Wed 15 Feb 2017, 11:13PM

ಹೆಚ್ಚಿನ ಸುದ್ದಿಗಳು

5

55

ಬೆಳ್ತಂಗಡಿ: ದ.ಕ ಜಿಲ್ಲಾ ಸಾರ್ವಜನಿಕ ಶಿಕ್ಷಣ ಇಲಾಖೆ, ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಚೇರಿ ಬೆಳ್ತಂಗಡಿ, ಶಿಶು ಮತ್ತು ಮಹಿಳಾ ಅಭಿವೃದ್ಧಿ ಇಲಾಖೆ ಬೆಳ್ತಂಗಡಿ, ಜಮ್ಯೀಯತುಲ್ ಫಲಾಹ್ ಬೆಳ್ತಂಗಡಿ ಘಟಕ ಇದರ ಸಹಯೋಗದಲ್ಲಿ ಎಸ್.ಎಸ್.ಎಲ್.ಸಿ ವಿದ್ಯಾರ್ಥಿಗಳಿಗೆ ಪ್ರೇರಣಾ ಶಿಬಿರ ಹಾಗೂ ಪೋಷಕರೊಂದಿಗೆ ಸಂವಾದ ಕಾರ್ಯಕ್ರಮ ಫೆ.15ರಂದು ಇಲ್ಲಿಯ ಶ್ರೀ ಧ.ಮಂ ಸಭಾಭವನದಲ್ಲಿ ಜರುಗಿತು.
ಬೆಳ್ತಂಗಡಿ ಕ್ಷೇತ್ರದ ಶಾಸಕ ಕೆ.ವಸಂತ ಬಂಗೇರ ಅವರು ಶಿಬಿರವನ್ನು ದೀಪ ಬೆಳಗಿಸಿ ಉದ್ಘಾಟಿಸಿ ಮಾತನಾಡಿ, ಈ ಬಾರಿ ಎಸ್ಸೆಸ್ಸೆಲ್ಸಿಯಲ್ಲಿ ಪರೀಕ್ಷೆಗೆ ಹಾಜರಾದ ತಾಲೂಕಿನ ಎಲ್ಲಾ ವಿದ್ಯಾರ್ಥಿಗಳು ಪಾಸಾಗಿ ಉತ್ತಮ ಫಲಿತಾಂಶ ಬರಬೇಕು ಎಂಬ ಉದ್ದೇಶದಿಂದ ಈ ಶಿಬಿರ ಹಮ್ಮಿಕೊಳ್ಳಲಾಗಿದೆ. ವಿದ್ಯಾರ್ಥಿಗಳು ಸತತ ಶ್ರಮವಹಿಸಿ ಉತ್ತಮ ಸಾಧನೆ ಮಾಡಬೇಕು ಎಂದರು. ಪೋಷಕರು ವಿದ್ಯಾರ್ಥಿಗಳಿಂದ ಮನೆ ಕೆಲಸವನ್ನು ಮಾಡಿದರೆ ಅವರಿಗೆ ಓದಲು ಸಮಯ ಸಿಗುವುದಿಲ್ಲ. ಆದ್ದರಿಂದ ವಿದ್ಯಾರ್ಥಿಗಳಿಂದ ಯಾವುದೇ ಕೆಲಸವನ್ನು ಮಾಡಿಸದೇ ಅವರಿಗೆ ಓದಲು ಹೆಚ್ಚು ಸಮಯ ಸಿಗುವಂತೆ ಮಾಡಬೇಕು ಎಂದು ತಿಳಿಸಿದರು.
ಇಂದು ಸರಕಾರಿ ಶಾಲೆಯಲ್ಲಿ ಉತ್ತಮ ಶಿಕ್ಷಣ ದೊರೆಯುತ್ತಿದೆ. ಎಲ್ಲಾ ಶಿಕ್ಷಕರು ಉತ್ತಮವಾಗಿ ಕೆಲಸ ಮಾಡುತ್ತಿದ್ದಾರೆ. ವಿದ್ಯಾರ್ಥಿಗಳ ಸಾಧನೆ, ಅಧ್ಯಾಪಕರ ಪ್ರಾಮಾಣಿಕ ಪ್ರಯತ್ನ ಜೊತೆಗೆ ಹೆತ್ತವರ ಸಹಕಾರ ಇದ್ದರೆ ಶಾಲೆಗೆ ಉತ್ತಮ ಫಲಿತಾಂಶ ಬರುತ್ತದೆ ಎಂಬುದಕ್ಕೆ ಗುರುವಾಯನಕೆರೆ ಪ್ರೌಢ ಶಾಲೆ ಉದಾರಣೆಯಾಗಿದೆ. ಈ ವರ್ಷ 6ನೇ ಬಾರಿ ಶೇ 100 ಫಲಿತಾಂಶ ಪಡೆಯಲು ಈ ಶಾಲೆಯವರು ಸತತ ಪ್ರಯತ್ನಗಳನ್ನು ಮಾಡುತ್ತಿದ್ದಾರೆ ಎಂದು ತಿಳಿಸಿದರು.
ಜಿಲ್ಲಾ ವಿದ್ಯಾಂಗ ಉಪನಿರ್ದೇಶಕ ವಾಲ್ಟರ್ ಡಿ’ಮೊಲ್ಲೋ ಮಾತನಾಡಿ ದ.ಕ ಜಿಲ್ಲೆಯಲ್ಲಿ ಬೆಳ್ತಂಗಡಿ ತಾಲೂಕು ಶಿಕ್ಷಣ ಕ್ಷೇತ್ರದಲ್ಲಿ ಮುಂಚೂಣಿಯಲ್ಲಿದ್ದು, ಇದಕ್ಕೆ ಇಲ್ಲಿಯ ಮುಖ್ಯ ಶಿಕ್ಷಕರು ಹಾಗೂ ಶಿಕ್ಷಕರು, ಶಿಕ್ಷಕರ ಸಂಘಟನೆಗಳು ಕಾರಣರಾಗಿದ್ದಾರೆ ಎಂದರು. ಎಸ್ಸೆಸ್ಸೆಲ್ಸಿ ಪರೀಕ್ಷೆಗೆ ಇನ್ನೂ ಕೇವಲ 42 ದಿನಗಳು ಮಾತ್ರ ಬಾಕಿಯಿದ್ದು, ವಿದ್ಯಾರ್ಥಿಗಳು ಓದಿನ ಕಡೆಗೆ ಹೆಚ್ಚು ಗಮನ ಹರಿಸಿ ಉತ್ತಮ ಫಲಿತಾಂಶವನ್ನು ಪಡೆಯಲು ಶ್ರಮವಹಿಸುವಂತೆ ಕರೆ ನೀಡಿದರು.
ದ.ಕ ಜಿ.ಪಂ ಶಿಕ್ಷಣ ಮತ್ತು ಆರೋಗ್ಯ ಸ್ಥಾಯಿ ಸಮಿತಿ ಅಧ್ಯಕ್ಷ ಶಾಹುಲ್ ಹಮೀದ್ ಪ್ರಾಸ್ತವಿಕವಾಗಿ ಮಾತನಾಡಿ ಶಿಬಿರದ ಉದ್ದೇಶಗಳನ್ನು ವಿವರಿಸಿದರು. ನ.ಪಂ ಅಧ್ಯಕ್ಷ ಮುಗುಳಿ ನಾರಾಯಣ ರಾವ್, ಜಿ.ಪಂ ಸದಸ್ಯೆ ಮಮತಾ ಎಂ. ಶೆಟ್ಟಿ, ತಾ.ಪಂ ಸ್ಥಾಯಿ ಸಮಿತಿ ಅಧ್ಯಕ್ಷ ಸುಧೀರ್ ಆರ್.ಸುವರ್ಣ, ಜಮ್ಯೀಯತುಲ್ ಫಲಾಹ್ ತಾಲೂಕು ಅಧ್ಯಕ್ಷ ಅಬ್ಬೋನು ಮದ್ದಡ್ಕ, ಪ್ರಧಾನ ಕಾರ್ಯದರ್ಶಿ ಹಾಜಿ ಅಬ್ದುಲ್‌ಲತೀಫ್ ಸಾಹೇಬ್, ಮಾಜಿ ಅಧ್ಯಕ್ಷ ಉಮ್ಮರ್‌ಕುಂಞ ನಾಡ್ಜೆ, ಜಿ.ಪಂ ಮಾಜಿ ಸದಸ್ಯ ರಾಜಶೇಖರ ಅಜ್ರಿ, ತಾ.ಪಂ ಸದಸ್ಯರಾದ ಗೋಪಿನಾಥ ನಾಯಕ್, ಜಯರಾಮ, ಜಮ್ಯೀಯತುಲ್ ಫಲಾಹ್‌ನ ಜಿಲ್ಲಾ ಕಾರ್ಯದರ್ಶಿ ಜಮೀರ್‌ಷಾ, ತಾಲೂಕು ಸದಸ್ಯರಾದ ಕಾಸಿಂ ಪದ್ಮುಂಜ, ಅಹಮ್ಮದ್ ಉಜಿರೆ, ಎಸ್.ಎಂ ಕೋಯ, ಶಿಶುಅಭಿವೃದ್ಧಿ ಅಧಿಕಾರಿ ಸರಸ್ವತಿ, ಪ್ರೌಢ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ರಾಜಗುರು ಹೆಬ್ಬಾರ್, ಶಿಕ್ಷಣ ಸಮನ್ವಯಾಧಿಕಾರಿ ಗಣೇಶ್ ಉಪಸ್ಥಿತರಿದ್ದರು.
ಜಿಲ್ಲಾ ಪ್ರಶಸ್ತಿ ಪಡೆದ, ಗಣಿತ ಲೋಕದ ರೂವಾರಿ ನಡ ಪ್ರೌಢ ಶಾಲಾ ಶಿಕ್ಷಕ ಯಾಕೂಬ್ ಇವರಿಗೆ ಸನ್ಮಾನ ಹಾಗೂ ವಿಕಲಾಂಗ ನಡ ಶಾಲೆಯ ವಿದ್ಯಾರ್ಥಿ ವಸೀಂ ಅಕ್ರಮ್‌ಗೆ ಜಮ್ಯೀಯತುಲ್ ಫಲಾಹ್ ವತಿಯಿಂದ ನೀಡಿದ ತ್ರಿಚಕ್ರ ವಾಹನದ ಕೀಯನ್ನು ಶಾಸಕರು ಹಸ್ತಾಂತರಿಸಿದರು. ಹಾಜಿ ಅಬ್ದುಲ್ ಲತೀಫ್ ಸಾಹೇಬ್ ಕುರಾನ್ ಪಠಿಸಿದರು. ವಾಣಿ ಪ್ರೌಢ ಶಾಲಾ ವಿದ್ಯಾರ್ಥಿಗಳ ಪ್ರಾರ್ಥನೆ ಬಳಿಕ ಕ್ಷೇತ್ರ ಶಿಕ್ಷಣಾಧಿಕಾರಿ ತಾರಾಕೇಸರಿ ಸ್ವಾಗತಿಸಿದರು. ಶಿಕ್ಷಣ ಸಂಯೋಜಕರಾದ ಸುಭಾಶ್ ಜಾದವ್ ಕಾರ್ಯಕ್ರಮ ನಿರೂಪಿಸಿ, ರಮೇಶ್ ಕೆ.ವಂದಿಸಿದರು. ಶಿಬಿರದಲ್ಲಿ ಸುಮಾರು ೬೦೦ಕ್ಕೂ ಹೆಚ್ಚು ವಿದ್ಯಾರ್ಥಿಗಳು ಷೋಷಕರ ಜೊತೆ ಭಾಗವಹಿಸಿದ್ದರು.

ashwath hegde copy ಬಳಂಜ : ಬಳಂಜ ಗ್ರಾಮದ ಯುವ ಉದ್ಯಮಿ ಅಶ್ವಥ್ ಹೆಗ್ಡೆಯವರು ಅಮೇರಿಕಾದ ಪ್ರಸಿದ್ಧ ನಿಯತಕಾಲಿಕದವರು ಪ್ರಕಟಿಸಿದ ಫೋರ್ಬ್ಸ್ ನಿಯತಕಾರಿಕದವರು ಪ್ರಕಟಿಸಿದ ಯುವ ಸಾಧಕ ಪಟ್ಟಿಯಲ್ಲಿ ಸ್ಥಾನ ಪಡೆದಿದ್ದಾರೆ. ಅನಿವಾಸಿ ಭಾರತೀಯ ಉದ್ಯಮಿಯಾಗಿರುವ ಇವರು ಎನ್ವಿಗ್ರೀನ್ ಬಯೋಟೆಕ್ ಸಂಸ್ಥೆಯ ಮೂಲಕ ಪ್ರಸ್ತುತ ಪಡಿಸಿದ ಪ್ಲಾಸ್ಟಿಕ್ ಮುಕ್ತ ಪ್ಯಾಕೇಜಿಂಗ್ ತಂತ್ರಜ್ಞಾನಗಳಿಗೆ ಈ ಪ್ರಶಸ್ತಿಯ ಗರಿಮೆ ಲಭಿಸಿದೆ.
ಪ್ರತಿವರ್ಷ ಫೋರ್ಬ್ಸ್ ಇಂಡಿಯಾ ಕೊಡಮಾಡುವ ಫೋರ್ಬ್ಸ್ ಇಂಡಿಯಾ 30 ಅಂಡರ್ 30 ಸಾಧಕರಲ್ಲಿ ಅಶ್ವಥ್ ಹೆಗ್ಡೆ ಒಬ್ಬರಾಗಿದ್ದು ಈ ಗೌರವವನ್ನು ಪಡೆದಿದ್ದಾರೆ. ಪ್ರಶಸ್ತಿಯನ್ನು ಗ್ರೀನ್ ಟೆಕ್ನಾಲಜಿ ವಿಭಾಗದಲ್ಲಿ ಪಡೆದ ಅತೀ ಕಿರಿಯ ಸಾಧಕ ಮತ್ತು ಪ್ರಪ್ರಥಮ ಬಾರಿಗೆ ಕರ್ನಾಟಕದ ಉದ್ಯಮಿ ಈ ಹಿರಿಮೆಗೆ ಭಾಜನರಾಗಿದ್ದಾರೆ. ಎನ್ವಿಗ್ರೀನ್ ತಂತ್ರಜ್ಞಾನವನ್ನು ಕೇಂದ್ರ ಸರ್ಕಾರದ ಸಂಸ್ಥೆ (ಸೆಂಟ್ರಲ್ ಇನ್ಸ್ಟಿಟ್ಯೂಟ್ ಆ ಪ್ಲಾಸ್ಟಿಕ್ ಇಂಜಿನಿಯರಿಂಗ್ ಟೆಕ್ನಾಲಜಿ) 100% ಪ್ಲಾಸ್ಟಿಕ್ ಮುಕ್ತವಾಗಿದೆ ಎಂದು ಪ್ರಮಾಣಿಕರಿಸಿದೆ.
ಇವರು ಬಳಂಜ ಗ್ರಾಮದ ಅರುಣ ಹೆಗ್ಡೆ ಮತ್ತು ಸುನಂದಾ ಹೆಗ್ಡೆಯವರ ಪುತ್ರರಾಗಿರುವ ಇವರು ಬೆಳ್ತಂಗಡಿಯ ಸಂತ ತೆರೆಸಾ ಪ್ರೌಢ ಶಾಲೆಯ ಹಳೆ ವಿದ್ಯಾರ್ಥಿ.

JC PHT

jc

jcc

jccc

jcccc

ಬೆಳ್ತಂಗಡಿ : ಕಳೆದ 39 ವರ್ಷಗಳಿಂದ ಹಲವಾರು ಸಮಾಜಮುಖಿ ಕೆಲಸಕಾರ್ಯಗಳನ್ನು ಹಮ್ಮಿಕೊಂಡು ಜನರ-ಪ್ರೀತಿ ವಿಶ್ವಾಸ ಗಳಿಸಿರುವ ಜೇಸಿಐ ಬೆಳ್ತಂಗಡಿ ಮಂಜುಶ್ರೀ ವತಿಯಿಂದ ಫೆ.14ರಂದು ಸರಕಾರಿ ಆಸ್ಪತ್ರೆ ಬೆಳ್ತಂಗಡಿಗೆ ತೆರಳಿ ರೋಗಿಗಳಿಗೆ ಸಾಂತ್ವನ ಹೇಳುವ ಮುಖೇನ ಹಣ್ಣು ಹಂಪಲು ಹಾಗೂ ಏರ್‌ಟೆಲ್ ಕಂಪೆನಿಯಿಂದ ಕೊಡಲ್ಪಡುವ ಟಾರ್ಚ್‌ನ್ನು ವಿತರಿಸಲಾಯಿತು.
ಈ ಸಂದರ್ಭ ಆಸ್ಪತ್ರೆಯ ಸರ್ಜನ್ ಡಾ| ರಾಜೇಶ್, ಜೇಸಿಐ ಬೆಳ್ತಂಗಡಿ ಮಂಜುಶ್ರೀಯ ಅಧ್ಯಕ್ಷ ಸಂತೋಷ್.ಪಿ ಕೋಟ್ಯಾನ್ ಬಳಂಜ, ನಿಕಟಪೂರ್ವಾಧ್ಯಕ್ಷ ವಸಂತ ಶೆಟ್ಟಿ, ವಲಯಾಧಿಕಾರಿ ಚಿದಾನಂದ ಇಡ್ಯ, ಜೇಸಿ ಪೂರ್ವಾಧ್ಯಕ್ಷ, ಸ್ಥಾಯಿ ಸಮಿತಿ ಅಧ್ಯಕ್ಷರಾಗಿರುವ ಸಂತೋಷ್ ಕುಮಾರ್ ಜೈನ್, ಅಶೋಕ್ ಕುಮಾರ್ ಬಿ.ಪಿ, ಶ್ರೀನಾಥ್ ಕೆ.ಎಂ, ನಾರಾಯಣ ಶೆಟ್ಟಿ, ಕಾರ್ಯದರ್ಶಿ ರಂಜಿತ್ ಹೆಚ್.ಡಿ, ಕೋಶಾಧಿಕಾರಿ ವಿಶಾಲ್ ಅಗಸ್ಟಿನ್, ಉಪಾಧ್ಯಕ್ಷರಾಗಿ ಗಣೇಶ್ ಶಿರ್ಲಾಲು, ಅಭಿನಂದನ್ ಹರೀಶ್ ಕುಮಾರ್, ಸ್ವರೂಪ್, ಪ್ರಶಾಂತ್ ಲಾಯಿಲ, ಕಿರಣ್ ಕುಮಾರ್ ಶೆಟ್ಟಿ, ದಾಮೋದರ್, ಯುವ ಜೇಸಿ ಅಧ್ಯಕ್ಷ ಮನೋಜ್, ಜೊತೆ ಕಾರ್ಯದರ್ಶಿ ಪ್ರೀತಂ ಶೆಟ್ಟಿ, ಗುರುರಾಜ್, ಶಿವಪ್ರಸಾದ್, ಜಿತೇಶ್ ಕುಮಾರ್ ಹಾಗೂ ಆಸ್ಪತ್ರೆಯ ಸಿಬ್ಬಂದಿ ವರ್ಗದವರು ಉಪಸ್ಥಿತರಿದ್ದರು.

sd

skdrdpಧರ್ಮಸ್ಥಳ :  ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಮತ್ತು ಬೆಳ್ತಂಗಡಿ ತಾಲೂಕು ವಲಯ ಒಕ್ಕೂಟಗಳು ಇವರ ಸಹಭಾಗಿತ್ವದಲ್ಲಿ ಬೆಳ್ತಂಗಡಿ ತಾಲೂಕು ಧರ್ಮಸ್ಥಳ ವಲಯ ಒಕ್ಕೂಟಗಳ ಪದಗ್ರಹಣ ಸಮಾರಂಭ ಮತ್ತು ಎಸ್.ಕೆ.ಡಿ.ಆರ್.ಡಿ.ಪಿ-ಎಸ್.ಎಚ್.ಜಿ ಆಪ್ ಬಿಡುಗಡೆಯು ಇಂದು (ಫೆ.15) ಧರ್ಮಸ್ಥಳದ ಅಮೃತವರ್ಷಿಣಿ ಸಭಾಂಗಣದಲ್ಲಿ ನಡೆಯಿತು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಶ್ರೀ ಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿ ಡಾ| ಡಿ.ವೀರೇಂದ್ರ ಹೆಗ್ಗಡೆಯವರು ವಹಿಸಿದ್ದರು. ಮುಂಬೈ ನಬಾರ್ಡ್ ಅಧ್ಯಕ್ಷ ಡಾ| ಹರ್ಷಕುಮಾರ್ ಭಾನ್ವಾಲಾ ಎಸ್.ಕೆ.ಡಿ.ಆರ್.ಡಿ.ಪಿ-ಎಸ್.ಎಚ್.ಜಿ ಆಪ್ ಬಿಡುಗಡೆ ಮಾಡಿದರು. ಮಂಗಳೂರು ಕಾರ್ಪೋರೇಷನ್ ಬ್ಯಾಂಕ್ ಕಾರ್ಯನಿರ್ವಾಹಕ ನಿರ್ದೇಶಕರಾದ ಜಿ.ಎಂ ಭಗತ್ ಟ್ಯಾಬ್ ಫೋನ್ ವಿತರಣೆ ಮಾಡಿದರು. ಜ್ಞಾನವಿಕಾಸ ಮಹಿಳಾ ಕಾರ್ಯಕ್ರಮ ಅಧ್ಯಕ್ಷೆ ಶ್ರೀಮತಿ ಹೇಮಾವತಿ ವೀ.ಹೆಗ್ಗಡೆಯವರು ಪದಗ್ರಹಣದ ಭಾಷಣ ಮಾಡಿದರು. ಮುಖ್ಯ ಅತಿಥಿಗಳಾಗಿ ಬೆಳ್ತಂಗಡಿ ವಿಧಾನಸಭಾ ಕ್ಷೇತ್ರ ಶಾಸಕ ವಸಂತ ಬಂಗೇರ, ಬೆಂಗಳೂರು ಶ್ರೀ.ಧ.ಮ ಶಿಕ್ಷಣ ಸಂಸ್ಥೆ ಯೋಜನಾ ನಿರ್ದೇಶಕರಾದ ಶ್ರೇಯಸ್ ಕುಮಾರ್, ಬೆಂಗಳೂರು ನಬಾರ್ಡ್ ಮುಖ್ಯ ಮಹಾಪ್ರಬಂಧಕರಾದ ಎಂ.ಐ.ಗಣಗಿ ಮುಖ್ಯ ಅತಿಥಿಗಳಾಗಿ ಆಗಮಿಸಿದ್ದರು.
ಹಣಕಾಸು ನಿರ್ದೇಶಕರಾದ ಶಾಂತಾರಾಮ್ ಆರ್.ಪೈ, ತಂತ್ರಜ್ಞಾನ ನಿರ್ದೇಶಕರಾದ ಡಿ.ಜಯರಾಮ್, ಕಾರ್ಯನಿರ್ವಾಹಕ ನಿರ್ದೇಶಕರಾದ ಡಾ| ಎಲ್.ಎಚ್ ಮಂಜುನಾಥ್, ನಿರ್ದೇಶಕರಾದ ಚಂದ್ರಶೇಖರ್, ಯೋಜನಾಧಿಕಾರಿ ಶ್ರೀಮತಿ ರೂಪಾ ಜೈನ್ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.

 ರಾಜ್ಯದಲ್ಲಿ ಹೊಸ ಬೋರ್‌ವೆಲ್ ಕೊರೆಯುವುದನ್ನು ತಡೆಗಟ್ಟಿದ ಆದೇಶವನ್ನು ಪರಿಷ್ಕರಿಸಿ, ಅಂತರ್ಜಲ ಬಳಸಲು ಸುರಕ್ಷಿತ ಎಂದು ವರ್ಗೀಕರಿಸಲಾಗಿರುವ ದ.ಕ ಜಿಲ್ಲೆಯ 4 ಹಾಗೂ ಉಡುಪಿ ಜಿಲ್ಲೆಯ 3 ತಾಲೂಕುಗಳು ಸೇರಿದಂತೆ ರಾಜ್ಯದ 65 ತಾಲೂಕುಗಳಲ್ಲಿ ಖಾಸಗಿ ನೀರಾವರಿ ಕೊಳವೆ ಬಾವಿಗಳನ್ನು ಕೊರೆಯಲು ಸರಕಾರ ಮಂಜೂರಾತಿ ನೀಡಿದೆ.
ಇದರನ್ವಯ ದ.ಕ ಜಿಲ್ಲೆಯ ಬಂಟ್ವಾಳ, ಬೆಳ್ತಂಗಡಿ, ಮಂಗಳೂರು, ಸುಳ್ಯ, ಉಡುಪಿ ಜಿಲ್ಲೆಯ ಕಾರ್ಕಳ, ಕುಂದಾಪುರ ಹಾಗೂ ಉಡುಪಿ ತಾಲೂಕಿನಲ್ಲಿ ಖಾಸಗಿ ನೀರಾವರಿ ಕೊಳವೆ ಬಾವಿಗಳನ್ನು ಕೊರೆಯಲು ಅನುಮತಿಸಲು ಸರಕಾರ ನಿರ್ಧರಿಸಿದೆ ಎಂದು ಪ್ರಕಟನೆ ತಿಳಿಸಿದೆ.

dk basava prasasthi pradhana copy ಹೊಸಂಗಡಿ: ರಾಜಕೀಯ ಕ್ಷೇತ್ರದ ಸಾಧನೆಯನ್ನು ಗುರುತಿಸಿ ನಾರಾವಿ ಜಿ.ಪಂ. ಸದಸ್ಯ ಪಿ. ಧರಣೇಂದ್ರ ಕುಮಾರ್ ಅವರಿಗೆ ಹಾವೇರಿಯ ಬಸವೇಶ್ವರ ಪೌಂಡೇಶನ್ ವತಿಯಿಂದ ಹಾವೇರಿಯ ರಾಣೆಬೆನ್ನೂರಿನ ಶಿಕ್ಷಕರ ಭವನದಲ್ಲಿ ರಾಷ್ಟ್ರೀಯ ಬಸವರತ್ನ ಪ್ರಶಸ್ತಿಯನ್ನು ಫೆ. 11ರಂದು ಪ್ರದಾನ ಮಾಡಲಾಯಿತು.
ಹಂಪಿ ಮುನಿರಾಬಾದ್ ಸದ್ದಾಮಪೀಠದ ಶ್ರೀ ಜಗದ್ಗುರು ಮದುಮಯಾನಂದ ಮಹಾ ಸ್ವಾಮೀಜಿ ಅವರು ಗಣ್ಯರ ಸಮ್ಮುಖದಲ್ಲಿ ಈ ಪ್ರಶಸ್ತಿ ಪ್ರದಾನ ಮಾಡಿದರು.
ರಾಣೆಬೆನ್ನೂರ ಪುಟ್ಟಯ್ಯಪೀಠದ ಶ್ರೀ ಗುರುಬಸವ ಮಹಾಸ್ವಾಮೀಜಿ, ಹಾವೇರಿ ಜಿಲ್ಲಾ ಬಿಜೆಪಿ ಉಪಾಧ್ಯಕ್ಷ ಡಾ| ಬಸವರಾಜ ಕೇಲಗಾರ, ಜಗಜ್ಯೋತಿ ಪತ್ರಿಕೆಯ ಸಂಪಾದಕ ಬಸವರಾಜ್ ಎಚ್. ಮಲ್ಲಿ ಮುಖ್ಯ ಅತಿಥಿಗಳಾಗಿ ಉಪಸ್ಥಿತರಿದ್ದರು.
ಖಾಲಿದ್ ಪುಲಾಬೆ, ಇಸ್ಮಾಯಿಲ್ ಕೆ. ಪೆರಿಂಜೆ, ಸುದರ್ಶನ, ಅಕ್ಬರ್ ಆಲಿ ಜೊತೆಗಿದ್ದರು.

jayaವೇಣೂರು: ಮುಖ್ಯಮಂತ್ರಿ ಸಿದ್ದರಾಮಯ್ಯರವರ ಉಪಸ್ಥಿತಿಯಲ್ಲಿ ರಾಜ್ಯಪಾಲ ವಜುಭಾಯಿ ವಾಲಾ ಅವರಿಂದ ಬೆಂಗಳೂರಿನಲ್ಲಿ ಜರಗಿದ ಗಣರಾಜ್ಯೋತ್ಸವ ಸಮಾರಂಭದಲ್ಲಿ ರಾಜ್ಯ ಮಟ್ಟದ ‘ಸರ್ವೋತ್ತಮ ಸೇವಾ ಪ್ರಶಸ್ತಿ ಪಡೆದುಕೊಂಡ ಬೆಳ್ತಂಗಡಿ ಸರಕಾರಿ ನೌಕರರ ಸಂಘದ ಸ್ಥಾಪಕಾಧ್ಯಕ್ಷರಾಗಿರುವ ವೇಣೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಆಡಳಿತಾಧಿಕಾರಿಯಾದ ಕೆ. ಜಯಕೀರ್ತಿ ಜೈನ್ ಧರ್ಮಸ್ಥಳ ಅವರನ್ನು ದೇವಳದ ಅರ್ಚಕ ವೃಂದ ಹಾಗೂ ಸಿಬ್ಬಂದಿ ವರ್ಗದವರು ಸನ್ಮಾನಿಸಿದರು. ಪ್ರಧಾನ ಅರ್ಚಕ ವಿಷ್ಣುಮೂರ್ತಿ ಭಟ್, ಅರ್ಚಕ ಆನಂದ ಭಟ್, ಗುಮಾಸ್ತ ಕೊರಗಪ್ಪ ಎಂ., ಸಿಬ್ಬಂದಿಗಳಾದ ಭರತ್‌ರಾಜ್, ಗುಲಾಬಿ, ಕುಕ್ಕೇಡಿ ಗ್ರಾ.ಪಂ. ಉಪಾಧ್ಯಕ್ಷ ಅಶೋಕ್ ಪಾಣೂರು, ವಿಜಯ ಬ್ಯಾಂಕ್ ನಿವೃತ್ತ ಪ್ರಬಂಧಕ ಎಚ್. ಸೋಮಯ್ಯ ಅನೈನಡೆ, ಉದ್ಯಮಿ ಜಗದೀಶ್ ಭಟ್ ಹಾಗೂ ಮತ್ತಿತರರು ಜೊತೆಗಿದ್ದರು.

airtel 1

airtel

   ಬೆಳ್ತಂಗಡಿ : ಅತ್ಯಂತ ವೇಗವಾದ ಏರ್‌ಟೆಲ್ 4G ನೆಟ್‌ವರ್ಕ್ ಗೆ ಫೆ.13ರಂದು ಬಸ್‌ಸ್ಟಾಂಡ್ ಬೆಳ್ತಂಗಡಿಯಲ್ಲಿ ಅಧಿಕೃತ ಚಾಲನೆ ನೀಡಲಾಯಿತು.
ಬೆಳ್ತಂಗಡಿ ಪಟ್ಟಣ ಪಂಚಾಯತ್ ಅಧ್ಯಕ್ಷ ಮುಗುಳಿ ನಾರಾಯಣ ಭಟ್ ಹಾಗೂ ಸ್ಥಾನೀಯ ಸಮಿತಿ ಅಧ್ಯಕ್ಷ ಸಂತೋಷ್ ಕುಮಾರ್ ಜೈನ್ ಏರ್‌ಟೆಲ್ 4G ನೆಟ್‌ವರ್ಕ್‌ನ್ನು ಪಾರಿವಾಳವನ್ನು ಬಿಡುವುದರ ಮುಖೇನ ಚಾಲನೆ ನೀಡಲಾಯಿತು.
ಬೆಳ್ತಂಗಡಿ, ಗುರುವಾಯನಕೆರೆ, ಲಾಯಿಲದಲ್ಲಿ ಏರ್‌ಟೆಲ್ 4G ನೆಟ್‌ವರ್ಕ್ ಇನ್ನು ಮುಂದೆ ಸಿಗಲಿದ್ದು ಏರ್‌ಟೆಲ್ ಗ್ರಾಹಕರು ಪ್ರಯೋಜನ ಪಡೆಯಬಹುದು. ಹಾಗೂ ಸುಮಾರು ಬೈಕ್‌ಗಳ ಮುಖಾಂತರ ಬೆಳ್ತಂಗಡಿ, ಲಾಯಿಲ, ಗುರುವಾಯನಕೆರೆ ತನಕ ಪ್ರಚಾರ ರ‍್ಯಾಲಿ ನಡೆಸಲಾಯಿತು.
ಈ ಸಂದರ್ಭದಲ್ಲಿ ಬೆಳ್ತಂಗಡಿ ತಾಲೂಕು ಸೇಲ್ಸ್ ಮ್ಯಾನೇಜರ್ ಕಿರಣ್ ಕುಮಾರ್ ಶೆಟ್ಟಿ, ಜೇಸಿಐ ಬೆಳ್ತಂಗಡಿ ಮಂಜುಶ್ರೀ ಅಧ್ಯಕ್ಷ ಸಂತೋಷ್ ಪಿ. ಕೋಟ್ಯಾನ್, ದ.ಕ ವಲಯ ಮಾರಾಟ ಪ್ರಭಂಧಕ ಶಿವಶಂಕರ್, ಏರ್‌ಟೆಲ್ ಕಂಪನಿಯ ಅಧಿಕೃತ ಮಾರಾಟಗಾರರು, ವಿತರಕರು, ಪ್ರತಿನಿಧಿಗಳು ಉಪಸ್ಥಿತರಿದ್ದರು.

prajwal complex sticker bidugade copy ಬೆಳ್ತಂಗಡಿ : ಬೆಳ್ತಂಗಡಿ ಪ್ರಜ್ವಲ್ ಕಾಂಪ್ಲೆಕ್ಸ್‌ನ ಮಾಲಕರಾದ ಪ್ರಮೋದ್ ಆರ್ ನಾಯಕ್‌ರವರು ಸೇವಾರೂಪವಾಗಿ ಹೊರತಂದ ಕುತ್ಯಾರು ಶ್ರೀ ಸೋಮನಾಥೇಶ್ವರ ದೇವಸ್ಥಾನ ಇದರ ಸ್ಟಿಕರ್ ಬಿಡುಗಡೆಯನ್ನು ಫೆ.11ರಂದು ದೇವಸ್ಥಾನದ ವಠಾರದಲ್ಲಿ ಆಡಳಿತ ಮೊಕ್ತೇಸರರಾದ ಜಯವರ್ಮ ಬಲ್ಲಾಳ್ ಹಾಗೂ ರಾಜವರ್ಮ ಬಲ್ಲಾಳ್ ಇವರು ಬಿಡುಗಡೆಗೊಳಿಸಿದರು.
ಈ ಸಂದರ್ಭದಲ್ಲಿ ಪಟ್ಟಣ ಪಂಚಾಯತ್ ಅಧ್ಯಕ್ಷ ಮುಗುಳಿ ನಾರಾಯಣ ಭಟ್, ಸ್ಥಾಯಿ ಸಮಿತಿ ಅಧ್ಯಕ್ಷ ಸಂತೋಷ್ ಕುಮಾರ್ ಜೈನ್, ಪತ್ರಕರ್ತರ ಸಂಘದ ಅಧ್ಯಕ್ಷ ದೇವಿಪ್ರಸಾದ್, ಜೇಸಿಐ ಬೆಳ್ತಂಗಡಿ ಮಂಜುಶ್ರೀ ಅಧ್ಯಕ್ಷ ಸಂತೋಷ್ ಪಿ.ಕೋಟ್ಯಾನ್ ಬಳಂಜ, ಚಂದ್ರಕಾಂತ್, ಕೆ.ಬಿ.ಹರಿಶ್ಚಂದ್ರ ಬಲ್ಲಾಳ್, ರಾಘವೇಂದ್ರ ರಾವ್, ಅರ್ಚಕ ರಾಮ್ ಭಟ್ ಹಾಗೂ ಸತೀಶ್ ಭಟ್, ಮೊದಲಾದವರು ಉಪಸ್ಥಿತರಿದ್ದರು.

suvarna

suvarnaa

suvarnaaaa

  ಬೆಳ್ತಂಗಡಿ : ಸುವರ್ಣ ಸಾಂಸ್ಕೃತಿಕ ಪ್ರತಿಷ್ಠಾನದ ವತಿಯಿಂದ 7ನೇ ವರ್ಷದ ಕಾರ್ಯಕ್ರಮದಂಗವಾಗಿ ದ.ಕ. ಜಿಲ್ಲೆಯ ಪ್ರಶಸ್ತಿ ಪುರಸ್ಕೃತ ಪ್ರಖ್ಯಾತ ತಂಡಗಳ ಕಲಾವಿದರಿಂದ ಸುವರ್ಣಾಸ್ ಯುವ ಜನಪದ ಉತ್ಸವ ಫೆ.13 ರಂದು ಬೆಳ್ತಂಗಡಿ ಸುವರ್ಣ ಆರ್ಕೆಡ್‌ನ ಮೈದಾನದಲ್ಲಿ ನಡೆಯಿತು.
ಈ ಕಾರ್ಯಕ್ರಮದಲ್ಲಿ ತುಳುರಂಗ ಭೂಮಿಯ ಮೇರು ಕಲಾವಿದ, ಚಲನಚಿತ್ರ ನಟ ಹಾಗೂ ನಿರ್ದೇಶಕ, ತೆಲಿಕೆದ ಬೊಳ್ಳಿ ದೇವುದಾಸ್ ಕಾಪಿಕಾಡ್, ಬಡಗುತಿಟ್ಟಿನ ಖ್ಯಾತ ಯಕ್ಷಗಾನ ಭಾಗವತ, ಸುಮಧುರ ಕಂಠ ಸಿರಿಯ ಗಾಯಕ ಜನ್ಸಾಲೆ ರಾಘವೇಂದ್ರ ಆಚಾರ್, ತಮಿಳು, ಕನ್ನಡ, ಇಂಗ್ಲೀಷ್, ಮಲಯಾಳಂ, ತುಳು ಸಹಿತ ಪಂಚ ಭಾಷೆಗಳಲ್ಲಿ ಸಂಗೀತ ನಿರ್ದೇಶಕರಾಗಿರುವ ಮಣಿಕಾಂತ ಕದ್ರಿ ಇವರಿಗೆ ಸುವರ್ಣ ರಂಗ ಸಮ್ಮಾನ್ ನಡೆಯಿತು. ಎಚ್. ಕೃಷ್ಣಯ್ಯ ಲಾಲ, ರಂಜಿನಿ ಮುಂಡಾಜೆ, ಮಾಸ್ಟರ್ ತೌಶೀರ್, ಹಿತೇಶ್, ಅನೀಶ್ ಅಮೀನ್, ಶ್ರೇಯಾದಾಸ್, ಪಂಚಮಿ ಮಾರೂರು ಸಹಿತ ತಾಲೂಕಿನ ಆಯ್ದ 15 ಮಂದಿ ಯುವ ಕಲಾವಿದರಿಗೆ ಸುವರ್ಣ ಸಂಭ್ರಮ ಪುರಸ್ಕಾರ ನಡೆಯಲಿದೆ. ರಾಜ್ಯಮಟ್ಟದ ಸರ್ವೋತ್ತಮ ಪುರಸ್ಕಾರ ಪಡೆದ ತಾ| ಸರಕಾರಿ ನೌಕರರ ಸಂಘದ ಅಧ್ಯಕ್ಷ ಜಯಕೀರ್ತಿ ಜೈನ್ ಅವರಿಗೆ ವಿಶೇಷ ಸನ್ಮಾನ ನಡೆಯಿತು.
6 ತಂಡಗಳಿಂದ ಜನಪದ ಉತ್ಸವ:
ಸಸಿಹಿತ್ಲು ಯುವಕ ಮಂಡಲ ಮಂಗಳೂರು, ಪ್ರಖ್ಯಾತಿ ಯುವತಿ ಮಂಡಲ ಪುತ್ತೂರು, ವಿವೇಕಾನಂದ ಯುವಕ ಮಂಡಲ ಕೌಡಿಚ್ಚಾರು ಪುತ್ತೂರು, ಶ್ರೀಗುರು ಮಿತ್ರಸಮೂಹ ಬೆಳ್ತಂಗಡಿ, ಯಂಗ್ ಚಾಲೆಂಜರ‍್ಸ್ ಮುಂಡಾಜೆ, ಸರಕಾರಿ ಪ್ರಥಮ ದರ್ಜೆ ಕಾಲೇಜು ಕಾರ್‌ಸ್ಟ್ರೀಟ್ ಮಂಗಳೂರು ತಂಡದಿಂದ ಜನಪದ ಕಲಾ ಪ್ರದರ್ಶನ ನಡೆಯಿತು.

1202VNRE1 copyವೇಣೂರು: ವೇಣೂರು ಸರ್ಕಾರಿ ಪ್ರೌಢ ಶಾಲೆಗೆ ದ.ಕ. ಜಿಲ್ಲೆಯ ಪ್ರತಿಷ್ಠಿತ ನಿಟ್ಟೆ ವಿದ್ಯಾಸಂಸ್ಥೆ ಕೊಡಮಾಡಿದ ದಿ| ನಿಟ್ಟೆ ಶಂಕರ ಅಡ್ಯಂತಾಯ ಸ್ಮಾರಕ ಅತ್ಯುತ್ತಮ ಶಾಲಾ ಪ್ರಶಸ್ತಿಯನ್ನು ದೇರಳಕಟ್ಟೆಯ ನಿಟ್ಟೆ ವಿಶ್ವವಿದ್ಯಾಲಯದ ಕೆ.ಎಸ್. ಹೆಗ್ಡೆ ಅಡಿಟೋರಿಯಂನಲ್ಲಿ ಶನಿವಾರ ಪ್ರದಾನ ಮಾಡಲಾಯಿತು.
ಮಂಡ್ಯದ ಆದಿಚುಂಚನಗಿರಿ ಕ್ಷೇತ್ರ ಮಹಾ ಸಂಸ್ಥಾನ ಮಠದ ಶ್ರೀ ನಿರ್ಮಲಾನಂದನಾಥ ಸ್ವಾಮೀಜಿ ಅವರು ನಿಟ್ಟೆ ವಿಶ್ವವಿದ್ಯಾಲಯದ ಕುಲಪತಿ ಹಾಗೂ ನಿಟ್ಟೆ ಎಜುಕೇಶನ್ ಟ್ರಸ್ಟ್ ಅಧ್ಯಕ್ಷರಾಗಿರುವ ಎನ್. ವಿನಯ ಹೆಗ್ಡೆಯವರ ಉಪಸ್ಥಿತಿಯಲ್ಲಿ ಪ್ರದಾನ ಮಾಡಿದರು.
ಹಾಸನ ಶ್ರೀ ಆದಿಚುಂಚನಗಿರಿ ಮಹಾ ಸಂಸ್ಥಾನ ಮಠದ ಶ್ರೀ ಶಂಭೂನಾಥ ಸ್ವಾಮೀಜಿ, ರಾಜ್ಯದ ಮಾಜಿ ಲೋಕಾಯುಕ್ತ ನ್ಯಾ| ಎನ್. ಸಂತೋಷ್ ಹೆಗ್ಡೆ, ನಿಟ್ಟೆ ವಿಶ್ವವಿದ್ಯಾಲಯದ ಉಪಕುಲಾಧಿಪತಿ ಡಾ| ಎಂ. ಶಾಂತರಾಮ್ ಶೆಟ್ಟಿ, ಬೆಂಗಳೂರು ವಿವಿಯ ವಿಶ್ರಾಂತ ಉಪಕುಲಪತಿ ಡಾ| ಎನ್.ಆರ್. ಶೆಟ್ಟಿ, ಮಂಗಳೂರು ವಿವಿಯ ಉಪ ಕುಲಪತಿ ಪ್ರೊ| ಕೆ. ಬೈರಪ್ಪ, ಉಪಕುಲ ಸಚಿವ ಡಾ| ಎಂ.ಎಸ್. ಮೂಡಿತ್ತಾಯ, ದ.ಕ. ಜಿಲ್ಲಾ ಸಾರ್ವಜನಿಕ ಶಿಕ್ಷಣ ಇಲಾಖೆಯ ಉಪ ನಿರ್ದೇಶಕ ವಾಲ್ಟರ್ ಡಿಮೆಲ್ಲೊ, ಟ್ರಸ್ಟಿಗಳಾದ ಬಿಆರ್. ಹೆಗ್ಡೆ, ಗುರುಪ್ರಸಾದ್ ಅಡ್ಯಂತಾಯ, ಹಣಕಾಸು ವಿಭಾಗದ ನಿರ್ದೇಶಕ ರಾಜೇಂದ್ರ ಎಂ., ಪಠ್ಯೇತರ ವಿಭಾಗದ ನಿರ್ದೇಶಕ ಪ್ರೊ| ರಾಜಶೇಖರ ಎಂ., ಹಾಗೂ ಮತ್ತಿತರರು ಜೊತೆಗಿದ್ದರು. ವೇಣೂರು ಪ್ರೌಢ ಶಾಲಾ ಉಪಪ್ರಾಂಶುಪಾಲ ವೆಂಕಟೇಶ್ ಎಸ್. ತುಳುಪುಳೆ, ಹಿರಿಯ ಶಿಕ್ಷಕ ಸುಕೇಶ್ ಕೆ., ಜಿ.ಪಂ. ಸದಸ್ಯ ಪಿ. ಧರಣೇಂದ್ರ ಕುಮಾರ್ ಅವರು ಪ್ರಶಸ್ತಿ ಸ್ವೀಕರಿಸಿದರು. ಶಿಕ್ಷಕ ವೃಂದ, ಸಿಬ್ಬಂದಿ ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು. ಶೈಕ್ಷಣಿಕ ಸಾಧನೆ, ಮೂಲ ಸೌಕರ್ಯ ಅಭಿವೃದ್ಧಿ, ಪಠ್ಯೇತರ ಚಟುವಟಿಕೆ, ಕ್ರೀಡೆ ಮತ್ತು ಸಾಂಸ್ಕೃತಿಕ ಚಟುವಟಿಕೆಗಳನ್ನು ಪರಿಗಣಿಸಿ ಈ ಪ್ರಶಸ್ತಿ ಪ್ರದಾನ ಮಾಡಲಾಗಿದೆ. ಪ್ರಶಸ್ತಿಯೊಂದಿಗೆ ರೂ.10 ಲಕ್ಷ ನಗದು ಪುರಸ್ಕಾರ ನೀಡಿ ಗೌರವಿಸಲಾಯಿತು.

r

rr

rrr  ಬೆಳ್ತಂಗಡಿ : ಕೇಂದ್ರದಲ್ಲಿರುವುದು ಬಿಜೆಪಿ ಸರ್ಕಾರವಲ್ಲ , ಬದಲಾಗಿ ಮೋದಿ-ಅದಾನಿ ಸರ್ಕಾರ , ಇದರಿಂದಾಗಿ ನರೇಂದ್ರ ಮೋದಿ ಕಾರ್ಪೊರೇಟ್ ಗಳ ಹಿತ ಕಾಯುವ ಕೆಲಸ ಮಾಡುತ್ತಿದೆ ಎಂದು ಸಿಪಿಐ (ಎಂ) ಜಿಲ್ಲಾ ಕಾರ್ಯದರ್ಶಿ ಮಂಡಳಿ ಸದಸ್ಯ ಕೆ.ಯಾದವ ಶೆಟ್ಟಿ ಆರೋಪಿಸಿದರು.

ಅವರು ಸಿಪಿಐ (ಎಂ) ಬೆಳ್ತಂಗಡಿ ತಾಲೂಕು ಸಮಿತಿಯ ನೇತೃತ್ವದಲ್ಲಿ ತಾಲೂಕು ಕಛೇರಿ ಎದುರು ನಡೆದ ನೋಟು ಅಮಾನ್ಯಕರಣದ ವಿರುದ್ಧ ನಡೆದ ಪ್ರತಿಭಟನೆಯನ್ನು ಉದ್ದೇಶಿಸಿ ಮಾತನಾಡುತ್ತಿದ್ದರು.

ಕೇಂದ್ರ ಸರ್ಕಾರ ಸರ್ವಾಧಿಕಾರಿಯಂತೆ ಆಡಳಿತ ನಡೆಸುತ್ತಿದೆ, ಯಾವುದೇ ಮುಂದಾಲೋಚನೆ ಇಲ್ಲದೆ, ಯಾರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳದೆ ನೋಟು ನಿಷೇಧ ಮಾಡಲಾಗಿದೆ. ನೋಟು ನಿಷೇಧದಿಂದ ಭಯೋತ್ಪಾದನೆ ನಿರ್ಮೂಲನೆಯಾಗುತ್ತದೆ ಎಂದು ಹೇಳಿತ್ತು. ನ.8ರ ಬಳಿಕ ದೇಶದಲ್ಲಿ ಭಯೋತ್ಪಾದನೆ ಚಟುವಟಿಕೆ ನಿಂತಿದೆಯೇ ಎಂದು ಪ್ರಶ್ನಿಸಿದ ಯಾದವ ಶೆಟ್ಟಿ, ಸ್ವೀಸ್ ಬ್ಯಾಂಕಿನಿಂದ ಕಪ್ಪು ಹಣ ತಂದು ಪ್ರತಿಯೊಬ್ಬರಿಗೂ ಹದಿನೈದು ಲಕ್ಷ ನೀಡುತ್ತೇನೆಂದು ಹೇಳಿದ ಸರ್ಕಾರ ಇದೀಗ ತನ್ನ ಮಾನ ಉಳಿಸಿಕೊಳ್ಳಲು ನೋಟು ಬ್ಯಾನ್ ಮಾಡಿ ಬಡಜನರ ಜೀವನವನ್ನು ಬರ್ಬರಗೊಳಿಸಿದೆ. ದುಡಿದು ತಿನ್ನುವವರ ಹೊಟ್ಟೆಗೆ ಕಲ್ಲು ಹಾಕಿದ್ದೆ ನೋಟು ನಿಷೇಧದ ಸಾಧನೆ ಎಂದ ಅವರು ಬ್ಯಾಂಕ್ ಕ್ಯೂನಲ್ಲಿ ಜನರು ಜೀವ ಕಳೆದುಕೊಂಡಿರುವುದು ದೇಶದ ಇತಿಹಾಸದಲ್ಲಿ ಇದೇ ಮೊದಲು ಎಂದು ಆರೋಪಿಸಿದರು.

ಸಿಪಿಐ (ಎಂ) ತಾಲೂಕು ಕಾರ್ಯದರ್ಶಿ ಶಿವಕುಮಾರ್ ಎಸ್.ಎಂ ಮಾತನಾಡಿ ನೋಟು ನಿಷೇಧದ ಮೂಲಕ ನರೇಂದ್ರ ಮೋದಿ ಸರ್ಕಾರ ಬಡಜನರ ಮೇಲೆ ಸರ್ಜಿಕಲ್ ಧಾಳಿ ಮಾಡಿದೆ. ನೋಟು ನಿಷೇಧದ ಬಳಿಕ ತಲೆದೋರಿರುವ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳಬೇಕಾದ ಸರ್ಕಾರ ಬಜೆಟ್ ಮೂಲಕ ಮತ್ತಷ್ಟು ಹೊಡೆತ ನೀಡಿದೆ ಎಂದು ಟೀಕಿಸಿದರು.

ಪ್ರತಿಭಟನೆಯ ನೇತೃತ್ವವನ್ನು ಸಿಪಿಐ (ಎಂ) ತಾಲೂಕು ಮುಖಂಡರಾದ ವಸಂತ ನಡ , ಸುಕನ್ಯಾ. ಹೆಚ್ , ರೋಹಿಣಿ ಪೆರಾಡಿ, ಜಯರಾಂ ಮಯ್ಯ , ಲಕ್ಷ್ಮಣ ಗೌಡ ಪಾಂಗಳ, ಲೋಕೇಶ್ ಕುದ್ಯಾಡಿ, ಬಿ.ಎಂ.ಭಟ್ , ನಾರಾಯಣ ಕೈಕಂಬ, ಡೊಂಬಯ್ಯ ಗೌಡ ವಿವಿಧ ಸಂಘಟನೆಗಳ ನಾಯಕರಾದ ಶೇಖರ್ ಎಲ್ , ಅನಿಲ್ , ಪದ್ಮಾವತಿ, ದೋಗು ಬಾರ್ಯ, ಮೀನಾಕ್ಷಿ, ಗೋವಿಂದ ಗೌಡ ಮೊದಲಾದವರು ಉಪಸ್ಥಿತರಿದ್ದರು. ನೋಟು ಅಮಾನ್ಯಕರಣದ ಬಳಿಕ ಉದ್ಭವಿಸಿರುವ ಸಮಸ್ಯೆಗಳ ಪರಿಹಾರಕ್ಕೆ ಒತ್ತಾಯಿಸಿ ತಹಶೀಲ್ದಾರ್ ಮೂಲಕ ಕೇಂದ್ರ ಸರ್ಕಾರಕ್ಕೆ ಮನವಿ ಸಲ್ಲಿಸಲಾಯಿತು.

p.gಉಜಿರೆ : ಶ್ರೀ.ಧ.ಮಂ ಕಾಲೇಜು ಉಜಿರೆ, ಕನ್ನಡ ಸಂಘ ಸ್ನಾತಕೋತ್ತರ ಪತ್ರಿಕೋದ್ಯಮ ವಿಭಾಗ ಹಾಗೂ ನೀನಾಸಂ ಪ್ರತಿಷ್ಠಾನ, ಹೆಗ್ಗೋಡು ಸಹಯೋಗದಲ್ಲಿ ಕಥೆ-ಕವನ ಅನುಸಂಧಾನ ಶಿಬಿರವು ಇಂದು (ಫೆ.13) ಮತ್ತು ಫೆ.14ರಂದು ನಡೆಯಲಿದೆ.
ಈ ಪ್ರಯುಕ್ತ ಫೆ.೧೩ರಂದು ನಡೆದ ಕಾರ್ಯಕ್ರಮದಲ್ಲಿ ಶ್ರೀಮತಿ ಹೇಮಾವತಿ ವಿ.ಹೆಗ್ಗಡೆಯವರು ಉದ್ಘಾಟನೆಯನ್ನು ನಿರ್ವಹಿಸಿ, ಉದ್ಘಾಟನಾ ಭಾಷಣ ಮಾಡಿದರು. ಈ ಸಂದರ್ಭದಲ್ಲಿ ಪ್ರೊ| ಟಿ.ಪಿ ಅಶೋಕ್ ಅವರಿಗೆ ಗೌರವಾರ್ಪಣೆ ಮಾಡಲಾಯಿತು. ಶಿಬಿರದ ಕುರಿತ ವಿಶೇಷ ಸಂಚಿಕೆಯನ್ನು ಜಯಂತ ಕಾಯ್ಕಿಣಿ ಬಿಡುಗಡೆ ಮಾಡಿ, ಆಶಯ ಭಾಷಣ ಮಾಡಿದರು.
ಡಾ| ಬಿ.ಪಿ ಸಂಪತ್ ಕುಮಾರ್ ಸ್ವಾಗತಿಸಿ, ಪ್ರೊ| ಟಿ.ಪಿ ಅಶೋಕ್ ಪ್ರಾಸ್ತಾವಿಸಿ, ಪ್ರೊ| ಭಾಸ್ಕರ ಹೆಗಡೆ ಧನ್ಯವಾದ ಸಲ್ಲಿಸಿದರು.

  ಬೆಳ್ತಂಗಡಿ : ಗುರುವಾಯನಕೆರೆ, ಬೆಳ್ತಂಗಡಿ, ಧರ್ಮಸ್ಥಳ ವಿದ್ಯುತ್ ಲೈನ್‌ನಲ್ಲಿ ತುರ್ತುಕಾಮಗಾರಿಯನ್ನು ಕೈಗೊಳ್ಳಬೇಕಾದ ಹಿನ್ನಲೆಯಲ್ಲಿ ಫೆ.14 ಮತ್ತು ಫೆ.17ರಂದು ಬೆಳಿಗ್ಗೆ 9.30ರಿಂದ ಸಂಜೆ 5.30ರ ತನಕ ಬೆಳ್ತಂಗಡಿ, ಧರ್ಮಸ್ಥಳ ಮತ್ತು ವಗ್ಗ (ಬಂಟ್ವಾಳ ತಾಲೂಕು) ವಿದ್ಯುತ್ ಉಪಕೇಂದ್ರದಿಂದ ಹೊರಡುವ ಎಲ್ಲಾ ಫೀಡರ್‌ಗಳಲ್ಲಿ ಹಾಗೂ ಮಡಂತ್ಯಾರ್ ಹಾಗೂ ಬಳ್ಳಮಂಜ ಫೀಡರ್‌ಗಳಲ್ಲಿ ವಿದ್ಯುತ್ ನಿಲುಗಡೆಯಾಗಲಿದೆ ಎಂದು ಮೆಸ್ಕಾಂ ಪ್ರಕಟಣೆಯಲ್ಲಿ ತಿಳಿಸಿದೆ.

m

mm

mmm

mmmmm

mmmmmmmm

mmmmmmmmmmm

mmmmmmmmmmmmmmmmmmmmm

ಮರೋಡಿ  : ಮರೋಡಿ ಕ್ಷೇತ್ರದಲ್ಲಿ ಜಾತ್ರಾ ಮಹೋತ್ಸವದ ಜೊತೆಗೆ 5ನೇ ವರ್ಷದ ಆಯನ ಮತ್ತು ಸಿರಿಗಳ ಜಾತ್ರೆ ಫೆ.10ರಿಂದ 14ರ ವರೆಗೆ ವಿಜೃಂಭಣೆಯಿಂದ ಜರಗಿತು. ಈ ಜಾತ್ರೆಯ ಸಂದರ್ಭದಲ್ಲಿ ಭಕ್ತರ ಅನುಕೂಲಕ್ಕಾಗಿ ಸುಮಾರು 40 ಲಕ್ಷ ವೆಚ್ಚದಲ್ಲಿ ನಿರ್ಮಿಸಲಾಗುವ ಸಭಾಭವನ ಮತ್ತು ಅನ್ನಛತ್ರಕ್ಕೆ ಶಿಲಾನ್ಯಾಸ ನಡೆಯಿತು.
ಫೆ.12ರಂದು ಸಭಾಭವನ ಮತ್ತು ಅನ್ನಛತ್ರಕ್ಕೆ ಶಿಲಾನ್ಯಾಸ ನಡೆಯಿತು. ದೇವಸ್ಥಾನದ ಆಡಳಿತ ಮಂಡಳಿ ಅಧ್ಯಕ್ಷ ದೇವೇಂದ್ರ ಹೆಗ್ಡೆ ಕೊಡಂಗೆ ಕೊಕ್ರಾಡಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಬಳ್ಳಾರಿ ಉದ್ಯಮಿ ಗುರ್ಮೆ ಸುರೇಶ್ ಶೆಟ್ಟಿ ಸಭಾ ಕಾರ್ಯಕ್ರಮ ಉದ್ಘಾಟಿಸಿದರು. ಮುಖ್ಯ ಅತಿಥಿಗಳಾಗಿ ಚಲನಚಿತ್ರ ನಿರ್ಮಾಪಕ, ನಿರ್ದೇಶಕ ಡಾ| ರಾಜಶೇಖರ ಕೋಟ್ಯಾನ್, ಬೆಂಗಳೂರಿನ ಉದ್ಯಮಿ ಸುರೇಶ್ ಹೆಗ್ಡೆ, ನವಿ ಮುಂಬೈನ ಶ್ರೀ ಶನೀಶ್ವರ ದೇವಸ್ಥಾನದ ಮೊಕ್ತೇಸರ ಪ್ರಭಾಕರ ಹೆಗ್ಡೆ, ಬೆಂಗಳೂರಿ ನ ಉದ್ಯಮಿ ಉದಯ ಹೆಗ್ಡೆ, ಪೂನಾದ ಉದ್ಯಮಿ ಉದಯ ಶೆಟ್ಟಿ ಕಾಂತಾವರ, ಚಲನಚಿತ್ರ ನಿರ್ಮಾಪಕ, ನಿರ್ದೇಶಕ ರಾಘವೇಂದ್ರ ಹೆಗ್ಡೆ, ಹೈಕೋರ್ಟ್ ವಕೀಲ ಹರೀಶ್ ಪೂಂಜಾ, ಮೂಡಬಿದಿರೆ ಉದ್ಯಮಿ ಶ್ರೀಪತಿ ಭಟ್, ಮುಂಬೈ ಉದ್ಯಮಿ ಹರೀಶ್ ಡಿ. ಸಾಲ್ಯಾನ್ ಬಜಗೋಳಿ, ಮುಂಬೈ ಉದ್ಯಮಿ ಸುರೇಶ್ ಪೂಜಾರಿ ಬರಂಜ ಕಾಶಿಪಟ್ಣ, ಶಿರ್ತಾಡಿ ಪ್ರಭಾ ಕ್ಲಿನಿಕ್‌ನ ಡಾ. ಆಶೀರ್ವಾದ್ ಭಾಗವಹಿಸಿದ್ದರು.

kuthyars

KUTHYAR

  ಕುತ್ಯಾರು : ಕುತ್ಯಾರು ಶ್ರೀ ಸೋಮನಾಥೇಶ್ವರ ದೇವಸ್ಥಾನದ ಜಾತ್ರಾ ಪ್ರಯುಕ್ತ ಅಯ್ಯಪ್ಪ ಸ್ವಾಮಿ ದೇವಸ್ಥಾನದ ಮುಂಭಾಗದಲ್ಲಿ ಹುತಾತ್ಮ ಯೋಧರಿಗೊಂದು ನಮನ ಕಾರ್ಯಕ್ರಮವು ಫೆ.12ರಂದು ನಡೆಯಿತು.
ಬೆಳ್ತಂಗಡಿ ಸ್ಥಾಯಿ ಸಮಿತಿ ಅಧ್ಯಕ್ಷ ಸಂತೋಷ್ ಕುಮಾರ್ ಜೈನ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಪುತ್ತೂರು ಸಂಸ್ಕೃತ ಉಪನ್ಯಾಸಕರಾದ ಶ್ರೀ ಕೃಷ್ಣ ಉಪಾದ್ಯಾಯ ಉಪನ್ಯಾಸ ಮಾಡಿದರು. ದ.ಕ ಜಿ.ಪಂ ಅಧ್ಯಕ್ಷೆ ಶ್ರೀಮತಿ ಮೀನಾಕ್ಷಿ ಶಾಂತಿಗೂಡು, ಬೆಳ್ತಂಗಡಿ ನಗರ ಪಂಚಾಯತ್ ಅಧ್ಯಕ್ಷ ನಾರಾಯಣ ರಾವ್ ಮುಗುಳಿ, ಬೆಳ್ತಂಗಡಿ ವಾಣಿ ಪಿ.ಯು ಕಾಲೇಜು ಪ್ರಾಂಶುಪಾಲರಾದ ಡಿ.ಯದುಪತಿ ಗೌಡ, ನ್ಯಾಯವಾದಿ ಹರೀಶ್ ಪೂಂಜ ಗರ್ಡಾಡಿ, ತುಳು ಚಿತ್ರ ಹಾಸ್ಯನಟ ಮಂಜು ರೈ, ಬೆಳ್ತಂಗಡಿ ಶ್ರೀ ಗುರುನಾರಾಯಣ ಸೇವಾ ಸಂಘದ ಪ್ರಧಾನ ಕಾರ್ಯದರ್ಶಿ ಸಂತೋಷ್ ಕುಮಾರ್ ಕಾಪಿನಡ್ಕ, ಬಾಬು ಆರ್ ಗೌಡ ಸಂತೆಕಟ್ಟೆ, ಜರ್ಮಿ ಡೇಸಾ, ಪ್ರಕಾಶ್ ಆಚಾರ್ಯ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.
ಈ ಪ್ರಯುಕ್ತ ಕರಾವಳಿ ಕರ್ನಾಟಕದ ಜೇಸುದಾಸ್ ಖ್ಯಾತಿಯ ಪುತ್ತೂರು ಜಗದೀಶ ಆಚಾರ್ಯರವರ ಕಲಾ ಸಿಂಧು ಬಳಗದವರಿಂದ ಭಕ್ತಿ ರಸಮಂಜರಿ, ಝೀ ಕನ್ನಡ ಕಾಮಿಡಿ ಕಿಲಾಡಿ ಖ್ಯಾತಿಯ ಹಿತೇಶ್ ಕಾಪಿನಡ್ಕ ಮತ್ತು ಅನೀಶ್ ಅಮೀನ್ ವೇಣೂರು ಇವರ ತಂಡದಿಂದ ಹಾಸ್ಯ ಕಾರ್ಯಕ್ರಮ ಮತ್ತು ತಾಲೂಕಿನ ಖ್ಯಾತ ನೃತ್ಯ (ತ್ರಿಲೋಕ್ ಡ್ಯಾನ್ಸ್, ಉಜಿರೆ) ಕಲಾವಿದರಿಂದ ಗಾನ-ನೃತ್ಯ-ಹಾಸ್ಯ-ವೈಭವ ಎಂಬ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಿತು.

acc 1

prasad 1

prasad 1

vasista 12

vasista 12

vinayaka 1

a

aa

aaa

aaaaaa

  ಉಜಿರೆ : ಉಜಿರೆ ಧರ್ಮ ರಕ್ಷಾ ಸಮಿತಿ ವತಿಯಿಂದ ಉಜಿರೆ ಗ್ರಾಮದ ಮುಂಡತ್ತೋಡಿ ಕಾಲನಿಯಲ್ಲಿ ಸಂತರ ಪಾದಯಾತ್ರೆ ಮತ್ತು ಧಾರ್ಮಿಕ ಜನಜಾಗೃತಿ ಸಭೆಯು ಇಂದು(ಫೆ.11) ನಡೆಯಿತು.
ಕಾರ್ಯಕ್ರಮದಲ್ಲಿ ಶ್ರೀ ಕ್ಷೇತ್ರ ಕರಿಂಜೆ ಶ್ರೀ ಮುಕ್ತಾನಂದ ಸ್ವಾಮೀಜಿ ಆಶೀರ್ವಚನ ನೀಡಿದರು. ಅಧ್ಯಕ್ಷತೆಯನ್ನು ಧರ್ಮ ರಕ್ಷಾ ಸಮಿತಿ ಅಧ್ಯಕ್ಷ ರಾಜೇಶ್ ತುಂಬೆದೊಟ್ಟು ವಹಿಸಿದ್ದರು. ರಾಷ್ಟ್ರೀಯ ಸ್ವಯಂಸೇವಕ ಸಂಘದ ಕ್ಷೇತ್ರೀಯ ಕಾರ್ಯಕಾರಿಣಿ ಸದಸ್ಯ ಡಾ| ಪ್ರಭಾಕರ್ ಭಟ್ ಕಲ್ಲಡ್ಕ ಮುಖ್ಯ ಭಾಷಣ ಮಾಡಿದರು. ರಾಜೇಶ್ ಪೈ, ಉದ್ಯಮಿ ಉಜಿರೆ, ಮಂಗಳೂರು ಧರ್ಮ ಜಾಗರಣ ವಿಭಾಗ ಸಂಯೋಜಕರಾದ ದಿನಕರ ಆದೇಲು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.

prakruthi

ಅಂಜುಮಾನ್, ದೀಪಶ್ರೀ, ಕೊಂಕಿಮಾಲ ಜೀವನ, ರಂಜಿತಾ, ವಿಷ್ಣು ಸತೀಶ, ಸ್ವಾತಿ, ಚೈತ್ರ, ಶಿವಂ ನಾಯಕ್, ಸೃಷ್ಠಿ ಪ್ರಕಾಶ್

 ನೇಪಾಲದ ಅಂಜು ಮಹಾರ್ಜನ್‌ಗೆ ಆರ್.ಜಿ.ಯು.ಹೆಚ್.ಎಸ್ (RGUHS) ಸುವರ್ಣ ಪದಕ ಹಾಗೂ ಡಾ.ಡಿ.ವೀರೇಂದ್ರ ಹೆಗ್ಗಡೆ ಪಟ್ಟಾಭಿಷೇಕ ಪ್ರಶಸ್ತಿ ಲಭಿಸಿದೆ..
ಶ್ರೀ. ಧರ್ಮಸ್ಥಳ ಮಂಜುನಾಥೇಶ್ವರ ಪ್ರಕೃತಿ ಚಿಕಿತ್ಸಾ ಮತ್ತು ಯೋಗ ವಿಜ್ಞಾನ ಕಾಲೇಜಿನ ವಿದ್ಯಾರ್ಥಿಗಳು ಕರ್ನಾಟಕದ ರಾಜೀವ್ ಗಾಂಧಿ ಆರೋಗ್ಯ ವಿಜ್ಞಾನಗಳ ವಿಶ್ವವಿದ್ಯಾನಿಲಯ ನಡೆಸಿದ ಬಿ.ಎನ್.ವೈ.ಎಸ್ ಅಂತಿಮ ಪರೀಕ್ಷೆಯಲ್ಲಿ 9 ರ‍್ಯಾಂಕುಗಳನ್ನು ಪಡೆದಿರುತ್ತಾರೆ.
ನೇಪಾಲದ ಅಂಜು ಮಹಾರ್ಜನ್ ಬಿ.ಎನ್.ವೈ.ಎಸ್ ಅಂತಿಮ ಪರೀಕ್ಷೆಯಲ್ಲಿ ಅತೀ ಹೆಚ್ಚು ಅಂಕಗಳಿಸಿ ಜಿಂದಾಲ್ ಗೋಲ್ಡ್ ಮೆಡಲ್ ಪಡೆದಿದ್ದು ಹಾಗೂ ಇವರ ಸಾಧನೆಗೆ ಕಾಲೇಜಿನ ಈ ಸಾಲಿನ ಡಾ.ಡಿ.ವೀರೇಂದ್ರ ಹೆಗ್ಗಡೆ ಪಟ್ಟಾಭಿಷೇಕ ಗೌರವ ಲಭಿಸಿದೆ.
ರ‍್ಯಾಂಕುಗಳ ಪಟ್ಟಿ : ಅಂಜುಮಾನ್ (2ನೇ ರ‍್ಯಾಂಕ್), ದೀಪಶ್ರೀ (3ನೇ ರ‍್ಯಾಂಕ್), ಕೊಂಕಿಮಾಲ ಜೀವನ (4ನೇ ರ‍್ಯಾಂಕ್), ರಂಜಿತಾ (5ನೇ ರ‍್ಯಾಂಕ್), ವಿಷ್ಣು ಸತೀಶ (6ನೇ ರ‍್ಯಾಂಕ್), ಸ್ವಾತಿ (7ನೇ ರ‍್ಯಾಂಕ್), ಚೈತ್ರ (8ನೇ ರ‍್ಯಾಂಕ್), ಶಿವಂ ನಾಯಕ್ (9ನೇ ರ‍್ಯಾಂಕ್), ಸೃಷ್ಠಿ ಪ್ರಕಾಶ್ (10ನೇ ರ‍್ಯಾಂಕ್) ಗಳಿಸಿದ್ದಾರೆಂದು. ಎಸ್.ಡಿ.ಯಂ. ಶಿಕ್ಷಣದ ಕಾರ್ಯದರ್ಶಿ ಡಾ.ಬಿ.ಯಶೋವರ್ಮ ತಿಳಿಸಿದ್ದಾರೆ ಮತ್ತು ಈ ಸಾಧನೆಗಾಗಿ ವಿದ್ಯಾರ್ಥಿಗಳನ್ನು ಹಾಗೂ ಕಾಲೇಜಿನ ಪ್ರಾಧ್ಯಾಪಕ ವೃಂಧದವರನ್ನು ಅಭಿನಂದಿಸಿದ್ದಾರೆ.

  ರಾಜ್ಯದಲ್ಲಿ ವಿದ್ಯುತ್ ಸರಬರಾಜು ಕಂಪೆನಿಗಳ ಆದಾಯ ಮತ್ತು ವೆಚ್ಚವನ್ನು ಸರಿದೂಗಿಸುವ ಸಲುವಾಗಿ ವಿದ್ಯುತ್ ದರ ಹೆಚ್ಚಳ ಪ್ರಸ್ತಾವನೆ ಸಲ್ಲಿಸಲಾಗಿದೆಯೆಂದು ಇಂಧನ ಸಚಿವ ಡಿ.ಕೆ ಶಿವ ಕುಮಾರ್ ಹೇಳಿದ್ದಾರೆ. ವಿಧಾನ ಪರಿಷತ್‌ನಲ್ಲಿ ಪ್ರಶ್ನೋತ್ತರ ಅವಧಿಯಲ್ಲಿ ಜೆ.ಡಿ.ಎಸ್.ನ ಅಪ್ಪಾಜಿ ಗೌಡ ಅವರ ಪ್ರಶ್ನೆಗೆ ಉತ್ತ್ತರಿಸಿದ ಸಚಿವರು, ರಾಜ್ಯದ ಎಲ್ಲ ಎಸ್ಕಾಂಗಳಲ್ಲಿ ವಿದ್ಯುತ್ ದರ ಹೆಚ್ಚಳ ಮಾಡುವಂತೆ ಪ್ರಸ್ತಾವನೆ ಸಲ್ಲಿಸಲಾಗಿದೆ. ಎಸ್ಕಾಂಗಳು ಗ್ರಾಹಕರಿಗೆ ವಿತರಣೆ ಮಾಡುತ್ತಿರುವ ಪ್ರತಿ ಒಂದು ಯುನಿಟ್ ವಿದ್ಯುತ್‌ಗೆ 1.45ರೂ ಹೆಚ್ಚಳ ಮಾಡುವಂತೆ ಕರ್ನಾಟಕ ವಿದ್ಯುತ್ ನಿಯಂತ್ರಣ ಆಯೋಗಕ್ಕೆ ಪ್ರಾಸ್ತಾವನೆ ಸಲ್ಲಿಸಲಾಗಿದೆ ಎಂದಿದ್ದಾರೆ.

  2005ರ ಮಹಾತ್ಮ ಗಾಂಧಿ ಸರಣೀಯ 100 ರೂ ನೋಟುಗಳ ವಿನ್ಯಾಸದಲ್ಲೇ ಬಆರ್.ಬಿ.ಐ ಹೊಸ ನೋಟುಗಳನ್ನು ಶೀಘ್ರದಲ್ಲೇ ಚಲಾವಣೆಗೆ ತರಲಿದೆ. ಆದರೆ ಹಳೆ ನೂರು ರೂ.ನೋಟುಗಳು ಅಂತೆಯೇ ಚಲಾವಣೆಯಲ್ಲಿ ಮುಂದುವರಿಯಲಿವೆ. ಹಳೆ ನೂರು ರೂ.ನೋಟಿನಲ್ಲಿ ನಂಬರ್ ಇರುವ ಸ್ಥಳದಲ್ಲಿ ಆರ್ ಎಂಬ ಅಕ್ಷರವನ್ನು ಮತ್ತು ಆರ್.ಬಿ.ಐ ಗವರ್ನರ್ ಡಾ| ಊರ್ಜಿತ್ ಪಟೇಲ್ ಅವರ ಸಹಿಯನ್ನು ಮುದ್ರಿಸಲಾಗಿದೆ ಎಂದು ಆರ್.ಬಿ.ಐ ಹೊರಡಿಸಿರುವ ಪ್ರಕಟಣೆ ತಿಳಿಸಿದೆ. ಹೊಸ ನೂರು ರೂಪಾಯಿ ನೋಟಿನ ಮುದ್ರಣ ಇಸವಿಯನ್ನು 2017 ಎಂದು ಹಿಂಭಾಗದಲ್ಲಿದ್ದು, ನಂಬರ್‌ಗಳ ಗಾತ್ರವು ಎಡದಿಂದ ಬಲಕ್ಕೆ ದೊಡ್ಡದಾಗುತ್ತಾ ಹೋಗುವಂತೆ ಕಾಣಿಸಲಾಗಿದೆ ಎಂದಿದೆ.

  ನೀವು ವಿಂಡೋಸ್ ಎಕ್ಸ್‌ಪಿ ಅಥವಾ ವಿಂಡೋಸ್ ವಿಸ್ಪಾ ಬಳಕೆದಾರರಾಗಿದ್ರೆ ನಿಮಗೆ ಶಾಕಿಂಗ್ ಸುದ್ದಿಯಿದೆ. ಫೆ.೮ರ ನಂತರ ನಿಮ್ಮ ಸಿಸ್ಟಮ್‌ನಲ್ಲಿ ಜಿಮೇಲ್ ಕಾರ್ಯ ನಿರ್ವಹಿಸುವುದಿಲ್ಲ. ಕ್ರೋಮ್ ಬ್ರೌಸರ್‌ನ 53ನೇ ಹಾಗೂ ಅದಕ್ಕಿಂತ ಕೆಳಗಿನ ವರ್ಷನ್‌ಗಳಲ್ಲಿ ಜಿಮೇಲ್ ಕಾರ್ಯ ನಿರ್ವಹಿಸುವಿದಿಲ್ಲ. ಅಂತಾ ಗೂಗಲ್ ಹೇಳಿದೆ. ಯಾರ್ಯಾರು ತಮ್ಮ ಡೆಸ್ಕ್‌ಟಾಪ್ ಅಥವಾ ಲ್ಯಾಪ್‌ಟಾಪ್‌ನಲ್ಲಿ ವಿಂಡೋಸ್ ಎಕ್ಸ್‌ಪಿ ಅಥವಾ ವಿಂಡೋಸ್ ವಿಸ್ಪಾದಲ್ಲಿ ಕ್ರೋಮ್ ಬ್ರೌಸರ್ ಬಳಸುತ್ತಿದ್ರೆ ಅವರು ಫೆ.8ರ ನಂತರ ಜಿಮೇಲ್ ಬಳಕೆ ಮಾಡಲು ಸಾಧ್ಯವಿಲ್ಲ. ಮೈಕ್ರೋಸಾಫ್ಟ್ ತನ್ನ ಆಪರೇಟಿಂಗ್ ಸಿಸ್ಟಮ್‌ನಲ್ಲಿ ವಿಂಡೋಸ್ ಎಕ್ಸ್‌ಪಿ ಅಥವಾ ವಿಂಡೋಸ್ ವಿಸ್ಪಾ ಸಪೋರ್ಟ್ ಬಂದ್ ಮಾಡಿರುವುದೇ ಇದಕ್ಕೆ ಕಾರಣ.

 ಸಂಸತ್ತಿನಲ್ಲಿ ವಿತ್ತ ಸಚಿವ ಅರುಣ್ ಜೇಟ್ಲಿ ಮಂಡಿಸಿರುವ 2017-18ನೇ ಸಾಲಿನ ಕೇಂದ್ರ ಬಜೆಟ್‌ನಲ್ಲಿ, ಡಿಜಿಟಲ್ ಭಾರತಕ್ಕೆ ಹೆಚ್ಚಿನ ಒತ್ತು ಕೊಡಲಾಗಿದೆ. ಬುಧವಾರ ಮಂಡಿಸಿರುವ ಬಜೆಟ್‌ನಲ್ಲಿ ಈ ಬಗ್ಗೆ ಘೋಷಣೆ ಮಾಡಿರುವ ಜೇಟ್ಲಿ, ಗ್ರಾ.ಪಂಗಳಿಗೂ ಇಂಟರ್‌ನೆಟ್ ಸೇವೆಯನ್ನು ವಿಸ್ತರಿಸುವುದಾಗಿ ತಿಳಿಸಿದ್ದಾರೆ. ಭಾರತ್ ನೆಟ್ ಯೋಜನೆಯ ಅಡಿಯಲ್ಲಿ ಒಂದುವರೆ ಲಕ್ಷಕ್ಕೂ ಹೆಚ್ಚು ಗ್ರಾ.ಪಂಗಳಿಗೆ ಓಪ್ಟಿಕಲ್ ಫೈಬರ್ ಕೇಬಲ್ ಸಂಪರ್ಕಿತ ಹೈ ಸ್ಪೀಡ್ ಬ್ರಾಂಡ್‌ಬ್ಯಾಂಡ್ ಕೆನೆಕ್ಟಿವಿಟಿ ಸೇವೆಯನ್ನು ನೀಡಲಾಗುವುದು ಎಂದವರು ವಿವರಿಸಿದ್ದಾರೆ. ಅದೇ ಹೊತ್ತಿಗೆ ಡಿಜಿಗಾಂವ್ ಯೋಜನೆಯನ್ನು ಆರಂಭಿಸಲಿದ್ದು, ಟೆಲಿ-ಮೆಡಿಸಿನ್, ವಿದ್ಯಾಭ್ಯಾಸ ಹಾಗೂ ಕೌಶಲ್ಯ ಅಭಿವೃದ್ಧಿಗೆ ಪ್ರೋತ್ಸಾಹ ತುಂಬಲಿದೆ.

 ಒಂದು ವರ್ಷದ ಒಳಗಾಗಿ ಪ್ರತಿಯೊಬ್ಬ ಮೊಬೈಲ್ ಬಳಕೆದಾರನನ್ನು ಆಧಾರ್ ನಂಬರ್ ಜೊತೆಗೆ ನೋಂದಾಯಿಸಬೇಕು ಎಂದು ಸುಪ್ರೀಂಕೋರ್ಟ್ ಸೋಮವಾರ ಕೇಂದ್ರ ಸರ್ಕಾರಕ್ಕೆ ನಿರ್ದೇಶನ ನೀಡಿತು. ಪೂರ್ವ ಪಾವತಿ ಅಥವಾ ಪ್ರಿಪೇಯ್ಡ್ ಸಂಪರ್ಕಗಳೂ ಸೇರಿದಂತೆ ಪ್ರತಿಯೊಬ್ಬ ಬಳಕೆದಾರನ ಮೊಬೈಲ್ ವಿವರಗಳನ್ನು ದಾಖಲಿಸಲು ಕೇಂದ್ರಕ್ಕೆ ಒಂದು ವರ್ಷದ ಗಡುವನ್ನು ಸುಪ್ರೀಂಕೋರ್ಟ್ ನೀಡಿತು. ದೇಶದಲ್ಲಿ ಸುಮಾರು 100 ಕೋಟಿಗೂ ಹೆಚ್ಚಿನ ಮೊಬೈಲ್ ಬಳಕೆದಾರರಿದ್ದಾರೆ. ಎಲ್ಲ ಮೊಬೈಲ್ ಗ್ರಾಹಕರ ಆಧಾರ್ ನಂಬರ್‌ಗಳನ್ನು ಮೊಬೈಲ್ ನಂಬರ್‌ಗಳ ಜೊತೆಗೆ ಒಂದು ವರ್ಷದ ಒಳಗಾಗಿ ನೋಂದಣಿ ಮಾಡುವುದು ಕಡ್ಡಾಯ ಎಂದು ಸುಪ್ರೀಂಕೋರ್ಟ್ ಹೇಳಿದ್ದು, ಮೊಬೈಲ್ ಫೋನ್‌ಗಳನ್ನು ಬ್ಯಾಂಕಿಂಗ್ ಉದ್ದೇಶಗಳಿಗೆ ಬಳಸುತ್ತಿರುವ ಹಿನ್ನೆಲೆಯಲ್ಲಿ ಪರಿಶೀಲನೆ ಅತಿ ಮಹತ್ವ ಹಾಗೂ ಅಗತ್ಯವಾಗಿದೆ ಎಂದು ಕೋರ್ಟ್ ಹೇಳಿತು.

 ಬಹು ನಿರೀಕ್ಷಿತ ಟ್ವೆಂಟಿ-20 ಟೂರ್ನಮೆಂಟ್ ಇಂಡಿಯನ್ ಪ್ರೀಮಿಯರ್ ಲೀಗ್(ಐ.ಪಿ.ಎಲ್)ನ 10ನೇ ಆವೃತ್ತಿ ಏಪ್ರಿಲ್ 5ರಿಂದ ಆರಂಭವಾಗಲಿದೆ ಎಂದು ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ(ಬಿ.ಸಿ.ಸಿಐ) ಗುರುವಾರ ಪ್ರಕಟಿಸಿದೆ. ಬಿ.ಸಿ.ಸಿ.ಐ ಆಡಳಿತ ಅಧಿಕಾರಿಗಳು (ಸಿ.ಒ.ಎ) ಹಾಗೂ ಬಿ.ಸಿ.ಸಿಐ ಅಧಿಕಾರಿಗಳು ಈ ಬಗ್ಗೆ ಸಭೆ ನಡೆಸಿ ನಿರ್ಣಯ ಕೈಗೊಂಡಿದ್ದಾರೆ.

ಸ್ವಾತಂತ್ರ್ಯವೇ ಸ್ವೇಚ್ಛಾಚಾರವೇ

ಸ್ವಾತಂತ್ರ್ಯವೇ ಸ್ವೇಚ್ಛಾಚಾರವೇ

Tuesday, August 16th, 2016 | Suddi Belthangady | no responses ಮಮತಾ.ಕೆ ಮೂರ್ತಿ ಉಜಿರೆ    ಸುದೀರ್ಘವಾದ ಬ್ರಿಟಿಷ್ ಆಳ್ವಿಕೆಯ ನಂತರ 1947ರ ಆಗಸ್ಟ್ 15ರಂದು… ಮುಂದೆ ಓದಿ

ಬೆಳಾಲು ಶ್ರೀ ಧ. ಪ್ರೌಢಶಾಲೆಯಲ್ಲಿ ನೀರಿಂಗಿಸುವ ವಿಶೇಷ ಪ್ರಯೋಗಗಳು

Friday, May 27th, 2016 | Suddi Belthangady | no responses ಕಳೆದ ಆರೇಳು ವರ್ಷಗಳಿಂದ ಸದ್ದಿಲ್ಲದೆ ಶೈಕ್ಷಣಿಕ ಚಟುವಟಿಕೆಗಳೊಂದಿಗೆ ನಡೆಸಿರುವುದು ಬರದ ನೆರಳಿನಲ್ಲಿ ಕಂಡು… ಮುಂದೆ ಓದಿ

ಪ್ರಣಯ ಚಿತ್ತ..!  ಪ್ರವೃತ್ತಿ ದತ್ತ...?

ಪ್ರಣಯ ಚಿತ್ತ..! ಪ್ರವೃತ್ತಿ ದತ್ತ…?

Friday, April 29th, 2016 | Suddi Belthangady | no responses ಜನನೀ ಜನ್ಮ ಭೂಮಿಶ್ಚ ಸ್ವರ್ಗದಪಿ ಗರೀಯಸಿ.. ಹೆತ್ತ ತಾಯಿ ಮತ್ತು ಹೊತ್ತ ಭೂಮಿ… ಮುಂದೆ ಓದಿ

ಅದ್ಭುತ ಚಮಕ್ಕಾಗಿ ಚಪ್ಪರ

ಅದ್ಭುತ ಚಮಕ್ಕಾಗಿ ಚಪ್ಪರ

Saturday, March 19th, 2016 | Suddi Belthangady | no responses ಚಪ್ಪಸುಡುಬಿಸಿಲಿನ ಬೇಗೆಯಲ್ಲಿ ಏಳು ದಿನಗಳ ಕಾಲ ನಡೆದ ಶಿಬಾಜೆ ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದ… ಮುಂದೆ ಓದಿ

ಪರೀಕ್ಷಾ ಸಿದ್ಧತೆ: ನೀವು ಹೀಗೆ ಮಾಡಿ...

ಪರೀಕ್ಷಾ ಸಿದ್ಧತೆ: ನೀವು ಹೀಗೆ ಮಾಡಿ…

Saturday, February 27th, 2016 | Suddi Belthangady | no responses ಪರೀಕ್ಷೆ ಎಂದಾಗ ವಿದ್ಯಾರ್ಥಿಗಳು ಆತಂಕಗೊಳಗಾಗು ವುದು ಸಹಜ. ಆದರೂ ಪರೀಕ್ಷೆಗಳನ್ನು ಎದುರಿಸುವುದು ಅನಿವಾರ್ಯ.… ಮುಂದೆ ಓದಿ

ಭರತನಾಟ್ಯದ ‘ನಾಟ್ಯರಾಣಿ ಬಜಿರೆ ಶ್ರವಣ ಕುಮಾರಿ

ಭರತನಾಟ್ಯದ ‘ನಾಟ್ಯರಾಣಿ ಬಜಿರೆ ಶ್ರವಣ ಕುಮಾರಿ

Thursday, January 28th, 2016 | Suddi Belthangady | no responses ವೇಣೂರು: ರಾಷ್ಟ್ರದಾದ್ಯಂತ ಕಾರ್ಯಕ್ರಮ ನೀಡಿ ಅದೆಷ್ಟೋ ಜನರನ್ನು ಮನೊರಂಜಿಸಿದ ಈಕೆ ಹೇಳಿ ಕೇಳಿ… ಮುಂದೆ ಓದಿ

ಗಾಂಧಿ ಕನಸಿಗೆ, ಮೋದಿಯ ಸಂಕಲ್ಪಕ್ಕೆ ನಮ್ಮ ನಿಮ್ಮ ಸಾಥ್

Thursday, October 1st, 2015 | suddiblt | no responses ರಾಷ್ಟ್ರಪಿತ ಮಹಾತ್ಮ ಗಾಂಧೀಜಿಯವರ ಸ್ವಚ್ಛ ಭಾರತದ ಕನಸನ್ನು ನನಸುಗೊಳಿಸುವ ನಿಟ್ಟಿನಲ್ಲಿ ನಾವು ಭಾರತೀಯರು… ಮುಂದೆ ಓದಿ

ಅವಕಾಶಗಳು ಬರುವುದಿಲ್ಲ: ಸೃಷ್ಠಿಸಿಕೊಳ್ಳಬೇಕು !

Thursday, October 1st, 2015 | suddiblt | no responses ಒಂದೂರಿನಲ್ಲಿ ಒಂದು ಪುರಾತನ ದೇವಾಲಯವಿತ್ತು ಇಡೀ ಊರಿಗೆ ಅದೊಂದೇ ದೇವಾಲಯ. ಆದರೆ ತೀರ… ಮುಂದೆ ಓದಿ

ರೈತರೇ ಜೀವನದಲ್ಲಿ ಉತ್ಸಾಹ ಕಳೆದುಕೊಳ್ಳಬೇಡಿ.....

ರೈತರೇ ಜೀವನದಲ್ಲಿ ಉತ್ಸಾಹ ಕಳೆದುಕೊಳ್ಳಬೇಡಿ…..

Thursday, October 1st, 2015 | suddiblt | no responses ನಮ್ಮ ರಾಜ್ಯದಲ್ಲಿ ಹೆಚ್ಚಿನ ಕಡೆಗಳಲ್ಲಿ ರೈತರ ಆತ್ಮಹತ್ಯೆಯ ಕುರಿತು ಸಾಕಷ್ಟು ಪ್ರಕರಣಗಳು ನಡೆಯುತ್ತಿವೆ.… ಮುಂದೆ ಓದಿ

ಯೋಜನೆ ರದ್ಧತಿಗೆ ಚುನಾವಣೆ  ಬಹಿಷ್ಕಾರ ಯಾಕೆ ಮಾಡಬಾರದು ?

Thursday, October 1st, 2015 | suddiblt | no responses ಎತ್ತಿನಹೊಳೆ ಎಂಬಲ್ಲಿ ಬೃಹತ್ ಕಾಮಗಾರಿ ಈಗಾಗಲೇ ಪ್ರಾರಂಭವಾಗಿದೆ. ಇದರಿಂದ ಯಾರಿಗೆ ಪ್ರಯೋಜನ, ಯಾರಿಗೆ… ಮುಂದೆ ಓದಿ

ಎತ್ತಿನ ಹೊಳೆಯಿಂದ ಬಯಲು ಸೀಮೆಗೆ ಲಾಭ ನಷ್ಟದ ಪ್ರಶ್ನೆ ಅಲ್ಲ, ನಮ್ಮ ಜಿಲ್ಲೆಗೆ ಅಪಾಯ ಇಲ್ಲ !

Thursday, October 1st, 2015 | suddiblt | no responses ಬೆಳ್ತಂಗಡಿ : ಎತ್ತಿನ ಹೊಳೆಯ ಯೋಜನೆಯ ಬಗೆಗಿನ ಪಕ್ಷದ ಪ್ರತಿಕ್ರೀಯೆಯನ್ನು ಸರಿಯಾಗಿ ಅರ್ಥೈಸಿಕೊಳ್ಳದೆ… ಮುಂದೆ ಓದಿ

ಎತ್ತಿನಹೊಳೆ ಯೋಜನೆಯ ಎಡವಟ್ಟುಗಳು

ಎತ್ತಿನಹೊಳೆ ಯೋಜನೆಯ ಎಡವಟ್ಟುಗಳು

Thursday, October 1st, 2015 | suddiblt | no responses  ನಿಸರ್ಗದ ನಿಯಮಗಳಿಗೆ ಪ್ರತಿರೋಧ ಒಡ್ಡಿ ಹೊಸ ಯೋಜನೆಗಳನ್ನು ಜಾರಿ ತರಲು ನಾವು ಹೊರಟಾಗ… ಮುಂದೆ ಓದಿ

ಬರದಿಹುದರೆಣಿಕೆಯಲಿ...

ಬರದಿಹುದರೆಣಿಕೆಯಲಿ…

Thursday, September 10th, 2015 | suddiblt | no responses ಇತ್ತೀಚೆಗೆ ವಾಟ್ಸ್‌ಆಪ್‌ನಲ್ಲಿ ಹರಿದು ಬಂದ ಚಿತ್ರವೊಂದು ತುಂಬಾ ಚಿಂತನೆಗೀಡುಮಾಡಿತು. ಮೂವರು ಮಕ್ಕಳು ಊಟ… ಮುಂದೆ ಓದಿ

ಸಮಾಜದಲ್ಲಿ ಮಹಿಳೆಗೆ ಭದ್ರತೆಯಿದೆಯೇ...?

ಸಮಾಜದಲ್ಲಿ ಮಹಿಳೆಗೆ ಭದ್ರತೆಯಿದೆಯೇ…?

Thursday, September 10th, 2015 | suddiblt | no responses ರಾಜ್ಯದಲ್ಲಿ ಮಹಿಳಾ ಮತ್ತು ಮಕ್ಕಳ ಮೇಲಿನ ದೌರ್ಜನ್ಯ ಹಾಗೂ ಅತ್ಯಾಚಾರದಂತಹ ಗಂಭೀರ ಪ್ರಕರಣದ… ಮುಂದೆ ಓದಿ

ಜೈನರ ಸಲ್ಲೇಖನವ್ರತ ಆತ್ಮಹತ್ಯೆಯಲ್ಲ

ಜೈನರ ಸಲ್ಲೇಖನವ್ರತ ಆತ್ಮಹತ್ಯೆಯಲ್ಲ

Thursday, September 10th, 2015 | suddiblt | no responses ಜೈನ ಧರ್ಮದಲ್ಲಿ ಉತ್ತಮಗತಿ ಅಥವಾ ಪಂಚಮಗತಿಯನ್ನು ಪಡೆಯಲು ಸಾಯುವ ಕಾಲದಲ್ಲಿ ಪರಮಾತ್ಮನ ಧ್ಯಾನವಲ್ಲದೆ… ಮುಂದೆ ಓದಿ

ವ್ಯಕ್ತಿತ್ವ ವಿಕಸನ

ವ್ಯಕ್ತಿತ್ವ ವಿಕಸನ

Thursday, September 10th, 2015 | suddiblt | no responses ಮನುಷ್ಯ ಉತ್ತಮ ನಡೆನುಡಿ, ಆರೋಗ್ಯ ಹೊಂದುವುದು ಮುಖ್ಯ. ವ್ಯಕ್ತಿ ಪ್ರಯತ್ನದಿಂದ ಉತ್ತಮ ನಡವಳಿಕೆ,… ಮುಂದೆ ಓದಿ

ಉಧಾಮನ ಸೇಡಿನೊಂದಿಗೆ ಬಲಗೊಂಡ ಸ್ವಾತಂತ್ರ್ಯದ ಕಿಚ್ಚು

Friday, August 14th, 2015 | suddiblt | no responses ಸ್ವಾತಂತ್ರ್ಯವೆಂಬುದು ಬ್ರಿಟಿಷರು ನೀಡುವ ದಾನವಲ್ಲ, ಅಸಂಖ್ಯಾತ ದೇಶ ಭಕ್ತರ ಬಲಿದಾನದ ಫಲ ಎಂಬುದನ್ನು… ಮುಂದೆ ಓದಿ

ಸ್ವಾತಂತ್ರ್ಯೋತ್ಸವ ಸಂಭ್ರಮದೊಳಗೆ ತುಳುನಾಡ ಆಟಿ ಅಮವಾಸ್ಯೆ

Thursday, August 13th, 2015 | suddiblt | no responses ಸಾವಿರಾರು ವರ್ಷಗಳ ಇತಿಹಾಸವನ್ನು ಹೊಂದಿದ ಭಾರತಕ್ಕೆ, ಅನೇಕನೇಕ ವಿದೇಶಿಯರು ದಾಳಿಮಾಡಿ ಇಲ್ಲಿಯ ಸಂಪತ್ತನ್ನೆಲ್ಲ… ಮುಂದೆ ಓದಿ

ಭೂಮಿದಪ್ಪೆ

ಭೂಮಿದಪ್ಪೆ

Thursday, August 13th, 2015 | suddiblt | no responses ಬಂಧು ಬಾಂಧವೆರೆ ಪಜ್ಜೆ ದೀಲೆ,
ನಿಕುಲು ದುಂಬು ದುಂಬು ಪೋಲೇ..
ದೇಶೊ ಸೇವೆಡ್… ಮುಂದೆ ಓದಿ

ಶಿಕ್ಷಣ ಸಾಲ ವಿದ್ಯಾರ್ಥಿಗಳ ಶೈಕ್ಷಣಿಕ ಬದುಕಿಗೆ ರಹದಾರಿಯಾಗಿದೆ

Thursday, August 13th, 2015 | suddiblt | no responses ಶಿಕ್ಷಣ ಸಾಲ ಯಾರಿಗೆ ಸಿಗುತ್ತದೆ:- ಭಾರತೀಯ ಪ್ರಜೆ ದೇಶದ ಅಥವಾ ವಿದೇಶದ ಯಾವ… ಮುಂದೆ ಓದಿ

ಸಹಕಾರಿ ಚಳವಳಿ ಹುಟ್ಟುಹಾಕಿ ಬೆಳೆಸಿದ ಸಹಕಾರಿ  ಪಿತಾಮಹ ದಿ| ಮೊಳಹಳ್ಳಿ ಶಿವರಾಯರು

Thursday, August 13th, 2015 | suddiblt | no responses ವ್ಯಾಪಕವಾಗಿ ಹಾಗೂ ಅಷ್ಟೇ ಬಲಿಷ್ಠವಾಗಿ ಈ ಮಣ್ಣಿನಲ್ಲಿ ನೆಲೆಯಾಗಿರುವ ಸಹಕಾರೀ ಕ್ಷೇತ್ರದಲ್ಲಿ ಕೆಲಸಮಾಡುತ್ತಿರುವ… ಮುಂದೆ ಓದಿ

ಎತ್ತ ಸಾಗುತಿದೆ ಸ್ವಾತಂತ್ರ್ಯ ನೌಕೆ

ಎತ್ತ ಸಾಗುತಿದೆ ಸ್ವಾತಂತ್ರ್ಯ ನೌಕೆ

Thursday, August 13th, 2015 | suddiblt | no responses ಸ್ವಾತಂತ್ರ್ಯ ॒ಸ್ವಾತಂತ್ರ್ಯ ಎಂದರೆ ಒಬ್ಬ ವ್ಯಕ್ತಿ ಅವನ ಇಚ್ಛೆಗೆ ತಕ್ಕಂತೆ ಯಾರ ನುಡಿಗಳಿಗೂ… ಮುಂದೆ ಓದಿ

ನರಕದ ಬಾಗಿಲುಗಳು

ನರಕದ ಬಾಗಿಲುಗಳು

Thursday, August 13th, 2015 | suddiblt | no responses ಸುಖದ ಬಯಕೆ ಎಲ್ಲರ ಹಾರೈಕೆ. ಆದರೆ ಈ ಸುಖ ಎಂಬುದಕ್ಕೆ ಒಂದು ಒಮ್ಮತವಾದ… ಮುಂದೆ ಓದಿ

ಕಲಾಮರಿಗೊಂದು ಪ್ರಣಾಮ

ಕಲಾಮರಿಗೊಂದು ಪ್ರಣಾಮ

Friday, August 7th, 2015 | suddiblt | no responses ದೊಡ್ಡದಾದ ಆನೆಯನ್ನು ಸಣ್ಣದಾದ ಕನ್ನಡಿಯಲ್ಲಿ ತೋರಿಸಿದಂತೆ ಮೊನ್ನೆ ಮರೆಯಾದ ಮಹಾತ್ಮ ಅಬ್ದುಲ್ ಕಲಾಂ… ಮುಂದೆ ಓದಿ

ಮಾನಸಿಕ ನೆಮ್ಮದಿಗೆ ಮೂಲ ಮಂತ್ರ- ಏಕಾಗ್ರತೆ

ಮಾನಸಿಕ ನೆಮ್ಮದಿಗೆ ಮೂಲ ಮಂತ್ರ- ಏಕಾಗ್ರತೆ

Friday, August 7th, 2015 | suddiblt | no responses ಒಬ್ಬ ವ್ಯಕ್ತಿ ಉತ್ತಮ ವಿದ್ಯಾರ್ಥಿ, ಕುಶಲಕರ್ಮಿ, ನಿಪುಣ ಡ್ರೈವರ್ ಎಣಿಸಿಕೊಳ್ಳಬೇಕಾದರೆ ಆತನಲ್ಲಿರುವ ಏಕಾಗ್ರತೆಯಿಂದ… ಮುಂದೆ ಓದಿ

ಆರೋಗ್ಯ ಮಿತ್ರ ಬಿಲ್ವಪತ್ರೆ

ಆರೋಗ್ಯ ಮಿತ್ರ ಬಿಲ್ವಪತ್ರೆ

Friday, August 7th, 2015 | suddiblt | no responses ಬಿಲ್ವಪತ್ರೆ ಶಿವನಿಗೆ ಬಹುಪ್ರಿಯ. ಶಿವಪೂಜೆಯಲ್ಲಿ ಬಿಲ್ವಪತ್ರೆಗೆ ಅಗ್ರಸ್ಥಾನ. ಹಾಗೆಯೇ ಪೂಜೆಗಷ್ಟೇ ಅಲ್ಲದೆ ಆರೋಗ್ಯದಲ್ಲೂ… ಮುಂದೆ ಓದಿ

ಆ.9-ವಿಶ್ವ ಆದಿವಾಸಿ ದಿನ: ಮೂಡಬೇಕಿದೆ ಭರವಸೆ

ಆ.9-ವಿಶ್ವ ಆದಿವಾಸಿ ದಿನ: ಮೂಡಬೇಕಿದೆ ಭರವಸೆ

Friday, August 7th, 2015 | suddiblt | no responses ಅರಣ್ಯ ಮೂಲ ಬುಡಕಟ್ಟು ಸಮುದಾಯ ಪ್ರಕೃತಿಯೊಂದಿಗೆ ಸಹಬಾಳ್ವೆಯಿಂದ ಬದುಕುತ್ತಿದೆ. ನೆಲ-ಜಲ ಕಾಡು ಜೀವನಾಡಿಯಾಗಿ… ಮುಂದೆ ಓದಿ

ವಿಜಯೋತ್ಸವಾಚರಣೆ

ವಿಜಯೋತ್ಸವಾಚರಣೆ

Friday, August 7th, 2015 | suddiblt | no responses ೧೯೯೯ರ ಜುಲೈ ೨೬ ರಂದು ಭಾರತದ ವೀರ ಯೋಧರು ಕೆಚ್ಚೆದೆಯಿಂದ ಪಾಕ್ ಸೇನೆಯನ್ನು… ಮುಂದೆ ಓದಿ

ಬೆಳ್ತಂಗಡಿ ತಾಲೂಕಿನ ಜನತೆಗೆ ಸ್ವಾತಂತ್ರ್ಯೋತ್ಸವದ ಕೊಡುಗೆ ಸುದ್ದಿ ಮಾಧ್ಯಮದ ಮುಖಾಂತರ ಇಲಾಖೆಗಳ ಮಾಹಿತಿ-ಸೇವೆಗಳ ಪರಿಚಯ

Friday, August 7th, 2015 | suddiblt | no responses ಇದು ಮಾಹಿತಿ ಯುಗ. ಸರಿಯಾದ ಮಾಹಿತಿ ಇದ್ದರೆ ಅರ್ಧ ಯಾಕೆ ಪೂರ್ಣ ಕೆಲಸ… ಮುಂದೆ ಓದಿ

5

55

ಬೆಳ್ತಂಗಡಿ: ದ.ಕ ಜಿಲ್ಲಾ ಸಾರ್ವಜನಿಕ ಶಿಕ್ಷಣ ಇಲಾಖೆ, ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಚೇರಿ ಬೆಳ್ತಂಗಡಿ, ಶಿಶು ಮತ್ತು ಮಹಿಳಾ ಅಭಿವೃದ್ಧಿ ಇಲಾಖೆ ಬೆಳ್ತಂಗಡಿ, ಜಮ್ಯೀಯತುಲ್ ಫಲಾಹ್ ಬೆಳ್ತಂಗಡಿ ಘಟಕ ಇದರ ಸಹಯೋಗದಲ್ಲಿ ಎಸ್.ಎಸ್.ಎಲ್.ಸಿ ವಿದ್ಯಾರ್ಥಿಗಳಿಗೆ ಪ್ರೇರಣಾ ಶಿಬಿರ ಹಾಗೂ ಪೋಷಕರೊಂದಿಗೆ ಸಂವಾದ ಕಾರ್ಯಕ್ರಮ ಫೆ.15ರಂದು ಇಲ್ಲಿಯ ಶ್ರೀ ಧ.ಮಂ ಸಭಾಭವನದಲ್ಲಿ ಜರುಗಿತು.
ಬೆಳ್ತಂಗಡಿ ಕ್ಷೇತ್ರದ ಶಾಸಕ ಕೆ.ವಸಂತ ಬಂಗೇರ ಅವರು ಶಿಬಿರವನ್ನು ದೀಪ ಬೆಳಗಿಸಿ ಉದ್ಘಾಟಿಸಿ ಮಾತನಾಡಿ, ಈ ಬಾರಿ ಎಸ್ಸೆಸ್ಸೆಲ್ಸಿಯಲ್ಲಿ ಪರೀಕ್ಷೆಗೆ ಹಾಜರಾದ ತಾಲೂಕಿನ ಎಲ್ಲಾ ವಿದ್ಯಾರ್ಥಿಗಳು ಪಾಸಾಗಿ ಉತ್ತಮ ಫಲಿತಾಂಶ ಬರಬೇಕು ಎಂಬ ಉದ್ದೇಶದಿಂದ ಈ ಶಿಬಿರ ಹಮ್ಮಿಕೊಳ್ಳಲಾಗಿದೆ. ವಿದ್ಯಾರ್ಥಿಗಳು ಸತತ ಶ್ರಮವಹಿಸಿ ಉತ್ತಮ ಸಾಧನೆ ಮಾಡಬೇಕು ಎಂದರು. ಪೋಷಕರು ವಿದ್ಯಾರ್ಥಿಗಳಿಂದ ಮನೆ ಕೆಲಸವನ್ನು ಮಾಡಿದರೆ ಅವರಿಗೆ ಓದಲು ಸಮಯ ಸಿಗುವುದಿಲ್ಲ. ಆದ್ದರಿಂದ ವಿದ್ಯಾರ್ಥಿಗಳಿಂದ ಯಾವುದೇ ಕೆಲಸವನ್ನು ಮಾಡಿಸದೇ ಅವರಿಗೆ ಓದಲು ಹೆಚ್ಚು ಸಮಯ ಸಿಗುವಂತೆ ಮಾಡಬೇಕು ಎಂದು ತಿಳಿಸಿದರು.
ಇಂದು ಸರಕಾರಿ ಶಾಲೆಯಲ್ಲಿ ಉತ್ತಮ ಶಿಕ್ಷಣ ದೊರೆಯುತ್ತಿದೆ. ಎಲ್ಲಾ ಶಿಕ್ಷಕರು ಉತ್ತಮವಾಗಿ ಕೆಲಸ ಮಾಡುತ್ತಿದ್ದಾರೆ. ವಿದ್ಯಾರ್ಥಿಗಳ ಸಾಧನೆ, ಅಧ್ಯಾಪಕರ ಪ್ರಾಮಾಣಿಕ ಪ್ರಯತ್ನ ಜೊತೆಗೆ ಹೆತ್ತವರ ಸಹಕಾರ ಇದ್ದರೆ ಶಾಲೆಗೆ ಉತ್ತಮ ಫಲಿತಾಂಶ ಬರುತ್ತದೆ ಎಂಬುದಕ್ಕೆ ಗುರುವಾಯನಕೆರೆ ಪ್ರೌಢ ಶಾಲೆ ಉದಾರಣೆಯಾಗಿದೆ. ಈ ವರ್ಷ 6ನೇ ಬಾರಿ ಶೇ 100 ಫಲಿತಾಂಶ ಪಡೆಯಲು ಈ ಶಾಲೆಯವರು ಸತತ ಪ್ರಯತ್ನಗಳನ್ನು ಮಾಡುತ್ತಿದ್ದಾರೆ ಎಂದು ತಿಳಿಸಿದರು.
ಜಿಲ್ಲಾ ವಿದ್ಯಾಂಗ ಉಪನಿರ್ದೇಶಕ ವಾಲ್ಟರ್ ಡಿ’ಮೊಲ್ಲೋ ಮಾತನಾಡಿ ದ.ಕ ಜಿಲ್ಲೆಯಲ್ಲಿ ಬೆಳ್ತಂಗಡಿ ತಾಲೂಕು ಶಿಕ್ಷಣ ಕ್ಷೇತ್ರದಲ್ಲಿ ಮುಂಚೂಣಿಯಲ್ಲಿದ್ದು, ಇದಕ್ಕೆ ಇಲ್ಲಿಯ ಮುಖ್ಯ ಶಿಕ್ಷಕರು ಹಾಗೂ ಶಿಕ್ಷಕರು, ಶಿಕ್ಷಕರ ಸಂಘಟನೆಗಳು ಕಾರಣರಾಗಿದ್ದಾರೆ ಎಂದರು. ಎಸ್ಸೆಸ್ಸೆಲ್ಸಿ ಪರೀಕ್ಷೆಗೆ ಇನ್ನೂ ಕೇವಲ 42 ದಿನಗಳು ಮಾತ್ರ ಬಾಕಿಯಿದ್ದು, ವಿದ್ಯಾರ್ಥಿಗಳು ಓದಿನ ಕಡೆಗೆ ಹೆಚ್ಚು ಗಮನ ಹರಿಸಿ ಉತ್ತಮ ಫಲಿತಾಂಶವನ್ನು ಪಡೆಯಲು ಶ್ರಮವಹಿಸುವಂತೆ ಕರೆ ನೀಡಿದರು.
ದ.ಕ ಜಿ.ಪಂ ಶಿಕ್ಷಣ ಮತ್ತು ಆರೋಗ್ಯ ಸ್ಥಾಯಿ ಸಮಿತಿ ಅಧ್ಯಕ್ಷ ಶಾಹುಲ್ ಹಮೀದ್ ಪ್ರಾಸ್ತವಿಕವಾಗಿ ಮಾತನಾಡಿ ಶಿಬಿರದ ಉದ್ದೇಶಗಳನ್ನು ವಿವರಿಸಿದರು. ನ.ಪಂ ಅಧ್ಯಕ್ಷ ಮುಗುಳಿ ನಾರಾಯಣ ರಾವ್, ಜಿ.ಪಂ ಸದಸ್ಯೆ ಮಮತಾ ಎಂ. ಶೆಟ್ಟಿ, ತಾ.ಪಂ ಸ್ಥಾಯಿ ಸಮಿತಿ ಅಧ್ಯಕ್ಷ ಸುಧೀರ್ ಆರ್.ಸುವರ್ಣ, ಜಮ್ಯೀಯತುಲ್ ಫಲಾಹ್ ತಾಲೂಕು ಅಧ್ಯಕ್ಷ ಅಬ್ಬೋನು ಮದ್ದಡ್ಕ, ಪ್ರಧಾನ ಕಾರ್ಯದರ್ಶಿ ಹಾಜಿ ಅಬ್ದುಲ್‌ಲತೀಫ್ ಸಾಹೇಬ್, ಮಾಜಿ ಅಧ್ಯಕ್ಷ ಉಮ್ಮರ್‌ಕುಂಞ ನಾಡ್ಜೆ, ಜಿ.ಪಂ ಮಾಜಿ ಸದಸ್ಯ ರಾಜಶೇಖರ ಅಜ್ರಿ, ತಾ.ಪಂ ಸದಸ್ಯರಾದ ಗೋಪಿನಾಥ ನಾಯಕ್, ಜಯರಾಮ, ಜಮ್ಯೀಯತುಲ್ ಫಲಾಹ್‌ನ ಜಿಲ್ಲಾ ಕಾರ್ಯದರ್ಶಿ ಜಮೀರ್‌ಷಾ, ತಾಲೂಕು ಸದಸ್ಯರಾದ ಕಾಸಿಂ ಪದ್ಮುಂಜ, ಅಹಮ್ಮದ್ ಉಜಿರೆ, ಎಸ್.ಎಂ ಕೋಯ, ಶಿಶುಅಭಿವೃದ್ಧಿ ಅಧಿಕಾರಿ ಸರಸ್ವತಿ, ಪ್ರೌಢ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ರಾಜಗುರು ಹೆಬ್ಬಾರ್, ಶಿಕ್ಷಣ ಸಮನ್ವಯಾಧಿಕಾರಿ ಗಣೇಶ್ ಉಪಸ್ಥಿತರಿದ್ದರು.
ಜಿಲ್ಲಾ ಪ್ರಶಸ್ತಿ ಪಡೆದ, ಗಣಿತ ಲೋಕದ ರೂವಾರಿ ನಡ ಪ್ರೌಢ ಶಾಲಾ ಶಿಕ್ಷಕ ಯಾಕೂಬ್ ಇವರಿಗೆ ಸನ್ಮಾನ ಹಾಗೂ ವಿಕಲಾಂಗ ನಡ ಶಾಲೆಯ ವಿದ್ಯಾರ್ಥಿ ವಸೀಂ ಅಕ್ರಮ್‌ಗೆ ಜಮ್ಯೀಯತುಲ್ ಫಲಾಹ್ ವತಿಯಿಂದ ನೀಡಿದ ತ್ರಿಚಕ್ರ ವಾಹನದ ಕೀಯನ್ನು ಶಾಸಕರು ಹಸ್ತಾಂತರಿಸಿದರು. ಹಾಜಿ ಅಬ್ದುಲ್ ಲತೀಫ್ ಸಾಹೇಬ್ ಕುರಾನ್ ಪಠಿಸಿದರು. ವಾಣಿ ಪ್ರೌಢ ಶಾಲಾ ವಿದ್ಯಾರ್ಥಿಗಳ ಪ್ರಾರ್ಥನೆ ಬಳಿಕ ಕ್ಷೇತ್ರ ಶಿಕ್ಷಣಾಧಿಕಾರಿ ತಾರಾಕೇಸರಿ ಸ್ವಾಗತಿಸಿದರು. ಶಿಕ್ಷಣ ಸಂಯೋಜಕರಾದ ಸುಭಾಶ್ ಜಾದವ್ ಕಾರ್ಯಕ್ರಮ ನಿರೂಪಿಸಿ, ರಮೇಶ್ ಕೆ.ವಂದಿಸಿದರು. ಶಿಬಿರದಲ್ಲಿ ಸುಮಾರು ೬೦೦ಕ್ಕೂ ಹೆಚ್ಚು ವಿದ್ಯಾರ್ಥಿಗಳು ಷೋಷಕರ ಜೊತೆ ಭಾಗವಹಿಸಿದ್ದರು.

ashwath hegde copy ಬಳಂಜ : ಬಳಂಜ ಗ್ರಾಮದ ಯುವ ಉದ್ಯಮಿ ಅಶ್ವಥ್ ಹೆಗ್ಡೆಯವರು ಅಮೇರಿಕಾದ ಪ್ರಸಿದ್ಧ ನಿಯತಕಾಲಿಕದವರು ಪ್ರಕಟಿಸಿದ ಫೋರ್ಬ್ಸ್ ನಿಯತಕಾರಿಕದವರು ಪ್ರಕಟಿಸಿದ ಯುವ ಸಾಧಕ ಪಟ್ಟಿಯಲ್ಲಿ ಸ್ಥಾನ ಪಡೆದಿದ್ದಾರೆ. ಅನಿವಾಸಿ ಭಾರತೀಯ ಉದ್ಯಮಿಯಾಗಿರುವ ಇವರು ಎನ್ವಿಗ್ರೀನ್ ಬಯೋಟೆಕ್ ಸಂಸ್ಥೆಯ ಮೂಲಕ ಪ್ರಸ್ತುತ ಪಡಿಸಿದ ಪ್ಲಾಸ್ಟಿಕ್ ಮುಕ್ತ ಪ್ಯಾಕೇಜಿಂಗ್ ತಂತ್ರಜ್ಞಾನಗಳಿಗೆ ಈ ಪ್ರಶಸ್ತಿಯ ಗರಿಮೆ ಲಭಿಸಿದೆ.
ಪ್ರತಿವರ್ಷ ಫೋರ್ಬ್ಸ್ ಇಂಡಿಯಾ ಕೊಡಮಾಡುವ ಫೋರ್ಬ್ಸ್ ಇಂಡಿಯಾ 30 ಅಂಡರ್ 30 ಸಾಧಕರಲ್ಲಿ ಅಶ್ವಥ್ ಹೆಗ್ಡೆ ಒಬ್ಬರಾಗಿದ್ದು ಈ ಗೌರವವನ್ನು ಪಡೆದಿದ್ದಾರೆ. ಪ್ರಶಸ್ತಿಯನ್ನು ಗ್ರೀನ್ ಟೆಕ್ನಾಲಜಿ ವಿಭಾಗದಲ್ಲಿ ಪಡೆದ ಅತೀ ಕಿರಿಯ ಸಾಧಕ ಮತ್ತು ಪ್ರಪ್ರಥಮ ಬಾರಿಗೆ ಕರ್ನಾಟಕದ ಉದ್ಯಮಿ ಈ ಹಿರಿಮೆಗೆ ಭಾಜನರಾಗಿದ್ದಾರೆ. ಎನ್ವಿಗ್ರೀನ್ ತಂತ್ರಜ್ಞಾನವನ್ನು ಕೇಂದ್ರ ಸರ್ಕಾರದ ಸಂಸ್ಥೆ (ಸೆಂಟ್ರಲ್ ಇನ್ಸ್ಟಿಟ್ಯೂಟ್ ಆ ಪ್ಲಾಸ್ಟಿಕ್ ಇಂಜಿನಿಯರಿಂಗ್ ಟೆಕ್ನಾಲಜಿ) 100% ಪ್ಲಾಸ್ಟಿಕ್ ಮುಕ್ತವಾಗಿದೆ ಎಂದು ಪ್ರಮಾಣಿಕರಿಸಿದೆ.
ಇವರು ಬಳಂಜ ಗ್ರಾಮದ ಅರುಣ ಹೆಗ್ಡೆ ಮತ್ತು ಸುನಂದಾ ಹೆಗ್ಡೆಯವರ ಪುತ್ರರಾಗಿರುವ ಇವರು ಬೆಳ್ತಂಗಡಿಯ ಸಂತ ತೆರೆಸಾ ಪ್ರೌಢ ಶಾಲೆಯ ಹಳೆ ವಿದ್ಯಾರ್ಥಿ.

JC PHT

jc

jcc

jccc

jcccc

ಬೆಳ್ತಂಗಡಿ : ಕಳೆದ 39 ವರ್ಷಗಳಿಂದ ಹಲವಾರು ಸಮಾಜಮುಖಿ ಕೆಲಸಕಾರ್ಯಗಳನ್ನು ಹಮ್ಮಿಕೊಂಡು ಜನರ-ಪ್ರೀತಿ ವಿಶ್ವಾಸ ಗಳಿಸಿರುವ ಜೇಸಿಐ ಬೆಳ್ತಂಗಡಿ ಮಂಜುಶ್ರೀ ವತಿಯಿಂದ ಫೆ.14ರಂದು ಸರಕಾರಿ ಆಸ್ಪತ್ರೆ ಬೆಳ್ತಂಗಡಿಗೆ ತೆರಳಿ ರೋಗಿಗಳಿಗೆ ಸಾಂತ್ವನ ಹೇಳುವ ಮುಖೇನ ಹಣ್ಣು ಹಂಪಲು ಹಾಗೂ ಏರ್‌ಟೆಲ್ ಕಂಪೆನಿಯಿಂದ ಕೊಡಲ್ಪಡುವ ಟಾರ್ಚ್‌ನ್ನು ವಿತರಿಸಲಾಯಿತು.
ಈ ಸಂದರ್ಭ ಆಸ್ಪತ್ರೆಯ ಸರ್ಜನ್ ಡಾ| ರಾಜೇಶ್, ಜೇಸಿಐ ಬೆಳ್ತಂಗಡಿ ಮಂಜುಶ್ರೀಯ ಅಧ್ಯಕ್ಷ ಸಂತೋಷ್.ಪಿ ಕೋಟ್ಯಾನ್ ಬಳಂಜ, ನಿಕಟಪೂರ್ವಾಧ್ಯಕ್ಷ ವಸಂತ ಶೆಟ್ಟಿ, ವಲಯಾಧಿಕಾರಿ ಚಿದಾನಂದ ಇಡ್ಯ, ಜೇಸಿ ಪೂರ್ವಾಧ್ಯಕ್ಷ, ಸ್ಥಾಯಿ ಸಮಿತಿ ಅಧ್ಯಕ್ಷರಾಗಿರುವ ಸಂತೋಷ್ ಕುಮಾರ್ ಜೈನ್, ಅಶೋಕ್ ಕುಮಾರ್ ಬಿ.ಪಿ, ಶ್ರೀನಾಥ್ ಕೆ.ಎಂ, ನಾರಾಯಣ ಶೆಟ್ಟಿ, ಕಾರ್ಯದರ್ಶಿ ರಂಜಿತ್ ಹೆಚ್.ಡಿ, ಕೋಶಾಧಿಕಾರಿ ವಿಶಾಲ್ ಅಗಸ್ಟಿನ್, ಉಪಾಧ್ಯಕ್ಷರಾಗಿ ಗಣೇಶ್ ಶಿರ್ಲಾಲು, ಅಭಿನಂದನ್ ಹರೀಶ್ ಕುಮಾರ್, ಸ್ವರೂಪ್, ಪ್ರಶಾಂತ್ ಲಾಯಿಲ, ಕಿರಣ್ ಕುಮಾರ್ ಶೆಟ್ಟಿ, ದಾಮೋದರ್, ಯುವ ಜೇಸಿ ಅಧ್ಯಕ್ಷ ಮನೋಜ್, ಜೊತೆ ಕಾರ್ಯದರ್ಶಿ ಪ್ರೀತಂ ಶೆಟ್ಟಿ, ಗುರುರಾಜ್, ಶಿವಪ್ರಸಾದ್, ಜಿತೇಶ್ ಕುಮಾರ್ ಹಾಗೂ ಆಸ್ಪತ್ರೆಯ ಸಿಬ್ಬಂದಿ ವರ್ಗದವರು ಉಪಸ್ಥಿತರಿದ್ದರು.

sd

skdrdpಧರ್ಮಸ್ಥಳ :  ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಮತ್ತು ಬೆಳ್ತಂಗಡಿ ತಾಲೂಕು ವಲಯ ಒಕ್ಕೂಟಗಳು ಇವರ ಸಹಭಾಗಿತ್ವದಲ್ಲಿ ಬೆಳ್ತಂಗಡಿ ತಾಲೂಕು ಧರ್ಮಸ್ಥಳ ವಲಯ ಒಕ್ಕೂಟಗಳ ಪದಗ್ರಹಣ ಸಮಾರಂಭ ಮತ್ತು ಎಸ್.ಕೆ.ಡಿ.ಆರ್.ಡಿ.ಪಿ-ಎಸ್.ಎಚ್.ಜಿ ಆಪ್ ಬಿಡುಗಡೆಯು ಇಂದು (ಫೆ.15) ಧರ್ಮಸ್ಥಳದ ಅಮೃತವರ್ಷಿಣಿ ಸಭಾಂಗಣದಲ್ಲಿ ನಡೆಯಿತು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಶ್ರೀ ಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿ ಡಾ| ಡಿ.ವೀರೇಂದ್ರ ಹೆಗ್ಗಡೆಯವರು ವಹಿಸಿದ್ದರು. ಮುಂಬೈ ನಬಾರ್ಡ್ ಅಧ್ಯಕ್ಷ ಡಾ| ಹರ್ಷಕುಮಾರ್ ಭಾನ್ವಾಲಾ ಎಸ್.ಕೆ.ಡಿ.ಆರ್.ಡಿ.ಪಿ-ಎಸ್.ಎಚ್.ಜಿ ಆಪ್ ಬಿಡುಗಡೆ ಮಾಡಿದರು. ಮಂಗಳೂರು ಕಾರ್ಪೋರೇಷನ್ ಬ್ಯಾಂಕ್ ಕಾರ್ಯನಿರ್ವಾಹಕ ನಿರ್ದೇಶಕರಾದ ಜಿ.ಎಂ ಭಗತ್ ಟ್ಯಾಬ್ ಫೋನ್ ವಿತರಣೆ ಮಾಡಿದರು. ಜ್ಞಾನವಿಕಾಸ ಮಹಿಳಾ ಕಾರ್ಯಕ್ರಮ ಅಧ್ಯಕ್ಷೆ ಶ್ರೀಮತಿ ಹೇಮಾವತಿ ವೀ.ಹೆಗ್ಗಡೆಯವರು ಪದಗ್ರಹಣದ ಭಾಷಣ ಮಾಡಿದರು. ಮುಖ್ಯ ಅತಿಥಿಗಳಾಗಿ ಬೆಳ್ತಂಗಡಿ ವಿಧಾನಸಭಾ ಕ್ಷೇತ್ರ ಶಾಸಕ ವಸಂತ ಬಂಗೇರ, ಬೆಂಗಳೂರು ಶ್ರೀ.ಧ.ಮ ಶಿಕ್ಷಣ ಸಂಸ್ಥೆ ಯೋಜನಾ ನಿರ್ದೇಶಕರಾದ ಶ್ರೇಯಸ್ ಕುಮಾರ್, ಬೆಂಗಳೂರು ನಬಾರ್ಡ್ ಮುಖ್ಯ ಮಹಾಪ್ರಬಂಧಕರಾದ ಎಂ.ಐ.ಗಣಗಿ ಮುಖ್ಯ ಅತಿಥಿಗಳಾಗಿ ಆಗಮಿಸಿದ್ದರು.
ಹಣಕಾಸು ನಿರ್ದೇಶಕರಾದ ಶಾಂತಾರಾಮ್ ಆರ್.ಪೈ, ತಂತ್ರಜ್ಞಾನ ನಿರ್ದೇಶಕರಾದ ಡಿ.ಜಯರಾಮ್, ಕಾರ್ಯನಿರ್ವಾಹಕ ನಿರ್ದೇಶಕರಾದ ಡಾ| ಎಲ್.ಎಚ್ ಮಂಜುನಾಥ್, ನಿರ್ದೇಶಕರಾದ ಚಂದ್ರಶೇಖರ್, ಯೋಜನಾಧಿಕಾರಿ ಶ್ರೀಮತಿ ರೂಪಾ ಜೈನ್ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.

 ರಾಜ್ಯದಲ್ಲಿ ಹೊಸ ಬೋರ್‌ವೆಲ್ ಕೊರೆಯುವುದನ್ನು ತಡೆಗಟ್ಟಿದ ಆದೇಶವನ್ನು ಪರಿಷ್ಕರಿಸಿ, ಅಂತರ್ಜಲ ಬಳಸಲು ಸುರಕ್ಷಿತ ಎಂದು ವರ್ಗೀಕರಿಸಲಾಗಿರುವ ದ.ಕ ಜಿಲ್ಲೆಯ 4 ಹಾಗೂ ಉಡುಪಿ ಜಿಲ್ಲೆಯ 3 ತಾಲೂಕುಗಳು ಸೇರಿದಂತೆ ರಾಜ್ಯದ 65 ತಾಲೂಕುಗಳಲ್ಲಿ ಖಾಸಗಿ ನೀರಾವರಿ ಕೊಳವೆ ಬಾವಿಗಳನ್ನು ಕೊರೆಯಲು ಸರಕಾರ ಮಂಜೂರಾತಿ ನೀಡಿದೆ.
ಇದರನ್ವಯ ದ.ಕ ಜಿಲ್ಲೆಯ ಬಂಟ್ವಾಳ, ಬೆಳ್ತಂಗಡಿ, ಮಂಗಳೂರು, ಸುಳ್ಯ, ಉಡುಪಿ ಜಿಲ್ಲೆಯ ಕಾರ್ಕಳ, ಕುಂದಾಪುರ ಹಾಗೂ ಉಡುಪಿ ತಾಲೂಕಿನಲ್ಲಿ ಖಾಸಗಿ ನೀರಾವರಿ ಕೊಳವೆ ಬಾವಿಗಳನ್ನು ಕೊರೆಯಲು ಅನುಮತಿಸಲು ಸರಕಾರ ನಿರ್ಧರಿಸಿದೆ ಎಂದು ಪ್ರಕಟನೆ ತಿಳಿಸಿದೆ.

dk basava prasasthi pradhana copy ಹೊಸಂಗಡಿ: ರಾಜಕೀಯ ಕ್ಷೇತ್ರದ ಸಾಧನೆಯನ್ನು ಗುರುತಿಸಿ ನಾರಾವಿ ಜಿ.ಪಂ. ಸದಸ್ಯ ಪಿ. ಧರಣೇಂದ್ರ ಕುಮಾರ್ ಅವರಿಗೆ ಹಾವೇರಿಯ ಬಸವೇಶ್ವರ ಪೌಂಡೇಶನ್ ವತಿಯಿಂದ ಹಾವೇರಿಯ ರಾಣೆಬೆನ್ನೂರಿನ ಶಿಕ್ಷಕರ ಭವನದಲ್ಲಿ ರಾಷ್ಟ್ರೀಯ ಬಸವರತ್ನ ಪ್ರಶಸ್ತಿಯನ್ನು ಫೆ. 11ರಂದು ಪ್ರದಾನ ಮಾಡಲಾಯಿತು.
ಹಂಪಿ ಮುನಿರಾಬಾದ್ ಸದ್ದಾಮಪೀಠದ ಶ್ರೀ ಜಗದ್ಗುರು ಮದುಮಯಾನಂದ ಮಹಾ ಸ್ವಾಮೀಜಿ ಅವರು ಗಣ್ಯರ ಸಮ್ಮುಖದಲ್ಲಿ ಈ ಪ್ರಶಸ್ತಿ ಪ್ರದಾನ ಮಾಡಿದರು.
ರಾಣೆಬೆನ್ನೂರ ಪುಟ್ಟಯ್ಯಪೀಠದ ಶ್ರೀ ಗುರುಬಸವ ಮಹಾಸ್ವಾಮೀಜಿ, ಹಾವೇರಿ ಜಿಲ್ಲಾ ಬಿಜೆಪಿ ಉಪಾಧ್ಯಕ್ಷ ಡಾ| ಬಸವರಾಜ ಕೇಲಗಾರ, ಜಗಜ್ಯೋತಿ ಪತ್ರಿಕೆಯ ಸಂಪಾದಕ ಬಸವರಾಜ್ ಎಚ್. ಮಲ್ಲಿ ಮುಖ್ಯ ಅತಿಥಿಗಳಾಗಿ ಉಪಸ್ಥಿತರಿದ್ದರು.
ಖಾಲಿದ್ ಪುಲಾಬೆ, ಇಸ್ಮಾಯಿಲ್ ಕೆ. ಪೆರಿಂಜೆ, ಸುದರ್ಶನ, ಅಕ್ಬರ್ ಆಲಿ ಜೊತೆಗಿದ್ದರು.

jayaವೇಣೂರು: ಮುಖ್ಯಮಂತ್ರಿ ಸಿದ್ದರಾಮಯ್ಯರವರ ಉಪಸ್ಥಿತಿಯಲ್ಲಿ ರಾಜ್ಯಪಾಲ ವಜುಭಾಯಿ ವಾಲಾ ಅವರಿಂದ ಬೆಂಗಳೂರಿನಲ್ಲಿ ಜರಗಿದ ಗಣರಾಜ್ಯೋತ್ಸವ ಸಮಾರಂಭದಲ್ಲಿ ರಾಜ್ಯ ಮಟ್ಟದ ‘ಸರ್ವೋತ್ತಮ ಸೇವಾ ಪ್ರಶಸ್ತಿ ಪಡೆದುಕೊಂಡ ಬೆಳ್ತಂಗಡಿ ಸರಕಾರಿ ನೌಕರರ ಸಂಘದ ಸ್ಥಾಪಕಾಧ್ಯಕ್ಷರಾಗಿರುವ ವೇಣೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಆಡಳಿತಾಧಿಕಾರಿಯಾದ ಕೆ. ಜಯಕೀರ್ತಿ ಜೈನ್ ಧರ್ಮಸ್ಥಳ ಅವರನ್ನು ದೇವಳದ ಅರ್ಚಕ ವೃಂದ ಹಾಗೂ ಸಿಬ್ಬಂದಿ ವರ್ಗದವರು ಸನ್ಮಾನಿಸಿದರು. ಪ್ರಧಾನ ಅರ್ಚಕ ವಿಷ್ಣುಮೂರ್ತಿ ಭಟ್, ಅರ್ಚಕ ಆನಂದ ಭಟ್, ಗುಮಾಸ್ತ ಕೊರಗಪ್ಪ ಎಂ., ಸಿಬ್ಬಂದಿಗಳಾದ ಭರತ್‌ರಾಜ್, ಗುಲಾಬಿ, ಕುಕ್ಕೇಡಿ ಗ್ರಾ.ಪಂ. ಉಪಾಧ್ಯಕ್ಷ ಅಶೋಕ್ ಪಾಣೂರು, ವಿಜಯ ಬ್ಯಾಂಕ್ ನಿವೃತ್ತ ಪ್ರಬಂಧಕ ಎಚ್. ಸೋಮಯ್ಯ ಅನೈನಡೆ, ಉದ್ಯಮಿ ಜಗದೀಶ್ ಭಟ್ ಹಾಗೂ ಮತ್ತಿತರರು ಜೊತೆಗಿದ್ದರು.

airtel 1

airtel

   ಬೆಳ್ತಂಗಡಿ : ಅತ್ಯಂತ ವೇಗವಾದ ಏರ್‌ಟೆಲ್ 4G ನೆಟ್‌ವರ್ಕ್ ಗೆ ಫೆ.13ರಂದು ಬಸ್‌ಸ್ಟಾಂಡ್ ಬೆಳ್ತಂಗಡಿಯಲ್ಲಿ ಅಧಿಕೃತ ಚಾಲನೆ ನೀಡಲಾಯಿತು.
ಬೆಳ್ತಂಗಡಿ ಪಟ್ಟಣ ಪಂಚಾಯತ್ ಅಧ್ಯಕ್ಷ ಮುಗುಳಿ ನಾರಾಯಣ ಭಟ್ ಹಾಗೂ ಸ್ಥಾನೀಯ ಸಮಿತಿ ಅಧ್ಯಕ್ಷ ಸಂತೋಷ್ ಕುಮಾರ್ ಜೈನ್ ಏರ್‌ಟೆಲ್ 4G ನೆಟ್‌ವರ್ಕ್‌ನ್ನು ಪಾರಿವಾಳವನ್ನು ಬಿಡುವುದರ ಮುಖೇನ ಚಾಲನೆ ನೀಡಲಾಯಿತು.
ಬೆಳ್ತಂಗಡಿ, ಗುರುವಾಯನಕೆರೆ, ಲಾಯಿಲದಲ್ಲಿ ಏರ್‌ಟೆಲ್ 4G ನೆಟ್‌ವರ್ಕ್ ಇನ್ನು ಮುಂದೆ ಸಿಗಲಿದ್ದು ಏರ್‌ಟೆಲ್ ಗ್ರಾಹಕರು ಪ್ರಯೋಜನ ಪಡೆಯಬಹುದು. ಹಾಗೂ ಸುಮಾರು ಬೈಕ್‌ಗಳ ಮುಖಾಂತರ ಬೆಳ್ತಂಗಡಿ, ಲಾಯಿಲ, ಗುರುವಾಯನಕೆರೆ ತನಕ ಪ್ರಚಾರ ರ‍್ಯಾಲಿ ನಡೆಸಲಾಯಿತು.
ಈ ಸಂದರ್ಭದಲ್ಲಿ ಬೆಳ್ತಂಗಡಿ ತಾಲೂಕು ಸೇಲ್ಸ್ ಮ್ಯಾನೇಜರ್ ಕಿರಣ್ ಕುಮಾರ್ ಶೆಟ್ಟಿ, ಜೇಸಿಐ ಬೆಳ್ತಂಗಡಿ ಮಂಜುಶ್ರೀ ಅಧ್ಯಕ್ಷ ಸಂತೋಷ್ ಪಿ. ಕೋಟ್ಯಾನ್, ದ.ಕ ವಲಯ ಮಾರಾಟ ಪ್ರಭಂಧಕ ಶಿವಶಂಕರ್, ಏರ್‌ಟೆಲ್ ಕಂಪನಿಯ ಅಧಿಕೃತ ಮಾರಾಟಗಾರರು, ವಿತರಕರು, ಪ್ರತಿನಿಧಿಗಳು ಉಪಸ್ಥಿತರಿದ್ದರು.

prajwal complex sticker bidugade copy ಬೆಳ್ತಂಗಡಿ : ಬೆಳ್ತಂಗಡಿ ಪ್ರಜ್ವಲ್ ಕಾಂಪ್ಲೆಕ್ಸ್‌ನ ಮಾಲಕರಾದ ಪ್ರಮೋದ್ ಆರ್ ನಾಯಕ್‌ರವರು ಸೇವಾರೂಪವಾಗಿ ಹೊರತಂದ ಕುತ್ಯಾರು ಶ್ರೀ ಸೋಮನಾಥೇಶ್ವರ ದೇವಸ್ಥಾನ ಇದರ ಸ್ಟಿಕರ್ ಬಿಡುಗಡೆಯನ್ನು ಫೆ.11ರಂದು ದೇವಸ್ಥಾನದ ವಠಾರದಲ್ಲಿ ಆಡಳಿತ ಮೊಕ್ತೇಸರರಾದ ಜಯವರ್ಮ ಬಲ್ಲಾಳ್ ಹಾಗೂ ರಾಜವರ್ಮ ಬಲ್ಲಾಳ್ ಇವರು ಬಿಡುಗಡೆಗೊಳಿಸಿದರು.
ಈ ಸಂದರ್ಭದಲ್ಲಿ ಪಟ್ಟಣ ಪಂಚಾಯತ್ ಅಧ್ಯಕ್ಷ ಮುಗುಳಿ ನಾರಾಯಣ ಭಟ್, ಸ್ಥಾಯಿ ಸಮಿತಿ ಅಧ್ಯಕ್ಷ ಸಂತೋಷ್ ಕುಮಾರ್ ಜೈನ್, ಪತ್ರಕರ್ತರ ಸಂಘದ ಅಧ್ಯಕ್ಷ ದೇವಿಪ್ರಸಾದ್, ಜೇಸಿಐ ಬೆಳ್ತಂಗಡಿ ಮಂಜುಶ್ರೀ ಅಧ್ಯಕ್ಷ ಸಂತೋಷ್ ಪಿ.ಕೋಟ್ಯಾನ್ ಬಳಂಜ, ಚಂದ್ರಕಾಂತ್, ಕೆ.ಬಿ.ಹರಿಶ್ಚಂದ್ರ ಬಲ್ಲಾಳ್, ರಾಘವೇಂದ್ರ ರಾವ್, ಅರ್ಚಕ ರಾಮ್ ಭಟ್ ಹಾಗೂ ಸತೀಶ್ ಭಟ್, ಮೊದಲಾದವರು ಉಪಸ್ಥಿತರಿದ್ದರು.

suvarna

suvarnaa

suvarnaaaa

  ಬೆಳ್ತಂಗಡಿ : ಸುವರ್ಣ ಸಾಂಸ್ಕೃತಿಕ ಪ್ರತಿಷ್ಠಾನದ ವತಿಯಿಂದ 7ನೇ ವರ್ಷದ ಕಾರ್ಯಕ್ರಮದಂಗವಾಗಿ ದ.ಕ. ಜಿಲ್ಲೆಯ ಪ್ರಶಸ್ತಿ ಪುರಸ್ಕೃತ ಪ್ರಖ್ಯಾತ ತಂಡಗಳ ಕಲಾವಿದರಿಂದ ಸುವರ್ಣಾಸ್ ಯುವ ಜನಪದ ಉತ್ಸವ ಫೆ.13 ರಂದು ಬೆಳ್ತಂಗಡಿ ಸುವರ್ಣ ಆರ್ಕೆಡ್‌ನ ಮೈದಾನದಲ್ಲಿ ನಡೆಯಿತು.
ಈ ಕಾರ್ಯಕ್ರಮದಲ್ಲಿ ತುಳುರಂಗ ಭೂಮಿಯ ಮೇರು ಕಲಾವಿದ, ಚಲನಚಿತ್ರ ನಟ ಹಾಗೂ ನಿರ್ದೇಶಕ, ತೆಲಿಕೆದ ಬೊಳ್ಳಿ ದೇವುದಾಸ್ ಕಾಪಿಕಾಡ್, ಬಡಗುತಿಟ್ಟಿನ ಖ್ಯಾತ ಯಕ್ಷಗಾನ ಭಾಗವತ, ಸುಮಧುರ ಕಂಠ ಸಿರಿಯ ಗಾಯಕ ಜನ್ಸಾಲೆ ರಾಘವೇಂದ್ರ ಆಚಾರ್, ತಮಿಳು, ಕನ್ನಡ, ಇಂಗ್ಲೀಷ್, ಮಲಯಾಳಂ, ತುಳು ಸಹಿತ ಪಂಚ ಭಾಷೆಗಳಲ್ಲಿ ಸಂಗೀತ ನಿರ್ದೇಶಕರಾಗಿರುವ ಮಣಿಕಾಂತ ಕದ್ರಿ ಇವರಿಗೆ ಸುವರ್ಣ ರಂಗ ಸಮ್ಮಾನ್ ನಡೆಯಿತು. ಎಚ್. ಕೃಷ್ಣಯ್ಯ ಲಾಲ, ರಂಜಿನಿ ಮುಂಡಾಜೆ, ಮಾಸ್ಟರ್ ತೌಶೀರ್, ಹಿತೇಶ್, ಅನೀಶ್ ಅಮೀನ್, ಶ್ರೇಯಾದಾಸ್, ಪಂಚಮಿ ಮಾರೂರು ಸಹಿತ ತಾಲೂಕಿನ ಆಯ್ದ 15 ಮಂದಿ ಯುವ ಕಲಾವಿದರಿಗೆ ಸುವರ್ಣ ಸಂಭ್ರಮ ಪುರಸ್ಕಾರ ನಡೆಯಲಿದೆ. ರಾಜ್ಯಮಟ್ಟದ ಸರ್ವೋತ್ತಮ ಪುರಸ್ಕಾರ ಪಡೆದ ತಾ| ಸರಕಾರಿ ನೌಕರರ ಸಂಘದ ಅಧ್ಯಕ್ಷ ಜಯಕೀರ್ತಿ ಜೈನ್ ಅವರಿಗೆ ವಿಶೇಷ ಸನ್ಮಾನ ನಡೆಯಿತು.
6 ತಂಡಗಳಿಂದ ಜನಪದ ಉತ್ಸವ:
ಸಸಿಹಿತ್ಲು ಯುವಕ ಮಂಡಲ ಮಂಗಳೂರು, ಪ್ರಖ್ಯಾತಿ ಯುವತಿ ಮಂಡಲ ಪುತ್ತೂರು, ವಿವೇಕಾನಂದ ಯುವಕ ಮಂಡಲ ಕೌಡಿಚ್ಚಾರು ಪುತ್ತೂರು, ಶ್ರೀಗುರು ಮಿತ್ರಸಮೂಹ ಬೆಳ್ತಂಗಡಿ, ಯಂಗ್ ಚಾಲೆಂಜರ‍್ಸ್ ಮುಂಡಾಜೆ, ಸರಕಾರಿ ಪ್ರಥಮ ದರ್ಜೆ ಕಾಲೇಜು ಕಾರ್‌ಸ್ಟ್ರೀಟ್ ಮಂಗಳೂರು ತಂಡದಿಂದ ಜನಪದ ಕಲಾ ಪ್ರದರ್ಶನ ನಡೆಯಿತು.

1202VNRE1 copyವೇಣೂರು: ವೇಣೂರು ಸರ್ಕಾರಿ ಪ್ರೌಢ ಶಾಲೆಗೆ ದ.ಕ. ಜಿಲ್ಲೆಯ ಪ್ರತಿಷ್ಠಿತ ನಿಟ್ಟೆ ವಿದ್ಯಾಸಂಸ್ಥೆ ಕೊಡಮಾಡಿದ ದಿ| ನಿಟ್ಟೆ ಶಂಕರ ಅಡ್ಯಂತಾಯ ಸ್ಮಾರಕ ಅತ್ಯುತ್ತಮ ಶಾಲಾ ಪ್ರಶಸ್ತಿಯನ್ನು ದೇರಳಕಟ್ಟೆಯ ನಿಟ್ಟೆ ವಿಶ್ವವಿದ್ಯಾಲಯದ ಕೆ.ಎಸ್. ಹೆಗ್ಡೆ ಅಡಿಟೋರಿಯಂನಲ್ಲಿ ಶನಿವಾರ ಪ್ರದಾನ ಮಾಡಲಾಯಿತು.
ಮಂಡ್ಯದ ಆದಿಚುಂಚನಗಿರಿ ಕ್ಷೇತ್ರ ಮಹಾ ಸಂಸ್ಥಾನ ಮಠದ ಶ್ರೀ ನಿರ್ಮಲಾನಂದನಾಥ ಸ್ವಾಮೀಜಿ ಅವರು ನಿಟ್ಟೆ ವಿಶ್ವವಿದ್ಯಾಲಯದ ಕುಲಪತಿ ಹಾಗೂ ನಿಟ್ಟೆ ಎಜುಕೇಶನ್ ಟ್ರಸ್ಟ್ ಅಧ್ಯಕ್ಷರಾಗಿರುವ ಎನ್. ವಿನಯ ಹೆಗ್ಡೆಯವರ ಉಪಸ್ಥಿತಿಯಲ್ಲಿ ಪ್ರದಾನ ಮಾಡಿದರು.
ಹಾಸನ ಶ್ರೀ ಆದಿಚುಂಚನಗಿರಿ ಮಹಾ ಸಂಸ್ಥಾನ ಮಠದ ಶ್ರೀ ಶಂಭೂನಾಥ ಸ್ವಾಮೀಜಿ, ರಾಜ್ಯದ ಮಾಜಿ ಲೋಕಾಯುಕ್ತ ನ್ಯಾ| ಎನ್. ಸಂತೋಷ್ ಹೆಗ್ಡೆ, ನಿಟ್ಟೆ ವಿಶ್ವವಿದ್ಯಾಲಯದ ಉಪಕುಲಾಧಿಪತಿ ಡಾ| ಎಂ. ಶಾಂತರಾಮ್ ಶೆಟ್ಟಿ, ಬೆಂಗಳೂರು ವಿವಿಯ ವಿಶ್ರಾಂತ ಉಪಕುಲಪತಿ ಡಾ| ಎನ್.ಆರ್. ಶೆಟ್ಟಿ, ಮಂಗಳೂರು ವಿವಿಯ ಉಪ ಕುಲಪತಿ ಪ್ರೊ| ಕೆ. ಬೈರಪ್ಪ, ಉಪಕುಲ ಸಚಿವ ಡಾ| ಎಂ.ಎಸ್. ಮೂಡಿತ್ತಾಯ, ದ.ಕ. ಜಿಲ್ಲಾ ಸಾರ್ವಜನಿಕ ಶಿಕ್ಷಣ ಇಲಾಖೆಯ ಉಪ ನಿರ್ದೇಶಕ ವಾಲ್ಟರ್ ಡಿಮೆಲ್ಲೊ, ಟ್ರಸ್ಟಿಗಳಾದ ಬಿಆರ್. ಹೆಗ್ಡೆ, ಗುರುಪ್ರಸಾದ್ ಅಡ್ಯಂತಾಯ, ಹಣಕಾಸು ವಿಭಾಗದ ನಿರ್ದೇಶಕ ರಾಜೇಂದ್ರ ಎಂ., ಪಠ್ಯೇತರ ವಿಭಾಗದ ನಿರ್ದೇಶಕ ಪ್ರೊ| ರಾಜಶೇಖರ ಎಂ., ಹಾಗೂ ಮತ್ತಿತರರು ಜೊತೆಗಿದ್ದರು. ವೇಣೂರು ಪ್ರೌಢ ಶಾಲಾ ಉಪಪ್ರಾಂಶುಪಾಲ ವೆಂಕಟೇಶ್ ಎಸ್. ತುಳುಪುಳೆ, ಹಿರಿಯ ಶಿಕ್ಷಕ ಸುಕೇಶ್ ಕೆ., ಜಿ.ಪಂ. ಸದಸ್ಯ ಪಿ. ಧರಣೇಂದ್ರ ಕುಮಾರ್ ಅವರು ಪ್ರಶಸ್ತಿ ಸ್ವೀಕರಿಸಿದರು. ಶಿಕ್ಷಕ ವೃಂದ, ಸಿಬ್ಬಂದಿ ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು. ಶೈಕ್ಷಣಿಕ ಸಾಧನೆ, ಮೂಲ ಸೌಕರ್ಯ ಅಭಿವೃದ್ಧಿ, ಪಠ್ಯೇತರ ಚಟುವಟಿಕೆ, ಕ್ರೀಡೆ ಮತ್ತು ಸಾಂಸ್ಕೃತಿಕ ಚಟುವಟಿಕೆಗಳನ್ನು ಪರಿಗಣಿಸಿ ಈ ಪ್ರಶಸ್ತಿ ಪ್ರದಾನ ಮಾಡಲಾಗಿದೆ. ಪ್ರಶಸ್ತಿಯೊಂದಿಗೆ ರೂ.10 ಲಕ್ಷ ನಗದು ಪುರಸ್ಕಾರ ನೀಡಿ ಗೌರವಿಸಲಾಯಿತು.

r

rr

rrr  ಬೆಳ್ತಂಗಡಿ : ಕೇಂದ್ರದಲ್ಲಿರುವುದು ಬಿಜೆಪಿ ಸರ್ಕಾರವಲ್ಲ , ಬದಲಾಗಿ ಮೋದಿ-ಅದಾನಿ ಸರ್ಕಾರ , ಇದರಿಂದಾಗಿ ನರೇಂದ್ರ ಮೋದಿ ಕಾರ್ಪೊರೇಟ್ ಗಳ ಹಿತ ಕಾಯುವ ಕೆಲಸ ಮಾಡುತ್ತಿದೆ ಎಂದು ಸಿಪಿಐ (ಎಂ) ಜಿಲ್ಲಾ ಕಾರ್ಯದರ್ಶಿ ಮಂಡಳಿ ಸದಸ್ಯ ಕೆ.ಯಾದವ ಶೆಟ್ಟಿ ಆರೋಪಿಸಿದರು.

ಅವರು ಸಿಪಿಐ (ಎಂ) ಬೆಳ್ತಂಗಡಿ ತಾಲೂಕು ಸಮಿತಿಯ ನೇತೃತ್ವದಲ್ಲಿ ತಾಲೂಕು ಕಛೇರಿ ಎದುರು ನಡೆದ ನೋಟು ಅಮಾನ್ಯಕರಣದ ವಿರುದ್ಧ ನಡೆದ ಪ್ರತಿಭಟನೆಯನ್ನು ಉದ್ದೇಶಿಸಿ ಮಾತನಾಡುತ್ತಿದ್ದರು.

ಕೇಂದ್ರ ಸರ್ಕಾರ ಸರ್ವಾಧಿಕಾರಿಯಂತೆ ಆಡಳಿತ ನಡೆಸುತ್ತಿದೆ, ಯಾವುದೇ ಮುಂದಾಲೋಚನೆ ಇಲ್ಲದೆ, ಯಾರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳದೆ ನೋಟು ನಿಷೇಧ ಮಾಡಲಾಗಿದೆ. ನೋಟು ನಿಷೇಧದಿಂದ ಭಯೋತ್ಪಾದನೆ ನಿರ್ಮೂಲನೆಯಾಗುತ್ತದೆ ಎಂದು ಹೇಳಿತ್ತು. ನ.8ರ ಬಳಿಕ ದೇಶದಲ್ಲಿ ಭಯೋತ್ಪಾದನೆ ಚಟುವಟಿಕೆ ನಿಂತಿದೆಯೇ ಎಂದು ಪ್ರಶ್ನಿಸಿದ ಯಾದವ ಶೆಟ್ಟಿ, ಸ್ವೀಸ್ ಬ್ಯಾಂಕಿನಿಂದ ಕಪ್ಪು ಹಣ ತಂದು ಪ್ರತಿಯೊಬ್ಬರಿಗೂ ಹದಿನೈದು ಲಕ್ಷ ನೀಡುತ್ತೇನೆಂದು ಹೇಳಿದ ಸರ್ಕಾರ ಇದೀಗ ತನ್ನ ಮಾನ ಉಳಿಸಿಕೊಳ್ಳಲು ನೋಟು ಬ್ಯಾನ್ ಮಾಡಿ ಬಡಜನರ ಜೀವನವನ್ನು ಬರ್ಬರಗೊಳಿಸಿದೆ. ದುಡಿದು ತಿನ್ನುವವರ ಹೊಟ್ಟೆಗೆ ಕಲ್ಲು ಹಾಕಿದ್ದೆ ನೋಟು ನಿಷೇಧದ ಸಾಧನೆ ಎಂದ ಅವರು ಬ್ಯಾಂಕ್ ಕ್ಯೂನಲ್ಲಿ ಜನರು ಜೀವ ಕಳೆದುಕೊಂಡಿರುವುದು ದೇಶದ ಇತಿಹಾಸದಲ್ಲಿ ಇದೇ ಮೊದಲು ಎಂದು ಆರೋಪಿಸಿದರು.

ಸಿಪಿಐ (ಎಂ) ತಾಲೂಕು ಕಾರ್ಯದರ್ಶಿ ಶಿವಕುಮಾರ್ ಎಸ್.ಎಂ ಮಾತನಾಡಿ ನೋಟು ನಿಷೇಧದ ಮೂಲಕ ನರೇಂದ್ರ ಮೋದಿ ಸರ್ಕಾರ ಬಡಜನರ ಮೇಲೆ ಸರ್ಜಿಕಲ್ ಧಾಳಿ ಮಾಡಿದೆ. ನೋಟು ನಿಷೇಧದ ಬಳಿಕ ತಲೆದೋರಿರುವ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳಬೇಕಾದ ಸರ್ಕಾರ ಬಜೆಟ್ ಮೂಲಕ ಮತ್ತಷ್ಟು ಹೊಡೆತ ನೀಡಿದೆ ಎಂದು ಟೀಕಿಸಿದರು.

ಪ್ರತಿಭಟನೆಯ ನೇತೃತ್ವವನ್ನು ಸಿಪಿಐ (ಎಂ) ತಾಲೂಕು ಮುಖಂಡರಾದ ವಸಂತ ನಡ , ಸುಕನ್ಯಾ. ಹೆಚ್ , ರೋಹಿಣಿ ಪೆರಾಡಿ, ಜಯರಾಂ ಮಯ್ಯ , ಲಕ್ಷ್ಮಣ ಗೌಡ ಪಾಂಗಳ, ಲೋಕೇಶ್ ಕುದ್ಯಾಡಿ, ಬಿ.ಎಂ.ಭಟ್ , ನಾರಾಯಣ ಕೈಕಂಬ, ಡೊಂಬಯ್ಯ ಗೌಡ ವಿವಿಧ ಸಂಘಟನೆಗಳ ನಾಯಕರಾದ ಶೇಖರ್ ಎಲ್ , ಅನಿಲ್ , ಪದ್ಮಾವತಿ, ದೋಗು ಬಾರ್ಯ, ಮೀನಾಕ್ಷಿ, ಗೋವಿಂದ ಗೌಡ ಮೊದಲಾದವರು ಉಪಸ್ಥಿತರಿದ್ದರು. ನೋಟು ಅಮಾನ್ಯಕರಣದ ಬಳಿಕ ಉದ್ಭವಿಸಿರುವ ಸಮಸ್ಯೆಗಳ ಪರಿಹಾರಕ್ಕೆ ಒತ್ತಾಯಿಸಿ ತಹಶೀಲ್ದಾರ್ ಮೂಲಕ ಕೇಂದ್ರ ಸರ್ಕಾರಕ್ಕೆ ಮನವಿ ಸಲ್ಲಿಸಲಾಯಿತು.

p.gಉಜಿರೆ : ಶ್ರೀ.ಧ.ಮಂ ಕಾಲೇಜು ಉಜಿರೆ, ಕನ್ನಡ ಸಂಘ ಸ್ನಾತಕೋತ್ತರ ಪತ್ರಿಕೋದ್ಯಮ ವಿಭಾಗ ಹಾಗೂ ನೀನಾಸಂ ಪ್ರತಿಷ್ಠಾನ, ಹೆಗ್ಗೋಡು ಸಹಯೋಗದಲ್ಲಿ ಕಥೆ-ಕವನ ಅನುಸಂಧಾನ ಶಿಬಿರವು ಇಂದು (ಫೆ.13) ಮತ್ತು ಫೆ.14ರಂದು ನಡೆಯಲಿದೆ.
ಈ ಪ್ರಯುಕ್ತ ಫೆ.೧೩ರಂದು ನಡೆದ ಕಾರ್ಯಕ್ರಮದಲ್ಲಿ ಶ್ರೀಮತಿ ಹೇಮಾವತಿ ವಿ.ಹೆಗ್ಗಡೆಯವರು ಉದ್ಘಾಟನೆಯನ್ನು ನಿರ್ವಹಿಸಿ, ಉದ್ಘಾಟನಾ ಭಾಷಣ ಮಾಡಿದರು. ಈ ಸಂದರ್ಭದಲ್ಲಿ ಪ್ರೊ| ಟಿ.ಪಿ ಅಶೋಕ್ ಅವರಿಗೆ ಗೌರವಾರ್ಪಣೆ ಮಾಡಲಾಯಿತು. ಶಿಬಿರದ ಕುರಿತ ವಿಶೇಷ ಸಂಚಿಕೆಯನ್ನು ಜಯಂತ ಕಾಯ್ಕಿಣಿ ಬಿಡುಗಡೆ ಮಾಡಿ, ಆಶಯ ಭಾಷಣ ಮಾಡಿದರು.
ಡಾ| ಬಿ.ಪಿ ಸಂಪತ್ ಕುಮಾರ್ ಸ್ವಾಗತಿಸಿ, ಪ್ರೊ| ಟಿ.ಪಿ ಅಶೋಕ್ ಪ್ರಾಸ್ತಾವಿಸಿ, ಪ್ರೊ| ಭಾಸ್ಕರ ಹೆಗಡೆ ಧನ್ಯವಾದ ಸಲ್ಲಿಸಿದರು.

  ಬೆಳ್ತಂಗಡಿ : ಗುರುವಾಯನಕೆರೆ, ಬೆಳ್ತಂಗಡಿ, ಧರ್ಮಸ್ಥಳ ವಿದ್ಯುತ್ ಲೈನ್‌ನಲ್ಲಿ ತುರ್ತುಕಾಮಗಾರಿಯನ್ನು ಕೈಗೊಳ್ಳಬೇಕಾದ ಹಿನ್ನಲೆಯಲ್ಲಿ ಫೆ.14 ಮತ್ತು ಫೆ.17ರಂದು ಬೆಳಿಗ್ಗೆ 9.30ರಿಂದ ಸಂಜೆ 5.30ರ ತನಕ ಬೆಳ್ತಂಗಡಿ, ಧರ್ಮಸ್ಥಳ ಮತ್ತು ವಗ್ಗ (ಬಂಟ್ವಾಳ ತಾಲೂಕು) ವಿದ್ಯುತ್ ಉಪಕೇಂದ್ರದಿಂದ ಹೊರಡುವ ಎಲ್ಲಾ ಫೀಡರ್‌ಗಳಲ್ಲಿ ಹಾಗೂ ಮಡಂತ್ಯಾರ್ ಹಾಗೂ ಬಳ್ಳಮಂಜ ಫೀಡರ್‌ಗಳಲ್ಲಿ ವಿದ್ಯುತ್ ನಿಲುಗಡೆಯಾಗಲಿದೆ ಎಂದು ಮೆಸ್ಕಾಂ ಪ್ರಕಟಣೆಯಲ್ಲಿ ತಿಳಿಸಿದೆ.

m

mm

mmm

mmmmm

mmmmmmmm

mmmmmmmmmmm

mmmmmmmmmmmmmmmmmmmmm

ಮರೋಡಿ  : ಮರೋಡಿ ಕ್ಷೇತ್ರದಲ್ಲಿ ಜಾತ್ರಾ ಮಹೋತ್ಸವದ ಜೊತೆಗೆ 5ನೇ ವರ್ಷದ ಆಯನ ಮತ್ತು ಸಿರಿಗಳ ಜಾತ್ರೆ ಫೆ.10ರಿಂದ 14ರ ವರೆಗೆ ವಿಜೃಂಭಣೆಯಿಂದ ಜರಗಿತು. ಈ ಜಾತ್ರೆಯ ಸಂದರ್ಭದಲ್ಲಿ ಭಕ್ತರ ಅನುಕೂಲಕ್ಕಾಗಿ ಸುಮಾರು 40 ಲಕ್ಷ ವೆಚ್ಚದಲ್ಲಿ ನಿರ್ಮಿಸಲಾಗುವ ಸಭಾಭವನ ಮತ್ತು ಅನ್ನಛತ್ರಕ್ಕೆ ಶಿಲಾನ್ಯಾಸ ನಡೆಯಿತು.
ಫೆ.12ರಂದು ಸಭಾಭವನ ಮತ್ತು ಅನ್ನಛತ್ರಕ್ಕೆ ಶಿಲಾನ್ಯಾಸ ನಡೆಯಿತು. ದೇವಸ್ಥಾನದ ಆಡಳಿತ ಮಂಡಳಿ ಅಧ್ಯಕ್ಷ ದೇವೇಂದ್ರ ಹೆಗ್ಡೆ ಕೊಡಂಗೆ ಕೊಕ್ರಾಡಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಬಳ್ಳಾರಿ ಉದ್ಯಮಿ ಗುರ್ಮೆ ಸುರೇಶ್ ಶೆಟ್ಟಿ ಸಭಾ ಕಾರ್ಯಕ್ರಮ ಉದ್ಘಾಟಿಸಿದರು. ಮುಖ್ಯ ಅತಿಥಿಗಳಾಗಿ ಚಲನಚಿತ್ರ ನಿರ್ಮಾಪಕ, ನಿರ್ದೇಶಕ ಡಾ| ರಾಜಶೇಖರ ಕೋಟ್ಯಾನ್, ಬೆಂಗಳೂರಿನ ಉದ್ಯಮಿ ಸುರೇಶ್ ಹೆಗ್ಡೆ, ನವಿ ಮುಂಬೈನ ಶ್ರೀ ಶನೀಶ್ವರ ದೇವಸ್ಥಾನದ ಮೊಕ್ತೇಸರ ಪ್ರಭಾಕರ ಹೆಗ್ಡೆ, ಬೆಂಗಳೂರಿ ನ ಉದ್ಯಮಿ ಉದಯ ಹೆಗ್ಡೆ, ಪೂನಾದ ಉದ್ಯಮಿ ಉದಯ ಶೆಟ್ಟಿ ಕಾಂತಾವರ, ಚಲನಚಿತ್ರ ನಿರ್ಮಾಪಕ, ನಿರ್ದೇಶಕ ರಾಘವೇಂದ್ರ ಹೆಗ್ಡೆ, ಹೈಕೋರ್ಟ್ ವಕೀಲ ಹರೀಶ್ ಪೂಂಜಾ, ಮೂಡಬಿದಿರೆ ಉದ್ಯಮಿ ಶ್ರೀಪತಿ ಭಟ್, ಮುಂಬೈ ಉದ್ಯಮಿ ಹರೀಶ್ ಡಿ. ಸಾಲ್ಯಾನ್ ಬಜಗೋಳಿ, ಮುಂಬೈ ಉದ್ಯಮಿ ಸುರೇಶ್ ಪೂಜಾರಿ ಬರಂಜ ಕಾಶಿಪಟ್ಣ, ಶಿರ್ತಾಡಿ ಪ್ರಭಾ ಕ್ಲಿನಿಕ್‌ನ ಡಾ. ಆಶೀರ್ವಾದ್ ಭಾಗವಹಿಸಿದ್ದರು.

kuthyars

KUTHYAR

  ಕುತ್ಯಾರು : ಕುತ್ಯಾರು ಶ್ರೀ ಸೋಮನಾಥೇಶ್ವರ ದೇವಸ್ಥಾನದ ಜಾತ್ರಾ ಪ್ರಯುಕ್ತ ಅಯ್ಯಪ್ಪ ಸ್ವಾಮಿ ದೇವಸ್ಥಾನದ ಮುಂಭಾಗದಲ್ಲಿ ಹುತಾತ್ಮ ಯೋಧರಿಗೊಂದು ನಮನ ಕಾರ್ಯಕ್ರಮವು ಫೆ.12ರಂದು ನಡೆಯಿತು.
ಬೆಳ್ತಂಗಡಿ ಸ್ಥಾಯಿ ಸಮಿತಿ ಅಧ್ಯಕ್ಷ ಸಂತೋಷ್ ಕುಮಾರ್ ಜೈನ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಪುತ್ತೂರು ಸಂಸ್ಕೃತ ಉಪನ್ಯಾಸಕರಾದ ಶ್ರೀ ಕೃಷ್ಣ ಉಪಾದ್ಯಾಯ ಉಪನ್ಯಾಸ ಮಾಡಿದರು. ದ.ಕ ಜಿ.ಪಂ ಅಧ್ಯಕ್ಷೆ ಶ್ರೀಮತಿ ಮೀನಾಕ್ಷಿ ಶಾಂತಿಗೂಡು, ಬೆಳ್ತಂಗಡಿ ನಗರ ಪಂಚಾಯತ್ ಅಧ್ಯಕ್ಷ ನಾರಾಯಣ ರಾವ್ ಮುಗುಳಿ, ಬೆಳ್ತಂಗಡಿ ವಾಣಿ ಪಿ.ಯು ಕಾಲೇಜು ಪ್ರಾಂಶುಪಾಲರಾದ ಡಿ.ಯದುಪತಿ ಗೌಡ, ನ್ಯಾಯವಾದಿ ಹರೀಶ್ ಪೂಂಜ ಗರ್ಡಾಡಿ, ತುಳು ಚಿತ್ರ ಹಾಸ್ಯನಟ ಮಂಜು ರೈ, ಬೆಳ್ತಂಗಡಿ ಶ್ರೀ ಗುರುನಾರಾಯಣ ಸೇವಾ ಸಂಘದ ಪ್ರಧಾನ ಕಾರ್ಯದರ್ಶಿ ಸಂತೋಷ್ ಕುಮಾರ್ ಕಾಪಿನಡ್ಕ, ಬಾಬು ಆರ್ ಗೌಡ ಸಂತೆಕಟ್ಟೆ, ಜರ್ಮಿ ಡೇಸಾ, ಪ್ರಕಾಶ್ ಆಚಾರ್ಯ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.
ಈ ಪ್ರಯುಕ್ತ ಕರಾವಳಿ ಕರ್ನಾಟಕದ ಜೇಸುದಾಸ್ ಖ್ಯಾತಿಯ ಪುತ್ತೂರು ಜಗದೀಶ ಆಚಾರ್ಯರವರ ಕಲಾ ಸಿಂಧು ಬಳಗದವರಿಂದ ಭಕ್ತಿ ರಸಮಂಜರಿ, ಝೀ ಕನ್ನಡ ಕಾಮಿಡಿ ಕಿಲಾಡಿ ಖ್ಯಾತಿಯ ಹಿತೇಶ್ ಕಾಪಿನಡ್ಕ ಮತ್ತು ಅನೀಶ್ ಅಮೀನ್ ವೇಣೂರು ಇವರ ತಂಡದಿಂದ ಹಾಸ್ಯ ಕಾರ್ಯಕ್ರಮ ಮತ್ತು ತಾಲೂಕಿನ ಖ್ಯಾತ ನೃತ್ಯ (ತ್ರಿಲೋಕ್ ಡ್ಯಾನ್ಸ್, ಉಜಿರೆ) ಕಲಾವಿದರಿಂದ ಗಾನ-ನೃತ್ಯ-ಹಾಸ್ಯ-ವೈಭವ ಎಂಬ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಿತು.

acc 1

prasad 1

prasad 1

vasista 12

vasista 12

vinayaka 1

a

aa

aaa

aaaaaa

  ಉಜಿರೆ : ಉಜಿರೆ ಧರ್ಮ ರಕ್ಷಾ ಸಮಿತಿ ವತಿಯಿಂದ ಉಜಿರೆ ಗ್ರಾಮದ ಮುಂಡತ್ತೋಡಿ ಕಾಲನಿಯಲ್ಲಿ ಸಂತರ ಪಾದಯಾತ್ರೆ ಮತ್ತು ಧಾರ್ಮಿಕ ಜನಜಾಗೃತಿ ಸಭೆಯು ಇಂದು(ಫೆ.11) ನಡೆಯಿತು.
ಕಾರ್ಯಕ್ರಮದಲ್ಲಿ ಶ್ರೀ ಕ್ಷೇತ್ರ ಕರಿಂಜೆ ಶ್ರೀ ಮುಕ್ತಾನಂದ ಸ್ವಾಮೀಜಿ ಆಶೀರ್ವಚನ ನೀಡಿದರು. ಅಧ್ಯಕ್ಷತೆಯನ್ನು ಧರ್ಮ ರಕ್ಷಾ ಸಮಿತಿ ಅಧ್ಯಕ್ಷ ರಾಜೇಶ್ ತುಂಬೆದೊಟ್ಟು ವಹಿಸಿದ್ದರು. ರಾಷ್ಟ್ರೀಯ ಸ್ವಯಂಸೇವಕ ಸಂಘದ ಕ್ಷೇತ್ರೀಯ ಕಾರ್ಯಕಾರಿಣಿ ಸದಸ್ಯ ಡಾ| ಪ್ರಭಾಕರ್ ಭಟ್ ಕಲ್ಲಡ್ಕ ಮುಖ್ಯ ಭಾಷಣ ಮಾಡಿದರು. ರಾಜೇಶ್ ಪೈ, ಉದ್ಯಮಿ ಉಜಿರೆ, ಮಂಗಳೂರು ಧರ್ಮ ಜಾಗರಣ ವಿಭಾಗ ಸಂಯೋಜಕರಾದ ದಿನಕರ ಆದೇಲು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.

prakruthi

ಅಂಜುಮಾನ್, ದೀಪಶ್ರೀ, ಕೊಂಕಿಮಾಲ ಜೀವನ, ರಂಜಿತಾ, ವಿಷ್ಣು ಸತೀಶ, ಸ್ವಾತಿ, ಚೈತ್ರ, ಶಿವಂ ನಾಯಕ್, ಸೃಷ್ಠಿ ಪ್ರಕಾಶ್

 ನೇಪಾಲದ ಅಂಜು ಮಹಾರ್ಜನ್‌ಗೆ ಆರ್.ಜಿ.ಯು.ಹೆಚ್.ಎಸ್ (RGUHS) ಸುವರ್ಣ ಪದಕ ಹಾಗೂ ಡಾ.ಡಿ.ವೀರೇಂದ್ರ ಹೆಗ್ಗಡೆ ಪಟ್ಟಾಭಿಷೇಕ ಪ್ರಶಸ್ತಿ ಲಭಿಸಿದೆ..
ಶ್ರೀ. ಧರ್ಮಸ್ಥಳ ಮಂಜುನಾಥೇಶ್ವರ ಪ್ರಕೃತಿ ಚಿಕಿತ್ಸಾ ಮತ್ತು ಯೋಗ ವಿಜ್ಞಾನ ಕಾಲೇಜಿನ ವಿದ್ಯಾರ್ಥಿಗಳು ಕರ್ನಾಟಕದ ರಾಜೀವ್ ಗಾಂಧಿ ಆರೋಗ್ಯ ವಿಜ್ಞಾನಗಳ ವಿಶ್ವವಿದ್ಯಾನಿಲಯ ನಡೆಸಿದ ಬಿ.ಎನ್.ವೈ.ಎಸ್ ಅಂತಿಮ ಪರೀಕ್ಷೆಯಲ್ಲಿ 9 ರ‍್ಯಾಂಕುಗಳನ್ನು ಪಡೆದಿರುತ್ತಾರೆ.
ನೇಪಾಲದ ಅಂಜು ಮಹಾರ್ಜನ್ ಬಿ.ಎನ್.ವೈ.ಎಸ್ ಅಂತಿಮ ಪರೀಕ್ಷೆಯಲ್ಲಿ ಅತೀ ಹೆಚ್ಚು ಅಂಕಗಳಿಸಿ ಜಿಂದಾಲ್ ಗೋಲ್ಡ್ ಮೆಡಲ್ ಪಡೆದಿದ್ದು ಹಾಗೂ ಇವರ ಸಾಧನೆಗೆ ಕಾಲೇಜಿನ ಈ ಸಾಲಿನ ಡಾ.ಡಿ.ವೀರೇಂದ್ರ ಹೆಗ್ಗಡೆ ಪಟ್ಟಾಭಿಷೇಕ ಗೌರವ ಲಭಿಸಿದೆ.
ರ‍್ಯಾಂಕುಗಳ ಪಟ್ಟಿ : ಅಂಜುಮಾನ್ (2ನೇ ರ‍್ಯಾಂಕ್), ದೀಪಶ್ರೀ (3ನೇ ರ‍್ಯಾಂಕ್), ಕೊಂಕಿಮಾಲ ಜೀವನ (4ನೇ ರ‍್ಯಾಂಕ್), ರಂಜಿತಾ (5ನೇ ರ‍್ಯಾಂಕ್), ವಿಷ್ಣು ಸತೀಶ (6ನೇ ರ‍್ಯಾಂಕ್), ಸ್ವಾತಿ (7ನೇ ರ‍್ಯಾಂಕ್), ಚೈತ್ರ (8ನೇ ರ‍್ಯಾಂಕ್), ಶಿವಂ ನಾಯಕ್ (9ನೇ ರ‍್ಯಾಂಕ್), ಸೃಷ್ಠಿ ಪ್ರಕಾಶ್ (10ನೇ ರ‍್ಯಾಂಕ್) ಗಳಿಸಿದ್ದಾರೆಂದು. ಎಸ್.ಡಿ.ಯಂ. ಶಿಕ್ಷಣದ ಕಾರ್ಯದರ್ಶಿ ಡಾ.ಬಿ.ಯಶೋವರ್ಮ ತಿಳಿಸಿದ್ದಾರೆ ಮತ್ತು ಈ ಸಾಧನೆಗಾಗಿ ವಿದ್ಯಾರ್ಥಿಗಳನ್ನು ಹಾಗೂ ಕಾಲೇಜಿನ ಪ್ರಾಧ್ಯಾಪಕ ವೃಂಧದವರನ್ನು ಅಭಿನಂದಿಸಿದ್ದಾರೆ.

  ರಾಜ್ಯದಲ್ಲಿ ವಿದ್ಯುತ್ ಸರಬರಾಜು ಕಂಪೆನಿಗಳ ಆದಾಯ ಮತ್ತು ವೆಚ್ಚವನ್ನು ಸರಿದೂಗಿಸುವ ಸಲುವಾಗಿ ವಿದ್ಯುತ್ ದರ ಹೆಚ್ಚಳ ಪ್ರಸ್ತಾವನೆ ಸಲ್ಲಿಸಲಾಗಿದೆಯೆಂದು ಇಂಧನ ಸಚಿವ ಡಿ.ಕೆ ಶಿವ ಕುಮಾರ್ ಹೇಳಿದ್ದಾರೆ. ವಿಧಾನ ಪರಿಷತ್‌ನಲ್ಲಿ ಪ್ರಶ್ನೋತ್ತರ ಅವಧಿಯಲ್ಲಿ ಜೆ.ಡಿ.ಎಸ್.ನ ಅಪ್ಪಾಜಿ ಗೌಡ ಅವರ ಪ್ರಶ್ನೆಗೆ ಉತ್ತ್ತರಿಸಿದ ಸಚಿವರು, ರಾಜ್ಯದ ಎಲ್ಲ ಎಸ್ಕಾಂಗಳಲ್ಲಿ ವಿದ್ಯುತ್ ದರ ಹೆಚ್ಚಳ ಮಾಡುವಂತೆ ಪ್ರಸ್ತಾವನೆ ಸಲ್ಲಿಸಲಾಗಿದೆ. ಎಸ್ಕಾಂಗಳು ಗ್ರಾಹಕರಿಗೆ ವಿತರಣೆ ಮಾಡುತ್ತಿರುವ ಪ್ರತಿ ಒಂದು ಯುನಿಟ್ ವಿದ್ಯುತ್‌ಗೆ 1.45ರೂ ಹೆಚ್ಚಳ ಮಾಡುವಂತೆ ಕರ್ನಾಟಕ ವಿದ್ಯುತ್ ನಿಯಂತ್ರಣ ಆಯೋಗಕ್ಕೆ ಪ್ರಾಸ್ತಾವನೆ ಸಲ್ಲಿಸಲಾಗಿದೆ ಎಂದಿದ್ದಾರೆ.

  2005ರ ಮಹಾತ್ಮ ಗಾಂಧಿ ಸರಣೀಯ 100 ರೂ ನೋಟುಗಳ ವಿನ್ಯಾಸದಲ್ಲೇ ಬಆರ್.ಬಿ.ಐ ಹೊಸ ನೋಟುಗಳನ್ನು ಶೀಘ್ರದಲ್ಲೇ ಚಲಾವಣೆಗೆ ತರಲಿದೆ. ಆದರೆ ಹಳೆ ನೂರು ರೂ.ನೋಟುಗಳು ಅಂತೆಯೇ ಚಲಾವಣೆಯಲ್ಲಿ ಮುಂದುವರಿಯಲಿವೆ. ಹಳೆ ನೂರು ರೂ.ನೋಟಿನಲ್ಲಿ ನಂಬರ್ ಇರುವ ಸ್ಥಳದಲ್ಲಿ ಆರ್ ಎಂಬ ಅಕ್ಷರವನ್ನು ಮತ್ತು ಆರ್.ಬಿ.ಐ ಗವರ್ನರ್ ಡಾ| ಊರ್ಜಿತ್ ಪಟೇಲ್ ಅವರ ಸಹಿಯನ್ನು ಮುದ್ರಿಸಲಾಗಿದೆ ಎಂದು ಆರ್.ಬಿ.ಐ ಹೊರಡಿಸಿರುವ ಪ್ರಕಟಣೆ ತಿಳಿಸಿದೆ. ಹೊಸ ನೂರು ರೂಪಾಯಿ ನೋಟಿನ ಮುದ್ರಣ ಇಸವಿಯನ್ನು 2017 ಎಂದು ಹಿಂಭಾಗದಲ್ಲಿದ್ದು, ನಂಬರ್‌ಗಳ ಗಾತ್ರವು ಎಡದಿಂದ ಬಲಕ್ಕೆ ದೊಡ್ಡದಾಗುತ್ತಾ ಹೋಗುವಂತೆ ಕಾಣಿಸಲಾಗಿದೆ ಎಂದಿದೆ.

  ನೀವು ವಿಂಡೋಸ್ ಎಕ್ಸ್‌ಪಿ ಅಥವಾ ವಿಂಡೋಸ್ ವಿಸ್ಪಾ ಬಳಕೆದಾರರಾಗಿದ್ರೆ ನಿಮಗೆ ಶಾಕಿಂಗ್ ಸುದ್ದಿಯಿದೆ. ಫೆ.೮ರ ನಂತರ ನಿಮ್ಮ ಸಿಸ್ಟಮ್‌ನಲ್ಲಿ ಜಿಮೇಲ್ ಕಾರ್ಯ ನಿರ್ವಹಿಸುವುದಿಲ್ಲ. ಕ್ರೋಮ್ ಬ್ರೌಸರ್‌ನ 53ನೇ ಹಾಗೂ ಅದಕ್ಕಿಂತ ಕೆಳಗಿನ ವರ್ಷನ್‌ಗಳಲ್ಲಿ ಜಿಮೇಲ್ ಕಾರ್ಯ ನಿರ್ವಹಿಸುವಿದಿಲ್ಲ. ಅಂತಾ ಗೂಗಲ್ ಹೇಳಿದೆ. ಯಾರ್ಯಾರು ತಮ್ಮ ಡೆಸ್ಕ್‌ಟಾಪ್ ಅಥವಾ ಲ್ಯಾಪ್‌ಟಾಪ್‌ನಲ್ಲಿ ವಿಂಡೋಸ್ ಎಕ್ಸ್‌ಪಿ ಅಥವಾ ವಿಂಡೋಸ್ ವಿಸ್ಪಾದಲ್ಲಿ ಕ್ರೋಮ್ ಬ್ರೌಸರ್ ಬಳಸುತ್ತಿದ್ರೆ ಅವರು ಫೆ.8ರ ನಂತರ ಜಿಮೇಲ್ ಬಳಕೆ ಮಾಡಲು ಸಾಧ್ಯವಿಲ್ಲ. ಮೈಕ್ರೋಸಾಫ್ಟ್ ತನ್ನ ಆಪರೇಟಿಂಗ್ ಸಿಸ್ಟಮ್‌ನಲ್ಲಿ ವಿಂಡೋಸ್ ಎಕ್ಸ್‌ಪಿ ಅಥವಾ ವಿಂಡೋಸ್ ವಿಸ್ಪಾ ಸಪೋರ್ಟ್ ಬಂದ್ ಮಾಡಿರುವುದೇ ಇದಕ್ಕೆ ಕಾರಣ.

 ಸಂಸತ್ತಿನಲ್ಲಿ ವಿತ್ತ ಸಚಿವ ಅರುಣ್ ಜೇಟ್ಲಿ ಮಂಡಿಸಿರುವ 2017-18ನೇ ಸಾಲಿನ ಕೇಂದ್ರ ಬಜೆಟ್‌ನಲ್ಲಿ, ಡಿಜಿಟಲ್ ಭಾರತಕ್ಕೆ ಹೆಚ್ಚಿನ ಒತ್ತು ಕೊಡಲಾಗಿದೆ. ಬುಧವಾರ ಮಂಡಿಸಿರುವ ಬಜೆಟ್‌ನಲ್ಲಿ ಈ ಬಗ್ಗೆ ಘೋಷಣೆ ಮಾಡಿರುವ ಜೇಟ್ಲಿ, ಗ್ರಾ.ಪಂಗಳಿಗೂ ಇಂಟರ್‌ನೆಟ್ ಸೇವೆಯನ್ನು ವಿಸ್ತರಿಸುವುದಾಗಿ ತಿಳಿಸಿದ್ದಾರೆ. ಭಾರತ್ ನೆಟ್ ಯೋಜನೆಯ ಅಡಿಯಲ್ಲಿ ಒಂದುವರೆ ಲಕ್ಷಕ್ಕೂ ಹೆಚ್ಚು ಗ್ರಾ.ಪಂಗಳಿಗೆ ಓಪ್ಟಿಕಲ್ ಫೈಬರ್ ಕೇಬಲ್ ಸಂಪರ್ಕಿತ ಹೈ ಸ್ಪೀಡ್ ಬ್ರಾಂಡ್‌ಬ್ಯಾಂಡ್ ಕೆನೆಕ್ಟಿವಿಟಿ ಸೇವೆಯನ್ನು ನೀಡಲಾಗುವುದು ಎಂದವರು ವಿವರಿಸಿದ್ದಾರೆ. ಅದೇ ಹೊತ್ತಿಗೆ ಡಿಜಿಗಾಂವ್ ಯೋಜನೆಯನ್ನು ಆರಂಭಿಸಲಿದ್ದು, ಟೆಲಿ-ಮೆಡಿಸಿನ್, ವಿದ್ಯಾಭ್ಯಾಸ ಹಾಗೂ ಕೌಶಲ್ಯ ಅಭಿವೃದ್ಧಿಗೆ ಪ್ರೋತ್ಸಾಹ ತುಂಬಲಿದೆ.

 ಒಂದು ವರ್ಷದ ಒಳಗಾಗಿ ಪ್ರತಿಯೊಬ್ಬ ಮೊಬೈಲ್ ಬಳಕೆದಾರನನ್ನು ಆಧಾರ್ ನಂಬರ್ ಜೊತೆಗೆ ನೋಂದಾಯಿಸಬೇಕು ಎಂದು ಸುಪ್ರೀಂಕೋರ್ಟ್ ಸೋಮವಾರ ಕೇಂದ್ರ ಸರ್ಕಾರಕ್ಕೆ ನಿರ್ದೇಶನ ನೀಡಿತು. ಪೂರ್ವ ಪಾವತಿ ಅಥವಾ ಪ್ರಿಪೇಯ್ಡ್ ಸಂಪರ್ಕಗಳೂ ಸೇರಿದಂತೆ ಪ್ರತಿಯೊಬ್ಬ ಬಳಕೆದಾರನ ಮೊಬೈಲ್ ವಿವರಗಳನ್ನು ದಾಖಲಿಸಲು ಕೇಂದ್ರಕ್ಕೆ ಒಂದು ವರ್ಷದ ಗಡುವನ್ನು ಸುಪ್ರೀಂಕೋರ್ಟ್ ನೀಡಿತು. ದೇಶದಲ್ಲಿ ಸುಮಾರು 100 ಕೋಟಿಗೂ ಹೆಚ್ಚಿನ ಮೊಬೈಲ್ ಬಳಕೆದಾರರಿದ್ದಾರೆ. ಎಲ್ಲ ಮೊಬೈಲ್ ಗ್ರಾಹಕರ ಆಧಾರ್ ನಂಬರ್‌ಗಳನ್ನು ಮೊಬೈಲ್ ನಂಬರ್‌ಗಳ ಜೊತೆಗೆ ಒಂದು ವರ್ಷದ ಒಳಗಾಗಿ ನೋಂದಣಿ ಮಾಡುವುದು ಕಡ್ಡಾಯ ಎಂದು ಸುಪ್ರೀಂಕೋರ್ಟ್ ಹೇಳಿದ್ದು, ಮೊಬೈಲ್ ಫೋನ್‌ಗಳನ್ನು ಬ್ಯಾಂಕಿಂಗ್ ಉದ್ದೇಶಗಳಿಗೆ ಬಳಸುತ್ತಿರುವ ಹಿನ್ನೆಲೆಯಲ್ಲಿ ಪರಿಶೀಲನೆ ಅತಿ ಮಹತ್ವ ಹಾಗೂ ಅಗತ್ಯವಾಗಿದೆ ಎಂದು ಕೋರ್ಟ್ ಹೇಳಿತು.

 ಬಹು ನಿರೀಕ್ಷಿತ ಟ್ವೆಂಟಿ-20 ಟೂರ್ನಮೆಂಟ್ ಇಂಡಿಯನ್ ಪ್ರೀಮಿಯರ್ ಲೀಗ್(ಐ.ಪಿ.ಎಲ್)ನ 10ನೇ ಆವೃತ್ತಿ ಏಪ್ರಿಲ್ 5ರಿಂದ ಆರಂಭವಾಗಲಿದೆ ಎಂದು ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ(ಬಿ.ಸಿ.ಸಿಐ) ಗುರುವಾರ ಪ್ರಕಟಿಸಿದೆ. ಬಿ.ಸಿ.ಸಿ.ಐ ಆಡಳಿತ ಅಧಿಕಾರಿಗಳು (ಸಿ.ಒ.ಎ) ಹಾಗೂ ಬಿ.ಸಿ.ಸಿಐ ಅಧಿಕಾರಿಗಳು ಈ ಬಗ್ಗೆ ಸಭೆ ನಡೆಸಿ ನಿರ್ಣಯ ಕೈಗೊಂಡಿದ್ದಾರೆ.

ಇಂದಿನ ಕಾರ್ಯಕ್ರಮ

ಶಿಕ್ಷಣ ಮಾರ್ಗದರ್ಶಿ

ಹಿಂದಿನ ಸುದ್ದಿಗಳು

February 2017
M T W T F S S
« Jan    
 12345
6789101112
13141516171819
20212223242526
2728  

ನಮ್ಮ ಬಗ್ಗೆ

ಮೊದಲಿಗೆ ಕೇವಲ ಒಂದು ಹಾಳೆಯಲ್ಲಿ ಪ್ರಕಟವಾಗುತ್ತಿದ್ದ ಬೆಳ್ತಂಗಡಿ ತಾಲೂಕಿನ “ಸುದ್ದಿ ಬಿಡುಗಡೆ “ಪತ್ರಿಕೆ ಇಂದು ಪ್ರತಿದಿನ  22
.. ಮುಂದೆ ಓದಿ

ಸಲಹೆ- ಸೂಚನೆ

ನಿಮ್ಮ ಸಲಹೆ ಸೂಚನೆಗಳಿಗೆ ಹಾರ್ದಿಕ ಸ್ವಾಗತ

ಇಲ್ಲಿ ಕ್ಲಿಕ್ಕಿಸಿ

Copyright © 2017 Suddinews.com . All Rights Reserved.
^ Back to Top