Sun 15 Jan 2017, 2:38PM

ಹೆಚ್ಚಿನ ಸುದ್ದಿಗಳು

44ಕಲ್ಮಂಜ : ಶ್ರೀ ಸದಾಶಿವೇಶ್ವರ ದೇವಸ್ಥಾನ ಸಂಗಮಕ್ಷೇತ್ರ ಪಜಿರಡ್ಕದಲ್ಲಿ ಇಂದು ಮಕರ ಸಂಕ್ರಾಂತಿಯ ಪ್ರಯುಕ್ತ ಸಾರ್ವಜನಿಕ ಶ್ರೀ ಸತ್ಯನಾರಾಯಣ ಪೂಜೆ, 108 ತೆಂಗಿನಕಾಯಿ ಗಣಹೋಮ ಹಾಗೂ ಧಾರ್ಮಿಕ ಸಭಾ ಕಾರ್ಯಕ್ರಮ ನಡೆಂಯಿತು. ಧಾರ್ಮಿಕ ಸಭಾ ಕಾರ್ಯಕ್ರಮದಲ್ಲಿ ಶ್ರೀರಾಮ ಕ್ಷೇತ್ರದ ಪೀಠಾದೀಶರಾದ ಸದ್ಗುರು ಶ್ರೀ ಶ್ರೀ ಶ್ರೀ ಬ್ರಹ್ಮಾನಂದ ಸರಸ್ವತಿ ಸ್ವಾಮೀಜಿಯವರು ಆಶೀರ್ವಚನ ನೀಡಿದರು. ಸಭೆಯ ಅಧ್ಯಕ್ಷತೆಯನ್ನು ಕಲ್ಮಂಜ ಗ್ರಾಮ ಪಂಚಾಯತ್ ಅಧ್ಯಕ್ಷೆ ಶ್ರೀಮತಿ ಜಯಲಕ್ಷ್ಮೀ ವಹಿಸಿದ್ದರು. ಬಾಲಚಂದ್ರ ರಾವ್ ಗುತ್ತುಮನೆ, ಕೃಷ್ಣಪ್ಪ ಗುಡಿಗಾರ್, ಮಂಜುನಾಥ ಶೆಟ್ಟಿ, ರಮೇಶ್ ಗೌಡ ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದರು.

8

9

ಸಾಮೂಹಿಕ ಪೂಜಾ ಸಮಿತಿ ದೇವರಗುಂಡಿ ಇದರ ಆಶ್ರಯದಲ್ಲಿ ೨೫ನೇ ವರ್ಷದ ಸಾಮೂಹಿಕ ಶ್ರೀ ಸತ್ಯನಾರಾಯಣ ಪೂಜೆ ಮತ್ತು ಧಾರ್ಮಿಕ ಸಭೆಯು ಇಂದು ಜರಗಿತು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ದೇವರಗುಂಡಿ ಸಾಮೂಹಿಕ ಶ್ರೀ ಸತ್ಯನಾರಾಯಣ ಪೂಜಾ ಸಮಿತಿ ಅಧ್ಯಕ್ಷ ಕೆ.ಗುರುಪ್ರಸಾದ್ ವಹಿಸಿದ್ದರು. ಸುಳ್ಯ ಕೆ.ವಿ.ಜೆ ದಂತ ಮಹಾವಿದ್ಯಾಲಯ ವಿಭಾಗ ಮುಖ್ಯಸ್ಥ ಡಾ| ಎಮ್.ಎಮ್ ದಯಾಕರ್ ಉಜಿರೆ ಧಾರ್ಮಿಕ ಉಪನ್ಯಾಸ ಮಾಡಿದರು. ಬಳ್ಳಮಂಜ ಶ್ರೀ ಅನಂತೇಶ್ವರ ಸ್ವಾಮಿ ದೇವಸ್ಥಾನ ಅನುವಂಶಿಕ ಆಡಳಿತ ಮೊಕ್ತೇಸರ ಎಂ.ಹರ್ಷ ಸಂಪಿಗೆತ್ತಾಯ, ಮಡಂತ್ಯಾರ್ ತಾ.ಪಂ ಸದಸ್ಯೆ ಶ್ರೀಮತಿ ವಸಂತಿ, ಮಚ್ಚಿನ ಗ್ರಾ.ಪಂ ಉಪಾಧ್ಯಕ್ಷ ಚಂದ್ರಶೇಖರ್ ಬಿ.ಎಸ್, ಮಂಗಳೂರು ದ.ಕ.ಹಾ ಒಕ್ಕೂಟ ನಿರ್ದೇಶಕ ಪದ್ಮನಾಭ ಅರ್ಕಜೆ ಮುಖ್ಯ ಅತಿಥಿಗಳಾಗಿ ಆಗಮಿಸಿದ್ದರು.

142 ಬೆಳ್ತಂಗಡಿ: ಲಾಯಿಲ ಚಂದ್ಕೂರು ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದ ಜೀರ್ಣೋದ್ಧಾರ ಮತ್ತು ನವೀಕರಣ ಅಂಗವಾಗಿ ದೇವಸ್ಥಾನದ ವಠಾರದಲ್ಲಿ ಸಾಮೂಹಿಕ ಶ್ರೀ ಸತ್ಯನಾರಾಯಣ ಪೂಜೆ ಹಾಗೂ ಮಕರ ಸಂಕ್ರಮಣ ಪೂಜೆಯುಇಂದು ಜರಗಿತು. ಅನ್ನಪೂರ್ಣ ಭೋಜನ ಗೃಹದ ಉದ್ಘಾಟನೆ ನೆರವೇರಿದ್ದು, ಉಜಿರೆಯ ಶ್ರೀಮತಿ ಗೌತಮಿ ಜಿ. ಭಂಡಾರ್‌ಕಾರ್ ಅವರು ಉದ್ಘಾಟಿಸಿದರು. ಜ. 22ರಂದು ಸಂಜೆ ಷಢಾದಾರ ಪ್ರತಿಷ್ಠೆ ಮತ್ತು ರಾತ್ರಿ ಗರ್ಭನ್ಯಾಸ ವಿಧಿ ವಿಧಾನಗಳು ಉಚ್ಚಿಲ ಬ್ರಹ್ಮಶ್ರೀ ಪದ್ಮನಾಭ ತಂತ್ರಿಗಳ ನೇತೃತ್ವದಲ್ಲಿ ವಾಸ್ತುಶಿಲ್ಪಿಗಳಾದ ಪ್ರಸಾದ್ ಮುನಿಯಂಗಳ ಇವರ ಉಪಸ್ಥಿತಿಯಲ್ಲಿ ಜರಗಲಿದೆ.

1ಎಪಿಎಂಸಿ ಚುನಾವಣೆ ಫಲಿತಾಂಸವು ಇಂದು ಪ್ರಕಟಗೊಂಡಿದ್ದು, ಸ್ಪರ್ಧೆಯಲ್ಲಿದ್ದ 12 ಕ್ಷೇತ್ರಗಳ ಪೈಕಿ 7 ಕ್ಷೇತ್ರಗಳಲ್ಲಿ ಕಾಂಗ್ರಸ್ ಬೆಂಬಲಿಗರು, 5 ಕ್ಷೇತ್ರಗಳಲ್ಲಿ ಬಿಜೆಪಿ ಬೆಂಬಲಿತರು ಚುನಾಯಿತರಾಗಿದ್ದಾರೆ. ಕಾಂಗ್ರೆಸ್ ಬೆಂಬಲಿತ ಮಡಂತ್ಯಾರು ಸೇವಾ ಸಹಕಾರಿ ಸಂಘದ ಮಾಜಿ ಅಧ್ಯಕ್ಷ ವರ್ತಕರ ಕ್ಷೇತ್ರದಿಂದ ನಡೆದ ಚುನಾವಣೆಯಲ್ಲಿ ಪುಷ್ಪರಾಜ ಹೆಗ್ಡೆ 72 ಮತದೊಂದಿಗೆ ವರ್ತಕರ ಕ್ಷೇತ್ರದಿಂದ ಬಿಜೆಪಿ ಬೆಂಬಲಿತ ತಾಲೂಕು ರೈತ ಮೋರ್ಚಾದ ಉಪಾಧ್ಯಕ್ಷ ಡಿ. ಚಂದ್ರಶೇಖರ ಗೌಡರವರು 17 ಮತ ಪಡೆದಿದ್ದಾರೆ. ಕಾಂಗ್ರೆಸ್ ಬೆಂಬಲಿತ ಪುಷ್ಪರಾಜ್ ಹೆಗ್ಡೆ ಜಯ ಗಳಿಸಿದ್ದಾರೆ.
ಬೆಳ್ತಂಗಡಿ ಕೃಷಿಕರ ಮಹಿಳಾ ಮೀಸಲು ಕ್ಷೇತ್ರದಲ್ಲಿ ಕಾಂಗ್ರೆಸ್ ಬೆಂಬಲಿತ ಪಲ್ಲವಿರಾಜು, ಉಜಿರೆ ಕೃಷಿಕರ ಸಾಮಾನ್ಯ ಕ್ಷೇತ್ರದಲ್ಲಿ ಕಾಂಗ್ರೆಸ್ ಬೆಂಬಲಿತ ನ್ಯಾಯವಾದಿ ಕೇಶವ ಗೌಡ ಪಿ., ನೆರಿಯ ಕೃಷಿಕರ ಸಾಮಾನ್ಯ ಕ್ಷೇತ್ರದಲ್ಲಿ ಕಾಂಗ್ರೆಸ್ ಬೆಂಬಲಿತ ಪುದುವೆಟ್ಟು ಗ್ರಾ.ಪಂ ಮಾಜಿ ಅಧ್ಯಕ್ಷ ಅಬ್ದುಲ್‌ಗಫೂರ್, ಕಣಿಯೂರು ಕೃಷಿಕರ ಸಾಮಾನ್ಯ ಕ್ಷೇತ್ರದಲ್ಲಿ ಕಾಂಗ್ರೆಸ್ ಬೆಂಬಲಿತ ಗ್ರಾ.ಪಂ. ಮಾಜಿ ಅಧ್ಯಕ್ಷ ಗಣೇಶ್ ಪ್ರಸಾದ್ ಕೆರ್ಮುನ್ನಾಯ, ನಾರಾವಿ ಕೃಷಿಕರ ಹಿಂದುಳಿದ ವರ್ಗ ಎ ಮೀಸಲು ಕ್ಷೇತ್ರದಲ್ಲಿ ಕಾಂಗ್ರೆಸ್ ಬೆಂಬಲಿತ ಕಾಶಿಪಟ್ಣ ಗ್ರಾ.ಪಂ ಅಧ್ಯಕ್ಷ ಸತೀಶ್ ಕೆ. ಕಾಶಿಪಟ್ಣ, ಅಳದಂಗಡಿ ಕೃಷಿಕರ ಸಾಮಾನ್ಯ ಕ್ಷೇತ್ರದಲ್ಲಿ ಕಾಂಗ್ರೆಸ್ ಬೆಂಬಲಿತ ಸುಲ್ಕೇರಿಮೊಗ್ರು ಸಹಕಾರಿ ಸಂಘದ ಮಾಜಿ ನಿರ್ದೇಶಕ ಚಿದಾನಂದ ಪೂಜಾರಿ ಎಲ್ಡಕ್ಕ ಚುನಾಯಿತರಾಗಿದ್ದಾರೆ.
ಕೊಕ್ಕಡ ಕೃಷಿಕರ ಅನುಸೂಚಿತ ಜಾತಿ ಮೀಸಲು ಕ್ಷೇತ್ರದಲ್ಲಿ ಬಿಜೆಪಿ ಬೆಂಬಲಿತ ತಾ.ಪಂ ಮಾಜಿ ಸದಸ್ಯ ಈಶ್ವರ ಭೈರ, ಮಚ್ಚಿನ ಕೃಷಿಕರ ಸಾಮಾನ್ಯ ಕ್ಷೇತ್ರದಲ್ಲಿ ಬಿಜೆಪಿ ಬೆಂಬಲಿತ ಜಯಾನಂದ ಕಲ್ಲಾಪು, ಮಡಂತ್ಯಾರು ಕೃಷಿಕರ ಮಹಿಳಾ ಮೀಸಲು ಮೀಸಲು ಕ್ಷೇತ್ರದಲ್ಲಿ ಬಿಜೆಪಿ ಬೆಂಬಲಿತ ಸೆಲೆಸ್ಟಿನ್ ಡಿ ಸೋಜಾ, ವೇಣೂರು ಕೃಷಿಕರ ಹಿಂದುಳಿದ ವರ್ಗ ಬಿ ಮೀಸಲು ಕ್ಷೇತ್ರದಲ್ಲಿ ಬಿಜೆಪಿ ಬೆಂಬಲಿತ ಬಿಜೆಪಿ ಜಿಲ್ಲಾ ಅಲ್ಪಸಂಖ್ಯಾತ ಮೋರ್ಚಾದ ಸಂಘಟಕ ಅಶೋಕ್ ಗೋವಿಯಸ್, ಇಂದಬೆಟ್ಟು ಕೃಷಿಕರ ಅನುಸೂಚಿತ ಪಂಗಡ ಮೀಸಲು ಕ್ಷೇತ್ರದಲ್ಲಿ ಬಿಜೆಪಿ ಬೆಂಬಲಿತ ಲ್ಯಾಂಪ್ ಸೊಸೈಟಿ ಮಾಜಿ ನಿರ್ದೇಶಕ ಆನಂದ ನಾಯ್ಕ ಪಡೀಲು ಆಯ್ಕೆಯಾಗಿದ್ದಾರೆ.
ಸಹಕಾರಿ ಕ್ಷೇತ್ರದ 2 ಕ್ಷೇತ್ರಗಳಲ್ಲಿ ಈಗಾಗಲೇ ಕಾಂಗ್ರೆಸ್ ಬೆಂಬಲಿತರಾದ ಇಚ್ಚಿಲ ಸುಂದರ ಗೌಡ ಹಾಗೂ ಜೀವಂದರ್ ಕುಮಾರ್ ಅವಿರೋಧವಾಗಿ ಆಯ್ಕೆಯಾಗಿದ್ದರು.

Pushparaj Shetty copyಬೆಳ್ತಂಗಡಿ ಎಪಿಎಂಸಿ ಚುನಾವಣೆ : ಕಾಂಗ್ರೆಸ್ ಬೆಂಬಲಿತ ಮಡಂತ್ಯಾರು ಸೇವಾ ಸಹಕಾರಿ ಸಂಘದ ಮಾಜಿ ಅಧ್ಯಕ್ಷ ವರ್ತಕರ ಕ್ಷೇತ್ರದಿಂದ ನಡೆದ ಚುನಾವಣೆಯಲ್ಲಿ ಪುಷ್ಪರಾಜ ಹೆಗ್ಡೆ 72 ಮತದೊಂದಿಗೆ ವರ್ತಕರ ಕ್ಷೇತ್ರದಿಂದ ಬಿಜೆಪಿ ಬೆಂಬಲಿತ ತಾಲೂಕು ರೈತ ಮೋರ್ಚಾದ ಉಪಾಧ್ಯಕ್ಷ ಡಿ. ಚಂದ್ರಶೇಖರ ಗೌಡರವರು 17 ಮತ ಪಡೆದಿದ್ದಾರೆ. ಕಾಂಗ್ರೆಸ್ ಬೆಂಬಲಿತ ಪುಷ್ಪರಾಜ್ ಹೆಗ್ಡೆ ಜಯ ಗಳಿಸಿದ್ದಾರೆ.

miracle 1

swathi 1

  ವೇಣೂರು : ವಿವಿಧ ಸಂಘ ಸಂಸ್ಥೆಗಳ ಸಹಯೋಗದೊಂದಿಗೆ ವಿಕಲ ಚೇತನರ ಉಚಿತ ತಪಾಸಣೆ ಹಾಗೂ ಸಾಧನ ಸಲಕರಣೆಗಳ ವಿತರಣೆಗಾಗಿ ಫಲಾನುಭವಿಗಳ ಗುರುತಿಸುವಿಕೆಯ ಶಿಬಿರವು ವೇಣೂರು ಪ್ರಾಥಮಿಕ ಆರೋಗ್ಯ ಕೇಂದ್ರದ ವಠಾರದಲ್ಲಿ ಜ.15ರಂದು ಬೆಳಿಗ್ಗೆ 9 ಗಂಟೆಯಿಂದ ಮಧ್ಯಾಹ್ನ ೧ರ ವರೆಗೆ ಜರಗಲಿದೆ ಎಂದು ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ಡಾ| ಭವಿಷ್ಯಕೀರ್ತಿ ತಿಳಿಸಿದ್ದಾರೆ.
ಶಿಬಿರದ ಪ್ರಯೋಜನ ಪಡೆಯಲು ಇಚ್ಚಿಸುವವರು ಕಡ್ಡಾಯವಾಗಿ ಪಡಿತರ ಚೀಟಿ ಹಾಗೂ ಆಧಾರ್ ಕಾರ್ಡ್, ವಿಕಲಾಂಗ ತೋರುವ 6 ಫೊಟೊ ತರಬೇಕಾಗುತ್ತದೆ. ಶಿಬಿರದಲ್ಲಿ ವಿಕಲಚೇತನ ಫಲಾನುಭವಿಗಳನ್ನು ಗುರುತಿಸಿ ಅವರಿಗೆ ಅವಶ್ಯವಿರುವ ಸಾಧನ ಸಲಕರಣೆಗಳನ್ನು ನೀಡುವ ಸಲುವಾಗಿ ಫಲಾನುಭವಿಗಳ ಆಯ್ಕೆಯನ್ನು ಈ ಶಿಬಿರದಲ್ಲಿ ನಡೆಸಲಾಗುವುದು. ಈಗಾಗಲೇ ಚೀಟಿ ಹೊಂದಿರುವವರಿಗೆ ಮತ್ತೊಮ್ಮೆ ತಪಾಸಣೆಗೆ ಅವಕಾಶ ಇರುವುದಿಲ್ಲ ಎಂದು ಅವರು ತಿಳಿಸಿದ್ದಾರೆ.

  ಮಡಂತ್ಯಾರು : ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ಮಡಂತ್ಯಾರು ಸಂಸ್ಥೆಯ 2016-17ರ ಸಾಲಿನ ರೋವರ‍್ಸ್ ರೇಂಜರ‍್ಸ್ ಸಮಾಗಮ, ಸ್ಕೌಟ್ಸ್ ಗೈಡ್ಸ್ ಮೇಳ ಮತ್ತು ಕಬ್ಸ್ ಬುಲ್‌ಬುಲ್ಸ್ ಉತ್ಸವವು ಜ.13 ರಿಂದ 15ರ ವರೆಗೆ ಮಚ್ಚಿನ ಮೊರಾರ್ಜಿ ವಸತಿ ಶಾಲೆಯಲ್ಲಿ ನಡೆಯಲಿದೆ.
ಈ ರ‍್ಯಾಲಿಯನ್ನು ಜ.13 ರಂದು ಸಂಜೆ ಶಾಸಕರು ಹಾಗೂ ಕರ್ನಾಟಕ ರಾಜ್ಯ ಸರಕಾರದ ಸಣ್ಣ ಕೈಗಾರಿಕಾ ನಿಗಮದ ಅಧ್ಯಕ್ಷ ಕೆ. ವಸಂತ ಬಂಗೇರ ಉದ್ಘಾಟಿಸಲಿದ್ದು, ಮುಖ್ಯ ಅತಿಥಿಗಳಾಗಿ ಜಿ.ಪಂ ಸದಸ್ಯೆ ಮಮತಾ ಎಂ. ಶೆಟ್ಟಿ, ತಾ.ಪ ಸದಸ್ಯೆ ವಸಂತಿ ಎಂ, ಮಚ್ಚಿನ ಗ್ರಾ.ಪಂ ಅಧ್ಯಕ್ಷೆ ಹರ್ಷಲತಾ, ದ.ಕ ಜಿಲ್ಲಾ ಸ್ಕೌಟ್ ಆಯುಕ್ತ ಎನ್.ಜಿ.ಮೋಹನ್, ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ಜಿಲ್ಲಾಧಿಕಾರಿ ಜಯಣ್ಣ ಹೆಚ್ ಮತ್ತು ಮಚ್ಚಿನ ಗ್ರಾ.ಪಂ ಸರ್ವ ಸದಸ್ಯರು ಭಾಗವಹಿಸಲಿದ್ದಾರೆ.
ಜ.14 ರ ಸಾಯಂಕಾಲ ನಡೆಯಲಿರುವ ಸಮಾರೋಪ ಸಮಾರಂಭದ ಮುಖ್ಯ ಅತಿಥಿಗಳಾಗಿ ಮಚ್ಚಿನ ಗ್ರಾ.ಪಂ ಉಪಾಧ್ಯಕ್ಷ ಚಂದ್ರಶೇಖರ್, ಸದಸ್ಯರಾದ ಚಂದ್ರಕಾಂತ ನಿಡ್ಡಾಜೆ, ಕಮಲ, ಸೋಮಾವತಿ ಹಾಗೂ ಬೆಳ್ತಂಗಡಿಯ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ತಾಲೂಕು ವಿಸ್ತರಣಾಧಿಕಾರಿ ಸುರೇಂದ್ರ ಎಸ್ ಭಾಗವಹಿಸಲಿದ್ದಾರೆ. ಈ ಎಲ್ಲಾ ಕಾರ್ಯಕ್ರಮಗಳ ಅಧ್ಯಕ್ಷತೆಯನ್ನು ಸ್ಕೌಟ್ ಸಂಸ್ಥೆಯ ಅಧ್ಯಕ್ಷರಾಗಿರುವ ಹಾಜಿ ಅಬ್ದುಲ್ ಲತೀಫ್ ಸಾಹೇಬ್ ವಹಿಸಿಕೊಳ್ಳಲಿದ್ದಾರೆ.
ಈ ರ‍್ಯಾಲಿಯಲ್ಲಿ ಧ್ವಜಸ್ಥಂಭ ರಚನೆ, ಸುಧಾರಿತ ಗುಢಾರ ರಚನೆ, ಗ್ಯಾಡ್ಜೆಟ್ ರಚನೆ, ಧ್ವಜವಂದನೆ, ಶಿಬಿರಾಗ್ನಿ, ಬಿ.ಪಿ ವ್ಯಾಯಾಮ, ರಸಪ್ರಶ್ನೆ, ಗಾಳಿಪಟ ತಯಾರಿ, ಬೆಂಕಿ ಬಳಸದೆ ಅಡುಗೆ ತಯಾರಿ, ಕರಕುಶಲ ವಸ್ತುಗಳ ತಯಾರಿ, ದೇಶಭಕ್ತಿ ಗೀತೆ, ಸಾಹಸಮಯ ಚಟುವಟಿಕೆಗಳು, ನಗರ ಮೆರವಣಿಗೆ, ಸರ್ವಧರ್ಮ ಪ್ರಾರ್ಥನೆಗಳಂತಹ ವಿವಿಧ ಚಟುವಟಿಕೆಗಳನ್ನು ಆಯೋಜಿಸಲಾಗಿದೆ ಎಂದು ಮಚ್ಚಿನ ಮೊರಾರ್ಜಿ ದೇಸಾಯಿ ವಸತಿ ಶಾಲೆಯ ಪ್ರಾಂಶುಪಾಲರಾದ ಗಣೇಶ್ ನಾಯಕ್, ಸ್ಕೌಟ್ ಸಂಸ್ಥೆಯ ಪ್ರಧಾನ ಕಾರ್ಯದರ್ಶಿ ಎಂ ಶಾಂತಾರಾಮ ಪ್ರಭು, ಕೋಶಾಧಿಕಾರಿ ರವೀಂದ್ರ ರಾವ್, ರ‍್ಯಾಲಿ ನಿರ್ದೇಶಕರಾದ ಬೇಬಿ ಸುಪ್ರಿತಾ ಬಿ.ಎನ್, ಜತೆ ಕಾರ್ಯದರ್ಶಿ ಧರಣೇಂದ್ರ ಕೆ ರವರು ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿರುತ್ತಾರೆ.

 ದ.ಕ ಸಹಕಾರಿ ಹಾಲು ಉತ್ಪಾದಕರ ಒಕ್ಕೂಟದ ಆಶ್ರಯದಲ್ಲಿ ನಂದಿನಿ ಕಿರಿಯ ಕಲಾವಿದ ಚಿತ್ರಕಲೆ ಸ್ಪರ್ಧೆಯನ್ನು ಮಂಗಳೂರಿನ ಮಿಲಾಗ್ರಿಸ್ ಚರ್ಚ್ ಹಾಲ್‌ನಲ್ಲಿ ಜ.23 ರಂದು ಏರ್ಪಡಿಸಲಾಗಿದೆ.
ದ.ಕ ಜಿಲ್ಲೆಯ 5 ರಿಂದ 7ನೇ ತರಗತಿಯವರೆಗಿನ ಮಕ್ಕಳಿಗೆ ಗ್ರಾಮೀಣ ಪ್ರದೇಶದಲ್ಲಿ ಹೈನುಗಾರಿಕೆ ಎಂಬ ವಿಷಯದ ಬಗ್ಗೆ ಮತ್ತು 8ರಿಂದ ಮತ್ತು 10 ನೆಯ ತರಗತಿಯ ಮಕ್ಕಳಿಗೆ ಹೈನುಗಾರಿಕೆಯಿಂದ ಸ್ವಉದ್ಯೋಗ ಎಂಬ ವಿಷಯದ ಬಗ್ಗೆ ಎಲ್ಲಾ ಸರ್ಕಾರಿ /ಅನುದಾನಿತ/ಖಾಸಗಿ ಶಾಲೆಯ ಮಕ್ಕಳಿಗೆ ಚಿತ್ರಕಲೆ ಸ್ಪರ್ಧೆಯನ್ನು ಏರ್ಪಡಿಸಲಾಗಿದೆ. ಪ್ರತೀ ಶಾಲೆಯಿಂದ 5ನೇ ತರಗತಿಯಿಂದ 7ನೇ ತರಗತಿಯವರೆಗೆ 2 ಮಕ್ಕಳು ಮತ್ತು ೮ನೇ ತರಗತಿಯಿಂದ 10ನೇ ತರಗತಿಯವರೆಗೆ 2 ಮಕ್ಕಳು ಭಾಗವಹಿಸಲು ಅವಕಾಶ ಕಲ್ಪಿಸಲಾಗಿದೆ ಪ್ರಶಸ್ತಿಯನ್ನು ಎರಡು ಗುಂಪುಗಳಿಗೆ ಪ್ರತ್ಯೇಕವಾಗಿ ನೀಡಲಾಗುವುದು. ಪ್ರಶಸ್ತಿ ವಿಜೇತ ಮಕ್ಕಳಿಗೆ ನಗದಾಗಿ ಪ್ರಥಮ ಬಹುಮಾನ ರೂ.10,000/- ದ್ವಿತೀಯ ಬಹುಮಾನ ರೂ.6,000/- ಹಾಗೂ ತೃತೀಯ ಬಹುಮಾನ ರೂ.3,000/- ಅಲ್ಲದೆ 5 ಸಮಾಧಾನಕರ ಬಹುಮಾನವಾಗಿ ರೂ.1,000/- ನೀಡಲಾಗುವುದು ಜೊತೆಗೆ ಸ್ಮರಣಿಕೆ ಹಾಗೂ ನಂದಿನಿ ಸಿಹಿತಿಂಡಿ ನೀಡಲಾಗುವುದು ಮತ್ತು ಭಾಗವಹಿಸಿದ ಎಲ್ಲಾ ಮಕ್ಕಳಿಗೆ ಪ್ರಶಸ್ತಿ ಪತ್ರ ವಿತರಿಸಲಾಗುವುದು.
ಎಲ್ಲಾ ಶಾಲೆಯಿಂದ ಚಿತ್ರಕಲೆ ಆಸಕ್ತಿ ಇರುವ ಆಯ್ದ 2 ಮಕ್ಕಳನ್ನು ಆಯ್ಕೆ ಮಾಡಿ ಜ.೧೩ ರೊಳಗಾಗಿ ಈ ಇ-ಮೇಲ್ ಐಡಿಗೆ mddkmul@gmail.com ಅಥವಾ ಪತ್ರ ಮುಖೇನ ಕಳುಹಿಸಿಕೊಡುವಂತೆ ದ.ಕ. ಸಹಕಾರಿ ಹಾಲು ಉತ್ಪಾದಕರ ಒಕ್ಕೂಟದ ಅಧ್ಯಕ್ಷರಾದ ರವಿರಾಜ ಹೆಗ್ಡೆ, ಕೊಡವೂರುರವರು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ujireeeeeeeeeeeeeಉಜಿರೆ : ಉಜಿರೆ ಎಸ್‌ಡಿಎಂ ಪದವಿಪೂರ್ವ ಕೇಲಾಜಿನ ಆಶ್ರಯದಲ್ಲಿ ನಡೆದ ರಾಷ್ಟ್ರಮಟ್ಟದ ಪದವಿಪೂರ್ವ ಕಾಲೇಜುಗಳ ಬಾಲಕಿಯರ ವಾಲಿಬಾಲ್ ಪಂದ್ಯಾಟದ ಫೈನಲ್ ಜ.12ರಂದು ನಡೆಯಿತು.
ಈ ಹೋರಾಟದಲ್ಲಿ ಎಸ್‌ಡಿಎಂ ಪದವಿಪೂರ್ವ ಕಾಲೇಜಿನ ಯಶೋದಾ ನಾಯಕತ್ವದ ಕರ್ನಾಟಕ ತಂಡವು ತೀವ್ರ ಹೋರಾಟ ನಡೆಸಿ, ಅಂತಿಮವಾಗಿ 18-25, 23-25, 21-25 ಸೆಟ್‌ಗಳಿಂದ ಕೇರಳ ಬಾಲಕಿಯರಿಗೆ ಪ್ರಶಸ್ತಿ ನೀಡಿ, ರನ್ನರ್ ಅಪ್ ಸ್ಥಾನಕ್ಕೆ ತೃಪ್ತಿ ಪಟ್ಟಿದೆ.
ಈ ಸಂದರ್ಭದಲ್ಲಿ ಧರ್ಮಸ್ಥಳದ ಧರ್ಮಾಧಿಕಾರಿ ಡಾ| ಡಿ.ವೀರೇಂದ್ರ ಹೆಗ್ಗಡೆ, ಹೇಮಾವತಿ ಹೆಗ್ಗಡೆ, ಹಷೇಂದ್ರ ಕುಮಾರ್, ಸುಪ್ರೀಯಾ ಹಷೇಂದ್ರ ಕುಮಾರ್ ಫೈನಲ್ ಪಂದ್ಯಾಟ ವೀಕ್ಷಿಸಿದರು. ಹಾಗೂ ಇನ್ನಿತರ ಗಣ್ಯರು ಸೇರಿದಂತೆ ಅನೇಕ ಕ್ರೀಡಾ ಪ್ರಿಯರು ನೆರೆದಿದ್ದರು.

re

ಸದಾನಂದ ಗೌಡ, ಕೇಶವ ಬಂಗೇರ, ನಿತ್ಯಾನಂದ ಮುಂಡೋಡಿ , ನಳಿನ್ ಕುಮಾರ್ ಕಟೀಲ್ ಮಾತನಾಡುತ್ತಿರುವುದು

rekhya

ಶ್ರೀ ಗುಡ್ರಾಮಲ್ಲೇಶ್ವರ ದೇವಸ್ಥಾನ ಗುಡ್ರಾದಿ, ರೆಖ್ಯದಲ್ಲಿ ಅಷ್ಟಬಂಧ ಬ್ರಹ್ಮಕಲಶೋತ್ಸವ ಮತ್ತು ವಾರ್ಷಿಕ ಜಾತ್ರೋತ್ಸವದ ಪ್ರಯುಕ್ತ ಜ.12ರಂದು ಧಾರ್ಮಿಕ ಸಭಾ ಕಾರ್ಯಕ್ರಮ ನಡೆಯಿತು.
ಶ್ರೀ ವಿದ್ಯಾಪ್ರಸನ್ನ ತೀರ್ಥ ಸ್ವಾಮೀಜಿ ಸಂಪುಟ ನರಸಿಂಹ ಮಠ ಸುಬ್ರಹ್ಮಣ್ಯರವರು ಆಶೀರ್ವಚನ ನೀಡಿದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಶ್ರೀ ಕ್ಷೇತ್ರ ಸುಬ್ರಹ್ಮಣ್ಯ ಅಧ್ಯಕ್ಷರಾದ ನಿತ್ಯಾನಂದ ಮುಂಡೋಡಿ ವಹಿಸಿದ್ದರು.
ನಾರಾಯಣಗುರು ಕಾಲೇಜು ಕುದ್ರೋಳಿ ಉಪನ್ಯಾಸಕ ಕೇಶವ ಬಂಗೇರ ಬೆಳ್ತಂಗಡಿ ಧಾರ್ಮಿಕ ಉಪನ್ಯಾಸ ಮಾಡಿದರು. ಮಂಗಳೂರು ಲೋಕಸಭಾ ಕ್ಷೇತ್ರ ಸಂಸದ ನಳಿನ್ ಕುಮಾರ್ ಕಟೀಲ್ ಮುಖ್ಯ ಅತಿಥಿಯಾಗಿ ಆಗಮಿಸಿದ್ದರು. ಕಡಬ ಜಿ.ಪಂ ಸದಸ್ಯ ಪಿ.ಪಿ ವರ್ಗೀಸ್, ನೆಲ್ಯಾಡಿ ಎಚ್.ಡಿ ಡೀಲರ್ ಕೆ.ಪಿ ತೋಮಸ್, ನೆಲ್ಯಾಡಿ ಜಿ.ಪಂ ಸದಸ್ಯ ಸರ್ವೋತ್ತಮ ಗೌಡ, ಪುತ್ತೂರು ಉಪವಿಭಾಗ ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಹೆಚ್.ಸುಂದರ ಶೆಟ್ಟಿ, ಪುತ್ತೂರು ತಾ.ಪಂ ಸದಸ್ಯ ಗಣೇಶ್ ಕೈಕುರೆ, ನೆಲ್ಯಾಡಿ ಗ್ರಾ.ಪಂ ಅಧ್ಯಕ್ಷ ಜಯಾನಂದ ಬಂಟ್ರಿಯಾಲ್, ನೂಜಿಬಾಳ್ತ್ತಿಲ ಗ್ರಾ.ಪಂ ಅಧ್ಯಕ್ಷ ಸದಾನಂದ ಗೌಡ ಸಾಂತ್ಯಡ್ಕ, ನೆಲ್ಯಾಡಿ ಗ್ರಾ.ಪಂ ಸದಸ್ಯ ಅಬ್ರಹಾಂ ಕೆ.ಪಿ, ಗೌರವ ಉಪಸ್ಥಿತಿಯಲ್ಲಿ ಕಾರ್ಯಕ್ರಮ ಜರಗಿತು.

ಮೇಲಂತಬೆಟ್ಟು : ಮೇಲಂತಬೆಟ್ಟು ಶ್ರೀ ದೇವಿ ಭಗವತಿ ಅಮ್ಮನವರ ದೇವಸ್ಥಾನದಲ್ಲಿ ಮಕರ ಸಂಕ್ರಾಂತಿಯ ಪ್ರಯುಕ್ತ ಶ್ರೀ ಸರ್ವೇಶ್ವರಿ ದೇವಿಯ ಪೂಜೆ ಕೇರಳ ಶಿವಗಿರಿ ಮಠ ವರ್ಕಳದ ಶ್ರೀ ಸತ್ಯಾನಂದ ತೀರ್ಥ ಸ್ವಾಮೀಜಿಯವರ ನೇತೃತ್ವದಲ್ಲಿ ಕ್ಷೇತ್ರದ ವಠಾರದಲ್ಲಿ ನಡೆಯಲಿದೆ ಎಂದು ಆಡಳಿತ ಮೊಕ್ತೇಸರ ಯೋಗೀಶ್ ಪೂಜಾರಿ ತಿಳಿಸಿದ್ದಾರೆ.
ಅಂದು ರಾತ್ರಿ 8.30ಕ್ಕೆ ವಿಶೇಷವಾಗಿ ರಂಗಪೂಜೆ, ಶ್ರೀ ಅಯ್ಯಪ್ಪ ಸ್ವಾಮಿ ಪೂಜೆ, ಸಂಕ್ರಾಂತಿ ಪೂಜೆ, ಶ್ರೀ ದೇವಿಗೆ ಹೂವಿನ ಪೂಜೆ ಮೊದಲಾದ ಧಾರ್ಮಿಕ ಕಾರ್ಯಕ್ರಮಗಳು ನಡೆಯಲಿದೆ. ಸಂಜೆ 5ಗಂಟೆಯಿಂದ ಶ್ರೀ ದೇವಿ ಭಗವತಿ ಅಮ್ಮ ಭಜನಾ ಮಂಡಳಿ ಮತ್ತು ಶ್ರೀ ಕ್ಷೇ.ಧ.ಗ್ರಾ.ಯೋಜನೆ ಪ್ರಗತಿಬಂಧು ಸ್ವಸಹಾಯ ಸಂಘಗಳ ಒಕ್ಕೂಟದ ವತಿಯಿಂದ ವಿಶೇಷ ಭಜನಾ ಕಾರ್ಯಕ್ರಮ ನಡೆಯಲಿದೆ. ಸರ್ವೇಶ್ವರಿ ದೇವಿಯ ಪೂಜೆಯಲ್ಲಿ ಮಹಿಳೆಯವರು ಭಾಗವಹಿಸಬಹುದು. ಈ ಎಲ್ಲಾ ಕಾರ್ಯಕ್ರಮದಲ್ಲಿ ಭಕ್ತರು ಅತೀ ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸುವಂತೆ ಅವರು ವಿನಂತಿಸಿದ್ದಾರೆ.

  ಉಜಿರೆ: ಇಲ್ಲಿಯ ಸಮೂಹ ಸಂಸ್ಥೆಯ ಜ.30 ಹಾಗೂ 31ರಂದು ಉಜಿರೆಯಲ್ಲಿ ಕಾಲಂದುಗೆ ಗೆಜ್ಜೆ ಹಾಗೂ ಅತ್ತದರಿ ಇತ್ತಪುಲಿ ನಾಟಕಗಳು ಪ್ರದರ್ಶನಗೊಳ್ಳಲಿದೆ. ಸಮೂಹ ರಜತಮಹೋತ್ಸವ ವರ್ಷ (1992-2017) ವಿವಿಧ ರೀತಿಯ ಚಟುವಟಿಕೆಗಳನ್ನು ಈಗಾಗಲೇ ಆಯೋಜಿಸಲಾಗಿದೆ. ನೃತ್ಯ, ನಾಟಕ, ಸಂಗೀತ, ಯಕ್ಷಗಾನ, ಮಕ್ಕಳ ನಾಟಕೋತ್ಸವ, ರಂಗತರಬೇತಿ ಶಿಬಿರ ಇತ್ಯಾದಿಗಳು. ವಿಶೇಷವಾಗಿ ಎ.20 ರಿಂದ 4 ದಿನಗಳ ಅವಧಿಯ ದಕ್ಷಿಣೋತ್ತರ ಜಿಲ್ಲೆಗಳ ಹೈಸ್ಕೂಲ್ ವಿದ್ಯಾರ್ಥಿಗಳ ಪ್ರತಿಭಾ ವಿಕಾಸಕ್ಕಾಗಿ ಮಕ್ಕಳ ನಾಟಕೋತ್ಸವ ಹಮ್ಮಿಕೊಳ್ಳಲಾಗಿದೆ. ತಾಲೂಕಿನ ಎಲ್ಲಾ ಹೈಸ್ಕೂಲ್‌ಗಳ ವಿದ್ಯಾರ್ಥಿಗಳಿಗೆ ಪ್ರಥಮ ಆಧ್ಯತೆ ನೀಡಲಾಗುವುದು ಎಂದು ಸಮೂಹ ಉಜಿರೆ ಪ್ರಕಟಣೆಯಲ್ಲಿ ತಿಳಿಸಿದೆ.
ವಿವರಗಳಿಗೆ ಸಂಪರ್ಕಿಸಿ: ಸುನಿಲ್ ಪಂಡಿತ, ಸಂಚಾಲಕರು, ಮಕ್ಕಳ ನಾಟಕೋತ್ಸವ ಸಮಿತಿ 9449191327 ಅಥವಾ ಎಸ್.ಜಿ. ಭಟ್ 9448935144.

  ಬೆಳ್ತಂಗಡಿ: ಕುಂಬಾರರ ಸೇವಾ ಸಂಘ ಬೆಳ್ತಂಗಡಿ ಇದರ ವತಿಯಿಂದ ಸ್ವಜಾತಿ ಬಾಂಧವರ ಮಾಗಣೆ ಸಭೆ ಕುಂಭ ಸಂಭ್ರಮ-2017 ಕಾರ್ಯಕ್ರಮವು ಜ.15ರಂದು ಬೆಳ್ತಂಗಡಿ ಶ್ರೀ ಗುರುನಾರಾಯಣ ಸಭಾಭವನದಲ್ಲಿ ಜರಗಲಿದೆ.
ಬೆಳಿಗ್ಗೆ 9.30ಕ್ಕೆ ಕಾರ್ಯಕ್ರಮದ ಉದ್ಘಾಟನೆಯನ್ನು ಬೆಳ್ತಂಗಡಿ ಮಾಗಣೆ ಗುರಿಕಾರರಾದ ಅಣ್ಣಪ್ಪ ಕುಲಾಲ್ ನೆರವೇರಿಸಲಿದ್ದಾರೆ. ಬೆಳ್ತಂಗಡಿ ಕುಂಬಾರರ ಸೇ.ಸಂಘದ ಅಧ್ಯಕ್ಷ ಹೆಚ್. ಪ್ರದ್ಮಕುಮಾರ್ ಅಧ್ಯಕ್ಷತೆ ವಹಿಸಲಿದ್ದಾರೆ. ಮುಖ್ಯ ಅತಿಥಿಗಳಾಗಿ ಮಾಗಣೆ ಗುರಿಕಾರ ಬಿ. ದೂಮ ಕುಲಾಲ್, ಬೆಂಗಳೂರು ರಾಜ್ಯ ಕುಂಬಾರರ ಮಹಾ ಸಂಘದ ಅಧ್ಯಕ್ಷ ಡಾ| ಅಣ್ಣಯ್ಯ ಕುಲಾಲ್, ಬೆಂಗಳೂರು ಯುವ ಘಟಕದ ರಾಜ್ಯ ಸಂಘಟನಾ ಕಾರ್ಯದರ್ಶಿ ಹರೀಶ್ ಕಾರಿಂಜ, ಗುರುವಾಯನಕೆರೆ ಮೂಲ್ಯರ ಯಾನೆ ಕುಂಬಾರರ ತಾಲೂಕು ಸಂಘದ ಉಪಾಧ್ಯಕ್ಷ ದಿನಕರ ಬಂಗೇರ ಭಾಗವಹಿಸಲಿದ್ದಾರೆ. ಕಾರ್ಯಕ್ರಮದಲ್ಲಿ ಕುಂಬಾರಿಕೆ ವೃತ್ತಿ ಮಾಡುತ್ತಿರುವ ಹಿರಿಯ ವ್ಯಕ್ತಿಗಳಿಗೆ, ನಾಟಿ ವೈದ್ಯರುಗಳಿಗೆ ಸನ್ಮಾನ ಕಾರ್ಯಕ್ರಮ, ಉಪನ್ಯಾಸ ಹಾಗೂ ವಿಚಾರ ಸಂಕಿರಣ ಕಾರ್ಯಕ್ರಮ ನಡೆಯಲಿದೆ.

P

P1

P2

P3

ನಾವೂರು : ನಾವೂರು ಬಾಲಯೇಸು ದೇವಾಲಯದ ಜಾತ್ರಾ ಮಹೋತ್ಸವವು ಜ.೬ರಿಂದ ಆರಂಭಗೊಂಡು ಜ.14ರಂದು ಸಮಾಪ್ತಿಗೊಳ್ಳಲಿದೆ. ಇದರ ಪ್ರಯುಕ್ತ ಜ.12ರಂದು ಬೆಳ್ತಂಗಡಿ ಸಂತ ಲಾರೆನ್ಸ್ ಪ್ರಧಾನ ದೇವಾಲಯದಿಂದ ಪವಾಡ ಪುರುಷ ಬಾಲಯೇಸುವಿನ ಮೂರ್ತಿಯು ಮೆರವಣಿಗೆಯಲ್ಲಿ ನಾವೂರು ಚರ್ಚ್‌ಗೆ ತರಲಾಯಿತು.
ಇದರ ಉಪಾಧ್ಯಕ್ಷರುಗಳಾದ ನ್ಯಾಯಾವಾದಿಗಳಾದ ಸೇವಿಯರ್ ಪಾಲೇಲಿ, ರಾಜು ಇವರಿಗೆ ಸಂತ ಲಾರೆನ್ಸ್ ಚರ್ಚ್‌ನ ಪ್ರಧಾನ ಧರ್ಮಗುರುಗಳಾದ ಫಾ| ಬಿನೋಯ್ ಧ್ವಜವನ್ನು ಹಸ್ತಾಂತರಿಸಿದರು.
ಈ ಸಂದರ್ಭದಲ್ಲಿ ಫಾ| ಟೋಮಿ, ಫಾ| ಮಾಣಿ, ಫಾ| ಫ್ರಾಂಕ್ಲಿನ್, ಹಾಗೂ ಧರ್ಮಭಗಿನಿಯರು, ಭಕ್ತಾಧಿಗಳು, ಉಪಸ್ಥಿತರಿದ್ದು ಮೆರವಣಿಯಲ್ಲಿ ಪಾಲ್ಗೊಂಡರು.

D

D1

D3

D4

ಧರ್ಮಸ್ಥಳ : ಶ್ರೀ ಕ್ಷೇತ್ರ ಧರ್ಮಸ್ಥಳದಲ್ಲಿ ಧಾರ್ಮಿಕ ಶ್ರದ್ಧಾ ಕೇಂದ್ರ ಸ್ವಚ್ಛತಾ ಅಭಿಯಾನ ಜ.12ರಂದು ನಡೆಯಿತು. ಧರ್ಮಾಧಿಕಾರಿ ಡಿ. ವೀರೇಂದ್ರ ಹೆಗ್ಗಡೆಯವರು ಊರಿನ ಸ್ವಯಂ ಸೇವಕರ ಸ್ವಚ್ಛತಾ ಕಾರ್ಯವನ್ನು ವೀಕ್ಷಿಸಿ ಮೆಚ್ಚುಗೆ ಸೂಚಿಸಿದರು.
ಈ ಪ್ರಕ್ರಿಯೆ ನಿರಂತರವಾಗಿ ನಡೆಯುತ್ತಿರಲಿ. ಇಲ್ಲಿಗೇ ನಿಲ್ಲಬಾರದು. ಕ್ಷೇತ್ರದವರೆಗೆ ಪೂಜ್ಯ ಭಾವನೆಯಿಂದ ಆಗಮಿಸಿದರೂ ಕ್ಷೇತ್ರದ ಆವರಣದಲ್ಲಿ ಗಲೀಜು ಮಾಡಿ ಹೋಗುವ ಯಾತ್ರಿಗಳಿದ್ದಾರೆ. ಆದ್ದರಿಂದ ಯಾತ್ರಿಕರಲ್ಲೂ ಜಾಗೃತಿ ಮೂಡಬೇಕು ಎಂದರು.
ಶ್ರೀ ಮಂಜುನಾಥ ಸ್ವಾಮಿ ದೇವಾಲಯದ ಆವರಣ, ಸ್ವರ್ಣಗೋಪುರ ಮೊದಲಾದವನ್ನು ಶುಚಿಗೊಳಿಸಲಾಯಿತು. ಡಿ.ಹರ್ಷೇಂದ್ರ ಕುಮಾರ್ ಮೊದಲಾದವರು ಉಪಸ್ಥಿತರಿದ್ದರು.

Periyadka Hithesh abhinandane copyಪೆರಿಯಡ್ಕ: ಸ.ಕಿ.ಪ್ರಾ. ಶಾಲೆ ಪೆರಿಯಡ್ಕ (ಬಿ) ಬೆಳಾಲಿನಲ್ಲಿ ನಡೆದ ಸೈಂಟ್ ಥೋಮಸ್ ಪದವಿ ಕಾಲೇಜು ಹಳೆಕೋಟೆ ಬೆಳ್ತಂಗಡಿ ಇಲ್ಲಿನ ಎನ್.ಎಸ್.ಎಸ್. ವಾರ್ಷಿಕ ವಿಶೇಷ ಶಿಬಿರ ಉದ್ಘಾಟನಾ ಸಮಾರಂಭದಲ್ಲಿ ಕಾಲೇಜಿನ ಹಿರಿಯ ವಿದ್ಯಾರ್ಥಿ, ಝೀ ಕನ್ನಡ ಕಾಮಿಡಿ ಕಿಲಾಡಿ ಖ್ಯಾತಿಯ ಹಿತೇಶ್ ಕುಮಾರ್ ಕಾಪಿನಡ್ಕ ಇವರನ್ನು ಶಾಲಾ ಹಾಗೂ ಎನ್.ಎಸ್.ಎಸ್. ಶಿಬಿರ ವ್ಯವಸ್ಥಾಪನಾ ಸಮಿತಿಯ ವತಿಯಿಂದ ಅಭಿನಂದಿಸಲಾಯಿತು.
ಅಧ್ಯಕ್ಷತೆಯನ್ನು ಬೆಳಾಲು ಗ್ರಾ.ಪಂ. ಅಧ್ಯಕ್ಷ ದಿನೇಶ್ ಕೋಟ್ಯಾನ್ ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ರೆ|ಫಾ| ಜೋಸ್ ವಲಿಯ ಪರಂಬಿಲ್, ಜಿ.ಪಂ. ಸದಸ್ಯ ಕೊರಗಪ್ಪ ನಾಯ್ಕ, ಪ್ರಾಂಶುಪಾಲರಾದ ಪ್ರೊ| ಫಾತುಮಾಬಿ ಸಾಹಿರ, ಬೆಳಾಲು ಸಿ.ಎ. ಬ್ಯಾಂಕ್ ಅಧ್ಯಕ್ಷ ಹೆಚ್. ಪದ್ಮಗೌಡ, ಶಿಬಿರ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ದಾಮೋದರ ಗೌಡ ಸುರುಳಿ, ಬೆಳಾಲು ಪ್ರೌಢ ಶಾಲಾ ಮುಖ್ಯೋಪಾಧ್ಯಾಯ ರಾಮಕೃಷ್ಣ ಭಟ್ ಚೊಕ್ಕಾಡಿ, ಗ್ರಾ.ಪಂ. ಸದಸ್ಯರುಗಳಾದ ಸತೀಶ್ ಗೌಡ ಎಳ್ಳುಗದ್ದೆ, ಜಯಂತ ಗೌಡ, ವಿಮಲಾ, ಕುಸುಮಾವತಿ, ಹಿರಿಯರಾದ ಬಾಬು ಗೌಡ ಅಲಕೆದಡ್ಡ, ಸಮಿತಿಯ ಸಂಚಾಲಕ ಶ್ರೀನಿವಾಸ ಗೌಡ ಗಣಪನಗುತ್ತು, ಎಸ್.ಡಿ.ಎಂ.ಸಿ. ಅಧ್ಯಕ್ಷ ಕುಶಾಲಪ್ಪ ಗೌಡ, ಶೇಖರ ಗೌಡ ಕೊಲ್ಲಿಮಾರ್ ಭಾಗವಹಿಸಿದ್ದರು.

maya swacha shradda kendra copyಬೆಳಾಲು : ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಹಾಗೂ ವಿವಿಧ ಸಂಘ ಸಂಸ್ಥೆಗಳ ಸಹಯೋಗದಲ್ಲಿ ಸಮಸ್ತ ಗ್ರಾಮಸ್ಥರ ಸಹಭಾಗಿತ್ವದಲ್ಲಿ ಹಮ್ಮಿಕೊಳ್ಳಲಾಗಿದ್ದ ಸ್ವಚ್ಛ ಭಾರತ-ಸ್ವಚ್ಛ ಶ್ರದ್ಧಾ ಕೇಂದ್ರ ಯೋಜನೆಯಡಿಯಲ್ಲಿ ಜ.8ರಂದು ಸ್ವಚ್ಛತಾ ಅಭಿಯಾನ ಹಮ್ಮಿಕೊಳ್ಳಲಾಯಿತು.
ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬೆಳಾಲು ವಿಭಾಗದ ಪ್ರಗತಿಬಂಧು ಒಕ್ಕೂಟ, ಸ್ವಸಹಾಯ ಸಂಘ, ಜ್ಞಾನವಿಕಾಸ ಕೇಂದ್ರ ಜನಜಾಗೃತಿ ವೇದಿಕೆ, ದೇವಸ್ಥಾನದ ಜೀರ್ಣೋದ್ಧಾರ ಸಮಿತಿ ಹಾಗೂ ಎಲ್ಲಾ ಸಂಘ ಸಂಸ್ಥೆಗಳ ನೆರವಿನೊಂದಿಗೆ ದೇವಸ್ಥಾನದ ವಠಾರದಲ್ಲಿ ಶುಚಿತ್ವ ಮಾಡುವ ಕೆಲಸವನ್ನು ಶ್ರಮದಾನದ ಮೂಲಕ ಮಾಡಲಾಯಿತು.
ಈ ಸಂದರ್ಭದಲ್ಲಿ ದೇವಸ್ಥಾನದ ಆಡಳಿತಾಧಿಕಾರಿ ನಾರಾಯಣ ಸುವರ್ಣ, ಬೆಳಾಲು ಗ್ರಾ.ಪಂ ಅಧ್ಯಕ್ಷ ದಿನೇಶ್ ಕೋಟ್ಯಾನ್, ಮಾಯಾಗುತ್ತು ಪುಷ್ಪದಂತ ಜೈನ್, ಗ್ರಾ.ಪಂ ಸದಸ್ಯ ದಯಾನಂದ ಪಿ, ಮಾಯಾ ಪ್ರಗತಿಬಂಧು ಒಕ್ಕೂಟದ ಅಧ್ಯಕ್ಷ ಹಾಗೂ ಶ್ರೀ ಮಾಯಾ ಮಹೇಶ್ವರ ಭಜನಾ ಮಂಡಳಿ ಅಧ್ಯಕ್ಷ ಗಂಗಾಧರ ಸಾಲಿಯಾನ್, ಸೇವಾ ಪ್ರತಿನಿಧಿ ಕು| ಆಶಾ, ಬೆಳಾಲು ಒಕ್ಕೂಟದ ಅಧ್ಯಕ್ಷ ಜನಾರ್ದನ ಪೂಜಾರಿ, ಬೆಳಾಲು ಸೇವಾ ಸಹಕಾರಿ ಸಂಘದ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಪಿ.ರುಕ್ಮಯ್ಯ ಗೌಡ, ಸುದ್ದಿ ಬಿಡುಗಡೆಯ ಸಹಾಯಕ ವ್ಯವಸ್ಥಾಪಕ ಪಿ.ಜಾರಪ್ಪ ಪೂಜಾರಿ, ಜೀರ್ಣೋದ್ಧಾರ ಸಮಿತಿಯ ಕಾರ್ಯದರ್ಶಿ ಶೇಖರ ಗೌಡ ಕೊಲ್ಲಿಮಾರು, ನವಜೀವನ ಸಮಿತಿ ಅಧ್ಯಕ್ಷ ರತ್ನಾಕರ ಆಚಾರ್ಯ, ಕೃಷ್ಣಪ್ಪ ಗೌಡ ಬೆರ್ಕೆಜಾಲು, ರಮೇಶ್ ಪೂಜಾರಿ ಗುಂಡ್ಯ, ಜ್ಞಾನ ವಿಕಾಸ ಹಾಗೂ ಸ್ವಸಹಾಯ ಸಂಘದ ಸದಸ್ಯರುಗಳು, ಗ್ರಾಮಸ್ಥರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಒಂದು ದಿನದ ಶ್ರಮದಾನದ ಮೂಲಕ ದೇವಸ್ಥಾನ ವಠಾರ ಶುಚಿತ್ವಗೊಳಿಸಲಾಯಿತು. ಆಡಳಿತಾಧಿಕಾರಿ ನಾರಾಯಣ ಸುವರ್ಣ ಕೃತಜ್ಞತೆ ಸಲ್ಲಿಸಿದರು.

billava sanga bajana tarabeti copy

billava sanga bajana tarabeti udhgatane copy

ಬೆಳ್ತಂಗಡಿ : ಶ್ರೀ ಗುರುನಾರಾಯಣ ಸ್ವಾಮಿ ಸೇವಾ ಸಂಘ ಬೆಳ್ತಂಗಡಿ, ಯುವ ಬಿಲ್ಲವ ವೇದಿಕೆ ಬೆಳ್ತಂಗಡಿ, ಬಿಲ್ಲವ ಮಹಿಳಾ ವೇದಿಕೆ ಬೆಳ್ತಂಗಡಿ ಇವುಗಳ ಸಂಯುಕ್ತ ಆಶ್ರಯದಲ್ಲಿ ಶ್ರೀ ಗುರುನಾರಾಯಣ ಸಂಕೀರ್ಣದ ಸಭಾ ಭವನದಲ್ಲಿ ಭಜನಾ ತರಬೇತಿ ಶಿಬಿರ ಜ.10 ರಂದು ನಡೆಯಿತು. ಸಂಪನ್ಮೂಲ ವ್ಯಕ್ತಿಯಾಗಿ ದೇವದಾಸ ಪ್ರಭು ಭಾಗವಹಿಸಿ ಒಂದು ದಿನದ ಭಜನಾ ತರಬೇತಿಯನ್ನು ನಡೆಸಿಕೊಟ್ಟರು. ಶ್ರೀ ಗುರುನಾರಾಯಣ ಸ್ವಾಮಿ ಸೇವಾ ಸಂಘದ ಅಧ್ಯಕ್ಷ ಭಗೀರಥ ಜಿ. ಭಜನಾ ತರಬೇತಿ ಶಿಬಿರವನ್ನು ದೀಪ ಬೆಳಗಿಸಿ ಉದ್ಘಾಟಿಸಿ ಶುಭ ಹಾರೈಸಿದರು. ಬಿಲ್ಲವ ಮಹಿಳಾ ವೇದಿಕೆ ಮಾಜಿ ಅಧ್ಯಕ್ಷೆ ಶ್ರೀಮತಿ ವಿನೋದಿನಿ ರಾಮಪ್ಪ, ಯುವ ಬಿಲ್ಲವ ವೇದಿಕೆ ಅಧ್ಯಕ್ಷ ಚಿದಾನಂದ ಇಡ್ಯ, ಸಂಘದ ನಿರ್ದೇಶಕರಾದ ಶ್ರೀಮತಿ ಸುಜಾತ ಅಣ್ಣಿ ಪೂಜಾರಿ, ಚಂದ್ರಶೇಖರ ಇಂದಬೆಟ್ಟು, ಗೋಪಾಲಕೃಷ್ಣ ಸಾಲಿಯಾನ್, ಭಜನಾ ಸಮಿತಿಯ ಮಾಜಿ ಅಧ್ಯಕ್ಷ ಎಚ್.ರಾಮಪ್ಪ, ನವೀನ್ ಕುಮಾರ್, ಶ್ರೀಮತಿ ಸುಮತಿ ಪ್ರಮೋದ್, ಮಹಿಳಾ ವೇದಿಕೆಯ ಉಪಾಧ್ಯಕ್ಷೆ ಶಾಂತಾ ಬಂಗೇರ, ಸದಸ್ಯರುಗಳು ಉಪಸ್ಥಿತರಿದ್ದರು. ಶ್ರೀಮತಿ ಸುಧಾಮಣಿ ಆರ್ ಕಾರ್ಯಕ್ರಮ ನಿರೂಪಿಸಿದರು.

sdm puc Sanskrit samaropa copyಉಜಿರೆ : ಪ್ರಾಚೀನ ಹಸ್ತ ಪ್ರತಿಗಳ ಗ್ರಂಥದಲ್ಲಿ ಅತ್ಯಮೂಲ್ಯ ಜ್ಞಾನರಾಶಿಯೇ ಅಡಗಿದೆ. ಭಾರತದಲ್ಲಿ ಮಾತ್ರವಲ್ಲದೆ ವಿದೇಶಗಳಲ್ಲಿಯೂ ಇಂತಹ ಸಾವಿರಾರು ಪ್ರಾಚೀನ ಹಸ್ತಪ್ರತಿ ಗ್ರಂಥಗಳಿವೆ. ಇನ್ನೂ ಈ ಬಗ್ಗೆ ವಿಫುಲ ಸಂಶೋಧನೆ ಆಗಬೇಕಾಗಿದೆ. ಒಟ್ಟಾರೆ ಪ್ರಾಚೀನ ಹಸ್ತಪ್ರತಿ ಗ್ರಂಥಗಳ ರಕ್ಷಣೆ ಅತ್ಯವಶ್ಯವಾಗಿದ್ದು, ಪ್ರಾಚೀನ ಕಾಲದ ಸಾಹಿತ್ಯ, ವೈಜ್ಞಾನಿಕ ವಿಷಯಗಳನ್ನು ನಾವು ಈ ಮೂಲಕ ತಿಳಿದುಕೊಳ್ಳಲು ಸಾಧ್ಯವಾಗುತ್ತದೆ ಎಂದು ಶ್ರೀ ಕ್ಷೇತ್ರ ಧರ್ಮಸ್ಥಳದ ಸಂಸ್ಕೃತಿ ಸಂಶೋಧನಾ ಪ್ರತಿಷ್ಠಾನದ ಸಂಶೋಧಕ ಡಾ. ಎಸ್.ಆರ್ ವಿಘ್ನರಾಜ್ ಹೇಳಿದರು.
ಅವರು ಉಜಿರೆಯ ಶ್ರೀ ಧ.ಮಂ.ಪ.ಪೂ ಕಾಲೇಜಿನ ಸಂಸ್ಕೃತ ಸಂಘದ ಸಮಾರೋಪ ಸಮಾರಂಭದಲ್ಲಿ ಹಸ್ತಪ್ರತಿಗಳ ಬಗ್ಗೆ ವಿಶೇಷ ಉಪನ್ಯಾಸ ನೀಡಿ ಮಾತನಾಡಿದರು. ಎಸ್.ಡಿ.ಎಂ. ಸನಿವಾಸ ಪ.ಪೂ ಕಾಲೇಜಿನ ಸಂಸ್ಕೃತ ಉಪನ್ಯಾಸಕ ಮಹೇಶ್‌ಭಟ್‌ರವರು ಸಂಸ್ಕೃತ ಸಂಘದ ಸಮಾರೋಪ ಭಾಷಣ ಮಾಡಿದರು. ಸಂಸ್ಕೃತ ವಿಭಾಗದ ಮುಖ್ಯಸ್ಥ ಡಾ. ಪ್ರಸನ್ನಕುಮಾರ್ ಐತಾಳ್ ಅಧ್ಯಕ್ಷತೆ ವಹಿಸಿದ್ದರು.ಸಂಸ್ಕೃತ ಸಂಘದ ಅಧ್ಯಕ್ಷ ಸಂದೇಶ್‌ಭಟ್‌ರವರನ್ನು ಸನ್ಮಾನಿಸಿ ಗೌರವಿಸಲಾಯಿತು. ಕೀರ್ತನ್ ಶಬರಾಯ ಸ್ವಾಗತಿಸಿ, ಪ್ರಜ್ಞಾಶ್ರೀ ನಿರೂಪಿಸಿ, ಸಂದೇಶ್‌ಭಟ್ ವಂದಿಸಿದರು.

  ಕ್ಯಾಶ್‌ಲೆಸ್ ಅಭಿಯಾನದಲ್ಲಿ ಭಾಗವಹಿಸಿ 10 ಕುಟುಂಬವನ್ನು ಕ್ಯಾಶ್‌ಲೆಸ್ ಸೊಸೈಟಿಗೆ ಬದಲಾಯಿಸಿದರೆ ಅವರಿಗೆ ಪ್ರಮಾಣ ಪತ್ರವನ್ನು ನೀಡಲಾಗುವುದು ಎಂದು ಮಾನವ ಸಂಪನ್ಮೂಲ ಸಚಿವ ಪ್ರಕಾಶ್ ಜಾವಡೇಕರ್ ಹೇಳಿದ್ದಾರೆ. ಮಣಿಪಾಲದಲ್ಲಿ ನಡೆದ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು 10 ಕುಟುಂಬವನ್ನು ಕ್ಯಾಶ್‌ಲೆಸ್ ಸೊಸೈಟಿಗೆ ಬದಲಾಯಿಸಿದ ವೀಡಿಯೋ ತುಣುಕು ಅಥವಾ ಇನ್ನತರೆ ಯಾವುದೇ ದಾಖಲೆಯನ್ನು ಅಪ್‌ಲೋಡ್ ಮಾಡಿದವರಿಗೆ ಮಾನವ ಸಂಪನ್ಮೂಲ ಸಚಿವಾಲಯದಿಂದ ಪ್ರಮಾಣ ಪತ್ರವನ್ನು ನೀಡಲಾಗುತ್ತದೆ ಎಂದು ತಿಳಿಸಿದರು.

  ಶೂನ್ಯ ಮೊತ್ತದ ಖಾತೆ ಹಾಗೂ ಜನಧನ್ ಖಾತೆಗಳನ್ನು ಹೊರತುಪಡಿಸಿ ಇನ್ನುಳಿದ ಬ್ಯಾಂಕ್ ಖಾತೆದಾರರಿಂದ ಪಾನ್‌ಕಾರ್ಡು ಪಡೆಯುವಂತೆ ಕೇಂದ್ರ ಸರಕಾರ ಆದೇಶ ನೀಡಿದೆ. ಫೆ.28ರೊಳಗೆ ಪಾನ್ ಸಂಖ್ಯೆ ಅಥವಾ ಫಾರ್ಮ್ ೬೦ ಪಡೆಯಬೇಕು ಎಂದು ಕೇಂದ್ರೀಯ ನೇರ ತೆರಿಗೆ ಮಂಡಳಿ ಅಧಿಸೂಚನೆ ಹೊರಡಿಸಿದೆ. ಈ ಹಿನ್ನೆಲೆ ಆದಾಯ ತೆರಿಗೆ ನಿಯಮಗಳಲ್ಲೂ ಬದಲಾವಣೆ ಮಾಡಲಾಗಿದ್ದು, ಈವರೆಗೆ ಪಾನ್ ಅಥವಾ ಫಾರ್ಮ್ 60 ಸಲ್ಲಿಸದ ಗ್ರಾಹಕರು ಈಗ ಸಲ್ಲಿಸಬೇಕು ಎಂದು ಹೇಳಿದೆ. ಆದರೆ, ಈ ನಿಯಮ ಕನಿಷ್ಠ ಉಳಿತಾಯ ಬ್ಯಾಂಕ್ ಠೇವಣೀ ಖಾತೆ (ಬಿ.ಎಸ್.ಬಿ.ಡಿ.ಎ) ಗಳಿಗೆ ಅನ್ವಯಿಸುವುದಿಲ್ಲ.

  ಕೇಂದ್ರ ಸಂವಹನ ಮತ್ತು ಮಾಹಿತಿ ತಂತ್ರಜ್ಞಾನ ಸಚಿವಾಲಯ ಸದ್ಯದಲ್ಲಿಯೇ ಕನ್ನಡ ಭಾಷೆಯಲ್ಲಿ ವೆಬ್‌ಸೈಟ್‌ವೊಂದನ್ನು ಆರಂಭಿಸಲಿದೆ. ನ್ಯಾಶನಲ್ ಇಂಟರ್ನೆಟ್ ಎಕ್ಸ್ ಚೇಂಜ್ ಆಫ್ ಇಂಡಿಯಾ, ಭಾರತೀಯ ಭಾಷೆಗಳಲ್ಲಿ ವೆಬ್‌ಸೈಟ್ ನಿರ್ಮಿಸುವ ಅಧಿಕೃತ ಕೇಂದ್ರವಾಗಿದ್ದು ಇದೀಗ ಕನ್ನಡದಲ್ಲಿ ತಯಾರು ಮಾಡುತ್ತಿದೆ. ಆಧುನಿಕ ತಂತ್ರಜ್ಞಾನ ಮತ್ತು ಗ್ರಾಮೀಣ ಪ್ರದೇಶಗಳಲ್ಲಿನ ಬಹುಪಾಲು ಜನರಲ್ಲಿರುವ ಕಂಪ್ಯೂಟರ್ ಅನಕ್ಷರತೆ, ಇಂಗ್ಲಿಷ್ ಭಾಷೆಯ ಸಮಸ್ಯೆಯಿದ್ದು, ಇವೆರಡರ ನಡುವಣ ಅಂತರವನ್ನು ಕಡಿಮೆ ಮಾಡಲು ಸ್ಥಳೀಯ ಭಾಷೆಯಲ್ಲಿ ಇದನ್ನು ಅಭಿವೃದ್ಧಿ ಪಡಿಸಲಾಗುತ್ತದೆ ಎಂದು ನಿಕ್ಸಿಯ ಅಧಿಕಾರಿಗಳು ತಿಳಿಸಿದ್ದಾರೆ.

 ಬಡತನ ರೇಖೆಗಿಂತ ಕೆಳಗಿರುವ ಅಂದರೆ ಬಿ.ಪಿ.ಎಲ್ ಕಾರ್ಡ್ ಹೊಂದಿರುವ ಕುಟುಂಬಗಳಿಗೆ ಪ್ರಧಾನಮಂತ್ರಿ ಉಜ್ವಲ ಯೋಜನೆಯಡಿ ರಾಜ್ಯ ಸರ್ಕಾರ ಉಚಿತವಾಗಿ ಗ್ಯಾಸ್ ಸ್ಟೌವ್ ಮತ್ತು ರೆಗ್ಯುಲೇಟರ್ ನೀಡಲು ಮುಂದಾಗಿದೆ. ಆಹಾರ ಮತ್ತು ನಾಗರಿಕ ಸರಬರಾಜು ಸಚಿವ ಯು.ಟಿ ಖಾದರ್ ಈ ಕುರಿತು ಮಾತನಾಡಿ, ಕೇಂದ್ರ ಸರ್ಕಾರ ಜಾರಿಗೊಳಿಸಲಿರುವ ಒಂದು ಸಿಲಿಂಡರ್ ಸೌಲಭ್ಯವುಳ್ಳ ಅಡುಗೆ ಅನಿಲ ಸಂಪರ್ಕ ಉಜ್ವಲ ಯೋಜನೆಯ ಫಲಾನುಭವಿಗಳಿಗೆ ರಾಜ್ಯ ಸರ್ಕಾರ ಉತ್ತಮ ಗುಣಮಟ್ಟದ ಸ್ಟೌವ್ ಮತ್ತು ರೆಗ್ಯುಲೇಟರ್ ನೀಡಲಿದೆ ಎಂದಿದ್ದು, ಕರ್ನಾಟಕದಲ್ಲಿ ಉಜ್ವಲ ಯೋಜನೆಯಡಿ ಸಿಲಿಂಡರ್ ಪಡೆಯಲು ಸುಮಾರು 3 ಲಕ್ಷ ಅರ್ಜಿಗಳು ಸಲ್ಲಿಕೆಯಾಗಿವೆ ಎಂದಿದ್ದಾರೆ.

  ಬೆಳ್ತಂಗಡಿ : ಬಿಎಸ್‌ಎನ್‌ಎಲ್ ಸಂಸ್ಥೆಯಲ್ಲಿ 2 ದಶಕಕ್ಕೂ ಹೆಚ್ಚು ಕಾಲ ಗುತ್ತಿಗೆ ಆಧಾರದಲ್ಲಿ ಕೆಲಸ ಮಾಡುವ ಕಾರ್ಮಿಕರಿಗೆ ಕನಿಷ್ಠ ವೇತನ ಸೇರಿದಂತೆ ವಿವಿಧ ಸವಲತ್ತುಗಳನ್ನು ನೀಡುವಂತೆ ಒತ್ತಾಯಿಸಿ ಜ. 12ರಿಂದ ಮಂಗಳೂರಿನ ಕಾರ್ಮಿಕ ಆಯುಕ್ತರ ಕಚೇರಿ ಎದುರು ಅನಿರ್ಧಿಷ್ಠಾವದಿ ಧರಣಿ ಸತ್ಯಾಗ್ರಹ ನಡೆಯಲಿದೆ ಎಂದು ದಿನೇಶ್ ಗೌಡ ತಿಳಿಸಿದ್ದಾರೆ.

sajikumar copyಬೆಳ್ತಂಗಡಿ : ನೆಲ್ಯಾಡಿ, ಆಲಂಕಾರು ಶಾಖಾ ಕಛೇರಿ ಮತ್ತು ನೆಲ್ಯಾಡಿ ಸಬ್ ಸ್ಟೇಷನ್ ನಲ್ಲಿ ಜೆ.ಇ. ಆಗಿ ಕಳೆದ ಎರಡುವರೆ ವರ್ಷಗಳಿಂದ ಕಾರ್ಯ ನಿರ್ವಹಿಸುತ್ತಿದ್ದ ಇಚಿಲಂಪಾಡಿ ಮೂಲದ ಸಜಿಕುಮಾರ್ ಇವರಿಗೆ ಭಡ್ತಿಯಾಗಿ ಬೆಳ್ತಂಗಡಿ ನಗರ ಸಹಾಯಕ ಇಂಜಿನಿಯರ್ ಆಗಿ ಭಡ್ತಿ ಹೊಂದಿದ್ದಾರೆ. ನೆಲ್ಯಾಡಿಯ ಜವಾಬ್ದಾರಿ ಯಲ್ಲದೆ ಹೆಚ್ಚುವರಿಯಾಗಿ ಕಡಬ ವಿಭಾಗದ ಸಬ್ ಸ್ಟೇಷನ್ ವ್ಯಾಪ್ತಿಯಲ್ಲಿ ತಾಂತ್ರಿಕ ಸಹಾಯಕ ಇಂಜಿನಿಯರ್ ಆಗಿಯೂ ಕಾರ್ಯ ನಿರ್ವಹಿಸುತ್ತಿದ್ದ ಇವರು ಭಡ್ತಿಗೊಂಡು ಬೆಳ್ತಂಗಡಿಗೆ ವರ್ಗಾವಣೆಯಾಗಿದ್ದಾರೆ.

viveka 1

viveka 2

viveka 4

viveka

ಬೆಳ್ತಂಗಡಿ : ಇಂದು ತಾಲೂಕು ಪಂಚಾಯತಿ ಸಭಾಭವನದಲ್ಲಿ ಸ್ವಾಮಿ ವಿವೇಕಾನಂದರ ಜನ್ಮ ದಿನಾಚರಣೆ-2017ನ್ನು ಆಚರಿಸಲಾಯಿತು.
ಕಾರ್ಯಕ್ರಮದ ಉದ್ಘಾಟನೆಯನ್ನು ಬೆಳ್ತಂಗಡಿ ತಾಲೂಕು ಪ್ರೌಢಶಾಲಾ ಮುಖ್ಯ ಶಿಕ್ಷಕರ ಸಂಘದ ಅಧ್ಯಕ್ಷ ಎಂ.ರಾಜಗುರು ಹೆಬ್ಬಾರ್ ನೆರವೇರಸಿದರು.
ಸಭಾಧ್ಯಕ್ಷತೆಯನ್ನು ಬೆಳ್ತಂಗಡಿ ವಕೀಲರ ಸಂಘದ ಅಧ್ಯಕ್ಷ ಸುಬ್ರಹ್ಮಣ್ಯ ಕುಮಾರ್ ಅಗರ್ತ ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ಬೆಳ್ತಂಗಡಿ ತಾ.ಪಂ ಕಾರ್ಯನಿರ್ವಹಣಾಧಿಕಾರಿ ಸಿ.ಆರ್ ನರೇಂದ್ರ ಆಗಮಿಸಿದ್ದರು. ಬೆಳ್ತಂಗಡಿ ಅಕ್ಷರ ದಾಸೋಹ ಸಹಾಯಕ ನಿರ್ದೇಶಕರಾದ ಲಕ್ಷ್ಮಣ ಶೆಟ್ಟಿ ಪ್ರಧಾನ ಭಾಷಣಕಾರರಾಗಿದ್ದರು. ಈ ಸಂದರ್ಭದಲ್ಲಿ ಅನೇಕ ಗಣ್ಯರು ಆಗಮಿಸಿ ಕಾರ್ಯಕ್ರಮದ ಯಶಸ್ವಿಗೆ ಸಹಕರಿಸಿದರು.

thungappa bangera pressmeet copyಪುಂಜಾಲಕಟ್ಟೆ : ಸ್ವಸ್ತಿಕ್ ಫ್ರೆಂಡ್ಸ್ ಕ್ಲಬ್ ಪುಂಜಾಲಕಟ್ಟೆ, ಜೆ.ಸಿ.ಐ. ಮಡಂತ್ಯಾರು ಇದರ ಸಂಯುಕ್ತ ಆಶ್ರಯದಲ್ಲಿ ಮಾ.5ರಂದು 9ನೇ ವರ್ಷದ ಉಚಿತ ಸಾಮೂಹಿಕ ವಿವಾಹ ಮತ್ತು ಫೆ.26ರಿಂದ ಮಾ.4ರ ತನಕ ದಿ| ಶಿಶಿರ್ ಕುಮಾರ್ ಪಿ.ಎಸ್. ಇವರ ಸ್ಮರಣಾರ್ಥ ದ.ಕ, ಉಡುಪಿ, ಕಾಸರಗೋಡು ಜಿಲ್ಲಾ ಮಟ್ಟದ ತುಳು ನಾಟಕ ಸ್ಪರ್ಧೆ ಪುಂಜಾಲಕಟ್ಟೆ ಬಂಗ್ಲೆ ಮೈದಾನದಲ್ಲಿ ನಡೆಯಲಿದೆ ಎಂದು ಫ್ರೆಂಡ್ಸ್ ಕ್ಲಬ್‌ನ ಸ್ಥಾಪಕಾಧ್ಯಕ್ಷ ಎಂ. ತುಂಗಪ್ಪ ಬಂಗೇರ ತಿಳಿಸಿದ್ದಾರೆ.
ಅವರು ಬಂಟ್ವಾಳದಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಈ ವಿಷಯವನ್ನು ಪ್ರಕಟಿಸಿದರು. 33ನೇ ವರ್ಷದಲ್ಲಿ ಮುನ್ನಡೆಯುತ್ತಿರುವ ಸ್ವಸ್ತಿಕ್ ಫ್ರೆಂಡ್ಸ್ ಕ್ಲಬ್ ಸಮಾಜ ಮುಖಿ ಕಾರ್ಯಕ್ರಮಗಳನ್ನು ಮಾಡುತ್ತಾ 33 ವರ್ಷಗಳಿಂದ ಕಬಡ್ಡಿ ಪಂದ್ಯಾಟವನ್ನು ಆಯೋಜಿಸಿ, ವಿವಿಧ ಸಾಧಕರಿಗೆ ಸ್ವಸ್ತಿಕ್ ಪುರಸ್ಕಾರ ರಾಜ್ಯ ಪ್ರಶಸ್ತಿ ನೀಡುವ ಉತ್ತಮ ಕಾರ್ಯ ಮಾಡುತ್ತಿದೆ. ಎಂ. ತುಂಗಪ್ಪ ಬಂಗೇರರು ೧೯೮೩ರಲ್ಲಿ ಸಮಾನ ಮನಸ್ಕ ಯುವಕರೊಂದಿಗೆ ಸ್ವಸ್ತಿಕ್ ಕ್ರಿಕೆಟ್ ತಂಡವನ್ನು ಕಟ್ಟಿಕೊಂಡು ಕ್ಲಬ್‌ನ್ನು ಸ್ಥಾಪನೆಗೊಳಿಸಿ ನಿರಂತರ ಕಬಡ್ಡಿ ಪಂದ್ಯಾಟ ಆಯೋಜಿಸುತ್ತಿರುವುದು ಕ್ಲಬ್‌ನ ಹೆಗ್ಗಳಿಕೆ ಎಂದರು.
ಇದರ ಜೊತೆಗೆ ಹಲವಾರು ಸಮಾಜ ಮುಖಿ ಕಾರ್ಯಕ್ರಮಗಳ ಜೊತೆಗೆ ಸ್ವಸ್ತಿ ಸಿರಿ ರಾಜ್ಯ ಮಟ್ಟದ ಪ್ರಶಸ್ತಿ ಪ್ರದಾನ ಹಾಗೂ ಸಾಮೂಹಿಕ ವಿವಾಹದೊಂದಿಗೆ ಅದ್ದೂರಿಯಾಗಿ ಆಚರಿಸಿ ನಾಡಿನ ಗಮನ ಸೆಳೆದಿದೆ ಉಚಿತ ಸಾಮೂಹಿಕ ವಿವಾಹಕ್ಕೆ ಸಂಬಂಧಿಸಿದಂತೆ 10 ಜೋಡಿಗಿಂತ ಮೇಲ್ಪಟ್ಟು ಪ.ಜಾತಿಯ ವಧುವರರು ಭಾಗವಹಿಸಿದ್ದಲ್ಲಿ ಸರಕಾರದಿಂದ ತಲಾ ರೂ. 5೦ಸಾವಿರ ಸಹಾಯಧನ ನೀಡಲಾಗುತ್ತದೆ ಎಂದು ತಿಳಿಸಿದರು. ನಾಟಕದಲ್ಲಿ ಆಯ್ದ 7 ತಂಡಗಳಿಗೆ ಮಾತ್ರ ಅವಕಾಶವಿದ್ದು, ಪ್ರಥಮ ರೂ.30ಸಾವಿರ, ದ್ವೀತಿಯ ರೂ.20ಸಾವಿರ, ತೃತೀಯ ಮತ್ತು ಚತುರ್ಥ ತಲಾ ರೂ.10ಸಾವಿರ ಬಹುಮಾನ ಜೊತೆಗೆ ವೈಯಕ್ತಿಕ ಬಹುಮಾನಗಳಿವೆ. ಸ್ಪರ್ಧಾ ತಂಡಕ್ಕೆ ರೂ.10 ಸಾವಿರ ಭತ್ಯೆ ನೀಡಲಾಗುವುದು ಹೆಚ್ಚಿನ ಮಾಹಿತಿಗೆ 9901098038ನ್ನು ಸಂಪರ್ಕಿಸಬಹುದು ಎಂದು ತಿಳಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಕ್ಲಬ್‌ನ ಅಧ್ಯಕ್ಷ ಪ್ರಶಾಂತ್ ಎಂ., ಕಾರ್ಯದರ್ಶಿ ಜಯರಾಜ್, ಹೆಚ್.ಕೆ. ನಯನಾಡು, ಪ್ರಭಾಕರ ಪಿ.ಎಂ, ರಾಜೇಶ್ ಪುಳಿಮಜಲು ಉಪಸ್ಥಿತರಿದ್ದರು.

bdy varshikothsava copyಬೆಳ್ತಂಗಡಿ : ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಕರ್ನಾಟಕ ಸರಕಾರದ ಸಹಯೋಗದೊಂದಿಗೆ ದಕ್ಷಿಣ ಕನ್ನಡಿಗರ ಸಾಂಸ್ಕೃತಿಕ ಸಂಘ ಯಲಹಂಕದ 20ನೇ ವಾರ್ಷಿಕೋತ್ಸವ ಜ.08ರಂದು ಬೆಂಗಳೂರು ಶೇಷಾದ್ರಿಪುರಂ ಪ್ರಥಮ ದರ್ಜೆ ಕಾಲೇಜು ಸಭಾಂಗಣದ ಯಲಹಂಕದಲ್ಲಿ ನಡೆಯಿತು.
ಈ ಕಾರ‍್ಯಕ್ರಮದ ಉದ್ಘಾಟನೆಯನ್ನು ಬೆಂಗಳೂರು ಉದ್ಯಮಿ ಗೋವಿಂದೂರು ವೆಂಕಪ್ಪ ಹೆಗ್ಡೆ ಉದ್ಘಾಟಿಸಿ, ದಕ್ಷಿಣ ಕನ್ನಡದವರು ಹೃದಯ ಶ್ರೀಮಂತಿಕೆ ಉಳ್ಳವರು. ಬುದ್ದಿ ಜೀವಿಗಳು. 20 ವರ್ಷದಿಂದ ಈ ಸಂಘವನ್ನು ಕಟ್ಟಿ ಜನರನ್ನು ಒಗ್ಗೂಟಿಸಿದ್ದೀರಿ. ಈ ಕಾರ್ಯಕ್ರಮ ಉತ್ತಮ ರೀತಿಯಲ್ಲಿ ಸಾಗಲಿ ಎಂದು ಶುಭ ಹಾರೈಸಿದರು.
ಮುಖ್ಯ ಅತಿಥಿಗಳಾಗಿ ಬೆಂಗಳೂರು ಸಾಹಿತಿಗಳಾದ ಬೊಳುವಾರು ಮಹಮ್ಮದ್ ಕುಂಞಿ, ಕನ್ನಡದ ಹಿರಿಯ ಚಲನಚಿತ್ರ ನಟಿ ಶ್ರೀಮತಿ ಸತ್ಯಭಾಮ ಆರೂರು, ರಾಜು ಬಲ್ಲಾಲ್ ವೇದಿಕೆಯಲ್ಲಿ ಸಂಘದ ಅಧ್ಯಕ್ಷರಾದ ದಯಾನಂದ ಕೊಟ್ಯಾನ್, ಪ್ರಧಾನ ಕಾರ್ಯದರ್ಶಿಗಳಾದ ಚಿತ್ರಕಲಾ ರಘುನಾಥ ರೈ, ಕೋಶಾಧಿಕಾರಿಯಾದ ಅಲಂಗಾರು ಜಯರಾಮ ಶೆಟ್ಟಿ, ಸಂಘದ ಮಾಜಿ ಅಧ್ಯಕ್ಷರುಗಳಾದ ಕೆ.ವಿಠಲ ಶೆಟ್ಟಿ, ಆನಂದ ಶೆಟ್ಟಿ, ಕೆ.ಲಕ್ಷ್ಮೀ ನಾರಾಯಣ ಆಳ್ವ, ಪರಿಕಾ ಭಾಸ್ಕರ ಶೆಟ್ಟಿ, ಮುಂತಾದವರು ಉಪಸ್ಥಿತರಿದ್ದರು.
ಕನ್ನಡದ ಹಿರಿಯ ಚಲನಚಿತ್ರ ನಟಿ ಸತ್ಯಭಾಮ ಇವರನ್ನು ಸಂಘದಿಂದ ಸನ್ಮಾನಿಸಲಾಯಿತು. ಚಿತ್ರಕಲಾ ರಘುನಾಥ ರೈ ವರದಿ ಮಂಡಿಸಿದರು. ರಾಮಚಂದ್ರ ಮಿಚಾರು ಕಾರ‍್ಯಕ್ರಮ ನಿರೂಪಿಸಿ, ಸಂಘದ ಉಪಾಧ್ಯಕ್ಷರಾದ ಬಾಬು ಶೆಟ್ಟಿ ಸ್ವಾಗತಿಸಿ, ಪ್ರಧಾನ ಕಾರ್ಯದರ್ಶಿಯಾದ ಚಿತ್ರಕಲಾ, ರಘುನಾಥ ರೈ ಧನ್ಯವಾದವಿತ್ತರು.
ನಂತರ ಶ್ರೀನಿವಾಸ ನಿರ್ದೇಶನದಲ್ಲಿ ಸಮಿತಿ ಸದಸ್ಯರಿಂದ ಯಕ್ಷಗಾನ ನಡೆಯಿತು. ಮತ್ತು ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಿತು.

ಎಪಿಎಂಸಿ ಆನ್‌ಲೈನ್ ನೋಂದಣಿ ಮಾಹಿತಿ ಕಾರ್ಯಕ್ರಮ

Tuesday, March 15th, 2016 | Suddi Belthangady | no responses ವೇಣೂರು: ಕೃಷಿಕರು ಉತ್ಪಾಧಿಸಿದ ಉತ್ಪನ್ನಗಳಿಗೆ ಉತ್ತಮ ಬೆಲೆ ಲಭಿಸುವಂತೆ ಕೃಷಿ ಉತ್ಪನ್ನ ಮಾರುಕಟ್ಟೆ… ಮುಂದೆ ಓದಿ

ವಿದ್ಯುತ್ ಇಲಾಖೆಗಳು

ವಿದ್ಯುತ್ ಇಲಾಖೆಗಳು

Thursday, August 13th, 2015 | suddiblt | no responses ಮುಂದೆ ಓದಿ

ಇಂದಿನ ಕಾರ್ಯಕ್ರಮ

ಶಿಕ್ಷಣ ಮಾರ್ಗದರ್ಶಿ

ಹಿಂದಿನ ಸುದ್ದಿಗಳು

January 2017
M T W T F S S
« Dec    
 1
2345678
9101112131415
16171819202122
23242526272829
3031  

ನಮ್ಮ ಬಗ್ಗೆ

ಮೊದಲಿಗೆ ಕೇವಲ ಒಂದು ಹಾಳೆಯಲ್ಲಿ ಪ್ರಕಟವಾಗುತ್ತಿದ್ದ ಬೆಳ್ತಂಗಡಿ ತಾಲೂಕಿನ “ಸುದ್ದಿ ಬಿಡುಗಡೆ “ಪತ್ರಿಕೆ ಇಂದು ಪ್ರತಿದಿನ  22
.. ಮುಂದೆ ಓದಿ

ಸಲಹೆ- ಸೂಚನೆ

ನಿಮ್ಮ ಸಲಹೆ ಸೂಚನೆಗಳಿಗೆ ಹಾರ್ದಿಕ ಸ್ವಾಗತ

ಇಲ್ಲಿ ಕ್ಲಿಕ್ಕಿಸಿ

Copyright © 2017 Suddinews.com . All Rights Reserved.
^ Back to Top