Wed 26 Apr 2017, 4:02PM

ಹೆಚ್ಚಿನ ಸುದ್ದಿಗಳು

ಬೆಳ್ತಂಗಡಿ : ಗುರುವಾಯನಕೆರೆ ಉಪಕೇಂದ್ರದಲ್ಲಿ ತುರ್ತು ಕಾಮಗಾರಿಯನ್ನು ಕೈಗೊಳ್ಳಬೇಕಾದ ಹಿನ್ನಲೆಯಲ್ಲಿ ಎ. 26 ಮತ್ತು 28ರಂದು ಗುರುವಾಯನಕೆರೆ ಉಪಕೇಂದ್ರದಿಂದ ಹೊರಹೊಮ್ಮುವ ವೇಣೂರು ಮತ್ತು ಆರಂಬೋಡಿ ಫೀಡರ್‌ಗಳಲ್ಲಿ ಬೆಳಿಗ್ಗೆ 9.00ರಿಂದ ಸಂಜೆ 5.00ರ ತನಕ ವಿದ್ಯುತ್ ನಿಲುಗಡೆಯಾಗಲಿದೆ ಎಂದು ಮೆಸ್ಕಾಂ ಪ್ರಕಟಣೆಯಲ್ಲಿ ತಿಳಿಸಿದೆ.

beo1

beoಬೆಳ್ತಂಗಡಿ: ಶಿಕ್ಷಕರ ವಿವಿಧ ಬೇಡಿಕೆಗಳನ್ನು ಮುಂದಿಟ್ಟು ಅಖಿಲ ಭಾರತ ಪ್ರಾಥಮಿಕ ಶಿಕ್ಷಕರ ಫೆಡರೇಶನ್ ವತಿಯಿಂದ ರಾಷ್ಟ್ರಾಧ್ಯಂತ ಹೋರಾಟಗಳನ್ನು ನಡೆಸಲಾಗುತ್ತಿದ್ದು ಅದರ ಎರಡನೇ ಹಂತದ ಕಾರ್ಯಕ್ರಮವಾಗಿ ಎ. 25 ರಂದು ದೇಶಾಧ್ಯಂತ ಎಲ್ಲಾ ಶಿಕ್ಷಣ ಇಲಾಖೇ ಕಚೇರಿ ಮುಂದೆ ಶಿಕ್ಷಕರ ಏಕದಿನ ಮೌನ ಧರಣಿ ನಡೆಯಲಿದ್ದು ಈ ಹಿನ್ನೆಲೆಯಲ್ಲಿ ಬೆಳ್ತಂಗಡಿ ಬಿಇಒ ಕಚೇರಿ ಎದುರು ಕೂಡ ನಡೆಯಿತು.
7ನೇ ವೇತನ ಆಯೋಗದ ಶಿಫಾರಸ್ಸುಗಳನ್ನು ಎಲ್ಲಾ ರಾಜ್ಯಗಳಲ್ಲಿ ಜಾರಿಗೆ ತರಬೇಕು, ನೂತನ ಪಿಂಚಣಿ ಯೋಜನೆ ರದ್ದುಗೊಳಿಸಿ ಹಳೇ ಪಿಂಚಣಿ ಯೋಜನೆ ಜಾರಿಗೆ ತರಬೇಕು, ಪ್ರಾಥಮಿಕ ಶಿಕ್ಷಣ ಮಂಡಳಿ ರಚಿಸಬೇಕು, ರಾಜ್ಯದ ಎಲ್ಲಾ ಶಾಲೆಗಳಲ್ಲಿ ಪೂರ್ವ ಪ್ರಾಥಮಿಕ ಶಿಕ್ಷಣ ಎಲ್‌ಕೆಜಿ, ಯುಕೆಜಿ ಆರಂಭಿಸಬೇಕು, ಶಾಲೆಗೊಬ್ಬ ಮುಖ್ಯೋಪಾಧ್ಯಾಯ ನೇಮಕ, ಶಿಕ್ಷಕ ಶಿಕ್ಷಕಿ ವಿದ್ಯಾರ್ಥಿ ಅನುಪಾತ ಮಾಡಬೇಕು ಎಂಬಿತ್ಯಾಧಿ ಪ್ರಮುಖ ಬೇಡಿಕೆಗಳು ಈ ಬಾರಿಯ ಹೋರಾಟದಲ್ಲಿತ್ತು.

beet rokars copyಬೆಳ್ತಂಗಡಿ: ಬೀಟ್ ರಾಕರ‍್ಸ್ ಡ್ಯಾನ್ಸ್ ಅಕಾಡೆಮಿ ಬೆಳ್ತಂಗಡಿ ಇದರ 6ನೇ ವರ್ಷದ ವಾರ್ಷಿಕೋತ್ಸವದ ಪ್ರಯುಕ್ತ ಎ. 22 ರಂದು ಬೆಳ್ತಂಗಡಿ ಮಾರಿಗುಡಿ ಮೈದಾನದಲ್ಲಿ ಬೆಳಕು ಶಬ್ಧತರಂಗದ ಅದ್ಭುತ ನೃತ್ಯ ಸಂಗೀತ ಸೆಲೆಬ್ರೆಟಿ ನೈಟ್ ವಿಶೇಷ ಕಾರ್ಯಕ್ರಮ, ರಾಜ್ಯ ಮಟ್ಟದ ಡ್ಯಾನ್ಸ್ ಸ್ಪರ್ಧೆಯೊಂದಿಗೆ ನಡೆಯಿತು.
ಅಧ್ಯಕ್ಷತೆಯನ್ನು ಕರಾವಳಿ ಕರ್ನಾಟಕ ಡ್ಯಾನ್ಸ್ ಅಕಾಡಮಿ ಯೂನಿಯನ್ ಅಧ್ಯಕ್ಷ ರಾಜೇಶ್ ಕಣ್ಣೂರು ವಹಿಸಿದ್ದರು.
ಮುಖ್ಯ ಅತಿಥಿಗಳಾಗಿ ಪಟ್ಟಣ ಪಂಚಾಯತ್ ಅಧ್ಯಕ್ಷ ಮುಗುಳಿ ನಾರಾಯಣ ರಾವ್, ಅನುಗ್ರಹ ಟ್ರೈನಿಂಗ್ ಕಾಲೇಜಿನ ಪ್ರಾಂಶುಪಾಲ ತಲ್‌ಹತ್ ಎಂ. ಜಿ, ಜೇಸಿಐ ಬೆಳ್ತಂಗಡಿ ಮಂಜುಶ್ರೀ ಅಧ್ಯಕ್ಷ ಸಂತೋಷ್ ಪಿ ಕೋಟ್ಯಾನ್, ಹೈಕೋರ್ಟ್ ನ್ಯಾಯವಾದಿ ಹರೀಶ್ ಪೂಂಜ, ಸುವರ್ಣ ಸಾಂಸ್ಕೃತಿಕ ಪ್ರತಿಷ್ಠಾನದ ಅಧ್ಯಕ್ಷ ಸಂಪತ್ ಬಿ ಸುವರ್ಣ, ತುಳು ಚಲನಚಿತ್ರ ನಿರ್ಮಾಪಕ ಹರೀಶ್ ರಾವ್, ಸಕಲೇಶ್‌ಪುರದ ರಿದಂ ಕೀಪಝ್ ಡ್ಯಾನ್ಸ್ ಅಕಾಡಮಿ ಅಧ್ಯಕ್ಷ ಕೃಷ್ಣೇ ಗೌಡ, ರಾಜ್ಯ ಸರಕಾರಿ ನೌಕರರ ಸಂಘದ ಸದಸ್ಯ ಕೆ ಧರಣೇಂದ್ರ ಕುಮಾರ್ ಜೈನ್, ಹೋಲಿ ರಿಡೀಮರ್ ಆಂಗ್ಲ ಮಾಧ್ಯಮ ಶಾಲೆ ಬೆಳ್ತಂಗಡಿಯ ಮುಖ್ಯೋಪಾಧ್ಯಾಯ ರೆ. ಫಾ ಅನಿಲ್ ಪ್ರಕಾಶ್ ಡಿಸಿಲ್ವ ಇವರುಗಳು ಶುಭ ಕೋರಿದರು.

beet rokars karate copyಬೆಳ್ತಂಗಡಿ: ಬೀಟ್ ರಾಕರ‍್ಸ್ ಡ್ಯಾನ್ಸ್ ಅಕಾಡಮಿ ಮತ್ತು ಶ್ರೀ ಸಾಯಿ ಕಾಸ್ಟ್ಯೂಮ್ಸ್ ವರ್ಲ್ಡ್ ಎಂಬ ಹೆಸರಿನಲ್ಲಿ ಬೆಳ್ತಂಗಡಿಯಲ್ಲಿ ಕಳೆದ ೬ ವರ್ಷಗಳಿಂದ ಕಾರ್ಯಾಚರಿಸುತ್ತಿರುವ ಸಂಸ್ಥೆಯ ವತಿಯಿಂದ ಮುಂದಕ್ಕೆ ಅನುಭವಿ ಕರಾಟೆ ಶಿಕ್ಷಕರಿಂದ ಕರಾಟೆ ತರಬೇತಿ ನೀಡಲು ಮತ್ತು ಕಲಾಸಕ್ತ ವಿದ್ಯಾರ್ಥಿಗಳಿಗೆ ನಾಟಕ ಮತ್ತು ರಂಗ ಅಭಿನಯ ತರಬೇತಿ ನೀಡುವ ವಿಭಾಗವು ಎ. 22 ರಂದು ಉದ್ಘಾಟನೆಗೊಂಡಿತು.
ಜೇಸಿಐ ಬೆಳ್ತಂಗಡಿ ಮಂಜುಶ್ರೀ ಇದರ ಪೂರ್ವಾಧ್ಯಕ್ಷ, ಸಂಘಟಕ ಹಾಗೂ ಉದ್ಯಮಿ ಪ್ರಮೋದ್ ಆರ್ ನಾಯಕ್ ಉದ್ಘಾಟನೆ ನೆರವೇರಿಸಿದರು. ಈ ಸಂದರ್ಭ ಜೇಸಿಐ ವಲಯಾಧ್ಯಕ್ಷ ಚಿದಾನಂದ ಇಡ್ಯ, ಸುದ್ದಿ ಬಿಡುಗಡೆ ವ್ಯವಸ್ಥಾಪಕ ಮಂಜುನಾಥ ರೈ, ಬೀಟ್ ರಾಕರ‍್ಸ್ ಡ್ಯಾನ್ಸ್ ಅಕಾಡಮಿ ಮುಖ್ಯಸ್ಥ ಜಿತೇಶ್ ಕುಮಾರ್, ಕರಾಟೆ ತರಬೇತುದಾರರು ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.

arasinamakki7

arasinamakki4 copy

arasinamakki5

arasinamakki6

arasinamakki

arasinamakki1

arasinamakki2

arasinamakki3ಅರಸಿನಮಕ್ಕಿ ಶ್ರೀನಿವಾಸ ಕಲ್ಯಾಣೋತ್ಸವವು ವಿಜೃಂಭಣೆಯಿಂದ ಎ. 22ರಂದು ನಡೆಯಿತು.

barengayaನಿಡ್ಲೆ : ನಿಸರ್ಗ ಯುವಜನೇತರ ಮಂಡಲ(ರಿ) ಬರೆಂಗಾಯ ಹಾಗೂ ದ.ಕ ಜಿಲ್ಲಾ ಅಮೆಚ್ಯೂರ್ ಜಿಲ್ಲಾ ಕಬಡ್ಡಿ ಅಸೋಸಿಯೇಷನ್ (ರಿ) ಇದರ ಸಹಯೋಗದೊಂದಿಗೆ ದ.ಕ, ಉಡುಪಿ, ಕಾಸರಗೊಡು ಜಿಲ್ಲೆಯ ೭೦ಕೆ.ಜಿ ವಿಭಾಗದ ಪುರುಷರ ಅಂತರ್ ಜಿಲ್ಲಾ ಮಟ್ಟದ ಹೊನಲು ಬೆಳಕಿನ ಕಬಡ್ಡಿ ಪಂದ್ಯಾಟವು ಹಿ.ಪ್ರಾ ಶಾಲೆ ಬರೆಂಗಾಯದಲ್ಲಿ ಎ. 22ರಂದು ಜರಗಿತು.
ನಿಡ್ಲೆ ಗ್ರಾ.ಪಂ ಅಧ್ಯಕ್ಷರಾದ ಶ್ರೀಮತಿ ಶುಭ ದೇವಧರ್ ಅಧ್ಯಕ್ಷತೆ ವಹಿಸಿದ್ದರು. ಬೆಂಗಳೂರು ಹೈಕೋರ್ಟ್ ನ್ಯಾಯಾವಾದಿ ಹರೀಶ್ ಪೂಂಜ ಕಾರ್ಯಕ್ರಮ ಉದ್ಘಾಟಿಸಿದರು. ಮುಖ್ಯ ಅತಿಥಿಗಳಾಗಿ ಬೆಳ್ತಂಗಡಿ ಸಹಾಯಕ ಯುವ ಸಬಲೀಕರಣ ಮತ್ತು ಕ್ರೀಡಾಧಿಕಾರಿ ಪ್ರಭಾಕರ ನಾರಾವಿ, ಕಳೆಂಜ ಗ್ರಾ.ಪಂ ಸದಸ್ಯೆ ಶ್ರೀಮತಿ ಸುಶೀಲ ವಸಂತ ಗೌಡ, ನಿಡ್ಲೆ ಗ್ರಾ.ಪಂ ಉಪಾಧ್ಯಕ್ಷ ರುಕ್ಮಯ ಪೂಜಾರಿ ಪೊರ್ಕಳ, ನಿಡ್ಲೆ ಗ್ರಾ.ಪಂ ಸದಸ್ಯರಾದ ಹರೀಶ್ ಪೊಂರ್ದಿಲ, ಶ್ರೀಮತಿ ಲಲಿತಾ, ಬರೆಂಗಾಯ ನಿಸರ್ಗ ಯುವ ಜನೇತರ ಮಂಡಲ ಅಧ್ಯಕ್ಷರಾದ ಪುನೀತ್ ಪೊಂರ್ದಿಲ, ಬರೆಂಗಾಯ ಶಾಲಾ ಎಸ್.ಡಿ.ಎಂ.ಸಿ ಅಧ್ಯಕ್ಷ ಕೃಷ್ಣ ಕುಮಾರ್ ಕಾಟ್ಲ, ಬರೆಂಗಾಯ ಜ್ಯೋತಿ ಹಳೆ ವಿದ್ಯಾರ್ಥಿ ಸಂಘದ ಅಧ್ಯಕ್ಷ ಹೇಮಂತ್ ಗೌಡ ಕಜೆ, ಬರೆಂಗಾಯ ಶ್ರೀಕೃಷ್ಣ ಜನ್ಮಾಷ್ಟಮಿ ಸಮಿತಿ ಅಧ್ಯಕ್ಷ ಪ್ರವೀಣ್ ಹೆಬ್ಬರ್ ಪೊಂರ್ದಿಲ ಆಗಮಿಸಿದ್ದರು. ವೇದಿಕೆಯಲ್ಲಿ ತಾ.ಪಂ ಮಾಜಿ ಉಪಾಧ್ಯಕ್ಷ ವಿಷ್ಣು ಮರಾಠೆ, ಸನ್ಮಾನಗೊಳ್ಳಲಿದ್ದ ಬರೆಂಗಾಯ ಹಿ.ಪ್ರಾ ಶಾಲಾ ಮುಖ್ಯೋಪಾಧ್ಯಾಯ ಗೋಪಾಲ, ಮೂಡಬಿದ್ರೆ ಆಳ್ವಾಸ್ ಶಿಕ್ಷಣ ಸಂಸ್ಥೆಯ ಕನ್ನಡ ಉಪನ್ಯಾಸಕರಾದ ಚಂದ್ರಶೇಖರ್ ಗೌಡ ಕಜೆ ಉಪಸ್ಥಿತರಿದ್ದರು.

mundajeಮುಂಡಾಜೆ : ಯಂಗ್ ಚಾಲೆಂಜರ‍್ಸ್ ಕ್ರೀಡಾ ಸಂಘ ಮುಂಡಾಜೆ ಇದರ ವತಿಯಿಂದ ಆರ್.ಎನ್. ಭಿಡೆ ಸ್ಮರಣಾರ್ಥ ಇಂದು(ಎ.22) ಓವರ್ ಆರ್ಮ್ ಕ್ರಿಕೆಟ್ ಪಂದ್ಯಾಟದ ಉದ್ಘಾಟನಾ ಸಮಾರಂಭವು ಭಿಡೆ ನಾರಾಯಣ ಭಟ್ ಕ್ರೀಡಾಂಗಣ ಜೂನಿಯರ್ ಕಾಲೇಜು ಮುಂಡಾಜೆಯಲ್ಲಿ ನಡೆಯಿತು.
ಕಾರ್ಯಕ್ರಮದ ಉದ್ಘಾಟನೆಯನ್ನು ನ್ಯಾಯವಾದಿ ಶೈಲೇಶ್ ಠೋಸರ್ ನೆರವೇರಿಸಿದರು. ಅಧ್ಯಕ್ಷತೆಯನ್ನು ಯಂಗ್ ಚಾಲೆಂಜರ‍್ಸ್ ಕ್ರೀಡಾ ಸಂಘದ ಅಧ್ಯಕ್ಷ ಆಶ್ರಫ್ ಆಲಿಕುಂಞ ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ಮುಂಡಾಜೆ ಗ್ರಾ.ಪಂ ಸದಸ್ಯರುಗಳಾದ ನಾರಾಯಣ ಗೌಡ ದೇವಸ್ಯ, ಚೆನ್ನಕೇಶವ ನಾಯ್ಕ, ಸುರೇಶ್ ಹೆಗ್ಡೆ, ಗಣೇಶ್ ಬಂಗೇರ, ಮುಂಡಾಜೆ ಶತಾಬ್ದಿ ವಿದ್ಯಾಲಯ ಸಮಿತಿ ಜೊತೆ ಕಾರ್ಯದರ್ಶಿ ಅರವಿಂದ ಹೆಬ್ಬಾರ್ ಭಾಗವಹಿಸಿದ್ದರು. ಯಂಗ್ ಚಾಲೆಂಜರ‍್ಸ್ ಕ್ರೀಡಾ ಸಂಘದ ಸಂಚಾಲಕ ನಾಮದೇವ ರಾವ್, ಶಶಿಧರ ಠೋಸರ್ ಉಪಸ್ಥಿತರಿದ್ದರು.

charmadi.jpg1

charmadiಚಾರ್ಮಾಡಿ : ಗುರುವಾರ ಮಧ್ಯರಾತ್ರಿ ಮಂಗಳೂರಿನಿಂದ ಭದ್ರಾವತಿ ಕಡೆ ತೆರಳುತ್ತಿದ್ದ ಡಿಸೇಲ್ ಟ್ಯಾಂಕರ್ ಚಾರ್ಮಾಡಿ ಘಾಟಿಯಲ್ಲಿ ಪ್ರಪಾತಕ್ಕೆ ಬಿದ್ದು,  ಜಖಂಗೊಂಡಿದೆ. ಚಾಲಕನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.

gerukatte

gerukatte1ಗೇರುಕಟ್ಟೆ : ಕೋಳಿ ಸಾಗಾಟ ಮಾಡುತ್ತಿದ್ದ ಪಿಕಪ್ ವಾಹನ ಮಗುಚಿ ಬಿದ್ದ ಘಟನೆ ಗೇರುಕಟ್ಟೆಯ ರೇಶ್ಮೆ ಕ್ರಾಸ್ ಬಳಿ ನಡೆದಿದೆ.

Bisu Jathre Photo copy

Bisu Jathre Photo copy1

Bisu Jathre Photo copy2ಉಜಿರೆ: ವಿಷು ಜಾತ್ರೆ ಸಂದರ್ಭ ಧರ್ಮಸ್ಥಳದಲ್ಲಿ ಗುರುವಾರ ರಾತ್ರಿ ಬ್ರಹ್ಮರಥೋತ್ಸವ ನಡೆಯಿತು.
ರಾಜ್ಯ ವಿವಿಧ ಭಾಗಗಳಿಂದ ಬಂದ ಸುಮಾರು ಇನ್ನೂರು ಮಂದಿ ಕಲಾವಿದರು ಶಂಖ, ತಾಳ, ಬ್ಯಾಂಡ್, ಚೆಂಡೆ ವಾದನದ ಮೂಲಕ ಕಲಾ ಸೇವೆ ಮಾಡಿದರು. ಸಹಸ್ರಾರು ಮಂದಿ ಭಕ್ತಾದಿಗಳು ರಥೋತ್ಸವ ವೀಕ್ಷಿಸಿ ಧನ್ಯತೆ ಪಡೆದರು.

¸swacchthe

sw

WhatsApp Image 2017-04-21 at 11.18ಗುರುವಾಯನಕೆರೆಯಲ್ಲಿ ಎಸ್.ಡಿ.ಎಂ ವಿದ್ಯಾರ್ಥಿಗಳಿಂದ ಹಾಗೂ ಊರ ಸಂಘ ಸಂಸ್ಥೆಗಳಿಂದ ಸ್ವಚ್ಛತಾ ಕಾರ್ಯಕ್ರಮವು ಇಂದು ನಡೆಯಿತು.

adike mara yanthra copyಉಜಿರೆ: ಇಲ್ಲಿನ ಎಸ್‌ಡಿಎಂ ಪಾಲಿಟೆಕ್ನಿಕ್ ಕಾಲೇಜಿನ ವಿದ್ಯಾರ್ಥಿಗಳು ಕೃಷಿ ಕೆಲಸಕ್ಕೆ ಪೂರಕವಾಗಿರುವ ಮತ್ತು ಅತ್ಯಂತ ಕಡಿಮೆ ದರದಲ್ಲಿ ಬಳಕೆ ಮಾಡಬಹುದಾದ ರೀತಿಯ ಕೆಲವೊಂದು ಯಂತ್ರೋಪಕರಣಗಳನ್ನು ತಮ್ಮದೇ ಕಲ್ಪನೆಯಲ್ಲಿ ಆವಿಷ್ಕರಿಸಿದ್ದು ಉತ್ತಮ ಮಾರುಕಟ್ಟೆ ಕೇಂದ್ರೀಕರಿಸುವ ಎಲ್ಲಾ ಅರ್ಹತೆಗಳನ್ನು ಪಡೆದುಕೊಂಡಿದೆ.
ವಿದ್ಯಾರ್ಥಿಗಳು ತಯಾರುಗೊಳಿಸಿದ ಕೆಲವೊಂದು ಆವಿಷ್ಕಾರಗಳಲ್ಲಿ ಅಡಿಕೆ ಮರಕ್ಕೆ ಹತ್ತುವ ಮತ್ತು ಔಷಧಿ ಸಿಂಪಡಿಸುವ ಯಂತ್ರವೂ ಒಂದು.
ಈ ಪ್ರಾಜೆಕ್ಟ್‌ಗೆ ಕೇವಲ 10 ಸಾವಿರ ರೂ. ಗಳು ಮಾತ್ರ ಖರ್ಚು ತಗುಲಲಿದೆ.
ಆವಿಷ್ಕಾರ ತಂಡದ ಸದಸ್ಯ ವಿದ್ಯಾರ್ಥಿಗಳು ಯಾರ‍್ಯಾರು?
ಭರತ್ ಎಚ್, ಅಕಾಶ್ ಕೆ, ಅಶ್ವಿನಿ, ದರ್ಶನ್ ಕುಮಾರ್, ದಿವ್ಯಾ ಎಸ್, ಮತ್ತು ಉತ್ತಮ್ ಎನ್ ಇವರ ತಂಡ ಈ ಆವಿಷ್ಕಾರ ನಡೆಸಿ ಯಶಸ್ಸು ಸಾಧಿಸಿದೆ. ಇವರಿಗೆ ಅವನೀಶ್ ಅವರು ಮಾರ್ಗದರ್ಶನ ನೀಡಿದ್ದಾರೆ. ಈ ಯಂತ್ರವು ಸುಲಭವಾಗಿ ಅಡಿಕೆ ಮರ ಹತ್ತಲು ಮತ್ತು ಅಡಿಕೆ ಬೆಳೆಗೆ ಕೀಟ ನಾಶಕ ಸಿಂಪಡಿಸಲು ಸಹಾಯಕವಾಗಿ ಕಾರ್ಯನಿರ್ವಹಿಸುತ್ತದೆ.
ಉಪಯೋಗಗಳು:
ಇಂದಿನ ದಿನಗಳಲ್ಲಿ ಅಡಿಕೆ ಮರಕ್ಕೆ ಮದ್ದನ್ನು ಸಿಂಪಡಿಸುವುದು ಕಷ್ಟವಾಗಿದೆ. ಅದನ್ನು ಅರಿತು ಈ ಯಂತ್ರ ಸಿದ್ದಪಡಿಸಲಾಗಿದೆ. 12 ವೋಲ್ಟ್ ವೈಪರ್ ಮೋಟಾರು ಬಳಸಿಕೊಂಡು ಮೇಲಕ್ಕೆ ಹತ್ತುವ ಅತ್ಯಂತ ಸರಳ ಮಾದರಿಯಿಂದ ರೂಪಿತವಾಗಿದೆ. ಕೇಲವ ಎರಡೇ ನಿಮಿಷದಲ್ಲಿ ಅಡಿಕೆ ಮರ ಏರುವ ಸಾಮರ್ಥ್ಯ ಹೊಂದಿರುವ ಈ ಯಂತ್ರ ಡಿ.ಸಿ ಮೋಟರನ್ನು ಬಳಸಿ ಲಂಬವಾಗಿ ಮತ್ತು ಅಡ್ಡವಾಗಿ, ಒಂದು ಅಡಿಕೆ ಮರ ಕೇಂದ್ರೀಕರಿಸಿ ಪಕ್ಕದ 7-8 ಮರಗಳಿಗೆ ಕೀಟನಾಶಕ ಸಿಂಪಡಿಸುವ ಸಾಮರ್ಥ್ಯ ಹೊಂದಿದೆ.
ಸೆಲ್ಫ್ ಲುಕ್ಕಿಂಗ್ ನಿಯಮದ ಪ್ರಕಾರ ಕಾರ್ಯನಿರ್ವಹಿಸುವ ಈ ಯಂತ್ರವು ಪರಿಸರ ಸ್ನೇಹಿಯಾಗಿದ್ದು 12 ವೋಲ್ಟೇಜ್ ಬ್ಯಾಟರಿ ಮೂಲಕವೂ ಕಾರ್ಯನಿರ್ವಹಿಸುವ ಕ್ಷಮತೆ ಹೊಂದಿದೆ. ಕೇವಲ ಎರಡೇ ಸೆಕುಂಡುಗಳಲ್ಲಿ ಮರಕ್ಕೆ ಯಂತ್ರವನ್ನು ಅಳವಡಿಸಬಹುದಾಗಿದೆ. ಯಂತ್ರಕ್ಕೆ ನೆಲದಿಂದ ಕೀಟ ನಾಶಕವನ್ನು ಪವರ್ ಸ್ಪ್ರೇಯರ್ ಅಥವಾ ಗಟರ್ ಪಂಪ್‌ನ ಮೂಲಕ ಪೈಪ್‌ಮೂಲಕ ಕಳುಹಿಸಿಕೊಡಬಹುದಾಗಿದೆ. ಇದರ ನಿಯಂತ್ರಣವನ್ನು ಕೇವಲ ಒಬ್ಬನೇ ವ್ಯಕ್ತಿ ಮಾಡಬಹುದಾಗಿದ್ದು, ಅಡಿಕೆ ಕೃಷಿ ಕ್ಷೇತ್ರದಲ್ಲಿ ಬಹಳ ಬೇಡಿಕೆಯ ಕೂಲಿ ಕಾರ್ಮಿಕರ ಕೊರತೆಯ ಜಾಗವನ್ನು ಈ ಯಂತ್ರ ತುಂಬುವುದರಲ್ಲಿ ಸಂದೇಹವಿಲ್ಲ.
ಇದೇ ಯಂತ್ರದ ಮೂಲಕ ಮುಂದಕ್ಕೆ ಗೊನೆ ಕೀಳುವುದು ಮತ್ತು ಕಂಪ್ಯೂಟರೀಕೃತವಾಗಿ ಅಭಿವೃದ್ಧಿ ಪಡಿಸುವ ಉದ್ಧೇಶವಿದೆ ಎಂದು ಪ್ರಾಧ್ಯಾಪಕರಾದ ಅವನೀಶ್ ಅವರು ತಿಳಿಸುತ್ತಾರೆ.

thrisha copyಕನ್ಯಾಡಿ 1 ಇಲ್ಲಿಯ ಕಂಬಳದಡ್ಡ ಮನೆಯ ಸುರೇಶ್ ಗೌಡ ಮತ್ತು ಸತ್ಯ ದಂಪತಿಯ ಪುತ್ರಿ ತ್ರಿಶಾಳ 3ನೇ ವರ್ಷದ ಹುಟ್ಟುಹಬ್ಬವನ್ನು ಎ. 17ರಂದು ಆಚರಿಸಲಾಯಿತು.

bhavish copyಚಿಬಿದ್ರೆ ಗ್ರಾಮದ ಪೆರಿಯಡ್ಕ ಬರಮೇಲು ಮನೆ ಲಕ್ಷ್ಮಣ ಗೌಡ ಮತ್ತು ವೇದಾವತಿ ದಂಪತಿ ಪುತ್ರ ಭವಿಷ್‌ನ 5ನೇ ವರ್ಷದ ಹುಟ್ಟುಹಬ್ಬವನ್ನು ಎ. 12ರಂದು ಆಚರಿಸಲಾಯಿತು.

samyuk copyಲಾಯಿಲ ಗ್ರಾಮದ ಸುರುಳಿ ಸ್ಫೂರ್ತಿ ನಿಲಯ ಗಣೇಶ್ ಶೆಟ್ಟಿ ಮತ್ತು ವಿಶಾಲಾಕ್ಷಿ ದಂಪತಿ ಪುತ್ರ ಸಮ್ಯಕ್ ಜಿ. ಶೆಟ್ಟಿ ಯ ಮೊದಲನೇ ವರ್ಷದ ಹುಟ್ಟುಹಬ್ಬ ಎ. 11ರಂದು ಜರಗಿತು.

baby copyಬಜಿರೆ ಗ್ರಾಮದ ಹೊಸಪಟ್ಣ ಹೊಸವಕ್ಲು ಮಜಲು  ದಯಾನಂದ ಪೂಜಾರಿ ಮತ್ತು ಶ್ರೀಮತಿ ವನಿತಾ ದಂಪತಿಯ ಪುತ್ರ ಧನಿಷ್  ಈತನ ಪ್ರಥಮ ವರ್ಷದ ಹುಟ್ಟುಹಬ್ಬವು ಎ.16ರಂದು ಜರುಗಿತು.

umesh-shailaja copyಬೆಳಾಲು ಗ್ರಾಮದ ಪೊಯ್ಯೋದಡ್ಡ ಮನೆ ಬಾಬು ಗೌಡರ ಪುತ್ರ ಉಮೇಶ ಪಿ. ಗೌಡ ರವರ ವಿವಾಹವು ಹುಣ್ಸೆಕಟ್ಟೆ ಶ್ರೀಮತಿ ಕಮಲಾ ಮತ್ತು  ಕೆ. ಎನ್ ಮಂಜುನಾಥ ಗೌಡರ ಪುತ್ರಿ ಶೈಲಜಾ ರೊಂದಿಗೆ ಎ. 10ರಂದು ಬೆಳ್ತಂಗಡಿ ಸಿ.ವಿ.ಸಿ  ಹಾಲ್‌ನಲ್ಲಿ ಜರುಗಿತು.

add1

ಬೆಳ್ತಂಗಡಿ : ಗುರುವಾಯನಕೆರೆ ಉಪಕೇಂದ್ರದಲ್ಲಿ ತುರ್ತು ಕಾಮಗಾರಿಯನ್ನು ಕೈಗೊಳ್ಳಬೇಕಾದ ಹಿನ್ನಲೆಯಲ್ಲಿ ಎ. 22ರಂದು ಗುರುವಾಯನಕೆರೆ ಉಪಕೇಂದ್ರದಿಂದ ಹೊರಹೊಮ್ಮುವ ವೇಣೂರು ಮತ್ತು ಆರಂಬೋಡಿ ಫೀಡರ್‌ಗಳಲ್ಲಿ ಬೆಳಿಗ್ಗೆ 9.00ರಿಂದ ಸಂಜೆ 5.00ರ ತನಕ ವಿದ್ಯುತ್ ನಿಲುಗಡೆಯಾಗಲಿದೆ ಎಂದು ಮೆಸ್ಕಾಂ ಪ್ರಕಟಣೆಯಲ್ಲಿ ತಿಳಿಸಿದೆ.

venur vikasana shibira samaropa copyವೇಣೂರು: ಶಿಬಿರಗಳಲ್ಲಿ ತತ್ವ ಸಿದ್ದಾಂತ ಮುಖ್ಯ. ಆದ್ಯಾತ್ಮಿಕ ಚಿಂತನೆಯನ್ನು ವಿಕಸನಗೊಳಿಸುವುದು ಇದರ ಮೂಲ ಧ್ಯೇಯವಾಗಬೇಕೆ ಹೊರತು ಮನೋರಂಜನೆ ಆಗಬಾರದು. ಇಂತಹ ಧಾರ್ಮಿಕ ಶಿಬಿರಗಳಲ್ಲಿ ಮಠ, ಮಠಾಧೀಶರ ಪರಿಚಯ ಮೂಡಿಸುವುದ ಜೊತೆಗೆ ಅಲ್ಲಿಗೆ ಭೇಟಿ ನೀಡುವುದಕ್ಕೆ ಪ್ರೇರಣೆಯಾಗಲಿ ಎಂದು ಮೂಡಬಿದಿರೆ ಜೈನ ಮಠದ ಭಾರತ ಭೂಷಣ ಶ್ರೀ ಭಟ್ಟಾರಕ ಚಾರುಕೀರ್ತಿ ಪಂಡಿತಾಚಾರ್ಯವರ್ಯ ಮಹಾ ಸ್ವಾಮೀಜಿ ನುಡಿದರು.
ಅವರು ಎ.16 ರಂದು ವೇಣೂರು ಶ್ರೀ ಬಾಹುಬಲಿ ಸಭಾಭವನದಲ್ಲಿ ಇಲ್ಲಿಯ ಬಾಹುಬಲಿ ಯುವಜನ ಸಂಘ ಮತ್ತು ಶ್ರೀ ದಿಗಂಬರ ತೀರ್ಥ ಕ್ಷೇತ್ರ ಸಮಿತಿ ಆಶ್ರಯದಲ್ಲಿ ಜರಗಿದ ಜೈನ ಬಾಲಕ-ಬಾಲಕಿಯರ 17ನೇ ವರ್ಷದ ಧಾರ್ಮಿಕ ಹಾಗೂ ವ್ಯಕ್ತಿತ್ವ ವಿಕಸನ ಶಿಬಿರದ ಸಮಾರೋಪ ಕಾರ್ಯಕ್ರಮದಲ್ಲಿ ಆಶೀರ್ವಚನ ನೀಡಿದರು. ಮಠಗಳ ಬಗ್ಗೆ ಗುರು ಹಾಗೂ ಪರಂಪರೆಯನ್ನು ವಿರೋಧ ಕಟ್ಟಿಕೊಂಡು ಅಂತರ್ಜಾಲಗಳಲ್ಲಿ ಚರ್ಚೆ ನಡೆಯುತ್ತಿರುವುದು ಬೇಸರ ಸಂಗತಿ. ಮಕ್ಕಳಿಗೆ ಮಠ, ಮಠಾಧೀಶರ ಪರಿಚಯ ಮಾಡಿಸಬೇಕು. ಇದು ಅವರು ಧರ್ಮ ಮಾರ್ಗದಲ್ಲಿ ನಡೆಯಲು ಸಹಕಾರಿಯಾಗಲಿದೆ ಎಂದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದ ಉಜಿರೆ ಶ್ರೀ ಧ.ಮಂ. ಪ.ಪೂ. ಕಾಲೇಜಿನ ಪ್ರಾಂಶುಪಾಲ ಪ್ರೊ| ಎನ್. ದಿನೇಶ್ ಚೌಟ ಮಾತನಾಡಿ, ಭಾಷೆಯ ಬಗ್ಗೆ ಸಂವಹನಶೀಲತೆ ಬೆಳೆಸಿ ಕೊಂಡವರಿಗೆ ಸಮಾಜದಲ್ಲಿ ಮಾನ್ಯತೆ ಜಾಸ್ತಿ. ಅದು ಇಂತಹ ಶಿಬಿರಗಳು ತಿಳಿಸುತ್ತದೆ. ಇಂದು ಜೈನ ಧರ್ಮೀಯರು ಬೇರೆ ಧರ್ಮದತ್ತ ವಾಲುತ್ತಿದ್ದಾರೆ. ಇದಕ್ಕಾಗಿ ಮಕ್ಕಳಿರುವಾಗಲೇ ಅವರಿಗೆ ಜೈನ ಧರ್ಮ ತತ್ವ ಸಿದ್ದಾಂತಗಳನ್ನು ಮೂಡಿಸಬೇಕಾಗಿದೆ ಎಂದರು.
ಶಿಬಿರದ ನಿರ್ವಾಹಕ ಮುನಿರಾಜ ರೇಂಜಾಳ ಮಾತನಾಡಿ, ಜೈನರ ಬಗೆಗಿನ ತತ್ವ ಸಿದ್ದಾಂತಗಳನ್ನು ಇಂತಹ ಧಾರ್ಮಿಕ ಶಿಬಿರಗಳಿಂದ ಮಾತ್ರ ಕಲಿಯಲು ಸಾಧ್ಯ ಎಂದರು.
ಮುಖ್ಯ ಅತಿಥಿಗಳಾಗಿ ಮಾಣಿ ಶ್ರೀ ಮಹಾವೀರ ಇಂಡಸ್ಟ್ರೀಸ್‌ನ ಮಹಾವೀರ ಪ್ರಸಾದ್, ಮೂಡಬಿದಿರೆ ಪಂಡಿತ್ ರೆಸಾರ್ಟ್‌ನ ರಜನಿಲಾಲ್ ಗೋಯಲ್ ಜೈನ್, ಶಿಬಿರದ ಸಂಚಾಲಕ ಜ್ಞಾನಚಂದ್ರ, ವೇಣೂರು ಜೈನ ತೀರ್ಥಕ್ಷೇತ್ರ ಸಮಿತಿ ಕಾರ್ಯದರ್ಶಿ ಯಂ. ವಿಜಯರಾಜ ಅಧಿಕಾರಿ, ಶ್ರೀ ಬಾಹುಬಲಿ ಯುವಜನ ಸಂಘದ ಅಧ್ಯಕ್ಷ ಶರ್ಮಿತ್ ಕುಮಾರ್ ವೇದಿಕೆಯಲ್ಲಿದ್ದರು.
ಸಂಪನ್ಮೂಲ ವ್ಯಕ್ತಿಗಳಾಗಿ ಯೋಗರಾಜ ಶಾಸ್ತ್ರಿ ಕಾರ್ಕಳ, ನವೀನ್ ಕುಮಾರ್ ಜೈನ್, ಉದಯ ಕುಮಾರ್, ಮಂಜುಳಾ, ಅಜಿತ್ ಕುಮಾರ್, ನಿರಂಜನ ಎ., ಶಾಂತಿರಾಜ ಜೈನ್, ಮಹಾವೀರ ಜೈನ್, ಕು| ಅಶ್ವಿನಿ ಜೈನ್ ಶಿಬಿರವನ್ನು ನಡೆಸಿಕೊಟ್ಟರು. ೪ ದಿನಗಳ ಕಾಲ ಜರಗಿದ ಶಿಬಿರದಲ್ಲಿ ೭೨ ಶಿಬಿರಾರ್ಥಿಗಳು ಪಾಲ್ಗೊಂಡಿದ್ದರು.
ಕು| ಪೂರ್ಣಿಮಾ ಬಳಗ ಪ್ರಾರ್ಥಿಸಿ ಪ್ರಮೋದ್ ಕುಮಾರ್ ಬಜಿರೆ ಪ್ರಾಸ್ತಾವಿಕವಾಗಿ ಮಾತನಾಡಿ ಸ್ವಾಗತಿಸಿದರು. ನಿರಂಜನ ಅಳಿಯೂರು ಕಾರ್ಯಕ್ರಮ ನಿರೂಪಿಸಿ, ಸುಧೀರ್ ಕುಮಾರ್ ಬಜಿರೆ ವಂದಿಸಿದರು.

chandrashekar - pavithra copyಲಾಯಿಲ ಗ್ರಾಮದ ಕುಂಠಿನಿ ಶ್ರೀ ದೇವಿಪ್ರಸಾದ್ ಮನೆ ಶ್ರೀಮತಿ ವಸಂತಿ ಮತ್ತು ಬಿ. ಗಿರಿಧರ ಶೆಟ್ಟಿ ಯವರ ಪುತ್ರಿ ಪವಿತ್ರರವರ ವಿವಾಹವು ಮಜಲೋಡಿ ಶ್ರೀದುರ್ಗಾ ನಿಲಯ ಸಾಂತಪ್ಪ ಶೆಟ್ಟಿಯವರ ಪುತ್ರ ಚಂದ್ರಶೇಖರ ರೊಂದಿಗೆ ಎ. 10ರಂದು ಬೆಳ್ತಂಗಡಿ ಶ್ರೀ ಗುರುನಾರಾಯಣ ವಾಣಿಜ್ಯ ಸಂಕೀರ್ಣದ ಆಶಾ ಸಾಲಿಯಾನ್ ಕಲ್ಯಾಣ ಮಂಟಪದಲ್ಲಿ ಜರಗಿತು.

dinesh-rekha copyಬೆಳಾಲು ಗ್ರಾಮದ ಪೊಯ್ಯೋದಡ್ಡ ಮನೆ ಬಾಬು ಗೌಡರ ಪುತ್ರ ದಿನೇಶ್ ಪಿ. ಗೌಡ ರವರ ವಿವಾಹವು ಕೊಯ್ಯೂರು ಗ್ರಾಮದ ಕಲ್ಲೇರಿ ಮನೆ ಕುಶಾಲಪ್ಪ ಗೌಡರ ಪುತ್ರಿ ರೇಖಾ ರೊಂದಿಗೆ ಎ. 10ರಂದು ಬೆಳ್ತಂಗಡಿ ಸಿ.ವಿ.ಸಿ ಹಾಲ್‌ನಲ್ಲಿ ಜರುಗಿತು.

Rajesh news copyವೇಣೂರು : ವೇಣೂರು ವಲಯದ ಅಳದಂಗಡಿ ಶಾಖೆಯಲ್ಲಿ ಉಪವಲಯ ಅರಣ್ಯಾಧಿಕಾರಿಯಾಗಿ ಕಳೆದ 5 ವರ್ಷಗಳಿಂದ ಸೇವೆ ಸಲ್ಲಿಸುತ್ತಿದ್ದ ರಾಜೇಶ್ ಇವರಿಗೆ ವಲಯ ಅರಣ್ಯಾಧಿಕಾರಿಯಾಗಿ ಭಡ್ತಿ ನೀಡಿ ರಾಯಚೂರು ಜಿಲ್ಲೆಯ ಲಿಂಗಸಗೂರು ವಲಯಕ್ಕೆ ನಿಯುಕ್ತಿಗೊಳಿಸಲಾಗಿದೆ.
2007ರಲ್ಲಿ ಬೆಳ್ತಂಗಡಿ ವನ್ಯಜೀವಿ ವಲಯದಲ್ಲಿ ಉಪ ವಲಯ ಅರಣ್ಯಾಧಿಕಾರಿಯಾಗಿ ಸೇವೆಗೆ ಸೇರಿದ ರಾಜೇಶ್ ಅವರು 5 ವರ್ಷಗಳ ಸೇವೆ ಬಳಿಕ 2012ರಲ್ಲಿ ವೇಣೂರು ವಲಯದ ಅಳದಂಗಡಿ ಶಾಖೆಗೆ ವರ್ಗಾವಣೆಗೊಂಡು ಸೇವೆ ಸಲ್ಲಿಸುತ್ತಿದ್ದರು. ಕಳೆದ 6ತಿಂಗಳ ಹಿಂದೆ ಅಳದಂಗಡಿ ಶಾಖೆ ಜೊತೆಗೆ ನಾರಾವಿ ಶಾಖೆಯ ಹೆಚ್ಚುವರಿ ಪ್ರಭಾರವನ್ನು ವಹಿಸಿಕೊಂಡು ಉತ್ತಮವಾಗಿ ಕರ್ತವ್ಯವನ್ನು ನಿರ್ವಹಿಸಿದ್ದರು.

vijay kumar-ashwini copyಕಲ್ಮಂಜ ಗ್ರಾಮದ ಬಳ್ಳಿದಡ್ಡ ಸುರೇಶ್ ಬಂಗೇರರ ಪುತ್ರಿ ಅಶ್ವಿನಿಯವರ ವಿವಾಹ ಮಂಡೂರು ಗ್ರಾಮದ ಹೇಡ್ಯದಡ್ಡ ನಾಣ್ಯಪ್ಪ ಪೂಜಾರಿಯವರ ಪುತ್ರ ವಿಜಯ್ ಕುಮಾರ್ ರೊಂದಿಗೆ ಎ. 10ರಂದು ಉಜಿರೆ ಎಸ್.ಕೆ ಮೆಮೋರಿಯಲ್ ಹಾಲ್‌ನಲ್ಲಿ ಜರಗಿತು.

reshma copyಬಜಿರೆ ಗ್ರಾಮದ ಹೊಸಪಟ್ಣ  ಪೊಂಗರ್‌ತ್ಯಾರು ಮನೆ ಶ್ಯಾಮ ಹೆಗ್ಡೆಯವರ ಪುತ್ರಿ ರೇಶ್ಮಾರವರ ವಿವಾಹವು ನಾರಾವಿ ಪಾಣಾಲು ದರ್ಖಾಸು ಸೋಮಯ್ಯ ಹೆಗ್ಡೆಯವರ ಪುತ್ರ ರಘುಚಂದ್ರರೊಂದಿಗೆ   ನಾರಾವಿ ಧರ್ಮಶ್ರೀ ಸಭಾಭವನದಲ್ಲಿ ಎ.10ರಂದು ಜರುಗಿತು.

Veerakesari sahayadana copyಕನ್ಯಾಡಿ ||: ವೀರಕೇಸರಿ ಧರ್ಮಸ್ಥಳ ಬೆಳ್ತಂಗಡಿ ಹಾಗೂ ಶ್ರೀ ಶನೈಶ್ಚರ ಪೂಜಾ ಸಮಿತಿ ಕನ್ಯಾಡಿ || ಇದರ ಸಹಯೋಗದೊಂದಿಗೆ ಎ.15ರಂದು ಹಿ.ಪ್ರಾ ಶಾಲಾ ಮೈದಾನ ಕನ್ಯಾಡಿ || ಇಲ್ಲಿ ಜರುಗಿದ 6ನೇ ವರ್ಷದ ಸಾರ್ವಜನಿಕ ಶ್ರೀ ಶನೈಶ್ಚರ ಪೂಜೋತ್ಸವ ಮತ್ತು ವಿವಿಧ ಕ್ಷೇತ್ರಗಳ ಸಾಧಕರಿಗೆ ಸನ್ಮಾನ ಕಾರ್ಯಕ್ರಮದಲ್ಲಿ 27ನೇ ಸೇವಾಯೋಜನೆಯಾಗಿ ನಿಡ್ಲೆ ಸ.ಹಿ.ಪ್ರಾ. ಶಾಲೆಯ 9ನೇ ತರಗತಿ ವಿದ್ಯಾರ್ಥಿ ಪದ್ಮರಾಜ್ ಇವರು ಮಾನಸಿಕ ಅನಾರೋಗ್ಯದಿಂದ ಬಳಲುತ್ತಿದ್ದು ಇವರ ಚಿಕಿತ್ಸೆಗೆ ರೂ. 15 ಸಾವಿರದ ಚೆಕ್ಕನ್ನು ಆತನ ತಾಯಿಗೆ ಹಸ್ತಾಂತರಿಸಲಾಯಿತು. ಇದೇ ಸಂದರ್ಭದಲ್ಲಿ 28ನೇ ಯೋಜನೆಯಾಗಿ ತನ್ನ ಎರಡು ಕಣ್ಣುಗಳನ್ನು ಕಳೆದುಕೊಂಡಿರುವ ಪೂರ್ಣೇಶ ಅವರ ಚಿಕಿತ್ಸೆಗೆ 15ಸಾವಿರ ರೂಗಳ ಚೆಕ್ಕನ್ನು ನೀಡಲಾಯಿತು. ವೀರಕೇಸರಿ ಬೆಳ್ತಂಗಡಿಯ ಮಾಸಿಕ ಸೇವಾ ಯೋಜನೆಯಂತೆ ಎಪ್ರಿಲ್ ತಿಂಗಳಲ್ಲಿ ಎರಡು ಸೇವಾ ಯೋಜನೆಯನ್ನು ಯಶಸ್ವಿಯಾಗಿ ತಲುಪಿದ್ದು 11 ತಿಂಗಳಲ್ಲಿ 28 ಸೇವಾ ಯೋಜನೆ ಮೂಲಕ 28 ಕುಟುಂಬಗಳಿಗೆ ಆಸರೆಯಾಗಿ ಯಶಸ್ಸಿನ ಹಾದಿಯಲ್ಲಿ ಮುನ್ನಡೆಯುತ್ತಿದೆ. ಇದೀಗ ತಾಲೂಕಿನ ದೊಡ್ಡ ಸಂಘಟನೆಯಾಗಿ ಬೆಳೆದಿರುವ ವೀರಕೇಸರಿ ತಂಡ ಪ್ರತಿಯೊಬ್ಬ ಸದಸ್ಯನ ನೆರವಿನಿಂದ ಪ್ರತಿ ತಿಂಗಳು ಸೇವಾಯೋಜನೆಗಳನ್ನು ಮಾಡಿ ಸಮಾಜಸೇವೆಯಲ್ಲಿ ಅಗ್ರಮಾನ್ಯ ಸಂಘಟನೆಯಾಗಿ ಮುನ್ನುಗ್ಗುತ್ತಿದೆ.

Puduvettu sethuve veekshane copyಪುದುವೆಟ್ಟು : ಪುದುವೆಟ್ಟು ಗ್ರಾಮದ ಬೊಲ್ಮನಾರು ಎಂಬಲ್ಲಿ ಅಂತಿಮ ಹಂತದ ನಿರ್ಮಾಣದಲ್ಲಿದ್ದು ಶೀಘ್ರವೇ ಜನೋಪಯೋಗಕ್ಕೆ ಅರ್ಪಣೆಯಾಗಲಿರುವ ಸುಮಾರು 7 ಕೋಟಿಗೂ ಅಧಿಕ ವೆಚ್ಚದ ನೂತನ ಸೇತುವೆ ಕಾಮಗಾರಿಯನ್ನು ಶಾಸಕ ವಸಂತ ಬಂಗೇರ ಎ. 13ರಂದು ವೀಕ್ಷಣೆ ನಡೆಸಿದರು.
ಗುತ್ತಿಗೆದಾರ ಹಾಗೂ ಇಂಜಿನಿಯರ್ ಜೊತೆ ಮಾತುಕತೆ ನಡೆಸಿ ಕಾಮಗಾರಿಯ ವಿವರ ಪಡೆದ ಅವರು ಮಳೆಗಾಲಕ್ಕೂ ಮುನ್ನವೇ ಕಾಮಗಾರಿ ಪೂರ್ತಿಗೊಳಿಸುವಂತೆ ಸೂಚನೆ ನೀಡಿದರು.
ಈ ಸಂದರ್ಭ ಉಜಿರೆ ಜಿ.ಪಂ. ಸದಸ್ಯೆ ನಮಿತಾ ಕೆ. ಪೂಜಾರಿ, ತಾ.ಪಂ. ಸದಸ್ಯ ವಿ.ಟಿ. ಸೆಬಾಸ್ಟಿಯನ್, ಎಪಿಎಂಸಿ ಸದಸ್ಯ ಅಬ್ದುಲ್ ಗಫೂರ್, ಪುದುವೆಟ್ಟು ಗ್ರಾ.ಪಂ. ಅಧ್ಯಕ್ಷೆ ನೀಲಮ್ಮ, ಉಪಾಧ್ಯಕ್ಷ ಬೊಮ್ಮಣ್ಣ ಗೌಡ ಮಠ, ನೆರಿಯ ಗ್ರಾ.ಪಂ. ಸದಸ್ಯ ಬಿ. ಅಶ್ರಫ್ ನೆರಿಯ, ಗುತ್ತಿಗೆದಾರ ರಿಯಾಝ್ ಪೆರಾಲ್ದರಕಟ್ಟೆ ಮೊದಲಾದವರು ಉಪಸ್ಥಿತರಿದ್ದರು.

belalu anantha padmanabha nagashila prathiste copyಬೆಳಾಲು : ಇಲ್ಲಿಯ ಅನಂತೋಡಿಯಲ್ಲಿ ಜೀರ್ಣೋದ್ಧಾರಗೊಳ್ಳುತ್ತಿರುವ ಶ್ರೀ ಅನಂತ ಪದ್ಮನಾಭ ದೇವಸ್ಥಾನದಲ್ಲಿ ಜೀರ್ಣೋದ್ಧಾರ ಸಮಿತಿಯ ಗೌರವಾಧ್ಯಕ್ಷರು ಧರ್ಮಸ್ಥಳದ ಡಾ| ಡಿ. ವೀರೇಂದ್ರ ಹೆಗ್ಗಡೆಯವರ ಆಶೀರ್ವಾದದೊಂದಿಗೆ ಉಜಿರೆ ಶ್ರೀ ಜನಾರ್ದನ ದೇವಸ್ಥಾನದ ಆಡಳಿತ ಮೊಕ್ತೇಸರ ಯು. ವಿಜಯ ರಾಘವ ಪಡ್ವೆಟ್ನಾಯರ ಮಾರ್ಗದರ್ಶನದಲ್ಲಿ ಬ್ರಹ್ಮಶ್ರೀ ಆಲಂಬಾಡಿ ಪದ್ಮನಾಭ ತಂತ್ರಿಗಳ ನೇತೃತ್ವದಲ್ಲಿ ಎ. 20ರಂದು(ಇಂದು) ಶ್ರೀ ನಾಗಶಿಲಾ ಪ್ರತಿಷ್ಠೆ ಜರಗಿತು. ಜೀರ್ಣೋದ್ಧಾರ ಸಮಿತಿಯ ಪದಾಧಿಕಾರಿಗಳು, ಭಜನಾ ಮಂಡಳಿಯ ಪದಾಧಿಕಾರಿಗಳು ಶ್ರೀಕ್ಷೇತ್ರ ಧ. ಗ್ರಾ. ಯೋಜನೆಯ ಒಕ್ಕೂಟದ ಪದಾಧಿಕಾರಿಗಳು, ಊರವರು, ಭಕ್ತಾಧಿಗಳು ಹೆಚ್ಚಿನ ಸಂಖ್ಯೆಯಲ್ಲಿ ಹಾಜರಿದ್ದರು.

Peranamanja sabhe prathapasimha copyಪಡಂಗಡಿ : ಮನಸ್ಸು ಸ್ಥಿರವಾದಾಗ ಜಗತ್ತಿನ ಸತ್ಯ ಅರಿವಾಗುತ್ತದೆ. ಇದಕ್ಕಾಗಿ ನಮ್ಮ ಹಿರಿಯರು ಇಂತಹ ಶ್ರದ್ಧಾಕೇಂದ್ರಗಳನ್ನು ನಿರ್ಮಿಸಿದ್ದಾರೆ. ಆತ್ಮ ಶಕ್ತಿಯನ್ನು ಜಾಗೃತ ಮಾಡುವ ಸ್ಥಳಗಳೇ ದೇವಸ್ಥಾನ, ದೈವಸ್ಥಾನಗಳಾಗಿವೆ ಎಂದು ಬಿಜೆಪಿ ಮಾಜಿ ಜಿಲ್ಲಾಧ್ಯಕ್ಷ, ನ್ಯಾಯವಾದಿ ಪ್ರತಾಪಸಿಂಹ ನಾಯಕ್ ಹೇಳಿದರು.
ಅವರು ಎ.13ರಂದು ಪಡಂಗಡಿ ಗ್ರಾಮದ ಪೆರಣಮಂಜು ಶ್ರೀ ಮೂಜಿಲ್ನಾಯ ಬ್ರಹ್ಮ ದೈವಸ್ಥಾನ ಬ್ರಹ್ಮಕಲಶೋತ್ಸವ ಮತ್ತು ಜಾತ್ರಾ ಮಹೋತ್ಸವದ ಅಂಗವಾಗಿ ನಡೆದ ಧಾರ್ಮಿಕ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಮನುಷ್ಯನಿಗೆ ಭೌತಿಕ ಸುಖ ಮುಖ್ಯವಲ್ಲ, ಆಧ್ಯಾತ್ಮಿಕ ಸುಖ ಮಾತ್ರ ನಮ್ಮನ್ನು ಮೋಕ್ಷದೆಡೆಗೆ ಸಾಗಿಸಬಹುದು. ಅಂತಹ ಸುಖವನ್ನು ನೀಡುವ ದೈವ, ದೇವರ ನಾಡಾದ ಭಾರತ ಒಂದು ದಿನ ಜಗತ್ತಿಗೆ ವಿಶ್ವಗುರುವಾಗಿ ನಿಲ್ಲಲಿದೆ. ಭಾರತದಲ್ಲಿ ಪ್ರಾಚೀನ ಕಾಲದಿಂದಲೂ ಇದ್ದ ಯೋಗ ಇಂದು ವಿಶ್ವದೆಲ್ಲೇಡೆ ಪಸರಿಸಿದೆ. ಭಗವಂತನ ಸಾಕ್ಷಾತ್ಕಾರಕ್ಕೆ ಯೋಗ ಸುಲಭ ಮಾರ್ಗವಾಗಿದೆ ಎಂದರು.
ಧಾರ್ಮಿಕ ಉಪನ್ಯಾಸ ನೀಡಿದ ಮೈಸೂರು ಮಾನಸ ಗಂಗೋತ್ರಿಯ ಪ್ರೊ| ಸುರೇಶ್ ಪಡಿವಾಳ್ ಮನಸ್ಸು, ವಚನ, ಕಾಯಗಳ ಜೊತೆ ಆತ್ಮ ಸಂಯೋಜನೆಗೊಂಡು ನಮ್ಮ ದೇಹದ ಚೇತನ ಕ್ರಿಯೆ ನಡೆದಾಗ ನಾವು ತಿಳಿಯುವ, ನೋಡುವ ಕ್ರಿಯೆ ನಡೆಯುತ್ತದೆ. ನಮ್ಮಲ್ಲಿರುವ ಅರಿಷಡ್ವರ್ಗಗಳು ನಿವಾರಣೆಯಾಗಲು ಇಂತಹ ಧಾರ್ಮಿಕ ಕೇಂದ್ರಗಳಿಗೆ ಬಂದು, ಧರ್ಮ ಕ್ರಿಯೆ ಮೂಲಕ ಆತ್ಮೋನ್ನತಿ ಮಾಡಿಕೊಳ್ಳಬೇಕು ಎಂದು ತಿಳಿಸಿದರು.
ಮುಖ್ಯ ಅತಿಥಿ ಬೆಳ್ತಂಗಡಿ ವಿನಾಯಕ ರೈಸ್‌ಮಿಲ್‌ನ ಮಾಲಕ ರೋ| ಶ್ರೀಕಾಂತ ಕಾಮತ್ ಮಾತನಾಡಿ, ಊರಿನ ದೇವಸ್ಥಾನ, ದೈವಸ್ಥಾನಗಳು ಜೀರ್ಣೋದ್ಧಾರ ಹೊಂದಿದಾಗ ಊರಿನ ಅಭಿವೃದ್ಧಿಯ ಜೊತೆ ಸಮಾಜದ ಪ್ರಗತಿಯಾಗುತ್ತದೆ. ನಾವು ನಂಬಿಕೊಂಡು ಬಂದಂತಹ ಶ್ರದ್ಧಾಕೇಂದ್ರಗಳು ಅವನತಿಗೊಂಡಾಗ ನಮ್ಮ ಜೀವನದ ಮೇಲೂ ಪರಿಣಾಮಗಳಾಗುತ್ತದೆ. ಅವುಗಳ ಪ್ರಗತಿಯಾದಾಗ ನಮ್ಮ ಜೀವನದಲ್ಲೂ ಉನ್ನತಿಯನ್ನು ಕಾಣಬಹುದು ಎಂದು ತಿಳಿಸಿದರು.
ಉದ್ಯಮಿ ಉದಯ ಶೆಟ್ಟಿ ಕಾಂತವರ ಮಾತನಾಡಿ ಇಂದಿನ ವೈಜ್ಞಾನಿಕ ಯುಗದಲ್ಲಿ ಮಕ್ಕಳಿಗೆ ನಮ್ಮ ಸಂಸ್ಕೃತಿ, ಧಾರ್ಮಿಕ ನಂಬಿಕೆಗಳ ಅರಿವು ಮೂಡಿಸುವುದು ಅವಶ್ಯ ಎಂದು ಹೇಳಿದರು. ಈ ಸಂದರ್ಭದಲ್ಲಿ ಕ್ಷೇತ್ರ ನಿರ್ಮಾಣಕ್ಕೆ ಸಹಕಾರ ನೀಡಿದ ಸ್ವಸ್ತಿಕ್ ಪಡಂಗಡಿಯ ಸಂಪತ್ ಕುಮಾರ್ ಕುಟುಂಬಸ್ಥರನ್ನು ಹಾಗೂ ನವೀನ್‌ಚಂದ್ ಬಲ್ಲಾಳ್, ಉದಯ ಶೆಟ್ಟಿ ಕಾಂತಾವರ ಇವರನ್ನು ದೇವಸ್ಥಾನದ ವತಿಯಿಂದ ಅಭಿನಂದಿಸಲಾಯಿತು. ಬ್ರಹ್ಮಕಲಶೋತ್ಸವ ಸಮಿತಿ ಅಧ್ಯಕ್ಷ ಪ್ರವೀಣ್‌ಚಂದ್ರ ಜೈನ್ ನಡಿಬೆಟ್ಟುಗುತ್ತು ಕಾರ್ಯಕ್ರಮ ನಿರ್ವಹಿಸಿದರು.
ವೇದಿಕೆಯಲ್ಲಿ ಆಡಳಿತ ಮೊಕ್ತೇಸರ ನೇಮಿರಾಜ್ ಶೆಟ್ಟಿ ನಡಿಬೆಟ್ಟು ಗುತ್ತು, ಬ್ರಹ್ಮಕಲಶೋತ್ಸವ ಸಮಿತಿ ಗೌರವಾಧ್ಯಕ್ಷ ಎಸ್. ಜಯರಾಮ ಶೆಟ್ಟಿ, ಪ್ರಧಾನ ಕಾರ್ಯದರ್ಶಿ ಶಾಂತಿರಾಜ ಜೈನ್ ಅಮೃತ, ಕಾರ್ಯದರ್ಶಿ ಜಗದೀಶ್ ಪೈ ಮೂಜುರು, ಕೋಶಾಧಿಕಾರಿ ವಾiನ ಬಾಳಿಗ ಉಪಿಸ್ಥಿತರಿದ್ದರು. ಸಂಜನಾ ಎಸ್.ಜೈನ್ ಇವರ ಪ್ರಾರ್ಥನೆ ಬಳಿಕ ಶ್ರೀಮತಿ ಉಷಾರಾಣಿ ನಡಿಬೆಟ್ಟುಗುತ್ತು ಸ್ವಾಗತಿಸಿದರು. ಪುಂಜಾಲಕಟ್ಟೆ ಶಾಲಾ ಶಿಕ್ಷಕ ಲ| ಧರಣೇಂದ್ರ ಕೆ. ಜೈನ್ ಕಾರ್ಯಕ್ರಮ ನಿರೂಪಿಸಿ, ಎಸ್‌ಕೆಡಿಆರ್‌ಡಿಪಿ ತುಮಕೂರಿನ ಯೋಜನಾಧಿಕಾರಿ ಪ್ರಶಾಂತ್ ಗೌಡ ವಂದಿಸಿದರು. ಬಳಿಕ ಕಲ್ಲಡ್ಕ ವಿಠಲ ನಾಯಕ್ ಬಳಗದವರಿಂದ ‘ಗೀತ ಸಾಹಿತ್ಯ ಸಂಭ್ರಮ’ನಡೆಯಿತು.

kulal kreedakuta samaropa copyವಿವಿಧ ಕ್ಷೇತ್ರದ ಸಾಧಕರಿಗೆ ಸಮ್ಮಾನ
ಕಾರ್ಯಕ್ರಮದಲ್ಲಿ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ಮೂರು ಮಂದಿ ಸಾಧಕರನ್ನು ಕ್ರೀಡಾ ಸಮಿತಿಯ ವತಿಯಿಂದ ವೇದಿಕೆಯಲ್ಲಿದ್ದ ಗಣ್ಯರು, ಅತಿಥಿಗಳು ಸಮ್ಮಾನಿಸಿದರು. ಎಂ.ಎ. ಪದವಿ ರಾಜ್ಯ ಶಾಸ್ತ್ರದಲ್ಲಿ ಪ್ರಥಮ ಸ್ಥಾನ ಪಡೆದ ಕು| ಸಚಿತಾ, ರೋಹಿತ್ ಕುಮಾರ್ ಬರಾಯ, ಹಾಗೂ ಕಂಬಳ ಕ್ಷೇತ್ರದ ಮೋಹನ್‌ಕುಮಾರ್ ಕಬ್ಬಿನ ಹಿತ್ಲು ಅವರನ್ನು ಶಾಲು ಹೊದಿಸಿ, ಸ್ಮರಣಿಕೆ ನೀಡಿ ಸಮಿತಿ ವತಿಯಿಂದ ಗೌರವಿಸಲಾಯಿತು.

ಗುರುವಾಯನಕೆರೆ : ಬೆಳ್ತಂಗಡಿ ತಾಲೂಕು ಮೂಲ್ಯರ ಯಾನೆ ಕುಂಬಾರರ ಸೇವಾ ಸಂಘ ಗುರುವಾಯನಕೆರೆ, ಕುಲಾಲ-ಕುಂಬಾರರ ಯುವ ವೇದಿಕೆ ಮತ್ತು ತಾಲೂಕು ಕ್ರೀಡಾ ಸಮಿತಿ, ಕುಲಾಲ ಕುಂಬಾರ ಸಾಂಸ್ಕೃತಿಕ ಸಮಿತಿ ಇದರ ಸಹಯೋಗದೊಂದಿಗೆ ತಾಲೂಕಿನ ಸ್ವಜಾತಿ ಬಾಂಧವರಿಗಾಗಿ ನಡೆದ ತಾಲೂಕು ಮಟ್ಟದ ಕುಲಾಲ ಕ್ರೀಡೋತ್ಸವದ ಸಮಾರೋಪ ಸಮಾರಂಭ ಎ.16ರಂದು ಕೆರೆ ಬಳಿಯ ಮೈದಾನದಲ್ಲಿ ನಡೆಯಿತು.
ಮುಖ್ಯ ಅತಿಥಿಗಳಾಗಿ ಭಾಗವಹಿಸಿದ ಬಂಟ್ವಾಳ ಯೋಜನಾ ಪ್ರಾಧಿಕಾರದ ಅಧ್ಯಕ್ಷ ಸದಾಶಿವ ಬಂಗೇರ ಮಾತನಾಡಿ, ಕುಲಾಲ-ಕುಂಬಾರ ಸಮಾಜ ಸಂಘಟನೆಗೆ ಇಂತಹ ಕ್ರೀಡಾ ಕೂಟಗಳು ಪ್ರೇರಣೆಯಾಗುವುದರ ಜೊತೆಗೆ ಯುವ ಸಮುದಾಯಕ್ಕೆ ತಮ್ಮ ಶಕ್ತಿಯ ಪ್ರದರ್ಶನಕ್ಕೆ ವೇದಿಕೆಯಾಗಿದೆ ಎಂದರು. ಯುವ ಸಂಪತ್ತು ಸಮಾಜದ ಉನ್ನತಿಗೆ ಉಪಯೋಗವಾಗಬೇಕು, ಸಂಘಟನೆಗೆ ಬಲ ಬರಬೇಕಾದರೆ ತಾಲೂಕಿನ ಸಮಾಜ ಬಾಂಧವರು ಇಂತಹ ಕಾರ್ಯಗಳಲ್ಲಿ ಕೈಜೋಡಿಸುವುದರೊಂದಿಗೆ ಸಮಾಜದ ಮುಂಚೂಣಿಯಲ್ಲಿ ಪ್ರಮುಖ ಪಾತ್ರವಹಿಸಬೇಕಾದ ಅಗತ್ಯವಿದೆ. ಈ ನಿಟ್ಟಿನಲ್ಲಿ ಮಾತೃ ಸಂಘದ ನೇತೃತ್ವದಲ್ಲಿ ರಾಜ್ಯ ಮಟ್ಟದ ಕಬಡ್ಡಿಯನ್ನು ಹಮ್ಮಿಕೊಳ್ಳುವ ಯೋಜನೆಯಿದ್ದು, ತಾಲೂಕಿನ ತಂಡವೂ ಇದರಲ್ಲಿ ಭಾಗವಹಿಸಬೇಕು ಎಂದು ಕರೆ ನೀಡಿದರು.
ಸಮಾರಂಭದ ಅಧ್ಯಕ್ಷತೆಯನ್ನು ತಾಲೂಕು ಕ್ರೀಡಾ ಸಮಿತಿ ಅಧ್ಯಕ್ಷ ತಿಲಕ್‌ರಾಜ್ ವಹಿಸಿ, ಕ್ರೀಡೋತ್ಸವದ ಯಶಸ್ವಿಗೆ ಸಹಕರಿಸಿದ ಎಲ್ಲರಿಗೂ ಕೃತಜ್ಞತೆ ಸಲ್ಲಿಸಿದರು. ಕುಲಾಲ-ಕುಂಬಾರರ ಯುವ ವೇದಿಕೆ ರಾಜ್ಯ ಸಂಘಟನಾ ಕಾರ್ಯದರ್ಶಿ ಹರೀಶ್ ಕಾರಿಂಜ ಸ್ವಾಗತಿಸಿ, ಯುವ ಸಮುದಾಯದ ಸಂಘಟನೆ ಹಾಗೂ ಬಲವರ್ಧನೆಗೆ ಈ ಕ್ರೀಡಾಕೂಟ ಪೂರಕವಾಗಿ ನಡೆಯುತ್ತಿದ್ದು, ಇಂದು ಅತ್ಯಂತ ಯಶಸ್ವಿಯಾಗಿ ಕಾರ್ಯಕ್ರಮ ನಡೆಸಿದ ಕ್ರೀಡಾ ಸಮಿತಿಯ ಪದಾಧಿಕಾರಿಗಳನ್ನು ಅಭಿನಂದಿಸಿದರು.
ಅತಿಥಿಗಳಾಗಿ ಕುಲಾಲ ಕುಂಬಾರರ ಯುವ ವೇದಿಕೆ ಬೆಳ್ತಂಗಡಿ ತಾಲೂಕು ಅಧ್ಯಕ್ಷ ಲೋಕೇಶ್ ಕಂಚಿಂಜ, ವಾಣಿಜ್ಯ ತೆರಿಗೆ ನಿರೀಕ್ಷಕ ಯತೀಶ್ ಸಿರಿಮಜಲು, ಶ್ರೀ ಕ್ಷೇ.ಧ.ಗ್ರಾ. ಯೋಜನೆ ಧರ್ಮಸ್ಥಳದ ಯೋಜನಾಧಿಕಾರಿ ಕಮಲಾಕ್ಷ, ಕುಲಾಲ ಕುಂಬಾರ ಯುವ ವೇದಿಕೆ ಬೆಳ್ತಂಗಡಿ ಇದರ ಕೋಶಾಧಿಕಾರಿ ಉಮೇಶ್ ಕುಲಾಲ್, ಸುದ್ದಿ ಪತ್ರಿಕೆಯ ಮುಖ್ಯ ವರದಿಗಾರ ಬಿ.ಎಸ್. ಕುಲಾಲ್ ಭಾಗವಹಿಸಿ ಶುಭ ಕೋರಿದರು. ಬೆಳಗ್ಗೆ 11ರಿಂದ ಸಂಜೆ 7.30ರ ವರೆಗೆ ಅತ್ಯಂತ ಯಶಸ್ವಿಯಾಗಿ ಹಾಗೂ ಶಿಸ್ತುಬದ್ಧವಾಗಿ ಕ್ರೀಡೋತ್ಸವ ನಡೆಯಿತು. ಈ ಸಂದರ್ಭದಲ್ಲಿ ಮಕ್ಕಳಿಗೆ, ಮಹಿಳೆಯರಿಗೆ ಹಾಗೂ ಪುರುಷರಿಗೆ ಹಮ್ಮಿಕೊಂಡ ವಿವಿಧ ಸ್ಪರ್ಧಾ ವಿಜೇತರಿಗೆ ಬಹುಮಾನಗಳನ್ನು ವಿತರಿಸಲಾಯಿತು.
ಕ್ರೀಡೋತ್ಸವದ ತೀರ್ಪುಗಾರರಾಗಿ, ಗಿರೀಶ್, ಮಿಥುನ್, ಗೋಪಾಲ್, ಶೀತಲ್ ಸಹಕರಿಸಿದರು. ಹರೀಶ್ ಕಾರಿಂಜ ಸ್ವಾಗತಿಸಿದರು. ಜಿಲ್ಲಾ ಸಂಘದ ಪ್ರಧಾನ ಕಾರ್ಯದರ್ಶಿ ಪ್ರಸಾದ್‌ಕುಮಾರ್ ಕಾರ್ಯಕ್ರಮ ನಿರೂಪಿಸಿ, ಯತೀಶ್ ಸಿರಿಮಜಲು ವಂದಿಸಿದರು. ಸಮಿತಿಯ ಉಪಾಧ್ಯಕ್ಷ ಜಗದೀಶ್ ಬರಾಯ, ಕಾರ್ಯದರ್ಶಿ ಪ್ರವೀಣ್ ಬರಾಯ, ಜೊತೆ ಕಾರ್ಯದರ್ಶಿ ಜಯಮತ್ ಕಟ್ಟೆ, ಮಿಥುನ್ ಮಡಂತ್ಯಾರು, ಕೋಶಾಧಿಕಾರಿ ಜೀವನ್ ಕುಲಾಲ್ ಸಿರಿಮಜಲು, ಸಂಘಟನಾ ಕಾರ್ಯದರ್ಶಿ ನವೀನ್ ಕುಲಾಲ್, ಮುಖೇಶ್ ಕುಲಾಲ್ ಬರಾಯ ಹಾಗೂ ಸಮಿತಿಯ ಎಲ್ಲಾ ಸದಸ್ಯರು ಉಪಸ್ಥಿತರಿದ್ದರು.

ಪಾರಂಪರಿಕ ಭತ್ತದ ತಳಿ ಸಂರಕ್ಷಕ ಬಿ.ಕೆ. ದೇವರಾವ್‌ರಿಗೆ ಸೃಷ್ಠಿ ಸನ್ಮಾನ್ ಪ್ರಶಸ್ತಿ

Thursday, March 9th, 2017 | Suddi Belthangady | no responses ಮಿತ್ತಬಾಗಿಲು : ಮಿತ್ತಬಾಗಿಲು ಗ್ರಾಮದ ಅಮೈ ನಿವಾಸಿ ಪಾರಂಪರಿಕ ಭತ್ತದ ತಳಿ ಸಂರಕ್ಷಿಸುತ್ತಿರವ… ಮುಂದೆ ಓದಿ

ರೈತರಿಗೆ ಭೂಮಿ ಹಂಚಲು ಹಾಗೂ ಅವರ ಸಾಲಮನ್ನಾ ಮಾಡಲು ರೈತ ಸಮ್ಮೇಳನ ಆಗ್ರಹ

Thursday, January 26th, 2017 | Suddi Belthangady | no responses ಬೆಳ್ತಂಗಡಿ : ಸಮಗ್ರ ಭೂಹಂಚಿಕೆ ಮಾಡಲಾಗದ ಹಾಗೂ ರೈತರ ಪರ ನಿರ್ಲಕ್ಷ ದೋರಣೆ… ಮುಂದೆ ಓದಿ

ಬೆಳ್ತಂಗಡಿ ತಾಲೂಕು ಮಟ್ಟದ ಕರಾವಳಿ ಉತ್ಸವ

ಬೆಳ್ತಂಗಡಿ ತಾಲೂಕು ಮಟ್ಟದ ಕರಾವಳಿ ಉತ್ಸವ

Monday, December 19th, 2016 | Suddi Belthangady | no responses ಬೆಳ್ತಂಗಡಿ: ಬೆಳ್ತಂಗಡಿ ಮಾರಿಗುಡಿ ಮೈದಾನದಲ್ಲಿ ಡಿ. 18 ರಂದು ನಡೆದ ತಾಲೂಕು ಮಟ್ಟದ… ಮುಂದೆ ಓದಿ

ಪತ್ರಕರ್ತರ ಸಂಘದ ಮುಖ್ಯಸ್ಥಿಕೆಯಲ್ಲಿ ವನಮಹೋತ್ಸವ ಕಾರ್ಯಕ್ರಮ: ಕೋಟಿ ವೃಕ್ಷ ಅಭಿಯಾನಕ್ಕೆ ಸಹಕಾರ

Saturday, July 16th, 2016 | Suddi Belthangady | no responses ಬೆಳ್ತಂಗಡಿ : ತಾಲೂಕು ಪತ್ರಕರ್ತರ ಸಂಘ ಬೆಳ್ತಂಗಡಿ ಇದರ ಮುಖ್ಯಸ್ಥಿಕೆಯಲ್ಲಿ ಅರಣ್ಯಾಧಿಕಾರಿಗಳ ಕಛೇರಿ… ಮುಂದೆ ಓದಿ

ಗ್ರಾಮೀಣ ಅಧ್ಯಯನದ ಹಿನ್ನೆಲೆ ಹೊಸಂಗಡಿ ಗ್ರಾ.ಪಂ.ಗೆ ನಬಾರ್ಡ್ ಅಧಿಕಾರಿಗಳ ಭೇಟಿ

Monday, June 20th, 2016 | suddiblt | no responses ಹೊಸಂಗಡಿ: ರಾಷ್ಟ್ರೀಯ ಕೃಷಿ ಮತ್ತು ಗ್ರಾಮೀಣಾಭಿವೃದ್ಧಿ (ನಬಾರ್ಡ್) ಬ್ಯಾಂಕ್‌ನ ಮುಂಬೈ ಹಾಗೂ ಜೈಪುರ… ಮುಂದೆ ಓದಿ

ಬಜಿರೆ : ಗಾಳಿ ಮಳೆಗೆ ಕೃಷಿ ಹಾನಿ

ಬಜಿರೆ : ಗಾಳಿ ಮಳೆಗೆ ಕೃಷಿ ಹಾನಿ

Wednesday, May 18th, 2016 | Suddi Belthangady | no responses ಬಜಿರೆ : ಮೇ 17 ರಂದು ಸುಂಟರಗಾಳಿ ಮಳೆಗೆ ಬಜಿರೆ ಗ್ರಾಮದ ಸಿದ್ಧಿ… ಮುಂದೆ ಓದಿ

ಓಡಿಲ್ನಾಳ : ಮಳೆಯಿಂದ ಅನಾಹುತ

ಓಡಿಲ್ನಾಳ : ಮಳೆಯಿಂದ ಅನಾಹುತ

Monday, May 16th, 2016 | Suddi Belthangady | no responses ಓಡಿಲ್ನಾಳ ಗ್ರಾಮದ ಮೈರಲ್ಕೆ ಪರಾರಿ ಕಟ್ಟದಬೈಲು ಅ೦ಕ್ಕತ್ತಿಲ್ ಇನ್ನಿತರ ಕಡೆಗಳಲ್ಲಿ ಮೇ 15 … ಮುಂದೆ ಓದಿ

ಕಡಿರುದ್ಯಾವರ : ಅಡಿಕೆ ತೋಟಕ್ಕೆ ಕಾಡಾನೆಗಳ ಗುಂಪು ದಾಳಿ

Saturday, May 7th, 2016 | Suddi Belthangady | no responses ಕಡಿರುದ್ಯಾವರ : ಮೆ 3ರಂದು ಕಡಿರುದ್ಯಾವರ ಗ್ರಾಮದ ಕಡ್ತಿಕುಮೆರು ಎಂಬಲ್ಲಿ ರತ್ನವತಿ ದೇವಯ್ಯ… ಮುಂದೆ ಓದಿ

ಗದ್ದೆ-ತೋಟಕ್ಕೆ ಬೆಂಕಿ: ಸ್ಥಳೀಯರ ಸಮಯಪ್ರಜ್ಷೆಯಿಂದ ತಪ್ಪಿದ ಅನಾಹುತ

Tuesday, May 3rd, 2016 | suddiblt | no responses ಮೂಡುಕೋಡಿ: ಮೂಡುಕೋಡಿ ಗ್ರಾಮದ ಅಲೆಕ್ಕಿ ವಸಂತ ಹೆಗ್ಡೆಯವರ ಗದ್ದೆ ಹಾಗೂ ಅಡಿಕೆ ತೋಟಕ್ಕೆ… ಮುಂದೆ ಓದಿ

ವಿಮುಕ್ತಿ ಮಹಿಳಾ ಒಕ್ಕೂಟ  ಸಾಮಾನ್ಯ ಸಭೆ

ವಿಮುಕ್ತಿ ಮಹಿಳಾ ಒಕ್ಕೂಟ ಸಾಮಾನ್ಯ ಸಭೆ

Friday, April 29th, 2016 | Suddi Belthangady | no responses ಲಾಯಿಲ : ಕಪುಚಿನ್ ಕೃಷಿಕ ಸೇವಾ ಕೇಂದ್ರ ವಿಮುಕ್ತಿ ಲಾಯಿಲ ಇದರ ಮಹಿಳಾ… ಮುಂದೆ ಓದಿ

ಸಾವಯವ ಕೃಷಿ ಕ್ಷೇತ್ರೋತ್ಸವ

ಸಾವಯವ ಕೃಷಿ ಕ್ಷೇತ್ರೋತ್ಸವ

Friday, April 29th, 2016 | Suddi Belthangady | no responses ಮುಂಡಾಜೆ: ಇತ್ತೀಚೆಗೆ ಕಡಿರುದ್ಯಾವರ ಗ್ರಾಮದ ಕಾನರ್ಪದಲ್ಲಿ ಪ್ರಗತಿ ಪರ ರೈತರಾದ ಶ್ರೀಧರ ಗೌಡ… ಮುಂದೆ ಓದಿ

ಅಂಡಿಂಜೆ: ಎಕ್ರೆಗಟ್ಟಲೆ ರಬ್ಬರ್ ತೋಟಕ್ಕೆ ಬೆಂಕಿ; ನಷ್ಟ

Saturday, April 23rd, 2016 | Suddi Belthangady | no responses ಅಂಡಿಂಜೆ: ಎಕ್ರೆಗಟ್ಟಲೆ ರಬ್ಬರ್ ತೋಟ ಬೆಂಕಿಗಾಹುತಿಯಾದ ಘಟನೆ ವೇಣೂರು ಪೊಲೀಸ್ ಠಾಣಾ ವ್ಯಾಪ್ತಿಯ… ಮುಂದೆ ಓದಿ

ಮಚ್ಚಿನ ರಬ್ಬರ್ ತೋಟಕ್ಕೆ ಬೆಂಕಿ

ಮಚ್ಚಿನ ರಬ್ಬರ್ ತೋಟಕ್ಕೆ ಬೆಂಕಿ

Thursday, April 7th, 2016 | Suddi Belthangady | no responses ಮಚ್ಚಿನ ಇಲ್ಲಿನ ಬೆರ್ಬಲಜೆ ಈಶ್ವರ ಭಟ್‌ರವರ 8 ಎಕ್ರೆ ರಬ್ಬರ್ ತೋಟಕ್ಕೆ ವಿದ್ಯುತ್… ಮುಂದೆ ಓದಿ

ಬೆಳ್ತಂಗಡಿಯಲ್ಲಿ ಕೃಷಿ ಅಭಿಯಾನಕ್ಕೆ ಚಾಲನೆ ಆರ್ಥಿಕ ಪರಿಧಿ ಮೀರಿದರೆ ರೈತರ ಬಾಳು ದುಸ್ತರ: ಶಾಸಕ ಬಂಗೇರ

Thursday, September 10th, 2015 | suddiblt | no responses ಬೆಳ್ತಂಗಡಿ : ಕೃಷಿಯಿಂದ ತಕ್ಷಣ ಲಾಭ ಬರುವುದಿಲ್ಲ. ಕಷ್ಟಪಟ್ಟು ದುಡಿದರೆ ಅದಕ್ಕೆ ಪ್ರಕೃತಿಮಾತೆ… ಮುಂದೆ ಓದಿ

ಬೆಳ್ತಂಗಡಿ ಭೂ ಅಭಿವೃದ್ಧಿ ಬ್ಯಾಂಕ್‌ನ ಮಹಾಸಭೆ ನೇತ್ರಾವತಿ ನದಿ ತಿರುವು ಯೋಜನೆಗೆ ರೈತರ ವಿರೋಧ

Thursday, September 3rd, 2015 | suddiblt | no responses ಬೆಳ್ತಂಗಡಿ : ಬೆಳ್ತಂಗಡಿ ಪ್ರಾಥಮಿಕ ಸಹಕಾರಿ ಕೃಷಿ ಮತ್ತು ಗ್ರಾಮೀಣ ಅಭಿವೃದ್ಧಿ ಬ್ಯಾಂಕ್… ಮುಂದೆ ಓದಿ

ಕಳಿಯ  ಕೃಷಿ ವಿಜ್ಞಾನಿಗಳ ಭೇಟಿ

ಕಳಿಯ ಕೃಷಿ ವಿಜ್ಞಾನಿಗಳ ಭೇಟಿ

Monday, August 24th, 2015 | suddiblt | no responses ಕಳಿಯ : ಮಂಗಳೂರಿನ ಕೃಷಿ ವಿಜ್ಞಾನ ಕೇಂದ್ರದಲ್ಲಿ ೨೦೧೫-೧೬ ಸಾಲಿನ ರಾಷ್ಟ್ರೀಯ ಆಹಾರ… ಮುಂದೆ ಓದಿ

ಚಾರ್ಮಾಡಿ ಹಣ್ಣಿನ ಗಿಡಗಳ ವಿತರಣೆ

ಚಾರ್ಮಾಡಿ ಹಣ್ಣಿನ ಗಿಡಗಳ ವಿತರಣೆ

Monday, August 24th, 2015 | suddiblt | no responses ಬೆಳ್ತಂಗಡಿ ತಾಲೂಕಿನಲ್ಲಿ ನೂರು ಕುಟುಂಬಗಳಿಗೆ ೧ ಲಕ್ಷರೂಪಾಯಿ ಮೌಲ್ಯದ ಹಣ್ಣಿನ ಗಿಡಗಳನ್ನು ಗ್ರಾಮಾಭಿವೃದ್ಧಿ… ಮುಂದೆ ಓದಿ

ಕೃಷಿ ಇಲಾಖೆಯಲ್ಲಿ ತೀವ್ರ ಸಿಬ್ಬಂದಿ ಕೊರತೆ  26 ಹುದ್ದೆಗಳು ಇರಬೇಕಾದ ಇಲಾಖೆಯಲ್ಲಿ 8 ಮಂದಿ ಮಾತ್ರ...!

ಕೃಷಿ ಇಲಾಖೆಯಲ್ಲಿ ತೀವ್ರ ಸಿಬ್ಬಂದಿ ಕೊರತೆ 26 ಹುದ್ದೆಗಳು ಇರಬೇಕಾದ ಇಲಾಖೆಯಲ್ಲಿ 8 ಮಂದಿ ಮಾತ್ರ…!

Friday, August 21st, 2015 | suddiblt | no responses                                                                                                       ಬೆಳ್ತಂಗಡಿ ಕೃಷಿ ಇಲಾಖಾ ಕೇಂದ್ರ ಕಚೇರಿ ಬೆಳ್ತಂಗಡಿ : ರೇಷ್ಮೆ ಇಲಾಖೆಯಲ್ಲಿ ಒಬ್ಬ… ಮುಂದೆ ಓದಿ

ಭೂ ಚೇತನ ಯೋಜನೆ: ಗುಚ್ಚ ಗ್ರಾಮಗಳ ರೈತರಿಗೆ ತರಬೇತಿ

Thursday, August 6th, 2015 | suddiblt | no responses  ತೋಟತ್ತಾಡಿ : ಇಂದಿನ ದಿನಗಳಲ್ಲಿ ಭತ್ತದ ಕೃಷಿ ನಶಿಸಿ ಹೋಗುವ ಕಾಲ ಘಟ್ಟದಲ್ಲಿ… ಮುಂದೆ ಓದಿ

ಮಲೆಬೆಟ್ಟು ಒಕ್ಕೂಟದಿಂದ ನೇಜಿ ನಾಟಿ ಪ್ರಾತ್ಯಕ್ಷಿಕೆ

Thursday, August 6th, 2015 | suddiblt | no responses ಬೆಳ್ತಂಗಡಿ: ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬೆಳ್ತಂಗಡಿ ವಲಯದ ಮಲೆಬೆಟ್ಟು ಒಕ್ಕೂಟದ… ಮುಂದೆ ಓದಿ

ಮಲೆಬೆಟ್ಟು : ನೇಜಿ ನಾಟಿ ಮತ್ತು ಪ್ರಾತ್ಯಕ್ಷಿಕೆ

Thursday, July 23rd, 2015 | suddiblt | no responses ಮಲೆಬೆಟ್ಟು : ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನೆ ಮೂಲಕ ರೈತರಿಗೆ ಯಂತ್ರೋಪಕರಣ… ಮುಂದೆ ಓದಿ

ಕೃಷಿ ವಿಚಾರ ಸಂಕಿರಣ-ಕೃಷಿ ಯಂತ್ರೋಪಕರಣಗಳ ಪಾತ್ಯಕ್ಷಿತೆ

Thursday, July 9th, 2015 | suddiblt | no responses    ಮಚ್ಚಿನ: ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಮಡಂತ್ಯಾರು ವಲಯ, ಸ.ಉ.ಹಿ.ಪ್ರಾ. ಶಾಲೆ… ಮುಂದೆ ಓದಿ

ಕೃಷಿ ವಿಚಾರ ಸಂಕಿರಣ ಕಾರ್ಯಕ್ರಮ ಶ್ರೀ ಕ್ಷೇತ್ರ ಧ.ಗ್ರಾ. ಯೋಜನೆಯ ಕಾರ್ಯ ಯೋಜನೆಗಳು ಶ್ಲಾಘನೀಯ: ನಿತ್ಯಾನಂದ ಶೆಟ್ಟಿ

Thursday, July 9th, 2015 | suddiblt | no responses ಅಳದಂಗಡಿ: ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಅಳದಂಗಡಿ ವಲಯ, ಪ್ರಾಥಮಿಕ ಕೃಷಿ… ಮುಂದೆ ಓದಿ

ಕೃಷಿಕನ ಪಾಲಿನ ಅಮೃತಧಾರೆ

ಕೃಷಿಕನ ಪಾಲಿನ ಅಮೃತಧಾರೆ

Saturday, June 20th, 2015 | Suddi Belthangady | no responses   ಬೇಸಿಗೆಯ ಬಿಸಿಲಿಗೆ ಬಲಿದು ಹೋಗಿರುವ ಜೀವ ಸಂಕುಲಕ್ಕೆ ಮುಂಗಾರು ಮಳೆಯ ಮೊದಲ ಹನಿಯ… ಮುಂದೆ ಓದಿ

ಸಹಾಯಧನ ವಿತರಣೆ

ಸಹಾಯಧನ ವಿತರಣೆ

Thursday, June 4th, 2015 | suddiblt | no responses ಚಾರ್ಮಾಡಿ: ಚಾರ್ಮಾಡಿ ವಲಯ ಮಲವಂತಿಗೆ ವಿಭಾಗದ ಶ್ರೀ ಕ್ಷೇ.ಧ. ಗ್ರಾ. ಯೋಜನೆಯ ರವಿಯವರಿಗೆ… ಮುಂದೆ ಓದಿ

ತಿಪಟೂರಿನಲ್ಲಿ ೩೫ನೇ ರಾಜ್ಯ ಮಟ್ಟದ ಕೃಷಿಮೇಳ  ಎರಡನೇ ಕೃಷಿ ಕ್ರಾಂತಿ ಸಂಭವಿಸಬೇಕಾಗಿದೆ: ಡಾ| ಹೆಗ್ಗಡೆ

Thursday, February 12th, 2015 | Suddi Belthangady | no responses ಬೆಳ್ತಂಗಡಿ: ಇಂದು ಕೃಷಿ ಸಂಕಷ್ಟಗಳ ಸಂದಿಗ್ಧತೆಯಲ್ಲಿದೆ. ರೈತರು ನಷ್ಟಗಳ ಮೂಟೆ ಹೊರಲಾರದೆ ನಿತ್ರಾಣರಾಗಿದ್ದಾರೆ.… ಮುಂದೆ ಓದಿ

ಕೃಷಿ ಇಲಾಖಾ ಯೋಜನೆಗಳ ಮಾಹಿತಿ ಕಾರ್ಯಕ್ರಮ

ಕೃಷಿ ಇಲಾಖಾ ಯೋಜನೆಗಳ ಮಾಹಿತಿ ಕಾರ್ಯಕ್ರಮ

Tuesday, February 3rd, 2015 | Suddi Belthangady | no responses ವೇಣೂರು: ವೇಣೂರು ಗ್ರಾ.ಯೋಜನೆ ಕಚೇರಿಯ ಸಭಾಂಗಣದಲ್ಲಿ ತೋಟಗಾರಿಕಾ ಇಲಾಖೆ, ತಾ.ಪಂ. ೨೦೧೪-೧೫ನೇ ಸಾಲಿನ… ಮುಂದೆ ಓದಿ

ಮುಂಡಾಜೆ -ಸಾವಯವ ಕೃಷಿ ಮಾಹಿತಿ ಕಾರ್ಯಕ್ರಮ

ಮುಂಡಾಜೆ -ಸಾವಯವ ಕೃಷಿ ಮಾಹಿತಿ ಕಾರ್ಯಕ್ರಮ

Saturday, January 10th, 2015 | suddiblt | no responses                 ಮುಂಡಾಜೆ : ಮುಂಡಾಜೆ ಪದವಿ ಪೂರ್ವ ಕಾಲೇಜಿನಲ್ಲಿ ರಾಷ್ಟ್ರೀಯ ಹಸಿರು ಪಡೆ ಹಾಗೂ… ಮುಂದೆ ಓದಿ

ಕೃಷಿ ವಿಚಾರ ಸಂಕಿರಣ ಯಂತ್ರೋಪಕರಣಗಳ ಪ್ರದರ್ಶನ

ಕೃಷಿ ವಿಚಾರ ಸಂಕಿರಣ ಯಂತ್ರೋಪಕರಣಗಳ ಪ್ರದರ್ಶನ

Thursday, October 23rd, 2014 | suddiblt | no responses ನೆರಿಯ: ಇಲ್ಲಿನ ಸರಕಾರಿ ಹಿರಿಯ ಪ್ರಾಥಾಮಿಕ ಶಾಲೆ ಬಯಲು ಇಲ್ಲಿ ಶ್ರೀ ಕ್ಷೇತ್ರ… ಮುಂದೆ ಓದಿ

ಧರ್ಮಸ್ಥಳ ಪ್ರಾ ಕೃಷಿ ಪ ಸಹಕಾರಿ ಸಂಘದ ಮಹಾಸಭೆ ಶೇ 12  ಡಿವಿಡೆಂಟ್ ಘೋಷಣೆ

Thursday, September 25th, 2014 | suddiblt | no responses ಧರ್ಮಸ್ಥಳ: ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘ ಧರ್ಮಸ್ಥಳ ಇದರ ೨೦೧೩-೧೪ನೇ ಸಾಲಿನ… ಮುಂದೆ ಓದಿ

ಬೆಳ್ತಂಗಡಿ : ಗುರುವಾಯನಕೆರೆ ಉಪಕೇಂದ್ರದಲ್ಲಿ ತುರ್ತು ಕಾಮಗಾರಿಯನ್ನು ಕೈಗೊಳ್ಳಬೇಕಾದ ಹಿನ್ನಲೆಯಲ್ಲಿ ಎ. 26 ಮತ್ತು 28ರಂದು ಗುರುವಾಯನಕೆರೆ ಉಪಕೇಂದ್ರದಿಂದ ಹೊರಹೊಮ್ಮುವ ವೇಣೂರು ಮತ್ತು ಆರಂಬೋಡಿ ಫೀಡರ್‌ಗಳಲ್ಲಿ ಬೆಳಿಗ್ಗೆ 9.00ರಿಂದ ಸಂಜೆ 5.00ರ ತನಕ ವಿದ್ಯುತ್ ನಿಲುಗಡೆಯಾಗಲಿದೆ ಎಂದು ಮೆಸ್ಕಾಂ ಪ್ರಕಟಣೆಯಲ್ಲಿ ತಿಳಿಸಿದೆ.

beo1

beoಬೆಳ್ತಂಗಡಿ: ಶಿಕ್ಷಕರ ವಿವಿಧ ಬೇಡಿಕೆಗಳನ್ನು ಮುಂದಿಟ್ಟು ಅಖಿಲ ಭಾರತ ಪ್ರಾಥಮಿಕ ಶಿಕ್ಷಕರ ಫೆಡರೇಶನ್ ವತಿಯಿಂದ ರಾಷ್ಟ್ರಾಧ್ಯಂತ ಹೋರಾಟಗಳನ್ನು ನಡೆಸಲಾಗುತ್ತಿದ್ದು ಅದರ ಎರಡನೇ ಹಂತದ ಕಾರ್ಯಕ್ರಮವಾಗಿ ಎ. 25 ರಂದು ದೇಶಾಧ್ಯಂತ ಎಲ್ಲಾ ಶಿಕ್ಷಣ ಇಲಾಖೇ ಕಚೇರಿ ಮುಂದೆ ಶಿಕ್ಷಕರ ಏಕದಿನ ಮೌನ ಧರಣಿ ನಡೆಯಲಿದ್ದು ಈ ಹಿನ್ನೆಲೆಯಲ್ಲಿ ಬೆಳ್ತಂಗಡಿ ಬಿಇಒ ಕಚೇರಿ ಎದುರು ಕೂಡ ನಡೆಯಿತು.
7ನೇ ವೇತನ ಆಯೋಗದ ಶಿಫಾರಸ್ಸುಗಳನ್ನು ಎಲ್ಲಾ ರಾಜ್ಯಗಳಲ್ಲಿ ಜಾರಿಗೆ ತರಬೇಕು, ನೂತನ ಪಿಂಚಣಿ ಯೋಜನೆ ರದ್ದುಗೊಳಿಸಿ ಹಳೇ ಪಿಂಚಣಿ ಯೋಜನೆ ಜಾರಿಗೆ ತರಬೇಕು, ಪ್ರಾಥಮಿಕ ಶಿಕ್ಷಣ ಮಂಡಳಿ ರಚಿಸಬೇಕು, ರಾಜ್ಯದ ಎಲ್ಲಾ ಶಾಲೆಗಳಲ್ಲಿ ಪೂರ್ವ ಪ್ರಾಥಮಿಕ ಶಿಕ್ಷಣ ಎಲ್‌ಕೆಜಿ, ಯುಕೆಜಿ ಆರಂಭಿಸಬೇಕು, ಶಾಲೆಗೊಬ್ಬ ಮುಖ್ಯೋಪಾಧ್ಯಾಯ ನೇಮಕ, ಶಿಕ್ಷಕ ಶಿಕ್ಷಕಿ ವಿದ್ಯಾರ್ಥಿ ಅನುಪಾತ ಮಾಡಬೇಕು ಎಂಬಿತ್ಯಾಧಿ ಪ್ರಮುಖ ಬೇಡಿಕೆಗಳು ಈ ಬಾರಿಯ ಹೋರಾಟದಲ್ಲಿತ್ತು.

beet rokars copyಬೆಳ್ತಂಗಡಿ: ಬೀಟ್ ರಾಕರ‍್ಸ್ ಡ್ಯಾನ್ಸ್ ಅಕಾಡೆಮಿ ಬೆಳ್ತಂಗಡಿ ಇದರ 6ನೇ ವರ್ಷದ ವಾರ್ಷಿಕೋತ್ಸವದ ಪ್ರಯುಕ್ತ ಎ. 22 ರಂದು ಬೆಳ್ತಂಗಡಿ ಮಾರಿಗುಡಿ ಮೈದಾನದಲ್ಲಿ ಬೆಳಕು ಶಬ್ಧತರಂಗದ ಅದ್ಭುತ ನೃತ್ಯ ಸಂಗೀತ ಸೆಲೆಬ್ರೆಟಿ ನೈಟ್ ವಿಶೇಷ ಕಾರ್ಯಕ್ರಮ, ರಾಜ್ಯ ಮಟ್ಟದ ಡ್ಯಾನ್ಸ್ ಸ್ಪರ್ಧೆಯೊಂದಿಗೆ ನಡೆಯಿತು.
ಅಧ್ಯಕ್ಷತೆಯನ್ನು ಕರಾವಳಿ ಕರ್ನಾಟಕ ಡ್ಯಾನ್ಸ್ ಅಕಾಡಮಿ ಯೂನಿಯನ್ ಅಧ್ಯಕ್ಷ ರಾಜೇಶ್ ಕಣ್ಣೂರು ವಹಿಸಿದ್ದರು.
ಮುಖ್ಯ ಅತಿಥಿಗಳಾಗಿ ಪಟ್ಟಣ ಪಂಚಾಯತ್ ಅಧ್ಯಕ್ಷ ಮುಗುಳಿ ನಾರಾಯಣ ರಾವ್, ಅನುಗ್ರಹ ಟ್ರೈನಿಂಗ್ ಕಾಲೇಜಿನ ಪ್ರಾಂಶುಪಾಲ ತಲ್‌ಹತ್ ಎಂ. ಜಿ, ಜೇಸಿಐ ಬೆಳ್ತಂಗಡಿ ಮಂಜುಶ್ರೀ ಅಧ್ಯಕ್ಷ ಸಂತೋಷ್ ಪಿ ಕೋಟ್ಯಾನ್, ಹೈಕೋರ್ಟ್ ನ್ಯಾಯವಾದಿ ಹರೀಶ್ ಪೂಂಜ, ಸುವರ್ಣ ಸಾಂಸ್ಕೃತಿಕ ಪ್ರತಿಷ್ಠಾನದ ಅಧ್ಯಕ್ಷ ಸಂಪತ್ ಬಿ ಸುವರ್ಣ, ತುಳು ಚಲನಚಿತ್ರ ನಿರ್ಮಾಪಕ ಹರೀಶ್ ರಾವ್, ಸಕಲೇಶ್‌ಪುರದ ರಿದಂ ಕೀಪಝ್ ಡ್ಯಾನ್ಸ್ ಅಕಾಡಮಿ ಅಧ್ಯಕ್ಷ ಕೃಷ್ಣೇ ಗೌಡ, ರಾಜ್ಯ ಸರಕಾರಿ ನೌಕರರ ಸಂಘದ ಸದಸ್ಯ ಕೆ ಧರಣೇಂದ್ರ ಕುಮಾರ್ ಜೈನ್, ಹೋಲಿ ರಿಡೀಮರ್ ಆಂಗ್ಲ ಮಾಧ್ಯಮ ಶಾಲೆ ಬೆಳ್ತಂಗಡಿಯ ಮುಖ್ಯೋಪಾಧ್ಯಾಯ ರೆ. ಫಾ ಅನಿಲ್ ಪ್ರಕಾಶ್ ಡಿಸಿಲ್ವ ಇವರುಗಳು ಶುಭ ಕೋರಿದರು.

beet rokars karate copyಬೆಳ್ತಂಗಡಿ: ಬೀಟ್ ರಾಕರ‍್ಸ್ ಡ್ಯಾನ್ಸ್ ಅಕಾಡಮಿ ಮತ್ತು ಶ್ರೀ ಸಾಯಿ ಕಾಸ್ಟ್ಯೂಮ್ಸ್ ವರ್ಲ್ಡ್ ಎಂಬ ಹೆಸರಿನಲ್ಲಿ ಬೆಳ್ತಂಗಡಿಯಲ್ಲಿ ಕಳೆದ ೬ ವರ್ಷಗಳಿಂದ ಕಾರ್ಯಾಚರಿಸುತ್ತಿರುವ ಸಂಸ್ಥೆಯ ವತಿಯಿಂದ ಮುಂದಕ್ಕೆ ಅನುಭವಿ ಕರಾಟೆ ಶಿಕ್ಷಕರಿಂದ ಕರಾಟೆ ತರಬೇತಿ ನೀಡಲು ಮತ್ತು ಕಲಾಸಕ್ತ ವಿದ್ಯಾರ್ಥಿಗಳಿಗೆ ನಾಟಕ ಮತ್ತು ರಂಗ ಅಭಿನಯ ತರಬೇತಿ ನೀಡುವ ವಿಭಾಗವು ಎ. 22 ರಂದು ಉದ್ಘಾಟನೆಗೊಂಡಿತು.
ಜೇಸಿಐ ಬೆಳ್ತಂಗಡಿ ಮಂಜುಶ್ರೀ ಇದರ ಪೂರ್ವಾಧ್ಯಕ್ಷ, ಸಂಘಟಕ ಹಾಗೂ ಉದ್ಯಮಿ ಪ್ರಮೋದ್ ಆರ್ ನಾಯಕ್ ಉದ್ಘಾಟನೆ ನೆರವೇರಿಸಿದರು. ಈ ಸಂದರ್ಭ ಜೇಸಿಐ ವಲಯಾಧ್ಯಕ್ಷ ಚಿದಾನಂದ ಇಡ್ಯ, ಸುದ್ದಿ ಬಿಡುಗಡೆ ವ್ಯವಸ್ಥಾಪಕ ಮಂಜುನಾಥ ರೈ, ಬೀಟ್ ರಾಕರ‍್ಸ್ ಡ್ಯಾನ್ಸ್ ಅಕಾಡಮಿ ಮುಖ್ಯಸ್ಥ ಜಿತೇಶ್ ಕುಮಾರ್, ಕರಾಟೆ ತರಬೇತುದಾರರು ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.

arasinamakki7

arasinamakki4 copy

arasinamakki5

arasinamakki6

arasinamakki

arasinamakki1

arasinamakki2

arasinamakki3ಅರಸಿನಮಕ್ಕಿ ಶ್ರೀನಿವಾಸ ಕಲ್ಯಾಣೋತ್ಸವವು ವಿಜೃಂಭಣೆಯಿಂದ ಎ. 22ರಂದು ನಡೆಯಿತು.

barengayaನಿಡ್ಲೆ : ನಿಸರ್ಗ ಯುವಜನೇತರ ಮಂಡಲ(ರಿ) ಬರೆಂಗಾಯ ಹಾಗೂ ದ.ಕ ಜಿಲ್ಲಾ ಅಮೆಚ್ಯೂರ್ ಜಿಲ್ಲಾ ಕಬಡ್ಡಿ ಅಸೋಸಿಯೇಷನ್ (ರಿ) ಇದರ ಸಹಯೋಗದೊಂದಿಗೆ ದ.ಕ, ಉಡುಪಿ, ಕಾಸರಗೊಡು ಜಿಲ್ಲೆಯ ೭೦ಕೆ.ಜಿ ವಿಭಾಗದ ಪುರುಷರ ಅಂತರ್ ಜಿಲ್ಲಾ ಮಟ್ಟದ ಹೊನಲು ಬೆಳಕಿನ ಕಬಡ್ಡಿ ಪಂದ್ಯಾಟವು ಹಿ.ಪ್ರಾ ಶಾಲೆ ಬರೆಂಗಾಯದಲ್ಲಿ ಎ. 22ರಂದು ಜರಗಿತು.
ನಿಡ್ಲೆ ಗ್ರಾ.ಪಂ ಅಧ್ಯಕ್ಷರಾದ ಶ್ರೀಮತಿ ಶುಭ ದೇವಧರ್ ಅಧ್ಯಕ್ಷತೆ ವಹಿಸಿದ್ದರು. ಬೆಂಗಳೂರು ಹೈಕೋರ್ಟ್ ನ್ಯಾಯಾವಾದಿ ಹರೀಶ್ ಪೂಂಜ ಕಾರ್ಯಕ್ರಮ ಉದ್ಘಾಟಿಸಿದರು. ಮುಖ್ಯ ಅತಿಥಿಗಳಾಗಿ ಬೆಳ್ತಂಗಡಿ ಸಹಾಯಕ ಯುವ ಸಬಲೀಕರಣ ಮತ್ತು ಕ್ರೀಡಾಧಿಕಾರಿ ಪ್ರಭಾಕರ ನಾರಾವಿ, ಕಳೆಂಜ ಗ್ರಾ.ಪಂ ಸದಸ್ಯೆ ಶ್ರೀಮತಿ ಸುಶೀಲ ವಸಂತ ಗೌಡ, ನಿಡ್ಲೆ ಗ್ರಾ.ಪಂ ಉಪಾಧ್ಯಕ್ಷ ರುಕ್ಮಯ ಪೂಜಾರಿ ಪೊರ್ಕಳ, ನಿಡ್ಲೆ ಗ್ರಾ.ಪಂ ಸದಸ್ಯರಾದ ಹರೀಶ್ ಪೊಂರ್ದಿಲ, ಶ್ರೀಮತಿ ಲಲಿತಾ, ಬರೆಂಗಾಯ ನಿಸರ್ಗ ಯುವ ಜನೇತರ ಮಂಡಲ ಅಧ್ಯಕ್ಷರಾದ ಪುನೀತ್ ಪೊಂರ್ದಿಲ, ಬರೆಂಗಾಯ ಶಾಲಾ ಎಸ್.ಡಿ.ಎಂ.ಸಿ ಅಧ್ಯಕ್ಷ ಕೃಷ್ಣ ಕುಮಾರ್ ಕಾಟ್ಲ, ಬರೆಂಗಾಯ ಜ್ಯೋತಿ ಹಳೆ ವಿದ್ಯಾರ್ಥಿ ಸಂಘದ ಅಧ್ಯಕ್ಷ ಹೇಮಂತ್ ಗೌಡ ಕಜೆ, ಬರೆಂಗಾಯ ಶ್ರೀಕೃಷ್ಣ ಜನ್ಮಾಷ್ಟಮಿ ಸಮಿತಿ ಅಧ್ಯಕ್ಷ ಪ್ರವೀಣ್ ಹೆಬ್ಬರ್ ಪೊಂರ್ದಿಲ ಆಗಮಿಸಿದ್ದರು. ವೇದಿಕೆಯಲ್ಲಿ ತಾ.ಪಂ ಮಾಜಿ ಉಪಾಧ್ಯಕ್ಷ ವಿಷ್ಣು ಮರಾಠೆ, ಸನ್ಮಾನಗೊಳ್ಳಲಿದ್ದ ಬರೆಂಗಾಯ ಹಿ.ಪ್ರಾ ಶಾಲಾ ಮುಖ್ಯೋಪಾಧ್ಯಾಯ ಗೋಪಾಲ, ಮೂಡಬಿದ್ರೆ ಆಳ್ವಾಸ್ ಶಿಕ್ಷಣ ಸಂಸ್ಥೆಯ ಕನ್ನಡ ಉಪನ್ಯಾಸಕರಾದ ಚಂದ್ರಶೇಖರ್ ಗೌಡ ಕಜೆ ಉಪಸ್ಥಿತರಿದ್ದರು.

mundajeಮುಂಡಾಜೆ : ಯಂಗ್ ಚಾಲೆಂಜರ‍್ಸ್ ಕ್ರೀಡಾ ಸಂಘ ಮುಂಡಾಜೆ ಇದರ ವತಿಯಿಂದ ಆರ್.ಎನ್. ಭಿಡೆ ಸ್ಮರಣಾರ್ಥ ಇಂದು(ಎ.22) ಓವರ್ ಆರ್ಮ್ ಕ್ರಿಕೆಟ್ ಪಂದ್ಯಾಟದ ಉದ್ಘಾಟನಾ ಸಮಾರಂಭವು ಭಿಡೆ ನಾರಾಯಣ ಭಟ್ ಕ್ರೀಡಾಂಗಣ ಜೂನಿಯರ್ ಕಾಲೇಜು ಮುಂಡಾಜೆಯಲ್ಲಿ ನಡೆಯಿತು.
ಕಾರ್ಯಕ್ರಮದ ಉದ್ಘಾಟನೆಯನ್ನು ನ್ಯಾಯವಾದಿ ಶೈಲೇಶ್ ಠೋಸರ್ ನೆರವೇರಿಸಿದರು. ಅಧ್ಯಕ್ಷತೆಯನ್ನು ಯಂಗ್ ಚಾಲೆಂಜರ‍್ಸ್ ಕ್ರೀಡಾ ಸಂಘದ ಅಧ್ಯಕ್ಷ ಆಶ್ರಫ್ ಆಲಿಕುಂಞ ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ಮುಂಡಾಜೆ ಗ್ರಾ.ಪಂ ಸದಸ್ಯರುಗಳಾದ ನಾರಾಯಣ ಗೌಡ ದೇವಸ್ಯ, ಚೆನ್ನಕೇಶವ ನಾಯ್ಕ, ಸುರೇಶ್ ಹೆಗ್ಡೆ, ಗಣೇಶ್ ಬಂಗೇರ, ಮುಂಡಾಜೆ ಶತಾಬ್ದಿ ವಿದ್ಯಾಲಯ ಸಮಿತಿ ಜೊತೆ ಕಾರ್ಯದರ್ಶಿ ಅರವಿಂದ ಹೆಬ್ಬಾರ್ ಭಾಗವಹಿಸಿದ್ದರು. ಯಂಗ್ ಚಾಲೆಂಜರ‍್ಸ್ ಕ್ರೀಡಾ ಸಂಘದ ಸಂಚಾಲಕ ನಾಮದೇವ ರಾವ್, ಶಶಿಧರ ಠೋಸರ್ ಉಪಸ್ಥಿತರಿದ್ದರು.

charmadi.jpg1

charmadiಚಾರ್ಮಾಡಿ : ಗುರುವಾರ ಮಧ್ಯರಾತ್ರಿ ಮಂಗಳೂರಿನಿಂದ ಭದ್ರಾವತಿ ಕಡೆ ತೆರಳುತ್ತಿದ್ದ ಡಿಸೇಲ್ ಟ್ಯಾಂಕರ್ ಚಾರ್ಮಾಡಿ ಘಾಟಿಯಲ್ಲಿ ಪ್ರಪಾತಕ್ಕೆ ಬಿದ್ದು,  ಜಖಂಗೊಂಡಿದೆ. ಚಾಲಕನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.

gerukatte

gerukatte1ಗೇರುಕಟ್ಟೆ : ಕೋಳಿ ಸಾಗಾಟ ಮಾಡುತ್ತಿದ್ದ ಪಿಕಪ್ ವಾಹನ ಮಗುಚಿ ಬಿದ್ದ ಘಟನೆ ಗೇರುಕಟ್ಟೆಯ ರೇಶ್ಮೆ ಕ್ರಾಸ್ ಬಳಿ ನಡೆದಿದೆ.

Bisu Jathre Photo copy

Bisu Jathre Photo copy1

Bisu Jathre Photo copy2ಉಜಿರೆ: ವಿಷು ಜಾತ್ರೆ ಸಂದರ್ಭ ಧರ್ಮಸ್ಥಳದಲ್ಲಿ ಗುರುವಾರ ರಾತ್ರಿ ಬ್ರಹ್ಮರಥೋತ್ಸವ ನಡೆಯಿತು.
ರಾಜ್ಯ ವಿವಿಧ ಭಾಗಗಳಿಂದ ಬಂದ ಸುಮಾರು ಇನ್ನೂರು ಮಂದಿ ಕಲಾವಿದರು ಶಂಖ, ತಾಳ, ಬ್ಯಾಂಡ್, ಚೆಂಡೆ ವಾದನದ ಮೂಲಕ ಕಲಾ ಸೇವೆ ಮಾಡಿದರು. ಸಹಸ್ರಾರು ಮಂದಿ ಭಕ್ತಾದಿಗಳು ರಥೋತ್ಸವ ವೀಕ್ಷಿಸಿ ಧನ್ಯತೆ ಪಡೆದರು.

¸swacchthe

sw

WhatsApp Image 2017-04-21 at 11.18ಗುರುವಾಯನಕೆರೆಯಲ್ಲಿ ಎಸ್.ಡಿ.ಎಂ ವಿದ್ಯಾರ್ಥಿಗಳಿಂದ ಹಾಗೂ ಊರ ಸಂಘ ಸಂಸ್ಥೆಗಳಿಂದ ಸ್ವಚ್ಛತಾ ಕಾರ್ಯಕ್ರಮವು ಇಂದು ನಡೆಯಿತು.

adike mara yanthra copyಉಜಿರೆ: ಇಲ್ಲಿನ ಎಸ್‌ಡಿಎಂ ಪಾಲಿಟೆಕ್ನಿಕ್ ಕಾಲೇಜಿನ ವಿದ್ಯಾರ್ಥಿಗಳು ಕೃಷಿ ಕೆಲಸಕ್ಕೆ ಪೂರಕವಾಗಿರುವ ಮತ್ತು ಅತ್ಯಂತ ಕಡಿಮೆ ದರದಲ್ಲಿ ಬಳಕೆ ಮಾಡಬಹುದಾದ ರೀತಿಯ ಕೆಲವೊಂದು ಯಂತ್ರೋಪಕರಣಗಳನ್ನು ತಮ್ಮದೇ ಕಲ್ಪನೆಯಲ್ಲಿ ಆವಿಷ್ಕರಿಸಿದ್ದು ಉತ್ತಮ ಮಾರುಕಟ್ಟೆ ಕೇಂದ್ರೀಕರಿಸುವ ಎಲ್ಲಾ ಅರ್ಹತೆಗಳನ್ನು ಪಡೆದುಕೊಂಡಿದೆ.
ವಿದ್ಯಾರ್ಥಿಗಳು ತಯಾರುಗೊಳಿಸಿದ ಕೆಲವೊಂದು ಆವಿಷ್ಕಾರಗಳಲ್ಲಿ ಅಡಿಕೆ ಮರಕ್ಕೆ ಹತ್ತುವ ಮತ್ತು ಔಷಧಿ ಸಿಂಪಡಿಸುವ ಯಂತ್ರವೂ ಒಂದು.
ಈ ಪ್ರಾಜೆಕ್ಟ್‌ಗೆ ಕೇವಲ 10 ಸಾವಿರ ರೂ. ಗಳು ಮಾತ್ರ ಖರ್ಚು ತಗುಲಲಿದೆ.
ಆವಿಷ್ಕಾರ ತಂಡದ ಸದಸ್ಯ ವಿದ್ಯಾರ್ಥಿಗಳು ಯಾರ‍್ಯಾರು?
ಭರತ್ ಎಚ್, ಅಕಾಶ್ ಕೆ, ಅಶ್ವಿನಿ, ದರ್ಶನ್ ಕುಮಾರ್, ದಿವ್ಯಾ ಎಸ್, ಮತ್ತು ಉತ್ತಮ್ ಎನ್ ಇವರ ತಂಡ ಈ ಆವಿಷ್ಕಾರ ನಡೆಸಿ ಯಶಸ್ಸು ಸಾಧಿಸಿದೆ. ಇವರಿಗೆ ಅವನೀಶ್ ಅವರು ಮಾರ್ಗದರ್ಶನ ನೀಡಿದ್ದಾರೆ. ಈ ಯಂತ್ರವು ಸುಲಭವಾಗಿ ಅಡಿಕೆ ಮರ ಹತ್ತಲು ಮತ್ತು ಅಡಿಕೆ ಬೆಳೆಗೆ ಕೀಟ ನಾಶಕ ಸಿಂಪಡಿಸಲು ಸಹಾಯಕವಾಗಿ ಕಾರ್ಯನಿರ್ವಹಿಸುತ್ತದೆ.
ಉಪಯೋಗಗಳು:
ಇಂದಿನ ದಿನಗಳಲ್ಲಿ ಅಡಿಕೆ ಮರಕ್ಕೆ ಮದ್ದನ್ನು ಸಿಂಪಡಿಸುವುದು ಕಷ್ಟವಾಗಿದೆ. ಅದನ್ನು ಅರಿತು ಈ ಯಂತ್ರ ಸಿದ್ದಪಡಿಸಲಾಗಿದೆ. 12 ವೋಲ್ಟ್ ವೈಪರ್ ಮೋಟಾರು ಬಳಸಿಕೊಂಡು ಮೇಲಕ್ಕೆ ಹತ್ತುವ ಅತ್ಯಂತ ಸರಳ ಮಾದರಿಯಿಂದ ರೂಪಿತವಾಗಿದೆ. ಕೇಲವ ಎರಡೇ ನಿಮಿಷದಲ್ಲಿ ಅಡಿಕೆ ಮರ ಏರುವ ಸಾಮರ್ಥ್ಯ ಹೊಂದಿರುವ ಈ ಯಂತ್ರ ಡಿ.ಸಿ ಮೋಟರನ್ನು ಬಳಸಿ ಲಂಬವಾಗಿ ಮತ್ತು ಅಡ್ಡವಾಗಿ, ಒಂದು ಅಡಿಕೆ ಮರ ಕೇಂದ್ರೀಕರಿಸಿ ಪಕ್ಕದ 7-8 ಮರಗಳಿಗೆ ಕೀಟನಾಶಕ ಸಿಂಪಡಿಸುವ ಸಾಮರ್ಥ್ಯ ಹೊಂದಿದೆ.
ಸೆಲ್ಫ್ ಲುಕ್ಕಿಂಗ್ ನಿಯಮದ ಪ್ರಕಾರ ಕಾರ್ಯನಿರ್ವಹಿಸುವ ಈ ಯಂತ್ರವು ಪರಿಸರ ಸ್ನೇಹಿಯಾಗಿದ್ದು 12 ವೋಲ್ಟೇಜ್ ಬ್ಯಾಟರಿ ಮೂಲಕವೂ ಕಾರ್ಯನಿರ್ವಹಿಸುವ ಕ್ಷಮತೆ ಹೊಂದಿದೆ. ಕೇವಲ ಎರಡೇ ಸೆಕುಂಡುಗಳಲ್ಲಿ ಮರಕ್ಕೆ ಯಂತ್ರವನ್ನು ಅಳವಡಿಸಬಹುದಾಗಿದೆ. ಯಂತ್ರಕ್ಕೆ ನೆಲದಿಂದ ಕೀಟ ನಾಶಕವನ್ನು ಪವರ್ ಸ್ಪ್ರೇಯರ್ ಅಥವಾ ಗಟರ್ ಪಂಪ್‌ನ ಮೂಲಕ ಪೈಪ್‌ಮೂಲಕ ಕಳುಹಿಸಿಕೊಡಬಹುದಾಗಿದೆ. ಇದರ ನಿಯಂತ್ರಣವನ್ನು ಕೇವಲ ಒಬ್ಬನೇ ವ್ಯಕ್ತಿ ಮಾಡಬಹುದಾಗಿದ್ದು, ಅಡಿಕೆ ಕೃಷಿ ಕ್ಷೇತ್ರದಲ್ಲಿ ಬಹಳ ಬೇಡಿಕೆಯ ಕೂಲಿ ಕಾರ್ಮಿಕರ ಕೊರತೆಯ ಜಾಗವನ್ನು ಈ ಯಂತ್ರ ತುಂಬುವುದರಲ್ಲಿ ಸಂದೇಹವಿಲ್ಲ.
ಇದೇ ಯಂತ್ರದ ಮೂಲಕ ಮುಂದಕ್ಕೆ ಗೊನೆ ಕೀಳುವುದು ಮತ್ತು ಕಂಪ್ಯೂಟರೀಕೃತವಾಗಿ ಅಭಿವೃದ್ಧಿ ಪಡಿಸುವ ಉದ್ಧೇಶವಿದೆ ಎಂದು ಪ್ರಾಧ್ಯಾಪಕರಾದ ಅವನೀಶ್ ಅವರು ತಿಳಿಸುತ್ತಾರೆ.

thrisha copyಕನ್ಯಾಡಿ 1 ಇಲ್ಲಿಯ ಕಂಬಳದಡ್ಡ ಮನೆಯ ಸುರೇಶ್ ಗೌಡ ಮತ್ತು ಸತ್ಯ ದಂಪತಿಯ ಪುತ್ರಿ ತ್ರಿಶಾಳ 3ನೇ ವರ್ಷದ ಹುಟ್ಟುಹಬ್ಬವನ್ನು ಎ. 17ರಂದು ಆಚರಿಸಲಾಯಿತು.

bhavish copyಚಿಬಿದ್ರೆ ಗ್ರಾಮದ ಪೆರಿಯಡ್ಕ ಬರಮೇಲು ಮನೆ ಲಕ್ಷ್ಮಣ ಗೌಡ ಮತ್ತು ವೇದಾವತಿ ದಂಪತಿ ಪುತ್ರ ಭವಿಷ್‌ನ 5ನೇ ವರ್ಷದ ಹುಟ್ಟುಹಬ್ಬವನ್ನು ಎ. 12ರಂದು ಆಚರಿಸಲಾಯಿತು.

samyuk copyಲಾಯಿಲ ಗ್ರಾಮದ ಸುರುಳಿ ಸ್ಫೂರ್ತಿ ನಿಲಯ ಗಣೇಶ್ ಶೆಟ್ಟಿ ಮತ್ತು ವಿಶಾಲಾಕ್ಷಿ ದಂಪತಿ ಪುತ್ರ ಸಮ್ಯಕ್ ಜಿ. ಶೆಟ್ಟಿ ಯ ಮೊದಲನೇ ವರ್ಷದ ಹುಟ್ಟುಹಬ್ಬ ಎ. 11ರಂದು ಜರಗಿತು.

baby copyಬಜಿರೆ ಗ್ರಾಮದ ಹೊಸಪಟ್ಣ ಹೊಸವಕ್ಲು ಮಜಲು  ದಯಾನಂದ ಪೂಜಾರಿ ಮತ್ತು ಶ್ರೀಮತಿ ವನಿತಾ ದಂಪತಿಯ ಪುತ್ರ ಧನಿಷ್  ಈತನ ಪ್ರಥಮ ವರ್ಷದ ಹುಟ್ಟುಹಬ್ಬವು ಎ.16ರಂದು ಜರುಗಿತು.

umesh-shailaja copyಬೆಳಾಲು ಗ್ರಾಮದ ಪೊಯ್ಯೋದಡ್ಡ ಮನೆ ಬಾಬು ಗೌಡರ ಪುತ್ರ ಉಮೇಶ ಪಿ. ಗೌಡ ರವರ ವಿವಾಹವು ಹುಣ್ಸೆಕಟ್ಟೆ ಶ್ರೀಮತಿ ಕಮಲಾ ಮತ್ತು  ಕೆ. ಎನ್ ಮಂಜುನಾಥ ಗೌಡರ ಪುತ್ರಿ ಶೈಲಜಾ ರೊಂದಿಗೆ ಎ. 10ರಂದು ಬೆಳ್ತಂಗಡಿ ಸಿ.ವಿ.ಸಿ  ಹಾಲ್‌ನಲ್ಲಿ ಜರುಗಿತು.

add1

ಬೆಳ್ತಂಗಡಿ : ಗುರುವಾಯನಕೆರೆ ಉಪಕೇಂದ್ರದಲ್ಲಿ ತುರ್ತು ಕಾಮಗಾರಿಯನ್ನು ಕೈಗೊಳ್ಳಬೇಕಾದ ಹಿನ್ನಲೆಯಲ್ಲಿ ಎ. 22ರಂದು ಗುರುವಾಯನಕೆರೆ ಉಪಕೇಂದ್ರದಿಂದ ಹೊರಹೊಮ್ಮುವ ವೇಣೂರು ಮತ್ತು ಆರಂಬೋಡಿ ಫೀಡರ್‌ಗಳಲ್ಲಿ ಬೆಳಿಗ್ಗೆ 9.00ರಿಂದ ಸಂಜೆ 5.00ರ ತನಕ ವಿದ್ಯುತ್ ನಿಲುಗಡೆಯಾಗಲಿದೆ ಎಂದು ಮೆಸ್ಕಾಂ ಪ್ರಕಟಣೆಯಲ್ಲಿ ತಿಳಿಸಿದೆ.

venur vikasana shibira samaropa copyವೇಣೂರು: ಶಿಬಿರಗಳಲ್ಲಿ ತತ್ವ ಸಿದ್ದಾಂತ ಮುಖ್ಯ. ಆದ್ಯಾತ್ಮಿಕ ಚಿಂತನೆಯನ್ನು ವಿಕಸನಗೊಳಿಸುವುದು ಇದರ ಮೂಲ ಧ್ಯೇಯವಾಗಬೇಕೆ ಹೊರತು ಮನೋರಂಜನೆ ಆಗಬಾರದು. ಇಂತಹ ಧಾರ್ಮಿಕ ಶಿಬಿರಗಳಲ್ಲಿ ಮಠ, ಮಠಾಧೀಶರ ಪರಿಚಯ ಮೂಡಿಸುವುದ ಜೊತೆಗೆ ಅಲ್ಲಿಗೆ ಭೇಟಿ ನೀಡುವುದಕ್ಕೆ ಪ್ರೇರಣೆಯಾಗಲಿ ಎಂದು ಮೂಡಬಿದಿರೆ ಜೈನ ಮಠದ ಭಾರತ ಭೂಷಣ ಶ್ರೀ ಭಟ್ಟಾರಕ ಚಾರುಕೀರ್ತಿ ಪಂಡಿತಾಚಾರ್ಯವರ್ಯ ಮಹಾ ಸ್ವಾಮೀಜಿ ನುಡಿದರು.
ಅವರು ಎ.16 ರಂದು ವೇಣೂರು ಶ್ರೀ ಬಾಹುಬಲಿ ಸಭಾಭವನದಲ್ಲಿ ಇಲ್ಲಿಯ ಬಾಹುಬಲಿ ಯುವಜನ ಸಂಘ ಮತ್ತು ಶ್ರೀ ದಿಗಂಬರ ತೀರ್ಥ ಕ್ಷೇತ್ರ ಸಮಿತಿ ಆಶ್ರಯದಲ್ಲಿ ಜರಗಿದ ಜೈನ ಬಾಲಕ-ಬಾಲಕಿಯರ 17ನೇ ವರ್ಷದ ಧಾರ್ಮಿಕ ಹಾಗೂ ವ್ಯಕ್ತಿತ್ವ ವಿಕಸನ ಶಿಬಿರದ ಸಮಾರೋಪ ಕಾರ್ಯಕ್ರಮದಲ್ಲಿ ಆಶೀರ್ವಚನ ನೀಡಿದರು. ಮಠಗಳ ಬಗ್ಗೆ ಗುರು ಹಾಗೂ ಪರಂಪರೆಯನ್ನು ವಿರೋಧ ಕಟ್ಟಿಕೊಂಡು ಅಂತರ್ಜಾಲಗಳಲ್ಲಿ ಚರ್ಚೆ ನಡೆಯುತ್ತಿರುವುದು ಬೇಸರ ಸಂಗತಿ. ಮಕ್ಕಳಿಗೆ ಮಠ, ಮಠಾಧೀಶರ ಪರಿಚಯ ಮಾಡಿಸಬೇಕು. ಇದು ಅವರು ಧರ್ಮ ಮಾರ್ಗದಲ್ಲಿ ನಡೆಯಲು ಸಹಕಾರಿಯಾಗಲಿದೆ ಎಂದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದ ಉಜಿರೆ ಶ್ರೀ ಧ.ಮಂ. ಪ.ಪೂ. ಕಾಲೇಜಿನ ಪ್ರಾಂಶುಪಾಲ ಪ್ರೊ| ಎನ್. ದಿನೇಶ್ ಚೌಟ ಮಾತನಾಡಿ, ಭಾಷೆಯ ಬಗ್ಗೆ ಸಂವಹನಶೀಲತೆ ಬೆಳೆಸಿ ಕೊಂಡವರಿಗೆ ಸಮಾಜದಲ್ಲಿ ಮಾನ್ಯತೆ ಜಾಸ್ತಿ. ಅದು ಇಂತಹ ಶಿಬಿರಗಳು ತಿಳಿಸುತ್ತದೆ. ಇಂದು ಜೈನ ಧರ್ಮೀಯರು ಬೇರೆ ಧರ್ಮದತ್ತ ವಾಲುತ್ತಿದ್ದಾರೆ. ಇದಕ್ಕಾಗಿ ಮಕ್ಕಳಿರುವಾಗಲೇ ಅವರಿಗೆ ಜೈನ ಧರ್ಮ ತತ್ವ ಸಿದ್ದಾಂತಗಳನ್ನು ಮೂಡಿಸಬೇಕಾಗಿದೆ ಎಂದರು.
ಶಿಬಿರದ ನಿರ್ವಾಹಕ ಮುನಿರಾಜ ರೇಂಜಾಳ ಮಾತನಾಡಿ, ಜೈನರ ಬಗೆಗಿನ ತತ್ವ ಸಿದ್ದಾಂತಗಳನ್ನು ಇಂತಹ ಧಾರ್ಮಿಕ ಶಿಬಿರಗಳಿಂದ ಮಾತ್ರ ಕಲಿಯಲು ಸಾಧ್ಯ ಎಂದರು.
ಮುಖ್ಯ ಅತಿಥಿಗಳಾಗಿ ಮಾಣಿ ಶ್ರೀ ಮಹಾವೀರ ಇಂಡಸ್ಟ್ರೀಸ್‌ನ ಮಹಾವೀರ ಪ್ರಸಾದ್, ಮೂಡಬಿದಿರೆ ಪಂಡಿತ್ ರೆಸಾರ್ಟ್‌ನ ರಜನಿಲಾಲ್ ಗೋಯಲ್ ಜೈನ್, ಶಿಬಿರದ ಸಂಚಾಲಕ ಜ್ಞಾನಚಂದ್ರ, ವೇಣೂರು ಜೈನ ತೀರ್ಥಕ್ಷೇತ್ರ ಸಮಿತಿ ಕಾರ್ಯದರ್ಶಿ ಯಂ. ವಿಜಯರಾಜ ಅಧಿಕಾರಿ, ಶ್ರೀ ಬಾಹುಬಲಿ ಯುವಜನ ಸಂಘದ ಅಧ್ಯಕ್ಷ ಶರ್ಮಿತ್ ಕುಮಾರ್ ವೇದಿಕೆಯಲ್ಲಿದ್ದರು.
ಸಂಪನ್ಮೂಲ ವ್ಯಕ್ತಿಗಳಾಗಿ ಯೋಗರಾಜ ಶಾಸ್ತ್ರಿ ಕಾರ್ಕಳ, ನವೀನ್ ಕುಮಾರ್ ಜೈನ್, ಉದಯ ಕುಮಾರ್, ಮಂಜುಳಾ, ಅಜಿತ್ ಕುಮಾರ್, ನಿರಂಜನ ಎ., ಶಾಂತಿರಾಜ ಜೈನ್, ಮಹಾವೀರ ಜೈನ್, ಕು| ಅಶ್ವಿನಿ ಜೈನ್ ಶಿಬಿರವನ್ನು ನಡೆಸಿಕೊಟ್ಟರು. ೪ ದಿನಗಳ ಕಾಲ ಜರಗಿದ ಶಿಬಿರದಲ್ಲಿ ೭೨ ಶಿಬಿರಾರ್ಥಿಗಳು ಪಾಲ್ಗೊಂಡಿದ್ದರು.
ಕು| ಪೂರ್ಣಿಮಾ ಬಳಗ ಪ್ರಾರ್ಥಿಸಿ ಪ್ರಮೋದ್ ಕುಮಾರ್ ಬಜಿರೆ ಪ್ರಾಸ್ತಾವಿಕವಾಗಿ ಮಾತನಾಡಿ ಸ್ವಾಗತಿಸಿದರು. ನಿರಂಜನ ಅಳಿಯೂರು ಕಾರ್ಯಕ್ರಮ ನಿರೂಪಿಸಿ, ಸುಧೀರ್ ಕುಮಾರ್ ಬಜಿರೆ ವಂದಿಸಿದರು.

chandrashekar - pavithra copyಲಾಯಿಲ ಗ್ರಾಮದ ಕುಂಠಿನಿ ಶ್ರೀ ದೇವಿಪ್ರಸಾದ್ ಮನೆ ಶ್ರೀಮತಿ ವಸಂತಿ ಮತ್ತು ಬಿ. ಗಿರಿಧರ ಶೆಟ್ಟಿ ಯವರ ಪುತ್ರಿ ಪವಿತ್ರರವರ ವಿವಾಹವು ಮಜಲೋಡಿ ಶ್ರೀದುರ್ಗಾ ನಿಲಯ ಸಾಂತಪ್ಪ ಶೆಟ್ಟಿಯವರ ಪುತ್ರ ಚಂದ್ರಶೇಖರ ರೊಂದಿಗೆ ಎ. 10ರಂದು ಬೆಳ್ತಂಗಡಿ ಶ್ರೀ ಗುರುನಾರಾಯಣ ವಾಣಿಜ್ಯ ಸಂಕೀರ್ಣದ ಆಶಾ ಸಾಲಿಯಾನ್ ಕಲ್ಯಾಣ ಮಂಟಪದಲ್ಲಿ ಜರಗಿತು.

dinesh-rekha copyಬೆಳಾಲು ಗ್ರಾಮದ ಪೊಯ್ಯೋದಡ್ಡ ಮನೆ ಬಾಬು ಗೌಡರ ಪುತ್ರ ದಿನೇಶ್ ಪಿ. ಗೌಡ ರವರ ವಿವಾಹವು ಕೊಯ್ಯೂರು ಗ್ರಾಮದ ಕಲ್ಲೇರಿ ಮನೆ ಕುಶಾಲಪ್ಪ ಗೌಡರ ಪುತ್ರಿ ರೇಖಾ ರೊಂದಿಗೆ ಎ. 10ರಂದು ಬೆಳ್ತಂಗಡಿ ಸಿ.ವಿ.ಸಿ ಹಾಲ್‌ನಲ್ಲಿ ಜರುಗಿತು.

Rajesh news copyವೇಣೂರು : ವೇಣೂರು ವಲಯದ ಅಳದಂಗಡಿ ಶಾಖೆಯಲ್ಲಿ ಉಪವಲಯ ಅರಣ್ಯಾಧಿಕಾರಿಯಾಗಿ ಕಳೆದ 5 ವರ್ಷಗಳಿಂದ ಸೇವೆ ಸಲ್ಲಿಸುತ್ತಿದ್ದ ರಾಜೇಶ್ ಇವರಿಗೆ ವಲಯ ಅರಣ್ಯಾಧಿಕಾರಿಯಾಗಿ ಭಡ್ತಿ ನೀಡಿ ರಾಯಚೂರು ಜಿಲ್ಲೆಯ ಲಿಂಗಸಗೂರು ವಲಯಕ್ಕೆ ನಿಯುಕ್ತಿಗೊಳಿಸಲಾಗಿದೆ.
2007ರಲ್ಲಿ ಬೆಳ್ತಂಗಡಿ ವನ್ಯಜೀವಿ ವಲಯದಲ್ಲಿ ಉಪ ವಲಯ ಅರಣ್ಯಾಧಿಕಾರಿಯಾಗಿ ಸೇವೆಗೆ ಸೇರಿದ ರಾಜೇಶ್ ಅವರು 5 ವರ್ಷಗಳ ಸೇವೆ ಬಳಿಕ 2012ರಲ್ಲಿ ವೇಣೂರು ವಲಯದ ಅಳದಂಗಡಿ ಶಾಖೆಗೆ ವರ್ಗಾವಣೆಗೊಂಡು ಸೇವೆ ಸಲ್ಲಿಸುತ್ತಿದ್ದರು. ಕಳೆದ 6ತಿಂಗಳ ಹಿಂದೆ ಅಳದಂಗಡಿ ಶಾಖೆ ಜೊತೆಗೆ ನಾರಾವಿ ಶಾಖೆಯ ಹೆಚ್ಚುವರಿ ಪ್ರಭಾರವನ್ನು ವಹಿಸಿಕೊಂಡು ಉತ್ತಮವಾಗಿ ಕರ್ತವ್ಯವನ್ನು ನಿರ್ವಹಿಸಿದ್ದರು.

vijay kumar-ashwini copyಕಲ್ಮಂಜ ಗ್ರಾಮದ ಬಳ್ಳಿದಡ್ಡ ಸುರೇಶ್ ಬಂಗೇರರ ಪುತ್ರಿ ಅಶ್ವಿನಿಯವರ ವಿವಾಹ ಮಂಡೂರು ಗ್ರಾಮದ ಹೇಡ್ಯದಡ್ಡ ನಾಣ್ಯಪ್ಪ ಪೂಜಾರಿಯವರ ಪುತ್ರ ವಿಜಯ್ ಕುಮಾರ್ ರೊಂದಿಗೆ ಎ. 10ರಂದು ಉಜಿರೆ ಎಸ್.ಕೆ ಮೆಮೋರಿಯಲ್ ಹಾಲ್‌ನಲ್ಲಿ ಜರಗಿತು.

reshma copyಬಜಿರೆ ಗ್ರಾಮದ ಹೊಸಪಟ್ಣ  ಪೊಂಗರ್‌ತ್ಯಾರು ಮನೆ ಶ್ಯಾಮ ಹೆಗ್ಡೆಯವರ ಪುತ್ರಿ ರೇಶ್ಮಾರವರ ವಿವಾಹವು ನಾರಾವಿ ಪಾಣಾಲು ದರ್ಖಾಸು ಸೋಮಯ್ಯ ಹೆಗ್ಡೆಯವರ ಪುತ್ರ ರಘುಚಂದ್ರರೊಂದಿಗೆ   ನಾರಾವಿ ಧರ್ಮಶ್ರೀ ಸಭಾಭವನದಲ್ಲಿ ಎ.10ರಂದು ಜರುಗಿತು.

Veerakesari sahayadana copyಕನ್ಯಾಡಿ ||: ವೀರಕೇಸರಿ ಧರ್ಮಸ್ಥಳ ಬೆಳ್ತಂಗಡಿ ಹಾಗೂ ಶ್ರೀ ಶನೈಶ್ಚರ ಪೂಜಾ ಸಮಿತಿ ಕನ್ಯಾಡಿ || ಇದರ ಸಹಯೋಗದೊಂದಿಗೆ ಎ.15ರಂದು ಹಿ.ಪ್ರಾ ಶಾಲಾ ಮೈದಾನ ಕನ್ಯಾಡಿ || ಇಲ್ಲಿ ಜರುಗಿದ 6ನೇ ವರ್ಷದ ಸಾರ್ವಜನಿಕ ಶ್ರೀ ಶನೈಶ್ಚರ ಪೂಜೋತ್ಸವ ಮತ್ತು ವಿವಿಧ ಕ್ಷೇತ್ರಗಳ ಸಾಧಕರಿಗೆ ಸನ್ಮಾನ ಕಾರ್ಯಕ್ರಮದಲ್ಲಿ 27ನೇ ಸೇವಾಯೋಜನೆಯಾಗಿ ನಿಡ್ಲೆ ಸ.ಹಿ.ಪ್ರಾ. ಶಾಲೆಯ 9ನೇ ತರಗತಿ ವಿದ್ಯಾರ್ಥಿ ಪದ್ಮರಾಜ್ ಇವರು ಮಾನಸಿಕ ಅನಾರೋಗ್ಯದಿಂದ ಬಳಲುತ್ತಿದ್ದು ಇವರ ಚಿಕಿತ್ಸೆಗೆ ರೂ. 15 ಸಾವಿರದ ಚೆಕ್ಕನ್ನು ಆತನ ತಾಯಿಗೆ ಹಸ್ತಾಂತರಿಸಲಾಯಿತು. ಇದೇ ಸಂದರ್ಭದಲ್ಲಿ 28ನೇ ಯೋಜನೆಯಾಗಿ ತನ್ನ ಎರಡು ಕಣ್ಣುಗಳನ್ನು ಕಳೆದುಕೊಂಡಿರುವ ಪೂರ್ಣೇಶ ಅವರ ಚಿಕಿತ್ಸೆಗೆ 15ಸಾವಿರ ರೂಗಳ ಚೆಕ್ಕನ್ನು ನೀಡಲಾಯಿತು. ವೀರಕೇಸರಿ ಬೆಳ್ತಂಗಡಿಯ ಮಾಸಿಕ ಸೇವಾ ಯೋಜನೆಯಂತೆ ಎಪ್ರಿಲ್ ತಿಂಗಳಲ್ಲಿ ಎರಡು ಸೇವಾ ಯೋಜನೆಯನ್ನು ಯಶಸ್ವಿಯಾಗಿ ತಲುಪಿದ್ದು 11 ತಿಂಗಳಲ್ಲಿ 28 ಸೇವಾ ಯೋಜನೆ ಮೂಲಕ 28 ಕುಟುಂಬಗಳಿಗೆ ಆಸರೆಯಾಗಿ ಯಶಸ್ಸಿನ ಹಾದಿಯಲ್ಲಿ ಮುನ್ನಡೆಯುತ್ತಿದೆ. ಇದೀಗ ತಾಲೂಕಿನ ದೊಡ್ಡ ಸಂಘಟನೆಯಾಗಿ ಬೆಳೆದಿರುವ ವೀರಕೇಸರಿ ತಂಡ ಪ್ರತಿಯೊಬ್ಬ ಸದಸ್ಯನ ನೆರವಿನಿಂದ ಪ್ರತಿ ತಿಂಗಳು ಸೇವಾಯೋಜನೆಗಳನ್ನು ಮಾಡಿ ಸಮಾಜಸೇವೆಯಲ್ಲಿ ಅಗ್ರಮಾನ್ಯ ಸಂಘಟನೆಯಾಗಿ ಮುನ್ನುಗ್ಗುತ್ತಿದೆ.

Puduvettu sethuve veekshane copyಪುದುವೆಟ್ಟು : ಪುದುವೆಟ್ಟು ಗ್ರಾಮದ ಬೊಲ್ಮನಾರು ಎಂಬಲ್ಲಿ ಅಂತಿಮ ಹಂತದ ನಿರ್ಮಾಣದಲ್ಲಿದ್ದು ಶೀಘ್ರವೇ ಜನೋಪಯೋಗಕ್ಕೆ ಅರ್ಪಣೆಯಾಗಲಿರುವ ಸುಮಾರು 7 ಕೋಟಿಗೂ ಅಧಿಕ ವೆಚ್ಚದ ನೂತನ ಸೇತುವೆ ಕಾಮಗಾರಿಯನ್ನು ಶಾಸಕ ವಸಂತ ಬಂಗೇರ ಎ. 13ರಂದು ವೀಕ್ಷಣೆ ನಡೆಸಿದರು.
ಗುತ್ತಿಗೆದಾರ ಹಾಗೂ ಇಂಜಿನಿಯರ್ ಜೊತೆ ಮಾತುಕತೆ ನಡೆಸಿ ಕಾಮಗಾರಿಯ ವಿವರ ಪಡೆದ ಅವರು ಮಳೆಗಾಲಕ್ಕೂ ಮುನ್ನವೇ ಕಾಮಗಾರಿ ಪೂರ್ತಿಗೊಳಿಸುವಂತೆ ಸೂಚನೆ ನೀಡಿದರು.
ಈ ಸಂದರ್ಭ ಉಜಿರೆ ಜಿ.ಪಂ. ಸದಸ್ಯೆ ನಮಿತಾ ಕೆ. ಪೂಜಾರಿ, ತಾ.ಪಂ. ಸದಸ್ಯ ವಿ.ಟಿ. ಸೆಬಾಸ್ಟಿಯನ್, ಎಪಿಎಂಸಿ ಸದಸ್ಯ ಅಬ್ದುಲ್ ಗಫೂರ್, ಪುದುವೆಟ್ಟು ಗ್ರಾ.ಪಂ. ಅಧ್ಯಕ್ಷೆ ನೀಲಮ್ಮ, ಉಪಾಧ್ಯಕ್ಷ ಬೊಮ್ಮಣ್ಣ ಗೌಡ ಮಠ, ನೆರಿಯ ಗ್ರಾ.ಪಂ. ಸದಸ್ಯ ಬಿ. ಅಶ್ರಫ್ ನೆರಿಯ, ಗುತ್ತಿಗೆದಾರ ರಿಯಾಝ್ ಪೆರಾಲ್ದರಕಟ್ಟೆ ಮೊದಲಾದವರು ಉಪಸ್ಥಿತರಿದ್ದರು.

belalu anantha padmanabha nagashila prathiste copyಬೆಳಾಲು : ಇಲ್ಲಿಯ ಅನಂತೋಡಿಯಲ್ಲಿ ಜೀರ್ಣೋದ್ಧಾರಗೊಳ್ಳುತ್ತಿರುವ ಶ್ರೀ ಅನಂತ ಪದ್ಮನಾಭ ದೇವಸ್ಥಾನದಲ್ಲಿ ಜೀರ್ಣೋದ್ಧಾರ ಸಮಿತಿಯ ಗೌರವಾಧ್ಯಕ್ಷರು ಧರ್ಮಸ್ಥಳದ ಡಾ| ಡಿ. ವೀರೇಂದ್ರ ಹೆಗ್ಗಡೆಯವರ ಆಶೀರ್ವಾದದೊಂದಿಗೆ ಉಜಿರೆ ಶ್ರೀ ಜನಾರ್ದನ ದೇವಸ್ಥಾನದ ಆಡಳಿತ ಮೊಕ್ತೇಸರ ಯು. ವಿಜಯ ರಾಘವ ಪಡ್ವೆಟ್ನಾಯರ ಮಾರ್ಗದರ್ಶನದಲ್ಲಿ ಬ್ರಹ್ಮಶ್ರೀ ಆಲಂಬಾಡಿ ಪದ್ಮನಾಭ ತಂತ್ರಿಗಳ ನೇತೃತ್ವದಲ್ಲಿ ಎ. 20ರಂದು(ಇಂದು) ಶ್ರೀ ನಾಗಶಿಲಾ ಪ್ರತಿಷ್ಠೆ ಜರಗಿತು. ಜೀರ್ಣೋದ್ಧಾರ ಸಮಿತಿಯ ಪದಾಧಿಕಾರಿಗಳು, ಭಜನಾ ಮಂಡಳಿಯ ಪದಾಧಿಕಾರಿಗಳು ಶ್ರೀಕ್ಷೇತ್ರ ಧ. ಗ್ರಾ. ಯೋಜನೆಯ ಒಕ್ಕೂಟದ ಪದಾಧಿಕಾರಿಗಳು, ಊರವರು, ಭಕ್ತಾಧಿಗಳು ಹೆಚ್ಚಿನ ಸಂಖ್ಯೆಯಲ್ಲಿ ಹಾಜರಿದ್ದರು.

Peranamanja sabhe prathapasimha copyಪಡಂಗಡಿ : ಮನಸ್ಸು ಸ್ಥಿರವಾದಾಗ ಜಗತ್ತಿನ ಸತ್ಯ ಅರಿವಾಗುತ್ತದೆ. ಇದಕ್ಕಾಗಿ ನಮ್ಮ ಹಿರಿಯರು ಇಂತಹ ಶ್ರದ್ಧಾಕೇಂದ್ರಗಳನ್ನು ನಿರ್ಮಿಸಿದ್ದಾರೆ. ಆತ್ಮ ಶಕ್ತಿಯನ್ನು ಜಾಗೃತ ಮಾಡುವ ಸ್ಥಳಗಳೇ ದೇವಸ್ಥಾನ, ದೈವಸ್ಥಾನಗಳಾಗಿವೆ ಎಂದು ಬಿಜೆಪಿ ಮಾಜಿ ಜಿಲ್ಲಾಧ್ಯಕ್ಷ, ನ್ಯಾಯವಾದಿ ಪ್ರತಾಪಸಿಂಹ ನಾಯಕ್ ಹೇಳಿದರು.
ಅವರು ಎ.13ರಂದು ಪಡಂಗಡಿ ಗ್ರಾಮದ ಪೆರಣಮಂಜು ಶ್ರೀ ಮೂಜಿಲ್ನಾಯ ಬ್ರಹ್ಮ ದೈವಸ್ಥಾನ ಬ್ರಹ್ಮಕಲಶೋತ್ಸವ ಮತ್ತು ಜಾತ್ರಾ ಮಹೋತ್ಸವದ ಅಂಗವಾಗಿ ನಡೆದ ಧಾರ್ಮಿಕ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಮನುಷ್ಯನಿಗೆ ಭೌತಿಕ ಸುಖ ಮುಖ್ಯವಲ್ಲ, ಆಧ್ಯಾತ್ಮಿಕ ಸುಖ ಮಾತ್ರ ನಮ್ಮನ್ನು ಮೋಕ್ಷದೆಡೆಗೆ ಸಾಗಿಸಬಹುದು. ಅಂತಹ ಸುಖವನ್ನು ನೀಡುವ ದೈವ, ದೇವರ ನಾಡಾದ ಭಾರತ ಒಂದು ದಿನ ಜಗತ್ತಿಗೆ ವಿಶ್ವಗುರುವಾಗಿ ನಿಲ್ಲಲಿದೆ. ಭಾರತದಲ್ಲಿ ಪ್ರಾಚೀನ ಕಾಲದಿಂದಲೂ ಇದ್ದ ಯೋಗ ಇಂದು ವಿಶ್ವದೆಲ್ಲೇಡೆ ಪಸರಿಸಿದೆ. ಭಗವಂತನ ಸಾಕ್ಷಾತ್ಕಾರಕ್ಕೆ ಯೋಗ ಸುಲಭ ಮಾರ್ಗವಾಗಿದೆ ಎಂದರು.
ಧಾರ್ಮಿಕ ಉಪನ್ಯಾಸ ನೀಡಿದ ಮೈಸೂರು ಮಾನಸ ಗಂಗೋತ್ರಿಯ ಪ್ರೊ| ಸುರೇಶ್ ಪಡಿವಾಳ್ ಮನಸ್ಸು, ವಚನ, ಕಾಯಗಳ ಜೊತೆ ಆತ್ಮ ಸಂಯೋಜನೆಗೊಂಡು ನಮ್ಮ ದೇಹದ ಚೇತನ ಕ್ರಿಯೆ ನಡೆದಾಗ ನಾವು ತಿಳಿಯುವ, ನೋಡುವ ಕ್ರಿಯೆ ನಡೆಯುತ್ತದೆ. ನಮ್ಮಲ್ಲಿರುವ ಅರಿಷಡ್ವರ್ಗಗಳು ನಿವಾರಣೆಯಾಗಲು ಇಂತಹ ಧಾರ್ಮಿಕ ಕೇಂದ್ರಗಳಿಗೆ ಬಂದು, ಧರ್ಮ ಕ್ರಿಯೆ ಮೂಲಕ ಆತ್ಮೋನ್ನತಿ ಮಾಡಿಕೊಳ್ಳಬೇಕು ಎಂದು ತಿಳಿಸಿದರು.
ಮುಖ್ಯ ಅತಿಥಿ ಬೆಳ್ತಂಗಡಿ ವಿನಾಯಕ ರೈಸ್‌ಮಿಲ್‌ನ ಮಾಲಕ ರೋ| ಶ್ರೀಕಾಂತ ಕಾಮತ್ ಮಾತನಾಡಿ, ಊರಿನ ದೇವಸ್ಥಾನ, ದೈವಸ್ಥಾನಗಳು ಜೀರ್ಣೋದ್ಧಾರ ಹೊಂದಿದಾಗ ಊರಿನ ಅಭಿವೃದ್ಧಿಯ ಜೊತೆ ಸಮಾಜದ ಪ್ರಗತಿಯಾಗುತ್ತದೆ. ನಾವು ನಂಬಿಕೊಂಡು ಬಂದಂತಹ ಶ್ರದ್ಧಾಕೇಂದ್ರಗಳು ಅವನತಿಗೊಂಡಾಗ ನಮ್ಮ ಜೀವನದ ಮೇಲೂ ಪರಿಣಾಮಗಳಾಗುತ್ತದೆ. ಅವುಗಳ ಪ್ರಗತಿಯಾದಾಗ ನಮ್ಮ ಜೀವನದಲ್ಲೂ ಉನ್ನತಿಯನ್ನು ಕಾಣಬಹುದು ಎಂದು ತಿಳಿಸಿದರು.
ಉದ್ಯಮಿ ಉದಯ ಶೆಟ್ಟಿ ಕಾಂತವರ ಮಾತನಾಡಿ ಇಂದಿನ ವೈಜ್ಞಾನಿಕ ಯುಗದಲ್ಲಿ ಮಕ್ಕಳಿಗೆ ನಮ್ಮ ಸಂಸ್ಕೃತಿ, ಧಾರ್ಮಿಕ ನಂಬಿಕೆಗಳ ಅರಿವು ಮೂಡಿಸುವುದು ಅವಶ್ಯ ಎಂದು ಹೇಳಿದರು. ಈ ಸಂದರ್ಭದಲ್ಲಿ ಕ್ಷೇತ್ರ ನಿರ್ಮಾಣಕ್ಕೆ ಸಹಕಾರ ನೀಡಿದ ಸ್ವಸ್ತಿಕ್ ಪಡಂಗಡಿಯ ಸಂಪತ್ ಕುಮಾರ್ ಕುಟುಂಬಸ್ಥರನ್ನು ಹಾಗೂ ನವೀನ್‌ಚಂದ್ ಬಲ್ಲಾಳ್, ಉದಯ ಶೆಟ್ಟಿ ಕಾಂತಾವರ ಇವರನ್ನು ದೇವಸ್ಥಾನದ ವತಿಯಿಂದ ಅಭಿನಂದಿಸಲಾಯಿತು. ಬ್ರಹ್ಮಕಲಶೋತ್ಸವ ಸಮಿತಿ ಅಧ್ಯಕ್ಷ ಪ್ರವೀಣ್‌ಚಂದ್ರ ಜೈನ್ ನಡಿಬೆಟ್ಟುಗುತ್ತು ಕಾರ್ಯಕ್ರಮ ನಿರ್ವಹಿಸಿದರು.
ವೇದಿಕೆಯಲ್ಲಿ ಆಡಳಿತ ಮೊಕ್ತೇಸರ ನೇಮಿರಾಜ್ ಶೆಟ್ಟಿ ನಡಿಬೆಟ್ಟು ಗುತ್ತು, ಬ್ರಹ್ಮಕಲಶೋತ್ಸವ ಸಮಿತಿ ಗೌರವಾಧ್ಯಕ್ಷ ಎಸ್. ಜಯರಾಮ ಶೆಟ್ಟಿ, ಪ್ರಧಾನ ಕಾರ್ಯದರ್ಶಿ ಶಾಂತಿರಾಜ ಜೈನ್ ಅಮೃತ, ಕಾರ್ಯದರ್ಶಿ ಜಗದೀಶ್ ಪೈ ಮೂಜುರು, ಕೋಶಾಧಿಕಾರಿ ವಾiನ ಬಾಳಿಗ ಉಪಿಸ್ಥಿತರಿದ್ದರು. ಸಂಜನಾ ಎಸ್.ಜೈನ್ ಇವರ ಪ್ರಾರ್ಥನೆ ಬಳಿಕ ಶ್ರೀಮತಿ ಉಷಾರಾಣಿ ನಡಿಬೆಟ್ಟುಗುತ್ತು ಸ್ವಾಗತಿಸಿದರು. ಪುಂಜಾಲಕಟ್ಟೆ ಶಾಲಾ ಶಿಕ್ಷಕ ಲ| ಧರಣೇಂದ್ರ ಕೆ. ಜೈನ್ ಕಾರ್ಯಕ್ರಮ ನಿರೂಪಿಸಿ, ಎಸ್‌ಕೆಡಿಆರ್‌ಡಿಪಿ ತುಮಕೂರಿನ ಯೋಜನಾಧಿಕಾರಿ ಪ್ರಶಾಂತ್ ಗೌಡ ವಂದಿಸಿದರು. ಬಳಿಕ ಕಲ್ಲಡ್ಕ ವಿಠಲ ನಾಯಕ್ ಬಳಗದವರಿಂದ ‘ಗೀತ ಸಾಹಿತ್ಯ ಸಂಭ್ರಮ’ನಡೆಯಿತು.

kulal kreedakuta samaropa copyವಿವಿಧ ಕ್ಷೇತ್ರದ ಸಾಧಕರಿಗೆ ಸಮ್ಮಾನ
ಕಾರ್ಯಕ್ರಮದಲ್ಲಿ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ಮೂರು ಮಂದಿ ಸಾಧಕರನ್ನು ಕ್ರೀಡಾ ಸಮಿತಿಯ ವತಿಯಿಂದ ವೇದಿಕೆಯಲ್ಲಿದ್ದ ಗಣ್ಯರು, ಅತಿಥಿಗಳು ಸಮ್ಮಾನಿಸಿದರು. ಎಂ.ಎ. ಪದವಿ ರಾಜ್ಯ ಶಾಸ್ತ್ರದಲ್ಲಿ ಪ್ರಥಮ ಸ್ಥಾನ ಪಡೆದ ಕು| ಸಚಿತಾ, ರೋಹಿತ್ ಕುಮಾರ್ ಬರಾಯ, ಹಾಗೂ ಕಂಬಳ ಕ್ಷೇತ್ರದ ಮೋಹನ್‌ಕುಮಾರ್ ಕಬ್ಬಿನ ಹಿತ್ಲು ಅವರನ್ನು ಶಾಲು ಹೊದಿಸಿ, ಸ್ಮರಣಿಕೆ ನೀಡಿ ಸಮಿತಿ ವತಿಯಿಂದ ಗೌರವಿಸಲಾಯಿತು.

ಗುರುವಾಯನಕೆರೆ : ಬೆಳ್ತಂಗಡಿ ತಾಲೂಕು ಮೂಲ್ಯರ ಯಾನೆ ಕುಂಬಾರರ ಸೇವಾ ಸಂಘ ಗುರುವಾಯನಕೆರೆ, ಕುಲಾಲ-ಕುಂಬಾರರ ಯುವ ವೇದಿಕೆ ಮತ್ತು ತಾಲೂಕು ಕ್ರೀಡಾ ಸಮಿತಿ, ಕುಲಾಲ ಕುಂಬಾರ ಸಾಂಸ್ಕೃತಿಕ ಸಮಿತಿ ಇದರ ಸಹಯೋಗದೊಂದಿಗೆ ತಾಲೂಕಿನ ಸ್ವಜಾತಿ ಬಾಂಧವರಿಗಾಗಿ ನಡೆದ ತಾಲೂಕು ಮಟ್ಟದ ಕುಲಾಲ ಕ್ರೀಡೋತ್ಸವದ ಸಮಾರೋಪ ಸಮಾರಂಭ ಎ.16ರಂದು ಕೆರೆ ಬಳಿಯ ಮೈದಾನದಲ್ಲಿ ನಡೆಯಿತು.
ಮುಖ್ಯ ಅತಿಥಿಗಳಾಗಿ ಭಾಗವಹಿಸಿದ ಬಂಟ್ವಾಳ ಯೋಜನಾ ಪ್ರಾಧಿಕಾರದ ಅಧ್ಯಕ್ಷ ಸದಾಶಿವ ಬಂಗೇರ ಮಾತನಾಡಿ, ಕುಲಾಲ-ಕುಂಬಾರ ಸಮಾಜ ಸಂಘಟನೆಗೆ ಇಂತಹ ಕ್ರೀಡಾ ಕೂಟಗಳು ಪ್ರೇರಣೆಯಾಗುವುದರ ಜೊತೆಗೆ ಯುವ ಸಮುದಾಯಕ್ಕೆ ತಮ್ಮ ಶಕ್ತಿಯ ಪ್ರದರ್ಶನಕ್ಕೆ ವೇದಿಕೆಯಾಗಿದೆ ಎಂದರು. ಯುವ ಸಂಪತ್ತು ಸಮಾಜದ ಉನ್ನತಿಗೆ ಉಪಯೋಗವಾಗಬೇಕು, ಸಂಘಟನೆಗೆ ಬಲ ಬರಬೇಕಾದರೆ ತಾಲೂಕಿನ ಸಮಾಜ ಬಾಂಧವರು ಇಂತಹ ಕಾರ್ಯಗಳಲ್ಲಿ ಕೈಜೋಡಿಸುವುದರೊಂದಿಗೆ ಸಮಾಜದ ಮುಂಚೂಣಿಯಲ್ಲಿ ಪ್ರಮುಖ ಪಾತ್ರವಹಿಸಬೇಕಾದ ಅಗತ್ಯವಿದೆ. ಈ ನಿಟ್ಟಿನಲ್ಲಿ ಮಾತೃ ಸಂಘದ ನೇತೃತ್ವದಲ್ಲಿ ರಾಜ್ಯ ಮಟ್ಟದ ಕಬಡ್ಡಿಯನ್ನು ಹಮ್ಮಿಕೊಳ್ಳುವ ಯೋಜನೆಯಿದ್ದು, ತಾಲೂಕಿನ ತಂಡವೂ ಇದರಲ್ಲಿ ಭಾಗವಹಿಸಬೇಕು ಎಂದು ಕರೆ ನೀಡಿದರು.
ಸಮಾರಂಭದ ಅಧ್ಯಕ್ಷತೆಯನ್ನು ತಾಲೂಕು ಕ್ರೀಡಾ ಸಮಿತಿ ಅಧ್ಯಕ್ಷ ತಿಲಕ್‌ರಾಜ್ ವಹಿಸಿ, ಕ್ರೀಡೋತ್ಸವದ ಯಶಸ್ವಿಗೆ ಸಹಕರಿಸಿದ ಎಲ್ಲರಿಗೂ ಕೃತಜ್ಞತೆ ಸಲ್ಲಿಸಿದರು. ಕುಲಾಲ-ಕುಂಬಾರರ ಯುವ ವೇದಿಕೆ ರಾಜ್ಯ ಸಂಘಟನಾ ಕಾರ್ಯದರ್ಶಿ ಹರೀಶ್ ಕಾರಿಂಜ ಸ್ವಾಗತಿಸಿ, ಯುವ ಸಮುದಾಯದ ಸಂಘಟನೆ ಹಾಗೂ ಬಲವರ್ಧನೆಗೆ ಈ ಕ್ರೀಡಾಕೂಟ ಪೂರಕವಾಗಿ ನಡೆಯುತ್ತಿದ್ದು, ಇಂದು ಅತ್ಯಂತ ಯಶಸ್ವಿಯಾಗಿ ಕಾರ್ಯಕ್ರಮ ನಡೆಸಿದ ಕ್ರೀಡಾ ಸಮಿತಿಯ ಪದಾಧಿಕಾರಿಗಳನ್ನು ಅಭಿನಂದಿಸಿದರು.
ಅತಿಥಿಗಳಾಗಿ ಕುಲಾಲ ಕುಂಬಾರರ ಯುವ ವೇದಿಕೆ ಬೆಳ್ತಂಗಡಿ ತಾಲೂಕು ಅಧ್ಯಕ್ಷ ಲೋಕೇಶ್ ಕಂಚಿಂಜ, ವಾಣಿಜ್ಯ ತೆರಿಗೆ ನಿರೀಕ್ಷಕ ಯತೀಶ್ ಸಿರಿಮಜಲು, ಶ್ರೀ ಕ್ಷೇ.ಧ.ಗ್ರಾ. ಯೋಜನೆ ಧರ್ಮಸ್ಥಳದ ಯೋಜನಾಧಿಕಾರಿ ಕಮಲಾಕ್ಷ, ಕುಲಾಲ ಕುಂಬಾರ ಯುವ ವೇದಿಕೆ ಬೆಳ್ತಂಗಡಿ ಇದರ ಕೋಶಾಧಿಕಾರಿ ಉಮೇಶ್ ಕುಲಾಲ್, ಸುದ್ದಿ ಪತ್ರಿಕೆಯ ಮುಖ್ಯ ವರದಿಗಾರ ಬಿ.ಎಸ್. ಕುಲಾಲ್ ಭಾಗವಹಿಸಿ ಶುಭ ಕೋರಿದರು. ಬೆಳಗ್ಗೆ 11ರಿಂದ ಸಂಜೆ 7.30ರ ವರೆಗೆ ಅತ್ಯಂತ ಯಶಸ್ವಿಯಾಗಿ ಹಾಗೂ ಶಿಸ್ತುಬದ್ಧವಾಗಿ ಕ್ರೀಡೋತ್ಸವ ನಡೆಯಿತು. ಈ ಸಂದರ್ಭದಲ್ಲಿ ಮಕ್ಕಳಿಗೆ, ಮಹಿಳೆಯರಿಗೆ ಹಾಗೂ ಪುರುಷರಿಗೆ ಹಮ್ಮಿಕೊಂಡ ವಿವಿಧ ಸ್ಪರ್ಧಾ ವಿಜೇತರಿಗೆ ಬಹುಮಾನಗಳನ್ನು ವಿತರಿಸಲಾಯಿತು.
ಕ್ರೀಡೋತ್ಸವದ ತೀರ್ಪುಗಾರರಾಗಿ, ಗಿರೀಶ್, ಮಿಥುನ್, ಗೋಪಾಲ್, ಶೀತಲ್ ಸಹಕರಿಸಿದರು. ಹರೀಶ್ ಕಾರಿಂಜ ಸ್ವಾಗತಿಸಿದರು. ಜಿಲ್ಲಾ ಸಂಘದ ಪ್ರಧಾನ ಕಾರ್ಯದರ್ಶಿ ಪ್ರಸಾದ್‌ಕುಮಾರ್ ಕಾರ್ಯಕ್ರಮ ನಿರೂಪಿಸಿ, ಯತೀಶ್ ಸಿರಿಮಜಲು ವಂದಿಸಿದರು. ಸಮಿತಿಯ ಉಪಾಧ್ಯಕ್ಷ ಜಗದೀಶ್ ಬರಾಯ, ಕಾರ್ಯದರ್ಶಿ ಪ್ರವೀಣ್ ಬರಾಯ, ಜೊತೆ ಕಾರ್ಯದರ್ಶಿ ಜಯಮತ್ ಕಟ್ಟೆ, ಮಿಥುನ್ ಮಡಂತ್ಯಾರು, ಕೋಶಾಧಿಕಾರಿ ಜೀವನ್ ಕುಲಾಲ್ ಸಿರಿಮಜಲು, ಸಂಘಟನಾ ಕಾರ್ಯದರ್ಶಿ ನವೀನ್ ಕುಲಾಲ್, ಮುಖೇಶ್ ಕುಲಾಲ್ ಬರಾಯ ಹಾಗೂ ಸಮಿತಿಯ ಎಲ್ಲಾ ಸದಸ್ಯರು ಉಪಸ್ಥಿತರಿದ್ದರು.

ನಮ್ಮ ಬಗ್ಗೆ

ಮೊದಲಿಗೆ ಕೇವಲ ಒಂದು ಹಾಳೆಯಲ್ಲಿ ಪ್ರಕಟವಾಗುತ್ತಿದ್ದ ಬೆಳ್ತಂಗಡಿ ತಾಲೂಕಿನ “ಸುದ್ದಿ ಬಿಡುಗಡೆ “ಪತ್ರಿಕೆ ಇಂದು ಪ್ರತಿದಿನ  22
.. ಮುಂದೆ ಓದಿ

ಸಲಹೆ- ಸೂಚನೆ

ನಿಮ್ಮ ಸಲಹೆ ಸೂಚನೆಗಳಿಗೆ ಹಾರ್ದಿಕ ಸ್ವಾಗತ

ಇಲ್ಲಿ ಕ್ಲಿಕ್ಕಿಸಿ

Copyright © 2017 Suddinews.com . All Rights Reserved.
^ Back to Top