Mon 18 Dec 2017, 10:01PM

ಹೆಚ್ಚಿನ ಸುದ್ದಿಗಳು

vishwakarma2

vishwakarma3ಮುಂಡಾಜೆ: ವಿಶ್ವಕರ್ಮ ಯುವ ಮಿಲನ್ ಕರ್ನಾಟಕ ರಾಜ್ಯ ಇದರ ಕಾರ್ಯದರ್ಶಿಯಾಗಿ ದಿನೇಶ್ ಆಚಾರ್ಯ ಮುಂಡಾಜೆ ಇವರನ್ನು ನೇಮಕಗೊಳಿಸಿ ಸಂಘಟನೆಯ ರಾಜ್ಯಾಧ್ಯಕ್ಷ ವಿಕ್ರಮ್  ಆಚಾರ್ಯ ಆದೇಶ ನೀಡಿದ್ದಾರೆ.
ಕಲೆ, ಕ್ರೀಡೆ ಮತ್ತು ಸಂಘಟನೆಯಲ್ಲಿ ತೊಡಗಿಸಿಕೊಂಡಿದ್ದ ದಿನೇಶ್ ಆಚಾರ್ಯ ಅವರು ಮುಂಡಾಜೆ ಯಂಗ್ ಚಾಲೆಂಜರ್‍ಸ್ ಕ್ರೀಡಾ ಸಂಘದ ಸಕ್ರೀಯ ಸದಸ್ಯರಾಗಿದ್ದು ಪ್ರಸ್ತುತ 12 ವರ್ಷಗಳಿಂದ ಬೆಂಗಳೂರಿನ ಹುಳಿಮಾವು ಎಂಬಲ್ಲಿ ಈವೆಂಟ್ ಮನೇಜ್‌ಮೆಂಟ್ ಸಂಸ್ಥೆ ನಡೆಸುತ್ತಿದ್ದಾರೆ. ಯುವಜನ ಮೇಳಗಳಲ್ಲಿ ಮೈಸೂರು ವಿಭಾಗ ಮಟ್ಟದವರೆಗೆ ಸ್ಪರ್ಧಿಸುವ ಅವಕಾಶ ಪಡೆದಿರುವ ಅವರು ಅತ್ಯುತ್ತಮ ಹವ್ಯಾಸಿ ಯಕ್ಷಗಾನ ಕಲಾವಿದರಾಗಿಯೂ ಮಿಂಚುತ್ತಿದ್ದಾರೆ. ಬೆಂಗಳೂರಿನ ಯಕ್ಷಸಂಭ್ರಮ ಯಕ್ಷಗಾನ ತಂಡದ ಪ್ರಧಾನ ಹಾಸ್ಯಗಾರ ಪಾತ್ರದಲ್ಲಿ ಅಭಿನಯಿಸುತ್ತಿರುವ ಅವರು ಇತರ ಮೇಳಗಳಲ್ಲೂ ಬಣ್ಣಹಚ್ಚಿದ್ದಾರೆ.

yuvavahini

yuvavahini1ಬೆಳ್ತಂಗಡಿ : ಯುವವಾಹಿನಿ ಬೆಳ್ತಂಗಡಿ ಘಟಕದ 2017-18ನೇ ಸಾಲಿನ ನೂತನ ಪದಾಧಿಕಾರಿಗಳ ಪದಪ್ರದಾನ ಸಮಾರಂಭವು ಡಿ. 17ರಂದು ಬೆಳ್ತಂಗಡಿ ಶ್ರೀ ಗುರುನಾರಾಯಣ ಸಂಕೀರ್ಣದ ಸಭಾಭವನದಲ್ಲಿ ನಡೆಯಿತು.
ಕಾರ್ಯಕ್ರಮವನ್ನು ಶಾಸಕ ಕೆ. ವಸಂತ ಬಂಗೇರ ಉದ್ಘಾಟಿಸಿದರು. ಸಮಾರಂಭದ ಅಧ್ಯಕ್ಷತೆಯನ್ನು ಯುವವಾಹಿನಿ ಬೆಳ್ತಂಗಡಿ ಘಟಕದ ಅಧ್ಯಕ್ಷ ಸದಾನಂದ ಪೂಜಾರಿ ಉಂಗಿಲಬೈಲು ವಹಿಸಿಸಿದ್ದರು.
ಯುವವಾಹಿನಿ ಕೇಂದ್ರ ಸಮಿತಿ ಮಂಗಳೂರು ಇದರ ಉಪಾಧ್ಯಕ್ಷ ಜಯಂತ ನಡುಬೈಲು, ಬೆಳ್ತಂಗಡಿ ಸುವರ್ಣ ಪ್ರತಿಷ್ಠಾನದ ಅಧ್ಯಕ್ಷ ಸಂಪತ್ ಬಿ. ಸುವರ್ಣ, ಮಾಜಿ ಶಾಸಕ ಕೆ. ಪ್ರಭಾಕರ ಬಂಗೇರ, ಬೆಳ್ತಂಗಡಿ ಶ್ರೀ ಗುರುನಾರಾಯಣ ಸ್ವಾಮಿ ಸೇವಾ ಸಂಘದ ಅಧ್ಯಕ್ಷ ಸೋಮನಾಥ ಬಂಗೇರ ವರ್ಪಾಳೆ, ದ.ಕ ಜಿಲ್ಲಾ ಕಾಂಗ್ರೆಸ್ ಸಮಿತಿ ಅಧ್ಯಕ್ಷ ಕೆ. ಹರೀಶ್ ಕುಮಾರ್, ನಿವೃತ್ತ ಎಸ್.ಪಿ., ಬಿಲ್ಲವ ಮಹಾಮಂಡಲದ ಉಪಾಧ್ಯಕ್ಷ ಪೀತಾಂಬರ ಹೇರಾಜೆ, ತಾ.ಪಂ ಸ್ಥಾಯಿ ಸಮಿತಿ ಅಧ್ಯಕ್ಷ ಸುಧೀರ್ ಆರ್. ಸುವರ್ಣ ಶುಭ ಹಾರೈಸಿದರು. ಯುವವಾಹಿನಿ ಕೇಂದ್ರ ಸಮಿತಿಯ ಮಾಜಿ ಅಧ್ಯಕ್ಷ ಪದ್ಮನಾಭ ಮರೋಳಿ, ಯುವವಾಹಿನಿ ಕೇಂದ್ರ ಸಮಿತಿಯ ಸಂಘಟನಾ ಕಾರ್ಯದರ್ಶಿ ರಮಾನಂದ ಸಾಲಿಯಾನ್ ಮುಂಡೂರು, ಯುವವಾಹಿನಿ ಬೆಳ್ತಂಗಡಿ ಘಟಕದ ನೂತನ ಅಧ್ಯಕ್ಷ ಪ್ರಶಾಂತ್ ಮಚ್ಚಿನ ವೇದಿಕೆಯಲ್ಲಿ ಉಪಸ್ಥಿತರಿದ್ದರು.

vishwakarma

vishwakarma1ಲಾಯಿಲ : ವಿಶ್ವಕರ್ಮ ಯುವ ಮಿಲನ್ ಕರ್ನಾಟಕ ರಾಜ್ಯ ಬೆಳ್ತಂಗಡಿ ತಾಲೂಕು ಇದರ ಉದ್ಘಾಟನಾ ಸಮಾರಂಭವು ಡಿ. ೧೭ ರಂದು ಲಾಯಿಲ ಶ್ರೀ ವಿಶ್ವಕರ್ಮ ಸಭಾಭವನದಲ್ಲಿ ಜರಗಿತು.
ಆನೆಗುಂದಿ ಶ್ರೀಮದ್ ಜಗದ್ಗುರು ಮಹಾಸಂಸ್ಥಾನ ಸರಸ್ವತೀ ಪೀಠಾಧೀಶ್ವರ ಶ್ರೀ ಅನಂತಶ್ರೀ ವಿಭೂಷಿತ ಶ್ರೀ ಕಾಳಹಸ್ತೇಂದ್ರ ಸರಸ್ವತಿ ಮಹಾಸ್ವಾಮೀಜಿ ಕಟಪಾಡಿ ಉಡುಪಿರವರು ಆಶೀರ್ವಚನ ನೀಡಿದರು.
ಸಮಾರಂಭದ ಅಧ್ಯಕ್ಷತೆಯನ್ನು ವಿಶ್ವಕರ್ಮ ಯುವ ಮಿಲನ್ ಕರ್ನಾಟಕ ರಾಜ್ಯಾಧ್ಯಕ್ಷ ವಿಕ್ರಮ್ ಐ ಆಚಾರ್ಯ ವಹಿಸಿದ್ದರು.
ಹಾಸನ ಜಿಲ್ಲೆ ಅರಕಲಗೂಡು ವಿಶ್ವಕರ್ಮ ಜಗದ್ಗುರು ಶ್ರೀ ಸುಜ್ಞಾನಪ್ರಭು ಪೀಠ ಅರೆಮಾದನದಹಳ್ಳಿ ವಿಶ್ವಬ್ರಾಹ್ಮಣ ಮಹಾಸಂಸ್ಥಾನ ಮಠದ ಶ್ರೀ ಶಿವಸುಜ್ಞಾನ ತೀರ್ಥಮಹಾಸ್ವಾಮಿಗಳು ದಿವ್ಯ ಆಶೀರ್ವಚನ ನೀಡಿದರು.
ಮುಖ್ಯ ಅತಿಥಿಗಳಾಗಿದ್ದ ಶಾಸಕ ವಸಂತ ಬಂಗೇರ ಮತ್ತು ಬಿಜೆಪಿ ಜಿಲ್ಲಾ ಯುವಮೋರ್ಚಾ ಅಧ್ಯಕ್ಷ ಹರೀಶ್ ಪೂಂಜ ಅವರನ್ನು ಸ್ವಾಮೀಜಿಗಳು ಸನ್ಮಾನಿಸಿ ಗೌರವಿಸಿದರು.
ವೇದಿಕೆಯಲ್ಲಿ ಪುರೋಹಿತ ಎನ್.ಎಸ್. ಶ್ರೀಧರ ಪುರೋಹಿತ ಕಟಪಾಡಿ, ಎಸ್.ಕೆ ಗೋಲ್ಡ್‌ಸ್ಮಿತ್ ಇಂಡಸ್ಟ್ರಿಯಲ್ ಸಹಕಾರ ಸಂಘದ ಮಹಾಪ್ರಬಂಧಕ ಕೆ ಉಮೇಶ ಆಚಾರ್ಯ, ಸಾಧನಾ ಸ್ಪಂಧನ ಯುವ ಕಲಾರಂಗದ ನಿರ್ದೇಶಕ ಪುರೋಹಿತ್ ಜಿ.ಎಸ್. ಪುರಂದರ ಆಚಾರ್ಯ, ವಿಶ್ರಾಂತ ತಹಶಿಲ್ದಾರ್ ರಾಘವೇಂದ್ರ ಆಚಾರ್ಯ, ವಿಶ್ವಕರ್ಮ ಯುವ ಮಿಲನ್ ರಾಜ್ಯ ಕಾರ್ಯದರ್ಶಿ ಸೂರಜ್ ಟಿ ಆಚಾರ್ಯ, ವಿಶ್ವಕರ್ಮ ಯುವ ಮಿಲನ್ ಜಿಲ್ಲಾಧ್ಯಕ್ಷ ಹರೀಶ್ ಆಚಾರ್ಯ, ಬೆಳ್ತಂಗಡಿ ವಿಶ್ವಕರ್ಮಾಭ್ಯುದಯ ಸಂಘದ ಅಧ್ಯಕ್ಷ ಗೋಪಾಲ ಆಚಾರ್ಯ ಕನ್ನಾಜೆ, ಯುವ ಮಿಲನ್ ತಾಲೂಕು ನಿಯೋಜಿತ ಅಧ್ಯಕ್ಷ ಪ್ರಕಾಶ್ ಆಚಾರ್ಯ ಉಪಸ್ಥಿತರಿದ್ದರು.
ಯುವ ಮಿಲನ್ ಪ್ರ. ಕಾರ್ಯದರ್ಶಿ ರಾಮ್‌ಪ್ರಸಾದ್ ಎನ್.ಎಸ್ ನಾರಾವಿ ಸ್ವಾಗತಿಸಿದರು. ರುಕ್ಮಯ್ಯ ಆಚಾರ್ಯ ಕನ್ನಾಜೆ, ಗೀತಾ ಧರ್ಮಸ್ಥಳ, ಮಧುಶ್ರೀ ಕಾರ್ಯಕ್ರಮ ನಿರೂಪಿಸಿದರು.

balanja

balanja1ಬಳಂಜ : ಶಿವಾಜಿ ಫ್ರೆಂಡ್ಸ್ ಕ್ಲಬ್ ನೇತಾಜಿನಗರ ಬಳಂಜ ಇದರ ಆಶ್ರಯದಲ್ಲಿ, ತಾಲೂಕು ವಾಲಿಬಾಲ್ ಅಸೋಸಿಯೇಶನ್ ಬೆಳ್ತಂಗಡಿ ಇದರ ಸಹಯೋಗದೊಂದಿಗೆ ಬೆಳ್ತಂಗಡಿ ವಾಲಿಬಾಲ್ ಲೀಗ್ ಪಂದ್ಯಾಟ ಮತ್ತು ಮಹಿಳೆಯರ ಮುಕ್ತ ತ್ರೋಬಾಲ್ ಪಂದ್ಯಾಟ, ಹಾಗೂ ಬಳಂಜ ಪಂಚಾಯತ್ ವ್ಯಾಪ್ತಿಗೊಳಪಟ್ಟ ಪುರುಷರ ೫೫೦ಕೆಜಿ ವಿಭಾಗದ ಹಗ್ಗಜಗ್ಗಾಟ ಪಂದ್ಯಾಟವು ಡಿ. 17ರಂದು ಬಳಂಜ ಶ್ರೀ ಶಾರದ ಕಲಾ ಮಂದಿರದ ವಠಾರದಲ್ಲಿ ನಡೆಯಿತು.

mundaje

Mundaje1ಮುಂಡಾಜೆ : ಮಸ್ಲಕ್ ತ್ತಅಲೀಮಿ ಸ್ಸುನ್ನಿಯ್ಯ ಮುಂಡಾಜೆ ಇದರ ವತಿಯಿಂದ ದಾನಿಗಳ ನೆರವಿನೊಂದಿಗೆ ನೂತನವಾಗಿ ನಿರ್ಮಿಸಿದ ಜಮಲುಲ್ಲೈಲಿ ಸುನ್ನೀ ಜುಮ್ಮಾ ಮಸೀದಿ ಇದರ ಉದ್ಘಾಟನೆ ಡಿ. 14 ರಂದು ನಡೆಯಿತು. ಉಡುಪಿ-ಚಿಕ್ಕಮಗಳೂರು-ಹಾಸನ- ಶಿವಮೊಗ್ಗ ಸಂಯುಕ್ತ ಜಮಾಅತ್ ಖಾಝಿ ಬೇಕಲ್ ಇಬ್ರಾಹಿಂ ಮುಸ್ಲಿಯಾರ್ ಮತ್ತು ಮಸೀದಿ ದಾನಿಗಳಾದ ಹಿರಿಯ ಮುತ್ಸದ್ದಿ ಕನ್ನಂಗಾರ್ ಮುಹ್ಯುದ್ದೀನ್ ಹಾಜಿ ಮುಕ್ರಿ ಹಾಜಿ ಅವರು ವಕ್ಫ್ ವಿಧಿ ನೆರವೇರಿಸಿದರು.
ದ. ಕ ಜಿಲ್ಲಾ ಸುನ್ನೀ ಸಂಯುಕ್ತ ಜಮಾಅತ್ ಖಾಝಿ ಸಯ್ಯಿದ್ ಕೂರತ್ ತಂಙಳ್ ಆರ್ಶೀವಚನ ನೀಡಿದರು. ಮಸ್ಲಕ್ ಪ್ರಧಾನ ಸಮಿತಿ ಅಧ್ಯಕ್ಷ ಸಯ್ಯಿದ್ ಕಾಜೂರು ತಂಙಳ್ ಅಧ್ಯಕ್ಷತೆ ವಹಿಸಿದ್ದರು.
ಸಹಾಯಕ ಖಾಝಿ ಸಯ್ಯಿದ್ ಸಾದಾತ್ ತಂಙಳ್, ತಾ| ಸಂಯುಕ್ತ ಜಮಾಅತ್ ಅಧ್ಯಕ್ಷ ಸಯ್ಯಿದ್ ಇಸ್ಮಾಯಿಲ್ ತಂಙಳ್, ಸಯ್ಯಿದ್ ಹಬೀಬುರ್ರಹ್ಮಾನ್ ಮುಶೈಖ್ ತಂಙಳ್ ಬೆಳಾಲು, ಸಯ್ಯಿದ್ ಎಸ್.ಎಂ ಕೋಯ ತಂಙಳ್ ಉಜಿರೆ, ಮುಂಡಾಜೆ ಶ್ರೀ ದುರ್ಗಾಪರಮೇಶ್ವರೀ ದೇವಸ್ಥಾನದ ಆಡಳಿತ ಸಮಿತಿ ಅಧ್ಯಕ್ಷ ಮಚ್ಚಿಮಲೆ ಅನಂತ ಭಟ್, ಗ್ರಾಮ ದೈವಸ್ಥಾನ ವ್ಯಾಘ್ರಚಾಮುಂಡಿ ಮೂರ್ತಿಲ್ಲಾಯಿ ದೈವಸ್ಥಾನ ಗುಂಡ ಇಲ್ಲಿನ ಆಡಳಿತ ಮಂಡಳಿ ಮಾಜಿ ಅಧ್ಯಕ್ಷ ಅಗರಿ ರಾಮಣ್ಣ ಶೆಟ್ಟಿ, ಮುಂಡಾಜೆ ಸೈಂಟ್ ಮೇರಿ ಚರ್ಚ್‌ನ ಪ್ರ. ಧರ್ಮಗುರುಗಳಾದ ರೆ. ಫಾ| ಬಿನೋಯ್ ಎ. ಜೆ, ಯಂಗ್ ಚಾಲೆಂಜರ್‍ಸ್ ಕ್ರೀಡಾ ಸಂಘದ ಸಂಚಾಲಕ ಲ| ನಾಮದೇವ ರಾವ್, ಗ್ರಾ. ಪಂ ಪಿಡಿಒ ಸಂಜೀವ ನಾಯ್ಕ, ಉದ್ಯಮಿ ಪಿ. ಸಿ ಸೆಬಾಸ್ಟಿಯನ್, ಕರವೇ ಬೆಳ್ತಂಗಡಿ ತಾ| ಅಧ್ಯಕ್ಷ ಶ್ರೀನಿವಾಸ ಗೌಡ ಪಟ್ರಮೆ, ಎಸ್ಸೆಸ್ಸೆಫ್ ಡಿವಿಷನ್ ಪ್ರ. ಕಾರ್ಯದರ್ಶಿ ಇಕ್ಬಾಲ್ ಮಾಚಾರ್, ಮುಂಡಾಜೆ ಬದ್ರಿಯಾ ಜುಮ್ಮಾ ಮಸೀದಿ ಮಾಜಿ ಅಧ್ಯಕ್ಷ ಉಸ್ಮಾನ್ ಹಾಜಿ, ಉದ್ಯಮಿ ಉಸ್ಮಾನ್ ಮೂಡಿಗೆರೆ, ರಶೀದ್ ಬಲಿಪಾಯ, ಅಝೀಝ್ ಚಿಕ್ಕಮಗಳೂರು, ಉಜಿರೆ ಕೇಂದ್ರ ಜುಮ್ಮಾ ಮಸೀದಿ ಅಧ್ಯಕ್ಷ ಬಿ. ಎಮ್ ಅಬ್ದುಲ್ ಹಮೀದ್, ಮಸ್ಲಕ್ ಕಾರ್ಯಾಧ್ಯಕ್ಷ ಹಾಜಬ್ಬ, ಮುಂಡಾಜೆ ಖತೀಬ್ ಇಬ್ರಾಹಿಂ ಸಖಾಫಿ ಕಬಕ, ಉಮರ್‌ಕುಂಞಿ ನಾಡ್ಜೆ, ಕಾಸಿಂ ಮಲ್ಲಿಗೆಮನೆ, ಬಿ.ಎಚ್ ಅಬೂಬಕ್ಕರ್ ಹಾಜಿ ಕಿಲ್ಲೂರು, ಕೆ.ಎ ಅಬೂಬಕ್ಕರ್ ಹಾಜಿ ಮತ್ತು ಶೇಕಬ್ಬ ಕುಕ್ಕಾವು ಮೊದಲಾದವರು ಉಪಸ್ಥಿತರಿದ್ದರು.
ಶಾಸಕ ವಸಂತ ಬಂಗೇರ, ಜಿ.ಪಂ ಶಿಕ್ಷಣ ಮತ್ತು ಆರೋಗ್ಯ ಸ್ಥಾಯಿ ಸಮಿತಿ ಅಧ್ಯಕ್ಷ ಶಾಹುಲ್ ಹಮೀದ್ ಕೆ. ಕೆ, ಮುಂಡಾಜೆ ಶ್ರೀ ಪರಶುರಾಮ ದೇವಸ್ಥಾನದ ಜೀರ್ಣೋದ್ಧಾರ ಸಮಿತಿ ಅಧ್ಯಕ್ಷ ಎನ್.ಎಸ್ ಗೋಖಲೆ, ಭಿಡೆ ಮನೆಯ ಶ್ರೀಧರ ಜಿ ಭಿಡೆ, ನಿವೃತ ಮೇಜರ್ ಜನರಲ್ ಎಂ.ವಿ ಭಟ್, ವಿನಾಯಕ್ ಪ್ರಭು ಆಲಂದಡ್ಕ, ನಲಿಕೆ ಸಮಾಜ ಅಧ್ಯಕ್ಷ ಸೇಸಪ್ಪ ನಲಿಕೆ, ಗ್ರಾ.ಪಂ ಅಧ್ಯಕ್ಷೆ ಶಾಲಿನಿ, ಉಪಾಧ್ಯಕ್ಷೆ ವಸಂತಿ, ಸದಸ್ಯ ಅಶ್ವಿನಿ, ತಾ. ಪಂ ಸದಸ್ಯೆ ಲೀಲಾವತಿ, ಗ್ರಾ. ಪಂ ಸದಸ್ಯರಾದ ಸುರೇಶ್ ಹೆಗ್ಡೆ, ಚೆನ್ನಕೇಶವ, ಪ್ರಮುಖರಾದ ರಾಘವ ಶೆಟ್ಟಿ ನೆಯ್ಯಾಲು, ಅಬ್ದುಲ್ ರಹಿಮಾನ್ ಉಜಿರೆ, ಆಲಿಕುಂಞಿ ಸಖಾಫಿ ನಾವೂರು, ಬಾಬು ಪೂಜಾರಿ ಕೂಳೂರು, ಯು.ಕೆ ಮುಹಮ್ಮದ್ ಹನೀಫ್ ಉಜಿರೆ, ಶುಕೂರ್ ಕಾಶಿಬೆಟ್ಟು, ಸೆಬಾಸ್ಟಿಯನ್ ಅರಸಮಜಲು ಇವರುಗಳು ಆಗಮಿಸಿ ಶುಭ ಕೋರಿದರು.

madanthyar

madanthyar1ಮಡಂತ್ಯಾರು : ಸೇಕ್ರೆಡ್ ಹಾರ್ಟ್ ಶಿಕ್ಷಣ ಸಂಸ್ಥೆಗಳ ದಿನಾಚರಣೆಯು ಇಂದು(ಡಿ.16) ಜರುಗಿತು.
ಅಧ್ಯಕ್ಷತೆಯನ್ನು ಮಂಗಳೂರು ಧರ್ಮಪ್ರಾಂತ್ಯದ ಧರ್ಮಾಧ್ಯಕ್ಷ ಡಾ| ಅಲೋಸಿಯಸ್ ಪೌಲ್ ಡಿಸೋಜ ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ಶಾಸಕ ಕೆ. ವಸಂತ ಬಂಗೇರ, ಮಂಗಳೂರು ಕಥೊಲಿಕ್ ಶಿಕ್ಷಣ ಮಂಡಳಿಯ ಕಾರ್ಯದರ್ಶಿ ಫಾ| ಜೆರಾಲ್ಡ್ ಡಿಸೋಜ, ಮಂಗಳೂರು ಶಿಕ್ಷಣ ಮತ್ತು ತರಬೇತಿ ಇಲಾಖೆಯ ಪ್ರಧಾನ ಮತ್ತು ಉಪ ನಿರ್ದೇಶಕ ಸಿಪ್ರಿಯನ್ ಮೊಂತೆರೋ, ಮೊದಲಾದವರು ಉಪಸ್ಥಿತರಿದ್ದರು.

venuru kambala1

venuru kambala3

venuru kambala

venuru kambala2

venuru kambala4 copyವೇಣೂರು : ಬೆಳ್ತಂಗಡಿ ತಾಲೂಕಿನ ಪ್ರಸಿದ್ಧ ಬೆಳ್ಳಿಹಬ್ಬದ ಸಂಭ್ರಮದ ಹೊನಲು ಬೆಳಕಿನ ವೇಣೂರು-ಪೆರ್ಮುಡ ಸೂರ್ಯ-ಚಂದ್ರ ಜೋಡುಕರೆ ಬಯಲು ಕಂಬಳವು ಇಂದು(ಡಿ.16)ಉದ್ಘಾಟನೆಗೊಂಡಿತು.
ಅಳದಂಗಡಿ ಅರಮನೆಯ ತಿಮ್ಮಣ್ಣರಸರಾದ ಡಾ| ಪದ್ಮಪ್ರಸಾದ್ ಅಜಿಲರು ಉದ್ಘಾಟನೆಗೊಳಿಸಿದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕಂಬಳ ಸಮಿತಿ ಅಧ್ಯಕ್ಷ ನಿತೀಶ್ ಹೆಚ್ ವಹಿಸಿದ್ದರು.
ಈ ಸಂದರ್ಭದಲ್ಲಿ ವೇಣೂರು ಮಹಾಲಿಂಗೇಶ್ವರ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಭಾಸ್ಕರ ಬಲ್ಯಾಯ, ವೇಣೂರು ಕ್ರಿಸ್ತರಾಜ ದೇವಾಲಯದ ಫಾ| ಆಂಟನಿ ವಿ. ಲುವಿಸ್, ಕುಂಡದಬೆಟ್ಟು ಜುಮ್ಮಾ ಮಸೀದಿ ಧರ್ಮಗುರು ಕೆ.ಎಂ ಹನೀಫ್ ಸಖಾಫಿ ಬಂಗೇರ್‌ಕಟ್ಟೆ, ಜಿ.ಪಂ ಸದಸ್ಯ ಶೇಖರ್ ಕುಕ್ಕೇಡಿ, ಕುಕ್ಕೇಡಿ ಗ್ರಾ.ಪಂ ಅಧ್ಯಕ್ಷ ಶ್ರೀಮತಿ ತೇಜಾಕ್ಷಿ, ವೇಣೂರು ಹಿರಿಯ ವೈದ್ಯ ಡಾ| ಬಿ.ಪಿ ಇಂದ್ರ, ಪಡಂಗಡಿ ಗ್ರಾ.ಪಂ ಅಧ್ಯಕ್ಷೆ ಶ್ರೀಮತಿ ಮೀನಾಕ್ಷಿ, ಅಳದಂಗಡಿ ಗ್ರಾ.ಪಂ ಅಧ್ಯಕ್ಷೆ ಸತೀಶ್ ಕುಮಾರ್ ಮಿತ್ತಮಾರು, ವೇಣೂರು ಮಹಾಲಿಂಗೇಶ್ವರ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಸದಸ್ಯೆ ಶ್ರೀಮತಿ ವಿಮಲಚಂದ್ರ ಕೋಟ್ಯಾನ್ ಮೊದಲಾದವರು ಉಪಸ್ಥಿತರಿದ್ದರು. ಹಾಗೂ ವಿಶೇಷವಾಗಿ ಪ್ರಾನ್ಸ್‌ನಿಂದ ಕಂಬಳ ವೀಕ್ಷಣೆಗೆ ಆಗಮಿಸಿದ್ದರು.

bangarakatte skssf pressmeetಬೆಳ್ತಂಗಡಿ : ಬದ್ರಿಯಾ ಜುಮ್ಮಾ ಮಸೀದಿ ಬಂಗಾರಕಟ್ಟೆ ಎಸ್‌ಕೆಎಸ್‌ಎಸ್‌ಎಫ್ ಬಂಗಾರಕಟ್ಟೆ ಶಾಖೆ ಇದರ ಆಶ್ರಯದಲ್ಲಿ ಡಿ.17 ರಂದು ಸಾಮೂಹಿಕ ವಿವಾಹದ ಪ್ರಯುಕ್ತ ಧಾರ್ಮಿಕ ಮತ ಪ್ರಭಾಷಣವು ಬಂಗಾರುಕಟ್ಟೆಯ ಶಂಸುಲ್ ಉಲಮಾ ವೇದಿಕೆ ಬದ್ರಿಯ ಜುಮ್ಮಾ ಮಸೀದಿಯಲ್ಲಿ ನಡೆಯಲಿದೆ ಎಂದು ಸಂಘದ ಸಂಚಾಲಕ ಮಹಮ್ಮದ್ ಹನೀಫ್ ಬಂಗೇರುಕಟ್ಟೆ ಪತ್ರಿಕಾ ಪ್ರಕಣೆಯಲ್ಲಿ ತಿಳಿಸಿದರು.
ಪತ್ರಿಕಾ ಗೋಷ್ಠಿಯಲ್ಲಿ ಸಂಘದ ಸಹ ಸಂಚಾಲಕ ಅಶ್ರಫ್ ಸಾಲ್ಮರ್, ಪ.ಕಾರ್ಯದರ್ಶಿ ಮಹಮ್ಮದ್ ರಫೀಕ್ ಬಳ್ಳಮಂಜ, ಜೊತೆ ಕಾರ್ಯದರ್ಶಿ ಬಿ.ಕೆ ನವಾಝ್ ಬಂಗೇರುಕಟ್ಟೆ, ಸದಸ್ಯರಾದ ಮಹಮ್ಮದ್ ಬಶೀರ ಬಳ್ಳಮಂಜ, ಮಹಮ್ಮದ್ ರಫೀಕ್ ಬಂಗೇರುಕಟ್ಟೆ ಉಪಸ್ಥಿತರಿದ್ದರು.

ಬೆಳ್ತಂಗಡಿ : ತುರ್ತು ಕಾಮಗಾರಿಯ ಪ್ರಯುಕ್ತ 110/ 11 ಕೆವಿ ಕರಾಯ ವಿದ್ಯುತ್ ಉಪಕೇಂದ್ರದಿಂದ ಹೊರಡುವ ಎಲ್ಲ 11 ಕೆವಿ ಫೀಡರುಗಳಲ್ಲಿ ಡಿ. 16, 19, 21 ರಂದು ಬೆಳಿಗ್ಗೆ 7.00 ರಿಂದ 5.00 ಗಂಟೆ ತನಕ ವಿದ್ಯುತ್ ನಿಲುಗಡೆಯಾಗಲಿದೆ ಎಂದು ಮೆಸ್ಕಾಂ ಪ್ರಕಟಣೆಯಲ್ಲಿ ತಿಳಿಸಿದೆ.

Hemanthಬೆಳಾಲು ಗ್ರಾಮದ ಒಡಿಪ್ರೊಟ್ಟು ಗುರುರಾಜ್ ಮತ್ತು ಅರ್ಪಣಾ ದಂಪತಿ ಪುತ್ರ ಹೇಮಂತ್ ಕೋಟ್ಯಾನ್‌ನ 2ನೇ ವರ್ಷದ ಹುಟ್ಟುಹಬ್ಬವನ್ನು ಡಿ. 10ರಂದು ಆಚರಿಸಲಾಯಿತು.

sanvithನಾರಾವಿ : ಈದು ಗ್ರಾಮದ ಪಾಲಡ್ಕ ನಿವಾಸ ಸತೀಶ್ ಪೂಜಾರಿ ಮತ್ತು ಅಕ್ಷಿತ ದಂಪತಿ ಪುತ್ರ ಸನ್ವಿತ್‌ನ 3ನೇ ವರ್ಷದ ಹುಟ್ಟುಹಬ್ಬವನ್ನು ಡಿ.4 ರಂದು ಮುಂಬೈನ ನಾಸಿಕ್‌ನಲ್ಲಿ ಆಚರಿಸಲಾಯಿತು.

Sonaliಮೇಲಂತಬೆಟ್ಟು ಗ್ರಾಮ ಬಟ್ಯರಡ್ಡ ಮನೆಯ ಶ್ರೀಮತಿ ನಿಮಿತಾ ಮತ್ತು ಮೋಹನ್ ದಂಪತಿ ಪುತ್ರಿ ಸೋನಾಲಿಯ ಪ್ರಥಮ ವರ್ಷದ ಹುಟ್ಟುಹಬ್ಬವನ್ನು ಡಿ. 7ರಂದು ಆಚರಿಸಲಾಯಿತು.

suchitha-krianಬೆಳ್ತಂಗಡಿ ಅಶ್ವಥನಗರ ರೇಷ್ಮೆರೋಡ್ ಸಂಜೀವ ಶೆಟ್ಟಿಯವರ ಪುತ್ರಿ ಸುಚಿತಾರವರ ವಿವಾಹವು ಪಲ್ಲೆ ಮಜಲು ಗುತ್ತು (ಭಂಡಾರಪಾದೆ) ದಿ| ಸದಾಶಿವ ಶೆಟ್ಟಿಯವರ ಪುತ್ರ ಕಿರಣ್‌ರೊಂದಿಗೆ ಡಿ.7 ರಂದು ಬಿ.ಸಿ ರೋಡ್ ರಂಗೋಲಿಯ ರಾಜಾಂಗಣ ಸಭಾಭವನದಲ್ಲಿ ಜರುಗಿತು.

Umesh mamathaಮರೋಡಿ ದರ್ಖಾಸು ಗಿರಿಯಪ್ಪ ಪೂಜಾರಿಯವರ ಪುತ್ರ ಅಳದಂಗಡಿ ಮಾರುತಿ ಡ್ರೈವಿಂಗ್ ಸ್ಕೂಲ್‌ನ ಉಮೇಶ್‌ರವರ  ವಿವಾಹವು ಪುತ್ತೂರು ತಾಲೂಕು ಕಬಕ ಪಣೆಮಜಲು ಪದ್ಮನಾಭ ಅಮೀನ್‌ರವರ ಪುತ್ರಿ ದಿವ್ಯಾರೊಂದಿಗೆ ಅಳದಂಗಡಿ ಸ್ವರಾಜ್ ಟವರ್‍ಸ್‌ನ ಶ್ರೀಗುರು ಸಭಾಭವನದಲ್ಲಿ ನ. 26ರಂದು ಜರಗಿತು.

avinash-sushmithaಕರಂಬಾರು ಗ್ರಾಮದ ಮುಂಡೇಲು ದಿ| ಸಂಜೀವ ಮೂಲ್ಯರ ಪುತ್ರ ಅವಿನಾಶ್‌ರವರ ವಿವಾಹವು ಮಚ್ಚಿನ ಗ್ರಾಮದ ಮಾಯಿಲೋಡಿ ಸೂರಪ್ಪ ಮೂಲ್ಯರ ಪುತ್ರಿ ಸುಶ್ಮಿತಾರೊಂದಿಗೆ ಡಿ.3 ರಂದು ಮಡಂತ್ಯಾರು ಪಾರೆಂಕಿ ಶ್ರೀ ಮಹಿಷಮರ್ದಿನಿ ದೇವಸ್ಥಾನದ ಕಲ್ಯಾಣ ಮಂಟಪದಲ್ಲಿ ಜರುಗಿತು.

muliya jewellers1

muliya jewellers
ಬೆಳ್ತಂಗಡಿ : ಇಲ್ಲಿನ ಸಂತೆಕಟ್ಟೆ ಸುವರ್ಣ ಆರ್ಕೇಡ್‌ನಲ್ಲಿ ಮುಳಿಯ ಚಿನ್ನದ ಮೇಳದ ಪ್ರದರ್ಶನ ಮತ್ತು ಮಾರಾಟ ಡಿ. 15, 16, 17, 18ರಂದು ನಡೆಯಲಿದ್ದು, ಇದರ ಉದ್ಘಾಟನೆಯು ಇಂದು(ಡಿ 15) ನಡೆಯಿತು.
ಬೆಳ್ತಂಗಡಿ ಬ್ಯೂಟಿ ಪಾರ್ಲರ್ ಅಸೋಸಿಯೇಶನ್ ಸದಸ್ಯೆ ಮತ್ತು ವೆಸ್ಟರನ್ ಬ್ಯೂಟಿ ಪಾರ್ಲರ್‌ನ ಮಾಲಕಿ ಶ್ರೀಮತಿ ಪಲ್ಲವಿ ರಾಜ್ ಉದ್ಘಾಟಿಸಿದರು.
ಸಂಸ್ಥೆಯ ಚೆರ್‌ಮೆನ್ ಮತ್ತು ಮ್ಯಾನೆಜಿಂಗ್ ಡೈರೆಕ್ಟರ್ ಮುಳಿಯ ಕೇಶವ ಪ್ರಸಾದ್ ಮುಳಿಯ ಸಂಸ್ಥೆಯ ವಿಶೇಷತೆಗಳನ್ನು ತಿಳಿಸಿದರು. ರಿಟಯರ್ಡ್ ಏರ್‌ಫೋರ್ಸ್ ಲೆಬರ್ ಆಫೀಸರ್ ರಾಮ ಭಟ್ ಸಂಸ್ಥೆಗೆ ಶುಭ ಹಾರೈಸಿದರು. ಕಾರ್ಯಕ್ರಮದಲ್ಲಿ ಸಂಸ್ಥೆಯ ಹಿರಿಯರಾದ ಸರಫ್ ಶ್ಯಾಮ್ ಭಟ್, ಪುತ್ತೂರು ಶಾಖೆಯ ಶಾಖಾ ಪ್ರಬಂದಕ ನಾಮದೇವ್ ಮಲ್ಯ ಉಪಸ್ಥಿತರಿದ್ದರು. ಪ್ರೂಕ್ಯೂರ್‌ಮೆಂಟ್ ಮ್ಯಾನೇಜರ್ ಗುರುರಾಜ್ ಅವಭೂತ್ ಕಾರ್ಯಕ್ರಮ ನಿರೂಪಿಸಿದರು.

sdm

sdm1ಉಜಿರೆ : ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಪ್ರಕೃತಿ ಚಿಕಿತ್ಸಾ ಮತ್ತು ಯೋಗ ವಿಜ್ಞಾನಗಳ ಮಹಾವಿದ್ಯಾಲಯ, ಉಜಿರೆ ಕಾಲೇಜಿನಲ್ಲಿ ಇಂದು(ಡಿ. 15) 24ನೇ ಪದವಿ ಪ್ರದಾನ ಸಮಾರಂಭ ಜರುಗಿತು.
ಅಧ್ಯಕ್ಷತೆಯನ್ನು ಶ್ರೀ ಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿ ಡಾ| ಡಿ. ವೀರೇಂದ್ರ ಹೆಗ್ಗಡೆಯವರು ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ನವದೆಹಲಿ ಆಯುಷ್ ಮಂತ್ರಾಲಯದ ಕಾರ್ಯದರ್ಶಿ ವೈದ್ಯ ರಾಜೇಶ್ ಕೊಟೇಚ ಭಾಗವಹಿಸಿದ್ದರು.
ಈ ಸಂದರ್ಭದಲ್ಲಿ ಉಜಿರೆ ಎಸ್.ಡಿ.ಎಂ ಶಿಕ್ಷಣ ಸಂಸ್ಥೆಗಳ ಕಾರ್ಯದರ್ಶಿಗಳಾದ ಡಿ. ಹರ್ಷೇಂದ್ರ ಕುಮಾರ್, ಡಾ. ಬಿ ಯಶೋವರ್ಮ, ಉಪಾಧ್ಯಕ್ಷ ಪ್ರೊ| ಎಸ್. ಪ್ರಭಾಕರ್, ಉಪಸ್ಥಿತರಿದ್ದರು.

kshithi raiಬೆಳ್ತಂಗಡಿ : ಝಿ ಕನ್ನಡ ವಾಹಿನಿಯ ಜನಪ್ರಿಯ ಸಂಗೀತ ರಿಯಾಲಿಟಿ ಶೋ ಸರಿಗಮಪ ಲಿಟ್ಲ್ ಚಾಂಪಿಯನ್ ಸೀಸನ್-14ಗೆ ಧರ್ಮಸ್ಥಳದ ಕು| ಕ್ಷಿತಿ ಕೆ. ರೈ ಆಯ್ಕೆಯಾಗಿದ್ದಾರೆ.
ಎಳವೆಯಿಂದಲೇ ಸಂಗೀತದ ಬಗ್ಗೆ ವಿಶೇಷ ಆಸಕ್ತಿ ಹೊಂದಿದ್ದ ಕ್ಷಿತಿ ಕೆ. ರೈ ಸಂಗೀತದಲ್ಲಿ ಕ್ಷೇತ್ರದಲ್ಲಿ ಏನಾದರೂ ಸಾಧನೆ ಮಾಡಬೇಕೆಂಬ ಬಯಕೆ ಹೊಂದಿದ್ದರು. ಮಗಳಲ್ಲಿರುವ ಸಂಗೀತದ ಆಸಕ್ತಿಯನ್ನು ಸೂಕ್ಷ್ಮವಾಗಿ ಗಮನಿಸಿದ ಇವರ ತಂದೆ ಕಿಶೋರ್ ರೈ ಹಾಗೂ ತಾಯಿ ಜಯಭಾರತಿ ರೈ ಮಗಳ ಸ್ವರಸ್ವರೂಪಕ್ಕೆ ಒಂದು ಅಡಿಪಾಯದ ರಚನೆಯನ್ನು ನೀಡಲು ಉತ್ಸುಕರಾಗಿ ಮಗಳಿಗೆ ಶಿಕ್ಷಣದ ಜೊತೆ ಬೆಳ್ತಂಗಡಿಯ ಕವಿತಾ ಕೋರ್ನಾಯ ಅವರಲ್ಲಿ ಕರ್ನಾಟಕ ಶಾಸ್ತ್ರೀಯ ಸಂಗೀತ ತರಗತಿಗೆ ಕಲಿಸಿದರು. ಬಳಿಕ ಸುಗಮ ಸಂಗೀತಕ್ಕಾಗಿ ಪುತ್ತೂರಿನ ಕಿರಣ್ ಕುಮಾರ್ ಅವರ ಹತ್ತಿರ ಕಲಿಸಿದರು.
ತಂದೆ-ತಾಯಿಯ ಪ್ರೋತ್ಸಾಹವನ್ನು ಸಮರ್ಥವಾಗಿಯೇ ಬಳಸಿಕೊಂಡ ಕ್ಷಿತಿ ಅಲ್ಲಲ್ಲಿ ಚಿಕ್ಕಪುಟ್ಟ ವೇದಿಕೆಗಳಲ್ಲಿ ತನ್ನ ಇಂಪಾದ ಧ್ವನಿಯಲ್ಲಿ ಅದ್ಭುತವಾಗಿ ಹಾಡಿ ಜನಮನಗೆದ್ದಿದ್ದಳು. ಇದೀಗ ಝೀ ಕನ್ನಡದ ರಿಯಾಲಿಟಿ ಶೋಗೆ ಆಯ್ಕೆಯಾಗಿರುವ ಈಕೆ ಮೆಗಾ ಅಡಿಷನ್‌ನಲ್ಲಿ ಹಾಡಿದ ಮೊದಲ ಹಾಡಿಗೆ ನಿರ್ಣಯಕರಾದ ಗಾಯಕ ವಿಜಯ್ ಪ್ರಕಾಶ್, ಅರ್ಜುನ್ ಜನ್ಯ ಮತ್ತು ಸಂಗೀತ ಕ್ಷೇತ್ರದ ನಾದಬ್ರಹ್ಮ ಹಂಸಲೇಖ ಅವರಿಂದ ಭೇಷ್ ಎಣಿಸಿಕೊಂಡಿದ್ದಾಳೆ. ಧರ್ಮಸ್ಥಳದ ಎಸ್‌ಡಿಎಂ ಆಂಗ್ಲಮಾಧ್ಯಮ ಶಾಲೆಯಲ್ಲಿ 7ನೇ ತರಗತಿ ಕಲಿಯುತ್ತಿರುವ ಕು| ಕ್ಷಿತಿ ಕೆ. ರೈ ಈ ರಿಯಾಲಿಟಿ ಶೋ ದ ಮೂಲಕ ಬೆಳ್ತಂಗಡಿ ತಾಲೂಕಿಗೆ ಹೆಸರು ತರಲಿ, ಸಂಗೀತ ಕ್ಷೇತ್ರದಲ್ಲಿ ಮಹತ್ತರದ ಸಾಧನೆ ಮಾಡುವಂತಾಗಲಿ, ಈಕೆಯ ಭವಿಷ್ಯ ಉಜ್ಜ್ವಲವಾಗಲಿ ಎಂಬುದು ನಮ್ಮೆಲ್ಲರ ಹಾರೈಕೆಯಾಗಿದೆ.

thannirupanrta police rige abhinandaneತಣ್ಣೀರುಪಂತ ಗ್ರಾಮದ ಕಲ್ಲೇರಿಯಲ್ಲಿ ನಡೆದ ಅಂಗಡಿಗೆ ಬೆಂಕಿ ಹಚ್ಚಿ ಕಳ್ಳತನ ನಡೆಸಿದ ಪ್ರಕರಣವನ್ನು ವಾರದೊಳಗೆ ಭೇದಿಸುವ ಮೂಲಕ ಊರಿನ ಶಾಂತಿ-ಸುವ್ಯವಸ್ಥೆಗೆ ಧಕ್ಕೆಯಾಗದಂತೆ ನೋಡಿಕೊಂಡ ಪೊಲೀಸ್ ಇಲಾಖೆಗೆ ಕಲ್ಲೇರಿ ಹಾಗೂ ಕರಾಯ ಗ್ರಾಮಸ್ಥರ ವತಿಯಿಂದ ಡಿ. 7ರಂದು ಅಭಿನಂದನೆ ನಡೆಯಿತು.
ಪುತ್ತೂರು ಗ್ರಾಮಾಂತರ ವೃತ್ತ ನಿರೀಕ್ಷಕರು ಹಾಗೂ ಉಪ್ಪಿನಂಗಡಿ ಪೊಲೀಸ್ ನಿರೀಕ್ಷಕರು ಮತ್ತು ಸಿಬ್ಬಂದಿ ಯನ್ನು ಅಭಿನಂದಿಸಿ ಮಾತನಾಡಿದ ತಣ್ಣೀರುಪಂತ ಸಿಎ ಬ್ಯಾಂಕ್ ಅಧ್ಯಕ್ಷ ನಿರಂಜನ್ ಬಾವಂತಬೆಟ್ಟು ಉಪ್ಪಿನಂಗಡಿ ಪೊಲೀಸರು ಯಾವುದೇ ಉಹಾಪೋಹಗಳಿಂದ ಸಮಾಜದ ಶಾಂತಿ-ಸುವ್ಯವಸ್ಥೆಗೆ ಧಕ್ಕೆಯಾಗಲು ಅವಕಾಶ ನೀಡದೇ ವಾರದೊಳಗೆ ಈ ಪ್ರಕರಣವನ್ನು ಭೇದಿಸಿ, ಆರೋಪಿಗಳನ್ನು ಬಂಧಿಸಿ ಜೈಲಿಗಟ್ಟಿದ್ದಾರೆ. ಈ ಮೂಲಕ ಸಮಾಜದ ಅಭಿನಂದನೆಗೆ ಪಾತ್ರರಾಗಿದ್ದಾರೆ ಎಂದರು.
ಅಭಿನಂದನೆ ಸ್ವೀಕರಿಸಿ ಮಾತನಾಡಿದ ಪುತ್ತೂರು ಗ್ರಾಮಾಂತರ ವೃತ್ತ ನಿರೀಕ್ಷರ ಗೋಪಾಲ ನಾಯ್ಕ, ಕಳ್ಳತನ ನಡೆಸಿದ ಬಳಿಕ ಅಂಗಡಿಗೆ ಬೆಂಕಿ ಹಚ್ಚಿ ಅಂಗಡಿ ಸಂಪೂರ್ಣ ಭಸ್ಮಗೊಳಿಸುವ ಮೂಲಕ ಕಳ್ಳರು ಕಲ್ಲೇರಿಯಲ್ಲಿ ತನಿಖೆಯ ದಿಕ್ಕು ತಪ್ಪಿಸಲು ಯತ್ನಿಸಿದ್ದರು. ಇದನ್ನು ಪೊಲೀಸ್ ಇಲಾಖೆ ಗಂಭೀರವಾಗಿ ಪರಿಗಣಿಸಿ, ವಾರದೊಳಗೆ ಆರೋಪಿಗಳನ್ನು ಬಂಧಿಸಿದೆ ಎಂದರು.
ಉಪ್ಪಿನಂಗಡಿ ಠಾಣಾ ನಿರೀಕ್ಷಕ ನಂದ ಕುಮಾರ್ ಅಭಿನಂದನೆ ಸ್ವೀಕರಿಸಿ ಮಾತನಾಡಿ, ಇಲ್ಲಿನ ಕರಾಯ ಗ್ರಾಮಕ್ಕೆ ಮೊದಲೇ ಕೋಮು ಸೂಕ್ಷ್ಮ ಪ್ರದೇಶ ಎಂಬ ಹಣೆಪಟ್ಟಿ ಇದೆ. ಆದರೆ ಕಲ್ಲೇರಿ ಘಟನೆ ನಡೆದಾಗ ಹಲವು ಉಹಾಪೋಹಗಳು ಕೇಳಿಬಂದರೂ ಇಲ್ಲಿನ ಜನತೆ ಯಾವುದಕ್ಕೂ ಕಿವಿಗೊಡದೇ ಶಾಂತಿ ಕಾಪಾಡಿದ್ದಾರೆ ಎಂದರು.
ತಣ್ಣೀರುಪಂಥ ಗ್ರಾ.ಪಂ ಅಧ್ಯಕ್ಷ ಜಯವಿಕ್ರಮ್ ಕಲ್ಲಾಪು ಮಾತನಾಡಿದರು. ಅಭಿನಂದನೆ ಸಲ್ಲಿಸಿದರು. ಉಪ್ಪಿನಂಗಡಿ ಪೊಲೀಸ್ ಠಾಣಾ ಸಿಬ್ಬಂದಿ ಹರಿಶ್ಚಂದ್ರ, ಇರ್ಷಾದ್ ಪಡಂಗಡಿ, ಪ್ರವೀಣ್ ರೈ, ಶೇಖರ ಗೌಡ, ಸಲೀಂ, ಜೀಪು ಚಾಲಕ ನಾರಾಯಣ ಗೌಡ ಅವರನ್ನು ಅಭಿನಂದಿಸಲಾಯಿತು. ತಾ.ಪಂ ಸದಸ್ಯೆ ಕೇಶವತಿ, ತಣ್ಣೀರುಪಂತ ಗ್ರಾ.ಪಂ ಸದಸ್ಯರಾದ ನವೀನ್ ಕುಮಾರ್, ಆದಂ ಕೆ., ಡಿ.ಕೆ ಅಯೂಬ್, ಸೂರಪ್ಪ ಬಂಗೇರ, ಅಬ್ದುರ್ರಹ್ಮಾನ್, ತಾಜುದ್ದೀನ್, ಸುಮ, ಗೀತಾ ಉಪಸ್ಥಿತರಿದ್ದರು. ಗ್ರಾ.ಪಂ ಸದಸ್ಯ ಸದಾನಂದ ಶೆಟ್ಟಿ ಮಡಪ್ಪಾಡಿ ಸ್ವಾಗತಿಸಿ, ಪಿಡಿಒ ಪೂರ್ಣಿಮಾ ವಂದಿಸಿದರು.

nethre

Nethre1ಉಜಿರೆ : ಜೇಸಿಐ ಮಂಜುಶ್ರೀ ಬೆಳ್ತಂಗಡಿ, ಯುವವಾಹಿನಿ ಬೆಳ್ತಂಗಡಿ ಘಟಕ ಹಾಗೂ ಸುರೇಶ್ ಕೆ. ಪೂಜಾರಿ ಮುಂಬೈ ಇವರ ಪ್ರಾಯೋಜಕತ್ವದಲ್ಲಿ, ಶ್ರೀ ಗುರು ಮಿತ್ರ ಸಮೂಹ, ಬೆಳ್ತಂಗಡಿ ಹಾಗೂ ನವರಸ ಥಿಯೇಟರ್‍ಸ್, ಉಜಿರೆ ಇದರ ಕಲಾವಿದರು ಅಭಿನಯಿಸಿದ ನಾಟಕ ನೇತ್ರೆ ಇದರ ಉದ್ಘಾಟನಾ ಸಮಾರಂಭವು ಡಿ. 14ರಂದು ಉಜಿರೆ ಶಾರದಾ ಮಂಟಪದಲ್ಲಿ ನಡೆಯಿತು.
ಉದ್ಘಾಟನೆಯನ್ನು ಉಜಿರೆ ಶ್ರೀ ಜನಾರ್ಧನ ಸ್ವಾಮಿ ದೇವಸ್ಥಾನದ ಅನುವಂಶಿಕ ಆಡಳಿತ ಮೊಕ್ತೇಸರ ವಿಜಯರಾಘವ ಪಡ್ವೆಟ್ನಾಯ ನೆರವೇರಿಸಿ ಶುಭಹಾರೈಸಿದರು.
ಈ ಸಂದರ್ಭದಲ್ಲಿ ಬೆಳ್ತಂಗಡಿ ಜೇಸಿಐ ಮಂಜುಶ್ರೀ ಅಧ್ಯಕ್ಷ ಜೇಸಿ ಕಿರಣ್ ಕುಮಾರ್ ಶೆಟ್ಟಿ, ಅಳದಂಗಡಿ ಲಯನ್ಸ್ ಕ್ಲಬ್ ಪೂರ್ವಾಧ್ಯಕ್ಷ ಸದಾನಂದ ಪೂಜಾರಿ ಉಂಗಿಲಬೈಲು, ಯುವವಾಹಿನಿ ಬೆಳ್ತಂಗಡಿ ಘಟಕದ ಅಧ್ಯಕ್ಷ ಪ್ರಶಾಂತ್ ಮಚ್ಚಿನ, ಬೆಳ್ತಂಗಡಿ ಸುವರ್ಣ ಸಾಂಸ್ಕೃತಿಕ ಪ್ರತಿಷ್ಠಾನ ಅಧ್ಯಕ್ಷ ಸಂಪತ್ ಬಿ. ಸುವರ್ಣ, ಬೆಳ್ತಂಗಡಿ ಶ್ರೀ ಗುರು ಮಿತ್ರ ಸಮೂಹದ ಸ್ಥಾಪಕಾಧ್ಯಕ್ಷ ರಮಾನಂದ ಸಾಲಿಯಾನ್ ಮುಂಡೂರು, ಉದ್ಯಮಿ ಸುರೇಶ್ ಕೆ. ಪೂಜಾರಿ ಮುಂಬೈ, ಬೆಳ್ತಂಗಡಿ ಸ.ಪ್ರ.ದ ಕಾಲೇಜು ಪ್ರಾಧ್ಯಪಕ ಡಾ| ಟಿ.ಕೆ ಶರತ್ ಕುಮಾರ್, ಜೀ ಕನ್ನಡ ಕಾಮಿಡಿ ಕಿಲಾಡಿಗಳು ಖ್ಯಾತಿಯ ಹಿತೇಶ್ ಕುಮಾರ್ ಕಾಪಿನಡ್ಕ ಉಪಸ್ಥಿತರಿದ್ದರು. ಚಂದ್ರಹಾಸ ಬಳಂಜ ನಿರೂಪಿಸಿ, ಸ್ಮಿತೇಶ್ ಎಸ್. ಬಾರ್ಯ ಸ್ವಾಗತಿಸಿ, ಅನೀಶ್ ಅಮೀನ್ ವೇಣೂರು ಧನ್ಯವಾದವಿತ್ತರು.

maruthi auto workವೇಣೂರು : ಗೋಳಿಯಂಗಡಿ ಎಸ್.ಡಿ.ಎಂ ಐಟಿಐ ಬಳಿ ನೂತನವಾಗಿ ಆರಂಭಗೊಂಡ ಶ್ರೀ ಕಟೀಲ್ ಮಾರುತಿ ಆಟೋ ವರ್ಕ್ಸ್‌ನ್ನು ಡಿ. 14 ರಂದು ಬಿಜೆಪಿ ಯುವ ಮೋರ್ಚಾ ಜಿಲ್ಲಾಧ್ಯಕ್ಷ ಹರೀಶ್ ಪೂಂಜ ಉದ್ಘಾಟಿಸಿದರು. ಈ ಸಂದರ್ಭದಲ್ಲಿ ಸಂತೋಷ ಕುಮಾರ್ ಕಾಪಿನಡ್ಕ, ಹರೀಶ್ ಕಾರಿಂಜ, ರಾಮ್ ಪ್ರಸಾದ್ ಮರೋಡಿ, ರಾಜೇಶ್ ಪೂಜಾರಿ ಮೂಡುಕೋಡಿ, ಸತ್ಯೇಂದ್ರ ರಾವ್, ಅನಿಲ್ ಹೆಗ್ಡೆ, ಗುರುಸ್ವಾಮಿ ರಾಮ ಮೇಸ್ತ್ರಿ ನಿಟ್ಟಡೆ ಮೊದಲಾದವರು ಉಪಸ್ಥಿತರಿದ್ದು, ಶುಭಹಾರೈಸಿದರು.

Dharmasthala nowkara samalochana sabheಧರ್ಮಸ್ಥಳ : ಕರ್ನಾಟಕ ರಾಜ್ಯ ಗ್ರಾ.ಪಂ. ಗ್ರಾಮ ನೌಕರರ ಸಂಘ (ಆರ್.ಡಿ.ಪಿ.ಆರ್) ರಾಜ್ಯ ಸಮಿತಿಯ ಆಶ್ರಯದಲ್ಲಿ ರಾಜ್ಯ ಮಟ್ಟದ ಗ್ರಾಮ ಪಂಚಾಯತ್ ನೌಕರರ ಕುಂದು ಕೊರತೆ ಮತ್ತು ಸಮಾಲೋಚನಾ ಸಭೆ ಡಿ. 9ರಂದು ಧರ್ಮಸ್ಥಳದ ಮಹೋತ್ಸವ ಸಭಾಂಗಣದಲ್ಲಿ ರಾಜ್ಯಾಧ್ಯಕ್ಷ ದೇವಿಪ್ರಸಾದ್ ಬೊಳ್ಮ ರವರ ಅಧ್ಯಕ್ಷತೆಯಲ್ಲಿ ನಡೆಯಿತು. ಈ ಸಂದರ್ಭದಲ್ಲಿ ಗ್ರಾಮ ಪಂಚಾಯತ್ ನೌಕರರ ಹತ್ತು ಹಲವು ಸಮಸ್ಯೆಗಳ ಕುರಿತು ಚರ್ಚಿಸಲಾಯಿತು.
ಸಭೆಯಲ್ಲಿ ಗ್ರಾ.ಪಂ. ನೌಕರರ ಬೇಡಿಕೆ ಮತ್ತು ಸಮಸ್ಯೆಗಳು :
1. ಗ್ರಾಮ ಪಂಚಾಯತ್ ನೌಕರರಿಗೆ ನಗರ ಮತ್ತು ಪಟ್ಟಣ ಪಂಚಾಯತ್ ಸಿಬ್ಬಂದಿಗಳಂತೆ ಸೇವಾನಿಯಮಾವಳಿ ಪಂಚಾಯತ್ ರಾಜ್ ಇಲಾಖೆಯಡಿ ರೂಪಿಸಬೇಕು. 2. ವರ್ಗಾವಣೆ ಸವಲತ್ತು ನೀಡಬೇಕು. 3. ವೇತನ ಶ್ರೇಣಿ ಇಲ್ಲದೆ ಕಳೆದ 20 ವರ್ಷ ಸೇವೆ ಸಲ್ಲಿಸಿದ ನೌಕರರಿಗೂ ಈಗ ಸೇರಿದ ನೌಕರರಿಗೂ ಒಂದೇ ರೀತಿಯಲ್ಲಿ ಕನಿಷ್ಠ ವೇತನ ನೀಡುತಿದ್ದು, ಇದು ಅವೈಜ್ಞಾನಿಕ ಪದ್ದತಿಯಾಗಿದ್ದು ಇದರ ಬದಲು ಗ್ರಾಮ ಪಂಚಾಯತ್ ನೌಕರರಿಗೆ ಹುದ್ದೆಗಳ ನ್ವಯ ಸೂಕ್ತ ವೇತನ ಶ್ರೇಣಿ ನಿಗದಿಪಡಿಸಬೇಕು. 4. ೨೦೦೮ ರಲ್ಲಿಯೇ ಭವಿಷ್ಯನಿದಿಯ ಕುರಿತು ಆದೇಶವಾಗಿದ್ದು, ಆದರೆ ಸದ್ರಿ ಆದೇಶ ಆದೇಶವಾ ಗಿಯೇ ಉಳಿದಿದ್ದು ಇಲ್ಲಿಯವರೆಗೂ ಕಾರ್ಯ ರೂಪಕ್ಕೆ ಬರದೆ ಇರುವುದು ಕಳೆದ 9 ವರ್ಷಗಳಿಂದ ಗ್ರಾಮ ಪಂಚಾ ಯತ್ ನೌಕರರಿಗೆ ಅನ್ಯಾಯವಾಗಿದ್ದು, ಈ ಬಗ್ಗೆ ಸೂಕ್ತ ಕ್ರಮ ಕೈಗೊಳ್ಳಬೇಕು. 5. ಸೂಕ್ತ ವೈದ್ಯಕೀಯ ಭದ್ರತೆಯ ಇಎಸ್‌ಐ ಸೌಲಭ್ಯವಿಲ್ಲ ಈ ಬಗ್ಗೆ ಸೂಕ್ತ ಕ್ರಮ ಕೈಗೊಳ್ಳಬೇಕು. 6. ಕಳೆದ ಹಲವು ವರ್ಷಗಳಿಂದ ಗ್ರಾಮ ಪಂಚಾಯತ್ ಕಛೇರಿಯಲ್ಲಿ ಮಂಜೂರಾದ ಹುದ್ದೆಗಳಿಗೆ (ಪಂಪುಚಾಲಕ, ನೀರುಗಂಟಿ, ಜವಾನ, ಶುಚಿತ್ವನೌಕರ, ಕರವಸೂಲಿಗಾರ ಮತ್ತು ವಾಹನ ಚಾಲಕ) ಗ್ರಾಮ ಪಂಚಾಯತ್ ಗಳು ಸಿಬ್ಬಂದಿಗಳನ್ನು ನೇಮಕ ಮಾಡಿಕೊಂಡು ಅವರಿಂದ ಕಾರ್ಯ ನಿರ್ವಹಿಸಿಕೊಳ್ಳುತ್ತಿದ್ದು, ಇಲ್ಲಿಯವರೆಗೂ ಜಿ.ಪಂ. ಅನುಮೋದನೆಯಾಗದೆ ಅತಂತ್ರ ಸ್ಥಿತಿಯಲ್ಲಿದ್ದು, ಸದ್ರಿ ಅನುಮೋದನೆ ಯಾಗದೆ ಇರುವ ಸಿಬ್ಬಂದಿಗಳಿಗೆ ಜಿ.ಪಂ. ಅನುಮೋದನೆ ನೀಡಬೇಕು. ಮತ್ತು ಸದ್ರಿ ಸಿಬ್ಬಂದಿಗಳ ಪೈಕಿ ಹಲವು ಸಿಬ್ಬಂದಿಗಳು ಈಗಾಗಲೇ ವಯೋಮಿತಿ ಮೀರಿದ್ದು ಮತ್ತು ಹಲವು ಸಿಬ್ಬಂದಿಗಳಿಗೆ ವಿದ್ಯಾರ್ಹ ತೆ ಕಡಿಮೆ ಇದ್ದು, ಇಂತಹ ಸಿಬ್ಬಂದಿ ಗಳಿಗೆ ಅವರು ಸಲ್ಲಿಸಿದ ಸೇವೆಯನ್ನು ಪರಿಗಣಿಸಿ ಒಂದು ಸೂಕ್ತ ನಿದರ್ಶನ ಹೊರಡಿಸಿ ಅನುಮೋದನೆ ನೀಡಿ ಸೇವಾ ಭದ್ರತೆ ಒದಗಿಸಬೇಕು. 7. 2006-07 ನೇ ಸಾಲಿನಿಂದ ಗ್ರಾ.ಪಂ. ಕಚೇರಿಯಲ್ಲಿ ಹುದ್ದೆ ಮಂಜೂರಾಗದೆಯೇ ಅಂದಿನ ದಿನಗಳಲ್ಲಿ ಕಚೇರಿಯಲ್ಲಿ ನುರಿತ ಕಂಪ್ಯೂಟರ್ ಸಾಕ್ಷರತೆ ಹೊಂದಿರುವ ಸಿಬ್ಬಂದಿಗಳು ಇರದ ಕಾರಣ ಎಂ ಜಿ ಎನ್ ಆರ್ ಜಿ ಇ ಎ ಮತ್ತು ಪಂಚತಂತ್ರ ಹಾಗೂ ಇತರ ತಂತ್ರಾಂಶ ಆಧಾರಿತ ಕಂಪ್ಯೂಟರ್ ಮೂಲಕ ಡಾಟ ಎಂಟ್ರೀ ಕಾರ್ಯ ನಿರ್ವಹಿಸಲು ಅಪರೇಟರ್ ಸಿಬ್ಬಂದಿಗಳನ್ನು ಗ್ರಾಮ ಪಂಚಾಯತ್ ಮಟ್ಟದಲ್ಲಿ ನೇಮಕ ಮಾಡಿಕೊಂಡಿದ್ದು, ಸದ್ರಿ ಸಿಬ್ಬಂದಿಗಳಿಗೆ ಹುದ್ದೆ ಮಂಜೂರಾತಿಯಾಗದೆ ಇರುವ ಕಾರಣ ಸರಕಾರ 2014 ರ ಆದೇಶ ಹೊರಡಿಸುವರೆಗೂ ಯಾವುದೇ ಭದ್ರತೆಯಿಲ್ಲದೆ ಗ್ರಾಮ ಪಂಚಾಯತ್‌ಗಳು ನೀಡುತ್ತಿದ್ದ ಅತ್ಯಂತ ಕಡಿಮೆ ವೇತನದಲ್ಲಿಯೂ ಕಾರ್ಯ ನಿರ್ವಹಿಸಿ ಪಂಚಾಯತ್ ರಾಜ್ ಇಲಾಖೆಯ ತಂತ್ರಾಂಶಗಳ ಅನುಷ್ಠಾನದಲ್ಲಿ ಪ್ರಥಮ ಸ್ಥಾನ ಪಡೆಯುವಲ್ಲಿ ಸೇವೆ ಸಲ್ಲಿಸಿದ ಸರಿಸುಮಾರು ಶೇ ೫೦ ಸಿಬ್ಬಂದಿಗಳು ಸದ್ರಿ ಆದೇಶದನ್ವಯ ಯಾವ ಪಂಚಾಯತಿನಲ್ಲಿ ಗುಮಾಸ್ತ/ಬೆರಳಚ್ಚುಗಾರ ಹುದ್ದೆ ಖಾಲಿ ಇತ್ತೋ ಅಂತಹ ಪಂಚಾಯತ್ ಗಳಲ್ಲಿ ಪದನಾಮ ಬದಲಾದ ಕ್ಲರ್ಕ್ ಕಮ್ ಡಾಟ ಎಂಟ್ರೀ ಅಪರೇಟರ್ ಹುದ್ದೆಗೆ ಅವರು ಈ ಹಿಂದೆ ಸಲ್ಲಿಸಿದ ಮೂರು ವರ್ಷ ಸೇವೆಗೆ ಪ್ರಥಮ ಆಧ್ಯತೆ ನೀಡಿ ಜಿಲ್ಲಾ ಪಂಚಾಯತ್ ಅನುಮೋದನೆ ನೀಡಿ ಅವರಿಗೆ ಸೇವಾ ಭದ್ರತೆಯನ್ನು ಸರಕಾರ ಒದಗಿಸಿದ್ದು, ಆದರೆ ಉಳಿದ ಶೇ ೫೦ ಕ್ಕೂ ಅಧಿಕ ಇಂತಹ ಸಿಬ್ಬಂದಿಗಳಿಗೆ ಇನ್ನೂ ಕೂಡ ಸೇವಾ ಭದ್ರತೆ ದೊರಕದೆ ಅತಂತ್ರ ಸ್ಥಿತಿಯಲ್ಲಿದ್ದು ಇಂತಹ ಸಿಬ್ಬಂದಿಗಳಿಗೂ ಈ ಹಿಂದೆ 2014ರ ಆದೇಶದಂತೆ ಅವರೊಂದಿಗೆ ಕಾರ್ಯ ನಿರ್ವಹಿಸುತ್ತಿದ್ದ ಸಹೋದ್ಯೋಗಿಗಳಿಗೆ ಸರಕಾರ ನೀಡಿದ ಸೇವಾ ಭದ್ರತೆಯನ್ನು ನೀಡಬೇಕು. ಸೇರಿಂದತೆ 14 ಬೇಡಿಕೆಗಳನ್ನು ಮಂಡಿಸಲಾಯಿತು.
ಈ ಸಂದರ್ಭದಲ್ಲಿ ಕರ್ನಾಟಕ ರಾಜ್ಯ ಗ್ರಾಮ ಪಂಚಾಯತ್ ನೌಕರರ ಶ್ರೇಯೋಭಿವೃಧ್ಧಿ ಸಂಘದ ಉಡುಪಿ ಜಿಲ್ಲಾಧ್ಯಕ್ಷ ಉದಯ ಶೆಟ್ಟಿ ಪೆರ್ಡೂರು, ದ.ಕ. ಜಿಲ್ಲಾಧ್ಯಕ್ಷೆ ಶ್ರೀಮತಿ ರೋಹಿಣಿ ಶೆಟ್ಟಿ ಕುಕ್ಕೇಡಿ, ಕೋಲಾರ ಜಿಲ್ಲಾ ಪ್ರತಿನಿಧಿ ಯೋಗೀಶ್ ಎಂ ಹುತ್ತೂರು, ಡಾವಣಗೆರೆ ಜಿಲ್ಲಾ ಪ್ರತಿನಿಧಿ ಬಸವರಾಜು, ಮಂಡ್ಯ ಜಿಲ್ಲಾ ಪ್ರತಿನಿಧಿ ಕುಮಾರೇಶ್ ಮಳವಳ್ಳಿ, ಕೊಡಗು ಜಿಲ್ಲಾ ಪ್ರತಿನಿಧಿ ರವೀಂದ್ರ ಸೋಮವಾರಪೇಟೆ, ತುಮಕೂರು ಜಿಲ್ಲಾ ಪ್ರತಿನಿಧಿ ನಾಗರಾಜ್ ಸಿ.ಕೆ.ಪುರ, ವಿಜಾಪುರ ಜಿಲ್ಲಾ ಪ್ರತಿನಿಧಿ ಈರಗಂಟೆಪ್ಪ ಕಲಕೇರಿ, ಶಿವಮೊಗ್ಗ ಜಿಲ್ಲಾ ಪ್ರತಿನಿಧಿ ಸಾವಿತ್ರಿ ಎಂ ಎಸ್ ಅರಮನೆಕೊಪ್ಪ, ಉತ್ತರ ಕನ್ನಡ ಜಿಲ್ಲಾ ಪ್ರತಿನಿಧಿ ಆನಂದ ಅಂಕೋಲ, ಚಿಕ್ಕಮಗಳೂರು ಜಿಲ್ಲಾ ಪ್ರತಿನಿಧಿ ಚಂದ್ರಶೇಖರ, ಚಿತ್ರದುರ್ಗ ಜಿಲ್ಲಾ ಪ್ರತಿನಿಧಿ ಗುರುಮೂರ್ತಿ, ಹಾಸನ ಜಿಲ್ಲಾ ಪ್ರತಿನಿಧಿ ಲಿಂಗೇಶ್, ಮೈಸೂರು ಜಿಲ್ಲಾ ಪ್ರತಿನಿಧಿ ಮೋಹನ್ ಸಿ, ಹಾವೇರಿ ಜಿಲ್ಲಾ ಪ್ರತಿನಿಧಿ ಪ್ರಶಾಂತ್ ಪಿ ಜೋಶಿ ಕಾಗಿನೆಲೆ ಉಪಸ್ಥಿತರಿದ್ದರು.
ಬೆಳ್ತಂಗಡಿ ತಾಲೂಕು ಸಮಿತಿಯ ಉಪಾಧ್ಯಕ್ಷ ಕಾಸಿಂ ಪದ್ಮುಂಜ ಸ್ವಾಗತಿಸಿ, ರಾಜ್ಯ ಸಮಿತಿಯ ಪ್ರಧಾನ ಕಾರ್ಯದರ್ಶಿ ಪದ್ಮನಾಭ ಆರ್ ಕುಲಾಲ್ ಮುದ್ರಾಡಿ ನಿರೂಪಿಸಿ ಧನ್ಯವಾದ ಸಮರ್ಪಿಸಿದರು.

dharmasthala sdm prathiba dinacharaneಧರ್ಮಸ್ಥಳ: ಶ್ರೀ.ಧ.ಮಂ.ಆಂಗ್ಲ ಮಾಧ್ಯಮ ಶಾಲೆ, ಧರ್ಮಸ್ಥಳದ 2017-18ನೇ ಶೈಕ್ಷಣಿಕ ವರ್ಷದ ಪ್ರತಿಭಾ ದಿನಾಚರಣೆಯು ಡಿ.9ರಂದು ಧರ್ಮಸ್ಥಳದ ಅಮೃತವರ್ಷಿಣಿ ಸಭಾಭವನದಲ್ಲಿ ಜರುಗಿತು. ಶಾಲಾ ಸಂಚಾಲಕ ಅನಂತ ಪದ್ಮನಾಭ ಭಟ್ ದ್ವಜಾರೋಹಣ ಕಾರ್ಯಕ್ರಮ ನೆರವೇರಿಸಿ ದರು. ಎಸ್.ಡಿ.ಎಂ ಶಿಕ್ಷಣ ಸಂಸ್ಥೆಗಳ ಅಧ್ಯಕ್ಷ ಧರ್ಮಾಧಿಕಾರಿ, ಡಾ. ಡಿ.ವೀರೇಂದ್ರ ಹೆಗ್ಗಡೆಯವರು ದೀಪ ಪ್ರಜ್ವಲಿಸಿ ಕಾರ್ಯ ಕ್ರಮಕ್ಕೆ ಚಾಲನೆ ನೀಡಿ, ಬಳಿಕ ಶಾಲೆಯ ವಾರ್ಷಿಕ ಪತ್ರಿಕೆಗಳಾದಂತಹ ಕನಸು ಹಾಗೂ ಹೊಂಗನಸು ಬಿಡುಗಡೆಗೊಳಿಸಿ, ಪಠ್ಯ ಚಟುವಟಿಕೆಗಳೊಂದಿಗೆ ಸಹಪಠ್ಯ ಚಟುವಟಿಕೆಗಳು ಮಕ್ಕಳ ಸರ್ವತೋಮುಖ ಬೆಳವಣಿಗೆಗೆ ಅತ್ಯಾವಶ್ಯಕ ಎಂದು ನುಡಿದರು. ಈ ಸಂದರ್ಭದಲ್ಲಿ ಶಾಲಾ ಮುಖ್ಯೋಪಾಧ್ಯಾಯಿನಿ ಶ್ರೀಮತಿ ಪರಿಮಳಾ ಎಂ.ವಿ.ರವರು ಉಪಸ್ಥಿತರಿದ್ದರು. ಪುಟಾಣಿಗಳ ನೃತ್ಯದೊಂದಿಗೆ ಆರಂಭಗೊಂಡ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಅನೇಕ ನೃತ್ಯಪ್ರಕಾರಗಳು ವಿವಿಧ ಭಾಷೆಗಳಲ್ಲಿ ಮೂಡಿಬಂದವು. ಅಂತೆಯೇ ಸಮೂಹಗೀತೆಗಳು ಅಗಾಗ್ಗೆ ಬಿತ್ತರಗೊಂಡು ಕಾರ್ಯಕ್ರಮದ ಅಂದವನ್ನು ಹೆಚ್ಚಿಸಿದವು. ಸದ್ರಿ ಕಾರ್ಯಕ್ರಮದಲ್ಲಿ ಎಸ್.ಡಿ.ಎಂ ಶಿಕ್ಷಣ ಸಂಸ್ಥೆಯ ಮಾನವ ಸಂಪನ್ಮೂಲ ಅಧಿಕಾರಿ ಗೊಪಾಲ ಕೃಷ್ಣ ಭಟ್, ಉಜಿರೆಯ ಸಿಬಿಎಸ್ಸಿ ಶಾಲಾ ಪ್ರಾಂಶುಪಾಲ ಮನಮೋಹನ್ ನಾಯಕ್, ಬಿ.ಎಡ್. ಕಾಲೇಜಿನ ಪ್ರಾಂಶುಪಾಲರಾದ ನಿತ್ಯಾನಂದ ಹಾಗೂ ಊರಿನ ಗಣ್ಯರು ಉಪಸ್ಥಿತರಿದ್ದರು ಮತ್ತು ವಿದ್ಯಾರ್ಥಿಗಳಿಗೆ ಮೆಚ್ಚುಗೆ ಸೂಚಿಸಿ ಹಾರೈಸಿದರು. ಕುಮಾರಿ ರಕ್ಷಿತಾದಾಸ್ ಮತ್ತು ದಿವಿತರಿಂದ ಆರಂಭಿಸಲ್ಪಟ್ಟ ಸದ್ರಿ ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳಾದ ಅನ್ವಿತಾ, ಸುಪ್ರೀತಾ, ಚಿನ್ಮಯಿ, ಕೃಪಾ ಎನ್, ಅನ್ವೇಷ್, ವಿಲಾಸ್, ಚಿದ್ವಿಲಾಸ್, ಆಶಿತಾ, ನಮಿತಾ, ಲೋಕೇಶ್ ಶಾಲಾನಾಯಕ ಶೋಧನ್‌ಶಾಲಾ ವಾರ್ಷಿಕ ವರದಿಯನ್ನು ಹಂತ-ಹಂತವಾಗಿ ವಾಚಿಸಿದರು. ಈ ಸಂದರ್ಭದಲ್ಲಿ ಕಳೆದ ಸಾಲಿನ 10ನೇ ತರಗತಿಯಲ್ಲಿ ಉನ್ನತ ದರ್ಜೆ ಪಡೆದ ವಿದ್ಯಾರ್ಥಿಗಳನ್ನು ಬಹುಮಾನ ನೀಡಿ ಗೌರವಿಸಲಾಯಿತು. ಪ್ರಸಕ್ತ ವರ್ಷದ ಪ್ರತಿಭಾನ್ವಿತ ವಿದ್ಯಾರ್ಥಿಗಳನ್ನೂ ಬಹುಮಾನ ನೀಡಿ ಪ್ರೋತ್ಸಾಹಿಸಲಾಯಿತು. ಸಹಶಿಕ್ಷಕಿ ಶ್ರೀಮತಿ ಕಮಲಾ ಜಿ ಹೆಗ್ಡೆ ಧನ್ಯವಾದವಿತ್ತರು.

abdul rahiman 11ಮಡಂತ್ಯಾರು: ಹಿಂದೆ ಆಶಾ ಸ್ಪೋರ್ಟ್ಸ್ ಕ್ಲಬ್ ಪಾರೆಂಕಿ ಎಂದು ಕಾರ್ಯಾಚರಿಸುತ್ತಿದ್ದ ಸಂಘದ ಪುನಶ್ಚೇತನದ ಬಗ್ಗೆ ಆಸಕ್ತ ಯುವ ಸದಸ್ಯರುಗಳ ಸಮಾಲೋಚನಾ ಸಭೆಯನ್ನು ಕರೆದು, ಮತ್ತೊಮ್ಮೆ ಸಂಘಟನೆಯನ್ನು ಗಟ್ಟಿಗೊಳಿಸಿ ಸೌಹಾರ್ದ ಫ್ರೆಂಡ್ಸ್ ಎಂಬುದಾಗಿ ನಾಮಾಂಕಿತಗೊಳಿಸಿ ಅಧಿಕೃತ ಕಾರ್ಯಚಟುವಟಿಕೆಗಳಿಗೆ ಚಾಲನೆ ನೀಡಲಾಯಿತು.
ಹುಪ್ಪ ಅಂಗನವಾಡಿ ಕೇಂದ್ರದ ಬಳಿ ಡಿ. 3 ರಂದು ನಡೆದ ಸಮಾಲೋಚನಾ ಸಭೆಯಲ್ಲಿ ನೂತನ ಅಧ್ಯಕ್ಷರಾಗಿ ಮಡಂತ್ಯಾರು ಗ್ರಾ.ಪಂ. ಮಾಜಿ ಅಧ್ಯಕ್ಷ, ಹಾಲಿ ಸದಸ್ಯ ಅಬ್ದುಲ್ ರಹಿಮಾನ್ ಪಡ್ಪು ಅವರನ್ನು ಸರ್ವಾನುಮತದಿಂದ ಆರಿಸಲಾಯಿತು. ಗೌರವಾಧ್ಯಕ್ಷರಾಗಿ ಸಿರಿಲ್ ಡಿಕುನ್ನ ಹುಪ್ಪ, ಮಡಂತ್ಯಾರು, ಉಪಾಧ್ಯಕ್ಷರಾಗಿ ಪ್ರಭಾಕರ ಶೆಟ್ಟಿ ಪರನೀರು, ಅಶ್ರಫ್ ಕೆರೆಕೋಡಿ, ಮೆಲ್ವಿನ್ ಡಿಸೋಜಾ ಅರ್ತಿಲ, ಪ್ರ. ಕಾರ್ಯದರ್ಶಿಯಾಗಿ ಅಬ್ದುಲ್ ರಶೀದ್ ಪರನೀರು ಮಡಂತ್ಯಾರು, ಕಾರ್ಯದರ್ಶಿ ಪ್ರವೀಣ್ ಪಾಯಿಸ್ ಹುಪ್ಪ, ಜೊತೆ ಕಾರ್ಯದರ್ಶಿಯಾಗಿ ಶಬೀರ್ ಎಂ, ಕೋಶಾಧಿಕಾರಿಯಾಗಿ ಶರ್ವನ್ ಹುಪ್ಪ ಮಡಂತ್ಯಾರು, ಸಂಘಟನಾ ಕಾರ್ಯದರ್ಶಿಯಾಗಿ ಶೇಕ್‌ಮುಹಮ್ಮದ್ ನವೀದ್ ಪಡ್ಪು, ಕ್ರೀಡಾ ಕಾರ್ಯದರ್ಶಿಯಾಗಿ ಬಶೀರ್ ಪಿಕಪ್, ರೋಹಿತ್ ಪೂಜಾರಿ ಮತ್ತು ಮುಸ್ತಫಾ ಪರನೀರು, ಕಾರ್ಯಕ್ರಮ ಸಂಯೋಜಕರಾಗಿ ಚಂದ್ರಶೇಖರ ಪೂಜಾರಿ, ಜಲೀಲ್ ಮತ್ತು ನವೀದ್ ಅರ್ತಿಲ, ಗೌರವ ಸಲಹೆಗಾರರಾಗಿ ನಝೀರ್ ಟಿಂಬರ್ ಮರ್ಚೆಂಟ್, ಪುರಂದರ ಶೆಟ್ಟಿ ಮೂಡಾಯೂರು, ಪಿ.ಎಮ್. ಇಸ್ಮಾಯಿಲ್ ಪರನೀರು, ಉಸ್ಮಾನ್ ಮೇಸ್ತ್ರಿ ಹುಪ್ಪ, ಜಯಾನಂದ ಆಚಾರ್ಯ ಅರ್ತಿಲ ಮತ್ತು ಗಣೇಶ್ ಕೃಷ್ಣ ಕ್ಯಾಂಟೀನ್ ಮಡಂತ್ಯಾರು, ಲಿಯೋ ಡಿಕುನ್ಹಾ ಉಪ್ಪಾ ಮತ್ತು ಬಾಝಿಲ್ ಫೆನಾಂಡಿಸ್ ಮೂಡಾಯೂರು, ಕಾರ್ಯಕಾರಿ ಸಮಿತಿ ಸದಸ್ಯರಾಗಿ ಹನೀಫ್ ಹುನಿಲ, ನದೀಮ್, ರಿಯಾಝ್ ಪರನೀರು, ಇರ್ಫಾನ್, ಶರೀಫ್, ನಾಸಿರ್, ನೌಷಾದ್, ಇರ್ಷಾದ್, ಅನ್ವರ್ ಮತ್ತು ಶಮೀರ್ ಹುಪ್ಪ ಇವರನ್ನು ಆರಿಸಲಾಯಿತು. ಸಂಘಟನೆಯ ವತಿಯಿಂದ ಮುಂದಕ್ಕೆ ಹುಪ್ಪ ಅಂಗನವಾಡಿ ಕೇಂದ್ರಕ್ಕೆ ನೆರವು, ಸಮಾಜ ಸೇವೆ, ಕ್ರೀಡೆ ಮತ್ತು ಶೈಕ್ಷಣಿಕ ಪ್ರೋತ್ಸಾಹ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುವ ಬಗ್ಗೆ ತೀರ್ಮಾನಿಸಲಾಯಿತು.

IDYASHRAYA udhgataneಬೆಳ್ತಂಗಡಿ : ಇಡ್ಯಾಶ್ರಯ ಸಭಾಭವನದ ಉದ್ಘಾಟನೆಯನ್ನು ಡಿ.9 ರಂದು ಶಾಸಕ ಕೆ. ವಸಂತ ಬಂಗೇರ ನೆರವೇರಿಸಿ ಮಾತನಾಡುತ್ತಾ ಸಣ್ಣ ವಯಸ್ಸಿನಲ್ಲಿ ಪ್ರಭಾಕರ ಭಟ್ ಇಡ್ಯರವರು ಮಹಾರಾಷ್ಟ್ರದ ದಾಭೋಲಿ ಮಠದಲ್ಲಿ ವೇದಾಭ್ಯಾಸ ಪೂರೈಸಿ, ಕರ್ನಾಟಕ, ಗೋವಾ, ಮಹಾರಾಷ್ಟ್ರ ದಲ್ಲಿ ಪೌರೋಹಿತ್ಯ ಮಾಡಿ ಜನ ಮೆಚ್ಚುಗೆ ಪಡೆದು ಈಗ ತಮ್ಮ ಹುಟ್ಟೂರಲ್ಲಿ ಇಡ್ಯಾಶ್ರಯ ನಿರ್ಮಿಸಿ ಜನತೆಗೆ ಕೈಗೆಟಕುವ ದರದಲ್ಲಿ ಧಾರ್ಮಿಕ, ವೈದಿಕ, ಜ್ಯೋತಿಷ್ಯ ಕಾರ್ಯಕ್ರಮಗಳನ್ನು ನಡೆಸುವಲ್ಲಿ ಮಾಡಿದ ಈ ಪ್ರಯತ್ನಕ್ಕೆ ಶುಭ ಹಾರೈಸಿದರು.
ಮುಖ್ಯ ಅಭ್ಯಾಗತರಾಗಿ ಭಾಗವಹಿಸಿ ಮಾತನಾಡಿದ ಜಿಲ್ಲಾ ಬಿ.ಜೆ.ಪಿ ಯುವ ಮೋರ್ಚಾದ ಅಧ್ಯಕ್ಷ ಹರೀಶ್ ಪೂಂಜರವರು ಸಮಾಜಕ್ಕೆ ಹಿರಿಯರ ಮಾರ್ಗದರ್ಶನದ ಅವಶ್ಯಕತೆ ಇದ್ದು, ಈ ಸಂದರ್ಭದಲ್ಲಿ ಯುವ ಪುರೋಹಿತರೊಬ್ಬರು ಜನರಿಗೆ ಸೇವಾ ರೂಪದಲ್ಲಿ ಇಂತಹ ಶ್ಲಾಘನೀಯ ಕೆಲಸವನ್ನು ಮಾಡುತ್ತಿರುವುದು ಅತ್ಯಂತ ಸ್ತುತ್ಯಾರ್ಹ ಎಂದು ಹೇಳಿದರು.
ರೋಟರಿ ಅಧ್ಯಕ್ಷ ರೊ. ಡಾ| ಸುಧೀರ್ ಪ್ರಭುರವರು ಮಾತನಾಡಿ ಓರ್ವ ಪ್ರತಿಭಾವಂತ ಹಾಗೂ ತನ್ನ ವೃತ್ತಿಯಲ್ಲಿ ಪ್ರಾಜ್ಞತೆಯನ್ನು ಪಡೆದ ಪ್ರಭಾಕರ ಭಟ್ ಇವರ ಮಾರ್ಗದರ್ಶನದಲ್ಲಿ ನಡೆಯುವ ಧಾರ್ಮಿಕ ಕಾರ್ಯಕ್ರಮಗಳು, ಜ್ಯೋತಿಷ್ಯ ಫಲ ಚಿಂತನೆಗಳು ಫಲಪ್ರದವಾಗಲಿ ಎಂದು ಹಾರೈಸಿದರು. ವೇದಿಕೆಯಲ್ಲ್ಲಿ ಕುಡಾಲ ದೇಶಸ್ಥ ಆದ್ಯ ಗೌಡ ಬ್ರಾಹ್ಮಣ ಜಿಲ್ಲಾ ಸಂಘದ ಅಧ್ಯಕ್ಷ ಗಣಪತಿ ಶೆಣೈ ಡೆಚ್ಚಾರು, ಕುವೆಟ್ಟು ಗ್ರಾಮ ಪಂಚಾಯತಿ ಅಧ್ಯಕ್ಷ ಅಶೋಕ್ ಕೋಟ್ಯಾನ್, ಮಂಜುಶ್ರೀ ಜೇಸೀ ಪೂರ್ವಾಧ್ಯಕ್ಷ ಚಿದಾನಂದ ಇಡ್ಯ, ತಾಲೂಕು ಪಂಚಾಯತ್ ಸದಸ್ಯರಾದ ಗೋಪಿನಾಥ ನಾಯಕ್ ಹಾಗೂ ಪೂವಪ್ಪ ಭಂಡಾರಿ ಉಪಸ್ಥಿತರಿದ್ದರು. ಪ್ರಭಾಕರ ಭಟ್ ಹಾಗೂ ಶಾಮಣ್ಣ ಪ್ರಭು ದಂಪತಿಗಳು ಸ್ವಾಗತಿಸಿ ಸತ್ಕರಿಸಿದರು. ಕಾರ್ಯಕ್ರಮದ ನಿರೂಪಣೆಯನ್ನು ರೊಟೇರಿಯನ್ ದಯಾನಂದ ನಾಯಕ್ ನಡೆಸಿಕೊಟ್ಟರು.

hosangadi suryanarayana garbagudi shilanyasaಬೆಳ್ತಂಗಡಿ: ಸೃಷ್ಟಿಯನ್ನು ದೇವರು ಮಾಡಿದಾಗ ಯಾರಿಗೂ ತಾರತಮ್ಯ ಮಾಡಿಲ್ಲ. ಹೀಗಾಗಿ ಅದೇ ಸೃಷ್ಟಿಯಲ್ಲಿರುವ ನಾವು ತಾರತಮ್ಯದಿಂದ ಇರುವುದನ್ನು ಬಿಡಬೇಕು ಎಂದು ಮಾಣಿಲ ಶ್ರೀಧಾಮ ಶ್ರೀ ಮೋಹನದಾಸ ಪರಮಹಂಸ ಸ್ವಾಮೀಜಿ ನುಡಿದರು.
ಹೊಸಂಗಡಿ ಗ್ರಾಮದ ಪೆರಿಂಜೆ ಸನಿಹದ ಬಲ್ಲಂಗೇರಿ-ಅಂಗರಕರಿಯ ಎಂಬಲ್ಲಿ ಡಿ.7 ರಂದು ಶ್ರೀ ಸೂರ್ಯ ನಾರಾಯಣ ದೇವಸ್ಥಾನದ ನೂತನ ಗರ್ಭಗುಡಿ ಶಿಲಾನ್ಯಾಸ ಕಾರ್ಯಕ್ರಮದಲ್ಲಿ ನಡೆದ ಸಭಾಕಾರ್ಯಕ್ರಮದಲ್ಲಿ ಅವರು ಆಶೀರ್ವಚನ ನೀಡಿದರು.
ಸಕಾರಾತ್ಮಕ ಚಿಂತನೆ ಸದಾ ನಮ್ಮಲ್ಲಿದ್ದರೆ ಎಲ್ಲವೂ ಒಳಿತಾಗಿಯೇ ಹೋಗುತ್ತದೆ. ನಮ್ಮಲ್ಲಿನ ಕೊರತೆಯನ್ನು ಹೋಗಲಾಡಿಸುವ ಬದಲು ಇನ್ನೊಬ್ಬರ ಕೊರತೆಯ ಬಗ್ಗೆ ಬೊಟ್ಟು ಮಾಡುವುದನ್ನು ನಿಲ್ಲಿಸಬೇಕು. ಇದ್ದುದರಲ್ಲಿಯೇ ತೃಪ್ತಿಪಡುವ ಗುಣವನ್ನು ಬೆಳೆಸಿಕೊಳ್ಳಬೇಕು ಎಂದರು.
ಕರಿಂಜೆಶ್ರೀ ಶಕ್ತಿಗುರುಮಠದ ಶ್ರೀ ಮುಕ್ತಾನಂದ ಸ್ವಾಮೀಜಿ ಅವರು, ಪ್ರತ್ಯಕ್ಷ ದೇವ೦ರಾಗಿರುವ ಸೂರ್ಯ ನಾರಾಯಣನ ಕ್ಷೇತ್ರವು ಫಲ್ಗುಣಿ ನದಿ ತೀರದಲ್ಲಿರುವುದರಿಂದ ಪ್ರಸಿದ್ಧ ತೀರ್ಥಕ್ಷೇತ್ರ ವಾಗುವುದರಲ್ಲಿ ಸಂದೇಹವಿಲ್ಲ. ಭಗವಂತನಲ್ಲಿ ಅಚಲ ನಂಬಿಕೆ, ಶ್ರದ್ಧೆ ಇದ್ದರೆ ನವೀಕರಣ ಕಾರ್ಯಕ್ಕೆ ಹೆಚ್ಚು ಸಮಯ ಹಿಡಿಯುವುದಿಲ್ಲ ಎಂದ ಅವರು ಕ್ಷೇತ್ರದಲ್ಲಿ ಗೋಪೂಜೆಯನ್ನು ಆರಂಭಿಸಬೇಕು ಎಂದು ಸಲಹೆ ನೀಡಿದರು. ಉದ್ಯಮಿ ಹರೀಶ್ ಪೂಂಜ ಅವರು, ಹಿರಿಯರ ಆಶೀರ್ವಾದ, ಯುವಕರ ಶಕ್ತಿ ಮೇಳೈಸಿದರೆ ಯಾವುದೇ ಕೆಲಸ ದೊಡ್ಡದಲ್ಲ. ಜಾತಿ, ಮತ, ಪಕ್ಷ ಬಿಟ್ಟು ಏಕ ಮನಸ್ಸಿನಿಂದ ಮುಂದೆ ನಡೆಯುವ ಇಲ್ಲಿನ ಕ್ಷೇತ್ರದ ನವೀಕರಣದಲ್ಲಿ ಪಾಲ್ಗೊಳ್ಳೋಣ ಎಂದರು. ಉದ್ಯಮಿಗಳಾದ ಮೂಡಬಿದರೆಯ ಕೆ. ಶ್ರೀಪತಿ ಭಟ್, ವೇಣೂರು ಭಾಸ್ಕರ ಪೈ, ಮೂಡಬಿದ್ರೆಯ ದೇವಿಪ್ರಸಾದ ಶೆಟ್ಟಿ ವೇದಿಕೆಯಲ್ಲಿದ್ದರು. ಅಳದಂಗಡಿ ಅರಮನೆ ಡಾ| ಪದ್ಮಪ್ರಸಾದ ಅಜಿಲ ಅವರು ಶಿಲಾನ್ಯಾಸ ನೆರವೇರಿಸಿದರು. ವೇ| ಮೂ| ಉದಯ ಪಾಂಗಾಣ್ಣಾಯ ತಂತ್ರಿಗಳು ಶಿಲಾನ್ಯಾಸದ ವಿಧಿವಿಧಾನಗಳನ್ನು ನೆರವೇರಿಸಿದರು. ಮುಷ್ಠಿ ಹಣ ಸಮರ್ಪಣಾ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯಿತು.
ದೇಗುಲ ಅರ್ಚಕ ಸುಬ್ರಹ್ಮಣ್ಯ ಉಡುಪ, ಶ್ರೀ ಸೂರ್ಯನಾರಾಯಣ ಕ್ಷೇತ್ರ ಪುನರ್‌ನಿರ್ಮಾಣ ಸಮಿತಿ ಕಾರ್ಯದರ್ಶಿ ಪಿ. ಹರಿಪ್ರಸಾದ ಬಜೆ, ಶ್ರೀ ಸೂರ್ಯನಾರಾಯಣ ಆರಾಧನಾ ಸೇವಾ ಟ್ರಸ್ಟ್ ಅಧ್ಯಕ್ಷ ಉದಯಕುಮಾರ್, ಕೋಶಾಧಿಕಾರಿ ಸತೀಶ್ ಶೆಟ್ಟಿ, ಕಾರ್ಯದರ್ಶಿ ಎ. ಗಣರಾಜ ಭಟ್ ಉಪಸ್ಥಿತರಿದ್ದರು.
ಕರುಣಾಕರ ಸ್ವಾಗತಿಸಿ, ಪುನರ್‌ನಿರ್ಮಾಣ ಸಮಿತಿ ಅಧ್ಯಕ್ಷ ಯನ್. ಸೀತಾರಾಮ ರೈ ಪ್ರಸ್ತಾವಿಸಿ ದರು. ಕಿರಣ್‌ಕುಮಾರ್ ವಂದಿಸಿ, ಸುಧಾಕರ ನೂಯಿ ಕಾರ್ಯಕ್ರಮ ನಿರ್ವಹಿಸಿದರು.
ಫಲ್ಗುಣಿ ನದಿ ಈಶಾನ್ಯದಿಂದ ಪ್ರದಕ್ಷಿಣಾಕಾರವಾಗಿ ಹರಿಯುತ್ತಿರುವ ಸಂಗಮ ಸ್ಥಳವಾಗಿರುವ ಅಂಗರಕರಿ ಯದಲ್ಲಿ ಸುಮಾರು 700 ವರ್ಷಗಳ ಹಿಂದಿನಿಂದಲೂ ಈ ಪ್ರದೇಶ ಅದೆಷ್ಟೋ ಋಷಿಮುನಿಗಳ, ಸಾಧು, ಸಂತರ ತಪೋಭೂಮಿಯಾಗಿ ಇದ್ದದ್ದು ಕಂಡು ಬಂದಿದೆ. ಪುರಾತನ ದೇವಸ್ಥಾನದ ಕುರುಹುಗಳೂ ಜೀರ್ಣಾವಸ್ಥೆಯಲ್ಲಿರುವ ದೇಗುಲದ ಕಟ್ಟಡದ ತಳಪಾಯವೂ ಗೋಚರಿಸಿದ್ದರಿಂದ ಸ್ಥಳೀಯರು ದೇವಾಲಯ ವನ್ನು ಪುನರುತ್ಥಾನಗೊಳಿಸುವ ಸಂಕಲ್ಪವನ್ನು ಕೈಗೊಂಡಿದ್ದಾರೆ.

suddi COLORpdf BLDY  2, 4, 6, 8, 10, 12, 14, 16, 18, 20, 22.p65ವೇಣೂರು: ಕರಾವಳಿಯಲ್ಲಿ ಮತ್ತು ಕಂಬಳ ಕೋಣಗಳ ಕಲರವ ಆರಂಭವಾಗಿದೆ. ಬೆಳ್ತಂಗಡಿ ತಾಲೂಕಿನ ಪ್ರಸಿದ್ಧ ಹೊನಲು ಬೆಳಕಿನ ವೇಣೂರು-ಪೆರ್ಮುಡ ಸೂರ್ಯ-ಚಂದ್ರ ಜೋಡುಕರೆ ಬಯಲು ಕಂಬಳವು ಡಿ.16ರಂದು ನಡೆಯಲಿದೆ. ಸಣ್ಣ ಕೈಗಾರಿಕ ಅಭಿವೃದ್ಧಿ ನಿಗಮದ ಅಧ್ಯಕ್ಷರು ಶಾಸಕರು ಆದ ಕೆ. ವಸಂತ ಬಂಗೇರರವರ ಗೌರವಾಧ್ಯಕ್ಷತೆಯಲ್ಲಿ ಯುವ ಮುಂದಾಳು ಹಲವು ಸಂಘ ಸಂಸ್ಥೆಗಳಲ್ಲಿ ತೊಡಗಿಸಿ ಕೊಂಡಿರುವ ನಿತೀಶ್ ಹೆಚ್‌ರವರ ಅಧ್ಯಕ್ಷತೆಯಲ್ಲಿ ಕಂಬಳವು ಜರುಗಲಿದೆ. ಅಳದಂಗಡಿ ಅರಮನೆಯ ತಿಮ್ಮಣ್ಣರಸರಾದ ಡಾ| ಪದ್ಮಪ್ರಸಾದ್ ಅಜಿಲರು ಕಂಬಳದ ಉದ್ಘಾಟನೆಯನ್ನು ನೆರವೇರಿಸಿದ್ದಾರೆ. ಹಾಗೂ ವಿವಿಧ ರಾಜಕೀಯ ಮುಖಂಡರು, ವಿವಿಧ ಕ್ಷೇತ್ರದ ಗಣ್ಯರು, ಸಂಘ-ಸಂಸ್ಥೆಗಳ ಪ್ರಮುಖ ಗಣ್ಯರು ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ.
ಬಹುಮಾನಗಳು : ಕನೆ ಹಲಗೆ – 7 ಕೋಲು ನಿಶಾನಿಗೆ ನೀರು ಹಾಯಿಸಿದ ಕೋಣಗಳಿಗೆ-1 ಪವನು, 6 ಕೋಲು ನಿಶಾನಿಗೆ ನೀರು ಹಾಯಿಸಿದ ಕೋಣಗಳಿಗೆ-1/2 ಪವನು, ಹಗ್ಗ ಹಿರಿಯ ಪ್ರಥಮ-2 ಪವನು, ದ್ವಿತೀಯ-1 ಪವನು, ಹಗ್ಗ ಕಿರಿಯ ಪ್ರಥಮ – 1 ಪವನು, ದ್ವಿತೀಯ 1/2 ಪವನು, ನೇಗಿಲು ಹಿರಿಯ ಪ್ರಥಮ-2 ಪವನು, ದ್ವಿತೀಯ-1 ಪವನು, ನೇಗಿಲು ಕಿರಿಯ ಪ್ರಥಮ-1 ಪವನು, ದ್ವಿತೀಯ-1/2 ಪವನು, ಅಡ್ಡ ಹಲಗೆ ಪ್ರಥಮ-1 ಪವನು, ದ್ವಿತೀಯ-1/2 ಪವನು.

suddi COLORpdf BLDY  2, 4, 6, 8, 10, 12, 14, 16, 18, 20, 22.p65ಬೆಳ್ತಂಗಡಿ : ಯುವ ಜನತೆಯಲ್ಲಿ ನಾಯಕತ್ವ ಗುಣಗಳನ್ನು ಬೆಳೆಸುವ, ವ್ಯಕ್ತಿತ್ವ ವಿಕಸನ, ತರಬೇತಿ, ಉದ್ಯಮ ಶೀಲತೆಗಳನ್ನು ಬೆಳೆಸುವ ಜಗತ್ತಿನ ಏಕೈಕ ಅಂತರಾಷ್ಟ್ರೀಯ ಸಂಸ್ಥೆ ಜೆಸಿಐ ಪ್ರತಿಷ್ಠಿತ ಜೆಸಿಐ ಬೆಳ್ತಂಗಡಿ ಮಂಜುಶ್ರೀಯ 2018ನೇ ಸಾಲಿನ ಅಧ್ಯಕ್ಷರಾಗಿ ಹಲವು ಸಂಘ-ಸಂಸ್ಥೆಗಳಲ್ಲಿ ಸಕ್ರೀಯರಾಗಿರುವ ಏರ್‌ಟೆಲ್‌ನ ತಾಲೂಕು ಮ್ಯಾನೇಜರ್ ಆಗಿರುವ ಕಿರಣ್ ಕುಮಾರ್ ಶೆಟ್ಟಿ ಆಯ್ಕೆಯಾಗಿದ್ದಾರೆ.
ನಿಕಟ ಪೂರ್ವಾಧ್ಯಕ್ಷರಾಗಿ 2017ರ ಯಶಸ್ವಿ ಅಧ್ಯಕ್ಷ ಸುದ್ದಿಬಿಡುಗಡೆ ವಾರ ಪತ್ರಿಕೆಯ ಉದ್ಯೋಗಿ ಸಂತೋಷ್.ಪಿ. ಕೋಟ್ಯಾನ್ ಬಳಂಜ, ಕಾರ್ಯದರ್ಶಿ ಯಾಗಿ ವಿಶಾಲ್ ಅಗಸ್ಟಿನ್ ನಡ, ಕೋಶಾಧಿಕಾರಿಯಾಗಿ ಗುರುರಾಜ್ ಗುರಿಪಳ್ಳ, ಉಪಾಧ್ಯಕ್ಷರಾಗಿ ಪ್ರಶಾಂತ್ ಲಾಯಿಲ, ಸತೀಶ್ ಸುವರ್ಣ ಗೇರು ಕಟ್ಟೆ, ಪ್ರಸಾದ್ ಬಿ.ಎಸ್ ಕಕ್ಕಿಂಜೆ, ರಂಜಿತ್ ಎಚ್.ಡಿ ಬಳಂಜ, ಅಭಿನಂದನ್ ಹರೀಶ್ ಕುಮಾರ್ ನಡ ಆಯ್ಕೆಯಾಗಿರುತ್ತಾರೆ.
ಜೇಸಿರೆಟ್ ಅಧ್ಯಕ್ಷೆಯಾಗಿ ದೀಪಾ ಕಿರಣ್, ಜೊತೆಕಾರ್ಯದರ್ಶಿಯಾಗಿ ಸಂತೋಷ್ ಶೆಟ್ಟಿ, ಜೇಸಿರೆಟ್ ಸಂಯೋಜಕಿಯಾಗಿ ಅಮೃತ ಎಸ್.ಕೋಟ್ಯಾನ್, ಜೂನಿಯರ್ ಜೇಸಿ ಅಧ್ಯಕ್ಷರಾಗಿ ಸುಹಾಸ್ ಶೆಟ್ಟಿ, ಜೂನಿಯರ್ ಜೇಸಿ ಸಂಯೋಜಕರಾಗಿ ಸ್ವಾತಿ, ಮೀಡಿಯ ಕವರೇಜ್ ಸಂಯೋಜಕರಾಗಿ ಗಣೇಶ್ ಶಿರ್ಲಾಲು, ದಾಮೋದರ್, ಬೆಳವಣಿಗೆ ಮತ್ತು ಅಭಿವೃದ್ಧಿ ವಿಭಾಗದ ನಿರ್ದೇಶಕರಾಗಿ ವಿಜಯ್ ನಿಡಿಗಲ್, ಸ್ಪೇಷಲ್ ಪ್ರೊಜೆಕ್ಟ್‌ನ ನಿರ್ದೇಶಕರಾಗಿ ಪ್ರೀತಮ್ ಶೆಟ್ಟಿ, ಎಂಪವರಿಂಗ್ ಯೂತ್ ನಿರ್ದೇಶಕರಾಗಿ ಚಿದಾನಂದ, ಹೇಮಾವತಿ, ಸಾಂಸ್ಕೃತಿಕ ವಿಭಾಗದ ನಿರ್ದೇಶಕರಾಗಿ ಸ್ಮಿತೇಶ್, ಜಿತೇಶ್.
ಕಮ್ಯುನಿಟಿ ಡೆವಲಪ್‌ಮೆಂಟ್ ವಿಭಾಗದ ನಿರ್ದೇಶಕರಾಗಿ ಶಿವಪ್ರಸಾದ್, ಸದಾಶಿವ್ ಕಕ್ಕಿಂಜೆ, ಆಶಾ ಪ್ರಶಾಂತ್, ಟುವಿತ್, ವಿನ್ಸೆಂಟ್ ಲೋಬೋ, ದಯಾನಂದ, ಕಾರ್ಯಕ್ರಮ ವಿಭಾಗದ ನಿರ್ದೇಶಕರಾಗಿ ಸ್ವರೂಪ್, ಜಯರಾಜ್ ನಡಕ್ಕರ, ಗಣೇಶ್ ಚಾರ್ಮಾಡಿ, ಸುರೇಶ್ ಗೌಡ, ವಿನೋದ್ ಚಾರ್ಮಾಡಿ, ಅಕ್ಷತ ನವೀನ್, ತರಬೇತಿ ವಿಭಾಗದ ನಿರ್ದೇಶಕರಾಗಿ ಸಂತೋಷ್ ಬಳಂಜ, ಜನಾರ್ಧನ ಕಾನರ್ಪ, ತನ್ಸೀಫ್ ಕಿಲ್ಲೂರು, ಜಗದೀಶ್ ನಾಲ್ಕೂರು, ಹರಿಪ್ರಸಾದ್ ಐಎಸ್, ವ್ಯವಹಾರ ವಿಭಾಗದ ನಿರ್ದೇಶಕರಾಗಿ ರಕ್ಷಿತ್ ಶೆಟ್ಟಿ, ಯಶವಂತ್ ಗೌಡ, ಯತೀಶ್ ಕೆ.ಎಸ್, ಗುರುರಾಜ್ ಕಿಲ್ಲೂರು, ರತೀಶ್ ರಾವ್, ಜೇಸಿ ಬುಲೆಟಿಂಗ್ ಸಂಪಾದಕರಾಗಿ ಚಂದ್ರಹಾಸ್ ಬಳಂಜ ಆಯ್ಕೆ ಯಾಗಿರುತ್ತಾರೆ. ಹಾಗೂ ಘಟಕದ ಎಲ್ಲಾ ಪೂರ್ವಾಧ್ಯಕ್ಷರುಗಳು ಗೌರವ ಸಲಹೆಗಾರ ಮಂಡಳಿಯಲ್ಲಿರುತ್ತಾರೆ. ಈ ಸಂದರ್ಭದಲ್ಲಿ ಅಧ್ಯಕ್ಷ ಸಂತೋಷ್.ಪಿ.ಕೋಟ್ಯಾನ್ ಬಳಂಜ, ವಲಯಾಧಿಕಾರಿ ನಿಕಟ ಪೂರ್ವಾಧ್ಯಕ್ಷ ವಸಂತ ಶೆಟ್ಟಿ, ವಲಯಾಧಿಕಾರಿ ಚಿದಾನಂದ ಇಡ್ಯಾ, ಪೂರ್ವಾಧ್ಯಕ್ಷರುಗಳು ಹಾಗೂ ಜೆಸಿಐನ ಎಲ್ಲಾ ಪದಾಧಿಕಾರಿಗಳ ಸಮ್ಮುಖದಲ್ಲಿ ಪದಾಧಿಕಾರಿಗಳ ಸಮಿತಿಯನ್ನು ರಚಿಸಲಾಯಿತು.

sowthadka shilanyasaಕೊಕ್ಕಡ : ಶ್ರೀಕ್ಷೇತ್ರ ಸೌತಡ್ಕ ಕ್ಷೇತ್ರದಲ್ಲಿ ಬಯಲು ಆಲಯದ ಗಣೇಶನ ಕಟ್ಟೆಯ ಹಿಂಭಾಗದಲ್ಲಿ ಅಂದಾಜು ರೂ. ೫೦ ಲಕ್ಷ ವೆಚ್ಚದಲ್ಲಿ ಪಶ್ಚಿಮ ಭಾಗದ ನೂತನ ಗೋಪುರದ ಕಟ್ಟಡ ನಿರ್ಮಾಣದ ಶಂಕುಸ್ಥಾಪನೆಯು ಡಿ.11 ರಂದು ನಡೆಯಿತು.
ಶಾಸಕ ಕೆ. ವಸಂತ ಬಂಗೇರ ನೂತನ ಗೋಪುರ ಕಾಮಗಾರಿಗೆ ಶಂಕುಸ್ಥಾಪನೆ ನೆರವೇರಿಸಿ ಮಾತನಾಡಿ, ಶ್ರೀ ಕ್ಷೇತ್ರ ಸೌತಡ್ಕವು ಜಿಲ್ಲೆಯ ಎ ಗ್ರೇಡ್ ದೇವಳವಾಗಿದ್ದು ದಿನಂಪ್ರತಿ ಸಾವಿರಾರು ಊರ ಪರವೂರ ಭಕ್ತಾದಿಗಳು ಕ್ಷೇತ್ರವನ್ನು ಸಂದರ್ಶಿಸುತ್ತಿದ್ದಾರೆ. ಭಕ್ತರ ಅನುಕೂಲಕ್ಕಾಗಿ ಈ ಅಭಿವೃದ್ದಿ ಕಾರ್ಯಗಳನ್ನು ದೇವಳದ ವತಿಯಿಂದ ನಡೆಸಲಾಗುತ್ತಿದ್ದು ಗೋಪುರದ ಕೆಲಸ ಕಾರ್ಯವು ಶೀಘ್ರವಾಗಿ ನಡೆಯಲು ಶ್ರೀ ಮಹಾಗಣಪತಿ ದೇವರು ಅನುಗ್ರಹಿಸಲಿ ಎಂದರು.
ಕುಕ್ಕೆ ಶ್ರೀ ಸುಬ್ರಹ್ಮಣ್ಯ ಕ್ಷೇತ್ರದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ನಿತ್ಯಾನಂದ ಮುಂಡೋಡಿ ಯವರು ಶುಭಹಾರೈಸಿದರು. ಅತಿಥಿಗಳಾಗಿ ಸೌತಡ್ಕ ಕ್ಷೇತ್ರದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಕೆ. ಸುಬ್ರಹ್ಮಣ್ಯ ಶಬರಾಯ, ಸದಸ್ಯರುಗಳಾದ ಕೆ.ವಿಶ್ವನಾಥ ಕೊಲ್ಲಾಜೆ, ಪಿ. ವಿಶ್ವನಾಥ ಶೆಟ್ಟಿ, ಪ್ರಶಾಂತ್ ರೈ, ಅಣ್ಣಪ್ಪ ಗೌಡ ಕಾಶಿ, ಗಣೇಶ್ ಪಿ.ಕೆ., ಸಿನಿ ಗುರುದೇವನ್, ಸೌಮ್ಯ, ಅರ್ಚಕ ಸದಸ್ಯರಾದ ಸತ್ಯಪ್ರಿಯ ಕಲ್ಲೂರಾಯ, ಮುಖ್ಯ ಕಾರ್ಯನಿರ್ವಹಣಾಧಿಕಾರಿ ಹರಿಶ್ಚಂದ್ರ, ರಾಜ್ಯ ಸರಕಾರಿ ನೌಕರರ ಸಂಘ ಬೆಳ್ತಂಗಡಿ ತಾಲೂಕು ಅಧ್ಯಕ್ಷ ಡಾ. ಜಯಕೀರ್ತಿ ಜೈನ್, ಕೊಕ್ಕಡ ಗ್ರಾ.ಪಂ. ಅಧ್ಯಕ್ಷ ವಿ.ಜೆ. ಸೆಬಾಸ್ಟಿಯನ್, ಮಾಜಿ ಅಧ್ಯಕ್ಷ ಜಯಪ್ರಕಾಶ್ ಬಾಳ್ತಿಲ್ಲಾಯ ಉಪಸ್ಥಿತರಿದ್ದರು. ಅಧ್ಯಕ್ಷ ಕೆ. ಸುಬ್ರಹ್ಮಣ್ಯ ಶಬರಾಯ ಸ್ವಾಗತಿಸಿ ವಂದಿಸಿದರು.

dharmasthala skdrp ge prasastiಧರ್ಮಸ್ಥಳ : ಧರ್ಮಸ್ಥಳದ ಧರ್ಮಾಧಿಕಾರಿ ಡಾ| ಡಿ. ವೀರೇಂದ್ರ ಹೆಗ್ಗಡೆಯವರ ನೇತೃತ್ವದಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯು ಕಿರು ಆರ್ಥಿಕ ಕ್ಷೇತ್ರದ ಪ್ರಗತಿಗೆ ನೀಡಿದ ಕೊಡುಗೆಯನ್ನು ಮನ್ನಿಸಿ ಆಕ್ಸೆಸ್ ಸಂಸ್ಥೆ ನೀಡಿದ `ಇನ್‌ಕ್ಲೂಸಿವ್ ಫೈನಾನ್ಸ್ ಇಂಡಿಯಾ ಪ್ರಶಸ್ತಿ’ಯನ್ನು ಹೆಗ್ಗಡೆಯವರ ಪರವಾಗಿ ಅವರ ಸಹೋದರ ಡಿ. ಸುರೇಂದ್ರ ಕುಮಾರ್ ಮತ್ತು ಗ್ರಾಮಾಭಿವೃದ್ಧಿಯೋಜನೆಯ ಕಾರ್ಯಕರ್ತರು ಡಿ.11ರಂದು ದೆಹಲಿಯಲ್ಲಿ ಸ್ವೀಕರಿಸಿದರು.
ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಕಿರು ಆರ್ಥಿಕ ವ್ಯವಹಾರದ ಸಾಧನೆಗಾಗಿ ಸಂಸ್ಥೆಯ ಅಧ್ಯಕ್ಷ ಡಾ. ಡಿ. ವೀರೇಂದ್ರ ಹೆಗ್ಗಡೆ ಅವರಿಗೆ ರಾಷ್ಟ್ರದ ಪ್ರತಿಷ್ಠಿತ ಇನ್‌ಕ್ಲೂಸಿವ್ ಫೈನಾನ್ಸ್ ಇಂಡಿಯಾ ಪ್ರಶಸ್ತಿ ನೀಡಲಾಗಿದೆ. ಅನೇಕ ವಿಭಾಗಗಳಲ್ಲಿ ಸಂಸ್ಥೆಗಳು ಹಾಗೂ ವೈಯಕ್ತಿಕ ಪ್ರಶಸ್ತಿ ಘೋಷಣೆ ಮಾಡಲಾಗಿದ್ದು, ಭಾರತದಲ್ಲಿ ಆರ್ಥಿಕ ಸೇರ್ಪಡೆಗೆ ಬೆಂಬಲ ನೀಡುವ ಧೀರ್ಘಕಾಲದ ಕೊಡುಗೆ ನೀಡುವ ವ್ಯಕ್ತಿಯಾಗಿ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಅಧ್ಯಕ್ಷರನ್ನು ವೈಯಕ್ತಿಕ ಪ್ರಶಸ್ತಿಗಾಗಿ ಆಯ್ಕೆ ಮಾಡಲಾಗಿದೆ.
ಕಿರು ಆರ್ಥಿಕ ಕ್ಷೇತ್ರದ ಬೆಳವಣಿಗೆ, ಸ್ವಾವಲಂಬನೆ ಮೂಲಕ ಕಿರು ಆರ್ಥಿಕ ವ್ಯವಹಾರವನ್ನು ವಿಸ್ತರಿಸಿ ಅದನ್ನು ಸ್ಥಿರವಾಗಿಸಿ, ಅಡೆತಡೆಗಳ ಹೊರತಾಗಿಯೂ ಅವಿಶ್ರಾಂತ ಪ್ರಯತ್ನಗಳ ಮೂಲಕ ಸಾಧನೆಗೆ ಕಾರಣವಾಗುವ ವ್ಯಕ್ತಿಗಳು ಮತ್ತು ಸಂಸ್ಥೆಗಳಿಗೆ ಈ ಪ್ರಶಸ್ತಿಯನ್ನು ೨೦೦೯ರಿಂದ ನೀಡಲಾಗುತ್ತಿದೆ.

ಮೊರಾರ್ಜಿ ದೇಸಾಯಿ ವಸತಿ ಶಾಲಾ ಪ್ರವೇಶ ಪರೀಕ್ಷೆ ಮುಂದೂಡಿಕೆ ಮಾ. 5 ರಂದು ಪರೀಕ್ಷೆ ನಡೆಸಲು ದಿನಾಂಕ ಪ್ರಕಟ

Friday, February 17th, 2017 | Suddi Belthangady | no responses ಬೆಳ್ತಂಗಡಿ : ಮೊರಾರ್ಜಿ ದೇಸಾಯಿ ವಸತಿ ಶಾಲೆ, ಕಿತ್ತೂರು ರಾಣಿ/ಏಕಲವ್ಯ ವಸತಿ ಶಾಲೆಗಳ… ಮುಂದೆ ಓದಿ

ರಾಜ್ಯದ 65 ತಾಲೂಕುಗಳಲ್ಲಿ ಕೊಳವೆ ಬಾವಿಗೆ ಅನುಮತಿ

Wednesday, February 15th, 2017 | Suddi Belthangady | no responses ರಾಜ್ಯದಲ್ಲಿ ಹೊಸ ಬೋರ್‌ವೆಲ್ ಕೊರೆಯುವುದನ್ನು ತಡೆಗಟ್ಟಿದ ಆದೇಶವನ್ನು ಪರಿಷ್ಕರಿಸಿ, ಅಂತರ್ಜಲ ಬಳಸಲು ಸುರಕ್ಷಿತ… ಮುಂದೆ ಓದಿ

ಫೆ.14 ಮತ್ತು ಫೆ.17ರಂದು ವಿದ್ಯುತ್ ನಿಲುಗಡೆ

ಫೆ.14 ಮತ್ತು ಫೆ.17ರಂದು ವಿದ್ಯುತ್ ನಿಲುಗಡೆ

Monday, February 13th, 2017 | Suddi Belthangady | no responses ಬೆಳ್ತಂಗಡಿ : ಗುರುವಾಯನಕೆರೆ, ಬೆಳ್ತಂಗಡಿ, ಧರ್ಮಸ್ಥಳ ವಿದ್ಯುತ್ ಲೈನ್‌ನಲ್ಲಿ ತುರ್ತುಕಾಮಗಾರಿಯನ್ನು ಕೈಗೊಳ್ಳಬೇಕಾದ ಹಿನ್ನಲೆಯಲ್ಲಿ… ಮುಂದೆ ಓದಿ

ಫೆ.12ರಂದು ಮಡಿವಾಳ ಸಂಘದ ಆಟೋಟ ಸ್ಪರ್ಧೆ

ಫೆ.12ರಂದು ಮಡಿವಾಳ ಸಂಘದ ಆಟೋಟ ಸ್ಪರ್ಧೆ

Friday, February 10th, 2017 | Suddi Belthangady | no responses ಬೆಳ್ತಂಗಡಿ: ಬೆಳ್ತಂಗಡಿ ತಾಲೂಕು ಮಡಿವಾಳರ ಸಮಾಜ ಸೇವಾ ಸಂಘದ ಆಶ್ರಯದಲ್ಲಿ ಸ್ವಜಾತಿ ಬಾಂಧವರಿಗಾಗಿ… ಮುಂದೆ ಓದಿ

ಫೆ. 9-11 ಶ್ರೀ ಬ್ರಹ್ಮ ಬೈದರ್ಕಳ ಪೇರುಮುಂಡ ಗರಡಿಯ ವರ್ಷಾವಧಿ ಜಾತ್ರೆ

Friday, February 10th, 2017 | Suddi Belthangady | no responses ಮೇಲಂತಬೆಟ್ಟು : ಪಾಲೆತ್ತಡಿಗುತ್ತು ಪೇರುಮುಂಡ ಗರಡಿಯ ವರ್ಷಾವಧಿ ಜಾತ್ರೆಯು ಫೆ.9 ರಿಂದ 11ರ… ಮುಂದೆ ಓದಿ

ಫೆ.7 ಮತ್ತು ಫೆ.10ರಂದು ವಿದ್ಯುತ್ ನಿಲುಗಡೆ

ಫೆ.7 ಮತ್ತು ಫೆ.10ರಂದು ವಿದ್ಯುತ್ ನಿಲುಗಡೆ

Monday, February 6th, 2017 | Suddi Belthangady | no responses ಬೆಳ್ತಂಗಡಿ : ಗುರುವಾಯನಕೆರೆ, ಬೆಳ್ತಂಗಡಿ, ಧರ್ಮಸ್ಥಳ ವಿದ್ಯುತ್ ಲೈನ್‌ನಲ್ಲಿ ತುರ್ತುಕಾಮಗಾರಿಯನ್ನು ಕೈಗೊಳ್ಳಬೇಕಾದ ಹಿನ್ನಲೆಯಲ್ಲಿ… ಮುಂದೆ ಓದಿ

ಫೆ.3: ಕಾರ್ಯಕರ್ತರು ಮತ್ತು ಸಹಾಯಕಿಯರ ಮುಷ್ಕರ

ಫೆ.3: ಕಾರ್ಯಕರ್ತರು ಮತ್ತು ಸಹಾಯಕಿಯರ ಮುಷ್ಕರ

Friday, February 3rd, 2017 | Suddi Belthangady | no responses ಬೆಳ್ತಂಗಡಿ : ವಿವಿಧ ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ ಕರ್ನಾಟಕ ರಾಜ್ಯಾಧ್ಯಕ್ಷ ಅಂಗನವಾಡಿ ಸಹಾಯಕಿಯರ… ಮುಂದೆ ಓದಿ

ಉಜಿರೆ ಎಸ್.ಡಿ.ಎಂ ಆಸ್ಪತ್ರೆಯಲ್ಲಿ ಮಕ್ಕಳ  ತಜ್ಞರು ದಿನದ 24 ಗಂಟೆಯೂ ಲಭ್ಯ

Friday, February 3rd, 2017 | Suddi Belthangady | no responses ಉಜಿರೆ : ಉಜಿರೆಯ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಆಸ್ಪತ್ರೆಯಲ್ಲಿ ಸೋಮವಾರದಿಂದ ಶನಿವಾರದವರೆಗೆ ಪ್ರತಿದಿನ… ಮುಂದೆ ಓದಿ

ಹಾಲು ಉತ್ಪಾದಕರ ಸಹಕಾರ ಸಂಘದ  ಸದಸ್ಯರುಗಳಿಗೆ ಪ್ರೋತ್ಸಾಹ ಧನ ಲೀಟರ್‌ಗೆ 1 ರೂ, 1 ಟನ್ ಪಶು ಆಹಾರಕ್ಕೆ 500 ನೀಡಲು ತೀರ್ಮಾನ

Thursday, February 2nd, 2017 | Suddi Belthangady | no responses ಬೆಳ್ತಂಗಡಿ: ಹಾಲು ಉತ್ಪಾದಕರ ಸಹಕಾರಿ ಸಂಘಗಳ ಸದಸ್ಯರುಗಳಿಗೆ ಪ್ರೋತ್ಸಾಹ ಧನ ನೀಡುವ ಬಗ್ಗೆ… ಮುಂದೆ ಓದಿ

ಜ.24 ಮತ್ತು ಜ.27ರಂದು ವಿದ್ಯುತ್ ನಿಲುಗಡೆ

ಜ.24 ಮತ್ತು ಜ.27ರಂದು ವಿದ್ಯುತ್ ನಿಲುಗಡೆ

Monday, January 23rd, 2017 | Suddi Belthangady | no responses ಬೆಳ್ತಂಗಡಿ : ಗುರುವಾಯನಕೆರೆ, ಬೆಳ್ತಂಗಡಿ, ಧರ್ಮಸ್ಥಳ ವಿದ್ಯುತ್ ಲೈನ್‌ನಲ್ಲಿ ತುರ್ತುಕಾಮಗಾರಿಯನ್ನು ಕೈಗೊಳ್ಳಬೇಕಾದ ಹಿನ್ನಲೆಯಲ್ಲಿ… ಮುಂದೆ ಓದಿ

5 ಅಂಗನವಾಡಿ ಕಾರ್ಯಕರ್ತೆ 17 ಅಂಗನವಾಡಿ ಸಹಾಯಕಿಯರ  ಹುದ್ದೆಗೆ ಅರ್ಜಿ ಆಹ್ವಾನ

Friday, January 20th, 2017 | Suddi Belthangady | no responses ಬೆಳ್ತಂಗಡಿ : ಬೆಳ್ತಂಗಡಿ ತಾಲೂಕು ಶಿಶು ಅಭಿವೃದ್ಧಿ ಯೋಜನಾ ವ್ಯಾಪ್ತಿಯಲ್ಲಿ ಖಾಲಿ ಇರುವ… ಮುಂದೆ ಓದಿ

ಜ.23 : ರೈತ ಸಮ್ಮೇಳನ

ಜ.23 : ರೈತ ಸಮ್ಮೇಳನ

Friday, January 20th, 2017 | Suddi Belthangady | no responses ಬೆಳ್ತಂಗಡಿ : ಕರ್ನಾಟಕ ಪ್ರಾಂತ ರೈತ ಸಂಘದ ಬೆಳ್ತಂಗಡಿ ತಾಲೂಕು ಸಮ್ಮೇಳನವು ಬೆಳ್ತಂಗಡಿಯ… ಮುಂದೆ ಓದಿ

ಜ.20ರಂದು ವಿದ್ಯುತ್ ನಿಲುಗಡೆ

ಜ.20ರಂದು ವಿದ್ಯುತ್ ನಿಲುಗಡೆ

Thursday, January 19th, 2017 | Suddi Belthangady | no responses ಬೆಳ್ತಂಗಡಿ : ಗುರುವಾಯನಕೆರೆ, ಬೆಳ್ತಂಗಡಿ, ಧರ್ಮಸ್ಥಳ ವಿದ್ಯುತ್ ಲೈನ್‌ನಲ್ಲಿ ತುರ್ತುಕಾಮಗಾರಿಯನ್ನು ಕೈಗೊಳ್ಳಬೇಕಾದ ಹಿನ್ನಲೆಯಲ್ಲಿ… ಮುಂದೆ ಓದಿ

ಜ.23: ನಂದಿನಿ ಕಿರಿಯ ಕಲಾವಿದ ಚಿತ್ರಕಲಾ ಸ್ಪರ್ಧೆ

Friday, January 13th, 2017 | Suddi Belthangady | no responses ದ.ಕ ಸಹಕಾರಿ ಹಾಲು ಉತ್ಪಾದಕರ ಒಕ್ಕೂಟದ ಆಶ್ರಯದಲ್ಲಿ ನಂದಿನಿ ಕಿರಿಯ ಕಲಾವಿದ ಚಿತ್ರಕಲೆ… ಮುಂದೆ ಓದಿ

ಉಜಿರೆ : ನೀನಾಸಂ ನಾಟಕಗಳು

ಉಜಿರೆ : ನೀನಾಸಂ ನಾಟಕಗಳು

Friday, January 13th, 2017 | Suddi Belthangady | no responses ಉಜಿರೆ: ಇಲ್ಲಿಯ ಸಮೂಹ ಸಂಸ್ಥೆಯ ಜ.30 ಹಾಗೂ 31ರಂದು ಉಜಿರೆಯಲ್ಲಿ ಕಾಲಂದುಗೆ ಗೆಜ್ಜೆ… ಮುಂದೆ ಓದಿ

21ನೆಯ ದ.ಕ ಜಿಲ್ಲಾ ಸಾಹಿತ್ಯ ಸಮ್ಮೇಳನ : ಪಸ್ತಕಗಳ ಮುದ್ರಣ ಮತ್ತು ಬಿಡುಗಡೆಗೆ ಅವಕಾಶ

Saturday, December 31st, 2016 | Suddi Belthangady | no responses ಜನವರಿ 27, 28, 29 ಮೂರು ದಿನಗಳ ಕಾಲ ಉಜಿರೆಯಲ್ಲಿ ಜರಗಲಿರುವ ದಕ್ಷಿಣ… ಮುಂದೆ ಓದಿ

ಜ.03ರಂದು ವಿದ್ಯುತ್ ನಿಲುಗಡೆ

ಜ.03ರಂದು ವಿದ್ಯುತ್ ನಿಲುಗಡೆ

Saturday, December 31st, 2016 | Suddi Belthangady | no responses ಬೆಳ್ತಂಗಡಿ : ಗುರುವಾಯನಕೆರೆ, ಬೆಳ್ತಂಗಡಿ, ಧರ್ಮಸ್ಥಳ ವಿದ್ಯುತ್ ಲೈನ್‌ನಲ್ಲಿ ತುರ್ತುಕಾಮಗಾರಿಯನ್ನು ಕೈಗೊಳ್ಳಬೇಕಾದ ಹಿನ್ನಲೆಯಲ್ಲಿ… ಮುಂದೆ ಓದಿ

ಜ.4: ಮಹತೋಭಾರ ಬಳ್ಳಮಂಜ ಶ್ರೀ ಅನಂತೇಶ್ವರ ಸ್ವಾಮಿ ದೇವಸ್ಥಾನದಲ್ಲಿ ಕಿರುಷಷ್ಠೀ

Friday, December 30th, 2016 | Suddi Belthangady | no responses ಬಳ್ಳಮಂಜ: ಇತಿಹಾಸ ಪ್ರಸಿದ್ಧ ಮಹತೋ ಭಾರ ಶ್ರೀ ಅನಂತೇಶ್ವರ ಸ್ವಾಮಿ ದೇವಸ್ಥಾನ ಬಳ್ಳಮಂಜದಲ್ಲಿ… ಮುಂದೆ ಓದಿ

ಉಜಿರೆ : ಗ್ರಂಥ ಲೋಕಾರ್ಪಣೆ

ಉಜಿರೆ : ಗ್ರಂಥ ಲೋಕಾರ್ಪಣೆ

Friday, December 30th, 2016 | Suddi Belthangady | no responses ಉಜಿರೆ : ಉಜಿರೆ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಕಾಲೇಜಿನ ಇತಿಹಾಸ ವಿಭಾಗ ಮುಖ್ಯಸ್ಥ… ಮುಂದೆ ಓದಿ

ಮೂಲಗೇಣಿ ಅರ್ಜಿ ಸಲ್ಲಿಸಲು ಸೂಚನೆ

ಮೂಲಗೇಣಿ ಅರ್ಜಿ ಸಲ್ಲಿಸಲು ಸೂಚನೆ

Friday, December 30th, 2016 | Suddi Belthangady | no responses ಬೆಳ್ತಂಗಡಿ : ಕರ್ನಾಟಕ ಮೂಲಗೇಣಿ ಅಥವಾ ಒಳ ಮೂಲಗೇಣಿದಾರರಿಗೆ ಮಾಲಿಕತ್ವವನ್ನು ಪ್ರಧಾನ ಮಾಡುವ… ಮುಂದೆ ಓದಿ

ಕೊಡಗಿನ ದಿಡ್ಡಳ್ಳಿ ನಿರಾಶ್ರಿತ ಗಿರಿಜನರಿಗೆ ಸೂಕ್ತ ನ್ಯಾಯಕ್ಕಾಗಿ ರಾಜ್ಯ ಮಲೆಕುಡಿಯ ಸಂಘ ಆಗ್ರಹ

Saturday, December 24th, 2016 | Suddi Belthangady | no responses ರಾಜ್ಯದ ಹಲವೆಡೆ ಈ ನೆಲದ ಆದಿವಾಸಿಗಳಾದ ಅರಣ್ಯವಾಸಿಗಳಿಗೆ ನಿರಂತರ ಒಂದಲ್ಲ ಒಂದು ರೀತಿಯಲ್ಲಿ… ಮುಂದೆ ಓದಿ

ಪಡಿತರ ಕಾರ್ಡ್‌ದಾರರಿಗೆ ಸೂಚನೆ

ಪಡಿತರ ಕಾರ್ಡ್‌ದಾರರಿಗೆ ಸೂಚನೆ

Thursday, December 22nd, 2016 | Suddi Belthangady | no responses ಬೆಳ್ತಂಗಡಿ : ಕರ್ನಾಟಕ ಸರಕಾರದ ಅನ್ನ ಭಾಗ್ಯ ಯೋಜನೆಯಡಿ ಸಾರ್ವಜನಿಕ ವಿತರಣಾ ಪದ್ದತಿಯಡಿಯಲ್ಲಿ… ಮುಂದೆ ಓದಿ

ಇಂದು ಗುರುವಾಯನಕೆರೆ, ಬೆಳ್ತಂಗಡಿ, ಧರ್ಮಸ್ಥಳ ವಿದ್ಯುತ್ ನಿಲುಗಡೆ

Thursday, December 22nd, 2016 | Suddi Belthangady | no responses ಬೆಳ್ತಂಗಡಿ : ಗುರುವಾಯನಕೆರೆ, ಬೆಳ್ತಂಗಡಿ, ಧರ್ಮಸ್ಥಳ ವಿದ್ಯುತ್ ಲೈನ್‌ನಲ್ಲಿ ತುರ್ತುಕಾಮಗಾರಿಯನ್ನು ಕೈಗೊಳ್ಳಬೇಕಾದ ಹಿನ್ನಲೆಯಲ್ಲಿ… ಮುಂದೆ ಓದಿ

ಸಹಕಾರ ಡಿಪ್ಲೋಮಾ  ತರಬೇತಿಗೆ ಅರ್ಜಿ ಆಹ್ವಾನ

ಸಹಕಾರ ಡಿಪ್ಲೋಮಾ ತರಬೇತಿಗೆ ಅರ್ಜಿ ಆಹ್ವಾನ

Friday, December 16th, 2016 | Suddi Belthangady | no responses ಬೆಳ್ತಂಗಡಿ : ಕರ್ನಾಟಕ ಇನ್ಸ್‌ಟ್ಯೂಟ್ ಆಫ್ ಕೋ ಆಪರೇಟಿವ್ ಮನೇಜ್‌ಮೆಂಟ್ ಮೂಡಬಿದಿರೆ ತರಬೇತಿ… ಮುಂದೆ ಓದಿ

ಎ.ಪಿ.ಎಂ.ಸಿ ಚುನಾವಣೆ ಮತದಾರರ ಪಟ್ಟಿಗೆ ಸೇರ‍್ಪಡೆ

Friday, December 9th, 2016 | Suddi Belthangady | no responses ಬೆಳ್ತಂಗಡಿ : ಬೆಳ್ತಂಗಡಿ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ ಚುನಾವಣೆ-2016ಕ್ಕೆ ಸಂಬಂಧಿಸಿ ಕೃಷಿಕ… ಮುಂದೆ ಓದಿ

ಗುರುವಾಯನಕೆರೆ : 11 ಕೆವಿ ಫೀಡರ್‌ಗಳಲ್ಲಿ ತುರ್ತು ಪಾಲನಾ ಕಾಮಗಾರಿ, ಸಂಜೆ 5ರ ತನಕ ವಿದ್ಯುತ್ ನಿಲುಗಡೆ

Friday, December 2nd, 2016 | Suddi Belthangady | no responses ಗುರುವಾಯನಕೆರೆ :11 ಕೆವಿ ಫೀಡರ್‌ಗಳಲ್ಲಿ ತುರ್ತು ಪಾಲನಾ ಕಾಮಗಾರಿ ಕೈಗೊಳ್ಳಬೇಕಾಗಿರುವುದರಿಂದ ಇಂದು ಸಂಜೆ… ಮುಂದೆ ಓದಿ

ಚೆನ್ನಮ್ಮ ಪ್ರಶಸ್ತಿಗೆ ಅರ್ಜಿ ಆಹ್ವಾನ

ಚೆನ್ನಮ್ಮ ಪ್ರಶಸ್ತಿಗೆ ಅರ್ಜಿ ಆಹ್ವಾನ

Thursday, November 24th, 2016 | Suddi Belthangady | no responses ಅಂತರಾಷ್ಟ್ರೀಯ ಮಹಿಳಾ ದಿನಾಚರಣೆಯ ಸಂದರ್ಭದಲ್ಲಿ 2015-16ನೇ ಸಾಲಿಗೆ ಕಿತ್ತೂರು ರಾಣಿ ಚೆನ್ನಮ್ಮ ಪ್ರಶಸ್ತಿಗೆ… ಮುಂದೆ ಓದಿ

ಹೆಲ್ಪ್ ಇಂಡಿಯಾ ಫೌಂಡೇಶನ್ ವತಿಯಿಂದ ಉಚಿತ ಶ್ರವಣ ಸಾಧನ ವಿತರಣೆ, ಉಚಿತ ಶಸ್ತ್ರ ಚಿಕಿತ್ಸೆ ಪೂರ್ವಭಾವಿ ತಪಾಸಣಾ ಶಿಬಿರ

Thursday, November 24th, 2016 | Suddi Belthangady | no responses ಹೆಲ್ಪ್ ಇಂಡಿಯಾ ಫೌಂಡೇಶನ್ ತೊಕ್ಕೊಟ್ಟು ಮಂಗಳೂರು ಇದರ ಆಶ್ರಯದಲ್ಲಿ ಬಡತನ ರೇಖೆಯ ಕೆಳಗಿನ… ಮುಂದೆ ಓದಿ

ಫೋಕ್ಸೋ ಆಕ್ಟ್ ಆನ್‌ಲೈನ್‌ನಲ್ಲಿ ದೂರಿಗೆ ಅವಕಾಶ

Thursday, October 20th, 2016 | Suddi Belthangady | no responses ಬೆಳ್ತಂಗಡಿ : ಮಕ್ಕಳ ಮೇಲಾಗುತ್ತಿರುವ ಲೈಂಗಿಕ ಕಿರುಕುಳ ತಡೆಯಲು ಕೇಂದ್ರ ಸರ್ಕಾರ POSCO… ಮುಂದೆ ಓದಿ

ಮಡಂತ್ಯಾರು : ಅ.20 ರಿಂದ 28ರವರೆಗೆ ಆರೋಗ್ಯ ಶಿಬಿರ

Saturday, October 15th, 2016 | Suddi Belthangady | no responses ಮಡಂತ್ಯಾರು : ವಿಶ್ವಕರ್ಮ ಬ್ರಾಹ್ಮಣ ಸಮಾಜ ಸೇವಾ ಸಂಘ ಮಡಂತ್ಯಾರು ಮತ್ತು ವಿಶ್ವಕರ್ಮ… ಮುಂದೆ ಓದಿ

vishwakarma2

vishwakarma3ಮುಂಡಾಜೆ: ವಿಶ್ವಕರ್ಮ ಯುವ ಮಿಲನ್ ಕರ್ನಾಟಕ ರಾಜ್ಯ ಇದರ ಕಾರ್ಯದರ್ಶಿಯಾಗಿ ದಿನೇಶ್ ಆಚಾರ್ಯ ಮುಂಡಾಜೆ ಇವರನ್ನು ನೇಮಕಗೊಳಿಸಿ ಸಂಘಟನೆಯ ರಾಜ್ಯಾಧ್ಯಕ್ಷ ವಿಕ್ರಮ್  ಆಚಾರ್ಯ ಆದೇಶ ನೀಡಿದ್ದಾರೆ.
ಕಲೆ, ಕ್ರೀಡೆ ಮತ್ತು ಸಂಘಟನೆಯಲ್ಲಿ ತೊಡಗಿಸಿಕೊಂಡಿದ್ದ ದಿನೇಶ್ ಆಚಾರ್ಯ ಅವರು ಮುಂಡಾಜೆ ಯಂಗ್ ಚಾಲೆಂಜರ್‍ಸ್ ಕ್ರೀಡಾ ಸಂಘದ ಸಕ್ರೀಯ ಸದಸ್ಯರಾಗಿದ್ದು ಪ್ರಸ್ತುತ 12 ವರ್ಷಗಳಿಂದ ಬೆಂಗಳೂರಿನ ಹುಳಿಮಾವು ಎಂಬಲ್ಲಿ ಈವೆಂಟ್ ಮನೇಜ್‌ಮೆಂಟ್ ಸಂಸ್ಥೆ ನಡೆಸುತ್ತಿದ್ದಾರೆ. ಯುವಜನ ಮೇಳಗಳಲ್ಲಿ ಮೈಸೂರು ವಿಭಾಗ ಮಟ್ಟದವರೆಗೆ ಸ್ಪರ್ಧಿಸುವ ಅವಕಾಶ ಪಡೆದಿರುವ ಅವರು ಅತ್ಯುತ್ತಮ ಹವ್ಯಾಸಿ ಯಕ್ಷಗಾನ ಕಲಾವಿದರಾಗಿಯೂ ಮಿಂಚುತ್ತಿದ್ದಾರೆ. ಬೆಂಗಳೂರಿನ ಯಕ್ಷಸಂಭ್ರಮ ಯಕ್ಷಗಾನ ತಂಡದ ಪ್ರಧಾನ ಹಾಸ್ಯಗಾರ ಪಾತ್ರದಲ್ಲಿ ಅಭಿನಯಿಸುತ್ತಿರುವ ಅವರು ಇತರ ಮೇಳಗಳಲ್ಲೂ ಬಣ್ಣಹಚ್ಚಿದ್ದಾರೆ.

yuvavahini

yuvavahini1ಬೆಳ್ತಂಗಡಿ : ಯುವವಾಹಿನಿ ಬೆಳ್ತಂಗಡಿ ಘಟಕದ 2017-18ನೇ ಸಾಲಿನ ನೂತನ ಪದಾಧಿಕಾರಿಗಳ ಪದಪ್ರದಾನ ಸಮಾರಂಭವು ಡಿ. 17ರಂದು ಬೆಳ್ತಂಗಡಿ ಶ್ರೀ ಗುರುನಾರಾಯಣ ಸಂಕೀರ್ಣದ ಸಭಾಭವನದಲ್ಲಿ ನಡೆಯಿತು.
ಕಾರ್ಯಕ್ರಮವನ್ನು ಶಾಸಕ ಕೆ. ವಸಂತ ಬಂಗೇರ ಉದ್ಘಾಟಿಸಿದರು. ಸಮಾರಂಭದ ಅಧ್ಯಕ್ಷತೆಯನ್ನು ಯುವವಾಹಿನಿ ಬೆಳ್ತಂಗಡಿ ಘಟಕದ ಅಧ್ಯಕ್ಷ ಸದಾನಂದ ಪೂಜಾರಿ ಉಂಗಿಲಬೈಲು ವಹಿಸಿಸಿದ್ದರು.
ಯುವವಾಹಿನಿ ಕೇಂದ್ರ ಸಮಿತಿ ಮಂಗಳೂರು ಇದರ ಉಪಾಧ್ಯಕ್ಷ ಜಯಂತ ನಡುಬೈಲು, ಬೆಳ್ತಂಗಡಿ ಸುವರ್ಣ ಪ್ರತಿಷ್ಠಾನದ ಅಧ್ಯಕ್ಷ ಸಂಪತ್ ಬಿ. ಸುವರ್ಣ, ಮಾಜಿ ಶಾಸಕ ಕೆ. ಪ್ರಭಾಕರ ಬಂಗೇರ, ಬೆಳ್ತಂಗಡಿ ಶ್ರೀ ಗುರುನಾರಾಯಣ ಸ್ವಾಮಿ ಸೇವಾ ಸಂಘದ ಅಧ್ಯಕ್ಷ ಸೋಮನಾಥ ಬಂಗೇರ ವರ್ಪಾಳೆ, ದ.ಕ ಜಿಲ್ಲಾ ಕಾಂಗ್ರೆಸ್ ಸಮಿತಿ ಅಧ್ಯಕ್ಷ ಕೆ. ಹರೀಶ್ ಕುಮಾರ್, ನಿವೃತ್ತ ಎಸ್.ಪಿ., ಬಿಲ್ಲವ ಮಹಾಮಂಡಲದ ಉಪಾಧ್ಯಕ್ಷ ಪೀತಾಂಬರ ಹೇರಾಜೆ, ತಾ.ಪಂ ಸ್ಥಾಯಿ ಸಮಿತಿ ಅಧ್ಯಕ್ಷ ಸುಧೀರ್ ಆರ್. ಸುವರ್ಣ ಶುಭ ಹಾರೈಸಿದರು. ಯುವವಾಹಿನಿ ಕೇಂದ್ರ ಸಮಿತಿಯ ಮಾಜಿ ಅಧ್ಯಕ್ಷ ಪದ್ಮನಾಭ ಮರೋಳಿ, ಯುವವಾಹಿನಿ ಕೇಂದ್ರ ಸಮಿತಿಯ ಸಂಘಟನಾ ಕಾರ್ಯದರ್ಶಿ ರಮಾನಂದ ಸಾಲಿಯಾನ್ ಮುಂಡೂರು, ಯುವವಾಹಿನಿ ಬೆಳ್ತಂಗಡಿ ಘಟಕದ ನೂತನ ಅಧ್ಯಕ್ಷ ಪ್ರಶಾಂತ್ ಮಚ್ಚಿನ ವೇದಿಕೆಯಲ್ಲಿ ಉಪಸ್ಥಿತರಿದ್ದರು.

vishwakarma

vishwakarma1ಲಾಯಿಲ : ವಿಶ್ವಕರ್ಮ ಯುವ ಮಿಲನ್ ಕರ್ನಾಟಕ ರಾಜ್ಯ ಬೆಳ್ತಂಗಡಿ ತಾಲೂಕು ಇದರ ಉದ್ಘಾಟನಾ ಸಮಾರಂಭವು ಡಿ. ೧೭ ರಂದು ಲಾಯಿಲ ಶ್ರೀ ವಿಶ್ವಕರ್ಮ ಸಭಾಭವನದಲ್ಲಿ ಜರಗಿತು.
ಆನೆಗುಂದಿ ಶ್ರೀಮದ್ ಜಗದ್ಗುರು ಮಹಾಸಂಸ್ಥಾನ ಸರಸ್ವತೀ ಪೀಠಾಧೀಶ್ವರ ಶ್ರೀ ಅನಂತಶ್ರೀ ವಿಭೂಷಿತ ಶ್ರೀ ಕಾಳಹಸ್ತೇಂದ್ರ ಸರಸ್ವತಿ ಮಹಾಸ್ವಾಮೀಜಿ ಕಟಪಾಡಿ ಉಡುಪಿರವರು ಆಶೀರ್ವಚನ ನೀಡಿದರು.
ಸಮಾರಂಭದ ಅಧ್ಯಕ್ಷತೆಯನ್ನು ವಿಶ್ವಕರ್ಮ ಯುವ ಮಿಲನ್ ಕರ್ನಾಟಕ ರಾಜ್ಯಾಧ್ಯಕ್ಷ ವಿಕ್ರಮ್ ಐ ಆಚಾರ್ಯ ವಹಿಸಿದ್ದರು.
ಹಾಸನ ಜಿಲ್ಲೆ ಅರಕಲಗೂಡು ವಿಶ್ವಕರ್ಮ ಜಗದ್ಗುರು ಶ್ರೀ ಸುಜ್ಞಾನಪ್ರಭು ಪೀಠ ಅರೆಮಾದನದಹಳ್ಳಿ ವಿಶ್ವಬ್ರಾಹ್ಮಣ ಮಹಾಸಂಸ್ಥಾನ ಮಠದ ಶ್ರೀ ಶಿವಸುಜ್ಞಾನ ತೀರ್ಥಮಹಾಸ್ವಾಮಿಗಳು ದಿವ್ಯ ಆಶೀರ್ವಚನ ನೀಡಿದರು.
ಮುಖ್ಯ ಅತಿಥಿಗಳಾಗಿದ್ದ ಶಾಸಕ ವಸಂತ ಬಂಗೇರ ಮತ್ತು ಬಿಜೆಪಿ ಜಿಲ್ಲಾ ಯುವಮೋರ್ಚಾ ಅಧ್ಯಕ್ಷ ಹರೀಶ್ ಪೂಂಜ ಅವರನ್ನು ಸ್ವಾಮೀಜಿಗಳು ಸನ್ಮಾನಿಸಿ ಗೌರವಿಸಿದರು.
ವೇದಿಕೆಯಲ್ಲಿ ಪುರೋಹಿತ ಎನ್.ಎಸ್. ಶ್ರೀಧರ ಪುರೋಹಿತ ಕಟಪಾಡಿ, ಎಸ್.ಕೆ ಗೋಲ್ಡ್‌ಸ್ಮಿತ್ ಇಂಡಸ್ಟ್ರಿಯಲ್ ಸಹಕಾರ ಸಂಘದ ಮಹಾಪ್ರಬಂಧಕ ಕೆ ಉಮೇಶ ಆಚಾರ್ಯ, ಸಾಧನಾ ಸ್ಪಂಧನ ಯುವ ಕಲಾರಂಗದ ನಿರ್ದೇಶಕ ಪುರೋಹಿತ್ ಜಿ.ಎಸ್. ಪುರಂದರ ಆಚಾರ್ಯ, ವಿಶ್ರಾಂತ ತಹಶಿಲ್ದಾರ್ ರಾಘವೇಂದ್ರ ಆಚಾರ್ಯ, ವಿಶ್ವಕರ್ಮ ಯುವ ಮಿಲನ್ ರಾಜ್ಯ ಕಾರ್ಯದರ್ಶಿ ಸೂರಜ್ ಟಿ ಆಚಾರ್ಯ, ವಿಶ್ವಕರ್ಮ ಯುವ ಮಿಲನ್ ಜಿಲ್ಲಾಧ್ಯಕ್ಷ ಹರೀಶ್ ಆಚಾರ್ಯ, ಬೆಳ್ತಂಗಡಿ ವಿಶ್ವಕರ್ಮಾಭ್ಯುದಯ ಸಂಘದ ಅಧ್ಯಕ್ಷ ಗೋಪಾಲ ಆಚಾರ್ಯ ಕನ್ನಾಜೆ, ಯುವ ಮಿಲನ್ ತಾಲೂಕು ನಿಯೋಜಿತ ಅಧ್ಯಕ್ಷ ಪ್ರಕಾಶ್ ಆಚಾರ್ಯ ಉಪಸ್ಥಿತರಿದ್ದರು.
ಯುವ ಮಿಲನ್ ಪ್ರ. ಕಾರ್ಯದರ್ಶಿ ರಾಮ್‌ಪ್ರಸಾದ್ ಎನ್.ಎಸ್ ನಾರಾವಿ ಸ್ವಾಗತಿಸಿದರು. ರುಕ್ಮಯ್ಯ ಆಚಾರ್ಯ ಕನ್ನಾಜೆ, ಗೀತಾ ಧರ್ಮಸ್ಥಳ, ಮಧುಶ್ರೀ ಕಾರ್ಯಕ್ರಮ ನಿರೂಪಿಸಿದರು.

balanja

balanja1ಬಳಂಜ : ಶಿವಾಜಿ ಫ್ರೆಂಡ್ಸ್ ಕ್ಲಬ್ ನೇತಾಜಿನಗರ ಬಳಂಜ ಇದರ ಆಶ್ರಯದಲ್ಲಿ, ತಾಲೂಕು ವಾಲಿಬಾಲ್ ಅಸೋಸಿಯೇಶನ್ ಬೆಳ್ತಂಗಡಿ ಇದರ ಸಹಯೋಗದೊಂದಿಗೆ ಬೆಳ್ತಂಗಡಿ ವಾಲಿಬಾಲ್ ಲೀಗ್ ಪಂದ್ಯಾಟ ಮತ್ತು ಮಹಿಳೆಯರ ಮುಕ್ತ ತ್ರೋಬಾಲ್ ಪಂದ್ಯಾಟ, ಹಾಗೂ ಬಳಂಜ ಪಂಚಾಯತ್ ವ್ಯಾಪ್ತಿಗೊಳಪಟ್ಟ ಪುರುಷರ ೫೫೦ಕೆಜಿ ವಿಭಾಗದ ಹಗ್ಗಜಗ್ಗಾಟ ಪಂದ್ಯಾಟವು ಡಿ. 17ರಂದು ಬಳಂಜ ಶ್ರೀ ಶಾರದ ಕಲಾ ಮಂದಿರದ ವಠಾರದಲ್ಲಿ ನಡೆಯಿತು.

mundaje

Mundaje1ಮುಂಡಾಜೆ : ಮಸ್ಲಕ್ ತ್ತಅಲೀಮಿ ಸ್ಸುನ್ನಿಯ್ಯ ಮುಂಡಾಜೆ ಇದರ ವತಿಯಿಂದ ದಾನಿಗಳ ನೆರವಿನೊಂದಿಗೆ ನೂತನವಾಗಿ ನಿರ್ಮಿಸಿದ ಜಮಲುಲ್ಲೈಲಿ ಸುನ್ನೀ ಜುಮ್ಮಾ ಮಸೀದಿ ಇದರ ಉದ್ಘಾಟನೆ ಡಿ. 14 ರಂದು ನಡೆಯಿತು. ಉಡುಪಿ-ಚಿಕ್ಕಮಗಳೂರು-ಹಾಸನ- ಶಿವಮೊಗ್ಗ ಸಂಯುಕ್ತ ಜಮಾಅತ್ ಖಾಝಿ ಬೇಕಲ್ ಇಬ್ರಾಹಿಂ ಮುಸ್ಲಿಯಾರ್ ಮತ್ತು ಮಸೀದಿ ದಾನಿಗಳಾದ ಹಿರಿಯ ಮುತ್ಸದ್ದಿ ಕನ್ನಂಗಾರ್ ಮುಹ್ಯುದ್ದೀನ್ ಹಾಜಿ ಮುಕ್ರಿ ಹಾಜಿ ಅವರು ವಕ್ಫ್ ವಿಧಿ ನೆರವೇರಿಸಿದರು.
ದ. ಕ ಜಿಲ್ಲಾ ಸುನ್ನೀ ಸಂಯುಕ್ತ ಜಮಾಅತ್ ಖಾಝಿ ಸಯ್ಯಿದ್ ಕೂರತ್ ತಂಙಳ್ ಆರ್ಶೀವಚನ ನೀಡಿದರು. ಮಸ್ಲಕ್ ಪ್ರಧಾನ ಸಮಿತಿ ಅಧ್ಯಕ್ಷ ಸಯ್ಯಿದ್ ಕಾಜೂರು ತಂಙಳ್ ಅಧ್ಯಕ್ಷತೆ ವಹಿಸಿದ್ದರು.
ಸಹಾಯಕ ಖಾಝಿ ಸಯ್ಯಿದ್ ಸಾದಾತ್ ತಂಙಳ್, ತಾ| ಸಂಯುಕ್ತ ಜಮಾಅತ್ ಅಧ್ಯಕ್ಷ ಸಯ್ಯಿದ್ ಇಸ್ಮಾಯಿಲ್ ತಂಙಳ್, ಸಯ್ಯಿದ್ ಹಬೀಬುರ್ರಹ್ಮಾನ್ ಮುಶೈಖ್ ತಂಙಳ್ ಬೆಳಾಲು, ಸಯ್ಯಿದ್ ಎಸ್.ಎಂ ಕೋಯ ತಂಙಳ್ ಉಜಿರೆ, ಮುಂಡಾಜೆ ಶ್ರೀ ದುರ್ಗಾಪರಮೇಶ್ವರೀ ದೇವಸ್ಥಾನದ ಆಡಳಿತ ಸಮಿತಿ ಅಧ್ಯಕ್ಷ ಮಚ್ಚಿಮಲೆ ಅನಂತ ಭಟ್, ಗ್ರಾಮ ದೈವಸ್ಥಾನ ವ್ಯಾಘ್ರಚಾಮುಂಡಿ ಮೂರ್ತಿಲ್ಲಾಯಿ ದೈವಸ್ಥಾನ ಗುಂಡ ಇಲ್ಲಿನ ಆಡಳಿತ ಮಂಡಳಿ ಮಾಜಿ ಅಧ್ಯಕ್ಷ ಅಗರಿ ರಾಮಣ್ಣ ಶೆಟ್ಟಿ, ಮುಂಡಾಜೆ ಸೈಂಟ್ ಮೇರಿ ಚರ್ಚ್‌ನ ಪ್ರ. ಧರ್ಮಗುರುಗಳಾದ ರೆ. ಫಾ| ಬಿನೋಯ್ ಎ. ಜೆ, ಯಂಗ್ ಚಾಲೆಂಜರ್‍ಸ್ ಕ್ರೀಡಾ ಸಂಘದ ಸಂಚಾಲಕ ಲ| ನಾಮದೇವ ರಾವ್, ಗ್ರಾ. ಪಂ ಪಿಡಿಒ ಸಂಜೀವ ನಾಯ್ಕ, ಉದ್ಯಮಿ ಪಿ. ಸಿ ಸೆಬಾಸ್ಟಿಯನ್, ಕರವೇ ಬೆಳ್ತಂಗಡಿ ತಾ| ಅಧ್ಯಕ್ಷ ಶ್ರೀನಿವಾಸ ಗೌಡ ಪಟ್ರಮೆ, ಎಸ್ಸೆಸ್ಸೆಫ್ ಡಿವಿಷನ್ ಪ್ರ. ಕಾರ್ಯದರ್ಶಿ ಇಕ್ಬಾಲ್ ಮಾಚಾರ್, ಮುಂಡಾಜೆ ಬದ್ರಿಯಾ ಜುಮ್ಮಾ ಮಸೀದಿ ಮಾಜಿ ಅಧ್ಯಕ್ಷ ಉಸ್ಮಾನ್ ಹಾಜಿ, ಉದ್ಯಮಿ ಉಸ್ಮಾನ್ ಮೂಡಿಗೆರೆ, ರಶೀದ್ ಬಲಿಪಾಯ, ಅಝೀಝ್ ಚಿಕ್ಕಮಗಳೂರು, ಉಜಿರೆ ಕೇಂದ್ರ ಜುಮ್ಮಾ ಮಸೀದಿ ಅಧ್ಯಕ್ಷ ಬಿ. ಎಮ್ ಅಬ್ದುಲ್ ಹಮೀದ್, ಮಸ್ಲಕ್ ಕಾರ್ಯಾಧ್ಯಕ್ಷ ಹಾಜಬ್ಬ, ಮುಂಡಾಜೆ ಖತೀಬ್ ಇಬ್ರಾಹಿಂ ಸಖಾಫಿ ಕಬಕ, ಉಮರ್‌ಕುಂಞಿ ನಾಡ್ಜೆ, ಕಾಸಿಂ ಮಲ್ಲಿಗೆಮನೆ, ಬಿ.ಎಚ್ ಅಬೂಬಕ್ಕರ್ ಹಾಜಿ ಕಿಲ್ಲೂರು, ಕೆ.ಎ ಅಬೂಬಕ್ಕರ್ ಹಾಜಿ ಮತ್ತು ಶೇಕಬ್ಬ ಕುಕ್ಕಾವು ಮೊದಲಾದವರು ಉಪಸ್ಥಿತರಿದ್ದರು.
ಶಾಸಕ ವಸಂತ ಬಂಗೇರ, ಜಿ.ಪಂ ಶಿಕ್ಷಣ ಮತ್ತು ಆರೋಗ್ಯ ಸ್ಥಾಯಿ ಸಮಿತಿ ಅಧ್ಯಕ್ಷ ಶಾಹುಲ್ ಹಮೀದ್ ಕೆ. ಕೆ, ಮುಂಡಾಜೆ ಶ್ರೀ ಪರಶುರಾಮ ದೇವಸ್ಥಾನದ ಜೀರ್ಣೋದ್ಧಾರ ಸಮಿತಿ ಅಧ್ಯಕ್ಷ ಎನ್.ಎಸ್ ಗೋಖಲೆ, ಭಿಡೆ ಮನೆಯ ಶ್ರೀಧರ ಜಿ ಭಿಡೆ, ನಿವೃತ ಮೇಜರ್ ಜನರಲ್ ಎಂ.ವಿ ಭಟ್, ವಿನಾಯಕ್ ಪ್ರಭು ಆಲಂದಡ್ಕ, ನಲಿಕೆ ಸಮಾಜ ಅಧ್ಯಕ್ಷ ಸೇಸಪ್ಪ ನಲಿಕೆ, ಗ್ರಾ.ಪಂ ಅಧ್ಯಕ್ಷೆ ಶಾಲಿನಿ, ಉಪಾಧ್ಯಕ್ಷೆ ವಸಂತಿ, ಸದಸ್ಯ ಅಶ್ವಿನಿ, ತಾ. ಪಂ ಸದಸ್ಯೆ ಲೀಲಾವತಿ, ಗ್ರಾ. ಪಂ ಸದಸ್ಯರಾದ ಸುರೇಶ್ ಹೆಗ್ಡೆ, ಚೆನ್ನಕೇಶವ, ಪ್ರಮುಖರಾದ ರಾಘವ ಶೆಟ್ಟಿ ನೆಯ್ಯಾಲು, ಅಬ್ದುಲ್ ರಹಿಮಾನ್ ಉಜಿರೆ, ಆಲಿಕುಂಞಿ ಸಖಾಫಿ ನಾವೂರು, ಬಾಬು ಪೂಜಾರಿ ಕೂಳೂರು, ಯು.ಕೆ ಮುಹಮ್ಮದ್ ಹನೀಫ್ ಉಜಿರೆ, ಶುಕೂರ್ ಕಾಶಿಬೆಟ್ಟು, ಸೆಬಾಸ್ಟಿಯನ್ ಅರಸಮಜಲು ಇವರುಗಳು ಆಗಮಿಸಿ ಶುಭ ಕೋರಿದರು.

madanthyar

madanthyar1ಮಡಂತ್ಯಾರು : ಸೇಕ್ರೆಡ್ ಹಾರ್ಟ್ ಶಿಕ್ಷಣ ಸಂಸ್ಥೆಗಳ ದಿನಾಚರಣೆಯು ಇಂದು(ಡಿ.16) ಜರುಗಿತು.
ಅಧ್ಯಕ್ಷತೆಯನ್ನು ಮಂಗಳೂರು ಧರ್ಮಪ್ರಾಂತ್ಯದ ಧರ್ಮಾಧ್ಯಕ್ಷ ಡಾ| ಅಲೋಸಿಯಸ್ ಪೌಲ್ ಡಿಸೋಜ ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ಶಾಸಕ ಕೆ. ವಸಂತ ಬಂಗೇರ, ಮಂಗಳೂರು ಕಥೊಲಿಕ್ ಶಿಕ್ಷಣ ಮಂಡಳಿಯ ಕಾರ್ಯದರ್ಶಿ ಫಾ| ಜೆರಾಲ್ಡ್ ಡಿಸೋಜ, ಮಂಗಳೂರು ಶಿಕ್ಷಣ ಮತ್ತು ತರಬೇತಿ ಇಲಾಖೆಯ ಪ್ರಧಾನ ಮತ್ತು ಉಪ ನಿರ್ದೇಶಕ ಸಿಪ್ರಿಯನ್ ಮೊಂತೆರೋ, ಮೊದಲಾದವರು ಉಪಸ್ಥಿತರಿದ್ದರು.

venuru kambala1

venuru kambala3

venuru kambala

venuru kambala2

venuru kambala4 copyವೇಣೂರು : ಬೆಳ್ತಂಗಡಿ ತಾಲೂಕಿನ ಪ್ರಸಿದ್ಧ ಬೆಳ್ಳಿಹಬ್ಬದ ಸಂಭ್ರಮದ ಹೊನಲು ಬೆಳಕಿನ ವೇಣೂರು-ಪೆರ್ಮುಡ ಸೂರ್ಯ-ಚಂದ್ರ ಜೋಡುಕರೆ ಬಯಲು ಕಂಬಳವು ಇಂದು(ಡಿ.16)ಉದ್ಘಾಟನೆಗೊಂಡಿತು.
ಅಳದಂಗಡಿ ಅರಮನೆಯ ತಿಮ್ಮಣ್ಣರಸರಾದ ಡಾ| ಪದ್ಮಪ್ರಸಾದ್ ಅಜಿಲರು ಉದ್ಘಾಟನೆಗೊಳಿಸಿದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕಂಬಳ ಸಮಿತಿ ಅಧ್ಯಕ್ಷ ನಿತೀಶ್ ಹೆಚ್ ವಹಿಸಿದ್ದರು.
ಈ ಸಂದರ್ಭದಲ್ಲಿ ವೇಣೂರು ಮಹಾಲಿಂಗೇಶ್ವರ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಭಾಸ್ಕರ ಬಲ್ಯಾಯ, ವೇಣೂರು ಕ್ರಿಸ್ತರಾಜ ದೇವಾಲಯದ ಫಾ| ಆಂಟನಿ ವಿ. ಲುವಿಸ್, ಕುಂಡದಬೆಟ್ಟು ಜುಮ್ಮಾ ಮಸೀದಿ ಧರ್ಮಗುರು ಕೆ.ಎಂ ಹನೀಫ್ ಸಖಾಫಿ ಬಂಗೇರ್‌ಕಟ್ಟೆ, ಜಿ.ಪಂ ಸದಸ್ಯ ಶೇಖರ್ ಕುಕ್ಕೇಡಿ, ಕುಕ್ಕೇಡಿ ಗ್ರಾ.ಪಂ ಅಧ್ಯಕ್ಷ ಶ್ರೀಮತಿ ತೇಜಾಕ್ಷಿ, ವೇಣೂರು ಹಿರಿಯ ವೈದ್ಯ ಡಾ| ಬಿ.ಪಿ ಇಂದ್ರ, ಪಡಂಗಡಿ ಗ್ರಾ.ಪಂ ಅಧ್ಯಕ್ಷೆ ಶ್ರೀಮತಿ ಮೀನಾಕ್ಷಿ, ಅಳದಂಗಡಿ ಗ್ರಾ.ಪಂ ಅಧ್ಯಕ್ಷೆ ಸತೀಶ್ ಕುಮಾರ್ ಮಿತ್ತಮಾರು, ವೇಣೂರು ಮಹಾಲಿಂಗೇಶ್ವರ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಸದಸ್ಯೆ ಶ್ರೀಮತಿ ವಿಮಲಚಂದ್ರ ಕೋಟ್ಯಾನ್ ಮೊದಲಾದವರು ಉಪಸ್ಥಿತರಿದ್ದರು. ಹಾಗೂ ವಿಶೇಷವಾಗಿ ಪ್ರಾನ್ಸ್‌ನಿಂದ ಕಂಬಳ ವೀಕ್ಷಣೆಗೆ ಆಗಮಿಸಿದ್ದರು.

bangarakatte skssf pressmeetಬೆಳ್ತಂಗಡಿ : ಬದ್ರಿಯಾ ಜುಮ್ಮಾ ಮಸೀದಿ ಬಂಗಾರಕಟ್ಟೆ ಎಸ್‌ಕೆಎಸ್‌ಎಸ್‌ಎಫ್ ಬಂಗಾರಕಟ್ಟೆ ಶಾಖೆ ಇದರ ಆಶ್ರಯದಲ್ಲಿ ಡಿ.17 ರಂದು ಸಾಮೂಹಿಕ ವಿವಾಹದ ಪ್ರಯುಕ್ತ ಧಾರ್ಮಿಕ ಮತ ಪ್ರಭಾಷಣವು ಬಂಗಾರುಕಟ್ಟೆಯ ಶಂಸುಲ್ ಉಲಮಾ ವೇದಿಕೆ ಬದ್ರಿಯ ಜುಮ್ಮಾ ಮಸೀದಿಯಲ್ಲಿ ನಡೆಯಲಿದೆ ಎಂದು ಸಂಘದ ಸಂಚಾಲಕ ಮಹಮ್ಮದ್ ಹನೀಫ್ ಬಂಗೇರುಕಟ್ಟೆ ಪತ್ರಿಕಾ ಪ್ರಕಣೆಯಲ್ಲಿ ತಿಳಿಸಿದರು.
ಪತ್ರಿಕಾ ಗೋಷ್ಠಿಯಲ್ಲಿ ಸಂಘದ ಸಹ ಸಂಚಾಲಕ ಅಶ್ರಫ್ ಸಾಲ್ಮರ್, ಪ.ಕಾರ್ಯದರ್ಶಿ ಮಹಮ್ಮದ್ ರಫೀಕ್ ಬಳ್ಳಮಂಜ, ಜೊತೆ ಕಾರ್ಯದರ್ಶಿ ಬಿ.ಕೆ ನವಾಝ್ ಬಂಗೇರುಕಟ್ಟೆ, ಸದಸ್ಯರಾದ ಮಹಮ್ಮದ್ ಬಶೀರ ಬಳ್ಳಮಂಜ, ಮಹಮ್ಮದ್ ರಫೀಕ್ ಬಂಗೇರುಕಟ್ಟೆ ಉಪಸ್ಥಿತರಿದ್ದರು.

ಬೆಳ್ತಂಗಡಿ : ತುರ್ತು ಕಾಮಗಾರಿಯ ಪ್ರಯುಕ್ತ 110/ 11 ಕೆವಿ ಕರಾಯ ವಿದ್ಯುತ್ ಉಪಕೇಂದ್ರದಿಂದ ಹೊರಡುವ ಎಲ್ಲ 11 ಕೆವಿ ಫೀಡರುಗಳಲ್ಲಿ ಡಿ. 16, 19, 21 ರಂದು ಬೆಳಿಗ್ಗೆ 7.00 ರಿಂದ 5.00 ಗಂಟೆ ತನಕ ವಿದ್ಯುತ್ ನಿಲುಗಡೆಯಾಗಲಿದೆ ಎಂದು ಮೆಸ್ಕಾಂ ಪ್ರಕಟಣೆಯಲ್ಲಿ ತಿಳಿಸಿದೆ.

Hemanthಬೆಳಾಲು ಗ್ರಾಮದ ಒಡಿಪ್ರೊಟ್ಟು ಗುರುರಾಜ್ ಮತ್ತು ಅರ್ಪಣಾ ದಂಪತಿ ಪುತ್ರ ಹೇಮಂತ್ ಕೋಟ್ಯಾನ್‌ನ 2ನೇ ವರ್ಷದ ಹುಟ್ಟುಹಬ್ಬವನ್ನು ಡಿ. 10ರಂದು ಆಚರಿಸಲಾಯಿತು.

sanvithನಾರಾವಿ : ಈದು ಗ್ರಾಮದ ಪಾಲಡ್ಕ ನಿವಾಸ ಸತೀಶ್ ಪೂಜಾರಿ ಮತ್ತು ಅಕ್ಷಿತ ದಂಪತಿ ಪುತ್ರ ಸನ್ವಿತ್‌ನ 3ನೇ ವರ್ಷದ ಹುಟ್ಟುಹಬ್ಬವನ್ನು ಡಿ.4 ರಂದು ಮುಂಬೈನ ನಾಸಿಕ್‌ನಲ್ಲಿ ಆಚರಿಸಲಾಯಿತು.

Sonaliಮೇಲಂತಬೆಟ್ಟು ಗ್ರಾಮ ಬಟ್ಯರಡ್ಡ ಮನೆಯ ಶ್ರೀಮತಿ ನಿಮಿತಾ ಮತ್ತು ಮೋಹನ್ ದಂಪತಿ ಪುತ್ರಿ ಸೋನಾಲಿಯ ಪ್ರಥಮ ವರ್ಷದ ಹುಟ್ಟುಹಬ್ಬವನ್ನು ಡಿ. 7ರಂದು ಆಚರಿಸಲಾಯಿತು.

suchitha-krianಬೆಳ್ತಂಗಡಿ ಅಶ್ವಥನಗರ ರೇಷ್ಮೆರೋಡ್ ಸಂಜೀವ ಶೆಟ್ಟಿಯವರ ಪುತ್ರಿ ಸುಚಿತಾರವರ ವಿವಾಹವು ಪಲ್ಲೆ ಮಜಲು ಗುತ್ತು (ಭಂಡಾರಪಾದೆ) ದಿ| ಸದಾಶಿವ ಶೆಟ್ಟಿಯವರ ಪುತ್ರ ಕಿರಣ್‌ರೊಂದಿಗೆ ಡಿ.7 ರಂದು ಬಿ.ಸಿ ರೋಡ್ ರಂಗೋಲಿಯ ರಾಜಾಂಗಣ ಸಭಾಭವನದಲ್ಲಿ ಜರುಗಿತು.

Umesh mamathaಮರೋಡಿ ದರ್ಖಾಸು ಗಿರಿಯಪ್ಪ ಪೂಜಾರಿಯವರ ಪುತ್ರ ಅಳದಂಗಡಿ ಮಾರುತಿ ಡ್ರೈವಿಂಗ್ ಸ್ಕೂಲ್‌ನ ಉಮೇಶ್‌ರವರ  ವಿವಾಹವು ಪುತ್ತೂರು ತಾಲೂಕು ಕಬಕ ಪಣೆಮಜಲು ಪದ್ಮನಾಭ ಅಮೀನ್‌ರವರ ಪುತ್ರಿ ದಿವ್ಯಾರೊಂದಿಗೆ ಅಳದಂಗಡಿ ಸ್ವರಾಜ್ ಟವರ್‍ಸ್‌ನ ಶ್ರೀಗುರು ಸಭಾಭವನದಲ್ಲಿ ನ. 26ರಂದು ಜರಗಿತು.

avinash-sushmithaಕರಂಬಾರು ಗ್ರಾಮದ ಮುಂಡೇಲು ದಿ| ಸಂಜೀವ ಮೂಲ್ಯರ ಪುತ್ರ ಅವಿನಾಶ್‌ರವರ ವಿವಾಹವು ಮಚ್ಚಿನ ಗ್ರಾಮದ ಮಾಯಿಲೋಡಿ ಸೂರಪ್ಪ ಮೂಲ್ಯರ ಪುತ್ರಿ ಸುಶ್ಮಿತಾರೊಂದಿಗೆ ಡಿ.3 ರಂದು ಮಡಂತ್ಯಾರು ಪಾರೆಂಕಿ ಶ್ರೀ ಮಹಿಷಮರ್ದಿನಿ ದೇವಸ್ಥಾನದ ಕಲ್ಯಾಣ ಮಂಟಪದಲ್ಲಿ ಜರುಗಿತು.

muliya jewellers1

muliya jewellers
ಬೆಳ್ತಂಗಡಿ : ಇಲ್ಲಿನ ಸಂತೆಕಟ್ಟೆ ಸುವರ್ಣ ಆರ್ಕೇಡ್‌ನಲ್ಲಿ ಮುಳಿಯ ಚಿನ್ನದ ಮೇಳದ ಪ್ರದರ್ಶನ ಮತ್ತು ಮಾರಾಟ ಡಿ. 15, 16, 17, 18ರಂದು ನಡೆಯಲಿದ್ದು, ಇದರ ಉದ್ಘಾಟನೆಯು ಇಂದು(ಡಿ 15) ನಡೆಯಿತು.
ಬೆಳ್ತಂಗಡಿ ಬ್ಯೂಟಿ ಪಾರ್ಲರ್ ಅಸೋಸಿಯೇಶನ್ ಸದಸ್ಯೆ ಮತ್ತು ವೆಸ್ಟರನ್ ಬ್ಯೂಟಿ ಪಾರ್ಲರ್‌ನ ಮಾಲಕಿ ಶ್ರೀಮತಿ ಪಲ್ಲವಿ ರಾಜ್ ಉದ್ಘಾಟಿಸಿದರು.
ಸಂಸ್ಥೆಯ ಚೆರ್‌ಮೆನ್ ಮತ್ತು ಮ್ಯಾನೆಜಿಂಗ್ ಡೈರೆಕ್ಟರ್ ಮುಳಿಯ ಕೇಶವ ಪ್ರಸಾದ್ ಮುಳಿಯ ಸಂಸ್ಥೆಯ ವಿಶೇಷತೆಗಳನ್ನು ತಿಳಿಸಿದರು. ರಿಟಯರ್ಡ್ ಏರ್‌ಫೋರ್ಸ್ ಲೆಬರ್ ಆಫೀಸರ್ ರಾಮ ಭಟ್ ಸಂಸ್ಥೆಗೆ ಶುಭ ಹಾರೈಸಿದರು. ಕಾರ್ಯಕ್ರಮದಲ್ಲಿ ಸಂಸ್ಥೆಯ ಹಿರಿಯರಾದ ಸರಫ್ ಶ್ಯಾಮ್ ಭಟ್, ಪುತ್ತೂರು ಶಾಖೆಯ ಶಾಖಾ ಪ್ರಬಂದಕ ನಾಮದೇವ್ ಮಲ್ಯ ಉಪಸ್ಥಿತರಿದ್ದರು. ಪ್ರೂಕ್ಯೂರ್‌ಮೆಂಟ್ ಮ್ಯಾನೇಜರ್ ಗುರುರಾಜ್ ಅವಭೂತ್ ಕಾರ್ಯಕ್ರಮ ನಿರೂಪಿಸಿದರು.

sdm

sdm1ಉಜಿರೆ : ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಪ್ರಕೃತಿ ಚಿಕಿತ್ಸಾ ಮತ್ತು ಯೋಗ ವಿಜ್ಞಾನಗಳ ಮಹಾವಿದ್ಯಾಲಯ, ಉಜಿರೆ ಕಾಲೇಜಿನಲ್ಲಿ ಇಂದು(ಡಿ. 15) 24ನೇ ಪದವಿ ಪ್ರದಾನ ಸಮಾರಂಭ ಜರುಗಿತು.
ಅಧ್ಯಕ್ಷತೆಯನ್ನು ಶ್ರೀ ಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿ ಡಾ| ಡಿ. ವೀರೇಂದ್ರ ಹೆಗ್ಗಡೆಯವರು ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ನವದೆಹಲಿ ಆಯುಷ್ ಮಂತ್ರಾಲಯದ ಕಾರ್ಯದರ್ಶಿ ವೈದ್ಯ ರಾಜೇಶ್ ಕೊಟೇಚ ಭಾಗವಹಿಸಿದ್ದರು.
ಈ ಸಂದರ್ಭದಲ್ಲಿ ಉಜಿರೆ ಎಸ್.ಡಿ.ಎಂ ಶಿಕ್ಷಣ ಸಂಸ್ಥೆಗಳ ಕಾರ್ಯದರ್ಶಿಗಳಾದ ಡಿ. ಹರ್ಷೇಂದ್ರ ಕುಮಾರ್, ಡಾ. ಬಿ ಯಶೋವರ್ಮ, ಉಪಾಧ್ಯಕ್ಷ ಪ್ರೊ| ಎಸ್. ಪ್ರಭಾಕರ್, ಉಪಸ್ಥಿತರಿದ್ದರು.

kshithi raiಬೆಳ್ತಂಗಡಿ : ಝಿ ಕನ್ನಡ ವಾಹಿನಿಯ ಜನಪ್ರಿಯ ಸಂಗೀತ ರಿಯಾಲಿಟಿ ಶೋ ಸರಿಗಮಪ ಲಿಟ್ಲ್ ಚಾಂಪಿಯನ್ ಸೀಸನ್-14ಗೆ ಧರ್ಮಸ್ಥಳದ ಕು| ಕ್ಷಿತಿ ಕೆ. ರೈ ಆಯ್ಕೆಯಾಗಿದ್ದಾರೆ.
ಎಳವೆಯಿಂದಲೇ ಸಂಗೀತದ ಬಗ್ಗೆ ವಿಶೇಷ ಆಸಕ್ತಿ ಹೊಂದಿದ್ದ ಕ್ಷಿತಿ ಕೆ. ರೈ ಸಂಗೀತದಲ್ಲಿ ಕ್ಷೇತ್ರದಲ್ಲಿ ಏನಾದರೂ ಸಾಧನೆ ಮಾಡಬೇಕೆಂಬ ಬಯಕೆ ಹೊಂದಿದ್ದರು. ಮಗಳಲ್ಲಿರುವ ಸಂಗೀತದ ಆಸಕ್ತಿಯನ್ನು ಸೂಕ್ಷ್ಮವಾಗಿ ಗಮನಿಸಿದ ಇವರ ತಂದೆ ಕಿಶೋರ್ ರೈ ಹಾಗೂ ತಾಯಿ ಜಯಭಾರತಿ ರೈ ಮಗಳ ಸ್ವರಸ್ವರೂಪಕ್ಕೆ ಒಂದು ಅಡಿಪಾಯದ ರಚನೆಯನ್ನು ನೀಡಲು ಉತ್ಸುಕರಾಗಿ ಮಗಳಿಗೆ ಶಿಕ್ಷಣದ ಜೊತೆ ಬೆಳ್ತಂಗಡಿಯ ಕವಿತಾ ಕೋರ್ನಾಯ ಅವರಲ್ಲಿ ಕರ್ನಾಟಕ ಶಾಸ್ತ್ರೀಯ ಸಂಗೀತ ತರಗತಿಗೆ ಕಲಿಸಿದರು. ಬಳಿಕ ಸುಗಮ ಸಂಗೀತಕ್ಕಾಗಿ ಪುತ್ತೂರಿನ ಕಿರಣ್ ಕುಮಾರ್ ಅವರ ಹತ್ತಿರ ಕಲಿಸಿದರು.
ತಂದೆ-ತಾಯಿಯ ಪ್ರೋತ್ಸಾಹವನ್ನು ಸಮರ್ಥವಾಗಿಯೇ ಬಳಸಿಕೊಂಡ ಕ್ಷಿತಿ ಅಲ್ಲಲ್ಲಿ ಚಿಕ್ಕಪುಟ್ಟ ವೇದಿಕೆಗಳಲ್ಲಿ ತನ್ನ ಇಂಪಾದ ಧ್ವನಿಯಲ್ಲಿ ಅದ್ಭುತವಾಗಿ ಹಾಡಿ ಜನಮನಗೆದ್ದಿದ್ದಳು. ಇದೀಗ ಝೀ ಕನ್ನಡದ ರಿಯಾಲಿಟಿ ಶೋಗೆ ಆಯ್ಕೆಯಾಗಿರುವ ಈಕೆ ಮೆಗಾ ಅಡಿಷನ್‌ನಲ್ಲಿ ಹಾಡಿದ ಮೊದಲ ಹಾಡಿಗೆ ನಿರ್ಣಯಕರಾದ ಗಾಯಕ ವಿಜಯ್ ಪ್ರಕಾಶ್, ಅರ್ಜುನ್ ಜನ್ಯ ಮತ್ತು ಸಂಗೀತ ಕ್ಷೇತ್ರದ ನಾದಬ್ರಹ್ಮ ಹಂಸಲೇಖ ಅವರಿಂದ ಭೇಷ್ ಎಣಿಸಿಕೊಂಡಿದ್ದಾಳೆ. ಧರ್ಮಸ್ಥಳದ ಎಸ್‌ಡಿಎಂ ಆಂಗ್ಲಮಾಧ್ಯಮ ಶಾಲೆಯಲ್ಲಿ 7ನೇ ತರಗತಿ ಕಲಿಯುತ್ತಿರುವ ಕು| ಕ್ಷಿತಿ ಕೆ. ರೈ ಈ ರಿಯಾಲಿಟಿ ಶೋ ದ ಮೂಲಕ ಬೆಳ್ತಂಗಡಿ ತಾಲೂಕಿಗೆ ಹೆಸರು ತರಲಿ, ಸಂಗೀತ ಕ್ಷೇತ್ರದಲ್ಲಿ ಮಹತ್ತರದ ಸಾಧನೆ ಮಾಡುವಂತಾಗಲಿ, ಈಕೆಯ ಭವಿಷ್ಯ ಉಜ್ಜ್ವಲವಾಗಲಿ ಎಂಬುದು ನಮ್ಮೆಲ್ಲರ ಹಾರೈಕೆಯಾಗಿದೆ.

thannirupanrta police rige abhinandaneತಣ್ಣೀರುಪಂತ ಗ್ರಾಮದ ಕಲ್ಲೇರಿಯಲ್ಲಿ ನಡೆದ ಅಂಗಡಿಗೆ ಬೆಂಕಿ ಹಚ್ಚಿ ಕಳ್ಳತನ ನಡೆಸಿದ ಪ್ರಕರಣವನ್ನು ವಾರದೊಳಗೆ ಭೇದಿಸುವ ಮೂಲಕ ಊರಿನ ಶಾಂತಿ-ಸುವ್ಯವಸ್ಥೆಗೆ ಧಕ್ಕೆಯಾಗದಂತೆ ನೋಡಿಕೊಂಡ ಪೊಲೀಸ್ ಇಲಾಖೆಗೆ ಕಲ್ಲೇರಿ ಹಾಗೂ ಕರಾಯ ಗ್ರಾಮಸ್ಥರ ವತಿಯಿಂದ ಡಿ. 7ರಂದು ಅಭಿನಂದನೆ ನಡೆಯಿತು.
ಪುತ್ತೂರು ಗ್ರಾಮಾಂತರ ವೃತ್ತ ನಿರೀಕ್ಷಕರು ಹಾಗೂ ಉಪ್ಪಿನಂಗಡಿ ಪೊಲೀಸ್ ನಿರೀಕ್ಷಕರು ಮತ್ತು ಸಿಬ್ಬಂದಿ ಯನ್ನು ಅಭಿನಂದಿಸಿ ಮಾತನಾಡಿದ ತಣ್ಣೀರುಪಂತ ಸಿಎ ಬ್ಯಾಂಕ್ ಅಧ್ಯಕ್ಷ ನಿರಂಜನ್ ಬಾವಂತಬೆಟ್ಟು ಉಪ್ಪಿನಂಗಡಿ ಪೊಲೀಸರು ಯಾವುದೇ ಉಹಾಪೋಹಗಳಿಂದ ಸಮಾಜದ ಶಾಂತಿ-ಸುವ್ಯವಸ್ಥೆಗೆ ಧಕ್ಕೆಯಾಗಲು ಅವಕಾಶ ನೀಡದೇ ವಾರದೊಳಗೆ ಈ ಪ್ರಕರಣವನ್ನು ಭೇದಿಸಿ, ಆರೋಪಿಗಳನ್ನು ಬಂಧಿಸಿ ಜೈಲಿಗಟ್ಟಿದ್ದಾರೆ. ಈ ಮೂಲಕ ಸಮಾಜದ ಅಭಿನಂದನೆಗೆ ಪಾತ್ರರಾಗಿದ್ದಾರೆ ಎಂದರು.
ಅಭಿನಂದನೆ ಸ್ವೀಕರಿಸಿ ಮಾತನಾಡಿದ ಪುತ್ತೂರು ಗ್ರಾಮಾಂತರ ವೃತ್ತ ನಿರೀಕ್ಷರ ಗೋಪಾಲ ನಾಯ್ಕ, ಕಳ್ಳತನ ನಡೆಸಿದ ಬಳಿಕ ಅಂಗಡಿಗೆ ಬೆಂಕಿ ಹಚ್ಚಿ ಅಂಗಡಿ ಸಂಪೂರ್ಣ ಭಸ್ಮಗೊಳಿಸುವ ಮೂಲಕ ಕಳ್ಳರು ಕಲ್ಲೇರಿಯಲ್ಲಿ ತನಿಖೆಯ ದಿಕ್ಕು ತಪ್ಪಿಸಲು ಯತ್ನಿಸಿದ್ದರು. ಇದನ್ನು ಪೊಲೀಸ್ ಇಲಾಖೆ ಗಂಭೀರವಾಗಿ ಪರಿಗಣಿಸಿ, ವಾರದೊಳಗೆ ಆರೋಪಿಗಳನ್ನು ಬಂಧಿಸಿದೆ ಎಂದರು.
ಉಪ್ಪಿನಂಗಡಿ ಠಾಣಾ ನಿರೀಕ್ಷಕ ನಂದ ಕುಮಾರ್ ಅಭಿನಂದನೆ ಸ್ವೀಕರಿಸಿ ಮಾತನಾಡಿ, ಇಲ್ಲಿನ ಕರಾಯ ಗ್ರಾಮಕ್ಕೆ ಮೊದಲೇ ಕೋಮು ಸೂಕ್ಷ್ಮ ಪ್ರದೇಶ ಎಂಬ ಹಣೆಪಟ್ಟಿ ಇದೆ. ಆದರೆ ಕಲ್ಲೇರಿ ಘಟನೆ ನಡೆದಾಗ ಹಲವು ಉಹಾಪೋಹಗಳು ಕೇಳಿಬಂದರೂ ಇಲ್ಲಿನ ಜನತೆ ಯಾವುದಕ್ಕೂ ಕಿವಿಗೊಡದೇ ಶಾಂತಿ ಕಾಪಾಡಿದ್ದಾರೆ ಎಂದರು.
ತಣ್ಣೀರುಪಂಥ ಗ್ರಾ.ಪಂ ಅಧ್ಯಕ್ಷ ಜಯವಿಕ್ರಮ್ ಕಲ್ಲಾಪು ಮಾತನಾಡಿದರು. ಅಭಿನಂದನೆ ಸಲ್ಲಿಸಿದರು. ಉಪ್ಪಿನಂಗಡಿ ಪೊಲೀಸ್ ಠಾಣಾ ಸಿಬ್ಬಂದಿ ಹರಿಶ್ಚಂದ್ರ, ಇರ್ಷಾದ್ ಪಡಂಗಡಿ, ಪ್ರವೀಣ್ ರೈ, ಶೇಖರ ಗೌಡ, ಸಲೀಂ, ಜೀಪು ಚಾಲಕ ನಾರಾಯಣ ಗೌಡ ಅವರನ್ನು ಅಭಿನಂದಿಸಲಾಯಿತು. ತಾ.ಪಂ ಸದಸ್ಯೆ ಕೇಶವತಿ, ತಣ್ಣೀರುಪಂತ ಗ್ರಾ.ಪಂ ಸದಸ್ಯರಾದ ನವೀನ್ ಕುಮಾರ್, ಆದಂ ಕೆ., ಡಿ.ಕೆ ಅಯೂಬ್, ಸೂರಪ್ಪ ಬಂಗೇರ, ಅಬ್ದುರ್ರಹ್ಮಾನ್, ತಾಜುದ್ದೀನ್, ಸುಮ, ಗೀತಾ ಉಪಸ್ಥಿತರಿದ್ದರು. ಗ್ರಾ.ಪಂ ಸದಸ್ಯ ಸದಾನಂದ ಶೆಟ್ಟಿ ಮಡಪ್ಪಾಡಿ ಸ್ವಾಗತಿಸಿ, ಪಿಡಿಒ ಪೂರ್ಣಿಮಾ ವಂದಿಸಿದರು.

nethre

Nethre1ಉಜಿರೆ : ಜೇಸಿಐ ಮಂಜುಶ್ರೀ ಬೆಳ್ತಂಗಡಿ, ಯುವವಾಹಿನಿ ಬೆಳ್ತಂಗಡಿ ಘಟಕ ಹಾಗೂ ಸುರೇಶ್ ಕೆ. ಪೂಜಾರಿ ಮುಂಬೈ ಇವರ ಪ್ರಾಯೋಜಕತ್ವದಲ್ಲಿ, ಶ್ರೀ ಗುರು ಮಿತ್ರ ಸಮೂಹ, ಬೆಳ್ತಂಗಡಿ ಹಾಗೂ ನವರಸ ಥಿಯೇಟರ್‍ಸ್, ಉಜಿರೆ ಇದರ ಕಲಾವಿದರು ಅಭಿನಯಿಸಿದ ನಾಟಕ ನೇತ್ರೆ ಇದರ ಉದ್ಘಾಟನಾ ಸಮಾರಂಭವು ಡಿ. 14ರಂದು ಉಜಿರೆ ಶಾರದಾ ಮಂಟಪದಲ್ಲಿ ನಡೆಯಿತು.
ಉದ್ಘಾಟನೆಯನ್ನು ಉಜಿರೆ ಶ್ರೀ ಜನಾರ್ಧನ ಸ್ವಾಮಿ ದೇವಸ್ಥಾನದ ಅನುವಂಶಿಕ ಆಡಳಿತ ಮೊಕ್ತೇಸರ ವಿಜಯರಾಘವ ಪಡ್ವೆಟ್ನಾಯ ನೆರವೇರಿಸಿ ಶುಭಹಾರೈಸಿದರು.
ಈ ಸಂದರ್ಭದಲ್ಲಿ ಬೆಳ್ತಂಗಡಿ ಜೇಸಿಐ ಮಂಜುಶ್ರೀ ಅಧ್ಯಕ್ಷ ಜೇಸಿ ಕಿರಣ್ ಕುಮಾರ್ ಶೆಟ್ಟಿ, ಅಳದಂಗಡಿ ಲಯನ್ಸ್ ಕ್ಲಬ್ ಪೂರ್ವಾಧ್ಯಕ್ಷ ಸದಾನಂದ ಪೂಜಾರಿ ಉಂಗಿಲಬೈಲು, ಯುವವಾಹಿನಿ ಬೆಳ್ತಂಗಡಿ ಘಟಕದ ಅಧ್ಯಕ್ಷ ಪ್ರಶಾಂತ್ ಮಚ್ಚಿನ, ಬೆಳ್ತಂಗಡಿ ಸುವರ್ಣ ಸಾಂಸ್ಕೃತಿಕ ಪ್ರತಿಷ್ಠಾನ ಅಧ್ಯಕ್ಷ ಸಂಪತ್ ಬಿ. ಸುವರ್ಣ, ಬೆಳ್ತಂಗಡಿ ಶ್ರೀ ಗುರು ಮಿತ್ರ ಸಮೂಹದ ಸ್ಥಾಪಕಾಧ್ಯಕ್ಷ ರಮಾನಂದ ಸಾಲಿಯಾನ್ ಮುಂಡೂರು, ಉದ್ಯಮಿ ಸುರೇಶ್ ಕೆ. ಪೂಜಾರಿ ಮುಂಬೈ, ಬೆಳ್ತಂಗಡಿ ಸ.ಪ್ರ.ದ ಕಾಲೇಜು ಪ್ರಾಧ್ಯಪಕ ಡಾ| ಟಿ.ಕೆ ಶರತ್ ಕುಮಾರ್, ಜೀ ಕನ್ನಡ ಕಾಮಿಡಿ ಕಿಲಾಡಿಗಳು ಖ್ಯಾತಿಯ ಹಿತೇಶ್ ಕುಮಾರ್ ಕಾಪಿನಡ್ಕ ಉಪಸ್ಥಿತರಿದ್ದರು. ಚಂದ್ರಹಾಸ ಬಳಂಜ ನಿರೂಪಿಸಿ, ಸ್ಮಿತೇಶ್ ಎಸ್. ಬಾರ್ಯ ಸ್ವಾಗತಿಸಿ, ಅನೀಶ್ ಅಮೀನ್ ವೇಣೂರು ಧನ್ಯವಾದವಿತ್ತರು.

maruthi auto workವೇಣೂರು : ಗೋಳಿಯಂಗಡಿ ಎಸ್.ಡಿ.ಎಂ ಐಟಿಐ ಬಳಿ ನೂತನವಾಗಿ ಆರಂಭಗೊಂಡ ಶ್ರೀ ಕಟೀಲ್ ಮಾರುತಿ ಆಟೋ ವರ್ಕ್ಸ್‌ನ್ನು ಡಿ. 14 ರಂದು ಬಿಜೆಪಿ ಯುವ ಮೋರ್ಚಾ ಜಿಲ್ಲಾಧ್ಯಕ್ಷ ಹರೀಶ್ ಪೂಂಜ ಉದ್ಘಾಟಿಸಿದರು. ಈ ಸಂದರ್ಭದಲ್ಲಿ ಸಂತೋಷ ಕುಮಾರ್ ಕಾಪಿನಡ್ಕ, ಹರೀಶ್ ಕಾರಿಂಜ, ರಾಮ್ ಪ್ರಸಾದ್ ಮರೋಡಿ, ರಾಜೇಶ್ ಪೂಜಾರಿ ಮೂಡುಕೋಡಿ, ಸತ್ಯೇಂದ್ರ ರಾವ್, ಅನಿಲ್ ಹೆಗ್ಡೆ, ಗುರುಸ್ವಾಮಿ ರಾಮ ಮೇಸ್ತ್ರಿ ನಿಟ್ಟಡೆ ಮೊದಲಾದವರು ಉಪಸ್ಥಿತರಿದ್ದು, ಶುಭಹಾರೈಸಿದರು.

Dharmasthala nowkara samalochana sabheಧರ್ಮಸ್ಥಳ : ಕರ್ನಾಟಕ ರಾಜ್ಯ ಗ್ರಾ.ಪಂ. ಗ್ರಾಮ ನೌಕರರ ಸಂಘ (ಆರ್.ಡಿ.ಪಿ.ಆರ್) ರಾಜ್ಯ ಸಮಿತಿಯ ಆಶ್ರಯದಲ್ಲಿ ರಾಜ್ಯ ಮಟ್ಟದ ಗ್ರಾಮ ಪಂಚಾಯತ್ ನೌಕರರ ಕುಂದು ಕೊರತೆ ಮತ್ತು ಸಮಾಲೋಚನಾ ಸಭೆ ಡಿ. 9ರಂದು ಧರ್ಮಸ್ಥಳದ ಮಹೋತ್ಸವ ಸಭಾಂಗಣದಲ್ಲಿ ರಾಜ್ಯಾಧ್ಯಕ್ಷ ದೇವಿಪ್ರಸಾದ್ ಬೊಳ್ಮ ರವರ ಅಧ್ಯಕ್ಷತೆಯಲ್ಲಿ ನಡೆಯಿತು. ಈ ಸಂದರ್ಭದಲ್ಲಿ ಗ್ರಾಮ ಪಂಚಾಯತ್ ನೌಕರರ ಹತ್ತು ಹಲವು ಸಮಸ್ಯೆಗಳ ಕುರಿತು ಚರ್ಚಿಸಲಾಯಿತು.
ಸಭೆಯಲ್ಲಿ ಗ್ರಾ.ಪಂ. ನೌಕರರ ಬೇಡಿಕೆ ಮತ್ತು ಸಮಸ್ಯೆಗಳು :
1. ಗ್ರಾಮ ಪಂಚಾಯತ್ ನೌಕರರಿಗೆ ನಗರ ಮತ್ತು ಪಟ್ಟಣ ಪಂಚಾಯತ್ ಸಿಬ್ಬಂದಿಗಳಂತೆ ಸೇವಾನಿಯಮಾವಳಿ ಪಂಚಾಯತ್ ರಾಜ್ ಇಲಾಖೆಯಡಿ ರೂಪಿಸಬೇಕು. 2. ವರ್ಗಾವಣೆ ಸವಲತ್ತು ನೀಡಬೇಕು. 3. ವೇತನ ಶ್ರೇಣಿ ಇಲ್ಲದೆ ಕಳೆದ 20 ವರ್ಷ ಸೇವೆ ಸಲ್ಲಿಸಿದ ನೌಕರರಿಗೂ ಈಗ ಸೇರಿದ ನೌಕರರಿಗೂ ಒಂದೇ ರೀತಿಯಲ್ಲಿ ಕನಿಷ್ಠ ವೇತನ ನೀಡುತಿದ್ದು, ಇದು ಅವೈಜ್ಞಾನಿಕ ಪದ್ದತಿಯಾಗಿದ್ದು ಇದರ ಬದಲು ಗ್ರಾಮ ಪಂಚಾಯತ್ ನೌಕರರಿಗೆ ಹುದ್ದೆಗಳ ನ್ವಯ ಸೂಕ್ತ ವೇತನ ಶ್ರೇಣಿ ನಿಗದಿಪಡಿಸಬೇಕು. 4. ೨೦೦೮ ರಲ್ಲಿಯೇ ಭವಿಷ್ಯನಿದಿಯ ಕುರಿತು ಆದೇಶವಾಗಿದ್ದು, ಆದರೆ ಸದ್ರಿ ಆದೇಶ ಆದೇಶವಾ ಗಿಯೇ ಉಳಿದಿದ್ದು ಇಲ್ಲಿಯವರೆಗೂ ಕಾರ್ಯ ರೂಪಕ್ಕೆ ಬರದೆ ಇರುವುದು ಕಳೆದ 9 ವರ್ಷಗಳಿಂದ ಗ್ರಾಮ ಪಂಚಾ ಯತ್ ನೌಕರರಿಗೆ ಅನ್ಯಾಯವಾಗಿದ್ದು, ಈ ಬಗ್ಗೆ ಸೂಕ್ತ ಕ್ರಮ ಕೈಗೊಳ್ಳಬೇಕು. 5. ಸೂಕ್ತ ವೈದ್ಯಕೀಯ ಭದ್ರತೆಯ ಇಎಸ್‌ಐ ಸೌಲಭ್ಯವಿಲ್ಲ ಈ ಬಗ್ಗೆ ಸೂಕ್ತ ಕ್ರಮ ಕೈಗೊಳ್ಳಬೇಕು. 6. ಕಳೆದ ಹಲವು ವರ್ಷಗಳಿಂದ ಗ್ರಾಮ ಪಂಚಾಯತ್ ಕಛೇರಿಯಲ್ಲಿ ಮಂಜೂರಾದ ಹುದ್ದೆಗಳಿಗೆ (ಪಂಪುಚಾಲಕ, ನೀರುಗಂಟಿ, ಜವಾನ, ಶುಚಿತ್ವನೌಕರ, ಕರವಸೂಲಿಗಾರ ಮತ್ತು ವಾಹನ ಚಾಲಕ) ಗ್ರಾಮ ಪಂಚಾಯತ್ ಗಳು ಸಿಬ್ಬಂದಿಗಳನ್ನು ನೇಮಕ ಮಾಡಿಕೊಂಡು ಅವರಿಂದ ಕಾರ್ಯ ನಿರ್ವಹಿಸಿಕೊಳ್ಳುತ್ತಿದ್ದು, ಇಲ್ಲಿಯವರೆಗೂ ಜಿ.ಪಂ. ಅನುಮೋದನೆಯಾಗದೆ ಅತಂತ್ರ ಸ್ಥಿತಿಯಲ್ಲಿದ್ದು, ಸದ್ರಿ ಅನುಮೋದನೆ ಯಾಗದೆ ಇರುವ ಸಿಬ್ಬಂದಿಗಳಿಗೆ ಜಿ.ಪಂ. ಅನುಮೋದನೆ ನೀಡಬೇಕು. ಮತ್ತು ಸದ್ರಿ ಸಿಬ್ಬಂದಿಗಳ ಪೈಕಿ ಹಲವು ಸಿಬ್ಬಂದಿಗಳು ಈಗಾಗಲೇ ವಯೋಮಿತಿ ಮೀರಿದ್ದು ಮತ್ತು ಹಲವು ಸಿಬ್ಬಂದಿಗಳಿಗೆ ವಿದ್ಯಾರ್ಹ ತೆ ಕಡಿಮೆ ಇದ್ದು, ಇಂತಹ ಸಿಬ್ಬಂದಿ ಗಳಿಗೆ ಅವರು ಸಲ್ಲಿಸಿದ ಸೇವೆಯನ್ನು ಪರಿಗಣಿಸಿ ಒಂದು ಸೂಕ್ತ ನಿದರ್ಶನ ಹೊರಡಿಸಿ ಅನುಮೋದನೆ ನೀಡಿ ಸೇವಾ ಭದ್ರತೆ ಒದಗಿಸಬೇಕು. 7. 2006-07 ನೇ ಸಾಲಿನಿಂದ ಗ್ರಾ.ಪಂ. ಕಚೇರಿಯಲ್ಲಿ ಹುದ್ದೆ ಮಂಜೂರಾಗದೆಯೇ ಅಂದಿನ ದಿನಗಳಲ್ಲಿ ಕಚೇರಿಯಲ್ಲಿ ನುರಿತ ಕಂಪ್ಯೂಟರ್ ಸಾಕ್ಷರತೆ ಹೊಂದಿರುವ ಸಿಬ್ಬಂದಿಗಳು ಇರದ ಕಾರಣ ಎಂ ಜಿ ಎನ್ ಆರ್ ಜಿ ಇ ಎ ಮತ್ತು ಪಂಚತಂತ್ರ ಹಾಗೂ ಇತರ ತಂತ್ರಾಂಶ ಆಧಾರಿತ ಕಂಪ್ಯೂಟರ್ ಮೂಲಕ ಡಾಟ ಎಂಟ್ರೀ ಕಾರ್ಯ ನಿರ್ವಹಿಸಲು ಅಪರೇಟರ್ ಸಿಬ್ಬಂದಿಗಳನ್ನು ಗ್ರಾಮ ಪಂಚಾಯತ್ ಮಟ್ಟದಲ್ಲಿ ನೇಮಕ ಮಾಡಿಕೊಂಡಿದ್ದು, ಸದ್ರಿ ಸಿಬ್ಬಂದಿಗಳಿಗೆ ಹುದ್ದೆ ಮಂಜೂರಾತಿಯಾಗದೆ ಇರುವ ಕಾರಣ ಸರಕಾರ 2014 ರ ಆದೇಶ ಹೊರಡಿಸುವರೆಗೂ ಯಾವುದೇ ಭದ್ರತೆಯಿಲ್ಲದೆ ಗ್ರಾಮ ಪಂಚಾಯತ್‌ಗಳು ನೀಡುತ್ತಿದ್ದ ಅತ್ಯಂತ ಕಡಿಮೆ ವೇತನದಲ್ಲಿಯೂ ಕಾರ್ಯ ನಿರ್ವಹಿಸಿ ಪಂಚಾಯತ್ ರಾಜ್ ಇಲಾಖೆಯ ತಂತ್ರಾಂಶಗಳ ಅನುಷ್ಠಾನದಲ್ಲಿ ಪ್ರಥಮ ಸ್ಥಾನ ಪಡೆಯುವಲ್ಲಿ ಸೇವೆ ಸಲ್ಲಿಸಿದ ಸರಿಸುಮಾರು ಶೇ ೫೦ ಸಿಬ್ಬಂದಿಗಳು ಸದ್ರಿ ಆದೇಶದನ್ವಯ ಯಾವ ಪಂಚಾಯತಿನಲ್ಲಿ ಗುಮಾಸ್ತ/ಬೆರಳಚ್ಚುಗಾರ ಹುದ್ದೆ ಖಾಲಿ ಇತ್ತೋ ಅಂತಹ ಪಂಚಾಯತ್ ಗಳಲ್ಲಿ ಪದನಾಮ ಬದಲಾದ ಕ್ಲರ್ಕ್ ಕಮ್ ಡಾಟ ಎಂಟ್ರೀ ಅಪರೇಟರ್ ಹುದ್ದೆಗೆ ಅವರು ಈ ಹಿಂದೆ ಸಲ್ಲಿಸಿದ ಮೂರು ವರ್ಷ ಸೇವೆಗೆ ಪ್ರಥಮ ಆಧ್ಯತೆ ನೀಡಿ ಜಿಲ್ಲಾ ಪಂಚಾಯತ್ ಅನುಮೋದನೆ ನೀಡಿ ಅವರಿಗೆ ಸೇವಾ ಭದ್ರತೆಯನ್ನು ಸರಕಾರ ಒದಗಿಸಿದ್ದು, ಆದರೆ ಉಳಿದ ಶೇ ೫೦ ಕ್ಕೂ ಅಧಿಕ ಇಂತಹ ಸಿಬ್ಬಂದಿಗಳಿಗೆ ಇನ್ನೂ ಕೂಡ ಸೇವಾ ಭದ್ರತೆ ದೊರಕದೆ ಅತಂತ್ರ ಸ್ಥಿತಿಯಲ್ಲಿದ್ದು ಇಂತಹ ಸಿಬ್ಬಂದಿಗಳಿಗೂ ಈ ಹಿಂದೆ 2014ರ ಆದೇಶದಂತೆ ಅವರೊಂದಿಗೆ ಕಾರ್ಯ ನಿರ್ವಹಿಸುತ್ತಿದ್ದ ಸಹೋದ್ಯೋಗಿಗಳಿಗೆ ಸರಕಾರ ನೀಡಿದ ಸೇವಾ ಭದ್ರತೆಯನ್ನು ನೀಡಬೇಕು. ಸೇರಿಂದತೆ 14 ಬೇಡಿಕೆಗಳನ್ನು ಮಂಡಿಸಲಾಯಿತು.
ಈ ಸಂದರ್ಭದಲ್ಲಿ ಕರ್ನಾಟಕ ರಾಜ್ಯ ಗ್ರಾಮ ಪಂಚಾಯತ್ ನೌಕರರ ಶ್ರೇಯೋಭಿವೃಧ್ಧಿ ಸಂಘದ ಉಡುಪಿ ಜಿಲ್ಲಾಧ್ಯಕ್ಷ ಉದಯ ಶೆಟ್ಟಿ ಪೆರ್ಡೂರು, ದ.ಕ. ಜಿಲ್ಲಾಧ್ಯಕ್ಷೆ ಶ್ರೀಮತಿ ರೋಹಿಣಿ ಶೆಟ್ಟಿ ಕುಕ್ಕೇಡಿ, ಕೋಲಾರ ಜಿಲ್ಲಾ ಪ್ರತಿನಿಧಿ ಯೋಗೀಶ್ ಎಂ ಹುತ್ತೂರು, ಡಾವಣಗೆರೆ ಜಿಲ್ಲಾ ಪ್ರತಿನಿಧಿ ಬಸವರಾಜು, ಮಂಡ್ಯ ಜಿಲ್ಲಾ ಪ್ರತಿನಿಧಿ ಕುಮಾರೇಶ್ ಮಳವಳ್ಳಿ, ಕೊಡಗು ಜಿಲ್ಲಾ ಪ್ರತಿನಿಧಿ ರವೀಂದ್ರ ಸೋಮವಾರಪೇಟೆ, ತುಮಕೂರು ಜಿಲ್ಲಾ ಪ್ರತಿನಿಧಿ ನಾಗರಾಜ್ ಸಿ.ಕೆ.ಪುರ, ವಿಜಾಪುರ ಜಿಲ್ಲಾ ಪ್ರತಿನಿಧಿ ಈರಗಂಟೆಪ್ಪ ಕಲಕೇರಿ, ಶಿವಮೊಗ್ಗ ಜಿಲ್ಲಾ ಪ್ರತಿನಿಧಿ ಸಾವಿತ್ರಿ ಎಂ ಎಸ್ ಅರಮನೆಕೊಪ್ಪ, ಉತ್ತರ ಕನ್ನಡ ಜಿಲ್ಲಾ ಪ್ರತಿನಿಧಿ ಆನಂದ ಅಂಕೋಲ, ಚಿಕ್ಕಮಗಳೂರು ಜಿಲ್ಲಾ ಪ್ರತಿನಿಧಿ ಚಂದ್ರಶೇಖರ, ಚಿತ್ರದುರ್ಗ ಜಿಲ್ಲಾ ಪ್ರತಿನಿಧಿ ಗುರುಮೂರ್ತಿ, ಹಾಸನ ಜಿಲ್ಲಾ ಪ್ರತಿನಿಧಿ ಲಿಂಗೇಶ್, ಮೈಸೂರು ಜಿಲ್ಲಾ ಪ್ರತಿನಿಧಿ ಮೋಹನ್ ಸಿ, ಹಾವೇರಿ ಜಿಲ್ಲಾ ಪ್ರತಿನಿಧಿ ಪ್ರಶಾಂತ್ ಪಿ ಜೋಶಿ ಕಾಗಿನೆಲೆ ಉಪಸ್ಥಿತರಿದ್ದರು.
ಬೆಳ್ತಂಗಡಿ ತಾಲೂಕು ಸಮಿತಿಯ ಉಪಾಧ್ಯಕ್ಷ ಕಾಸಿಂ ಪದ್ಮುಂಜ ಸ್ವಾಗತಿಸಿ, ರಾಜ್ಯ ಸಮಿತಿಯ ಪ್ರಧಾನ ಕಾರ್ಯದರ್ಶಿ ಪದ್ಮನಾಭ ಆರ್ ಕುಲಾಲ್ ಮುದ್ರಾಡಿ ನಿರೂಪಿಸಿ ಧನ್ಯವಾದ ಸಮರ್ಪಿಸಿದರು.

dharmasthala sdm prathiba dinacharaneಧರ್ಮಸ್ಥಳ: ಶ್ರೀ.ಧ.ಮಂ.ಆಂಗ್ಲ ಮಾಧ್ಯಮ ಶಾಲೆ, ಧರ್ಮಸ್ಥಳದ 2017-18ನೇ ಶೈಕ್ಷಣಿಕ ವರ್ಷದ ಪ್ರತಿಭಾ ದಿನಾಚರಣೆಯು ಡಿ.9ರಂದು ಧರ್ಮಸ್ಥಳದ ಅಮೃತವರ್ಷಿಣಿ ಸಭಾಭವನದಲ್ಲಿ ಜರುಗಿತು. ಶಾಲಾ ಸಂಚಾಲಕ ಅನಂತ ಪದ್ಮನಾಭ ಭಟ್ ದ್ವಜಾರೋಹಣ ಕಾರ್ಯಕ್ರಮ ನೆರವೇರಿಸಿ ದರು. ಎಸ್.ಡಿ.ಎಂ ಶಿಕ್ಷಣ ಸಂಸ್ಥೆಗಳ ಅಧ್ಯಕ್ಷ ಧರ್ಮಾಧಿಕಾರಿ, ಡಾ. ಡಿ.ವೀರೇಂದ್ರ ಹೆಗ್ಗಡೆಯವರು ದೀಪ ಪ್ರಜ್ವಲಿಸಿ ಕಾರ್ಯ ಕ್ರಮಕ್ಕೆ ಚಾಲನೆ ನೀಡಿ, ಬಳಿಕ ಶಾಲೆಯ ವಾರ್ಷಿಕ ಪತ್ರಿಕೆಗಳಾದಂತಹ ಕನಸು ಹಾಗೂ ಹೊಂಗನಸು ಬಿಡುಗಡೆಗೊಳಿಸಿ, ಪಠ್ಯ ಚಟುವಟಿಕೆಗಳೊಂದಿಗೆ ಸಹಪಠ್ಯ ಚಟುವಟಿಕೆಗಳು ಮಕ್ಕಳ ಸರ್ವತೋಮುಖ ಬೆಳವಣಿಗೆಗೆ ಅತ್ಯಾವಶ್ಯಕ ಎಂದು ನುಡಿದರು. ಈ ಸಂದರ್ಭದಲ್ಲಿ ಶಾಲಾ ಮುಖ್ಯೋಪಾಧ್ಯಾಯಿನಿ ಶ್ರೀಮತಿ ಪರಿಮಳಾ ಎಂ.ವಿ.ರವರು ಉಪಸ್ಥಿತರಿದ್ದರು. ಪುಟಾಣಿಗಳ ನೃತ್ಯದೊಂದಿಗೆ ಆರಂಭಗೊಂಡ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಅನೇಕ ನೃತ್ಯಪ್ರಕಾರಗಳು ವಿವಿಧ ಭಾಷೆಗಳಲ್ಲಿ ಮೂಡಿಬಂದವು. ಅಂತೆಯೇ ಸಮೂಹಗೀತೆಗಳು ಅಗಾಗ್ಗೆ ಬಿತ್ತರಗೊಂಡು ಕಾರ್ಯಕ್ರಮದ ಅಂದವನ್ನು ಹೆಚ್ಚಿಸಿದವು. ಸದ್ರಿ ಕಾರ್ಯಕ್ರಮದಲ್ಲಿ ಎಸ್.ಡಿ.ಎಂ ಶಿಕ್ಷಣ ಸಂಸ್ಥೆಯ ಮಾನವ ಸಂಪನ್ಮೂಲ ಅಧಿಕಾರಿ ಗೊಪಾಲ ಕೃಷ್ಣ ಭಟ್, ಉಜಿರೆಯ ಸಿಬಿಎಸ್ಸಿ ಶಾಲಾ ಪ್ರಾಂಶುಪಾಲ ಮನಮೋಹನ್ ನಾಯಕ್, ಬಿ.ಎಡ್. ಕಾಲೇಜಿನ ಪ್ರಾಂಶುಪಾಲರಾದ ನಿತ್ಯಾನಂದ ಹಾಗೂ ಊರಿನ ಗಣ್ಯರು ಉಪಸ್ಥಿತರಿದ್ದರು ಮತ್ತು ವಿದ್ಯಾರ್ಥಿಗಳಿಗೆ ಮೆಚ್ಚುಗೆ ಸೂಚಿಸಿ ಹಾರೈಸಿದರು. ಕುಮಾರಿ ರಕ್ಷಿತಾದಾಸ್ ಮತ್ತು ದಿವಿತರಿಂದ ಆರಂಭಿಸಲ್ಪಟ್ಟ ಸದ್ರಿ ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳಾದ ಅನ್ವಿತಾ, ಸುಪ್ರೀತಾ, ಚಿನ್ಮಯಿ, ಕೃಪಾ ಎನ್, ಅನ್ವೇಷ್, ವಿಲಾಸ್, ಚಿದ್ವಿಲಾಸ್, ಆಶಿತಾ, ನಮಿತಾ, ಲೋಕೇಶ್ ಶಾಲಾನಾಯಕ ಶೋಧನ್‌ಶಾಲಾ ವಾರ್ಷಿಕ ವರದಿಯನ್ನು ಹಂತ-ಹಂತವಾಗಿ ವಾಚಿಸಿದರು. ಈ ಸಂದರ್ಭದಲ್ಲಿ ಕಳೆದ ಸಾಲಿನ 10ನೇ ತರಗತಿಯಲ್ಲಿ ಉನ್ನತ ದರ್ಜೆ ಪಡೆದ ವಿದ್ಯಾರ್ಥಿಗಳನ್ನು ಬಹುಮಾನ ನೀಡಿ ಗೌರವಿಸಲಾಯಿತು. ಪ್ರಸಕ್ತ ವರ್ಷದ ಪ್ರತಿಭಾನ್ವಿತ ವಿದ್ಯಾರ್ಥಿಗಳನ್ನೂ ಬಹುಮಾನ ನೀಡಿ ಪ್ರೋತ್ಸಾಹಿಸಲಾಯಿತು. ಸಹಶಿಕ್ಷಕಿ ಶ್ರೀಮತಿ ಕಮಲಾ ಜಿ ಹೆಗ್ಡೆ ಧನ್ಯವಾದವಿತ್ತರು.

abdul rahiman 11ಮಡಂತ್ಯಾರು: ಹಿಂದೆ ಆಶಾ ಸ್ಪೋರ್ಟ್ಸ್ ಕ್ಲಬ್ ಪಾರೆಂಕಿ ಎಂದು ಕಾರ್ಯಾಚರಿಸುತ್ತಿದ್ದ ಸಂಘದ ಪುನಶ್ಚೇತನದ ಬಗ್ಗೆ ಆಸಕ್ತ ಯುವ ಸದಸ್ಯರುಗಳ ಸಮಾಲೋಚನಾ ಸಭೆಯನ್ನು ಕರೆದು, ಮತ್ತೊಮ್ಮೆ ಸಂಘಟನೆಯನ್ನು ಗಟ್ಟಿಗೊಳಿಸಿ ಸೌಹಾರ್ದ ಫ್ರೆಂಡ್ಸ್ ಎಂಬುದಾಗಿ ನಾಮಾಂಕಿತಗೊಳಿಸಿ ಅಧಿಕೃತ ಕಾರ್ಯಚಟುವಟಿಕೆಗಳಿಗೆ ಚಾಲನೆ ನೀಡಲಾಯಿತು.
ಹುಪ್ಪ ಅಂಗನವಾಡಿ ಕೇಂದ್ರದ ಬಳಿ ಡಿ. 3 ರಂದು ನಡೆದ ಸಮಾಲೋಚನಾ ಸಭೆಯಲ್ಲಿ ನೂತನ ಅಧ್ಯಕ್ಷರಾಗಿ ಮಡಂತ್ಯಾರು ಗ್ರಾ.ಪಂ. ಮಾಜಿ ಅಧ್ಯಕ್ಷ, ಹಾಲಿ ಸದಸ್ಯ ಅಬ್ದುಲ್ ರಹಿಮಾನ್ ಪಡ್ಪು ಅವರನ್ನು ಸರ್ವಾನುಮತದಿಂದ ಆರಿಸಲಾಯಿತು. ಗೌರವಾಧ್ಯಕ್ಷರಾಗಿ ಸಿರಿಲ್ ಡಿಕುನ್ನ ಹುಪ್ಪ, ಮಡಂತ್ಯಾರು, ಉಪಾಧ್ಯಕ್ಷರಾಗಿ ಪ್ರಭಾಕರ ಶೆಟ್ಟಿ ಪರನೀರು, ಅಶ್ರಫ್ ಕೆರೆಕೋಡಿ, ಮೆಲ್ವಿನ್ ಡಿಸೋಜಾ ಅರ್ತಿಲ, ಪ್ರ. ಕಾರ್ಯದರ್ಶಿಯಾಗಿ ಅಬ್ದುಲ್ ರಶೀದ್ ಪರನೀರು ಮಡಂತ್ಯಾರು, ಕಾರ್ಯದರ್ಶಿ ಪ್ರವೀಣ್ ಪಾಯಿಸ್ ಹುಪ್ಪ, ಜೊತೆ ಕಾರ್ಯದರ್ಶಿಯಾಗಿ ಶಬೀರ್ ಎಂ, ಕೋಶಾಧಿಕಾರಿಯಾಗಿ ಶರ್ವನ್ ಹುಪ್ಪ ಮಡಂತ್ಯಾರು, ಸಂಘಟನಾ ಕಾರ್ಯದರ್ಶಿಯಾಗಿ ಶೇಕ್‌ಮುಹಮ್ಮದ್ ನವೀದ್ ಪಡ್ಪು, ಕ್ರೀಡಾ ಕಾರ್ಯದರ್ಶಿಯಾಗಿ ಬಶೀರ್ ಪಿಕಪ್, ರೋಹಿತ್ ಪೂಜಾರಿ ಮತ್ತು ಮುಸ್ತಫಾ ಪರನೀರು, ಕಾರ್ಯಕ್ರಮ ಸಂಯೋಜಕರಾಗಿ ಚಂದ್ರಶೇಖರ ಪೂಜಾರಿ, ಜಲೀಲ್ ಮತ್ತು ನವೀದ್ ಅರ್ತಿಲ, ಗೌರವ ಸಲಹೆಗಾರರಾಗಿ ನಝೀರ್ ಟಿಂಬರ್ ಮರ್ಚೆಂಟ್, ಪುರಂದರ ಶೆಟ್ಟಿ ಮೂಡಾಯೂರು, ಪಿ.ಎಮ್. ಇಸ್ಮಾಯಿಲ್ ಪರನೀರು, ಉಸ್ಮಾನ್ ಮೇಸ್ತ್ರಿ ಹುಪ್ಪ, ಜಯಾನಂದ ಆಚಾರ್ಯ ಅರ್ತಿಲ ಮತ್ತು ಗಣೇಶ್ ಕೃಷ್ಣ ಕ್ಯಾಂಟೀನ್ ಮಡಂತ್ಯಾರು, ಲಿಯೋ ಡಿಕುನ್ಹಾ ಉಪ್ಪಾ ಮತ್ತು ಬಾಝಿಲ್ ಫೆನಾಂಡಿಸ್ ಮೂಡಾಯೂರು, ಕಾರ್ಯಕಾರಿ ಸಮಿತಿ ಸದಸ್ಯರಾಗಿ ಹನೀಫ್ ಹುನಿಲ, ನದೀಮ್, ರಿಯಾಝ್ ಪರನೀರು, ಇರ್ಫಾನ್, ಶರೀಫ್, ನಾಸಿರ್, ನೌಷಾದ್, ಇರ್ಷಾದ್, ಅನ್ವರ್ ಮತ್ತು ಶಮೀರ್ ಹುಪ್ಪ ಇವರನ್ನು ಆರಿಸಲಾಯಿತು. ಸಂಘಟನೆಯ ವತಿಯಿಂದ ಮುಂದಕ್ಕೆ ಹುಪ್ಪ ಅಂಗನವಾಡಿ ಕೇಂದ್ರಕ್ಕೆ ನೆರವು, ಸಮಾಜ ಸೇವೆ, ಕ್ರೀಡೆ ಮತ್ತು ಶೈಕ್ಷಣಿಕ ಪ್ರೋತ್ಸಾಹ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುವ ಬಗ್ಗೆ ತೀರ್ಮಾನಿಸಲಾಯಿತು.

IDYASHRAYA udhgataneಬೆಳ್ತಂಗಡಿ : ಇಡ್ಯಾಶ್ರಯ ಸಭಾಭವನದ ಉದ್ಘಾಟನೆಯನ್ನು ಡಿ.9 ರಂದು ಶಾಸಕ ಕೆ. ವಸಂತ ಬಂಗೇರ ನೆರವೇರಿಸಿ ಮಾತನಾಡುತ್ತಾ ಸಣ್ಣ ವಯಸ್ಸಿನಲ್ಲಿ ಪ್ರಭಾಕರ ಭಟ್ ಇಡ್ಯರವರು ಮಹಾರಾಷ್ಟ್ರದ ದಾಭೋಲಿ ಮಠದಲ್ಲಿ ವೇದಾಭ್ಯಾಸ ಪೂರೈಸಿ, ಕರ್ನಾಟಕ, ಗೋವಾ, ಮಹಾರಾಷ್ಟ್ರ ದಲ್ಲಿ ಪೌರೋಹಿತ್ಯ ಮಾಡಿ ಜನ ಮೆಚ್ಚುಗೆ ಪಡೆದು ಈಗ ತಮ್ಮ ಹುಟ್ಟೂರಲ್ಲಿ ಇಡ್ಯಾಶ್ರಯ ನಿರ್ಮಿಸಿ ಜನತೆಗೆ ಕೈಗೆಟಕುವ ದರದಲ್ಲಿ ಧಾರ್ಮಿಕ, ವೈದಿಕ, ಜ್ಯೋತಿಷ್ಯ ಕಾರ್ಯಕ್ರಮಗಳನ್ನು ನಡೆಸುವಲ್ಲಿ ಮಾಡಿದ ಈ ಪ್ರಯತ್ನಕ್ಕೆ ಶುಭ ಹಾರೈಸಿದರು.
ಮುಖ್ಯ ಅಭ್ಯಾಗತರಾಗಿ ಭಾಗವಹಿಸಿ ಮಾತನಾಡಿದ ಜಿಲ್ಲಾ ಬಿ.ಜೆ.ಪಿ ಯುವ ಮೋರ್ಚಾದ ಅಧ್ಯಕ್ಷ ಹರೀಶ್ ಪೂಂಜರವರು ಸಮಾಜಕ್ಕೆ ಹಿರಿಯರ ಮಾರ್ಗದರ್ಶನದ ಅವಶ್ಯಕತೆ ಇದ್ದು, ಈ ಸಂದರ್ಭದಲ್ಲಿ ಯುವ ಪುರೋಹಿತರೊಬ್ಬರು ಜನರಿಗೆ ಸೇವಾ ರೂಪದಲ್ಲಿ ಇಂತಹ ಶ್ಲಾಘನೀಯ ಕೆಲಸವನ್ನು ಮಾಡುತ್ತಿರುವುದು ಅತ್ಯಂತ ಸ್ತುತ್ಯಾರ್ಹ ಎಂದು ಹೇಳಿದರು.
ರೋಟರಿ ಅಧ್ಯಕ್ಷ ರೊ. ಡಾ| ಸುಧೀರ್ ಪ್ರಭುರವರು ಮಾತನಾಡಿ ಓರ್ವ ಪ್ರತಿಭಾವಂತ ಹಾಗೂ ತನ್ನ ವೃತ್ತಿಯಲ್ಲಿ ಪ್ರಾಜ್ಞತೆಯನ್ನು ಪಡೆದ ಪ್ರಭಾಕರ ಭಟ್ ಇವರ ಮಾರ್ಗದರ್ಶನದಲ್ಲಿ ನಡೆಯುವ ಧಾರ್ಮಿಕ ಕಾರ್ಯಕ್ರಮಗಳು, ಜ್ಯೋತಿಷ್ಯ ಫಲ ಚಿಂತನೆಗಳು ಫಲಪ್ರದವಾಗಲಿ ಎಂದು ಹಾರೈಸಿದರು. ವೇದಿಕೆಯಲ್ಲ್ಲಿ ಕುಡಾಲ ದೇಶಸ್ಥ ಆದ್ಯ ಗೌಡ ಬ್ರಾಹ್ಮಣ ಜಿಲ್ಲಾ ಸಂಘದ ಅಧ್ಯಕ್ಷ ಗಣಪತಿ ಶೆಣೈ ಡೆಚ್ಚಾರು, ಕುವೆಟ್ಟು ಗ್ರಾಮ ಪಂಚಾಯತಿ ಅಧ್ಯಕ್ಷ ಅಶೋಕ್ ಕೋಟ್ಯಾನ್, ಮಂಜುಶ್ರೀ ಜೇಸೀ ಪೂರ್ವಾಧ್ಯಕ್ಷ ಚಿದಾನಂದ ಇಡ್ಯ, ತಾಲೂಕು ಪಂಚಾಯತ್ ಸದಸ್ಯರಾದ ಗೋಪಿನಾಥ ನಾಯಕ್ ಹಾಗೂ ಪೂವಪ್ಪ ಭಂಡಾರಿ ಉಪಸ್ಥಿತರಿದ್ದರು. ಪ್ರಭಾಕರ ಭಟ್ ಹಾಗೂ ಶಾಮಣ್ಣ ಪ್ರಭು ದಂಪತಿಗಳು ಸ್ವಾಗತಿಸಿ ಸತ್ಕರಿಸಿದರು. ಕಾರ್ಯಕ್ರಮದ ನಿರೂಪಣೆಯನ್ನು ರೊಟೇರಿಯನ್ ದಯಾನಂದ ನಾಯಕ್ ನಡೆಸಿಕೊಟ್ಟರು.

hosangadi suryanarayana garbagudi shilanyasaಬೆಳ್ತಂಗಡಿ: ಸೃಷ್ಟಿಯನ್ನು ದೇವರು ಮಾಡಿದಾಗ ಯಾರಿಗೂ ತಾರತಮ್ಯ ಮಾಡಿಲ್ಲ. ಹೀಗಾಗಿ ಅದೇ ಸೃಷ್ಟಿಯಲ್ಲಿರುವ ನಾವು ತಾರತಮ್ಯದಿಂದ ಇರುವುದನ್ನು ಬಿಡಬೇಕು ಎಂದು ಮಾಣಿಲ ಶ್ರೀಧಾಮ ಶ್ರೀ ಮೋಹನದಾಸ ಪರಮಹಂಸ ಸ್ವಾಮೀಜಿ ನುಡಿದರು.
ಹೊಸಂಗಡಿ ಗ್ರಾಮದ ಪೆರಿಂಜೆ ಸನಿಹದ ಬಲ್ಲಂಗೇರಿ-ಅಂಗರಕರಿಯ ಎಂಬಲ್ಲಿ ಡಿ.7 ರಂದು ಶ್ರೀ ಸೂರ್ಯ ನಾರಾಯಣ ದೇವಸ್ಥಾನದ ನೂತನ ಗರ್ಭಗುಡಿ ಶಿಲಾನ್ಯಾಸ ಕಾರ್ಯಕ್ರಮದಲ್ಲಿ ನಡೆದ ಸಭಾಕಾರ್ಯಕ್ರಮದಲ್ಲಿ ಅವರು ಆಶೀರ್ವಚನ ನೀಡಿದರು.
ಸಕಾರಾತ್ಮಕ ಚಿಂತನೆ ಸದಾ ನಮ್ಮಲ್ಲಿದ್ದರೆ ಎಲ್ಲವೂ ಒಳಿತಾಗಿಯೇ ಹೋಗುತ್ತದೆ. ನಮ್ಮಲ್ಲಿನ ಕೊರತೆಯನ್ನು ಹೋಗಲಾಡಿಸುವ ಬದಲು ಇನ್ನೊಬ್ಬರ ಕೊರತೆಯ ಬಗ್ಗೆ ಬೊಟ್ಟು ಮಾಡುವುದನ್ನು ನಿಲ್ಲಿಸಬೇಕು. ಇದ್ದುದರಲ್ಲಿಯೇ ತೃಪ್ತಿಪಡುವ ಗುಣವನ್ನು ಬೆಳೆಸಿಕೊಳ್ಳಬೇಕು ಎಂದರು.
ಕರಿಂಜೆಶ್ರೀ ಶಕ್ತಿಗುರುಮಠದ ಶ್ರೀ ಮುಕ್ತಾನಂದ ಸ್ವಾಮೀಜಿ ಅವರು, ಪ್ರತ್ಯಕ್ಷ ದೇವ೦ರಾಗಿರುವ ಸೂರ್ಯ ನಾರಾಯಣನ ಕ್ಷೇತ್ರವು ಫಲ್ಗುಣಿ ನದಿ ತೀರದಲ್ಲಿರುವುದರಿಂದ ಪ್ರಸಿದ್ಧ ತೀರ್ಥಕ್ಷೇತ್ರ ವಾಗುವುದರಲ್ಲಿ ಸಂದೇಹವಿಲ್ಲ. ಭಗವಂತನಲ್ಲಿ ಅಚಲ ನಂಬಿಕೆ, ಶ್ರದ್ಧೆ ಇದ್ದರೆ ನವೀಕರಣ ಕಾರ್ಯಕ್ಕೆ ಹೆಚ್ಚು ಸಮಯ ಹಿಡಿಯುವುದಿಲ್ಲ ಎಂದ ಅವರು ಕ್ಷೇತ್ರದಲ್ಲಿ ಗೋಪೂಜೆಯನ್ನು ಆರಂಭಿಸಬೇಕು ಎಂದು ಸಲಹೆ ನೀಡಿದರು. ಉದ್ಯಮಿ ಹರೀಶ್ ಪೂಂಜ ಅವರು, ಹಿರಿಯರ ಆಶೀರ್ವಾದ, ಯುವಕರ ಶಕ್ತಿ ಮೇಳೈಸಿದರೆ ಯಾವುದೇ ಕೆಲಸ ದೊಡ್ಡದಲ್ಲ. ಜಾತಿ, ಮತ, ಪಕ್ಷ ಬಿಟ್ಟು ಏಕ ಮನಸ್ಸಿನಿಂದ ಮುಂದೆ ನಡೆಯುವ ಇಲ್ಲಿನ ಕ್ಷೇತ್ರದ ನವೀಕರಣದಲ್ಲಿ ಪಾಲ್ಗೊಳ್ಳೋಣ ಎಂದರು. ಉದ್ಯಮಿಗಳಾದ ಮೂಡಬಿದರೆಯ ಕೆ. ಶ್ರೀಪತಿ ಭಟ್, ವೇಣೂರು ಭಾಸ್ಕರ ಪೈ, ಮೂಡಬಿದ್ರೆಯ ದೇವಿಪ್ರಸಾದ ಶೆಟ್ಟಿ ವೇದಿಕೆಯಲ್ಲಿದ್ದರು. ಅಳದಂಗಡಿ ಅರಮನೆ ಡಾ| ಪದ್ಮಪ್ರಸಾದ ಅಜಿಲ ಅವರು ಶಿಲಾನ್ಯಾಸ ನೆರವೇರಿಸಿದರು. ವೇ| ಮೂ| ಉದಯ ಪಾಂಗಾಣ್ಣಾಯ ತಂತ್ರಿಗಳು ಶಿಲಾನ್ಯಾಸದ ವಿಧಿವಿಧಾನಗಳನ್ನು ನೆರವೇರಿಸಿದರು. ಮುಷ್ಠಿ ಹಣ ಸಮರ್ಪಣಾ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯಿತು.
ದೇಗುಲ ಅರ್ಚಕ ಸುಬ್ರಹ್ಮಣ್ಯ ಉಡುಪ, ಶ್ರೀ ಸೂರ್ಯನಾರಾಯಣ ಕ್ಷೇತ್ರ ಪುನರ್‌ನಿರ್ಮಾಣ ಸಮಿತಿ ಕಾರ್ಯದರ್ಶಿ ಪಿ. ಹರಿಪ್ರಸಾದ ಬಜೆ, ಶ್ರೀ ಸೂರ್ಯನಾರಾಯಣ ಆರಾಧನಾ ಸೇವಾ ಟ್ರಸ್ಟ್ ಅಧ್ಯಕ್ಷ ಉದಯಕುಮಾರ್, ಕೋಶಾಧಿಕಾರಿ ಸತೀಶ್ ಶೆಟ್ಟಿ, ಕಾರ್ಯದರ್ಶಿ ಎ. ಗಣರಾಜ ಭಟ್ ಉಪಸ್ಥಿತರಿದ್ದರು.
ಕರುಣಾಕರ ಸ್ವಾಗತಿಸಿ, ಪುನರ್‌ನಿರ್ಮಾಣ ಸಮಿತಿ ಅಧ್ಯಕ್ಷ ಯನ್. ಸೀತಾರಾಮ ರೈ ಪ್ರಸ್ತಾವಿಸಿ ದರು. ಕಿರಣ್‌ಕುಮಾರ್ ವಂದಿಸಿ, ಸುಧಾಕರ ನೂಯಿ ಕಾರ್ಯಕ್ರಮ ನಿರ್ವಹಿಸಿದರು.
ಫಲ್ಗುಣಿ ನದಿ ಈಶಾನ್ಯದಿಂದ ಪ್ರದಕ್ಷಿಣಾಕಾರವಾಗಿ ಹರಿಯುತ್ತಿರುವ ಸಂಗಮ ಸ್ಥಳವಾಗಿರುವ ಅಂಗರಕರಿ ಯದಲ್ಲಿ ಸುಮಾರು 700 ವರ್ಷಗಳ ಹಿಂದಿನಿಂದಲೂ ಈ ಪ್ರದೇಶ ಅದೆಷ್ಟೋ ಋಷಿಮುನಿಗಳ, ಸಾಧು, ಸಂತರ ತಪೋಭೂಮಿಯಾಗಿ ಇದ್ದದ್ದು ಕಂಡು ಬಂದಿದೆ. ಪುರಾತನ ದೇವಸ್ಥಾನದ ಕುರುಹುಗಳೂ ಜೀರ್ಣಾವಸ್ಥೆಯಲ್ಲಿರುವ ದೇಗುಲದ ಕಟ್ಟಡದ ತಳಪಾಯವೂ ಗೋಚರಿಸಿದ್ದರಿಂದ ಸ್ಥಳೀಯರು ದೇವಾಲಯ ವನ್ನು ಪುನರುತ್ಥಾನಗೊಳಿಸುವ ಸಂಕಲ್ಪವನ್ನು ಕೈಗೊಂಡಿದ್ದಾರೆ.

suddi COLORpdf BLDY  2, 4, 6, 8, 10, 12, 14, 16, 18, 20, 22.p65ವೇಣೂರು: ಕರಾವಳಿಯಲ್ಲಿ ಮತ್ತು ಕಂಬಳ ಕೋಣಗಳ ಕಲರವ ಆರಂಭವಾಗಿದೆ. ಬೆಳ್ತಂಗಡಿ ತಾಲೂಕಿನ ಪ್ರಸಿದ್ಧ ಹೊನಲು ಬೆಳಕಿನ ವೇಣೂರು-ಪೆರ್ಮುಡ ಸೂರ್ಯ-ಚಂದ್ರ ಜೋಡುಕರೆ ಬಯಲು ಕಂಬಳವು ಡಿ.16ರಂದು ನಡೆಯಲಿದೆ. ಸಣ್ಣ ಕೈಗಾರಿಕ ಅಭಿವೃದ್ಧಿ ನಿಗಮದ ಅಧ್ಯಕ್ಷರು ಶಾಸಕರು ಆದ ಕೆ. ವಸಂತ ಬಂಗೇರರವರ ಗೌರವಾಧ್ಯಕ್ಷತೆಯಲ್ಲಿ ಯುವ ಮುಂದಾಳು ಹಲವು ಸಂಘ ಸಂಸ್ಥೆಗಳಲ್ಲಿ ತೊಡಗಿಸಿ ಕೊಂಡಿರುವ ನಿತೀಶ್ ಹೆಚ್‌ರವರ ಅಧ್ಯಕ್ಷತೆಯಲ್ಲಿ ಕಂಬಳವು ಜರುಗಲಿದೆ. ಅಳದಂಗಡಿ ಅರಮನೆಯ ತಿಮ್ಮಣ್ಣರಸರಾದ ಡಾ| ಪದ್ಮಪ್ರಸಾದ್ ಅಜಿಲರು ಕಂಬಳದ ಉದ್ಘಾಟನೆಯನ್ನು ನೆರವೇರಿಸಿದ್ದಾರೆ. ಹಾಗೂ ವಿವಿಧ ರಾಜಕೀಯ ಮುಖಂಡರು, ವಿವಿಧ ಕ್ಷೇತ್ರದ ಗಣ್ಯರು, ಸಂಘ-ಸಂಸ್ಥೆಗಳ ಪ್ರಮುಖ ಗಣ್ಯರು ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ.
ಬಹುಮಾನಗಳು : ಕನೆ ಹಲಗೆ – 7 ಕೋಲು ನಿಶಾನಿಗೆ ನೀರು ಹಾಯಿಸಿದ ಕೋಣಗಳಿಗೆ-1 ಪವನು, 6 ಕೋಲು ನಿಶಾನಿಗೆ ನೀರು ಹಾಯಿಸಿದ ಕೋಣಗಳಿಗೆ-1/2 ಪವನು, ಹಗ್ಗ ಹಿರಿಯ ಪ್ರಥಮ-2 ಪವನು, ದ್ವಿತೀಯ-1 ಪವನು, ಹಗ್ಗ ಕಿರಿಯ ಪ್ರಥಮ – 1 ಪವನು, ದ್ವಿತೀಯ 1/2 ಪವನು, ನೇಗಿಲು ಹಿರಿಯ ಪ್ರಥಮ-2 ಪವನು, ದ್ವಿತೀಯ-1 ಪವನು, ನೇಗಿಲು ಕಿರಿಯ ಪ್ರಥಮ-1 ಪವನು, ದ್ವಿತೀಯ-1/2 ಪವನು, ಅಡ್ಡ ಹಲಗೆ ಪ್ರಥಮ-1 ಪವನು, ದ್ವಿತೀಯ-1/2 ಪವನು.

suddi COLORpdf BLDY  2, 4, 6, 8, 10, 12, 14, 16, 18, 20, 22.p65ಬೆಳ್ತಂಗಡಿ : ಯುವ ಜನತೆಯಲ್ಲಿ ನಾಯಕತ್ವ ಗುಣಗಳನ್ನು ಬೆಳೆಸುವ, ವ್ಯಕ್ತಿತ್ವ ವಿಕಸನ, ತರಬೇತಿ, ಉದ್ಯಮ ಶೀಲತೆಗಳನ್ನು ಬೆಳೆಸುವ ಜಗತ್ತಿನ ಏಕೈಕ ಅಂತರಾಷ್ಟ್ರೀಯ ಸಂಸ್ಥೆ ಜೆಸಿಐ ಪ್ರತಿಷ್ಠಿತ ಜೆಸಿಐ ಬೆಳ್ತಂಗಡಿ ಮಂಜುಶ್ರೀಯ 2018ನೇ ಸಾಲಿನ ಅಧ್ಯಕ್ಷರಾಗಿ ಹಲವು ಸಂಘ-ಸಂಸ್ಥೆಗಳಲ್ಲಿ ಸಕ್ರೀಯರಾಗಿರುವ ಏರ್‌ಟೆಲ್‌ನ ತಾಲೂಕು ಮ್ಯಾನೇಜರ್ ಆಗಿರುವ ಕಿರಣ್ ಕುಮಾರ್ ಶೆಟ್ಟಿ ಆಯ್ಕೆಯಾಗಿದ್ದಾರೆ.
ನಿಕಟ ಪೂರ್ವಾಧ್ಯಕ್ಷರಾಗಿ 2017ರ ಯಶಸ್ವಿ ಅಧ್ಯಕ್ಷ ಸುದ್ದಿಬಿಡುಗಡೆ ವಾರ ಪತ್ರಿಕೆಯ ಉದ್ಯೋಗಿ ಸಂತೋಷ್.ಪಿ. ಕೋಟ್ಯಾನ್ ಬಳಂಜ, ಕಾರ್ಯದರ್ಶಿ ಯಾಗಿ ವಿಶಾಲ್ ಅಗಸ್ಟಿನ್ ನಡ, ಕೋಶಾಧಿಕಾರಿಯಾಗಿ ಗುರುರಾಜ್ ಗುರಿಪಳ್ಳ, ಉಪಾಧ್ಯಕ್ಷರಾಗಿ ಪ್ರಶಾಂತ್ ಲಾಯಿಲ, ಸತೀಶ್ ಸುವರ್ಣ ಗೇರು ಕಟ್ಟೆ, ಪ್ರಸಾದ್ ಬಿ.ಎಸ್ ಕಕ್ಕಿಂಜೆ, ರಂಜಿತ್ ಎಚ್.ಡಿ ಬಳಂಜ, ಅಭಿನಂದನ್ ಹರೀಶ್ ಕುಮಾರ್ ನಡ ಆಯ್ಕೆಯಾಗಿರುತ್ತಾರೆ.
ಜೇಸಿರೆಟ್ ಅಧ್ಯಕ್ಷೆಯಾಗಿ ದೀಪಾ ಕಿರಣ್, ಜೊತೆಕಾರ್ಯದರ್ಶಿಯಾಗಿ ಸಂತೋಷ್ ಶೆಟ್ಟಿ, ಜೇಸಿರೆಟ್ ಸಂಯೋಜಕಿಯಾಗಿ ಅಮೃತ ಎಸ್.ಕೋಟ್ಯಾನ್, ಜೂನಿಯರ್ ಜೇಸಿ ಅಧ್ಯಕ್ಷರಾಗಿ ಸುಹಾಸ್ ಶೆಟ್ಟಿ, ಜೂನಿಯರ್ ಜೇಸಿ ಸಂಯೋಜಕರಾಗಿ ಸ್ವಾತಿ, ಮೀಡಿಯ ಕವರೇಜ್ ಸಂಯೋಜಕರಾಗಿ ಗಣೇಶ್ ಶಿರ್ಲಾಲು, ದಾಮೋದರ್, ಬೆಳವಣಿಗೆ ಮತ್ತು ಅಭಿವೃದ್ಧಿ ವಿಭಾಗದ ನಿರ್ದೇಶಕರಾಗಿ ವಿಜಯ್ ನಿಡಿಗಲ್, ಸ್ಪೇಷಲ್ ಪ್ರೊಜೆಕ್ಟ್‌ನ ನಿರ್ದೇಶಕರಾಗಿ ಪ್ರೀತಮ್ ಶೆಟ್ಟಿ, ಎಂಪವರಿಂಗ್ ಯೂತ್ ನಿರ್ದೇಶಕರಾಗಿ ಚಿದಾನಂದ, ಹೇಮಾವತಿ, ಸಾಂಸ್ಕೃತಿಕ ವಿಭಾಗದ ನಿರ್ದೇಶಕರಾಗಿ ಸ್ಮಿತೇಶ್, ಜಿತೇಶ್.
ಕಮ್ಯುನಿಟಿ ಡೆವಲಪ್‌ಮೆಂಟ್ ವಿಭಾಗದ ನಿರ್ದೇಶಕರಾಗಿ ಶಿವಪ್ರಸಾದ್, ಸದಾಶಿವ್ ಕಕ್ಕಿಂಜೆ, ಆಶಾ ಪ್ರಶಾಂತ್, ಟುವಿತ್, ವಿನ್ಸೆಂಟ್ ಲೋಬೋ, ದಯಾನಂದ, ಕಾರ್ಯಕ್ರಮ ವಿಭಾಗದ ನಿರ್ದೇಶಕರಾಗಿ ಸ್ವರೂಪ್, ಜಯರಾಜ್ ನಡಕ್ಕರ, ಗಣೇಶ್ ಚಾರ್ಮಾಡಿ, ಸುರೇಶ್ ಗೌಡ, ವಿನೋದ್ ಚಾರ್ಮಾಡಿ, ಅಕ್ಷತ ನವೀನ್, ತರಬೇತಿ ವಿಭಾಗದ ನಿರ್ದೇಶಕರಾಗಿ ಸಂತೋಷ್ ಬಳಂಜ, ಜನಾರ್ಧನ ಕಾನರ್ಪ, ತನ್ಸೀಫ್ ಕಿಲ್ಲೂರು, ಜಗದೀಶ್ ನಾಲ್ಕೂರು, ಹರಿಪ್ರಸಾದ್ ಐಎಸ್, ವ್ಯವಹಾರ ವಿಭಾಗದ ನಿರ್ದೇಶಕರಾಗಿ ರಕ್ಷಿತ್ ಶೆಟ್ಟಿ, ಯಶವಂತ್ ಗೌಡ, ಯತೀಶ್ ಕೆ.ಎಸ್, ಗುರುರಾಜ್ ಕಿಲ್ಲೂರು, ರತೀಶ್ ರಾವ್, ಜೇಸಿ ಬುಲೆಟಿಂಗ್ ಸಂಪಾದಕರಾಗಿ ಚಂದ್ರಹಾಸ್ ಬಳಂಜ ಆಯ್ಕೆ ಯಾಗಿರುತ್ತಾರೆ. ಹಾಗೂ ಘಟಕದ ಎಲ್ಲಾ ಪೂರ್ವಾಧ್ಯಕ್ಷರುಗಳು ಗೌರವ ಸಲಹೆಗಾರ ಮಂಡಳಿಯಲ್ಲಿರುತ್ತಾರೆ. ಈ ಸಂದರ್ಭದಲ್ಲಿ ಅಧ್ಯಕ್ಷ ಸಂತೋಷ್.ಪಿ.ಕೋಟ್ಯಾನ್ ಬಳಂಜ, ವಲಯಾಧಿಕಾರಿ ನಿಕಟ ಪೂರ್ವಾಧ್ಯಕ್ಷ ವಸಂತ ಶೆಟ್ಟಿ, ವಲಯಾಧಿಕಾರಿ ಚಿದಾನಂದ ಇಡ್ಯಾ, ಪೂರ್ವಾಧ್ಯಕ್ಷರುಗಳು ಹಾಗೂ ಜೆಸಿಐನ ಎಲ್ಲಾ ಪದಾಧಿಕಾರಿಗಳ ಸಮ್ಮುಖದಲ್ಲಿ ಪದಾಧಿಕಾರಿಗಳ ಸಮಿತಿಯನ್ನು ರಚಿಸಲಾಯಿತು.

sowthadka shilanyasaಕೊಕ್ಕಡ : ಶ್ರೀಕ್ಷೇತ್ರ ಸೌತಡ್ಕ ಕ್ಷೇತ್ರದಲ್ಲಿ ಬಯಲು ಆಲಯದ ಗಣೇಶನ ಕಟ್ಟೆಯ ಹಿಂಭಾಗದಲ್ಲಿ ಅಂದಾಜು ರೂ. ೫೦ ಲಕ್ಷ ವೆಚ್ಚದಲ್ಲಿ ಪಶ್ಚಿಮ ಭಾಗದ ನೂತನ ಗೋಪುರದ ಕಟ್ಟಡ ನಿರ್ಮಾಣದ ಶಂಕುಸ್ಥಾಪನೆಯು ಡಿ.11 ರಂದು ನಡೆಯಿತು.
ಶಾಸಕ ಕೆ. ವಸಂತ ಬಂಗೇರ ನೂತನ ಗೋಪುರ ಕಾಮಗಾರಿಗೆ ಶಂಕುಸ್ಥಾಪನೆ ನೆರವೇರಿಸಿ ಮಾತನಾಡಿ, ಶ್ರೀ ಕ್ಷೇತ್ರ ಸೌತಡ್ಕವು ಜಿಲ್ಲೆಯ ಎ ಗ್ರೇಡ್ ದೇವಳವಾಗಿದ್ದು ದಿನಂಪ್ರತಿ ಸಾವಿರಾರು ಊರ ಪರವೂರ ಭಕ್ತಾದಿಗಳು ಕ್ಷೇತ್ರವನ್ನು ಸಂದರ್ಶಿಸುತ್ತಿದ್ದಾರೆ. ಭಕ್ತರ ಅನುಕೂಲಕ್ಕಾಗಿ ಈ ಅಭಿವೃದ್ದಿ ಕಾರ್ಯಗಳನ್ನು ದೇವಳದ ವತಿಯಿಂದ ನಡೆಸಲಾಗುತ್ತಿದ್ದು ಗೋಪುರದ ಕೆಲಸ ಕಾರ್ಯವು ಶೀಘ್ರವಾಗಿ ನಡೆಯಲು ಶ್ರೀ ಮಹಾಗಣಪತಿ ದೇವರು ಅನುಗ್ರಹಿಸಲಿ ಎಂದರು.
ಕುಕ್ಕೆ ಶ್ರೀ ಸುಬ್ರಹ್ಮಣ್ಯ ಕ್ಷೇತ್ರದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ನಿತ್ಯಾನಂದ ಮುಂಡೋಡಿ ಯವರು ಶುಭಹಾರೈಸಿದರು. ಅತಿಥಿಗಳಾಗಿ ಸೌತಡ್ಕ ಕ್ಷೇತ್ರದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಕೆ. ಸುಬ್ರಹ್ಮಣ್ಯ ಶಬರಾಯ, ಸದಸ್ಯರುಗಳಾದ ಕೆ.ವಿಶ್ವನಾಥ ಕೊಲ್ಲಾಜೆ, ಪಿ. ವಿಶ್ವನಾಥ ಶೆಟ್ಟಿ, ಪ್ರಶಾಂತ್ ರೈ, ಅಣ್ಣಪ್ಪ ಗೌಡ ಕಾಶಿ, ಗಣೇಶ್ ಪಿ.ಕೆ., ಸಿನಿ ಗುರುದೇವನ್, ಸೌಮ್ಯ, ಅರ್ಚಕ ಸದಸ್ಯರಾದ ಸತ್ಯಪ್ರಿಯ ಕಲ್ಲೂರಾಯ, ಮುಖ್ಯ ಕಾರ್ಯನಿರ್ವಹಣಾಧಿಕಾರಿ ಹರಿಶ್ಚಂದ್ರ, ರಾಜ್ಯ ಸರಕಾರಿ ನೌಕರರ ಸಂಘ ಬೆಳ್ತಂಗಡಿ ತಾಲೂಕು ಅಧ್ಯಕ್ಷ ಡಾ. ಜಯಕೀರ್ತಿ ಜೈನ್, ಕೊಕ್ಕಡ ಗ್ರಾ.ಪಂ. ಅಧ್ಯಕ್ಷ ವಿ.ಜೆ. ಸೆಬಾಸ್ಟಿಯನ್, ಮಾಜಿ ಅಧ್ಯಕ್ಷ ಜಯಪ್ರಕಾಶ್ ಬಾಳ್ತಿಲ್ಲಾಯ ಉಪಸ್ಥಿತರಿದ್ದರು. ಅಧ್ಯಕ್ಷ ಕೆ. ಸುಬ್ರಹ್ಮಣ್ಯ ಶಬರಾಯ ಸ್ವಾಗತಿಸಿ ವಂದಿಸಿದರು.

dharmasthala skdrp ge prasastiಧರ್ಮಸ್ಥಳ : ಧರ್ಮಸ್ಥಳದ ಧರ್ಮಾಧಿಕಾರಿ ಡಾ| ಡಿ. ವೀರೇಂದ್ರ ಹೆಗ್ಗಡೆಯವರ ನೇತೃತ್ವದಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯು ಕಿರು ಆರ್ಥಿಕ ಕ್ಷೇತ್ರದ ಪ್ರಗತಿಗೆ ನೀಡಿದ ಕೊಡುಗೆಯನ್ನು ಮನ್ನಿಸಿ ಆಕ್ಸೆಸ್ ಸಂಸ್ಥೆ ನೀಡಿದ `ಇನ್‌ಕ್ಲೂಸಿವ್ ಫೈನಾನ್ಸ್ ಇಂಡಿಯಾ ಪ್ರಶಸ್ತಿ’ಯನ್ನು ಹೆಗ್ಗಡೆಯವರ ಪರವಾಗಿ ಅವರ ಸಹೋದರ ಡಿ. ಸುರೇಂದ್ರ ಕುಮಾರ್ ಮತ್ತು ಗ್ರಾಮಾಭಿವೃದ್ಧಿಯೋಜನೆಯ ಕಾರ್ಯಕರ್ತರು ಡಿ.11ರಂದು ದೆಹಲಿಯಲ್ಲಿ ಸ್ವೀಕರಿಸಿದರು.
ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಕಿರು ಆರ್ಥಿಕ ವ್ಯವಹಾರದ ಸಾಧನೆಗಾಗಿ ಸಂಸ್ಥೆಯ ಅಧ್ಯಕ್ಷ ಡಾ. ಡಿ. ವೀರೇಂದ್ರ ಹೆಗ್ಗಡೆ ಅವರಿಗೆ ರಾಷ್ಟ್ರದ ಪ್ರತಿಷ್ಠಿತ ಇನ್‌ಕ್ಲೂಸಿವ್ ಫೈನಾನ್ಸ್ ಇಂಡಿಯಾ ಪ್ರಶಸ್ತಿ ನೀಡಲಾಗಿದೆ. ಅನೇಕ ವಿಭಾಗಗಳಲ್ಲಿ ಸಂಸ್ಥೆಗಳು ಹಾಗೂ ವೈಯಕ್ತಿಕ ಪ್ರಶಸ್ತಿ ಘೋಷಣೆ ಮಾಡಲಾಗಿದ್ದು, ಭಾರತದಲ್ಲಿ ಆರ್ಥಿಕ ಸೇರ್ಪಡೆಗೆ ಬೆಂಬಲ ನೀಡುವ ಧೀರ್ಘಕಾಲದ ಕೊಡುಗೆ ನೀಡುವ ವ್ಯಕ್ತಿಯಾಗಿ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಅಧ್ಯಕ್ಷರನ್ನು ವೈಯಕ್ತಿಕ ಪ್ರಶಸ್ತಿಗಾಗಿ ಆಯ್ಕೆ ಮಾಡಲಾಗಿದೆ.
ಕಿರು ಆರ್ಥಿಕ ಕ್ಷೇತ್ರದ ಬೆಳವಣಿಗೆ, ಸ್ವಾವಲಂಬನೆ ಮೂಲಕ ಕಿರು ಆರ್ಥಿಕ ವ್ಯವಹಾರವನ್ನು ವಿಸ್ತರಿಸಿ ಅದನ್ನು ಸ್ಥಿರವಾಗಿಸಿ, ಅಡೆತಡೆಗಳ ಹೊರತಾಗಿಯೂ ಅವಿಶ್ರಾಂತ ಪ್ರಯತ್ನಗಳ ಮೂಲಕ ಸಾಧನೆಗೆ ಕಾರಣವಾಗುವ ವ್ಯಕ್ತಿಗಳು ಮತ್ತು ಸಂಸ್ಥೆಗಳಿಗೆ ಈ ಪ್ರಶಸ್ತಿಯನ್ನು ೨೦೦೯ರಿಂದ ನೀಡಲಾಗುತ್ತಿದೆ.

ಇಂದಿನ ಕಾರ್ಯಕ್ರಮ

ಶಿಕ್ಷಣ ಮಾರ್ಗದರ್ಶಿ

ಹಿಂದಿನ ಸುದ್ದಿಗಳು

December 2017
M T W T F S S
« Nov    
 123
45678910
11121314151617
18192021222324
25262728293031

ನಮ್ಮ ಬಗ್ಗೆ

ಮೊದಲಿಗೆ ಕೇವಲ ಒಂದು ಹಾಳೆಯಲ್ಲಿ ಪ್ರಕಟವಾಗುತ್ತಿದ್ದ ಬೆಳ್ತಂಗಡಿ ತಾಲೂಕಿನ “ಸುದ್ದಿ ಬಿಡುಗಡೆ “ಪತ್ರಿಕೆ ಇಂದು ಪ್ರತಿದಿನ  22
.. ಮುಂದೆ ಓದಿ

ಸಲಹೆ- ಸೂಚನೆ

ನಿಮ್ಮ ಸಲಹೆ ಸೂಚನೆಗಳಿಗೆ ಹಾರ್ದಿಕ ಸ್ವಾಗತ

ಇಲ್ಲಿ ಕ್ಲಿಕ್ಕಿಸಿ

Copyright © 2017 Suddinews.com . All Rights Reserved.
^ Back to Top