Thu 25 May 2017, 2:42AM

ಹೆಚ್ಚಿನ ಸುದ್ದಿಗಳು

kit 1

kitಉಜಿರೆ: ಕಳೆದ 9 ವರ್ಷಗಳಿಂದ ಬೆಳ್ತಂಗಡಿ ತಾಲೂಕು ಲಾಯಿಲ ಗ್ರಾಮದ ಕಾಶಿಬೆಟ್ಟು ಎಂಬಲ್ಲಿ ಕಾರ್ಯಾಚರಿಸುತ್ತಿರುವ ಮಲ್‌ಜಅ ದಅವಾ ಮತ್ತು ರಿಲೀಫ್ ಸೆಂಟರ್ ವತಿಯಿಂದ ಮೇ. 23(ಇಂದು) 1600 ಅರ್ಹ ಬಡ ಕುಟುಂಬಗಳಿಗೆ ಸುಮಾರು 50 ಲಕ್ಷ ರೂ. ವೆಚ್ಚದಲ್ಲಿ ರಂಝಾನ್ ಸ್ಪೆಷಲ್ ಕಿಟ್ ವಿತರಣೆ ಮತ್ತು ಇತರ ಸೇವಾ ಕಾರ್ಯಯೋಜನೆಗಳ ಅನುಷ್ಠಾನ ನಡೆಯಿತು.
ಸಂಸ್ಥೆಯ ಚೇರ್‌ಮೆನ್ ಉಜಿರೆ ತಂಙಳ್ ಅಧ್ಯಕ್ಷತೆ ವಹಿಸಿದ್ದರು. ಸಂಸ್ಥೆಯ ವತಿಯಿಂದ ಮಾಸಿಕ ಅಕ್ಕಿ ಪಡೆಯುತ್ತಿರುವ 750 ಕುಟುಂಬಗಳೂ ಸೇರಿ ಜಿಲ್ಲೆಯಿಂದ ಆಯ್ದ, ನೊಂದಾಯಿಸಿಕೊಂಡಿರುವ 1600 ಕುಟುಂಬಗಳಿಗೆ ರಂಝಾನ್ ಉಪಯೋಗಕ್ಕೆ ಬೇಕಾದ 32 ಬಗೆಯ ಆಹಾರ ಪದಾರ್ಥಗಳುಳ್ಳ 55 ಕೆ. ಜಿ ತೂಕದ ಸ್ಪೆಷಲ್ ಕಿಟ್ ಉದ್ಘಾಟನೆಯನ್ನು ಸಚಿವರಾದ ಯು.ಟಿ ಖಾದರ್, ಶಾಸಕ ವಸಂತ ಬಂಗೇರ, ಮರ್ಕಝ್ ಶಿಕ್ಷಣ ಸಂಸ್ಥೆಯ ಉಪ ಕುಲಾಧಿಪತಿ ಚುಳ್ಳಿಕ್ಕೋಡು ಸಖಾಫಿ, ಎಸ್ಸೆಸ್ಸೆಫ್ ಸುಪ್ರೀಂ ಕೌನ್ಸಿಲ್‌ನ ಶಾಫಿ ಸಅದಿ ಮೊದಲಾದ ಪ್ರಮುಖ ಗಣ್ಯರುಗಳು ಉದ್ಘಾಟನೆ ನೆರವೇರಿಸಿದರು. ವೇದಿಕೆಯಲ್ಲಿ ರಾಜ್ಯ ಬಿಜೆಪಿ ಅಲ್ಪಸಂಖ್ಯಾತರ ಘಟಕದ ಉಪಾಧ್ಯಕ್ಷ ರಹೀಂ ಉಚ್ಚಿಲ್, ನ್ಯಾಯವಾದಿ ವೈ ರಾಧಾಕೃಷ್ಣ, ಬಾವಾ ಹಾಜಿ ಅಲ್‌ಲನ್ಸಾರ್, ಹೆಚ್ ಹೆಚ್ ಉಂಞಿ ಹಾಜಿ, ಇಸ್ಮಾಯಿಲ್ ಸಅದಿ ಮಾಚಾರ್, ಜಮಾಲುದ್ದೀನ್ ಲೆತೀಫಿ, ಮಳ್‌ಹರ್ ವಿಮೆನ್ಸ್ ಕಾಲೇಜಿನ ಪ್ರಾಂಶುಪಾಲರಾದ ಮಿಸ್ಬಾಹಿ, ಆಡಳಿತಾಧಿಕಾರಿ ಮೊದು ಮಾಸ್ಟರ್, ಕೆಸಿಎಫ್ ರಿಲೀಫ್ ವಿಭಾಗದ ಸಂಘಟಕ ಸಲೀಂ ಕನ್ಯಾಡಿ, ಅಬ್ಬೋನು ಮದ್ದಡ್ಕ, ಉಸ್ಮಾನ್ ಶಾಫಿ ಗುರುವಾಯನಕೆರೆ, ಹಾಫಿಲ್ ಹನೀಫ್ ಮಿಸ್ಬಾಹಿ, ಆಸಿಫ್ ಅಹ್‌ಸನಿ ಮೊದಲಾದವರು ಭಾಗಿಯಾಗಿದ್ದರು.

ಬೆಳ್ತಂಗಡಿ : ತುರ್ತು ಕಾಮಗಾರಿ ಪ್ರಯುಕ್ತ ಗುರುವಾಯನಕೆರೆ ವಿದ್ಯುತ್ ಉಪಕೇಂದ್ರದಿಂದ ಹೊರಹೊಮ್ಮುವ ವೇಣೂರು ಮತ್ತು ಆರಂಬೋಡಿ ಫೀಡರುಗಳಲ್ಲಿ ಮೇ.24 ಮತ್ತು 27 ರಂದು ಬೆಳಿಗ್ಗೆ 9.30 ಯಿಂದ ಸಂಜೆ 5.30 ತನಕ ವಿದ್ಯುತ್ ನಿಲುಗಡೆಯಾಗಲಿದೆ ಎಂದು ಮೆಸ್ಕಾಂ ಪ್ರಕಟಣೆಯಲ್ಲಿ ತಿಳಿಸಿದೆ.

venurವೇಣೂರು: ಚಾಲಕನ ನಿಯಂತ್ರಣ ತಪ್ಪಿ ಮಹೇಂದ್ರ ಟಿಯುವಿ-300 ಕಾರು ಮಗುಚಿ ಬಿದ್ದ ಘಟನೆ ವೇಣೂರು ಪೊಲೀಸ್ ಠಾಣಾ ವ್ಯಾಪ್ತಿಯ ಕರಿಮಣೇಲುವಿನಲ್ಲಿ ಮೇ. 21ರಂದು ಮುಂಜಾನೆ ಸಂಭವಿಸಿದೆ. ವೇಣೂರು ಗಾಂಧಿನಗರದ ವಲೇರಿಯನ್ ಅವರು ಮುಂಜಾನೆ 5.30ರ ಸುಮಾರಿಗೆ ಬೆಳ್ತಂಗಡಿಗೆ ತೆರಳುತ್ತಿದ್ದ ವೇಳೆ ರಾಜ್ಯಹೆದ್ದಾರಿ ಕರಿಮಣೇಲುವಿನ ತಿರುವಿನಲ್ಲಿ ಎದುರಿನಿಂದ ಬಂದ ವಾಹನಕ್ಕೆ ಸೈಡ್ ನೀಡುವ ವೇಳೆ ಈ ಘಟನೆ ಸಂಭವಿಸಿದೆ. ಕಾರಿನಲ್ಲಿ ಇಮ್ರಾನ್ ಎಂಬವರು ಜೊತೆಗಿದ್ದು, ಸಣ್ಣಪುಟ್ಟ ಗಾಯಗಳೊಂದಿಗೆ ಅಪಾಯದಿಂದ ಪಾರಾಗಿದ್ದಾರೆ.

ಬೆಳ್ತಂಗಡಿ : ತುರ್ತು ಕಾಮಗಾರಿ ಪ್ರಯುಕ್ತ ಮೇ. 23, 27 ಮತ್ತು 30 ರಂದು ಕರಾಯ ವಿದ್ಯುತ್ ಉಪಕೇಂದ್ರದಿಂದ ಹೊರಹೊಮ್ಮುವ ಎಲ್ಲಾ 11 ಫೀಡರುಗಳಲ್ಲಿ ಬೆಳಿಗ್ಗೆ 6.00 ರಿಂದ ಸಂಜೆ 5.30 ರವೆರೆಗೆ ವಿದ್ಯುತ್ ನಿಲುಗಡೆಯಾಗಲಿದೆ ಎಂದು ಮೆಸ್ಕಾಂ ಪ್ರಕಟಣೆಯಲ್ಲಿ ತಿಳಿಸಿದೆ.

Mahesh Kumar Nadakaraಬೆಳ್ತಂಗಡಿ : ಮೇಲಂತಬೆಟ್ಟು ಗ್ರಾ.ಪಂ.ನ ಮಾಜಿ ಅಧ್ಯಕ್ಷ ಹಾಗೂ ಹಾಲಿ ಸದಸ್ಯ ಮಹೇಶ್ ಕುಮಾರ್ ನಡಕ್ಕರ ಮೇ.21 ರಂದು ಮುಂಜಾನೆ ಮಂಗಳೂರಿನ ಖಾಸಗಿ ಆಸ್ಪತೆಯಲ್ಲಿ ನಿಧನರಾಗಿದ್ದಾರೆ. ಕಿಡ್ನಿ ವೈಫಲ್ಯದಿಂದ ಬಳಲುತ್ತಿದ್ದ ಅವರು ಹೃದಯಾಘಾತದಿಂದ ಮೃತಪಟ್ಟಿದ್ದಾರೆ.
ಮೃತರು ಮುಂಡೂರು ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷರಾಗಿ, ಬೆಳ್ತಂಗಡಿ ತಾಲೂಕು ಅಮೆಚೂರ್ ಕಬ್ಬಡಿ ಎಸೋಸಿಯೇಶನ್‌ನ ಅಧ್ಯಕ್ಷರಾಗಿ ಹಾಗೂ ಅನೇಕ ಸಂಘಸಂಸ್ಥೆಗಳಲ್ಲಿ ತನ್ನನ್ನು ಸಕ್ರಿಯವಾಗಿ ತೊಡಗಿಸಿಕೊಂಡಿದ್ದರು.

Harish Kumar New Photo1ಬೆಳ್ತಂಗಡಿ : ಬೆಳ್ತಂಗಡಿ ವಿಧಾನ ಸಭಾ ಕ್ಷೇತ್ರ ವ್ಯಾಪ್ತಿಯ ಬೆಳ್ತಂಗಡಿ ನಗರ ಬ್ಲಾಕ್  ಕಾಂಗ್ರೆಸ್ ಸಮಿತಿ ಅಧ್ಯಕ್ಷ ಹರೀಶ್ ಕುಮಾರ್ ರಾಜೀನಾಮೆ ನೀಡಿದ್ದಾರೆ.
ಯುವ ಕಾಂಗ್ರೆಸ್ ಚುನಾವಣೆಯಲ್ಲಿ ಬೆಳ್ತಂಗಡಿ ವಿಧಾನ ಸಭಾ ಕ್ಷೇತ್ರದಿಂದ ಹರೀಶ್ ಕುಮಾರ್ ರವರ ಪುತ್ರ ಅಭಿನಂದನ್ ಹರೀಶ್ ಸ್ಪರ್ಧಿಸಿ ಅಧ್ಯಕ್ಷರಾಗಿ ಚುನಾಯಿತರಾಗಿದ್ದಾರೆ. ಒಂದೇ ವಿಧಾನ ಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ಕಾರ್ಯನಿರ್ವಹಿಸುವುದು ಸರಿಯಲ್ಲ ಎಂಬ ಕಾರಣಕ್ಕಾಗಿ ರಾಜೀನಾಮೆಯನ್ನು ಕೆಪಿಸಿಸಿ ಅಧ್ಯಕ್ಷ ಜಿ ಪರಮೇಶ್ವರ್ ರವರಿಗೆ ನೀಡಿರುತ್ತಾರೆ.

suddi COLORpdf BLDY.p65

suddi COLORpdf BLDY.p65

carಧರ್ಮಸ್ಥಳ : ಧರ್ಮಸ್ಥಳದಿಂದ ಬೆಂಗಳೂರು ಕಡೆಗೆ ಹೋಗುತ್ತಿದ್ದ ಶಿಫ್ಟ್ ಕಾರೊಂದು ನಿಡ್ಲೆ ಗ್ರಾಮದ ಮಲ್ಲಿಗೆ ಎಂಬಲ್ಲಿ ಚರಂಡಿಗೆ ಬಿದ್ದು ಬೆಂಕಿ ಹತ್ತಿ ಉರಿದ ಘಟನೆ ಇಂದು(ಮೇ.20) ಬೆಳಗ್ಗಿನ ಜಾವ ನಡೆದಿದೆ. ಕಾರಿನಲ್ಲಿದ್ದವರು ಪ್ರಾಣಾಪಾಯದಿಂದ ಪಾರಾಗಿದ್ದಾರೆ.

Shalini seva prathistnaಲಾಯಿಲ : ಶಾಲಿನಿ ಸೇವಾ ಪ್ರತಿಷ್ಠಾನ ಲಾಯಿಲ, ಬೆಳ್ತಂಗಡಿ ಇದರ ವತಿಯಿಂದ ದಿ| ಶಾಲಿನಿ ಅವರ ಪುಣ್ಯಸ್ಮರಣೆ ಹಾಗೂ ಶಾಲಿನಿ ಸೇವಾ ಪ್ರತಿಷ್ಢಾನದ ೨ನೇ ವರ್ಷದಲ್ಲಿ ಸೇವಾ ಕಾರ್ಯಕ್ರಮದಲ್ಲಿ ಹಿರಿಯ ಆರ್ಯುವೇದ ವೈದ್ಯ ಡಾ| ಕೆ.ಜಿ ಫಣಿಕ್ಕರ್ ಉದಯವಾಣಿ ಪತ್ರಿಕೆ ವರದಿಗಾರ, ಲಕ್ಷ್ಮೀ ಮಚ್ಚಿನ, ಯುವ ಯಕ್ಷಗಾನ ಕಲಾವಿದ ಗಣೇಶ್ ಶೆಟ್ಟಿ ಕನ್ನಡಿಕಟ್ಟೆ ಇವರನ್ನು ಸನ್ಮಾನಿಸಲಾಯಿತು.

nuha fathima copyಮುಂಡಾಜೆ : ಇಲ್ಲಿನ ಮಸೀದಿ ಬಳಿ ನಿವಾಸಿ, ದೋಹಾ ಕತಾರ್ ಉದ್ಯೋಗಿ ಮುಹಮ್ಮದ್ ನಝೀರ್ ಮತ್ತು ನೂರ್‌ಜಹಾನ್ ಮುಲ್ಲಾರಪಟ್ಣ ದಂಪತಿ ದ್ವಿತೀಯ ಪುತ್ರಿ ನುಹಾ ಫಾತಿಮಾ ಅವರ 7ನೇ ವರ್ಷದ ಹುಟ್ಟುಹಬ್ಬವನ್ನು ಏ. 27 ರಂದು ಆಚರಿಸಲಾಯಿತು.

kawshik shettyಕಣಿಯೂರು ಗ್ರಾಮದ ಮುಗೆರೋಡಿ ಮನೆಯ ರಘುರಾಮ ಶೆಟ್ಟಿ ಮತ್ತು ಸಶೀಲ ಶೆಟ್ಟಿ ಇವರ ಮೊಮ್ಮಗ ಕೌಶಿಕ್ ಶೆಟ್ಟಿಯ 6ನೇ ವರ್ಷದ ಹುಟ್ಟುಹಬ್ಬವನ್ನು ಮುಗೆ ರೋಡಿ ಶ್ರೀದೇವಿ ಕೃಪಾ ಮನೆಯಲ್ಲಿ ಆಚರಿಸಲಾಯಿತು.

thanushತಣ್ಣೀರುಪಂತ ಅಳಕ್ಕೆ ಮನೆಯ ಮದನ್ ಮತ್ತು ಮಲ್ಲಿಕಾ ದಂಪತಿ ಪುತ್ರ ತನುಷ್ ನ 3ನೇ ವರ್ಷದ ಹುಟ್ಟುಹಬ್ಬವನ್ನು ಮೇ. 13ರಂದು ಆಚರಿಸಲಾಯಿತು.

Sowmya Shivaprasadಲಾಯಿಲ ಕನ್ನಾಜೆ ದುರ್ಗಾನಗರ  ದಿನೇಶ ಆಚಾರ್ಯ ರ ಪುತ್ರಿ ಸೌಮ್ಯ ರವರ ವಿವಾಹವು ಸವಣಾಲು ಕೆರೆಕೋಡಿ ಸ್ವಾಮಿಕೃಪಾ ಸುಂದರ ಆಚಾರ್ಯ ರ ಪುತ್ರ ಶಿವಪ್ರಸಾದ ರೊಂದಿಗೆ ಮೇ. 10ರಂದು ಸಂತೆಕಟ್ಟೆ ಧರ್ಮಸ್ಥಳ ಶ್ರೀ ಮಂಜುನಾಥೇಶ್ವರ ಕಲಾಮಂದಿರದಲ್ಲಿ ಜರುಗಿತು.

hariprasad-ashwithaಕರಿಮಣೇಲು ಗ್ರಾಮದ ಗಾಂಧಿನಗರ ಮಾತೃಕೃಪಾ ಮನೆಯ ಸುದ್ದಿಬಿಡುಗಡೆ ಪತ್ರಿಕಾ ಏಜೆಂಟರು ಆಗಿರುವ ನಾರಾಯಣ ಸಾಲ್ಯಾನ್‌ರವರ ಪುತ್ರಿ ಅಶ್ವಿತಾ ಅವರ ವಿವಾಹವು ನಾರಾವಿ ಬಾಂದೊಟ್ಟು ದೇಜಪ್ಪ ಪೂಜಾರಿಯವರ ಪುತ್ರ ಹರಿಪ್ರಸಾದ್‌ರೊಂದಿಗೆ ಮೇ 8ರಂದು ನಾರಾವಿ ಬಸದಿಯ ಧರ್ಮಶ್ರೀ ಸಭಾಭವನದಲ್ಲಿ ಜರಗಿತು.

Akshatha Prasannaಬೆಳ್ತಂಗಡಿ ಕೆಂಬರ್ಜೆ ಅಣ್ಣಿ ಪೂಜಾರಿಯವರ ಪುತ್ರಿ ಅಕ್ಷತ ರವರ ವಿವಾಹವು ಮದ್ದಡ್ಕ ನೇರಳೆಕಟ್ಟೆ ಶ್ರೀಧರ ಪೂಜಾರಿಯವರ ಪುತ್ರ ಪ್ರಸನ್ನ ರೊಂದಿಗೆ ಮೇ. 7ರಂದು ಗುರುವಾಯನಕೆರೆ ಕುಲಾಲ ಮಂದಿರದಲ್ಲಿ ಜರುಗಿತು.

Ramesh acharyಬಜಿರೆ ಗ್ರಾಮದ ಹಿದ್ಯೆಕ್ಯಾರ್ ದಿ. ಜನಾರ್ದನ ಆಚಾರ್ಯರ ಪುತ್ರ ರಮೇಶ್‌ರವರ ವಿವಾಹವು ಪುತ್ತೂರು ತಾಲೂಕು ಪರ್ಲಡ್ಕ ದಾಮೋದರ ಆಚಾರ್ಯರ ಪುತ್ರಿ ಸೀತಾಲಕ್ಷ್ಮೀರೊಂದಿಗೆ ವೇಣೂರು ಶ್ರೀ ಬಾಹುಬಲಿ ಸಭಾಭವನದಲ್ಲಿ ಮೇ 12ರಂದು ಜರುಗಿತು.

Ugyoga nondane copyಬೆಳ್ತಂಗಡಿ : ರಾಜ್ಯ ಸರಕಾರ ಕಳೆದ ನಾಲ್ಕು ವರ್ಷಗಳಲ್ಲಿ ಬಡವರಿಗೆ ಬಹಳಷ್ಟು ಕಾರ್ಯಕ್ರಮವನ್ನು ಅನುಷ್ಠಾನ ಗೊಳಿಸಿದ್ದು, ಇದೀಗ ಮುಖ್ಯ ಮಂತ್ರಿಯವರ ಕೌಶಲ್ಯಾಭಿವೃದ್ಧಿ ಯೋಜನೆಯಲ್ಲಿ ರಾಜ್ಯಲ್ಲಿ 5 ಲಕ್ಷ ಯುವಜನರಿಗೆ ಉದ್ಯೋಗ ಕೊಡಿಸುವ ಕಾರ್ಯಕ್ರಮ ರೂಪಿಸಲಾಗಿದೆ ಎಂದು ಬೆಳ್ತಂಗಡಿ ಕ್ಷೇತ್ರದ ಶಾಸಕ ಹಾಗೂ ರಾಜ್ಯ ಸಣ್ಣ ಕೈಗಾರಿಕಾ ನಿಗಮದ ಅಧ್ಯಕ್ಷ ಕೆ. ವಸಂತ ಬಂಗೇರ ಹೇಳಿದರು.
ಅವರು ಮೇ 16ರಂದು ಬೆಳ್ತಂಗಡಿ ತಾ.ಪಂ. ಸಭಾಂಗಣದಲ್ಲಿ ನಡೆದ ನಿರುದ್ಯೋಗಿ ಯುವ ಜನರ ಬೇಡಿಕೆ ಸಮೀಕ್ಷೆ ಮತ್ತು ನೋಂದಣಿ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.
ರಾಜ್ಯ ಸರಕಾರ ಚುನಾವಣೆಯಲ್ಲಿ ನೀಡಿದ 165 ಭರವಸೆಗಳಲ್ಲಿ ಕಳೆದ ನಾಲ್ಕು ವರ್ಷಗಳ ಅವಧಿಯಲ್ಲಿ ಶೇ. 95 ಭರವಸೆಗಳನ್ನು ಈಡೇರಿಸಿದೆ.
ಇನ್ನುಳಿದ ಶೇ. 5 ಭರವಸೆಗಳನ್ನು ಮುಂದಿನ ಒಂದು ವರ್ಷದ ಒಳಗೆ ಪೂರೈಸಲಿದ್ದು, ಸರಕಾರ ನುಡಿದಂತೆ ನಡೆದಿದೆ ಎಂದು ತಿಳಿಸಿದರು.
ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದ ಜಿ.ಪಂ ಶಿಕ್ಷಣ ಮತ್ತು ಆರೋಗ್ಯ ಸ್ಥಾಯಿ ಸಮಿತಿ ಅಧ್ಯಕ್ಷ ಶಾಹುಲ್ ಹಮೀದ್ ಅವರು ಮಾತನಾಡಿ, ಶಿಕ್ಷಣ ಕಲಿತು ಉದ್ಯೋಗ ವಂಚಿತರಾದ ಯುವಕರು ವಿವಿಧ ವೃತ್ತಿ ತರಬೇತಿಯನ್ನು ಪಡೆದು ಒಳ್ಳೆಯ ಉದ್ಯೋಗವನ್ನು ಮಾಡಿ ತಮ್ಮ ಜೀವನ ನಿರ್ವಹಣೆಗೆ ಈ ಯೋಜನೆ ಭಾಗ್ಯದ ಬಾಗಿಲು ತೆರೆದಂತೆ, ಇದರ ಸದುಪಯೋಗವನ್ನು ಯುವಕರು ಪಡೆಯಬೇಕು ಎಂದು ತಿಳಿಸಿದರು.
ಅಧ್ಯಕ್ಷತೆಯನ್ನು ತಾ.ಪಂ ಅಧ್ಯಕ್ಷೆ ದಿವ್ಯಜ್ಯೋತಿ ವಹಿಸಿದ್ದರು.
ತಾ.ಪಂ ಉಪಾಧ್ಯಕ್ಷೆ ಶ್ರೀಮತಿ ವೇದಾವತಿ, ತಾ.ಪಂ ಸ್ಥಾಯಿ ಸಮಿತಿ ಅಧ್ಯಕ್ಷ ಸುಧೀರ್ ಆರ್. ಸುವರ್ಣ ಕಾರ್ಯಕ್ರಮಕ್ಕೆ ಶುಭ ಕೋರಿದರು. ಕಾರ್ಯಕ್ರಮದಲ್ಲಿ ತಾ.ಪಂ ಸಹಾಯಕ ಲೆಕ್ಕ ಅಧೀಕ್ಷಕ ಗಣೇಶ್ ಪೂಜಾರಿ, ಜಿ.ಪಂ ಹಾಗೂ ತಾ.ಪಂ ಸದಸ್ಯರು, ಅಧಿಕಾರಿ ವರ್ಗದವರು, ಯುವಕ, ಯುವತಿಯರು ಉಪಸ್ಥಿತರಿದ್ದರು.
ರಾಜೇಂದ್ರ ಬಳಗ ಇವರ ಪ್ರಾರ್ಥನೆ ಬಳಿಕ ತಾ.ಪಂ ಕಾರ್ಯನಿರ್ವಾಹಣಾಧಿಕಾರಿ ಸಿ.ಆರ್ ನರೇಂದ್ರ ಸ್ವಾಗತಿಸಿದರು. ತಾಲೂಕು ಸಂಯೋಜಕ ಜಯಾನಂದ ಲಾಯಿಲ ಕಾರ್ಯಕ್ರಮ ನಿರೂಪಿಸಿ, ತಹಶೀಲ್ದಾರ್ ಹೆಚ್.ಕೆ ತಿಪ್ಪೇಸ್ವಾಮಿ ಧನ್ಯವಾದವಿತ್ತರು.

vnr innogrationವೇಣೂರು: ರಾಜ್ಯಹೆದ್ದಾರಿ 70ರ ವೇಣೂರಿನಲ್ಲಿ ರೂ. 50 ಲಕ್ಷ ಹಾಗೂ ವೇಣೂರು-ನಾರಾವಿ ಸಂಪರ್ಕ ಸೇತುವೆ ಅಂಡಿಂಜೆಯಲ್ಲಿ ರೂ. 1.50 ಕೋಟಿ ವೆಚ್ಚದಲ್ಲಿ ನಿರ್ಮಾಣ ಮಾಡಲಾದ ಸೇತುವೆಯನ್ನು ರಾಜ್ಯ ಸಣ್ಣ ಕೈಗಾರಿಕೆ ಅಭಿವೃದ್ಧಿ ನಿಗಮದ ಅಧ್ಯಕ್ಷರು, ಶಾಸಕ ಕೆ. ವಸಂತ ಬಂಗೇರ ಅವರು ಮೇ. 17ರಂದು ಉದ್ಘಾಟಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಶಾಸಕರು, ರಾಜ್ಯದಲ್ಲಿಯೇ ಬೆಳ್ತಂಗಡಿ ತಾಲೂಕಿನಲ್ಲಿ ಅತೀ ಹೆಚ್ಚು ಕಾಮಗಾರಿಗಳು ನಡೆದಿದ್ದು, 8 ಸೇತುವೆಗಳ ನಿರ್ಮಾಣ ಆಗಿದೆ. ಗ್ರಾಮೀಣ ಸಂತೆ ಮಾರುಕಟ್ಟೆ, ಮೆಸ್ಕಾಂ ಉಪಕೇಂದ್ರದಂತಹ ದೊಡ್ಡ ಯೋಜನೆಗಳು ನಾರಾವಿ ಜಿ.ಪಂ. ವ್ಯಾಪ್ತಿಯಲ್ಲಿ ಆಗಿದ್ದು, ಉಳಿದ ಒಂದು ವರ್ಷದ ಅವಧಿಯಲ್ಲಿ ಮತ್ತಷ್ಟು ಅಭಿವೃದ್ಧಿ ಕಾಮಗಾರಿಗಳ ಅನುಷ್ಠಾನಕ್ಕೆ ಶ್ರಮವಹಿಸುತ್ತೇನೆ ಎಂದರು. 94ಸಿ ಯೋಜನೆಯಡಿ ಅರ್ಜಿ ಸಲ್ಲಿಸಿದ ಎಲ್ಲಾ ಫಲಾನುಭವಿಗಳಿಗೆ ಪ್ರಸ್ತುತ ಅವಧಿಯ ಒಳಗೆ ಹಕ್ಕುಪತ್ರ ಮಂಜೂರುಗೊಳಿಸುವುದಾಗಿ ಅವರು ಭರವಸೆ ನೀಡಿದರು. ನಾರಾವಿ ಜಿ.ಪಂ. ಸದಸ್ಯ ಪಿ. ಧರಣೇಂದ್ರ ಕುಮಾರ್, ಅಳದಂಗಡಿ ಜಿ.ಪಂ. ಸದಸ್ಯ ಶೇಖರ ಕುಕ್ಕೇಡಿ, ನಡ್ತಿಕಲ್ಲು ಜುಮ್ಮಾ ಮಸೀದಿಯ ಧರ್ಮಗುರು ಅನಿಷ್ ಬಾಷಿಣಿ, ಬೆಳ್ತಂಗಡಿ ಸ್ಥಾಯಿ ಸಮಿತಿ ಅಧ್ಯಕ್ಷ ಸುಧೀರ್ ಆರ್. ಸುವರ್ಣ, ವೇಣೂರು ಗ್ರಾ.ಪಂ. ಉಪಾಧ್ಯಕ್ಷ ಅರುಣ್ ಕ್ರಾಸ್ತ, ಮರೋಡಿ ಗ್ರಾ.ಪಂ. ಅಧ್ಯಕ್ಷ ಸದಾನಂದ ಶೆಟ್ಟಿ, ಬೆಳ್ತಂಗಡಿ ಎಪಿಎಂಸಿ ಅಧ್ಯಕ್ಷ ಸತೀಶ್ ಕೆ., ವೇಣೂರು ಗ್ರಾ.ಪಂ. ಮಾಜಿ ಅಧ್ಯಕ್ಷ ಸತೀಶ್ ಹೆಗ್ಡೆ, ಮೂಡುಕೋಡಿ ಹಾ.ಉ.ಸ. ಸಂಘದ ಅಧ್ಯಕ್ಷ ಶಶಿಧರ ಶೆಟ್ಟಿ, ಸೂರ್ಯನಾರಾಯಣ ಡಿ.ಕೆ., ಲೋಕೋಪಯೋಗಿ ಇಲಾಖೆ ಸಹಾಯಕ ಕಾರ್ಯನಿರ್ವಾಹಕ ಇಂಜಿನಿಯರ್ ಶಿವಪ್ರಸಾದ್ ಅಜಿಲ, ಗುತ್ತಿಗೆದಾರ ಕೃಷ್ಣಕುಮಾರ್ ಸೇರಿದಂತೆ ವೇಣೂರು, ಅಂಡಿಂಜೆ, ಕಾಶಿಪಟ್ಣ, ಮರೋಡಿ ಗ್ರಾ.ಪಂ. ಸದಸ್ಯರು ಹಾಗೂ ಗ್ರಾಮಸ್ಥರು ಉಪಸ್ಥಿತರಿದ್ದರು. ವೇಣೂರಿನಲ್ಲಿ ನಡೆದ ಸರಳ ಉದ್ಘಾಟನಾ ಸಮಾರಂಭದ ಅಧ್ಯಕ್ಷತೆಯನ್ನು ವೇಣೂರು ಗ್ರಾ.ಪಂ. ಅಧ್ಯಕ್ಷೆ ಶ್ರೀಮತಿ ಮೋಹಿನಿ ವಿ. ಶೆಟ್ಟಿ ಹಾಗೂ ಅಂಡಿಂಜೆಯಲ್ಲಿ ನಡೆದ ಸಭೆಯ ಅಧ್ಯಕ್ಷತೆಯನ್ನು ಅಂಡಿಂಜೆ ಗ್ರಾ.ಪಂ. ಅಧ್ಯಕ್ಷ ಮೋಹನ ಅಂಡಿಂಜೆ ವಹಿಸಿದ್ದರು. ಅನೂಪ್ ಜೆ. ಪಾಯಿಸ್ ಕಾರ್ಯಕ್ರಮ ನಿರ್ವಹಿಸಿದರು.

Abhinandan Harish kumarಬೆಳ್ತಂಗಡಿ : ಬೆಳ್ತಂಗಡಿ ತಾಲೂಕು ಯುವ ಕಾಂಗ್ರೆಸ್ ಅಧ್ಯಕ್ಷತೆಗೆ ನಡೆದ ಚುನಾವಣೆಯ ಫಲಿತಾಂಶ ಹೊರಬಿದ್ದಿದ್ದು ಅಭಿನಂದನ್ ಹರೀಶ್ ಕುಮಾರ್ ಅತ್ಯಧಿಕ ಮತಗಳಿಂದ ವಿಜೇತರಾಗಿದ್ದಾರೆ.

1

ಕುಕ್ಕೇಡಿ: ಕುಕ್ಕೇಡಿ ಗ್ರಾ.ಪಂ. ವ್ಯಾಪ್ತಿಯಲ್ಲಿ ಕಳೆದ ೪ ವರ್ಷಗಳಲ್ಲಿ ರೂ. ೧೫ ಕೋಟಿಗೂ ಅಧಿಕ ಮೊತ್ತದ ಕಾಮಗಾರಿ ನಡೆದಿದೆ. ಇಲ್ಲಿನ ಪಂಚಾಯತು ಸದಸ್ಯರ ಒಗ್ಗಟ್ಟಿನಿಂದ ಇದು ಸಾಧ್ಯವಾಗಿದೆ. ಜನಪ್ರತಿನಿಧಿಗಳಾದವರು ಜನರ ಸೇವೆ ಮಾಡಬೇಕು. ಆ ಮೂಲಕ ಅವರ ಋಣ ತೀರಿಸಬೇಕು ಎಂದು ಎಂದು ರಾಜ್ಯ ಸಣ್ಣ ಕೈಗಾರಿಕಾ ಅಭಿವೃದ್ಧಿ ನಿಗಮದ ಅಧ್ಯಕ್ಷ, ಶಾಸಕ ಕೆ. ವಸಂತ ಬಂಗೇರ ಹೇಳಿದರು.
ಅವರು ಮೇ ೧೬ರಂದು ದ.ಕ.ಜಿ.ಪಂ. ಇಂಜಿನಿಯರ್ ಉಪವಿಭಾಗ ಬೆಳ್ತಂಗಡಿ, ರಾಜ್ಯ ಸಣ್ಣ ನೀರಾವರಿ ಇಲಾಖೆ ಮಂಗಳೂರು, ಕೆಐಆರ್‌ಡಿಎಲ್ ಮಂಗಳೂರು ಹಾಗೂ ಗ್ರಾ.ಪಂ. ಕುಕ್ಕೇಡಿ ಇವುಗಳ ಜಂಟಿ ಆಶ್ರಯದಲ್ಲಿ ಪೆರ್ಮುಡ ಕಂಬಳ ಮೈದಾನದಲ್ಲಿ ಜರಗಿದ ವಿವಿಧ ಕಾಮಗಾರಿಗಳ ಉದ್ಘಾಟನಾ ಸಮಾರಂಭದಲ್ಲಿ ಕಾಮಗಾರಿಗಳ ಉದ್ಘಾಟನೆ ನೆರವೇರಿಸಿ ಮಾತನಾಡಿದರು.
ತಾಲೂಕಿನಲ್ಲಿ ಆಗುತ್ತಿರುವ ಅಭಿವೃದ್ಧಿಯನ್ನು ಸಹಿಸಲಾಗದ ಕಿಡಿಗೇಡಿಗಳು ಬ್ಯಾನರ್ ಹರಿದು ವಿಕೃತ ಆನಂದ ಪಡೆಯುತ್ತಿದ್ದಾರೆ. ಅವರ ದ್ವೇಷ ರಾಜಕಾರಣ ಅವರಿಗೇ ಮುಳುವಾಗಲಿದೆ ಎಂದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕುಕ್ಕೇಡಿ ಗ್ರಾ.ಪಂ. ಅಧ್ಯಕ್ಷೆ ಶ್ರೀಮತಿ ತೇಜಾಕ್ಷಿ ವಹಿಸಿದ್ದರು. ಅಳದಂಗಡಿ ಜಿ.ಪಂ. ಸದಸ್ಯ ಶೇಖರ ಕುಕ್ಕೇಡಿ ಮಾತನಾಡಿ, ತಾಲೂಕಿನಾದ್ಯಂತ ಅಭಿವೃದ್ಧಿ ಕಾಮಗಾರಿಗಳಿಗೆ ಕೋಟ್ಯಾಂತರ ರೂ. ಅನುದಾನ ಒದಗಿಸಿರುವ ಶಾಸಕರು ತನ್ನ ಕ್ಷೇತ್ರದ ಅಭಿವೃದ್ಧಿಯಲ್ಲಿ ಸಾಧನೆ ಮಾಡಿದ್ದಾರೆ. ಜಾರಿಯಾಗಲಿರುವ ಪಶ್ಚಿಮವಾಹಿನಿ ಯೋಜನೆಯಲ್ಲಿ ಪೆರ್ಮುಡ ನದಿ ಅಣೆಕಟ್ಟು ನಿರ್ಮಾಣಕ್ಕೆ ಹಾಗೂ ಅಳದಂಗಡಿ-ವಾಮದಪದವು ಸಂಪರ್ಕಕ್ಕೆ ಬಸ್ಸಿನ ವ್ಯವಸ್ಥೆಯನ್ನು ಶೀಘ್ರ ನೆರವೇರಿಸುವಂತೆ ಶಾಸಕರಲ್ಲಿ ವಿನಂತಿಸಿದರು.
ಬೆಳ್ತಂಗಡಿ ತಾ.ಪಂ. ಅಧ್ಯಕ್ಷೆ ದಿವ್ಯಜ್ಯೋತಿ, ಬೆಳ್ತಂಗಡಿ ಎಪಿಎಂಸಿ ಅಧ್ಯಕ್ಷ ಸತೀಶ್ ಕೆ. ಕಾಶಿಪಟ್ಣ, ಪಡಂಗಡಿ ತಾ.ಪಂ. ಸದಸ್ಯೆ ಸುಶೀಲ, ಬೆಳ್ತಂಗಡಿ ತಾ.ಪಂ. ಕಾರ್ಯನಿರ್ವಹಣಾಧಿಕಾರಿ ಸಿ.ಆರ್. ನರೇಂದ್ರ, ತಾ.ಪಂ. ಅಳದಂಗಡಿ ತಾ.ಪಂ. ಸದಸ್ಯೆ ಶ್ರೀಮತಿ ವಿನುಷಾ ಪ್ರಕಾಶ್, ಶಿರ್ಲಾಲು ತಾ.ಪಂ. ಸದಸ್ಯೆ ಜಯಶೀಲ, ಸಣ್ಣ ನೀರಾವರಿ ಇಲಾಖೆಯ ಇಂಜಿನಿಯರ್ ಮಹಮ್ಮದ್, ಕುಕ್ಕೇಡಿ ಗ್ರಾ.ಪಂ. ಅಭಿವೃದ್ಧಿ ಅಧಿಕಾರಿ ರಶ್ಮಿ ಬಿ.ಪಿ. ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಸನ್ಮಾನ: ಕಾರ್ಯಕ್ರಮದಲ್ಲಿ ಶಾಸಕ ಕೆ. ವಸಂತ ಬಂಗೇರ, ಸತೀಶ್ ಕೆ. ಕಾಶಿಪಟ್ಣ, ಕಂದಾಯ ನಿರೀಕ್ಷಕ ಪವಡಪ್ಪ, ಗ್ರಾಮಕರಣಿಕ ಉಮೇಶ್ ಅವರನ್ನು ವೇದಿಕೆಯಲ್ಲಿ ಸನ್ಮಾನಿಸಲಾಯಿತು.
ಹಕ್ಕುಪತ್ರದ ವಿತರಣೆ: ಕಾರ್ಯಕ್ರಮದಲ್ಲಿ ವಿಕಲಚೇತನರಿಗೆ ಸೋಲಾರ್ ದೀಪ ವಿತರಣೆ ಹಾಗೂ ೯೪ಸಿ ಯೋಜನೆಯಡಿ ಮಂಜೂರಾದ ಹಕ್ಕುಪತ್ರದ ವಿತರಣೆಯನ್ನು ಕೆ. ವಸಂತ ಬಂಗೇರ ಅವರು ನೆರವೇರಿಸಿದರು.
ಕುಕ್ಕೇಡಿ ಗ್ರಾ.ಪಂ. ಉಪಾಧ್ಯಕ್ಷ ಅಶೋಕ್ ಪಾಣೂರು ಪ್ರಾಸ್ತಾವಿಕವಾಗಿ ಮಾತನಾಡಿ ಸ್ವಾಗತಿಸಿದರು. ಜಿ.ಪಂ. ಸದಸ್ಯ ಶೇಖರ ಕುಕ್ಕೇಡಿ ವಂದಿಸಿದರು. ತಾ.ಪಂ. ಕಾರ್ಯಕ್ರಮ ಸಂಯೋಜಕ ಜಯಾನಂದ ಕಾರ್ಯಕ್ರಮ ನಿರೂಪಿಸಿದರು. ಕುಕ್ಕೇಡಿ ಗ್ರಾ.ಪಂ. ಸದಸ್ಯರು ಹಾಗೂ ಸಿಬ್ಬಂದಿ ಸಹಕರಿಸಿದರು.

ಉದ್ಘಾಟನೆಗೊಂಡ ಕಾಮಗಾರಿಗಳು
= ನಬಾರ್ಡ್ ಯೋಜನೆಯಡಿ
ರೂ. ೫೦ ಲಕ್ಷ ವೆಚ್ಚದ ಪೆರ್ಮುಡ-
ನಾಲ್ಕೂರು ರಸ್ತೆ ಕಾಮಗಾರಿ
= ಸಣ್ಣ ನೀರಾವರಿ ಇಲಾಖೆಯಿಂದ ರೂ. ೨೫ ಲಕ್ಷ ವೆಚ್ಚದಲ್ಲಿ
ನಿರ್ಮಿಸಲಾದ ಪೆರ್ಮುಡ-ಕೂಟೇಲು ಅಣೆಕಟ್ಟು
= ಪೊಸಲಾಯಿ-ಕೋಡಿಮಜಲು ಎಸ್‌ಟಿ
ಕಾಲನಿಯ ೨೦ ಲಕ್ಷದ ಕಾಂಕ್ರಿಟ್ ರಸ್ತೆ ಕಾಮಗಾರಿ

balnja billava sanga book vitarane copy

ಬಳಂಜ : ಬ್ರಹ್ಮಶ್ರೀ ನಾರಾಯಣಗುರು ಸೇವಾ ಸಂಘ ಬಳಂಜ ಯುವ ಬಿಲ್ಲವ ವೇದಿಕೆ, ಮತ್ತು ಮಹಿಳಾ ಬಿಲ್ಲವ ವೇದಿಕೆ ಬಳಂಜ, ನಾಲ್ಕೂರು, ತಂಕಕಾರಂದೂರು ಇವುಗಳ ಜಂಟಿ ಆಶ್ರಯದಲ್ಲಿ ಹಲವಾರು ವರ್ಷಗಳಿಂದ ನೀಡಲ್ಪಡುವ ದಿ| ಶ್ರೀಮತಿ ಕಮಲ ಅಲ್ಲಿಂತ್ಯಾರು ಬಳಂಜ, ದಿ| ಲಕ್ಷ್ಮಣ ಪೂಜಾರಿ ಹೇವ ಬಳಂಜ, ದಿ| ಶ್ರೀಮತಿ ಕಿನ್ಯಪ್ಪೆ ಪೂಜಾರಿ ಕುಂಡದಬೆಟ್ಟು, ದಿ| ಭೋಜರಾಜ ಅಮೀನ್ ಐತನಡ್ಕ ಮಜುಲು, ನಾಲ್ಕೂರು, ದಿ| ಶ್ರೀಮತಿ ಸರಸಮ್ಮ ಮತ್ತು ನಾಣ್ಯಪ್ಪ ಪೂಜಾರಿ ತಾರಿಪಡ್ಟು, ನಾಲ್ಕೂರು, ದಿ| ಡೀಕಯ್ಯ ಪೂಜಾರಿ ಕುದ್ರೊಟ್ಟು, ನಾಲ್ಕೂರು, ದಿ| ಕೃಷ್ಣಪ್ಪ ಪೂಜಾರಿ ಮಜಲು ಕಾಫಿನಡ್ಕ, ದಿ| ಶಿವಪ್ಪ ಪೂಜಾರಿ ಹೊಸಮನೆ ನಾಲ್ಕೂರು, ದಿ| ಶ್ರೀಮತಿ ವೆಂಕಮ್ಮ ಮಜಲಡ್ಡ, ನಾಲ್ಕೂರು, ದಿ| ಡೀಕಯ್ಯ ಪೂಜಾರಿ ಮಜಲೋಡಿ, ನಾಲ್ಕೂರು, ದಿ| ದೂಮಪ್ಪ ಪೂಜಾರಿ, ಜೈಮಾತಾ ನಾಲ್ಕೂರು, ದಿ| ಶ್ರೀಮತಿ ರಾಜೀವಿ ಮತ್ತು ಚೊಕ್ಕಯ್ಯ ಪೂಜಾರಿ ಸುದೇರ್ದು ಬಳಂಜ, ದಿ| ಆನಂದ ಪೂಜಾರಿ, ಕೆಂಪುಂರ್ಜ ಮಜಲಡ್ಡ, ನಾಲ್ಕೂರು, ದಿ| ಜಿನ್ನಮ್ಮ ಯೈಕುರಿ ಮನೆ ನಾಲ್ಕೂರು, ದಿ| ಕೃಷ್ಣಪ್ಪ ಪೂಜಾರಿ ಮಜ್ಜೇನಿ, ನಾಲ್ಕೂರು, ದಿ| ಕೃಷ್ಣಪ್ಪ ಪೂಜಾರಿ, ದರ್ಖಾಸು, ಬಳಂಜ, ದಿ| ಬಾಬು ಪೂಜಾರಿ ಮತ್ತು ಜಾಕಮ್ಮ ಪೂಜಾರ‍್ತಿ ಬೊಂಟ್ರೊಟ್ಟು, ಬಳಂಜ, ದಿ| ಶ್ರೀಮತಿ ಗಿರಿಯಮ್ಮ ಹೊಸಮನೆ, ನಾಲ್ಕೂರು, ದಿ| ಶ್ರೀಮತಿ ಶೀಲಾವತಿ ತಾರಿಪಡ್ಟು, ನಾಲ್ಕೂರು, ದಿ| ಸಾಂತಪ್ಪ ಪೂಜಾರಿ ಲಾಂತ್ಯಾರು, ಬಳಂಜ, ದಿ| ಪೆರ್ನೆ ಪೂಜಾರ‍್ತಿ ಬಾಕ್ಯರಡ್ದ ನಾಲ್ಕೂರು, ದಿ| ಶ್ರೀಮತಿ ಹೊನ್ನಮ್ಮ ಕೆಂಪುಂರ್ಜ ಮನೆ ಬಳಂಜ, ದಿ| ಬಾಗಿ ಪೂಜಾರ‍್ತಿ ಹೊಸಮನೆ ನಾಲ್ಕೂರು. ಇವರ ಸ್ಮರಣಾರ್ಥ ಧತ್ತಿ ನಿಧಿಯಿಂದ ನೀಡಲ್ಪಡುವ ಪುಸ್ತಕ ವಿತರಣಾ ಕಾರ್ಯಕ್ರಮವು ಮೇ ೧೪ರಂದು ಸಂಘದ ವಠಾರದಲ್ಲಿ ನಡೆಯಿತು.
ಕಾರ್ಯಕ್ರಮದ ಉದ್ಘಾಟನೆಯನ್ನು ಬಳಂಜ ಬಿಲ್ಲವ ಸಂಘದ ಪೂರ್ವಾಧ್ಯಕ್ಷ ತಿಮ್ಮಪ್ಪ ಪೂಜಾರಿ ನಿಟ್ಟಡ್ಕ ನೆರವೇರಿಸಿ ಶುಭ ಹಾರೈಸಿದರು. ಅಧ್ಯಕ್ಷತೆಯನ್ನು ಬ್ರಹ್ಮಶ್ರೀ ನಾರಾಯಣಗುರು ಸೇವಾ ಸಂಘ ಬಳಂಜದ ಅಧ್ಯಕ್ಷರಾದ ಪ್ರವೀಣ ಕುಮಾರ್ ಎಚ್.ಎಸ್ ವಹಿಸಿ ಮಾತಾನಾಡಿ ಬ್ರಹ್ಮಶ್ರೀ ನಾರಾಯಣ ಗುರುಗಳ ತತ್ವ ಸಿದ್ಥಾಂತದಂತೆ ವಿದ್ಯೆಯಿಂದ ಸ್ವತಂತ್ರರಾಗಿರಿ ಸಂಘಟನೆಯಿಂದ ಬಲಯುತರಾಗಿರಿ ಎಂಬ ನಿಟ್ಟಿನಲ್ಲಿ ಕಳೆದ ಹಲವು ವರ್ಷಗಳಿಂದ ಧತ್ತಿನಿಧಿಯಿಂದ ವಿದ್ಯಾರ್ಥಿಗಳಿಗೆ ಪುಸ್ತಕ ವಿತರಣೆ ಮಾಡುತ್ತಿದ್ದು ಪುಸ್ತಕ ಪಡೆದ ವಿದ್ಯಾರ್ಥಿಗಳು ಉತ್ತಮವಾಗಿ ಕಲಿತು ಒಳ್ಳೆಯ ಉದ್ಯೋಗ ಪಡೆದು ಊರಿಗೆ ಹಾಗೂ ಸಮಾಜಕ್ಕೆ ಒಳ್ಳೆಯ ಹೆಸರು ತರುವಂತಾಗ ಬೇಕು ಎಂದರು. ಮುಖ್ಯ ಅತಿಥಿಗಳಾಗಿ ಶ್ರೀ ಗು.ನಾ.ಸ್ವಾ.ಸೇ.ಸಂ, ಬೆಳ್ತಂಗಡಿಯ ಅಧ್ಯಕ್ಷ ಭಗೀರಥ ಜಿ ಮಾತಾನಾಡಿ ಇಂದು ವಿದ್ಯಾರ್ಥಿಗಳಿಗೆ ಹಲವು ಸಂಘ ಸಂಸ್ಥೆಗಳು ವಿದ್ಯಾಭ್ಯಾಸಕ್ಕೆ ಪ್ರೋತ್ಸಾಹ ನೀಡುತ್ತಿದ್ದು, ಅದರ ಪ್ರಯೋಜನ ಪಡೆದು ವಿದ್ಯಾವಂತರಾಗಿ ಸಮಾಜಕ್ಕೆ ಕೊಡುಗೆ ನೀಡಬೇಕು ಎಂದರು. ಯುವವಾಹಿನಿ ಬೆಳ್ತಂಗಡಿ ಘಟಕದ ಅಧ್ಯಕ್ಷ ಸದಾನಂದ ಪೂಜಾರಿ ಉಂಗಿಲಬೈಲು, ಪ್ರಗತಿಪರ ಕೃಷಿಕರಾದ ವಿಶ್ವನಾಥ ಕುದ್ಯಾಡಿ, ಯುವವಾಹಿನಿ ಮಂಗಳೂರು ಘಟಕದ ಪೂರ್ವಾಧ್ಯಕ್ಷ ಹರೀಶ್ ಕೆ. ಬೈಲಬರಿ, ಬಳಂಜ ಬಿಲ್ಲವ ಸಂಘದ ಗೌರವಾಧ್ಯಕ್ಷ ಹೆಚ್. ಧರ್ಣಪ್ಪ ಪೂಜಾರಿ, ಬೆಳ್ತಂಗಡಿ ಶ್ರೀ.ಗು.ನಾ.ಸ್ವಾ.ಸೇ ಸಂಘದ ಪ್ರಧಾನ ಕಾರ್ಯದರ್ಶಿ ಸಂತೋಷ್ ಕುಮಾರ್ ಕಾಪಿನಡ್ಕ, ಯುವ ಬಿಲ್ಲವ ವೇದಿಕೆ ಅಧ್ಯಕ್ಷ ಜಗದೀಶ್ ಬಳ್ಳಿದಡ್ಡ, ಮಹಿಳಾ ಬಿಲ್ಲವ ವೇದಿಕೆ ಅಧ್ಯಕ್ಷೆ ವಿನುಷಾ ಪ್ರಕಾಶ್ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಯುವ ಬಿಲ್ಲವ ವೇದಿಕೆ ತಾಲೂಕು ಕಾರ್ಯದರ್ಶಿ ಸಂತೋಷ್ ಪಿ. ಕೋಟ್ಯಾನ್ ಸ್ವಾಗತಿಸಿ, ಚಂದ್ರಹಾಸ್ ಬಳಂಜ ಕಾರ್ಯಕ್ರಮ ನಿರೂಪಿಸಿ, ರಂಜಿತ್ ಎಚ್.ಡಿ ಧನ್ಯವಾದವಿತ್ತರು.

ಸನ್ಮಾನ ಕಾರ್ಯಕ್ರಮ : ಬಳಂಜ ಬಿಲ್ಲವ ಸಂಘದಲ್ಲಿ ಧತ್ತಿನಿಧಿಯಿಂದ ನೀಡಲ್ಪಡುವ ಪುಸ್ತಕ ವಿತರಣಾ ಕಾರ್ಯಕ್ರಮದಲ್ಲಿ ವಾಣಿ ಇಂಗ್ಲೀಷ್ ಮೀಡಿಯಂ ಶಾಲೆಯಲ್ಲಿ ಕಲಿಯುತ್ತಿರುವ ಎಸ್.ಎಸ್.ಎಲ್.ಸಿಯಲ್ಲಿ ಎಲ್ಯೊಟ್ಟು ಹರ್ಷ ಮನೆಯ ವಿಮರ್ಶರವರು ೬೧೫ ಅಂಕ ಪಡೆದು ಶಾಲೆಗೆ ಪ್ರಥಮ, ಹಾಗೆಯೇ ಸುಕೇಶ್ ಗಾಂದಿನಗರ ೫೪೨ ಅಂಕ, ಶ್ರೇಯಾ ಅಟ್ಲಾಜೆ ೫೫೧ ಅಂಕ, ಪ್ರತೀಕ್ಷಾ ೫೫೪ ಅಂಕ, ಹಾಗೂ ಪಿಯುಸಿಯಲ್ಲಿ ಉತ್ತಮ ಅಂಕ ಪಡೆದ ವಿಕೇಶ್ ಬೊಂಟ್ರೊಟ್ಟು ವಾಣಿಜ್ಯ ವಿಭಾಗದಲ್ಲಿ ೮೬%, ರಶ್ಮಿತಾ ಪೂಂಜಾಬೆಟ್ಟು ವಾಣಿಜ್ಯ ವಿಭಾಗ ೮೮% ಅಂಕ ಗಳಿಸಿದ್ದಾರೆ. ಮತ್ತು ಮಂಗಳೂರಿನಲ್ಲಿ ನಡೆದ ಜಿಲ್ಲಾ ಯುವ ಪ್ರಶಸ್ತಿ ಪ್ರಧಾನ ಕಾರ್ಯಕ್ರಮದಲ್ಲಿ ಚಂದ್ರಹಾಸ ಬಳಂಜರವರಿಗೆ ಜಿಲ್ಲಾ ಮಟ್ಟದ ಉನ್ನತ ಪ್ರಶಸ್ತಿ ಜಿಲ್ಲಾ ಯುವ ಸಾಧಕ ಪ್ರಶಸ್ತಿ ದೊರೆತಿದ್ದು ಎಲ್ಲರನ್ನು ಸಂಘದ ವತಿಯಿಂದ ಸನ್ಮಾನಿಸಲಾಯಿತು.

umesh

ಬೆಳ್ತಂಗಡಿ : ಗುರುವಾಯನಕೆರೆ ಪೇಟೆಯ ಸನಿಹ ಸಾರ್ವಜನಿಕ ಪ್ರದೇಶದಲ್ಲಿ ಮದ್ದಡ್ಕದ ಮುಸ್ಲಿಂ ಮಹಿಳೆಯೊರ್ವರಿಗೆ ಚೂರಿ ತೋರಿಸಿ ಅವಾಚ್ಯ ಶಬ್ಧಗಳಿಂದ ನಿಂದಿಸಿ ಇರಿಯಲು ಯತ್ನಿಸಿದ ಘಟನೆಗೆ ಸಂಬಂಧಿಸಿದಂತೆ ಲಾಲ ಗ್ರಾಮದ ನಡುಗುಡ್ಡೆ ನಿವಾಸಿ ಉಮೇಶ್ ಎಂಬವರನ್ನು ಸಾರ್ವಜನಿಕರೇ ಹಿಡಿದು ಪೊಲೀಸರಿಗೊಪ್ಪಿಸಿದ ಘಟನೆ ಮೇ ೧೭ ರಂದು ನಡೆದಿದೆ. ದ್ವಿಚಕ್ರ ವಾಹನದಲ್ಲಿ ಬಂದ ಉಮೇಶ್ ಅವರು ಮಹಿಳೆಯನ್ನು ತಡೆದು ಮಾತಿನ ಚಕಮಕಿ ನಡೆದ ಬಳಿಕ ತನ್ನ ಸ್ಕೂಟರ್‌ನಲ್ಲಿದ್ದ ಚಾಕು ತೆಗೆದು ಆಕೆಗೆ ಇರಿಯಲು ಯತ್ನಿಸಿದ್ದಾರೆ. ಈ ವೇಳೆ ಗಮನಿಸಿದ ಸಾರ್ವಜನಿಕರು ಅವರಿಗೆ ತಪರಾಕಿ ನೀಡಿದ್ದು ಪೊಲೀಸರಿಗೆ ಹಸ್ತಾಂತರಿಸಿದ್ದಾರೆ.
ಸದ್ರಿ ವ್ಯಕ್ತಿ ಈ ಹಿಂದೆಯೂ ಪತ್ನಿಗೆ, ಮಕ್ಕಳಿಗೆ, ಅತ್ತೆಗೆ ಇದೇ ರೀತಿ ಚೂರಿ ತೋರಿಸಿದ್ದಾಗಿ ದೂರುಗಳಿವೆ ಎಂದು ಪೊಲೀಸರು ತಿಳಿಸಿದ್ದಾರೆ. ಅವರು ಮಾನಸಿಕ ಅಸ್ವಸ್ಥತೆಯಿಂದ ವರ್ತಿಸುತ್ತಿದ್ದಾರೆ ಎನ್ನಲಾಗಿದೆ.

5

ಬೆಳ್ತಂಗಡಿ : ಪ್ರತಿಷ್ಠಿತ ಜೆಸಿಐ ಬೆಳ್ತಂಗಡಿ ಮಂಜುಶ್ರೀ ಇದರ ವತಿಯಿಂದ ವಲಯದ ಪ್ರತಿಷ್ಠಿತ ಕಾರ್ಯಕ್ರಮಗಳೊಂದಾದ ಟೇಕ್ ಆಪ್-೨೦೧೭ ತರಬೇತಿ ಕಾರ್ಯಕ್ರಮದ ಉದ್ಘಾಟನೆಯು ಮೇ.೧೫ ರಂದು ಜೆಸಿಐ ಬೆಳ್ತಂಗಡಿ ಮಂಜುಶ್ರೀ ಭವನದಲ್ಲಿ ಜರುಗಿತು
ತರಬೇತಿ ಕಾರ್ಯಕ್ರಮದ ಉದ್ಘಾಟನೆಯನ್ನು ಬೆಳ್ತಂಗಡಿ ಸುದ್ದಿ ಬಿಡುಗಡೆ ಪತ್ರಿಕೆಯ ವ್ಯವಸ್ಥಾಪಕರಾದ ಮಂಜುನಾಥ ರೈಯವರು ದೀಪ ಬೆಳಗಿಸುವುದರ ಮೂಲಕ ನೆರವೇರಿಸಿ ಮಾತನಾಡಿ ಇಂದಿನ ಯುವ ಪೀಳಿಗೆಗೆ ಸೂಕ್ತವಾದ ತರಬೇತಿ, ಮಾರ್ಗದರ್ಶನ ಸಿಕ್ಕಾಗ ನಮ್ಮ ಸಮಾಜ ಬಲಿಷ್ಠವಾಗಲು ಸಾಧ್ಯವಾಗುತ್ತದೆ. ವ್ಯಕ್ತಿತ್ವ ವಿಕಸನದಂತಹ ಅನೇಕ ಸಮಾಜಮುಖಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುವುದರ ಜೊತೆಗೆ ಯುವಕರನ್ನು ಸಮಾಜದ ಮುಖ್ಯವಾಹಿನಿಗೆ ತರುವಲ್ಲಿ ಜೆಸಿ ಸಂಸ್ಥೆಯ ಕೊಡುಗೆ ಅನನ್ಯವಾದದ್ದು ಎಂದರು. ರಾಷ್ಟ್ರೀಯ ತರಬೇತುದಾರ ಸತೀಶ್ ಭಟ್ ಬಿಳಿನೆಲೆಯವರು ಮಾತನಾಡಿ ಜೆಸಿಯಂತಹ ಅಂತರಾಷ್ಟ್ರೀಯ ಸಂಸ್ಥೆ ಇಂದು ಉತ್ತಮವಾದ ಸಮಾಜ ಕಟ್ಟುವ ಕೆಲಸವನ್ನು ಮಾಡುತ್ತಿದ್ದು ಯುವಕರು ಹೆಚ್ಚು ಈ ಸಂಸ್ಥೆಗೆ ಸೇರಿ ತಮ್ಮ ವ್ಯಕ್ತಿತ್ವ ವಿಕಸನಗೊಳಿಸಿ ಸಮಾಜದಲ್ಲಿ ಉತ್ತಮ ನಾಗರಿಕರಾಗಿ ಬಾಳಲು ಸಾಧ್ಯವಾಗುತ್ತದೆ ಎಂದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಜೆಸಿಐ ಬೆಳ್ತಂಗಡಿ ಮಂಜುಶ್ರೀ ಅಧ್ಯಕ್ಷ ಸಂತೋಷ್ ಪಿ ಕೋಟ್ಯಾನ್ ವಹಿಸಿದ್ದರು. ನಿಕಟಪೂರ್ವಾಧ್ಯಕ್ಷ ವಲಯಾಧಿಕಾರಿ ವಸಂತ ಶೆಟ್ಟಿ ಶ್ರದ್ಧಾ, ವಲಯಾಧಿಕಾರಿ ಚಿದಾನಂದ ಇಡ್ಯಾ, ಕಾರ್ಯದರ್ಶಿ ರಂಜಿತ್ ಎಚ್.ಡಿ, ಕಾರ್ಯಕ್ರಮ ಸಂಯೋಜಕ ಪ್ರಸಾದ್ ಬಿ.ಎಸ್, ಜೂನಿಯರ್ ಜೆಸಿ ಅಧ್ಯಕ್ಷ ಮನೋಜ್ ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಘಟಕದ ಉಪಾಧ್ಯಕ್ಷ ಪ್ರಶಾಂತ್ ಲಾಲ ಅತಿಥಿಗಳನ್ನು ವೇದಿಕೆಗೆ ಆಹ್ವಾನಿಸಿದರು, ಸದಸ್ಯ ವಿಜಯ ನಿಡಿಗಲ್ ಜೇಸಿವಾಣಿ ಉದ್ಘೋಷಿಸಿದರು, ಸದಸ್ಯರಾದ ಗುರುರಾಜ್ ಹಾಗೂ ಸತೀಶ್ ಸುವರ್ಣ ರವರು ಅತಿಥಿಗಳ ಪರಿಚಯ ಪತ್ರ ಓದಿದರು, ಅಧ್ಯಕ್ಷ ಸಂತೋಷ್ ಪಿ ಕೋಟ್ಯಾನ್ ಸ್ವಾಗತಿಸಿ, ಕಾರ್ಯದರ್ಶಿ ರಂಜಿತ್ ಎಚ್.ಡಿ ಧನ್ಯವಾದವಿತ್ತರು. ನಂತರ ಜೆಸಿಐ ಬೆಳ್ತಂಗಡಿ ಮಂಜುಶ್ರೀ, ಜೆಸಿ ಮಡಂತ್ಯಾರು, ಜೆಸಿ ಉಜಿರೆ ಇದರ ವತಿಯಿಂದ ಟೇಕ್ ಆಫ್ ೨೦೧೭ ತರಬೇತಿಯನ್ನು ನಡೆಸಲಾಯಿತು.

4

ಲಾಲ : ಕುಟುಂಬ ರಾಜಕಾರಣದಿಂದ ದಾಸ್ಯತನಕ್ಕೆ ಒಳಗಾಗಿದ್ದ ಭಾರತ ಇಂದು ನರೇಂದ್ರ ಮೋದಿಯವರ ಸಂದೇಶವಾದ ಸಬ್‌ಕಾ ಸಾಥ್ ಸಬ್‌ಕಾ ವಿಕಾಸ್ ಮಂತ್ರದಡಿ ಮತ್ತೆ ಬದಲಾಗುತ್ತಿದೆ. ಯುವಜನತೆಯ ದೇಶ ಪ್ರೇಮವನ್ನು ಪ್ರಜ್ವಲಿಸುವಂತೆ ಮಾಡುವ ನಿಟ್ಟಿನಲ್ಲಿ ಯುವ ಮೋರ್ಚಾ ದೇಶಾಧ್ಯಂತ ಈ ವಿನೂತನ ಗ್ರಾಮೀಣ ಕ್ರೀಡೋತ್ಸವ ಹಮ್ಮಿಕೊಂಡಿದೆ ಎಂದು ವಿಧಾನ ಪರಿಷತ್ ಪ್ರತಿಪಕ್ಷದ ಮುಖ್ಯ ಸಚೇತಕ ಕ್ಯಾಪ್ಟನ್ ಗಣೇಶ್ ಕಾರ್ಣಿಕ್ ಹೇಳಿದರು. ಭಾರತೀಯ ಜನತಾ ಪಾರ್ಟಿ ಯುವ ಮೋರ್ಚಾ ಬೆಳ್ತಂಗಡಿ ಮಂಡಲ ಇದರ ವತಿಯಿಂದ ಪಂಡಿತ ದೀನ್‌ದಯಾಳ್ ಉಪಾಧ್ಯಾಯರ ಜನ್ಮಶತಾಬ್ಧಿ ವರ್ಷಾಚರಣೆ ಅಂಗವಾಗಿ
ಮೇ. ೧೩ ರಂದು
ಲಾಲ ಪ್ರಸನ್ನ ಶಿಕ್ಷಣ ಸಮುಚ್ಚಯದ ಮೈದಾನದಲ್ಲಿ ಹಮ್ಮಿಕೊಂಡಿದ್ದ ಹೊನಲು ಬೆಳಕಿನ ಆಹ್ವಾನಿತ ತಂಡಗಳ ಪ್ರೋ ಮಾದರಿ ಕಬಡ್ಡಿ ಮತ್ತು ಹಗ್ಗ ಜಗ್ಗಾಟ “ಪಂಡಿತ ದೀನ್‌ದಯಾಳ್ ಟ್ರೋಫಿ- ೨೦೧೭” ಇದರ ಉದ್ಘಾಟನಾ ಸಮಾರಂಭದಲ್ಲಿ ಸೈನಿಕರಿಗೆ ಗೌರವಾರ್ಪಣೆಗೈದು ಬಳಿಕ ಅವರು ಮಾತನಾಡುತ್ತಿದ್ದರು.
ಉದ್ಘಾಟನೆ ನೆರವೇರಿಸಿ ಮಾತನಾಡಿದ ಬಿಜೆಪಿ ಜಿಲ್ಲಾಧ್ಯಕ್ಷ ಸಂಜೀವ ಮಠಂದೂರು ಅವರು ಮಾತನಾಡಿ, ಕ್ರೀಡಾಕೂಟದ ಮೂಲಕ ತಾಲೂಕಿನ ೪೯ ಪಂಚಾಯತ್ ಸಮಿತಿಗಳನ್ನು ಒಂದುಗೂಡಿಸುವ ಕೆಲಸ ಆಗಿದೆ. ಗ್ರಾಮೀಣ ಕಬಡ್ಡಿ ಕ್ರೀಡೆಗೆ ಜಾಗತಿಕ ಮನ್ನಣೆ ಕೂಡುವ ಉದ್ದೇಶ ಕೂಡ ಈಡೇರಿದೆ.
ದೇಶದ ಪ್ರಧಾನಿ ನರೇಂದ್ರ ಮೋದೀಜಿ ಮತ್ತು ರಾಷ್ಟ್ರಾಧ್ಯಕ್ಷ ಅಮಿತ್‌ಶಾ ಅವರ ಕನಸಿನ ಯೋಜನೆಯಾದ ಈ ಕಾರ್ಯವನ್ನು ಬೆಳ್ತಂಗಡಿ ಮಂಡಲ ಮತ್ತು ಯುವ ಮೋರ್ಚಾ ಅಚ್ಚುಕಟ್ಟಾಗಿ ನಿರ್ವಹಿಸುವ ಮೂಲಕ ಮೆಚ್ಚುಗೆಗೆ ಪಾತ್ರವಾಗಿದೆ. ಪಂಚಾಯತ್‌ನಿಂದ ಪಾರ್ಲಿಮೆಂಟ್‌ವರೆಗೆ, ಹಳ್ಳಿಯಿಂದ ದಿಲ್ಲಿವರೆಗೆ ಯುವಕರು ಒಂದಾಗಬೇಕು, ದೈಹಿಕ ಬಲಾಢ್ಯರಾಗಬೇಕು ಎಂದರು. ಮುಖ್ಯ ಅತಿಥಿಯಾಗಿದ್ದ ರಾಜ್ಯ ಯುವ ಮೋರ್ಚಾದ ಮಹಾ ಪ್ರಧಾನ ಕಾರ್ಯದರ್ಶಿ ಬಸವರಾಜ್ ಅವರು ಮಾತನಾಡಿ, ಕ್ರಿಕೆಟ್ ಹಾವಳಿ ಮೂಲಕ ಕಬಡ್ಡಿ ಸೊರಗಿ ಹೋಗಿದ್ದ ಕಾಲದಲ್ಲಿ ಮತ್ತೆ ಅದರ ಸೊಬಗು ಉಳಿಯವಂತೆ ಯುವ ಮೋರ್ಚಾ ಮಾಡಿದೆ. ರಾಜ್ಯಾಧ್ಯಂತ ೨೫ ಸಾವಿರ ತಂಡಗಳು ಭಾಗಿಯಾಗಿ ಕ್ರೀಡಾಕೂಟ ನಡೆದು ಸದೃಢ ಭಾರತವಾಗಲಿದೆ ಎಂದರು. ಜಿಲ್ಲಾ ಯುವ ಮೋರ್ಚಾ ಅಧ್ಯಕ್ಷ ಹರೀಶ್ ಪೂಂಜ, ಮಾಜಿ ಶಾಸಕ ಪ್ರಭಾಕರ ಬಂಗೇರ, ಅಯ್ಯಪ್ಪ ದೇವಸ್ಥಾನ ಬಳಿಯಿಂದ ಮೆರವಣಿಗೆ ಉದ್ಘಾಟಿಸಿದ ಮಾಜಿ ಶಾಸಕ ರುಕ್ಮಯ್ಯ ಪೂಜಾರಿ, ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ಬಿಜೆಪಿ ಬೆಳ್ತಂಗಡಿ ಮಂಡಲದ ಅಧ್ಯಕ್ಷ ರಂಜನ್ ಜಿ ಗೌಡ ಇವರುಗಳು ಮಾತನಾಡಿದರು. ವೇದಿಕೆಯಲ್ಲಿ ಮಂಗಳೂರು ವಿಭಾಗ ಸಹಪ್ರಭಾರಿ ಪ್ರತಾಪಸಿಂಹ ನಾಯಕ್, ಜಿಲ್ಲಾ ಬಿಜೆಪಿ ಉಪಾಧ್ಯಕ್ಷೆ ಶಾರದಾ ಆರ್ ರೈ, ತಾ.ಪಂ ಉಪಾಧ್ಯಕ್ಷೆ ವೇದಾವತಿ, ಜಿಲ್ಲಾ ಪ್ರ. ಕಾರ್ಯದರ್ಶಿ ಕೆ ಕೊರಗಪ್ಪ ನಾಯ್ಕ, ಹಿಂದುಳಿದ ವರ್ಗಗಳ ಜಿಲ್ಲಾ ನಾಯಕ ಕೃಷ್ಣಪ್ಪ ಕಲ್ಲಡ್ಕ, ಜಿ.ಪಂ ಸದಸ್ಯೆ ಸೌಮ್ಯಲತಾ ಜಯಂತ ಗೌಡ, ತಾ.ಪಂ ಸದಸ್ಯರಾದ ಸುಧಾರಕ ಬಿ.ಎಲ್, ಕೊರಗಪ್ಪ ಗೌಡ ಅರಣಪಾದೆ, ಎಂ ಶಶಿಧರ ಕಲ್ಮಂಜ, ವಿಜಯ ಗೌಡ ವೇಣೂರು, ತಾ.ಪಂ ಸ್ಥಾಯಿ ಸಮಿತಿ ಅಧ್ಯಕ್ಷ ಸುಧೀರ್ ಆರ್ ಸುವರ್ಣ, ಪಕ್ಷದ ಕಾರ್ಯದರ್ಶಿಗಳಾದ ಪ್ರಭಾಕರ ಶೆಟ್ಟಿ ಉಪ್ಪಡ್ಕ ಮತ್ತು ಸೀತಾರಾಮ ಬಿ.ಎಸ್ ಇವರುಗಳು ಉಪಸ್ಥಿತರಿದ್ದರು. ಬಿಜೆಪಿ ಯುವ ಮೋರ್ಚಾ ತಾ| ಅಧ್ಯಕ್ಷ ಸಂಪತ್ ಬಿ ಸುವರ್ಣ ಪ್ರಾಸ್ತಾವಿಕವಾಗಿ ಮಾತನಾಡಿ, ಸ್ವಾಗತಿಸಿದರು. ತುಳಸಿದಾಸ್ ಪೈ ಮಡಂತ್ಯಾರು ಕಾರ್ಯಕ್ರಮ ನಿರೂಪಿಸಿದರು. ಯವ ಮೋರ್ಚಾ ಪ್ರ. ಕಾರ್ಯದರ್ಶಿ ರಕ್ಷಿತ್ ಶೆಟ್ಟಿ ವಂದಿಸಿದರು. ಕ್ರೀಡಾಕೂಟದ ಸಂಚಾಲಕರುಗಳಾಗಿದ್ದ ಮಿಥುನ್ ಕುಲಾಲ್, ಚಂದ್ರಕಾಂತ ಗೌಡ ಮಚ್ಚಿನ, ದೀಕ್ಷಿತ್ ಶೆಟ್ಟಿ ಮುದ್ದಿಗೆ, ರಾಜೇಶ್ ಮಿತ್ತಬಾಗಿಲು, ಹಾಗೂ ಯುವ ಮೋರ್ಚಾದ ಪದಾಧಿಕಾರಿಗಳು ಹಾಗೂ ಸದಸ್ಯರುಗಳು ಉಪಸ್ಥಿತರಿದ್ದು ಸಹಕಾರ ನೀಡಿದರು.

3

ಉಜಿರೆ : ಸಂತ ಅಂತೋನಿ ಚರ್ಚ್‌ನ ಬಹುದಿನಗಳ ಬೇಡಿಕೆಯಾಗಿರುವ ಚರ್ಚ್ ಸಭಾಭವನ ನಿರ್ಮಾಣಕ್ಕೆ ಕ್ಷಣಗಣನೆ ಪ್ರಾರಂಭಗೊಂಡಿದೆ. ಸುಮಾರು ರೂ. ೨.೫೦ ಕೋಟಿ ವೆಚ್ಚದಲ್ಲಿ ಅತ್ಯಾಧುನಿಕ ಸೌಲಭ್ಯದೊಂದಿಗೆ ಸಮುದಾಯ ಭವನ ನಿರ್ಮಾಣಗೊಳ್ಳಲಿದೆ. ಇದರ ಶಿಲಾನ್ಯಾಸ ಕಾರ್ಯಕ್ರಮವು ಮೇ.೧೪ ರಂದು ಶಾಸಕ ಕೆ. ವಸಂತ ಬಂಗೇರ ನೆರವೇರಿಸಿ ಶುಭ ಹಾರೈಸಿದರು.

ಮಂಗಳೂರಿನ ಧರ್ಮಪ್ರಾಂತ್ಯದ ಮೊನ್ಸಿಂಜೋರ್ ವಂ.ಫಾ| ಡೇನಿಸ್ ಮೋರಾಸ್ ಪ್ರಭು ದಿವ್ಯ ಬಲಿ ಪೂಜೆ ಅರ್ಪಿಸಿ ಆಶೀರ್ವಚನ ನೆರವೇರಿಸಿ ಶುಭ ಹಾರೈಸಿದರು. ಈ ಸಂದರ್ಭದಲ್ಲಿ ಉಜಿರೆ ಗ್ರಾ.ಪಂ ಅಧ್ಯಕ್ಷ ಶ್ರೀಧರ ಪೂಜಾರಿ, ಅಹಮದಾಬಾದ್‌ನ ಧರ್ಮಗುರು ಮೊನ್ಸಿಂಜೋರ್, ವಂ.ಫಾ| ರೋಕಿ ಪಿಂಟೊ, ಅನುಗ್ರಹ ಶಿಕ್ಷಣ ಸಂಸ್ಥೆಗಳ ಪ್ರಾಂಶುಪಾಲರಾದ ವಂ.ಫಾ| ಉದಯ್ ಜೋಸೆಫ್ ಫೆರ್ನಾಂಡೀಸ್, ಚರ್ಚ್ ಪಾಲನಾ ಮಂಡಳಿಯ ಉಪಾಧ್ಯಕ್ಷ ಅರುಣ್ ರೆಬೆಲ್ಲೊ ಉಪಸ್ಥಿತರಿದ್ದರು. ಚರ್ಚ್‌ನ ಪ್ರಧಾನ ಧರ್ಮಗುರು ವಂ.ಫಾ| ಜೊಸೆಫ್ ಮಸ್ಕರೇನಸ್ ಸರ್ವರನ್ನು ಸ್ವಾಗತಿಸಿದರು. ಪಾಲನಾ ಮಂಡಳಿಯ ಕಾರ್ಯದರ್ಶಿ ವಲೇರಿಯನ್ ರೊಡ್ರಿಗಸ್ ವಂದಿಸಿದರು.
ಶ್ರೀಮತಿ ಲವಿನಾ ಫೆರ್ನಾಂಡಿಸ್ ಕಾರ್ಯಕ್ರಮ ನಿರೂಪಿಸಿದರು. ಬೆಳ್ತಂಗಡಿ ತಾಲೂಕು ಕಾಂಗ್ರೆಸ್ ಸಮಿತಿಯ ಪ್ರಧಾನ ಕಾರ್ಯದರ್ಶಿ ಗ್ರೇಶಿಯಾಸ್ ವೇಗಸ್, ಗುತ್ತಿಗೆದಾರ ಅನಿಲ್ ಡಿಸೋಜ, ಗುತ್ತಿಗೆದಾರ ಹಾಗೂ ಮಾಜಿ ಪಾಲನಾ ಮಂಡಳಿ ಉಪಾಧ್ಯಕ್ಷ ಸಿಲ್ವೆಸ್ಟರ್ ಮೊನೀಸ್ ಸ್ಟ್ಯಾನಿ ಪಿಂಟೊ, ಧರ್ಮ ಭಗಿನಿಯರು, ಪಾಲನಾ ಮಂಡಳಿಯ ಸರ್ವಸದಸ್ಯರು, ಗುರಿಕಾರರು ಸಮಸ್ತ ಕ್ರೈಸ್ತ ಭಾಂಧವರು ಉಪಸ್ಥಿತರಿದ್ದರು.

2

ಬೆಳ್ತಂಗಡಿ : ಕಳೆದ ಎಪ್ರಿಲ್ ತಿಂಗಳಲ್ಲಿ ನಡೆದ ಎಸ್.ಎಸ್.ಎಲ್.ಸಿ. ಪಬ್ಲಿಕ್ ಪರೀಕ್ಷೆಯ ಫಲಿತಾಂಶ ಮೇ ೧೨ ರಂದು ಪ್ರಕಟಗೊಂಡಿದ್ದು, ಬೆಳ್ತಂಗಡಿ ತಾಲೂಕಿನ ಸರಕಾರಿ, ಅನುದಾನಿತ ಹಾಗೂ ಅನುದಾನ ರಹಿತ ಸೇರಿದಂತೆ ಒಟ್ಟು ೬೫ ಪ್ರೌಢ ಶಾಲೆಗಳಿಂದ ಪರೀಕ್ಷೆಗೆ ಕುಳಿತ ೩,೮೫೫ ವಿದ್ಯಾರ್ಥಿ-ವಿದ್ಯಾರ್ಥಿನಿಯರಲ್ಲಿ ೩,೨೫೯ ಮಂದಿ ಉತ್ತೀರ್ಣರಾಗಿ ತಾಲೂಕಿಗೆ ಶೇ ೮೪.೫೪ ಫಲಿತಾಂಶ ಲಭಿಸಿದೆ. ಕಳೆದ ವರ್ಷ ತಾಲೂಕಿಗೆ ಶೇ ೮೭.೯೮ ಫಲಿತಾಂಶ ಬಂದಿದ್ದು, ಕಳೆದ ವರ್ಷಕ್ಕೆ ಹೋಲಿಸಿದಲ್ಲಿ ಈ ವರ್ಷ ಫಲಿತಾಂಶದಲ್ಲಿ ಶೇ ೩.೪೪ರಷ್ಟು ಇಳಿಕೆಯಾಗಿದೆ.
ಬೆಳ್ತಂಗಡಿ ತಾಲೂಕಿನ ೩೬ ಸರಕಾರಿ ಪ್ರೌಢ ಶಾಲೆ, ೯ ಅನುದಾನಿತ ಪ್ರೌಢ ಶಾಲೆ, ಹಾಗೂ ೨೦ ಅನುದಾನಿತ ರಹಿತ ಪ್ರೌಢ ಶಾಲೆ ಸೇರಿದಂತೆ ಒಟ್ಟು ೬೫ ಪ್ರೌಢ ಶಾಲೆಗಳಿಂದ ೧,೯೦೬ ವಿದ್ಯಾರ್ಥಿಗಳು ಮತ್ತು ೧,೯೪೯ ವಿದ್ಯಾರ್ಥಿನಿಯರು ಸೇರಿದಂತೆ ಒಟ್ಟು ೩,೮೫೫ ಮಂದಿ ಪರೀಕ್ಷೆಗೆ ಹಾಜರಾಗಿದ್ದರು. ಇವರಲ್ಲಿ ೧,೫೫೩ ವಿದ್ಯಾರ್ಥಿಗಳು ಮತ್ತು ೧,೭೦೬ ವಿದ್ಯಾರ್ಥಿನಿಯರು
ಸೇರಿದಂತೆ ಒಟ್ಟು ೩,೨೫೯ ಮಂದಿ ಉತ್ತೀರ್ಣರಾಗಿ ಶೇ ೮೪.೫೪ ಫಲಿತಾಂಶ ದಾಖಲಾಗಿದೆ. ವಿದ್ಯಾರ್ಥಿಗಳು ಶೇ ೮೧.೪೮ ಹಾಗೂ ವಿದ್ಯಾರ್ಥಿನಿಯರು ಶೇ ೮೭.೫೩ ಉತ್ತೀರ್ಣರಾಗಿದ್ದು, ಫಲಿತಾಂಶದಲ್ಲಿ ವಿದ್ಯಾರ್ಥಿನಿಯರು ಮೇಲುಗೈ ಸಾಧಿಸಿದ್ದಾರೆ. ಪರೀಕ್ಷೆಗೆ ಹಾಜರಾದ ೩,೮೫೫ ವಿದ್ಯಾರ್ಥಿಗಳಲ್ಲಿ ೫೯೬ ಮಂದಿ ಅನುತ್ತೀರ್ಣಗೊಂಡಿದ್ದಾರೆ.
೨೨೩ ವಿದ್ಯಾರ್ಥಿಗಳಿಗೆ ಎ+ ಶ್ರೇಣಿ:
ತಾಲೂಕಿನ ೬೫ ಪ್ರೌಢ ಶಾಲೆಗಳಿಂದ ಉತ್ತೀರ್ಣರಾದ ೩,೨೫೯ ವಿದ್ಯಾರ್ಥಿ-ವಿದ್ಯಾರ್ಥಿನಿಯರಲ್ಲಿ ೨೨೩ ಮಂದಿ ವಿದ್ಯಾರ್ಥಿಗಳು ಎ+ ಶ್ರೇಣಿಯನ್ನು ಪಡೆದುಕೊಂಡಿದ್ದಾರೆ. ೬೧೮ ಮಂದಿ ಎ ಶ್ರೇಣಿ, ೮೨೬ ಮಂದಿ ಬಿ+ ಶ್ರೇಣಿ, ೮೮೫ ಮಂದಿ ಬಿ ಶ್ರೇಣಿ, ೬೦೯ ಮಂದಿ ಸಿ+ ಶ್ರೇಣಿ, ೯೮ ಮಂದಿ ವಿದ್ಯಾರ್ಥಿಗಳು ಸಿ ಶ್ರೇಣಿಯನ್ನು ಪಡೆದುಕೊಂಡಿದ್ದಾರೆ.
ಅತೀ ಹೆಚ್ಚು ಎ+ ಶ್ರೇಣಿ ಪಡೆದ ಶಾಲೆಗಳು:
ಸರಕಾರಿ ಶಾಲೆಗಳಲ್ಲಿ ಮೊರಾರ್ಜಿ ದೇಸಾಯಿ ಮಚ್ಚಿನ ೧೯, ಸರಕಾರಿ ಪ್ರೌಢ ಶಾಲೆ ಮಚ್ಚಿನ ೫, ಸರಕಾರಿ ಪ್ರೌಢ ಶಾಲೆ ಗೇರುಕಟ್ಟೆ ೫, ಹಾಗೂ ಖಾಸಗಿ ಶಾಲೆಗಳಲ್ಲಿ ನಾರಾವಿ ಪ್ರೌಢ ಶಾಲೆ ೧೦, ಎಸ್.ಡಿ.ಎಂ ಸೆಕೆಂಡರಿ ಶಾಲೆ ಉಜಿರೆ ೧೨, ಸೈಂಟ್‌ಮೇರಿಸ್ ಲಾಲ ೧೮, ಸೈಂಟ್ ಪೀಟರ್ ಅಳದಂಗಡಿ ೫, ಸೈಂಟ್ ಸಾವಿಯೋ ಬೆಂದ್ರಾಳ ೯, ಎಸ್.ಡಿ.ಎಂ ಆಂಗ್ಲ ಮಾಧ್ಯಮ ಉಜಿರೆ ೧೩, ಎಸ್.ಡಿ.ಎಂ ಆಂಗ್ಲ ಮಾಧ್ಯಮ ಧರ್ಮಸ್ಥಳ ೭, ಹೋಲಿ ರೆಡಿಮರ್ ಆಂ.ಮಾ.ಪ್ರೌಢ ಶಾಲೆ ಬೆಳ್ತಂಗಡಿ ೬, ಅನುಗ್ರಹ ಆಂಗ್ಲ ಮಾಧ್ಯಮ ಉಜಿರೆ ೨೫, ವಾಣಿ ಆಂ.ಮಾ. ಹಳೆಕೋಟೆ ೭, ಸೇ.ಹಾ. ಮಡಂತ್ಯಾರು ೧೭ ಅತಿ ಹೆಚ್ಚು ಎ+ ಶ್ರೇಣಿ ಪಡೆದ ಶಾಲೆಗಳಾಗಿವೆ.
೧೦ ಪ್ರೌಢ ಶಾಲೆಗಳಿಗೆ ಶೇ ೧೦೦ ಫಲಿತಾಂಶ:
ತಾಲೂಕಿನ ೨ ಸರಕಾರಿ ಮತ್ತು ೮ ಖಾಸಗಿ ಸೇರಿದಂತೆ ಒಟ್ಟು ೧೦ ಪ್ರೌಢ ಶಾಲೆಗಳು ಶೇ ೧೦೦ ಫಲಿತಾಂಶವನ್ನು ಪಡೆದುಕೊಂಡ ದಾಖಲೆಯನ್ನು ನಿರ್ಮಿಸಿದೆ. ಸರಕಾರಿ ಶಾಲೆಗಳಲ್ಲಿ ಸ.ಪ್ರೌ. ಶಾಲೆ ಗುರುವಾಯನಕೆರೆ ಮತ್ತು ಮೊರಾರ್ಜಿ ದೇಸಾಯಿ ವಸತಿ ಶಾಲೆ ಮಚ್ಚಿನ ಶೇ ೧೦೦ ಫಲಿತಾಂಶ ಪಡೆದ ಕೀರ್ತಿಗೆ ಈ ವರ್ಷ ಪಾತ್ರವಾಗಿದೆ. ಖಾಸಗಿ ಶಾಲೆಗಳಲ್ಲಿ ಸೈಂಟ್ ಮೇರಿಸ್ ಪ್ರೌ.ಶಾಲೆ ಲಾಯಿಲ, ಕುಂಭಶ್ರೀ ಆಂಗ್ಲ ಮಾಧ್ಯಮ ಶಾಲೆ ನಿಟ್ಟಡೆ, ದಿವ್ಯಜ್ಯೋತಿ ಆಂಗ್ಲ ಮಾಧ್ಯಮ ಕಾಯರ್ತಡ್ಕ, ಸೈಂಟ್ ಸಾವಿಯೋ ಬೆಂದ್ರಾಳ, ಹೋಲಿ ರೆಡೀಮರ್ ಆಂ.ಮಾ. ಪ್ರೌ.ಶಾಲೆ ಬೆಳ್ತಂಗಡಿ, ಸೈಂಟ್ ಪೀಟರ್ ಅಳದಂಗಡಿ, ಎಸ್.ಡಿ.ಎಂ ಧರ್ಮಸ್ಥಳ, ಎಸ್.ಡಿ.ಎಂ ಆಂ.ಮಾ ಉಜಿರೆ ಶಾಲೆಗಳು ಶೇ ೧೦೦ ಫಲಿತಾಂಶ ಪಡೆದುಕೊಂಡ ಹಿರಿಮೆಗೆ ಪಾತ್ರವಾಗಿದೆ.
ಶೇ ೯೦ಕ್ಕಿಂತ ಹೆಚ್ಚು ಫಲಿತಾಂಶ ದಾಖಲು:
ಸರಕಾರಿ ಶಾಲೆಗಳಲ್ಲಿ ಮೊರಾರ್ಜಿ ದೇಸಾಯಿ ಮುಂಡಾಜೆ, ಸ.ಪ್ರೌ. ಶಾಲೆ ಪೆರ್ಲಬೈಪಾಡಿ, ಸ.ಪ.ಪೂ. ಕಾಲೇಜು ಕೊಕ್ರಾಡಿ, ಸ.ಪ್ರೌ.ಶಾಲೆ ಸವಣಾಲು,ಸ.ಪ.ಪೂ.ಕಾಲೇಜು ಕೊಯ್ಯೂರು, ಸ.ಪ್ರೌ.ಶಾಲೆ ನೇಲ್ಯಡ್ಕ, ಸ.ಪ.ಪೂ.ಕಾ. ಕೊಕ್ಕಡ, ಸ.ಪ್ರೌ.ಶಾ. ಹಳೆಪೇಟೆ ಉಜಿರೆ ಹಾಗೂ ಅನುದಾನಿತ ಶಾಲೆಗಳಲ್ಲಿ ನಾರಾವಿ ಪ್ರೌಢ ಶಾಲೆ, ಸಂತ ತೆರೆಸಾ ಬೆಳ್ತಂಗಡಿ, ಎಸ್.ಡಿ.ಎಂ ಸೆಕೆಂಡರಿ ಉಜಿರೆ, ಎಸ್.ಡಿ.ಎಂ ಧರ್ಮಸ್ಥಳ, ಅನುದಾನ ರಹಿತ ಶಾಲೆಗಳಲ್ಲಿ ಅನುಗ್ರಹ ಆಂಗ್ಲ ಮಾಧ್ಯಮ ಉಜಿರೆ, ಸಂತ ತೆರೆಸಾ ಆಂ.ಮಾ.ಬೆಳ್ತಂಗಡಿ, ವಾಣಿ ಆಂ.ಮಾ. ಹಳೆಕೋಟೆ, ಸೈಂಟ್ ಪಾವಲ್ಸ್ ನಾರಾವಿ, ಗುಡ್‌ಫ್ಯೂಚರ್ ಆಂ.ಮಾ. ಪಿಲ್ಯ, ಆತ್ಮಾನಂದ ಸರಸ್ವತಿ ಶಾಲೆ ದೇವರಗುಡ್ಡೆ, ಸೇ.ಹಾ.ಆಂ.ಮಾ.ಶಾಲೆ ಮಡಂತ್ಯಾರು, ರೆಹಮಾನಿಯಾ ಪ್ರೌ. ಶಾಲೆ ಕಾಜೂರು ಶೇ ೯೦ಕ್ಕಿಂತ ಹೆಚ್ಚು ಫಲಿತಾಂಶ ಪಡೆದುಕೊಂಡಿದೆ.
ಸರಕಾರಿ ಶಾಲೆಗಳಲ್ಲಿ ಗುರುವಾಯನಕೆರೆ ಸರಕಾರಿ ಪ್ರೌಢ ಶಾಲೆ ಸತತ ೬ನೇ ಬಾರಿಗೆ ಶೇ ೧೦೦ ಫಲಿತಾಂಶ ಪಡೆದ ರಾಜ್ಯದ ಏಕೈಕ ಸರಕಾರಿ ಪ್ರೌಢ ಶಾಲೆ ಎಂಬ ದಾಖಲೆಯನ್ನು ಪಡೆದುಕೊಂಡಿದೆ. ಮುಖ್ಯೋಪಾಧ್ಯಾಯರು, ಶಿಕ್ಷಕರು ಸೇರಿದಂತೆ ವಿವಿಧ ಸಮಸ್ಯೆಗಳನ್ನು ಎದುರಿಸುತ್ತಿರುವ ತಾಲೂಕಿನ ೩೬ ಸರಕಾರಿ ಶಾಲೆಗಳು ಶೇ ೫೭ಕ್ಕಿಂತ ಹೆಚ್ಚು ಫಲಿತಾಂಶ ಪಡೆದುಕೊಳ್ಳುವಲ್ಲಿ ಯಶಸ್ವಿಯಾಗಿದೆ. ಕಳೆದ ಬಾರಿ ಶೇ ೧೦೦ ಫಲಿತಾಂಶ ಪಡೆದ ಪೆರ್ಲಬೈಪಾಡಿ ಪ್ರೌಢ ಶಾಲೆಯ ಓರ್ವ ವಿದ್ಯಾರ್ಥಿಗೆ ಇಂಗ್ಲೀಷ್‌ನಲ್ಲಿ ಕಡಿಮೆ ಅಂಕ ಬಂದಿದ್ದು, ಮರು ಮೌಲ್ಯಮಾನಕ್ಕೆ ಹಾಕಲಾಗಿದ್ದು, ಆತ ಉತ್ತೀರ್ಣಗೊಂಡರೆ ಶೇ ೧೦೦ ಫಲಿತಾಂಶ ದಾಖಲಾಗಲಿದೆ. ಖಾಸಗಿ ಶಾಲೆಗಳಲ್ಲಿ ಕುಂಭಶ್ರೀ ಆಂಗ್ಲ ಮಾಧ್ಯಮ ವಸತಿ ಶಾಲೆ ನಿಟ್ಟಡೆ ಸತತ ೭ನೇ ಬಾರಿಗೆ ಶೇ ೧೦೦ ಫಲಿತಾಂಶ ಪಡೆದ ಕೀರ್ತಿಗೆ ಪಾತ್ರವಾಗಿದೆ.
ಈ ಬಾರಿಯ ಎಸ್.ಎಸ್.ಎಲ್.ಸಿ ಪಬ್ಲಿಕ್ ಪರೀಕ್ಷೆಯಲ್ಲಿ ಅಂಕಗಳಿಸುವಿಕೆಯಲ್ಲಿ ಉಜಿರೆ ಅನುಗ್ರಹ ಆಂಗ್ಲ ಮಾಧ್ಯಮ ಪ್ರೌಢ ಶಾಲೆಯ ವಿದ್ಯಾರ್ಥಿಗಳು ಪ್ರಥಮ, ದ್ವಿತೀಯ ಹಾಗೂ ತೃತೀಯ ಸ್ಥಾನವನ್ನು ಪಡೆದುಕೊಂಡ ಹಿರಿಮೆಗೆ ಪಾತ್ರರಾಗಿದ್ದಾರೆ.
ಜೋಯಲ್ ಆಂಟನಿ ೬೨೦ ಅಂಕಗಳಿಸಿ ತಾಲೂಕಿನಲ್ಲಿ ಪ್ರಥಮ, ಇದೇ ಶಾಲೆಯ ಅಧಿತಿ ಪ್ರಭು ೬೧೯ ಅಂಕಗಳಿಸಿ ದ್ವಿತೀಯ ಹಾಗೂ ಇದೇ ಶಾಲೆಯ ನಿಯೋಗ್ ಮೋಹನ್ ೬೧೭ ಅಂಕಗಳಿಸಿ ತೃತೀಯ ಸ್ಥಾನ ಪಡೆದುಕೊಂಡಿದ್ದಾರೆ.
ಸರಕಾರಿ ಪ್ರೌಢ ಶಾಲೆಗಳಲ್ಲಿ ಮೊರಾರ್ಜಿ ದೇಸಾಯಿ ಮಚ್ಚಿನದ ನವೀನ ೬೧೧ ಅಂಕಗಳಿಸಿ ಪ್ರಥಮ ಹಾಗೂ ಇದೇ ಶಾಲೆಯ ಜಿನ್ಸಿ ಕೆ., ಸ.ಪ್ರೌ.ಶಾಲೆ ಮಚ್ಚಿನದ ಸಪ್ರೀನಾ ಬಾನು, ಸ.ಪ್ರೌ.ಶಾಲೆ ಕಾಶಿಪಟ್ನದ ಪ್ರಜೇಶ್, ಸ.ಪ.ಪೂ.ಕಾ. ಗೇರುಕಟ್ಟೆಯ ಮೋಹಿನಿ ಹೆಚ್. ತಲಾ ೬೦೨ ಅಂಕ ಗಳಿಸಿ ದ್ವಿತೀಯ ಮತ್ತು ಸ.ಪ್ರೌ. ಶಾಲೆ ಮಚ್ಚಿನದ ಜಯಶ್ರೀ ೬೦೦ ಅಂಕಗಳಿಸಿ ತೃತೀಯ ಸ್ಥಾನ, ಸ.ಪ.ಪೂ.ಕಾಲೇಜು ಪುಂಜಾಲಕಟ್ಟೆಯ ಎಸ್. ಪೂರ್ಣೇಶ್ ಶೆಟ್ಟಿ ೫೯೮ ಅಂಕಗಳಿಸಿ ನಾಲ್ಕನೇ ಸ್ಥಾನ, ಸ.ಪ್ರೌ.ಶಾಲೆ ನಾರಾವಿಯ ಮೇಘ ೫೯೭ ಅಂಕ ಗಳಿಸಿ ಐದನೇಯ ಸ್ಥಾನ, ಗುರುವಾಯನಕೆರೆ ಪ್ರೌಢ ಶಾಲೆಯ ಪವಿತ್ರ ಮತ್ತು ಸ.ಪ್ರೌ.ಶಾಲೆ ನಾವೂರಿನ ಯಶ್ಮಿತಾ ತಲಾ ೫೯೪ ಅಂಕಗಳಿಸಿ ಆರನೇ ಸ್ಥಾನ, ಗುರುವಾಯನಕೆರೆ ಸ. ಪ್ರೌ.ಶಾಲೆಯ ಶ್ರಾವ್ಯ ೫೯೩ ಅಂಕಗಳಿಸಿ ಏಳನೇ ಸ್ಥಾನ ಪಡೆದುಕೊಂಡಿದ್ದಾರೆ.
ಅನುದಾನಿತ ಪ್ರೌಢ ಶಾಲೆಗಳಲ್ಲಿ ನಾರಾವಿ ಪ್ರೌ. ಶಾಲೆಯ ಚೈತ್ರಾ ೬೧೧ ಅಂಕಗಳಿಸಿ ಪ್ರಥಮ, ಇದೇ ಶಾಲೆಯ ಸ್ವಾತಿ ಪಿ.ಹೆಗಡೆ ೬೦೩ ಅಂಕಗಳಿಸಿ ದ್ವಿತೀಯ, ಎಸ್.ಡಿ.ಎಂ ಸೆಕೆಂಡರಿ ಉಜಿರೆಯ ನಂದಿನಿ ೫೯೫ ಅಂಕಗಳಿಸಿ ತೃತೀಯ ಸ್ಥಾನ, ಸೇ.ಹಾ. ಮಡಂತ್ಯಾರಿನ ಅಪೇಕ್ಷಾ ಕೆ. ೫೯೪ ಅಂಕ ಗಳಿಸಿ ನಾಲ್ಕನೇ ಸ್ಥಾನ ಪಡೆದುಕೊಂಡಿದ್ದಾರೆ.
ಅನುದಾನ ರಹಿತ ಪ್ರೌಢ ಶಾಲೆಗಳಲ್ಲಿ ಸೇ.ಹಾ.ಮಡಂತ್ಯಾರಿನ ಶ್ರೇಯಾ ೬೧೬ ಅಂಕಗಳಿಸಿ ನಾಲ್ಕನೇ ಸ್ಥಾನ, ಸೈಂಟ್ ಸಾವಿಯೋ ಬೆಂದ್ರಾಳದ ಡಯಾನ ಮತ್ತು ವಾಣಿ ಆಂ. ಮಾ. ಶಾ.ಹಳೆಕೋಟೆಯ ವಿಮರ್ಶ ತಲಾ ೬೧೫ ಅಂಕಗಳಿಸಿ ಐದನೇ ಸ್ಥಾನ, ಸೇ.ಹಾ. ಆಂ.ಮಾ.ಶಾ. ಮಡಂತ್ಯಾರಿನ ಸಾತ್ವಿಕ್ ಜಿ. ಶೆಟ್ಟಿ ೬೧೪ ಅಂಕಗಳಿಸಿ ಆರನೇ ಸ್ಥಾನ, ಎಸ್.ಡಿ.ಎಂ ಆಂ.ಮಾ. ಉಜಿರೆಯ ಶಿವಪ್ರಸಾದ್ ೬೧೩ ಅಂಕಗಳಿಸಿ ಏಳನೇ ಸ್ಥಾನ, ವಾಣಿ ಆಂ.ಮಾ.ಶಾ.ಹಳೆಕೋಟೆಯ ಪ್ರಿಯ ೬೧೨ ಅಂಕಗಳಿಸಿ ಎಂಟನೇ ಸ್ಥಾನ, ಅನುಗ್ರಹ ಆಂ.ಮಾ. ಉಜಿರೆಯ ವಿನಿತ್ ಸಿಕ್ವೇರಾ ೬೧೦ ಅಂಕಗಳಿಸಿ ಒಂಭತ್ತನೇಯ ಸ್ಥಾನ ಪಡೆದುಕೊಂಡಿದ್ದಾರೆ.

1

ಬೆಳ್ತಂಗಡಿ ಕರ್ನಾಟಕ ರಾಜ್ಯ ಪದವಿ ಪೂರ್ವ ಶಿಕ್ಷಣ ಮಂಡಳಿ ಎಪ್ರಿಲ್ ತಿಂಗಳಲ್ಲಿ ನಡೆಸಿದ ದ್ವಿತೀಯ ಪಿ.ಯು.ಸಿ. ಪಬ್ಲಿಕ್ ಪರೀಕ್ಷೆಯ ಫಲಿತಾಂಶವು ಮೇ 12 ರಂದು ಎಲ್ಲಾ ಕಾಲೇಜುಗಳಲ್ಲಿ ಪ್ರಕಟಗೊಂಡಿದ್ದು, ತಾಲೂಕಿನ ಖಾಸಗಿ ಮತ್ತು ಸರಕಾರಿ ಪ. ಪೂ ಕಾಲೇಜುಗಳು ಸೇರಿ ಒಟ್ಟು 20 ಕಾಲೇಜು ಮೂಲಕ ಪರೀಕ್ಷೆ ಬರೆದಿದ್ದ 3512 ಮಂದಿಯ ಪೈಕಿ 3328 ಮಂದಿ ಉತ್ತೀರ್ಣರಾಗಿದ್ದು ತಾಲೂಕಿಗೆ ಶೇ. 94.76 ಫಲಿತಾಂಶ ಬಂದಿದೆ. ಕಾಲೇಜುವಾರು ಸಂಪೂರ್ಣ ವಿವರಗಳನ್ನು ಒಳ ಪುಟ ೧೬ರಲ್ಲಿ ಪ್ರಕಟಿಸಲಾಗಿದೆ. ಬೆಳ್ತಂಗಡಿ ತಾಲೂಕಿ ನಲ್ಲಿ ಸರಕಾರಿ ಕಾಲೇಜುಗಳಲ್ಲಿ ಅರಸಿನಮಕ್ಕಿ ಪ.ಪೂ. ಕಾಲೇಜು ಶೇ. 100 ಫಲಿತಾಂಶ ಪಡೆದು ಸರಕಾರಿ ಕಾಲೇಜುಗಳಲ್ಲಿ ಅತೀ ಹೆಚ್ಚು ಫಲಿತಾಂಶ ಪಡೆದ ಕೀರ್ತಿಗೆ ಪಾತ್ರವಾಗಿದೆ. ಪುಂಜಾಲಕಟ್ಟೆ ಸರಕಾರಿ ಪ.ಪೂ. ಕಾಲೇಜು ಶೇ ೯೬.೫೩ ಫಲಿತಾಂಶ ಪಡೆದು ದ್ವಿತೀಯ ಸ್ಥಾನದಲ್ಲಿದೆ. ಅಂತೆಯೇ ಖಾಸಗಿ ಕಾಲೇಜುಗಳಲ್ಲಿ ಪ್ರಥಮ ಸ್ಥಾನವನ್ನು ಉಜಿರೆ ಎಸ್.ಡಿ.ಎಂ. ಸನಿವಾಸ ಕಾಲೇಜು (ರೆಸಿಡೆನ್ಶಿಯಲ್) ಶೇ.೯೯.೩೪ ಫಲಿತಾಂಶ ಪಡೆದರೆ ಅನುಗ್ರಹ ಪ.ಪೂ ಕಾಲೇಜು ಶೇ. ೯೮.೩೩ ಫಲಿತಾಂಶ ಪಡೆದು ದ್ವಿತೀಯ ಸ್ಥಾನದಲ್ಲಿದೆ.
ತಾಲೂಕಿನಲ್ಲಿ ಕಲಾ ವಿಭಾಗದಲ್ಲಿ ಎಸ್.ಡಿ.ಎಂ. ಉಜಿರೆ ಪದವಿ ಪೂರ್ವ ಕಾಲೇಜಿನ ಭಾರ್ಗವಿ ಆರ್ ಶೇಠ್ ೫೫೮ ಅಂಕ ಪಡೆದು ಪ್ರಥಮ, ವಾಣಿಜ್ಯ ವಿಭಾಗದಲ್ಲಿ ಅರ್ಜುನ್ ಶೆಣೈ ೫೮೬ ಅಂಕಗಳಿಸಿ ಪ್ರಥಮ, ವಿಜ್ಞಾನ ವಿಭಾಗದಲ್ಲಿ ಉಜಿರೆ ಎಸ್.ಡಿ.ಎಂ. ಪ. ಪೂರ್ವ ಕಾಲೇಜಿನ ಪ್ರಣವ್ ಭಟ್ ೫೯೪ ಅಂಕ ಪಡೆದು ಪ್ರಥಮ ಸ್ಥಾನ ಪಡೆದುಕೊಂಡಿದ್ದಾರೆ.
ಪ್ರಣವ್ ಭಟ್‌ಗೆ ರಾಜ್ಯ ಮಟ್ಟದಲ್ಲಿ ತೃತೀಯ ಸ್ಥಾನ :
ಉಜಿರೆ ಎಸ್‌ಡಿಎಂ ಪ.ಪೂ. ಕಾಲೇಜಿನ ವಿಜ್ಞಾನ ವಿಭಾಗದ ವಿದ್ಯಾರ್ಥಿ ಪ್ರಣವ್ ಭಟ್ ಅವರಿಗೆ ಈ ಬಾರಿ ಪರೀಕ್ಷೆಯಲ್ಲಿ ೫೯೪ ಅಂಕಗಳು ಬಂದಿದ್ದು ಇದು ರಾಜ್ಯಮಟ್ಟದಲ್ಲಿ ಮೂರನೇ ಸ್ಥಾನದಲ್ಲಿದೆ ಎಂದು ಕಾಲೇಜಿನ ಪ್ರಾಂಶುಪಾಲ ದಿನೇಶ್ ಚೌಟ ತಿಳಿಸಿದ್ದಾರೆ.
ಈ ಬಾರಿ ಕಲಾ ವಿಭಾಗದಲ್ಲಿ ವಾಣಿ ಪ. ಪೂ. ಕಾಲೇಜು, ಅನುಗ್ರಹ ಪ. ಪೂ ಕಾಲೇಜು, ಅರಸಿನಮಕ್ಕಿ ಸರಕಾರಿ ಪ. ಪೂ ಕಾಲೇಜು ಶೇ. ೧೦೦ ಫಲಿತಾಂಶ ದಾಖಲಿಸಿದೆ.
ಅಂತೆಯೇ ವಾಣಿಜ್ಯ ವಿಭಾಗದಲ್ಲೂ ಅರಸಿನಮಕ್ಕಿ ಸರಕಾರಿ ಪ. ಪೂ ಕಾಲೇಜು ಶೇ. ೧೦೦ ಫಲಿತಾಂಶ ಪಡೆದುಕೊಂಡಿದೆ.
ವಿಜ್ಞಾನ ವಿಭಾಗದಲ್ಲಿ ಎಸ್‌ಡಿಎಂ ರೆಸಿಡೆನ್ಶಿಯಲ್ ಕಾಲೇಜು ಶೇ. ೯೯.೩೪ ಅತಿ ಹೆಚ್ಚು ಫಲಿತಾಂಶ ಪಡೆದುಕೊಂಡಿದ್ದರೆ, ವಾಣಿ ಪ. ಪೂ ಕಾಲೇಜು ಶೇ. ೯೮.೧೬ ಫಲಿತಾಂಶ ಪಡೆದುಕೊಂಡು ದ್ವಿತೀಯ ಸ್ಥಾನದಲ್ಲಿದೆ. ವಾಣಿಜ್ಯ ವಿಭಾಗದಲ್ಲಿ ಶ್ರೀ ಗುರುದೇವ ಕಾಲೇಜು ಬಿ ವಿಭಾಗ ಶೇ. ೧೦೦ ಫಲಿತಾಂಶ ದಾಖಲಿಸಿದೆ.
ಎಸ್.ಡಿ.ಎಂ. ಪ.ಪೂ. ಕಾಲೇಜಿನಲ್ಲಿ ೨೨೭ ಮಂದಿ, ವಾಣಿ ಪ.ಪೂ. ಕಾಲೇಜಿನಲ್ಲಿ ೭೯ ಮಂದಿ, ಸೇ.ಹಾ. ಪ.ಪೂ. ಕಾಲೇಜು ಮಡಂತ್ಯಾರಿನಲ್ಲಿ ೪೬ ಮಂದಿ, ಉಜಿರೆ ಎಸ್.ಡಿ.ಎಂ. ಸನಿವಾಸ ಕಾಲೇಜಿನಲ್ಲಿ ೬೦ ಮಂದಿ, ಸೈಂಟ್ ಆಂಟನಿ ಪ.ಪೂ ಕಾಲೇಜು ನಾರಾವಿಯಲ್ಲಿ ೨೮ ಮಕ್ಕಳು ಹೆಚ್ಚು ಸಂಖ್ಯೆಯಲ್ಲಿ ಡಿಸ್ಟಿಂಕ್ಷನ್ ಪಡೆದುಕೊಂಡಿದ್ದಾರೆ. ಉಳಿದ ಎಲ್ಲ ಕಾಲೇಜುಗಳೂ ಕೂಡ ಡಿಸ್ಟಿಂಕ್ಷನ್ ಗಳಿಸಿಕೊಂಡಿವೆ.

ksmca copy

ksmca2ಬೆಳ್ತಂಗಡಿ : ಕೆಎಸ್‌ಎಂಸಿಎ ಯ ಸಮಾವೇಶ ಇಂದು(ಮೇ.17) ಬೆಳ್ತಂಗಡಿ ಸಭಾಗಂಣದಲ್ಲಿ ನಡೆಯಿತು.

charmadi1

charmadi

charmadi.2

charmadi.3ಚಾರ್ಮಾಡಿ ಕಣಿವೆ ರಸ್ತೆಯ ಮೂರನೇ ತಿರುವಿನಲ್ಲಿ ಇಂದು ಕೇರಳ ನೋಂದಾವಣೆಯ ಬಸ್ಸು ಪ್ರಪಾತಕ್ಕೆ ಉರುಳಿ ಬಿದ್ದಿದೆ ಎಂಬ ಮಾಹಿತಿ ಲಭ್ಯವಾಗಿದೆ. ಬಸ್ಸಿನಲ್ಲಿದ್ದ ಪ್ರಯಾಣಿಕರ ಪೈಕಿ ಇಬ್ಬರು ಮೃತ ಪಟ್ಟಿದ್ದು, ಹಲವರಿಗೆ ಗಾಯಗಳಾಗಿವೆ ಎಂದು ಮಾಹಿತಿ ಲಭ್ಯವಾಗಿದೆ. ಮೃತ ದೇಹವನ್ನು ಸರಕಾರಿ ಆಸ್ಪತ್ರೆಗೆ ಸ್ಥಳಾಂತರಿಸಲಾಗಿದೆ. ಗಾಯಾಳುಗಳಿಗೆ ವಿವಿಧ ಆಸ್ಪತ್ರಗಳಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.

ಬೆಳ್ತಂಗಡಿ ತಾ.ಪಂ  ಅಧ್ಯಕ್ಷರಾಗಿ ದಿವ್ಯಜ್ಯೋತಿ: ಉಪಾಧ್ಯಕ್ಷೆ ವೇದಾವತಿ

Tuesday, May 10th, 2016 | Suddi Belthangady | no responses ಬೆಳ್ತಂಗಡಿ : ಬೆಳ್ತಂಗಡಿ ತಾಲೂಕು ಪಂಚಾಯತಿ ಅಧ್ಯಕ್ಷ- ಉಪಾಧ್ಯಕ್ಷ ಸ್ಥಾನಗಳಿಗೆ ಮೆ ೧೦ರಂದು… ಮುಂದೆ ಓದಿ

ಅಲ್ಪಸಂಖ್ಯಾತ, ಹಿಂದುಳಿದ ವರ್ಗದ ನಿಗಮ ಸಾಲ ಸೌಲಭ್ಯ

Tuesday, May 10th, 2016 | Suddi Belthangady | no responses ಬೆಳ್ತಂಗಡಿ : ಕರ್ನಾಟಕ ಮಹರ್ಷಿ ವಾಲ್ಮಿಕಿ ಪರಿಶಿಷ್ಟ ಪಂಗಡಗಳ ಅಭಿವೃದ್ದಿ ನಿಗಮ, ಡಾ.… ಮುಂದೆ ಓದಿ

ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ

ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ

Thursday, August 13th, 2015 | suddiblt | no responses ಮುಂದೆ ಓದಿ

ನಮ್ಮ ಬಗ್ಗೆ

ಮೊದಲಿಗೆ ಕೇವಲ ಒಂದು ಹಾಳೆಯಲ್ಲಿ ಪ್ರಕಟವಾಗುತ್ತಿದ್ದ ಬೆಳ್ತಂಗಡಿ ತಾಲೂಕಿನ “ಸುದ್ದಿ ಬಿಡುಗಡೆ “ಪತ್ರಿಕೆ ಇಂದು ಪ್ರತಿದಿನ  22
.. ಮುಂದೆ ಓದಿ

ಸಲಹೆ- ಸೂಚನೆ

ನಿಮ್ಮ ಸಲಹೆ ಸೂಚನೆಗಳಿಗೆ ಹಾರ್ದಿಕ ಸ್ವಾಗತ

ಇಲ್ಲಿ ಕ್ಲಿಕ್ಕಿಸಿ

Copyright © 2017 Suddinews.com . All Rights Reserved.
^ Back to Top