Sun 20 Aug 2017, 6:50PM

ಹೆಚ್ಚಿನ ಸುದ್ದಿಗಳು

Pranamraj M Kಶಿರ್ಲಾಲು : ಕರಂಬಾರು ಗ್ರಾಮದ ಕಾಜಿಮುಗೇರು ನಿವಾಸಿ, ಶಿರ್ಲಾಲು ಗ್ರಾ.ಪಂ ಮಾಜಿ ಅಧ್ಯಕ್ಷ ಪುಷ್ಪರಾಜ್ ಎಂ.ಕೆ ಮತ್ತು ಮಧುರಾಜ್ ದಂಪತಿ ಪುತ್ರ ಪ್ರಣಮ್‌ರಾಜ್ ಅವರ 2 ನೇ ವರ್ಷದ ಹುಟ್ಟುವನ್ನು ಆ. 11 ರಂದು ಆಚರಿಸಲಾಯಿತು.

Sujanyaಶಿರ್ಲಾಲು ಗ್ರಾಮದ ಜಾರ್‍ಯೊಟ್ಟು ನಾರಾಯಣ ಗೌಡ ಮತ್ತು ಪ್ರೇಮ ದಂಪತಿ ಪುತ್ರಿ ಸುಜನ್ಯಾಳ 7ನೇ ವರ್ಷದ ಹುಟ್ಟುಹಬ್ಬವನ್ನು ಆ.12ರಂದು ಆಚರಿಸಲಾಯಿತು.

Thrisha newsಲಾಯಿಲ ಗ್ರಾಮದ ಎಣಿಂಜೆ ಪ್ರಶಾಂತ್ ಶೆಟ್ಟಿ ಮತ್ತು ಶಶಿಕಲಾ ದಂಪತಿ ಪುತ್ರಿ ತ್ರಿಶಾ ಇವಳ ಪ್ರಥಮ ವರ್ಷದ ಹುಟ್ಟುಹಬ್ಬವನ್ನು ಆ.11ರಂದು ಆಚರಿಸಲಾಯಿತು.

Dhanyashreeಧರ್ಮಸ್ಥಳ ಕೂಟದಕಲ್ಲು ಅಮ್ಮಶ್ರೀ ನಿಲಯದ ಶ್ರೀಮತಿ ಗುಣವತಿ ಮತ್ತು ಸುಂದರ ಡಿ. ಯವರ ಪುತ್ರಿ ಧನ್ಯಶ್ರೀಯ 6ನೇ ವರುಷದ ಹುಟ್ಟುಹಬ್ಬವನ್ನು ಆ.10ರಂದು ಆಚರಿಸಲಾಯಿತು.

Dhanvithಧರ್ಮಸ್ಥಳ ಕೂಟದಕಲ್ಲು ಅಮ್ಮಶ್ರೀ ನಿಲಯದ ಶ್ರೀಮತಿ ಗುಣವತಿ ಮತ್ತು ಸುಂದರ ಡಿ. ಯವರ ಪುತ್ರ ಧನ್ವಿತ್‌ನ 3ನೇ ವರ್ಷದ ಹುಟ್ಟುಹಬ್ಬವನ್ನು ಜು.18ರಂದು ಆಚರಿಸಲಾಯಿತು.

belthangady swaccha bharata abhiyana1

belthangady swaccha bharata abhiyanaಬೆಳ್ತಂಗಡಿ : ಇಲ್ಲಿಯ ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ಸ್ಥಳೀಯ ಸಂಸ್ಥೆ, ಪಟ್ಟಣ ಪಂಚಾಯತ್, ಬೆಳ್ತಂಗಡಿ, ರೋಟರಿ ಕ್ಲಬ್ ಬೆಳ್ತಂಗಡಿ ಮತ್ತು ಶ್ರೀ ಧ. ಮಂ. ಆಂಗ್ಲ ಮಾಧ್ಯಮ ಶಾಲೆ ಬೆಳ್ತಂಗಡಿ ಇವರ ಸಹಯೋಗದಲ್ಲಿ ಸ್ಕೌಟ್ಸ್/ಗೈಡ್/ಕಬ್/ಬುಲ್‌ಬುಲ್ ಮಕ್ಕಳ ಬಯಲು ಶೌಚ ಮುಕ್ತ – ಸ್ವಚ್ಛ ಭಾರತ – ಅಭಿಯಾನವು ಆ.19(ಇಂದು) ನಡೆಯಿತು.
ಕ್ಷೇತ್ರ ಶಿಕ್ಷಣಾಧಿಕಾರಿಗಳು ಮತ್ತು ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ಸ್ಥಳೀಯ ಸಂಸ್ಥೆಯ ಕಾರ್ಯಾಧ್ಯಕ್ಷರು ಎ. ಎನ್. ಗುರುಪ್ರಸಾದ, ಕೆ. ಇ. ಎಸ್., ಉದ್ಘಾಟಿಸಿದರು.
ಅಧ್ಯಕ್ಷತೆಯನ್ನು ಬಿ. ವಿಠಲ ಶೆಟ್ಟಿ ವಹಿಸಿದ್ದು, ಅತಿಥಿಗಳಾಗಿ ಬೆಳ್ತಂಗಡಿ ರೋಟರಿ ಕ್ಲಬ್ ಅದ್ಯಕ್ಷ ರೊ. ಡಾ. ಸುಧೀರ್ ಪ್ರಭು ಮತ್ತು ಧ.ಮಂ ಶಿಕ್ಷಣ ಸಂಸ್ಥೆಗಳ ವಿದ್ಯಾರ್ಥಿ ಕ್ಷೇಮಪಾಲನಾ ಅಧಿಕಾರಿ ಸೋಮಶೇಖರ ಶೆಟ್ಟಿ ಬಿ., ಮಾಜಿ ಸೈನಿಕ ಸಂಘದ ಅಧ್ಯಕ್ಷರು ಸುನೀಲ್ ಶೆಣೈ, ಎಲ್.ಟಿ ಕ್ಲಬ್ ಲೀಡರ್ ರಮೇಶ ಆಚಾರಿ, ಸ್ಕೌಟ್ ಎಸಿಸ್ಟೆಂಟ್ ದ.ಕ ಕಮಿಷನರ್ ವಾಲ್ಟರ್ ಜಿ. ಪಿಂಟೋ, ಆನ್ಸ್ ಕಾರ್ಯದರ್ಶಿ ಶೈಲಾ. ಎ. ಕಾಮತ್ ಆಗಮಿಸಿದ್ದರು.

kulala ati koota 1ಗುರುವಾಯನಕೆರೆ: ಬೆಳ್ತಂಗಡಿ ತಾಲೂಕು ಮೂಲ್ಯರ ಯಾನೆ ಕುಂಬಾರರ ಸೇವಾ ಸಂಘ ಗುರುವಾಯನಕೆರೆ, ಕುಲಾಲ ಕುಂಬಾರರ ಯುವ ವೇದಿಕೆ ಇದರ ಆಶ್ರಯದಲ್ಲಿ ಕುಲಾಲ ಕುಂಬಾರ ಸಾಂಸ್ಕೃತಿಕ ಸಮಿತಿ ಮತ್ತು ಕುಲಾಲ ಕುಂಬಾರ ಕ್ರೀಡಾ ಸಮಿತಿ ಗುರುವಾಯನಕೆರೆ ಇದರ ಸಹಯೋಗದಲ್ಲಿ `ಆಟಿಡೊಂಜಿ ದಿನ’ ಕಾರ್ಯಕ್ರಮ ಆ.13ರಂದು ಕುಲಾಲ ಮಂದಿರದಲ್ಲಿ ಜರುಗಿತು.
ಕಾರ್ಯಕ್ರಮವನ್ನು ಯುವ ವೇದಿಕೆ ಲಾಯಿಲ ಜಿ.ಪಂ. ಸಂಚಾಲಕ ಪುಷ್ಪರಾಜ್ ಕುಲಾಲ್ ಉದ್ಘಾಟಿಸಿದರು. ಅಧ್ಯಕ್ಷತೆಯನ್ನು ಕುಲಾಲ ಕುಂಬಾರರ ಯುವ ವೇದಿಕೆ ಅಧ್ಯಕ್ಷ ಲೋಕೇಶ್ ಕುಲಾಲ್ ವಹಿಸಿದ್ದರು. ಮೂಲ್ಯರ ಯಾನೆ ಕುಲಾಲರ ಸಂಘದ ತಾಲೂಕು ಕಾರ್ಯದರ್ಶಿ ಮೋಹನ್ ಕಂಚಿಂಜ, ಅಶ್ವಿತ್ ಕುಲಾಲ್ ಓಡೀಲು, ಹರಿಶ್ಚಂದ್ರ ಮೂಲ್ಯ ಉಪಸ್ಥಿತರಿದ್ದರು. ಬಳಿಕ ಆಟಿಡೊಂಜಿ ದಿನದ ವಿವಿಧ ರೀತಿಯ ಮನೋರಂಜನೆಗಳು ಮತ್ತು ಮಕ್ಕಳ ಆಟಿ-ಆಟೋಟಗಳು ನಡೆಯಿತು. ಬಳಿಕ ನಡೆದ ಸಭಾ ಕಾರ್ಯಕ್ರಮದಲ್ಲಿ ದಿಕ್ಸೂಚಿ ಭಾಷಣ ಮಾಡಿದ ಯಕ್ಷಗಾನ ಕಲಾವಿದ ಮತ್ತು ಛಾಯಾ ಗ್ರಾಹಕ ನಂದ ಕುಮಾರ್ ಅವರು ಹಿಂದೆ ನಮ್ಮ ಹಿರಿಯರು ಆಟಿ ತಿಂಗಳಲ್ಲಿ ನಡೆಸುತ್ತಿದ್ದ ಕಷ್ಟದ ಜೀವನ, ಉಟೋಪಚಾರಗಳನ್ನು ನೆನಪಿಸಿ, ನಸಿಸುತ್ತಿರುವ ತುಳುನಾಡ ಪರಂಪರೆಯ ಆಚರಣೆಯ ಮಹತ್ವವನ್ನು ನಮ್ಮ ಮುಂದಿನ ಪೀಳಿಗೆಗೆ ತಿಳಿಯಪಡಿಸುವುದು ಈ ಕಾರ್ಯಕ್ರಮದ ಮುಖ್ಯ ಉದ್ದೇಶವಾಗಿದೆ ಎಂದರು. ನಮ್ಮಲ್ಲಿ ಸಂಘಟನೆ ಬೇಕು, ಪರಸ್ಪರ ಬೆರೆತು ವರ್ಷಕ್ಕೊಮ್ಮೆ ಇಂತಹ ಕಾರ್ಯಕ್ರಮಗಳ ಮೂಲಕ ನಮ್ಮ ಒಗ್ಗಟ್ಟನ್ನು ಪ್ರದರ್ಶಿಸುವುದರ ಜೊತೆಗೆ ನಮ್ಮ ಸಂಸ್ಕೃತಿ, ಸಾಂಪ್ರದಾಯವನ್ನು ಉಳಿಸಿ ಬೆಳೆಸುವಲ್ಲಿ ಆಟಿಡೊಂಜಿ ದಿನ ಕಾರ್ಯಕ್ರಮ ಪೂರಕವಾಗಿದೆ ಎಂದರು.
ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ಮೂಲ್ಯರ ಯಾನೆ ಕುಂಬಾರರ ಸೇವಾ ಸಂಘದ ಉಪಾಧ್ಯಕ್ಷ ದಿನಕರ ಬಂಗೇರ ಖಂಡಿಗ ಮಾತನಾಡಿ ನಮ್ಮ ಹಿರಿಯರು ಬಹಳಷ್ಟು ಕಷ್ಟಪಟ್ಟು ಕುಲಾಲ ಮಂದಿರವನ್ನು ನಿರ್ಮಿಸಿದ್ದಾರೆ. ಅವರು ಹಾಕಿಕೊಟ್ಟ ಪರಂಪರೆಯ ಹಾದಿಯಲ್ಲಿ ನಾವು ನಡೆಯಬೇಕು, ನಮ್ಮ ಸಮಾಜ, ಧರ್ಮ, ಸಂಸ್ಕೃತಿಯ ರಕ್ಷಣೆಯ ಜೊತೆಗೆ ನೂತನವಾಗಿ ಕಲಾಮಂದಿರವನ್ನು ನಿರ್ಮಿಸಲು ಎಲ್ಲರ ಸಹಕಾರ ಬೇಕು ಎಂದು ತಿಳಿಸಿದರು. ಹಿರಿಯರಾದ ಕರಿಯ ಮೂಲ್ಯ ಪಾಡ್ದನ ಹೇಳಿ ರಂಜಿಸಿದರು.
ಮುಖ್ಯ ಅತಿಥಿಗಳಾಗಿ ಪ್ರಥಮ ದರ್ಜೆ ಗುತ್ತಿಗೆದಾರ ದಯಾನಂದ ಕುಲಾಲ್ ಸಂಜಯನಗರ, ಕುಲಾಲ ಕುಂಬಾರ ಯುವ ವೇದಿಕೆ ಅಧ್ಯಕ್ಷ ಲೋಕೇಶ್ ಕುಲಾಲ್, ಕುಲಾಲ ಕುಂಬಾರ ಸಾಂಸ್ಕೃತಿಕ ಸಮಿತಿ ಅಧ್ಯಕ್ಷ ಅಶ್ವಿತ್ ಮೂಲ್ಯ ಓಡೀಲು ಭಾಗವಹಿಸಿದ್ದರು. ಕಾರ್ಯಕ್ರಮದಲ್ಲಿ ಕುಲಾಲ ಕುಂಬಾರ ಸಾಂಸ್ಕೃತಿಕ ಸಮಿತಿ ಗೌರವಾಧ್ಯಕ್ಷ ಉಮೇಶ್ ಕುಲಾಲ್, ಕುಂಬಾರರ ಯುವ ವೇದಿಕೆ ರಾಜ್ಯ ಸಂಘಟನಾ ಕಾರ್ಯದರ್ಶಿ ಹರೀಶ್ ಕಾರಿಂಜ, ಕುಲಾಲ ಕುಂಬಾರ ರಾಜ್ಯ ಸಂಘಟನಾ ಸಂಚಾಲಕ ಪದ್ಮಕುಮಾರ್ ಬೆಳ್ತಂಗಡಿ, ಸುದ್ದಿಬಿಡುಗಡೆ ಪತ್ರಿಕೆಯ ಪ್ರಧಾನ ವರದಿಗಾರ ಬಿ.ಎಸ್ ಕುಲಾಲ್ ಬೆಳ್ತಂಗಡಿ ಮೊದಲಾದವರು ಉಪಸ್ಥಿತರಿದ್ದರು.
ಮುಖೇಶ್ ಕುಲಾಲ್ ಪಾಂಡೇಶ್ವರ ಸ್ವಾಗತಿಸಿದರು. ಯುವ ವೇದಿಕೆ ಲಾಯಿಲ ಸಂಚಾಲಕ ಪುಷ್ಪರಾಜ ಕುಲಾಲ್ ಕಾರ್ಯಕ್ರಮ ನಿರೂಪಿಸಿ, ಅಶ್ವಿತ್ ಮೂಲ್ಯ ಓಡೀಲು ವಂದಿಸಿದರು. ನಂತರ ಆಟಿಯ ವಿಶೇಷ ತಿಂಡಿಗಳ ಪ್ರದರ್ಶನ ಮತ್ತು ಭೋಜನ ನಡೆಯಿತು.

belthangady ganigara sanga prathibha puraskaraಲಾಯಿಲ: ಬೆಳ್ತಂಗಡಿ ಗಾಣಿಗರ ಯಾನೆ ಸಫಲಿಗರ ಸಂಘ ಇದರ ತಾಲೂಕು ಗಾಣಿಗರ ಸಭೆ ಹಾಗೂ ಸ್ವಜಾತಿ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ಮತ್ತು ಪ್ರಾಥಮಿಕ ಶಾಲಾ ಮಕ್ಕಳಿಗೆ ಪುಸ್ತಕ ವಿತರಣೆ ಕಾರ್ಯಕ್ರಮ ಆ.13 ರಂದು ಬೆಳ್ತಂಗಡಿ ಅಂಬೇಡ್ಕರ್ ಭವನದಲ್ಲಿ ಜರುಗಿತು.
ಸಭೆಯ ಅಧ್ಯಕ್ಷತೆಯನ್ನು ಸಂಘದ ಅಧ್ಯಕ್ಷ ಲಕ್ಷ್ಮಣ ಸಪಲ್ಯ ವಹಿಸಿ ಪ್ರತಿಭೆಗಳಿಗೆ ಬೆಂಬಲ ನೀಡುವ ಸಲುವಾಗಿ ವಿದ್ಯಾರ್ಥಿಗಳು ಶಿಕ್ಷಣದ ಸದುಪಯೋಗ ಪಡೆಯಬೇಕು, ಮತ್ತು ಶಿಕ್ಷಣಕ್ಕೆ ಜಾಸ್ತಿ ಒತ್ತು ನೀಡಬೇಕೆಂದು, ತಂದೆ ತಾಯಿಗಳ ಜವಾಬ್ದಾರಿಗಾಗಿ ಈ ರೀತಿಯ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ ಎಂದರು. ಮುಖ್ಯ ಅತಿಥಿಗಳಾಗಿ ಆಗಮಿಸಿದ ಮಂಗಳೂರು ತಾಲೂಕು ಗಾಣಿಗರ ಸಂಘದ ಅಧ್ಯಕ್ಷ ನಾರಾಯಣ ಕಣ್ಣೂರು ಮಾತಾಡಿ ಸಂಘದ ಸದುಪಯೋಗ, ಜವಾಬ್ದಾರಿ ಮತ್ತು ಸಂಘಟನೆಯ ಬಗ್ಗೆ ವಿವರಿಸಿದರು. ಪ್ರಧಾನ ಕಾರ್ಯದರ್ಶಿ ಜಯಕುಮಾರ್ ಮಾತಾಡಿ ಸಂಘಟನೆ ನಡೆದು ಬಂದ ಹಾದಿ ಮತ್ತು ಕೆಲವು ಕಾರ್ಯಕ್ರಮಗಳ ಬಗ್ಗೆ ತಿಳಿಸಿದರು. ವೇದಿಕೆಯಲ್ಲಿ ಮಹಿಳಾ ಘಟಕದ ಅಧ್ಯಕ್ಷ ತಾಲೂಕು ಪಂಚಾಯತ್ ಸದಸ್ಯೆ ಧನಲಕ್ಷ್ಮಿ ಜನಾರ್ಧನ, ಉಪಾಧ್ಯಕ್ಷರಾದ ಕೇಶವ ಗಾಣಿಗ, ಜಯರಾಮ್ ಓಡದ ಕರಿಯ, ಸಂಘದ ಜೊತೆ ಕಾರ್ಯದರ್ಶಿ ಸದಾಶಿವ, ಕೋಶಾಧಿಕಾರಿ ಗಣೇಶ ಕನ್ನಾಜೆ ಉಪಸ್ಥಿತರಿದ್ದರು. ಯು.ಆರ್ ಜಯಪ್ರಕಾಶ್ ನಿರೂಪಿಸಿದ ಕಾರ್ಯಕ್ರಮದಲ್ಲಿ ನಾಗೇಶ ಕಲ್ಲಗುಡ್ಡೆ ವಿದ್ಯಾರ್ಥಿಗಳ ಪಟ್ಟಿ ವಾಚಿಸಿದರು. ಉದಯ್ ಕುಮಾರ್ ಲಾಯಿಲ ಸ್ವಾಗತಿಸಿ, ಸತೀಶ್ ಓಡದ ಕರಿಯ ಧನ್ಯವಾದವಿತ್ತರು ಕನ್ನಾಜೆ ಘಟಕ ಕಾರ್ಯಕ್ರಮ ಯಶಸ್ವಿಗೆ ಸಹಕರಿಸಿತು.

dhanalakshmi gold fetivalಉಜಿರೆ : ಶ್ರೀ ಧನಲಕ್ಷ್ಮೀ ಜ್ಯುವೆಲ್ಲರ್‍ಸ್ ತಮ್ಮ ಗ್ರಾಹಕರಿಗೆ ಆಯೋಜಿಕೊಂಡು ಬಂದಿರುವ ಗೋಲ್ಡ್ ಫೆಸ್ಟಿವಲ್ 2017ರ ಡ್ರಾ ಆ.15 ರಂದು ಉಜಿರೆ ಪೇಟೆಯಲ್ಲಿರುವ ಶ್ರೀ ಧನಲಕ್ಷ್ಮೀ ಜ್ಯುವೆಲ್ಲರ್‍ಸ್ ಮಳಿಗೆಯಲ್ಲಿ ಜರಗಿತು.
ಬೆಳ್ತಂಗಡಿಯ ಭಾರತೀಯ ಸ್ಟೇಟ್ ಬ್ಯಾಂಕ್ ಮೆನೇಜರ್ ಶೀನಪ್ಪ ನಾಯ್ಕ, ಧರ್ಮಸ್ಥಳದ ವ್ಯಾಪಾರಿ ಶಿವಾನಂದ ಶೆಟ್ಟಿ, ಮಾಜಿ ಸೈನಿಕ ಶ್ರೀನಿವಾಸ, ಉಜಿರೆ ಶ್ರೀ.ಧ.ಮಂ ಆಂಗ್ಲ ಮಾಧ್ಯಮ(ಸಿಬಿಎಸ್) ಶಾಲಾ ಮುಖ್ಯೋಪಾಧ್ಯಾಯ ಮನಮೋಹನ್ ನಾಯ್ಕ್, ಸಂಸ್ಥೆಯ ಮಾಲಕರ ತಂದೆ ಕೆ. ಬಾಲಕೃಷ್ಣ ಆಚಾರ್ಯ ಇವರುಗಳು ಗ್ರಾಹಕರ ಸಮ್ಮುಖದಲ್ಲಿ ಕಾಯಿನ್ ಸಿಸ್ಟಮ್ ಮೂಲಕ ಡ್ರಾ ತೆಗೆದು ಅದೃಷ್ಟಶಾಲಿಗಳ ಆಯ್ಕೆ ಮಾಡಿದರು. ಹಾಗೂ ಮಳಿಗೆಯಲ್ಲಿ ಚಾಲ್ತಿಯಲ್ಲಿರುವ 26 ಗುಂಪುಗಳ ಸದಸ್ಯರಿಗೂ ಪ್ರತಿಯೊಂದು ಗುಂಪಿನ ಓರ್ವ ಅದೃಷ್ಟಶಾಲಿಯನ್ನು ಡ್ರಾ ಮೂಲಕ ಆಯ್ಕೆ ಮಾಡಲಾಯಿತು.
ಗೋಲ್ಡ್ ಫೆಸ್ಟಿವಲ್‌ಗೆ ಸಹಕರಿಸುತ್ತಿರುವ ಗ್ರಾಹಕರಿಗೆ ಮಾಲಕರಾದ ಕೆ.ರಮೇಶ್ ಕುಮಾರ್ ಕೃತಜ್ಞತೆ ಸಲ್ಲಿಸಿದರು. ಶ್ರೀಮತಿ ಮೋಹಿನಿ ಬಾಲಕೃಷ್ಣ ಆಚಾರ್ಯ, ಶ್ರೀಮತಿ ರೂಪಕಲ ಆರ್.ಕುಮಾರ್, ಸಹೋದರರಾದ ಕೆ.ಹರೀಶ್ ಕುಮಾರ್, ಕೆ.ರಾಜೇಶ್ ಕುಮಾರ್, ಗ್ರಾಹಕರುಗಳು, ಸಿಬ್ಬಂದಿ ವರ್ಗದವರು ಉಪಸ್ಥಿತರಿದ್ದರು. ಉಜಿರೆ ಶ್ರೀ.ಧ.ಮಂ ಕಾಲೇಜಿನ ಉಪನ್ಯಾಸಕ ಶ್ರೀಧರ ಭಟ್ ಕಾರ್ಯಕ್ರಮ ನಿರೂಪಿಸಿದರು.

ss woodಉಜಿರೆ: ಇಲ್ಲಿಯ ಅನುಗ್ರಹ ಶಾಲೆಯ ಹತ್ತಿರದ ಟ್ರಿನಿಟಿ ಕಾಂಪ್ಲೆಕ್ಸ್‌ನಲ್ಲಿ ಕಂಪ್ಯೂಟರೀಕೃತ ಮರದ ಕೆತ್ತನೆಯ ಇಂಡಸ್ಟ್ರಿ ಎಸ್. ಎಸ್. ವುಡ್ ಆರ್ಟ್ಸ್ ಆ.17 ರಂದು ಶುಭಾರಂಭಗೊಂಡಿತು.

ನೂತನ ಸಂಸ್ಥೆಯನ್ನು ಧರ್ಮಸ್ಥಳ ಶ್ರೀ ಡಿ.ಎಂ ಕನ್‌ಸ್ಟ್ರಕ್ಷನ್‌ನ ಮೇನೆಜರ್ ಸಿ. ಗೋಪಾಲಕೃಷ್ಣ ಮೆನನ್ ಉದ್ಘಾಟಿಸಿ ಶುಭ ಹಾರೈಸಿದರು. ಮುಖ್ಯ ಅತಿಥಿಗಳಾಗಿ ಉಜಿರೆ ಶ್ರೀ.ಧ.ಮಂ ಕಾಲೇಜಿನ ವಾಣಿಜ್ಯ ವಿಭಾಗದ ಮುಖ್ಯಸ್ಥ ಡಾ. ಉದಯಚಂದ್ರ ಪಿ.ಎನ್, ಉಜಿರೆ ಗ್ರಾಮ್ ಪಂಚಾಯತ್ ಅಧ್ಯಕ್ಷ ಕೆ. ಶ್ರೀಧರ ಪೂಜಾರಿ, ಬಂಗಾಡಿ ಪ್ರಾ.ಕೃ.ಪ ಸಹಕಾರಿ ಸಂಘದ ಅಧ್ಯಕ್ಷ ಎನ್. ಲಕ್ಷಣ ಗೌಡ, ಕಟ್ಟಡದ ಮಾಲಿಕ ದೇವಸ್ಯ ಭಾಗವಹಿಸಿದ್ದರು.
ತಾಲೂಕು ಪಂಚಾಯತ್ ಮಾಜಿ ಸದಸ್ಯರಾದ ಗಣೇಶ್ ಕಣಾಲ್ ಶ್ರೀಮತಿ ಸುನೀತಾ ಶ್ರೀಧರ್ ಧರ್ಮಸ್ಥಳ, ಬೆಳ್ತಂಗಡಿ ಶ್ರೀ ಗುರು ನಾರಾಯಣ ಸ್ವಾಮಿ ಸೇವಾ ಸಂಘದ ನಿರ್ದೇಶಕ ಚಂದ್ರಶೇಖರ, ಮಾಲಕರ ತಂದೆ ಶೇಖರ ಪೂಜಾರಿ, ತಾಯಿ ಶ್ರೀಮತಿ ಸುಶೀಲ ಶೇಖರ ಪೂಜಾರಿ, ಸಹೋದರರಾದ ಸಂದೀಪ್, ಸುದೀಪ್, ಪ್ರಕಾಶ್ ಪರಾರಿ ಇನ್ನಿತರ ಗಣ್ಯರು ಉಪಸ್ಥಿತರಿದ್ದು ಸಹಕರಿಸಿದರು. ಮಾಲಿಕ ಸುಕೇಶ್ ಎಸ್. ಸುರ್ಯಬೆಟ್ಟು ಆಗಮಿಸಿದ ಗಣ್ಯರನ್ನು ಸ್ವಾಗತಿಸಿ ಕೃತಜ್ಞತೆ ಸಲ್ಲಿಸಿದರು.

Prathibha puraskaraಬೆಳ್ತಂಗಡಿ : ಸದ್ಭಾವನಾ ವೇದಿಕೆ ಬೆಳ್ತಂಗಡಿ ಇದರ ವತಿಯಿಂದ 2016-17ನೇ ಶೈಕ್ಷಣಿಕ ವರ್ಷ ಎಸ್ಸೆಸ್ಸೆಲ್ಸಿಯಲ್ಲಿ ಕನ್ನಡ ಮತ್ತು ಆಂಗ್ಲ ಮಾಧ್ಯಮ ಹಾಗೂ ದ್ವಿತೀಯ ಪಿ.ಯು.ಸಿ ಪರೀಕ್ಷೆಯಲ್ಲಿ ಕಲಾ, ವಾಣಿಜ್ಯ, ವಿಜ್ಞಾನ ವಿಭಾಗದಲ್ಲಿ ಸಾಧನೆ ಮಾಡಿದ ಪ್ರಥಮ 10 ಮಂದಿ ಪ್ರತಿಭಾವಂತ ವಿದ್ಯಾರ್ಥಿ-ವಿದ್ಯಾರ್ಥಿನಿಯರನ್ನು ಗುರುತಿಸುವ ಕಾರ್ಯಕ್ರಮ ಪ್ರತಿಭಾವಂತ ವಿದ್ಯಾರ್ಥಿಗಳ ಪುರಸ್ಕಾರ ಸಮಾರಂಭ ಆ.15 ರಂದು ಬೆಳ್ತಂಗಡಿ ಶ್ರೀ ಮಂಜುನಾಥ ಸ್ವಾಮಿ ಕಲಾಭವನದಲ್ಲಿ ಜರುಗಿತು.
ಕಾರ್ಯಕ್ರಮವನ್ನು ಉದ್ಘಾಟಿಸಿದ ಉಜಿರೆ ಶ್ರೀ ಧ.ಮಂ ಶಿಕ್ಷಣ ಸಂಸ್ಥೆಗಳ ಕಾರ್ಯದರ್ಶಿ ಡಾ. ಬಿ.ಯಶೋವರ್ಮ ಅವರು ಶಾಲೆಯಲ್ಲಿ ಗಳಿಸಿದ ಅಂಕ ಮಾತ್ರ ವಿದ್ಯಾರ್ಥಿಯ ಭವಿಷ್ಯವನ್ನು ರೂಪಿಸುವುದಿಲ್ಲ, ಬದುಕಿಗೆ ಹಲವಾರು ಆಯಾಮಗಳಿವೆ. ಪಠ್ಯದ ಜೊತೆಗೆ ಪಠ್ಯೇತರ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳಬೇಕು. ಕಲಿಕೆ ಮತ್ತು ಆಟ ಬೇರೆ, ಬೇರೆಯಲ್ಲ, ಕಲಿಕೆ ಆಟವಾಗಬೇಕು, ಆಟ ಮತ್ತು ಪಾಠ ಬದುಕಿಗೆ ಬೇಕಾದ ಅವಿಭಾಜ್ಯ ಅಂಗವಾಗಿದೆ ಎಂದರು.
ಅಭಿನಂದನಾ ಭಾಷಣ ಮಾಡಿದ ಶ್ರೀಮತಿ ಸುಧಾ ಬರಗೂರು ಅವರು ನಾವು ಮಾಡುವ ಕೆಲಸ ಸಮಾಜದಲ್ಲಿ ಸ್ಥಿರಸ್ಥಾಯಿಯಾಗಬೇಕು, ಇದಕ್ಕೆ ಇಂದು ಇಲ್ಲಿ ನಡೆದ ಕಾರ್ಯಕ್ರಮವೇ ಸಾಕ್ಷಿಯಾಗಿದೆ. ಇಂದಿನ ಆಧುನಿಕ ಸೌಲಭ್ಯಗಳಿಂದ ಮಕ್ಕಳ ಮನಸ್ಸು ಸ್ಥಿತಿಯಾಂತರವಾಗುತ್ತಿದ್ದು, ಮಕ್ಕಳಿಗೆ ನಮ್ಮ ಸಂಸ್ಕೃತಿ, ಸಂಸ್ಕಾರದ ಬಗ್ಗೆ ತಿಳುವಳಿಕೆ ನೀಡಬೇಕು, ಮಕ್ಕಳನ್ನು ಸಮಾಜದ ಆಸ್ತಿಯಾಗಿ ಮಾಡಬೇಕು ಎಂದು ತಮ್ಮ ಹಾಸ್ಯಲಹಾರಿ ಮೂಲಕ ತಿಳಿಸಿದರು.
ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ಶಾಸಕ ಕೆ.ವಸಂತ ಬಂಗೇರ ಅವರು ಬೆಳ್ತಂಗಡಿ ತಾಲೂಕಿನಲ್ಲಿ ಎಸ್.ಎಸ್.ಎಲ್.ಸಿ ಮತ್ತು ಪಿ.ಯು.ಸಿ ಯಲ್ಲಿ ಅತೀ ಹೆಚ್ಚು ಅಂಕ ಗಳಿಸಿದ ವಿದ್ಯಾರ್ಥಿಗಳನ್ನು ಗೌರವಿಸಿದ ಈ ಕಾರ್ಯಕ್ರಮ ಹೆಚ್ಚು ಅರ್ಥ ಪೂರ್ಣವಾಗಿದೆ ಎಂದರು. ವೇದಿಕೆಯಲ್ಲಿ ವೇದಿಕೆ ಕೋಶಾಧಿಕಾರಿ ಭಗೀರಥ ಜಿ, ಸಮಿತಿ ಸಂಚಾಲಕ ಹರೀಶ್ ಕಾರಿಂಜ, ಪ್ರಧಾನ ಕಾರ್ಯದರ್ಶಿ ರಾಮಕೃಷ್ಣ ಭಟ್ ಉಪಸ್ಥಿತರಿದ್ದರು. ಶ್ರೀಮತಿ ಮಂಜುಳಾ ಮತ್ತು ಶ್ರೀಮತಿ ರಕ್ಷಾ ಇವರ ಪ್ರಾರ್ಥನೆ ಬಳಿಕ ರಮೇಶ್ ಮಯ್ಯ ಸ್ವಾಗತಿಸಿದರು. ಅಧ್ಯಕ್ಷ ದೇವಿಪ್ರಸಾದ್ ಪ್ರಾಸ್ತಾವಿಕವಾಗಿ ಮಾತನಾಡಿದರು. ಅಜಿತ್‌ಕುಮಾರ್ ಕೊಕ್ರಾಡಿ ಮತ್ತು ಶಿವಶಂಕರ್ ಭಟ್ ಕಾರ್ಯಕ್ರಮ ನಿರೂಪಿಸಿ, ಜೊತೆ ಕಾರ್ಯದರ್ಶಿ ಜಯಾನಂದ ಲಾಯಿಲ ವಂದಿಸಿದರು. ವೇದಿಕೆಯ ಪದಾಧಿಕಾರಿಗಳು ಹಾಗೂ ವಿವಿಧ ಸಂಘಟನೆಗಳ ಮುಖ್ಯಸ್ಥರು ಉಪಸ್ಥಿತರಿದ್ದರು.

kakkinje unitated insuranceಕಕ್ಕಿಂಜೆ: ವಿ &ವಿ ಮಾರುತಿ ಸರ್ವಿಸ್ ಸ್ಟೇಷನ್ ಕಕ್ಕಿಂಜೆ ಇದರ ವತಿಯಿಂದ ವಿ &ವಿ ಟವರ್‍ಸ್‌ನಲ್ಲಿ ಇಂಡಿಯಾ ಇನ್ಸೂರೆನ್ಸ್ ಕಂಪೆನಿ ಯವರ ಆನ್ ಲೈನ್ ಕಛೇರಿಯು ಆ.16ರಂದು ಶುಭಾರಂಭಗೊಂಡಿದೆ.
ಸಂತ ಆಂಟನಿ ಚರ್ಚ್‌ನ ಧರ್ಮ ಗುರುಗಳು ರೆ.ಫಾ ತೋಮಸ್ ಪಾರೆ ಕಾಟಿಲ್ ಪ್ರಾರ್ಥನಾವಿಧಿ ನೆರವೇರಿಸಿ ಅಧ್ಯಕ್ಷತೆ ವಹಿಸಿ ಮಾತನಾಡಿ, ಇಂದು ಆರಂಭಗೊಂಡ ಈ ಸಂಸ್ಥೆ ಸಣ್ಣ ಸಾಸಿವೆ ಗಿಡ ಮುಂದೆ ದೊಡ್ಡ ಮರವಾಗಿ ಬೆಳೆದು ಬರಲಿ ಎಂದು ಹಾರೈಸಿದರು. ಯುನೈಟೆಡ್ ಇಂಡಿಯಾ ಇನ್ಸೂರೆನ್ಸ್ ಕಂಪೆನಿ ಬೆಳ್ತಂಗಡಿ ಶಾಖೆಯ ಆಡಳಿತಾಧಿಕಾರಿ ಶೇಕುಂಞ ನೂತನ ಕಛೇರಿಯನ್ನು ಉದ್ಘಾಟಿಸಿದರು. ಮುಂದೆ ದಿನದ 24 ಗಂಟೆಯು ಇಲ್ಲಿಂದ ಸೇವೆಯನ್ನು ಪಡೆಕೊಳ್ಳಬಹುದು. ವಾಹನ ಗಳಿಗೆ ಇನ್ಸೂರೆನ್ಸ್ ಖಡ್ಡಾಯವಾಗಿ ಮಾಡಿಸಿಕೊಳ್ಳಿ. ಮಾಡದಿದ್ದರೆ ಅಪಘಾತ ಸಮಯ ಕಷ್ಟ ಪಡಬೇಕಾಗುತ್ತದೆ ಎಂದರು.
ಚಾರ್ಮಾಡಿ ಅನಂತರಾವ್ ದೀಪ ಬೆಳಗಿಸಿ ಕಾರ್ಯಕ್ರಮ ಉದ್ಘಾಟಿಸಿ ಬಾಬುರಾಜ್‌ರವರು ವಿ&ವಿ ಸಂಸ್ಥೆ ಗ್ರಾಹಕರಿಗೆ ಉತ್ತಮ ಸೇವೆ ನೀಡುತ್ತಾ ಬಂದು ಇಂದು ತನ್ನ ವ್ಯವಹಾರವನ್ನು ಎಲ್ಲರ ವಿಶ್ವಾಸಗಳಿಸಿ ಹೆಚ್ಚಿಸಿಕೊಂಡಿದೆ ಸಂಸ್ಥೆ ಇನ್ನಷ್ಟು ಎತ್ತರಕ್ಕೆ ಬೆಳೆಯಲಿ ಎಂದು ಶುಭ ಹಾರೈಸಿದರು.
ದ.ಕ ಉಡುಪಿ ಗ್ಯಾರೇಜ್ ಮಾಲಕರ ಸಂಘದ ಅಧ್ಯಕ್ಷ ಜಯಕರ ಸೊನ್ಸ್ ಮಾತನಾಡಿ ಇಂದು ಕಂಪೆನಿಗಳಿಗೆ ಕಡಿಮೆ ಇಲ್ಲದ ರೀತಿಯಲ್ಲಿ ನಮ್ಮ ಗ್ಯಾರೇಜ್‌ಗಳು ಸೇವೆ ನೀಡುತ್ತಿದೆ. ಎಂದು ಶುಭ ಹಾರೈಸಿದರು.
ವೇದಿಕೆಯಲ್ಲಿ ತಾಲೂಕು ಗ್ಯಾರೇಜ್ ಮಾಲಕರ ಸಂಘದ ಅಧ್ಯಕ್ಷ ಬಾಲಕೃಷ್ಣ ಶೆಟ್ಟಿ ಉಪಸ್ಥಿತರಿದ್ದರು. ಕಾರುಣ್ಯ ಶಾಲಾ ಸಂಚಾಲಕ ಮೊಹಮ್ಮದ್ ಕಂಪ್ಯೂಟರ್ ಉದ್ಘಾಟಿಸಿ ಸಂಸ್ಥೆಗೆ ಶುಭ ಕೋರಿದರು.
ಜೆಸ್ಸಿ ಬಾಬುರಾಜ್ ಸ್ವಾಗತಿಸಿದರು ನಿರೂಪಣೆಯನ್ನು ಸಂತೋಷ್ ಸಿ.ಕೆ ಧನ್ಯವಾದ ಫ್ಲಾಸಿಡ್ ನೀಡಿದರು. ರೇ| .ಫಾ ಜೋಸೆಫ್ ಮುಕ್ಕಾಟ್ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.

t k abramತೋಟತ್ತಾಡಿ : ಉಜಿರೆ ಕೃಪಾ ಚಿಪ್ಸ್‌ನ ಮಾಲಕರ ತಂದೆ ಟಿ.ಕೆ ಅಬ್ರಾಹಾಂ (71ವ) ಆ. 16ರಂದು ಹೃದಯಾಘಾತದಿಂದ ನಿಧನರಾಗಿದ್ದಾರೆ.
ಮೃತರ ಅಂತಿಮ ಕ್ರಿಯೆಯು ಆ. 19(ಇಂದು) 11.15ಕ್ಕೆ ತೋಟತ್ತಾಡಿ ಚರ್ಚ್ ನಲ್ಲಿ ನಡೆಯಲಿದೆ.

shivalli shaba mahila sneha sammilanaಉಜಿರೆ : ಸಂಘಟನೆಯಲ್ಲಿ ಬಲವಿದೆ. ನಾವು ಹೋಗುವ ದಾರಿ ನೇರವಾಗಿದ್ದರೆ ಪ್ರಪಂಚವೇ ತಲೆಬಾಗುತ್ತದೆ. ಪ್ರತಿಭೆ ಎಲ್ಲರಲ್ಲೂ ಇದ್ದೇ ಇದೆ. ಅವರನ್ನು ಗುರುತಿಸಿ ಬೆಳಕಿಗೆ ತರುವ ಪ್ರಯತ್ನವಾಗಬೇಕು. ಮಹಿಳೆಯರು ಎಲ್ಲ ಕ್ಷೇತ್ರಗಳಲ್ಲಿ ಪುರುಷರಿಗೆ ಸಮಾನರಾಗಿ ಲೋಕ ಮೆಚ್ಚುವಂತಹ ಕಾರ್ಯಗಳಲ್ಲಿ ಮುನ್ನಡೆ ಸಾಧಿಸುತ್ತಿದ್ದಾರೆ. ಇಂತಹ ಸಂಘಟನೆಗಳು ಯುವ ಪೀಳಿಗೆಗೆ ಧೈರ್ಯ-ಸ್ಥೈರ್ಯ ನೀಡುವ ವೇದಿಕೆಗಳಾಗಬೇಕೆಂದು ಹಿರಿಯ ಮಹಿಳಾ ಸಾಹಿತಿ, ಲೇಖಕಿ ಶಕುಂತಲಾ ಭಟ್ ಹೇಳಿದರು.
ಅವರು ಆ.13ರಂದು ಉಜಿರೆ ಶ್ರೀ ರಾಮಕೃಷ್ಣ ಸಭಾ ಮಂಟಪದಲ್ಲಿ ಬೆಳ್ತಂಗಡಿ ತಾಲೂಕು ತುಳು ಶಿವಳ್ಳಿ ಸಭಾ (ರಿ.)ದ ಮಹಿಳಾ ಸಂಘಟನೆಯ ವತಿಯಿಂದ ಸಮಾಜದ ಮಹಿಳಾ ಸಂಘಟನೆಗಳನ್ನು ಬಲಪಡಿಸುವ ಉದ್ದೇಶದಿಂದ ತಾಲೂಕಿನ 9 ವಲಯದ ಮಹಿಳೆಯರ ಒಗ್ಗೂಡಿವಿಕೆಗಾಗಿ ಏರ್ಪಡಿಸಲಾದ ಮಹಿಳಾ ಸ್ನೇಹ ಸಮ್ಮಿಲನದಲ್ಲಿ ದಿಕ್ಸೂಚಿ ಭಾಷಣ ಮಾಡುತ್ತಿದ್ದರು. ಮಕ್ಕಳು ಹಿರಿಯರನ್ನು ವೃದ್ಧಾಶ್ರಮಕ್ಕೆ ಸೇರಿಸಲು ಮುಂದಾಗದೆ ಕೂಡು ಕುಟುಂಬದ ಸೌಹಾರ್ದ ಮನೆತನದಲ್ಲಿ ಸುಖ, ಶಾಂತಿ, ನೆಮ್ಮದಿ ಕಾಣುವಂತಾಗಬೇಕು. ಮನೆ ಮಕ್ಕಳಿಗೆ ಭಜನೆ, ಸಂಸ್ಕೃತಿ, ಸಂಸ್ಕಾರ, ಆಚರಣೆ, ವೈಚಾರಿಕ ಹಿನ್ನೆಲೆಗಳನ್ನು ತಿಳಿಸಿ ಅವರಲ್ಲಿ ಪ್ರಶ್ನಿಸುವ ಮನೋಭಾವ ಬೆಳೆಸಬೇಕು ಎಂದರು.
ಆಶಯ ಭಾಷಣಗೈದ ಉಜಿರೆ ಎಸ್‌ಡಿಎಂ ಸ್ನಾತಕೋತ್ತರ ವಿಭಾಗದ ಡೀನ್ ಡಾ. ಎಂ. ವೈ. ಮಂಜುಳಾ ನಾವು ಪರಿಪೂರ್ಣರಾಗಲು ಮೊದಲು ನಾವು ನಮ್ಮನ್ನು ಅರಿತುಕೊಂಡು ನಮ್ಮ ಶಕ್ತಿ, ನ್ಯೂನತೆ, ಅವಕಾಶಗಳು ಹಾಗೂ ಸವಾಲುಗಳನ್ನು ತಿಳಿದುಕೊಂಡಿರಬೇಕು. ಮಾತನಾಡುವ ಮೊದಲು ಯೋಚಿಸಿ ಮುನ್ನಡೆಯಬೇಕು ಎಂದರು.
ಸಮಿತಿಯ ಗೌರವಾಧ್ಯಕ್ಷೆ ಕುಸುಮಾ ಪಡ್ವೆಟ್ನಾಯ ಸ್ನೇಹ ಸಮ್ಮಿಲನ ಉದ್ಘಾಟಿಸಿ ಮಹಿಳಾ ಸಂಘಟನೆಯ ಸಂವರ್ಧನೆ ಯಿಂದ ಸುಪ್ತ ಪ್ರತಿಭೆಗಳು ಹೊರಹೊಮ್ಮಿ ಜ್ಞಾನವರ್ಧನೆಯಾಗಿ ಸಮ್ಮಿಲನ ಅರ್ಥಪೂರ್ಣವಾಗಿ ಯಶಸ್ವಿಯಾಗಲೆಂದು ಆಶಿಸಿದರು. ಸಮಿತಿ ಅಧ್ಯಕ್ಷೆ ಸ್ವರ್ಣ ಶ್ರೀರಂಗ ನೂರಿತ್ತಾಯ ಅಧ್ಯಕ್ಷತೆ ವಹಿಸಿ ಸದ್ವಿಚಾರ, ಅನುಭವ, ಬೌದ್ಧಿಕ, ಮಾನಸಿಕ ಬೆಳವಣಿಗೆಗೆ ಸಂಘಟನೆ ಸಹಕಾರಿ ಎಂದು ತಿಳಿಸಿದರು. ವೃಂದಾ ಪಡ್ವೆಟ್ನಾಯ, ವಾರಿಜ ಹರ್ಷ ಕೆದಿಲಾಯ ಮುಖ್ಯ ಅತಿಥಿಗಳನ್ನು ಪರಿಚಯಿಸಿದರು.
ವೇದಿಕೆಯಲ್ಲಿ ಕುವೆಟ್ಟು ವಲಯ ಉಪಾಧ್ಯಕ್ಷೆ ಗೀತಾ ಗಂಗಾಧರ, ಬಂದಾರು ವಲಯ ವಲಯದ ಅರ್ಚನಾ ಸಂತೋಷ್, ಮಚ್ಚಿನ ವಲಯದ ಅನಿತಾ ಕುಕ್ಕಿಲ, ಅಳದಂಗಡಿ ವಲಯದ ಲಕ್ಷ್ಮೀ ವಿಷ್ಣು ಸಂಪಿಗೆತ್ತಾಯ, ಕೊಕ್ಕಡ ವಲಯದ ತೇಜಾವತಿ ಶಿವರಾಂ ತೋಡ್ತಿಲ್ಲಾಯ, ಧರ್ಮಸ್ಥಳ ವಲಯದ ಮನೋರಮ ತೋಳ್ಪಾಡಿತ್ತಾಯ, ಅರಸಿನಮಕ್ಕಿ ವಲಯದ ಲೀಲಾ ವೈಕುಂಠ, ನಿಡ್ಲೆ ವಲಯದ ಕುಸುಮಾ ಸತ್ಯನಾರಾಯಣ ರಾವ್, ಸಮ್ಮಿಲನ ಸಂಯೋಜಕಿ ಶೋಭಾ ಕುದ್ರೆಂತ್ತಾಯ ಉಪಸ್ಥಿತರಿದ್ದರು. ಅನ್ನ ಸಂತರ್ಪಣೆಯ ಸೇವಾಕರ್ತರಾದ ಶ್ರೀಮತಿ ಮತ್ತು ವಿಠಲ ಆಚಾರ್ಯ ದಂಪತಿಗಳನ್ನು ವಿಜಯರಾಘವ ಪಡ್ವೆಟ್ನಾಯ ದಂಪತಿಗಳು ಸಮ್ಮಾನಿಸಿದರು. ಜ್ಯೋತಿ ಗುರುರಾಜ್ ಮತ್ತು ಸುವರ್ಣ ಕುಮಾರಿ ಕಲ್ಲೂರಾಯ ನಿರೂಪಿಸಿದ ಕಾರ್ಯಕ್ರಮದಲ್ಲಿ ಗಾಯತ್ರಿ ಶ್ರೀಧರ್ ಸ್ವಾಗತಿಸಿ, ವಾಣಿ ವಾಸುದೇವ ಸಂಪಿಗೆತ್ತಾಯ ವಂದಿಸಿದರು. ಡಾ, ಮಾಧವ ಎಂ.ಕೆ. ನಿರೂಪಣೆಯಲ್ಲಿ ಸ್ನೇಹರಂಜನೆ ಆದರ್ಶ ದಂಪತಿ ಕಾರ್ಯಕ್ರಮ ನಡೆಯಿತು.

macchina mosarukudikeಮಚ್ಚಿನ : ನ್ಯೂ ಫ್ರೆಂಡ್ಸ್ ಸ್ಪೋರ್ಟ್ ಕ್ಲಬ್ ಬಳ್ಳಮಂಜ ಇದರ ಆಶ್ರಯದಲ್ಲಿ ಶ್ರೀ ಕೃಷ್ಣ ಜನ್ಮಾಷ್ಟಮಿಯ ಪ್ರಯುಕ್ತ ಸಾರ್ವಜನಿಕ ಮೊಸರು ಕುಡಿಕೆ ಉತ್ಸವ ಸರಕಾರಿ ಪ್ರೌಢ ಶಾಲಾ ವಠಾರದಲ್ಲಿ ಅನಂತಕೃಷ್ಣ ಭಟ್. ಕೆ ಇವರ ದಿವ್ಯ ಹಸ್ತದಿಂದ ಉದ್ಘಾಟನೆಗೊಂಡಿತ್ತು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಮಚ್ಚಿನ ಗ್ರಾ.ಪಂ ಅಧ್ಯಕ್ಷೆ ಹರ್ಷಲತಾ ವಹಿಸಿದ್ದರು. ಮುಖ್ಯ ಅತಿಥಿಯಾಗಿ ಮಡಂತ್ಯಾರು ವಲಯ ಶ್ರೀ.ಕ್ಷೇ.ಧ.ಗ್ರಾ.ಯೋಜನೆಯ ಮೇಲ್ವಿಚಾರಕ ಸಚಿನ್, ಮಚ್ಚಿನದ ಅರಣ್ಯ ರಕ್ಷಕ ಸತೀಶ್ ಡಿಸೋಜಾ, ಮಚ್ಚಿನ ಸ.ಪ್ರೌಢ ಶಾಲೆಯ ಪ್ರಭಾರ ಮುಖ್ಯೋಪಾಧ್ಯಾಯ ಜಯ ನಾಯಕ್ ಉಪಸ್ಥಿತರಿದ್ದರು. ಸಂಘ ಅಧ್ಯಕ್ಷ ಪ್ರಮೋದ್ ಕುಮಾರ್ ಸ್ವಾಗತಿಸಿ, ಪುಷ್ಪಕ್ ವಂದಿಸಿದರು.
ತದನಂತರ ಮಕ್ಕಳಿಗೆ, ಪುರುಷರಿಗೆ, ಮಹಿಳೆಯರಿಗೆ ವಿವಿಧ ಆಟೋಟ ಸ್ಪರ್ಧೆಗಳನ್ನು ನಡೆಸಲಾಯಿತು. ಸಂಜೆ ನಡೆದ ಸಮಾರೋಪ ಸಮಾರಂಭದ ಅಧ್ಯಕ್ಷತೆಯನ್ನು ಮಚ್ಚಿನ ಗ್ರಾ.ಪಂ ಉಪಾಧ್ಯಕ್ಷ ಚಂದಶೇಖರ ಬಿ.ಎಸ್. ವಹಿಸಿದರು. ಮುಖ್ಯ ಅತಿಥಿಯಾಗಿ ಮಡಂತ್ಯಾರು ತಾ.ಪಂ ಸದಸ್ಯೆ ಶ್ರೀಮತಿ ವಸಂತಿ ಲಕ್ಷಣ್, ಬಿಜೆಪಿ ಯುವ ಮೋರ್ಚಾ ಜಿಲ್ಲಾಧ್ಯಕ್ಷ ಹರೀಶ್ ಪೂಂಜಾ, ಶ್ರೀ ಕ್ಷೇತ್ರ ಪಾರೆಂಕಿಯ ಆಡಳಿತ ಮೊಕ್ತೇಸರರಾದ ರಾಜಶೇಖರ್, ಬೆಳ್ತಂಗಡಿ ಬಿಜೆಪಿ ಯುವ ಮೋರ್ಚಾ ಅಧ್ಯಕ್ಷ ಸಂಪತ್ ಸುವರ್ಣ, ಬಸವಗುಡಿ ಗಣೇಶ್ ವುಡ್ ಇಂಡಸ್ಟ್ರೀಸ್ ಮಾಲಕ ಗಣೇಶ್ ಅನಿಲಡೆ, ಮಚ್ಚಿನ ಗ್ರಾ.ಪಂ ಲೆಕ್ಕ ಪರಿಶೋಧಕಿ ರೇಷ್ಮಾ ಮಗಂಜಿಗಟ್ಟಿ ಮಚ್ಚಿನ ಶಿಕ್ಷಕ ಸುಭಾಸ್, ಮಿತುನ್ ಕುಲಾಲ್ ಮಡಂತ್ಯಾರ್, ಸಂಜೀವ ಶೆಟ್ಟಿ ಮುಗೆರೋಡಿ ಉಪಸ್ಥಿತರಿದ್ದರು. ವಿಜೇತರಿಗೆ ಬಹುಮಾನ ವಿತರಿಸಲಾಯಿತು. ಪ್ರಮೋದ್ ಕುಮಾರ್ ಸ್ವಾಗತಿಸಿದರು, ಹರೀಶ್ ಕುಮಾರ್ ಬಹುಮಾನ ವಿಜೇತರ ಪಟ್ಟಿ ವಾಚಿಸಿದರು, ರವೀಂದ್ರ ಎಂ.ಬಿ ಧನ್ಯವಾದವಿತ್ತರು. ಲ್ಯಾನ್ಸಿ, ಸದಾಶಿವ ಹೆಗ್ಡೆ ಕಾರ್ಯಕ್ರಮ ನಿರೂಪಿಸಿದರು.

gowda sanga ati kootaಬೆಳ್ತಂಗಡಿ : ಆಟಿ ಅಮವಾಸ್ಯೆ ದಿನದ ವಿಧಿವಿಧಾನಗಳು ವೈಜ್ಞಾನಿಕ ಮಹತ್ವವನ್ನು ಪದೆದುಕೊಂಡಿವೆ. ಆದರೆ ಇತ್ತೀಚೆಗೆ ನಮ್ಮ ಸಮುದಾಯದವರು ಈ ಎಲ್ಲಾ ಆಚರಣೆಗಳಲ್ಲಿ ಆಸಕ್ತಿಯನ್ನು ಕಳೆದುಕೊಂಡಿದ್ದಾರೆ. ಗೌಡ ಸಮಾಜದ ಆಚರಣೆಗಳು ಮತ್ತು ಸಂಸ್ಕೃತಿಗಳು ಮುಂದಿನ ಪೀಳಿಗೆಗೆ ಮಾದರಿ ಯಾಗಿರಬೇಕು ಎಂದು ವಾಣಿ ಪದವಿ ಪೂರ್ವ ಕಾಲೇಜಿನ ರಾಜ್ಯಶಾಸ್ತ್ರ ಉಪನ್ಯಾಸಕಿ ಶ್ರೀಮತಿ ಮೀನಾಕ್ಷಿ ಮಹಾಬಲ ಗೌಡ ಅಭಿಪ್ರಾಯಪಟ್ಟರು.
ಅವರು ವಾಣಿ ಶಿಕ್ಷಣ ಸಂಸ್ಥೆಗಳ ಸಭಾಭವನದಲ್ಲಿ ನಡೆದ ಆಟಿಡೊಂಜಿ ಕೂಟ ಕಾರ್ಯಕ್ರಮದಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸಿದ್ದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಗ್ರಾಮ ಸಮಿತಿಯ ಅಧ್ಯಕ್ಷ ಮಾಧವ ಗೌಡ ವಹಿಸಿಕೊಂಡಿದ್ದರು. ತಾಲೂಕು ಸಮಿತಿಯ ಅಧ್ಯಕ್ಷ ಜಿ.ಸೋಮೇ ಗೌಡ ದೀಪ ಪ್ರಜ್ವಲನಗೈದು ಉದ್ಘಾಟನಾ ಭಾಷಣ ಮಾಡಿದರು. ಮುಖ್ಯ ಅತಿಥಿಗಳಾಗಿ ತಾಲೂಕು ಯುವ ವೇದಿಕೆಯ ಅಧ್ಯಕ್ಷ ಟಿ. ಜಯಾನಂದ ಗೌಡ, ತಾಲೂಕು ಮಹಿಳಾ ವೇದಿಕೆಯ ಅಧ್ಯಕ್ಷೆ ಶ್ರೀಮತಿ ಉಷಾ ಲಕ್ಷ್ಮಣ ಗೌಡ, ತಾಲೂಕು ಸಂಘದ ಕಾರ್ಯದರ್ಶಿ ಮೋಹನ್ ಗೌಡ ಪ್ರಾಸ್ತಾವಿಕವಾಗಿ ಮಾತನಾಡಿದರು.
ಆಟಿ ತಿಂಗಳಲ್ಲಿ ಉಪಯೋಗಿಸುವ ವಿವಿಧ ತಿಂಡಿ ತಿನಸುಗಳ ಸಹ ಭೋಜನದ ವ್ಯವಸ್ಥೆ ಮಾಡಲಾಗಿತ್ತು. ಶ್ರೀಮತಿ ಪದ್ಮಿನಿ ಪಡ್ಲಾಡಿಯವರು ಚೆನ್ನೆಮಣೆ ಆಟದ ಪ್ರಾತ್ಯಕ್ಷಿಕೆಯನ್ನು ನಿರ್ವಹಿಸಿದರು. ಪ್ರಾಥಮಿಕ ಶಾಲಾ ವಿದ್ಯಾರ್ಥಿಗಳಿಗೆ ತುಳು ಕ್ವಿಜ್ ಕಾರ್ಯಕ್ರಮವನ್ನು ದಿನಕರ ಗೌಡ ಮತ್ತು ಲೋಕೇಶ್ ಗೌಡ ನಿರ್ವಹಿಸಿದರು.
ತಾಲೂಕು ಸಂಘದ ಉಪಾಧ್ಯಕ್ಷ ನಾರಾಯಣ ಗೌಡ ದೇವಸ್ಯ, ತಾಲೂಕು ಸಮಿತಿ ಸದಸ್ಯರಾದ ಧರ್ಣಪ್ಪ ಗೌಡ ಕೆಲ್ಲಗುತ್ತು, ತಾಲೂಕು ಯುವ ವೇದಿಕೆ ಕಾರ್ಯದರ್ಶಿ ಸುರೇಶ ಗೌಡ ಕೌಡಂಗೆ, ಗ್ರಾಮ ಸಮಿತಿ ಕಾರ್ಯದರ್ಶಿ ಜಿ. ಪ್ರದೀಪ್, ಗ್ರಾಮ ಸಮಿತಿಯ ಉಪಾಧ್ಯಕ್ಷ ಅಚ್ಚುತ ಗೌಡ ಪಡ್ಲಾಡಿ ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಕು| ಗುಣಶ್ರೀ ಡಿ. ಹುಣ್ಸೆಕಟ್ಟೆ ಕಾರ್ಯಕ್ರಮ ನಿರ್ವಹಿಸಿ, ಪ್ರಭಾರ ಕಾರ್ಯದರ್ಶಿ ಶಿವರಾಮ ಗೌಡ ದಾಸರಬೆಟ್ಟು ಸ್ವಾಗತಿಸಿ, ಯುವ ವೇದಿಕೆಯ ಅಧ್ಯಕ್ಷ ಬಾಬು ಗೌಡ ವಂದಿಸಿದರು.
ಗ್ರಾಮ ಸಮಿತಿ ಕೋಶಾಧಿಕಾರಿ ಜಿನ್ನಪ್ಪ ಗೌಡ ವರದಿ ವಾಚಿಸಿದರು. ಕುಮಾರಿಯರಾದ ಪೃಥ್ವಿ ಮತ್ತು ಪ್ರಜ್ಞಾ ಕುತ್ಯಾರು ಪ್ರಾರ್ಥನೆಗೈದರು.

billava ati 1ಬೆಳ್ತಂಗಡಿ : ವಿವಿಧ ಬಗೆಯ ತಿಂಡಿ ತಿನಿಸುಗಳನ್ನು ಮಾಡಿ ತಂದು ಸಾಮೂಹಿಕ ಭೊಜನದ ಮೂಲಕ ಸಂತೋಷ ಕಂಡುಕೊಳ್ಳುವುದು, ತುಳುನಾಡ ಪರಂಪರೆ ಸಂಸ್ಕೃತಿ ಸೊಬಗನ್ನು ಆಧುನಿಕ ಸಮಾಜಕ್ಕೆ ಪರಿಚಯಿಸುವುದು ಆಟಿದ ಅಟಿಲ್ದ ಕೂಟದ ಉದ್ದೇಶ, ಜೊತೆಗೆ ಸಮುದಾಯದಲ್ಲಿ ಒಗ್ಗಟ್ಟು ಮೂಡಿಸಲು ಸಂಘಟನೆಯ ಅವಶ್ಯಕತೆಯ ಬಗ್ಗೆ ಅರಿವು ಮತ್ತು ಜಾಗೃತಿ ಮೂಡಿಸುವ ಕಾರ್ಯ ಇಲ್ಲಿ ನಡೆಯುತ್ತಿದೆ ಎಂದು ಶಾಸಕ ವಸಂತ ಬಂಗೇರ ಹೇಳಿದರು.
ಶ್ರೀ ಗುರುನಾರಾಯಣ ಸ್ವಾಮಿ ಸೇವಾ ಸಂಘ ಬೆಳ್ತಂಗಡಿ, ಬಿಲ್ಲವ ಮಹಿಳಾ ವೇದಿಕೆ ಮತ್ತು ಯುವ ಬಿಲ್ಲವ ವೇದಿಕೆ ಇವುಗಳ ಸಂಯುಕ್ತ ಆಶ್ರಯದಲ್ಲಿ ಆ. 13 ರಂದು ಬೆಳ್ತಂಗಡಿ ಆಶಾ ಶಾಲಿಯಾನ್ ಸಭಾಂಗಣದಲ್ಲಿ ಹಮ್ಮಿಕೊಳ್ಳಲಾಗಿದ್ದ ಆಟಿದ ಅಟಿಲ್ದ ಕೂಟ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು. ಅಧ್ಯಕ್ಷತೆಯನ್ನು ಶ್ರೀ ಗುರುನಾರಾಯಣ ಸ್ವಾಮಿ ಸೇವಾ ಸಂಘದ ಅಧ್ಯಕ್ಷ ಭಗೀರಥ ಜಿ. ವಹಿಸಿದ್ದರು.
ಸಂಪನ್ಮೂಲ ವ್ಯಕ್ತಿಯಾಗಿದ್ದ ಉಡುಪಿ ಜಿಲ್ಲಾ ಮೂರ್ತೆದಾರರ ಸಂಘದ ಮಹಾಮಂಡಲದ ಅಧ್ಯಕ್ಷ ಪಿ.ಕೆ. ಸದಾನಂದ ಆಟಿ ತಿಂಗಳ ಸಂಸ್ಕೃತಿ, ಸಂಸ್ಕಾರ, ಆಹಾರ ಶೈಲಿ ಮತ್ತು ಅವಶ್ಯಕತೆಯ ಬಗ್ಗೆ ತಿಳಿಯಪಡಿಸಿದರು.
ಸನ್ಮಾನ; ಶಾಸಕರು ಹಾಗೂ ರಾಜ್ಯ ಸಣ್ಣ ಕೈಗಾರಿಕಾ ಅಭಿವೃದ್ಧಿ ನಿಗಮದ ಅಧ್ಯಕ್ಷರಾಗಿ ನೇಮಕಗೊಂಡಿರುವ ಶಾಸಕ ವಸಂತ ಬಂಗೇರ, ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷರಾಗಿ ನೇಮಕಗೊಂಡಿರುವ ಹರೀಶ್ ಕುಮಾರ್, ಗೆಜ್ಜೆಗಿರಿ ನಂದನಬಿತ್ತಿಲ್ ಕ್ಷೇತ್ರ ಸಮಿತಿ ಅಭಿವೃದ್ಧಿಯ ಪ್ರಮುಖರಾಗಿರುವ ಪೀತಾಂಬರ ಹೇರಾಜ್, ಬ್ಲಾಕ್ ಯುವ ಕಾಂಗ್ರೆಸ್ ಅಧ್ಯಕ್ಷರಾಗಿ ಚುನಾಯಿತರಾಗಿರುವ ಅಭಿನಂದನ್ ಹರೀಶ್ ಕುಮಾರ್ ಮತ್ತು ಇತ್ತೀಚೆಗೆ ನಡೆದ ಮೇಲಂತಬೆಟ್ಟು ಗ್ರಾ.ಪಂ. ಉಪಚುನಾವಣೆಯಲ್ಲಿ ಜಯಗಳಿಸಿದ ನೀತಾ ಮಹೇಶ್ ನಡಕರ ಅವರನ್ನು ಸನ್ಮಾನಿಸಲಾಯಿತು.
ವೇದಿಕೆಯಲ್ಲಿ ಮಹಿಳಾ ಬಿಲ್ಲವ ವೇದಿಕೆ ಸ್ಥಾಪಕಾಧ್ಯಕ್ಷೆ ಸುಜೀತಾ ವಿ. ಬಂಗೇರ, ಯುವ ಬಿಲ್ಲವ ವೇದಿಕೆ ಅಧ್ಯಕ್ಷ ಚಿದಾನಂದ ಇಡ್ಯ ಉಪಸ್ಥಿತರಿದ್ದರು. ಬಿಲ್ಲವ ಮಹಿಳಾ ವೇದಿಕೆ ಅಧ್ಯಕ್ಷೆ ತನುಜಾ ಶೇಖರ್ ಸ್ವಾಗತಿಸಿದರು. ಮಾಜಿ ಅಧ್ಯಕ್ಷೆ ವಿನೋದಿನಿ ರಾಮಪ್ಪ ಪ್ರಾಸ್ತಾವಿಕವಾಗಿ ಮಾತನಾಡಿದರು. ಮಹಿಳಾ ಬಿಲ್ಲವ ವೇದಿಕೆ ಕಾರ್ಯದರ್ಶಿ ರಾಜಶ್ರೀ ರಮಣ್ ವಂದಿಸಿದರು. ಸುಧಾಮಣಿ ಮುಂಡೂರು, ಪದ್ಮನಾಭ ಸಾಲಿಯಾನ್, ಧನಲಕ್ಷ್ಮೀ ಕಾರ್ಯಕ್ರಮ ನಿರೂಪಿಸಿದರು. ಸಭಾ ಕಾರ್ಯಕ್ರಮದ ಬಳಿಕ ಪ್ರತಿಯೊಬ್ಬ ಸದಸ್ಯರೂ ಅವರವರ ಮನೆಗಳಿಂದ ತಯಾರಿಸಿ ತಂದಿದ್ದ ಸುಮಾರು 60 ಬಗೆಯ ಆಹಾರವಸ್ತುಗಳನ್ನು ಸಾಮೂಹಿಕವಾಗಿ ಸವಿಯಲಾಯಿತು. ಶಾಂತಾ ಜೆ. ಬಂಗೇರ ಮತ್ತು ಬಳಗದವರು ಪ್ರಾರ್ಥನಾಗೀತೆ ಪ್ರಸ್ತುತಪಡಿಸಿದರು.

jeep race

jeep race1

jeep race2

jeep race3 copy

jeep race4ನೇಚರ್ ರೈಡರ್‍ಸ್ ಬೆಳ್ತಂಗಡಿ ಇವರ ವತಿಯಿಂದ ಬಿಜೆಪಿ ಅಧ್ಯಕ್ಷ ರಂಜನ್ ಜಿ. ಗೌಡ ಅವರ ನೇತೃತ್ವದಲ್ಲಿ ಬಂಗಾಡಿ ಕಿಲ್ಲೂರು ನೇತ್ರಾವತಿ ನದಿ ಕಿನಾರೆಯಲ್ಲಿ ನಡೆದ ಚತುರ್ಚಕ್ರ ವಾಹನಗಳ ರ್‍ಯಾಲಿಯಲ್ಲಿ ಕಂಡು ಬಂದ ದೃಶ್ಯ.

kokkada akanda sankalpa dinaಕೊಕ್ಕಡ : ಹಿಂದೂ ಜಾಗರಣ ವೇದಿಕೆ ಕೊಕ್ಕಡ ಇದರ ವತಿಯಿಂದ ಅಖಂಡ ಭಾರತವು ವಿಭಜನೆಗೊಂಡ ದುರಂತದ ನೆನಪಿನಲ್ಲಿ ಮತ್ತೆ ವಿಖಂಡವಾದ ಭಾರತವನ್ನು ಒಂದು ಗೂಡಿಸಲು ಅಖಂಡ ಭಾರತ ಸಂಕಲ್ಪ ದಿನ ಜನಜಾಗೃತಿ ನಿಮಿತ್ತ ಪಂಜಿನ ಮೆರವಣಿಗೆ ಹಾಗೂ ಧಾರ್ಮಿಕ ಸಭಾ ಕಾರ್ಯಕ್ರಮವನ್ನು ಕೊಕ್ಕಡದ ಶ್ರೀರಾಮ ಭಜನಾ ಮಂಡಳಿಯಲ್ಲಿ ಆ.13 ರಂದು ರಾತ್ರಿ ಆಚರಿಸಲಾಯಿತು.
ಕೊಕ್ಕಡದ ವೈದ್ಯ ಡಾ. ಗಣೇಶ್ ಪ್ರಸಾದ್ ಅಧ್ಯಕ್ಷತೆ ವಹಿಸಿ ಮಾತನಾಡಿ ಸ್ವಾಮೀ ವಿವೇಕಾನಂದರ ನುಡಿಗಳನ್ನು ನಾವಿಂದು ನೆನಪಿಸಿಕೊಂಡು ಯುವ ಶಕ್ತಿಯನ್ನು ದೇಶದ ಅಖಂಡತೆಗಾಗಿ ಒಂದು ಗೂಡಿಸುವ ಕಾರ್ಯ ನಡೆಸಬೇಕಾಗಿದೆ. ನಮ್ಮ ದೇಶದ ಅಮೂಲ್ಯ ವಿಧಾನಗಳು ವಿಶ್ವಕ್ಕೇ ಮಾದರಿಯೆನಿಸುತ್ತಿದೆ. ವಿಶ್ವಗುರು ಭಾರತವು ತನ್ನ ತುಂಡಾಗಿ ಹೋಗಿರುವ ಭಾಗಗಳನ್ನು ಮತ್ತೆ ಪಡೆದು ಜಗತ್ತಿಗೇ ಶ್ರೇಷ್ಟ ರಾಷ್ಟ್ರವಾಗುವಲ್ಲಿ ಯುವ ಸಮಾಜದ ಕೊಡುಗೆಯೂ ಅತ್ಯಮೂಲ್ಯ ಎಂದರು. ಹಿಂದೂ ಜಾಗರಣ ವೇದಿಕೆಯ ರಾಜ್ಯ ಕಾರ್ಯಕಾರಿ ಸಮಿತಿಯ ಸದಸ್ಯ ರಾಧಾಕೃಷ್ಣ ಅಡ್ಯಂತಾಯ ರವರು ದಿಕ್ಸೂಚಿ ಭಾಷಣ ಮಾಡಿ ಈ ದೇಶದ ಅಖಂಡತೆಯ ಬಗ್ಗೆ ಸಭೆ ನಡೆಸುವುದಿದ್ದರೆ 10 ಲಕ್ಷ ಬಾಂಡ್ ಕೊಡಬೇಕಾದ ಪರಿಸ್ಥಿತಿ ಬಂದೊದಗಿರುವುದು ದೇಶದ ದುರಂತ. ನಮ್ಮ ಅಖಂಡ ಭಾರತದ ಹಲವಾರು ಭೂಭಾಗಗಳು ಇಂದು ತುಂಡಾಗಿ ದೇಶದ್ರೋಹಿಗಳ ಪಾಲಾಗಿರುವುದರಿಂದ ಪುನ: ಅಖಂಡ ಭಾರತವನ್ನು ಕಟ್ಟಬೇಕಾದ ಹೋರಾಟ ಅನಿವಾರ್ಯ ಎಂದರು. ಈ ಸಂದರ್ಭದಲ್ಲಿ ಭಾರತೀಯ ಸೇನೆಯಲ್ಲಿ ಕರ್ತವ್ಯ ನಿರ್ವಹಿಸಿ ನಿವೃತ್ತರಾದ ಪದ್ಮಯ ಗೌಡರನ್ನು ಸನ್ಮಾನಿಸಲಾಯಿತು.
ಕೊಕ್ಕಡ ಹಿಂದೂ ಜಾಗರಣ ವೇದಿಕೆ ಸಂಚಾಲಕ ರುಕ್ಮಯ ಮಡಿವಾಳ ಪ್ರಾಸ್ತಾವಿಕವಾಗಿ ಮಾತನಾಡಿ ಅಖಂಡ ಭಾರತ ಸಂಕಲ್ಪ ದಿನದ ಮಹತ್ವವನ್ನು ವಿವರಿಸಿದರು.ಕೊಕ್ಕಡ ಶ್ರೀ ವೈದ್ಯನಾಥೇಶ್ವರ ದೇವಸ್ಥಾನದಿಂದ ಪಂಜಿನ ಮೆರವಣಿಗೆಯು ಪ್ರಾರಂಭವಾಗಿ ಜೋಡುಮಾರ್ಗ ಜಂಕ್ಷನ್ ವರೆಗೆ ಸಾಗಿ ಶ್ರೀರಾಮ ಭಜನಾ ಮಂದಿರದವರೆಗೆ ನಡೆಯಿತು.
ಕೊಕ್ಕಡ ತಾ.ಪಂ.ಸದಸ್ಯ ಲಕ್ಷ್ಮೀನಾರಾಯಣ ಟಿ.ಎಂ, ನೆಲ್ಯಾಡಿ ಹಿಂದೂ ಜಾಗರಣ ವೇದಿಕೆಯ ಮುಖಂಡ ರವಿಪ್ರಸಾದ್ ಶೆಟ್ಟಿ ಬಲ್ಯ, ಕೊಕ್ಕಡ ಡಾ. ಮೋಹನದಾಸ್ ಗೌಡ, ಮೊದಲಾದ ಪ್ರಮುಖರು ಮೆರವಣಿಗೆ ಯಲ್ಲಿ ಪಾಲ್ಗೊಂಡರು.
ವೇದಿಕೆಯಲ್ಲಿ ಹಿಂದೂ ಜಾಗರಣ ವೇದಿಕೆಯ ಪುತ್ತೂರು ಜಿಲ್ಲಾ ಕಾರ್ಯದರ್ಶಿ ಅಜಿತ್ ಕುಮಾರ್, ಹಿಂದೂ ಜಾಗರಣ ವೇದಿಕೆ ಕೊಕ್ಕಡ ವಲಯ ಸಂಚಾಲಕ ರುಕ್ಮಯ ಮಡಿವಾಳ, ನಿವೃತ್ತ ಸೈನಿಕ ಪದ್ಮಯ ಗೌಡ, ಮೊದಲಾದವರು ಉಪಸ್ಥಿತರಿ ದ್ದರು. ಶಶಿಧರ್ ಕೊಕ್ಕಡ ಸ್ವಾಗತಿಸಿದರು, ಸೂರ್ಯನಾರಾಯಣ ರಾವ್ ಶಿಶಿಲ ವಂದಿಸಿದರು. ಜಯಂತ್ ಅಂಬರ್ಜೆ ಕಾರ್ಯಕ್ರಮ ನಿರೂಪಿಸಿದರು.

sdm raly swachatheಉಜಿರೆ : ಎಸ್‌ಡಿಎಂ ಪದವಿ ಕಾಲೇಜು, ಸ್ನಾತಕೋತ್ತರ ಕೇಂದ್ರದ ವಿದ್ಯಾರ್ಥಿಗಳು, ಅಧ್ಯಾಪಕರು ಮತ್ತು ಅಧ್ಯಾಪಕೇತರ ಸಿಬ್ಬಂದಿ ಉಜಿರೆಯ ಮುಖ್ಯ ರಸ್ತೆಗಳಲ್ಲಿ ಆ.14 ರಂದು ಬೃಹತ್ ಮೆರವಣಿಗೆಯ ಮೂಲಕ ಸ್ವಚ್ಛತೆಯ ಮಹತ್ವವನ್ನು ಪ್ರಚಾರಪಡಿಸಿದರು. ಉಜಿರೆಯ ಎಸ್.ಡಿ.ಎಮ್ ಪದವಿ ಕಾಲೇಜಿನ ಎನ್‌ಎಸ್‌ಎಸ್ ಘಟಕ ಸ್ಥಳೀಯ ಗ್ರಾಮ ಪಂಚಾಯತ್ ಸಹಯೋಗದೊಂದಿಗೆ ಆರಂಭಿಸಿದ್ದ ವಿಶೇಷ ಸ್ವಚ್ಛತಾ ಪಾಕ್ಷಿಕ ಅಭಿಯಾನದ ಭಾಗವಾಗಿ ನಡೆದ ಸ್ವಚ್ಛತೆಯ ಪರವಾದ ಈ ಜಾಗೃತಿ ಮೆರವಣಿಗೆಯಲ್ಲಿ ಅರಿವು ಮೂಡಿಸುವ ಉದ್ಘೋಷಗಳು ಮೊಳಗಿದವು.
ಸ್ವಚ್ಛತೆಗೆ ಸಂಬಂಧಿಸಿದಂತೆ ಕೇಂದ್ರ ಸರ್ಕಾರ ಆರಂಭಿಸಿದ ಯೋಜನಾ ಅಭಿಯಾನಕ್ಕೆ ಪೂರಕವಾಗಿ ಜನರಲ್ಲಿ ಪ್ರಜ್ಞೆ ಮೂಡಿಸುವಂಥ ಘೋಷಣಾ ಫಲಕಗಳನ್ನು ಹಿಡಿದು ಉಜಿರೆ ಮುಖ್ಯರಸ್ತೆಗಳಲ್ಲಿ ವಿದ್ಯಾರ್ಥಿಗಳು ಗಮನ ಸೆಳೆದರು. ಪ್ರತಿಯೊಬ್ಬರೂ ಸ್ವಚ್ಛತೆಗೇ ಮೊದಲ ಆದ್ಯತೆ ನೀಡಲೇಬೇಕಾದ ಅನಿವಾರ್ಯತೆಯನ್ನು ಮನಗಾಣಿಸಿದರು.
ಆ.1 ರಂದು ಆರಂಭಗೊಂಡಿದ್ದ ಸ್ವಚ್ಛತಾ ಅಭಿಯಾನ ಆ.15 ರಂದು ಸಮಾರೋಪಗೊಳ್ಳುವ ಮುನ್ನಾದಿನವಾದ ಆ.14 ರಂದು ಈ ಬೃಹತ್ ಮೆರವಣಿಗೆ ನಡೆಯಿತು.
ಎಸ್‌ಡಿಎಂ ಸಂಸ್ಥೆಯ ಬೋಧಕ ಮತ್ತು ಬೋಧಕೇತರ ಸಿಬ್ಬಂದಿ, ವಿದ್ಯಾರ್ಥಿಗಳು ಸೇರಿದಂತೆ 1500ಕ್ಕೂ ಹೆಚ್ಚಿನ ಪ್ರಮಾಣದಲ್ಲಿ ಪಾಲ್ಗೊಂಡಿದ್ದರು. ಇದಕ್ಕೂ ಮುನ್ನ ಅಭಿಯಾನದ ಪ್ರಯುಕ್ತ ಎಸ್.ಡಿ.ಎಂ ಪದವಿ ಕಾಲೇಜಿನ ಆವರಣ ಮತ್ತು ಉಜಿರೆಯ ಸುತ್ತಮುತ್ತಲಿನ ಪ್ರದೇಶವನ್ನು ಎನ್‌ಎಸ್‌ಎಸ್ ಸ್ವಯಂಸೇವಕರು ಸ್ವಚ್ಛಗೊಳಿಸಿದ್ದರು. ಉಜಿರೆಯ 318 ಮನೆಗಳಿಗೆ ಭೇಟಿ ನೀಡಿ ಸ್ವಚ್ಛತೆಯ ಬಗ್ಗೆ ವಿವರಿಸಿದ್ದರು. ಈ ವೇಳೆ ಕಸ ವಿಂಗಡಣೆಯ ಕ್ರಮಗಳ ಬಗ್ಗೆ ಮಾಹಿತಿ ನೀಡಿದ್ದರು.

  belthangady independence day1857 ಪ್ರಥಮ ಸ್ವಾತಂತ್ರ್ಯ ಸಂಗ್ರಾಮದ ಶತಮಾನೋತ್ಸವದ ನೆನಪಿಗಾಗಿ ಹಾಗೂ ಸ್ವಾತಂತ್ರ್ಯ ಸಂಗ್ರಮದಲ್ಲಿ ಸಕ್ರಿಯವಾಗಿ ಪಾಲ್ಗೊಂಡ ನಮ್ಮ ಬೆಳ್ತಂಗಡಿ ತಾಲೂಕಿನ ಹೆಮ್ಮೆಯ ಸ್ವಾತಂತ್ರ್ಯ ಹೋರಾಟಗಾರರಲ್ಲಿ ಓರ್ವರಾದ ದಿ. ಉಪೇಂದ್ರ ಕಾಮತ್ ಅವರ ಸ್ಮರಣಾರ್ಥವಾಗಿ ಅವರ ಪುತ್ರ ದಿ. ಪುಂಡಲೀಕ ಕಾಮತ್ ಮತ್ತು ಬಂಧು ಮಿತ್ರರು 1957 ರಲ್ಲಿ ಬೆಳ್ತಂಗಡಿಯ ಮೂರು ಮಾರ್ಗದ ಬಳಿ ಸ್ಮಾರಕವೊಂದನ್ನು ನಿರ್ಮಾಣ ಮಾಡಿದ್ದರು. ಕಾಲಾಂತರದಲ್ಲಿ ಬೆಳ್ತಂಗಡಿ ಪೇಟೆಯ ಮಧ್ಯಭಾಗದಲ್ಲಿದ್ದರೂ, ಹಲವಾರು ವರ್ಷಗಳಿಂದ ಯಾರು ಗಮನಿಸದೆ ಇದ್ದದ್ದು ವಿಪರ್ಯಾಸವೇ ಸರಿ. ಇದನ್ನು ಮನಗಂಡು ವಿಶ್ವ ಹಿಂದೂ ಪರಿಷತ್, ಭಜರಂಗದಳ ಈ ಸ್ಮಾರಕವನ್ನು ಪುನಶ್ಚೇತನಗೊಳಿಸಿ 71 ನೇ ಸ್ವಾತಂತ್ರ್ಯ ದಿನಾಚರಣೆಯನ್ನು ಬಹಳ ಅರ್ಥಪೂರ್ಣವಾಗಿ ಆಚರಿಸಿತು.
ಈ ಸಂದರ್ಭದಲ್ಲಿ ಪುಂಡಲೀಕ ಕಾಮತ್ ರವರ ಅಣ್ಣನ ಮಗನಾದ ಅಶೋಕ್ ಕಾಮತ್ ರವರನ್ನು ಗೌರವಿಸಲಾಯಿತು. ಈ ಸಂದರ್ಭದಲ್ಲಿ ವಿ.ಹಿಂ.ಪ. ಪ್ರಧಾನ ಕಾರ್ಯದರ್ಶಿ ನವೀನ್ ನೆರಿಯ, ದ.ಕ. ಬಿಜೆಪಿ ಯುವ ಮೋರ್ಚಾ ಜಿಲ್ಲಾಧ್ಯಕ್ಷ ಹರೀಶ್ ಪೂಂಜ, ವಿ.ಹಿಂ.ಪ. ನಗರ ಅಧ್ಯಕ್ಷ ಮೋಹನ್, ಗುರು ನಾರಾಯಣ ಸ್ವಾಮಿ ಸೇವಾ ಸಂಘದ ಪ್ರ. ಕಾರ್ಯದರ್ಶಿ ಸಂತೋಷ್ ಕುಮಾರ್ ಕಾಪಿನಡ್ಕ, ಬಿಜೆಪಿ ಬೆಳ್ತಂಗಡಿ ಪ್ರಧಾನ ಕಾರ್ಯದರ್ಶಿ ಸೀತಾರಾಮ್ ಬಿ.ಎಸ್, ಪ್ರಭಾಕರ ಶೆಟ್ಟಿ ಉಪ್ಪಡ್ಕ, ಬಿಜೆಪಿ ಪ್ರಮುಖರಾದ ಶಂಕರ್ ಹೆಗ್ಡೆ, ರಾಜೇಶ್ ಮೂಡುಕೋಡಿ, ಭುಜಂಗ ಶೆಟ್ಟಿ, ಪ್ರಾಣೇಶ್ ಪುತ್ರನ್ ಅಂಡಿಂಜೆ, ಈಶ್ವರ ಭೈರ, ರಾಷ್ಟ್ರಿಯ ಸ್ವಯಂ ಸೇವಕ ಸಂಘದ ರಾಜೇಶ್ ಸಾವ್ಯ, ಪ್ರಕಾಶ್ ಪಿ, ಪವನ್ ಉಜಿರೆ, ಗೋಪಿನಾಥ್ ಕಾಮತ್, ಕವನ್ ಗುರುವಾಯನಕೆರೆ, ಶರತ್ ಬೆಳ್ತಂಗಡಿ, ಪ್ರಕಾಶ್ ಆಚಾರ್ಯ, ಉಮೇಶ್ ಕುಲಾಲ್, ಜಗದೀಶ್ ಕನ್ನಾಜೆ ಹಾಗೂ ವಿ.ಹಿಂ.ಪ ಭಜರಂಗದಳದ ಕಾರ್ಯಕರ್ತರು ಭಾಗವಹಿಸಿದ್ದರು.

chandrashekar 

  • ತಹಶೀಲ್ದಾರ್ ಹುದ್ದೆಗೆ ನೇರ ನೇಮಕಾತಿ
  • ಪದವಿ ಕಾಲೇಜಿನಲ್ಲಿ  ಸಹಾಯಕ ಪ್ರಾಧ್ಯಾಪಕರಾಗಿಯೂ  ಉತ್ತೀರ್ಣ

ಬೆಳ್ತಂಗಡಿ : ಕಳೆದ ನಾಲ್ಕು ವರ್ಷಗಳಿಂದ ಬೆಳ್ತಂಗಡಿ ತಾ| ಇಂದಬೆಟ್ಟು ಗ್ರಾ.ಪಂ ಅಭಿವೃದ್ದಿ ಅಧಿಕಾರಿಯಾಗಿ ಕ್ರಿಯಾಶೀಲ ವ್ಯಕ್ತಿತ್ವದಿಂದ ಗುರುತಿಸಲ್ಪಟ್ಟಿರುವ ಚಂದ್ರಶೇಖರ್ ಅವರು ಕೆಪಿಎಸ್‌ಸಿ ಪರೀಕ್ಷೆಯಲ್ಲಿ ಉತ್ತೀರ್ಣರಾಗುವ ಮೂಲಕ ತಹಶಿಲ್ದಾರರಾಗಿ ನೇರ ನೇಮಕಾತಿ ಹೊಂದಿದ್ದಾರೆ.
ಜೊತೆಗೆ ಅವರ ಇನ್ನೊಂದು ಪ್ರತಿಭೆಯ ಅನಾವರಣವೂ ಆಗಿದ್ದು 2016 ಮಾರ್ಚ್‌ನಲ್ಲಿ ಬರೆದಿದ್ದ ಪರೀಕ್ಷೆಯೊಂದರಲ್ಲೂ ಉತ್ತೀರ್ಣರಾಗಿರುವ ಅವರು ಪದವಿ ಕಾಲೇಜಿನ ಸಹಾಯಕ ಪ್ರಾಧ್ಯಾಪಕರಾಗಿಯೂ (ಯುಜಿಸಿ) (ಅಸಿಸ್ಟೆಂಟ್ ಪ್ರೊಫೆಸರ್) ನೇಮಕಾತಿ ಆದೇಶ ಪಡೆದಿದ್ದಾರೆ.
ದಾವಣಗೆರೆ ಜಿಲ್ಲೆಯ ಹೊನ್ನಾಳಿ ತಾಲೂಕಿನ ನಿವಾಸಿಯಾಗಿರುವ ಅವರು 11 ವರ್ಷಗಳ ಕಾಲ ಪ್ರಾಥಮಿಕ ಶಾಲಾ ಶಿಕ್ಷಕರಾಗಿ ಸೇವೆ ಸಲ್ಲಿಸಿದವರು 2013 ರಲ್ಲಿ ಪರೀಕ್ಷೆ ಬರೆದು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯ ಪಿಡಿಒ ಆಗಿ ನೇರ ನೇಮಕವಾಗಿದ್ದರು. ಆ ಬಳಿಕದಿಂದ ಬೆಳ್ತಂಗಡಿ ತಾಲೂಕಿನ ಇಂದಬೆಟ್ಟು ಗ್ರಾ.ಪಂ ಗೆ ನಿಯುಕ್ತಿಗೊಂಡು ಕರ್ತವ್ಯಸಲ್ಲಿಸುತ್ತಿದ್ದಾರೆ. ಸದ್ಯ ಅವರು ಹುದ್ದೆಯ ಆಯ್ಕೆ ಮಾಡಬೇಕಾಗಿದ್ದು ಇದೀಗ ಪೂರಕ ದಾಖಲೆ ಪರಿಶೀಲನೆ ಹಂತದಲ್ಲಿದ್ದಾರೆ.

madanthyar astami1ಮಡಂತ್ಯಾರು: ಶ್ರೀಕೃಷ್ಣನ ಬಾಲ್ಯ ಜೀವನ ಮತ್ತು ಏಸುವಿನ ಬಾಲ್ಯ ಜೀವನ ಒಂದಕ್ಕೊಂದು ಸಾಮ್ಯತೆ ಹೊಂದಿದೆ. ಇಂಟರ್‌ನೆಟ್ ಯುಗದಲ್ಲಿ ಬೇರೆ ಬೇರೆ ಬಣ್ಣಗಳನ್ನು ಕಾಣುತ್ತಾರೆ. ಆದರೆ ದೇವರ ಮುಗ್ದತೆಯನ್ನು ಮರೆಯುತ್ತೇವೆ. ಎಲ್ಲರೂ ಒಂದೇ ಎಂಬಂತೆ ತಿಳಿದು ಬದುಕುವುದು ಬಾಳು. ಬದುಕಿ ತಿಳಿಯುವುದು ಬಾಳಲ್ಲ ಎಂದು ಮಡಂತ್ಯಾರು ಸೆಕ್ರೆಡ್ ಹಾರ್ಟ್ ಚರ್ಚ್ ಧರ್ಮಗುರುಗಳಾದ ವಂ. ಫಾ| ಬೆಸಿಲ್ ವಾಸ್ ಹೇಳಿದರು.
ಅವರು ಆ.15ರಂದು ಗಣಪತಿ ಮಂಟಪದ ವಠಾರದಲ್ಲಿ ನಡೆದ ಮಡಂತ್ಯಾರು ಶ್ರೀ ಕೃಷ್ಣ ಜನ್ಮಾಷ್ಟಮಿ ಸಮಿತಿಯ 28ನೇ ವರ್ಷದ ಮೊಸರು ಕುಡಿಕೆ ಉತ್ಸವದ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಮಡಂತ್ಯಾರು ಇಂದು ಹಬ್ಬದ ತೇರು ಇದ್ದ ಹಾಗೆ ಕಾಣುತ್ತದೆ. ಸರ್ವ ಧರ್ಮಿಯರು ಇಲ್ಲಿ ಪಾಲ್ಗೊಂಡಿದ್ದಾರೆ. ನಮ್ಮ ಈ ವಿಸ್ತಾರ ಮನೋಭಾವದಿಂದ ಕೃಷ್ಣ ಜನ್ಮಾಷ್ಟಮಿ ಸಮಿತಿ ಹೃದಯ ವೈಶಾಲ್ಯತೆ ಹೊಂದಿದೆ. ನಮ್ಮಲ್ಲಿ ಇನ್ನು ಬೇಕು ಕೋಮು ಸೌಹಾರ್ದತೆಯ ಸಂಕೆತದ ಈ ಹಬ್ಬ ಇನ್ನು ಮುಂದಿನ ದಿನಗಳಲ್ಲಿ ಯಶಸ್ವಿಯನ್ನು ಕಾಣಲಿ ಎಂದರು.
ಪುತ್ತೂರು ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ ಅಧ್ಯಕ್ಷ ಬುಡಿಯಾರ್ ರಾಧಾಕೃಷ್ಣ ರೈ ಬಹುಮಾನ ವಿತರಿಸಿ ಮಾತನಾಡಿ, ಸಮಾಜದಲ್ಲಿ ಕಷ್ಟಕರ ವಾತಾವರಣ ಕಾಣುತ್ತೇವೆ. ಇಲ್ಲಿ ಜಾತಿ ಮತ ಬೇದವಿಲ್ಲದೆ ಆಚರಿಸುವ ಎಲ್ಲಾ ಕಾರ್ಯಕ್ರಮಗಳು ಸಮಾಜಕ್ಕೆ ಮಾದರಿಯಾಗಲೆಂದು ಹಾರೈಸಿದರು.
ಪಂಚಾಯತ್ ಅಭಿವೃದ್ಧಿ ಅಧಿಕಾರಿ ನಾಗೇಶ್ ಎಂ. ಶ್ರೀ ಕೃಷ್ಣನ ಜೀವನ ಚರಿತ್ರೆಯನ್ನು ತಿಳಿಸಿದರು. ಉಜಿರೆ ಗ್ರಾ.ಪಂ. ಸದಸ್ಯ ರವಿ ಕುಮಾರ್ ಬರಮೇಲು ಮಾತನಾಡಿ ನಾವು ಆಚರಿಸುವ ಯಾವುದೇ ಹಬ್ಬ ಹರಿದಿನಗಳನ್ನು ನಮ್ಮ ನಮ್ಮ ಸಂಸ್ಕೃತಿಯನ್ನು ತಿಳಿದು ಆಚರಿಸಿದರೆ ಉತ್ತಮ ಎಂದರು. ವಾಮದಪದವು ಯಜಮಾನ ಇಂಡಸ್ಟ್ರಿಯ ವರದರಾಜ ಪೈ, ಮಡಂತ್ಯಾರು ಜೇಸಿಯ ಅಧ್ಯಕ್ಷ ರಾಜೇಶ್ ಪುಳಿಮಜಲು ಶುಭ ಹಾರೈಸಿದರು. ಈ ಸಂದರ್ಭದಲ್ಲಿ ಸ್ವಾತಂತ್ರ್ಯೋತ್ಸವದ ಪ್ರಯುಕ್ತ ನಿವೃತ್ತ ಸೈನಿಕರಾದ ಕಾಂತಪ್ಪ ಗೌಡ ಹಟ್ಟತ್ತೋಡಿ, ಸತೀಶ್ ಸುವರ್ಣ ಪಿ. ಇವರನ್ನು ಸನ್ಮಾನಿಸಲಾಯಿತು.
ಸಮಿತಿಯ ಸ್ಥಾಪಕಾಧ್ಯಕ್ಷರಾದ ಕೆ. ಪ್ರಭಾಕರ ಶೆಟ್ಟಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಕು| ಭೂಮಿಕಾ, ಕು| ಸದಾನ, ಕು| ಪಲ್ಲವಿ ಪ್ರಾರ್ಥನೆ ಹಾಡಿದರು.
ತೀರ್ಪುಗಾರರಾಗಿ ಸೇವೆ ಸಲ್ಲಿಸುತ್ತಿದ್ದ ಸಂಜೀವ ಶೆಟ್ಟಿ ಮುಗೆರೋಡಿ, ಅಟೋರಿಕ್ಷ ಚಾಲಕ ಮಾಲಕ ಬಿ.ಎಂ.ಸಿ. ಸದಸ್ಯರಾಗಿ ನೇಮಕಗೊಂಡಿರುವ ಉಮೇಶ್ ಕುಮಾರ್ ಕೋಟೆ, ಫೋಟೊಗ್ರಾಫಿ ನವೀನ್ ಇವರನ್ನು ಸ್ಮರಣಿಕೆ ನೀಡಿ ಗೌರವಿಸಲಾಯಿತು. ಪದ್ಮನಾಭ ಸುವರ್ಣ ಸ್ವಾಗತಿಸಿ, ವಂದಿಸಿ ಕಾರ್ಯಕ್ರಮ ನಿರೂಪಿಸಿದರು. ಸಮಿತಿಯ ಸದಸ್ಯ ಪ್ರತೀವರ್ಷ ಭಾರ ಎತ್ತುವ ಸ್ಪರ್ಧೆಯಲ್ಲಿ ಭಾಗವಹಿಸುತಿದ್ದ ಹೃದಯಘಾತದಿಂದ ನಿಧನ ಹೊಂದಿದ ವಿಶ್ವನಾಥ ಪಲ್ಕೆ ಇವರ ನಿಧನಕ್ಕೆ 1 ನಿಮಿಷ ಮೌನ ಪ್ರಾರ್ಥನೆ ಮಾಡಲಾಯಿತು.
ಕಾರ್ಯಕ್ರಮದಲ್ಲಿ ಸಂಜೀವ ಶೆಟ್ಟಿ ಮುಗೆರೋಡಿ, ತಾ.ಪಂ. ಸದಸ್ಯ ಜೋಯಲ್ ಮೆಂಡೋನ್ಸಾ, ಗ್ರಾ.ಪಂ. ಸದಸ್ಯ ಅದ್ದುಲ್ ರಹಿಮಾನ್ ಪಡ್ಪು ಉಪಸ್ಥಿತರಿದ್ದರು.
ಸಮಿತಿಯ ಅಧ್ಯಕ್ಷ ಅರುಣ್ ಸಾಲಿಯಾನ್, ಗೌರವಾಧ್ಯಕ್ಷ ರೂಪೇಶ್ ಆಚಾರ್ಯ, ಉಮೇಶ್ ಕುಮಾರ್ ಕೋಟೆ, ಕಾರ್ಯದರ್ಶಿ ಸತೀಶ್ ಸಾಲ್ಯಾನ್, ಜೊತೆಕಾರ್ಯದರ್ಶಿ ದಿನೇಶ್ ಎಂ. ಪಾಂಗಾಳ, ಶ್ರೀನಿವಾಸ ಟೈಲರ್, ಪ್ರಶಾಂತ್ ಎಂ. ಪ್ರತಿಮಾನಿಲಯ, ವೀರೇಂದ್ರ ಕುಮಾರ್, ಶಂಕರ್ ಶೆಟ್ಟಿ, ನಾರಾಯಣ ಪೂಜಾರಿ, ನಾರಾಯಣ ನಾವಡ, ಕುಶಾಲಪ್ಪ ಗೌಡ, ರಮೇಶ್, ಸದಾಶಿವ ಹೆಗ್ಡೆ, ಕಿರಣ್ ಕುಮಾರ್, ರೋಹಿತ್ ಪೂಜಾರಿ, ಜಯ ಕೆ. ಪಾಂಡವರಕಲ್ಲು, ಜನಾರ್ಧನ ಶೆಟ್ಟಿಗಾರ ಮರಕಡ, ಚಂದ್ರ, ಗಿರಿಯಪ್ಪ ಪೂಜಾರಿ, ಪ್ರಮೋದ್ ಕುಮಾರ್, ವೆಂಕಟರಮಣ ಗೌಡ, ವಿಶ್ವನಾಥ ಪೂಜಾರಿ, ಎ.ಪಿ.ಎಂ.ಸಿ. ನಿರ್ದೇಶಕಿ ಶ್ರೀಮತಿ ಸೆಲೆಸ್ತಿನ್ ಡಿಸೋಜ ಮೊದಲಾದವರು ಸಹಕರಿಸಿದರು. ಬೆಳಿಗ್ಗೆ ಉದ್ಘಾಟನಾ ಸಮಾರಂಭವನ್ನು ನ್ಯಾಯವಾದಿ ವಸಂತ ಮರಕಡ ನೆರವೇರಿಸಿದರು. ಅಟೊ ರಿಕ್ಷಾ ಚಾಲಕರ ಮಾಲಕ ಸಂಘದ ಅಧ್ಯಕ್ಷ ಸುಧಾಕರ ಶೆಣೈ ಖಂಡಿಗ ಅಧ್ಯಕ್ಷತೆ ವಹಿಸಿದರು. ಕಾರ್ಯಕ್ರಮದ ನಂತರ ಭದ್ರಾವತಿ ಬೀಟ್ಸ್ ಆರ್ಕೇಸ್ಟ್ರಾ ಇವರಿಂದ ಸಂಗೀತ ರಸಮಂಜರಿ ನಡೆಯಿತು.

rseti rastriya puraskaraಧರ್ಮಸ್ಥಳ : ಕೇಂದ್ರ ಸರ್ಕಾರದ ಉದ್ಯಮಶೀಲತಾ ಅಭಿವೃದ್ಧಿ ಮಂತ್ರಾಲಯದ 2016-17ನೇ ಸಾಲಿನ ರಾಷ್ಟ್ರೀಯ ಉದ್ಯಮ ಶೀಲತಾ ಅಭಿವೃದ್ಧಿ ಪುರಸ್ಕಾರವು ಆರ್‌ಸೆಟಿಗಳ ರಾಷ್ಟ್ರೀಯ ಶ್ರೇಷ್ಠತಾ ಕೇಂದ್ರಕ್ಕೆ ಲಭಿಸಿದೆ.
ಆ.9 ರಂದು ನವದೆಹಲಿಯಲ್ಲ್ಲಿ ನಡೆದ ವಿಶೇಷ ಸಮಾರಂಭದಲ್ಲಿ ಕೇಂದ್ರ ಸರ್ಕಾರದ ಉದ್ಯಮಶೀಲತಾ ಮಂತ್ರಾಲಯದ ಸಚಿವ ರಾಜೀವ್ ಪ್ರತಾಪ್ ರೂಡಿ ಪ್ರಶಸ್ತಿ ಪ್ರದಾನ ಮಾಡಿದರು.
ಆರ್‌ಸೆಟಿಗಳ ರಾಷ್ಟ್ರೀಯ ನಿರ್ದೇಶಕ ಕೆ. ಎನ್. ಜನಾರ್ದನ್, ಕೆನರಾ ಬ್ಯಾಂಕಿನ ಕಾರ್ಯಕಾರಿ ನಿರ್ದೇಶಕಿ ಪಿ. ವಿ. ಭಾರತಿ, ಸಿಂಡಿಕೇಟ್ ಬ್ಯಾಂಕಿನ ಮಾಹಾ ಪ್ರಬಂಧಕ ಅಶೋಕನ್ ಸಂಸ್ಥೆಯ ಪರವಾಗಿ ಪ್ರಶಸ್ತಿಯನ್ನು ಸ್ವೀಕರಿಸಿದರು.
ಆರ್‌ಸೆಟಿಗಳ ರಾಷ್ಟ್ರೀಯ ಶ್ರೇಷ್ಠತಾ ಕೇಂದ್ರದ ಅಧ್ಯಕ್ಷರು ಹಾಗೂ ಧರ್ಮಸ್ಥಳದ ಧರ್ಮಾಧಿಕಾರಿ ವೀರೇಂದ್ರ ಹೆಗ್ಗಡೆಯವರ ನೇತೃತ್ವ ಮತ್ತು ಮಾರ್ಗದರ್ಶನದಲ್ಲಿ 24.20 ಲಕ್ಷ ನಿರುದ್ಯೋಗಿಗಳಿಗೆ ತರಬೇತಿ ನೀಡಿದ್ದು, 15.70 ಲಕ್ಷ ಯುವಕ/ಯುವತಿಯರು ಸ್ವಯಂ ಉದ್ಯೋಗ ಮಾಡುವಲ್ಲಿ ಯಶಸ್ವಿಯಾಗಿದ್ದಾರೆ.
1982 ರಲ್ಲಿ ಉಜಿರೆಯಲ್ಲಿ ಪ್ರಾರಂಭಗೊಂಡ ರುಡ್‌ಸೆಟ್ ಸಂಸ್ಥೆ ಪ್ರಸ್ತುತ 586 ಶಾಖೆಗಳ ಮೂಲಕ ನಿರುದ್ಯೋಗಿಗಳಿಗೆ ಮಾಹಿತಿ, ಮಾರ್ಗದರ್ಶನ ಮತ್ತು ತರಬೇತಿ ನೀಡಿ ನಿರುದ್ಯೋಗ ಸಮಸ್ಯೆ ನಿವಾರಿಸುವಲ್ಲಿ ಯಶಸ್ವಿಯಾಗಿದೆ.

blt nagarapanchayathಬೆಳ್ತಂಗಡಿ : ರಾಜ್ಯದ ಎಲ್ಲಾ ನಗರ ಸ್ಥಳೀಯ ಸಂಸ್ಥೆಗಳನ್ನು ಬಯಲು ಶೌಚ ಮುಕ್ತ ನಗರಗಳಾಗಿ ಮಾಡಲು ಸರಕಾರ ಮಾಡಿದ ಯೋಜನೆಯಲ್ಲಿ ಉತ್ತಮ ಸಾಧನೆ ಮಾಡಿದ ಬೆಳ್ತಂಗಡಿ ನಗರ ಪಂಚಾಯತು ಪ್ರಥಮ ಹಂತದಲ್ಲೇ ಪ್ರಶಸ್ತಿಗೆ ಆಯ್ಕೆಯಾಗಿದೆ.
ಆ.15ರಂದು ಮಂಗಳೂರು ನೆಹರು ಮೈದಾನದಲ್ಲಿ ನಡೆದ 71ನೇ ಸ್ವಾತಂತ್ರ್ಯ ದಿನಾಚರಣೆ ಕಾರ್ಯಕ್ರಮದಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಬಿ. ರಮಾನಾಥ ರೈ ಅವರು ಈ ಪ್ರಶಸ್ತಿಯನ್ನು ಪ್ರಧಾನ ಮಾಡಿದರು. ಬೆಳ್ತಂಗಡಿ ನಗರ ಪಂಚಾಯತು ಉಪಾಧ್ಯಕ್ಷ ಜಗೀಶ್ ಡಿ. ಮುಖ್ಯಾಧಿಕಾರಿ ಜೆಸಿಂತಾ ಲೂಯಿಸ್ ಅವರು ಪಂಚಾಯತು ಆಡಳಿತದ ಪರವಾಗಿ ಪ್ರಶಸ್ತಿಯನ್ನು ಸ್ವೀಕರಿಸಿದರು.
ಈ ಸಂದರ್ಭದಲ್ಲಿ ಸಂಸದ ನಳಿನ್ ಕುಮಾರ್, ಶಾಸಕರಾದ ಮೊದೀನ್ ಭಾವ, ಜೆ.ಆರ್. ಲೋಬೋ, ವಿಧಾನ ಪರಿಷತ್ ಮುಖ್ಯ ಸಚೇತಕ ಐವನ್ ಡಿ’ಸೋಜಾ, ಮೇಯರ್ ಕವಿತಾ ಸನಿಲ್, ಉಪಮೇಯರ್ ರಜನೀಶ್, ಜಿಲ್ಲಾಧಿಕಾರಿ ಡಾ| ಕೆ.ಜೆ. ಜಗದೀಶ್, ಅಪರ ಜಿಲ್ಲಾಧಿಕಾರಿ ಕುಮಾರ್, ಐಜಿಪಿ ಹರಿಶೇಖರನ್, ಎಸ್.ಪಿ. ಸುಧೀರ್ ರೆಡ್ಡಿ, ಜಿ.ಪಂ. ಸಿಇಒ ಡಾ. ಎಂ.ಆರ್. ರವಿ, ಕಸಾಪ ಅಧ್ಯಕ್ಷ ಪ್ರದೀಪ್ ಕುಮಾರ್ ಕಲ್ಕೂರ ಮೊದಲಾದವರು ಉಪಸ್ಥಿತರಿದ್ದರು. ಬೆಳ್ತಂಗಡಿ ನಗರ ವ್ಯಾಪ್ತಿಯಲ್ಲಿ ಎಲ್ಲಾ ಮನೆಗಳಲ್ಲೂ ಜನರು ಶೌಚಾಲಯವನ್ನು ಬಳಸುತ್ತಿದ್ದಾರೆ. ಶೌಚಾಲಯ ಇಲ್ಲದ ಬಡ ಕುಟುಂಬಗಳಿಗೆ ನಗರ ಪಂಚಾಯತು ವತಿಯಿಂದ ಪ್ರತಿ ವರ್ಷ ಶೌಚಾಲಯ ನಿರ್ಮಾಣಕ್ಕೆ ಸಾಮಾಗ್ರಿ ಹಾಗೂ ಅನುದಾನವನ್ನು ನೀಡಲಾಗುತ್ತದೆ. ಅಲ್ಲದೆ ಬೆಳ್ತಂಗಡಿ ಬಸ್ ನಿಲ್ದಾಣ ಮತ್ತು ಸಂತೆಕಟ್ಟೆಯಲ್ಲಿ ಸಾರ್ವಜನಿಕ ಶೌಚಾಲಯ ನಿರ್ಮಿಸಲಾಗಿದ್ದು, ಇದರ ನಿರ್ವಹಣೆಯನ್ನು ನಿರಂತರವಾಗಿ ಮಾಡಲಾಗುತ್ತಿದೆ. ನಗರದ ಸ್ವಚ್ಛತೆಗೆ ಆಡಳಿತ ಹೆಚ್ಚಿನ ಗಮನ ಹರಿಸಿ ಅದಕ್ಕೆ ಬೇಕಾದ ಪೂರಕ ವ್ಯವಸ್ಥೆಗಳನ್ನು ಮಾಡುತ್ತಿದೆ. ನಗರದ ತ್ಯಾಜ್ಯ ವಿಲೇಯನ್ನು ಸಮರ್ಪಕವಾಗಿ ನಿರ್ವಹಿಸಲಾಗುತ್ತಿದೆ. ಅಂಗಡಿ ಹಾಗೂ ಮನೆಗಳಿಂದ ತ್ಯಾಜ್ಯ ಸಂಗ್ರಹಣೆಯೂ ಪ್ರತಿ ದಿನ ನಡೆಯುತ್ತಿದೆ. ಈ ಎಲ್ಲಾ ಅಂಶಗಳನ್ನು ಪರಿಗಣಿಸಿ ಬೆಳ್ತಂಗಡಿ ನಗರ ಪಂಚಾಯತನ್ನು ಸರಕಾರ ಈ ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ.

DV Heggadeಧರ್ಮಸ್ಥಳ: 2017ರ ಜನವರಿ ತಿಂಗಳಿನಲ್ಲಿ ಮಕರ ಸಂಕ್ರಾಂತಿಯ ಶುಭಾವಸರದಲ್ಲಿ ಶ್ರದ್ಧಾ ಕೇಂದ್ರಗಳ ಸ್ವಚ್ಛತಾ ಅಭಿಯಾನಕ್ಕೆ ಕರೆ ನೀಡಿದಾಗ ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ 600 ಶ್ರದ್ಧಾ ಕೇಂದ್ರಗಳಲ್ಲಿ 3,20,000 ಮಂದಿ ಸ್ವಚ್ಛತಾ ಅಭಿಯಾನದಲ್ಲಿ ಭಾಗವಹಿಸಿದ್ದಾರೆ. ಸ್ವಚ್ಛತಾ ಅಭಿಯಾನದಿಂದ ಶ್ರದ್ಧಾ ಕೇಂದ್ರಗಳ ಸಾನ್ನಿಧ್ಯ ವೃದ್ಧಿಯಾಗಿದೆ. ದರ್ಶನಕ್ಕೆ ಬರುವ ಭಕ್ತರಲ್ಲಿ ಭಕ್ತಿಯೊಂದಿಗೆ ಪವಿತ್ರ ಮನೋಭಾವ ಮೂಡಿ ಬಂದಿದೆ. ಶ್ರದ್ಧಾ ಕೇಂದ್ರಗಳ ಪರಿಸರದಲ್ಲಿ ಸ್ವಚ್ಛತೆ ಕಾಪಾಡುವ ಬಗ್ಗೆ ಜನ ಜಾಗೃತಿ ಉಂಟಾಗಿದೆ. ಈ ಕಾರ್ಯದಲ್ಲಿ ನಮ್ಮ ಕ್ಷೇತ್ರದ ಭಕ್ತರು, ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಸದಸ್ಯರು ಹಾಗೂ ಜಾತಿ-ಮತ ಬೇಧವಿಲ್ಲದೆ ಎಲ್ಲಾ ಸಾರ್ವಜನಿಕರು ಉತ್ತಮ ಪ್ರತಿಕ್ರಿಯೆ ನೀಡಿ ಸ್ವಚ್ಛತಾ ಕಾರ್ಯಕ್ರಮವನ್ನು ಯಶಸ್ವಿಗೊಳಿಸಿದ್ದಾರೆ. ಇದು ಅಭಿನಂದನಾರ್ಹ ಎಂದು ಶ್ರೀ ಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿ ಡಾ| ಡಿ. ವೀರೇಂದ್ರ ಹೆಗ್ಗಡೆವರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಸ್ವಚ್ಛತಾ ಅಂದೋಲನದ ಪರಿಣಾಮವಾಗಿ ಎಲ್ಲಾ ಶ್ರದ್ಧಾ ಕೇಂದ್ರಗಳಲ್ಲಿ ನಿರಂತರ ಸ್ವಚ್ಛತಾ ಕಾರ್ಯಕ್ರಮಗಳು ನಡೆದು ಜನರಲ್ಲಿ ಅರಿವು ಜಾಗೃತಿ ಉಂಟಾಗಿದೆ. ಈ ಬಾರಿಯ 71ನೇ ಸ್ವಾತಂತ್ರ್ಯೋತ್ಸವ ಆಚರಣೆ ಸಂದರ್ಭದಲ್ಲಿಯೂ ಮತ್ತೆ ಶ್ರದ್ಧಾ ಕೇಂದ್ರಗಳ ಸ್ವಚ್ಛತೆಯ ಕಾರ್ಯ ಮುಂದುವರಿಸಿ ಸಹಕರಿಸಿರುವುದಕ್ಕೆ ಸಂತೋಷವಾಗಿದೆ. ಇದು ನಿರಂತರವಾಗಿ ನಡೆಯಬೇಕಾದ ಕರ್ತವ್ಯ ರೂಪದ, ಸೇವಾ ರೂಪದ ಸಮರ್ಪಣಾ ಕಾರ್ಯಕ್ರಮವಾಗಿದೆ. ಯಾವುದೇ ಕಾರಣಕ್ಕೂ ಕ್ಷೇತ್ರಗಳನ್ನು ಅಪವಿತ್ರಗೊಳಿಸಿ ಮತ್ತೆ ಮಲಿನತೆಗೆ ಅವಕಾಶ ನೀಡಬೇಡಿ. ಎಲ್ಲಾ ಪವಿತ್ರ ಶ್ರದ್ಧಾ ಕೇಂದ್ರಗಳು ಸದಾ ನಿಮ್ಮೆಲ್ಲರ ಕಣ್ಗಾವಲಿನಲ್ಲಿ ಮತ್ತು ಸೇವೆಯಲ್ಲಿ ರಕ್ಷಿಸಲ್ಪಡಲಿ ಎಂದು ಆಶಿಸುತ್ತೇನೆ ಎಂದಿರುವ ಅವರು ಸ್ವಚ್ಛತಾ ಅಭಿಯಾನದಲ್ಲಿ ಪ್ರತ್ಯಕ್ಷವಾಗಿ ಹಾಗೂ ಪರೋಕ್ಷವಾಗಿ ಸಹಕರಿಸಿದ ಎಲ್ಲರಿಗೂ ಶ್ರೀ ಮಂಜುನಾಥ ಸ್ವಾಮಿಯ ಅನುಗ್ರಹವಿರಲಿ ಹಾಗೂ ಶ್ರದ್ಧಾ ಕೇಂದ್ರಗಳ ಭಗವತ್ ಸಾನ್ನಿಧ್ಯಗಳು ಸಂತೃಪ್ತರಾಗಿ ಹರಸಲೆಂದು ಪ್ರಾರ್ಥಿಸುತ್ತೇನೆ ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Thaluku mattada swathanthra dinacharaneಬೆಳ್ತಂಗಡಿ: ಜಾತಿ, ಧರ್ಮ, ಪ್ರಾಂತ್ಯದ ಹೆಸರಿನಲ್ಲಿ ನಮ್ಮ ನಡುವೆ ನಡೆಯುವ ಸಂಘರ್ಷವನ್ನು ನಿಲ್ಲಿಸಿ ದೇಶದ ಪ್ರಗತಿಗಾಗಿ ನಾವೆಲ್ಲ ಸಂಘಟಿತರಾಗಬೇಕು, ರಾಷ್ಟ್ರಪ್ರೇಮ, ಕರ್ತವ್ಯಪ್ರಜ್ಞೆ ನಮ್ಮಲ್ಲಿ ಮೂಡಬೇಕು ಎಂದು ಶಾಸಕ ಹಾಗೂ ರಾಜ್ಯ ಸಣ್ಣ ಕೈಗಾರಿಕಾ ನಿಗಮದ ಅಧ್ಯಕ್ಷ ಕೆ. ವಸಂತ ಬಂಗೇರ ಕರೆ ನೀಡಿದರು.
ಅವರು ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿ ಬೆಳ್ತಂಗಡಿ ಇದರ ವತಿಯಿಂದ ವಾಣಿ ಪದವಿ ಪೂರ್ವ ಕಾಲೇಜಿನ ಮೈದಾನದಲ್ಲಿ ನಡೆದ 71ನೇ ಸ್ವಾತಂತ್ರ್ಯ ದಿನಾಚರಣೆ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಬ್ರಿಟೀಷರ ವಿರುದ್ಧ ನಮ್ಮ ದೇಶದ ಸಹಸ್ರ, ಸಹಸ್ರ ಸಂಖ್ಯೆಯಲ್ಲಿ ದೇಶಭಕ್ತರು ಹೋರಾಟ ನಡೆಸಿದ್ದಾರೆ. ಸಾವಿರಾರು ಸಂಖ್ಯೆಯಲ್ಲಿ ಸ್ವಾತಂತ್ರ್ಯಕ್ಕಾಗಿ ಬಲಿದಾನಗಳು ನಡೆದಿದೆ. ಇವರೆಲ್ಲರ ಪ್ರಯತ್ನದ ಫಲವಾಗಿ ನಮಗೆ ಸ್ವಾತಂತ್ರ್ಯ ದೊರಕಿದೆ. ಇಂದು ನಮ್ಮ ದೇಶ ಪ್ರಗತಿಪಥದಲ್ಲಿ ಸಾಗುತ್ತಿದ್ದು, ಜಗತ್ತಿನಲ್ಲಿ ಬಲಿಷ್ಠ ರಾಷ್ಟ್ರವಾಗಿ ರೂಪುಗೊಳ್ಳುತ್ತಿದೆ ಎಂದು ಅಭಿಪ್ರಾಯ ಪಟ್ಟರು.
ಧ್ವಜಾರೋಹಣವನ್ನು ನೆರವೇರಿಸಿ ಸಂದೇಶ ನೀಡಿದ ಬೆಳ್ತಂಗಡಿ ತಹಶೀಲ್ದಾರ್ ಎಚ್.ಕೆ ತಿಪ್ಪೇಸ್ವಾಮಿಯವರು ಸ್ವಾತಂತ್ರ್ಯಕ್ಕಾಗಿ ಹಿರಿಯರ ತ್ಯಾಗ, ಬಲಿದಾನವನ್ನು ನಾವೆಲ್ಲ ಸದಾ ನೆನಪಿಸಬೇಕು. ಇಂದು ನಮ್ಮ ರಾಷ್ಟ್ರದಲ್ಲಿ ಅಭಿವೃದ್ಧಿಗೆ ಒತ್ತು ನೀಡಲಾಗುತ್ತಿದ್ದು, ಭಯೋತ್ಪಾದನೆ, ನಕ್ಸಲ್‌ನಂತಹ ಚಟುವಟಿಕೆಗಳನ್ನು ನಿಗ್ರಹಿಸಬೇಕಾಗಿದೆ. ದೇಶ, ಭಾಷೆಯನ್ನು ಬೆಳೆಸುವುದರೊಂದಿಗೆ ನಮ್ಮ ರಾಷ್ಟ್ರವನ್ನು ಕಟ್ಟಿಬೆಳೆಸುವ ಕಾರ್ಯದಲ್ಲಿ ನಾವೆಲ್ಲ ಕೈಜೋಡಿಸಬೇಕು ಎಂದರು.
ಬೆಳ್ತಂಗಡಿ ಹೋಲಿ ರಿಡೀಮರ್ ಚರ್ಚ್‌ನ ಪ್ರಧಾನ ಧರ್ಮಗುರು ರೆ| ಫಾ| ಬೋನವೆಂಚರ್ ನಜ್ರೆತ್ ಪ್ರಧಾನ ಭಾಷಣ ಮಾಡಿ, ನಾವಿಂದು ನೆಮ್ಮದಿಯಿಂದ ಇರುವಲ್ಲಿ ಗಡಿಗಳಲ್ಲಿ ರಕ್ಷಣೆ ನೀಡುತ್ತಿರುವ ನಮ್ಮ ದೇಶದ ಸೈನಿಕರನ್ನು ನಾವು ಗೌರವಿಸಬೇಕು, ಶಾಸಕಾಂಗ, ಕಾರ್ಯಾಂಗ, ನ್ಯಾಯಾಂಗ ನಮ್ಮ ದೇಶದ ಪ್ರಗತಿಯಲ್ಲಿ ಪ್ರಮುಖ ಪಾತ್ರವಹಿಸಿದ್ದು, ನಾವು ಸ್ವಾತಂತ್ರ್ಯದ ಘನತೆಯನ್ನು ಎತ್ತಿ ಹಿಡಿದು, ಸಮೃದ್ಧ ರಾಷ್ಟ್ರ ನಿರ್ಮಾಣದ ಕಾರ್ಯದಲ್ಲಿ ತೊಡಗಿಸಿಕೊಳ್ಳುವುದು ನಮ್ಮ ಕರ್ತವ್ಯ ಎಂದರು.
ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದ ಬೆಳ್ತಂಗಡಿ ತಾ.ಪಂ ಅಧ್ಯಕ್ಷೆ ದಿವ್ಯಜ್ಯೋತಿ, ಬೆಳ್ತಂಗಡಿ ನಗರ ಪಂಚಾಯತು ಅಧ್ಯಕ್ಷ ಮುಗುಳಿ ನಾರಾಯಣ ರಾವ್, ಬೆಳ್ತಂಗಡಿ ತಾ.ಪಂ ಸ್ಥಾಯಿ ಸಮಿತಿ ಅಧ್ಯಕ್ಷ ಸುಧೀರ್ ಆರ್. ಸುವರ್ಣ ಸ್ವಾತಂತ್ರೋತ್ಸವದ ಸಂದೇಶ ನೀಡಿದರು. ಈ ಸಂದರ್ಭದಲ್ಲಿ ಎಸ್.ಎಸ್.ಎಲ್.ಸಿ ಮತ್ತು ಪಿ.ಯು.ಸಿ. ಪರೀಕ್ಷೆಯಲ್ಲಿ ತಾಲೂಕಿನಲ್ಲಿ ಪ್ರಥಮ, ದ್ವಿತೀಯ, ತೃತೀಯ ಸ್ಥಾನ ಪಡೆದ ವಿದ್ಯಾರ್ಥಿಗಳನ್ನು ಹಾಗೂ ಶೇ೧೦೦ ಫಲಿತಾಂಶ ಪಡೆದ ತಾಲೂಕಿನ 10 ಶಾಲೆಗಳನ್ನು ಗುರುತಿಸಿ, ಗೌರವಿಸಲಾಯಿತು. ಕನ್ನಡ ಮಾಧ್ಯಮದಲ್ಲಿ 600ಕ್ಕಿಂತ ಹೆಚ್ಚು ಅಂಕಪಡೆದ 3 ವಿದ್ಯಾರ್ಥಿನಿಯರಿಗೆ ಸರಕಾರದಿಂದ ಕೊಡಲಾದ ಲ್ಯಾಬ್‌ಟಾಪ್‌ನ್ನು ಶಾಸಕರು ವಿತರಿಸಿದರು.
ಶಾಲಾವಾರು ವಿವಿಧ ಸ್ಪರ್ಧಾವಿಜೇತರಿಗೆ ಬಹುಮಾನ ವಿತರಿಸಲಾಯಿತು. ವೇದಿಕೆಯಲ್ಲಿ ಕ್ಷೇತ್ರಶಿಕ್ಷಣಾಧಿಕಾರಿ ಗುರುಪ್ರಸಾದ್, ವಾಣಿ ಶಿಕ್ಷಣ ಸಂಸ್ಥೆಗಳ ಅಧ್ಯಕ್ಷ ಸೋಮೇ ಗೌಡ, ಬೆಳ್ತಂಡಿ ಸರ್ಕಲ್ ಇನ್ಸ್‌ಪೆಕ್ಟರ್ ನಾಗೇಶ್ ಕದ್ರಿ, ಲೋಕೋಪಯೋಗಿ ಇಲಾಖಾ ಸ.ಕಾ.ಇಂಜಿನಿಯರ್ ಶಿವಪ್ರಸಾದ ಅಜಿಲ, ವಾಣಿ ಕಾಲೇಜಿನ ಪ್ರಾಂಶುಪಾಲ ಯದುಪತಿ ಗೌಡ, ತಾಲೂಕು ಸಂಯೋಜಕ ಜಯಾನಂದ ಲಾಯಿಲ, ಶಂಕರ
ಸುವರ್ಣ, ಸಿಡಿಪಿಒ ಸರಸ್ವತಿ ಉಪಸ್ಥಿತರಿದ್ದರು.
ಅಕ್ಷರ ದಾಸೋಹ ಯೋಜನೆಯ ಸಹಾಯಕ ನಿರ್ದೇಶಕ ಲಕ್ಷ್ಮಣ ಶೆಟ್ಟಿ ಸ್ವಾಗತಿಸಿದರು. ವಾಣಿ ಕಾಲೇಜಿನ ಉಪಪ್ರಾಂಶುಪಾಲ ವಿಷ್ಣುಪ್ರಕಾಶ್ ಕಾರ್ಯಕ್ರಮ ನಿರೂಪಿಸಿ, ಶಿಕ್ಷಣ ಸಂಯೋಜಕ ಸುಭಾಶ್‌ಜಾದವ್ ವಂದಿಸಿದರು. ಚರ್ಚ್ ಕೂಡುರಸ್ತೆಯಿಂದ ವಾಣಿ ಕಾಲೇಜು ತನಕ ಸ್ವಾತಂತ್ರೋತ್ಸವದ ಮೆರವಣಿಗೆ ನಡೆಯಿತು. ಶಾಲಾ ಮಕ್ಕಳಿಂದ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಿತು.

kolli templeಮಿತ್ತಬಾಗಿಲು : ಇತಿಹಾಸ ಪ್ರಸಿದ್ಧ ಕೊಲ್ಲಿ ಶ್ರೀ ದುರ್ಗಾದೇವಿ ದೇವಸ್ಥಾನವನ್ನು ಜೀಣೋದ್ಧಾರ ಮಾಡಲು ಭಕ್ತರು ಸಂಕಲ್ಪ ಮಾಡಿದ್ದು, ಇದರ ಪೂರ್ವಭಾವಿಯಾಗಿ ವೈದಿಕರ ಮಾರ್ಗದರ್ಶನದಂತೆ ಕುಂಭನಿಧಿಗೆ ಮುಷ್ಟಿ ಕಾಣಿಕೆ ಸಮರ್ಪಣೆ ಕಾರ್ಯಕ್ರಮ ಆ.16ರ ಸಿಂಹ ಸಂಕ್ರಮಣದ ಶುಭ ದಿನದಂದು ಜರುಗಿತು.
ಕಾರ್ಯಕ್ರಮವನ್ನು ಶಾಸಕ ಹಾಗೂ ರಾಜ್ಯ ಸಣ್ಣ ಕೈಗಾರಿಕಾ ನಿಗಮದ ಅಧ್ಯಕ್ಷ ಕೆ. ವಸಂತ ಬಂಗೇರ ದೀಪ ಬೆಳಗಿಸಿ ಉದ್ಘಾಟಿಸಿ, ಕುಂಭ ನಿಧಿಗೆ ಮುಷ್ಟಿಕಾಣಿಕೆ ಸಮರ್ಪಿಸಿ ಶ್ರೀ ದೇವಳದ ಜೀಣೋದ್ಧಾರ ಕಾಮಗಾರಿಗಳಿಗೆ ಚಾಲನೆ ನೀಡಿದರು. ನಂತರ ಮಾತನಾಡಿ ದೇವಸ್ಥಾನದ ಅಭಿವೃದ್ಧಿ ಕೆಲಸಗಳಿಗೆ ತನ್ನ ಪೂರ್ಣ ಸಹಕಾರ ನೀಡುತ್ತೇನೆ. ಸರಕಾರದಿಂದ ದೊರೆಯಬಹುದಾದ ಅನುದಾನವನ್ನು ಗರಿಷ್ಠವಾಗಿ ಒದಗಿಸಿಕೊಡಲು ಪ್ರಾಮಾಣಿಕವಾದ ಪ್ರಯತ್ನಗಳನ್ನು ಮಾಡುತ್ತೇನೆ ಎಂದು ಭರವಸೆಯಿತ್ತರು.
ಈ ಸಂದರ್ಭ ಉಜಿರೆ ಶ್ರೀ ಜನಾರ್ದನ ದೇವಸ್ಥಾನದ ಅನುವಂಶೀಯ ಆಡಳಿತ ಮೊಕ್ತೇಸರ ಯು. ವಿಜಯರಾಘವ ಪಡ್ವೆಟ್ನಾಯ, ಜಿಲ್ಲಾ ಧಾರ್ಮಿಕ ಪರಿಷತ್ ಸದಸ್ಯ ಮುಕುಂದ ಸುವರ್ಣ, ಕೂಡಬೆಟ್ಟು ದೇವಸ್ಥಾನ ಆಡಳಿತ ಸಮಿತಿ ಅಧ್ಯಕ್ಷ ಚಂದ್ರಶೇಖರ್, ಮಠ ಶ್ರೀ ಲಕ್ಷ್ಮೀವೆಂಕಟೇಶ್ವರ ದೇವಸ್ಥಾನದ ಆಡಳಿತ ಮೊಕ್ತೇಸರ ಕಿಶೋರ್ ಕುಮಾರ್ ವಳಂಬ್ರ, ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಮಂಜುನಾಥ ಕಾಮತ್, ಆಡಳಿತ ಮಂಡಳಿಯ ಸದಸ್ಯರು, ಗ್ರಾಮಸ್ಥರು ಉಪಸ್ಥಿತರಿದ್ದರು.
ಭಜಕರ ಸಭೆ: ನಂತರ ಭಜಕರ ಸಭೆಯನ್ನು ಉದ್ದೇಶಿಸಿ ಮಾತನಾಡಿದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಮಂಜುನಾಥ ಕಾಮತ್ ಸಂಘಟಿತ ಶಕ್ತಿಯಿಂದ ಯಾವುದೇ ಕಾರ್ಯ ಯಶಸ್ವಿಯಾಗಲು ಸಾಧ್ಯವಿದೆ. ಶ್ರೀ ಕೃಷ್ಣನ ಕಾಲದಲ್ಲಿಯೂ ಸಂಘಟನೆ ಇತ್ತು. ಇದೇ ರೀತಿ ಊರಿನ ಎಲ್ಲಾ ಭಕ್ತರು ಒಟ್ಟಾಗಿ ದೇವಸ್ಥಾನದ ಅಭಿವೃದ್ಧಿ ಕೆಲಸಗಳನ್ನು ಮಾಡಬೇಕು. ಶಿಲಾಮಯ ಗರ್ಭಗುಡಿ, ಸುತ್ತುಪೌಳಿ, ತೀರ್ಥ ಮಂಟಪ ಸೇರಿದಂತೆ ಎಲ್ಲಾ ಅಭಿವೃದ್ಧಿ ಕಾರ್ಯಗಳಿಗೆ ಎಲ್ಲರ ಸಹಕಾರ ಕೋರಿದರು.
ಜಿಲ್ಲಾ ಧಾರ್ಮಿಕ ಪರಿಷತ್ ಸದಸ್ಯ ಮುಕುಂದ ಸುವರ್ಣ ಅಧ್ಯಕ್ಷತೆ ವಹಿಸಿ, ಜೀಣೋದ್ಧಾರ ಸಮಿತಿಯ ಆರ್ಥಿಕ ಕೂಪನ್ ಮತ್ತು ರಶೀದಿ ಪುಸ್ತಕಗಳನ್ನು ಬಿಡುಗಡೆ ಮಾಡಿ ಮಾತನಾಡಿ ಅಭಿವೃದ್ಧಿಗೆ ಪೂರಕ ಸಲಹೆಗಳನ್ನು ನೀಡಿದರು. ಕಾರ್ಯಕ್ರಮದಲ್ಲಿ ಮಿತ್ತಬಾಗಿಲು ಗ್ರಾ.ಪಂ. ಅಧ್ಯಕ್ಷ ನಾರಾಯಣ ಪಾಠಾಳಿ, ತಾ.ಪಂ. ಸದಸ್ಯ ಜಯರಾಮ, ಮಲವಂತಿಗೆ ಗ್ರಾ.ಪಂ. ಅಧ್ಯಕ್ಷ ಭಾಸ್ಕರ ಪೂಜಾರಿ, ಕಡಿರುದ್ಯಾವರ ಗ್ರಾ.ಪಂ. ಅಧ್ಯಕ್ಷೆ ವನಿತಾ ಸಾಲಿಯಾನ್, ಮಾಜಿ ಜಿಪಸ ರಾಜಶೇಖರ ಅಜ್ರಿ, ಬಂಗಾಡಿ ಸಿ.ಎ. ಬ್ಯಾಂಕ್ ಅಧ್ಯಕ್ಷ ಎನ್. ಲಕ್ಷ್ಮಣ ಗೌಡ, ಸಂತೋಷ್ ಕುಮಾರ್ ವಳಂಬ್ರ,
ರವಿಚಂದ್ರ ಊರ್ಜೆ, ಶ್ರೀಮತಿ ಲೋಕೇಶ್ವರಿ ವಿನಯಚಂದ್ರ, ಶ್ರೀಮತಿ ಜಲಜಾಕ್ಷಿ ಅಗರಿಮಾರು, ದೇವಾಲಯದ ಕಚೇರಿ ವ್ಯವಸ್ಥಾಪಕ ಬಾಲಕೃಷ್ಣ ಪೂಜಾರಿ, ಅಶೋಕ್ ನಾವೂರು ಪುಣ್ಯಸ್ಟುಡಿಯೋ, ರತ್ನಾಕರ ನಾವೂರು, ಶ್ರೀಧರ ಪೂಜಾರಿ, ವಾಸುದೇವ ಕಕ್ಕೇನೇಜಿ, ಸಂತೋಷ್ ಕಿಲ್ಲೂರು, ವಿಜಯ ಹೆಗ್ಡೆ, ಮೋಹನ ಗೌಡ ಬೆಡಿಗುತ್ತು, ಕೃಷ್ಣಪ್ಪ ಪೂಜಾರಿ ಕಿಲ್ಲೂರು, ಶ್ರೀಧರ ಪೂಜಾರಿ ಶಿರ್ಲಾಲು, ಪದ್ಮನಾಭ ಗೌಡ, ಜತ್ತಣ್ಣ ಗೌಡ ಪುಣ್ಕೆದಡಿ, ಶೇಖರ ಪೂಜಾರಿ ಕಂಬಳದಡ್ಡ, ಪೂವಣಿ ಗೌಡ ನೆಕ್ಕಿಲು, ದೇಜಪ್ಪ ಗೌಡ ಕೊಂಡಾಲು ಪದ್ಮನಾಭ ಗೌಡ ಮಂಟಮೆ, ಆನಂದ ಎಂ.ಕೆ. ಸೂರ್ಲಿ, ಆದಪ್ಪ ನಾಯ್ಕ, ಅಣ್ಣು ಎಂ.ಕೆ ಮೊದಲಾದವರು ಉಪಸ್ಥಿತರಿದ್ದರು.
ಉಜಿರೆ ರಬ್ಬರ್ ಸೊಸೈಟಿ ಅಧ್ಯಕ್ಷ ಶ್ರೀಧರ ಭಿಡೆ ಆಗಮಿಸಿ ಶುಭ ಕೋರಿದರು. ಜೀಣೋದ್ಧಾರ ಸಮಿತಿ ಅಧ್ಯಕ್ಷ ದಾಸಪ್ಪ ಗೌಡ ಸ್ವಾಗತಿಸಿದರು. ಕೇಶವ ಫಡಕೆ ಕಾರ್ಯಕ್ರಮ ನಿರೂಪಿಸಿ, ವಿನಯಚಂದ್ರ ನಡುಬೈಲು ವಂದಿಸಿದರು.

LiCಬೆಳ್ತಂಗಡಿ : ವಿಮಾ ಇನ್ಸೂರೆನ್ಸ್ ಕನ್ಸಲ್ಟೆಂಟ್ಸ್ ನೂತನ ಕಛೇರಿ ಇಂದು (ಆ.15) ಬೆಳ್ತಂಗಡಿ ಬಸ್ ಸ್ಟ್ಯಾಂಡ್ ಎದುರುಗಡೆ ಉದ್ಘಾಟನೆಗೊಂಡಿತು.
ಉದ್ಘಾಟನೆಯನ್ನು ಶಾಸಕ ಕೆ. ವಸಂತ ಬಂಗೇರ ನೆರವೇರಿಸಿದರು. ಬೆಳ್ತಂಗಡಿ ಹೋಲಿ ರೆಡಿಮರ್ ಚರ್ಚ್‌ನ ಪ್ರಧಾನ ಧರ್ಮಗುರು ಫಾ| ಬೊನವೆಂಚರ್ ನಜ್ರೆತ್ ಆಶೀರ್ವಚನ ನೀಡಿದರು. ಮುಖ್ಯ ಅತಿಥಿಗಳಾಗಿ ಬೆಳ್ತಂಗಡಿ ಪಟ್ಟಣ ಪಂಚಾಯತ್ ಅಧ್ಯಕ್ಷ ಎಂ. ನಾರಾಯಣ ರಾವ್, ಬೆಳ್ತಂಗಡಿ ಭಾರತೀಯ ಜೀವವಿಮಾ ನಿಗಮದ ಶಾಖಾಧಿಕಾರಿ ಯೋಗೇಂದ್ರ ಡಿ., ಮಂಗಳೂರು ಸ್ವಾರ್ ಹೆಲ್ತ್ ಆಂಡ್ ಅಲೈಟ್ ಇನ್ಸೂರೆನ್ಸ್ ಕಂಪನಿಯ ಹಿರಿಯ ಶಾಖಾಧಿಕಾರಿ ಗಜಾನನ ಭಟ್, ಬೆಳ್ತಂಗಡಿ ಶಾಖೆ ಯುನೈಟೆಡ್ ಇಂಡಿಯಾ ಇನ್ಸೂರೆನ್ಸ್ ಕಂಪನಿಯ ಆಡಳಿತಾಧಿಕಾರಿ ಶೇಕುಂಞ, ಬೆಳ್ತಂಗಡಿ ಲಯನ್ಸ್ ಕ್ಲಬ್ ಅಧ್ಯಕ್ಷ ಲ| ಧರಣೇಂದ್ರ ಕೆ. ಜೈನ್, ಬೆಳ್ತಂಗಡಿ ಪ್ರೇರಣಾ ಸೌಹಾರ್ದ ಸಹಕಾರಿ ನಿಯಮಿತ ಅಧ್ಯಕ್ಷ ಲ್ಯಾನ್ಸಿ ಎ. ಪಿರೇರಾ, ನ್ಯಾಶನಲ್ ಇನ್ಸೂರೆನ್ಸ್ ಕಂಪನಿಯ ನಿವೃತ್ತ ಶಾಖಾಧಿಕಾರಿ ಶ್ರೀಮತಿ ಸೆಲಿನ್ ನೊರೊನ್ಹಾ ಭಾಗವಹಿಸಿದ್ದರು.
ಬಂದಂತಹ ಅತಿಥಿಗಳನ್ನು ವಿನ್ಸೆಂಟ್ ಟಿ. ಡಿಸೋಜಾ ಸ್ವಾಗತಿಸಿದರು.

indipendce day171ನೇ ವರ್ಷದ ಸ್ವಾತಂತ್ರ್ಯ ದಿನಾಚರಣೆಯನ್ನು ಪಾಂಗಳದ ಶ್ರೀ ಮಾರಿಗುಡಿ ಬಳಿಯ ಅಂಗನವಾಡಿ ಕೇಂದ್ರದಲ್ಲಿ ಆಚರಿಸಲಾಯಿತು.
ಧ್ವಜಾರೋಹಣ ಕಾರ್ಯಕ್ರಮವನ್ನು ಮಾರಿಗುಡಿ ಸಮಿತಿಯ ಅಧ್ಯಕ್ಷತುಕರಾಮ ಗೌಡ ಇವರು ನೆರವೇರಿಸಿದರು. ಈ ಸಂದರ್ಭದಲ್ಲಿ ಬಾಬುಗೌಡ ಪಾಂಗಳ, ಮೋನಪ್ಪ ಪೂಜಾರಿ ಡಿಡಿಂಬಿ, ಹಾಗೂ ಊರಿನ ಸಮಸ್ತ ನಾಗರಿಕರು ಉಪಸ್ಥಿತರಿದ್ದರು.

  Indipendce dayಸವಣಾಲು ಬದ್ರಿಯಾ ಜುಮಾ ಮಸೀದಿ ಮತ್ತು ಹಿಮಾಯತುಲ್ ಇಸ್ಲಾಮ್ ಮದರಸ ಸವಣಾಲು ಇದರ ಅಂಗವಾಗಿ ಮಸೀದಿ ವಠಾರದಲ್ಲಿ 71 ನೇ ಸ್ವಾತಂತ್ರ್ಯ ದಿನಾಚರಣೆಯನ್ನು ಊರಿನ ಎಲ್ಲಾ ಧರ್ಮದೊಂದಿಗೆ ಸೌಹಾರ್ದತೆಯೊಂದಿಗೆ ಆಚರಿಸಲಾಯಿತು.
ಕಾರ್ಯಕ್ರಮದಲ್ಲಿ ಲ .ರಘುರಾಮ್ ಗಂಭೀರ, ಶ್ರೀ. ಬಾಲಕೃಷ್ಣ ವಿ ಶೆಟ್ಟಿ ಸಾಲಿಗ್ರಾಮ, ಹಿರಿಯ ಪ್ರಾಥಮಿಕ ಶಾಲೆಯ ಹಿರಿಯ ಶಿಕ್ಷಕ ಮಂಜುನಾಥ್ ಆಡಳಿತ ಮಂಡಳಿ ಅಧ್ಯಕ್ಷ ಡಿ .ರಫೀಕ್, ಮಲ್ಜಾ ಸಾಲಾತ್ ಕಮಿಟಿ ಅಧ್ಯಕ್ಷ ಸಿ ಮ್ ಇಬ್ರಾಹಿಂ , ಹಾಗೂ ಮದ್ರಸ ವಿದ್ಯಾರ್ಥಿಗಳು ಕಮಿಟಿಯ ಎಲ್ಲ ಪದಾಧಿಕಾರಿಗಳು , ಜಮಾಅತಿನ ಎಲ್ಲ ಸದಸ್ಯರು ಕಾರ್ಯಕ್ರಮದಲ್ಲಿ ಪಾಲ್ಗೊಂಡರು. ಎಂ .ಜಿ .ತಲ್ಹತ್ ಸವಣಾಲು ಇವರು ಎಲ್ಲರನ್ನು ಸ್ವಾಗತಿಸಿ ಕಾರ್ಯಕ್ರಮ ನಿರೂಪಿಸಿದರು .

   karunya

karunya1ಕಕ್ಕಿಂಜೆ ಕಾರುಣ್ಯ ಸ್ಕೂಲ್ ನಲ್ಲಿ ಸ್ವಾತಂತ್ರ್ಯ ದಿನಾಚರಣೆಯನ್ನು ಆಚರಿಸಲಾಯಿತು.

  youngಯಂಗ್ ಚಾಲೆಂಜರ್ಸ್ ಮುಂಡಾಜೆ ಇದರ ವತಿಯಿಂದ ಗ್ರಾ.ಪಂ ಮುಂಡಾಜೆ , ಲಯನ್ಸ್ ಕ್ಲಬ್ ಬೆಳ್ತಂಗಡಿ ಸಕಕಾರದೊಂದಿಗೆ ಸ್ವಾತಂತ್ರ ಉತ್ಸವ ಮತ್ತು ಯೋಧರಿಗೆ ನಮನ ಕಾರ್ಯಕ್ರಮ ವನ್ನು ಲ. ಅಶ್ರಫ್ ಆಲಿಕುಂಞಿ ಅವರು ಆಯೋಜಿಸಿದರು.

  belaluಹಿದಾಯತುಲ್ ಇಸ್ಲಾಂ ಮದ್ರಸಾ ಪಳ್ಳಿತ್ತಡ್ಕ, ಬೆಳಾಲು ಇಲ್ಲಿ 71 ನೇ ಸ್ವಾತಂತ್ರ್ಯ ದಿನಾಚರಣೆಯನ್ನು ಅಹ್ಮದುಲ್ ಬದವೀ ಮಸೀದಿಯ ಆವರಣದಲ್ಲಿ ಆಚರಿಸಲಾಯಿತು. ಆಡಳಿತ ಸಮಿತಿಯ ಅದ್ಯಕ್ಷ ,ಉಮರಬ್ಬ ರವರು ಧ್ವಜಾರೋಹಣಗೈದರು ಮದ್ರಸಾ ಅದ್ಯಾಪಕ ಯಾಕೂಬ್ ಗೌಸಿ ದುಆ ನೆರವೇರಿಸಿಕೊಟ್ಟರು
ಸಂಶುದ್ದೀನ್ ಅಶ್ರಫಿ ಸ್ವಾಗತಿಸಿದರು ಮಾಜಿ ಅಧ್ಯಕ್ಷ ಇಬ್ರಾಹಿಂ ವಲಚ್ಚಿಲ್ ಸದಸ್ಯ ಅಬ್ದುರ್ರಹ್ಮಾನ್ ಅಲ್ ಬದ್ರಿಯಾ ಸ್ವಲಾತ್ ಕಮಿಟಿಯ ಅದ್ಯಕ್ಷ ಸಂಶುದ್ದೀನ್ ಕೇರಾರಿ ಉಪಾಧ್ಯಕ್ಷ ಅಝೀಝ್ ಉಪಸ್ಥಿತರಿದ್ದರು.

  anugrahaಅನುಗ್ರಹ ಟ್ರೈನಿಂಗ್ ಕಾಲೇಜು ಬೆಳ್ತಂಗಡಿಯಲ್ಲಿ 71 ನೇ ಸ್ವಾತಂತ್ರ್ಯ ದಿನಾಚರಣೆಯನ್ನು ಸಂಸ್ಥೆಯ ಅಧ್ಯಕ್ಷ ಮತ್ತು ಕಾಲೇಜಿನ   ಪ್ರಾಂಶುಪಾಲ ಎಂ.ಜಿ. ತಲ್ಹತ್ ಸವಣಾಲು ನಡೆಸಿಕೊಟ್ಟರು.

  sanjaya nagaraಬೆಳ್ತಂಗಡಿ ಸಂಜಯ ನಗರ ನಾಗರಿಕ ಸಮಿತಿ ವತಿಯಿಂದ ವಿಜೃಂಭಣೆಯ ಸ್ವಾತಂತ್ರ್ಯ ದಿನಾಚರಣೆಯು ಸಂಜಯ ನಗರ ಜಂಕ್ಷನ್ ನಲ್ಲಿ ಬಿ.ಎಂ. ಹನೀಪ್ ರವರ ಅಧ್ಯಕ್ಷತೆಯಲ್ಲಿ ನಡೆಯಿತು, ನಗರ ಪಂಚಾಯತ್ ಸದಸ್ಯ ಮುಸ್ತಾರ್ ಜಾನ್ ಮೆಹಬೂಬ್ ಧ್ವಜಾರೋಹಣಗೈದರು. ಮುಖ್ಯ ಅತಿಥಿಗಳಾಗಿ ಅಕ್ಬರ್, ಹಾಗೂ ಮೆಹಬೂಬ್ ಸ್ವಾತಂತ್ರ್ಯ ಸಂದೇಶವನ್ನು ನೀಡಿದರು. ನಿಹಾಲ್ ಸ್ವಾಗತಿಸಿ ಶರೀಪ್ ವಂದಿಸಿದರು ಕಾರ್ಯಕ್ರಮ ನಿರೂಪಣೆಯನ್ನು ಬಶೀರ್ ಸಂಜಯ ನಗರ ನೆರವೇರಿಸಿದರು.

ಪವನ್ ಪಿ.ಕಾಕತ್ಕರ್ ಎಮ್.ಸಿ.ಎದಲ್ಲಿ ರಾಜ್ಯದಲ್ಲಿ 2ನೇ ಸ್ಥಾನ

Saturday, August 22nd, 2015 | suddiblt | no responses 2015-16ನೇ ಸಾಲಿನ ಎಂ.ಬಿ.ಎ., ಎಂ.ಸಿ.ಎ., ಎಂ.ಟೆಕ್ ಕೋರ್ಸುಗಳ ದಾಖಲಾತಿಗೆ ಕರ್ನಾಟಕ ಪರಿಕ್ಷಾ ಪ್ರಾಧಿಕಾರದವರು… ಮುಂದೆ ಓದಿ

ಜೈನರಿಗೆ ವಿದ್ಯಾರ್ಥಿ ವೇತನ: ಅರ್ಜಿ ಆಹ್ವಾನ

ಜೈನರಿಗೆ ವಿದ್ಯಾರ್ಥಿ ವೇತನ: ಅರ್ಜಿ ಆಹ್ವಾನ

Friday, August 7th, 2015 | suddiblt | no responses ಬೆಳ್ತಂಗಡಿ: ಬೆಳ್ತಂಗಡಿ ತಾಲೂಕು ವಿದ್ಯಾರ್ಥಿಗಳಿಗೆ ದಿ| ಮಂಜಯ್ಯ ಹೆಗ್ಗಡೆ ಸಂಸ್ಮರಣಾರ್ಥ ಇಂಜಿನಿಯರಿಂಗ್ ವಿದ್ಯಾಭ್ಯಾಸ… ಮುಂದೆ ಓದಿ

ವಿಜ್ಞಾನ ವಿಭಾಗದಲ್ಲಿ 526 ಅಂಕ

ವಿಜ್ಞಾನ ವಿಭಾಗದಲ್ಲಿ 526 ಅಂಕ

Saturday, June 27th, 2015 | Suddi Belthangady | no responses ಮೂಡುಬಿದಿರೆ: ಮೂಡುಬಿದಿರೆ ಆಳ್ವಾಸ್ ಪದವಿ ಪೂರ್ವ ಕಾಲೇಜಿನ ವಿದ್ಯಾರ್ಥಿನಿ ಲಾವಣ್ಯ ಇವರು ಪಿಯುಸಿ… ಮುಂದೆ ಓದಿ

ಪಿಯುಸಿ: ತಾಲೂಕಿಗೆ ದ್ವಿತೀಯ ಸ್ಥಾನಿಯಾದ ಮುಖೇಶ್

Thursday, June 25th, 2015 | suddiblt | no responses   ಅರಸಿನಮಕ್ಕಿ: ೨೦೧೪-೧೫ರ ಸಾಲಿನ ವಾರ್ಷಿಕ ದ್ವಿತೀಯ ಪಿಯುಸಿಯಲ್ಲಿ ೧೦೦% ಫಲಿತಾಂಶ ಪಡೆದ ಅರಸಿನಮಕ್ಕಿ… ಮುಂದೆ ಓದಿ

ಏಷಿಯನ್ ಸ್ಕೂಲ್ ಚೆಸ್ ಚಾಂಪಿಯನ್‌ಶಿಪ್ : ಈಶಾ ಶರ್ಮಗೆ ಕಂಚಿನ ಪದಕ

Thursday, June 25th, 2015 | suddiblt | no responses   ಉಜಿರೆ : ಸಿಂಗಾಪುರದಲ್ಲಿ ನಡೆದ ಏಷಿಯನ್ ಸ್ಕೂಲ್ ಚೆಸ್ ಚಾಂಪಿಯನ್ ಶಿಪ್ ನಲ್ಲಿ… ಮುಂದೆ ಓದಿ

ಸಿ.ಬಿ.ಎಸ್.ಇ. ಸಮ್ಯಕ್ ಜೈನ್ 10  ಸಿ.ಜಿ.ಪಿ.ಎ. ಶ್ರೇಣಿಯೊಂದಿಗೆ ಪ್ರಥಮ

Thursday, June 4th, 2015 | suddiblt | no responses ಉಜಿರೆ : ಇಲ್ಲಿನ ಎಸ್.ಡಿ.ಎಂ. ಆಂಗ್ಲ ಮಾಧ್ಯಮ ಶಾಲಾ ವಿದ್ಯಾರ್ಥಿ ಸಮ್ಯಕ್ ಜೈನ್… ಮುಂದೆ ಓದಿ

ಪ್ರಸನ್ನ ರೆಸಿಡೆನ್ಸಿಯಲ್‌ಗೆ ಶೇ. 100

ಪ್ರಸನ್ನ ರೆಸಿಡೆನ್ಸಿಯಲ್‌ಗೆ ಶೇ. 100

Saturday, May 30th, 2015 | suddiblt | no responses ಬೆಳ್ತಂಗಡಿ: ಲಾಯಿಲ ಪ್ರಸನ್ನ ರೆಸಿಡೆನ್ಸಿಯಲ್ ಸ್ಕೂಲ್ ಎಸ್‌ಎಸ್‌ಎಲ್‌ಸಿ (ಸಿಬಿಎಸ್‌ಇ)ಯಲ್ಲಿ ಶೇ. ೧೦೦ ಫಲಿತಾಂಶ… ಮುಂದೆ ಓದಿ

ಎಸ್.ಎಸ್.ಎಲ್.ಸಿ ಸಂತ ತೆರೇಸಾ ಆಂಗ್ಲ ಮಾಧ್ಯಮ  ಪ್ರೌಢಶಾಲೆ ಬೆಳ್ತಂಗಡಿ.

Friday, May 22nd, 2015 | suddiblt | no responses ಮುಂದೆ ಓದಿ

ಎಸ್.ಎಸ್.ಎಲ್.ಸಿ ಸಂತ ತೆರೇಸಾ ಪ್ರೌಢಶಾಲೆ ಬೆಳ್ತಂಗಡಿ.

ಸ.ಪ.ಪೂ. ಕಾಲೇಜು (ಪ್ರೌಢಶಾಲಾ ವಿಭಾಗ)ವೇಣೂರು

ಪಿಯು: ಶೇಕಡಾ 94 ಫಲಿತಾಂಶ

ಪಿಯು: ಶೇಕಡಾ 94 ಫಲಿತಾಂಶ

Thursday, May 21st, 2015 | suddiblt | no responses ಬೆಳ್ತಂಗಡಿ: ಈ ಬಾರಿಯ ಪಿ.ಯು.ಸಿ ಪಬ್ಲಿಕ್ ಪರೀಕ್ಷೆಯಲ್ಲಿ ವಿಜ್ಞಾನ ವಿಭಾಗದಲ್ಲಿ ಶ್ರೀ ಧ.ಮಂ… ಮುಂದೆ ಓದಿ

ವಾಣಿ ಪ.ಪೂ. ಕಾಲೇಜು ಹಳೆಕೋಟೆ ಬೆಳ್ತಂಗಡಿ

ವಾಣಿ ಪ.ಪೂ. ಕಾಲೇಜು ಹಳೆಕೋಟೆ ಬೆಳ್ತಂಗಡಿ

Thursday, May 21st, 2015 | suddiblt | no responses ಮುಂದೆ ಓದಿ

ಎಸ್.ಎಸ್.ಎಲ್.ಸಿ. ಸ. ಪ್ರೌಢ ಶಾಲೆ ಪೆರ್ಲಬೈಪಾಡಿಗೆ ಶೇ.100 ಫಲಿತಾಂಶ

Thursday, May 21st, 2015 | suddiblt | no responses ಬೆಳ್ತಂಗಡಿ: ಎಸ್.ಎಸ್.ಎಲ್.ಸಿ. ಸ. ಪ್ರೌಢ ಶಾಲೆ ಪೆರ್ಲಬೈಪಾಡಿಗೆ ಶೇ.100 ಫಲಿತಾಂಶ  ಜನ್ವಿತಾ 563,… ಮುಂದೆ ಓದಿ

ಸೇಕ್ರೆಡ್ ಹಾಟರ್್ ಪದವಿ ಪೂರ್ವ ಕಾಲೇಜು ಮಡಂತ್ಯಾರು

Thursday, May 21st, 2015 | Suddi Belthangady | no responses ಮುಂದೆ ಓದಿ

Thursday, May 21st, 2015 | suddiblt | no responses ಮುಂದೆ ಓದಿ

ಪಿಯುಸಿ ಫಲಿತಾಂಶ ಎಸ್.ಡಿ.ಎಂ ಕಾಲೇಜು ಉಜಿರೆ

ಪಿಯುಸಿ ಫಲಿತಾಂಶ ಎಸ್.ಡಿ.ಎಂ ಕಾಲೇಜು ಉಜಿರೆ

Thursday, May 21st, 2015 | Suddi Belthangady | no responses ಮುಂದೆ ಓದಿ

ವಾಣಿ ಆಂಗ್ಲ ಮಾಧ್ಯಮ ಪ್ರೌಢಶಾಲೆ ಬೆಳ್ತಂಗಡಿ

ವಾಣಿ ಆಂಗ್ಲ ಮಾಧ್ಯಮ ಪ್ರೌಢಶಾಲೆ ಬೆಳ್ತಂಗಡಿ

Tuesday, May 19th, 2015 | Suddi Belthangady | no responses ಮುಂದೆ ಓದಿ

ಸರಸ್ವತಿ ಆಂಗ್ಲ ಮಾಧ್ಯಮ ಶಾಲೆ ಮುಂಡಾಜೆ

ಸಂತ ತೆರೇಸಾ ಆಂಗ್ಲ ಮಾಧ್ಯಮ ಪ್ರೌಢಶಾಲೆ ಬೆಳ್ತಂಗಡಿ

ಸಂತ ತೆರೇಸಾ ಪ್ರೌಢಶಾಲೆ ಬೆಳ್ತಂಗಡಿ

 ಅನುದಾನಿತ ಪ್ರೌಢಶಾಲೆ ಮುಂಡಾಜೆ

ಶ್ರೀ ಮಂಜುನಾಥೇಶ್ವರ ಅನುದಾನಿತ ಪ್ರೌಢಶಾಲೆ ಧರ್ಮಸ್ಥಳ

ಗುರುದೇವ ಪದವಿ ಪೂರ್ವ ಕಾಲೇಜು ಫಲಿತಾಂಶ

ಗುರುದೇವ ಪದವಿ ಪೂರ್ವ ಕಾಲೇಜು ಫಲಿತಾಂಶ

Monday, May 18th, 2015 | Suddi Belthangady | no responses ಬೆಳ್ತಂಗಡಿ: ಗುರುದೇವ ಪದವಿ ಪೂರ್ವ ಕಾಲೇಜು ಬೆಳ್ತಂಗಡಿ ಇಲ್ಲಿನ ಕಲಾ ವಿಭಾಗದಿಂದ ಪರೀಕ್ಷೆಗೆ … ಮುಂದೆ ಓದಿ

ಎಸ್.ಡಿ.ಎಂ. ಸೆಕೆಂಡರಿ ಶಾಲೆ ಉಜಿರೆ

ಎಸ್.ಡಿ.ಎಂ. ಸೆಕೆಂಡರಿ ಶಾಲೆ ಉಜಿರೆ

Saturday, May 16th, 2015 | Suddi Belthangady | no responses ಮುಂದೆ ಓದಿ

ಎಸ್‌ಎಸ್‌ಎಲ್‌ಸಿ ಪರೀಕ್ಷೆ ರಕ್ಷಿತಾ ವಿ. ರೈ. ಶೇ ೯೮

Friday, May 15th, 2015 | Suddi Belthangady | no responses ಬೆಳ್ತಂಗಡಿ: ಈ ಸಾಲಿನ ಶೈಕ್ಷಣಿಕ ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ಮಂಜಲ್ಪಡ್ಪು ಸುದಾನ ಆಂಗ್ಲಮಾಧ್ಯಮ ಶಾಲೆಯ… ಮುಂದೆ ಓದಿ

ದಿವ್ಯಜ್ಯೋತಿ ಆ.ಮಾ.ಶಾಲೆ ಕಾಯರ್ತಡ್ಕ

ದಿವ್ಯಜ್ಯೋತಿ ಆ.ಮಾ.ಶಾಲೆ ಕಾಯರ್ತಡ್ಕ

Friday, May 15th, 2015 | Suddi Belthangady | no responses ಮುಂದೆ ಓದಿ

ಸೇಕ್ರೆಡ್ ಹಾರ್ಟ್ ಆಂಗ್ಲ ಮಾಧ್ಯಮ ಶಾಲೆ ಮಡಂತ್ಯಾರು

ಜೆ.ಇ.ಇ. ಮೈನ್ಸ್ : ಎಕ್ಸಲೆಂಟ್ ವಿದ್ಯಾರ್ಥಿಗಳ ಸಾಧನೆ

Friday, May 15th, 2015 | Suddi Belthangady | no responses ಬೆಳ್ತಂಗಡಿ : ರಾಷ್ಟ್ರೀಯ ತಾಂತ್ರಿಕ ಸಂಸ್ಥೆ (ಎನ್.ಐ.ಟಿ)ಗೆ ಪ್ರವೇಶ ನೀಡುವ ಜೆ.ಇ.ಇ. ಮೈನ್ಸ್… ಮುಂದೆ ಓದಿ

ಧರ್ಮಸ್ಥಳ ಆಂಗ್ಲ ಮಾಧ್ಯಮ ಶಾಲೆ

ಧರ್ಮಸ್ಥಳ ಆಂಗ್ಲ ಮಾಧ್ಯಮ ಶಾಲೆ

Friday, May 15th, 2015 | Suddi Belthangady | no responses ಮುಂದೆ ಓದಿ

ಅನುಗ್ರಹ ಆಂಗ್ಲ ಮಾಧ್ಯಮ ಪ್ರೌಢಶಾಲೆ ಉಜಿರೆ

ಅನುಗ್ರಹ ಆಂಗ್ಲ ಮಾಧ್ಯಮ ಪ್ರೌಢಶಾಲೆ ಉಜಿರೆ

Friday, May 15th, 2015 | Suddi Belthangady | no responses ಮುಂದೆ ಓದಿ

Pranamraj M Kಶಿರ್ಲಾಲು : ಕರಂಬಾರು ಗ್ರಾಮದ ಕಾಜಿಮುಗೇರು ನಿವಾಸಿ, ಶಿರ್ಲಾಲು ಗ್ರಾ.ಪಂ ಮಾಜಿ ಅಧ್ಯಕ್ಷ ಪುಷ್ಪರಾಜ್ ಎಂ.ಕೆ ಮತ್ತು ಮಧುರಾಜ್ ದಂಪತಿ ಪುತ್ರ ಪ್ರಣಮ್‌ರಾಜ್ ಅವರ 2 ನೇ ವರ್ಷದ ಹುಟ್ಟುವನ್ನು ಆ. 11 ರಂದು ಆಚರಿಸಲಾಯಿತು.

Sujanyaಶಿರ್ಲಾಲು ಗ್ರಾಮದ ಜಾರ್‍ಯೊಟ್ಟು ನಾರಾಯಣ ಗೌಡ ಮತ್ತು ಪ್ರೇಮ ದಂಪತಿ ಪುತ್ರಿ ಸುಜನ್ಯಾಳ 7ನೇ ವರ್ಷದ ಹುಟ್ಟುಹಬ್ಬವನ್ನು ಆ.12ರಂದು ಆಚರಿಸಲಾಯಿತು.

Thrisha newsಲಾಯಿಲ ಗ್ರಾಮದ ಎಣಿಂಜೆ ಪ್ರಶಾಂತ್ ಶೆಟ್ಟಿ ಮತ್ತು ಶಶಿಕಲಾ ದಂಪತಿ ಪುತ್ರಿ ತ್ರಿಶಾ ಇವಳ ಪ್ರಥಮ ವರ್ಷದ ಹುಟ್ಟುಹಬ್ಬವನ್ನು ಆ.11ರಂದು ಆಚರಿಸಲಾಯಿತು.

Dhanyashreeಧರ್ಮಸ್ಥಳ ಕೂಟದಕಲ್ಲು ಅಮ್ಮಶ್ರೀ ನಿಲಯದ ಶ್ರೀಮತಿ ಗುಣವತಿ ಮತ್ತು ಸುಂದರ ಡಿ. ಯವರ ಪುತ್ರಿ ಧನ್ಯಶ್ರೀಯ 6ನೇ ವರುಷದ ಹುಟ್ಟುಹಬ್ಬವನ್ನು ಆ.10ರಂದು ಆಚರಿಸಲಾಯಿತು.

Dhanvithಧರ್ಮಸ್ಥಳ ಕೂಟದಕಲ್ಲು ಅಮ್ಮಶ್ರೀ ನಿಲಯದ ಶ್ರೀಮತಿ ಗುಣವತಿ ಮತ್ತು ಸುಂದರ ಡಿ. ಯವರ ಪುತ್ರ ಧನ್ವಿತ್‌ನ 3ನೇ ವರ್ಷದ ಹುಟ್ಟುಹಬ್ಬವನ್ನು ಜು.18ರಂದು ಆಚರಿಸಲಾಯಿತು.

belthangady swaccha bharata abhiyana1

belthangady swaccha bharata abhiyanaಬೆಳ್ತಂಗಡಿ : ಇಲ್ಲಿಯ ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ಸ್ಥಳೀಯ ಸಂಸ್ಥೆ, ಪಟ್ಟಣ ಪಂಚಾಯತ್, ಬೆಳ್ತಂಗಡಿ, ರೋಟರಿ ಕ್ಲಬ್ ಬೆಳ್ತಂಗಡಿ ಮತ್ತು ಶ್ರೀ ಧ. ಮಂ. ಆಂಗ್ಲ ಮಾಧ್ಯಮ ಶಾಲೆ ಬೆಳ್ತಂಗಡಿ ಇವರ ಸಹಯೋಗದಲ್ಲಿ ಸ್ಕೌಟ್ಸ್/ಗೈಡ್/ಕಬ್/ಬುಲ್‌ಬುಲ್ ಮಕ್ಕಳ ಬಯಲು ಶೌಚ ಮುಕ್ತ – ಸ್ವಚ್ಛ ಭಾರತ – ಅಭಿಯಾನವು ಆ.19(ಇಂದು) ನಡೆಯಿತು.
ಕ್ಷೇತ್ರ ಶಿಕ್ಷಣಾಧಿಕಾರಿಗಳು ಮತ್ತು ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ಸ್ಥಳೀಯ ಸಂಸ್ಥೆಯ ಕಾರ್ಯಾಧ್ಯಕ್ಷರು ಎ. ಎನ್. ಗುರುಪ್ರಸಾದ, ಕೆ. ಇ. ಎಸ್., ಉದ್ಘಾಟಿಸಿದರು.
ಅಧ್ಯಕ್ಷತೆಯನ್ನು ಬಿ. ವಿಠಲ ಶೆಟ್ಟಿ ವಹಿಸಿದ್ದು, ಅತಿಥಿಗಳಾಗಿ ಬೆಳ್ತಂಗಡಿ ರೋಟರಿ ಕ್ಲಬ್ ಅದ್ಯಕ್ಷ ರೊ. ಡಾ. ಸುಧೀರ್ ಪ್ರಭು ಮತ್ತು ಧ.ಮಂ ಶಿಕ್ಷಣ ಸಂಸ್ಥೆಗಳ ವಿದ್ಯಾರ್ಥಿ ಕ್ಷೇಮಪಾಲನಾ ಅಧಿಕಾರಿ ಸೋಮಶೇಖರ ಶೆಟ್ಟಿ ಬಿ., ಮಾಜಿ ಸೈನಿಕ ಸಂಘದ ಅಧ್ಯಕ್ಷರು ಸುನೀಲ್ ಶೆಣೈ, ಎಲ್.ಟಿ ಕ್ಲಬ್ ಲೀಡರ್ ರಮೇಶ ಆಚಾರಿ, ಸ್ಕೌಟ್ ಎಸಿಸ್ಟೆಂಟ್ ದ.ಕ ಕಮಿಷನರ್ ವಾಲ್ಟರ್ ಜಿ. ಪಿಂಟೋ, ಆನ್ಸ್ ಕಾರ್ಯದರ್ಶಿ ಶೈಲಾ. ಎ. ಕಾಮತ್ ಆಗಮಿಸಿದ್ದರು.

kulala ati koota 1ಗುರುವಾಯನಕೆರೆ: ಬೆಳ್ತಂಗಡಿ ತಾಲೂಕು ಮೂಲ್ಯರ ಯಾನೆ ಕುಂಬಾರರ ಸೇವಾ ಸಂಘ ಗುರುವಾಯನಕೆರೆ, ಕುಲಾಲ ಕುಂಬಾರರ ಯುವ ವೇದಿಕೆ ಇದರ ಆಶ್ರಯದಲ್ಲಿ ಕುಲಾಲ ಕುಂಬಾರ ಸಾಂಸ್ಕೃತಿಕ ಸಮಿತಿ ಮತ್ತು ಕುಲಾಲ ಕುಂಬಾರ ಕ್ರೀಡಾ ಸಮಿತಿ ಗುರುವಾಯನಕೆರೆ ಇದರ ಸಹಯೋಗದಲ್ಲಿ `ಆಟಿಡೊಂಜಿ ದಿನ’ ಕಾರ್ಯಕ್ರಮ ಆ.13ರಂದು ಕುಲಾಲ ಮಂದಿರದಲ್ಲಿ ಜರುಗಿತು.
ಕಾರ್ಯಕ್ರಮವನ್ನು ಯುವ ವೇದಿಕೆ ಲಾಯಿಲ ಜಿ.ಪಂ. ಸಂಚಾಲಕ ಪುಷ್ಪರಾಜ್ ಕುಲಾಲ್ ಉದ್ಘಾಟಿಸಿದರು. ಅಧ್ಯಕ್ಷತೆಯನ್ನು ಕುಲಾಲ ಕುಂಬಾರರ ಯುವ ವೇದಿಕೆ ಅಧ್ಯಕ್ಷ ಲೋಕೇಶ್ ಕುಲಾಲ್ ವಹಿಸಿದ್ದರು. ಮೂಲ್ಯರ ಯಾನೆ ಕುಲಾಲರ ಸಂಘದ ತಾಲೂಕು ಕಾರ್ಯದರ್ಶಿ ಮೋಹನ್ ಕಂಚಿಂಜ, ಅಶ್ವಿತ್ ಕುಲಾಲ್ ಓಡೀಲು, ಹರಿಶ್ಚಂದ್ರ ಮೂಲ್ಯ ಉಪಸ್ಥಿತರಿದ್ದರು. ಬಳಿಕ ಆಟಿಡೊಂಜಿ ದಿನದ ವಿವಿಧ ರೀತಿಯ ಮನೋರಂಜನೆಗಳು ಮತ್ತು ಮಕ್ಕಳ ಆಟಿ-ಆಟೋಟಗಳು ನಡೆಯಿತು. ಬಳಿಕ ನಡೆದ ಸಭಾ ಕಾರ್ಯಕ್ರಮದಲ್ಲಿ ದಿಕ್ಸೂಚಿ ಭಾಷಣ ಮಾಡಿದ ಯಕ್ಷಗಾನ ಕಲಾವಿದ ಮತ್ತು ಛಾಯಾ ಗ್ರಾಹಕ ನಂದ ಕುಮಾರ್ ಅವರು ಹಿಂದೆ ನಮ್ಮ ಹಿರಿಯರು ಆಟಿ ತಿಂಗಳಲ್ಲಿ ನಡೆಸುತ್ತಿದ್ದ ಕಷ್ಟದ ಜೀವನ, ಉಟೋಪಚಾರಗಳನ್ನು ನೆನಪಿಸಿ, ನಸಿಸುತ್ತಿರುವ ತುಳುನಾಡ ಪರಂಪರೆಯ ಆಚರಣೆಯ ಮಹತ್ವವನ್ನು ನಮ್ಮ ಮುಂದಿನ ಪೀಳಿಗೆಗೆ ತಿಳಿಯಪಡಿಸುವುದು ಈ ಕಾರ್ಯಕ್ರಮದ ಮುಖ್ಯ ಉದ್ದೇಶವಾಗಿದೆ ಎಂದರು. ನಮ್ಮಲ್ಲಿ ಸಂಘಟನೆ ಬೇಕು, ಪರಸ್ಪರ ಬೆರೆತು ವರ್ಷಕ್ಕೊಮ್ಮೆ ಇಂತಹ ಕಾರ್ಯಕ್ರಮಗಳ ಮೂಲಕ ನಮ್ಮ ಒಗ್ಗಟ್ಟನ್ನು ಪ್ರದರ್ಶಿಸುವುದರ ಜೊತೆಗೆ ನಮ್ಮ ಸಂಸ್ಕೃತಿ, ಸಾಂಪ್ರದಾಯವನ್ನು ಉಳಿಸಿ ಬೆಳೆಸುವಲ್ಲಿ ಆಟಿಡೊಂಜಿ ದಿನ ಕಾರ್ಯಕ್ರಮ ಪೂರಕವಾಗಿದೆ ಎಂದರು.
ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ಮೂಲ್ಯರ ಯಾನೆ ಕುಂಬಾರರ ಸೇವಾ ಸಂಘದ ಉಪಾಧ್ಯಕ್ಷ ದಿನಕರ ಬಂಗೇರ ಖಂಡಿಗ ಮಾತನಾಡಿ ನಮ್ಮ ಹಿರಿಯರು ಬಹಳಷ್ಟು ಕಷ್ಟಪಟ್ಟು ಕುಲಾಲ ಮಂದಿರವನ್ನು ನಿರ್ಮಿಸಿದ್ದಾರೆ. ಅವರು ಹಾಕಿಕೊಟ್ಟ ಪರಂಪರೆಯ ಹಾದಿಯಲ್ಲಿ ನಾವು ನಡೆಯಬೇಕು, ನಮ್ಮ ಸಮಾಜ, ಧರ್ಮ, ಸಂಸ್ಕೃತಿಯ ರಕ್ಷಣೆಯ ಜೊತೆಗೆ ನೂತನವಾಗಿ ಕಲಾಮಂದಿರವನ್ನು ನಿರ್ಮಿಸಲು ಎಲ್ಲರ ಸಹಕಾರ ಬೇಕು ಎಂದು ತಿಳಿಸಿದರು. ಹಿರಿಯರಾದ ಕರಿಯ ಮೂಲ್ಯ ಪಾಡ್ದನ ಹೇಳಿ ರಂಜಿಸಿದರು.
ಮುಖ್ಯ ಅತಿಥಿಗಳಾಗಿ ಪ್ರಥಮ ದರ್ಜೆ ಗುತ್ತಿಗೆದಾರ ದಯಾನಂದ ಕುಲಾಲ್ ಸಂಜಯನಗರ, ಕುಲಾಲ ಕುಂಬಾರ ಯುವ ವೇದಿಕೆ ಅಧ್ಯಕ್ಷ ಲೋಕೇಶ್ ಕುಲಾಲ್, ಕುಲಾಲ ಕುಂಬಾರ ಸಾಂಸ್ಕೃತಿಕ ಸಮಿತಿ ಅಧ್ಯಕ್ಷ ಅಶ್ವಿತ್ ಮೂಲ್ಯ ಓಡೀಲು ಭಾಗವಹಿಸಿದ್ದರು. ಕಾರ್ಯಕ್ರಮದಲ್ಲಿ ಕುಲಾಲ ಕುಂಬಾರ ಸಾಂಸ್ಕೃತಿಕ ಸಮಿತಿ ಗೌರವಾಧ್ಯಕ್ಷ ಉಮೇಶ್ ಕುಲಾಲ್, ಕುಂಬಾರರ ಯುವ ವೇದಿಕೆ ರಾಜ್ಯ ಸಂಘಟನಾ ಕಾರ್ಯದರ್ಶಿ ಹರೀಶ್ ಕಾರಿಂಜ, ಕುಲಾಲ ಕುಂಬಾರ ರಾಜ್ಯ ಸಂಘಟನಾ ಸಂಚಾಲಕ ಪದ್ಮಕುಮಾರ್ ಬೆಳ್ತಂಗಡಿ, ಸುದ್ದಿಬಿಡುಗಡೆ ಪತ್ರಿಕೆಯ ಪ್ರಧಾನ ವರದಿಗಾರ ಬಿ.ಎಸ್ ಕುಲಾಲ್ ಬೆಳ್ತಂಗಡಿ ಮೊದಲಾದವರು ಉಪಸ್ಥಿತರಿದ್ದರು.
ಮುಖೇಶ್ ಕುಲಾಲ್ ಪಾಂಡೇಶ್ವರ ಸ್ವಾಗತಿಸಿದರು. ಯುವ ವೇದಿಕೆ ಲಾಯಿಲ ಸಂಚಾಲಕ ಪುಷ್ಪರಾಜ ಕುಲಾಲ್ ಕಾರ್ಯಕ್ರಮ ನಿರೂಪಿಸಿ, ಅಶ್ವಿತ್ ಮೂಲ್ಯ ಓಡೀಲು ವಂದಿಸಿದರು. ನಂತರ ಆಟಿಯ ವಿಶೇಷ ತಿಂಡಿಗಳ ಪ್ರದರ್ಶನ ಮತ್ತು ಭೋಜನ ನಡೆಯಿತು.

belthangady ganigara sanga prathibha puraskaraಲಾಯಿಲ: ಬೆಳ್ತಂಗಡಿ ಗಾಣಿಗರ ಯಾನೆ ಸಫಲಿಗರ ಸಂಘ ಇದರ ತಾಲೂಕು ಗಾಣಿಗರ ಸಭೆ ಹಾಗೂ ಸ್ವಜಾತಿ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ಮತ್ತು ಪ್ರಾಥಮಿಕ ಶಾಲಾ ಮಕ್ಕಳಿಗೆ ಪುಸ್ತಕ ವಿತರಣೆ ಕಾರ್ಯಕ್ರಮ ಆ.13 ರಂದು ಬೆಳ್ತಂಗಡಿ ಅಂಬೇಡ್ಕರ್ ಭವನದಲ್ಲಿ ಜರುಗಿತು.
ಸಭೆಯ ಅಧ್ಯಕ್ಷತೆಯನ್ನು ಸಂಘದ ಅಧ್ಯಕ್ಷ ಲಕ್ಷ್ಮಣ ಸಪಲ್ಯ ವಹಿಸಿ ಪ್ರತಿಭೆಗಳಿಗೆ ಬೆಂಬಲ ನೀಡುವ ಸಲುವಾಗಿ ವಿದ್ಯಾರ್ಥಿಗಳು ಶಿಕ್ಷಣದ ಸದುಪಯೋಗ ಪಡೆಯಬೇಕು, ಮತ್ತು ಶಿಕ್ಷಣಕ್ಕೆ ಜಾಸ್ತಿ ಒತ್ತು ನೀಡಬೇಕೆಂದು, ತಂದೆ ತಾಯಿಗಳ ಜವಾಬ್ದಾರಿಗಾಗಿ ಈ ರೀತಿಯ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ ಎಂದರು. ಮುಖ್ಯ ಅತಿಥಿಗಳಾಗಿ ಆಗಮಿಸಿದ ಮಂಗಳೂರು ತಾಲೂಕು ಗಾಣಿಗರ ಸಂಘದ ಅಧ್ಯಕ್ಷ ನಾರಾಯಣ ಕಣ್ಣೂರು ಮಾತಾಡಿ ಸಂಘದ ಸದುಪಯೋಗ, ಜವಾಬ್ದಾರಿ ಮತ್ತು ಸಂಘಟನೆಯ ಬಗ್ಗೆ ವಿವರಿಸಿದರು. ಪ್ರಧಾನ ಕಾರ್ಯದರ್ಶಿ ಜಯಕುಮಾರ್ ಮಾತಾಡಿ ಸಂಘಟನೆ ನಡೆದು ಬಂದ ಹಾದಿ ಮತ್ತು ಕೆಲವು ಕಾರ್ಯಕ್ರಮಗಳ ಬಗ್ಗೆ ತಿಳಿಸಿದರು. ವೇದಿಕೆಯಲ್ಲಿ ಮಹಿಳಾ ಘಟಕದ ಅಧ್ಯಕ್ಷ ತಾಲೂಕು ಪಂಚಾಯತ್ ಸದಸ್ಯೆ ಧನಲಕ್ಷ್ಮಿ ಜನಾರ್ಧನ, ಉಪಾಧ್ಯಕ್ಷರಾದ ಕೇಶವ ಗಾಣಿಗ, ಜಯರಾಮ್ ಓಡದ ಕರಿಯ, ಸಂಘದ ಜೊತೆ ಕಾರ್ಯದರ್ಶಿ ಸದಾಶಿವ, ಕೋಶಾಧಿಕಾರಿ ಗಣೇಶ ಕನ್ನಾಜೆ ಉಪಸ್ಥಿತರಿದ್ದರು. ಯು.ಆರ್ ಜಯಪ್ರಕಾಶ್ ನಿರೂಪಿಸಿದ ಕಾರ್ಯಕ್ರಮದಲ್ಲಿ ನಾಗೇಶ ಕಲ್ಲಗುಡ್ಡೆ ವಿದ್ಯಾರ್ಥಿಗಳ ಪಟ್ಟಿ ವಾಚಿಸಿದರು. ಉದಯ್ ಕುಮಾರ್ ಲಾಯಿಲ ಸ್ವಾಗತಿಸಿ, ಸತೀಶ್ ಓಡದ ಕರಿಯ ಧನ್ಯವಾದವಿತ್ತರು ಕನ್ನಾಜೆ ಘಟಕ ಕಾರ್ಯಕ್ರಮ ಯಶಸ್ವಿಗೆ ಸಹಕರಿಸಿತು.

dhanalakshmi gold fetivalಉಜಿರೆ : ಶ್ರೀ ಧನಲಕ್ಷ್ಮೀ ಜ್ಯುವೆಲ್ಲರ್‍ಸ್ ತಮ್ಮ ಗ್ರಾಹಕರಿಗೆ ಆಯೋಜಿಕೊಂಡು ಬಂದಿರುವ ಗೋಲ್ಡ್ ಫೆಸ್ಟಿವಲ್ 2017ರ ಡ್ರಾ ಆ.15 ರಂದು ಉಜಿರೆ ಪೇಟೆಯಲ್ಲಿರುವ ಶ್ರೀ ಧನಲಕ್ಷ್ಮೀ ಜ್ಯುವೆಲ್ಲರ್‍ಸ್ ಮಳಿಗೆಯಲ್ಲಿ ಜರಗಿತು.
ಬೆಳ್ತಂಗಡಿಯ ಭಾರತೀಯ ಸ್ಟೇಟ್ ಬ್ಯಾಂಕ್ ಮೆನೇಜರ್ ಶೀನಪ್ಪ ನಾಯ್ಕ, ಧರ್ಮಸ್ಥಳದ ವ್ಯಾಪಾರಿ ಶಿವಾನಂದ ಶೆಟ್ಟಿ, ಮಾಜಿ ಸೈನಿಕ ಶ್ರೀನಿವಾಸ, ಉಜಿರೆ ಶ್ರೀ.ಧ.ಮಂ ಆಂಗ್ಲ ಮಾಧ್ಯಮ(ಸಿಬಿಎಸ್) ಶಾಲಾ ಮುಖ್ಯೋಪಾಧ್ಯಾಯ ಮನಮೋಹನ್ ನಾಯ್ಕ್, ಸಂಸ್ಥೆಯ ಮಾಲಕರ ತಂದೆ ಕೆ. ಬಾಲಕೃಷ್ಣ ಆಚಾರ್ಯ ಇವರುಗಳು ಗ್ರಾಹಕರ ಸಮ್ಮುಖದಲ್ಲಿ ಕಾಯಿನ್ ಸಿಸ್ಟಮ್ ಮೂಲಕ ಡ್ರಾ ತೆಗೆದು ಅದೃಷ್ಟಶಾಲಿಗಳ ಆಯ್ಕೆ ಮಾಡಿದರು. ಹಾಗೂ ಮಳಿಗೆಯಲ್ಲಿ ಚಾಲ್ತಿಯಲ್ಲಿರುವ 26 ಗುಂಪುಗಳ ಸದಸ್ಯರಿಗೂ ಪ್ರತಿಯೊಂದು ಗುಂಪಿನ ಓರ್ವ ಅದೃಷ್ಟಶಾಲಿಯನ್ನು ಡ್ರಾ ಮೂಲಕ ಆಯ್ಕೆ ಮಾಡಲಾಯಿತು.
ಗೋಲ್ಡ್ ಫೆಸ್ಟಿವಲ್‌ಗೆ ಸಹಕರಿಸುತ್ತಿರುವ ಗ್ರಾಹಕರಿಗೆ ಮಾಲಕರಾದ ಕೆ.ರಮೇಶ್ ಕುಮಾರ್ ಕೃತಜ್ಞತೆ ಸಲ್ಲಿಸಿದರು. ಶ್ರೀಮತಿ ಮೋಹಿನಿ ಬಾಲಕೃಷ್ಣ ಆಚಾರ್ಯ, ಶ್ರೀಮತಿ ರೂಪಕಲ ಆರ್.ಕುಮಾರ್, ಸಹೋದರರಾದ ಕೆ.ಹರೀಶ್ ಕುಮಾರ್, ಕೆ.ರಾಜೇಶ್ ಕುಮಾರ್, ಗ್ರಾಹಕರುಗಳು, ಸಿಬ್ಬಂದಿ ವರ್ಗದವರು ಉಪಸ್ಥಿತರಿದ್ದರು. ಉಜಿರೆ ಶ್ರೀ.ಧ.ಮಂ ಕಾಲೇಜಿನ ಉಪನ್ಯಾಸಕ ಶ್ರೀಧರ ಭಟ್ ಕಾರ್ಯಕ್ರಮ ನಿರೂಪಿಸಿದರು.

ss woodಉಜಿರೆ: ಇಲ್ಲಿಯ ಅನುಗ್ರಹ ಶಾಲೆಯ ಹತ್ತಿರದ ಟ್ರಿನಿಟಿ ಕಾಂಪ್ಲೆಕ್ಸ್‌ನಲ್ಲಿ ಕಂಪ್ಯೂಟರೀಕೃತ ಮರದ ಕೆತ್ತನೆಯ ಇಂಡಸ್ಟ್ರಿ ಎಸ್. ಎಸ್. ವುಡ್ ಆರ್ಟ್ಸ್ ಆ.17 ರಂದು ಶುಭಾರಂಭಗೊಂಡಿತು.

ನೂತನ ಸಂಸ್ಥೆಯನ್ನು ಧರ್ಮಸ್ಥಳ ಶ್ರೀ ಡಿ.ಎಂ ಕನ್‌ಸ್ಟ್ರಕ್ಷನ್‌ನ ಮೇನೆಜರ್ ಸಿ. ಗೋಪಾಲಕೃಷ್ಣ ಮೆನನ್ ಉದ್ಘಾಟಿಸಿ ಶುಭ ಹಾರೈಸಿದರು. ಮುಖ್ಯ ಅತಿಥಿಗಳಾಗಿ ಉಜಿರೆ ಶ್ರೀ.ಧ.ಮಂ ಕಾಲೇಜಿನ ವಾಣಿಜ್ಯ ವಿಭಾಗದ ಮುಖ್ಯಸ್ಥ ಡಾ. ಉದಯಚಂದ್ರ ಪಿ.ಎನ್, ಉಜಿರೆ ಗ್ರಾಮ್ ಪಂಚಾಯತ್ ಅಧ್ಯಕ್ಷ ಕೆ. ಶ್ರೀಧರ ಪೂಜಾರಿ, ಬಂಗಾಡಿ ಪ್ರಾ.ಕೃ.ಪ ಸಹಕಾರಿ ಸಂಘದ ಅಧ್ಯಕ್ಷ ಎನ್. ಲಕ್ಷಣ ಗೌಡ, ಕಟ್ಟಡದ ಮಾಲಿಕ ದೇವಸ್ಯ ಭಾಗವಹಿಸಿದ್ದರು.
ತಾಲೂಕು ಪಂಚಾಯತ್ ಮಾಜಿ ಸದಸ್ಯರಾದ ಗಣೇಶ್ ಕಣಾಲ್ ಶ್ರೀಮತಿ ಸುನೀತಾ ಶ್ರೀಧರ್ ಧರ್ಮಸ್ಥಳ, ಬೆಳ್ತಂಗಡಿ ಶ್ರೀ ಗುರು ನಾರಾಯಣ ಸ್ವಾಮಿ ಸೇವಾ ಸಂಘದ ನಿರ್ದೇಶಕ ಚಂದ್ರಶೇಖರ, ಮಾಲಕರ ತಂದೆ ಶೇಖರ ಪೂಜಾರಿ, ತಾಯಿ ಶ್ರೀಮತಿ ಸುಶೀಲ ಶೇಖರ ಪೂಜಾರಿ, ಸಹೋದರರಾದ ಸಂದೀಪ್, ಸುದೀಪ್, ಪ್ರಕಾಶ್ ಪರಾರಿ ಇನ್ನಿತರ ಗಣ್ಯರು ಉಪಸ್ಥಿತರಿದ್ದು ಸಹಕರಿಸಿದರು. ಮಾಲಿಕ ಸುಕೇಶ್ ಎಸ್. ಸುರ್ಯಬೆಟ್ಟು ಆಗಮಿಸಿದ ಗಣ್ಯರನ್ನು ಸ್ವಾಗತಿಸಿ ಕೃತಜ್ಞತೆ ಸಲ್ಲಿಸಿದರು.

Prathibha puraskaraಬೆಳ್ತಂಗಡಿ : ಸದ್ಭಾವನಾ ವೇದಿಕೆ ಬೆಳ್ತಂಗಡಿ ಇದರ ವತಿಯಿಂದ 2016-17ನೇ ಶೈಕ್ಷಣಿಕ ವರ್ಷ ಎಸ್ಸೆಸ್ಸೆಲ್ಸಿಯಲ್ಲಿ ಕನ್ನಡ ಮತ್ತು ಆಂಗ್ಲ ಮಾಧ್ಯಮ ಹಾಗೂ ದ್ವಿತೀಯ ಪಿ.ಯು.ಸಿ ಪರೀಕ್ಷೆಯಲ್ಲಿ ಕಲಾ, ವಾಣಿಜ್ಯ, ವಿಜ್ಞಾನ ವಿಭಾಗದಲ್ಲಿ ಸಾಧನೆ ಮಾಡಿದ ಪ್ರಥಮ 10 ಮಂದಿ ಪ್ರತಿಭಾವಂತ ವಿದ್ಯಾರ್ಥಿ-ವಿದ್ಯಾರ್ಥಿನಿಯರನ್ನು ಗುರುತಿಸುವ ಕಾರ್ಯಕ್ರಮ ಪ್ರತಿಭಾವಂತ ವಿದ್ಯಾರ್ಥಿಗಳ ಪುರಸ್ಕಾರ ಸಮಾರಂಭ ಆ.15 ರಂದು ಬೆಳ್ತಂಗಡಿ ಶ್ರೀ ಮಂಜುನಾಥ ಸ್ವಾಮಿ ಕಲಾಭವನದಲ್ಲಿ ಜರುಗಿತು.
ಕಾರ್ಯಕ್ರಮವನ್ನು ಉದ್ಘಾಟಿಸಿದ ಉಜಿರೆ ಶ್ರೀ ಧ.ಮಂ ಶಿಕ್ಷಣ ಸಂಸ್ಥೆಗಳ ಕಾರ್ಯದರ್ಶಿ ಡಾ. ಬಿ.ಯಶೋವರ್ಮ ಅವರು ಶಾಲೆಯಲ್ಲಿ ಗಳಿಸಿದ ಅಂಕ ಮಾತ್ರ ವಿದ್ಯಾರ್ಥಿಯ ಭವಿಷ್ಯವನ್ನು ರೂಪಿಸುವುದಿಲ್ಲ, ಬದುಕಿಗೆ ಹಲವಾರು ಆಯಾಮಗಳಿವೆ. ಪಠ್ಯದ ಜೊತೆಗೆ ಪಠ್ಯೇತರ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳಬೇಕು. ಕಲಿಕೆ ಮತ್ತು ಆಟ ಬೇರೆ, ಬೇರೆಯಲ್ಲ, ಕಲಿಕೆ ಆಟವಾಗಬೇಕು, ಆಟ ಮತ್ತು ಪಾಠ ಬದುಕಿಗೆ ಬೇಕಾದ ಅವಿಭಾಜ್ಯ ಅಂಗವಾಗಿದೆ ಎಂದರು.
ಅಭಿನಂದನಾ ಭಾಷಣ ಮಾಡಿದ ಶ್ರೀಮತಿ ಸುಧಾ ಬರಗೂರು ಅವರು ನಾವು ಮಾಡುವ ಕೆಲಸ ಸಮಾಜದಲ್ಲಿ ಸ್ಥಿರಸ್ಥಾಯಿಯಾಗಬೇಕು, ಇದಕ್ಕೆ ಇಂದು ಇಲ್ಲಿ ನಡೆದ ಕಾರ್ಯಕ್ರಮವೇ ಸಾಕ್ಷಿಯಾಗಿದೆ. ಇಂದಿನ ಆಧುನಿಕ ಸೌಲಭ್ಯಗಳಿಂದ ಮಕ್ಕಳ ಮನಸ್ಸು ಸ್ಥಿತಿಯಾಂತರವಾಗುತ್ತಿದ್ದು, ಮಕ್ಕಳಿಗೆ ನಮ್ಮ ಸಂಸ್ಕೃತಿ, ಸಂಸ್ಕಾರದ ಬಗ್ಗೆ ತಿಳುವಳಿಕೆ ನೀಡಬೇಕು, ಮಕ್ಕಳನ್ನು ಸಮಾಜದ ಆಸ್ತಿಯಾಗಿ ಮಾಡಬೇಕು ಎಂದು ತಮ್ಮ ಹಾಸ್ಯಲಹಾರಿ ಮೂಲಕ ತಿಳಿಸಿದರು.
ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ಶಾಸಕ ಕೆ.ವಸಂತ ಬಂಗೇರ ಅವರು ಬೆಳ್ತಂಗಡಿ ತಾಲೂಕಿನಲ್ಲಿ ಎಸ್.ಎಸ್.ಎಲ್.ಸಿ ಮತ್ತು ಪಿ.ಯು.ಸಿ ಯಲ್ಲಿ ಅತೀ ಹೆಚ್ಚು ಅಂಕ ಗಳಿಸಿದ ವಿದ್ಯಾರ್ಥಿಗಳನ್ನು ಗೌರವಿಸಿದ ಈ ಕಾರ್ಯಕ್ರಮ ಹೆಚ್ಚು ಅರ್ಥ ಪೂರ್ಣವಾಗಿದೆ ಎಂದರು. ವೇದಿಕೆಯಲ್ಲಿ ವೇದಿಕೆ ಕೋಶಾಧಿಕಾರಿ ಭಗೀರಥ ಜಿ, ಸಮಿತಿ ಸಂಚಾಲಕ ಹರೀಶ್ ಕಾರಿಂಜ, ಪ್ರಧಾನ ಕಾರ್ಯದರ್ಶಿ ರಾಮಕೃಷ್ಣ ಭಟ್ ಉಪಸ್ಥಿತರಿದ್ದರು. ಶ್ರೀಮತಿ ಮಂಜುಳಾ ಮತ್ತು ಶ್ರೀಮತಿ ರಕ್ಷಾ ಇವರ ಪ್ರಾರ್ಥನೆ ಬಳಿಕ ರಮೇಶ್ ಮಯ್ಯ ಸ್ವಾಗತಿಸಿದರು. ಅಧ್ಯಕ್ಷ ದೇವಿಪ್ರಸಾದ್ ಪ್ರಾಸ್ತಾವಿಕವಾಗಿ ಮಾತನಾಡಿದರು. ಅಜಿತ್‌ಕುಮಾರ್ ಕೊಕ್ರಾಡಿ ಮತ್ತು ಶಿವಶಂಕರ್ ಭಟ್ ಕಾರ್ಯಕ್ರಮ ನಿರೂಪಿಸಿ, ಜೊತೆ ಕಾರ್ಯದರ್ಶಿ ಜಯಾನಂದ ಲಾಯಿಲ ವಂದಿಸಿದರು. ವೇದಿಕೆಯ ಪದಾಧಿಕಾರಿಗಳು ಹಾಗೂ ವಿವಿಧ ಸಂಘಟನೆಗಳ ಮುಖ್ಯಸ್ಥರು ಉಪಸ್ಥಿತರಿದ್ದರು.

kakkinje unitated insuranceಕಕ್ಕಿಂಜೆ: ವಿ &ವಿ ಮಾರುತಿ ಸರ್ವಿಸ್ ಸ್ಟೇಷನ್ ಕಕ್ಕಿಂಜೆ ಇದರ ವತಿಯಿಂದ ವಿ &ವಿ ಟವರ್‍ಸ್‌ನಲ್ಲಿ ಇಂಡಿಯಾ ಇನ್ಸೂರೆನ್ಸ್ ಕಂಪೆನಿ ಯವರ ಆನ್ ಲೈನ್ ಕಛೇರಿಯು ಆ.16ರಂದು ಶುಭಾರಂಭಗೊಂಡಿದೆ.
ಸಂತ ಆಂಟನಿ ಚರ್ಚ್‌ನ ಧರ್ಮ ಗುರುಗಳು ರೆ.ಫಾ ತೋಮಸ್ ಪಾರೆ ಕಾಟಿಲ್ ಪ್ರಾರ್ಥನಾವಿಧಿ ನೆರವೇರಿಸಿ ಅಧ್ಯಕ್ಷತೆ ವಹಿಸಿ ಮಾತನಾಡಿ, ಇಂದು ಆರಂಭಗೊಂಡ ಈ ಸಂಸ್ಥೆ ಸಣ್ಣ ಸಾಸಿವೆ ಗಿಡ ಮುಂದೆ ದೊಡ್ಡ ಮರವಾಗಿ ಬೆಳೆದು ಬರಲಿ ಎಂದು ಹಾರೈಸಿದರು. ಯುನೈಟೆಡ್ ಇಂಡಿಯಾ ಇನ್ಸೂರೆನ್ಸ್ ಕಂಪೆನಿ ಬೆಳ್ತಂಗಡಿ ಶಾಖೆಯ ಆಡಳಿತಾಧಿಕಾರಿ ಶೇಕುಂಞ ನೂತನ ಕಛೇರಿಯನ್ನು ಉದ್ಘಾಟಿಸಿದರು. ಮುಂದೆ ದಿನದ 24 ಗಂಟೆಯು ಇಲ್ಲಿಂದ ಸೇವೆಯನ್ನು ಪಡೆಕೊಳ್ಳಬಹುದು. ವಾಹನ ಗಳಿಗೆ ಇನ್ಸೂರೆನ್ಸ್ ಖಡ್ಡಾಯವಾಗಿ ಮಾಡಿಸಿಕೊಳ್ಳಿ. ಮಾಡದಿದ್ದರೆ ಅಪಘಾತ ಸಮಯ ಕಷ್ಟ ಪಡಬೇಕಾಗುತ್ತದೆ ಎಂದರು.
ಚಾರ್ಮಾಡಿ ಅನಂತರಾವ್ ದೀಪ ಬೆಳಗಿಸಿ ಕಾರ್ಯಕ್ರಮ ಉದ್ಘಾಟಿಸಿ ಬಾಬುರಾಜ್‌ರವರು ವಿ&ವಿ ಸಂಸ್ಥೆ ಗ್ರಾಹಕರಿಗೆ ಉತ್ತಮ ಸೇವೆ ನೀಡುತ್ತಾ ಬಂದು ಇಂದು ತನ್ನ ವ್ಯವಹಾರವನ್ನು ಎಲ್ಲರ ವಿಶ್ವಾಸಗಳಿಸಿ ಹೆಚ್ಚಿಸಿಕೊಂಡಿದೆ ಸಂಸ್ಥೆ ಇನ್ನಷ್ಟು ಎತ್ತರಕ್ಕೆ ಬೆಳೆಯಲಿ ಎಂದು ಶುಭ ಹಾರೈಸಿದರು.
ದ.ಕ ಉಡುಪಿ ಗ್ಯಾರೇಜ್ ಮಾಲಕರ ಸಂಘದ ಅಧ್ಯಕ್ಷ ಜಯಕರ ಸೊನ್ಸ್ ಮಾತನಾಡಿ ಇಂದು ಕಂಪೆನಿಗಳಿಗೆ ಕಡಿಮೆ ಇಲ್ಲದ ರೀತಿಯಲ್ಲಿ ನಮ್ಮ ಗ್ಯಾರೇಜ್‌ಗಳು ಸೇವೆ ನೀಡುತ್ತಿದೆ. ಎಂದು ಶುಭ ಹಾರೈಸಿದರು.
ವೇದಿಕೆಯಲ್ಲಿ ತಾಲೂಕು ಗ್ಯಾರೇಜ್ ಮಾಲಕರ ಸಂಘದ ಅಧ್ಯಕ್ಷ ಬಾಲಕೃಷ್ಣ ಶೆಟ್ಟಿ ಉಪಸ್ಥಿತರಿದ್ದರು. ಕಾರುಣ್ಯ ಶಾಲಾ ಸಂಚಾಲಕ ಮೊಹಮ್ಮದ್ ಕಂಪ್ಯೂಟರ್ ಉದ್ಘಾಟಿಸಿ ಸಂಸ್ಥೆಗೆ ಶುಭ ಕೋರಿದರು.
ಜೆಸ್ಸಿ ಬಾಬುರಾಜ್ ಸ್ವಾಗತಿಸಿದರು ನಿರೂಪಣೆಯನ್ನು ಸಂತೋಷ್ ಸಿ.ಕೆ ಧನ್ಯವಾದ ಫ್ಲಾಸಿಡ್ ನೀಡಿದರು. ರೇ| .ಫಾ ಜೋಸೆಫ್ ಮುಕ್ಕಾಟ್ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.

t k abramತೋಟತ್ತಾಡಿ : ಉಜಿರೆ ಕೃಪಾ ಚಿಪ್ಸ್‌ನ ಮಾಲಕರ ತಂದೆ ಟಿ.ಕೆ ಅಬ್ರಾಹಾಂ (71ವ) ಆ. 16ರಂದು ಹೃದಯಾಘಾತದಿಂದ ನಿಧನರಾಗಿದ್ದಾರೆ.
ಮೃತರ ಅಂತಿಮ ಕ್ರಿಯೆಯು ಆ. 19(ಇಂದು) 11.15ಕ್ಕೆ ತೋಟತ್ತಾಡಿ ಚರ್ಚ್ ನಲ್ಲಿ ನಡೆಯಲಿದೆ.

shivalli shaba mahila sneha sammilanaಉಜಿರೆ : ಸಂಘಟನೆಯಲ್ಲಿ ಬಲವಿದೆ. ನಾವು ಹೋಗುವ ದಾರಿ ನೇರವಾಗಿದ್ದರೆ ಪ್ರಪಂಚವೇ ತಲೆಬಾಗುತ್ತದೆ. ಪ್ರತಿಭೆ ಎಲ್ಲರಲ್ಲೂ ಇದ್ದೇ ಇದೆ. ಅವರನ್ನು ಗುರುತಿಸಿ ಬೆಳಕಿಗೆ ತರುವ ಪ್ರಯತ್ನವಾಗಬೇಕು. ಮಹಿಳೆಯರು ಎಲ್ಲ ಕ್ಷೇತ್ರಗಳಲ್ಲಿ ಪುರುಷರಿಗೆ ಸಮಾನರಾಗಿ ಲೋಕ ಮೆಚ್ಚುವಂತಹ ಕಾರ್ಯಗಳಲ್ಲಿ ಮುನ್ನಡೆ ಸಾಧಿಸುತ್ತಿದ್ದಾರೆ. ಇಂತಹ ಸಂಘಟನೆಗಳು ಯುವ ಪೀಳಿಗೆಗೆ ಧೈರ್ಯ-ಸ್ಥೈರ್ಯ ನೀಡುವ ವೇದಿಕೆಗಳಾಗಬೇಕೆಂದು ಹಿರಿಯ ಮಹಿಳಾ ಸಾಹಿತಿ, ಲೇಖಕಿ ಶಕುಂತಲಾ ಭಟ್ ಹೇಳಿದರು.
ಅವರು ಆ.13ರಂದು ಉಜಿರೆ ಶ್ರೀ ರಾಮಕೃಷ್ಣ ಸಭಾ ಮಂಟಪದಲ್ಲಿ ಬೆಳ್ತಂಗಡಿ ತಾಲೂಕು ತುಳು ಶಿವಳ್ಳಿ ಸಭಾ (ರಿ.)ದ ಮಹಿಳಾ ಸಂಘಟನೆಯ ವತಿಯಿಂದ ಸಮಾಜದ ಮಹಿಳಾ ಸಂಘಟನೆಗಳನ್ನು ಬಲಪಡಿಸುವ ಉದ್ದೇಶದಿಂದ ತಾಲೂಕಿನ 9 ವಲಯದ ಮಹಿಳೆಯರ ಒಗ್ಗೂಡಿವಿಕೆಗಾಗಿ ಏರ್ಪಡಿಸಲಾದ ಮಹಿಳಾ ಸ್ನೇಹ ಸಮ್ಮಿಲನದಲ್ಲಿ ದಿಕ್ಸೂಚಿ ಭಾಷಣ ಮಾಡುತ್ತಿದ್ದರು. ಮಕ್ಕಳು ಹಿರಿಯರನ್ನು ವೃದ್ಧಾಶ್ರಮಕ್ಕೆ ಸೇರಿಸಲು ಮುಂದಾಗದೆ ಕೂಡು ಕುಟುಂಬದ ಸೌಹಾರ್ದ ಮನೆತನದಲ್ಲಿ ಸುಖ, ಶಾಂತಿ, ನೆಮ್ಮದಿ ಕಾಣುವಂತಾಗಬೇಕು. ಮನೆ ಮಕ್ಕಳಿಗೆ ಭಜನೆ, ಸಂಸ್ಕೃತಿ, ಸಂಸ್ಕಾರ, ಆಚರಣೆ, ವೈಚಾರಿಕ ಹಿನ್ನೆಲೆಗಳನ್ನು ತಿಳಿಸಿ ಅವರಲ್ಲಿ ಪ್ರಶ್ನಿಸುವ ಮನೋಭಾವ ಬೆಳೆಸಬೇಕು ಎಂದರು.
ಆಶಯ ಭಾಷಣಗೈದ ಉಜಿರೆ ಎಸ್‌ಡಿಎಂ ಸ್ನಾತಕೋತ್ತರ ವಿಭಾಗದ ಡೀನ್ ಡಾ. ಎಂ. ವೈ. ಮಂಜುಳಾ ನಾವು ಪರಿಪೂರ್ಣರಾಗಲು ಮೊದಲು ನಾವು ನಮ್ಮನ್ನು ಅರಿತುಕೊಂಡು ನಮ್ಮ ಶಕ್ತಿ, ನ್ಯೂನತೆ, ಅವಕಾಶಗಳು ಹಾಗೂ ಸವಾಲುಗಳನ್ನು ತಿಳಿದುಕೊಂಡಿರಬೇಕು. ಮಾತನಾಡುವ ಮೊದಲು ಯೋಚಿಸಿ ಮುನ್ನಡೆಯಬೇಕು ಎಂದರು.
ಸಮಿತಿಯ ಗೌರವಾಧ್ಯಕ್ಷೆ ಕುಸುಮಾ ಪಡ್ವೆಟ್ನಾಯ ಸ್ನೇಹ ಸಮ್ಮಿಲನ ಉದ್ಘಾಟಿಸಿ ಮಹಿಳಾ ಸಂಘಟನೆಯ ಸಂವರ್ಧನೆ ಯಿಂದ ಸುಪ್ತ ಪ್ರತಿಭೆಗಳು ಹೊರಹೊಮ್ಮಿ ಜ್ಞಾನವರ್ಧನೆಯಾಗಿ ಸಮ್ಮಿಲನ ಅರ್ಥಪೂರ್ಣವಾಗಿ ಯಶಸ್ವಿಯಾಗಲೆಂದು ಆಶಿಸಿದರು. ಸಮಿತಿ ಅಧ್ಯಕ್ಷೆ ಸ್ವರ್ಣ ಶ್ರೀರಂಗ ನೂರಿತ್ತಾಯ ಅಧ್ಯಕ್ಷತೆ ವಹಿಸಿ ಸದ್ವಿಚಾರ, ಅನುಭವ, ಬೌದ್ಧಿಕ, ಮಾನಸಿಕ ಬೆಳವಣಿಗೆಗೆ ಸಂಘಟನೆ ಸಹಕಾರಿ ಎಂದು ತಿಳಿಸಿದರು. ವೃಂದಾ ಪಡ್ವೆಟ್ನಾಯ, ವಾರಿಜ ಹರ್ಷ ಕೆದಿಲಾಯ ಮುಖ್ಯ ಅತಿಥಿಗಳನ್ನು ಪರಿಚಯಿಸಿದರು.
ವೇದಿಕೆಯಲ್ಲಿ ಕುವೆಟ್ಟು ವಲಯ ಉಪಾಧ್ಯಕ್ಷೆ ಗೀತಾ ಗಂಗಾಧರ, ಬಂದಾರು ವಲಯ ವಲಯದ ಅರ್ಚನಾ ಸಂತೋಷ್, ಮಚ್ಚಿನ ವಲಯದ ಅನಿತಾ ಕುಕ್ಕಿಲ, ಅಳದಂಗಡಿ ವಲಯದ ಲಕ್ಷ್ಮೀ ವಿಷ್ಣು ಸಂಪಿಗೆತ್ತಾಯ, ಕೊಕ್ಕಡ ವಲಯದ ತೇಜಾವತಿ ಶಿವರಾಂ ತೋಡ್ತಿಲ್ಲಾಯ, ಧರ್ಮಸ್ಥಳ ವಲಯದ ಮನೋರಮ ತೋಳ್ಪಾಡಿತ್ತಾಯ, ಅರಸಿನಮಕ್ಕಿ ವಲಯದ ಲೀಲಾ ವೈಕುಂಠ, ನಿಡ್ಲೆ ವಲಯದ ಕುಸುಮಾ ಸತ್ಯನಾರಾಯಣ ರಾವ್, ಸಮ್ಮಿಲನ ಸಂಯೋಜಕಿ ಶೋಭಾ ಕುದ್ರೆಂತ್ತಾಯ ಉಪಸ್ಥಿತರಿದ್ದರು. ಅನ್ನ ಸಂತರ್ಪಣೆಯ ಸೇವಾಕರ್ತರಾದ ಶ್ರೀಮತಿ ಮತ್ತು ವಿಠಲ ಆಚಾರ್ಯ ದಂಪತಿಗಳನ್ನು ವಿಜಯರಾಘವ ಪಡ್ವೆಟ್ನಾಯ ದಂಪತಿಗಳು ಸಮ್ಮಾನಿಸಿದರು. ಜ್ಯೋತಿ ಗುರುರಾಜ್ ಮತ್ತು ಸುವರ್ಣ ಕುಮಾರಿ ಕಲ್ಲೂರಾಯ ನಿರೂಪಿಸಿದ ಕಾರ್ಯಕ್ರಮದಲ್ಲಿ ಗಾಯತ್ರಿ ಶ್ರೀಧರ್ ಸ್ವಾಗತಿಸಿ, ವಾಣಿ ವಾಸುದೇವ ಸಂಪಿಗೆತ್ತಾಯ ವಂದಿಸಿದರು. ಡಾ, ಮಾಧವ ಎಂ.ಕೆ. ನಿರೂಪಣೆಯಲ್ಲಿ ಸ್ನೇಹರಂಜನೆ ಆದರ್ಶ ದಂಪತಿ ಕಾರ್ಯಕ್ರಮ ನಡೆಯಿತು.

macchina mosarukudikeಮಚ್ಚಿನ : ನ್ಯೂ ಫ್ರೆಂಡ್ಸ್ ಸ್ಪೋರ್ಟ್ ಕ್ಲಬ್ ಬಳ್ಳಮಂಜ ಇದರ ಆಶ್ರಯದಲ್ಲಿ ಶ್ರೀ ಕೃಷ್ಣ ಜನ್ಮಾಷ್ಟಮಿಯ ಪ್ರಯುಕ್ತ ಸಾರ್ವಜನಿಕ ಮೊಸರು ಕುಡಿಕೆ ಉತ್ಸವ ಸರಕಾರಿ ಪ್ರೌಢ ಶಾಲಾ ವಠಾರದಲ್ಲಿ ಅನಂತಕೃಷ್ಣ ಭಟ್. ಕೆ ಇವರ ದಿವ್ಯ ಹಸ್ತದಿಂದ ಉದ್ಘಾಟನೆಗೊಂಡಿತ್ತು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಮಚ್ಚಿನ ಗ್ರಾ.ಪಂ ಅಧ್ಯಕ್ಷೆ ಹರ್ಷಲತಾ ವಹಿಸಿದ್ದರು. ಮುಖ್ಯ ಅತಿಥಿಯಾಗಿ ಮಡಂತ್ಯಾರು ವಲಯ ಶ್ರೀ.ಕ್ಷೇ.ಧ.ಗ್ರಾ.ಯೋಜನೆಯ ಮೇಲ್ವಿಚಾರಕ ಸಚಿನ್, ಮಚ್ಚಿನದ ಅರಣ್ಯ ರಕ್ಷಕ ಸತೀಶ್ ಡಿಸೋಜಾ, ಮಚ್ಚಿನ ಸ.ಪ್ರೌಢ ಶಾಲೆಯ ಪ್ರಭಾರ ಮುಖ್ಯೋಪಾಧ್ಯಾಯ ಜಯ ನಾಯಕ್ ಉಪಸ್ಥಿತರಿದ್ದರು. ಸಂಘ ಅಧ್ಯಕ್ಷ ಪ್ರಮೋದ್ ಕುಮಾರ್ ಸ್ವಾಗತಿಸಿ, ಪುಷ್ಪಕ್ ವಂದಿಸಿದರು.
ತದನಂತರ ಮಕ್ಕಳಿಗೆ, ಪುರುಷರಿಗೆ, ಮಹಿಳೆಯರಿಗೆ ವಿವಿಧ ಆಟೋಟ ಸ್ಪರ್ಧೆಗಳನ್ನು ನಡೆಸಲಾಯಿತು. ಸಂಜೆ ನಡೆದ ಸಮಾರೋಪ ಸಮಾರಂಭದ ಅಧ್ಯಕ್ಷತೆಯನ್ನು ಮಚ್ಚಿನ ಗ್ರಾ.ಪಂ ಉಪಾಧ್ಯಕ್ಷ ಚಂದಶೇಖರ ಬಿ.ಎಸ್. ವಹಿಸಿದರು. ಮುಖ್ಯ ಅತಿಥಿಯಾಗಿ ಮಡಂತ್ಯಾರು ತಾ.ಪಂ ಸದಸ್ಯೆ ಶ್ರೀಮತಿ ವಸಂತಿ ಲಕ್ಷಣ್, ಬಿಜೆಪಿ ಯುವ ಮೋರ್ಚಾ ಜಿಲ್ಲಾಧ್ಯಕ್ಷ ಹರೀಶ್ ಪೂಂಜಾ, ಶ್ರೀ ಕ್ಷೇತ್ರ ಪಾರೆಂಕಿಯ ಆಡಳಿತ ಮೊಕ್ತೇಸರರಾದ ರಾಜಶೇಖರ್, ಬೆಳ್ತಂಗಡಿ ಬಿಜೆಪಿ ಯುವ ಮೋರ್ಚಾ ಅಧ್ಯಕ್ಷ ಸಂಪತ್ ಸುವರ್ಣ, ಬಸವಗುಡಿ ಗಣೇಶ್ ವುಡ್ ಇಂಡಸ್ಟ್ರೀಸ್ ಮಾಲಕ ಗಣೇಶ್ ಅನಿಲಡೆ, ಮಚ್ಚಿನ ಗ್ರಾ.ಪಂ ಲೆಕ್ಕ ಪರಿಶೋಧಕಿ ರೇಷ್ಮಾ ಮಗಂಜಿಗಟ್ಟಿ ಮಚ್ಚಿನ ಶಿಕ್ಷಕ ಸುಭಾಸ್, ಮಿತುನ್ ಕುಲಾಲ್ ಮಡಂತ್ಯಾರ್, ಸಂಜೀವ ಶೆಟ್ಟಿ ಮುಗೆರೋಡಿ ಉಪಸ್ಥಿತರಿದ್ದರು. ವಿಜೇತರಿಗೆ ಬಹುಮಾನ ವಿತರಿಸಲಾಯಿತು. ಪ್ರಮೋದ್ ಕುಮಾರ್ ಸ್ವಾಗತಿಸಿದರು, ಹರೀಶ್ ಕುಮಾರ್ ಬಹುಮಾನ ವಿಜೇತರ ಪಟ್ಟಿ ವಾಚಿಸಿದರು, ರವೀಂದ್ರ ಎಂ.ಬಿ ಧನ್ಯವಾದವಿತ್ತರು. ಲ್ಯಾನ್ಸಿ, ಸದಾಶಿವ ಹೆಗ್ಡೆ ಕಾರ್ಯಕ್ರಮ ನಿರೂಪಿಸಿದರು.

gowda sanga ati kootaಬೆಳ್ತಂಗಡಿ : ಆಟಿ ಅಮವಾಸ್ಯೆ ದಿನದ ವಿಧಿವಿಧಾನಗಳು ವೈಜ್ಞಾನಿಕ ಮಹತ್ವವನ್ನು ಪದೆದುಕೊಂಡಿವೆ. ಆದರೆ ಇತ್ತೀಚೆಗೆ ನಮ್ಮ ಸಮುದಾಯದವರು ಈ ಎಲ್ಲಾ ಆಚರಣೆಗಳಲ್ಲಿ ಆಸಕ್ತಿಯನ್ನು ಕಳೆದುಕೊಂಡಿದ್ದಾರೆ. ಗೌಡ ಸಮಾಜದ ಆಚರಣೆಗಳು ಮತ್ತು ಸಂಸ್ಕೃತಿಗಳು ಮುಂದಿನ ಪೀಳಿಗೆಗೆ ಮಾದರಿ ಯಾಗಿರಬೇಕು ಎಂದು ವಾಣಿ ಪದವಿ ಪೂರ್ವ ಕಾಲೇಜಿನ ರಾಜ್ಯಶಾಸ್ತ್ರ ಉಪನ್ಯಾಸಕಿ ಶ್ರೀಮತಿ ಮೀನಾಕ್ಷಿ ಮಹಾಬಲ ಗೌಡ ಅಭಿಪ್ರಾಯಪಟ್ಟರು.
ಅವರು ವಾಣಿ ಶಿಕ್ಷಣ ಸಂಸ್ಥೆಗಳ ಸಭಾಭವನದಲ್ಲಿ ನಡೆದ ಆಟಿಡೊಂಜಿ ಕೂಟ ಕಾರ್ಯಕ್ರಮದಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸಿದ್ದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಗ್ರಾಮ ಸಮಿತಿಯ ಅಧ್ಯಕ್ಷ ಮಾಧವ ಗೌಡ ವಹಿಸಿಕೊಂಡಿದ್ದರು. ತಾಲೂಕು ಸಮಿತಿಯ ಅಧ್ಯಕ್ಷ ಜಿ.ಸೋಮೇ ಗೌಡ ದೀಪ ಪ್ರಜ್ವಲನಗೈದು ಉದ್ಘಾಟನಾ ಭಾಷಣ ಮಾಡಿದರು. ಮುಖ್ಯ ಅತಿಥಿಗಳಾಗಿ ತಾಲೂಕು ಯುವ ವೇದಿಕೆಯ ಅಧ್ಯಕ್ಷ ಟಿ. ಜಯಾನಂದ ಗೌಡ, ತಾಲೂಕು ಮಹಿಳಾ ವೇದಿಕೆಯ ಅಧ್ಯಕ್ಷೆ ಶ್ರೀಮತಿ ಉಷಾ ಲಕ್ಷ್ಮಣ ಗೌಡ, ತಾಲೂಕು ಸಂಘದ ಕಾರ್ಯದರ್ಶಿ ಮೋಹನ್ ಗೌಡ ಪ್ರಾಸ್ತಾವಿಕವಾಗಿ ಮಾತನಾಡಿದರು.
ಆಟಿ ತಿಂಗಳಲ್ಲಿ ಉಪಯೋಗಿಸುವ ವಿವಿಧ ತಿಂಡಿ ತಿನಸುಗಳ ಸಹ ಭೋಜನದ ವ್ಯವಸ್ಥೆ ಮಾಡಲಾಗಿತ್ತು. ಶ್ರೀಮತಿ ಪದ್ಮಿನಿ ಪಡ್ಲಾಡಿಯವರು ಚೆನ್ನೆಮಣೆ ಆಟದ ಪ್ರಾತ್ಯಕ್ಷಿಕೆಯನ್ನು ನಿರ್ವಹಿಸಿದರು. ಪ್ರಾಥಮಿಕ ಶಾಲಾ ವಿದ್ಯಾರ್ಥಿಗಳಿಗೆ ತುಳು ಕ್ವಿಜ್ ಕಾರ್ಯಕ್ರಮವನ್ನು ದಿನಕರ ಗೌಡ ಮತ್ತು ಲೋಕೇಶ್ ಗೌಡ ನಿರ್ವಹಿಸಿದರು.
ತಾಲೂಕು ಸಂಘದ ಉಪಾಧ್ಯಕ್ಷ ನಾರಾಯಣ ಗೌಡ ದೇವಸ್ಯ, ತಾಲೂಕು ಸಮಿತಿ ಸದಸ್ಯರಾದ ಧರ್ಣಪ್ಪ ಗೌಡ ಕೆಲ್ಲಗುತ್ತು, ತಾಲೂಕು ಯುವ ವೇದಿಕೆ ಕಾರ್ಯದರ್ಶಿ ಸುರೇಶ ಗೌಡ ಕೌಡಂಗೆ, ಗ್ರಾಮ ಸಮಿತಿ ಕಾರ್ಯದರ್ಶಿ ಜಿ. ಪ್ರದೀಪ್, ಗ್ರಾಮ ಸಮಿತಿಯ ಉಪಾಧ್ಯಕ್ಷ ಅಚ್ಚುತ ಗೌಡ ಪಡ್ಲಾಡಿ ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಕು| ಗುಣಶ್ರೀ ಡಿ. ಹುಣ್ಸೆಕಟ್ಟೆ ಕಾರ್ಯಕ್ರಮ ನಿರ್ವಹಿಸಿ, ಪ್ರಭಾರ ಕಾರ್ಯದರ್ಶಿ ಶಿವರಾಮ ಗೌಡ ದಾಸರಬೆಟ್ಟು ಸ್ವಾಗತಿಸಿ, ಯುವ ವೇದಿಕೆಯ ಅಧ್ಯಕ್ಷ ಬಾಬು ಗೌಡ ವಂದಿಸಿದರು.
ಗ್ರಾಮ ಸಮಿತಿ ಕೋಶಾಧಿಕಾರಿ ಜಿನ್ನಪ್ಪ ಗೌಡ ವರದಿ ವಾಚಿಸಿದರು. ಕುಮಾರಿಯರಾದ ಪೃಥ್ವಿ ಮತ್ತು ಪ್ರಜ್ಞಾ ಕುತ್ಯಾರು ಪ್ರಾರ್ಥನೆಗೈದರು.

billava ati 1ಬೆಳ್ತಂಗಡಿ : ವಿವಿಧ ಬಗೆಯ ತಿಂಡಿ ತಿನಿಸುಗಳನ್ನು ಮಾಡಿ ತಂದು ಸಾಮೂಹಿಕ ಭೊಜನದ ಮೂಲಕ ಸಂತೋಷ ಕಂಡುಕೊಳ್ಳುವುದು, ತುಳುನಾಡ ಪರಂಪರೆ ಸಂಸ್ಕೃತಿ ಸೊಬಗನ್ನು ಆಧುನಿಕ ಸಮಾಜಕ್ಕೆ ಪರಿಚಯಿಸುವುದು ಆಟಿದ ಅಟಿಲ್ದ ಕೂಟದ ಉದ್ದೇಶ, ಜೊತೆಗೆ ಸಮುದಾಯದಲ್ಲಿ ಒಗ್ಗಟ್ಟು ಮೂಡಿಸಲು ಸಂಘಟನೆಯ ಅವಶ್ಯಕತೆಯ ಬಗ್ಗೆ ಅರಿವು ಮತ್ತು ಜಾಗೃತಿ ಮೂಡಿಸುವ ಕಾರ್ಯ ಇಲ್ಲಿ ನಡೆಯುತ್ತಿದೆ ಎಂದು ಶಾಸಕ ವಸಂತ ಬಂಗೇರ ಹೇಳಿದರು.
ಶ್ರೀ ಗುರುನಾರಾಯಣ ಸ್ವಾಮಿ ಸೇವಾ ಸಂಘ ಬೆಳ್ತಂಗಡಿ, ಬಿಲ್ಲವ ಮಹಿಳಾ ವೇದಿಕೆ ಮತ್ತು ಯುವ ಬಿಲ್ಲವ ವೇದಿಕೆ ಇವುಗಳ ಸಂಯುಕ್ತ ಆಶ್ರಯದಲ್ಲಿ ಆ. 13 ರಂದು ಬೆಳ್ತಂಗಡಿ ಆಶಾ ಶಾಲಿಯಾನ್ ಸಭಾಂಗಣದಲ್ಲಿ ಹಮ್ಮಿಕೊಳ್ಳಲಾಗಿದ್ದ ಆಟಿದ ಅಟಿಲ್ದ ಕೂಟ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು. ಅಧ್ಯಕ್ಷತೆಯನ್ನು ಶ್ರೀ ಗುರುನಾರಾಯಣ ಸ್ವಾಮಿ ಸೇವಾ ಸಂಘದ ಅಧ್ಯಕ್ಷ ಭಗೀರಥ ಜಿ. ವಹಿಸಿದ್ದರು.
ಸಂಪನ್ಮೂಲ ವ್ಯಕ್ತಿಯಾಗಿದ್ದ ಉಡುಪಿ ಜಿಲ್ಲಾ ಮೂರ್ತೆದಾರರ ಸಂಘದ ಮಹಾಮಂಡಲದ ಅಧ್ಯಕ್ಷ ಪಿ.ಕೆ. ಸದಾನಂದ ಆಟಿ ತಿಂಗಳ ಸಂಸ್ಕೃತಿ, ಸಂಸ್ಕಾರ, ಆಹಾರ ಶೈಲಿ ಮತ್ತು ಅವಶ್ಯಕತೆಯ ಬಗ್ಗೆ ತಿಳಿಯಪಡಿಸಿದರು.
ಸನ್ಮಾನ; ಶಾಸಕರು ಹಾಗೂ ರಾಜ್ಯ ಸಣ್ಣ ಕೈಗಾರಿಕಾ ಅಭಿವೃದ್ಧಿ ನಿಗಮದ ಅಧ್ಯಕ್ಷರಾಗಿ ನೇಮಕಗೊಂಡಿರುವ ಶಾಸಕ ವಸಂತ ಬಂಗೇರ, ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷರಾಗಿ ನೇಮಕಗೊಂಡಿರುವ ಹರೀಶ್ ಕುಮಾರ್, ಗೆಜ್ಜೆಗಿರಿ ನಂದನಬಿತ್ತಿಲ್ ಕ್ಷೇತ್ರ ಸಮಿತಿ ಅಭಿವೃದ್ಧಿಯ ಪ್ರಮುಖರಾಗಿರುವ ಪೀತಾಂಬರ ಹೇರಾಜ್, ಬ್ಲಾಕ್ ಯುವ ಕಾಂಗ್ರೆಸ್ ಅಧ್ಯಕ್ಷರಾಗಿ ಚುನಾಯಿತರಾಗಿರುವ ಅಭಿನಂದನ್ ಹರೀಶ್ ಕುಮಾರ್ ಮತ್ತು ಇತ್ತೀಚೆಗೆ ನಡೆದ ಮೇಲಂತಬೆಟ್ಟು ಗ್ರಾ.ಪಂ. ಉಪಚುನಾವಣೆಯಲ್ಲಿ ಜಯಗಳಿಸಿದ ನೀತಾ ಮಹೇಶ್ ನಡಕರ ಅವರನ್ನು ಸನ್ಮಾನಿಸಲಾಯಿತು.
ವೇದಿಕೆಯಲ್ಲಿ ಮಹಿಳಾ ಬಿಲ್ಲವ ವೇದಿಕೆ ಸ್ಥಾಪಕಾಧ್ಯಕ್ಷೆ ಸುಜೀತಾ ವಿ. ಬಂಗೇರ, ಯುವ ಬಿಲ್ಲವ ವೇದಿಕೆ ಅಧ್ಯಕ್ಷ ಚಿದಾನಂದ ಇಡ್ಯ ಉಪಸ್ಥಿತರಿದ್ದರು. ಬಿಲ್ಲವ ಮಹಿಳಾ ವೇದಿಕೆ ಅಧ್ಯಕ್ಷೆ ತನುಜಾ ಶೇಖರ್ ಸ್ವಾಗತಿಸಿದರು. ಮಾಜಿ ಅಧ್ಯಕ್ಷೆ ವಿನೋದಿನಿ ರಾಮಪ್ಪ ಪ್ರಾಸ್ತಾವಿಕವಾಗಿ ಮಾತನಾಡಿದರು. ಮಹಿಳಾ ಬಿಲ್ಲವ ವೇದಿಕೆ ಕಾರ್ಯದರ್ಶಿ ರಾಜಶ್ರೀ ರಮಣ್ ವಂದಿಸಿದರು. ಸುಧಾಮಣಿ ಮುಂಡೂರು, ಪದ್ಮನಾಭ ಸಾಲಿಯಾನ್, ಧನಲಕ್ಷ್ಮೀ ಕಾರ್ಯಕ್ರಮ ನಿರೂಪಿಸಿದರು. ಸಭಾ ಕಾರ್ಯಕ್ರಮದ ಬಳಿಕ ಪ್ರತಿಯೊಬ್ಬ ಸದಸ್ಯರೂ ಅವರವರ ಮನೆಗಳಿಂದ ತಯಾರಿಸಿ ತಂದಿದ್ದ ಸುಮಾರು 60 ಬಗೆಯ ಆಹಾರವಸ್ತುಗಳನ್ನು ಸಾಮೂಹಿಕವಾಗಿ ಸವಿಯಲಾಯಿತು. ಶಾಂತಾ ಜೆ. ಬಂಗೇರ ಮತ್ತು ಬಳಗದವರು ಪ್ರಾರ್ಥನಾಗೀತೆ ಪ್ರಸ್ತುತಪಡಿಸಿದರು.

jeep race

jeep race1

jeep race2

jeep race3 copy

jeep race4ನೇಚರ್ ರೈಡರ್‍ಸ್ ಬೆಳ್ತಂಗಡಿ ಇವರ ವತಿಯಿಂದ ಬಿಜೆಪಿ ಅಧ್ಯಕ್ಷ ರಂಜನ್ ಜಿ. ಗೌಡ ಅವರ ನೇತೃತ್ವದಲ್ಲಿ ಬಂಗಾಡಿ ಕಿಲ್ಲೂರು ನೇತ್ರಾವತಿ ನದಿ ಕಿನಾರೆಯಲ್ಲಿ ನಡೆದ ಚತುರ್ಚಕ್ರ ವಾಹನಗಳ ರ್‍ಯಾಲಿಯಲ್ಲಿ ಕಂಡು ಬಂದ ದೃಶ್ಯ.

kokkada akanda sankalpa dinaಕೊಕ್ಕಡ : ಹಿಂದೂ ಜಾಗರಣ ವೇದಿಕೆ ಕೊಕ್ಕಡ ಇದರ ವತಿಯಿಂದ ಅಖಂಡ ಭಾರತವು ವಿಭಜನೆಗೊಂಡ ದುರಂತದ ನೆನಪಿನಲ್ಲಿ ಮತ್ತೆ ವಿಖಂಡವಾದ ಭಾರತವನ್ನು ಒಂದು ಗೂಡಿಸಲು ಅಖಂಡ ಭಾರತ ಸಂಕಲ್ಪ ದಿನ ಜನಜಾಗೃತಿ ನಿಮಿತ್ತ ಪಂಜಿನ ಮೆರವಣಿಗೆ ಹಾಗೂ ಧಾರ್ಮಿಕ ಸಭಾ ಕಾರ್ಯಕ್ರಮವನ್ನು ಕೊಕ್ಕಡದ ಶ್ರೀರಾಮ ಭಜನಾ ಮಂಡಳಿಯಲ್ಲಿ ಆ.13 ರಂದು ರಾತ್ರಿ ಆಚರಿಸಲಾಯಿತು.
ಕೊಕ್ಕಡದ ವೈದ್ಯ ಡಾ. ಗಣೇಶ್ ಪ್ರಸಾದ್ ಅಧ್ಯಕ್ಷತೆ ವಹಿಸಿ ಮಾತನಾಡಿ ಸ್ವಾಮೀ ವಿವೇಕಾನಂದರ ನುಡಿಗಳನ್ನು ನಾವಿಂದು ನೆನಪಿಸಿಕೊಂಡು ಯುವ ಶಕ್ತಿಯನ್ನು ದೇಶದ ಅಖಂಡತೆಗಾಗಿ ಒಂದು ಗೂಡಿಸುವ ಕಾರ್ಯ ನಡೆಸಬೇಕಾಗಿದೆ. ನಮ್ಮ ದೇಶದ ಅಮೂಲ್ಯ ವಿಧಾನಗಳು ವಿಶ್ವಕ್ಕೇ ಮಾದರಿಯೆನಿಸುತ್ತಿದೆ. ವಿಶ್ವಗುರು ಭಾರತವು ತನ್ನ ತುಂಡಾಗಿ ಹೋಗಿರುವ ಭಾಗಗಳನ್ನು ಮತ್ತೆ ಪಡೆದು ಜಗತ್ತಿಗೇ ಶ್ರೇಷ್ಟ ರಾಷ್ಟ್ರವಾಗುವಲ್ಲಿ ಯುವ ಸಮಾಜದ ಕೊಡುಗೆಯೂ ಅತ್ಯಮೂಲ್ಯ ಎಂದರು. ಹಿಂದೂ ಜಾಗರಣ ವೇದಿಕೆಯ ರಾಜ್ಯ ಕಾರ್ಯಕಾರಿ ಸಮಿತಿಯ ಸದಸ್ಯ ರಾಧಾಕೃಷ್ಣ ಅಡ್ಯಂತಾಯ ರವರು ದಿಕ್ಸೂಚಿ ಭಾಷಣ ಮಾಡಿ ಈ ದೇಶದ ಅಖಂಡತೆಯ ಬಗ್ಗೆ ಸಭೆ ನಡೆಸುವುದಿದ್ದರೆ 10 ಲಕ್ಷ ಬಾಂಡ್ ಕೊಡಬೇಕಾದ ಪರಿಸ್ಥಿತಿ ಬಂದೊದಗಿರುವುದು ದೇಶದ ದುರಂತ. ನಮ್ಮ ಅಖಂಡ ಭಾರತದ ಹಲವಾರು ಭೂಭಾಗಗಳು ಇಂದು ತುಂಡಾಗಿ ದೇಶದ್ರೋಹಿಗಳ ಪಾಲಾಗಿರುವುದರಿಂದ ಪುನ: ಅಖಂಡ ಭಾರತವನ್ನು ಕಟ್ಟಬೇಕಾದ ಹೋರಾಟ ಅನಿವಾರ್ಯ ಎಂದರು. ಈ ಸಂದರ್ಭದಲ್ಲಿ ಭಾರತೀಯ ಸೇನೆಯಲ್ಲಿ ಕರ್ತವ್ಯ ನಿರ್ವಹಿಸಿ ನಿವೃತ್ತರಾದ ಪದ್ಮಯ ಗೌಡರನ್ನು ಸನ್ಮಾನಿಸಲಾಯಿತು.
ಕೊಕ್ಕಡ ಹಿಂದೂ ಜಾಗರಣ ವೇದಿಕೆ ಸಂಚಾಲಕ ರುಕ್ಮಯ ಮಡಿವಾಳ ಪ್ರಾಸ್ತಾವಿಕವಾಗಿ ಮಾತನಾಡಿ ಅಖಂಡ ಭಾರತ ಸಂಕಲ್ಪ ದಿನದ ಮಹತ್ವವನ್ನು ವಿವರಿಸಿದರು.ಕೊಕ್ಕಡ ಶ್ರೀ ವೈದ್ಯನಾಥೇಶ್ವರ ದೇವಸ್ಥಾನದಿಂದ ಪಂಜಿನ ಮೆರವಣಿಗೆಯು ಪ್ರಾರಂಭವಾಗಿ ಜೋಡುಮಾರ್ಗ ಜಂಕ್ಷನ್ ವರೆಗೆ ಸಾಗಿ ಶ್ರೀರಾಮ ಭಜನಾ ಮಂದಿರದವರೆಗೆ ನಡೆಯಿತು.
ಕೊಕ್ಕಡ ತಾ.ಪಂ.ಸದಸ್ಯ ಲಕ್ಷ್ಮೀನಾರಾಯಣ ಟಿ.ಎಂ, ನೆಲ್ಯಾಡಿ ಹಿಂದೂ ಜಾಗರಣ ವೇದಿಕೆಯ ಮುಖಂಡ ರವಿಪ್ರಸಾದ್ ಶೆಟ್ಟಿ ಬಲ್ಯ, ಕೊಕ್ಕಡ ಡಾ. ಮೋಹನದಾಸ್ ಗೌಡ, ಮೊದಲಾದ ಪ್ರಮುಖರು ಮೆರವಣಿಗೆ ಯಲ್ಲಿ ಪಾಲ್ಗೊಂಡರು.
ವೇದಿಕೆಯಲ್ಲಿ ಹಿಂದೂ ಜಾಗರಣ ವೇದಿಕೆಯ ಪುತ್ತೂರು ಜಿಲ್ಲಾ ಕಾರ್ಯದರ್ಶಿ ಅಜಿತ್ ಕುಮಾರ್, ಹಿಂದೂ ಜಾಗರಣ ವೇದಿಕೆ ಕೊಕ್ಕಡ ವಲಯ ಸಂಚಾಲಕ ರುಕ್ಮಯ ಮಡಿವಾಳ, ನಿವೃತ್ತ ಸೈನಿಕ ಪದ್ಮಯ ಗೌಡ, ಮೊದಲಾದವರು ಉಪಸ್ಥಿತರಿ ದ್ದರು. ಶಶಿಧರ್ ಕೊಕ್ಕಡ ಸ್ವಾಗತಿಸಿದರು, ಸೂರ್ಯನಾರಾಯಣ ರಾವ್ ಶಿಶಿಲ ವಂದಿಸಿದರು. ಜಯಂತ್ ಅಂಬರ್ಜೆ ಕಾರ್ಯಕ್ರಮ ನಿರೂಪಿಸಿದರು.

sdm raly swachatheಉಜಿರೆ : ಎಸ್‌ಡಿಎಂ ಪದವಿ ಕಾಲೇಜು, ಸ್ನಾತಕೋತ್ತರ ಕೇಂದ್ರದ ವಿದ್ಯಾರ್ಥಿಗಳು, ಅಧ್ಯಾಪಕರು ಮತ್ತು ಅಧ್ಯಾಪಕೇತರ ಸಿಬ್ಬಂದಿ ಉಜಿರೆಯ ಮುಖ್ಯ ರಸ್ತೆಗಳಲ್ಲಿ ಆ.14 ರಂದು ಬೃಹತ್ ಮೆರವಣಿಗೆಯ ಮೂಲಕ ಸ್ವಚ್ಛತೆಯ ಮಹತ್ವವನ್ನು ಪ್ರಚಾರಪಡಿಸಿದರು. ಉಜಿರೆಯ ಎಸ್.ಡಿ.ಎಮ್ ಪದವಿ ಕಾಲೇಜಿನ ಎನ್‌ಎಸ್‌ಎಸ್ ಘಟಕ ಸ್ಥಳೀಯ ಗ್ರಾಮ ಪಂಚಾಯತ್ ಸಹಯೋಗದೊಂದಿಗೆ ಆರಂಭಿಸಿದ್ದ ವಿಶೇಷ ಸ್ವಚ್ಛತಾ ಪಾಕ್ಷಿಕ ಅಭಿಯಾನದ ಭಾಗವಾಗಿ ನಡೆದ ಸ್ವಚ್ಛತೆಯ ಪರವಾದ ಈ ಜಾಗೃತಿ ಮೆರವಣಿಗೆಯಲ್ಲಿ ಅರಿವು ಮೂಡಿಸುವ ಉದ್ಘೋಷಗಳು ಮೊಳಗಿದವು.
ಸ್ವಚ್ಛತೆಗೆ ಸಂಬಂಧಿಸಿದಂತೆ ಕೇಂದ್ರ ಸರ್ಕಾರ ಆರಂಭಿಸಿದ ಯೋಜನಾ ಅಭಿಯಾನಕ್ಕೆ ಪೂರಕವಾಗಿ ಜನರಲ್ಲಿ ಪ್ರಜ್ಞೆ ಮೂಡಿಸುವಂಥ ಘೋಷಣಾ ಫಲಕಗಳನ್ನು ಹಿಡಿದು ಉಜಿರೆ ಮುಖ್ಯರಸ್ತೆಗಳಲ್ಲಿ ವಿದ್ಯಾರ್ಥಿಗಳು ಗಮನ ಸೆಳೆದರು. ಪ್ರತಿಯೊಬ್ಬರೂ ಸ್ವಚ್ಛತೆಗೇ ಮೊದಲ ಆದ್ಯತೆ ನೀಡಲೇಬೇಕಾದ ಅನಿವಾರ್ಯತೆಯನ್ನು ಮನಗಾಣಿಸಿದರು.
ಆ.1 ರಂದು ಆರಂಭಗೊಂಡಿದ್ದ ಸ್ವಚ್ಛತಾ ಅಭಿಯಾನ ಆ.15 ರಂದು ಸಮಾರೋಪಗೊಳ್ಳುವ ಮುನ್ನಾದಿನವಾದ ಆ.14 ರಂದು ಈ ಬೃಹತ್ ಮೆರವಣಿಗೆ ನಡೆಯಿತು.
ಎಸ್‌ಡಿಎಂ ಸಂಸ್ಥೆಯ ಬೋಧಕ ಮತ್ತು ಬೋಧಕೇತರ ಸಿಬ್ಬಂದಿ, ವಿದ್ಯಾರ್ಥಿಗಳು ಸೇರಿದಂತೆ 1500ಕ್ಕೂ ಹೆಚ್ಚಿನ ಪ್ರಮಾಣದಲ್ಲಿ ಪಾಲ್ಗೊಂಡಿದ್ದರು. ಇದಕ್ಕೂ ಮುನ್ನ ಅಭಿಯಾನದ ಪ್ರಯುಕ್ತ ಎಸ್.ಡಿ.ಎಂ ಪದವಿ ಕಾಲೇಜಿನ ಆವರಣ ಮತ್ತು ಉಜಿರೆಯ ಸುತ್ತಮುತ್ತಲಿನ ಪ್ರದೇಶವನ್ನು ಎನ್‌ಎಸ್‌ಎಸ್ ಸ್ವಯಂಸೇವಕರು ಸ್ವಚ್ಛಗೊಳಿಸಿದ್ದರು. ಉಜಿರೆಯ 318 ಮನೆಗಳಿಗೆ ಭೇಟಿ ನೀಡಿ ಸ್ವಚ್ಛತೆಯ ಬಗ್ಗೆ ವಿವರಿಸಿದ್ದರು. ಈ ವೇಳೆ ಕಸ ವಿಂಗಡಣೆಯ ಕ್ರಮಗಳ ಬಗ್ಗೆ ಮಾಹಿತಿ ನೀಡಿದ್ದರು.

  belthangady independence day1857 ಪ್ರಥಮ ಸ್ವಾತಂತ್ರ್ಯ ಸಂಗ್ರಾಮದ ಶತಮಾನೋತ್ಸವದ ನೆನಪಿಗಾಗಿ ಹಾಗೂ ಸ್ವಾತಂತ್ರ್ಯ ಸಂಗ್ರಮದಲ್ಲಿ ಸಕ್ರಿಯವಾಗಿ ಪಾಲ್ಗೊಂಡ ನಮ್ಮ ಬೆಳ್ತಂಗಡಿ ತಾಲೂಕಿನ ಹೆಮ್ಮೆಯ ಸ್ವಾತಂತ್ರ್ಯ ಹೋರಾಟಗಾರರಲ್ಲಿ ಓರ್ವರಾದ ದಿ. ಉಪೇಂದ್ರ ಕಾಮತ್ ಅವರ ಸ್ಮರಣಾರ್ಥವಾಗಿ ಅವರ ಪುತ್ರ ದಿ. ಪುಂಡಲೀಕ ಕಾಮತ್ ಮತ್ತು ಬಂಧು ಮಿತ್ರರು 1957 ರಲ್ಲಿ ಬೆಳ್ತಂಗಡಿಯ ಮೂರು ಮಾರ್ಗದ ಬಳಿ ಸ್ಮಾರಕವೊಂದನ್ನು ನಿರ್ಮಾಣ ಮಾಡಿದ್ದರು. ಕಾಲಾಂತರದಲ್ಲಿ ಬೆಳ್ತಂಗಡಿ ಪೇಟೆಯ ಮಧ್ಯಭಾಗದಲ್ಲಿದ್ದರೂ, ಹಲವಾರು ವರ್ಷಗಳಿಂದ ಯಾರು ಗಮನಿಸದೆ ಇದ್ದದ್ದು ವಿಪರ್ಯಾಸವೇ ಸರಿ. ಇದನ್ನು ಮನಗಂಡು ವಿಶ್ವ ಹಿಂದೂ ಪರಿಷತ್, ಭಜರಂಗದಳ ಈ ಸ್ಮಾರಕವನ್ನು ಪುನಶ್ಚೇತನಗೊಳಿಸಿ 71 ನೇ ಸ್ವಾತಂತ್ರ್ಯ ದಿನಾಚರಣೆಯನ್ನು ಬಹಳ ಅರ್ಥಪೂರ್ಣವಾಗಿ ಆಚರಿಸಿತು.
ಈ ಸಂದರ್ಭದಲ್ಲಿ ಪುಂಡಲೀಕ ಕಾಮತ್ ರವರ ಅಣ್ಣನ ಮಗನಾದ ಅಶೋಕ್ ಕಾಮತ್ ರವರನ್ನು ಗೌರವಿಸಲಾಯಿತು. ಈ ಸಂದರ್ಭದಲ್ಲಿ ವಿ.ಹಿಂ.ಪ. ಪ್ರಧಾನ ಕಾರ್ಯದರ್ಶಿ ನವೀನ್ ನೆರಿಯ, ದ.ಕ. ಬಿಜೆಪಿ ಯುವ ಮೋರ್ಚಾ ಜಿಲ್ಲಾಧ್ಯಕ್ಷ ಹರೀಶ್ ಪೂಂಜ, ವಿ.ಹಿಂ.ಪ. ನಗರ ಅಧ್ಯಕ್ಷ ಮೋಹನ್, ಗುರು ನಾರಾಯಣ ಸ್ವಾಮಿ ಸೇವಾ ಸಂಘದ ಪ್ರ. ಕಾರ್ಯದರ್ಶಿ ಸಂತೋಷ್ ಕುಮಾರ್ ಕಾಪಿನಡ್ಕ, ಬಿಜೆಪಿ ಬೆಳ್ತಂಗಡಿ ಪ್ರಧಾನ ಕಾರ್ಯದರ್ಶಿ ಸೀತಾರಾಮ್ ಬಿ.ಎಸ್, ಪ್ರಭಾಕರ ಶೆಟ್ಟಿ ಉಪ್ಪಡ್ಕ, ಬಿಜೆಪಿ ಪ್ರಮುಖರಾದ ಶಂಕರ್ ಹೆಗ್ಡೆ, ರಾಜೇಶ್ ಮೂಡುಕೋಡಿ, ಭುಜಂಗ ಶೆಟ್ಟಿ, ಪ್ರಾಣೇಶ್ ಪುತ್ರನ್ ಅಂಡಿಂಜೆ, ಈಶ್ವರ ಭೈರ, ರಾಷ್ಟ್ರಿಯ ಸ್ವಯಂ ಸೇವಕ ಸಂಘದ ರಾಜೇಶ್ ಸಾವ್ಯ, ಪ್ರಕಾಶ್ ಪಿ, ಪವನ್ ಉಜಿರೆ, ಗೋಪಿನಾಥ್ ಕಾಮತ್, ಕವನ್ ಗುರುವಾಯನಕೆರೆ, ಶರತ್ ಬೆಳ್ತಂಗಡಿ, ಪ್ರಕಾಶ್ ಆಚಾರ್ಯ, ಉಮೇಶ್ ಕುಲಾಲ್, ಜಗದೀಶ್ ಕನ್ನಾಜೆ ಹಾಗೂ ವಿ.ಹಿಂ.ಪ ಭಜರಂಗದಳದ ಕಾರ್ಯಕರ್ತರು ಭಾಗವಹಿಸಿದ್ದರು.

chandrashekar 

  • ತಹಶೀಲ್ದಾರ್ ಹುದ್ದೆಗೆ ನೇರ ನೇಮಕಾತಿ
  • ಪದವಿ ಕಾಲೇಜಿನಲ್ಲಿ  ಸಹಾಯಕ ಪ್ರಾಧ್ಯಾಪಕರಾಗಿಯೂ  ಉತ್ತೀರ್ಣ

ಬೆಳ್ತಂಗಡಿ : ಕಳೆದ ನಾಲ್ಕು ವರ್ಷಗಳಿಂದ ಬೆಳ್ತಂಗಡಿ ತಾ| ಇಂದಬೆಟ್ಟು ಗ್ರಾ.ಪಂ ಅಭಿವೃದ್ದಿ ಅಧಿಕಾರಿಯಾಗಿ ಕ್ರಿಯಾಶೀಲ ವ್ಯಕ್ತಿತ್ವದಿಂದ ಗುರುತಿಸಲ್ಪಟ್ಟಿರುವ ಚಂದ್ರಶೇಖರ್ ಅವರು ಕೆಪಿಎಸ್‌ಸಿ ಪರೀಕ್ಷೆಯಲ್ಲಿ ಉತ್ತೀರ್ಣರಾಗುವ ಮೂಲಕ ತಹಶಿಲ್ದಾರರಾಗಿ ನೇರ ನೇಮಕಾತಿ ಹೊಂದಿದ್ದಾರೆ.
ಜೊತೆಗೆ ಅವರ ಇನ್ನೊಂದು ಪ್ರತಿಭೆಯ ಅನಾವರಣವೂ ಆಗಿದ್ದು 2016 ಮಾರ್ಚ್‌ನಲ್ಲಿ ಬರೆದಿದ್ದ ಪರೀಕ್ಷೆಯೊಂದರಲ್ಲೂ ಉತ್ತೀರ್ಣರಾಗಿರುವ ಅವರು ಪದವಿ ಕಾಲೇಜಿನ ಸಹಾಯಕ ಪ್ರಾಧ್ಯಾಪಕರಾಗಿಯೂ (ಯುಜಿಸಿ) (ಅಸಿಸ್ಟೆಂಟ್ ಪ್ರೊಫೆಸರ್) ನೇಮಕಾತಿ ಆದೇಶ ಪಡೆದಿದ್ದಾರೆ.
ದಾವಣಗೆರೆ ಜಿಲ್ಲೆಯ ಹೊನ್ನಾಳಿ ತಾಲೂಕಿನ ನಿವಾಸಿಯಾಗಿರುವ ಅವರು 11 ವರ್ಷಗಳ ಕಾಲ ಪ್ರಾಥಮಿಕ ಶಾಲಾ ಶಿಕ್ಷಕರಾಗಿ ಸೇವೆ ಸಲ್ಲಿಸಿದವರು 2013 ರಲ್ಲಿ ಪರೀಕ್ಷೆ ಬರೆದು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯ ಪಿಡಿಒ ಆಗಿ ನೇರ ನೇಮಕವಾಗಿದ್ದರು. ಆ ಬಳಿಕದಿಂದ ಬೆಳ್ತಂಗಡಿ ತಾಲೂಕಿನ ಇಂದಬೆಟ್ಟು ಗ್ರಾ.ಪಂ ಗೆ ನಿಯುಕ್ತಿಗೊಂಡು ಕರ್ತವ್ಯಸಲ್ಲಿಸುತ್ತಿದ್ದಾರೆ. ಸದ್ಯ ಅವರು ಹುದ್ದೆಯ ಆಯ್ಕೆ ಮಾಡಬೇಕಾಗಿದ್ದು ಇದೀಗ ಪೂರಕ ದಾಖಲೆ ಪರಿಶೀಲನೆ ಹಂತದಲ್ಲಿದ್ದಾರೆ.

madanthyar astami1ಮಡಂತ್ಯಾರು: ಶ್ರೀಕೃಷ್ಣನ ಬಾಲ್ಯ ಜೀವನ ಮತ್ತು ಏಸುವಿನ ಬಾಲ್ಯ ಜೀವನ ಒಂದಕ್ಕೊಂದು ಸಾಮ್ಯತೆ ಹೊಂದಿದೆ. ಇಂಟರ್‌ನೆಟ್ ಯುಗದಲ್ಲಿ ಬೇರೆ ಬೇರೆ ಬಣ್ಣಗಳನ್ನು ಕಾಣುತ್ತಾರೆ. ಆದರೆ ದೇವರ ಮುಗ್ದತೆಯನ್ನು ಮರೆಯುತ್ತೇವೆ. ಎಲ್ಲರೂ ಒಂದೇ ಎಂಬಂತೆ ತಿಳಿದು ಬದುಕುವುದು ಬಾಳು. ಬದುಕಿ ತಿಳಿಯುವುದು ಬಾಳಲ್ಲ ಎಂದು ಮಡಂತ್ಯಾರು ಸೆಕ್ರೆಡ್ ಹಾರ್ಟ್ ಚರ್ಚ್ ಧರ್ಮಗುರುಗಳಾದ ವಂ. ಫಾ| ಬೆಸಿಲ್ ವಾಸ್ ಹೇಳಿದರು.
ಅವರು ಆ.15ರಂದು ಗಣಪತಿ ಮಂಟಪದ ವಠಾರದಲ್ಲಿ ನಡೆದ ಮಡಂತ್ಯಾರು ಶ್ರೀ ಕೃಷ್ಣ ಜನ್ಮಾಷ್ಟಮಿ ಸಮಿತಿಯ 28ನೇ ವರ್ಷದ ಮೊಸರು ಕುಡಿಕೆ ಉತ್ಸವದ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಮಡಂತ್ಯಾರು ಇಂದು ಹಬ್ಬದ ತೇರು ಇದ್ದ ಹಾಗೆ ಕಾಣುತ್ತದೆ. ಸರ್ವ ಧರ್ಮಿಯರು ಇಲ್ಲಿ ಪಾಲ್ಗೊಂಡಿದ್ದಾರೆ. ನಮ್ಮ ಈ ವಿಸ್ತಾರ ಮನೋಭಾವದಿಂದ ಕೃಷ್ಣ ಜನ್ಮಾಷ್ಟಮಿ ಸಮಿತಿ ಹೃದಯ ವೈಶಾಲ್ಯತೆ ಹೊಂದಿದೆ. ನಮ್ಮಲ್ಲಿ ಇನ್ನು ಬೇಕು ಕೋಮು ಸೌಹಾರ್ದತೆಯ ಸಂಕೆತದ ಈ ಹಬ್ಬ ಇನ್ನು ಮುಂದಿನ ದಿನಗಳಲ್ಲಿ ಯಶಸ್ವಿಯನ್ನು ಕಾಣಲಿ ಎಂದರು.
ಪುತ್ತೂರು ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ ಅಧ್ಯಕ್ಷ ಬುಡಿಯಾರ್ ರಾಧಾಕೃಷ್ಣ ರೈ ಬಹುಮಾನ ವಿತರಿಸಿ ಮಾತನಾಡಿ, ಸಮಾಜದಲ್ಲಿ ಕಷ್ಟಕರ ವಾತಾವರಣ ಕಾಣುತ್ತೇವೆ. ಇಲ್ಲಿ ಜಾತಿ ಮತ ಬೇದವಿಲ್ಲದೆ ಆಚರಿಸುವ ಎಲ್ಲಾ ಕಾರ್ಯಕ್ರಮಗಳು ಸಮಾಜಕ್ಕೆ ಮಾದರಿಯಾಗಲೆಂದು ಹಾರೈಸಿದರು.
ಪಂಚಾಯತ್ ಅಭಿವೃದ್ಧಿ ಅಧಿಕಾರಿ ನಾಗೇಶ್ ಎಂ. ಶ್ರೀ ಕೃಷ್ಣನ ಜೀವನ ಚರಿತ್ರೆಯನ್ನು ತಿಳಿಸಿದರು. ಉಜಿರೆ ಗ್ರಾ.ಪಂ. ಸದಸ್ಯ ರವಿ ಕುಮಾರ್ ಬರಮೇಲು ಮಾತನಾಡಿ ನಾವು ಆಚರಿಸುವ ಯಾವುದೇ ಹಬ್ಬ ಹರಿದಿನಗಳನ್ನು ನಮ್ಮ ನಮ್ಮ ಸಂಸ್ಕೃತಿಯನ್ನು ತಿಳಿದು ಆಚರಿಸಿದರೆ ಉತ್ತಮ ಎಂದರು. ವಾಮದಪದವು ಯಜಮಾನ ಇಂಡಸ್ಟ್ರಿಯ ವರದರಾಜ ಪೈ, ಮಡಂತ್ಯಾರು ಜೇಸಿಯ ಅಧ್ಯಕ್ಷ ರಾಜೇಶ್ ಪುಳಿಮಜಲು ಶುಭ ಹಾರೈಸಿದರು. ಈ ಸಂದರ್ಭದಲ್ಲಿ ಸ್ವಾತಂತ್ರ್ಯೋತ್ಸವದ ಪ್ರಯುಕ್ತ ನಿವೃತ್ತ ಸೈನಿಕರಾದ ಕಾಂತಪ್ಪ ಗೌಡ ಹಟ್ಟತ್ತೋಡಿ, ಸತೀಶ್ ಸುವರ್ಣ ಪಿ. ಇವರನ್ನು ಸನ್ಮಾನಿಸಲಾಯಿತು.
ಸಮಿತಿಯ ಸ್ಥಾಪಕಾಧ್ಯಕ್ಷರಾದ ಕೆ. ಪ್ರಭಾಕರ ಶೆಟ್ಟಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಕು| ಭೂಮಿಕಾ, ಕು| ಸದಾನ, ಕು| ಪಲ್ಲವಿ ಪ್ರಾರ್ಥನೆ ಹಾಡಿದರು.
ತೀರ್ಪುಗಾರರಾಗಿ ಸೇವೆ ಸಲ್ಲಿಸುತ್ತಿದ್ದ ಸಂಜೀವ ಶೆಟ್ಟಿ ಮುಗೆರೋಡಿ, ಅಟೋರಿಕ್ಷ ಚಾಲಕ ಮಾಲಕ ಬಿ.ಎಂ.ಸಿ. ಸದಸ್ಯರಾಗಿ ನೇಮಕಗೊಂಡಿರುವ ಉಮೇಶ್ ಕುಮಾರ್ ಕೋಟೆ, ಫೋಟೊಗ್ರಾಫಿ ನವೀನ್ ಇವರನ್ನು ಸ್ಮರಣಿಕೆ ನೀಡಿ ಗೌರವಿಸಲಾಯಿತು. ಪದ್ಮನಾಭ ಸುವರ್ಣ ಸ್ವಾಗತಿಸಿ, ವಂದಿಸಿ ಕಾರ್ಯಕ್ರಮ ನಿರೂಪಿಸಿದರು. ಸಮಿತಿಯ ಸದಸ್ಯ ಪ್ರತೀವರ್ಷ ಭಾರ ಎತ್ತುವ ಸ್ಪರ್ಧೆಯಲ್ಲಿ ಭಾಗವಹಿಸುತಿದ್ದ ಹೃದಯಘಾತದಿಂದ ನಿಧನ ಹೊಂದಿದ ವಿಶ್ವನಾಥ ಪಲ್ಕೆ ಇವರ ನಿಧನಕ್ಕೆ 1 ನಿಮಿಷ ಮೌನ ಪ್ರಾರ್ಥನೆ ಮಾಡಲಾಯಿತು.
ಕಾರ್ಯಕ್ರಮದಲ್ಲಿ ಸಂಜೀವ ಶೆಟ್ಟಿ ಮುಗೆರೋಡಿ, ತಾ.ಪಂ. ಸದಸ್ಯ ಜೋಯಲ್ ಮೆಂಡೋನ್ಸಾ, ಗ್ರಾ.ಪಂ. ಸದಸ್ಯ ಅದ್ದುಲ್ ರಹಿಮಾನ್ ಪಡ್ಪು ಉಪಸ್ಥಿತರಿದ್ದರು.
ಸಮಿತಿಯ ಅಧ್ಯಕ್ಷ ಅರುಣ್ ಸಾಲಿಯಾನ್, ಗೌರವಾಧ್ಯಕ್ಷ ರೂಪೇಶ್ ಆಚಾರ್ಯ, ಉಮೇಶ್ ಕುಮಾರ್ ಕೋಟೆ, ಕಾರ್ಯದರ್ಶಿ ಸತೀಶ್ ಸಾಲ್ಯಾನ್, ಜೊತೆಕಾರ್ಯದರ್ಶಿ ದಿನೇಶ್ ಎಂ. ಪಾಂಗಾಳ, ಶ್ರೀನಿವಾಸ ಟೈಲರ್, ಪ್ರಶಾಂತ್ ಎಂ. ಪ್ರತಿಮಾನಿಲಯ, ವೀರೇಂದ್ರ ಕುಮಾರ್, ಶಂಕರ್ ಶೆಟ್ಟಿ, ನಾರಾಯಣ ಪೂಜಾರಿ, ನಾರಾಯಣ ನಾವಡ, ಕುಶಾಲಪ್ಪ ಗೌಡ, ರಮೇಶ್, ಸದಾಶಿವ ಹೆಗ್ಡೆ, ಕಿರಣ್ ಕುಮಾರ್, ರೋಹಿತ್ ಪೂಜಾರಿ, ಜಯ ಕೆ. ಪಾಂಡವರಕಲ್ಲು, ಜನಾರ್ಧನ ಶೆಟ್ಟಿಗಾರ ಮರಕಡ, ಚಂದ್ರ, ಗಿರಿಯಪ್ಪ ಪೂಜಾರಿ, ಪ್ರಮೋದ್ ಕುಮಾರ್, ವೆಂಕಟರಮಣ ಗೌಡ, ವಿಶ್ವನಾಥ ಪೂಜಾರಿ, ಎ.ಪಿ.ಎಂ.ಸಿ. ನಿರ್ದೇಶಕಿ ಶ್ರೀಮತಿ ಸೆಲೆಸ್ತಿನ್ ಡಿಸೋಜ ಮೊದಲಾದವರು ಸಹಕರಿಸಿದರು. ಬೆಳಿಗ್ಗೆ ಉದ್ಘಾಟನಾ ಸಮಾರಂಭವನ್ನು ನ್ಯಾಯವಾದಿ ವಸಂತ ಮರಕಡ ನೆರವೇರಿಸಿದರು. ಅಟೊ ರಿಕ್ಷಾ ಚಾಲಕರ ಮಾಲಕ ಸಂಘದ ಅಧ್ಯಕ್ಷ ಸುಧಾಕರ ಶೆಣೈ ಖಂಡಿಗ ಅಧ್ಯಕ್ಷತೆ ವಹಿಸಿದರು. ಕಾರ್ಯಕ್ರಮದ ನಂತರ ಭದ್ರಾವತಿ ಬೀಟ್ಸ್ ಆರ್ಕೇಸ್ಟ್ರಾ ಇವರಿಂದ ಸಂಗೀತ ರಸಮಂಜರಿ ನಡೆಯಿತು.

rseti rastriya puraskaraಧರ್ಮಸ್ಥಳ : ಕೇಂದ್ರ ಸರ್ಕಾರದ ಉದ್ಯಮಶೀಲತಾ ಅಭಿವೃದ್ಧಿ ಮಂತ್ರಾಲಯದ 2016-17ನೇ ಸಾಲಿನ ರಾಷ್ಟ್ರೀಯ ಉದ್ಯಮ ಶೀಲತಾ ಅಭಿವೃದ್ಧಿ ಪುರಸ್ಕಾರವು ಆರ್‌ಸೆಟಿಗಳ ರಾಷ್ಟ್ರೀಯ ಶ್ರೇಷ್ಠತಾ ಕೇಂದ್ರಕ್ಕೆ ಲಭಿಸಿದೆ.
ಆ.9 ರಂದು ನವದೆಹಲಿಯಲ್ಲ್ಲಿ ನಡೆದ ವಿಶೇಷ ಸಮಾರಂಭದಲ್ಲಿ ಕೇಂದ್ರ ಸರ್ಕಾರದ ಉದ್ಯಮಶೀಲತಾ ಮಂತ್ರಾಲಯದ ಸಚಿವ ರಾಜೀವ್ ಪ್ರತಾಪ್ ರೂಡಿ ಪ್ರಶಸ್ತಿ ಪ್ರದಾನ ಮಾಡಿದರು.
ಆರ್‌ಸೆಟಿಗಳ ರಾಷ್ಟ್ರೀಯ ನಿರ್ದೇಶಕ ಕೆ. ಎನ್. ಜನಾರ್ದನ್, ಕೆನರಾ ಬ್ಯಾಂಕಿನ ಕಾರ್ಯಕಾರಿ ನಿರ್ದೇಶಕಿ ಪಿ. ವಿ. ಭಾರತಿ, ಸಿಂಡಿಕೇಟ್ ಬ್ಯಾಂಕಿನ ಮಾಹಾ ಪ್ರಬಂಧಕ ಅಶೋಕನ್ ಸಂಸ್ಥೆಯ ಪರವಾಗಿ ಪ್ರಶಸ್ತಿಯನ್ನು ಸ್ವೀಕರಿಸಿದರು.
ಆರ್‌ಸೆಟಿಗಳ ರಾಷ್ಟ್ರೀಯ ಶ್ರೇಷ್ಠತಾ ಕೇಂದ್ರದ ಅಧ್ಯಕ್ಷರು ಹಾಗೂ ಧರ್ಮಸ್ಥಳದ ಧರ್ಮಾಧಿಕಾರಿ ವೀರೇಂದ್ರ ಹೆಗ್ಗಡೆಯವರ ನೇತೃತ್ವ ಮತ್ತು ಮಾರ್ಗದರ್ಶನದಲ್ಲಿ 24.20 ಲಕ್ಷ ನಿರುದ್ಯೋಗಿಗಳಿಗೆ ತರಬೇತಿ ನೀಡಿದ್ದು, 15.70 ಲಕ್ಷ ಯುವಕ/ಯುವತಿಯರು ಸ್ವಯಂ ಉದ್ಯೋಗ ಮಾಡುವಲ್ಲಿ ಯಶಸ್ವಿಯಾಗಿದ್ದಾರೆ.
1982 ರಲ್ಲಿ ಉಜಿರೆಯಲ್ಲಿ ಪ್ರಾರಂಭಗೊಂಡ ರುಡ್‌ಸೆಟ್ ಸಂಸ್ಥೆ ಪ್ರಸ್ತುತ 586 ಶಾಖೆಗಳ ಮೂಲಕ ನಿರುದ್ಯೋಗಿಗಳಿಗೆ ಮಾಹಿತಿ, ಮಾರ್ಗದರ್ಶನ ಮತ್ತು ತರಬೇತಿ ನೀಡಿ ನಿರುದ್ಯೋಗ ಸಮಸ್ಯೆ ನಿವಾರಿಸುವಲ್ಲಿ ಯಶಸ್ವಿಯಾಗಿದೆ.

blt nagarapanchayathಬೆಳ್ತಂಗಡಿ : ರಾಜ್ಯದ ಎಲ್ಲಾ ನಗರ ಸ್ಥಳೀಯ ಸಂಸ್ಥೆಗಳನ್ನು ಬಯಲು ಶೌಚ ಮುಕ್ತ ನಗರಗಳಾಗಿ ಮಾಡಲು ಸರಕಾರ ಮಾಡಿದ ಯೋಜನೆಯಲ್ಲಿ ಉತ್ತಮ ಸಾಧನೆ ಮಾಡಿದ ಬೆಳ್ತಂಗಡಿ ನಗರ ಪಂಚಾಯತು ಪ್ರಥಮ ಹಂತದಲ್ಲೇ ಪ್ರಶಸ್ತಿಗೆ ಆಯ್ಕೆಯಾಗಿದೆ.
ಆ.15ರಂದು ಮಂಗಳೂರು ನೆಹರು ಮೈದಾನದಲ್ಲಿ ನಡೆದ 71ನೇ ಸ್ವಾತಂತ್ರ್ಯ ದಿನಾಚರಣೆ ಕಾರ್ಯಕ್ರಮದಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಬಿ. ರಮಾನಾಥ ರೈ ಅವರು ಈ ಪ್ರಶಸ್ತಿಯನ್ನು ಪ್ರಧಾನ ಮಾಡಿದರು. ಬೆಳ್ತಂಗಡಿ ನಗರ ಪಂಚಾಯತು ಉಪಾಧ್ಯಕ್ಷ ಜಗೀಶ್ ಡಿ. ಮುಖ್ಯಾಧಿಕಾರಿ ಜೆಸಿಂತಾ ಲೂಯಿಸ್ ಅವರು ಪಂಚಾಯತು ಆಡಳಿತದ ಪರವಾಗಿ ಪ್ರಶಸ್ತಿಯನ್ನು ಸ್ವೀಕರಿಸಿದರು.
ಈ ಸಂದರ್ಭದಲ್ಲಿ ಸಂಸದ ನಳಿನ್ ಕುಮಾರ್, ಶಾಸಕರಾದ ಮೊದೀನ್ ಭಾವ, ಜೆ.ಆರ್. ಲೋಬೋ, ವಿಧಾನ ಪರಿಷತ್ ಮುಖ್ಯ ಸಚೇತಕ ಐವನ್ ಡಿ’ಸೋಜಾ, ಮೇಯರ್ ಕವಿತಾ ಸನಿಲ್, ಉಪಮೇಯರ್ ರಜನೀಶ್, ಜಿಲ್ಲಾಧಿಕಾರಿ ಡಾ| ಕೆ.ಜೆ. ಜಗದೀಶ್, ಅಪರ ಜಿಲ್ಲಾಧಿಕಾರಿ ಕುಮಾರ್, ಐಜಿಪಿ ಹರಿಶೇಖರನ್, ಎಸ್.ಪಿ. ಸುಧೀರ್ ರೆಡ್ಡಿ, ಜಿ.ಪಂ. ಸಿಇಒ ಡಾ. ಎಂ.ಆರ್. ರವಿ, ಕಸಾಪ ಅಧ್ಯಕ್ಷ ಪ್ರದೀಪ್ ಕುಮಾರ್ ಕಲ್ಕೂರ ಮೊದಲಾದವರು ಉಪಸ್ಥಿತರಿದ್ದರು. ಬೆಳ್ತಂಗಡಿ ನಗರ ವ್ಯಾಪ್ತಿಯಲ್ಲಿ ಎಲ್ಲಾ ಮನೆಗಳಲ್ಲೂ ಜನರು ಶೌಚಾಲಯವನ್ನು ಬಳಸುತ್ತಿದ್ದಾರೆ. ಶೌಚಾಲಯ ಇಲ್ಲದ ಬಡ ಕುಟುಂಬಗಳಿಗೆ ನಗರ ಪಂಚಾಯತು ವತಿಯಿಂದ ಪ್ರತಿ ವರ್ಷ ಶೌಚಾಲಯ ನಿರ್ಮಾಣಕ್ಕೆ ಸಾಮಾಗ್ರಿ ಹಾಗೂ ಅನುದಾನವನ್ನು ನೀಡಲಾಗುತ್ತದೆ. ಅಲ್ಲದೆ ಬೆಳ್ತಂಗಡಿ ಬಸ್ ನಿಲ್ದಾಣ ಮತ್ತು ಸಂತೆಕಟ್ಟೆಯಲ್ಲಿ ಸಾರ್ವಜನಿಕ ಶೌಚಾಲಯ ನಿರ್ಮಿಸಲಾಗಿದ್ದು, ಇದರ ನಿರ್ವಹಣೆಯನ್ನು ನಿರಂತರವಾಗಿ ಮಾಡಲಾಗುತ್ತಿದೆ. ನಗರದ ಸ್ವಚ್ಛತೆಗೆ ಆಡಳಿತ ಹೆಚ್ಚಿನ ಗಮನ ಹರಿಸಿ ಅದಕ್ಕೆ ಬೇಕಾದ ಪೂರಕ ವ್ಯವಸ್ಥೆಗಳನ್ನು ಮಾಡುತ್ತಿದೆ. ನಗರದ ತ್ಯಾಜ್ಯ ವಿಲೇಯನ್ನು ಸಮರ್ಪಕವಾಗಿ ನಿರ್ವಹಿಸಲಾಗುತ್ತಿದೆ. ಅಂಗಡಿ ಹಾಗೂ ಮನೆಗಳಿಂದ ತ್ಯಾಜ್ಯ ಸಂಗ್ರಹಣೆಯೂ ಪ್ರತಿ ದಿನ ನಡೆಯುತ್ತಿದೆ. ಈ ಎಲ್ಲಾ ಅಂಶಗಳನ್ನು ಪರಿಗಣಿಸಿ ಬೆಳ್ತಂಗಡಿ ನಗರ ಪಂಚಾಯತನ್ನು ಸರಕಾರ ಈ ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ.

DV Heggadeಧರ್ಮಸ್ಥಳ: 2017ರ ಜನವರಿ ತಿಂಗಳಿನಲ್ಲಿ ಮಕರ ಸಂಕ್ರಾಂತಿಯ ಶುಭಾವಸರದಲ್ಲಿ ಶ್ರದ್ಧಾ ಕೇಂದ್ರಗಳ ಸ್ವಚ್ಛತಾ ಅಭಿಯಾನಕ್ಕೆ ಕರೆ ನೀಡಿದಾಗ ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ 600 ಶ್ರದ್ಧಾ ಕೇಂದ್ರಗಳಲ್ಲಿ 3,20,000 ಮಂದಿ ಸ್ವಚ್ಛತಾ ಅಭಿಯಾನದಲ್ಲಿ ಭಾಗವಹಿಸಿದ್ದಾರೆ. ಸ್ವಚ್ಛತಾ ಅಭಿಯಾನದಿಂದ ಶ್ರದ್ಧಾ ಕೇಂದ್ರಗಳ ಸಾನ್ನಿಧ್ಯ ವೃದ್ಧಿಯಾಗಿದೆ. ದರ್ಶನಕ್ಕೆ ಬರುವ ಭಕ್ತರಲ್ಲಿ ಭಕ್ತಿಯೊಂದಿಗೆ ಪವಿತ್ರ ಮನೋಭಾವ ಮೂಡಿ ಬಂದಿದೆ. ಶ್ರದ್ಧಾ ಕೇಂದ್ರಗಳ ಪರಿಸರದಲ್ಲಿ ಸ್ವಚ್ಛತೆ ಕಾಪಾಡುವ ಬಗ್ಗೆ ಜನ ಜಾಗೃತಿ ಉಂಟಾಗಿದೆ. ಈ ಕಾರ್ಯದಲ್ಲಿ ನಮ್ಮ ಕ್ಷೇತ್ರದ ಭಕ್ತರು, ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಸದಸ್ಯರು ಹಾಗೂ ಜಾತಿ-ಮತ ಬೇಧವಿಲ್ಲದೆ ಎಲ್ಲಾ ಸಾರ್ವಜನಿಕರು ಉತ್ತಮ ಪ್ರತಿಕ್ರಿಯೆ ನೀಡಿ ಸ್ವಚ್ಛತಾ ಕಾರ್ಯಕ್ರಮವನ್ನು ಯಶಸ್ವಿಗೊಳಿಸಿದ್ದಾರೆ. ಇದು ಅಭಿನಂದನಾರ್ಹ ಎಂದು ಶ್ರೀ ಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿ ಡಾ| ಡಿ. ವೀರೇಂದ್ರ ಹೆಗ್ಗಡೆವರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಸ್ವಚ್ಛತಾ ಅಂದೋಲನದ ಪರಿಣಾಮವಾಗಿ ಎಲ್ಲಾ ಶ್ರದ್ಧಾ ಕೇಂದ್ರಗಳಲ್ಲಿ ನಿರಂತರ ಸ್ವಚ್ಛತಾ ಕಾರ್ಯಕ್ರಮಗಳು ನಡೆದು ಜನರಲ್ಲಿ ಅರಿವು ಜಾಗೃತಿ ಉಂಟಾಗಿದೆ. ಈ ಬಾರಿಯ 71ನೇ ಸ್ವಾತಂತ್ರ್ಯೋತ್ಸವ ಆಚರಣೆ ಸಂದರ್ಭದಲ್ಲಿಯೂ ಮತ್ತೆ ಶ್ರದ್ಧಾ ಕೇಂದ್ರಗಳ ಸ್ವಚ್ಛತೆಯ ಕಾರ್ಯ ಮುಂದುವರಿಸಿ ಸಹಕರಿಸಿರುವುದಕ್ಕೆ ಸಂತೋಷವಾಗಿದೆ. ಇದು ನಿರಂತರವಾಗಿ ನಡೆಯಬೇಕಾದ ಕರ್ತವ್ಯ ರೂಪದ, ಸೇವಾ ರೂಪದ ಸಮರ್ಪಣಾ ಕಾರ್ಯಕ್ರಮವಾಗಿದೆ. ಯಾವುದೇ ಕಾರಣಕ್ಕೂ ಕ್ಷೇತ್ರಗಳನ್ನು ಅಪವಿತ್ರಗೊಳಿಸಿ ಮತ್ತೆ ಮಲಿನತೆಗೆ ಅವಕಾಶ ನೀಡಬೇಡಿ. ಎಲ್ಲಾ ಪವಿತ್ರ ಶ್ರದ್ಧಾ ಕೇಂದ್ರಗಳು ಸದಾ ನಿಮ್ಮೆಲ್ಲರ ಕಣ್ಗಾವಲಿನಲ್ಲಿ ಮತ್ತು ಸೇವೆಯಲ್ಲಿ ರಕ್ಷಿಸಲ್ಪಡಲಿ ಎಂದು ಆಶಿಸುತ್ತೇನೆ ಎಂದಿರುವ ಅವರು ಸ್ವಚ್ಛತಾ ಅಭಿಯಾನದಲ್ಲಿ ಪ್ರತ್ಯಕ್ಷವಾಗಿ ಹಾಗೂ ಪರೋಕ್ಷವಾಗಿ ಸಹಕರಿಸಿದ ಎಲ್ಲರಿಗೂ ಶ್ರೀ ಮಂಜುನಾಥ ಸ್ವಾಮಿಯ ಅನುಗ್ರಹವಿರಲಿ ಹಾಗೂ ಶ್ರದ್ಧಾ ಕೇಂದ್ರಗಳ ಭಗವತ್ ಸಾನ್ನಿಧ್ಯಗಳು ಸಂತೃಪ್ತರಾಗಿ ಹರಸಲೆಂದು ಪ್ರಾರ್ಥಿಸುತ್ತೇನೆ ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Thaluku mattada swathanthra dinacharaneಬೆಳ್ತಂಗಡಿ: ಜಾತಿ, ಧರ್ಮ, ಪ್ರಾಂತ್ಯದ ಹೆಸರಿನಲ್ಲಿ ನಮ್ಮ ನಡುವೆ ನಡೆಯುವ ಸಂಘರ್ಷವನ್ನು ನಿಲ್ಲಿಸಿ ದೇಶದ ಪ್ರಗತಿಗಾಗಿ ನಾವೆಲ್ಲ ಸಂಘಟಿತರಾಗಬೇಕು, ರಾಷ್ಟ್ರಪ್ರೇಮ, ಕರ್ತವ್ಯಪ್ರಜ್ಞೆ ನಮ್ಮಲ್ಲಿ ಮೂಡಬೇಕು ಎಂದು ಶಾಸಕ ಹಾಗೂ ರಾಜ್ಯ ಸಣ್ಣ ಕೈಗಾರಿಕಾ ನಿಗಮದ ಅಧ್ಯಕ್ಷ ಕೆ. ವಸಂತ ಬಂಗೇರ ಕರೆ ನೀಡಿದರು.
ಅವರು ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿ ಬೆಳ್ತಂಗಡಿ ಇದರ ವತಿಯಿಂದ ವಾಣಿ ಪದವಿ ಪೂರ್ವ ಕಾಲೇಜಿನ ಮೈದಾನದಲ್ಲಿ ನಡೆದ 71ನೇ ಸ್ವಾತಂತ್ರ್ಯ ದಿನಾಚರಣೆ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಬ್ರಿಟೀಷರ ವಿರುದ್ಧ ನಮ್ಮ ದೇಶದ ಸಹಸ್ರ, ಸಹಸ್ರ ಸಂಖ್ಯೆಯಲ್ಲಿ ದೇಶಭಕ್ತರು ಹೋರಾಟ ನಡೆಸಿದ್ದಾರೆ. ಸಾವಿರಾರು ಸಂಖ್ಯೆಯಲ್ಲಿ ಸ್ವಾತಂತ್ರ್ಯಕ್ಕಾಗಿ ಬಲಿದಾನಗಳು ನಡೆದಿದೆ. ಇವರೆಲ್ಲರ ಪ್ರಯತ್ನದ ಫಲವಾಗಿ ನಮಗೆ ಸ್ವಾತಂತ್ರ್ಯ ದೊರಕಿದೆ. ಇಂದು ನಮ್ಮ ದೇಶ ಪ್ರಗತಿಪಥದಲ್ಲಿ ಸಾಗುತ್ತಿದ್ದು, ಜಗತ್ತಿನಲ್ಲಿ ಬಲಿಷ್ಠ ರಾಷ್ಟ್ರವಾಗಿ ರೂಪುಗೊಳ್ಳುತ್ತಿದೆ ಎಂದು ಅಭಿಪ್ರಾಯ ಪಟ್ಟರು.
ಧ್ವಜಾರೋಹಣವನ್ನು ನೆರವೇರಿಸಿ ಸಂದೇಶ ನೀಡಿದ ಬೆಳ್ತಂಗಡಿ ತಹಶೀಲ್ದಾರ್ ಎಚ್.ಕೆ ತಿಪ್ಪೇಸ್ವಾಮಿಯವರು ಸ್ವಾತಂತ್ರ್ಯಕ್ಕಾಗಿ ಹಿರಿಯರ ತ್ಯಾಗ, ಬಲಿದಾನವನ್ನು ನಾವೆಲ್ಲ ಸದಾ ನೆನಪಿಸಬೇಕು. ಇಂದು ನಮ್ಮ ರಾಷ್ಟ್ರದಲ್ಲಿ ಅಭಿವೃದ್ಧಿಗೆ ಒತ್ತು ನೀಡಲಾಗುತ್ತಿದ್ದು, ಭಯೋತ್ಪಾದನೆ, ನಕ್ಸಲ್‌ನಂತಹ ಚಟುವಟಿಕೆಗಳನ್ನು ನಿಗ್ರಹಿಸಬೇಕಾಗಿದೆ. ದೇಶ, ಭಾಷೆಯನ್ನು ಬೆಳೆಸುವುದರೊಂದಿಗೆ ನಮ್ಮ ರಾಷ್ಟ್ರವನ್ನು ಕಟ್ಟಿಬೆಳೆಸುವ ಕಾರ್ಯದಲ್ಲಿ ನಾವೆಲ್ಲ ಕೈಜೋಡಿಸಬೇಕು ಎಂದರು.
ಬೆಳ್ತಂಗಡಿ ಹೋಲಿ ರಿಡೀಮರ್ ಚರ್ಚ್‌ನ ಪ್ರಧಾನ ಧರ್ಮಗುರು ರೆ| ಫಾ| ಬೋನವೆಂಚರ್ ನಜ್ರೆತ್ ಪ್ರಧಾನ ಭಾಷಣ ಮಾಡಿ, ನಾವಿಂದು ನೆಮ್ಮದಿಯಿಂದ ಇರುವಲ್ಲಿ ಗಡಿಗಳಲ್ಲಿ ರಕ್ಷಣೆ ನೀಡುತ್ತಿರುವ ನಮ್ಮ ದೇಶದ ಸೈನಿಕರನ್ನು ನಾವು ಗೌರವಿಸಬೇಕು, ಶಾಸಕಾಂಗ, ಕಾರ್ಯಾಂಗ, ನ್ಯಾಯಾಂಗ ನಮ್ಮ ದೇಶದ ಪ್ರಗತಿಯಲ್ಲಿ ಪ್ರಮುಖ ಪಾತ್ರವಹಿಸಿದ್ದು, ನಾವು ಸ್ವಾತಂತ್ರ್ಯದ ಘನತೆಯನ್ನು ಎತ್ತಿ ಹಿಡಿದು, ಸಮೃದ್ಧ ರಾಷ್ಟ್ರ ನಿರ್ಮಾಣದ ಕಾರ್ಯದಲ್ಲಿ ತೊಡಗಿಸಿಕೊಳ್ಳುವುದು ನಮ್ಮ ಕರ್ತವ್ಯ ಎಂದರು.
ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದ ಬೆಳ್ತಂಗಡಿ ತಾ.ಪಂ ಅಧ್ಯಕ್ಷೆ ದಿವ್ಯಜ್ಯೋತಿ, ಬೆಳ್ತಂಗಡಿ ನಗರ ಪಂಚಾಯತು ಅಧ್ಯಕ್ಷ ಮುಗುಳಿ ನಾರಾಯಣ ರಾವ್, ಬೆಳ್ತಂಗಡಿ ತಾ.ಪಂ ಸ್ಥಾಯಿ ಸಮಿತಿ ಅಧ್ಯಕ್ಷ ಸುಧೀರ್ ಆರ್. ಸುವರ್ಣ ಸ್ವಾತಂತ್ರೋತ್ಸವದ ಸಂದೇಶ ನೀಡಿದರು. ಈ ಸಂದರ್ಭದಲ್ಲಿ ಎಸ್.ಎಸ್.ಎಲ್.ಸಿ ಮತ್ತು ಪಿ.ಯು.ಸಿ. ಪರೀಕ್ಷೆಯಲ್ಲಿ ತಾಲೂಕಿನಲ್ಲಿ ಪ್ರಥಮ, ದ್ವಿತೀಯ, ತೃತೀಯ ಸ್ಥಾನ ಪಡೆದ ವಿದ್ಯಾರ್ಥಿಗಳನ್ನು ಹಾಗೂ ಶೇ೧೦೦ ಫಲಿತಾಂಶ ಪಡೆದ ತಾಲೂಕಿನ 10 ಶಾಲೆಗಳನ್ನು ಗುರುತಿಸಿ, ಗೌರವಿಸಲಾಯಿತು. ಕನ್ನಡ ಮಾಧ್ಯಮದಲ್ಲಿ 600ಕ್ಕಿಂತ ಹೆಚ್ಚು ಅಂಕಪಡೆದ 3 ವಿದ್ಯಾರ್ಥಿನಿಯರಿಗೆ ಸರಕಾರದಿಂದ ಕೊಡಲಾದ ಲ್ಯಾಬ್‌ಟಾಪ್‌ನ್ನು ಶಾಸಕರು ವಿತರಿಸಿದರು.
ಶಾಲಾವಾರು ವಿವಿಧ ಸ್ಪರ್ಧಾವಿಜೇತರಿಗೆ ಬಹುಮಾನ ವಿತರಿಸಲಾಯಿತು. ವೇದಿಕೆಯಲ್ಲಿ ಕ್ಷೇತ್ರಶಿಕ್ಷಣಾಧಿಕಾರಿ ಗುರುಪ್ರಸಾದ್, ವಾಣಿ ಶಿಕ್ಷಣ ಸಂಸ್ಥೆಗಳ ಅಧ್ಯಕ್ಷ ಸೋಮೇ ಗೌಡ, ಬೆಳ್ತಂಡಿ ಸರ್ಕಲ್ ಇನ್ಸ್‌ಪೆಕ್ಟರ್ ನಾಗೇಶ್ ಕದ್ರಿ, ಲೋಕೋಪಯೋಗಿ ಇಲಾಖಾ ಸ.ಕಾ.ಇಂಜಿನಿಯರ್ ಶಿವಪ್ರಸಾದ ಅಜಿಲ, ವಾಣಿ ಕಾಲೇಜಿನ ಪ್ರಾಂಶುಪಾಲ ಯದುಪತಿ ಗೌಡ, ತಾಲೂಕು ಸಂಯೋಜಕ ಜಯಾನಂದ ಲಾಯಿಲ, ಶಂಕರ
ಸುವರ್ಣ, ಸಿಡಿಪಿಒ ಸರಸ್ವತಿ ಉಪಸ್ಥಿತರಿದ್ದರು.
ಅಕ್ಷರ ದಾಸೋಹ ಯೋಜನೆಯ ಸಹಾಯಕ ನಿರ್ದೇಶಕ ಲಕ್ಷ್ಮಣ ಶೆಟ್ಟಿ ಸ್ವಾಗತಿಸಿದರು. ವಾಣಿ ಕಾಲೇಜಿನ ಉಪಪ್ರಾಂಶುಪಾಲ ವಿಷ್ಣುಪ್ರಕಾಶ್ ಕಾರ್ಯಕ್ರಮ ನಿರೂಪಿಸಿ, ಶಿಕ್ಷಣ ಸಂಯೋಜಕ ಸುಭಾಶ್‌ಜಾದವ್ ವಂದಿಸಿದರು. ಚರ್ಚ್ ಕೂಡುರಸ್ತೆಯಿಂದ ವಾಣಿ ಕಾಲೇಜು ತನಕ ಸ್ವಾತಂತ್ರೋತ್ಸವದ ಮೆರವಣಿಗೆ ನಡೆಯಿತು. ಶಾಲಾ ಮಕ್ಕಳಿಂದ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಿತು.

kolli templeಮಿತ್ತಬಾಗಿಲು : ಇತಿಹಾಸ ಪ್ರಸಿದ್ಧ ಕೊಲ್ಲಿ ಶ್ರೀ ದುರ್ಗಾದೇವಿ ದೇವಸ್ಥಾನವನ್ನು ಜೀಣೋದ್ಧಾರ ಮಾಡಲು ಭಕ್ತರು ಸಂಕಲ್ಪ ಮಾಡಿದ್ದು, ಇದರ ಪೂರ್ವಭಾವಿಯಾಗಿ ವೈದಿಕರ ಮಾರ್ಗದರ್ಶನದಂತೆ ಕುಂಭನಿಧಿಗೆ ಮುಷ್ಟಿ ಕಾಣಿಕೆ ಸಮರ್ಪಣೆ ಕಾರ್ಯಕ್ರಮ ಆ.16ರ ಸಿಂಹ ಸಂಕ್ರಮಣದ ಶುಭ ದಿನದಂದು ಜರುಗಿತು.
ಕಾರ್ಯಕ್ರಮವನ್ನು ಶಾಸಕ ಹಾಗೂ ರಾಜ್ಯ ಸಣ್ಣ ಕೈಗಾರಿಕಾ ನಿಗಮದ ಅಧ್ಯಕ್ಷ ಕೆ. ವಸಂತ ಬಂಗೇರ ದೀಪ ಬೆಳಗಿಸಿ ಉದ್ಘಾಟಿಸಿ, ಕುಂಭ ನಿಧಿಗೆ ಮುಷ್ಟಿಕಾಣಿಕೆ ಸಮರ್ಪಿಸಿ ಶ್ರೀ ದೇವಳದ ಜೀಣೋದ್ಧಾರ ಕಾಮಗಾರಿಗಳಿಗೆ ಚಾಲನೆ ನೀಡಿದರು. ನಂತರ ಮಾತನಾಡಿ ದೇವಸ್ಥಾನದ ಅಭಿವೃದ್ಧಿ ಕೆಲಸಗಳಿಗೆ ತನ್ನ ಪೂರ್ಣ ಸಹಕಾರ ನೀಡುತ್ತೇನೆ. ಸರಕಾರದಿಂದ ದೊರೆಯಬಹುದಾದ ಅನುದಾನವನ್ನು ಗರಿಷ್ಠವಾಗಿ ಒದಗಿಸಿಕೊಡಲು ಪ್ರಾಮಾಣಿಕವಾದ ಪ್ರಯತ್ನಗಳನ್ನು ಮಾಡುತ್ತೇನೆ ಎಂದು ಭರವಸೆಯಿತ್ತರು.
ಈ ಸಂದರ್ಭ ಉಜಿರೆ ಶ್ರೀ ಜನಾರ್ದನ ದೇವಸ್ಥಾನದ ಅನುವಂಶೀಯ ಆಡಳಿತ ಮೊಕ್ತೇಸರ ಯು. ವಿಜಯರಾಘವ ಪಡ್ವೆಟ್ನಾಯ, ಜಿಲ್ಲಾ ಧಾರ್ಮಿಕ ಪರಿಷತ್ ಸದಸ್ಯ ಮುಕುಂದ ಸುವರ್ಣ, ಕೂಡಬೆಟ್ಟು ದೇವಸ್ಥಾನ ಆಡಳಿತ ಸಮಿತಿ ಅಧ್ಯಕ್ಷ ಚಂದ್ರಶೇಖರ್, ಮಠ ಶ್ರೀ ಲಕ್ಷ್ಮೀವೆಂಕಟೇಶ್ವರ ದೇವಸ್ಥಾನದ ಆಡಳಿತ ಮೊಕ್ತೇಸರ ಕಿಶೋರ್ ಕುಮಾರ್ ವಳಂಬ್ರ, ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಮಂಜುನಾಥ ಕಾಮತ್, ಆಡಳಿತ ಮಂಡಳಿಯ ಸದಸ್ಯರು, ಗ್ರಾಮಸ್ಥರು ಉಪಸ್ಥಿತರಿದ್ದರು.
ಭಜಕರ ಸಭೆ: ನಂತರ ಭಜಕರ ಸಭೆಯನ್ನು ಉದ್ದೇಶಿಸಿ ಮಾತನಾಡಿದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಮಂಜುನಾಥ ಕಾಮತ್ ಸಂಘಟಿತ ಶಕ್ತಿಯಿಂದ ಯಾವುದೇ ಕಾರ್ಯ ಯಶಸ್ವಿಯಾಗಲು ಸಾಧ್ಯವಿದೆ. ಶ್ರೀ ಕೃಷ್ಣನ ಕಾಲದಲ್ಲಿಯೂ ಸಂಘಟನೆ ಇತ್ತು. ಇದೇ ರೀತಿ ಊರಿನ ಎಲ್ಲಾ ಭಕ್ತರು ಒಟ್ಟಾಗಿ ದೇವಸ್ಥಾನದ ಅಭಿವೃದ್ಧಿ ಕೆಲಸಗಳನ್ನು ಮಾಡಬೇಕು. ಶಿಲಾಮಯ ಗರ್ಭಗುಡಿ, ಸುತ್ತುಪೌಳಿ, ತೀರ್ಥ ಮಂಟಪ ಸೇರಿದಂತೆ ಎಲ್ಲಾ ಅಭಿವೃದ್ಧಿ ಕಾರ್ಯಗಳಿಗೆ ಎಲ್ಲರ ಸಹಕಾರ ಕೋರಿದರು.
ಜಿಲ್ಲಾ ಧಾರ್ಮಿಕ ಪರಿಷತ್ ಸದಸ್ಯ ಮುಕುಂದ ಸುವರ್ಣ ಅಧ್ಯಕ್ಷತೆ ವಹಿಸಿ, ಜೀಣೋದ್ಧಾರ ಸಮಿತಿಯ ಆರ್ಥಿಕ ಕೂಪನ್ ಮತ್ತು ರಶೀದಿ ಪುಸ್ತಕಗಳನ್ನು ಬಿಡುಗಡೆ ಮಾಡಿ ಮಾತನಾಡಿ ಅಭಿವೃದ್ಧಿಗೆ ಪೂರಕ ಸಲಹೆಗಳನ್ನು ನೀಡಿದರು. ಕಾರ್ಯಕ್ರಮದಲ್ಲಿ ಮಿತ್ತಬಾಗಿಲು ಗ್ರಾ.ಪಂ. ಅಧ್ಯಕ್ಷ ನಾರಾಯಣ ಪಾಠಾಳಿ, ತಾ.ಪಂ. ಸದಸ್ಯ ಜಯರಾಮ, ಮಲವಂತಿಗೆ ಗ್ರಾ.ಪಂ. ಅಧ್ಯಕ್ಷ ಭಾಸ್ಕರ ಪೂಜಾರಿ, ಕಡಿರುದ್ಯಾವರ ಗ್ರಾ.ಪಂ. ಅಧ್ಯಕ್ಷೆ ವನಿತಾ ಸಾಲಿಯಾನ್, ಮಾಜಿ ಜಿಪಸ ರಾಜಶೇಖರ ಅಜ್ರಿ, ಬಂಗಾಡಿ ಸಿ.ಎ. ಬ್ಯಾಂಕ್ ಅಧ್ಯಕ್ಷ ಎನ್. ಲಕ್ಷ್ಮಣ ಗೌಡ, ಸಂತೋಷ್ ಕುಮಾರ್ ವಳಂಬ್ರ,
ರವಿಚಂದ್ರ ಊರ್ಜೆ, ಶ್ರೀಮತಿ ಲೋಕೇಶ್ವರಿ ವಿನಯಚಂದ್ರ, ಶ್ರೀಮತಿ ಜಲಜಾಕ್ಷಿ ಅಗರಿಮಾರು, ದೇವಾಲಯದ ಕಚೇರಿ ವ್ಯವಸ್ಥಾಪಕ ಬಾಲಕೃಷ್ಣ ಪೂಜಾರಿ, ಅಶೋಕ್ ನಾವೂರು ಪುಣ್ಯಸ್ಟುಡಿಯೋ, ರತ್ನಾಕರ ನಾವೂರು, ಶ್ರೀಧರ ಪೂಜಾರಿ, ವಾಸುದೇವ ಕಕ್ಕೇನೇಜಿ, ಸಂತೋಷ್ ಕಿಲ್ಲೂರು, ವಿಜಯ ಹೆಗ್ಡೆ, ಮೋಹನ ಗೌಡ ಬೆಡಿಗುತ್ತು, ಕೃಷ್ಣಪ್ಪ ಪೂಜಾರಿ ಕಿಲ್ಲೂರು, ಶ್ರೀಧರ ಪೂಜಾರಿ ಶಿರ್ಲಾಲು, ಪದ್ಮನಾಭ ಗೌಡ, ಜತ್ತಣ್ಣ ಗೌಡ ಪುಣ್ಕೆದಡಿ, ಶೇಖರ ಪೂಜಾರಿ ಕಂಬಳದಡ್ಡ, ಪೂವಣಿ ಗೌಡ ನೆಕ್ಕಿಲು, ದೇಜಪ್ಪ ಗೌಡ ಕೊಂಡಾಲು ಪದ್ಮನಾಭ ಗೌಡ ಮಂಟಮೆ, ಆನಂದ ಎಂ.ಕೆ. ಸೂರ್ಲಿ, ಆದಪ್ಪ ನಾಯ್ಕ, ಅಣ್ಣು ಎಂ.ಕೆ ಮೊದಲಾದವರು ಉಪಸ್ಥಿತರಿದ್ದರು.
ಉಜಿರೆ ರಬ್ಬರ್ ಸೊಸೈಟಿ ಅಧ್ಯಕ್ಷ ಶ್ರೀಧರ ಭಿಡೆ ಆಗಮಿಸಿ ಶುಭ ಕೋರಿದರು. ಜೀಣೋದ್ಧಾರ ಸಮಿತಿ ಅಧ್ಯಕ್ಷ ದಾಸಪ್ಪ ಗೌಡ ಸ್ವಾಗತಿಸಿದರು. ಕೇಶವ ಫಡಕೆ ಕಾರ್ಯಕ್ರಮ ನಿರೂಪಿಸಿ, ವಿನಯಚಂದ್ರ ನಡುಬೈಲು ವಂದಿಸಿದರು.

LiCಬೆಳ್ತಂಗಡಿ : ವಿಮಾ ಇನ್ಸೂರೆನ್ಸ್ ಕನ್ಸಲ್ಟೆಂಟ್ಸ್ ನೂತನ ಕಛೇರಿ ಇಂದು (ಆ.15) ಬೆಳ್ತಂಗಡಿ ಬಸ್ ಸ್ಟ್ಯಾಂಡ್ ಎದುರುಗಡೆ ಉದ್ಘಾಟನೆಗೊಂಡಿತು.
ಉದ್ಘಾಟನೆಯನ್ನು ಶಾಸಕ ಕೆ. ವಸಂತ ಬಂಗೇರ ನೆರವೇರಿಸಿದರು. ಬೆಳ್ತಂಗಡಿ ಹೋಲಿ ರೆಡಿಮರ್ ಚರ್ಚ್‌ನ ಪ್ರಧಾನ ಧರ್ಮಗುರು ಫಾ| ಬೊನವೆಂಚರ್ ನಜ್ರೆತ್ ಆಶೀರ್ವಚನ ನೀಡಿದರು. ಮುಖ್ಯ ಅತಿಥಿಗಳಾಗಿ ಬೆಳ್ತಂಗಡಿ ಪಟ್ಟಣ ಪಂಚಾಯತ್ ಅಧ್ಯಕ್ಷ ಎಂ. ನಾರಾಯಣ ರಾವ್, ಬೆಳ್ತಂಗಡಿ ಭಾರತೀಯ ಜೀವವಿಮಾ ನಿಗಮದ ಶಾಖಾಧಿಕಾರಿ ಯೋಗೇಂದ್ರ ಡಿ., ಮಂಗಳೂರು ಸ್ವಾರ್ ಹೆಲ್ತ್ ಆಂಡ್ ಅಲೈಟ್ ಇನ್ಸೂರೆನ್ಸ್ ಕಂಪನಿಯ ಹಿರಿಯ ಶಾಖಾಧಿಕಾರಿ ಗಜಾನನ ಭಟ್, ಬೆಳ್ತಂಗಡಿ ಶಾಖೆ ಯುನೈಟೆಡ್ ಇಂಡಿಯಾ ಇನ್ಸೂರೆನ್ಸ್ ಕಂಪನಿಯ ಆಡಳಿತಾಧಿಕಾರಿ ಶೇಕುಂಞ, ಬೆಳ್ತಂಗಡಿ ಲಯನ್ಸ್ ಕ್ಲಬ್ ಅಧ್ಯಕ್ಷ ಲ| ಧರಣೇಂದ್ರ ಕೆ. ಜೈನ್, ಬೆಳ್ತಂಗಡಿ ಪ್ರೇರಣಾ ಸೌಹಾರ್ದ ಸಹಕಾರಿ ನಿಯಮಿತ ಅಧ್ಯಕ್ಷ ಲ್ಯಾನ್ಸಿ ಎ. ಪಿರೇರಾ, ನ್ಯಾಶನಲ್ ಇನ್ಸೂರೆನ್ಸ್ ಕಂಪನಿಯ ನಿವೃತ್ತ ಶಾಖಾಧಿಕಾರಿ ಶ್ರೀಮತಿ ಸೆಲಿನ್ ನೊರೊನ್ಹಾ ಭಾಗವಹಿಸಿದ್ದರು.
ಬಂದಂತಹ ಅತಿಥಿಗಳನ್ನು ವಿನ್ಸೆಂಟ್ ಟಿ. ಡಿಸೋಜಾ ಸ್ವಾಗತಿಸಿದರು.

indipendce day171ನೇ ವರ್ಷದ ಸ್ವಾತಂತ್ರ್ಯ ದಿನಾಚರಣೆಯನ್ನು ಪಾಂಗಳದ ಶ್ರೀ ಮಾರಿಗುಡಿ ಬಳಿಯ ಅಂಗನವಾಡಿ ಕೇಂದ್ರದಲ್ಲಿ ಆಚರಿಸಲಾಯಿತು.
ಧ್ವಜಾರೋಹಣ ಕಾರ್ಯಕ್ರಮವನ್ನು ಮಾರಿಗುಡಿ ಸಮಿತಿಯ ಅಧ್ಯಕ್ಷತುಕರಾಮ ಗೌಡ ಇವರು ನೆರವೇರಿಸಿದರು. ಈ ಸಂದರ್ಭದಲ್ಲಿ ಬಾಬುಗೌಡ ಪಾಂಗಳ, ಮೋನಪ್ಪ ಪೂಜಾರಿ ಡಿಡಿಂಬಿ, ಹಾಗೂ ಊರಿನ ಸಮಸ್ತ ನಾಗರಿಕರು ಉಪಸ್ಥಿತರಿದ್ದರು.

  Indipendce dayಸವಣಾಲು ಬದ್ರಿಯಾ ಜುಮಾ ಮಸೀದಿ ಮತ್ತು ಹಿಮಾಯತುಲ್ ಇಸ್ಲಾಮ್ ಮದರಸ ಸವಣಾಲು ಇದರ ಅಂಗವಾಗಿ ಮಸೀದಿ ವಠಾರದಲ್ಲಿ 71 ನೇ ಸ್ವಾತಂತ್ರ್ಯ ದಿನಾಚರಣೆಯನ್ನು ಊರಿನ ಎಲ್ಲಾ ಧರ್ಮದೊಂದಿಗೆ ಸೌಹಾರ್ದತೆಯೊಂದಿಗೆ ಆಚರಿಸಲಾಯಿತು.
ಕಾರ್ಯಕ್ರಮದಲ್ಲಿ ಲ .ರಘುರಾಮ್ ಗಂಭೀರ, ಶ್ರೀ. ಬಾಲಕೃಷ್ಣ ವಿ ಶೆಟ್ಟಿ ಸಾಲಿಗ್ರಾಮ, ಹಿರಿಯ ಪ್ರಾಥಮಿಕ ಶಾಲೆಯ ಹಿರಿಯ ಶಿಕ್ಷಕ ಮಂಜುನಾಥ್ ಆಡಳಿತ ಮಂಡಳಿ ಅಧ್ಯಕ್ಷ ಡಿ .ರಫೀಕ್, ಮಲ್ಜಾ ಸಾಲಾತ್ ಕಮಿಟಿ ಅಧ್ಯಕ್ಷ ಸಿ ಮ್ ಇಬ್ರಾಹಿಂ , ಹಾಗೂ ಮದ್ರಸ ವಿದ್ಯಾರ್ಥಿಗಳು ಕಮಿಟಿಯ ಎಲ್ಲ ಪದಾಧಿಕಾರಿಗಳು , ಜಮಾಅತಿನ ಎಲ್ಲ ಸದಸ್ಯರು ಕಾರ್ಯಕ್ರಮದಲ್ಲಿ ಪಾಲ್ಗೊಂಡರು. ಎಂ .ಜಿ .ತಲ್ಹತ್ ಸವಣಾಲು ಇವರು ಎಲ್ಲರನ್ನು ಸ್ವಾಗತಿಸಿ ಕಾರ್ಯಕ್ರಮ ನಿರೂಪಿಸಿದರು .

   karunya

karunya1ಕಕ್ಕಿಂಜೆ ಕಾರುಣ್ಯ ಸ್ಕೂಲ್ ನಲ್ಲಿ ಸ್ವಾತಂತ್ರ್ಯ ದಿನಾಚರಣೆಯನ್ನು ಆಚರಿಸಲಾಯಿತು.

  youngಯಂಗ್ ಚಾಲೆಂಜರ್ಸ್ ಮುಂಡಾಜೆ ಇದರ ವತಿಯಿಂದ ಗ್ರಾ.ಪಂ ಮುಂಡಾಜೆ , ಲಯನ್ಸ್ ಕ್ಲಬ್ ಬೆಳ್ತಂಗಡಿ ಸಕಕಾರದೊಂದಿಗೆ ಸ್ವಾತಂತ್ರ ಉತ್ಸವ ಮತ್ತು ಯೋಧರಿಗೆ ನಮನ ಕಾರ್ಯಕ್ರಮ ವನ್ನು ಲ. ಅಶ್ರಫ್ ಆಲಿಕುಂಞಿ ಅವರು ಆಯೋಜಿಸಿದರು.

  belaluಹಿದಾಯತುಲ್ ಇಸ್ಲಾಂ ಮದ್ರಸಾ ಪಳ್ಳಿತ್ತಡ್ಕ, ಬೆಳಾಲು ಇಲ್ಲಿ 71 ನೇ ಸ್ವಾತಂತ್ರ್ಯ ದಿನಾಚರಣೆಯನ್ನು ಅಹ್ಮದುಲ್ ಬದವೀ ಮಸೀದಿಯ ಆವರಣದಲ್ಲಿ ಆಚರಿಸಲಾಯಿತು. ಆಡಳಿತ ಸಮಿತಿಯ ಅದ್ಯಕ್ಷ ,ಉಮರಬ್ಬ ರವರು ಧ್ವಜಾರೋಹಣಗೈದರು ಮದ್ರಸಾ ಅದ್ಯಾಪಕ ಯಾಕೂಬ್ ಗೌಸಿ ದುಆ ನೆರವೇರಿಸಿಕೊಟ್ಟರು
ಸಂಶುದ್ದೀನ್ ಅಶ್ರಫಿ ಸ್ವಾಗತಿಸಿದರು ಮಾಜಿ ಅಧ್ಯಕ್ಷ ಇಬ್ರಾಹಿಂ ವಲಚ್ಚಿಲ್ ಸದಸ್ಯ ಅಬ್ದುರ್ರಹ್ಮಾನ್ ಅಲ್ ಬದ್ರಿಯಾ ಸ್ವಲಾತ್ ಕಮಿಟಿಯ ಅದ್ಯಕ್ಷ ಸಂಶುದ್ದೀನ್ ಕೇರಾರಿ ಉಪಾಧ್ಯಕ್ಷ ಅಝೀಝ್ ಉಪಸ್ಥಿತರಿದ್ದರು.

  anugrahaಅನುಗ್ರಹ ಟ್ರೈನಿಂಗ್ ಕಾಲೇಜು ಬೆಳ್ತಂಗಡಿಯಲ್ಲಿ 71 ನೇ ಸ್ವಾತಂತ್ರ್ಯ ದಿನಾಚರಣೆಯನ್ನು ಸಂಸ್ಥೆಯ ಅಧ್ಯಕ್ಷ ಮತ್ತು ಕಾಲೇಜಿನ   ಪ್ರಾಂಶುಪಾಲ ಎಂ.ಜಿ. ತಲ್ಹತ್ ಸವಣಾಲು ನಡೆಸಿಕೊಟ್ಟರು.

  sanjaya nagaraಬೆಳ್ತಂಗಡಿ ಸಂಜಯ ನಗರ ನಾಗರಿಕ ಸಮಿತಿ ವತಿಯಿಂದ ವಿಜೃಂಭಣೆಯ ಸ್ವಾತಂತ್ರ್ಯ ದಿನಾಚರಣೆಯು ಸಂಜಯ ನಗರ ಜಂಕ್ಷನ್ ನಲ್ಲಿ ಬಿ.ಎಂ. ಹನೀಪ್ ರವರ ಅಧ್ಯಕ್ಷತೆಯಲ್ಲಿ ನಡೆಯಿತು, ನಗರ ಪಂಚಾಯತ್ ಸದಸ್ಯ ಮುಸ್ತಾರ್ ಜಾನ್ ಮೆಹಬೂಬ್ ಧ್ವಜಾರೋಹಣಗೈದರು. ಮುಖ್ಯ ಅತಿಥಿಗಳಾಗಿ ಅಕ್ಬರ್, ಹಾಗೂ ಮೆಹಬೂಬ್ ಸ್ವಾತಂತ್ರ್ಯ ಸಂದೇಶವನ್ನು ನೀಡಿದರು. ನಿಹಾಲ್ ಸ್ವಾಗತಿಸಿ ಶರೀಪ್ ವಂದಿಸಿದರು ಕಾರ್ಯಕ್ರಮ ನಿರೂಪಣೆಯನ್ನು ಬಶೀರ್ ಸಂಜಯ ನಗರ ನೆರವೇರಿಸಿದರು.

ಇಂದಿನ ಕಾರ್ಯಕ್ರಮ

ಶಿಕ್ಷಣ ಮಾರ್ಗದರ್ಶಿ

ಹಿಂದಿನ ಸುದ್ದಿಗಳು

August 2017
M T W T F S S
« Jul    
 123456
78910111213
14151617181920
21222324252627
28293031  

ನಮ್ಮ ಬಗ್ಗೆ

ಮೊದಲಿಗೆ ಕೇವಲ ಒಂದು ಹಾಳೆಯಲ್ಲಿ ಪ್ರಕಟವಾಗುತ್ತಿದ್ದ ಬೆಳ್ತಂಗಡಿ ತಾಲೂಕಿನ “ಸುದ್ದಿ ಬಿಡುಗಡೆ “ಪತ್ರಿಕೆ ಇಂದು ಪ್ರತಿದಿನ  22
.. ಮುಂದೆ ಓದಿ

ಸಲಹೆ- ಸೂಚನೆ

ನಿಮ್ಮ ಸಲಹೆ ಸೂಚನೆಗಳಿಗೆ ಹಾರ್ದಿಕ ಸ್ವಾಗತ

ಇಲ್ಲಿ ಕ್ಲಿಕ್ಕಿಸಿ

Copyright © 2017 Suddinews.com . All Rights Reserved.
^ Back to Top