Thu 22 Jun 2017, 10:37PM

ಹೆಚ್ಚಿನ ಸುದ್ದಿಗಳು

madanthyar bellihabbaಮಡಂತ್ಯಾರು : 125 ವರ್ಷಗಳ ಇತಿಹಾಸ ಇರುವ ಮಡಂತ್ಯಾರು ಸೆಕ್ರೇಡ್ ಹಾರ್ಟ್ ಚರ್ಚಿನ ಶತಮಾ ನೋತ್ಸವ ಬೆಳ್ಳಿಹಬ್ಬದ ಹೊಸ್ತಿಲಲ್ಲಿರುವ ಮಡಂತ್ಯಾರು ಚರ್ಚ್‌ನಲ್ಲಿ ಜೂ.23 ರಂದು ಪಾಲಕರ ಹಬ್ಬದ ದಿನದಂದು ಮಂಗಳೂರು ಧರ್ಮಪ್ರಾಂತ್ಯದ ಧರ್ಮಧ್ಯಕ್ಷರಾದ ಡಾ| ಎಲೋಸಿಯಸ್ ಪೌಲ್ ಡಿಸೋಜ ಚಾಲನೆ ನೀಡಿಲಿದ್ದಾರೆ. ಜೂ.23 ರಂದು ಬೆಳಿಗ್ಗೆ 10 ಗಂಟೆಗೆ ದಿವ್ಯಬಲಿ ಪೂಜೆ. ಪೂಜೆಯ ಬಳಿಕ ಧರ್ಮಾಧ್ಯಕ್ಷರು ಶತಮಾನೋತ್ಸವ ಬೆಳ್ಳಿಹಬ್ಬಕ್ಕೆ ಚಾಲನೆ ನೀಡುವರು. ಮೇ.2, 2018ರ ವರೆಗೆ ನಿರಂತರ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ ಎಂದು ಚರ್ಚ್‌ಗೆ ನೂತನವಾಗಿ ಆಗಮಿಸಿದ ವಂ.ಫಾ| ಬಾಜಿಲ್‌ವಾಸ್ ಪತ್ರಿಕೆಗೆ ತಿಳಿಸಿದರು.

belthangady catholic yuva sanchalanaಮಡಂತ್ಯಾರು : ಭಾರತೀಯ ಕಥೋಲಿಕ್ ಯುವ ಸಂಚಾಲನ ವಲಯವು ಯುವಜನರಿಗೆ ಪುರಸ್ಕಾರ 2017 ಕಾರ್‍ಯಕ್ರಮವನ್ನು ನಾರಾವಿ ಚರ್ಚ್ ಸಭಾಂಗಣದಲ್ಲಿ ನಡೆಯಿತು. ವಿವಿಧ ಕ್ಷೇತ್ರದಲ್ಲಿ ಸಾಧನೆಗೈದ ಯುವಜನರಿಗೆ ಪುರಸ್ಕಾರವನ್ನು ಮಾಡಿದರು. ಐಸಿವೈಎಂ ಮಂಡತ್ಯಾರಿನ ಟೈಸನ್‌ರವರಿಗೆ ನಾಟಕ ಕ್ಷೇತ್ರದಲ್ಲಿ ಸಾಧನೆಗೈದ ಯುವ ವ್ಯಕ್ತಿ ಎಂದು ಸನ್ಮಾನಿಸಿದರು. ಹಾಗೂ ಮಡಂತ್ಯಾರಿನ ಐಸಿವೈಎಂ ಘಟಕವು ಬೆಳ್ತಂಗಡಿ ವಲಯದ ಶ್ರೇಷ್ಠ ಘಟಕ ಮತ್ತು ವಿಭಿನ್ನ ಕಾರ್‍ಯಕ್ರಮ ಮಾಡಿದ ಘಟಕ ಎಂದು ಪ್ರಶಸ್ತಿಯೊಂದಿಗೆ ಸನ್ಮಾನಿಸಲಾಯಿತು. ನಂತರ ಸಾಂಸ್ಕೃತಿಕ ಕಾರ್ಯಕ್ರಮ ನೆರವೇರಿತು. ಮತ್ತು 2017-18 ನೇ ಐಸಿವೈಎಂ ವಲಯ ಮಟ್ಟದ ಚುನಾವಣೆಯು ನೆರವೇರಿತು. ಇದರಲ್ಲಿ ಮಡಂತ್ಯಾರು ಚರ್ಚ್‌ನ ವಿವಿಯನ್, ಬೆಳ್ತಂಗಡಿ ವಲಯದ ಕಾರ್‍ಯದರ್ಶಿಯಾಗಿ ಹಾಗೂ ಉಪಾಧ್ಯಕ್ಷರಾಗಿ ಪ್ರೇಮ್ ಪ್ರಕಾಶ್ ಆಯ್ಕೆಯಾದರು.
ಮುಖ್ಯ ಅತಿಥಿಗಳಾಗಿ ನಾರಾವಿ ಚರ್ಚ್‌ನ ಧರ್ಮಗುರುಗಳು ಫಾ| ಸೈಮನ್ ಡಿಸೋಜ, ಐಸಿವೈಎಂ ಬೆಳ್ತಂಗಡಿ ವಲಯದ ನಿರ್ದೇಶಕ ಫಾ| ಅರುಣ್ ಲೋಬೊ, ಮಡಂತ್ಯಾರ್ ಚರ್ಚ್‌ನ ಸಹಾಯಕ ಧರ್ಮಗುರು ಫಾ| ಆಲ್ವಿನ್ ಡಿಸೋಜ, ಹಾಗೂ ಮಂಗಳೂರು ಪ್ರಾಂತ್ಯದ ಐಸಿವೈಎಂ ನಿರ್ದೇಶಕ ಫಾ| ರೋನಾಲ್ಡ್ ಹಾಗೂ ಬೆಳ್ತಂಗಡಿ ವಲಯದ ಅಧ್ಯಕ್ಷ ಜೋವೆಲ್, ಕಾರ್‍ಯದರ್ಶಿ ರಿಚರ್ಡ್ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು. ಕು|. ಶೈನಿ ಹಾಗೂ ಆರ್‍ವಿನ್ ಕಾರ್ಯಕ್ರಮ ನಿರ್ವಹಣೆ ಮಾಡಿದರು.

santhu jci phothoಯುವಜನತೆ ತಮ್ಮ ಕೆಲಸಕಾರ್ಯಗಳೊಂದಿಗೆ ವ್ಯಕ್ತಿತ್ವ ವಿಕಸನಗೊಳಿಸುತ್ತಾ ಹೆಜ್ಜೆ ಇರಿಸಿದಾಗ ನಾವು ಉತ್ತಮ ನಾಯಕರಾಗುವುದರ ಜೊತೆಗೆ ಸಮಾಜದಲ್ಲಿ ಓರ್ವ ಆದರ್ಶ ವ್ಯಕ್ತಿಯಾಗಿ ಬಾಳಲು ಸಹಕಾರಿಯಾಗುತ್ತದೆ.
ಬೆಳ್ತಂಗಡಿಯಲ್ಲಿ ಸುಮಾರು 1977ರಲ್ಲಿ ಪ್ರಾರಂಭವಾದ ಜೆಸಿಐ ಬೆಳ್ತಂಗಡಿ ಮಂಜುಶ್ರೀ ಸಂಸ್ಥೆ ಇಂದು 40ನೇ ವರ್ಷದಲ್ಲಿದ್ದು ಉತ್ತಮ ಕಾರ್ಯಕ್ರಮಗಳನ್ನು ರೂಪಿಸುವುದರೊಂದಿಗೆ ಜನಮನ್ನಣೆಯನ್ನು ಪಡೆದು ಸುತ್ತ-ಮುತ್ತಲಿನ ಯುವಕ-ಯುವತಿಯರಿಗೆ ವ್ಯಕ್ತಿತ್ವ ವಿಕಸನದ ಮೂಲಕ ಉತ್ತಮ ನಾಯಕರಾಗುವ ಗುಣವನ್ನು, ಮೌಲ್ಯವನ್ನು ಸಕಾರಗೊಳಿಸುವಲ್ಲಿ ಕಾರಣಿಭೂತವಾಗಿದೆ.
-ಜೇಸಿ ಸದಾನಂದ ನಾವಡ ಪೂರ್ವರಾಷ್ಟ್ರೀಯ ಉಪಾಧ್ಯಕ್ಷ

ಬೆಳ್ತಂಗಡಿ : ಪ್ರತಿಷ್ಠಿತ ಜೆಸಿಐ ಬೆಳ್ತಂಗಡಿ ಮಂಜುಶ್ರೀಯು ಹತ್ತು-ಹಲವಾರು ಜನಪರ ಕಾರ್ಯಕ್ರಮಗಳನ್ನು ಮಾಡುತ್ತಿದ್ದು, ಅ ಮುಖೇನ ಗುರುತಿಸಿಕೊಂಡು ಮಧ್ಯಾಂತರ ಸಮ್ಮೇಳನದಲ್ಲಿ ಹಲವು ಪ್ರಶಸ್ತಿಗಳನ್ನು ತಮ್ಮದಾಗಿಸಿಕೊಂಡಿದೆ. ಈ ಬಾರಿ ಘಟಕದಲ್ಲಿ ನಿರಂತರವಾಗಿ ಮೂರು ದಿನಗಳ ಕಾಲ ನಡೆದ ಭಾಷಣ ಕಲೆ, ಸಮಯ ನಿರ್ವಹಣೆ, ನಾಯಕತ್ವ ಗುಣ ಈ ತರಬೇತಿ ಕಾರ್ಯಗಾರವನ್ನು ಹಮ್ಮಿಕೊಂಡಿದ್ದು ಇದರ ಸಮರೋಪ ಸಮಾರಂಭವು ಜೂ.19 ರಂದು ನಡೆಯಿತು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಜೆಸಿಐ ಬೆಳ್ತಂಗಡಿ ಮಂಜುಶ್ರೀ ಅಧ್ಯಕ್ಷ ಸಂತೋಷ್ ಪಿ.ಕೋಟ್ಯಾನ್ ಬಳಂಜ ವಹಿಸಿದ್ದರು.
ವೇದಿಕೆಯಲ್ಲಿ ಜೆಸಿಐ ಇಂಡಿಯಾದ ಪೂರ್ವರಾಷ್ಟ್ರೀಯ ಉಪಾಧ್ಯಕ್ಷರು, ರಾಷ್ಟ್ರೀಯ ತರಬೇತುದಾರರು ಸದಾನಂದ ನಾವಡ, ವಲಯಾಧಿಕಾರಿ ಚಿದಾನಂದ ಇಡ್ಯಾ, ನಿಕಟಪೂರ್ವಧ್ಯಕ್ಷ, ವಲಯಾಧಿಕಾರಿ ವಸಂತ ಶೆಟ್ಟಿ ಶ್ರದ್ದಾ, ಕಾರ್ಯದರ್ಶಿ ರಂಜಿತ್ ಎಚ್.ಡಿ, ಕಾರ್ಯಕ್ರಮ ಸಂಯೋಜಕ ಪ್ರಸಾದ್ ಬಿ.ಎಸ್, ಜೆಸಿರೆಟ್ ಅಧ್ಯಕ್ಷೆ ಅಮೃತಾ, ಜೂನಿಯರ್ ಜೇಸಿ ಅಧ್ಯಕ್ಷ ಮನೋಜ್ ಉಪಸ್ಥಿತರಿದ್ದರು.
ಈ ಸಂದರ್ಭದಲ್ಲಿ ಯುತ್ ಕಾಂಗ್ರೇಸ್ ಚುನಾವಣೆಯಲ್ಲಿ ಜಯಗಳಿಸಿದ ಜೆಸಿಐ ಬೆಳ್ತಂಗಡಿ ಮಂಜುಶ್ರೀ ಘಟಕದ ಉಪಾಧ್ಯಕ್ಷ ಅಭಿನಂದನ್ ಹರೀಶ್ ಕುಮಾರ್‌ರವರನ್ನು ಸನ್ಮಾನಿಸಲಾಯಿತು. ಹಾಗೂ ಬೆಳ್ತಂಗಡಿಯ ಹಬ್ಬವೆಂದೇ ಖ್ಯಾತಿ ಪಡೆದ ಜೇಸಿ ಸಪ್ತಾಹದ ಕಾರ್ಯಕ್ರಮ ಸಂಯೋಜಕರಾಗಿ ಘಟಕದ ಉಪಾಧ್ಯಕ್ಷ ಪ್ರಸಾದ್ ಕಕ್ಕಿಂಜೆಯವರನ್ನು ಆಯ್ಕೆಮಾಡಲಾಯಿತು.
ಘಟಕದ ಉಪಾಧ್ಯಕ್ಷ ಪ್ರಶಾಂತ್ ಲಾಯಿಲ ಅತಿಥಿಗಳನ್ನು ವೇದಿಕೆಗೆ ಆಹ್ವಾನಿಸಿದರು. ಸದಸ್ಯ ಗುರುರಾಜ್‌ರವರು ಜೇಸಿವಾಣಿ ಉದ್ಘೋಷಿಸಿದರು, ಸತೀಶ್ ಸುವರ್ಣ ಪರಿಚಯ ಪತ್ರ ವಾಚಿಸಿದರು, ಅಧ್ಯಕ್ಷ ಸಂತೋಷ್.ಪಿ.ಕೋಟ್ಯಾನ್ ಸ್ವಾಗತಿಸಿ, ಕಾರ್ಯದರ್ಶಿ ರಂಜಿತ್‌ಎಚ್.ಡಿ ಧನ್ಯವಾದವಿತ್ತರು.

kokkada koli tajya suriyalu panchayathnindale vyavasteಕೊಕ್ಕಡ : ಇತರ ಗ್ರಾಮಗಳನ್ನು ಹೋಲಿಸಿದಲ್ಲಿ ಕೊಕ್ಕಡದಲ್ಲಿ ಕೋಳಿ ಮಾರಾಟ ಅಂಗಡಿಗಳು ಮತ್ತು ಸಾಕಾಣಿಕಾ ಕೇಂದ್ರಗಳು ಅಧಿಕವಾಗಿದ್ದು ಹೆಚ್ಚಿನ ಮಾರಾಟಗಾರರಿಗೆ ತಮ್ಮಲ್ಲಿ ಸಂಗ್ರಹಿತವಾದ ಕೋಳಿತ್ಯಾಜ್ಯಗಳನ್ನು ಹಾಕಲು ವ್ಯವಸ್ಥೆ ಇಲ್ಲದಿರುವುದು ಕಂಡು ಬಂದಿದ್ದು ಗ್ರಾ.ಪಂ. ನಿಂದಲೇ ಮುಂದಿನ ದಿನಗಳಲ್ಲಿ ಕೋಳಿ ತ್ಯಾಜ್ಯಗಳನ್ನು ಹಾಕಲು ಟ್ಯಾಂಕ್ ನಿರ್ಮಿಸಿ ವ್ಯವಸ್ಥೆ ಕಲ್ಪಿಸಿಕೊಡಲಾಗುವುದು. ಇದಕ್ಕೆ ತಗಲುವ ವೆಚ್ಚವನ್ನು ಉಪಯೋಗಿಸುವವರೇ ಭರಿಸಬೇಕು ಎಂದು ಕೊಕ್ಕಡ ಗ್ರಾ.ಪಂ. ಅಧ್ಯಕ್ಷ ವಿ.ಜೆ. ಸೆಬಾಸ್ಟಿಯನ್ ನುಡಿದರು.
ನದಿಮೂಲಗಳ ಸಂರಕ್ಷಣಾ ಸಮಿತಿ ಮತ್ತು ಕೊಕ್ಕಡ ಗ್ರಾ.ಪಂ. ಸಹಯೋಗದಲ್ಲಿ ಕೊಕ್ಕಡ ಗ್ರಾಮದ ಕೋಳಿ ಸಾಕಾಣಿಕೆದಾರರ ಮತ್ತು ಮಾರಾಟಗಾರರ ಸಭೆಯು ಜೂ.19 ರಂದು ಕೊಕ್ಕಡ ಗ್ರಾ.ಪಂ. ಸಭಾಂಗಣದಲ್ಲಿ ನಡೆದಿದ್ದು ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ನದಿಮೂಲಗಳ ಸಂರಕ್ಷಣಾ ಸಮಿತಿಯ ಕಾರ್ಯಾಧ್ಯಕ್ಷ ರವಿಚಂದ್ರ ಗೌಡ ಹೊಸವೊಕ್ಲು ಮಾತನಾಡಿ ಪ್ರಪ್ರಥಮವಾಗಿ ಕೊಕ್ಕಡದಲ್ಲಿ ಕೋಳಿ ಸಾಕಾಣಿಕೆದಾರರು ಮತ್ತು ಕೋಳಿ ಮಾರಾಟಗಾರರ ಸಂಘವು ಇಂದು ಅಸ್ತಿತ್ವಕ್ಕೆ ಬಂದಿರುವುದು ಸಂತಸದ ವಿಷಯ . ಧರ್ಮಸ್ಥಳದ ಧರ್ಮಾಧಿಕಾರಿ ಡಾ. ವೀರೇಂದ್ರ ಹೆಗ್ಗಡೆಯವರ ಆಶಯದಂತೆ ನದಿಮೂಲಗಳ ಸಂರಕ್ಷಣೆಯ ಜಾಗೃತಿ ನಮ್ಮ ಸಮಿತಿಯ ಮೂಲಕ ಆರಂಭವಾಗಿದೆ. ನಮ್ಮ ನದಿಮೂಲಗಳ ಸಂರಕ್ಷಣೆಯ ಕಾರ್ಯದಲ್ಲಿ ಪ್ರಮುಖವಾದದ್ದು ಕೋಳಿ ತ್ಯಾಜ್ಯಗಳ ಸೂಕ್ತ ನಿರ್ವಹಣೆಯಿಲ್ಲದೆ ಸಾರ್ವಜನಿಕ ಸ್ಥಳ, ಹಳ್ಳ ತೋಡುಗಳಲ್ಲಿ ಎಸೆಯುವುದರಿಂದ ನಮ್ಮ ಜಲಮೂಲಗಳು ಮಲಿನವಾಗುತ್ತಿದೆ ಅನ್ನುವ ಪ್ರಮುಖ ಉದ್ದೇಶವಾಗಿದೆ. ಈ ಬಗ್ಗೆ ಜನಜಾಗೃತಿ ಮೂಡಿಸುವ ಕಾರ್ಯದಲ್ಲಿ ಕೊಕ್ಕಡದ ಸಾರ್ವಜನಿಕರೂ ಜಾಗೃತಿ ಮೂಡಿಸಬೇಕಾಗಿದೆ ಎಂದರು.
ನದಿಮೂಲಗಳ ಸಂರಕ್ಷಣಾ ಸಮಿತಿಯ ಕಾರ್ಯದರ್ಶಿ ಯೋಗೀಶ್ ಗೌಡ ಆಲಂಬಿಲ ಮಾತನಾಡಿ ಹೆಗ್ಗಡೆಯವರ ಮಾರ್ಗದರ್ಶನದಲ್ಲಿ ಆರಂಭಿಸಲಾದ ಈ ಜಾಗೃತಿಯು ಯಾವುದೇ ಸ್ವಾರ್ಥದಿಂದ ಕೂಡಿರುವುದಾಗಿಲ್ಲ. ಅಲ್ಲದೇ ಕೋಳಿ ಸಾಕಾಣಿಕೆದಾರರನ್ನಾಗಲೀ, ಮಾರಾಟಗಾರರನ್ನಾಗಲೀ ಅಪರಾಧೀ ಮನೋಭಾವದಿಂದ ನೋಡುವ ಉದ್ದೇಶವೂ ಇಲ್ಲ. ನಮ್ಮ ಪರಿಸರವನ್ನು ಉತ್ತಮ ರೀತಿಯಲ್ಲಿ ಇಟ್ಟುಕೊಳ್ಳುವ ಗುರುತರ ಹೊಣೆ ನಮ್ಮೆಲ್ಲರ ಮೇಲಿದೆ ಅನ್ನುವ ಜಾಗೃತಿ ಮೂಡಿಸುವುದು ಮುಖ್ಯ ಉದ್ದೇಶವಾಗಿದೆ ಎಂದರು.
ಮುಖ್ಯ ಅತಿಥಿಗಳಾಗಿ ಗ್ರಾ.ಪಂ. ಅಭಿವೃದ್ದಿ ಅಧಿಕಾರಿ ರಾಜೀವಿ ಶೆಟ್ಟಿ, ಕಾರ್ಯದರ್ಶಿ ಭಾರತಿ, ಸದಸ್ಯರಾದ ಇಬ್ರಾಹಿಂ ಸೌತಡ್ಕ, ಕುಶಾಲಪ್ಪ ಗೌಡ ಪುಡಿಕೆತ್ತೂರು, ನದಿಮೂಲಗಳ ಸಂರಕ್ಷಣಾ ಸಮಿತಿ ಪ್ರಧಾನ ಕಾರ್ಯದರ್ಶಿ ಅಭಿಲಾಷ್, ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನೆಯ ಮೇಲ್ವಿಚಾರಕಿ ರವಿಕಲಾ, ನೆಲ್ಯಾಡಿ ಭಾಗದ ಮೇಲ್ವಿಚಾರಕ ಧರ್ಣಪ್ಪ ಗೌಡ, ನೆಲ್ಯಾಡಿಯ ಗ್ರಾಮಾಭಿವೃದ್ದಿ ಯೋಜನೆ ಒಕ್ಕೂಟಗಳ ಅಧ್ಯಕ್ಷ ತುಕಾರಾಮ ರೈ, ಗೋಳಿತೊಟ್ಟು ಮೇಲ್ವಿಚಾರಕ ನೇಮಿರಾಜ್ ಕಲಾಯಿ, ಕೊಕ್ಕಡ ಗ್ರಾಮದ ಕೋಳಿ ಮಾರಾಟಗಾರರು ಮತ್ತು ಸಾಕಾಣಿಕೆದಾರರ ಸಂಘದ ಅಧ್ಯಕ್ಷ ಮೇಕ್ಸಿಂ ಲೋಬೋ, ಉಪಾಧ್ಯಕ್ಷರು ಗಳಾದ ಗಣೇಶ ನಾಯ್ಕ್ , ಪ್ರೇಮಚಂದ್ರ ಮರಿಕ್ಕೆ, ಜಯಂತ ಗೌಡ, ರಘು ಬಾರೆಗುಡ್ಡೆ,ಕಾರ್ಯದರ್ಶಿ ಗುರುಪ್ರಸಾದ್, ಜತೆ ಕಾರ್ಯದರ್ಶಿಗಳಾದ ಹಸನಬ್ಬ, ದಿನೇಶ್ ಉಪಸ್ಥಿತರಿದ್ದರು. ಕೊಕ್ಕಡ ಗ್ರಾಮದ ವ್ಯಾಪ್ತಿಯಲ್ಲಿರುವ ಎಲ್ಲಾ ಕೋಳಿ ಸಾಕಾಣಿಕೆದಾರರು ಮತ್ತು ಮಾರಾಟಗಾರರ ನೂತನ ಸಮಿತಿಯನ್ನು ಈ ಸಭೆಯಲ್ಲಿ ರಚಿಸಲಾಯಿತು.
ಯೋಗೀಶ್ ಗೌಡ ಆಲಂಬಿಲ ಸ್ವಾಗತಿಸಿದರು. ರಾಜೀವಿ ಶೆಟ್ಟಿ ವಂದಿಸಿದರು.

JCI abhinanadhan sanmanaಬೆಳ್ತಂಗಡಿ : ಪ್ರತಿಷ್ಠಿತ ಜೆಸಿಐ ಬೆಳ್ತಂಗಡಿ ಮಂಜುಶ್ರೀಯ ಉಪಾಧ್ಯಕ್ಷರಾಗಿದ್ದು, ಈ ಬಾರಿಯ ಬೆಳ್ತಂಗಡಿ ತಾಲೂಕಿನಲ್ಲಿ ನಡೆದ ಯೂತ್ ಕಾಂಗ್ರೆಸ್ ಚುನಾವಣೆಯಲ್ಲಿ ಜಯಗಳಿಸಿದ ಅಭಿನಂಧನ್ ಹರೀಶ್ ಕುಮಾರ್‌ರವರನ್ನು ಜೆಸಿಐ ಬೆಳ್ತಂಗಡಿ ಮಂಜುಶ್ರೀ ವತಿಯಿಂದ ಜೂ. 19ರಂದು ಸನ್ಮಾನಿಸಲಾಯಿತು. ಈ ಸಂದರ್ಭದಲ್ಲಿ ಜೆಸಿಐ ಬೆಳ್ತಂಗಡಿ ಮಂಜುಶ್ರೀ ಅಧ್ಯಕ್ಷ ಸಂತೋಷ್ ಪಿ. ಕೋಟ್ಯಾನ್ ಬಳಂಜ, ಪೂರ್ವ ರಾಷ್ಟ್ರೀಯ ಉಪಾಧ್ಯಕ್ಷ ಸದಾನಂದ ನಾವಡ, ನಿಕಟ ಪೂರ್ವಾಧ್ಯಕ್ಷ, ವಲಯಾಧಿಕಾರಿ ವಸಂತ ಶೆಟ್ಟಿ, ವಲಯಾಧಿಕಾರಿ ಚಿದಾನಂದ ಇಡ್ಯ, ಕಾರ್ಯದರ್ಶಿ ರಂಜಿತ್ ಹೆಚ್.ಡಿ, ಪೂರ್ವಾಧ್ಯಕ್ಷ ಸುಭಾಶ್ವಂದ್ರ ಎಂ.ಪಿ., ಕೇಶವ ಪೈ, ನಾರಾಯಣ ಶೆಟ್ಟಿ, ಶ್ರೀನಾಥ್ ಕೆ.ಎಂ., ಜೆಸಿರೆಟ್ ಅಧ್ಯಕ್ಷೆ ಅಮೃತಾ, ಕಾರ್ಯಕ್ರಮ ಸಂಯೋಜಕ ಪ್ರಸಾದ್ ಬಿ.ಎಸ್. ಜೂನಿಯರ್ ಜೇಸಿ ಅಧ್ಯಕ್ಷ ಮನೋಜ್, ಕೋಶಾಧಿಕಾರಿ ವಿಶಾಲ್ ಅಗಸ್ಟಿನ್ ಹಾಗೂ ಘಟಕದ ಎಲ್ಲಾ ಪದಾಧಿಕಾರಿಗಳು ಉಪಸ್ಥಿತರಿದ್ದರು.

venur samalochana shabeವೇಣೂರು: ಪುಷ್ಪಗಿರಿ ಶ್ರೀ ಪುಷ್ಪದಂತ ಸಾಗರ ಮುನಿಮಹಾರಾಜರ ಶಿಷ್ಯರಾದ 108 ಶ್ರೀ ಪ್ರಸಂಗಸಾಗರ್‌ಜೀ ಮುನಿರಾಜರ ಚಾತುರ್ಮಾಸ ವರ್ಷಾಯೋಗವು ಜುಲೈ ತಿಂಗಳಿನಿಂದ ವೇಣೂರು ಶ್ರೀ ಬಾಹುಬಲಿ ಕ್ಷೇತ್ರದಲ್ಲಿ ಪ್ರಾರಂಭಗೊಳ್ಳಲಿದ್ದು, ಈ ಸಂಬಂಧ ಶ್ರಾವಕರ ಸಮಾಲೋಚನಾ ಸಭೆಯು ಇಲ್ಲಿಯ ಯಾತ್ರಿ ನಿವಾಸದಲ್ಲಿ ಜರಗಿತು.
ಸಭೆಯ ಅಧ್ಯಕ್ಷತೆಯನ್ನು ವಹಿಸಿದ್ದ ಚಾತುರ್ಮಾಸ ವ್ಯವಸ್ಥಾಪನಾ ಸಮಿತಿ ಕಾರ್ಯಾಧ್ಯಕ್ಷ ನವೀನ್‌ಚಂದ್ರ ಬಲ್ಲಾಳ್ ಮಾತನಾಡಿ, ಮುನಿಶ್ರೀಯವರ ಚಾತುರ್ಮಾಸ ಕಾರ್ಯಕ್ರಮವನ್ನು ಯಶಸ್ವಿಯಾಗಿ ನಡೆಸುವ ಉದ್ದೇಶದಿಂದ ಚಾತುರ್ಮಾಸ ವ್ಯವಸ್ಥಾಪನಾ ಸಮಿತಿ ರಚಿಸಲಾಗಿದೆ. ಮೂಡಬಿದಿರೆ ಜೈನ ಮಠದ ಭಾರತಭೂಷಣ ಶ್ರೀ ಚಾರುಕೀರ್ತಿ ಪಂಡಿತಾಚಾರ್ಯವರ್ಯ ಮಹಾ ಸ್ವಾಮೀಜಿಯವರನ್ನು ಗೌರವ ಮಾರ್ಗದರ್ಶಕರಾಗಿ ಹಾಗೂ ಧರ್ಮಸ್ಥಳದ ಧರ್ಮಾಧಿಕಾರಿ ಡಾ| ವೀರೇಂದ್ರ ಹೆಗ್ಗಡೆಯವರನ್ನು ಗೌರವಾಧ್ಯಕ್ಷರಾಗಿ ನೇಮಕ ಮಾಡಲಾಗಿದೆ. ಸೀಮೆಯ ಅರಸರಾದ ಡಾ| ಪದ್ಮಪ್ರಸಾದ ಅಜಿಲರನ್ನು ಸಮಿತಿಯ ಅಧ್ಯಕ್ಷರಾಗಿ ಆಯ್ಕೆ ಮಾಡಲಾಗಿದ್ದು, ಹಲವಾರು ಸಮಿತಿ ಹಾಗೂ ಉಪ ಸಮಿತಿಗಳನ್ನು ರಚಿಸಲಾಗಿದೆ ಎಂದು ತಿಳಿಸಿದರು. ಸಭೆಯಲ್ಲಿ ಮಂಗಳೂರು ಎಪಿಎಂಸಿಯ ಮಾಜಿ ಅಧ್ಯಕ್ಷ ಕರಿಂಜೆಗುತ್ತು ಕೃಷ್ಣರಾಜ ಹೆಗ್ಡೆಯವರು ಮಾತನಾಡಿ, ಮುನಿಶ್ರೀಗಳವರ ಚಾತುರ್ಮಾಸ ವರ್ಷಾಯೋಗವನ್ನು ನಡೆಸುವ ಪುಣ್ಯದ ಕೆಲಸ ನಮಗೆ ದೊರಕಿರುವುದು ಪೂರ್ವಜನ್ಮದ ಪುಣ್ಯದ ಫಲ. ಇದನ್ನು ಅಚ್ಚುಕಟ್ಟಾಗಿ ಮುನಿಧರ್ಮಕ್ಕೆ ಚ್ಯುತಿ ಬಾರದ ರೀತಿಯಲ್ಲಿ ಶ್ರದ್ಧಾಭಕ್ತಿಯಿಂದ ಆಯೋಜಿಸಬೇಕಾಗಿದೆ ಎಂದರು. ಬಿಳಿಯೂರುಗುತ್ತು ಧನ್ಯಕುಮಾರ್ ರೈ ಮಾತನಾಡಿ, ಮುಂದಿನ ಪೀಳಿಗೆಗೆ ಧಾರ್ಮಿಕ ವಿಚಾರಗಳ ಮಹತ್ವವನ್ನು ತಿಳಿಸುವ ಮಾದರಿ ಚಾತುರ್ಮಾಸ ಇದಾಗಬೇಕು ಎಂದು ಆಶಿಸಿದರು. ಸಭೆಯಲ್ಲಿ ಮಂಗಳೂರಿನ ಯಶೋಧರ ಪೂವಣಿ, ರಾಜ್ಯ ಜೈನ ಸ್ವಯಂ ಸೇವಕ ತಂಡದ ಜಿಲ್ಲಾ ಸಂಚಾಲಕ ವೃಷಭ ಆರಿಗ ಮೊದಲಾದವರು ತಮ್ಮ ಅನಿಸಿಕೆಗಳನ್ನು ವ್ಯಕ್ತಪಡಿಸಿದರು.
ವೇದಿಕೆಯಲ್ಲಿ ವೇಣೂರು ಶ್ರೀ ದಿಗಂಬರ ಜೈನ ತೀರ್ಥಕ್ಷೇತ್ರ ಸಮಿತಿ ಕಾರ್ಯದರ್ಶಿ ವಿಜಯರಾಜ ಅಧಿಕಾರಿ ಮಾರಗುತ್ತು, ಕೋಶಾಧಿಕಾರಿ ರತ್ನವರ್ಮ ಇಂದ್ರ ಬಜಿರೆ ಹಾಗೂ ಮತ್ತಿತರರು ಉಪಸ್ಥಿತರಿದ್ದರು.
ಸಮಾಲೋಚನಾ ಸಭೆಗೆ ಮಂಗಳೂರು, ಮೂಡಬಿದಿರೆ, ಬಂಟ್ವಾಳ, ಬೆಳ್ತಂಗಡಿ ಹಾಗೂ ಇತರ ಊರುಗಳಿಂದ ಶ್ರಾವಕರು ಆಗಮಿಸಿ ಸಲಹೆ ಸೂಚನೆಗಳನ್ನು ನೀಡಿದರು. ಭಾರತೀಯ ಜೈನ್ ಮಿಲನ್ ನಿರ್ದೇಶಕ ಬಿ. ಸೋಮಶೇಖರ ಶೆಟ್ಟಿ ಉಜಿರೆ ಪ್ರಸ್ತಾವಿಸಿ, ಚಾತುರ್ಮಾಸ ವ್ಯವಸ್ಥಾಪನಾ ಸಮಿತಿ ಪ್ರ. ಕಾರ್ಯದರ್ಶಿ ಉಪನ್ಯಾಸಕ ಮಹಾವೀರ ಜೈನ್ ಮೂಡುಕೋಡಿ ಕಾರ್ಯಕ್ರಮ ನಿರ್ವಹಿಸಿದರು. ಸಮಿತಿ ಕೋಶಾಧಿಕಾರಿ ವಿ. ಪ್ರವೀಣ್ ಕುಮಾರ್ ಇಂದ್ರ ವಂದಿಸಿದರು. ವೇಣೂರು ಜೈನ್ ಮಿಲನ್, ಬ್ರಾಹ್ಮಿ ಮಹಿಳಾ ಸಂಘ, ಶ್ರೀ ಬಾಹುಬಲಿ ಯುವಜನ ಸಂಘದ ಪದಾಧಿಕಾರಿಗಳು ಸಹಕರಿಸಿದರು.

LIC Y dharmaraj bilkodugeಬೆಳ್ತಂಗಡಿ : ಭಾರತೀಯ ಜೀವ ವಿಮಾ ನಿಗಮ ಬಂಟ್ವಾಳ ಶಾಖೆಯಲ್ಲಿ ಕಳೆದ 28 ವರ್ಷಗಳಿಂದ ಅಭಿವೃದ್ದಿ ಅಧಿಕಾರಿಯಾಗಿ ಸೇವೆ ಸಲ್ಲಿಸಿ ಸ್ವಯಂ ನಿವೃತ್ತಿಗೊಂಡ ವೈ.ಧರ್ಮರಾಜ್ ರವರಿಗೆ ಬೀಳ್ಕೊಡುಗೆ ಸಮಾರಂಭ ಜೂ 14ರಂದು ಬೆಳ್ತಂಗಡಿ ಉಪಗ್ರಹ ಶಾಖೆಯಲ್ಲಿ ಜರಗಿತು.
ಸಮಾರಂಭದ ಅಧ್ಯಕ್ಷತೆಯನ್ನು ಬಂಟ್ವಾಳ ಶಾಖೆಯ ಹಿರಿಯ ಶಾಖಾಧಿಕಾರಿ ಡಿ ಬಾಲಕೃಷ್ಣ ವಹಿಸಿ ನಿವೃತ್ತಿಗೊಂಡ ಧರ್ಮರಾಜ್‌ರವರಿಗೆ ಅಭಿವೃದ್ದಿ ಅಧಿಕಾರಿಗಳ, ಪ್ರತಿನಿಧಿಗಳ, ಮತ್ತು ಶಾಖಾ ವತಿಯಿಂದ ಚಿನ್ನದ ಉಂಗುರ, ಸ್ಮರಣಿಕೆ, ಶಾಲು ಹೊದಿಸಿ, ಹಾರ ಹಾಕಿ ಸನ್ಮಾನಿಸಿದರು. ಮುಖ್ಯ ಅತಿಥಿಗಳಾಗಿ ಉಡುಪಿಯ ಅಭಿವೃದ್ದಿ ಅಧಿಕಾರಿಗಳ ಸಂಘದ ಅಧ್ಯಕ್ಷ ಕೆ.ವಿಶ್ವನಾಥ ಬಂಟ್ವಾಳ ಶಾಖೆಯ ಉಪಶಾಖಾಧಿಕಾರಿ ಮಧುಸೂದನ್, ಆಡಳಿತ ಅಧಿಕಾರಿ ರಾಮಯ್ಯ ಶೆಟ್ಟಿ ಭಾಗವಹಿಸಿ ಶುಭಹಾರೈಸಿದರು.
ಅಭಿವೃದ್ದಿ ಅಧಿಕಾರಿಗಳಾದ ಗೋಕುಲ್ ಶೇಟ್, ಮಧ್ವರಾಜ್, ಎ.ಜಯದೇವ್, ಎಂ.ವಿ.ಶೆಟ್ಟಿ ಪ್ರತಿನಿಧಿಗಳ ಪರವಾಗಿ ಮನೋಹರ್ ಪಡಿವಾಳ್, ಅಶೋಕ್ ಕುಮಾರ್ ಬಿ.ಪಿ, ಗಂಗಾಧರ ಮಾಸ್ಟರ್, ಧರಣೇಂದ್ರ ಕುಮಾರ್ ಶುಭಕೋರಿದರು. ಸಮಾರಂಭದಲ್ಲಿ ಬಂಟ್ವಾಳ ಮತ್ತು ಬೆಳ್ತಂಗಡಿ ಉಪಗ್ರಹ ಶಾಖೆಯ ಅಭಿವೃದ್ದಿ ಅಧಿಕಾರಿಗಳು, ಧರ್ಮರಾಜರವರ ಬಳಗದ ಪ್ರತಿನಿಧಿಗಳು ಶಾಖೆಯ ಸಿಬ್ಬಂದಿ ವರ್ಗದವರು ಉಪಸ್ಥಿತರಿದ್ದರು.
ಬೆಳ್ತಂಗಡಿ ಉಪಗ್ರಹ ಶಾಖಾಕಾರಿ ಆರ್.ಡಿ.ಯೋಗೇಂದ್ರ ಸ್ವಾಗತಿಸಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಪ್ರತಿನಿಧಿ ಜಗನ್ನಾಥ್ ಹೆಚ್. ರವರ ಪ್ರಾರ್ಥನೆಯೊಂದಿಗೆ ಕಾರ್ಯಕ್ರಮ ಪ್ರಾರಂಭಗೊಂಡಿತು.ಅಭಿವೃದ್ದಿ ಅಧಿಕಾರಿ ಉದಯ ಶಂಕರ್ ಸನ್ಮಾನಿತರ ಪರಿಚಯ ವಾಚಿಸಿದರು. ಪ್ರತಿನಿಧಿ ಜಾರಪ್ಪ ಪೂಜಾರಿ ಬೆಳಾಲು ವಂದಿಸಿ, ಅಭಿವೃದ್ದಿ ಅಧಿಕಾರಿ ಟಿ.ಡಿ ರಾಘವೇಂದ್ರ ಕಾರ್ಯಕ್ರಮ ನಿರೂಪಿಸಿದರು.

congress pressmeetಬೆಳ್ತಂಗಡಿ : ರಮಾನಾಥ ರೈ ಯವರು ಜವಾಬ್ಧಾರಿಯುತ ಸರಕಾರದ ಪ್ರತಿನಿಧಿಯಾಗಿ ಕಾನೂನು ಸುವ್ಯವಸ್ಥೆಯ ಬಗ್ಗೆ ಉನ್ನತ ಅಧಿಕಾರಿಯ ಜೊತೆ ಖಾಸಗಿಯಾಗಿ ಮಾತನಾಡಿ ಜಿಲ್ಲೆಯ ಶಾಂತಿ ಕಾಪಾಡುವ ನಿಟ್ಟಿನಲ್ಲಿ ಮತ್ತು ಪರಿಸ್ಥಿತಿಯನ್ನು ನಿಭಾಯಿಸುವಲ್ಲಿ ಸಮರ್ಥ ನಾಯಕತ್ವ ತೋರಿದ್ದಾರೆ. ರಮಾನಾಥ ರೈಗಳು ಬಂಟ್ವಾಳ ಕ್ಷೇತ್ರದಿಂದ 6 ಬಾರಿ ಶಾಸಕರಾಗಿ 3 ಬಾರಿ ಸಚಿವರಾಗಿ ಅವರ ಸೇವೆ ಬಂಟ್ವಾಳದ ಜನತೆಗೆ, ಜಿಲ್ಲೆಗೆ ಗೊತ್ತಿದೆ. ಜನರು ಅವರಿಗೆ ಸರ್ಟಿಫಿಕೆಟ್ ಕೊಟ್ಟಿದ್ದಾರೆ. ಅವರಿಗೆ ಪ್ರಭಾಕರ ಭಟ್ ಅವರ ಸರ್ಟಿಫಿಕೆಟ್ ಬೇಕಾಗಿಲ್ಲ ಎಂದು ಬೆಳ್ತಂಗಡಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಹರೀಶ್ ಕುಮಾರ್ ಪತ್ರಿಕಾ ಗೋಷ್ಟಿಯಲ್ಲಿ ಹೇಳಿದರು.
ವೀಡಿಯೋ ಅಸಲಿಯೋ, ನಕಲಿಯೋ :
ಅನೇಕ ಸಂದರ್ಭಗಳಲ್ಲಿ ರಾಜ್ಯದಲ್ಲಿ ಇಂತಹ ವೀಡಿಯೋಗಳು ಹೊರಬಂದಿದೆ. ಅದು ಅಸಲಿಯೋ ನಕಲಿಯೋ ಎಂದು ಇದುವರೆಗೆ ತಿಳಿಯಲು ಸಾಧ್ಯವಾಗಿಲ್ಲ. ಅದೇನೇ ಇದ್ದರೂ ಬಿಜೆಪಿ ಮತ್ತು ಸಂಘ ಪರಿವಾರದವರು ಇದನ್ನೇ ಬಳಸಿಕೊಂಡು ರೈ ವಿರುದ್ಧ ಆಕ್ರಮಣಕಾರಿಯಾಗಿ ಮಾತನಾಡುತ್ತಿದ್ದಾರೆ. ಯಾವತ್ತೂ ಚುನಾವಣೆಯ ಸಂದರ್ಭ ಇಂತಹ ಪ್ರಕರಣಗಳು ಜಾಸ್ತಿಯಾಗುತ್ತದೆ. ಸದ್ರಿ ವೀಡಿಯೋದಲ್ಲಿ, ಪ್ರಚೋದನಕಾರಿ ಭಾಷಣ ಮಾಡಿದವರನ್ನು ಬಂಧಿಸಿ ಎಂದು ರೈ ಅವರು ಹೇಳಿದ್ದಾರೆ ಅಷ್ಟೇ. ಬಿಟ್ಟರೆ ಪ್ರಭಾಕರ ಭಟ್ ಅವರನ್ನು ಬಂಧಿಸಿ ಎಂದು ಹೇಳಿಲ್ಲ ಎಂದು ಸಮರ್ಥಿಸಿಕೊಂಡರು.
ರೈ ನೈಜ ಜತ್ಯಾತೀತವಾದಿ ನಮ್ಮ ನಾಯಕ :
ಅವರು ಯಾವತ್ತೂ ಜಾತೀವಾದಿ, ಮತೀಯವಾದಿಯಲ್ಲ. ಅದಕ್ಕೆ ಅವಕಾಶವನ್ನೂ ಕೊಟ್ಟಿಲ್ಲ. ನೈಜ ಜಾತ್ಯಾತೀತ ಮನೋಭಾವವುಳ್ಳ ನಮ್ಮ ನಾಯಕ. ಮೊನ್ನೆಯ ಪರಿಸ್ಥಿತಿಯನ್ನು ಅವರು ಸಮರ್ಥವಾಗಿ ನಿಭಾಯಿಸಿದ್ದಾರೆ. ಅವರು ಪಕ್ಷದ ಸಮರ್ಥ ನಾಯಕ ಎಂಬುದರಲ್ಲಿ ಎರಡು ಮಾತಿಲ್ಲ. ಬಿಜೆಪಿಯವರು ಸುಳ್ಳನ್ನೇ 100 ಬಾರಿ ಹೇಳಿ ಸತ್ಯ ಎಂದು ನಂಬಿಸುವ ಕೆಲಸದಲ್ಲಿ ನಿಸ್ಸೀಮರು. ದ.ಕ. ಜಿಲ್ಲೆಯಲ್ಲಿ 8 ಕ್ಷೇತ್ರಗಳಲ್ಲಿ 7 ರಲ್ಲಿ ಕಾಂಗ್ರೆಸ್ ಶಾಸಕರು ಇದ್ದು ಒಳ್ಳೆ ಕೆಲಸದ ಮೂಲಕ ಒಳ್ಳೆಯ ಹೆಸರು ಪಡೆದಿದ್ದಾರೆ. ಇದನ್ನು ಬಿಜೆಪಿಗರಿಗೆ ಸಹಿಸಲು ಸಾಧ್ಯವಾಗುತ್ತಿಲ್ಲ. ಆದ್ದರಿಂದ ಗೊಂದಲ ಮೂಡಿಸುವ ಹುನ್ನಾರ ಮಾಡುತ್ತಿದ್ದಾರೆ. ಈ ಪರಿಸ್ಥಿತಿಯನ್ನು ಎದುರಿಸಲು ಕಾಂಗ್ರೆಸ್ ಕಾರ್ಯಕರ್ತರು ಸಿದ್ಧರಿದ್ದಾರೆ. ಇನ್ನಾದರೂ ಜಿಲ್ಲೆಯಲ್ಲಿ ಶಾಂತಿ ಕಾಪಾಡಲು ಕೈ ಜೋಡಿಸಲಿ. ಅವರಿಗೆ ಇಲ್ಲಿ ನೆಲೆ ಇಲ್ಲದಂತಾಗಿದೆ. ರಾಜ್ಯದಲ್ಲೂ ಕೂಡ ಕಾಂಗ್ರೆಸ್ ಸರಕಾರ ಉತ್ತಮ ಕೆಲಸ ಮಾಡುತ್ತಿದೆ. ಆಡಳಿತ ಅವಧಿಯಲ್ಲಿ ಎಲ್ಲೂ ಕೂಡ ಕೋಮು ಗಲಭೆಗೆ ಅವಕಾಶ ಕೊಟ್ಟಿಲ್ಲ. ಆದರೆ ಇವರು ಮಾತ್ರ ಕೋಮು ಸಂಘರ್ಷವನ್ನು ಜೀವಂತವಾಗಿಡಲು ಪ್ರಯತ್ನಿಸುತ್ತಿದ್ದಾರೆ. ಜಾತ್ಯಾತೀತ ಪಕ್ಷವೆಂದು ಹೆಸರಿಟ್ಟುಕೊಂಡಿರುವರೂ ಅವರ ಜೊತೆ ಸೇರಿಕೊಂಡು ಕೆಲಸ ಮಾಡುತ್ತಿದ್ದಾರೆ ಎಂದು ಆರೋಪಿಸಿದರು.
ಬೆಳ್ತಂಗಡಿ ವಸಂತ ಬಂಗೇರ ೬ ನೇ ಬಾರಿಗೆ ದಾಖಲೆ ಮತಗಳಿಂದ ಗೆಲ್ಲಲಿದ್ದಾರೆ :
ಕಾಂಗ್ರೆಸ್‌ಗೆ ರಾಜ್ಯದಲ್ಲೂ ಭವಿಷ್ಯವಿದೆ. ಎಲ್ಲಾ ಕ್ಷೇತ್ರಗಳಲ್ಲೂ ಅಭಿವೃದ್ಧಿಯಾಗುತ್ತಿದ್ದು ಮುಂದಿನ ಚುನಾವಣೆಯಲ್ಲಿ ಜಿಲ್ಲೆಯಲ್ಲಿ ಎಂಟಕ್ಕೆ ಎಂಟೂ ಕ್ಷೇತ್ರಗಳಲ್ಲೂ ನಾವು ಜಯಗಳಿಸುತ್ತೇವೆ. ಅಲ್ಲದೆ ಬೆಳ್ತಂಗಡಿಯಲ್ಲಿ 6ನೇ ಬಾರಿಗೆ ವಸಂತ ಬಂಗೇರ ಅವರು ದಾಖಲೆ ಮುರಿಯದ ರೀತಿಯ ಪ್ರಮಾಣದ ಮತಗಳ ಮೂಲಕ ಜಯಗಳಿಸಲಿದ್ದಾರೆ. ಆ ಮೂಲಕ ಪಕ್ಷದ ಸರಕಾರ ಗೆಲ್ಲಿಸಿಕೊಡಲಿದ್ದಾರೆ ಎಂದು ತಿಳಿಸಿದರು. ಪತ್ರಿಕಾ ಗೋಷ್ಠಿಯಲ್ಲಿ ಪಟ್ಟಣ ಪಂಚಾಯತ್ ಅಧ್ಯಕ್ಷ ಮುಗುಳಿ ನಾರಾಯಣ ರಾವ್, ಬ್ಲಾಕ್ ಕಾಂಗ್ರೆಸ್ ಗ್ರಾಮೀಣ ಘಟಕದ ಅಧ್ಯಕ್ಷ ಕೆ. ರಾಮಚಂದ್ರ ಗೌಡ, ತಾಲೂಕು ಎಸ್.ಸಿ. ಘಟಕದ ಅಧ್ಯಕ್ಷ ಬಿ.ಕೆ. ವಸಂತ್ ಉಪಸ್ಥಿತರಿದ್ದರು.

Shobith shettyತಂದೆ ಜಯಂತ ಶೆಟ್ಟಿ ಮತ್ತು ತಾಯಿ ಶ್ರೀಮತಿ ಜಲಜಾಕ್ಷಿ ಶೆಟ್ಟಿ ಜೊತೆ ಶೋಭಿತ್ ಶೆಟ್ಟಿ

ಉಜಿರೆ: ತಂದೆಯ ಈರ್ವರು ಸಹೋದರರು ಭಾರತೀಯ ಭೂ ಸೇನೆಯಲ್ಲಿ ಸೇವೆ ಸಲ್ಲಿಸುತ್ತಿರುವ ಹಿನ್ನೆಲೆ ಎಳೆಯ ಶೋಭಿತ್‌ಗೆ ಸ್ಪೂರ್ತಿ ಹಾಗೂ ಪ್ರೇರಣೆ ನೀಡಿತು. ಫಲವಾಗಿ ಛಲಬಿಡದೆ ಎರಡನೇಬಾರಿ ನಡೆಸಿದ ಪ್ರಯತ್ನ ಫಲಿಸಿತು. ಭಾರತೀಯ ಭೂ ಸೇನೆಯ ಟೆಕ್ನಿಕಲ್ ಗ್ರಾಜುವೇಟ್ ಕೋರ್ಸ್ ಸಂದರ್ಶನದಲ್ಲಿ ಆಯ್ಕೆಯಾದ ಆತ ಡೆಹ್ರಾಡೋನ್‌ನ ಇಂಡಿಯನ್ ಮಿಲಿಟರಿ ಅಕಾಡೆಮಿಯಲ್ಲಿ ಜಂಟಲ್‌ಮೆನ್ ಕೆಡೆಟ್ ಆಗಿ ತರಬೇತಿಗೊಂಡು ಕಳೆದ ಜೂ 10ರಂದು ನಡೆದ ಪಾಸ್‌ಔಟ್ ಪೆರೇಡ್‌ನಲ್ಲಿ ಲೆಫ್ಟಿನೆಂಟ್ ಆಗಿ ನೇಮಕ ಗೊಂಡಿದ್ದಾರೆ.
ಪ್ರತಿಭಾವಂತ ವಿದ್ಯಾರ್ಥಿ ಬೆಳ್ತಂಗಡಿ ತಾಲೂಕಿನ ಉಜಿರೆ ಗ್ರಾಮದ ಹೆಸರುವಾಸಿ ಕುಂಟಿನಿ ಮನೆತನದ ದಿ| ಬಾಬು ಶೆಟ್ಟಿಯವರ ಮೊಮ್ಮಗ ಶೋಭಿತ್ ಶೆಟ್ಟಿ ಓರಿಯಂಟಲ್ ಇನ್ಶೂರೆನ್ಸ್‌ನ ಹಿರಿಯ ಅಭಿವೃದ್ಧಿ ಅಧಿಕಾರಿ ಜಯಂತ ಶೆಟ್ಟಿ ಕುಂಟಿನಿ ಮತ್ತು ಶ್ರೀಮತಿ ಜಲಜಾಕ್ಷಿ ಶೆಟ್ಟಿ ದಂಪತಿಗಳ ಹೆಮ್ಮೆಯ ಪುತ್ರ. 1992 ಮೇ 21ರಂದು ಜನಿಸಿದ ಶೋಭಿತ್ ಉಜಿರೆಯ ಅನುಗ್ರಹ ಆಂಗ್ಲಮಾಧ್ಯಮ ಶಾಲೆಯಲ್ಲಿ ಪ್ರಾಥಮಿಕ ಶಿಕ್ಷಣ (2005) ಎಸ್.ಡಿ.ಎಂ. ಆಂಗ್ಲ ಮಾಧ್ಯಮ ಶಾಲೆಯಲ್ಲಿ ಪ್ರೌಢ ಶಿಕ್ಷಣ (2008)ವನ್ನು ಶೇ. 95 ಅಂಕ ಪಡೆದು ಉನ್ನತ ಶ್ರೇಣಿಯಲ್ಲಿ ಉತ್ತೀರ್ಣನಾಗಿರುತ್ತಾನೆ. ಎಸ್.ಡಿ.ಎಂ. ಪದವಿ ಪೂರ್ವ ಕಾಲೇಜಿನಲ್ಲಿ ಪಿ.ಯು.ಸಿ. (2010)ಯನ್ನು ಡಿಸ್ಟಿಂಕ್ಷನ್‌ನಲ್ಲಿ ಮುಗಿಸಿ, ಬೆಂಗಳೂರಿನ ಅಂಬೇಡ್ಕರ್ ಇಂಜಿನಿಯರಿಂಗ್ ಕಾಲೇಜಿನಲ್ಲಿ ತಾಂತ್ರಿಕ ಶಿಕ್ಷಣ ಪದವಿ (2014) ಪೂರೈಸಿರುತ್ತಾರೆ.
ಬಾಲ್ಯದಿಂದಲೇ ದೇಶಭಕ್ತಿ ಮೈಗೂಡಿಸಿಕೊಂಡ ಶೋಭಿತ್ ಸೇನೆಗೆ ಸೇರಬೇಕೆಂಬ ಮಹತ್ವಾಕಾಂಕ್ಷೆಹೊಂದಿ ಅಂತಿಮ ಇಂಜಿನಿಯರಿಂಗ್ ಹಂತದಲ್ಲೇ ಭಾರತೀಯ ನೌಕಾದಳದ ಸಂದರ್ಶನದಲ್ಲಿ ಟೆಕ್ನಿಕಲ್ ಎಂಟ್ರಿ ಮೂಲಕ ಅಧಿಕಾರಿಯಾಗಿ ಆಯ್ಕೆಯಾಗಿದ್ದರು. ಜತೆಗೆ ಟೆಕ್‌ಮಹೀಂದ್ರ ಸಾಪ್ಟ್‌ವೇರ್ ಕಂಪೆನಿ ಹಾಗೂ ಟೊಯೊಟಾ ಕಿರ್ಲೋಸ್ಕರ್ ಕಂಪೆನಿಗೂ ಆಯ್ಕೆಯಾಗಿರುತ್ತಾರೆ. ಅಂತಿಮ ಪದವಿ ಫಲಿತಾಂಶ ವಿಳಂಬವಾದ ಕಾರಣ ನೌಕಾಸೇನೆಗೆ ಸೇರಲು ಸಾಧ್ಯವಾಗದೆ ಟೊಯೊಟಾ ಕಿರ್ಲೋಸ್ಕರ್ ಕಂಪೆನಿಗೆ ಪ್ರೊಡಕ್ಷನ್ ಇಂಜಿನಿಯರ್ ಆಗಿ ಸೇರ್ಪಡೆಗೊಂಡರು. ಆದರೂ ಸೇನೆಗೆ ಸೇರಬೇಕೆಂಬ ಉತ್ಕಟ ಆಕಾಂಕ್ಷೆ ಮನದಾಳದಲ್ಲಿ ಬೇರೂರಿತ್ತು.
ಕಡೆಗೂ ಅವರ ಬಯಕೆಯ ಮಹತ್ವಾಕಾಂಕ್ಷೆ ಈಡೇರಿತು. ಎರಡನೇ ಬಾರಿಗೆ ಭಾರತೀಯ ಭೂಸೇನೆಯ ಟೆಕ್ನಿಕಲ್ ಗ್ರಾಜುವೇಟ್ ಕೋರ್ಸ್ ಸಂದರ್ಶನದಲ್ಲಿ ಆಯ್ಕೆಯಾಗಿ ಡೆಹ್ರಾಡೂನ್‌ನ ಇಂಡಿಯನ್‌ನ ಇಂಡಿಯನ್ ಮಿಲಿಟರಿ ಅಕಾಡೆಮಿಯಲ್ಲಿ ಜಂಟಲ್‌ಮೆನ್ ಕೆಡೆಟ್‌ಆಗಿ ತರಬೇತಿ ಪಡೆದು ಜೂ ತಿಂಗಳಲ್ಲಿ ನಡೆದ ಪಾಸ್‌ಔಟ್ ಪೆರೇಡ್‌ನಲ್ಲಿ ಲೆಪ್ಟಿನೆಂಟ್ ಆಗಿ ನೇಮಕಗೊಂಡಿದ್ದಾರೆ. ಅವರ ಬಹುಕಾಲದ ನಿರೀಕ್ಷೆಯ ಕನಸು ಇಂದು ನನಸಾಗಿದೆ. ಇದು ಬೆಳ್ತಂಗಡಿ ತಾಲೂಕಿಗೆ, ದ.ಕ. ಜಿಲ್ಲೆ ಹಾಗೂ ರಾಜ್ಯಕ್ಕೆ ಪ್ರತಿಷ್ಠೆಯ ಹೆಗ್ಗಳಿಕೆಗೆ ಕಾರಣವಾಗಿದೆ.

BJP PRATIBATANEಬೆಳ್ತಂಗಡಿ : ನಾಲ್ಕು ಕೋಣೆಯ ಮಧ್ಯೆ ಕೂತು ಅಧಿಕಾರಿಗಳನ್ನು ಕೂಡಿಸಿ ರಾಜಕಾರಣ ಮಾಡುತ್ತಿರುವ ಸಚಿವ ರಮಾನಾಥ ರೈ ಅವರು ಕಲ್ಲಡ್ಕ ಪ್ರಭಾಕರ ಭಟ್ ಹಾಗೂ ಸಂಘ ಪರಿವಾರದ ನಾಯಕರನ್ನು ಬಂಧಿಸುವಂತೆ ತಾಕೀತು ಮಾಡಿರುವುದು ಜಿಲ್ಲೆಯ ಜನತೆ ತಲೆತಗ್ಗಿಸುವಂತಾಗಿದೆ ಎಂದು ಬಿಜೆಪಿ ಬೆಳ್ತಂಗಡಿ ಮಂಡಲ ಅಧ್ಯಕ್ಷ ರಂಜನ್ ಜಿ. ಗೌಡ ಹೇಳಿದರು.
ಜಿಲ್ಲಾ ಉಸ್ತುವಾರಿ ಸಚಿವ ಬಿ. ರಮಾನಾಥ ರೈ ಅವರು ಇತ್ತೀಚೆಗೆ ಬಂಟ್ವಾಳ ಐಬಿಯಲ್ಲಿ ಜಿಲ್ಲಾ ಪೊಲೀಸ್ ಅಧಿಕಾರಿಗಳ ಜೊತೆ ಮಾತುಕತೆ ನಡೆಸಿದ ವೀಡಿಯೋ ಬಹಿರಂಗಗೊಂಡ ಹಿನ್ನೆಲೆಯಲ್ಲಿ ಜೂ. 19ರಂದು ಬೆಳ್ತಂಗಡಿ ತಾಲೂಕು ಕಚೇರಿ ಎದುರು ಹಮ್ಮಿಕೊಂಡಿದ್ದ ಪ್ರತಿಭಟನೆಯಲ್ಲಿ ಅವರು ಮಾತನಾಡಿದರು.
ಒಂದು ಸಮುದಾಯದ ಹಾಗೂ ಕಾಂಗ್ರೆಸ್ ನಾಯಕರ ಮುಂದೆ ಪೊಲೀಸ್ ವರಿಷ್ಠಾಧಿಕಾರಿಗಳಿಗೆ ಸೂಚನೆ ನೀಡುವ ಮೂಲಕ ಇಲಾಖೆಯಲ್ಲಿ ಹಸ್ತಕ್ಷೇಪ ಮಾಡಿದ್ದಾರೆ. ಪ್ರತೀ ಬಾರಿ ಕಾಂಗ್ರೆಸ್ ಸರಕಾರ ಇರುವಾಗಲೇ ಜಿಲ್ಲೆಯಾದ್ಯಂತ ಕೋಮು ಗಲಭೆಗಳು ನಡೆಯುವುದಕ್ಕೆ ಉಸ್ತುವಾರಿ ಸಚಿವರೇ ಜವಾಬ್ದಾರರಾಗಿದ್ದಾರೆ. ಇತ್ತೀಚೆಗೆ ಕಲ್ಲಡ್ಕ ಹಾಗೂ ಜಿಲ್ಲೆಯಾದ್ಯಂತ ನಡೆಯುವ ಕೋಮು ಗಲಭೆಗಳಿಗೆ ಮತ್ತು ಹಿಂದೂ ನಾಯಕರ ಹತ್ಯೆ ಹಾಗೂ ಹಲ್ಲೆಗಳಲ್ಲಿ ಉಸ್ತುವಾರಿ ಸಚಿವರ ನೇರ ಕೈವಾಡ ಮತ್ತು ಸಮಾಜಘಾತುಕ ಶಕ್ತಿಗಳಿಗೆ ಪ್ರೋತ್ಸಾಹ ನೀಡುತ್ತಿರುವುದು ಜಗಜ್ಜಾಹೀರಾಗಿದೆ ಎಂದರು.
ಪ್ರತಿಭಟನೆಯಲ್ಲಿ ಮಾಜಿ ಶಾಸಕ ಪ್ರಭಾಕರ ಬಂಗೇರ, ಜಿ.ಪಂ. ಸದಸ್ಯರಾದ ಕೊರಗಪ್ಪ ನಾಯ್ಕ, ಸೌಮ್ಯಲತಾ, ತಾ.ಪಂ. ಉಪಾಧ್ಯಕ್ಷೆ ವೇದಾವತಿ, ಸ್ಥಾಯಿ ಸಮಿತಿ ಅಧ್ಯಕ್ಷ ಸುಧೀರ್ ಆರ್. ಸುವರ್ಣ, ತಾ.ಪಂ. ಸದಸ್ಯರಾದ ವಿಜಯ ಗೌಡ ವೇಣೂರು, ಲಕ್ಷ್ಮೀನಾರಾಯಣ ಕೊಕ್ಕಡ, ಸುಧಾಕರ ಬಿ.ಎಲ್, ಕೊರಗಪ್ಪ ಗೌಡ ಅರಣಪಾದೆ, ಕೃಷ್ಣಯ್ಯ ಆಚಾರ್ಯ, ಧನಲಕ್ಷ್ಮೀ ಜನಾರ್ದನ್, ಬಿಜೆಪಿ ಮಂಡಲ ಪ್ರಧಾನ ಕಾರ್ಯದರ್ಶಿ ಪ್ರಭಾಕರ ಶೆಟ್ಟಿ ಉಪ್ಪಡ್ಕ, ಯುವ ಮೋರ್ಚಾ ತಾಲೂಕು ಅಧ್ಯಕ್ಷ ಸಂಪತ್ ಬಿ. ಸುವರ್ಣ, ಮುಖಂಡರುಗಳಾದ ರಾಘವ ಕಲ್ಮಂಜ, ಸಿ.ಕೆ. ಚಂದ್ರಕಲಾ, ಗೀತಾ ರಾಮಣ್ಣ ಗೌಡ, ಬಾಲಕೃಷ್ಣ ಗೌಡ, ಅಶೋಕ್ ಕೋಟ್ಯಾನ್, ಎಪಿಎಂಸಿ ಮಾಜಿ ಅಧ್ಯಕ್ಷ ಭರತ್ ಕುಮಾರ್, ಹಾಲಿ ಸದಸ್ಯೆ ಸೆಲೆಸ್ಟಿನ್ ಡಿಸೋಜಾ, ರಘುಚಂದ್ರ, ಶಂಕರ ಹೆಗ್ಡೆ, ನಾರಾಯಣ ಆಚಾರ್, ಗಿರೀಶ್ ಡೋಂಗ್ರೆ, ಅಶೋಕ್ ಕುಮಾರ್ ಮತ್ತಿತರರು ಉಪಸ್ಥಿತರಿದ್ದರು. ಬಳಿಕ ತಹಶೀಲ್ದಾರರ ಮೂಲಕ ರಾಜ್ಯಪಾಲರಿಗೆ ಮನವಿಯನ್ನು ಸಲ್ಲಿಸಲಾಯಿತು.

aranya 1ಬೆಳ್ತಂಗಡಿ : ಲಾರಿಯೊಂದರಲ್ಲಿ ಅಕ್ರಮವಾಗಿ 39 ಮರದ ದಿಮ್ಮಿಗಳನ್ನು ಸಾಗಾಟ ಮಾಡುತ್ತಿದ್ದ ಪ್ರಕರಣವನ್ನು ಬೆಳ್ತಂಗಡಿ ಅರಣ್ಯ ಇಲಾಖೆಯವರು ಪತ್ತೆ ಹಚ್ಚಿ ಸುಮಾರು ರೂ.8ಲಕ್ಷ ಮೌಲ್ಯದ ಸೊತ್ತುಗಳನ್ನು ವಶಪಡಿಸಿಕೊಂಡು ಇಬ್ಬರು ಆರೋಪಿಗಳನ್ನು ಬಂಧಿಸಿದ ಪ್ರಕರಣ ಜೂ.18ರಂದು ವರದಿಯಾಗಿದೆ.
ಉಜಿರೆ ಕಡೆಯಿಂದ ಬೆಳ್ತಂಗಡಿಯತ್ತ ಲಾರಿ ನಂಬ್ರ ಕೆ.ಎ 41-0418ರಲ್ಲಿ ಅಕ್ರಮವಾಗಿ ಮರದ ದಿಮ್ಮಿಗಳನ್ನು ಸಾಗಾಟ ಮಾಡಲಾಗುತ್ತಿದೆ ಎಂಬ ಖಚಿತ ಮಾಹಿತಿಯನ್ವಯ ಉಜಿರೆ ಶಾಖಾ ಉಪ ವಲಯ ಅರಣ್ಯ ಅಧಿಕಾರಿಯವರು, ಉಜಿರೆ-ಬೆಳ್ತಂಗಡಿ ರಸ್ತೆಯ ಲಾಯಿಲ ಕ್ರಾಸ್ ಹಳೆಪೇಟೆ ಎಂಬಲ್ಲಿ ಹೋಗುತ್ತಿದ್ದ ಲಾರಿಯನ್ನು ತಡೆ ಹಿಡಿದು ಪರಿಶೀಲನೆ ನಡೆಸಿದಾಗ ಲಾರಿಯಲ್ಲಿ ಬೆಳ್ತಂಗಡಿ ಕಡೆಗೆ ಸಾಗಾಟ ಮಾಡುತ್ತಿದ್ದ ಬಣ್ಪು ಜಾತಿಯ 39 ಮರದ ದಿಮ್ಮಿಗಳು ಪತ್ತೆಯಾಗಿದೆ. ನಂತರ ಸೊತ್ತು ಸಮೇತ ಲಾರಿಯನ್ನು ವಶಪಡಿಸಿಕೊಂಡು ಸರಕಾರಕ್ಕೆ ಅಮಾನತು ಪಡಿಸಿಕೊಂಡಿದ್ದಾರೆ. ಸದ್ರಿ ಪ್ರಕರಣದ ಆರೋಪಿಗಳಾದ ಇಬ್ರಾಹಿಂ ಸೋಮಂತಡ್ಕ ಮುಂಡಾಜೆ ಗ್ರಾಮ ಮತ್ತು ಜಾಫರ್, ಮಲೆಬೆಟ್ಟು ಕೊಯ್ಯೂರು ಗ್ರಾಮ ಇವರುಗಳನ್ನು ದಸ್ತಗಿರಿ ಮಾಡಲಾಗಿದೆ. ಅಮಾನತು ಪಡಿಸಿಕೊಂಡ ಸೊತ್ತು ಹಾಗೂ ವಾಹನದ ಒಟ್ಟು ಮೌಲ್ಯ ಸುಮಾರು ರೂ. 8 ಲಕ್ಷ ಎಂದು ಅಂದಾಜಿಸಲಾಗಿದೆ. ಸದ್ರಿ ಪ್ರಕರಣವನ್ನು ಪತ್ತೆ ಹಚ್ಚುವಲ್ಲಿ ಉಜಿರೆ ಶಾಖಾ ಉಪ ವಲಯ ಅರಣ್ಯಾಧಿಕಾರಿ ಕೀರ್ತನ್, ಉಲ್ಲಾಸ್ ಕೆ. ದುಗ್ಗಪ್ಪ ನಾಯ್ಕ, ಮಾರ್ಕ್ ಡಿಸೋಜಾ, ಅರಣ್ಯ ರಕ್ಷಕರುಗಳಾದ ಭವಾನಿ ಶಂಕರ್ ಪುತ್ರನ್, ಪಿ. ಶಂಕರ್, ಕುಮಾರಿ ಕಮಲ, ಅರಣ್ಯ ವೀಕ್ಷಕ ಸದಾನಂದ ಇವರು ಭಾಗವಹಿಸಿರುತ್ತಾರೆ.
ಸದ್ರಿ ಪ್ರಕರಣದ ಮುಂದಿನ ತನಿಖೆಯನ್ನು ಮಂಗಳೂರು ವಿಭಾಗದ ಉಪ ಅರಣ್ಯ ಸಂರಕ್ಷಣಾಧಿಕಾರಿ ಡಾ| ಕೆ.ಟಿ. ಹನುಮಂತಪ್ಪ ಹಾಗೂ ಮಂಗಳೂರು ಉಪ ವಿಭಾಗದ ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಎಸ್.ಎನ್. ಸತೀಶ್ ಬಾಬಾ ರೈ ಇವರ ನಿರ್ದೇಶನದಂತೆ ಬೆಳ್ತಂಗಡಿ ವಲಯ ಅರಣ್ಯ ಅಧಿಕಾರಿ ಸುಬ್ಬಯ್ಯ ನಾಯ್ಕ್ ಇವರು ನಡೆಸುತ್ತಿದ್ದಾರೆ.

Thaluku panchayath sabheಬೆಳ್ತಂಗಡಿ : ಬೆಳ್ತಂಗಡಿ ತಾಲೂಕು ಕಚೇರಿಯಲ್ಲಿ ಹಾಗೂ ಸರ್ವೆ ಇಲಾಖೆಯಲ್ಲಿ ಜಿಲ್ಲಾಧಿಕಾರಿ ಗಳ ಆದೇಶವನ್ನು ಸಿಬ್ಬಂದಿಗಳು ಪರಿಗಣನೆಗೆ ತೆಗೆದುಕೊಳ್ಳುವುದಿಲ್ಲ, ಬಡವರ ಯಾವುದೇ ಕೆಲಸಗಳು ತಾಲೂಕು ಕಚೇರಿಯಲ್ಲಿ ನಡೆಯುವುದಿಲ್ಲ, ಮಧ್ಯವರ್ತಿಗಳ ಹಾವಳಿ ಹೆಚ್ಚುತ್ತಿದೆ ಎಂದು ಜೂ.20ರಂದು ನಡೆದ ತಾ.ಪಂ ಸಮಾನ್ಯ ಸಭೆಯಲ್ಲಿ ಸದಸ್ಯರು ಆರೋಪಿಸಿದರು.
ಸಭೆಯ ಅಧ್ಯಕ್ಷತೆಯನ್ನು ತಾ.ಪಂ. ಅಧ್ಯಕ್ಷೆ ದಿವ್ಯಜ್ಯೋತಿ ವಹಿಸಿದ್ದರು.
ಉಪಾಧ್ಯಕ್ಷೆ ವೇದಾವತಿ, ಸ್ಥಾಯಿ ಸಮಿತಿ ಅಧ್ಯಕ್ಷ ಸುದೀರ್ ಆರ್.ಸುವರ್ಣ, ತಹಶೀಲ್ದಾರ್ ತಿಪ್ಪೇಸ್ವಾಮಿ, ಕಾರ್ಯನಿರ್ವಾಹಣಾಧಿಕಾರಿ ಸಿ.ಆರ್. ನರೇಂದ್ರ, ತಾ.ಪಂ. ಸಹಾಯಕ ಲೆಕ್ಕ ಅಧೀಕ್ಷಕ ಗಣೇಶ್ ಪೂಜಾರಿ ಉಪಸ್ಥಿತರಿದ್ದರು.
ಪಾರೆಂಕಿಯ ಮಾಜಿ ಯೋಧ ವಿಕ್ಟರ್ ರೊಡ್ರಿಗಸ್ ಎಂಬವರಿಗೆ 1 ಎಕ್ರೆ ಭೂ ಮಂಜೂರಾತಿ ವಿಷಯ ಇಂದಿನ ಸಭೆಯಲ್ಲಿ ಚರ್ಚೆಗೆ ಒಳಗಾಯಿತು. ಇವರಿಗೆ ಜಾಗ ಮಂಜೂರಾತಿಗೆ ಪ್ರಸ್ತಾವನೆ ಸಲ್ಲಿಸಲಾಗಿದೆ ಜಿಲ್ಲಾಧಿಕಾರಿಗಳಿಂದ ಆದೇಶ ಬಂದಿಲ್ಲ ಎಂದು ತಹಶೀಲ್ದಾರ್ ತಿಪ್ಪೇಸ್ವಾಮಿ ಸಭೆಗೆ ವಿವರ ನೀಡಿದರು. ಇದಕ್ಕೆ ಆಕ್ಷೇಪ ವ್ಯಕ್ತಪಡಿಸಿದ ಸದಸ್ಯ ಜೊಯೆಲ್ ಮೆಂಡೋನ್ಸಾ ಅವರು 2005-06ನೇ ಸಾಲಿನಲ್ಲಿ ಜಿಲ್ಲಾಧಿಕಾರಿಗಳು ಇವರಿಗೆ ಜಾಗ ಮಂಜೂರಾತಿಗೆ ಆದೇಶ ಮಾಡಿದ್ದು, ಈ ಆದೇಶದ ಪ್ರತಿಯನ್ನು ಸಭೆಯಲ್ಲಿ ಪ್ರದರ್ಶಿಸಿದರು. ತಾಲೂಕು ಕಚೇರಿಗೆ ಆದೇಶದ ಪ್ರತಿ ಬಂದಿದೆ. ಆದರೆ ಇಲ್ಲಿಯ ಸಿಬ್ಬಂದಿಗಳು ಜಿಲ್ಲಾಧಿಕಾರಿಗಳ ಆದೇಶವನ್ನು ಪರಿಗಣನೆಗೆ ತೆಗೆದುಕೊಳ್ಳುವುದಿಲ್ಲ ಎಂದು ಸದಸ್ಯರು ಆರೋಪಿಸಿದರು.
2013ರಲ್ಲಿ ಕಲ್ಮಂಜ ಗ್ರಾಮದ ಸ.ನಂ. 194/14ರಲ್ಲಿ 17 ಮಂದಿಯ ಜಾಗದ ಪ್ಲಾಟಿಂಗ್‌ಗೆ ಅರ್ಜಿ ಸಲ್ಲಿಸಲಾಗಿದ್ದು, ಜಿಲ್ಲಾಧಿಕಾರಿಗಳು ಆದೇಶ ಮಾಡಿದ್ದಾರೆ. ಇದು ಸರ್ವೆ ಇಲಾಖೆಗೆ ಬಂದು ನಾಲ್ಕು ವರ್ಷ ಆದರೂ ಇನ್ನೂ ಆಗಿಲ್ಲ. ಇವರ ನಂತರ ಅರ್ಜಿ ಕೊಟ್ಟವರ ಪಕ್ಕದ ಜಾಗ ಪ್ಲಾಟಿಂಗ್ ಆಗಿದೆ ಎಂದು ಸದಸ್ಯ ಶಶಿಧರ್ ವಿವರಿಸಿದರು. ತಾಲೂಕು ಕಚೇರಿ ಮತ್ತು ಸರ್ವೆ ಇಲಾಖೆಯಲ್ಲಿ ಹಣ ಕೊಟ್ಟವರ ಕೆಲಸ ಆಗುತ್ತದೆ. ಬಡವರ ಯಾವುದೇ ಕೆಲಸ ಆಗುವುದಿಲ್ಲ, ಮಧ್ಯವರ್ತಿಗಳ ಮೂಲಕ ಹೋದರೆ ಎಲ್ಲಾ ಕೆಲಸ ಕ್ಷಣ ಮಾತ್ರದಲ್ಲಿ ಆಗುತ್ತದೆ ಎಂದು ಸದಸ್ಯರು ಅಸಮಾಧಾನ ವ್ಯಕ್ತಪಡಿಸಿದರು.
ತಾಲೂಕು ಕಚೇರಿಯಲ್ಲಿ ಉಪತಹಶೀಲ್ದಾರ್ ಸೇರಿದಂತೆ, ಸಿಬ್ಬಂದಿಗಳ ಕೊರತೆಯಿದ್ದು, ಯಾವುದೇ ಸಮಸ್ಯೆ ಇದ್ದರೂ ನೇರವಾಗಿ ನನ್ನ ಗಮನಕ್ಕೆ ತನ್ನಿ ಎಂದು ತಹಶೀಲ್ದಾರ್ ತಿಪ್ಪೇಸ್ವಾಮಿ ಸಮಜಾಯಿಕೆ ನೀಡಿದರು. ಆದರೆ ತಹಶೀಲ್ದಾರ್ ಎದುರು ಆಯಿತು ಎಂದು ಒಪ್ಪಿಕೊಳ್ಳುವ ಸಿಬ್ಬಂದಿಗಳು ನಂತರ ಕೆಲಸವೇ ಮಾಡಿಕೊಡದಿರುವ ಅನೇಕ ಉದಾಹರಣೆಗಳಿವೆ ಎಂದು ಸದಸ್ಯರು ತಿಳಿಸಿದರು. ಒಂದು ಹಂತದಲ್ಲಿ ತಹಶೀಲ್ದಾರ್ ಮೇಲೆ ನಿರಂತರ ಆರೋಪಗಳು ಬಂದಾಗ ಸದಸ್ಯ ಗೋಪಿನಾಥ್ ನಾಯಕ್ ಹತ್ತು ವರ್ಷಗಳ ಹಿಂದೆ ಆದ ಘಟನೆ ಬಗ್ಗೆ ತಹಶೀಲ್ದಾರ್‌ರಲ್ಲಿ ಪ್ರಶ್ನೆ ಕೇಳಿದರೆ ಹೇಗೆ ಎಂದು ಆಕ್ಷೇಪ ವ್ಯಕ್ತಪಡಿಸಿದಾಗ, ಇತರ ಸದಸ್ಯರು ಇದಕ್ಕೆ ತೀವ್ರ ಪ್ರತಿರೋಧ ಒಡ್ಡಿದಾಗ ಸಭೆಯಲ್ಲಿ ಗೊಂದಲ ನಿರ್ಮಾಣವಾಯಿತು. ತಾ.ಪಂ. ಕಾರ್ಯನಿರ್ವಾಹಣಾಧಿಕಾರಿಗಳು ಸಭೆಯಲ್ಲಿ ಎಲ್ಲರಿಗೂ ಪ್ರಶ್ನಿಸುವ ಅಧಿಕಾರ ಇದೆ ಎಂದು ಹೇಳಿ ಸಭೆಯನ್ನು ಮುನ್ನಡೆಸಿದರು. ಕಂದಾಯ ಇಲಾಖೆಯ ಪ್ರತ್ಯೇಕ ಸಭೆಗೆ ಗೋಪಿನಾಥ ನಾಯಕ್ ಒತ್ತಾಯಿಸಿದರು.
ವೇಣೂರಿನ ಅಜಿಲಕೆರೆ ವಿವಾದದ ಬಗ್ಗೆ ಎ.ಸಿ. ನ್ಯಾಯಾಲಯದಲ್ಲಿದೆ ಎಂದು ಉತ್ತರ ನೀಡಲಾಗುತ್ತಿದೆ. ಇದು ಸಾರ್ವಜನಿಕ ಕೆರೆ ಇದನ್ನು ಶೀಘ್ರವಾಗಿ ಇತ್ಯರ್ಥ ಪಡಿಸಬೇಕು, ಇಲ್ಲಿಯ 8.50 ಎಕ್ರೆ ಜಾಗವನ್ನು ಪಂಚಾಯತಕ್ಕೆ ಹಸ್ತಾಂತರಕ್ಕೆ ಕ್ರಮ ಕೈಗೊಳ್ಳುವಂತೆ ವಿಜಯ ಗೌಡ ಒತ್ತಾಯಿಸಿದರು. ಅದರಂತೆ ನಿರ್ಣಯ ಮಾಡಿ ಕಳುಹಿಸಲು ನಿರ್ಧರಿಸಲಾಯಿತು.
ಕೊಕ್ಕಡದಲ್ಲಿರುವ 900 ಎಕ್ರೆ ಡಿ.ಸಿ ಮನ್ನಾ ಜಾಗದಲ್ಲಿ ಗೇರು ನಿಗಮದ ವಶವಿರುವ ಜಾಗ ಮತ್ತು ಇತರ ಖಾಸಗಿ ವ್ಯಕ್ತಿಗಳು ಎಷ್ಟು ಜಾಗವನ್ನು ಅತಿಕ್ರಮಣ ಮಾಡಿದ್ದಾರೆ ಉಳಿದ ಜಾಗ ಎಷ್ಟು ಎಂದು ಮಾಹಿತಿ ನೀಡುವಂತೆ ಸದಸ್ಯ ಲಕ್ಷ್ಮೀನಾರಾಯಣ ಒತ್ತಾಯಿಸಿದಾಗ ಮುಂದಿನ ಸಭೆಯಲ್ಲಿ ನೀಡುವುದಾಗಿ ತಹಶೀಲ್ದಾರ್ ಭರವಸೆಯಿತ್ತರು.
ಆಧಾರ್ ಕಾರ್ಡ್ ಮಾಡಿಸಿಕೊಡಲು ಕೆಲವೊಂದು ಖಾಸಗಿ ಸಂಸ್ಥೆಗಳು ರೂ.200 ತೆಗೆದುಕೊಳ್ಳುತ್ತಿದ್ದಾರೆ ಇದರ ಬಗ್ಗೆ ತಹಶೀಲ್ದಾರರು ಕ್ರಮ ತೆಗೆದುಕೊಳ್ಳುವಂತೆ ಸದಸ್ಯ ವಿಜಯ ಗೌಡ, ಲಕ್ಷ್ಮೀನಾರಾಯಣ, ಶಶಿಧರ್, ಸುಶೀಲ, ವಸಂತಿ ಮೊದಲಾದವರು ಒತ್ತಾಯಿಸಿದರು. ಈ ಸಂದರ್ಭ ಮಾತನಾಡಿದ ತಹಶೀಲ್ದಾರ್ ನಮ್ಮ ಕಚೇರಿಯಲ್ಲಿ ಯಾವುದೇ ಹಣ ತೆಗೆದುಕೊಳ್ಳುವುದಿಲ್ಲ, ಖಾಸಗಿ ಏಜೆನ್ಸಿಯವರು ನಮ್ಮ ಕಂಟ್ರೋಲ್‌ಗೆ ಬರುವುದಿಲ್ಲ ಎಂದು ತಿಳಿಸಿದರು. ಉಜಿರೆಯಲ್ಲಿಯೂ ಹೊರಗಿನ ವ್ಯಕ್ತಿಗಳು ರೇಷನ್ ಕಾರ್ಡ್ ಮಾಡಿಸಿಕೊಡುವುದಾಗಿ ಜನರಿಂದ ಹಣ ವಸೂಲಿ ಮಾಡಿರುವುದನ್ನು ಸದಸ್ಯರು ಸಭೆಯ ಗಮನಕ್ಕೆ ತಂದರು. ಇವರ ಬಗ್ಗೆ ಪೊಲೀಸ್ ಕೇಸು ದಾಖಲಿಸಲಾಗಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದರು. ಈ ಸಂದರ್ಭ ಸದಸ್ಯ ಜೊಯೆಲ್ ಮಾತನಾಡಿ ಖಾಸಗಿ ಏಜೆನ್ಸೀಯವರು ಸರಕಾರ ನಿಗದಿತ ಶುಲ್ಕವನ್ನು ಪಡೆದುಕೊಳ್ಳಬಹುದು ಎಂದು ನೆಟ್‌ನಲ್ಲಿ ಮಾಹಿತಿ ಇದೆ ಎಂದು ವಿವರಿಸಿದರು.
ಚಾರ್ಮಾಡಿ ಗ್ರಾಮದ ಕುತ್ರಿಜಾಲು ಪ್ರದೇಶಕ್ಕೆ ಸರಕಾರಿ ಬಸ್ಸು ಬೇಕು. ಈ ಭಾಗದ ನಾಗರಿಕರಿಗೆ, ಶಾಲಾ, ಕಾಲೇಜುಗಳಿಗೆ ಬರುವ ವಿದ್ಯಾರ್ಥಿಗಳಿಗೆ ಅನುಕೂಲವಾಗಲಿದೆ. ಕಳೆದ ಸಭೆಯಲ್ಲಿಯೂ ಇದನ್ನು ಪ್ರಸ್ತಾಪಿಸಿದ್ದೇನೆ ಎಂದು ಸದಸ್ಯ ಕೊರಗಪ್ಪ ಗೌಡ ಹೇಳಿದಾಗ ಮಾತನಾಡಿದ ಕೆಎಸ್ಸಾರ್ಟಿಸಿ ಅಧಿಕಾರಿಗಳು ಪರಿಶೀಲನೆ ನಡೆಸುವ ಭರವಸೆ ನೀಡಿದರು. ಧರ್ಮಸ್ಥಳ ಡಿಪ್ಪೋದಲ್ಲಿ ಸಿಬ್ಬಂದಿಗಳ ಕೊರತೆಯಿದೆ. ಸ್ಥಳೀಯರು ಯಾರೂ ಉದ್ಯೋಗಕ್ಕೆ ಬರುತ್ತಿಲ್ಲ, ಬಸ್ಸಿನ ಕೊರತೆಯೂ ಇದೆ. ಈಗಾಗಲೇ ಚಾಲ್ತಿಯಲ್ಲಿರುವ ಬಸ್ಸಿನ ಸಮಯವನ್ನು ಶಾಲಾ ಮಕ್ಕಳ ಅನುಕೂಲಕ್ಕಾಗಿ ಬದಲಾವಣೆ ಮಾಡಲು ನಾವು ಬದ್ಧರಾಗಿದ್ದೇವೆ ಎಂದು ತಿಳಿಸಿದರು.
ಅಕ್ರಮ ಮದ್ಯಮಾರಾಟ: ಬಂದಾರು ಗ್ರಾಮದ ಮೈರೋಳ್ತಡ್ಕ ಪರಿಸರ ಸೇರಿದಂತೆ ತಾಲೂಕಿನಲ್ಲಿ ಅಕ್ರಮ ಮದ್ಯ ಮಾರಾಟ ದಂದೆ ಬಗ್ಗೆ ಸದಸ್ಯ ಕೃಷ್ಣಯ್ಯ ಆಚಾರ್ಯ ಸಭೆಯಲ್ಲಿ ಪ್ರಶ್ನಿಸಿದರು. ಇದುವರೆಗೆ ತಾಲೂಕಿನಲ್ಲಿ 60 ಪ್ರಕರಣಗಳನ್ನು ದಾಖಲಿಸಿಕೊಳ್ಳಲಾಗಿದೆ ಎಂದು ಅಬಕಾರಿ ಇನ್ಸ್‌ಪೆಕ್ಟರ್ ತುಕರಾಮ ಮಾಹಿತಿ ಇತ್ತರು.
ಅಬಕಾರಿ ಇಲಾಖೆಯವರು ಕೇಸು ಹಾಕಿದವರು ಜಾಮೀನು ಪಡೆದುಕೊಂಡು ನಂತರ ಅದೇ ಕಾಯಕವನ್ನು ಮುಂದುವರಿಸುತ್ತಿರುವ ಬಗ್ಗೆ ಸದಸ್ಯರು ಆತಂಕ ವ್ಯಕ್ತಪಡಿಸಿದರು. ಕಳಿಯ ಗ್ರಾಮದಲ್ಲಿ ಅಕ್ರಮ ಮಾರಾಟಗಾರರ ಲಿಸ್ಟ್ ಕೊಟ್ಟಿದೆ, ಗಾಡಿ ನಂಬ್ರ ಕೊಟ್ಟಿದೆ ಆದರೆ ಇಲಾಖೆಯಿಂದ ಯಾವುದೇ ಕ್ರಮ ಇಲ್ಲ ಮಾರುವುದು ನಿಂತಿಲ್ಲ, ಇದೇ ರೀತಿಯಾದರೆ ಗ್ರಾಮಕ್ಕೊಂದು ವೈನ್ ಶಾಪ್ ಕೊಡಿ ಎಂದು ಗ್ರಾ.ಪಂ. ಅಧ್ಯಕ್ಷ ಶರತ್‌ಕುಮಾರ್ ಹೇಳಿದರು. ಅಬಕಾರಿ ಇಲಾಖೆಯವರು ರೈಡ್‌ಗೆ ಹೊರಟಾಗ ಅಕ್ರಮ ಮಾರಾಟಗಾರರಿಗೆ ಇದರ ಮಾಹಿತಿ ಪೋನ್ ಮೂಲಕ ತಲುಪುತ್ತದೆ ಎಂದು ಕೇಶವತಿ ಹೇಳಿದರೆ, ಕಳೆಂಜದಲ್ಲಿ ಇಂದಿಗೂ ಒಂದು ಕಡೆ ಮಾರಾಟ ನಿಂತಿಲ್ಲ ಎಂದು ಸದಸ್ಯ ಸುಶೀಲ ಸಭೆಯ ಗಮನಕ್ಕೆ ತಂದರು. ಪ್ರಕರಣದಲ್ಲಿ ಸಿಕ್ಕಿ ಹಾಕಿಕೊಂಡು ಪುನಃ ಅದೇ ಕಾರ್ಯವನ್ನು ಮುಂದುವರಿಸುವವರ ಮೇಲೆ ಕಠಿಣ ಕ್ರಮಕ್ಕೆ ಸದಸ್ಯರು ಒತ್ತಾಯಿಸಿದರು. ಪದೇ, ಪದೇ ಸಿಕ್ಕಿ ಹಾಕಿಕೊಂಡವರ ಮೇಲೆ ಮೇಲಾಧಿಕಾರಿಗಳ ಆದೇಶದಂತೆ ಗುಂಡಾ ಕಾಯ್ದೆ ಹಾಕಬಹುದು ಎಂದು ತುಕರಾಮ್ ಮಾಹಿತಿ ನೀಡಿದರು.
ಗುರುವಾಯನಕೆರೆ ಪ್ರೌಢ ಶಾಲೆ: ಗುರುವಾಯನಕೆರೆ ಪೌಢ ಶಾಲೆ ಸತತ 6ನೇ ಬಾರಿ ಶೇ 100 ಫಲಿತಾಂಶ ಪಡೆದು ತಾಲೂಕಿಗೆ ಕೀರ್ತಿ ತಂದಿದೆ. ಆದರೆ ಇಲ್ಲಿ ಮುಖ್ಯೋಪಾಧ್ಯಾಯರು ಸೇರಿದಂತೆ ಗಣಿತ ಮತ್ತು ಪಿ.ಟಿ ಮಾಸ್ಟರ್‌ರ ಕೊರತೆ ಇದೆ ಎಂದು ಸದಸ್ಯ ಗೋಪಿನಾಥ ನಾಯಕ್ ಹೇಳಿ ಶಿಕ್ಷಕರ ನೇಮಕ್ಕೆ ಒತ್ತಾಯಿಸಿದರು. ಮಾಲಾಡಿ ಶಾಲೆಯಲ್ಲಿ ಶಿಕ್ಷಕರ ಕೊರತೆ ಬಗ್ಗೆ ಜೊಯೆಲ್ ಸಭೆಗೆ ವಿವರಿಸಿದರು. ಎಸ್.ಸಿ, ಎಸ್.ಟಿ ಮಕ್ಕಳಿಗೆ ಬಸ್‌ಪಾಸ್ ನೀಡಿದಂತೆ ಸರಕಾರ ಇತರ ಎಲ್ಲಾ ಮಕ್ಕಳಿಗೂ ಇದನ್ನು ವಿಸ್ತರಿಸಬೇಕು ಎಂದು ಶಶಿಧರ್ ಕಲ್ಮಂಜ ಆಗ್ರಹಿಸಿದರು. ಕಡಿರುದ್ಯಾವರ ಶಾಲೆಯಲ್ಲಿ ಶಿಕ್ಷಕರ ಕೊರತೆ ಮತ್ತು ಕಜಕೆ ಶಾಲೆಯಲ್ಲಿ 6ನೇ ತರಗತಿ ಆರಂಭಿಸುವ ಬಗ್ಗೆ ಸದಸ್ಯ ಜಯರಾಮ ಒತ್ತಾಯಿಸಿದರು.
ಬೆಳ್ತಂಗಡಿ ತಾಲೂಕಿಗೆ 12 ಕಾಮಗಾರಿಗಳಿಗೆ ಸರಕಾರ ರೂ. 20 ಕೋಟಿ ಮಂಜೂರುಗೊಳಿಸಿದೆ ಎಂದು ಲೋಕೋಪಯೋಗಿ ಇಲಾಖೆಯ ಸಹಾಯಕ ಕಾರ್ಯನಿರ್ವಾಹಕ ಅಭಿಯಂತರರಾದ ಶಿವಪ್ರಸಾದ್ ಮಾಹಿತಿ ನೀಡಿದರು. ಮೆಸ್ಕಾಂನಿಂದ ತಾಲೂಕಿನಲ್ಲಿ 366 ಪರಿವರ್ತಕಗಳನ್ನು ನಿರ್ಮಿಸಲು ರೂ.18.56 ಕೋಟಿ ಅನುದಾನ ಬಿಡುಗಡೆಯಾಗಿ, ಕಾಮಗಾರಿ ಆರಂಭಗೊಂಡಿದೆ ಎಂದು ಸಹಾಯಕ ಕಾರ್ಯನಿರ್ವಹಕ ಅಭಿಯಂತರ ಶಿವಶಂಕರ್ ಸಭೆಗೆ ಮಾಹಿತಿ ನೀಡಿದರು. ಆರ್.ಟಿ.ಇ ಯೋಜನೆಯಲ್ಲಿ ಬೆಳ್ತಂಗಡಿ ತಾಲೂಕಿನಲ್ಲಿ 200ರಲ್ಲಿ 183 ಮಕ್ಕಳು ನೇಮಕಗೊಂಡಿದ್ದಾರೆ.
ಇವರಲ್ಲಿ 176 ಮಂದಿ ಮಕ್ಕಳು ಶಾಲೆಗೆ ಸೇರ್‍ಪಡೆಗೊಂಡಿದ್ದಾರೆ ಎಂದು ಕ್ಷೇತ್ರ ಶಿಕ್ಷಣಾಧಿಕಾರಿಗಳು ಮಾಹಿತಿ ನೀಡಿದರು.
ತಾ.ಪಂ ಕಾರ್ಯ ನಿರ್ವಾಹಣಾಧಿಕಾರಿ ಸಿ.ಆರ್. ನರೇಂದ್ರ ಸ್ವಾಗತಿಸಿದರು. ತಾಲೂಕು ಸಂಯೋಜಕ ಜಯಾನಂದ ವಂದಿಸಿದರು.

Endo sabhe 1

Endo sabheಶೇ. 50 ನಕಲಿ ಎಂಡೋ ಪೀಡಿತರು: ಸಮಗ್ರ ಪರಿಷ್ಕರಣೆಗೆ ಮನವಿ : ಎಂಡೋ ಸಂತ್ರಸ್ಥರ ಪ್ರಥಮ ಹಂತದ ವೈದ್ಯಕೀಯ ಗುರುತಿಸುವಿಕೆ ಪಟ್ಟಿಯಲ್ಲಿ ನೈಜ ಎಂಡೋ ಸಂತ್ರಸ್ಥರಲ್ಲದ ಮಂದಿ ಶೇ. 50 ಸೇರಿಕೊಂಡಿದ್ದಾರೆ. ಅದೆಷ್ಟೋ ಜನ 65 ವರ್ಷ ಪ್ರಾಯದಿಂದಲೂ ಅಧಿಕ ಪ್ರಾಯದವರು, ಪಾರ್ಶ್ವವಾಯು ಪೀಡಿತರು, ಕೋಳಿ ಅಂಕದಲ್ಲಿ ಹಾಗೂ ಅಪಘಾತ ಯಾ ಇನ್ನಿತರ ಕಾರಣಗಳಲ್ಲಿ ಅಂಗವೈಕಲ್ಯತೆ ಗೊಳಗಾದವರನ್ನೂ ಪಟ್ಟಿಗೆ ಸೇರಿಸಿಕೊಳ್ಳಲಾಗಿದೆ. ಇದರಿಂದಾಗಿ ಸರಕಾರದಿಂದ ನೀಡುವ ಎಂಡೋ ಪ್ಯಾಕೇಜ್ ಅರ್ಹರಲ್ಲದವರಿಗೂ ನೀಡಿದಂತಾಗುತ್ತದೆ. ಇದು ಪ್ರಾಮಾಣಿಕ ಎಂಡೋ ಸಂತ್ರಸ್ಥರಿಗೆ ಅನ್ಯಾಯವೆಸಗಿದಂತಾಗಿದ್ದು ಎಂಡೋ ಸಂತ್ರಸ್ಥರ ಪಟ್ಟಿಯನ್ನು ವಿಶೇಷ ಮಾನದಂಡದಲ್ಲಿ ಪುನರ್ ಪರಿಶೀಲನೆ ನಡೆಸಬೇಕು. ಪೀಡಿತರಲ್ಲದವರನ್ನು ತೆಗದುಹಾಕಬೇಕು ಮತ್ತು ನಿಜವಾದ ಸಂತ್ರಸ್ಥರು ಯಾರಿದ್ದಾರೆ ಅವರಿಗೆ ಕೋಟಿ ರೂ ಪರಿಹಾರ ನೀಡಿದರೂ ಸಾಲದು ಎಂದು ದ.ಕ. ಜಿಲ್ಲಾ ಎಂಡೋ ಸಲ್ಫಾನ್ ವಿರೋಧಿ ಹೋರಾಟ ಸಮಿತಿ ಅಧ್ಯಕ್ಷ ಪೀರ್ ಮಹಮ್ಮದ್ ಸಾಹೇಬ್ ಸಭೆಯಲ್ಲಿ ವಿಷಯ ಮಂಡಿಸಿ ಬಳಿಕ ಜಿಲ್ಲಾಧಿಕಾರಿಯವರಿಗೆ ಲಿಖಿತ ಮನವಿ ನೀಡಿದರು.

ಕೊಕ್ಕಡ : ಎಂಡೋ ವಿರೋಧಿ ಹೋರಾಟ ಸಮಿತಿ ಕೊಕ್ಕಡ ಇದರ ನೇತೃತ್ವದಲ್ಲಿ ವಿವಿಧ ಸಂಘ ಸಂಸ್ಥೆಗಳ ಸಹಕಾರದೊಂದಿಗೆ ಇತ್ತೀಚೆಗೆ ಕೊಕ್ಕಡದಲ್ಲಿ ನಡೆದಿದ್ದ ಬೃಹತ್ ಪ್ರತಿಭಟನೆ ಹಾಗೂ ಉಪವಾಸ ಸತ್ಯಾಗ್ರಹದ ವೇಳೆ ಸರಕಾರದ ಕಡೆಯಿಂದ ಜಿಲ್ಲಾಧಿಕಾರಿ ಡಾ| ಕೆ. ಜಿ ಜಗದೀಶ್ ಅವರು ನೀಡಿದ್ದ ಭರವಸೆ ಯಂತೆ ಜೂ.15ರಂದು ಇಲ್ಲಿನ ಅಂಬೇಡ್ಕರ್
ಭವನದಲ್ಲಿ ಜಿಲ್ಲಾ ಮಟ್ಟದ ಅಧಿಕಾರಿಗಳ ಅನುಸರಣಾ ಸಭೆ ನಡೆಸಿದರು. ಸಭೆಯ ನೇತೃತ್ವವನ್ನು ಸ್ವತಃ ಜಿಲ್ಲಾಧಿಕಾರಿ ಡಾ| ಕೆ.ಜಿ ಜಗದೀಶ್ ಅವರೇ ವಹಿಸಿದ್ದರು. ಉಳಿದಂತೆ ಜಿ.ಪಂ ಕಾರ್ಯನಿರ್ವಹಣಾಧಿಕಾರಿ ಡಾ| ಎಂ. ಆರ್ ರವಿ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ| ರಾಮಕೃಷ್ಣ ರಾವ್, ಜಿಲ್ಲಾ ಮಲೇರಿಯಾ ನಿಯಂತ್ರಣಾಧಿಕಾರಿ ಡಾ. ಅರುಣ್, ಕೊಕ್ಕಡ ಗ್ರಾ.ಪಂ. ಅಧ್ಯಕ್ಷ ವಿ.ಜೆ. ಸೆಬಾಸ್ಟಿಯನ್, ಪುತ್ತೂರು ಎಸಿ ರಘುನಂದನ್ ಮೂರ್ತಿ, ಜಿಲ್ಲಾ ವಿದ್ಯಾಂಗ ಉಪನಿರ್ದೇಶಕ ವಾಲ್ಟರ್ ಡಿಮೆಲ್ಲೋ ಸಹಿತ ಅನೇಕ ಮಂದಿ ಜಿಲ್ಲಾ ಮಟ್ಟದ ಅಧಿಕಾರಿಗಳು ವೇದಿಕೆಯಲ್ಲಿದ್ದರು. ಉಳಿದ ಅಧಿಕಾರಿಗಳಿಗೆ ಪ್ರತ್ಯೇಕ ಆಸನ ವ್ಯವಸ್ಥೆ ಮಾಡಲಾಗಿತ್ತು.
ಹೋರಾಟಗಾರರು ಇಟ್ಟಿದ್ದ 20 ಬೇಡಿಕೆಗಳ ಮೇಲೆ ಅನುಸರಣೆಯಾಗಿರುವ ಕಾರ್ಯಗಳ ಬಗ್ಗೆ ಎಜೆಂಡಾ:
ಕೊಕ್ಕಡದ ಎಂಡೋ ವಿರೋಧೀ ಹೋರಾಟಗಾರರು ಮತ್ತು ಸಂತ್ರಸ್ಥರು ಆಡಳಿತ ಮತ್ತು ಸರಕಾರದ ಮುಂದಿಟ್ಟಿದ್ದ ಬೇಡಿಕೆಗಳನ್ನು ಎಂಡೋ ಸಂತ್ರಸ್ಥರ ಕುರಿತಾಗಿ ಜಿಲ್ಲಾ ಮಟ್ಟದಲ್ಲಿ ನಡೆದಿರವ ಅನುಸರಣೆಗಳ ಬಗ್ಗೆ ಸಭೆಯಲ್ಲಿ ಚರ್ಚೆ ನಡೆದು ಸ್ವತಃ ಜಿಲ್ಲಾಧಿಕಾರಿಗಳೇ ಹಂತ ಹಂತವಾಗಿ ವಿಚಾರಗಳನ್ನು ಮುಂದಿಡುತ್ತಾ, ಅದರಂತೆ ಆಯಾಯ ಅಧಿಕಾರಿಗಳ ಅಭಿಪ್ರಾಯ ಪಡೆದು ಆದೇಶಗಳನ್ನು ನೀಡಿದರು. ಪ್ರಾಸ್ತಾವಿಕವಾಗಿ ಮಾತನಾಡಿದ ಜಿಲ್ಲಾಧಿಕಾರಿ ಜಗದೀಶ್ ಅವರು, ಎಂಡೋ ಪೀಡಿತರ ಕೆಲಸ ಸರಕಾರಿ ಆದೇಶವೆಂದು ತಿಳಿಯಬೇಡಿ. ಅವರ ಬಗ್ಗೆ ಎಲ್ಲ ಅಧಿಕಾರಿಗಳೂ ವಿಶೇಷವಾಗಿ ಗಮನ ಹರಿಸಿ ಮಾನವೀಯ ನೆಲೆಯಲ್ಲಿ ಅವರ ಎಲ್ಲಾ ಕೆಲಸ ಕಾರ್ಯಗಳನ್ನು ಯಾವೊಂದೂ ಅಡೆತಡೆಯಿಲ್ಲದೇ ಕ್ಷಿಪ್ರವಾಗಿ ನಡೆಸಿಕೊಡಬೇಕು ಎಂದರು.
ಸರಕಾರದ ಕಾರ್ಯದರ್ಶಿಗೆ ಪತ್ರ:
ತಮ್ಮ ಬೇಡಿಕೆಗಳ ಪೈಕಿ ನನ್ನ ವ್ಯಾಪ್ತಿಯದ್ದನ್ನು ಇಲ್ಲೇ ಪರಿಹರಿಸಿದ್ದು ಉಳಿದ ನಮ್ಮ ಮಿತಿಗಿಂತ ಮೇಲಿನದ್ದನ್ನು ಸವಿವರವಾಗಿ ರಾಜ್ಯಮಟ್ಟದ ಆಯಾಯ ಇಲಾಖಾ ಮುಖ್ಯ ಕಾರ್ಯದರ್ಶಿಯವರಿಗೆ ಲಿಖಿತವಾಗಿ ಬರೆದಿರುವುದಾಗಿ ತಿಳಿಸಿದರು.
ಪ್ರತಿಭಟನಾ ಸಭೆಯಲ್ಲಿ ಹೋರಾಟಗಾರರು ನೀಡಿದ್ದ 20 ಅಂಶಗಳ ಬೇಡಿಕೆಗಳಲ್ಲಿ ಜಿಲ್ಲಾ ಮಟ್ಟದ ಅಧಿಕಾರಿಗಳ ವ್ಯಾಪ್ತಿಯಲ್ಲಿ ಸರಿಪಡಿಸಬಹುದಾದ ವಿಷಯಗಳನ್ನು ಸಮರ್ಪಕವಾಗಿ ಅನುಷ್ಠಾನಕ್ಕೆ ತರುವ ಕಾರ್ಯಕ್ಕೆ ಆಯಾಯ ಇಲಾಖಾಧಿಕಾರಿಗಳ ಮೂಲಕ ಪರಿಹಾರವನ್ನು ಕಂಡುಕೊಳ್ಳಲಾಯಿತು. ಮತ್ತು ಈ ಬಗ್ಗೆ ಜಿಲ್ಲಾಡಳಿತದಿಂದ ಕೈಗೊಳ್ಳಲಾಗಿರುವ ಅನುಸರಣಾ ವರದಿಯನ್ನು ಸಭೆಗೆ ತಿಳಿಸಲಾಯಿತು. ಹಾಗೂ ಎಂಡೋ ಹೋರಾಟಗಾರರು ನೀಡಿದ್ದ ಬೇಡಿಕೆಗಳಲ್ಲಿ ಸರಕಾರ ಮಟ್ಟದಲ್ಲಿ ನಡೆಯಬಹುದಾದ ಕೆಲವು ಕಾರ್ಯಗಳನ್ನು ಸರಕಾರದ ಆಯಾಯ ಇಲಾಖಾ ಮುಖ್ಯ ಕಾರ್ಯದರ್ಶಿಯವರಿಗೆ ಮತ್ತು ಮುಖ್ಯಮಂತ್ರಿಯವರ ಮುಖ್ಯ ಕಾರ್ಯದರ್ಶಿಯವರಿಗೆ ಜಿಲ್ಲಾಧಿಕಾರಿಗಳ ಮೂಲಕ ಬರೆಯಲಾದ ಪತ್ರವನ್ನು ಸಭೆಯಲ್ಲಿ ಓದಿಹೇಳಲಾಯಿತು.
ಸಭೆಯಲ್ಲಿ ಉನ್ನತ ಅಧಿಕಾರಿಗಳೂ ಭಾಗಿ:
ಕೆ ಎಸ್ ಆರ್ ಟಿಸಿ ಪುತ್ತೂರು ಉಪ ವಿಭಾಗದ ನಿಯಂತ್ರಣಾಧಿಕಾರಿ ನಾಗರಾಜ್ ಶಿರಾಲಿ, ಮಂಗಳೂರು ಉಪವಿಭಾಗದ ಎಸಿ, ಸಮಾಜ ಕಲ್ಯಾಣ ಇಲಾಖೆ ಅಧಿಕಾರಿ ಜಿ ಸಂತೋಷ್ ಕುಮಾರ್,ಜಿಲ್ಲಾ ವಾರ್ತಾಧಿಕಾರಿ ಖಾದರ್ ಷಾ, ಜಿಲ್ಲಾ ಮಟ್ಟದ ಸರಕಾರಿ ಅಧಿಕಾರಿಗಳು, ಬೆಳ್ತಂಗಡಿ, ಪುತ್ತೂರು, ಸುಳ್ಯ, ಮಂಗಳೂರು, ಬಂಟ್ವಾಳ ತಾಲೂಕುಗಳ ತಹಶೀಲ್ದಾರುಗಳು ಮತ್ತು ಆರೋಗ್ಯಾಧಿಕಾರಿಗಳು, ಹಾಗೂ ತಾಲೂಕು ಪಂಚಾಯತ್ ಕಾರ್ಯನಿರ್ವಹಣಾಧಿಕಾರಿಗಳು, ತಾಲೂಕು ಮಟ್ಟದ ಇತರ ಎಲ್ಲಾ ಅಧಿಕಾರಿಗಳು ಈ ಸಭೆಯಲ್ಲಿ ಪಾಲ್ಗೊಂಡಿದ್ದರು. ಪೂವಾಜೆ ಕುಶಾಲಪ್ಪ ಗೌಡ, ಗಂಗಾರತ್ನಾ, ಜಾರಪ್ಪ ಗೌಡ ಕೊಕ್ಕಡ, ಯೋಗೀಶ್ ಆಲಂಬಿಲ, ರಾಮಚಂದ್ರ ಭಟ್ ಕುತ್ಲೂರು, ಪಿ.ಕೆ ಅಬ್ದುಲ್ ರಹಿಮಾನ್, ಅಶೋಕ ಗೋಗಟೆ, ಜಾರಪ್ಪ ಗೌಡ, ಕಮಲಾ, ನಾಗರತ್ನ ಮುಂತಾದವರು ಉಪಸ್ಥಿತರಿದ್ದರು.

Hakkupathra vitharaneಬೆಳ್ತಂಗಡಿ: ಕುದುರೆಮುಖ ರಾಷ್ಟ್ರೀಯ ಉದ್ಯಾನವನ ವ್ಯಾಪ್ತಿಯಲ್ಲಿ ಅನೇಕ ವರ್ಷಗಳಿಂದ ವಾಸ್ತವ್ಯವಿದ್ದು ಕೃಷಿ ಮಾಡಿಕೊಂಡಿದ್ದ ಆರು ಕುಟುಂಬಗಳು ಸ್ವಯಂಪ್ರೇರಿತರಾಗಿ ಹೊರಬಂದಿದ್ದು, ಈ ಕುಟುಂಬಗಳಿಗೆ ಸರಕಾರದಿಂದ ಒಟ್ಟು ರೂ. 4,72,16,232 ಪರಿಹಾರದ ಚೆಕ್‌ಅನ್ನು ಜೂ.17ರಂದು ವಿತರಿಸಲಾಯಿತು.
ಬೆಳ್ತಂಗಡಿ ಕ್ಷೇತ್ರದ ಶಾಸಕ ಕೆ. ವಸಂತ ಬಂಗೇರ ಅವರು ನಗರ ಪಂಚಾಯತದಲ್ಲಿ ನಡೆದ ಕಾರ್ಯ ಕ್ರಮದಲ್ಲಿ ಫಲಾನುಭವಿಗಳಿಗೆ ಚೆಕ್ ವಿತರಿಸಿದರು. ಪರಿಹಾರ ಚೆಕ್ ಪಡೆದುಕೊಂಡವರಲ್ಲಿ ಶಿರ್ಲಾಲು ಗ್ರಾಮದ ಎಂಡೇಲು ನಿವಾಸಿ ಶೀನಪ್ಪ ಮಲೆಕುಡಿಯ ರೂ.61,79,292, ಮಲವಂತಿಗೆ ಗ್ರಾಮದ ಎಳನೀರು ಜಿನಚಂದ್ರ ನಾಯಕ್ ರೂ.75,13,104, ಶಿರ್ಲಾಲು ಗ್ರಾಮದ ಎಂಡೇಲು ನಿವಾಸಿ ಗಿರಿಜ ರೂ.35,50,514, ಮಲವಂತಿಗೆ ಗ್ರಾಮದ ಬೊಳ್ಳೆ ನಿವಾಸಿ ಬೋಜಪ್ಪ ಗೌಡ ರೂ.1,08,97,756, ಶಿರ್ಲಾಲು ಗ್ರಾಮದ ಎಂಡೇಲು ಜಾರಪ್ಪ ರೂ.74,37,253, ಮಲವಂತಿಗೆ ಗ್ರಾಮದ ಎಳನೀರು ನಿವಾಸಿ ವೃಷಭರಾಜ್ ರೂ.1,16,38,313.
ಈ ಆರು ಕುಟುಂಬಗಳು ಕುದುರೆಮುಖ ರಾಷ್ಟ್ರೀಯ ಉದ್ಯಾನವನ ವ್ಯಾಪ್ತಿಯಲ್ಲಿ ಹಲವು ವರ್ಷಗಳಿಂದ ವಾಸ್ತವ್ಯವನ್ನು ಹೊಂದಿದ್ದರು. ಇವರು ಸ್ವಂತ ಜಾಗವನ್ನು ಹೊಂದಿದ್ದು, ಅದರಲ್ಲಿ ಕೃಷಿ ಮಾಡಿಕೊಂಡು ಜೀವನ ನಡೆಸುತ್ತಿದ್ದರು. ಇವರು ಉದ್ಯಾನವನ ವ್ಯಾಪ್ತಿಯಿಂದ ಸ್ವಯಂ ಪ್ರೇರಿತವಾಗಿ ಹೊರಬರುವುದಾಗಿ ಸರಕಾರಕ್ಕೆ ಅರ್ಜಿ ಸಲ್ಲಿಸಿದ್ದರು. ಇವರ ಒಟ್ಟು ಜಾಗ, ಜಾಗದಲ್ಲಿ ಬೆಳೆದ ಬೆಳೆ, ಹಾಗೂ ಇನ್ನಿತರ ಸೋತ್ತುಗಳನ್ನು ವಿವಿಧ ಇಲಾಖೆಗಳು ಮೌಲ್ಯಮಾಪನ ನಡೆಸಿ ಹಾಕಿದ ದರದಂತೆ ಸರಕಾರ ಅವರಿಗೆ ಪರಿಹಾರ ಧನ ಮಂಜೂರುಗೊಳಿಸಿತ್ತು. ಈ ಪರಿಹಾರಕ್ಕೆ ತೃಪ್ತಿ ಪಟ್ಟು ಆರು ಕುಟುಂಬಗಳು ಇದೀಗ ತಮ್ಮ ಜಾಗವನ್ನು ಸರಕಾರಕ್ಕೆ ಬಿಟ್ಟು ಕೊಟ್ಟು ಪರಿಹಾರವನ್ನು ಪಡೆದುಕೊಂಡು
ಉದ್ಯಾನವನ ವ್ಯಾಪ್ತಿಯಿಂದ ಹೊರಬಂದಿದೆ.
ಪರಿಹಾರ ವಿತರಣೆ ಸಂದರ್ಭದಲ್ಲಿ ತಹಶೀಲ್ದಾರ್ ತಿಪ್ಪೇಸ್ವಾಮಿ, ಅಕ್ರಮ-ಸಕ್ರಮ ಸಮಿತಿ ಸದಸ್ಯರಾದ ರಾಜಶೇಖರ ಅಜ್ರಿ, ಜಿ.ಪಂ. ಸದಸ್ಯ ಧರಣೇಂದ್ರ ಕುಮಾರ್, ಎ.ಪಿ.ಎಂ.ಸಿ. ಅಧ್ಯಕ್ಷ ಸತೀಶ್ ಕಾಶಿಪಟ್ಣ, ವನ್ಯಜೀವಿ ವಲಯ ಬೆಳ್ತಂಗಡಿ ವಲಯಾರಣ್ಯಾಧಿಕಾರಿ ಕೃಷ್ಣೇ ಗೌಡ, ಉಪವಲಯ ಅರಣ್ಯಾಧಿಕಾರಿ ಪ್ರದೀಪ್, ಅಕ್ರಮ-ಸಕ್ರಮ ಸಮಿತಿ ಸದಸ್ಯರು, ಕಂದಾಯ ಇಲಾಖೆಯ ಅಧಿಕಾರಿ ವರ್ಗದವರು ಉಪಸ್ಥಿತರಿದ್ದರು. ಇದೇ ಸಂದರ್ಭದಲ್ಲಿ ಪ್ರಾಕೃತಿಕ ವಿಕೋಪ ಪರಿಹಾರದ ಚೆಕ್ ಹಾಗೂ ೯೪ಸಿ ಹಕ್ಕುಪತ್ರವನ್ನು ಶಾಸಕರು ಫಲಾನುಭವಿಗಳಿಗೆ ವಿತರಿಸಿದರು.

radamma 2ಕೊಯ್ಯೂರು : ತನ್ನನ್ನು ತನ್ನ ಮಗನೇ ಪೆಟ್ರೋಲ್ ಸುರಿದು ಕೊಲೆಗೆ ಯತ್ನಿಸಿರುವುದಾಗಿ ಕೊಯ್ಯೂರು ಗ್ರಾಮದ ನೆಕ್ಕರೆಕೋಡಿ ನಿವಾಸಿ, ನಿವೃತ್ತ ಮೆಸ್ಕಾಂ ಎಂಜಿನಿಯರ್ ಕೂಸಪ್ಪ ಗೌಡ ಅವರ ಪತ್ನಿ ರಾಧಮ್ಮ (55ವ.) ಅವರು ಸರಕಾರಿ ಆಸ್ಪತ್ರೆಗೆ ದಾಖಲಾಗಿ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.
ಜಾಗದ ತಕರಾರೊಂದಕ್ಕೆ ಸಂಬಂಧಿಸಿದಂತೆ ಈ ಘಟನೆ ನಡೆದು ದಾಗಿ ದೂರಲಾಗಿದೆ. ಆದರೆ ಘಟನೆ ನಡೆದ ಮರುದಿನ ವೀಡಿಯೋವೊಂದು ಬಹಿರಂಗಗೊಂಡಿದ್ದು, ತಾಯಿಯೇ ತನ್ನ ಸೊಸೆ ಹಾಗೂ ಪುಟಾಣಿ ಮಕ್ಕಳ ಮೇಲೆ ದೌರ್ಜನ್ಯವೆಸಗುತ್ತಿರುವ ದೃಶ್ಯಗಳು ಕಂಡು ಬಂದಿದ್ದು ಪ್ರಕರಣಕ್ಕೆ ಟ್ವಸ್ಟ್ ಸಿಕ್ಕಿದೆ.
ರಾಧಮ್ಮ ಅವರ ಹೆಸರಿನಲ್ಲಿ 1.6 ಎಕರೆ ಜಮೀನು ಇದೆ. ಈ ಬಗ್ಗೆ ತಾಯಿ ಮಕ್ಕಳೆಡೆ ವ್ಯಾಜ್ಯವಿದ್ದು ಪಾಲು ವಿಚಾರ ದೂರು ಈಗಾಗಲೇ ನ್ಯಾಯಾಲಯದ ಮೆಟ್ಟಿಲೇರಿದೆ. ಈ ಮಧ್ಯೆ ಪುತ್ರ ಹರೀಶ್ ಅವರು ವೃದ್ದ ತಂದೆ ತಾಯಿಗೆ ದೈಹಿಕ ಮಾನಸಿಕ ಕಿರುಕುಳ ನೀಡುತ್ತಿದ್ದರು ಎಂದು ದೂರಲಾಗಿದೆ. ಜೂ. 18 ರಂದು ಜೆಸಿಬಿ ಮೂಲಕ ಗಡಿಗುರುತು ಮಾಡುವ ಪ್ರಕ್ರೀಯೆ ನಡೆಯುತ್ತಿದ್ದಾಗ ಅಲ್ಲಿಗೆ ಬಂದ ಪುತ್ರ ಹರೀಶ್ ಮತ್ತು ಅವರ ಪತ್ನಿ ಪೆಟ್ರೋಲ್ ಕ್ಯಾನ್‌ನಿಂದ ಪೆಟ್ರೋಲ್ ಸುರಿದು ತಾಯಿಯನ್ನು ಕೊಲೆಗೆ ಯತ್ನಿಸಿದ್ದಾನೆ ಎಂಬುದು ಠಾಣೆಗೆ ಬಂದ ಮಾಹಿತಿ.
ಅಗಲು ಹಾಕಲು ವಿರೋಧ – ಈ ವೇಳೆ ತಾಯಿಂದಲೇ ಎಳೆಯ ಮಕ್ಕಳ ಮೇಲೆ ದೌರ್ಜನ್ಯ :
ಮನೆಯಲ್ಲಿ ಭಾರೀ ಕಿರಿಕಿರಿ ಇದ್ದ ಕಾರಣ ಪುತ್ರ ಹರೀಶ ಪಕ್ಕದಲ್ಲೇ ಶೆಡ್ಡ್‌ನಿರ್ಮಿಸಿ ಬೇರೆಯೇ ವಾಸವಾಗಿದ್ದರು. ವ್ಯಾಜ್ಯ ಮತ್ತು ಗಲಾಟೆ ಹಾಗೆಯೇ ಮುಂದುವರಿಯುತ್ತಿದ್ದ ಭಾಗವಾಗಿ ರವಿವಾರದಂದು ಜೆಸಿಬಿ ಮೂಲಕ ಅಗಳು ಹಾಕುವ ಕಾರ್ಯಕ್ಕೆ ರಾಧಮ್ಮ ಮುಂದಾಗಿದ್ದರು. ಈ ವೇಳೆ ಜೆಸಿಬಿಗೆ ಅಡ್ಡಲಾಗಿ ಸೊಸೆ ಹಾಗೂ ಇಬ್ಬರು ಎಳೆಯ ಮಕ್ಕಳು ನೀಂತಿದ್ದರು. ಈ ವೇಳೆ ಎಳೆಯ ಪ್ರಾಯದ ಇಬ್ಬರು ಮಕ್ಕಳೊಂದಿಗೆ ನಿಂತಿದ್ದ ಸೊಸೆಯ ಬಳಿಗೆ ಬಂದ ಅತ್ತೆ ಮತ್ತು ನಾದಿನಿ ಕೈಯಲ್ಲಿ ಹಿಡಿದಿದ್ದ ಮಗುವನ್ನು ತಾಯಿಯಿಂದ ಕಿತ್ತೆಸೆದಿದ್ದಾರೆ. ಅಳುತ್ತಿದ್ದು ಮಗುವನ್ನು ಪಕ್ಕಕ್ಕೆ ದೂಡಿದ ಇವರು ಬಳಿಕ ಪುಟ್ಟ ಮಗುವನ್ನು ಎತ್ತಿಕೊಂಡು ನಿಂತಿದ್ದ ಮಹಿಳೆಯ ಮೇಲೆ ಹಲ್ಲೆ ನಡೆಸುತ್ತಾರೆ. ಜೋರಾಗಿ ಅಳುತ್ತಿದ್ದ ಮಗುವಿನೊಂ ದಿಗೆ ಆಕೆಯನ್ನು ದೂಡಿ ಹಾಕಿ ಜೆಸಿಬಿ ಹೋಗಲು ಅನುವು ಮಾಡಿಕೊಡು ತ್ತಿರುವ ದೃಶ್ಯಗಳು ಕಂಡುಬಂದಿದೆ.
ಇದೀಗ ಪೊಲೀಸರ ಗಮನಕ್ಕೂ ವಿಚಾರ ಬಂದಿದ್ದು ಪ್ರಕರಣದ ಬಗ್ಗೆ ಮತ್ತಷ್ಟು ತನಿಖೆ ಪ್ರಾರಂಭಿಸಿದ್ದಾರೆ.

dharmastala yoga1

dharmastala yoga4ಧರ್ಮಸ್ಥಳ: ಬಿಎನ್‌ವೈಎಸ್ ಕಾಲೇಜು ಮತ್ತು ಆಸ್ಪತ್ರೆಯ ವತಿಯಿಂದ ಭಾರತ ಸರಕಾರದ ಮೂಲಕ ಮುಂದಿನ ನವಂಬರ್ 21 ರಿಂದ 24ರ ವರೆಗೆ ಶ್ರೀ ಕ್ಷೇತ್ರ ಧರ್ಮಸ್ಥಳದಲ್ಲಿ ಅಂತಾರಾಷ್ಟ್ರೀಯ ಯೋಗ ಸಂಭ್ರಮ ಆಯೋಜಿಲಾಗಿದೆ. ಈ ಮೂರು ದಿನಗಳಲ್ಲಿ ಅಂತಾರಾಷ್ಟ್ರೀಯ ಯೋಗ ಪಟುಗಳು ಶ್ರೀ ಕ್ಷೇತ್ರಕ್ಕೆ ಆಗಮಿಸಲಿದ್ದಾರೆ. ಅವರ ಮುಂದೆ ಯೋಗ ಪ್ರದರ್ಶಿಸುವ ಮತ್ತು ಅವರ ಯೋಗವನ್ನು ನೋಡುವ ಯೋಗ ನಮ್ಮದಾಗಲಿದೆ ಎಂದು ಶ್ರೀ ಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿ ಡಾ| ಡಿ. ವೀರೇಂದ್ರ ಹೆಗ್ಗಡೆಯವರು ಘೋಷಿಸಿದರು.
ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಪ್ರಕೃತಿ ಚಿಕಿತ್ಸಾ ಮತ್ತು ಯೋಗ ವಿಜ್ಞಾನಗಳ ಮಹಾವಿದ್ಯಾಲಯ ಮತ್ತು ಆಸ್ಪತ್ರೆ ಇದರ ವತಿಯಿಂದ ಜೂ. 21 ರಂದು ಧರ್ಮಸ್ಥಳದ ಅಮೃತವರ್ಷಿಣಿ ಸಭಾಂಗಣದಲ್ಲಿ ನಡೆದ 3ನೇ ವಿಶ್ವಯೋಗ ದಿನಾಚರಣೆ-2017 ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡುತ್ತಿದ್ದರು.
ಆನ್‌ಲೈನ್ ಮೂಲಕ ಆರೋಗ್ಯ ಪಡೆಯಲು ಸಾಧ್ಯವಿಲ್ಲ:
ಇಂದು ಎಲ್ಲವನ್ನೂ ಆನ್‌ಲೈನ್ ಪರ್ಚೆಸ್ ಕಾಲ. ಎಲ್ಲವನ್ನೂ ಆನ್‌ಲೈನ್ ಮೂಲಕ ಬುಕ್ಕಿಂಗ್ ಮತ್ತು ಪೇಮೆಂಟ್ ಮಾಡಿ ವಸ್ತುಗಳನ್ನು ಮನೆಬಾಗಿಲಿಗೆ ತರಿಸಿಕೊಳ್ಳಬಹುದು. ಆದರೆ ಆರೋಗ್ಯವನ್ನು ಆನ್‌ಲೈನ್ ಮೂಲಕ ಪಡೆಯಲು ಸಾಧ್ಯವಿಲ್ಲ.
ನಿರಂತರ ಯೋಗಾಭ್ಯಾಸದಿಂದ ದೇಹ, ಮನಸ್ಸು, ಇಂದ್ರಿಯಗಳನ್ನು ನಿಯಂತ್ರಣಕ್ಕೆ ತರಬಹುದು. ಹಿಂದಿನ ಕಾಲದಲ್ಲಿ ಭಾರತ ಹಾವಾಡಿಗರ ದೇಶ ಎಂಬುದಾಗಿ ಕರೆಸಿಕೊಂಡಿತ್ತು. ನಾವೆಲ್ಲಾ ಸಣ್ಣವರಿರುವಾಗ ಬಡ ದೇಶ ಎನ್ನುತ್ತಿದ್ದರು. ಅದೇ ಭಾರತ ಜಗತ್ತಿಗೆ ದೀರ್ಘಾಯುಸ್ಸು ಕೊಡುವ ಯೋಗವನ್ನು ಪ್ರಧಾನಿ ನರೇಂದ್ರ ಮೋದಿಯವರು ಕೊಡುಗೆಯಾಗಿ ನೀಡಿದರು. ಬಡ ಎನ್ನುತ್ತಿದ್ದ ಭಾರತವನ್ನು ಹಿಂದಿಯಲ್ಲಿನ ಬಡಾ (ದೊಡ್ಡ) ದೇಶ ಎಂಬುದಾಗಿ ಮಾಡಿದರು ಎಂದು ಹೆಗ್ಗಡೆಯವರು ವಿಶ್ಲೇಶಿಸಿದರು.
ಆರೋಗ್ಯವಂತ ದೇಹ ಮತ್ತು ಮನಸ್ಸು ಬೇಕು :
ಆಧುನಿಕ ಜೀವನ ಶೈಲಿ, ಅತಿಯಾದ ತಾಂತ್ರಿಕತೆ ಬಳಕೆಯಿಂದ ಮನುಷ್ಯ ಶಕ್ತಿ
ಕಳೆದುಕೊಂಡಿದ್ದಾನೆ. ಎಲ್ಲವನ್ನೂ ರೋಬೋಟ್‌ಗಳು ಮಾಡಿಕೊಡುತ್ತಿದೆ. ಎಲ್ಲರೂ ಹೆಪ್ಪಿ ಮ್ಯಾನ್‌ಗಳಾಗಿದ್ದಾರೆ. ದೇಹವನ್ನು ದಂಡಿಸುವ ಪ್ರವೃತ್ತಿ ಕಡಿಮೆಯಾಗಿದೆ. ದೇಹ, ಮನಸ್ಸು, ಇಂದ್ರಿಯಗಳು ನನ್ನದು ಎಂಬ ಭಾವನೆ ಮೂಡಬೇಕು. ಪ್ರಧಾನಿಯವರ ಸಂದೇಶದಂತೆ ಭಾರತವನ್ನು ಮಧುಮೇಹ ಮುಕ್ತ (ಶುಗರ್ ಕಾಯಿಲೆ), ರೋಗ ಮುಕ್ತ ದೇಶವಾಗಿ ಮಾರ್ಪಾಟು ಮಾಡಬೇಕು ಎಂದರು.
27 ವರ್ಷಗಳ ಹಿಂದೆಯೇ ಆಲೋಚಿಸಲಾಗಿತ್ತು:
ಪಂತಂಜಲಿ ಋಷಿ ಮುನಿಗಳ ಮೂಲಕ ಯೋಗಕ್ಕೆ ಸೂತ್ರ ಬಂತು. ಸುಮಾರು 5 ಸಾವಿರ ವರ್ಷಗಳ ಹಳೆಯದಾದ ಬದುಕಿನ ಅಂತಸತ್ವದ ಯೋಗವನ್ನು ಮೂರು ವರ್ಷಗಳಿಂದ ವಿಶ್ವಮಟ್ಟಕ್ಕೆ ಏರಿಸಿ ದೇಶದ ಕೊಡುಗೆ ನೀಡಲಾಗಿದೆ. ಆದರೆ ಶ್ರೀ ಕ್ಷೇತ್ರ ಧರ್ಮಸ್ಥಳದ ವತಿಯಿಂದ ಸುಮಾರು 27 ವರ್ಷಗಳ ಹಿಂದೆಯೇ ಯೋಗ ಪ್ರಚಾರಕ್ಕಾಗಿ ಸಂಸ್ಥೆಯೊಂದನ್ನು ಕಟ್ಟಿ, ಪ್ರಾರಂಭದಲ್ಲಿ 2500 ಮಂದಿ ಶಿಕ್ಷಕರಿಗೆ ಯೋಗ ತರಬೇತಿ ನೀಡಿ, ಅವರ ಮೂಲಕ ಒಬ್ಬೊಬ್ಬರು 10 ಮಂದಿಗೆ ತರಬೇತಿಯಂತೆ ಲಕ್ಷಾಂತರ ಮಂದಿಗೆ ಯೋಗದ ಸಂದೇಶ ಪ್ರಸಾರವಾಗುವಂತೆ ಮಾಡಲಾಗಿದೆ ಎಂಬುದು ಗಮನಾರ್ಹ ಎಂದರು.
ಯೋಗ ಮಾನಸಿನ ಉದ್ವೇಗ ನಿಯಂತ್ರಣಕ್ಕಿರುವ ಮಾರ್ಗ: ಶ್ಯಾಮ್ ಭಟ್
ಉದ್ಘಾಟನೆ ನೆರವೇರಿಸಿದ ಕರ್ನಾಟಕ ಲೋಕ ಸೇವಾ ಆಯೋಗದ ಅಧ್ಯಕ್ಷ ಶ್ಯಾಮ್ ಭಟ್ ಮಾತನಾಡಿ, ಭಜನೆ, ವಿಶ್ರಾಂತಿ, ನಿದ್ರೆ, ವ್ಯಾಯಾಮ, ಸತ್ಸಂಗ ಇತ್ಯಾಧಿಗಳಿಗೆ ಮನಸ್ಸನ್ನು ನಿಯಂತ್ರಣದಲ್ಲಿಡಲು ಸಾಧ್ಯವಿದ್ದು, ದುಷ್ಟ ಚಿಂತನೆಗಳನ್ನು ನಿಗ್ರಹಿಸಬಹುದು. ಶೀಘ್ರ ವೃದ್ಧಾಪ್ಯ ಮತ್ತು ಅನಾರೋಗ್ಯ ಇಂದಿನ ಪೀಳಿಗೆಯ ಸಮಸ್ಯೆ. ಯೋಗ ಮಾನಸಿಕ ಉದ್ವೇಗ ನಿಯಂತ್ರಣಕ್ಕಿರುವ ಏಕೈಕ ಮಾರ್ಗ ಎಂದರು.
ಮುಖ್ಯ ಅತಿಥಿಯಾಗಿದ್ದ ಕೆನರಾ ಬ್ಯಾಂಕ್ ಮಹಾಪ್ರಬಂಧಕ ರವೀಂದ್ರ ಭಂಡಾರಿ ಮಾತನಾಡಿ, ನಮ್ಮ ಬ್ಯಾಂಕ್‌ನಲ್ಲಿ 1.50 ಸಾವಿರ ಕೋಟಿ ವ್ಯವಹಾರ ನೋಡಿಕೊಳ್ಳುವ ಹೊಣೆಗಾರಿಕೆ ನನ್ನ ಮೇಲಿದ್ದು ಎಷ್ಟು ಒತ್ತಡದ ಕೆಲಸವಾಗಿರಬಹುದೆಂದು ನೀವೇ ಊಹಿಸಿಕೊಳ್ಳಬಹುದು. ಆದರೆ ಪ್ರತಿ ದಿನ ಯೋಗ ಮಾಡುವುದರಿಂದ ಈ ಎಲ್ಲಾ ಒತ್ತಡಗಳನ್ನು ನಾನು ಚೆನ್ನಾಗಿ ನಿಭಾಯಿಸಿಕೊಂಡು ಹೋಗುವಲ್ಲಿ ಯಶಸ್ಸು ಕಂಡಿದ್ದೇನೆ. ಕೆನರಾ ಬ್ಯಾಂಕ್ ಈ ಕಾರ್ಯಕ್ರಮವನ್ನು ಮೆಚ್ಚಿ ನಿಮ್ಮ ಜೊತೆ ಕೈ ಜೋಡಿಸಿದೆ. ಮುಂದೆಯೂ ಅಗತ್ಯ ನೆರವು ನೀಡಲಾಗುವುದು ಎಂದರು.
ರಾಷ್ಟ್ರೀಯ ಸೇವಾ ಯೋಜನಾಧಿಕಾರಿ ಡಾ| ಬಿ. ವಸಂತ ಶೆಟ್ಟಿ ಮಾತನಾಡಿ, ಯೋಗ ವಿಜ್ಞಾನ ಮತ್ತು ತಂತ್ರಜ್ಞಾನ ಕ್ಷೇತ್ರವನ್ನು ಒಂದುಮಾಡುವ ಸಾಧನವಾಗಿದೆ ಎಂದರು. ಇನ್ನೋರ್ವ ಮುಖ್ಯ ಅತಿಥಿ ಬೆಂಗಳೂರು ರಾಷ್ಟ್ರೀಯ ಸೇವಾ ಯೋಜನೆಯ ಪ್ರಾಂತೀಯ ನಿರ್ದೇಶಕ ಅರುಣ್ ಪೂಜಾರ್ ಶುಭ ಕೋರಿದರು.
ವೇದಿಕೆಯಲ್ಲಿ ಹೇಮಾವತಿ ವಿ ಹೆಗ್ಗಡೆ, ಎಸ್‌ಡಿಎಂ ಶಿಕ್ಷಣ ಸಂಸ್ಥೆಗಳ ಕಾರ್ಯದರ್ಶಿ ಹರ್ಷೇಂದ್ರ ಕುಮಾರ್, ಸುಪ್ರಿಯಾ ಹರ್ಷೇಂದ್ರ ಕುಮಾರ್, ಡಾ| ಬಿ ಯಶೋವರ್ಮ, ಯೋಗ ಮತ್ತು ನೈತಿಕ ಶಿಕ್ಷಣ ವಿಭಾಗದ ನಿರ್ದೇಶಕ ಡಾ| ಐ. ಶಶಿಕಾಂತ ಜೈನ್ ಉಪಸ್ಥಿತರಿದ್ದರು.
ಎಸ್‌ಡಿಎಂ ಬಿಎನ್‌ವೈಎಸ್ ಕಾಲೇಜಿನ ಪ್ರಾಂಶುಪಾಲ ಡಾ| ಪ್ರಶಾಂತ್ ಶೆಟ್ಟಿ ಸ್ವಾಗತಿಸಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಶಾಂತಿವನ ಟ್ರಸ್ಟ್ ಕಾರ್ಯದರ್ಶಿ ಸೀತಾರಾಮ ತೋಳ್ಪಾಡಿತ್ತಾಯ ವಂದಿಸಿದರು. ಸಭಾ ಕಾರ್ಯಕ್ರಮಕ್ಕೂ ಮುನ್ನ ನಾಲ್ಕು ವಿ.ವಿ ಗಳ ಸುಮಾರು 500 ರಷ್ಟು ಎನ್‌ಎಸ್‌ಎಸ್ ವಿದ್ಯಾರ್ಥಿಗಳು ಹಾಗೂ ಎಸ್‌ಡಿಎಂ ಶಿಕ್ಷಣ ಸಂಸ್ಥೆಗಳ ವಿದ್ಯಾರ್ಥಿಗಳು, ಆಸಕ್ತರು ಯೋಗ ಪ್ರದರ್ಶನದಲ್ಲಿ ಭಾಗಿಯಾಗಿದ್ದರು.

ujire yoga dinacharaneಉಜಿರೆ : ಮೂರನೇ ವಿಶ್ವ ಯೋಗ ದಿನಾಚರಣೆಯ ಪ್ರಯುಕ್ತ ಇಂದು(ಜೂ. 21) ಉಜಿರೆ ಶ್ರೀ.ಧ.ಮಂ. ಕಾಲೇಜಿನ ಈಜುಕೊಳದ ಈಜು ಪಟುಗಳಿಂದ ಯೋಗ ಪ್ರದರ್ಶನ ನಡೆಯಿತು.
ಸರಳ, ಸುಲಭ ಹಾಗೂ ಪರಿಣಾಮಾಕಾರಿ ಕೆಲವು ಆಸನಗಳನ್ನು ಈಜುಕೊಳದ ತರಬೇತುದಾರರಾದ ಶೀನ ಹಾಗೂ ಚರಣ್‌ರವರು ನಡೆಸಿಕೊಟ್ಟರು. ಈ ಸಂದರ್ಭದಲ್ಲಿ ಉಜಿರೆ ಶ್ರೀ.ಧ.ಮಂ. ಕಾಲೇಜಿನ ಶಾರೀರಿಕ ಶಿಕ್ಷಕ ರಮೇಶ್‌ರವರು ಉಪಸ್ಥಿತರಿದ್ದರು.
ಈಜುಕೊಳದ ಮೊದಲ ಬ್ಯಾಚ್‌ನ ಈಜು ಪಟುಗಳಾದ ಬಂಟರ ಸಂಘದ ಅಧ್ಯಕ್ಷ ರಘುರಾಮ ಶೆಟ್ಟಿ, ಉಜಿರೆ ಶ್ರೀ ದುರ್ಗಾ ಟಿಂಬರ್‍ಸ್‌ನ ಉಮೇಶ್ ಶೆಟ್ಟಿ ಹಾಗೂ ರಮೇಶ ಶೆಟ್ಟಿ, ಸುದ್ದಿ ಪತ್ರಿಕೆಯ ವ್ಯವಸ್ಥಾಪಕ ಮಂಜುನಾಥ ರೈ, ಜೀವ ವಿಮಾ ನಿಗಮದ ಮುಖ್ಯ ಸಲಹೆಗಾರ ಕರುಣಾಕರ ನಾಯಕ್, ವಿನ್ಸೆಂಟ್ ಬೆಳ್ತಂಗಡಿ, ಉದ್ಯಮಿ ನಾಗರಾಜ್, ವೆಂಕಟೇಶ್, ಬೆಳ್ತಂಗಡಿ ಶಾರದಾ ನೇತ್ರಾ ಚಿಕಿತ್ಸಾಲಯದ ವಿಲಿಯಂ ಡಿಸೋಜ, ಬೆಳ್ತಂಗಡಿ ಬಿರ್ಮೊಟ್ಟು ಮೋಟಾರ್ ಲಿಂಕ್ಸ್‌ನ ಬಾಲಕೃಷ್ಣ ಹಾಗೂ ಮಕ್ಕಳು ಸೇರಿ ಸುಮಾರು ೫೦ಜನರಿಂದ ಯೋಗ ಪ್ರದರ್ಶನ ನಡೆಯಿತು.

krushi abiyana 1

krushi abiyanaಬೆಳ್ತಂಗಡಿ : ದ.ಕ. ಜಿಲ್ಲಾ ಪಂಚಾಯತ್, ಕರ್ನಾಟಕ ಸರಕಾರ, ಕೃಷಿ ಇಲಾಖೆಗಳ ಸಹಯೋಗದೊಂದಿಗೆ ಬೆಳ್ತಂಗಡಿ ಹೋಬಳಿಯ ಕೃಷಿ ಅಭಿಯಾನದ ಉದ್ಘಾಟನೆಯು ಇಂದು(ಜೂ. 19) ಬೆಳ್ತಂಗಡಿ ಅಂಬೇಡ್ಕರ್ ಭವನದಲ್ಲಿ ಜರಗಿತು.
ಕಾರ್ಯಕ್ರಮವನ್ನು ಶಾಸಕ ಕೆ.ವಸಂತ ಬಂಗೇರ ಉದ್ಘಾಟಿಸಿದರು. ಅಧ್ಯಕ್ಷತೆಯನ್ನು ತಾ.ಪಂ ಅಧ್ಯಕ್ಷೆ ಶ್ರೀಮತಿ ದಿವ್ಯಜ್ಯೋತಿ ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ಕುವೆಟ್ಟು ಕ್ಷೇತ್ರ ಜಿ.ಪಂ ಸದಸ್ಯೆ ಶ್ರೀಮತಿ ಮಮತಾ ಎಂ. ಶೆಟ್ಟಿ, ಲಾಯಿಲ ಕ್ಷೇತ್ರ ಜಿ.ಪಂ ಸದಸ್ಯೆ ಶ್ರೀಮತಿ ಸೌಮ್ಯಲತಾ ಜಯಂತ ಗೌಡ, ತಾ.ಪಂ ಉಪಾಧ್ಯಕ್ಷೆ ಶ್ರೀಮತಿ ವೇದಾವತಿ, ಮುಂಡಾಜೆ ಕ್ಷೇತ್ರ ತಾ.ಪಂ ಸದಸ್ಯೆ ಶ್ರೀಮತಿ ಲೀಲಾವತಿ, ನೆರಿಯ ಕ್ಷೇತ್ರ ತಾ.ಪಂ ಸದಸ್ಯ ವಿ.ಟಿ. ಸೆಬಾಸ್ಟಿನ್, ಕುವೆಟ್ಟು ಕ್ಷೇತ್ರ ತಾ.ಪಂ ಸದಸ್ಯ ಜಿ. ಗೋಪಿನಾಥ್ ನಾಯಕ್, ಬೆಳ್ತಂಗಡಿ ಕೃಷಿಕ ಸಮಾಜದ ಅಧ್ಯಕ್ಷ ಮಹಾವೀರ ಜೈನ್, ಪುತ್ತೂರು ಉಪವಿಭಾಗ ಉಪಕೃಷಿ ನಿರ್ದೇಶಕ ಮಂಜುನಾಥ ಡಿ.ಟಿ., ಬೆಳ್ತಂಗಡಿ ತಾ.ಪಂ. ಕಾರ್ಯನಿರ್ವಾಹಣಾಧಿಕಾರಿ ನರೇಂದ್ರ ಸಿ.ಆರ್. ಉಪಸ್ಥಿತರಿದ್ದರು.

sdmಜರ್ಮನಿಯ ಬರ್ಲಿನ್ ನಗರದಲ್ಲಿ ನಡೆದ ಯುರೋಪಿಯನ್ ಫೌಂಡೇಶನ್ ಫಾರ್ ಮ್ಯಾನೇಜ್‌ಮೆಂಟ್ ಡೆವೆಲಪ್‌ಮೆಂಟ್ (EFMD) ವಾರ್ಷಿಕ ಸಮ್ಮೇಳನದಲ್ಲಿ ವಿಶೇಷ ಸಮಾರಂಭದಲ್ಲಿ ಎಸ್.ಡಿ.ಎಂ. ಐ.ಎಂ.ಡಿ.ಯ ಪಿ.ಜಿ.ಡಿ.ಎಂ. ಶಿಕ್ಷಣಕ್ಕೆ ಇ-ಪಾಸ್ (Education Policy and Accreditation Standard) ಮಾನ್ಯತೆ ನೀಡಲಾಯಿತು.
ಜೂನ್ ೮ ರಂದು ನಡೆದ ಸಮಾರಂಭದಲ್ಲಿ ಸಂಸ್ಥೆಯ ಆಡಳಿತ ಮಂಡಳಿಯ ಉಪಾಧ್ಯಾಕ್ಷ ಡಿ. ಸುರೇಂದ್ರ ಕುಮಾರ್ ಮತ್ತು ಸಂಸ್ಥೆಯ ನಿರ್ದೇಶಕ ಡಾ. ಎನ್. ಆರ್. ಪರಶುರಾಮನ್ ಅವರು ಬರ್ಲಿನ್‌ನಲ್ಲಿ ಮಾನ್ಯತಾ ಪತ್ರವನ್ನು ಸ್ವೀಕರಿಸಿದರು.

Radhaಬೆಳ್ತಂಗಡಿ : ಮಗನೊಬ್ಬ ಹೆತ್ತ ತಾಯಿಯ ಮೇಲೆ ಪೆಟ್ರೋಲ್ ಸುರಿದು ಬೆಂಕಿ ಹಂಚಲು ಪ್ರಯತ್ನ ನಡೆಸಿ ಗಂಭೀರವಾಗಿ ಹಲ್ಲೆ ನಡೆಸಿದ ಘಟನೆ ಜೂ. 18ರಂದು ಕೊಯ್ಯೂರು ಗ್ರಾಮದ ನೆಕ್ಕರೆಕೋಡಿ ಎಂಬಲ್ಲಿ ವರದಿಯಾಗಿದೆ. ಕೊಯ್ಯೂರು ಗ್ರಾಮದ ನೆಕ್ಕರೆಕೋಡಿ ಎಂಬಲ್ಲಿ ವಾಸವಾಗಿರುವ, ಮೆಸ್ಕಾಂ ನಿವೃತ್ತ ಸಹಾಯಕ ಇಂಜಿನಿಯರ್ ಕೂಸಪ್ಪ ಗೌಡ ಎಂಬವರ ಪತ್ನಿ ರಾಧಮ್ಮ (55ವ) ಎಂಬವರು ಗಂಭೀರವಾಗಿ ಗಾಯಗೊಂಡವರು. ಇವರ ಮಗ ಹರೀಶ್ ಗೌಡ ಮತ್ತು ಆತನ ಪತ್ನಿ ದಿವ್ಯಪ್ರಭಾ ಎಂಬವರು ಸೇರಿಕೊಂಡು ರಾಧಮ್ಮರವರ ಮೇಲೆ ಹಲ್ಲೆ ನಡೆಸಿದಲ್ಲದೆ ಪೆಟ್ರೋಲ್ ಸುರಿದು ಬೆಂಕಿ ಹಚ್ಚಲು ಪ್ರಯತ್ನ ನಡೆಸಿರುವ ಧುರುಳರು. ಘಟನೆಯಿಂದ ಗಂಭೀರವಾಗಿ ಗಾಯಗೊಂಡಿರುವ ರಾಧಮ್ಮರವರನ್ನು ಬೆಳ್ತಂಗಡಿ ತಾಲೂಕು ಆಸ್ಪತ್ರೆಗೆ ಸೇರಿಸಲಾಗಿದೆ. ಬೆಳ್ತಂಗಡಿ ಪೋಲಿಸ್ ಠಾಣೆಯಲ್ಲಿ ಈ ಬಗ್ಗೆ ಪ್ರಕರಣ ದಾಖಲಾಗಿದ್ದು, ತನಿಖೆ ನಡೆಸಲಾಗುತ್ತಿದೆ.

ಉಜಿರೆ : ಧರ್ಮಸ್ಥಳದಲ್ಲಿ ಡಿ. ವೀರೇಂದ್ರ ಹೆಗ್ಗಡೆಯವರ ಅಧ್ಯಕ್ಷತೆಯಲ್ಲಿ ಜೂ.16ರಂದು ನಡೆದ ಅಖಿಲ ಕರ್ನಾಟಕ ಜನಜಾಗೃತಿ ವೇದಿಕೆ ಕಾರ್ಯಕಾರಿ ಮಂಡಳಿ ಸಭೆಯಲ್ಲಿ ಮದ್ಯ ಮುಕ್ತ ಕರ್ನಾಟಕ ರೂಪಿಸುವ ಬಗ್ಗೆ ಸರ್ಕಾರಕ್ಕೆ ಒತ್ತಡ ಹೇರಲು ನಿರ್ಧರಿಸಲಾಯಿತು.
ರಾಜ್ಯದ 23 ವೇದಿಕೆಗಳ 120 ಪದಾಧಿಕಾರಿಗಳು ಸಭೆಯಲ್ಲಿ ಭಾಗವಹಿಸಿದರು.
ಜನಜಾಗೃತಿ ವೇದಿಕೆಯ ರಾಜ್ಯಾಧ್ಯಕ್ಷ ಸತೀಶ್ ಹೊನ್ನವಳ್ಳಿ, ನಿರ್ದೇಶಕ ವಿವೇಕ್ ವಿ. ಪಾಯಸ್, ಕೆ. ವಸಂತ ಸಾಲಿಯಾನ್, ದೇವದಾಸ್ ಹೆಬ್ಬಾರ್ ಉಪಸ್ಥಿತರಿದ್ದರು.

swamiji betiತಮಿಳುನಾಡಿನ ನಾಗಪಟ್ನಂ ಜಿಲ್ಲೆಯ ಪೂಜ್ಯ ಶ್ರೀ ಅಂಬಾಲವನ ದೇಶಿಕ ಸ್ವಾಮೀಜಿ ಜೂ. 16 ರಂದು ಧರ್ಮಸ್ಥಳಕ್ಕೆ ಬಂದು ದೇವರ ದರ್ಶನ ಮಾಡಿದರು. ಬಳಿಕ ಧರ್ಮಾಧಿಕಾರಿ ಡಿ. ವೀರೇಂದ್ರ ಹೆಗ್ಗಡೆಯವರು ಸ್ವಾಮೀಜಿಯರನ್ನು ಗೌರವಿಸಿದರು.

praneethಮಾಲಾಡಿ ಗ್ರಾಮದ ಉರೆಸಾಗು ಶ್ರೀದುರ್ಗಾ ಕೃಪಾ ಮನೆಯ ಶ್ರೀನಿವಾಸ ಮತ್ತು ಶ್ರೀಮತಿ ಸುಜಾತ ದಂಪತಿಗಳ ಪುತ್ರ ಪ್ರಣೀತ್ ನ 2ನೇ ವರ್ಷದ ಹುಟ್ಟುಹಬ್ಬವನ್ನು ಮೇ. 28ರಂದು ಆಚರಿಸಲಾಯಿತು.

sakshi sಧರ್ಮಸ್ಥಳ: ಇಲ್ಲಿನ ಗಿರಿಕೋರೆ ನಿವಾಸಿ ಸುರೇಂದ್ರ ಮತ್ತು ವಿದ್ಯಾ ದಂಪತಿ ಪುತ್ರಿ ಸಾಕ್ಷಿ ಎಸ್ ಅವರ ಎರಡನೇ ವರ್ಷದ ಹುಟ್ಟುಹಬ್ಬ ಜೂ. 16 ರಂದು ಜರುಗಲಿದೆ.

aashifa a rಮುಂಡಾಜೆ ಗ್ರಾಮದ ಮುಬಾರಕ್ ಕಾಟೇಜ್ ನಿವಾಸಿ, ಸುದ್ದಿ ಪತ್ರಿಕೆ ವರದಿಗಾರ ಅಚ್ಚು ಮುಂಡಾಜೆ ಮತ್ತು ಆಶಿಕಾ ದಂಪತಿ ಪುತ್ರಿ ಆಶಿಫಾ ಎ. ಆರ್ ಅವರ 5 ನೇ ವರ್ಷದ ಹುಟ್ಟುಹಬ್ಬವನ್ನು ಜೂ. 14 ರಂದು ಆಚರಿಸಲಾಯಿತು.

astinಹುಣ್ಸೆಕಟ್ಟೆ ಗ್ರಾಮದ ಸಾಲೊಮ್ ಮನೆಯ ಲ್ಯಾನ್ಸಿ ಸೀಸಿಲಿಯಾ ದಂಪತಿಯ ಪುತ್ರ ಆಸ್ಟಿನ್‌ನ 8ನೇ ವರುಷದ ಹುಟ್ಟುಹಬ್ಬವನ್ನು ಜೂ.9 ರಂದು ಆಚರಿಸಲಾಯಿತು.

surendra-bhavyaಪಡಂಗಡಿ ಗ್ರಾಮದ ಬೋಳ ಮನೆಯ ಕೃಷಿಕರಾದ ಚೆನ್ನಪ್ಪ ಅಂಚನ್ ಮತ್ತು ಶ್ರೀಮತಿ ಬೇಬಿ ದಂಪತಿಗಳ ಪುತ್ರ ಗುರುವಾಯನಕೆರೆ ಪಿಲಿಚಾಮುಂಡಿ ಕಲ್ಲು ಲುಕ್‌ಸ್ಮಾರ್ಟ್ ಟೈಲರ್ ಶಾಪ್‌ನ ಮಾಲಕ ಸುರೇಂದ್ರ ಕುಮಾರ್‌ರವರ ವಿವಾಹ ನಿಶ್ಚಿತಾರ್ಥವು ತೆಂಕಕಾರಂ ದೂರು ಗ್ರಾಮದ ಶಿವಾನುಗ್ರಹ ಮನೆಯ ರಮೇಶ್ ಬಂಗೇರ ಮತ್ತು ಶ್ರೀಮತಿ ವೇದಾವತಿ ಯವರ ಪುತ್ರಿ ಭವ್ಯರೊಂದಿಗೆ ವಧುವಿನ ಮನೆಯಲ್ಲಿ ಜೂ.11 ರಂದು ಜರಗಿತು.

prashanth1ಬೆಳ್ತಂಗಡಿ : ಜೂ. 8 ರಂದು ಬೈಕಿನಲ್ಲಿ ತೆರಳುತ್ತಿರುವ ಸಂದರ್ಭ ಗೇರುಕಟ್ಟೆ ಸಮೀಪ ಮಾರುತಿ ಶಿಫ್ಟ್ ಕಾರು ಡಿಕ್ಕಿ ಹೊಡೆದು ಗಂಭೀರ ಗಾಯಗೊಂಡ ಪ್ರಶಾಂತ್ ದೊಂಡೋಲೆ (24ವ) ಅವರು ನಿನ್ನೆ ಚಿಕಿತ್ಸೆ ಫಲಕಾರಿಯಾಗದೆ ಮಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ನಿಧನ ಹೊಂದಿದ್ದಾರೆ.

jana samparka sabheಧರ್ಮಸ್ಥಳ : ಕ.ರಾ.ರ. ಸಾರಿಗೆ ಸಂಸ್ಥೆ ಧರ್ಮಸ್ಥಳ ಘಟಕದಲ್ಲಿ ಇಂದು (ಜೂ.16) ಧರ್ಮಸ್ಥಳ ಘಟಕ ವ್ಯಾಪ್ತಿಯ ಸಾರ್ವಜಿನಿಕರ ಜನಸಂಪರ್ಕ ಸಭೆ ನಡೆಯಿತು.

koyyuruಬೆಳ್ತಂಗಡಿ : ಲಾಯಿಲ ಕೊಯ್ಯೂರು ಕ್ರಾಸ್ ಬಳಿಯ ಮಹಾದೇವಿ ಮರದ ಮಿಲ್ಲಿನಲ್ಲಿ ಲಾರಿಯಿಂದ ಮರ ಇಳಿಸುತಿದ್ದ ಸಂದರ್ಭ ಲಾರಿಯ ಮೇಲಿಂದ ಜಾರಿ ಉಜಿರೆ  ಅತ್ತಾಜೆ ನಿವಾಸಿ ಕೊರಗಪ್ಪ (66ವ) ಎಂಬ ಕೂಲಿ ಕಾರ್ಮಿಕ ತಲೆಗೆ ಗಂಭೀರ ಗಾಯಗೂಂಡು ಆಸ್ಪತ್ರೆಗೆ ಸಾಗಿಸುವ ದಾರಿ ಮದ್ಯೆ ಸಾವನ್ನಪ್ಪಿದ್ದಾರೆ.

ಆಧಾರ್ ಜೊತೆ ಪಾನ್ ಕಾರ್ಡ್ ಲಿಂಕ್ ಕಡ್ಡಾಯ

ಆಧಾರ್ ಜೊತೆ ಪಾನ್ ಕಾರ್ಡ್ ಲಿಂಕ್ ಕಡ್ಡಾಯ

Monday, April 10th, 2017 | Suddi Belthangady | no responses ಪಾನ್ ಕಾರ್ಡ್ ಸಂಖ್ಯೆಯನ್ನು ಆಧಾರ್ ಜತೆ ಲಿಂಕ್ ಮಾಡಬೇಕು ಎಂದು ತೆರಿಗೆ ಇಲಾಖೆ… ಮುಂದೆ ಓದಿ

ಮೈತ್ರಿ ಕೇಂದ್ರಗಳನ್ನು ಸ್ಥಾಪಿಸಲು ತರಬೇತಿಗಾಗಿ ಅರ್ಜಿ ಆಹ್ವಾನ

Friday, February 10th, 2017 | Suddi Belthangady | no responses ಬೆಳ್ತಂಗಡಿ : ಭಾರತ ಸರಕಾರದ ಕೇಂದ್ರ ಪುರಸ್ಕೃತ ರಾಷ್ಟ್ರೀಯ ಜಾನುವಾರು ತಳಿ ಅಭಿವೃದ್ಧಿ… ಮುಂದೆ ಓದಿ

ಜ.31 ಮತ್ತು ಫೆ.03ರಂದು ವಿದ್ಯುತ್ ನಿಲುಗಡೆ

ಜ.31 ಮತ್ತು ಫೆ.03ರಂದು ವಿದ್ಯುತ್ ನಿಲುಗಡೆ

Monday, January 30th, 2017 | Suddi Belthangady | no responses ಬೆಳ್ತಂಗಡಿ : ಗುರುವಾಯನಕೆರೆ, ಬೆಳ್ತಂಗಡಿ, ಧರ್ಮಸ್ಥಳ ವಿದ್ಯುತ್ ಲೈನ್‌ನಲ್ಲಿ ತುರ್ತುಕಾಮಗಾರಿಯನ್ನು ಕೈಗೊಳ್ಳಬೇಕಾದ ಹಿನ್ನಲೆಯಲ್ಲಿ… ಮುಂದೆ ಓದಿ

ಜ. 15: ವಿಕಲ ಚೇತನರ ಉಚಿತ ತಪಾಸಣೆ-ಫಲಾನುಭವಿಗಳ ಆಯ್ಕೆ

Friday, January 13th, 2017 | Suddi Belthangady | no responses ವೇಣೂರು : ವಿವಿಧ ಸಂಘ ಸಂಸ್ಥೆಗಳ ಸಹಯೋಗದೊಂದಿಗೆ ವಿಕಲ ಚೇತನರ ಉಚಿತ ತಪಾಸಣೆ… ಮುಂದೆ ಓದಿ

ಜ.13ರಂದು ವಿದ್ಯುತ್ ನಿಲುಗಡೆ

ಜ.13ರಂದು ವಿದ್ಯುತ್ ನಿಲುಗಡೆ

Thursday, January 12th, 2017 | Suddi Belthangady | no responses ಗುರುವಾಯನಕೆರೆ, ಬೆಳ್ತಂಗಡಿ, ಧರ್ಮಸ್ಥಳ ವಿದ್ಯುತ್ ಲೈನ್‌ನಲ್ಲಿ ತುರ್ತು ಕಾಮಗಾರಿಯನ್ನು ಕೈಗೊಳ್ಳಬೇಕಾದ ಹಿನ್ನಲೆಯಲ್ಲಿ ಜ.13ರಂದು… ಮುಂದೆ ಓದಿ

ಸಹಕಾರ ಡಿಪ್ಲೋಮಾ  ತರಬೇತಿಗೆ ಅರ್ಜಿ ಆಹ್ವಾನ

ಸಹಕಾರ ಡಿಪ್ಲೋಮಾ ತರಬೇತಿಗೆ ಅರ್ಜಿ ಆಹ್ವಾನ

Friday, December 16th, 2016 | Suddi Belthangady | no responses ಬೆಳ್ತಂಗಡಿ : ಕರ್ನಾಟಕ ಇನ್ಸ್‌ಟ್ಯೂಟ್ ಆಫ್ ಕೋ ಆಪರೇಟಿವ್ ಮನೇಜ್‌ಮೆಂಟ್ ಮೂಡಬಿದಿರೆ ತರಬೇತಿ… ಮುಂದೆ ಓದಿ

ಗುರುವಾಯನಕೆರೆ : 11 ಕೆವಿ ಫೀಡರ್‌ಗಳಲ್ಲಿ ತುರ್ತು ಪಾಲನಾ ಕಾಮಗಾರಿ, ಸಂಜೆ 5ರ ತನಕ ವಿದ್ಯುತ್ ನಿಲುಗಡೆ

Friday, December 2nd, 2016 | Suddi Belthangady | no responses ಗುರುವಾಯನಕೆರೆ :11 ಕೆವಿ ಫೀಡರ್‌ಗಳಲ್ಲಿ ತುರ್ತು ಪಾಲನಾ ಕಾಮಗಾರಿ ಕೈಗೊಳ್ಳಬೇಕಾಗಿರುವುದರಿಂದ ಇಂದು ಸಂಜೆ… ಮುಂದೆ ಓದಿ

ನ.27: ಪಿ.ಎಸ್.ಐ ಲಿಖಿತ ಪರೀಕ್ಷೆ

ನ.27: ಪಿ.ಎಸ್.ಐ ಲಿಖಿತ ಪರೀಕ್ಷೆ

Thursday, November 24th, 2016 | Suddi Belthangady | no responses ಪೊಲೀಸ್ ಸಬ್ ಇನ್ಸ್‌ಪೆಕ್ಟರ್ (ಸಿವಿಲ್) ಹುದ್ದೆಗೆ ಲಿಖಿತ ಪರೀಕ್ಷೆಯನ್ನು ನ.೨೭ರಂದು ನಡೆಸಲು ತೀರ್ಮಾನಿಸಲಾಗಿದೆ.… ಮುಂದೆ ಓದಿ

 ಟಿ.ಇ.ಟಿ ಮುಂದೂಡಿಕೆ

 ಟಿ.ಇ.ಟಿ ಮುಂದೂಡಿಕೆ

Thursday, November 24th, 2016 | Suddi Belthangady | no responses ಪ್ರಸಕ್ತ ಸಾಲಿನ ಶಿಕ್ಷಕರ ಅರ್ಹತಾ ಪರೀಕ್ಷೆ ಮುಂದೂಡಲಾಗಿದೆ. ಡಿ.18ರಂದು ನಿಗದಿಯಾಗಿದ್ದ ಪರೀಕ್ಷೆಯನ್ನು 2017ರ… ಮುಂದೆ ಓದಿ

ಮೊರಾರ್ಜಿ ದೇಸಾಯಿ ವಸತಿ ಶಾಲೆಗಳಿಗೆ 6ನೇ ತರಗತಿ ಪ್ರವೇಶಕ್ಕಾಗಿ ಅರ್ಜಿ ಆಹ್ವಾನ

Thursday, November 10th, 2016 | Suddi Belthangady | no responses ಬೆಳ್ತಂಗಡಿ : ತಾಲೂಕಿನ ಮಚ್ಚಿನ, ಮುಂಡಾಜೆ ಮೊರಾರ್ಜಿ ದೇಸಾಯಿ ವಸತಿ ಶಾಲೆಗಳಲ್ಲಿ 6ನೇ… ಮುಂದೆ ಓದಿ

ಬಾರ್ಯ ಕೃಷಿ ಪತ್ತಿನ ಸಹಕಾರಿ ಸಂಘ  ನಿರ್ದೇಶಕರ ವಜಾ ಆದೇಶಕ್ಕೆ ಹೈಕೋರ್ಟು ತಡೆ

Thursday, October 13th, 2016 | Suddi Belthangady | no responses ಬಾರ್ಯ: ಬಾರ್ಯ ಕೃಷಿ ಪತ್ತಿನ ಸಹಕಾರಿ ಸಂಘದ ಎಲ್ಲಾ ನಿರ್ದೇಶಕರುಗಳನ್ನು ಅನರ್ಹಗೊಳಿಸಿ ಪುತ್ತೂರು… ಮುಂದೆ ಓದಿ

ಕೊಳವೆ ಬಾವಿ ಕೊರೆಯುವುದಕ್ಕೆ ಸರಕಾರ ತಡೆ ನೀಡಿ ಆದೇಶ

Thursday, October 13th, 2016 | Suddi Belthangady | no responses 1.ಮಳೆ ಪ್ರಮಾಣ ಇಳಿಕೆ
2. ಅಂತರ್ಜಲ ಮಟ್ಟ ಕುಸಿತ
3. ಎಂಟುನೂರು ಅಡಿ ಮುಂದೆ ಓದಿ

ಕರ್ನಾಟಕ ರಾಜ್ಯ ಪೊಲೀಸ್ ಇಲಾಖೆ ಆರ್ಜಿ ಆಹ್ವಾನ

ಕರ್ನಾಟಕ ರಾಜ್ಯ ಪೊಲೀಸ್ ಇಲಾಖೆ ಆರ್ಜಿ ಆಹ್ವಾನ

Friday, September 23rd, 2016 | Suddi Belthangady | no responses ಕರ್ನಾಟಕ ರಾಜ್ಯ ಪೊಲೀಸ್ ಇಲಾಖೆಯಲ್ಲಿ ಖಾಲಿ ಇರುವ ಒಟ್ಟು 1834 ಸಶಸ್ತ್ರ ಪೊಲೀಸ್… ಮುಂದೆ ಓದಿ

ಮಡಂತ್ಯಾರ್‌ : ಉಚಿತ ಮೇವಿನ ಬೀಜ ಲಭ್ಯ

ಮಡಂತ್ಯಾರ್‌ : ಉಚಿತ ಮೇವಿನ ಬೀಜ ಲಭ್ಯ

Saturday, September 3rd, 2016 | Suddi Belthangady | no responses ಮಡಂತ್ಯಾರ್‌ : ಉತ್ತಮ ತಳಿಯ ಮೇವಿನ ಬೀಜ ಉಚಿತವಾಗಿ ಪಶುಚಿಕಿತ್ಸಾಲಯ ಮಡಂತ್ಯಾರ್‌ನಲ್ಲಿ ಲಭ್ಯವಿದ್ದು,… ಮುಂದೆ ಓದಿ

ಜೀವ ವಿಮಾ ನಿಗಮ 60ನೇ ವರ್ಷಾಚರಣೆ ವಿಮಾ ಸಪ್ತಾಹ ಉದ್ಘಾಟನೆ

Thursday, September 1st, 2016 | Suddi Belthangady | no responses ಬೆಳ್ತಂಗಡಿ : ಭಾರತೀಯ ಜೀವ ವಿಮಾ ನಿಗಮ ಪ್ರಾರಂಭವಾಗಿ 60ನೇ ವರ್ಷಕ್ಕೆ ಪಾದಾರ್ಪಣೆ… ಮುಂದೆ ಓದಿ

ತೋಟಗಾರಿಕಾ ಇಲಾಖೆ : ಯಾಂತ್ರೀಕರಣ ಕಾರ‍್ಯಕ್ರಮಕ್ಕೆ ಅರ್ಜಿ ಆಹ್ವಾನ

Saturday, August 27th, 2016 | Suddi Belthangady | no responses ಬೆಳ್ತಂಗಡಿ : 2016-17ನೇ ಸಾಲಿನ ರಾಷ್ಟ್ರೀಯ ಕೃಷಿ ವಿಕಾಸ ಯೋಜನೆಯಡಿ ತೋಟಗಾರಿಕೆಯಲ್ಲಿ ಯಾಂತ್ರೀಕರಣ… ಮುಂದೆ ಓದಿ

ಬೆಳ್ತಂಗಡಿ : ಸಹಾಯಕಿಯರ ಹುದ್ದೆಗೆ ಅರ್ಜಿ ಆಹ್ವಾನ

Saturday, August 13th, 2016 | Suddi Belthangady | no responses ಬೆಳ್ತಂಗಡಿ : ಬೆಳ್ತಂಗಡಿ ತಾ| ಶಿಶು ಅಭಿವೃದ್ಧಿ ಯೋಜನಾ ವ್ಯಾಪ್ತಿಯಲ್ಲಿ ಕಾಲಿ ಇರುವ… ಮುಂದೆ ಓದಿ

ಬೆಳ್ತಂಗಡಿ : ವಿದ್ಯಾರ್ಥಿವೇತನ ಅರ್ಜಿ ಆಹ್ವಾನ

ಬೆಳ್ತಂಗಡಿ : ವಿದ್ಯಾರ್ಥಿವೇತನ ಅರ್ಜಿ ಆಹ್ವಾನ

Saturday, August 13th, 2016 | Suddi Belthangady | no responses ಬೆಳ್ತಂಗಡಿ : 1ರಿಂದ 10ನೇ ತರಗತಿಯವರೆಗೆ ವಿದ್ಯಾಭ್ಯಾಸ ಮಾಡುತ್ತಿರುವ ಬೀಡಿ ಕಾರ್ಮಿಕರ ಮಕ್ಕಳಿಗೆ… ಮುಂದೆ ಓದಿ

ಬೆಳ್ತಂಗಡಿ : ಪಶುಭಾಗ್ಯ ಯೋಜನೆ ಅರ್ಜಿ ಆಹ್ವಾನ

ಬೆಳ್ತಂಗಡಿ : ಪಶುಭಾಗ್ಯ ಯೋಜನೆ ಅರ್ಜಿ ಆಹ್ವಾನ

Friday, August 5th, 2016 | Suddi Belthangady | no responses ಬೆಳ್ತಂಗಡಿ : ಬೆಳ್ತಂಗಡಿ ಪಶು ಸಂಗೋಪನಾ ಇಲಾಖೆಯಿಂದ 2016-17ನೇ ಸಾಲಿನಲ್ಲಿ ಪಶುಭಾಗ್ಯ ಯೋಜನೆಯಡಿ… ಮುಂದೆ ಓದಿ

ಬೆಳ್ತಂಗಡಿ : ಲಕ್ಷಾಂತರ ರೂಪಾಯಿಯ ಔಷಧಿಗಳು ಪತ್ತೆ

Saturday, July 30th, 2016 | Suddi Belthangady | no responses ಬೆಳ್ತಂಗಡಿ : ಸಿಪಿಐ (ಎಂ) ನಾಯಕ ಹರಿದಾಸ್ ಅವರ ಮನೆ ಸಮೀಪ ಲಕ್ಷಾಂತರ… ಮುಂದೆ ಓದಿ

ಬೆಳ್ತಂಗಡಿ : ವಸತಿ ರಹಿತರಿಂದ ಅರ್ಜಿ ಆಹ್ವಾನ

ಬೆಳ್ತಂಗಡಿ : ವಸತಿ ರಹಿತರಿಂದ ಅರ್ಜಿ ಆಹ್ವಾನ

Friday, July 29th, 2016 | Suddi Belthangady | no responses ಬೆಳ್ತಂಗಡಿ : ಕೇಂದ್ರ ವಸತಿ ಮತ್ತು ನಗರ ಬಡತನ ನಿರ್ಮೂಲನ ಮಂತ್ರಾಲಯ ಭಾರತ… ಮುಂದೆ ಓದಿ

ಬೆಳ್ತಂಗಡಿ : ಪಶುಭಾಗ್ಯ ಅರ್ಜಿ ಆಹ್ವಾನ

ಬೆಳ್ತಂಗಡಿ : ಪಶುಭಾಗ್ಯ ಅರ್ಜಿ ಆಹ್ವಾನ

Friday, July 22nd, 2016 | Suddi Belthangady | no responses 2016-17ನೇ ಸಾಲಿನಲ್ಲಿ ಪಶುಭಾಗ್ಯ ಹಾಗೂ ಅಮೃತ ಯೋಜನೆಗಳಿಗೆ ಆಸಕ್ತ ರೈತರಿಂದ ಅರ್ಜಿಗಳನ್ನು ಆಹ್ವಾನಿಸಲಾಗಿದೆ.… ಮುಂದೆ ಓದಿ

ದಸರಾ ಕ್ರೀಡಾ ಕೂಟಕ್ಕೆ ಪೂರ್ವವಾಗಿಯೇ ಆ. 14 ರಂದು ಕಬಡ್ಡಿ ಮತ್ತು ಫುಟ್‌ಬಾಲ್ ಪಂದ್ಯಾಟ

Tuesday, July 19th, 2016 | Suddi Belthangady | no responses ಬೆಳ್ತಂಗಡಿ: ಸರಕಾರದ ಸುತ್ತೋಲೆಯಂತೆ ಈ ವರ್ಷವೂ ಉಜಿರೆ ರತ್ನವರ್ಮ ಹೆಗ್ಗಡೆ ಕ್ರೀಡಾಂಗಣದಲ್ಲಿ ದಸರಾ… ಮುಂದೆ ಓದಿ

ಜು.17 : ಕಾನ್ಸ್‌ಟೇಬಲ್ ಹುದ್ದೆಗೆ ಲಿಖಿತ ಪರೀಕ್ಷೆ

Thursday, July 14th, 2016 | Suddi Belthangady | no responses ಮಂಗಳೂರು ನಗರ ಪೊಲೀಸ್ ಕಮೀಷನರೇಟ್‌ಗೆ ಸಂಬಂದಿಸಿ ಸಿವಿಲ್ ಪೊಲೀಸ್ ಕಾನ್ಸ್‌ಟೇಬಲ್ ಹಾಗೂ ಮಹಿಳಾ… ಮುಂದೆ ಓದಿ

ಹೆಗ್ಗಡೆ ಸಂಘದಿಂದ ವಿದ್ಯಾರ್ಥಿ ವೇತನಕ್ಕೆ ಅರ್ಜಿ ಆಹ್ವಾನ

Thursday, July 14th, 2016 | Suddi Belthangady | no responses ಬೆಳ್ತಂಗಡಿ : ದ.ಕ ಜಿಲ್ಲಾ ಹೆಗ್ಗಡೆ ಸಮಾಜ ಸಂಘ ಕೋಟೆಬಾಗಿಲು ಇದರ ವತಿಯಿಂದ… ಮುಂದೆ ಓದಿ

ಬಂಟರ ಸಂಘದಿಂದ ಪ್ರತಿಭಾ ಪುರಸ್ಕಾರ- ವಿದ್ಯಾರ್ಥಿ ವೇತನ ಸಹಾಯಧನಕ್ಕೆ ಅರ್ಜಿ ಆಹ್ವಾನ

Thursday, July 14th, 2016 | Suddi Belthangady | no responses ಗುರುವಾಯನಕೆರೆ : ಬೆಳ್ತಂಗಡಿ ತಾಲೂಕು ಬಂಟರ ಯಾನೆ ನಾಡವರ ಸಂಘದ ವತಿಯಿಂದ ಕಳೆದ… ಮುಂದೆ ಓದಿ

ಬೆಳ್ತಂಗಡಿ : ತಾಲೂಕು ಕಛೇರಿಗೆ ಲೋಕಾಯುಕ್ತ ದಾಳಿ

Wednesday, July 13th, 2016 | Suddi Belthangady | no responses ಬೆಳ್ತಂಗಡಿ : ಜು.13ರಂದು ಬೆಳ್ತಂಗಡಿಯ ತಾಲೂಕು ಕಛೇರಿಗೆ ಲೋಕಾಯುಕ್ತ ಅಧಿಕಾರಿಗಳು ದಾಳಿ ನಡೆಸಿದ್ದಾರೆ.… ಮುಂದೆ ಓದಿ

ಬೆಳ್ತಂಗಡಿ : ಲಾಯಿಲ ಗ್ರಾ.ಪಂಗೆ ಬೀಗ ಜಡಿದು ಪ್ರತಿಭಟನೆ

Monday, July 11th, 2016 | Suddi Belthangady | no responses ಲಾಯಿಲ ಗ್ರಾಮ ಪಂಚಾಯತ್ ಸಿಬ್ಬಂದಿ ಬೀಗ ಹಾಕಿ ಮದುವೆಗೆ ಹೋಗಿ ಊರವರಿಗೆ ಸಂಕಟ.… ಮುಂದೆ ಓದಿ

ಗುರುವಾಯನಕೆರೆ ಸರಕಾರಿ ಪ್ರೌಢಶಾಲೆಯ ಉತ್ತಮ ಸಾಧನೆ  ಎಸ್ಸೆಸ್ಸೆಲ್ಸಿಯಲ್ಲಿ ಸತತ ಐದು ವರ್ಷಗಳಲ್ಲಿ ಶೇ. ೧೦೦ ಫಲಿತಾಂಶ

Thursday, June 9th, 2016 | Suddi Belthangady | no responses ಶಿಕ್ಷಕರ ಕೊರತೆ, ಮೂಲಭೂತ ಸವಲತ್ತುಗಳ ಕೊರತೆ ಸೇರಿದಂತೆ ವಿವಿಧ ಸಮಸ್ಯೆಗಳನ್ನು ಎದುರಿಸುತ್ತಿರುವ ಸರಕಾರಿ… ಮುಂದೆ ಓದಿ

ಮುಂಡಾಜೆ ತ್ಯಾಜ್ಯ ಘಟಕ : ದುಂಬೆಟ್ಟು ನಾಗರಿಕರಿಂದಲೂ ವಿರೋಧ

Saturday, June 4th, 2016 | Suddi Belthangady | no responses ಮುಂಡಾಜೆ ಗ್ರಾಮ ಪಂಚಾಯತ್ ವ್ಯಾಪ್ತಿಯ ಕೂಳೂರು ಪ್ರದೇಶದಲ್ಲಿ ಪ್ರಸ್ತಾವನೆಯಾಗಿರುವ ತ್ಯಾಜ್ಯ ವಿಲೇವಾರಿ ಘಟಕವನ್ನು… ಮುಂದೆ ಓದಿ

madanthyar bellihabbaಮಡಂತ್ಯಾರು : 125 ವರ್ಷಗಳ ಇತಿಹಾಸ ಇರುವ ಮಡಂತ್ಯಾರು ಸೆಕ್ರೇಡ್ ಹಾರ್ಟ್ ಚರ್ಚಿನ ಶತಮಾ ನೋತ್ಸವ ಬೆಳ್ಳಿಹಬ್ಬದ ಹೊಸ್ತಿಲಲ್ಲಿರುವ ಮಡಂತ್ಯಾರು ಚರ್ಚ್‌ನಲ್ಲಿ ಜೂ.23 ರಂದು ಪಾಲಕರ ಹಬ್ಬದ ದಿನದಂದು ಮಂಗಳೂರು ಧರ್ಮಪ್ರಾಂತ್ಯದ ಧರ್ಮಧ್ಯಕ್ಷರಾದ ಡಾ| ಎಲೋಸಿಯಸ್ ಪೌಲ್ ಡಿಸೋಜ ಚಾಲನೆ ನೀಡಿಲಿದ್ದಾರೆ. ಜೂ.23 ರಂದು ಬೆಳಿಗ್ಗೆ 10 ಗಂಟೆಗೆ ದಿವ್ಯಬಲಿ ಪೂಜೆ. ಪೂಜೆಯ ಬಳಿಕ ಧರ್ಮಾಧ್ಯಕ್ಷರು ಶತಮಾನೋತ್ಸವ ಬೆಳ್ಳಿಹಬ್ಬಕ್ಕೆ ಚಾಲನೆ ನೀಡುವರು. ಮೇ.2, 2018ರ ವರೆಗೆ ನಿರಂತರ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ ಎಂದು ಚರ್ಚ್‌ಗೆ ನೂತನವಾಗಿ ಆಗಮಿಸಿದ ವಂ.ಫಾ| ಬಾಜಿಲ್‌ವಾಸ್ ಪತ್ರಿಕೆಗೆ ತಿಳಿಸಿದರು.

belthangady catholic yuva sanchalanaಮಡಂತ್ಯಾರು : ಭಾರತೀಯ ಕಥೋಲಿಕ್ ಯುವ ಸಂಚಾಲನ ವಲಯವು ಯುವಜನರಿಗೆ ಪುರಸ್ಕಾರ 2017 ಕಾರ್‍ಯಕ್ರಮವನ್ನು ನಾರಾವಿ ಚರ್ಚ್ ಸಭಾಂಗಣದಲ್ಲಿ ನಡೆಯಿತು. ವಿವಿಧ ಕ್ಷೇತ್ರದಲ್ಲಿ ಸಾಧನೆಗೈದ ಯುವಜನರಿಗೆ ಪುರಸ್ಕಾರವನ್ನು ಮಾಡಿದರು. ಐಸಿವೈಎಂ ಮಂಡತ್ಯಾರಿನ ಟೈಸನ್‌ರವರಿಗೆ ನಾಟಕ ಕ್ಷೇತ್ರದಲ್ಲಿ ಸಾಧನೆಗೈದ ಯುವ ವ್ಯಕ್ತಿ ಎಂದು ಸನ್ಮಾನಿಸಿದರು. ಹಾಗೂ ಮಡಂತ್ಯಾರಿನ ಐಸಿವೈಎಂ ಘಟಕವು ಬೆಳ್ತಂಗಡಿ ವಲಯದ ಶ್ರೇಷ್ಠ ಘಟಕ ಮತ್ತು ವಿಭಿನ್ನ ಕಾರ್‍ಯಕ್ರಮ ಮಾಡಿದ ಘಟಕ ಎಂದು ಪ್ರಶಸ್ತಿಯೊಂದಿಗೆ ಸನ್ಮಾನಿಸಲಾಯಿತು. ನಂತರ ಸಾಂಸ್ಕೃತಿಕ ಕಾರ್ಯಕ್ರಮ ನೆರವೇರಿತು. ಮತ್ತು 2017-18 ನೇ ಐಸಿವೈಎಂ ವಲಯ ಮಟ್ಟದ ಚುನಾವಣೆಯು ನೆರವೇರಿತು. ಇದರಲ್ಲಿ ಮಡಂತ್ಯಾರು ಚರ್ಚ್‌ನ ವಿವಿಯನ್, ಬೆಳ್ತಂಗಡಿ ವಲಯದ ಕಾರ್‍ಯದರ್ಶಿಯಾಗಿ ಹಾಗೂ ಉಪಾಧ್ಯಕ್ಷರಾಗಿ ಪ್ರೇಮ್ ಪ್ರಕಾಶ್ ಆಯ್ಕೆಯಾದರು.
ಮುಖ್ಯ ಅತಿಥಿಗಳಾಗಿ ನಾರಾವಿ ಚರ್ಚ್‌ನ ಧರ್ಮಗುರುಗಳು ಫಾ| ಸೈಮನ್ ಡಿಸೋಜ, ಐಸಿವೈಎಂ ಬೆಳ್ತಂಗಡಿ ವಲಯದ ನಿರ್ದೇಶಕ ಫಾ| ಅರುಣ್ ಲೋಬೊ, ಮಡಂತ್ಯಾರ್ ಚರ್ಚ್‌ನ ಸಹಾಯಕ ಧರ್ಮಗುರು ಫಾ| ಆಲ್ವಿನ್ ಡಿಸೋಜ, ಹಾಗೂ ಮಂಗಳೂರು ಪ್ರಾಂತ್ಯದ ಐಸಿವೈಎಂ ನಿರ್ದೇಶಕ ಫಾ| ರೋನಾಲ್ಡ್ ಹಾಗೂ ಬೆಳ್ತಂಗಡಿ ವಲಯದ ಅಧ್ಯಕ್ಷ ಜೋವೆಲ್, ಕಾರ್‍ಯದರ್ಶಿ ರಿಚರ್ಡ್ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು. ಕು|. ಶೈನಿ ಹಾಗೂ ಆರ್‍ವಿನ್ ಕಾರ್ಯಕ್ರಮ ನಿರ್ವಹಣೆ ಮಾಡಿದರು.

santhu jci phothoಯುವಜನತೆ ತಮ್ಮ ಕೆಲಸಕಾರ್ಯಗಳೊಂದಿಗೆ ವ್ಯಕ್ತಿತ್ವ ವಿಕಸನಗೊಳಿಸುತ್ತಾ ಹೆಜ್ಜೆ ಇರಿಸಿದಾಗ ನಾವು ಉತ್ತಮ ನಾಯಕರಾಗುವುದರ ಜೊತೆಗೆ ಸಮಾಜದಲ್ಲಿ ಓರ್ವ ಆದರ್ಶ ವ್ಯಕ್ತಿಯಾಗಿ ಬಾಳಲು ಸಹಕಾರಿಯಾಗುತ್ತದೆ.
ಬೆಳ್ತಂಗಡಿಯಲ್ಲಿ ಸುಮಾರು 1977ರಲ್ಲಿ ಪ್ರಾರಂಭವಾದ ಜೆಸಿಐ ಬೆಳ್ತಂಗಡಿ ಮಂಜುಶ್ರೀ ಸಂಸ್ಥೆ ಇಂದು 40ನೇ ವರ್ಷದಲ್ಲಿದ್ದು ಉತ್ತಮ ಕಾರ್ಯಕ್ರಮಗಳನ್ನು ರೂಪಿಸುವುದರೊಂದಿಗೆ ಜನಮನ್ನಣೆಯನ್ನು ಪಡೆದು ಸುತ್ತ-ಮುತ್ತಲಿನ ಯುವಕ-ಯುವತಿಯರಿಗೆ ವ್ಯಕ್ತಿತ್ವ ವಿಕಸನದ ಮೂಲಕ ಉತ್ತಮ ನಾಯಕರಾಗುವ ಗುಣವನ್ನು, ಮೌಲ್ಯವನ್ನು ಸಕಾರಗೊಳಿಸುವಲ್ಲಿ ಕಾರಣಿಭೂತವಾಗಿದೆ.
-ಜೇಸಿ ಸದಾನಂದ ನಾವಡ ಪೂರ್ವರಾಷ್ಟ್ರೀಯ ಉಪಾಧ್ಯಕ್ಷ

ಬೆಳ್ತಂಗಡಿ : ಪ್ರತಿಷ್ಠಿತ ಜೆಸಿಐ ಬೆಳ್ತಂಗಡಿ ಮಂಜುಶ್ರೀಯು ಹತ್ತು-ಹಲವಾರು ಜನಪರ ಕಾರ್ಯಕ್ರಮಗಳನ್ನು ಮಾಡುತ್ತಿದ್ದು, ಅ ಮುಖೇನ ಗುರುತಿಸಿಕೊಂಡು ಮಧ್ಯಾಂತರ ಸಮ್ಮೇಳನದಲ್ಲಿ ಹಲವು ಪ್ರಶಸ್ತಿಗಳನ್ನು ತಮ್ಮದಾಗಿಸಿಕೊಂಡಿದೆ. ಈ ಬಾರಿ ಘಟಕದಲ್ಲಿ ನಿರಂತರವಾಗಿ ಮೂರು ದಿನಗಳ ಕಾಲ ನಡೆದ ಭಾಷಣ ಕಲೆ, ಸಮಯ ನಿರ್ವಹಣೆ, ನಾಯಕತ್ವ ಗುಣ ಈ ತರಬೇತಿ ಕಾರ್ಯಗಾರವನ್ನು ಹಮ್ಮಿಕೊಂಡಿದ್ದು ಇದರ ಸಮರೋಪ ಸಮಾರಂಭವು ಜೂ.19 ರಂದು ನಡೆಯಿತು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಜೆಸಿಐ ಬೆಳ್ತಂಗಡಿ ಮಂಜುಶ್ರೀ ಅಧ್ಯಕ್ಷ ಸಂತೋಷ್ ಪಿ.ಕೋಟ್ಯಾನ್ ಬಳಂಜ ವಹಿಸಿದ್ದರು.
ವೇದಿಕೆಯಲ್ಲಿ ಜೆಸಿಐ ಇಂಡಿಯಾದ ಪೂರ್ವರಾಷ್ಟ್ರೀಯ ಉಪಾಧ್ಯಕ್ಷರು, ರಾಷ್ಟ್ರೀಯ ತರಬೇತುದಾರರು ಸದಾನಂದ ನಾವಡ, ವಲಯಾಧಿಕಾರಿ ಚಿದಾನಂದ ಇಡ್ಯಾ, ನಿಕಟಪೂರ್ವಧ್ಯಕ್ಷ, ವಲಯಾಧಿಕಾರಿ ವಸಂತ ಶೆಟ್ಟಿ ಶ್ರದ್ದಾ, ಕಾರ್ಯದರ್ಶಿ ರಂಜಿತ್ ಎಚ್.ಡಿ, ಕಾರ್ಯಕ್ರಮ ಸಂಯೋಜಕ ಪ್ರಸಾದ್ ಬಿ.ಎಸ್, ಜೆಸಿರೆಟ್ ಅಧ್ಯಕ್ಷೆ ಅಮೃತಾ, ಜೂನಿಯರ್ ಜೇಸಿ ಅಧ್ಯಕ್ಷ ಮನೋಜ್ ಉಪಸ್ಥಿತರಿದ್ದರು.
ಈ ಸಂದರ್ಭದಲ್ಲಿ ಯುತ್ ಕಾಂಗ್ರೇಸ್ ಚುನಾವಣೆಯಲ್ಲಿ ಜಯಗಳಿಸಿದ ಜೆಸಿಐ ಬೆಳ್ತಂಗಡಿ ಮಂಜುಶ್ರೀ ಘಟಕದ ಉಪಾಧ್ಯಕ್ಷ ಅಭಿನಂದನ್ ಹರೀಶ್ ಕುಮಾರ್‌ರವರನ್ನು ಸನ್ಮಾನಿಸಲಾಯಿತು. ಹಾಗೂ ಬೆಳ್ತಂಗಡಿಯ ಹಬ್ಬವೆಂದೇ ಖ್ಯಾತಿ ಪಡೆದ ಜೇಸಿ ಸಪ್ತಾಹದ ಕಾರ್ಯಕ್ರಮ ಸಂಯೋಜಕರಾಗಿ ಘಟಕದ ಉಪಾಧ್ಯಕ್ಷ ಪ್ರಸಾದ್ ಕಕ್ಕಿಂಜೆಯವರನ್ನು ಆಯ್ಕೆಮಾಡಲಾಯಿತು.
ಘಟಕದ ಉಪಾಧ್ಯಕ್ಷ ಪ್ರಶಾಂತ್ ಲಾಯಿಲ ಅತಿಥಿಗಳನ್ನು ವೇದಿಕೆಗೆ ಆಹ್ವಾನಿಸಿದರು. ಸದಸ್ಯ ಗುರುರಾಜ್‌ರವರು ಜೇಸಿವಾಣಿ ಉದ್ಘೋಷಿಸಿದರು, ಸತೀಶ್ ಸುವರ್ಣ ಪರಿಚಯ ಪತ್ರ ವಾಚಿಸಿದರು, ಅಧ್ಯಕ್ಷ ಸಂತೋಷ್.ಪಿ.ಕೋಟ್ಯಾನ್ ಸ್ವಾಗತಿಸಿ, ಕಾರ್ಯದರ್ಶಿ ರಂಜಿತ್‌ಎಚ್.ಡಿ ಧನ್ಯವಾದವಿತ್ತರು.

kokkada koli tajya suriyalu panchayathnindale vyavasteಕೊಕ್ಕಡ : ಇತರ ಗ್ರಾಮಗಳನ್ನು ಹೋಲಿಸಿದಲ್ಲಿ ಕೊಕ್ಕಡದಲ್ಲಿ ಕೋಳಿ ಮಾರಾಟ ಅಂಗಡಿಗಳು ಮತ್ತು ಸಾಕಾಣಿಕಾ ಕೇಂದ್ರಗಳು ಅಧಿಕವಾಗಿದ್ದು ಹೆಚ್ಚಿನ ಮಾರಾಟಗಾರರಿಗೆ ತಮ್ಮಲ್ಲಿ ಸಂಗ್ರಹಿತವಾದ ಕೋಳಿತ್ಯಾಜ್ಯಗಳನ್ನು ಹಾಕಲು ವ್ಯವಸ್ಥೆ ಇಲ್ಲದಿರುವುದು ಕಂಡು ಬಂದಿದ್ದು ಗ್ರಾ.ಪಂ. ನಿಂದಲೇ ಮುಂದಿನ ದಿನಗಳಲ್ಲಿ ಕೋಳಿ ತ್ಯಾಜ್ಯಗಳನ್ನು ಹಾಕಲು ಟ್ಯಾಂಕ್ ನಿರ್ಮಿಸಿ ವ್ಯವಸ್ಥೆ ಕಲ್ಪಿಸಿಕೊಡಲಾಗುವುದು. ಇದಕ್ಕೆ ತಗಲುವ ವೆಚ್ಚವನ್ನು ಉಪಯೋಗಿಸುವವರೇ ಭರಿಸಬೇಕು ಎಂದು ಕೊಕ್ಕಡ ಗ್ರಾ.ಪಂ. ಅಧ್ಯಕ್ಷ ವಿ.ಜೆ. ಸೆಬಾಸ್ಟಿಯನ್ ನುಡಿದರು.
ನದಿಮೂಲಗಳ ಸಂರಕ್ಷಣಾ ಸಮಿತಿ ಮತ್ತು ಕೊಕ್ಕಡ ಗ್ರಾ.ಪಂ. ಸಹಯೋಗದಲ್ಲಿ ಕೊಕ್ಕಡ ಗ್ರಾಮದ ಕೋಳಿ ಸಾಕಾಣಿಕೆದಾರರ ಮತ್ತು ಮಾರಾಟಗಾರರ ಸಭೆಯು ಜೂ.19 ರಂದು ಕೊಕ್ಕಡ ಗ್ರಾ.ಪಂ. ಸಭಾಂಗಣದಲ್ಲಿ ನಡೆದಿದ್ದು ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ನದಿಮೂಲಗಳ ಸಂರಕ್ಷಣಾ ಸಮಿತಿಯ ಕಾರ್ಯಾಧ್ಯಕ್ಷ ರವಿಚಂದ್ರ ಗೌಡ ಹೊಸವೊಕ್ಲು ಮಾತನಾಡಿ ಪ್ರಪ್ರಥಮವಾಗಿ ಕೊಕ್ಕಡದಲ್ಲಿ ಕೋಳಿ ಸಾಕಾಣಿಕೆದಾರರು ಮತ್ತು ಕೋಳಿ ಮಾರಾಟಗಾರರ ಸಂಘವು ಇಂದು ಅಸ್ತಿತ್ವಕ್ಕೆ ಬಂದಿರುವುದು ಸಂತಸದ ವಿಷಯ . ಧರ್ಮಸ್ಥಳದ ಧರ್ಮಾಧಿಕಾರಿ ಡಾ. ವೀರೇಂದ್ರ ಹೆಗ್ಗಡೆಯವರ ಆಶಯದಂತೆ ನದಿಮೂಲಗಳ ಸಂರಕ್ಷಣೆಯ ಜಾಗೃತಿ ನಮ್ಮ ಸಮಿತಿಯ ಮೂಲಕ ಆರಂಭವಾಗಿದೆ. ನಮ್ಮ ನದಿಮೂಲಗಳ ಸಂರಕ್ಷಣೆಯ ಕಾರ್ಯದಲ್ಲಿ ಪ್ರಮುಖವಾದದ್ದು ಕೋಳಿ ತ್ಯಾಜ್ಯಗಳ ಸೂಕ್ತ ನಿರ್ವಹಣೆಯಿಲ್ಲದೆ ಸಾರ್ವಜನಿಕ ಸ್ಥಳ, ಹಳ್ಳ ತೋಡುಗಳಲ್ಲಿ ಎಸೆಯುವುದರಿಂದ ನಮ್ಮ ಜಲಮೂಲಗಳು ಮಲಿನವಾಗುತ್ತಿದೆ ಅನ್ನುವ ಪ್ರಮುಖ ಉದ್ದೇಶವಾಗಿದೆ. ಈ ಬಗ್ಗೆ ಜನಜಾಗೃತಿ ಮೂಡಿಸುವ ಕಾರ್ಯದಲ್ಲಿ ಕೊಕ್ಕಡದ ಸಾರ್ವಜನಿಕರೂ ಜಾಗೃತಿ ಮೂಡಿಸಬೇಕಾಗಿದೆ ಎಂದರು.
ನದಿಮೂಲಗಳ ಸಂರಕ್ಷಣಾ ಸಮಿತಿಯ ಕಾರ್ಯದರ್ಶಿ ಯೋಗೀಶ್ ಗೌಡ ಆಲಂಬಿಲ ಮಾತನಾಡಿ ಹೆಗ್ಗಡೆಯವರ ಮಾರ್ಗದರ್ಶನದಲ್ಲಿ ಆರಂಭಿಸಲಾದ ಈ ಜಾಗೃತಿಯು ಯಾವುದೇ ಸ್ವಾರ್ಥದಿಂದ ಕೂಡಿರುವುದಾಗಿಲ್ಲ. ಅಲ್ಲದೇ ಕೋಳಿ ಸಾಕಾಣಿಕೆದಾರರನ್ನಾಗಲೀ, ಮಾರಾಟಗಾರರನ್ನಾಗಲೀ ಅಪರಾಧೀ ಮನೋಭಾವದಿಂದ ನೋಡುವ ಉದ್ದೇಶವೂ ಇಲ್ಲ. ನಮ್ಮ ಪರಿಸರವನ್ನು ಉತ್ತಮ ರೀತಿಯಲ್ಲಿ ಇಟ್ಟುಕೊಳ್ಳುವ ಗುರುತರ ಹೊಣೆ ನಮ್ಮೆಲ್ಲರ ಮೇಲಿದೆ ಅನ್ನುವ ಜಾಗೃತಿ ಮೂಡಿಸುವುದು ಮುಖ್ಯ ಉದ್ದೇಶವಾಗಿದೆ ಎಂದರು.
ಮುಖ್ಯ ಅತಿಥಿಗಳಾಗಿ ಗ್ರಾ.ಪಂ. ಅಭಿವೃದ್ದಿ ಅಧಿಕಾರಿ ರಾಜೀವಿ ಶೆಟ್ಟಿ, ಕಾರ್ಯದರ್ಶಿ ಭಾರತಿ, ಸದಸ್ಯರಾದ ಇಬ್ರಾಹಿಂ ಸೌತಡ್ಕ, ಕುಶಾಲಪ್ಪ ಗೌಡ ಪುಡಿಕೆತ್ತೂರು, ನದಿಮೂಲಗಳ ಸಂರಕ್ಷಣಾ ಸಮಿತಿ ಪ್ರಧಾನ ಕಾರ್ಯದರ್ಶಿ ಅಭಿಲಾಷ್, ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನೆಯ ಮೇಲ್ವಿಚಾರಕಿ ರವಿಕಲಾ, ನೆಲ್ಯಾಡಿ ಭಾಗದ ಮೇಲ್ವಿಚಾರಕ ಧರ್ಣಪ್ಪ ಗೌಡ, ನೆಲ್ಯಾಡಿಯ ಗ್ರಾಮಾಭಿವೃದ್ದಿ ಯೋಜನೆ ಒಕ್ಕೂಟಗಳ ಅಧ್ಯಕ್ಷ ತುಕಾರಾಮ ರೈ, ಗೋಳಿತೊಟ್ಟು ಮೇಲ್ವಿಚಾರಕ ನೇಮಿರಾಜ್ ಕಲಾಯಿ, ಕೊಕ್ಕಡ ಗ್ರಾಮದ ಕೋಳಿ ಮಾರಾಟಗಾರರು ಮತ್ತು ಸಾಕಾಣಿಕೆದಾರರ ಸಂಘದ ಅಧ್ಯಕ್ಷ ಮೇಕ್ಸಿಂ ಲೋಬೋ, ಉಪಾಧ್ಯಕ್ಷರು ಗಳಾದ ಗಣೇಶ ನಾಯ್ಕ್ , ಪ್ರೇಮಚಂದ್ರ ಮರಿಕ್ಕೆ, ಜಯಂತ ಗೌಡ, ರಘು ಬಾರೆಗುಡ್ಡೆ,ಕಾರ್ಯದರ್ಶಿ ಗುರುಪ್ರಸಾದ್, ಜತೆ ಕಾರ್ಯದರ್ಶಿಗಳಾದ ಹಸನಬ್ಬ, ದಿನೇಶ್ ಉಪಸ್ಥಿತರಿದ್ದರು. ಕೊಕ್ಕಡ ಗ್ರಾಮದ ವ್ಯಾಪ್ತಿಯಲ್ಲಿರುವ ಎಲ್ಲಾ ಕೋಳಿ ಸಾಕಾಣಿಕೆದಾರರು ಮತ್ತು ಮಾರಾಟಗಾರರ ನೂತನ ಸಮಿತಿಯನ್ನು ಈ ಸಭೆಯಲ್ಲಿ ರಚಿಸಲಾಯಿತು.
ಯೋಗೀಶ್ ಗೌಡ ಆಲಂಬಿಲ ಸ್ವಾಗತಿಸಿದರು. ರಾಜೀವಿ ಶೆಟ್ಟಿ ವಂದಿಸಿದರು.

JCI abhinanadhan sanmanaಬೆಳ್ತಂಗಡಿ : ಪ್ರತಿಷ್ಠಿತ ಜೆಸಿಐ ಬೆಳ್ತಂಗಡಿ ಮಂಜುಶ್ರೀಯ ಉಪಾಧ್ಯಕ್ಷರಾಗಿದ್ದು, ಈ ಬಾರಿಯ ಬೆಳ್ತಂಗಡಿ ತಾಲೂಕಿನಲ್ಲಿ ನಡೆದ ಯೂತ್ ಕಾಂಗ್ರೆಸ್ ಚುನಾವಣೆಯಲ್ಲಿ ಜಯಗಳಿಸಿದ ಅಭಿನಂಧನ್ ಹರೀಶ್ ಕುಮಾರ್‌ರವರನ್ನು ಜೆಸಿಐ ಬೆಳ್ತಂಗಡಿ ಮಂಜುಶ್ರೀ ವತಿಯಿಂದ ಜೂ. 19ರಂದು ಸನ್ಮಾನಿಸಲಾಯಿತು. ಈ ಸಂದರ್ಭದಲ್ಲಿ ಜೆಸಿಐ ಬೆಳ್ತಂಗಡಿ ಮಂಜುಶ್ರೀ ಅಧ್ಯಕ್ಷ ಸಂತೋಷ್ ಪಿ. ಕೋಟ್ಯಾನ್ ಬಳಂಜ, ಪೂರ್ವ ರಾಷ್ಟ್ರೀಯ ಉಪಾಧ್ಯಕ್ಷ ಸದಾನಂದ ನಾವಡ, ನಿಕಟ ಪೂರ್ವಾಧ್ಯಕ್ಷ, ವಲಯಾಧಿಕಾರಿ ವಸಂತ ಶೆಟ್ಟಿ, ವಲಯಾಧಿಕಾರಿ ಚಿದಾನಂದ ಇಡ್ಯ, ಕಾರ್ಯದರ್ಶಿ ರಂಜಿತ್ ಹೆಚ್.ಡಿ, ಪೂರ್ವಾಧ್ಯಕ್ಷ ಸುಭಾಶ್ವಂದ್ರ ಎಂ.ಪಿ., ಕೇಶವ ಪೈ, ನಾರಾಯಣ ಶೆಟ್ಟಿ, ಶ್ರೀನಾಥ್ ಕೆ.ಎಂ., ಜೆಸಿರೆಟ್ ಅಧ್ಯಕ್ಷೆ ಅಮೃತಾ, ಕಾರ್ಯಕ್ರಮ ಸಂಯೋಜಕ ಪ್ರಸಾದ್ ಬಿ.ಎಸ್. ಜೂನಿಯರ್ ಜೇಸಿ ಅಧ್ಯಕ್ಷ ಮನೋಜ್, ಕೋಶಾಧಿಕಾರಿ ವಿಶಾಲ್ ಅಗಸ್ಟಿನ್ ಹಾಗೂ ಘಟಕದ ಎಲ್ಲಾ ಪದಾಧಿಕಾರಿಗಳು ಉಪಸ್ಥಿತರಿದ್ದರು.

venur samalochana shabeವೇಣೂರು: ಪುಷ್ಪಗಿರಿ ಶ್ರೀ ಪುಷ್ಪದಂತ ಸಾಗರ ಮುನಿಮಹಾರಾಜರ ಶಿಷ್ಯರಾದ 108 ಶ್ರೀ ಪ್ರಸಂಗಸಾಗರ್‌ಜೀ ಮುನಿರಾಜರ ಚಾತುರ್ಮಾಸ ವರ್ಷಾಯೋಗವು ಜುಲೈ ತಿಂಗಳಿನಿಂದ ವೇಣೂರು ಶ್ರೀ ಬಾಹುಬಲಿ ಕ್ಷೇತ್ರದಲ್ಲಿ ಪ್ರಾರಂಭಗೊಳ್ಳಲಿದ್ದು, ಈ ಸಂಬಂಧ ಶ್ರಾವಕರ ಸಮಾಲೋಚನಾ ಸಭೆಯು ಇಲ್ಲಿಯ ಯಾತ್ರಿ ನಿವಾಸದಲ್ಲಿ ಜರಗಿತು.
ಸಭೆಯ ಅಧ್ಯಕ್ಷತೆಯನ್ನು ವಹಿಸಿದ್ದ ಚಾತುರ್ಮಾಸ ವ್ಯವಸ್ಥಾಪನಾ ಸಮಿತಿ ಕಾರ್ಯಾಧ್ಯಕ್ಷ ನವೀನ್‌ಚಂದ್ರ ಬಲ್ಲಾಳ್ ಮಾತನಾಡಿ, ಮುನಿಶ್ರೀಯವರ ಚಾತುರ್ಮಾಸ ಕಾರ್ಯಕ್ರಮವನ್ನು ಯಶಸ್ವಿಯಾಗಿ ನಡೆಸುವ ಉದ್ದೇಶದಿಂದ ಚಾತುರ್ಮಾಸ ವ್ಯವಸ್ಥಾಪನಾ ಸಮಿತಿ ರಚಿಸಲಾಗಿದೆ. ಮೂಡಬಿದಿರೆ ಜೈನ ಮಠದ ಭಾರತಭೂಷಣ ಶ್ರೀ ಚಾರುಕೀರ್ತಿ ಪಂಡಿತಾಚಾರ್ಯವರ್ಯ ಮಹಾ ಸ್ವಾಮೀಜಿಯವರನ್ನು ಗೌರವ ಮಾರ್ಗದರ್ಶಕರಾಗಿ ಹಾಗೂ ಧರ್ಮಸ್ಥಳದ ಧರ್ಮಾಧಿಕಾರಿ ಡಾ| ವೀರೇಂದ್ರ ಹೆಗ್ಗಡೆಯವರನ್ನು ಗೌರವಾಧ್ಯಕ್ಷರಾಗಿ ನೇಮಕ ಮಾಡಲಾಗಿದೆ. ಸೀಮೆಯ ಅರಸರಾದ ಡಾ| ಪದ್ಮಪ್ರಸಾದ ಅಜಿಲರನ್ನು ಸಮಿತಿಯ ಅಧ್ಯಕ್ಷರಾಗಿ ಆಯ್ಕೆ ಮಾಡಲಾಗಿದ್ದು, ಹಲವಾರು ಸಮಿತಿ ಹಾಗೂ ಉಪ ಸಮಿತಿಗಳನ್ನು ರಚಿಸಲಾಗಿದೆ ಎಂದು ತಿಳಿಸಿದರು. ಸಭೆಯಲ್ಲಿ ಮಂಗಳೂರು ಎಪಿಎಂಸಿಯ ಮಾಜಿ ಅಧ್ಯಕ್ಷ ಕರಿಂಜೆಗುತ್ತು ಕೃಷ್ಣರಾಜ ಹೆಗ್ಡೆಯವರು ಮಾತನಾಡಿ, ಮುನಿಶ್ರೀಗಳವರ ಚಾತುರ್ಮಾಸ ವರ್ಷಾಯೋಗವನ್ನು ನಡೆಸುವ ಪುಣ್ಯದ ಕೆಲಸ ನಮಗೆ ದೊರಕಿರುವುದು ಪೂರ್ವಜನ್ಮದ ಪುಣ್ಯದ ಫಲ. ಇದನ್ನು ಅಚ್ಚುಕಟ್ಟಾಗಿ ಮುನಿಧರ್ಮಕ್ಕೆ ಚ್ಯುತಿ ಬಾರದ ರೀತಿಯಲ್ಲಿ ಶ್ರದ್ಧಾಭಕ್ತಿಯಿಂದ ಆಯೋಜಿಸಬೇಕಾಗಿದೆ ಎಂದರು. ಬಿಳಿಯೂರುಗುತ್ತು ಧನ್ಯಕುಮಾರ್ ರೈ ಮಾತನಾಡಿ, ಮುಂದಿನ ಪೀಳಿಗೆಗೆ ಧಾರ್ಮಿಕ ವಿಚಾರಗಳ ಮಹತ್ವವನ್ನು ತಿಳಿಸುವ ಮಾದರಿ ಚಾತುರ್ಮಾಸ ಇದಾಗಬೇಕು ಎಂದು ಆಶಿಸಿದರು. ಸಭೆಯಲ್ಲಿ ಮಂಗಳೂರಿನ ಯಶೋಧರ ಪೂವಣಿ, ರಾಜ್ಯ ಜೈನ ಸ್ವಯಂ ಸೇವಕ ತಂಡದ ಜಿಲ್ಲಾ ಸಂಚಾಲಕ ವೃಷಭ ಆರಿಗ ಮೊದಲಾದವರು ತಮ್ಮ ಅನಿಸಿಕೆಗಳನ್ನು ವ್ಯಕ್ತಪಡಿಸಿದರು.
ವೇದಿಕೆಯಲ್ಲಿ ವೇಣೂರು ಶ್ರೀ ದಿಗಂಬರ ಜೈನ ತೀರ್ಥಕ್ಷೇತ್ರ ಸಮಿತಿ ಕಾರ್ಯದರ್ಶಿ ವಿಜಯರಾಜ ಅಧಿಕಾರಿ ಮಾರಗುತ್ತು, ಕೋಶಾಧಿಕಾರಿ ರತ್ನವರ್ಮ ಇಂದ್ರ ಬಜಿರೆ ಹಾಗೂ ಮತ್ತಿತರರು ಉಪಸ್ಥಿತರಿದ್ದರು.
ಸಮಾಲೋಚನಾ ಸಭೆಗೆ ಮಂಗಳೂರು, ಮೂಡಬಿದಿರೆ, ಬಂಟ್ವಾಳ, ಬೆಳ್ತಂಗಡಿ ಹಾಗೂ ಇತರ ಊರುಗಳಿಂದ ಶ್ರಾವಕರು ಆಗಮಿಸಿ ಸಲಹೆ ಸೂಚನೆಗಳನ್ನು ನೀಡಿದರು. ಭಾರತೀಯ ಜೈನ್ ಮಿಲನ್ ನಿರ್ದೇಶಕ ಬಿ. ಸೋಮಶೇಖರ ಶೆಟ್ಟಿ ಉಜಿರೆ ಪ್ರಸ್ತಾವಿಸಿ, ಚಾತುರ್ಮಾಸ ವ್ಯವಸ್ಥಾಪನಾ ಸಮಿತಿ ಪ್ರ. ಕಾರ್ಯದರ್ಶಿ ಉಪನ್ಯಾಸಕ ಮಹಾವೀರ ಜೈನ್ ಮೂಡುಕೋಡಿ ಕಾರ್ಯಕ್ರಮ ನಿರ್ವಹಿಸಿದರು. ಸಮಿತಿ ಕೋಶಾಧಿಕಾರಿ ವಿ. ಪ್ರವೀಣ್ ಕುಮಾರ್ ಇಂದ್ರ ವಂದಿಸಿದರು. ವೇಣೂರು ಜೈನ್ ಮಿಲನ್, ಬ್ರಾಹ್ಮಿ ಮಹಿಳಾ ಸಂಘ, ಶ್ರೀ ಬಾಹುಬಲಿ ಯುವಜನ ಸಂಘದ ಪದಾಧಿಕಾರಿಗಳು ಸಹಕರಿಸಿದರು.

LIC Y dharmaraj bilkodugeಬೆಳ್ತಂಗಡಿ : ಭಾರತೀಯ ಜೀವ ವಿಮಾ ನಿಗಮ ಬಂಟ್ವಾಳ ಶಾಖೆಯಲ್ಲಿ ಕಳೆದ 28 ವರ್ಷಗಳಿಂದ ಅಭಿವೃದ್ದಿ ಅಧಿಕಾರಿಯಾಗಿ ಸೇವೆ ಸಲ್ಲಿಸಿ ಸ್ವಯಂ ನಿವೃತ್ತಿಗೊಂಡ ವೈ.ಧರ್ಮರಾಜ್ ರವರಿಗೆ ಬೀಳ್ಕೊಡುಗೆ ಸಮಾರಂಭ ಜೂ 14ರಂದು ಬೆಳ್ತಂಗಡಿ ಉಪಗ್ರಹ ಶಾಖೆಯಲ್ಲಿ ಜರಗಿತು.
ಸಮಾರಂಭದ ಅಧ್ಯಕ್ಷತೆಯನ್ನು ಬಂಟ್ವಾಳ ಶಾಖೆಯ ಹಿರಿಯ ಶಾಖಾಧಿಕಾರಿ ಡಿ ಬಾಲಕೃಷ್ಣ ವಹಿಸಿ ನಿವೃತ್ತಿಗೊಂಡ ಧರ್ಮರಾಜ್‌ರವರಿಗೆ ಅಭಿವೃದ್ದಿ ಅಧಿಕಾರಿಗಳ, ಪ್ರತಿನಿಧಿಗಳ, ಮತ್ತು ಶಾಖಾ ವತಿಯಿಂದ ಚಿನ್ನದ ಉಂಗುರ, ಸ್ಮರಣಿಕೆ, ಶಾಲು ಹೊದಿಸಿ, ಹಾರ ಹಾಕಿ ಸನ್ಮಾನಿಸಿದರು. ಮುಖ್ಯ ಅತಿಥಿಗಳಾಗಿ ಉಡುಪಿಯ ಅಭಿವೃದ್ದಿ ಅಧಿಕಾರಿಗಳ ಸಂಘದ ಅಧ್ಯಕ್ಷ ಕೆ.ವಿಶ್ವನಾಥ ಬಂಟ್ವಾಳ ಶಾಖೆಯ ಉಪಶಾಖಾಧಿಕಾರಿ ಮಧುಸೂದನ್, ಆಡಳಿತ ಅಧಿಕಾರಿ ರಾಮಯ್ಯ ಶೆಟ್ಟಿ ಭಾಗವಹಿಸಿ ಶುಭಹಾರೈಸಿದರು.
ಅಭಿವೃದ್ದಿ ಅಧಿಕಾರಿಗಳಾದ ಗೋಕುಲ್ ಶೇಟ್, ಮಧ್ವರಾಜ್, ಎ.ಜಯದೇವ್, ಎಂ.ವಿ.ಶೆಟ್ಟಿ ಪ್ರತಿನಿಧಿಗಳ ಪರವಾಗಿ ಮನೋಹರ್ ಪಡಿವಾಳ್, ಅಶೋಕ್ ಕುಮಾರ್ ಬಿ.ಪಿ, ಗಂಗಾಧರ ಮಾಸ್ಟರ್, ಧರಣೇಂದ್ರ ಕುಮಾರ್ ಶುಭಕೋರಿದರು. ಸಮಾರಂಭದಲ್ಲಿ ಬಂಟ್ವಾಳ ಮತ್ತು ಬೆಳ್ತಂಗಡಿ ಉಪಗ್ರಹ ಶಾಖೆಯ ಅಭಿವೃದ್ದಿ ಅಧಿಕಾರಿಗಳು, ಧರ್ಮರಾಜರವರ ಬಳಗದ ಪ್ರತಿನಿಧಿಗಳು ಶಾಖೆಯ ಸಿಬ್ಬಂದಿ ವರ್ಗದವರು ಉಪಸ್ಥಿತರಿದ್ದರು.
ಬೆಳ್ತಂಗಡಿ ಉಪಗ್ರಹ ಶಾಖಾಕಾರಿ ಆರ್.ಡಿ.ಯೋಗೇಂದ್ರ ಸ್ವಾಗತಿಸಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಪ್ರತಿನಿಧಿ ಜಗನ್ನಾಥ್ ಹೆಚ್. ರವರ ಪ್ರಾರ್ಥನೆಯೊಂದಿಗೆ ಕಾರ್ಯಕ್ರಮ ಪ್ರಾರಂಭಗೊಂಡಿತು.ಅಭಿವೃದ್ದಿ ಅಧಿಕಾರಿ ಉದಯ ಶಂಕರ್ ಸನ್ಮಾನಿತರ ಪರಿಚಯ ವಾಚಿಸಿದರು. ಪ್ರತಿನಿಧಿ ಜಾರಪ್ಪ ಪೂಜಾರಿ ಬೆಳಾಲು ವಂದಿಸಿ, ಅಭಿವೃದ್ದಿ ಅಧಿಕಾರಿ ಟಿ.ಡಿ ರಾಘವೇಂದ್ರ ಕಾರ್ಯಕ್ರಮ ನಿರೂಪಿಸಿದರು.

congress pressmeetಬೆಳ್ತಂಗಡಿ : ರಮಾನಾಥ ರೈ ಯವರು ಜವಾಬ್ಧಾರಿಯುತ ಸರಕಾರದ ಪ್ರತಿನಿಧಿಯಾಗಿ ಕಾನೂನು ಸುವ್ಯವಸ್ಥೆಯ ಬಗ್ಗೆ ಉನ್ನತ ಅಧಿಕಾರಿಯ ಜೊತೆ ಖಾಸಗಿಯಾಗಿ ಮಾತನಾಡಿ ಜಿಲ್ಲೆಯ ಶಾಂತಿ ಕಾಪಾಡುವ ನಿಟ್ಟಿನಲ್ಲಿ ಮತ್ತು ಪರಿಸ್ಥಿತಿಯನ್ನು ನಿಭಾಯಿಸುವಲ್ಲಿ ಸಮರ್ಥ ನಾಯಕತ್ವ ತೋರಿದ್ದಾರೆ. ರಮಾನಾಥ ರೈಗಳು ಬಂಟ್ವಾಳ ಕ್ಷೇತ್ರದಿಂದ 6 ಬಾರಿ ಶಾಸಕರಾಗಿ 3 ಬಾರಿ ಸಚಿವರಾಗಿ ಅವರ ಸೇವೆ ಬಂಟ್ವಾಳದ ಜನತೆಗೆ, ಜಿಲ್ಲೆಗೆ ಗೊತ್ತಿದೆ. ಜನರು ಅವರಿಗೆ ಸರ್ಟಿಫಿಕೆಟ್ ಕೊಟ್ಟಿದ್ದಾರೆ. ಅವರಿಗೆ ಪ್ರಭಾಕರ ಭಟ್ ಅವರ ಸರ್ಟಿಫಿಕೆಟ್ ಬೇಕಾಗಿಲ್ಲ ಎಂದು ಬೆಳ್ತಂಗಡಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಹರೀಶ್ ಕುಮಾರ್ ಪತ್ರಿಕಾ ಗೋಷ್ಟಿಯಲ್ಲಿ ಹೇಳಿದರು.
ವೀಡಿಯೋ ಅಸಲಿಯೋ, ನಕಲಿಯೋ :
ಅನೇಕ ಸಂದರ್ಭಗಳಲ್ಲಿ ರಾಜ್ಯದಲ್ಲಿ ಇಂತಹ ವೀಡಿಯೋಗಳು ಹೊರಬಂದಿದೆ. ಅದು ಅಸಲಿಯೋ ನಕಲಿಯೋ ಎಂದು ಇದುವರೆಗೆ ತಿಳಿಯಲು ಸಾಧ್ಯವಾಗಿಲ್ಲ. ಅದೇನೇ ಇದ್ದರೂ ಬಿಜೆಪಿ ಮತ್ತು ಸಂಘ ಪರಿವಾರದವರು ಇದನ್ನೇ ಬಳಸಿಕೊಂಡು ರೈ ವಿರುದ್ಧ ಆಕ್ರಮಣಕಾರಿಯಾಗಿ ಮಾತನಾಡುತ್ತಿದ್ದಾರೆ. ಯಾವತ್ತೂ ಚುನಾವಣೆಯ ಸಂದರ್ಭ ಇಂತಹ ಪ್ರಕರಣಗಳು ಜಾಸ್ತಿಯಾಗುತ್ತದೆ. ಸದ್ರಿ ವೀಡಿಯೋದಲ್ಲಿ, ಪ್ರಚೋದನಕಾರಿ ಭಾಷಣ ಮಾಡಿದವರನ್ನು ಬಂಧಿಸಿ ಎಂದು ರೈ ಅವರು ಹೇಳಿದ್ದಾರೆ ಅಷ್ಟೇ. ಬಿಟ್ಟರೆ ಪ್ರಭಾಕರ ಭಟ್ ಅವರನ್ನು ಬಂಧಿಸಿ ಎಂದು ಹೇಳಿಲ್ಲ ಎಂದು ಸಮರ್ಥಿಸಿಕೊಂಡರು.
ರೈ ನೈಜ ಜತ್ಯಾತೀತವಾದಿ ನಮ್ಮ ನಾಯಕ :
ಅವರು ಯಾವತ್ತೂ ಜಾತೀವಾದಿ, ಮತೀಯವಾದಿಯಲ್ಲ. ಅದಕ್ಕೆ ಅವಕಾಶವನ್ನೂ ಕೊಟ್ಟಿಲ್ಲ. ನೈಜ ಜಾತ್ಯಾತೀತ ಮನೋಭಾವವುಳ್ಳ ನಮ್ಮ ನಾಯಕ. ಮೊನ್ನೆಯ ಪರಿಸ್ಥಿತಿಯನ್ನು ಅವರು ಸಮರ್ಥವಾಗಿ ನಿಭಾಯಿಸಿದ್ದಾರೆ. ಅವರು ಪಕ್ಷದ ಸಮರ್ಥ ನಾಯಕ ಎಂಬುದರಲ್ಲಿ ಎರಡು ಮಾತಿಲ್ಲ. ಬಿಜೆಪಿಯವರು ಸುಳ್ಳನ್ನೇ 100 ಬಾರಿ ಹೇಳಿ ಸತ್ಯ ಎಂದು ನಂಬಿಸುವ ಕೆಲಸದಲ್ಲಿ ನಿಸ್ಸೀಮರು. ದ.ಕ. ಜಿಲ್ಲೆಯಲ್ಲಿ 8 ಕ್ಷೇತ್ರಗಳಲ್ಲಿ 7 ರಲ್ಲಿ ಕಾಂಗ್ರೆಸ್ ಶಾಸಕರು ಇದ್ದು ಒಳ್ಳೆ ಕೆಲಸದ ಮೂಲಕ ಒಳ್ಳೆಯ ಹೆಸರು ಪಡೆದಿದ್ದಾರೆ. ಇದನ್ನು ಬಿಜೆಪಿಗರಿಗೆ ಸಹಿಸಲು ಸಾಧ್ಯವಾಗುತ್ತಿಲ್ಲ. ಆದ್ದರಿಂದ ಗೊಂದಲ ಮೂಡಿಸುವ ಹುನ್ನಾರ ಮಾಡುತ್ತಿದ್ದಾರೆ. ಈ ಪರಿಸ್ಥಿತಿಯನ್ನು ಎದುರಿಸಲು ಕಾಂಗ್ರೆಸ್ ಕಾರ್ಯಕರ್ತರು ಸಿದ್ಧರಿದ್ದಾರೆ. ಇನ್ನಾದರೂ ಜಿಲ್ಲೆಯಲ್ಲಿ ಶಾಂತಿ ಕಾಪಾಡಲು ಕೈ ಜೋಡಿಸಲಿ. ಅವರಿಗೆ ಇಲ್ಲಿ ನೆಲೆ ಇಲ್ಲದಂತಾಗಿದೆ. ರಾಜ್ಯದಲ್ಲೂ ಕೂಡ ಕಾಂಗ್ರೆಸ್ ಸರಕಾರ ಉತ್ತಮ ಕೆಲಸ ಮಾಡುತ್ತಿದೆ. ಆಡಳಿತ ಅವಧಿಯಲ್ಲಿ ಎಲ್ಲೂ ಕೂಡ ಕೋಮು ಗಲಭೆಗೆ ಅವಕಾಶ ಕೊಟ್ಟಿಲ್ಲ. ಆದರೆ ಇವರು ಮಾತ್ರ ಕೋಮು ಸಂಘರ್ಷವನ್ನು ಜೀವಂತವಾಗಿಡಲು ಪ್ರಯತ್ನಿಸುತ್ತಿದ್ದಾರೆ. ಜಾತ್ಯಾತೀತ ಪಕ್ಷವೆಂದು ಹೆಸರಿಟ್ಟುಕೊಂಡಿರುವರೂ ಅವರ ಜೊತೆ ಸೇರಿಕೊಂಡು ಕೆಲಸ ಮಾಡುತ್ತಿದ್ದಾರೆ ಎಂದು ಆರೋಪಿಸಿದರು.
ಬೆಳ್ತಂಗಡಿ ವಸಂತ ಬಂಗೇರ ೬ ನೇ ಬಾರಿಗೆ ದಾಖಲೆ ಮತಗಳಿಂದ ಗೆಲ್ಲಲಿದ್ದಾರೆ :
ಕಾಂಗ್ರೆಸ್‌ಗೆ ರಾಜ್ಯದಲ್ಲೂ ಭವಿಷ್ಯವಿದೆ. ಎಲ್ಲಾ ಕ್ಷೇತ್ರಗಳಲ್ಲೂ ಅಭಿವೃದ್ಧಿಯಾಗುತ್ತಿದ್ದು ಮುಂದಿನ ಚುನಾವಣೆಯಲ್ಲಿ ಜಿಲ್ಲೆಯಲ್ಲಿ ಎಂಟಕ್ಕೆ ಎಂಟೂ ಕ್ಷೇತ್ರಗಳಲ್ಲೂ ನಾವು ಜಯಗಳಿಸುತ್ತೇವೆ. ಅಲ್ಲದೆ ಬೆಳ್ತಂಗಡಿಯಲ್ಲಿ 6ನೇ ಬಾರಿಗೆ ವಸಂತ ಬಂಗೇರ ಅವರು ದಾಖಲೆ ಮುರಿಯದ ರೀತಿಯ ಪ್ರಮಾಣದ ಮತಗಳ ಮೂಲಕ ಜಯಗಳಿಸಲಿದ್ದಾರೆ. ಆ ಮೂಲಕ ಪಕ್ಷದ ಸರಕಾರ ಗೆಲ್ಲಿಸಿಕೊಡಲಿದ್ದಾರೆ ಎಂದು ತಿಳಿಸಿದರು. ಪತ್ರಿಕಾ ಗೋಷ್ಠಿಯಲ್ಲಿ ಪಟ್ಟಣ ಪಂಚಾಯತ್ ಅಧ್ಯಕ್ಷ ಮುಗುಳಿ ನಾರಾಯಣ ರಾವ್, ಬ್ಲಾಕ್ ಕಾಂಗ್ರೆಸ್ ಗ್ರಾಮೀಣ ಘಟಕದ ಅಧ್ಯಕ್ಷ ಕೆ. ರಾಮಚಂದ್ರ ಗೌಡ, ತಾಲೂಕು ಎಸ್.ಸಿ. ಘಟಕದ ಅಧ್ಯಕ್ಷ ಬಿ.ಕೆ. ವಸಂತ್ ಉಪಸ್ಥಿತರಿದ್ದರು.

Shobith shettyತಂದೆ ಜಯಂತ ಶೆಟ್ಟಿ ಮತ್ತು ತಾಯಿ ಶ್ರೀಮತಿ ಜಲಜಾಕ್ಷಿ ಶೆಟ್ಟಿ ಜೊತೆ ಶೋಭಿತ್ ಶೆಟ್ಟಿ

ಉಜಿರೆ: ತಂದೆಯ ಈರ್ವರು ಸಹೋದರರು ಭಾರತೀಯ ಭೂ ಸೇನೆಯಲ್ಲಿ ಸೇವೆ ಸಲ್ಲಿಸುತ್ತಿರುವ ಹಿನ್ನೆಲೆ ಎಳೆಯ ಶೋಭಿತ್‌ಗೆ ಸ್ಪೂರ್ತಿ ಹಾಗೂ ಪ್ರೇರಣೆ ನೀಡಿತು. ಫಲವಾಗಿ ಛಲಬಿಡದೆ ಎರಡನೇಬಾರಿ ನಡೆಸಿದ ಪ್ರಯತ್ನ ಫಲಿಸಿತು. ಭಾರತೀಯ ಭೂ ಸೇನೆಯ ಟೆಕ್ನಿಕಲ್ ಗ್ರಾಜುವೇಟ್ ಕೋರ್ಸ್ ಸಂದರ್ಶನದಲ್ಲಿ ಆಯ್ಕೆಯಾದ ಆತ ಡೆಹ್ರಾಡೋನ್‌ನ ಇಂಡಿಯನ್ ಮಿಲಿಟರಿ ಅಕಾಡೆಮಿಯಲ್ಲಿ ಜಂಟಲ್‌ಮೆನ್ ಕೆಡೆಟ್ ಆಗಿ ತರಬೇತಿಗೊಂಡು ಕಳೆದ ಜೂ 10ರಂದು ನಡೆದ ಪಾಸ್‌ಔಟ್ ಪೆರೇಡ್‌ನಲ್ಲಿ ಲೆಫ್ಟಿನೆಂಟ್ ಆಗಿ ನೇಮಕ ಗೊಂಡಿದ್ದಾರೆ.
ಪ್ರತಿಭಾವಂತ ವಿದ್ಯಾರ್ಥಿ ಬೆಳ್ತಂಗಡಿ ತಾಲೂಕಿನ ಉಜಿರೆ ಗ್ರಾಮದ ಹೆಸರುವಾಸಿ ಕುಂಟಿನಿ ಮನೆತನದ ದಿ| ಬಾಬು ಶೆಟ್ಟಿಯವರ ಮೊಮ್ಮಗ ಶೋಭಿತ್ ಶೆಟ್ಟಿ ಓರಿಯಂಟಲ್ ಇನ್ಶೂರೆನ್ಸ್‌ನ ಹಿರಿಯ ಅಭಿವೃದ್ಧಿ ಅಧಿಕಾರಿ ಜಯಂತ ಶೆಟ್ಟಿ ಕುಂಟಿನಿ ಮತ್ತು ಶ್ರೀಮತಿ ಜಲಜಾಕ್ಷಿ ಶೆಟ್ಟಿ ದಂಪತಿಗಳ ಹೆಮ್ಮೆಯ ಪುತ್ರ. 1992 ಮೇ 21ರಂದು ಜನಿಸಿದ ಶೋಭಿತ್ ಉಜಿರೆಯ ಅನುಗ್ರಹ ಆಂಗ್ಲಮಾಧ್ಯಮ ಶಾಲೆಯಲ್ಲಿ ಪ್ರಾಥಮಿಕ ಶಿಕ್ಷಣ (2005) ಎಸ್.ಡಿ.ಎಂ. ಆಂಗ್ಲ ಮಾಧ್ಯಮ ಶಾಲೆಯಲ್ಲಿ ಪ್ರೌಢ ಶಿಕ್ಷಣ (2008)ವನ್ನು ಶೇ. 95 ಅಂಕ ಪಡೆದು ಉನ್ನತ ಶ್ರೇಣಿಯಲ್ಲಿ ಉತ್ತೀರ್ಣನಾಗಿರುತ್ತಾನೆ. ಎಸ್.ಡಿ.ಎಂ. ಪದವಿ ಪೂರ್ವ ಕಾಲೇಜಿನಲ್ಲಿ ಪಿ.ಯು.ಸಿ. (2010)ಯನ್ನು ಡಿಸ್ಟಿಂಕ್ಷನ್‌ನಲ್ಲಿ ಮುಗಿಸಿ, ಬೆಂಗಳೂರಿನ ಅಂಬೇಡ್ಕರ್ ಇಂಜಿನಿಯರಿಂಗ್ ಕಾಲೇಜಿನಲ್ಲಿ ತಾಂತ್ರಿಕ ಶಿಕ್ಷಣ ಪದವಿ (2014) ಪೂರೈಸಿರುತ್ತಾರೆ.
ಬಾಲ್ಯದಿಂದಲೇ ದೇಶಭಕ್ತಿ ಮೈಗೂಡಿಸಿಕೊಂಡ ಶೋಭಿತ್ ಸೇನೆಗೆ ಸೇರಬೇಕೆಂಬ ಮಹತ್ವಾಕಾಂಕ್ಷೆಹೊಂದಿ ಅಂತಿಮ ಇಂಜಿನಿಯರಿಂಗ್ ಹಂತದಲ್ಲೇ ಭಾರತೀಯ ನೌಕಾದಳದ ಸಂದರ್ಶನದಲ್ಲಿ ಟೆಕ್ನಿಕಲ್ ಎಂಟ್ರಿ ಮೂಲಕ ಅಧಿಕಾರಿಯಾಗಿ ಆಯ್ಕೆಯಾಗಿದ್ದರು. ಜತೆಗೆ ಟೆಕ್‌ಮಹೀಂದ್ರ ಸಾಪ್ಟ್‌ವೇರ್ ಕಂಪೆನಿ ಹಾಗೂ ಟೊಯೊಟಾ ಕಿರ್ಲೋಸ್ಕರ್ ಕಂಪೆನಿಗೂ ಆಯ್ಕೆಯಾಗಿರುತ್ತಾರೆ. ಅಂತಿಮ ಪದವಿ ಫಲಿತಾಂಶ ವಿಳಂಬವಾದ ಕಾರಣ ನೌಕಾಸೇನೆಗೆ ಸೇರಲು ಸಾಧ್ಯವಾಗದೆ ಟೊಯೊಟಾ ಕಿರ್ಲೋಸ್ಕರ್ ಕಂಪೆನಿಗೆ ಪ್ರೊಡಕ್ಷನ್ ಇಂಜಿನಿಯರ್ ಆಗಿ ಸೇರ್ಪಡೆಗೊಂಡರು. ಆದರೂ ಸೇನೆಗೆ ಸೇರಬೇಕೆಂಬ ಉತ್ಕಟ ಆಕಾಂಕ್ಷೆ ಮನದಾಳದಲ್ಲಿ ಬೇರೂರಿತ್ತು.
ಕಡೆಗೂ ಅವರ ಬಯಕೆಯ ಮಹತ್ವಾಕಾಂಕ್ಷೆ ಈಡೇರಿತು. ಎರಡನೇ ಬಾರಿಗೆ ಭಾರತೀಯ ಭೂಸೇನೆಯ ಟೆಕ್ನಿಕಲ್ ಗ್ರಾಜುವೇಟ್ ಕೋರ್ಸ್ ಸಂದರ್ಶನದಲ್ಲಿ ಆಯ್ಕೆಯಾಗಿ ಡೆಹ್ರಾಡೂನ್‌ನ ಇಂಡಿಯನ್‌ನ ಇಂಡಿಯನ್ ಮಿಲಿಟರಿ ಅಕಾಡೆಮಿಯಲ್ಲಿ ಜಂಟಲ್‌ಮೆನ್ ಕೆಡೆಟ್‌ಆಗಿ ತರಬೇತಿ ಪಡೆದು ಜೂ ತಿಂಗಳಲ್ಲಿ ನಡೆದ ಪಾಸ್‌ಔಟ್ ಪೆರೇಡ್‌ನಲ್ಲಿ ಲೆಪ್ಟಿನೆಂಟ್ ಆಗಿ ನೇಮಕಗೊಂಡಿದ್ದಾರೆ. ಅವರ ಬಹುಕಾಲದ ನಿರೀಕ್ಷೆಯ ಕನಸು ಇಂದು ನನಸಾಗಿದೆ. ಇದು ಬೆಳ್ತಂಗಡಿ ತಾಲೂಕಿಗೆ, ದ.ಕ. ಜಿಲ್ಲೆ ಹಾಗೂ ರಾಜ್ಯಕ್ಕೆ ಪ್ರತಿಷ್ಠೆಯ ಹೆಗ್ಗಳಿಕೆಗೆ ಕಾರಣವಾಗಿದೆ.

BJP PRATIBATANEಬೆಳ್ತಂಗಡಿ : ನಾಲ್ಕು ಕೋಣೆಯ ಮಧ್ಯೆ ಕೂತು ಅಧಿಕಾರಿಗಳನ್ನು ಕೂಡಿಸಿ ರಾಜಕಾರಣ ಮಾಡುತ್ತಿರುವ ಸಚಿವ ರಮಾನಾಥ ರೈ ಅವರು ಕಲ್ಲಡ್ಕ ಪ್ರಭಾಕರ ಭಟ್ ಹಾಗೂ ಸಂಘ ಪರಿವಾರದ ನಾಯಕರನ್ನು ಬಂಧಿಸುವಂತೆ ತಾಕೀತು ಮಾಡಿರುವುದು ಜಿಲ್ಲೆಯ ಜನತೆ ತಲೆತಗ್ಗಿಸುವಂತಾಗಿದೆ ಎಂದು ಬಿಜೆಪಿ ಬೆಳ್ತಂಗಡಿ ಮಂಡಲ ಅಧ್ಯಕ್ಷ ರಂಜನ್ ಜಿ. ಗೌಡ ಹೇಳಿದರು.
ಜಿಲ್ಲಾ ಉಸ್ತುವಾರಿ ಸಚಿವ ಬಿ. ರಮಾನಾಥ ರೈ ಅವರು ಇತ್ತೀಚೆಗೆ ಬಂಟ್ವಾಳ ಐಬಿಯಲ್ಲಿ ಜಿಲ್ಲಾ ಪೊಲೀಸ್ ಅಧಿಕಾರಿಗಳ ಜೊತೆ ಮಾತುಕತೆ ನಡೆಸಿದ ವೀಡಿಯೋ ಬಹಿರಂಗಗೊಂಡ ಹಿನ್ನೆಲೆಯಲ್ಲಿ ಜೂ. 19ರಂದು ಬೆಳ್ತಂಗಡಿ ತಾಲೂಕು ಕಚೇರಿ ಎದುರು ಹಮ್ಮಿಕೊಂಡಿದ್ದ ಪ್ರತಿಭಟನೆಯಲ್ಲಿ ಅವರು ಮಾತನಾಡಿದರು.
ಒಂದು ಸಮುದಾಯದ ಹಾಗೂ ಕಾಂಗ್ರೆಸ್ ನಾಯಕರ ಮುಂದೆ ಪೊಲೀಸ್ ವರಿಷ್ಠಾಧಿಕಾರಿಗಳಿಗೆ ಸೂಚನೆ ನೀಡುವ ಮೂಲಕ ಇಲಾಖೆಯಲ್ಲಿ ಹಸ್ತಕ್ಷೇಪ ಮಾಡಿದ್ದಾರೆ. ಪ್ರತೀ ಬಾರಿ ಕಾಂಗ್ರೆಸ್ ಸರಕಾರ ಇರುವಾಗಲೇ ಜಿಲ್ಲೆಯಾದ್ಯಂತ ಕೋಮು ಗಲಭೆಗಳು ನಡೆಯುವುದಕ್ಕೆ ಉಸ್ತುವಾರಿ ಸಚಿವರೇ ಜವಾಬ್ದಾರರಾಗಿದ್ದಾರೆ. ಇತ್ತೀಚೆಗೆ ಕಲ್ಲಡ್ಕ ಹಾಗೂ ಜಿಲ್ಲೆಯಾದ್ಯಂತ ನಡೆಯುವ ಕೋಮು ಗಲಭೆಗಳಿಗೆ ಮತ್ತು ಹಿಂದೂ ನಾಯಕರ ಹತ್ಯೆ ಹಾಗೂ ಹಲ್ಲೆಗಳಲ್ಲಿ ಉಸ್ತುವಾರಿ ಸಚಿವರ ನೇರ ಕೈವಾಡ ಮತ್ತು ಸಮಾಜಘಾತುಕ ಶಕ್ತಿಗಳಿಗೆ ಪ್ರೋತ್ಸಾಹ ನೀಡುತ್ತಿರುವುದು ಜಗಜ್ಜಾಹೀರಾಗಿದೆ ಎಂದರು.
ಪ್ರತಿಭಟನೆಯಲ್ಲಿ ಮಾಜಿ ಶಾಸಕ ಪ್ರಭಾಕರ ಬಂಗೇರ, ಜಿ.ಪಂ. ಸದಸ್ಯರಾದ ಕೊರಗಪ್ಪ ನಾಯ್ಕ, ಸೌಮ್ಯಲತಾ, ತಾ.ಪಂ. ಉಪಾಧ್ಯಕ್ಷೆ ವೇದಾವತಿ, ಸ್ಥಾಯಿ ಸಮಿತಿ ಅಧ್ಯಕ್ಷ ಸುಧೀರ್ ಆರ್. ಸುವರ್ಣ, ತಾ.ಪಂ. ಸದಸ್ಯರಾದ ವಿಜಯ ಗೌಡ ವೇಣೂರು, ಲಕ್ಷ್ಮೀನಾರಾಯಣ ಕೊಕ್ಕಡ, ಸುಧಾಕರ ಬಿ.ಎಲ್, ಕೊರಗಪ್ಪ ಗೌಡ ಅರಣಪಾದೆ, ಕೃಷ್ಣಯ್ಯ ಆಚಾರ್ಯ, ಧನಲಕ್ಷ್ಮೀ ಜನಾರ್ದನ್, ಬಿಜೆಪಿ ಮಂಡಲ ಪ್ರಧಾನ ಕಾರ್ಯದರ್ಶಿ ಪ್ರಭಾಕರ ಶೆಟ್ಟಿ ಉಪ್ಪಡ್ಕ, ಯುವ ಮೋರ್ಚಾ ತಾಲೂಕು ಅಧ್ಯಕ್ಷ ಸಂಪತ್ ಬಿ. ಸುವರ್ಣ, ಮುಖಂಡರುಗಳಾದ ರಾಘವ ಕಲ್ಮಂಜ, ಸಿ.ಕೆ. ಚಂದ್ರಕಲಾ, ಗೀತಾ ರಾಮಣ್ಣ ಗೌಡ, ಬಾಲಕೃಷ್ಣ ಗೌಡ, ಅಶೋಕ್ ಕೋಟ್ಯಾನ್, ಎಪಿಎಂಸಿ ಮಾಜಿ ಅಧ್ಯಕ್ಷ ಭರತ್ ಕುಮಾರ್, ಹಾಲಿ ಸದಸ್ಯೆ ಸೆಲೆಸ್ಟಿನ್ ಡಿಸೋಜಾ, ರಘುಚಂದ್ರ, ಶಂಕರ ಹೆಗ್ಡೆ, ನಾರಾಯಣ ಆಚಾರ್, ಗಿರೀಶ್ ಡೋಂಗ್ರೆ, ಅಶೋಕ್ ಕುಮಾರ್ ಮತ್ತಿತರರು ಉಪಸ್ಥಿತರಿದ್ದರು. ಬಳಿಕ ತಹಶೀಲ್ದಾರರ ಮೂಲಕ ರಾಜ್ಯಪಾಲರಿಗೆ ಮನವಿಯನ್ನು ಸಲ್ಲಿಸಲಾಯಿತು.

aranya 1ಬೆಳ್ತಂಗಡಿ : ಲಾರಿಯೊಂದರಲ್ಲಿ ಅಕ್ರಮವಾಗಿ 39 ಮರದ ದಿಮ್ಮಿಗಳನ್ನು ಸಾಗಾಟ ಮಾಡುತ್ತಿದ್ದ ಪ್ರಕರಣವನ್ನು ಬೆಳ್ತಂಗಡಿ ಅರಣ್ಯ ಇಲಾಖೆಯವರು ಪತ್ತೆ ಹಚ್ಚಿ ಸುಮಾರು ರೂ.8ಲಕ್ಷ ಮೌಲ್ಯದ ಸೊತ್ತುಗಳನ್ನು ವಶಪಡಿಸಿಕೊಂಡು ಇಬ್ಬರು ಆರೋಪಿಗಳನ್ನು ಬಂಧಿಸಿದ ಪ್ರಕರಣ ಜೂ.18ರಂದು ವರದಿಯಾಗಿದೆ.
ಉಜಿರೆ ಕಡೆಯಿಂದ ಬೆಳ್ತಂಗಡಿಯತ್ತ ಲಾರಿ ನಂಬ್ರ ಕೆ.ಎ 41-0418ರಲ್ಲಿ ಅಕ್ರಮವಾಗಿ ಮರದ ದಿಮ್ಮಿಗಳನ್ನು ಸಾಗಾಟ ಮಾಡಲಾಗುತ್ತಿದೆ ಎಂಬ ಖಚಿತ ಮಾಹಿತಿಯನ್ವಯ ಉಜಿರೆ ಶಾಖಾ ಉಪ ವಲಯ ಅರಣ್ಯ ಅಧಿಕಾರಿಯವರು, ಉಜಿರೆ-ಬೆಳ್ತಂಗಡಿ ರಸ್ತೆಯ ಲಾಯಿಲ ಕ್ರಾಸ್ ಹಳೆಪೇಟೆ ಎಂಬಲ್ಲಿ ಹೋಗುತ್ತಿದ್ದ ಲಾರಿಯನ್ನು ತಡೆ ಹಿಡಿದು ಪರಿಶೀಲನೆ ನಡೆಸಿದಾಗ ಲಾರಿಯಲ್ಲಿ ಬೆಳ್ತಂಗಡಿ ಕಡೆಗೆ ಸಾಗಾಟ ಮಾಡುತ್ತಿದ್ದ ಬಣ್ಪು ಜಾತಿಯ 39 ಮರದ ದಿಮ್ಮಿಗಳು ಪತ್ತೆಯಾಗಿದೆ. ನಂತರ ಸೊತ್ತು ಸಮೇತ ಲಾರಿಯನ್ನು ವಶಪಡಿಸಿಕೊಂಡು ಸರಕಾರಕ್ಕೆ ಅಮಾನತು ಪಡಿಸಿಕೊಂಡಿದ್ದಾರೆ. ಸದ್ರಿ ಪ್ರಕರಣದ ಆರೋಪಿಗಳಾದ ಇಬ್ರಾಹಿಂ ಸೋಮಂತಡ್ಕ ಮುಂಡಾಜೆ ಗ್ರಾಮ ಮತ್ತು ಜಾಫರ್, ಮಲೆಬೆಟ್ಟು ಕೊಯ್ಯೂರು ಗ್ರಾಮ ಇವರುಗಳನ್ನು ದಸ್ತಗಿರಿ ಮಾಡಲಾಗಿದೆ. ಅಮಾನತು ಪಡಿಸಿಕೊಂಡ ಸೊತ್ತು ಹಾಗೂ ವಾಹನದ ಒಟ್ಟು ಮೌಲ್ಯ ಸುಮಾರು ರೂ. 8 ಲಕ್ಷ ಎಂದು ಅಂದಾಜಿಸಲಾಗಿದೆ. ಸದ್ರಿ ಪ್ರಕರಣವನ್ನು ಪತ್ತೆ ಹಚ್ಚುವಲ್ಲಿ ಉಜಿರೆ ಶಾಖಾ ಉಪ ವಲಯ ಅರಣ್ಯಾಧಿಕಾರಿ ಕೀರ್ತನ್, ಉಲ್ಲಾಸ್ ಕೆ. ದುಗ್ಗಪ್ಪ ನಾಯ್ಕ, ಮಾರ್ಕ್ ಡಿಸೋಜಾ, ಅರಣ್ಯ ರಕ್ಷಕರುಗಳಾದ ಭವಾನಿ ಶಂಕರ್ ಪುತ್ರನ್, ಪಿ. ಶಂಕರ್, ಕುಮಾರಿ ಕಮಲ, ಅರಣ್ಯ ವೀಕ್ಷಕ ಸದಾನಂದ ಇವರು ಭಾಗವಹಿಸಿರುತ್ತಾರೆ.
ಸದ್ರಿ ಪ್ರಕರಣದ ಮುಂದಿನ ತನಿಖೆಯನ್ನು ಮಂಗಳೂರು ವಿಭಾಗದ ಉಪ ಅರಣ್ಯ ಸಂರಕ್ಷಣಾಧಿಕಾರಿ ಡಾ| ಕೆ.ಟಿ. ಹನುಮಂತಪ್ಪ ಹಾಗೂ ಮಂಗಳೂರು ಉಪ ವಿಭಾಗದ ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಎಸ್.ಎನ್. ಸತೀಶ್ ಬಾಬಾ ರೈ ಇವರ ನಿರ್ದೇಶನದಂತೆ ಬೆಳ್ತಂಗಡಿ ವಲಯ ಅರಣ್ಯ ಅಧಿಕಾರಿ ಸುಬ್ಬಯ್ಯ ನಾಯ್ಕ್ ಇವರು ನಡೆಸುತ್ತಿದ್ದಾರೆ.

Thaluku panchayath sabheಬೆಳ್ತಂಗಡಿ : ಬೆಳ್ತಂಗಡಿ ತಾಲೂಕು ಕಚೇರಿಯಲ್ಲಿ ಹಾಗೂ ಸರ್ವೆ ಇಲಾಖೆಯಲ್ಲಿ ಜಿಲ್ಲಾಧಿಕಾರಿ ಗಳ ಆದೇಶವನ್ನು ಸಿಬ್ಬಂದಿಗಳು ಪರಿಗಣನೆಗೆ ತೆಗೆದುಕೊಳ್ಳುವುದಿಲ್ಲ, ಬಡವರ ಯಾವುದೇ ಕೆಲಸಗಳು ತಾಲೂಕು ಕಚೇರಿಯಲ್ಲಿ ನಡೆಯುವುದಿಲ್ಲ, ಮಧ್ಯವರ್ತಿಗಳ ಹಾವಳಿ ಹೆಚ್ಚುತ್ತಿದೆ ಎಂದು ಜೂ.20ರಂದು ನಡೆದ ತಾ.ಪಂ ಸಮಾನ್ಯ ಸಭೆಯಲ್ಲಿ ಸದಸ್ಯರು ಆರೋಪಿಸಿದರು.
ಸಭೆಯ ಅಧ್ಯಕ್ಷತೆಯನ್ನು ತಾ.ಪಂ. ಅಧ್ಯಕ್ಷೆ ದಿವ್ಯಜ್ಯೋತಿ ವಹಿಸಿದ್ದರು.
ಉಪಾಧ್ಯಕ್ಷೆ ವೇದಾವತಿ, ಸ್ಥಾಯಿ ಸಮಿತಿ ಅಧ್ಯಕ್ಷ ಸುದೀರ್ ಆರ್.ಸುವರ್ಣ, ತಹಶೀಲ್ದಾರ್ ತಿಪ್ಪೇಸ್ವಾಮಿ, ಕಾರ್ಯನಿರ್ವಾಹಣಾಧಿಕಾರಿ ಸಿ.ಆರ್. ನರೇಂದ್ರ, ತಾ.ಪಂ. ಸಹಾಯಕ ಲೆಕ್ಕ ಅಧೀಕ್ಷಕ ಗಣೇಶ್ ಪೂಜಾರಿ ಉಪಸ್ಥಿತರಿದ್ದರು.
ಪಾರೆಂಕಿಯ ಮಾಜಿ ಯೋಧ ವಿಕ್ಟರ್ ರೊಡ್ರಿಗಸ್ ಎಂಬವರಿಗೆ 1 ಎಕ್ರೆ ಭೂ ಮಂಜೂರಾತಿ ವಿಷಯ ಇಂದಿನ ಸಭೆಯಲ್ಲಿ ಚರ್ಚೆಗೆ ಒಳಗಾಯಿತು. ಇವರಿಗೆ ಜಾಗ ಮಂಜೂರಾತಿಗೆ ಪ್ರಸ್ತಾವನೆ ಸಲ್ಲಿಸಲಾಗಿದೆ ಜಿಲ್ಲಾಧಿಕಾರಿಗಳಿಂದ ಆದೇಶ ಬಂದಿಲ್ಲ ಎಂದು ತಹಶೀಲ್ದಾರ್ ತಿಪ್ಪೇಸ್ವಾಮಿ ಸಭೆಗೆ ವಿವರ ನೀಡಿದರು. ಇದಕ್ಕೆ ಆಕ್ಷೇಪ ವ್ಯಕ್ತಪಡಿಸಿದ ಸದಸ್ಯ ಜೊಯೆಲ್ ಮೆಂಡೋನ್ಸಾ ಅವರು 2005-06ನೇ ಸಾಲಿನಲ್ಲಿ ಜಿಲ್ಲಾಧಿಕಾರಿಗಳು ಇವರಿಗೆ ಜಾಗ ಮಂಜೂರಾತಿಗೆ ಆದೇಶ ಮಾಡಿದ್ದು, ಈ ಆದೇಶದ ಪ್ರತಿಯನ್ನು ಸಭೆಯಲ್ಲಿ ಪ್ರದರ್ಶಿಸಿದರು. ತಾಲೂಕು ಕಚೇರಿಗೆ ಆದೇಶದ ಪ್ರತಿ ಬಂದಿದೆ. ಆದರೆ ಇಲ್ಲಿಯ ಸಿಬ್ಬಂದಿಗಳು ಜಿಲ್ಲಾಧಿಕಾರಿಗಳ ಆದೇಶವನ್ನು ಪರಿಗಣನೆಗೆ ತೆಗೆದುಕೊಳ್ಳುವುದಿಲ್ಲ ಎಂದು ಸದಸ್ಯರು ಆರೋಪಿಸಿದರು.
2013ರಲ್ಲಿ ಕಲ್ಮಂಜ ಗ್ರಾಮದ ಸ.ನಂ. 194/14ರಲ್ಲಿ 17 ಮಂದಿಯ ಜಾಗದ ಪ್ಲಾಟಿಂಗ್‌ಗೆ ಅರ್ಜಿ ಸಲ್ಲಿಸಲಾಗಿದ್ದು, ಜಿಲ್ಲಾಧಿಕಾರಿಗಳು ಆದೇಶ ಮಾಡಿದ್ದಾರೆ. ಇದು ಸರ್ವೆ ಇಲಾಖೆಗೆ ಬಂದು ನಾಲ್ಕು ವರ್ಷ ಆದರೂ ಇನ್ನೂ ಆಗಿಲ್ಲ. ಇವರ ನಂತರ ಅರ್ಜಿ ಕೊಟ್ಟವರ ಪಕ್ಕದ ಜಾಗ ಪ್ಲಾಟಿಂಗ್ ಆಗಿದೆ ಎಂದು ಸದಸ್ಯ ಶಶಿಧರ್ ವಿವರಿಸಿದರು. ತಾಲೂಕು ಕಚೇರಿ ಮತ್ತು ಸರ್ವೆ ಇಲಾಖೆಯಲ್ಲಿ ಹಣ ಕೊಟ್ಟವರ ಕೆಲಸ ಆಗುತ್ತದೆ. ಬಡವರ ಯಾವುದೇ ಕೆಲಸ ಆಗುವುದಿಲ್ಲ, ಮಧ್ಯವರ್ತಿಗಳ ಮೂಲಕ ಹೋದರೆ ಎಲ್ಲಾ ಕೆಲಸ ಕ್ಷಣ ಮಾತ್ರದಲ್ಲಿ ಆಗುತ್ತದೆ ಎಂದು ಸದಸ್ಯರು ಅಸಮಾಧಾನ ವ್ಯಕ್ತಪಡಿಸಿದರು.
ತಾಲೂಕು ಕಚೇರಿಯಲ್ಲಿ ಉಪತಹಶೀಲ್ದಾರ್ ಸೇರಿದಂತೆ, ಸಿಬ್ಬಂದಿಗಳ ಕೊರತೆಯಿದ್ದು, ಯಾವುದೇ ಸಮಸ್ಯೆ ಇದ್ದರೂ ನೇರವಾಗಿ ನನ್ನ ಗಮನಕ್ಕೆ ತನ್ನಿ ಎಂದು ತಹಶೀಲ್ದಾರ್ ತಿಪ್ಪೇಸ್ವಾಮಿ ಸಮಜಾಯಿಕೆ ನೀಡಿದರು. ಆದರೆ ತಹಶೀಲ್ದಾರ್ ಎದುರು ಆಯಿತು ಎಂದು ಒಪ್ಪಿಕೊಳ್ಳುವ ಸಿಬ್ಬಂದಿಗಳು ನಂತರ ಕೆಲಸವೇ ಮಾಡಿಕೊಡದಿರುವ ಅನೇಕ ಉದಾಹರಣೆಗಳಿವೆ ಎಂದು ಸದಸ್ಯರು ತಿಳಿಸಿದರು. ಒಂದು ಹಂತದಲ್ಲಿ ತಹಶೀಲ್ದಾರ್ ಮೇಲೆ ನಿರಂತರ ಆರೋಪಗಳು ಬಂದಾಗ ಸದಸ್ಯ ಗೋಪಿನಾಥ್ ನಾಯಕ್ ಹತ್ತು ವರ್ಷಗಳ ಹಿಂದೆ ಆದ ಘಟನೆ ಬಗ್ಗೆ ತಹಶೀಲ್ದಾರ್‌ರಲ್ಲಿ ಪ್ರಶ್ನೆ ಕೇಳಿದರೆ ಹೇಗೆ ಎಂದು ಆಕ್ಷೇಪ ವ್ಯಕ್ತಪಡಿಸಿದಾಗ, ಇತರ ಸದಸ್ಯರು ಇದಕ್ಕೆ ತೀವ್ರ ಪ್ರತಿರೋಧ ಒಡ್ಡಿದಾಗ ಸಭೆಯಲ್ಲಿ ಗೊಂದಲ ನಿರ್ಮಾಣವಾಯಿತು. ತಾ.ಪಂ. ಕಾರ್ಯನಿರ್ವಾಹಣಾಧಿಕಾರಿಗಳು ಸಭೆಯಲ್ಲಿ ಎಲ್ಲರಿಗೂ ಪ್ರಶ್ನಿಸುವ ಅಧಿಕಾರ ಇದೆ ಎಂದು ಹೇಳಿ ಸಭೆಯನ್ನು ಮುನ್ನಡೆಸಿದರು. ಕಂದಾಯ ಇಲಾಖೆಯ ಪ್ರತ್ಯೇಕ ಸಭೆಗೆ ಗೋಪಿನಾಥ ನಾಯಕ್ ಒತ್ತಾಯಿಸಿದರು.
ವೇಣೂರಿನ ಅಜಿಲಕೆರೆ ವಿವಾದದ ಬಗ್ಗೆ ಎ.ಸಿ. ನ್ಯಾಯಾಲಯದಲ್ಲಿದೆ ಎಂದು ಉತ್ತರ ನೀಡಲಾಗುತ್ತಿದೆ. ಇದು ಸಾರ್ವಜನಿಕ ಕೆರೆ ಇದನ್ನು ಶೀಘ್ರವಾಗಿ ಇತ್ಯರ್ಥ ಪಡಿಸಬೇಕು, ಇಲ್ಲಿಯ 8.50 ಎಕ್ರೆ ಜಾಗವನ್ನು ಪಂಚಾಯತಕ್ಕೆ ಹಸ್ತಾಂತರಕ್ಕೆ ಕ್ರಮ ಕೈಗೊಳ್ಳುವಂತೆ ವಿಜಯ ಗೌಡ ಒತ್ತಾಯಿಸಿದರು. ಅದರಂತೆ ನಿರ್ಣಯ ಮಾಡಿ ಕಳುಹಿಸಲು ನಿರ್ಧರಿಸಲಾಯಿತು.
ಕೊಕ್ಕಡದಲ್ಲಿರುವ 900 ಎಕ್ರೆ ಡಿ.ಸಿ ಮನ್ನಾ ಜಾಗದಲ್ಲಿ ಗೇರು ನಿಗಮದ ವಶವಿರುವ ಜಾಗ ಮತ್ತು ಇತರ ಖಾಸಗಿ ವ್ಯಕ್ತಿಗಳು ಎಷ್ಟು ಜಾಗವನ್ನು ಅತಿಕ್ರಮಣ ಮಾಡಿದ್ದಾರೆ ಉಳಿದ ಜಾಗ ಎಷ್ಟು ಎಂದು ಮಾಹಿತಿ ನೀಡುವಂತೆ ಸದಸ್ಯ ಲಕ್ಷ್ಮೀನಾರಾಯಣ ಒತ್ತಾಯಿಸಿದಾಗ ಮುಂದಿನ ಸಭೆಯಲ್ಲಿ ನೀಡುವುದಾಗಿ ತಹಶೀಲ್ದಾರ್ ಭರವಸೆಯಿತ್ತರು.
ಆಧಾರ್ ಕಾರ್ಡ್ ಮಾಡಿಸಿಕೊಡಲು ಕೆಲವೊಂದು ಖಾಸಗಿ ಸಂಸ್ಥೆಗಳು ರೂ.200 ತೆಗೆದುಕೊಳ್ಳುತ್ತಿದ್ದಾರೆ ಇದರ ಬಗ್ಗೆ ತಹಶೀಲ್ದಾರರು ಕ್ರಮ ತೆಗೆದುಕೊಳ್ಳುವಂತೆ ಸದಸ್ಯ ವಿಜಯ ಗೌಡ, ಲಕ್ಷ್ಮೀನಾರಾಯಣ, ಶಶಿಧರ್, ಸುಶೀಲ, ವಸಂತಿ ಮೊದಲಾದವರು ಒತ್ತಾಯಿಸಿದರು. ಈ ಸಂದರ್ಭ ಮಾತನಾಡಿದ ತಹಶೀಲ್ದಾರ್ ನಮ್ಮ ಕಚೇರಿಯಲ್ಲಿ ಯಾವುದೇ ಹಣ ತೆಗೆದುಕೊಳ್ಳುವುದಿಲ್ಲ, ಖಾಸಗಿ ಏಜೆನ್ಸಿಯವರು ನಮ್ಮ ಕಂಟ್ರೋಲ್‌ಗೆ ಬರುವುದಿಲ್ಲ ಎಂದು ತಿಳಿಸಿದರು. ಉಜಿರೆಯಲ್ಲಿಯೂ ಹೊರಗಿನ ವ್ಯಕ್ತಿಗಳು ರೇಷನ್ ಕಾರ್ಡ್ ಮಾಡಿಸಿಕೊಡುವುದಾಗಿ ಜನರಿಂದ ಹಣ ವಸೂಲಿ ಮಾಡಿರುವುದನ್ನು ಸದಸ್ಯರು ಸಭೆಯ ಗಮನಕ್ಕೆ ತಂದರು. ಇವರ ಬಗ್ಗೆ ಪೊಲೀಸ್ ಕೇಸು ದಾಖಲಿಸಲಾಗಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದರು. ಈ ಸಂದರ್ಭ ಸದಸ್ಯ ಜೊಯೆಲ್ ಮಾತನಾಡಿ ಖಾಸಗಿ ಏಜೆನ್ಸೀಯವರು ಸರಕಾರ ನಿಗದಿತ ಶುಲ್ಕವನ್ನು ಪಡೆದುಕೊಳ್ಳಬಹುದು ಎಂದು ನೆಟ್‌ನಲ್ಲಿ ಮಾಹಿತಿ ಇದೆ ಎಂದು ವಿವರಿಸಿದರು.
ಚಾರ್ಮಾಡಿ ಗ್ರಾಮದ ಕುತ್ರಿಜಾಲು ಪ್ರದೇಶಕ್ಕೆ ಸರಕಾರಿ ಬಸ್ಸು ಬೇಕು. ಈ ಭಾಗದ ನಾಗರಿಕರಿಗೆ, ಶಾಲಾ, ಕಾಲೇಜುಗಳಿಗೆ ಬರುವ ವಿದ್ಯಾರ್ಥಿಗಳಿಗೆ ಅನುಕೂಲವಾಗಲಿದೆ. ಕಳೆದ ಸಭೆಯಲ್ಲಿಯೂ ಇದನ್ನು ಪ್ರಸ್ತಾಪಿಸಿದ್ದೇನೆ ಎಂದು ಸದಸ್ಯ ಕೊರಗಪ್ಪ ಗೌಡ ಹೇಳಿದಾಗ ಮಾತನಾಡಿದ ಕೆಎಸ್ಸಾರ್ಟಿಸಿ ಅಧಿಕಾರಿಗಳು ಪರಿಶೀಲನೆ ನಡೆಸುವ ಭರವಸೆ ನೀಡಿದರು. ಧರ್ಮಸ್ಥಳ ಡಿಪ್ಪೋದಲ್ಲಿ ಸಿಬ್ಬಂದಿಗಳ ಕೊರತೆಯಿದೆ. ಸ್ಥಳೀಯರು ಯಾರೂ ಉದ್ಯೋಗಕ್ಕೆ ಬರುತ್ತಿಲ್ಲ, ಬಸ್ಸಿನ ಕೊರತೆಯೂ ಇದೆ. ಈಗಾಗಲೇ ಚಾಲ್ತಿಯಲ್ಲಿರುವ ಬಸ್ಸಿನ ಸಮಯವನ್ನು ಶಾಲಾ ಮಕ್ಕಳ ಅನುಕೂಲಕ್ಕಾಗಿ ಬದಲಾವಣೆ ಮಾಡಲು ನಾವು ಬದ್ಧರಾಗಿದ್ದೇವೆ ಎಂದು ತಿಳಿಸಿದರು.
ಅಕ್ರಮ ಮದ್ಯಮಾರಾಟ: ಬಂದಾರು ಗ್ರಾಮದ ಮೈರೋಳ್ತಡ್ಕ ಪರಿಸರ ಸೇರಿದಂತೆ ತಾಲೂಕಿನಲ್ಲಿ ಅಕ್ರಮ ಮದ್ಯ ಮಾರಾಟ ದಂದೆ ಬಗ್ಗೆ ಸದಸ್ಯ ಕೃಷ್ಣಯ್ಯ ಆಚಾರ್ಯ ಸಭೆಯಲ್ಲಿ ಪ್ರಶ್ನಿಸಿದರು. ಇದುವರೆಗೆ ತಾಲೂಕಿನಲ್ಲಿ 60 ಪ್ರಕರಣಗಳನ್ನು ದಾಖಲಿಸಿಕೊಳ್ಳಲಾಗಿದೆ ಎಂದು ಅಬಕಾರಿ ಇನ್ಸ್‌ಪೆಕ್ಟರ್ ತುಕರಾಮ ಮಾಹಿತಿ ಇತ್ತರು.
ಅಬಕಾರಿ ಇಲಾಖೆಯವರು ಕೇಸು ಹಾಕಿದವರು ಜಾಮೀನು ಪಡೆದುಕೊಂಡು ನಂತರ ಅದೇ ಕಾಯಕವನ್ನು ಮುಂದುವರಿಸುತ್ತಿರುವ ಬಗ್ಗೆ ಸದಸ್ಯರು ಆತಂಕ ವ್ಯಕ್ತಪಡಿಸಿದರು. ಕಳಿಯ ಗ್ರಾಮದಲ್ಲಿ ಅಕ್ರಮ ಮಾರಾಟಗಾರರ ಲಿಸ್ಟ್ ಕೊಟ್ಟಿದೆ, ಗಾಡಿ ನಂಬ್ರ ಕೊಟ್ಟಿದೆ ಆದರೆ ಇಲಾಖೆಯಿಂದ ಯಾವುದೇ ಕ್ರಮ ಇಲ್ಲ ಮಾರುವುದು ನಿಂತಿಲ್ಲ, ಇದೇ ರೀತಿಯಾದರೆ ಗ್ರಾಮಕ್ಕೊಂದು ವೈನ್ ಶಾಪ್ ಕೊಡಿ ಎಂದು ಗ್ರಾ.ಪಂ. ಅಧ್ಯಕ್ಷ ಶರತ್‌ಕುಮಾರ್ ಹೇಳಿದರು. ಅಬಕಾರಿ ಇಲಾಖೆಯವರು ರೈಡ್‌ಗೆ ಹೊರಟಾಗ ಅಕ್ರಮ ಮಾರಾಟಗಾರರಿಗೆ ಇದರ ಮಾಹಿತಿ ಪೋನ್ ಮೂಲಕ ತಲುಪುತ್ತದೆ ಎಂದು ಕೇಶವತಿ ಹೇಳಿದರೆ, ಕಳೆಂಜದಲ್ಲಿ ಇಂದಿಗೂ ಒಂದು ಕಡೆ ಮಾರಾಟ ನಿಂತಿಲ್ಲ ಎಂದು ಸದಸ್ಯ ಸುಶೀಲ ಸಭೆಯ ಗಮನಕ್ಕೆ ತಂದರು. ಪ್ರಕರಣದಲ್ಲಿ ಸಿಕ್ಕಿ ಹಾಕಿಕೊಂಡು ಪುನಃ ಅದೇ ಕಾರ್ಯವನ್ನು ಮುಂದುವರಿಸುವವರ ಮೇಲೆ ಕಠಿಣ ಕ್ರಮಕ್ಕೆ ಸದಸ್ಯರು ಒತ್ತಾಯಿಸಿದರು. ಪದೇ, ಪದೇ ಸಿಕ್ಕಿ ಹಾಕಿಕೊಂಡವರ ಮೇಲೆ ಮೇಲಾಧಿಕಾರಿಗಳ ಆದೇಶದಂತೆ ಗುಂಡಾ ಕಾಯ್ದೆ ಹಾಕಬಹುದು ಎಂದು ತುಕರಾಮ್ ಮಾಹಿತಿ ನೀಡಿದರು.
ಗುರುವಾಯನಕೆರೆ ಪ್ರೌಢ ಶಾಲೆ: ಗುರುವಾಯನಕೆರೆ ಪೌಢ ಶಾಲೆ ಸತತ 6ನೇ ಬಾರಿ ಶೇ 100 ಫಲಿತಾಂಶ ಪಡೆದು ತಾಲೂಕಿಗೆ ಕೀರ್ತಿ ತಂದಿದೆ. ಆದರೆ ಇಲ್ಲಿ ಮುಖ್ಯೋಪಾಧ್ಯಾಯರು ಸೇರಿದಂತೆ ಗಣಿತ ಮತ್ತು ಪಿ.ಟಿ ಮಾಸ್ಟರ್‌ರ ಕೊರತೆ ಇದೆ ಎಂದು ಸದಸ್ಯ ಗೋಪಿನಾಥ ನಾಯಕ್ ಹೇಳಿ ಶಿಕ್ಷಕರ ನೇಮಕ್ಕೆ ಒತ್ತಾಯಿಸಿದರು. ಮಾಲಾಡಿ ಶಾಲೆಯಲ್ಲಿ ಶಿಕ್ಷಕರ ಕೊರತೆ ಬಗ್ಗೆ ಜೊಯೆಲ್ ಸಭೆಗೆ ವಿವರಿಸಿದರು. ಎಸ್.ಸಿ, ಎಸ್.ಟಿ ಮಕ್ಕಳಿಗೆ ಬಸ್‌ಪಾಸ್ ನೀಡಿದಂತೆ ಸರಕಾರ ಇತರ ಎಲ್ಲಾ ಮಕ್ಕಳಿಗೂ ಇದನ್ನು ವಿಸ್ತರಿಸಬೇಕು ಎಂದು ಶಶಿಧರ್ ಕಲ್ಮಂಜ ಆಗ್ರಹಿಸಿದರು. ಕಡಿರುದ್ಯಾವರ ಶಾಲೆಯಲ್ಲಿ ಶಿಕ್ಷಕರ ಕೊರತೆ ಮತ್ತು ಕಜಕೆ ಶಾಲೆಯಲ್ಲಿ 6ನೇ ತರಗತಿ ಆರಂಭಿಸುವ ಬಗ್ಗೆ ಸದಸ್ಯ ಜಯರಾಮ ಒತ್ತಾಯಿಸಿದರು.
ಬೆಳ್ತಂಗಡಿ ತಾಲೂಕಿಗೆ 12 ಕಾಮಗಾರಿಗಳಿಗೆ ಸರಕಾರ ರೂ. 20 ಕೋಟಿ ಮಂಜೂರುಗೊಳಿಸಿದೆ ಎಂದು ಲೋಕೋಪಯೋಗಿ ಇಲಾಖೆಯ ಸಹಾಯಕ ಕಾರ್ಯನಿರ್ವಾಹಕ ಅಭಿಯಂತರರಾದ ಶಿವಪ್ರಸಾದ್ ಮಾಹಿತಿ ನೀಡಿದರು. ಮೆಸ್ಕಾಂನಿಂದ ತಾಲೂಕಿನಲ್ಲಿ 366 ಪರಿವರ್ತಕಗಳನ್ನು ನಿರ್ಮಿಸಲು ರೂ.18.56 ಕೋಟಿ ಅನುದಾನ ಬಿಡುಗಡೆಯಾಗಿ, ಕಾಮಗಾರಿ ಆರಂಭಗೊಂಡಿದೆ ಎಂದು ಸಹಾಯಕ ಕಾರ್ಯನಿರ್ವಹಕ ಅಭಿಯಂತರ ಶಿವಶಂಕರ್ ಸಭೆಗೆ ಮಾಹಿತಿ ನೀಡಿದರು. ಆರ್.ಟಿ.ಇ ಯೋಜನೆಯಲ್ಲಿ ಬೆಳ್ತಂಗಡಿ ತಾಲೂಕಿನಲ್ಲಿ 200ರಲ್ಲಿ 183 ಮಕ್ಕಳು ನೇಮಕಗೊಂಡಿದ್ದಾರೆ.
ಇವರಲ್ಲಿ 176 ಮಂದಿ ಮಕ್ಕಳು ಶಾಲೆಗೆ ಸೇರ್‍ಪಡೆಗೊಂಡಿದ್ದಾರೆ ಎಂದು ಕ್ಷೇತ್ರ ಶಿಕ್ಷಣಾಧಿಕಾರಿಗಳು ಮಾಹಿತಿ ನೀಡಿದರು.
ತಾ.ಪಂ ಕಾರ್ಯ ನಿರ್ವಾಹಣಾಧಿಕಾರಿ ಸಿ.ಆರ್. ನರೇಂದ್ರ ಸ್ವಾಗತಿಸಿದರು. ತಾಲೂಕು ಸಂಯೋಜಕ ಜಯಾನಂದ ವಂದಿಸಿದರು.

Endo sabhe 1

Endo sabheಶೇ. 50 ನಕಲಿ ಎಂಡೋ ಪೀಡಿತರು: ಸಮಗ್ರ ಪರಿಷ್ಕರಣೆಗೆ ಮನವಿ : ಎಂಡೋ ಸಂತ್ರಸ್ಥರ ಪ್ರಥಮ ಹಂತದ ವೈದ್ಯಕೀಯ ಗುರುತಿಸುವಿಕೆ ಪಟ್ಟಿಯಲ್ಲಿ ನೈಜ ಎಂಡೋ ಸಂತ್ರಸ್ಥರಲ್ಲದ ಮಂದಿ ಶೇ. 50 ಸೇರಿಕೊಂಡಿದ್ದಾರೆ. ಅದೆಷ್ಟೋ ಜನ 65 ವರ್ಷ ಪ್ರಾಯದಿಂದಲೂ ಅಧಿಕ ಪ್ರಾಯದವರು, ಪಾರ್ಶ್ವವಾಯು ಪೀಡಿತರು, ಕೋಳಿ ಅಂಕದಲ್ಲಿ ಹಾಗೂ ಅಪಘಾತ ಯಾ ಇನ್ನಿತರ ಕಾರಣಗಳಲ್ಲಿ ಅಂಗವೈಕಲ್ಯತೆ ಗೊಳಗಾದವರನ್ನೂ ಪಟ್ಟಿಗೆ ಸೇರಿಸಿಕೊಳ್ಳಲಾಗಿದೆ. ಇದರಿಂದಾಗಿ ಸರಕಾರದಿಂದ ನೀಡುವ ಎಂಡೋ ಪ್ಯಾಕೇಜ್ ಅರ್ಹರಲ್ಲದವರಿಗೂ ನೀಡಿದಂತಾಗುತ್ತದೆ. ಇದು ಪ್ರಾಮಾಣಿಕ ಎಂಡೋ ಸಂತ್ರಸ್ಥರಿಗೆ ಅನ್ಯಾಯವೆಸಗಿದಂತಾಗಿದ್ದು ಎಂಡೋ ಸಂತ್ರಸ್ಥರ ಪಟ್ಟಿಯನ್ನು ವಿಶೇಷ ಮಾನದಂಡದಲ್ಲಿ ಪುನರ್ ಪರಿಶೀಲನೆ ನಡೆಸಬೇಕು. ಪೀಡಿತರಲ್ಲದವರನ್ನು ತೆಗದುಹಾಕಬೇಕು ಮತ್ತು ನಿಜವಾದ ಸಂತ್ರಸ್ಥರು ಯಾರಿದ್ದಾರೆ ಅವರಿಗೆ ಕೋಟಿ ರೂ ಪರಿಹಾರ ನೀಡಿದರೂ ಸಾಲದು ಎಂದು ದ.ಕ. ಜಿಲ್ಲಾ ಎಂಡೋ ಸಲ್ಫಾನ್ ವಿರೋಧಿ ಹೋರಾಟ ಸಮಿತಿ ಅಧ್ಯಕ್ಷ ಪೀರ್ ಮಹಮ್ಮದ್ ಸಾಹೇಬ್ ಸಭೆಯಲ್ಲಿ ವಿಷಯ ಮಂಡಿಸಿ ಬಳಿಕ ಜಿಲ್ಲಾಧಿಕಾರಿಯವರಿಗೆ ಲಿಖಿತ ಮನವಿ ನೀಡಿದರು.

ಕೊಕ್ಕಡ : ಎಂಡೋ ವಿರೋಧಿ ಹೋರಾಟ ಸಮಿತಿ ಕೊಕ್ಕಡ ಇದರ ನೇತೃತ್ವದಲ್ಲಿ ವಿವಿಧ ಸಂಘ ಸಂಸ್ಥೆಗಳ ಸಹಕಾರದೊಂದಿಗೆ ಇತ್ತೀಚೆಗೆ ಕೊಕ್ಕಡದಲ್ಲಿ ನಡೆದಿದ್ದ ಬೃಹತ್ ಪ್ರತಿಭಟನೆ ಹಾಗೂ ಉಪವಾಸ ಸತ್ಯಾಗ್ರಹದ ವೇಳೆ ಸರಕಾರದ ಕಡೆಯಿಂದ ಜಿಲ್ಲಾಧಿಕಾರಿ ಡಾ| ಕೆ. ಜಿ ಜಗದೀಶ್ ಅವರು ನೀಡಿದ್ದ ಭರವಸೆ ಯಂತೆ ಜೂ.15ರಂದು ಇಲ್ಲಿನ ಅಂಬೇಡ್ಕರ್
ಭವನದಲ್ಲಿ ಜಿಲ್ಲಾ ಮಟ್ಟದ ಅಧಿಕಾರಿಗಳ ಅನುಸರಣಾ ಸಭೆ ನಡೆಸಿದರು. ಸಭೆಯ ನೇತೃತ್ವವನ್ನು ಸ್ವತಃ ಜಿಲ್ಲಾಧಿಕಾರಿ ಡಾ| ಕೆ.ಜಿ ಜಗದೀಶ್ ಅವರೇ ವಹಿಸಿದ್ದರು. ಉಳಿದಂತೆ ಜಿ.ಪಂ ಕಾರ್ಯನಿರ್ವಹಣಾಧಿಕಾರಿ ಡಾ| ಎಂ. ಆರ್ ರವಿ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ| ರಾಮಕೃಷ್ಣ ರಾವ್, ಜಿಲ್ಲಾ ಮಲೇರಿಯಾ ನಿಯಂತ್ರಣಾಧಿಕಾರಿ ಡಾ. ಅರುಣ್, ಕೊಕ್ಕಡ ಗ್ರಾ.ಪಂ. ಅಧ್ಯಕ್ಷ ವಿ.ಜೆ. ಸೆಬಾಸ್ಟಿಯನ್, ಪುತ್ತೂರು ಎಸಿ ರಘುನಂದನ್ ಮೂರ್ತಿ, ಜಿಲ್ಲಾ ವಿದ್ಯಾಂಗ ಉಪನಿರ್ದೇಶಕ ವಾಲ್ಟರ್ ಡಿಮೆಲ್ಲೋ ಸಹಿತ ಅನೇಕ ಮಂದಿ ಜಿಲ್ಲಾ ಮಟ್ಟದ ಅಧಿಕಾರಿಗಳು ವೇದಿಕೆಯಲ್ಲಿದ್ದರು. ಉಳಿದ ಅಧಿಕಾರಿಗಳಿಗೆ ಪ್ರತ್ಯೇಕ ಆಸನ ವ್ಯವಸ್ಥೆ ಮಾಡಲಾಗಿತ್ತು.
ಹೋರಾಟಗಾರರು ಇಟ್ಟಿದ್ದ 20 ಬೇಡಿಕೆಗಳ ಮೇಲೆ ಅನುಸರಣೆಯಾಗಿರುವ ಕಾರ್ಯಗಳ ಬಗ್ಗೆ ಎಜೆಂಡಾ:
ಕೊಕ್ಕಡದ ಎಂಡೋ ವಿರೋಧೀ ಹೋರಾಟಗಾರರು ಮತ್ತು ಸಂತ್ರಸ್ಥರು ಆಡಳಿತ ಮತ್ತು ಸರಕಾರದ ಮುಂದಿಟ್ಟಿದ್ದ ಬೇಡಿಕೆಗಳನ್ನು ಎಂಡೋ ಸಂತ್ರಸ್ಥರ ಕುರಿತಾಗಿ ಜಿಲ್ಲಾ ಮಟ್ಟದಲ್ಲಿ ನಡೆದಿರವ ಅನುಸರಣೆಗಳ ಬಗ್ಗೆ ಸಭೆಯಲ್ಲಿ ಚರ್ಚೆ ನಡೆದು ಸ್ವತಃ ಜಿಲ್ಲಾಧಿಕಾರಿಗಳೇ ಹಂತ ಹಂತವಾಗಿ ವಿಚಾರಗಳನ್ನು ಮುಂದಿಡುತ್ತಾ, ಅದರಂತೆ ಆಯಾಯ ಅಧಿಕಾರಿಗಳ ಅಭಿಪ್ರಾಯ ಪಡೆದು ಆದೇಶಗಳನ್ನು ನೀಡಿದರು. ಪ್ರಾಸ್ತಾವಿಕವಾಗಿ ಮಾತನಾಡಿದ ಜಿಲ್ಲಾಧಿಕಾರಿ ಜಗದೀಶ್ ಅವರು, ಎಂಡೋ ಪೀಡಿತರ ಕೆಲಸ ಸರಕಾರಿ ಆದೇಶವೆಂದು ತಿಳಿಯಬೇಡಿ. ಅವರ ಬಗ್ಗೆ ಎಲ್ಲ ಅಧಿಕಾರಿಗಳೂ ವಿಶೇಷವಾಗಿ ಗಮನ ಹರಿಸಿ ಮಾನವೀಯ ನೆಲೆಯಲ್ಲಿ ಅವರ ಎಲ್ಲಾ ಕೆಲಸ ಕಾರ್ಯಗಳನ್ನು ಯಾವೊಂದೂ ಅಡೆತಡೆಯಿಲ್ಲದೇ ಕ್ಷಿಪ್ರವಾಗಿ ನಡೆಸಿಕೊಡಬೇಕು ಎಂದರು.
ಸರಕಾರದ ಕಾರ್ಯದರ್ಶಿಗೆ ಪತ್ರ:
ತಮ್ಮ ಬೇಡಿಕೆಗಳ ಪೈಕಿ ನನ್ನ ವ್ಯಾಪ್ತಿಯದ್ದನ್ನು ಇಲ್ಲೇ ಪರಿಹರಿಸಿದ್ದು ಉಳಿದ ನಮ್ಮ ಮಿತಿಗಿಂತ ಮೇಲಿನದ್ದನ್ನು ಸವಿವರವಾಗಿ ರಾಜ್ಯಮಟ್ಟದ ಆಯಾಯ ಇಲಾಖಾ ಮುಖ್ಯ ಕಾರ್ಯದರ್ಶಿಯವರಿಗೆ ಲಿಖಿತವಾಗಿ ಬರೆದಿರುವುದಾಗಿ ತಿಳಿಸಿದರು.
ಪ್ರತಿಭಟನಾ ಸಭೆಯಲ್ಲಿ ಹೋರಾಟಗಾರರು ನೀಡಿದ್ದ 20 ಅಂಶಗಳ ಬೇಡಿಕೆಗಳಲ್ಲಿ ಜಿಲ್ಲಾ ಮಟ್ಟದ ಅಧಿಕಾರಿಗಳ ವ್ಯಾಪ್ತಿಯಲ್ಲಿ ಸರಿಪಡಿಸಬಹುದಾದ ವಿಷಯಗಳನ್ನು ಸಮರ್ಪಕವಾಗಿ ಅನುಷ್ಠಾನಕ್ಕೆ ತರುವ ಕಾರ್ಯಕ್ಕೆ ಆಯಾಯ ಇಲಾಖಾಧಿಕಾರಿಗಳ ಮೂಲಕ ಪರಿಹಾರವನ್ನು ಕಂಡುಕೊಳ್ಳಲಾಯಿತು. ಮತ್ತು ಈ ಬಗ್ಗೆ ಜಿಲ್ಲಾಡಳಿತದಿಂದ ಕೈಗೊಳ್ಳಲಾಗಿರುವ ಅನುಸರಣಾ ವರದಿಯನ್ನು ಸಭೆಗೆ ತಿಳಿಸಲಾಯಿತು. ಹಾಗೂ ಎಂಡೋ ಹೋರಾಟಗಾರರು ನೀಡಿದ್ದ ಬೇಡಿಕೆಗಳಲ್ಲಿ ಸರಕಾರ ಮಟ್ಟದಲ್ಲಿ ನಡೆಯಬಹುದಾದ ಕೆಲವು ಕಾರ್ಯಗಳನ್ನು ಸರಕಾರದ ಆಯಾಯ ಇಲಾಖಾ ಮುಖ್ಯ ಕಾರ್ಯದರ್ಶಿಯವರಿಗೆ ಮತ್ತು ಮುಖ್ಯಮಂತ್ರಿಯವರ ಮುಖ್ಯ ಕಾರ್ಯದರ್ಶಿಯವರಿಗೆ ಜಿಲ್ಲಾಧಿಕಾರಿಗಳ ಮೂಲಕ ಬರೆಯಲಾದ ಪತ್ರವನ್ನು ಸಭೆಯಲ್ಲಿ ಓದಿಹೇಳಲಾಯಿತು.
ಸಭೆಯಲ್ಲಿ ಉನ್ನತ ಅಧಿಕಾರಿಗಳೂ ಭಾಗಿ:
ಕೆ ಎಸ್ ಆರ್ ಟಿಸಿ ಪುತ್ತೂರು ಉಪ ವಿಭಾಗದ ನಿಯಂತ್ರಣಾಧಿಕಾರಿ ನಾಗರಾಜ್ ಶಿರಾಲಿ, ಮಂಗಳೂರು ಉಪವಿಭಾಗದ ಎಸಿ, ಸಮಾಜ ಕಲ್ಯಾಣ ಇಲಾಖೆ ಅಧಿಕಾರಿ ಜಿ ಸಂತೋಷ್ ಕುಮಾರ್,ಜಿಲ್ಲಾ ವಾರ್ತಾಧಿಕಾರಿ ಖಾದರ್ ಷಾ, ಜಿಲ್ಲಾ ಮಟ್ಟದ ಸರಕಾರಿ ಅಧಿಕಾರಿಗಳು, ಬೆಳ್ತಂಗಡಿ, ಪುತ್ತೂರು, ಸುಳ್ಯ, ಮಂಗಳೂರು, ಬಂಟ್ವಾಳ ತಾಲೂಕುಗಳ ತಹಶೀಲ್ದಾರುಗಳು ಮತ್ತು ಆರೋಗ್ಯಾಧಿಕಾರಿಗಳು, ಹಾಗೂ ತಾಲೂಕು ಪಂಚಾಯತ್ ಕಾರ್ಯನಿರ್ವಹಣಾಧಿಕಾರಿಗಳು, ತಾಲೂಕು ಮಟ್ಟದ ಇತರ ಎಲ್ಲಾ ಅಧಿಕಾರಿಗಳು ಈ ಸಭೆಯಲ್ಲಿ ಪಾಲ್ಗೊಂಡಿದ್ದರು. ಪೂವಾಜೆ ಕುಶಾಲಪ್ಪ ಗೌಡ, ಗಂಗಾರತ್ನಾ, ಜಾರಪ್ಪ ಗೌಡ ಕೊಕ್ಕಡ, ಯೋಗೀಶ್ ಆಲಂಬಿಲ, ರಾಮಚಂದ್ರ ಭಟ್ ಕುತ್ಲೂರು, ಪಿ.ಕೆ ಅಬ್ದುಲ್ ರಹಿಮಾನ್, ಅಶೋಕ ಗೋಗಟೆ, ಜಾರಪ್ಪ ಗೌಡ, ಕಮಲಾ, ನಾಗರತ್ನ ಮುಂತಾದವರು ಉಪಸ್ಥಿತರಿದ್ದರು.

Hakkupathra vitharaneಬೆಳ್ತಂಗಡಿ: ಕುದುರೆಮುಖ ರಾಷ್ಟ್ರೀಯ ಉದ್ಯಾನವನ ವ್ಯಾಪ್ತಿಯಲ್ಲಿ ಅನೇಕ ವರ್ಷಗಳಿಂದ ವಾಸ್ತವ್ಯವಿದ್ದು ಕೃಷಿ ಮಾಡಿಕೊಂಡಿದ್ದ ಆರು ಕುಟುಂಬಗಳು ಸ್ವಯಂಪ್ರೇರಿತರಾಗಿ ಹೊರಬಂದಿದ್ದು, ಈ ಕುಟುಂಬಗಳಿಗೆ ಸರಕಾರದಿಂದ ಒಟ್ಟು ರೂ. 4,72,16,232 ಪರಿಹಾರದ ಚೆಕ್‌ಅನ್ನು ಜೂ.17ರಂದು ವಿತರಿಸಲಾಯಿತು.
ಬೆಳ್ತಂಗಡಿ ಕ್ಷೇತ್ರದ ಶಾಸಕ ಕೆ. ವಸಂತ ಬಂಗೇರ ಅವರು ನಗರ ಪಂಚಾಯತದಲ್ಲಿ ನಡೆದ ಕಾರ್ಯ ಕ್ರಮದಲ್ಲಿ ಫಲಾನುಭವಿಗಳಿಗೆ ಚೆಕ್ ವಿತರಿಸಿದರು. ಪರಿಹಾರ ಚೆಕ್ ಪಡೆದುಕೊಂಡವರಲ್ಲಿ ಶಿರ್ಲಾಲು ಗ್ರಾಮದ ಎಂಡೇಲು ನಿವಾಸಿ ಶೀನಪ್ಪ ಮಲೆಕುಡಿಯ ರೂ.61,79,292, ಮಲವಂತಿಗೆ ಗ್ರಾಮದ ಎಳನೀರು ಜಿನಚಂದ್ರ ನಾಯಕ್ ರೂ.75,13,104, ಶಿರ್ಲಾಲು ಗ್ರಾಮದ ಎಂಡೇಲು ನಿವಾಸಿ ಗಿರಿಜ ರೂ.35,50,514, ಮಲವಂತಿಗೆ ಗ್ರಾಮದ ಬೊಳ್ಳೆ ನಿವಾಸಿ ಬೋಜಪ್ಪ ಗೌಡ ರೂ.1,08,97,756, ಶಿರ್ಲಾಲು ಗ್ರಾಮದ ಎಂಡೇಲು ಜಾರಪ್ಪ ರೂ.74,37,253, ಮಲವಂತಿಗೆ ಗ್ರಾಮದ ಎಳನೀರು ನಿವಾಸಿ ವೃಷಭರಾಜ್ ರೂ.1,16,38,313.
ಈ ಆರು ಕುಟುಂಬಗಳು ಕುದುರೆಮುಖ ರಾಷ್ಟ್ರೀಯ ಉದ್ಯಾನವನ ವ್ಯಾಪ್ತಿಯಲ್ಲಿ ಹಲವು ವರ್ಷಗಳಿಂದ ವಾಸ್ತವ್ಯವನ್ನು ಹೊಂದಿದ್ದರು. ಇವರು ಸ್ವಂತ ಜಾಗವನ್ನು ಹೊಂದಿದ್ದು, ಅದರಲ್ಲಿ ಕೃಷಿ ಮಾಡಿಕೊಂಡು ಜೀವನ ನಡೆಸುತ್ತಿದ್ದರು. ಇವರು ಉದ್ಯಾನವನ ವ್ಯಾಪ್ತಿಯಿಂದ ಸ್ವಯಂ ಪ್ರೇರಿತವಾಗಿ ಹೊರಬರುವುದಾಗಿ ಸರಕಾರಕ್ಕೆ ಅರ್ಜಿ ಸಲ್ಲಿಸಿದ್ದರು. ಇವರ ಒಟ್ಟು ಜಾಗ, ಜಾಗದಲ್ಲಿ ಬೆಳೆದ ಬೆಳೆ, ಹಾಗೂ ಇನ್ನಿತರ ಸೋತ್ತುಗಳನ್ನು ವಿವಿಧ ಇಲಾಖೆಗಳು ಮೌಲ್ಯಮಾಪನ ನಡೆಸಿ ಹಾಕಿದ ದರದಂತೆ ಸರಕಾರ ಅವರಿಗೆ ಪರಿಹಾರ ಧನ ಮಂಜೂರುಗೊಳಿಸಿತ್ತು. ಈ ಪರಿಹಾರಕ್ಕೆ ತೃಪ್ತಿ ಪಟ್ಟು ಆರು ಕುಟುಂಬಗಳು ಇದೀಗ ತಮ್ಮ ಜಾಗವನ್ನು ಸರಕಾರಕ್ಕೆ ಬಿಟ್ಟು ಕೊಟ್ಟು ಪರಿಹಾರವನ್ನು ಪಡೆದುಕೊಂಡು
ಉದ್ಯಾನವನ ವ್ಯಾಪ್ತಿಯಿಂದ ಹೊರಬಂದಿದೆ.
ಪರಿಹಾರ ವಿತರಣೆ ಸಂದರ್ಭದಲ್ಲಿ ತಹಶೀಲ್ದಾರ್ ತಿಪ್ಪೇಸ್ವಾಮಿ, ಅಕ್ರಮ-ಸಕ್ರಮ ಸಮಿತಿ ಸದಸ್ಯರಾದ ರಾಜಶೇಖರ ಅಜ್ರಿ, ಜಿ.ಪಂ. ಸದಸ್ಯ ಧರಣೇಂದ್ರ ಕುಮಾರ್, ಎ.ಪಿ.ಎಂ.ಸಿ. ಅಧ್ಯಕ್ಷ ಸತೀಶ್ ಕಾಶಿಪಟ್ಣ, ವನ್ಯಜೀವಿ ವಲಯ ಬೆಳ್ತಂಗಡಿ ವಲಯಾರಣ್ಯಾಧಿಕಾರಿ ಕೃಷ್ಣೇ ಗೌಡ, ಉಪವಲಯ ಅರಣ್ಯಾಧಿಕಾರಿ ಪ್ರದೀಪ್, ಅಕ್ರಮ-ಸಕ್ರಮ ಸಮಿತಿ ಸದಸ್ಯರು, ಕಂದಾಯ ಇಲಾಖೆಯ ಅಧಿಕಾರಿ ವರ್ಗದವರು ಉಪಸ್ಥಿತರಿದ್ದರು. ಇದೇ ಸಂದರ್ಭದಲ್ಲಿ ಪ್ರಾಕೃತಿಕ ವಿಕೋಪ ಪರಿಹಾರದ ಚೆಕ್ ಹಾಗೂ ೯೪ಸಿ ಹಕ್ಕುಪತ್ರವನ್ನು ಶಾಸಕರು ಫಲಾನುಭವಿಗಳಿಗೆ ವಿತರಿಸಿದರು.

radamma 2ಕೊಯ್ಯೂರು : ತನ್ನನ್ನು ತನ್ನ ಮಗನೇ ಪೆಟ್ರೋಲ್ ಸುರಿದು ಕೊಲೆಗೆ ಯತ್ನಿಸಿರುವುದಾಗಿ ಕೊಯ್ಯೂರು ಗ್ರಾಮದ ನೆಕ್ಕರೆಕೋಡಿ ನಿವಾಸಿ, ನಿವೃತ್ತ ಮೆಸ್ಕಾಂ ಎಂಜಿನಿಯರ್ ಕೂಸಪ್ಪ ಗೌಡ ಅವರ ಪತ್ನಿ ರಾಧಮ್ಮ (55ವ.) ಅವರು ಸರಕಾರಿ ಆಸ್ಪತ್ರೆಗೆ ದಾಖಲಾಗಿ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.
ಜಾಗದ ತಕರಾರೊಂದಕ್ಕೆ ಸಂಬಂಧಿಸಿದಂತೆ ಈ ಘಟನೆ ನಡೆದು ದಾಗಿ ದೂರಲಾಗಿದೆ. ಆದರೆ ಘಟನೆ ನಡೆದ ಮರುದಿನ ವೀಡಿಯೋವೊಂದು ಬಹಿರಂಗಗೊಂಡಿದ್ದು, ತಾಯಿಯೇ ತನ್ನ ಸೊಸೆ ಹಾಗೂ ಪುಟಾಣಿ ಮಕ್ಕಳ ಮೇಲೆ ದೌರ್ಜನ್ಯವೆಸಗುತ್ತಿರುವ ದೃಶ್ಯಗಳು ಕಂಡು ಬಂದಿದ್ದು ಪ್ರಕರಣಕ್ಕೆ ಟ್ವಸ್ಟ್ ಸಿಕ್ಕಿದೆ.
ರಾಧಮ್ಮ ಅವರ ಹೆಸರಿನಲ್ಲಿ 1.6 ಎಕರೆ ಜಮೀನು ಇದೆ. ಈ ಬಗ್ಗೆ ತಾಯಿ ಮಕ್ಕಳೆಡೆ ವ್ಯಾಜ್ಯವಿದ್ದು ಪಾಲು ವಿಚಾರ ದೂರು ಈಗಾಗಲೇ ನ್ಯಾಯಾಲಯದ ಮೆಟ್ಟಿಲೇರಿದೆ. ಈ ಮಧ್ಯೆ ಪುತ್ರ ಹರೀಶ್ ಅವರು ವೃದ್ದ ತಂದೆ ತಾಯಿಗೆ ದೈಹಿಕ ಮಾನಸಿಕ ಕಿರುಕುಳ ನೀಡುತ್ತಿದ್ದರು ಎಂದು ದೂರಲಾಗಿದೆ. ಜೂ. 18 ರಂದು ಜೆಸಿಬಿ ಮೂಲಕ ಗಡಿಗುರುತು ಮಾಡುವ ಪ್ರಕ್ರೀಯೆ ನಡೆಯುತ್ತಿದ್ದಾಗ ಅಲ್ಲಿಗೆ ಬಂದ ಪುತ್ರ ಹರೀಶ್ ಮತ್ತು ಅವರ ಪತ್ನಿ ಪೆಟ್ರೋಲ್ ಕ್ಯಾನ್‌ನಿಂದ ಪೆಟ್ರೋಲ್ ಸುರಿದು ತಾಯಿಯನ್ನು ಕೊಲೆಗೆ ಯತ್ನಿಸಿದ್ದಾನೆ ಎಂಬುದು ಠಾಣೆಗೆ ಬಂದ ಮಾಹಿತಿ.
ಅಗಲು ಹಾಕಲು ವಿರೋಧ – ಈ ವೇಳೆ ತಾಯಿಂದಲೇ ಎಳೆಯ ಮಕ್ಕಳ ಮೇಲೆ ದೌರ್ಜನ್ಯ :
ಮನೆಯಲ್ಲಿ ಭಾರೀ ಕಿರಿಕಿರಿ ಇದ್ದ ಕಾರಣ ಪುತ್ರ ಹರೀಶ ಪಕ್ಕದಲ್ಲೇ ಶೆಡ್ಡ್‌ನಿರ್ಮಿಸಿ ಬೇರೆಯೇ ವಾಸವಾಗಿದ್ದರು. ವ್ಯಾಜ್ಯ ಮತ್ತು ಗಲಾಟೆ ಹಾಗೆಯೇ ಮುಂದುವರಿಯುತ್ತಿದ್ದ ಭಾಗವಾಗಿ ರವಿವಾರದಂದು ಜೆಸಿಬಿ ಮೂಲಕ ಅಗಳು ಹಾಕುವ ಕಾರ್ಯಕ್ಕೆ ರಾಧಮ್ಮ ಮುಂದಾಗಿದ್ದರು. ಈ ವೇಳೆ ಜೆಸಿಬಿಗೆ ಅಡ್ಡಲಾಗಿ ಸೊಸೆ ಹಾಗೂ ಇಬ್ಬರು ಎಳೆಯ ಮಕ್ಕಳು ನೀಂತಿದ್ದರು. ಈ ವೇಳೆ ಎಳೆಯ ಪ್ರಾಯದ ಇಬ್ಬರು ಮಕ್ಕಳೊಂದಿಗೆ ನಿಂತಿದ್ದ ಸೊಸೆಯ ಬಳಿಗೆ ಬಂದ ಅತ್ತೆ ಮತ್ತು ನಾದಿನಿ ಕೈಯಲ್ಲಿ ಹಿಡಿದಿದ್ದ ಮಗುವನ್ನು ತಾಯಿಯಿಂದ ಕಿತ್ತೆಸೆದಿದ್ದಾರೆ. ಅಳುತ್ತಿದ್ದು ಮಗುವನ್ನು ಪಕ್ಕಕ್ಕೆ ದೂಡಿದ ಇವರು ಬಳಿಕ ಪುಟ್ಟ ಮಗುವನ್ನು ಎತ್ತಿಕೊಂಡು ನಿಂತಿದ್ದ ಮಹಿಳೆಯ ಮೇಲೆ ಹಲ್ಲೆ ನಡೆಸುತ್ತಾರೆ. ಜೋರಾಗಿ ಅಳುತ್ತಿದ್ದ ಮಗುವಿನೊಂ ದಿಗೆ ಆಕೆಯನ್ನು ದೂಡಿ ಹಾಕಿ ಜೆಸಿಬಿ ಹೋಗಲು ಅನುವು ಮಾಡಿಕೊಡು ತ್ತಿರುವ ದೃಶ್ಯಗಳು ಕಂಡುಬಂದಿದೆ.
ಇದೀಗ ಪೊಲೀಸರ ಗಮನಕ್ಕೂ ವಿಚಾರ ಬಂದಿದ್ದು ಪ್ರಕರಣದ ಬಗ್ಗೆ ಮತ್ತಷ್ಟು ತನಿಖೆ ಪ್ರಾರಂಭಿಸಿದ್ದಾರೆ.

dharmastala yoga1

dharmastala yoga4ಧರ್ಮಸ್ಥಳ: ಬಿಎನ್‌ವೈಎಸ್ ಕಾಲೇಜು ಮತ್ತು ಆಸ್ಪತ್ರೆಯ ವತಿಯಿಂದ ಭಾರತ ಸರಕಾರದ ಮೂಲಕ ಮುಂದಿನ ನವಂಬರ್ 21 ರಿಂದ 24ರ ವರೆಗೆ ಶ್ರೀ ಕ್ಷೇತ್ರ ಧರ್ಮಸ್ಥಳದಲ್ಲಿ ಅಂತಾರಾಷ್ಟ್ರೀಯ ಯೋಗ ಸಂಭ್ರಮ ಆಯೋಜಿಲಾಗಿದೆ. ಈ ಮೂರು ದಿನಗಳಲ್ಲಿ ಅಂತಾರಾಷ್ಟ್ರೀಯ ಯೋಗ ಪಟುಗಳು ಶ್ರೀ ಕ್ಷೇತ್ರಕ್ಕೆ ಆಗಮಿಸಲಿದ್ದಾರೆ. ಅವರ ಮುಂದೆ ಯೋಗ ಪ್ರದರ್ಶಿಸುವ ಮತ್ತು ಅವರ ಯೋಗವನ್ನು ನೋಡುವ ಯೋಗ ನಮ್ಮದಾಗಲಿದೆ ಎಂದು ಶ್ರೀ ಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿ ಡಾ| ಡಿ. ವೀರೇಂದ್ರ ಹೆಗ್ಗಡೆಯವರು ಘೋಷಿಸಿದರು.
ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಪ್ರಕೃತಿ ಚಿಕಿತ್ಸಾ ಮತ್ತು ಯೋಗ ವಿಜ್ಞಾನಗಳ ಮಹಾವಿದ್ಯಾಲಯ ಮತ್ತು ಆಸ್ಪತ್ರೆ ಇದರ ವತಿಯಿಂದ ಜೂ. 21 ರಂದು ಧರ್ಮಸ್ಥಳದ ಅಮೃತವರ್ಷಿಣಿ ಸಭಾಂಗಣದಲ್ಲಿ ನಡೆದ 3ನೇ ವಿಶ್ವಯೋಗ ದಿನಾಚರಣೆ-2017 ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡುತ್ತಿದ್ದರು.
ಆನ್‌ಲೈನ್ ಮೂಲಕ ಆರೋಗ್ಯ ಪಡೆಯಲು ಸಾಧ್ಯವಿಲ್ಲ:
ಇಂದು ಎಲ್ಲವನ್ನೂ ಆನ್‌ಲೈನ್ ಪರ್ಚೆಸ್ ಕಾಲ. ಎಲ್ಲವನ್ನೂ ಆನ್‌ಲೈನ್ ಮೂಲಕ ಬುಕ್ಕಿಂಗ್ ಮತ್ತು ಪೇಮೆಂಟ್ ಮಾಡಿ ವಸ್ತುಗಳನ್ನು ಮನೆಬಾಗಿಲಿಗೆ ತರಿಸಿಕೊಳ್ಳಬಹುದು. ಆದರೆ ಆರೋಗ್ಯವನ್ನು ಆನ್‌ಲೈನ್ ಮೂಲಕ ಪಡೆಯಲು ಸಾಧ್ಯವಿಲ್ಲ.
ನಿರಂತರ ಯೋಗಾಭ್ಯಾಸದಿಂದ ದೇಹ, ಮನಸ್ಸು, ಇಂದ್ರಿಯಗಳನ್ನು ನಿಯಂತ್ರಣಕ್ಕೆ ತರಬಹುದು. ಹಿಂದಿನ ಕಾಲದಲ್ಲಿ ಭಾರತ ಹಾವಾಡಿಗರ ದೇಶ ಎಂಬುದಾಗಿ ಕರೆಸಿಕೊಂಡಿತ್ತು. ನಾವೆಲ್ಲಾ ಸಣ್ಣವರಿರುವಾಗ ಬಡ ದೇಶ ಎನ್ನುತ್ತಿದ್ದರು. ಅದೇ ಭಾರತ ಜಗತ್ತಿಗೆ ದೀರ್ಘಾಯುಸ್ಸು ಕೊಡುವ ಯೋಗವನ್ನು ಪ್ರಧಾನಿ ನರೇಂದ್ರ ಮೋದಿಯವರು ಕೊಡುಗೆಯಾಗಿ ನೀಡಿದರು. ಬಡ ಎನ್ನುತ್ತಿದ್ದ ಭಾರತವನ್ನು ಹಿಂದಿಯಲ್ಲಿನ ಬಡಾ (ದೊಡ್ಡ) ದೇಶ ಎಂಬುದಾಗಿ ಮಾಡಿದರು ಎಂದು ಹೆಗ್ಗಡೆಯವರು ವಿಶ್ಲೇಶಿಸಿದರು.
ಆರೋಗ್ಯವಂತ ದೇಹ ಮತ್ತು ಮನಸ್ಸು ಬೇಕು :
ಆಧುನಿಕ ಜೀವನ ಶೈಲಿ, ಅತಿಯಾದ ತಾಂತ್ರಿಕತೆ ಬಳಕೆಯಿಂದ ಮನುಷ್ಯ ಶಕ್ತಿ
ಕಳೆದುಕೊಂಡಿದ್ದಾನೆ. ಎಲ್ಲವನ್ನೂ ರೋಬೋಟ್‌ಗಳು ಮಾಡಿಕೊಡುತ್ತಿದೆ. ಎಲ್ಲರೂ ಹೆಪ್ಪಿ ಮ್ಯಾನ್‌ಗಳಾಗಿದ್ದಾರೆ. ದೇಹವನ್ನು ದಂಡಿಸುವ ಪ್ರವೃತ್ತಿ ಕಡಿಮೆಯಾಗಿದೆ. ದೇಹ, ಮನಸ್ಸು, ಇಂದ್ರಿಯಗಳು ನನ್ನದು ಎಂಬ ಭಾವನೆ ಮೂಡಬೇಕು. ಪ್ರಧಾನಿಯವರ ಸಂದೇಶದಂತೆ ಭಾರತವನ್ನು ಮಧುಮೇಹ ಮುಕ್ತ (ಶುಗರ್ ಕಾಯಿಲೆ), ರೋಗ ಮುಕ್ತ ದೇಶವಾಗಿ ಮಾರ್ಪಾಟು ಮಾಡಬೇಕು ಎಂದರು.
27 ವರ್ಷಗಳ ಹಿಂದೆಯೇ ಆಲೋಚಿಸಲಾಗಿತ್ತು:
ಪಂತಂಜಲಿ ಋಷಿ ಮುನಿಗಳ ಮೂಲಕ ಯೋಗಕ್ಕೆ ಸೂತ್ರ ಬಂತು. ಸುಮಾರು 5 ಸಾವಿರ ವರ್ಷಗಳ ಹಳೆಯದಾದ ಬದುಕಿನ ಅಂತಸತ್ವದ ಯೋಗವನ್ನು ಮೂರು ವರ್ಷಗಳಿಂದ ವಿಶ್ವಮಟ್ಟಕ್ಕೆ ಏರಿಸಿ ದೇಶದ ಕೊಡುಗೆ ನೀಡಲಾಗಿದೆ. ಆದರೆ ಶ್ರೀ ಕ್ಷೇತ್ರ ಧರ್ಮಸ್ಥಳದ ವತಿಯಿಂದ ಸುಮಾರು 27 ವರ್ಷಗಳ ಹಿಂದೆಯೇ ಯೋಗ ಪ್ರಚಾರಕ್ಕಾಗಿ ಸಂಸ್ಥೆಯೊಂದನ್ನು ಕಟ್ಟಿ, ಪ್ರಾರಂಭದಲ್ಲಿ 2500 ಮಂದಿ ಶಿಕ್ಷಕರಿಗೆ ಯೋಗ ತರಬೇತಿ ನೀಡಿ, ಅವರ ಮೂಲಕ ಒಬ್ಬೊಬ್ಬರು 10 ಮಂದಿಗೆ ತರಬೇತಿಯಂತೆ ಲಕ್ಷಾಂತರ ಮಂದಿಗೆ ಯೋಗದ ಸಂದೇಶ ಪ್ರಸಾರವಾಗುವಂತೆ ಮಾಡಲಾಗಿದೆ ಎಂಬುದು ಗಮನಾರ್ಹ ಎಂದರು.
ಯೋಗ ಮಾನಸಿನ ಉದ್ವೇಗ ನಿಯಂತ್ರಣಕ್ಕಿರುವ ಮಾರ್ಗ: ಶ್ಯಾಮ್ ಭಟ್
ಉದ್ಘಾಟನೆ ನೆರವೇರಿಸಿದ ಕರ್ನಾಟಕ ಲೋಕ ಸೇವಾ ಆಯೋಗದ ಅಧ್ಯಕ್ಷ ಶ್ಯಾಮ್ ಭಟ್ ಮಾತನಾಡಿ, ಭಜನೆ, ವಿಶ್ರಾಂತಿ, ನಿದ್ರೆ, ವ್ಯಾಯಾಮ, ಸತ್ಸಂಗ ಇತ್ಯಾಧಿಗಳಿಗೆ ಮನಸ್ಸನ್ನು ನಿಯಂತ್ರಣದಲ್ಲಿಡಲು ಸಾಧ್ಯವಿದ್ದು, ದುಷ್ಟ ಚಿಂತನೆಗಳನ್ನು ನಿಗ್ರಹಿಸಬಹುದು. ಶೀಘ್ರ ವೃದ್ಧಾಪ್ಯ ಮತ್ತು ಅನಾರೋಗ್ಯ ಇಂದಿನ ಪೀಳಿಗೆಯ ಸಮಸ್ಯೆ. ಯೋಗ ಮಾನಸಿಕ ಉದ್ವೇಗ ನಿಯಂತ್ರಣಕ್ಕಿರುವ ಏಕೈಕ ಮಾರ್ಗ ಎಂದರು.
ಮುಖ್ಯ ಅತಿಥಿಯಾಗಿದ್ದ ಕೆನರಾ ಬ್ಯಾಂಕ್ ಮಹಾಪ್ರಬಂಧಕ ರವೀಂದ್ರ ಭಂಡಾರಿ ಮಾತನಾಡಿ, ನಮ್ಮ ಬ್ಯಾಂಕ್‌ನಲ್ಲಿ 1.50 ಸಾವಿರ ಕೋಟಿ ವ್ಯವಹಾರ ನೋಡಿಕೊಳ್ಳುವ ಹೊಣೆಗಾರಿಕೆ ನನ್ನ ಮೇಲಿದ್ದು ಎಷ್ಟು ಒತ್ತಡದ ಕೆಲಸವಾಗಿರಬಹುದೆಂದು ನೀವೇ ಊಹಿಸಿಕೊಳ್ಳಬಹುದು. ಆದರೆ ಪ್ರತಿ ದಿನ ಯೋಗ ಮಾಡುವುದರಿಂದ ಈ ಎಲ್ಲಾ ಒತ್ತಡಗಳನ್ನು ನಾನು ಚೆನ್ನಾಗಿ ನಿಭಾಯಿಸಿಕೊಂಡು ಹೋಗುವಲ್ಲಿ ಯಶಸ್ಸು ಕಂಡಿದ್ದೇನೆ. ಕೆನರಾ ಬ್ಯಾಂಕ್ ಈ ಕಾರ್ಯಕ್ರಮವನ್ನು ಮೆಚ್ಚಿ ನಿಮ್ಮ ಜೊತೆ ಕೈ ಜೋಡಿಸಿದೆ. ಮುಂದೆಯೂ ಅಗತ್ಯ ನೆರವು ನೀಡಲಾಗುವುದು ಎಂದರು.
ರಾಷ್ಟ್ರೀಯ ಸೇವಾ ಯೋಜನಾಧಿಕಾರಿ ಡಾ| ಬಿ. ವಸಂತ ಶೆಟ್ಟಿ ಮಾತನಾಡಿ, ಯೋಗ ವಿಜ್ಞಾನ ಮತ್ತು ತಂತ್ರಜ್ಞಾನ ಕ್ಷೇತ್ರವನ್ನು ಒಂದುಮಾಡುವ ಸಾಧನವಾಗಿದೆ ಎಂದರು. ಇನ್ನೋರ್ವ ಮುಖ್ಯ ಅತಿಥಿ ಬೆಂಗಳೂರು ರಾಷ್ಟ್ರೀಯ ಸೇವಾ ಯೋಜನೆಯ ಪ್ರಾಂತೀಯ ನಿರ್ದೇಶಕ ಅರುಣ್ ಪೂಜಾರ್ ಶುಭ ಕೋರಿದರು.
ವೇದಿಕೆಯಲ್ಲಿ ಹೇಮಾವತಿ ವಿ ಹೆಗ್ಗಡೆ, ಎಸ್‌ಡಿಎಂ ಶಿಕ್ಷಣ ಸಂಸ್ಥೆಗಳ ಕಾರ್ಯದರ್ಶಿ ಹರ್ಷೇಂದ್ರ ಕುಮಾರ್, ಸುಪ್ರಿಯಾ ಹರ್ಷೇಂದ್ರ ಕುಮಾರ್, ಡಾ| ಬಿ ಯಶೋವರ್ಮ, ಯೋಗ ಮತ್ತು ನೈತಿಕ ಶಿಕ್ಷಣ ವಿಭಾಗದ ನಿರ್ದೇಶಕ ಡಾ| ಐ. ಶಶಿಕಾಂತ ಜೈನ್ ಉಪಸ್ಥಿತರಿದ್ದರು.
ಎಸ್‌ಡಿಎಂ ಬಿಎನ್‌ವೈಎಸ್ ಕಾಲೇಜಿನ ಪ್ರಾಂಶುಪಾಲ ಡಾ| ಪ್ರಶಾಂತ್ ಶೆಟ್ಟಿ ಸ್ವಾಗತಿಸಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಶಾಂತಿವನ ಟ್ರಸ್ಟ್ ಕಾರ್ಯದರ್ಶಿ ಸೀತಾರಾಮ ತೋಳ್ಪಾಡಿತ್ತಾಯ ವಂದಿಸಿದರು. ಸಭಾ ಕಾರ್ಯಕ್ರಮಕ್ಕೂ ಮುನ್ನ ನಾಲ್ಕು ವಿ.ವಿ ಗಳ ಸುಮಾರು 500 ರಷ್ಟು ಎನ್‌ಎಸ್‌ಎಸ್ ವಿದ್ಯಾರ್ಥಿಗಳು ಹಾಗೂ ಎಸ್‌ಡಿಎಂ ಶಿಕ್ಷಣ ಸಂಸ್ಥೆಗಳ ವಿದ್ಯಾರ್ಥಿಗಳು, ಆಸಕ್ತರು ಯೋಗ ಪ್ರದರ್ಶನದಲ್ಲಿ ಭಾಗಿಯಾಗಿದ್ದರು.

ujire yoga dinacharaneಉಜಿರೆ : ಮೂರನೇ ವಿಶ್ವ ಯೋಗ ದಿನಾಚರಣೆಯ ಪ್ರಯುಕ್ತ ಇಂದು(ಜೂ. 21) ಉಜಿರೆ ಶ್ರೀ.ಧ.ಮಂ. ಕಾಲೇಜಿನ ಈಜುಕೊಳದ ಈಜು ಪಟುಗಳಿಂದ ಯೋಗ ಪ್ರದರ್ಶನ ನಡೆಯಿತು.
ಸರಳ, ಸುಲಭ ಹಾಗೂ ಪರಿಣಾಮಾಕಾರಿ ಕೆಲವು ಆಸನಗಳನ್ನು ಈಜುಕೊಳದ ತರಬೇತುದಾರರಾದ ಶೀನ ಹಾಗೂ ಚರಣ್‌ರವರು ನಡೆಸಿಕೊಟ್ಟರು. ಈ ಸಂದರ್ಭದಲ್ಲಿ ಉಜಿರೆ ಶ್ರೀ.ಧ.ಮಂ. ಕಾಲೇಜಿನ ಶಾರೀರಿಕ ಶಿಕ್ಷಕ ರಮೇಶ್‌ರವರು ಉಪಸ್ಥಿತರಿದ್ದರು.
ಈಜುಕೊಳದ ಮೊದಲ ಬ್ಯಾಚ್‌ನ ಈಜು ಪಟುಗಳಾದ ಬಂಟರ ಸಂಘದ ಅಧ್ಯಕ್ಷ ರಘುರಾಮ ಶೆಟ್ಟಿ, ಉಜಿರೆ ಶ್ರೀ ದುರ್ಗಾ ಟಿಂಬರ್‍ಸ್‌ನ ಉಮೇಶ್ ಶೆಟ್ಟಿ ಹಾಗೂ ರಮೇಶ ಶೆಟ್ಟಿ, ಸುದ್ದಿ ಪತ್ರಿಕೆಯ ವ್ಯವಸ್ಥಾಪಕ ಮಂಜುನಾಥ ರೈ, ಜೀವ ವಿಮಾ ನಿಗಮದ ಮುಖ್ಯ ಸಲಹೆಗಾರ ಕರುಣಾಕರ ನಾಯಕ್, ವಿನ್ಸೆಂಟ್ ಬೆಳ್ತಂಗಡಿ, ಉದ್ಯಮಿ ನಾಗರಾಜ್, ವೆಂಕಟೇಶ್, ಬೆಳ್ತಂಗಡಿ ಶಾರದಾ ನೇತ್ರಾ ಚಿಕಿತ್ಸಾಲಯದ ವಿಲಿಯಂ ಡಿಸೋಜ, ಬೆಳ್ತಂಗಡಿ ಬಿರ್ಮೊಟ್ಟು ಮೋಟಾರ್ ಲಿಂಕ್ಸ್‌ನ ಬಾಲಕೃಷ್ಣ ಹಾಗೂ ಮಕ್ಕಳು ಸೇರಿ ಸುಮಾರು ೫೦ಜನರಿಂದ ಯೋಗ ಪ್ರದರ್ಶನ ನಡೆಯಿತು.

krushi abiyana 1

krushi abiyanaಬೆಳ್ತಂಗಡಿ : ದ.ಕ. ಜಿಲ್ಲಾ ಪಂಚಾಯತ್, ಕರ್ನಾಟಕ ಸರಕಾರ, ಕೃಷಿ ಇಲಾಖೆಗಳ ಸಹಯೋಗದೊಂದಿಗೆ ಬೆಳ್ತಂಗಡಿ ಹೋಬಳಿಯ ಕೃಷಿ ಅಭಿಯಾನದ ಉದ್ಘಾಟನೆಯು ಇಂದು(ಜೂ. 19) ಬೆಳ್ತಂಗಡಿ ಅಂಬೇಡ್ಕರ್ ಭವನದಲ್ಲಿ ಜರಗಿತು.
ಕಾರ್ಯಕ್ರಮವನ್ನು ಶಾಸಕ ಕೆ.ವಸಂತ ಬಂಗೇರ ಉದ್ಘಾಟಿಸಿದರು. ಅಧ್ಯಕ್ಷತೆಯನ್ನು ತಾ.ಪಂ ಅಧ್ಯಕ್ಷೆ ಶ್ರೀಮತಿ ದಿವ್ಯಜ್ಯೋತಿ ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ಕುವೆಟ್ಟು ಕ್ಷೇತ್ರ ಜಿ.ಪಂ ಸದಸ್ಯೆ ಶ್ರೀಮತಿ ಮಮತಾ ಎಂ. ಶೆಟ್ಟಿ, ಲಾಯಿಲ ಕ್ಷೇತ್ರ ಜಿ.ಪಂ ಸದಸ್ಯೆ ಶ್ರೀಮತಿ ಸೌಮ್ಯಲತಾ ಜಯಂತ ಗೌಡ, ತಾ.ಪಂ ಉಪಾಧ್ಯಕ್ಷೆ ಶ್ರೀಮತಿ ವೇದಾವತಿ, ಮುಂಡಾಜೆ ಕ್ಷೇತ್ರ ತಾ.ಪಂ ಸದಸ್ಯೆ ಶ್ರೀಮತಿ ಲೀಲಾವತಿ, ನೆರಿಯ ಕ್ಷೇತ್ರ ತಾ.ಪಂ ಸದಸ್ಯ ವಿ.ಟಿ. ಸೆಬಾಸ್ಟಿನ್, ಕುವೆಟ್ಟು ಕ್ಷೇತ್ರ ತಾ.ಪಂ ಸದಸ್ಯ ಜಿ. ಗೋಪಿನಾಥ್ ನಾಯಕ್, ಬೆಳ್ತಂಗಡಿ ಕೃಷಿಕ ಸಮಾಜದ ಅಧ್ಯಕ್ಷ ಮಹಾವೀರ ಜೈನ್, ಪುತ್ತೂರು ಉಪವಿಭಾಗ ಉಪಕೃಷಿ ನಿರ್ದೇಶಕ ಮಂಜುನಾಥ ಡಿ.ಟಿ., ಬೆಳ್ತಂಗಡಿ ತಾ.ಪಂ. ಕಾರ್ಯನಿರ್ವಾಹಣಾಧಿಕಾರಿ ನರೇಂದ್ರ ಸಿ.ಆರ್. ಉಪಸ್ಥಿತರಿದ್ದರು.

sdmಜರ್ಮನಿಯ ಬರ್ಲಿನ್ ನಗರದಲ್ಲಿ ನಡೆದ ಯುರೋಪಿಯನ್ ಫೌಂಡೇಶನ್ ಫಾರ್ ಮ್ಯಾನೇಜ್‌ಮೆಂಟ್ ಡೆವೆಲಪ್‌ಮೆಂಟ್ (EFMD) ವಾರ್ಷಿಕ ಸಮ್ಮೇಳನದಲ್ಲಿ ವಿಶೇಷ ಸಮಾರಂಭದಲ್ಲಿ ಎಸ್.ಡಿ.ಎಂ. ಐ.ಎಂ.ಡಿ.ಯ ಪಿ.ಜಿ.ಡಿ.ಎಂ. ಶಿಕ್ಷಣಕ್ಕೆ ಇ-ಪಾಸ್ (Education Policy and Accreditation Standard) ಮಾನ್ಯತೆ ನೀಡಲಾಯಿತು.
ಜೂನ್ ೮ ರಂದು ನಡೆದ ಸಮಾರಂಭದಲ್ಲಿ ಸಂಸ್ಥೆಯ ಆಡಳಿತ ಮಂಡಳಿಯ ಉಪಾಧ್ಯಾಕ್ಷ ಡಿ. ಸುರೇಂದ್ರ ಕುಮಾರ್ ಮತ್ತು ಸಂಸ್ಥೆಯ ನಿರ್ದೇಶಕ ಡಾ. ಎನ್. ಆರ್. ಪರಶುರಾಮನ್ ಅವರು ಬರ್ಲಿನ್‌ನಲ್ಲಿ ಮಾನ್ಯತಾ ಪತ್ರವನ್ನು ಸ್ವೀಕರಿಸಿದರು.

Radhaಬೆಳ್ತಂಗಡಿ : ಮಗನೊಬ್ಬ ಹೆತ್ತ ತಾಯಿಯ ಮೇಲೆ ಪೆಟ್ರೋಲ್ ಸುರಿದು ಬೆಂಕಿ ಹಂಚಲು ಪ್ರಯತ್ನ ನಡೆಸಿ ಗಂಭೀರವಾಗಿ ಹಲ್ಲೆ ನಡೆಸಿದ ಘಟನೆ ಜೂ. 18ರಂದು ಕೊಯ್ಯೂರು ಗ್ರಾಮದ ನೆಕ್ಕರೆಕೋಡಿ ಎಂಬಲ್ಲಿ ವರದಿಯಾಗಿದೆ. ಕೊಯ್ಯೂರು ಗ್ರಾಮದ ನೆಕ್ಕರೆಕೋಡಿ ಎಂಬಲ್ಲಿ ವಾಸವಾಗಿರುವ, ಮೆಸ್ಕಾಂ ನಿವೃತ್ತ ಸಹಾಯಕ ಇಂಜಿನಿಯರ್ ಕೂಸಪ್ಪ ಗೌಡ ಎಂಬವರ ಪತ್ನಿ ರಾಧಮ್ಮ (55ವ) ಎಂಬವರು ಗಂಭೀರವಾಗಿ ಗಾಯಗೊಂಡವರು. ಇವರ ಮಗ ಹರೀಶ್ ಗೌಡ ಮತ್ತು ಆತನ ಪತ್ನಿ ದಿವ್ಯಪ್ರಭಾ ಎಂಬವರು ಸೇರಿಕೊಂಡು ರಾಧಮ್ಮರವರ ಮೇಲೆ ಹಲ್ಲೆ ನಡೆಸಿದಲ್ಲದೆ ಪೆಟ್ರೋಲ್ ಸುರಿದು ಬೆಂಕಿ ಹಚ್ಚಲು ಪ್ರಯತ್ನ ನಡೆಸಿರುವ ಧುರುಳರು. ಘಟನೆಯಿಂದ ಗಂಭೀರವಾಗಿ ಗಾಯಗೊಂಡಿರುವ ರಾಧಮ್ಮರವರನ್ನು ಬೆಳ್ತಂಗಡಿ ತಾಲೂಕು ಆಸ್ಪತ್ರೆಗೆ ಸೇರಿಸಲಾಗಿದೆ. ಬೆಳ್ತಂಗಡಿ ಪೋಲಿಸ್ ಠಾಣೆಯಲ್ಲಿ ಈ ಬಗ್ಗೆ ಪ್ರಕರಣ ದಾಖಲಾಗಿದ್ದು, ತನಿಖೆ ನಡೆಸಲಾಗುತ್ತಿದೆ.

ಉಜಿರೆ : ಧರ್ಮಸ್ಥಳದಲ್ಲಿ ಡಿ. ವೀರೇಂದ್ರ ಹೆಗ್ಗಡೆಯವರ ಅಧ್ಯಕ್ಷತೆಯಲ್ಲಿ ಜೂ.16ರಂದು ನಡೆದ ಅಖಿಲ ಕರ್ನಾಟಕ ಜನಜಾಗೃತಿ ವೇದಿಕೆ ಕಾರ್ಯಕಾರಿ ಮಂಡಳಿ ಸಭೆಯಲ್ಲಿ ಮದ್ಯ ಮುಕ್ತ ಕರ್ನಾಟಕ ರೂಪಿಸುವ ಬಗ್ಗೆ ಸರ್ಕಾರಕ್ಕೆ ಒತ್ತಡ ಹೇರಲು ನಿರ್ಧರಿಸಲಾಯಿತು.
ರಾಜ್ಯದ 23 ವೇದಿಕೆಗಳ 120 ಪದಾಧಿಕಾರಿಗಳು ಸಭೆಯಲ್ಲಿ ಭಾಗವಹಿಸಿದರು.
ಜನಜಾಗೃತಿ ವೇದಿಕೆಯ ರಾಜ್ಯಾಧ್ಯಕ್ಷ ಸತೀಶ್ ಹೊನ್ನವಳ್ಳಿ, ನಿರ್ದೇಶಕ ವಿವೇಕ್ ವಿ. ಪಾಯಸ್, ಕೆ. ವಸಂತ ಸಾಲಿಯಾನ್, ದೇವದಾಸ್ ಹೆಬ್ಬಾರ್ ಉಪಸ್ಥಿತರಿದ್ದರು.

swamiji betiತಮಿಳುನಾಡಿನ ನಾಗಪಟ್ನಂ ಜಿಲ್ಲೆಯ ಪೂಜ್ಯ ಶ್ರೀ ಅಂಬಾಲವನ ದೇಶಿಕ ಸ್ವಾಮೀಜಿ ಜೂ. 16 ರಂದು ಧರ್ಮಸ್ಥಳಕ್ಕೆ ಬಂದು ದೇವರ ದರ್ಶನ ಮಾಡಿದರು. ಬಳಿಕ ಧರ್ಮಾಧಿಕಾರಿ ಡಿ. ವೀರೇಂದ್ರ ಹೆಗ್ಗಡೆಯವರು ಸ್ವಾಮೀಜಿಯರನ್ನು ಗೌರವಿಸಿದರು.

praneethಮಾಲಾಡಿ ಗ್ರಾಮದ ಉರೆಸಾಗು ಶ್ರೀದುರ್ಗಾ ಕೃಪಾ ಮನೆಯ ಶ್ರೀನಿವಾಸ ಮತ್ತು ಶ್ರೀಮತಿ ಸುಜಾತ ದಂಪತಿಗಳ ಪುತ್ರ ಪ್ರಣೀತ್ ನ 2ನೇ ವರ್ಷದ ಹುಟ್ಟುಹಬ್ಬವನ್ನು ಮೇ. 28ರಂದು ಆಚರಿಸಲಾಯಿತು.

sakshi sಧರ್ಮಸ್ಥಳ: ಇಲ್ಲಿನ ಗಿರಿಕೋರೆ ನಿವಾಸಿ ಸುರೇಂದ್ರ ಮತ್ತು ವಿದ್ಯಾ ದಂಪತಿ ಪುತ್ರಿ ಸಾಕ್ಷಿ ಎಸ್ ಅವರ ಎರಡನೇ ವರ್ಷದ ಹುಟ್ಟುಹಬ್ಬ ಜೂ. 16 ರಂದು ಜರುಗಲಿದೆ.

aashifa a rಮುಂಡಾಜೆ ಗ್ರಾಮದ ಮುಬಾರಕ್ ಕಾಟೇಜ್ ನಿವಾಸಿ, ಸುದ್ದಿ ಪತ್ರಿಕೆ ವರದಿಗಾರ ಅಚ್ಚು ಮುಂಡಾಜೆ ಮತ್ತು ಆಶಿಕಾ ದಂಪತಿ ಪುತ್ರಿ ಆಶಿಫಾ ಎ. ಆರ್ ಅವರ 5 ನೇ ವರ್ಷದ ಹುಟ್ಟುಹಬ್ಬವನ್ನು ಜೂ. 14 ರಂದು ಆಚರಿಸಲಾಯಿತು.

astinಹುಣ್ಸೆಕಟ್ಟೆ ಗ್ರಾಮದ ಸಾಲೊಮ್ ಮನೆಯ ಲ್ಯಾನ್ಸಿ ಸೀಸಿಲಿಯಾ ದಂಪತಿಯ ಪುತ್ರ ಆಸ್ಟಿನ್‌ನ 8ನೇ ವರುಷದ ಹುಟ್ಟುಹಬ್ಬವನ್ನು ಜೂ.9 ರಂದು ಆಚರಿಸಲಾಯಿತು.

surendra-bhavyaಪಡಂಗಡಿ ಗ್ರಾಮದ ಬೋಳ ಮನೆಯ ಕೃಷಿಕರಾದ ಚೆನ್ನಪ್ಪ ಅಂಚನ್ ಮತ್ತು ಶ್ರೀಮತಿ ಬೇಬಿ ದಂಪತಿಗಳ ಪುತ್ರ ಗುರುವಾಯನಕೆರೆ ಪಿಲಿಚಾಮುಂಡಿ ಕಲ್ಲು ಲುಕ್‌ಸ್ಮಾರ್ಟ್ ಟೈಲರ್ ಶಾಪ್‌ನ ಮಾಲಕ ಸುರೇಂದ್ರ ಕುಮಾರ್‌ರವರ ವಿವಾಹ ನಿಶ್ಚಿತಾರ್ಥವು ತೆಂಕಕಾರಂ ದೂರು ಗ್ರಾಮದ ಶಿವಾನುಗ್ರಹ ಮನೆಯ ರಮೇಶ್ ಬಂಗೇರ ಮತ್ತು ಶ್ರೀಮತಿ ವೇದಾವತಿ ಯವರ ಪುತ್ರಿ ಭವ್ಯರೊಂದಿಗೆ ವಧುವಿನ ಮನೆಯಲ್ಲಿ ಜೂ.11 ರಂದು ಜರಗಿತು.

prashanth1ಬೆಳ್ತಂಗಡಿ : ಜೂ. 8 ರಂದು ಬೈಕಿನಲ್ಲಿ ತೆರಳುತ್ತಿರುವ ಸಂದರ್ಭ ಗೇರುಕಟ್ಟೆ ಸಮೀಪ ಮಾರುತಿ ಶಿಫ್ಟ್ ಕಾರು ಡಿಕ್ಕಿ ಹೊಡೆದು ಗಂಭೀರ ಗಾಯಗೊಂಡ ಪ್ರಶಾಂತ್ ದೊಂಡೋಲೆ (24ವ) ಅವರು ನಿನ್ನೆ ಚಿಕಿತ್ಸೆ ಫಲಕಾರಿಯಾಗದೆ ಮಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ನಿಧನ ಹೊಂದಿದ್ದಾರೆ.

jana samparka sabheಧರ್ಮಸ್ಥಳ : ಕ.ರಾ.ರ. ಸಾರಿಗೆ ಸಂಸ್ಥೆ ಧರ್ಮಸ್ಥಳ ಘಟಕದಲ್ಲಿ ಇಂದು (ಜೂ.16) ಧರ್ಮಸ್ಥಳ ಘಟಕ ವ್ಯಾಪ್ತಿಯ ಸಾರ್ವಜಿನಿಕರ ಜನಸಂಪರ್ಕ ಸಭೆ ನಡೆಯಿತು.

koyyuruಬೆಳ್ತಂಗಡಿ : ಲಾಯಿಲ ಕೊಯ್ಯೂರು ಕ್ರಾಸ್ ಬಳಿಯ ಮಹಾದೇವಿ ಮರದ ಮಿಲ್ಲಿನಲ್ಲಿ ಲಾರಿಯಿಂದ ಮರ ಇಳಿಸುತಿದ್ದ ಸಂದರ್ಭ ಲಾರಿಯ ಮೇಲಿಂದ ಜಾರಿ ಉಜಿರೆ  ಅತ್ತಾಜೆ ನಿವಾಸಿ ಕೊರಗಪ್ಪ (66ವ) ಎಂಬ ಕೂಲಿ ಕಾರ್ಮಿಕ ತಲೆಗೆ ಗಂಭೀರ ಗಾಯಗೂಂಡು ಆಸ್ಪತ್ರೆಗೆ ಸಾಗಿಸುವ ದಾರಿ ಮದ್ಯೆ ಸಾವನ್ನಪ್ಪಿದ್ದಾರೆ.

ನಮ್ಮ ಬಗ್ಗೆ

ಮೊದಲಿಗೆ ಕೇವಲ ಒಂದು ಹಾಳೆಯಲ್ಲಿ ಪ್ರಕಟವಾಗುತ್ತಿದ್ದ ಬೆಳ್ತಂಗಡಿ ತಾಲೂಕಿನ “ಸುದ್ದಿ ಬಿಡುಗಡೆ “ಪತ್ರಿಕೆ ಇಂದು ಪ್ರತಿದಿನ  22
.. ಮುಂದೆ ಓದಿ

ಸಲಹೆ- ಸೂಚನೆ

ನಿಮ್ಮ ಸಲಹೆ ಸೂಚನೆಗಳಿಗೆ ಹಾರ್ದಿಕ ಸ್ವಾಗತ

ಇಲ್ಲಿ ಕ್ಲಿಕ್ಕಿಸಿ

Copyright © 2017 Suddinews.com . All Rights Reserved.
^ Back to Top