯೋಜಕತ್ವ ನೀಡಿದ ಸತೀಶ್ ರೈ ಬಾರ್ದಡ್ಕ, ಜಾತ್ರೋತ್ಸವ ಸಮಿತಿ ಅಧ್ಯಕ್ಷ ಹರೀಶ್ ವೈ ಚಂದ್ರಮ, ಸರ್ವೊದಯ ಫ್ರೆಂಡ್ಸ್ ಅಟ್ಪಾಜೆ ತಂಡದ ಸದಸ್ಯರನ್ನು, ವಾಣಿ ಆಂಗ್ಲ ಮಾಧ್ಯಮ ಶಾಲೆಯ ಮುಖ್ಯೋಪಾಧ್ಯಾಯರಾದ ಲಕ್ಷ್ಮೀ ನಾರಾಯಣ ಕೆ., ಕೃಷ್ಣವೇಣಿ ಇವರುಗಳನ್ನು ಬಳಂಜ  ಬದಿನಡೆ ದೇವಸ್ಥಾನದ ಜಾತ್ರಾಮಹೋತ್ಸವದಲ್ಲಿ ಗುರುತಿಸಲಾಯಿತು.

ಬಳಂಜ : ತುಳುನಾಡಿನ ಆಚಾರ-ವಿಚಾರಗಳು ದೇಶದಲ್ಲಿಯೇ ಅತ್ಯಂತ ಶ್ರೇಷ್ಟವಾದುದು. ಯಾಕೆಂದರೆ ನಾವು ನಾಗನನ್ನು ಪ್ರತ್ಯಕ್ಷ ದೇವರು ಎಂದು ಪೂಜಿಸುತ್ತೇವೆ. ಇಂತಹ ತುಳುನಾಡಿನ ಸಂಸ್ಕೃತಿ, ನಾಗರಾಧನೆ ಜಗತ್ತಿಗೆ ಆದರ್ಶ ಎಂದು ಬೆಂಗಳೂರು ಕಸ್ತೂರಿ ನ್ಯೂಸ್ ಚಾನೆಲ್‌ನ ಖ್ಯಾತ ಜೋತಿಷಿ ಶ್ರೀನಾಥ್ ಜೋಶಿ ಸೂಳಬೆಟ್ಟು ಅಭಿಪ್ರಾಯಪಟ್ಟರು.
ಅವರು ಜ.13ರಂದು ಬಳಂಜ ಬದಿನಡೆ ಶ್ರೀ ಶಾಸ್ತಾರ ನಾಗಬ್ರಹ್ಮ ದೇವಸ್ಥಾನ ಮತ್ತು ಸಿರಿಗಳ ಕ್ಷೇತ್ರದ ವರ್ಷಾವದಿ ಜಾತ್ರಾಮಹೋತ್ಸವದಲ್ಲಿ ನಡೆದ ಧಾರ್ಮಿಕ ಸಭಾ ಸಮಾರಂಭದಲ್ಲಿ ಧಾರ್ಮಿಕ ಉಪನ್ಯಾಸ ನೀಡಿದರು.
ಶ್ರದ್ಧಾ ಭಕ್ತಿಯಿಂದ ದೇವರ ಸ್ಮರಣೆ ಮಾಡಬೇಕು. ಆವಾಗ ಮಾತ್ರ ದೇವರ ಅನುಗ್ರಹ ಪ್ರಾಪ್ತಿಯಾಗುತ್ತದೆ. ನಮ್ಮ ಜಿಲ್ಲೆಯ ವಿವಿಧ ಕ್ಷೇತ್ರಗಳು ನಾಗದೋಷ ಪರಿಹಾರಕ್ಕೆ ಸಾಕ್ಷಿಯಾಗಿದ್ದು ಮುಂದೊಂದು ದಿನ ಬದಿನಡೆ ಕ್ಷೇತ್ರವು ನಾಗದೋಷ ನಿವಾರಣೆಗೆ ಪವಿತ್ರ ಕ್ಷೇತ್ರವಾಗಲಿದೆ ಎಂದರು.
ಸಮಾರಂಭದ ಅಧ್ಯಕ್ಷತೆಯನ್ನು ಬೆಳ್ತಂಗಡಿ ಬಿಜೆಪಿ ಯುವಮೋರ್ಚಾದ ತಾಲೂಕು ಅಧ್ಯಕ್ಷ ಸಂಪತ್ ಬಿ. ಸುವರ್ಣ ವಹಿಸಿ ಮಾತನಾಡಿ ದೈವ, ದೇವರು, ನಾಗರಾಧನೆ, ಕಲೆ-ಸಂಸ್ಕೃತಿಯಲ್ಲಿ ತುಳುನಾಡು ಪ್ರಸಿದ್ಧಿಯಾಗಿದ್ದು ಬದಿನಡೆ ಕ್ಷೇತ್ರ ಕೂಡ ಪ್ರಸಿದ್ಧವಾಗಿದೆ ಎಂಬುದಕ್ಕೆ ಇಲ್ಲಿ ಸೇರಿರುವ ಭಕ್ತವೃಂದವೇ ಸಾಕ್ಷಿ. ಯಾವುದೇ ಒಂದು ಕಾರ್ಯಕ್ರಮ ಮಾಡುವುದಾದರೆ ಹಣ ಇದ್ದರೆ ಸಾಲದು ಮನಸ್ಸು ಇರಬೇಕು ಅಂತಹ ಮನಸ್ಸುಗಳು ಒಟ್ಟಾಗಿ ಸಮಾಜಮುಖಿ ಕಾರ್ಯಕ್ರಮ ಗಳನ್ನು ಮಾಡಿದರೆ ಯಶಸ್ಸು ಸಾಧ್ಯ ಎಂದರು.
ಮುಖ್ಯ ಅತಿಥಿ ನೆಲೆಯಲ್ಲಿ ಬೆಳ್ತಂಗಡಿ ಯುವವಾಹಿನಿ ಘಟಕದ ಅಧ್ಯಕ್ಷ ಸದಾನಂದ ಪೂಜಾರಿ ಉಂಗಿಲಬೈಲು ಮಾತನಾಡಿ ಜೀವನದಲ್ಲಿರುವ ಜಂಜಾಟವನ್ನು ಹೋಗಲಾಡಿಸಲು ದೇವರ ಆರಾಧನೆ, ಸ್ಮರಣೆ ಮುಖ್ಯ. ಬದಿನಡೆ ಕ್ಷೇತ್ರವು ಪವಿತ್ರ ಕ್ಷೇತ್ರವಾಗಿದ್ದು ಇಲ್ಲಿ ವರ್ಷದುದ್ದಕ್ಕೂ ಅನೇಕ ಕಾರ್ಯಕ್ರಮಗಳು ಜರುಗುತ್ತಿದೆ. ಇದರಿಂದ ಊರಿನಲ್ಲಿ ಶಾಂತಿ ನೆಲೆಸಿ ಅಭಿವೃದ್ಧಿ ಹೊಂದಲು ಸಾಧ್ಯ ಎಂದರು.
ಜಿ.ಪಂ ಸದಸ್ಯೆ ಮಮತ ಎಂ.ಶೆಟ್ಟಿ, ಮಂಗಳೂರು ಉದ್ಯಮಿ ರವಿ ಪೂಜಾರಿ ಮಜಲು, ನ್ಯಾಯವಾದಿ ಸತೀಶ್ ರೈ ಬಾರ್ದಡ್ಕ, ಪಡಂಗಡಿ ಗ್ರಾ.ಪಂ ಮಾಜಿ ಸದಸ್ಯ ಅಶೋಕ್ ಗೋವಿಯಾಸ್, ಜೆಸಿಐ ಬೆಳ್ತಂಗಡಿ ಮಂಜುಶ್ರೀ ಅಧ್ಯಕ್ಷ ಸಂತೋಷ್ ಪಿ. ಕೋಟ್ಯಾನ್ ಬಳಂಜ, ಉಜಿರೆ ಎಸ್.ಸಿ.ಡಿ.ಸಿ.ಸಿ ಬ್ಯಾಂಕ್‌ನ ವ್ಯವಸ್ಥಾಪಕರಾದ ಮಾಲಾ ಎಂ.ಕೆ. ಜಾತ್ರೋತ್ಸವ ಸಮಿತಿ ಅಧ್ಯಕ್ಷ ಹರೀಶ್ ವೈ ಚಂದ್ರಮ, ನಿವೃತ್ತ ಉಗ್ರಾಣಿ ಕೃಷ್ಣ ದೇವಾಡಿಗ ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಜಾತ್ರೋತ್ಸವ ಸಮಿತಿ ಗೌರವ ಸಲಹೆಗಾರ ಸದಾನಂದ ಸಾಲಿಯಾನ್ ಸ್ವಾಗತಿಸಿ, ಶಿಕ್ಷಕಿ ಮೋಹಿನಿ ನಿರೂಪಿಸಿ, ದೇವಸ್ಥಾನದ ಧರ್ಮದರ್ಶಿ ಜಯಸಾಲಿಯಾನ್ ವಂದಿಸಿದರು.
ಅಟ್ಲಾಜೆ ಅಂಗನವಾಡಿ ಕೇಂದ್ರದ ಪುಟಾಣಿಗಳಿಂದ ನೃತ್ಯ ಕಾರ್ಯಕ್ರಮ, ದೀಕ್ಷಿತ್ ಇವರಿಂದ ಮಿಮಿಕ್ರಿ ಹಾಗೂ ಬಳಂಜ ಬೊಳ್ಳಿಲು ತಂಡದ ಸದಸ್ಯರು ಮತ್ತು ಬೆಳ್ತಂಗಡಿ ವಾಣಿ ಆಂಗ್ಲ ಮಾಧ್ಯಮ ಶಾಲಾ ವಿದ್ಯಾರ್ಥಿಗಳಿಂದ ವಿವಿಧ ವೈವಿಧ್ಯಮಯ ಸಾಂಸ್ಕೃತಿಕ ನೃತ್ಯ ಸಂಭ್ರಮ ನಡೆದು ನಂತರ ಪಿಂಗಾರ ಕಲಾವಿದರು ಮೂಡಬಿದ್ರೆ ಇವರಿಂದ ನಮ ನಮ್ಮಾತೆಗೆ ತುಳು ಹಾಸ್ಯಮಯ ನಾಟಕ ಜರುಗಿತು.

ಚಿತ್ರ : ನೇಸರ ಕಟ್ಟೆ

marodi mara copyಮರೋಡಿ: ಮರೋಡಿ ಗ್ರಾಮದ ಕೂಕ್ರಬೆಟ್ಟು ಶಾಲಾ ಬಳಿ ಲಾರಿಯಲ್ಲಿ ಅಕ್ರಮವಾಗಿ ಮರದ ದಿಮ್ಮಿಗಳನ್ನು ಸಾಗಾಟ ಮಾಡುತ್ತಿದ್ದ ಬಗ್ಗೆ ಖಚಿತ ಮಾಹಿತಿ ಪಡೆದ ವೇಣೂರು ಅರಣ್ಯ ಇಲಾಖಾಧಿಕಾರಿಗಳು ಜ.18ರ ಮುಂಜಾನೆ ದಾಳಿ ನಡೆಸಿ ಸ್ವತ್ತುಗಳನ್ನು ವಶಕ್ಕೆ ಪಡೆದು ಪ್ರಕರಣ ದಾಖಲಿಸಿಕೊಂಡಿದ್ದಾರೆ.
ವಶಪಡಿಸಿಕೊಂಡ ಒಟ್ಟು ಸ್ವತ್ತುಗಳ ಮೌಲ್ಯ ಲಾರಿ ಸಹಿತ ರೂ. 4 ಲಕ್ಷ ಎಂದು ಅಂದಾಜಿಸಲಾಗಿದೆ. ವೇಣೂರು ವಲಯ ಅರಣ್ಯಾಧಿಕಾರಿ ಸುಬ್ರಹ್ಮಣ್ಯ ಆಚಾರ್ಯ, ಉಪ ವಲಯ ಅರಣ್ಯಾಧಿಕಾರಿ ರಾಜೇಶ್ ಅವರ ನೇತೃತ್ವದಲ್ಲಿ ಕಾರ್ಯಾಚರಣೆ ಕೈಗೊಂಡಿದ್ದು, ಅರಣ್ಯ ರಕ್ಷಕರಾದ ರವಿಕುಮಾರ್ ಡಿ., ಸಂದೀಪ್, ಜನಾರ್ದನ ಗೌಡ, ಶಶಿಕಾಂತ್ ಅರಣ್ಯ ವೀಕ್ಷಕರಾದ ಹರೀಶ್, ಪ್ರಶಾಂತ್ ವಾಹನ ಚಾಲನ ಆಶ್ಲೇಷ ಕಾರ್ಯಾಚರಣೆಯಲ್ಲಿ ಸಹಕರಿಸಿದರು. ಪ್ರಕರಣದ ಮುಂದಿನ ತನಿಖೆಯನ್ನು ಕುಂದಾಪುರ ವಿಭಾಗದ ಉಪ ಅರಣ್ಯ ಸಂರಕ್ಷಣಾಧಿಕಾರಿಗಳಾದ ಎ.ವಿ. ಅಮರ್‌ನಾಥ್ ಇವರ ನಿರ್ದೇಶನದಂತೆ ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಸುಬ್ರಹ್ಮಣ್ಯ ಎಚ್.ಆರ್. ಅವರು ಕೈಗೊಂಡಿದ್ದಾರೆ. ಮರೋಡಿ, ಕಾಶಿಪಟ್ಣ ಪರಿಸರದಲ್ಲಿ ಮರಗಳ್ಳರು ರಾತ್ರಿ ವೇಳೆ ಅತ್ಯಧಿಕವಾಗಿ ಕಾರ್ಯಾಚರಿಸುತ್ತಿರುವುದು ಹಲವು ದಿನಗಳಿಂದ ದಾಖಲಾಗುತ್ತಿರುವ ಪ್ರಕರಣಗಳೇ ಸಾಕ್ಷಿಯಾಗಿದೆ. ಕಳ್ಳರ ಈ ದುಷ್ಕೃತ್ಯದಿಂದ ಅರಣ್ಯ ಬರಡಾಗುತ್ತಿದ್ದು, ಪ್ರಕೃತಿಯ ಸಮತೋಲನವೇ ನಲುಗಿ ಹೋಗಿದೆ. ಪ್ರಕೃತಿಯ ಮೇಲೆ ಇಂತಹ ಅನಾಚಾರ ಎಸಗುವ ದುಷ್ಕರ್ಮಿಗಳನ್ನು ಜೈಲುಗಟ್ಟಿ ಕಠಿಣ ಕಾನೂನು ಕ್ರಮ ಕೈಗೊಳ್ಳಬೇಕೆಂಬ ಆಗ್ರಹ ಸಾರ್ವಜನಿಕರಿಂದ ಕೇಳಿ ಬಂದಿದೆ.

sushi

sushii

ಬೆಳ್ತಂಗಡಿ : ಇಲ್ಲಿಯ ಪ್ರಸನ್ನ ಕಾಲೇಜು ಲಾಯಿಲ ಬಳಿ ನೂತನವಾಗಿ ಪ್ರಾರಂಭಗೊಂಡ ಸುಶಿ ಕೆಫೆ ಮತ್ತು ಬಿಸ್ಟ್ರೋ ಉದ್ಘಾಟನೆಯನ್ನು ಜ.19ರಂದು ಕರ್ನಾಟಕ ಮಾಜಿ ಸಚಿವರಾದ ಗಂಗಾಧರ ಗೌಡ ಉದ್ಘಾಟಿಸಿ ಸಂಸ್ಥೆ ಉತ್ತರೋತ್ತರವಾಗಿ ಬೆಳೆಯಲಿ ಎಂದು ಶುಭ ಹಾರೈಸಿದರು.
ಈ ಸಂದರ್ಭದಲ್ಲಿ ಮಾಲಕರಾದ ರೂಪೇಶ್ ಮತ್ತು ದಂಪತಿಗಳು ಹಾಗೂ ಜಯಲಕ್ಷ್ಮೀ ಇಂಜಿನಿಯರಿಂಗ್ ಮಾಲಕ ವಿಶ್ವನಾಥ್ ಶೆಟ್ಟಿ, ಎಸ್.ವಿ.ಸಿ ಸ್ಟುಡಿಯೋ ಮತ್ತು ವಿಡಿಯೋ ಮಾಲಕ ಲೋಕೇಶ್ ಶೆಟ್ಟಿ, ವಿಶ್ವನಾಥ ಆರ್.ನಾಯಕ್, ಜಯಪ್ರಕಾಶ್ ಶೆಟ್ಟಿ, ಗಿರಿಧರ ಶೆಟ್ಟಿ, ಮುಂಡಪ್ಪ ಶೆಟ್ಟಿ, ಭಾನುಪ್ರಸನ್ನ, ಶಂಕರ ಹೆಗ್ಡೆ, ರಂಜನ್ ರಾವ್, ಗೌರೀಶ್ ರೈ, ಮುಂತಾದವರು ಉಪಸ್ಥಿತರಿದ್ದರು. ಸಿ.ಹೆಚ್ ಪ್ರಭಾಕರ ಸ್ವಾಗತಿಸಿ, ಜಯಲಕ್ಷ್ಮೀ ಇಂಜಿನಿಯರಿಂಗ್ ಮಾಲಕರಾದ ವಿಶ್ವನಾಥ ಶೆಟ್ಟಿ ಧನ್ಯವಾದವಿತ್ತರು.

aladangady copyಅಳದಂಗಡಿ : ಯುವ ವಾಹಿನಿ ಬೆಳ್ತಂಗಡಿ ಘಟಕದ ಆಶ್ರಯದಲ್ಲಿ ಶ್ರೀ ನಾರಾಯಣ ಗುರುಗಳ ತತ್ವ ಸಂದೇಶ ಕಾರ್ಯಕ್ರಮವು ಜ.15ರಂದು ಅಳದಂಗಡಿ ಸ್ವರಾಜ್ ಟವರ‍್ಸ್‌ನ ಸಭಾಭವನದಲ್ಲಿ ಜರಗಿತು.
ಕಾರ್ಯಕ್ರಮವನ್ನು ದೀಪ ಬೆಳಗಿಸಿ ಉದ್ಘಾಟಿಸಿ ಶ್ರೀ ನಾರಾಯಣ ಗುರುಗಳ ಆದರ್ಶ ತತ್ವಗಳ ಬಗ್ಗೆ ಸುದೀರ್ಘವಾಗಿ ಆಶೀರ್ವಚನ ನೀಡಿದ ಕೇರಳ ಶಿವಗಿರಿ ಮಠದ ಶ್ರೀ ಸತ್ಯಾನಂದ ತೀರ್ಥ ಸ್ವಾಮೀಜಿಯವರು. ನಾರಾಯಣ ಗುರುಗಳ ಸಾರ್ವಕಾಲಿಕ ಚಿಂತನೆಗಳಾದ ವಿದ್ಯೆ, ಉದ್ಯೋಗ, ಸಂಪರ್ಕ ಧ್ಯೇಯ ವಾಕ್ಯದಡಿ ಯುವವಾಹಿನಿ ಬಳಗವು ಹಲವು ಸಮಾಜಮುಖಿ ಕೆಲಸಗಳನ್ನು ಮಾಡುತ್ತಿರುವುದು ಸ್ಲಾಘನೀಯವಾಗಿದ್ದು ಬಿಲ್ಲವ ಸಮಾಜದ ಯುವಕರು ದುಶ್ಚಟಗಳಿಂದ ಆದಷ್ಟು ದೂರ ಇದ್ದು ನಾರಾಯಣ ಗುರುಗಳ ತತ್ವ ಸಂದೇಶಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಎಂದು ಕರೆ ನೀಡಿದರು.
ಯುವ ವಾಹಿನಿ ಬೆಳ್ತಂಗಡಿ ಘಟಕದ ಅಧ್ಯಕ್ಷ ಸದಾನಂದ ಪೂಜಾರಿ ಉಂಗಿಲಬೈಲು ಸ್ವಾಗತಿಸಿ ಪ್ರಾಸ್ತಾವಿಕವಾಗಿ ಮಾತನಾಡಿದರು.
ಎ.ಪಿ.ಎಂ.ಸಿ ಚುನಾವಣೆಯಲ್ಲಿ ವಿಜೇತರಾದ ಬಿಲ್ಲವ ಸಮಾಜದ ಚಿದಾನಂದ ಪೂಜಾರಿ ಎಲ್ದಕ್ಕ, ಪಲ್ಲವಿರಾಜು, ಸತೀಶ್ ಕೆ ಕಾಶಿಪಟ್ಣ ಇವರನ್ನು ಸನ್ಮಾನಿಸಲಾಯಿತು. ವೇದಿಕೆಯಲ್ಲಿ ಗೆಜ್ಜೆಗಿರಿ ನಂದನಬಿತ್ತಿಲ್ ಅಭಿವೃದ್ಧಿ ಸಮಿತಿಯ ತಾಲೂಕು ಸಮಿತಿ ಅಧ್ಯಕ್ಷ ಸೋಮನಾಥ ಬಂಗೇರ ವರ್ಪಾಳೆ, ಸುಧಿರ್ ಆರ್ ಸುವರ್ಣ, ಯುವ ವಾಹಿನಿ ಕೇಂದ್ರ ಸಮಿತಿಯ ತುಕರಾಮ್, ಅಮ್ಮಾಜಿ ಶಿರ್ಲಾಲು, ಅಳದಂಗಡಿ ಗ್ರಾ.ಪಂ ಅಧ್ಯಕ್ಷ ಸತೀಶ್ ಮಿತ್ತಮಾರ್, ಸಂಜೀವ ಪೂಜಾರಿ ಕೊಡಂಗೆ, ವಿಶ್ವನಾಥ ಪೂಜಾರಿ ಕುದ್ಯಾಡಿ ಉಪಸ್ಥಿತರಿದ್ದರು.
ಸ್ಮಿತೇಶ್ ಬಾರ್ಯ ಕಾರ್ಯಕ್ರಮ ನಿರೂಪಿಸಿ, ಯುವ ವಾಹಿನಿ ಸಂಚಲನ ಸಮಿತಿಯ ಪುರುಷೋತ್ತಮ ಧನ್ಯವಾದ ಸಲ್ಲಿಸಿದರು.

  ಉಜಿರೆ : ಉಜಿರೆಯ ಉದ್ಯಮಿ ಶ್ರೀ ದುರ್ಗಾ ನಿಲಯದ ಶ್ರೀಮತಿ ಸುನಂದಾ ಮತ್ತು ಯು. ಸದಾಶಿವ ಶೆಟ್ಟಿ ಮತ್ತು ಕುಟುಂಬಸ್ಥರು ಶ್ರದ್ಧಾ ಭಕ್ತಿಯೊಂದಿಗೆ ಉಜಿರೆಯ ಶ್ರೀ ಜನಾರ್ದನ ದೇವರಿಗೆ ಸೇವಾ ರೂಪವಾಗಿ ನೂತನ ಚಂದ್ರ ಮಂಡಲ ರಥವನ್ನು ಸಮರ್ಪಿಸಲು ಸಂಕಲ್ಪ ಮಾಡಿದ್ದಾರೆ.
ಅತ್ಯಂತ ವಿನೂತನವಾಗಿ ಕಾಷ್ಠ ಶಿಲ್ಪಗಳ ಆಕರ್ಷಕ ಕೆತ್ತನೆಗಳೊಂದಿಗೆ ನಿರ್ಮಿಸಲಾದ ಈ ನೂತನ ಚಂದ್ರಮಂಡಲ ರಥವನ್ನು ದೇವರಿಗೆ ಸಮರ್ಪಿಸುವ ಕಾರ್ಯಕ್ರಮ ಇಂದು (ಜ.19ರಂದು) ಗುರುವಾರ ಸಂಜೆ ಶುಭ ಮೂಹೂರ್ತದಲ್ಲಿ ಸದಾಶಿವ ಶೆಟ್ಟಿ, ಅವರ ಧರ್ಮಪತ್ನಿ ಶ್ರೀಮತಿ ಸುನಂದಾ, ಪುತ್ರರಾದ ರಮೇಶ್ ಶೆಟ್ಟಿ, ಉಮೇಶ್ ಶೆಟ್ಟಿ, ಮಕ್ಕಳು, ಅಳಿಯಂದಿರು ಹಾಗೂ ಕುಟುಂಬಸ್ಥರು ಹಾಗೂ ಭಕ್ತರ ಉಪಸ್ಥಿತಿಯಲ್ಲಿ ವಿವಿಧ ಧಾರ್ಮಿಕ ವಿಧಿ-ವಿಧಾನಗಳೊಂದಿಗೆ ನಡೆಯಲಿದೆ.
ಕಾರ್ಯಕ್ರಮದ ಪೂರ್ವಾಭಾವಿಯಾಗಿ ಇಂದು ಬೆಳಗ್ಗೆ ಗಂಟೆ 9ಕ್ಕೆ ಮಡಂತ್ಯಾರು ಸೇಕ್ರೆಡ್ ಹಾರ್ಟ್ ಕಾಲೇಜು ಬಳಿಯ ಶ್ರೀ ದುರ್ಗಾ ವುಡ್ ಇಂಡಸ್ಟ್ರೀಸ್‌ನಿಂದ ವಾಹನ ಜಾಥಾದೊಂದಿಗೆ ಚಂದ್ರ ಮಂಡಲ ರಥವನ್ನು ಉಜಿರೆಯ ದುರ್ಗಾ ನಿಲಯಕ್ಕೆ ತರಲಾಯಿತು. ಅಲ್ಲಿಂದ ಸಂಜೆ 4.30ಕ್ಕೆ ಭವ್ಯ ಮೆರವಣಿಗೆಯಲ್ಲಿ ಉಜಿರೆ ಜನಾರ್ದನ ದೇವಸ್ಥಾನಕ್ಕೆ ತರಲಾಗುವುದು. ಈ ಸಂದರ್ಭ ನಡೆಯುವ ಧರ್ಮ ಸಭೆಯಲ್ಲಿ ವಜ್ರದೇಹಿ ಮಠ ಗುರುಪುರದ ಶ್ರೀ ರಾಜಶೇಖರಾನಂದ ಸ್ವಾಮೀಜಿ ಆಶೀರ್ವಚನ ನೀಡಲಿದ್ದಾರೆ. ಶ್ರೀ ಜನಾರ್ದನ ದೇವಸ್ಥಾನದ ಅನುವಂಶಿಯ ಆಡಳಿತ ಮೊಕ್ತೇಸರ ಯು. ವಿಜಯರಾಘವ ಪಡ್ವೆಟ್ನಾಯ, ಶ್ರೀ ಕ್ಷೇತ್ರ ಧರ್ಮಸ್ಥಳದ ಡಿ. ಹರ್ಷೇಂದ್ರ ಕುಮಾರ್ ಇವರ ಗೌರವ ಉಪಸ್ಥಿತಿಯಲ್ಲಿ ಸಭೆ ನಡೆಯಲಿದೆ. ಜ.೨೦ರಂದು ಶುಕ್ರವಾರ ರಾತ್ರಿ ನೂತನ ಚಂದ್ರಮಂಡಲ ರಥದಲ್ಲಿ ದೇವರ ರಥೋತ್ಸವ ಕಾರ್ಯಕ್ರಮ ಜರುಗಲಿದೆ.

venur palanubhavigala guruthisuvike shibira copyವೇಣೂರು: ಫಲಾನುಭವಿಗಳ ಗುರುತಿಸುವಿಕೆ ಶಿಬಿರ 

ವೇಣೂರು: ವಿಕಲಚೇತನರಲ್ಲಿ ಶೇಕಡಾವಾರು ಅಂಗವೈಕಲ್ಯತೆಯನ್ನು ಗುರುತಿಸುವಲ್ಲಿ ವೈದ್ಯರುಗಳು ಎಡವದೆ ಜಾಗರೂಕರಾಗಬೇಕು. ಸರ್ಕಾರದ ಯೋಜನೆ, ಸವಲತ್ತುಗಳನ್ನು ಅವರಿಗೆ ತಲುಪುವಂತೆ ಸಹಕಾರಿಯಾಗುವ ಪ್ರಾಮಾಣಿಕ ಪ್ರಯತ್ನ ನಿಮ್ಮದಾಗಬೇಕು ಎಂದು ಬೆಳ್ತಂಗಡಿ ಶಾಸಕ ಕೆ. ವಸಂತ ಬಂಗೇರ ಹೇಳಿದರು.
ಅವರು ಜ. 15ರಂದು ವೇಣೂರು ಪ್ರಾಥಮಿಕ ಆರೋಗ್ಯ ಕೇಂದ್ರದ ಆವರಣದಲ್ಲಿ ಜರಗಿದ ವಿಕಲಚೇತನರ ಉಚಿತ ತಪಾಸಣೆ, ಸಾಧನ ಸಲಕರಣೆಗಳ ವಿತರಣೆಗಾಗಿ ಫಲಾನುಭವಿಗಳ ಗುರುತಿಸುವಿಕೆಯ ಶಿಬಿರದಲ್ಲಿ ಉದ್ಘಾಟನೆಯನ್ನು ನೆರವೇರಿಸಿ ಮಾತನಾಡಿದರು.
ಶಿಬಿರದಲ್ಲಿ ವಿಕಲಚೇತನ ಫಲಾನುಭವಿಗಳನ್ನು ಗುರುತಿಸಿ ಅವರಿಗೆ ಅವಶ್ಯವಿರುವ ಸಾಧನಾ ಸಲಕರಣೆಗಳನ್ನು ವಿತರಿಸಲಾಯಿತು. ವೇಣೂರು ಗ್ರಾ.ಪಂ. ಅಧ್ಯಕ್ಷೆ ಮೋಹಿನಿ ವಿ. ಶೆಟ್ಟಿ ಅಧ್ಯಕ್ಷತೆ ವಹಿಸಿದ್ದರು. ಅಳದಂಗಡಿ ಜಿ.ಪಂ. ಸದಸ್ಯ ಶೇಖರ ಕುಕ್ಕೇಡಿ, ಕುಕ್ಕೇಡಿ ಗ್ರಾ.ಪಂ. ಅಧ್ಯಕ್ಷೆ ತೇಜಾಕ್ಷಿ, ವೇಣೂರು ಗ್ರಾ.ಪಂ. ಉಪಾಧ್ಯಕ್ಷ ಅರುಣ್ ಕ್ರಾಸ್ತ, ಆರಂಬೋಡಿ ಗ್ರಾ.ಪಂ. ಉಪಾಧ್ಯಕ್ಷೆ ಆಶಾ ಎಸ್. ಶೆಟ್ಟಿ, ಪ್ರವೀಣ್ ಕುಮಾರ್ ಇಂದ್ರ, ವೇಣೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಆಡಳಿತಾಧಿಕಾರಿ ಜಯಕೀರ್ತಿ ಜೈನ್, ವೇಣೂರು ಲಯನ್ಸ್ ಕ್ಲಬ್ ಅಧ್ಯಕ್ಷ ವೆಂಕಟೇಶ್ ಎಂ.ಬಿ., ವೇಣೂರು ವರ್ತಕರ ಸಂಘದ ಕೋಶಾಧಿಕಾರಿ ಲುಕಾಸ್ ಕೊರೆಯಾ, ದ.ಕ. ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿ ಡಾ| ರಾಮಕೃಷ್ಣ, ಮಂಗಳೂರು ವೆನ್ಲಾಕ್ ಆಸ್ಪತ್ರೆಯ ವೈದ್ಯ ಡಾ| ಯುವಿ ಶೆಣೈ, ಮಂಗಳೂರು ಯೆನೆಪೋಯ ವೈದ್ಯಕೀಯ ಮಹಾವಿದ್ಯಾಲಯದ ಡಾ| ಸಂಸದ್ ಖಾನ್, ಬೆಳ್ತಂಗಡಿ ತಾಲೂಕು ಆರೋಗ್ಯಾಧಿಕಾರಿ ಡಾ| ಕಲಾಮಧು, ವೇಣೂರು ಪ್ರಾ.ಆ.ಕೇಂದ್ರದ ವೈದ್ಯಾಧಿಕಾರಿ ಡಾ| ಭವಿಷ್ಯಕೀರ್ತಿ, ವಿವಿಧ ಗ್ರಾ.ಪಂ. ಸದಸ್ಯರು, ಸಂಘ-ಸಂಸ್ಥೆಗಳ ಪದಾಧಿಕಾರಿಗಳು, ವೈದ್ಯಕೀಯ ಸಿಬ್ಬಂದಿ, ಆಶಾ ಕಾರ್ಯಕರ್ತೆಯರು ಉಪಸ್ಥಿತ ರಿದ್ದರು. ಬೆಳ್ತಂಗಡಿ ಕ್ಷೇತ್ರ ಆರೋಗ್ಯ ಶಿಕ್ಷಣಾಧಿಕಾರಿ ಅಮ್ಮಿ ಸ್ವಾಗತಿಸಿ ವೇಣೂರು ಪ್ರಾ.ಆ.ಕೇಂದ್ರದ ಸಿಬ್ಬಂದಿ ಸುರೇಶ್ ವಂದಿಸಿದರು. ಅನೂಪ್ ಜೆ. ಪಾಯಿಸ್ ಕಾರ್ಯಕ್ರಮ ನಿರೂಪಿಸಿದರು.

Melanthabettu sarveshwari pooje copyಮೇಲಂತಬೆಟ್ಟು : ಮೇಲಂತಬೆಟ್ಟು ಶ್ರೀ ದೇವಿ ಭಗವತಿ ಅಮ್ಮನವರ ದೇವಸ್ಥಾನದಲ್ಲಿ ಮಕರ ಸಂಕ್ರಾಂತಿಯ ಪ್ರಯುಕ್ತ ಶ್ರೀ ಸರ್ವೇಶ್ವರಿ ದೇವಿಯ ಪೂಜೆ ಕೇರಳ ಶಿವಗಿರಿ ಮಠ ವರ್ಕಳದ ಶ್ರೀ ಸತ್ಯಾನಂದ ತೀರ್ಥ ಸ್ವಾಮೀಜಿಯವರ ನೇತೃತ್ವದಲ್ಲಿ ಅಪಾರ ಸಂಖ್ಯೆಯ ಭಕ್ತರ ಉಪಸ್ಥಿತಿಯಲ್ಲಿ ವೈಭವ ಪೂರ್ಣವಾಗಿ ಜರುಗಿತು.
ಸಂಜೆ 5 ಗಂಟೆಯಿಂದ ಶ್ರೀ ದೇವಿ ಭಗವತಿ ಅಮ್ಮ ಭಜನಾ ಮಂಡಳಿ ಮತ್ತು ಶ್ರೀ ಕ್ಷೇ.ಧ.ಗ್ರಾ.ಯೋಜನೆ ಪ್ರಗತಿಬಂಧು ಸ್ವಸಹಾಯ ಸಂಘಗಳ ಒಕ್ಕೂಟದ ವತಿಯಿಂದ ವಿಶೇಷ ಭಜನಾ ಕಾರ್ಯಕ್ರಮ ನಡೆಯಿತು. ನಂತರ ಸ್ವಾಮೀಜಿರವರ ನೇತೃತ್ವದಲ್ಲಿ ಸರ್ವೇಶ್ವರಿ ದೇವಿಯ ಪೂಜೆ ಜರುಗಿತು. ಈ ಸಂದರ್ಭ ಆಶೀರ್ವಚನ ನೀಡಿದ ಸ್ವಾಮೀಜಿಯವರು ಸರ್ವೇಶ್ವರಿ ದೇವಿಯ ಪೂಜೆಯಿಂದ ನಮ್ಮ ಜೀವನದ ಕಷ್ಟ, ನಷ್ಟಗಳು ದೂರವಾಗಿ ನಮ್ಮಲ್ಲಿ ಆತ್ಮವಿಶ್ವಾಸ ಸಕಲ ಅಷ್ಟೈಶ್ವರ್ಯಗಳು ನೆಲೆಯಾಗುತ್ತದೆ. ಮನೆಯಲ್ಲಿ ಬೆಳೆ ಧವಸ ಧಾನ್ಯಾಧಿಗಳು ತುಂಬಿ ನಮ್ಮ ಸಂಸಾರದಲ್ಲಿ ಸುಖ, ನೆಮ್ಮದಿ ನೆಲೆಯಾಗುತ್ತದೆ. ವಿವಾಹ ತೊಂದರೆಗಳು, ಮನಃಕ್ಲೇಶ, ಧನವ್ಯಯ ಮೊದಲಾದ ಸಂಕಷ್ಟಗಳು ನಿವಾರಣೆಯಾಗುತ್ತದೆ ಎಂದು ಹೇಳಿ ಮನೆಯಲ್ಲಿ ಮಹಿಳೆಯರು ಆಚರಿಸಿಕೊಂಡು ಬರಬೇಕಾದ ನಿಯಮಗಳು, ಸಾಂಪ್ರಾದಾಯಗಳನ್ನು ವಿವರಿಸಿದರು. ಮಹಿಳೆಯವರು ಹೆಚ್ಚಿನ ಸಂಖ್ಯೆಯಲ್ಲಿ ಪೂಜಾ ಕಾರ್ಯದಲ್ಲಿ ಭಾಗವಹಿಸಿದರು.
ರಾತ್ರಿ ೮.೩೦ಕ್ಕೆ ವಿಶೇಷವಾಗಿ ರಂಗಪೂಜೆ, ಶ್ರೀ ಅಯ್ಯಪ್ಪ ಸ್ವಾಮಿ ಪೂಜೆ, ಸಂಕ್ರಾಂತಿ ಪೂಜೆ, ಶ್ರೀ ದೇವಿಗೆ ಹೂವಿನ ಪೂಜೆ ಮೊದಲಾದ ಧಾರ್ಮಿಕ ಕಾರ್ಯಕ್ರಮಗಳು ನಡೆಯಿತು. ರಘುನಾಥ ಶಾಂತಿ ಅರ್ಚಕರು ಬೆಳ್ತಂಗಡಿ, ಹೆಜಮಾಡಿ ಮಹೇಶ್ ಶಾಂತಿ ಅರ್ಚಕರು, ರಾಜೇಶ್ ಶಾಂತಿ ಇಂದಬೆಟ್ಟು, ಕ್ಷೇತ್ರದ ಪ್ರಧಾನ ಅರ್ಚಕ ಯಶವಂತ ಶಾಂತಿ ಪೂಜಾ ವಿಧಿಗಳನ್ನು ನೆರವೇರಿಸಿದರು. ದೇವಸ್ಥಾನದ ಆಡಳಿತ ಮೊಕ್ತೇಸರ ಯೋಗೀಶ್ ಪೂಜಾರಿ, ಪೂಜಾ ಸಮಿತಿ ಅಧ್ಯಕ್ಷ ರಮೇಶ್ ಬಂಗೇರ ಅಂಕಾಜೆ, ಭಜನಾ ಸಮಿತಿ ಅಧ್ಯಕ್ಷ ತಿಮ್ಮಪ್ಪ ಪೂಜಾರಿ ಮಾಪಾಲಾಡಿ, ಸಮಿತಿಯ ಪದಾಧಿಕಾರಿಗಳು, ಸದಸ್ಯರುಗಳು ಕಾರ್ಯಕ್ರಮದ ಯಶಸ್ವಿಗೆ ಸಹಕರಿಸಿದರು. ಊರ ಪರವೂರ ಭಕ್ತರು, ಸರಕಾರಿ ಇಲಾಖಾಧಿಕಾರಿಗಳು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿದ್ದರು.

puduvettu ambedkar bhavanashanku stapane copyಪುದುವೆಟ್ಟು : ಪುದುವೆಟ್ಟು ಗ್ರಾಮ ಪಂಚಾಯತ್‌ಗೆ ಒಳಪಟ್ಟ ಮಿಯ್ಯಾರು ಎಂಬಲ್ಲಿ 12 ಲಕ್ಷ ವೆಚ್ಚದ ಅಂಬೇಡ್ಕರ್ ಭವನದ ಕಾಮಗಾರಿ ಶಂಕು ಸ್ಥಾಪನೆಯನ್ನು ಜ.17 ರಂದು ಕರ್ನಾಟಕ ರಾಜ್ಯ ಕೈಗಾರಿಕ ನಿಗಮ ಮಂಡಳಿ ಅಧ್ಯಕ್ಷರು ಹಾಗೂ ಶಾಸಕ ವಸಂತ ಬಂಗೇರ ನೆರವೇರಿಸಿ ಪುದುವೆಟ್ಟಿನ ಮಿಯ್ಯಾರು ಎಂಬಲ್ಲಿ 25 ಲಕ್ಷ ವೆಚ್ಚದ ಕಾಮಗಾರಿಯ ನೀರಿನ ಟ್ಯಾಂಕ್ ನಳ್ಳಿ ನೀರಿನ ಉದ್ಘಾಟನೆ ಮಾಡಿ ಶ್ರೀ ವನದುರ್ಗಾ ದೇವಸ್ಥಾನ ಮಿಯ್ಯಾರು ಮತ್ತು ಎಸ್.ಎನ್.ಡಿ.ಪಿ ಮಿಯ್ಯಾರು ಇಲ್ಲಿಗೆ ಭೇಟಿ ನೀಡಿದರು.
ಶ್ರೀಮತಿ ನಮಿತಾ ಜಿ.ಪಂ ಸದಸ್ಯರು ಉಜಿರೆ ಕ್ಷೇತ್ರ, ಸೆಭಾಸ್ಟೀಯನ್ ವಿ.ಟಿ ತಾಲೂಕು ಪಂಚಾಯತ್ ಸದಸ್ಯರು ನೆರಿಯ ಕ್ಷೇತ್ರ, ಅಬ್ದುಲ್ ಗಫೂರ್ ಎ.ಪಿ.ಎಮ್.ಸಿ ಸದಸ್ಯರು ನೆರಿಯ ಕ್ಷೇತ್ರ, ಪುದುವೆಟ್ಟು ಗ್ರಾ.ಪಂ ಅಧ್ಯಕ್ಷೆ ಶ್ರೀಮತಿ ನೀಲಮ್ಮ, ಉಪಾಧ್ಯಕ್ಷ ಬೊಮ್ಮಣ್ಣ ಗೌಡ, ವಸಂತ ಬಿ.ಕೆ ಬೆಳ್ತಂಗಡಿ, ಪುದುವೆಟ್ಟು ಗ್ರಾಮ ಸಂಚಾಲಕ ಸೋಮ ಬಿ.ಡಿ, ಗ್ರಾ.ಪಂ ಸದಸ್ಯೆ ಶ್ರೀಮತಿಉಷಾ, ನೆರಿಯ ಗ್ರಾ.ಪಂ ಸದಸ್ಯ ಅಶ್ರಫ್, ಸ್ಥಳೀಯ ಮುಖಂಡರಾದ ಶಶಿಕುಮಾರ್, ಅಶೋಕನ್, ಕಿರಣ್ ಕುಮಾರ್, ವಸಂತ ಮಾಡ್ತಾರ್, ಸುಕುಮಾರ್ ಮೇರ್ಲ, ಗ್ರಾ.ಪಂ ಅಭಿವೃದ್ಧಿ ಅಧಿಕಾರಿ, ಸಿಬ್ಬಂದಿ ವರ್ಗ ಉಪಸ್ಥಿತರಿದ್ದರು. ಪುದುವೆಟ್ಟು ಗ್ರಾ.ಪಂ ಸದಸ್ಯ ರೋಯಿ ಜೋಸೆಫ್ ಸ್ವಾಗತಿಸಿ, ನಿರೂಪಿಸಿದರು.

gardady padagrahana1 copy

ಗರ್ಡಾಡಿ: ಗ್ರಾಮಾಭಿವೃದ್ಧಿ ಯೋಜನೆ ಒಕ್ಕೂಟಗಳ ಪದಗ್ರಹಣ

ಗರ್ಡಾಡಿ: ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾ. ಯೋಜನೆ ಗರ್ಡಾಡಿ, ಪ್ರಗತಿ ಬಂಧು ಸ್ವಸಹಾಯ ಸಂಘಗಳ ಒಕ್ಕೂಟ ಗರ್ಡಾಡಿ ಇವುಗಳ ಸಂಯುಕ್ತ ಆಶ್ರಯದಲ್ಲಿ ಗರ್ಡಾಡಿ ಪ್ರಗತಿಬಂಧು ಎ ಮತ್ತು ಬಿ ಒಕ್ಕೂಟದ ನೂತನ ಪದಾಧಿಕಾರಿಗಳ ಪದಗ್ರಹಣ ಸಮಾರಂಭವು ಗರ್ಡಾಡಿ ನಂದಿಬೆಟ್ಟ ಶ್ರೀ ನಂದಿಕೇಶ್ವರ ದೇವಸ್ಥಾನದ ಸಭಾಂಗಣದಲ್ಲಿ ಜರಗಿತು.
ನಂದಿಬೆಟ್ಟ ಶ್ರೀ ನಂದಿಕೇಶ್ವರ ದೇವಸ್ಥಾನದ ಆಡಳಿತ ಮೊಕ್ತೇಸರ ಜಯರಾಮ ಶೆಟ್ಟಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಶುಭ ಹಾರೈಸಿದರು. ಮುಖ್ಯ ಅತಿಥಿಗಳಾಗಿ ಉಪಸ್ಥಿತರಿದ್ದ ಬೆಂಗಳೂರು ಉಚ್ಛ ನ್ಯಾಯಾಲಯ ನ್ಯಾಯವಾದಿ ಹರೀಶ್ ಪೂಂಜ ಮಾತನಾಡಿ, ಧರ್ಮಸ್ಥಳ ಯೋಜನೆಯ ಕಾರ್ಯವೈಖರಿಯಿಂದ ಇಂದು ಮಹಿಳೆಯರ ಬದುಕು ಹಸನಾಗಿದೆ ಅಲ್ಲದೆ ಆರ್ಥಿಕವಾಗಿ ಸದೃಢರಾಗಿದ್ದಾರೆ. ಸಾಮಾಜಿಕವಾಗಿ ಗುರುತಿಸಿಕೊಳ್ಳುತ್ತಿರುವ ಮಹಿಳೆಯರು ಸ್ವಾಲಂಬನೆಯ ಬದುಕು ಕಂಡುಕೊಂಡಿದ್ದಾರೆ. ಪದಗ್ರಹಣ ಸಮಾರಂಭ ಇದಕ್ಕೆ ಮತ್ತಷ್ಟು ಪ್ರೇರಣೆಯಾಗಲಿದೆ ಎಂದರು.
ಗ್ರಾಮಾಭಿವೃದ್ಧಿ ಯೋಜನೆಯ ತಾಲೂಕು ಯೋಜನಾಧಿಕಾರಿ ರೂಪಾ ಜಿ. ಜೈನ್, ಕುಂಡದಬೆಟ್ಟು ಜುಮ್ಮಾ ಮಸೀದಿಯ ಧರ್ಮಗುರು ಕೆ.ಎಂ. ಹನೀಫ್ ಸಖಾಫಿ ಬಂಗೇರಕಟ್ಟೆ, ಒಕ್ಕೂಟಗಳ ವೇಣೂರು ವಲಯಧ್ಯಕ್ಷ ಅಶೋಕ್ ಕಜಿಪಟ್ಟ, ಗರ್ಡಾಡಿ ಪ್ರಗತಿ ಬಂಧು ಒಕ್ಕೂಟಗಳ ಅಧ್ಯಕ್ಷರುಗಳಾದ ಜಯರಾಮ ಶೆಟ್ಟಿ, ಉಸ್ಮಾನ್, ಆನಂದ ಶೆಟ್ಟಿ, ಪದ್ಮನಾಭ ಶೆಟ್ಟಿ ಉಪಸ್ಥಿತರಿದ್ದರು.
ಅತ್ಯುತ್ತಮವಾಗಿ ಕಾರ್ಯನಿರ್ವಹಿಸಿದ ಶ್ವೇತಾಶ್ರೀ ಸ್ವಸಹಾಯ ಸಂಘ ಮತ್ತು ಪಾರೊಟ್ಟು ಪ್ರಗತಿ ಬಂಧು ತಂಡವನ್ನು ಗೌರವಿಸಲಾಯಿತು. ಉತ್ತಮ ಕಾರ್ಯದಕ್ಷತೆಗಾಗಿ ಸೇವಾಪ್ರತಿನಿಧಿ ಹೇಮಲತಾ ಅವರನ್ನು ಸ್ಮರಣಿಕೆ ನೀಡಿ ಅಭಿನಂದಿಸಲಾಯಿತು.
ಗರ್ಡಾಡಿ ಸೇವಾಪ್ರತಿನಿಧಿ ಹೇಮಲತಾ ವರದಿ ವಾಚಿಸಿ ಒಕ್ಕೂಟದ ಕಾರ್ಯದರ್ಶಿ ಪ್ರೇಮಾ ಸ್ವಾಗತಿಸಿ ಕೃಷ್ಣಪ್ಪ ವಂದಿಸಿದರು. ವೇಣೂರು ವಲಯ ಮೇಲ್ವಿಚಾರಕ ಶ್ರೀನಿವಾಸ ಗೌಡ ಕಾರ್ಯಕ್ರಮ ನಿರ್ವಹಿಸಿದರು. ಗರ್ಡಾಡಿ ಸ್ವಸಹಾಯ ಸಂಘಗಳ ಸದಸ್ಯರು ಹಾಗೂ ಒಕ್ಕೂಟದ ಪದಾಧಿಕಾರಿಗಳು ಸಹಕರಿಸಿದರು.

  ಗುರುವಾಯನಕೆರೆ : ದಕ್ಷಿಣ ಕನ್ನಡ ಜಿಲ್ಲೆಯ ಪ್ರತಿಷ್ಠಿತ ನಿಟ್ಟೆ ಶಿಕ್ಷಣ ಸಂಸ್ಥೆ ಕೊಡಮಾಡುತ್ತಿರುವ ದಿ|| ನಿಟ್ಟೆ ಶಂಕರ ಅಡ್ಯಂತಾಯ ಸ್ಮಾರಕ ಅತ್ಯುತ್ತಮ ಶಾಲಾ ಪ್ರಶಸ್ತಿಗೆ ಸರಕಾರಿ ಪ್ರೌಢ ಶಾಲೆ, ಗುರುವಾಯನಕೆರೆಗೆ ಆಯ್ಕೆಯಾಗಿದ್ದು, ಪ್ರಶಸ್ತಿಯೊಂದಿಗೆ 10 ಲಕ್ಷ ರೂ. ನಗದು ಪುರಸ್ಕಾರವನ್ನು ನೀಡಲಾಗುತ್ತಿದೆ.
ಕಳೆದ 5 ವರ್ಷಗಳಿಂದ ಎಸ್.ಎಸ್.ಎಲ್.ಸಿ. ವಾರ್ಷಿಕ ಪರೀಕ್ಷೆಯಲ್ಲಿ 100% ಫಲಿತಾಂಶವನ್ನು ದಾಖಲಿಸುತ್ತಿರುವ ನಮ್ಮೂರ ಪ್ರೌಢ ಶಾಲೆ ಗುರುವಾಯನಕೆರೆ, ಅತ್ಯುತ್ತಮ ಗುಣಮಟ್ಟದ ಶಿಕ್ಷಣ, ಶಿಸ್ತು, ಕಲಿಕಾ ಶ್ರದ್ಧೆಯುಳ್ಳ ತಾಲೂಕಿನ ಉತ್ತಮ ಶಿಕ್ಷಣ ಸಂಸ್ಥೆಗಳಲ್ಲಿ ಒಂದಾಗಿದೆ. ಕಳೆದ ವರ್ಷದ ಎಸ್.ಎಸ್.ಎಲ್.ಸಿ. ವಾರ್ಷಿಕ ಪರೀಕ್ಷೆಯಲ್ಲಿ ಹಾಜರಾದ 82 ವಿದ್ಯಾರ್ಥಿಗಳಲ್ಲಿ 81 ವಿದ್ಯಾರ್ಥಿಗಳು ಪ್ರಥಮ ದರ್ಜೆ ಅಂಕಗಳೊಂದಿಗೆ ಉತ್ತೀರ್ಣರಾಗಿದ್ದು ಫಲಿತಾಂಶದ ಗುಣಮಟ್ಟದ ಅಂಕಿ ಅಂಶಗಳಲ್ಲಿ ದಕ್ಷಿಣ ಕನ್ನಡದ ಸರಕಾರಿ ಪ್ರೌಢ ಶಾಲೆಗಳಲ್ಲಿಯೇ ಅತ್ಯುತ್ತಮ ಗುಣಮಟ್ಟದ ಫಲಿತಾಂಶ ಪಡೆದ ಶಾಲೆಯೆಂಬ ಹೆಗ್ಗಳಿಕೆಗೆ ಪಾತ್ರವಾಗಿದೆ. ಶಿಕ್ಷಕರ ನಿಷ್ಠೆ, ಕಾರ್ಯಶ್ರದ್ಧೆ, ವಿದ್ಯಾರ್ಥಿಗಳ ಶಿಸ್ತು, ಚಟುವಟಿಕೆ ಆಧಾರಿತ ಕಲಿಕೆ ಹಾಗೂ ಚಿತ್ರಕಲಾ ಅಧ್ಯಾಪಕ ವಿ.ಕೆ. ವಿಟ್ಲ ಅವರ ಕಲಾ ಕುಂಚದಲ್ಲಿ ಅರಳಿರುವ ಶಾಲೆಯ ವರ್ಣಮಯ ಚಿತ್ರಗಳುಳ್ಳ ಗೋಡೆಗಳು ಹಾಗೂ ಸ್ವಚ್ಛ, ನಿರ್ಮಲ ವಠಾರ ಎಲ್ಲರ ಮನಸೂರೆಗೊಳ್ಳುತ್ತದೆ.
ಪ್ರಕೃತ 240 ವಿದ್ಯಾರ್ಥಿಗಳಿರುವ ಈ ಶಾಲೆಯಲ್ಲಿ ಮುಖ್ಯೋಪಾಧ್ಯಾಯರ ಹುದ್ದೆ, ಗಣಿತ ಶಿಕ್ಷಕರು, ದೈಹಿಕ ಶಿಕ್ಷಣ ಶಿಕ್ಷಕರ ಕೊರತೆಯೊಂದಿಗೆ ದ್ವಿತೀಯ ದರ್ಜೆ ಸಹಾಯಕರ ಹುದ್ದೆಗಳು ಖಾಲಿ ಇದೆ. ಅದಾಗ್ಯೂ ಶಾಲೆಯಲ್ಲಿ ಭರಪೂರ ಶಿಕ್ಷಣೋತ್ಸಾಹ, ಚಟುವಟಿಕೆ, ಸಮೃದ್ಧ ವಾತಾವರಣ ಇದೆ. ಈಗಾಗಲೇ ಈ ಶಾಲೆಯು ಹಲವಾರು ಪ್ರಶಸ್ತಿ ಅಭಿನಂದನೆಗಳಿಗೆ ಭಾಜನವಾಗಿದೆ. ಶಾಲಾಭಿವೃದ್ಧಿ ಸಮಿತಿಯ ಅಧ್ಯಕ್ಷರೂ ಆಗಿರುವ ಶಾಸಕ ವಸಂತ ಬಂಗೇರ, ಕುವೆಟ್ಟು ಕ್ಷೇತ್ರ ಜಿಲ್ಲಾ ಪಂಚಾಯತ್ ಸದಸ್ಯೆ ಶ್ರೀಮತಿ ಮಮತಾ ಎಂ. ಶೆಟ್ಟಿ, ತಾಲೂಕು ಪಂಚಾಯತ್ ಸದಸ್ಯ ಗೋಪಿನಾಥ ನಾಯಕ್ ಹಾಗೂ ಕುವೆಟ್ಟು ಗ್ರಾಮ ಪಂಚಾಯತ್ ಅಧ್ಯಕ್ಷ ಅಶೋಕ್ ಕೋಟ್ಯಾನ್, ಎಸ್‌ಡಿಎಂಸಿ ವೃಂದ, ಶಾಲಾಭಿಮಾನಿಗಳು ಹಾಗೂ ಉದಾರದಾನಿಗಳಾಗಿರುವ ಅಲ್ಫೋನ್ಸ್ ಫ್ರಾಂಕೊ ಮತ್ತು ಆನಂದ ಶೆಟ್ಟಿ ಐಸಿರಿ ಅವರ ನೆರವನ್ನು ಶಾಲಾ ಶಿಕ್ಷಕವೃಂದ ನೆನೆದುಕೊಳ್ಳುತ್ತದೆ. ಅಲ್ಲದೆ ಶಾಸಕರು ಪ್ರತೀವರ್ಷ ಅಭಿನಂದನಾ ಕಾರ್ಯಕ್ರಮ ಏರ್ಪಡಿಸಿ ಶಿಕ್ಷಕರನ್ನು ಮತ್ತು ಮಕ್ಕಳನ್ನು ಇನ್ನಷ್ಟು ಪ್ರೋತ್ಸಾಹಿಸುವ ಕಾರ್ಯ ಮಾಡುತ್ತಾ ಬರುತ್ತಿದ್ದಾರೆ.
ಶಾಶ್ವತ ಕಾಮಗಾರಿಗೆ ಅನುದಾನ ಬಳಕೆಗೆ ನಿರ್ಧಾರ:
ಇದೀಗ ಪ್ರಶಸ್ತಿಯೊಂದಿಗೆ ಶಾಲೆಗೆ ದೊರೆತಿರುವ ರೂ.10 ಲಕ್ಷ ಅನುದಾನವನ್ನು ಸಮುದಾಯದ ಸಹಭಾಗಿತ್ವದಲ್ಲಿ ಸುಸಜ್ಜಿತ ಸಭಾಂಗಣ, ಶಾಲಾ ಕ್ರೀಡಾಂಗಣ ವಿಸ್ತರಣೆ, ಆಧುನಿಕ ತಂತ್ರಜ್ಞಾನ ಅಳವಡಿಸಿ ಇ-ಇಜಟಿ ತರಗತಿ, ಶುದ್ಧ ಕುಡಿಯುವ ನೀರಿನ ಸೌಲಭ್ಯವನ್ನು ನೀಡುವ ಯೋಜನೆಗಳನ್ನು ಹಮ್ಮಿಕೊಂಡು ವಿನಿಯೋಗಿಸುವ ಕ್ರಮಗಳನ್ನು ಮಂಡಳಿ ಕೈಗೊಳ್ಳಲು ತೀರ್ಮಾನ ಮಾಡಿದೆ.

bus

buss

busss

ಬೆಳ್ತಂಗಡಿ : ಬೆಳ್ತಂಗಡಿ ಬಸ್ ನಿಲ್ದಾಣದ ಬಳಿ ಸರಕಾರಿ ಬಸ್ ಬೈಕ್‌ಗೆ ಹಿಂಬದಿಯಿಂದ ಡಿಕ್ಕಿಯಾದ ಘಟನೆ ಇಂದು ಬೆಳಗ್ಗೆ ನಡೆದಿದೆ. ಅಪಘಾತದಿಂದಾಗಿ ಬೈಕ್ ಬಸ್‌ನಡಿಯಲ್ಲಿ ಸಿಲುಕಿಕೊಂಡಿದ್ದು, ಬೈಕ್ ಪ್ರಯಾಣಿಕ ಬೈಕ್‌ನಿಂದ ಜಿಗಿದು ಹೆಚ್ಚಿನ ಅಪಾಯದಿಂದ ಪಾರಾಗಿದ್ದಾರೆ.

ನಮ್ಮ ಬಗ್ಗೆ

ಮೊದಲಿಗೆ ಕೇವಲ ಒಂದು ಹಾಳೆಯಲ್ಲಿ ಪ್ರಕಟವಾಗುತ್ತಿದ್ದ ಬೆಳ್ತಂಗಡಿ ತಾಲೂಕಿನ “ಸುದ್ದಿ ಬಿಡುಗಡೆ “ಪತ್ರಿಕೆ ಇಂದು ಪ್ರತಿದಿನ  22
.. ಮುಂದೆ ಓದಿ

ಸಲಹೆ- ಸೂಚನೆ

ನಿಮ್ಮ ಸಲಹೆ ಸೂಚನೆಗಳಿಗೆ ಹಾರ್ದಿಕ ಸ್ವಾಗತ

ಇಲ್ಲಿ ಕ್ಲಿಕ್ಕಿಸಿ

Copyright © 2017 Suddinews.com . All Rights Reserved.
^ Back to Top