Tue 12 Dec 2017, 4:38PM

ಹೆಚ್ಚಿನ ಸುದ್ದಿಗಳು

nalike samudaya bhavanaಬೆಳ್ತಂಗಡಿ : ಇಲ್ಲಿನ ನಲಿಕೆಯವರ ಸಮುದಾಯ ಭವನದ ಉದ್ಘಾಟನೆಯು ಡಿ. 10ರಂದು ನಡೆಯಿತು.
ಸಮುದಾಯ ಭವನದ ಉದ್ಘಾಟನೆಯನ್ನು ಶಾಸಕ ಕೆ. ವಸಂತ ಬಂಗೇರ ನೆರವೇರಿಸಿದರು. ಈ ಸಂದರ್ಭದಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಬಿ. ರಮಾನಾಥ ರೈ, ಅಳದಂಗಡಿ ಸತ್ಯದೇವತಾ ದೈವಸ್ಥಾನದ ಆಡಳಿತದಾರ ಶಿವಪ್ರಸಾದ್ ಅಜಿಲ, ಬೆಳ್ತಂಗಡಿ ನಲಿಕೆಯವರ ಸಮಾಜ ಸೇವಾ ಸಂಘದ ಅಧ್ಯಕ್ಷ ಸೇಸಪ್ಪ ಕೆ. ನಲಿಕೆ, ಶ್ರೀ ಕ್ಷೇತ್ರ ಧರ್ಮಸ್ಥಳ ಸಮುದಾಯ ಅಭಿವೃದ್ಧಿ ವಿಭಾಗದ ನಿರ್ದೇಶಕ ಜಯರಾಮ ನೆಲ್ಲಿತ್ತಾಯ, ಜಿ.ಪಂ ಸದಸ್ಯ ಶೇಖರ ಕುಕ್ಕೇಡಿ, ಬೆಳ್ತಂಗಡಿ ನಲಿಕೆಯವರ ಸಮಾಜ ಸೇವಾ ಸಂಘದ ಗೌರವಾಧ್ಯಕ್ಷ ಸುರೇಶ್ ಬಾಬು ಪಣೆಜಾಲು, ಮಂಗಳೂರು ಭಾರತೀಯ ತೈಲ ನಿಗಮದ ಬಿ.ಎಸ್ ಸುಂದರ್, ಜಿಲ್ಲಾ ನಲಿಕೆಯವರ ಯುವ ವೇದಿಕೆಯ ಅಧ್ಯಕ್ಷ ಸುಬ್ರಾಯ ಕಲ್ಮಂಜ, ಸಂಘದ ಕೋಶಾಧಿಕಾರಿ ಸುರೇಶ್ ಬಿ.ಕೆ., ಕಾರ್ಯದರ್ಶಿ ಸತೀಶ್ ಪಿ., ಉಪಾಧ್ಯಕ್ಷ ಎಸ್ ಪ್ರಭಾಕರ ಮೊದಲಾವರು ಉಪಸ್ಥಿತರಿದ್ದರು.

kotichennayaಬೆಳ್ತಂಗಡಿ ಶ್ರೀ ಗುರುನಾರಾಯಣ ಸ್ವಾಮಿ ಸೇವಾ ಸಂಘದ ಕೋಟಿ ಚೆನ್ನಯ ಕ್ರೀಡಾಕೂಟವು ಡಿ. 31 ರಂದು ನಡೆಯಲಿದ್ದು, ಇದರ ಆಮಂತ್ರಣ ಪತ್ರಿಕೆಯನ್ನು ಸಂಘದ ಗೌರವಾಧ್ಯಕ್ಷ ಶಾಸಕ ಕೆ. ವಸಂತ ಬಂಗೇರರವರು ಬಿಡುಗಡೆಗೊಳಿಸಿದರು.
ಈ ಸಂದರ್ಭದಲ್ಲಿ ಸಂಘದ ಅಧ್ಯಕ್ಷ ಸೋಮನಾಥ ಬಂಗೇರ, ಹಾಗೂ ಸಂಘದ ಎಲ್ಲಾ ನಿರ್ದೇಶಕರುಗಳು, ಪದಾಧಿಕಾರಿಗಳು ಉಪಸ್ಥಿತರಿದ್ದರು.

marody shanipooje

marody shanipooje1ಮರೋಡಿ : ಮರೋಡಿ ಉಮಾಮಹೇಶ್ವರ ದೇವಸ್ಥಾನ ಇದರ ಸಹಕಾರದಲ್ಲಿ ಶ್ರೀ ಉಮಾಮಹೇಶ್ವರ ಯಂಗ್ ಸ್ಟಾರ್ ಫ್ರೆಂಡ್ಸ್ ಇದರ 4ನೇ ವರ್ಷದ ವಾರ್ಷಿಕೋತ್ಸವ ಮತ್ತು ಸಾರ್ವಜನಿಕ ಶನಿಪೂಜೆಯು ಸುಬ್ರಹ್ಮಣ್ಯ ಪ್ರಸಾದ್ ಭಟ್ ಅವರ ನೇತೃತ್ವದಲ್ಲಿ ಡಿ. 9ರಂದು ದೇವಸ್ಥಾನದ ವಠಾರದಲ್ಲಿ ಜರಗಿತು.
ಧಾರ್ಮಿಕ ಸಭೆಯಲ್ಲಿ ರಾಜ್ಯ ಸಂಸ್ಕಾರ ಭಾರತಿ ಲೋಕ ಕಲಾವಿದ ಪ್ರಮುಖ್, ತುಳುವ ಬೊಳ್ಳಿ ದಯಾನಂದ ಕತ್ತಲ್‌ಸಾರ್ ಧಾರ್ಮಿಕ ಉಪನ್ಯಾಸ ನೀಡಿದರು. ದೇವಸ್ಥಾನದ ಆಡಳಿತ ಮೊಕ್ತೇಸರ ಕೊಡಂಗೆ ದೇವೇಂದ್ರ ಹೆಗ್ಡೆ ಕೊಕ್ರಾಡಿ ಅಧ್ಯಕ್ಷತೆ ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ಬಿಜೆಪಿ ಯುವ ಮೋರ್ಚಾ ಜಿಲ್ಲಾಧ್ಯಕ್ಷ ಹರೀಶ್ ಪೂಂಜ, ತಾ.ಪಂ. ಸ್ಥಾಯಿ ಸಮಿತಿ ಮಾಜಿ ಅಧ್ಯಕ್ಷ ಜಯಂತ ಕೋಟ್ಯಾನ್, ತಾ.ಪಂ. ಸದಸ್ಯೆ ರೂಪಲತಾ, ಕೇಳ ಮಾಗಣೆ ಬಸದಿಯ ಆಡಳಿತ ಮೊಕ್ತೇಸರ ಡಾ.ಆಶೀರ್ವಾದ್, ಮುಂಬೈ ಉದ್ಯಮಿ ನಾರಾಯಣ ಸುವರ್ಣ, ಉದ್ಯಮಿ ರತ್ನಾಕರ ಬುಣ್ಣಾನ್ ಮರೋಡಿ, ಸಾವ್ಯ ಗುಜ್ಜೊಟ್ಟು ಶ್ರೀ ಅಯ್ಯಪ್ಪ ಸ್ವಾಮಿ ಸೇವಾ ಸಮಿತಿ ಗೌರವಾಧ್ಯಕ್ಷ ಶ್ರೀಧರ ಪೂಜಾರಿ ಭೂತಡ್ಕ, ಮುಂಬೈ ಉದ್ಯಮಿ ಸುರೇಶ್ ಅಂಚನ್  ಹಾಗೂ ಮೊದಲಾದವರು ಭಾಗವಹಿಸಿದ್ದರು.

gurujayanthi

gurujayanthi1

gurujayanthi2

gurujayanthi3

gurujayanthi4ಕುಕ್ಕೆಡಿ ಬ್ರಹ್ಮಶ್ರೀ ಗುರುನಾರಾಯಣ ಸ್ವಾಮಿ ಸೇವಾ ಸಮಿತಿ ಕುಂಡದಬೆಟ್ಟು -ಕುಕ್ಕೇಡಿ-ನಿಟ್ಟಡೆ, ಬಿಲ್ಲವ ಮಹಿಳಾ ವೇದಿಕೆ ಮತ್ತು ಯುವ ಬಿಲ್ಲವ ವೇದಿಕೆ, ಹಾಗೂ ಯುವವಾಹಿನಿ ಸಂಚಾಲನ ಸಮಿತಿ, ಕುಂಡದಬೆಟ್ಟು -ಕುಕ್ಕೇಡಿ-ನಿಟ್ಟಡೆ ಇವುಗಳ ಸಂಯುಕ್ತ ಆಶ್ರಯದಲ್ಲಿ ಡಿ. 10 ರಂದು ಡಾ| ಬಿ.ಆರ್. ಅಂಬೇಡ್ಕರ್ ಭವನ, ಕುಕ್ಕೇಡಿ-ಕುಂಡದಬೆಟ್ಟು ಇಲ್ಲಿ ಬ್ರಹ್ಮಶ್ರೀ ನಾರಾಯಣ ಗುರುಗಳ 163ನೇ ಗುರುಜಯಂತಿ ಹಾಗೂ ಪ್ರತಿಭಾ ಪುರಸ್ಕಾರ ಕಾರ್ಯಕ್ರಮ ನಡೆಯಿತು.
ನಿಟ್ಟಡೆ ಗ್ರಾಮದ ಗೋಳಿಯಂಗಡಿ ಪಾಣೂರು ಬಳಿ ಕುಕ್ಕೇಡಿ ಗ್ರಾಮ ಪಂಚಾಯತು ವತಿಯಿಂದ ನಿರ್ಮಿಸಲ್ಪಟ್ಟ ಬ್ರಹ್ಮಶ್ರೀ ನಾರಾಯಣಗುರು ವೃತ್ತ ಉದ್ಘಾಟನೆಯನ್ನು ಶಾಸಕ ಕೆ. ವಸಂತ ಬಂಗೇರ ನೆರವೇರಿಸಿದರು. ಸಭಾಕಾರ್ಯಕ್ರಮದ ಅಧ್ಯಕ್ಷತೆಯನ್ನು ಸಂಘದ ಅಧ್ಯಕ್ಷ ಕೆ. ಸುಂದರ ಪೂಜಾರಿ ಅಮೇಯಿ ವಹಿಸಿದ್ದರು.
ಈ ಸಂದರ್ಭದಲ್ಲಿ ಮಂಗಳೂರು ಬ್ರಹ್ಮಶ್ರೀ ನಾರಾಯಣಗುರು ಅಧ್ಯಾಯನ ಪೀಠ ವಿಶ್ವವಿದ್ಯಾನಿಲಯದ ನಿರ್ದೇಶಕ ಮುದ್ದು ಮೂಡುಬೆಳ್ಳೆ, ಸರಕಾರಿ ಪ್ರೌಢ ಶಾಲೆ, ಕಲ್ಲಾಡಿ ಮಂಗಳೂರು ಮುಖ್ಯೋಪಾಧ್ಯಾಯಿನಿ ಸುರೇಖಾ ಕೆ.ಇ.ಎಸ್, ಬೆಳ್ತಂಗಡಿ ಶ್ರೀ.ಗು.ನಾ.ಸ್ವಾ.ಸೇ ಸಂಘದ ಅಧ್ಯಕ್ಷ ಸೋಮನಾಥ ಬಂಗೇರ ವರ್ಪಾಳೆ, ನಿಕಟಪೂರ್ವ ಅಧ್ಯಕ್ಷ ಭಗೀರಥ ಜಿ. ಯುವ ಬಿಲ್ಲವ ವೇದಿಕೆ ಅಧ್ಯಕ್ಷ ಸಂತೋಷ್ ಕುಮಾರ್ ಉಪ್ಪಾರು, ಮಹಿಳಾ ವೇದಿಕೆ ಅಧ್ಯಕ್ಷೆ ಶ್ರೀಮತಿ ರಾಜಶ್ರೀ ರಮಣ್, ಪ್ರಧಾನ ಕಾರ್ಯದರ್ಶಿ ರಾಕೇಶ್ ಕುಮಾರ್ ಮೂಡುಕೋಡಿ, ಕುಕ್ಕೇಡಿ ಗ್ರಾ.ಪಂ ಅಧ್ಯಕ್ಷೆ ತೇಜಾಕ್ಷಿ, ಕುಕ್ಕೇಡಿ ಯುವ ಬಿಲ್ಲವ ವೇದಿಕೆ ಅಧ್ಯಕ್ಷ ನಿತೀಶ್ ಎಚ್, ಬಿಲ್ಲವ ವೇದಿಕೆ ಅಧ್ಯಕ್ಷೆ ಲೀಲಾವತಿ ನಿಟ್ಟಡೆ ಯುವವಾಹಿನಿ ಅಧ್ಯಕ್ಷ ಎಚ್.ಎಲ್. ಉದಯ ಹಾಗೂ ಮೊದಲಾದವರು ಉಪಸ್ಥಿತರಿದ್ದರು.

ಆಕಾಶವಾಣಿ ಮಂಗಳೂರು ಇಲ್ಲಿ ಶ್ರೀ ಮದವೂರ ವಿಘ್ನೇಶ ಕಲಾ ಸಂಘ ಗೇರುಕಟ್ಟೆ ಇದರ ಸದಸ್ಯರಿಂದ ಡಿ.10 ರಂದು ಮಧ್ಯಾಹ್ನ 2.35 ಕ್ಕೆ ಯಕ್ಷಗಾನ ತಾಳಮದ್ದಳೆ ಶ್ರೀ ಮಹಿಷ ಮರ್ಧಿನಿ ಪ್ರಸಾರವಾಗಲಿದೆ.
ಹಿಮ್ಮೆಳದಲ್ಲಿ ರವಿಚಂದ್ರ ಕನ್ನಡಿಕಟ್ಟೆ, ಗುರು ಪ್ರಸಾದ, ಚೈತನ್ಯ ಕೃಷ್ಣ ಪದ್ಯಾಣ, ಮುಮ್ಮೇಳದಲ್ಲಿ ಪ್ರೋ. ಮಧೂರು ಮೋಹನ ಕಲ್ಲೂರಾಯ, ದಿವಾಕರಾಚಾರ್ಯ ಗೇರುಕಟ್ಟೆ, ಉದಯಶಂಕರ್ ಭಟ್, ಸುಂದರ ಕೃಷ್ಣ ಮಧೂರು, ದಿನೇಶ ಬಳಂಜ, ಸುರೇಶ ಕಲ್ಲೂರಾಯ, ಶ್ರೀಮತಿ ಕೆ.ಆರ್ ಸುವರ್ಣ ಕುಮಾರಿ ಭಾಗವಹಿಸಲಿದ್ದಾರೆ. ಮಧೂರ ಮೋಹನ ಕಲ್ಲೂರಾಯ ಸಂಯೋಜಿಸಿದ್ದಾರೆ.

ಕೊಕ್ಕಡ : ಶ್ರೀಕ್ಷೇತ್ರ ಸೌತಡ್ಕ ಕ್ಷೇತ್ರದಲ್ಲಿ ಬಯಲು ಆಲಯದ ಗಣೇಶನ ಕಟ್ಟೆಯ ಹಿಂಭಾಗದಲ್ಲಿ ಅಂದಾಜು 50 ಲಕ್ಷ ವೆಚ್ಚದಲ್ಲಿ ಪಶ್ಚಿಮ ಭಾಗದ ನೂತನ ಗೋಪುರದ ಕಟ್ಟಡ ನಿರ್ಮಾಣದ ಶಂಕುಸ್ಥಾಪನೆಯು ಡಿ.11 ರಂದು ಬೆಳಗ್ಗೆ 10.30 ಕ್ಕೆ ನಡೆಯಲಿದೆ. ಬೆಳ್ತಂಗಡಿಯ ಶಾಸಕ ಕೆ. ವಸಂತ ಬಂಗೇರ ಶಂಕುಸ್ಥಾಪನೆ ನೆರವೇರಿಸಲಿದ್ದು ಈ ಸಂದರ್ಭ ಕುಕ್ಕೆ ಸುಬ್ರಹ್ಮಣ್ಯದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ನಿತ್ಯಾನಂದ ಮುಂಡೋಡಿ, ಸೌತಡ್ಕ ಕ್ಷೇತ್ರದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಕೆ. ಸುಬ್ರಹ್ಮಣ್ಯ ಶಬರಾಯ, ಸದಸ್ಯರುಗಳಾದ ಕೆ.ವಿಶ್ವನಾಥ ಕೊಲ್ಲಾಜೆ, ಪಿ. ವಿಶ್ವನಾಥ ಶೆಟ್ಟಿ, ಪ್ರಶಾಂತ್ ರೈ, ಅಣ್ಣಪ್ಪ ಗೌಡ ಕಾಶಿ, ಗಣೇಶ್ ಪಿ.ಕೆ., ಸಿನಿ ಗುರುದೇವನ್, ಸೌಮ್ಯ , ಅರ್ಚಕ ಸದಸ್ಯರಾದ ಸತ್ಯಪ್ರಿಯ ಕಲ್ಲೂರಾಯ, ಮುಖ್ಯ ಕಾರ್ಯನಿರ್ವಹಣಾಧಿಕಾರಿ ಹರಿಶ್ಚಂದ್ರ ಮುಂತಾದವರು ಭಾಗವಹಿಸಲಿದ್ದಾರೆ ಎಂದು ದೇವಳದ ಪ್ರಕಟಣೆ ತಿಳಿಸಿದೆ.

Ladru D'sozaನಡ : ಮಂಜೊಟ್ಟಿ ಕೊಲ್ಯೊಟ್ಟು ನಿವಾಸಿ ಲಾದ್ರು ಡಿಸೋಜ(58ವ)ರವರು ಡಿ. 7ರಂದು ತೋಟದಲ್ಲಿ ತೆಂಗಿನಕಾಯಿ ಕೀಳುತ್ತಿದ್ದಾಗ ಆಯತಪ್ಪಿ ಬಿದ್ದು ಮೃತಪಟ್ಟಿದ್ದಾರೆ.
ಮೃತರು ನಡ ಹಾಲು ಉತ್ಪಾದಕರ ಸಹಕಾರಿ ಸಂಘದ ಮಾಜಿ ಅಧ್ಯಕ್ಷರು ಹಾಗೂ ಹಾಲಿ ನಿರ್ದೇಶಕರಾಗಿದ್ದರು.
ಮೃತರು ಪತ್ನಿ ಸೆಲಿನ್ ಡಿಸೋಜ, ಪುತ್ರಿಯರಾದ ಜಾನೆಟ್, ಲಿನೆಟ್, ವೈಲೆಟ್ ಹಾಗೂ ಬಂಧು ವರ್ಗದವರನ್ನು ಅಗಲಿದ್ದಾರೆ.

pathrikagosti

pathrikagosti1ಬೆಳ್ತಂಗಡಿ : ಜಿಲ್ಲೆಯಲ್ಲಿ ಶಾಂತಿ ಸಾಮರಸ್ಯ ವಾತಾವರಣ ಕಾಪಾಡುವ ಉದ್ದೇಶದಿಂದ ಡಿ. 12ರಂದು ಫರಂಗಿಪೇಟೆಯಿಂದ ಮಾಣಿಯವರೆಗೆ ಸಾಮರಸ್ಯ ನಡಿಗೆ ನಡೆಯಲಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಬಿ. ರಮಾನಾಥ ರೈ ಹೇಳಿದರು.
ಅವರು ಡಿ. 8ರಂದು ಬೆಳ್ತಂಗಡಿ ಪ್ರವಾಸಿ ಮಂದಿರದಲ್ಲಿ ನಡೆದ ಪತ್ರಿಕಾಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದರು. ಜಿಲ್ಲೆಯಲ್ಲಿ ಸಾಮರಸ್ಯದ ವಾತಾವರಣ ಮೂಡಿಸುವ ನಿಟ್ಟಿನಲ್ಲಿ ಇದೊಂದು ಮಹತ್ವವಾದ ಹೆಜ್ಜೆ ಆಗಬೇಕಿದೆ ಎಂದು ಹೇಳಿದರು.
ಪತ್ರಿಕಾಗೋಷ್ಠಿಯಲ್ಲಿ ಶಾಸಕ ಕೆ. ವಸಂತ ಬಂಗೇರ, ಕಾಂಗ್ರೆಸ್ ಜಿಲ್ಲಾಧ್ಯಕ್ಷ ಹರೀಶ್ ಕುಮಾರ್, ಕೆಪಿಸಿಸಿ ಸದಸ್ಯರಾದ ಪೀತಾಂಬರ ಹೇರಾಜೆ, ರಾಮಚಂದ್ರ ಗೌಡ, ಬ್ಲಾಕ್ ಕಾಂಗ್ರೆಸ್ ಗ್ರಾಮೀಣ ಅಧ್ಯಕ್ಷ ಶ್ರೀನಿವಾಸ ಕಿಣಿ, ನಗರ ಅಧ್ಯಕ್ಷ ರಾಜಶೇಖರ ಅಜ್ರಿ, ತಾ.ಪಂ, ಜಿ.ಪಂ ಸದಸ್ಯರು, ವಿವಿಧ ಘಟಕಗಳ ಪದಾಧಿಕಾರಿಗಳು, ಜೆಡಿಎಸ್, ಸಿಪಿಐ(ಎಂ), ಡಿಎಸ್‌ಎಸ್. ಮಲೆಕುಡಿಯರ ಸಂಘ ಸೇರಿದಂತೆ ವಿವಿಧ ಸಂಘಟನೆಗಳ ಮುಖ್ಯಸ್ಥರು ಉಪಸ್ಥಿತರಿದ್ದರು.

ENT chikisthalaya subarambaಬೆಳ್ತಂಗಡಿ : ಇಲ್ಲಿನ ಮುಖ್ಯ ರಸ್ತೆಯ ಎಂಆರ್‌ಎಫ್ ಟಯರ್‍ಸ್ ಕಾಂಪ್ಲೆಕ್ಸ್‌ನಲ್ಲಿ ನೂತನವಾಗಿ ಪ್ರಾರಂಭಿಸಿದ ಡಾ| ಶಿಲ್ಪಾ ಹೆಗಡೆ ಮತ್ತು ಡಾ| ಶ್ರೀಹರ್ಷ ತುಳುಪುಳೆ ಯವರ ಮಕ್ಕಳ ಮತ್ತು ಇಎನ್‌ಟಿ ಚಿಕಿತ್ಸಾಲಯದ ಉದ್ಘಾಟನಾ ಸಮಾರಂಭವು ಡಿ.3 ರಂದು ನಡೆಯಿತು.
ಚಿಕಿತ್ಸಾಲಯವನ್ನು ಬೆಳ್ತಂಗಡಿಯ ಹಿರಿಯ ವೈದ್ಯರಾದ ಡಾ| ಟಿ.ಎನ್ ತುಳುಪುಳೆಯವರು ದೀಪಬೆಳಗಿಸಿ ನೆರವೇರಿಸಿ ಶುಭಹಾರೈಸಿದರು.
ಈ ಸಮಾರಂಭದಲ್ಲಿ ಅಳದಂಗಡಿಯ ವೈದ್ಯರಾದ ಡಾ| ಎನ್.ಎಂ ತುಳುಪುಳೆ, ಗೀತಾ ತುಳುಪುಳೆ, ಎಸ್.ಎಂ ತುಳುಪುಳೆ, ನರೇಂದ್ರ ತುಳುಪುಳೆ, ಎಂಆರ್‌ಎಫ್ ಟಯರ್‍ಸ್‌ನ ಪ್ರಕಾಶ್ ತುಳುಪುಳೆ, ಪಲ್ಲವಿ ತುಳುಪುಳೆ, ಅಶ್ಮಿತಾ, ಅಶ್ವಿನ್ ತುಳುಪುಳೆ, ಮತ್ತು ಬಂಧು-ಮಿತ್ರರು ಉಪಸ್ಥಿತರಿದ್ದರು. ಪ್ರತಿ ಆದಿತ್ಯವಾರದಂದು ಡಾ| ಶಿಲ್ಪಾ ಹೆಗಡೆ ಮತ್ತು ಡಾ| ಶ್ರೀಹರ್ಷ ತುಳುಪುಳೆ ಇಬ್ಬರೂ ವೈದ್ಯರು ಪೂರ್ವಾಹ್ನ ಗಂಟೆ 10 ರಿಂದ ಅಪರಾಹ್ನ ಗಂಟೆ 2 ರ ತನಕ ಭೇಟಿಗೆ ಲಭ್ಯವಿರುತ್ತಾರೆ. ಹಾಗೂ ಮಕ್ಕಳ ಎಲ್ಲಾ ರೀತಿಯ ವ್ಯಾದಿಗಳ ತಪಾಸಣೆ ಮತ್ತು ಚಿಕಿತ್ಸೆ ಎಲ್ಲಾ ವಿಧದ ರೋಗ ನಿರೋಧಕ ಚುಚ್ಚುಮದ್ದುಗಳನ್ನು ಮಕ್ಕಳಿಗೆ ಕೊಡಲಾಗುವುದು. ಕಿವಿ, ಮೂಗು ಮತ್ತು ಗಂಟಲು ವ್ಯಾದಿಗಳ ಸಮಸ್ಯೆ ತಪಾಸಣೆ ಮತ್ತು ಚಿಕಿತ್ಸೆ ನೀಡಲಾಗುವುದು ಎಂದು ತಿಳಿಸಿದ್ದರು.

suddi COLORpdf BLDY  1, 3, 5, 7, 9, 11, 13, 15, 17, 19, 21.p65

Jeevitha Nಮಾಲಾಡಿ ಶ್ರೀಮನೆ ಪೆರ್ಡೆ ನಾಗೇಶ್ ಹೆಗ್ಡೆ ಮತ್ತು ಮಮತಾ ದಂಪತಿ ಪುತ್ರಿ ಜೀವಿತಾ ಎನ್ ರವರ 7ನೇ ವರ್ಷದ ಹುಟ್ಟುಹಬವನ್ನು ಡಿ.8ರಂದು ಆಚರಿಸಲಾಯಿತು.

Prishalಪಡಂಗಡಿ, ಪೊಯ್ಯೆಗುಡ್ಡೆ ಮನೆಯ ಪೀಟರ್ ಮೊನಿಸ್ ಮತ್ತು ಲವಿನಾ ಮೊನಿಸ್ ದಂಪತಿ ಪುತ್ರಿ ಪ್ರಿಶಲ್‌ಳ 5ನೇ ವರ್ಷದ ಹುಟ್ಟುಹಬ್ಬವನ್ನು ನ. 29ರಂದು ಆಚರಿಸಲಾಯಿತು.

ahammad mumithವೇಣೂರಿನ ಜಾಸ್ಮೀನ್ ಮತ್ತು ಶಂಶುದ್ದೀನ್ ಕಲ್ಕಾರ್ ದಂಪತಿ ಪುತ್ರ ಅಹಮ್ಮದ್ ಮುಮೀತ್‌ನ ೬ನೇ ವರ್ಷದ ಹುಟ್ಟುಹಬ್ಬವನ್ನು ಡಿ. 4ರಂದು ದುಬೈಯಲ್ಲಿ ಆಚರಿಸಲಾಯಿತು.

Jeevitha N Kಮಚ್ಚಿನ ನಿಡ್ಡಾಜೆ ಮನೆ ಕೃಷ್ಣಪ್ಪ ಮತ್ತು ಶ್ರೀಮತಿ ದಿವ್ಯ ದಂಪತಿ ಪುತ್ರಿ ಜೀವಿತಾಳ ಪ್ರಥಮ ವರ್ಷದ ಹುಟ್ಟುಹಬ್ಬವನ್ನು ಡಿ.3ರಂದು ಆಚರಿಸಲಾಯಿತು.

Mithun nithyaಓಡಿಲ್ನಾಳ ಗ್ರಾಮದ ಉಪ್ಪಡ್ಕ ಚೈತನ್ಯ ನಿವಾಸ ವಿಠಲ ಶೆಟ್ಟಿಯವರ ಪುತ್ರ ಮಿಥುನ್ ರವರ ವಿವಾಹವು ಪೆರಾಡಿ ಮೇರುಗುಡ್ಡೆ ಕರಿಯ ಶೆಟ್ಟಿಯವರ ಪುತ್ರಿ ನಿತ್ಯಾರೊಂದಿಗೆ  ಡಿ 3 ರಂದು ಬೆಳ್ತಂಗಡಿ ಶ್ರೀ ದರ್ಮಸ್ಥಳ ಮಂಜುನಾಥ ಸ್ವಾಮಿ ಕಲಾಭವನದಲ್ಲಿ ಜರಗಿತು.

Bavya rajeshಕಡಿರುದ್ಯಾವರ ಗ್ರಾಮದ ಕಾನರ್ಪ ಭರತ್ ನಿಲಯದ ವಿನಯ ಮತ್ತು ರುಕ್ಮಯ್ಯ ಗೌಡರ ಪುತ್ರಿ ಭವ್ಯರವರ ವಿವಾಹವು ಕಡಿರುದ್ಯಾವರ ಗ್ರಾಮದ ಮುಂಡಹಲಸು ಮನೆ ಸುಶೀಲ ಮತ್ತು ಸಂಜೀವ ಗೌಡರ ಪುತ್ರ ರಾಜೇಶರೊಂದಿಗೆ ಡಿ. 3 ರಂದು ಉಜಿರೆ ಶ್ರೀ ಗಣೇಶ ಕೃಪಾ ಕಲ್ಯಾಣ ಮಂಟಪದಲ್ಲಿ ಜರಗಿತು.

ranjith-shruthiಬಳಂಜ ಗ್ರಾಮದ ಸುಧಾಮ ಮನೆಯ ದೇಜಪ್ಪ ಪೂಜಾರಿಯವರ ಪುತ್ರ ಮೂಡಬಿದ್ರೆ ಎಂಐಟಿಇನಲ್ಲಿ ಅಸಿಸ್ಟೆಂಟ್ ಪ್ರೊಫೆಸರ್ ಆಗಿರುವ ರಂಜಿತ್ ಎಚ್.ಡಿ ಯವರ ವಿವಾಹ ನಿಶ್ಚಿತಾರ್ಥವು ಪುಂಜಾಲಕಟ್ಟೆ ಪಿಲಾತ ಬೆಟ್ಟು ಗ್ರಾಮದ ಶುತಿ ನಿವಾಸದ ಜಿ.ಪಂ ಸದಸ್ಯ ತುಂಗಪ್ಪ ಬಂಗೇರರ ಪುತ್ರಿ ಶುತಿ ಟಿ. ಬಂಗೇರ ರವರೊಂದಿಗೆ ನ.29 ರಂದು ವಧುವಿನ ಮನೆಯಲ್ಲಿ ಜರಗಿತು.

ranjini-dineshವೇಣೂರು ಬಜಿರೆ ಗ್ರಾಮದ ವಿಶ್ವನಾಥ ಪೂಜಾರಿ ಮತ್ತು ವಿಮಲ ದಂಪತಿಗಳ ಪುತ್ರಿ ರಂಜಿನಿಯವರ ವಿವಾಹವು ಸಿದ್ಧಕಟ್ಟೆ ನಂದಗೋಕುಲ ಅಲಕ್ಕೆ ದಿ| ಕೊರಗ ಪೂಜಾರಿಯವರ ಪುತ್ರ ದಿನೇಶ್‌ರೊಂದಿಗೆ ನ-29 ರಂದು ಕಟೀಲು ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದಲ್ಲಿ ಜರಗಿತು.

ganesh deekshaಶಿರ್ಲಾಲು ಗ್ರಾಮದ ಮುರಲ್ದೋಡಿ ಬಾಕ್ಯಾರ್ ದಿ| ಶಿವಪ್ಪ ಪೂಜಾರಿಯವರ ಪುತ್ರ ಪ್ರಜಾವಾಣಿ ಪತ್ರಿಕೆಯ ವರದಿಗಾರ ಗಣೇಶ್ ರವರ ವಿವಾಹವು ಆರಂಬೋಡಿ ಗ್ರಾಮದ ಸೂರಂಟೆ ಅಣ್ಣಿ ಪೂಜಾರಿಯವರ ಪುತ್ರಿ ದೀಕ್ಷಾರವರೊಂದಿಗೆ ಡಿ.1 ರಂದು ಬೆಳ್ತಂಗಡಿಯ ಶ್ರೀ ನಾರಾಯಣ ಗುರು ವಾಣಿಜ್ಯ ಸಂಕೀರ್ಣದ ಆಶಾ ಸಾಲಿಯನ್ ಕಲ್ಯಾಣ ಮಂಟಪದಲ್ಲಿ ಜರಗಿತು.

Varun sannidhiಧರ್ಮಸ್ಥಳ ಜುಮಾ ಉಗ್ರಾಣದ ಮುತ್ಸದ್ಧಿ, ಚಂದ್ರಗಿರಿ ನಗರ ಚಿನ್ಮಯದ ಶ್ರೀಮತಿ ಶಾಲಿನಿ ಮತ್ತು ಬಿ. ಭುಜಬಲಿ ದಂಪತಿಗಳ ಪುತ್ರ ವರಣ್‌ರವರ ವಿವಾಹವು ಸನ್ನಿಧಿಯೊಂದಿಗೆ ನ. 26ರಂದು ಆದಿಚುಂಚನಗಿರಿ ಚುಂಚನಾದ್ರಿ ಕಲ್ಯಾಣ ಮಂಟಪದಲ್ಲಿ ಹಾಗೂ ಆರತಕ್ಷತೆ ಸಮಾರಂಭವು ಡಿ. 1 ರಂದು ಶ್ರೀ ಕ್ಷೇತ್ರ ಧರ್ಮಸ್ಥಳದ ಮಹೋತ್ಸವ ಸಭಾಂಗಣದಲ್ಲಿ ನಡೆಯಿತು. ಡಾ| ಹೆಗಡೆಯವರ ಕುಟುಂಬ ವರ್ಗ, ಜಿಲ್ಲಾ ಉಸ್ತುವಾರಿ ಸಚಿವ ರಮಾನಾಥ ರೈ, ಶಾಸಕ ಕೆ. ವಸಂತ ಬಂಗೇರ, ಮಾಜಿ ಶಾಸಕ ಪ್ರಭಾಕರ ಬಂಗೇರ, ಜಿಲ್ಲಾ ಯುವ ಮೋರ್ಚಾದ ಅಧ್ಯಕ್ಷ ಹರೀಶ್ ಪೂಂಜ ಗಣ್ಯ ಅತಿಥಿಗಳು, ಜನಪ್ರತಿನಿಧಿಗಳು ಹಾಗೂ ಅಪ್ತೇಷ್ಟರು ಆಗಮಿಸಿ ಶುಭಕೋರಿದರು.

Sushan M. - Pooja J.K.ಗುರುವಾಯನಕೆರೆ ಪೂಜಾಫಲ ನಿವಾಸದ ಜಗನ್ನಾಥ.ಕೆ ರವರ ಪುತ್ರಿ ಡಾ| ಪೂಜಾರವರ ವಿವಾಹವು ಬಂಟ್ವಾಳ ತಾಲೂಕು ನೆಲ್ಲ ಮುಡ್ನೂರು ಗ್ರಾಮದ ಮಾದೇಲು ಸೋಮಪ್ಪ ಪೂಜಾರಿಯವರ ಪುತ್ರ ಸುಶಾನ್ ಎಂ.ರೊಂದಿಗೆ ಡಿ. 3 ರಂದು ಬಿ.ಸಿ ರೋಡ್ ಗಾಣದಪಡ್ಡು ಬ್ರಹ್ಮಶ್ರೀ ನಾರಾಯಣ ಗುರು ಸಭಾಭವನದಲ್ಲಿ ಜರಗಿತು.

add1

sinchana Mಬೆಳ್ತಂಗಡಿ : ಡಿ.2 ಮತ್ತು 3ರಂದು ಮಂಗಳೂರಿನಲ್ಲಿ ನಡೆದ ರಾಷ್ಟ್ರೀಯ ಮುಕ್ತ ಕರಾಟೆ ಸ್ಪರ್ಧೆಯಲ್ಲಿ, ಸೈಂಟ್ ಮೇರೀಸ್ ಸ್ಕೂಲ್ ಲಾಯಿಲ ಇಲ್ಲಿನ 9ನೇ ತರಗತಿ ವಿದ್ಯಾರ್ಥಿನಿ ಸಿಂಚನಾ ಯಂ.ಡಿ. ಕಟಾ ಮತ್ತು ಕುಮಿತೆ(ಬ್ಲಾಕ್ ಬೆಲ್ಟ್) ಯಲ್ಲಿ ಪ್ರಥಮ ಸ್ಥಾನ ಪಡೆದಿದ್ದಾರೆ.
ಇವರು ಬೆಳ್ತಂಗಡಿ ಪೋಲೀಸ್ ಠಾಣೆಯ ಹೆಡ್‌ಕಾನ್ಸ್ಟೇಬಲ್ ದುರ್ಗಾಪ್ರಸಾದ್ ಮತ್ತು ರೇವತಿ ದಂಪತಿಯ ಪುತ್ರಿ. ಕರಾಟೆ ಶಿಕ್ಷಕ ಅಶೋಕ್ ಆಚಾರ್ಯ ಅವರಿಂದ ತರಬೇತಿ ಪಡೆಯುತ್ತಿದ್ದಾರೆ.

Vincent Dsouza1ಬೆಳ್ತಂಗಡಿ : ಭಾರತೀಯ ಜೀವವಿಮಾ ನಿಗಮದಲ್ಲಿ ಕಳೆದ 17 ವರ್ಷಗಳಿಂದ ಪ್ರತಿನಿಧಿಯಾಗಿ ವಿವಿಧ ಹುದ್ದೆಗಳೊಂದಿಗೆ ಕ್ರಿಯಾಶೀಲವಾಗಿ ಕಾರ್ಯನಿರ್ವಹಿಸುತ್ತಿರುವ ಲ| ವಿನ್ಸೆಂಟ್ ಟಿ ಡಿಸೋಜಾ ಅವರು ಈ ಬಾರಿ ಕೂಡ ಸತತ ಐದನೇ ಬಾರಿಗೆ ಬಂಟ್ವಾಳ ಹಾಗೂ ಬೆಳ್ತಂಗಡಿ ಉಪಗೃಹ ಶಾಖೆಯಲ್ಲಿ ಪ್ರಥಮ ಎಮ್‌ಡಿಆರ್‌ಟಿ ಆಗಿ ಹೊರಹೊಮ್ಮುವ ಮೂಲಕ ಜೂನ್ ತಿಂಗಳಲ್ಲಿ ಲಾಸ್ ಎಂಜಲೀಸ್ ನಡೆಯುವ ಸಮಾವೇಶಕ್ಕೆ ಅರ್ಹತೆ ಪಡೆದಿದ್ದಾರೆ ಎಂದು ಬೆಳ್ತಂಗಡಿ ಉಪಗೃಹ ಶಾಖೆಯ ಶಾಖಾಧಿಕಾರಿ ಯೋಗೇಂದ್ರ ಆರ್.ಡಿ ತಿಳಿಸಿದ್ದಾರೆ.
ಎಲ್‌ಐಸಿ ಚೇರ್‌ಮೆನ್ ಕ್ಲಬ್ ಸದಸ್ಯರಾಗಿ, ಮುಖ್ಯ ವಿಮಾ ಸಲಹೆಗಾರರಾಗಿ, ಬೆಳ್ತಂಗಡಿ ಬಸ್ಸು ನಿಲ್ದಾಣದ ಬಳಿ ವಿಮಾ ಇನ್ಸೂರೆನ್ಸ್ ಕನ್ಸಲ್ಟೆಂಟ್ ಎನ್ನುವ ನೂತನ ಸಂಪೂರ್ಣ ಕಂಪ್ಯೂಟರೀಕೃತ ಸಂಸ್ಥೆ ಸ್ಥಾಪಿಸಿ ಗ್ರಾಹಕರಿಗೆ ಅತ್ಯುತ್ತಮ ಸೇವೆ ನೀಡುತ್ತಿದ್ದಾರೆ. ಲಾಯಿಲ ಗ್ರಾಮವನ್ನು ಸತತ ಮೂರು ಬಾರಿಗೆ ಹ್ಯಾಟ್ರಿಕ್ ಆಗಿ ಸಂಪೂರ್ಣ ವಿಮಾ ಗ್ರಾಮ ಎಂಬುದಾಗಿ ಮಾಡಿ ಇದೀಗ ನಾಲ್ಕನೇ ಬಾರಿಗೂ ಘೋಷಣೆಯ ಹೊಸ್ತಿಲಿಗೆ ತಂದು ನಿಲ್ಲಿಸಿದ್ದಾರೆ. ಈ ಬಾಬ್ತು ಬಂದಿರುವ ತಲಾ 1 ಲಕ್ಷದಂತೆ ಅನುದಾನವನ್ನು ಪಂಚಾಯತ್ ಮೂಲಕ ಗ್ರಾಮದ ಅಭಿವೃದ್ಧಿಗೆ ಒದಗುವಂತೆ ಮಾಡಿದ್ದಾರೆ.
ಜೊತೆಗೆ ಯುನೈಟೆಡ್ ಇಂಡಿಯಾ ಇನ್ಸೂರೆನ್ಸ್ ಕಂಪೆನಿ ಸಹಿತ ಯಾವುದೇ ಕಂಪೆನಿಯ ವಾಹನ ವಿಮೆ, ಸ್ಟಾರ್ ಇನ್ಸೂರೆನ್ಸ್ ಮೂಲಕ ಆರೋಗ್ಯ ವಿಮೆ ಸೇವೆಕೂಡ ದೊರಕಿಸಿಕೊಟ್ಟು ಬಂಟ್ವಾಳ ಶಾಖೆಯಲ್ಲಿ ಪ್ರಥಮ ಸ್ಥಾನಿಯಾಗಿದ್ದಾರೆ. ಅತ್ಯುತ್ತಮ ಸಂಘಟಕರೂ ಆಗಿರುವ ಅವರು ಅಂತಾರಾಷ್ಟ್ರೀಯ ಲಯನ್ಸ್ ಕ್ಲಬ್ ಬೆಳ್ತಂಗಡಿ ಇದರ ಕೋಶಾಧಿಕಾರಿಯಾಗಿ, ಸಹಿತ ಹಲವು ಸಂಘ ಸಂಸ್ಥೆಗಳಲ್ಲಿ ತನ್ನನ್ನು ಸೇವಾ ಕ್ಷೇತ್ರದಲ್ಲಿ ತೊಡಗಿಸಿಕೊಂಡಿದ್ದಾರೆ.

gajanana

gajanana1

Gajanana2ಬೆಳ್ತಂಗಡಿ : ಇಲ್ಲಿನ ಮೂರು ಮಾರ್ಗದ ಬಳಿಯ ಲಕ್ಷ್ಮಿ ಕಾಂಪ್ಲೆಕ್ಸ್‌ನಲ್ಲಿ ಗಜಾನನ ಗ್ಲಾಸ್ ಮತ್ತು ಫ್ಲೈವುಡ್ಸ್ ಉದ್ಘಾಟನೆಯನ್ನು ನ. 7ರಂದು ಕಾರ್ಕಳ ತಾಜ್ ಗ್ಲಾಸ್ ಆಂಡ್ ಫ್ಲೈವುಡ್ಸ್ ಮಾಲಕ ಎಂ. ಗಣಪತಿ ಪೈ ನೆರವೇರಿಸಿದರು.
ಈ ಸಂದರ್ಭದಲ್ಲಿ ನ.ಪಂ ಅಧ್ಯಕ್ಷ ನಾರಾಯಣ ಭಟ್ ಮುಗುಳಿ, ಕೆನರ ಬ್ಯಾಂಕ್‌ನ ಎ.ಜಿ.ಎಂ ವಸಂತ ಶೆಟ್ಟಿ, ಲಾಯಿಲ ವೆಂಕಟರಮಣ ದೇವಸ್ಥಾನದ ಆಡಳಿತ ಮೊಕ್ತೇಸರ ಎಂ. ವಿವೇಕಾನಂದ ಪ್ರಭು, ಬೆಂಗಳೂರಿನ ವುಡ್ ಪ್ಲೈ ಡಿಸ್ಟ್ರಿಬ್ಯೂಟರ್‍ಸ್‌ನ ಸೂರ್ಯ ನಾರಾಯಣ, ಕಲ್ಲೇರಿ ಇಂದಿರಾ ಆಟೊ ಪ್ಯೂಯೆಲ್ಸ್‌ನ ಬಿ. ಸುರೇಶ್ ಭಟ್ ಲಾಲ, ಕಟ್ಟಡದ ಮಾಲಕ ಸುಂದರ ಆಚಾರ್ಯ ಮತ್ತಿತರರು ಉಪಸ್ಥಿತರಿದ್ದರು. ಬಂದಂತಹ ಅತಿಥಿ ಗಣ್ಯರನ್ನು ಮಾಲಕರಾದ ಸುಧೀರ್ ಭಟ್, ಶಿವಶಂಕರ್ ನಾಯಕ್ ಸ್ವಾಗತಿಸಿ, ವಂದಿಸಿದರು.

maneತಮ್ಮ ವ್ಯಾಪ್ತಿಯಲ್ಲೇ ಇರುವ ಅರ್ಹರಿಗೆ ಸಹಾಯ ಮಾಡೋಣ : ಬಿಷಪ್ ಲಾರೆನ್ಸ್ ಮುಕ್ಕುಯಿ
ಸೇವಾ ಚಟುವಟಿಕೆ ಮಾಡಲು ಊರಿಡೀ ಅಲೆಯಬೇಕಾಗಿಲ್ಲ, ತಮ್ಮ ವ್ಯಾಪ್ತಿಯಲ್ಲಿ, ಅಕ್ಕ ಪಕ್ಕದಲ್ಲಿ ಯಾರು ಸಹಾಯ ಪಡೆಯಲು ಅರ್ಹರಿದ್ದಾರೆ ಅಂತವರನ್ನು ನಾವೇ ಮನಗಂಡು ನೆರವು ನೀಡುವ ಮೂಲಕ ಸಮಾಜ ಸೇವೆ ಮಾಡಬೇಕು. ಶೈಲಾ ಅವರಿಗೆ ಮನೆ ನಿರ್ಮಿಸಿಕೊಡುವ ಮೂಲಕ ಅಂತಹಾ ಮಹತ್ಕಾರ್ಯಕ್ಕೆ ಈ ಕಾರ್ಯಕ್ರಮ ಮಾದರಿಯಾಗಿದೆ ಎಂದು ಬೆಳ್ತಂಗಡಿ ಧರ್ಮಪ್ರಾಂತ್ಯದ ಧರ್ಮಾಧ್ಯಕ್ಷ ಬಿಷಪ್ ಲಾರೆನ್ಸ್ ಮುಕ್ಕುಯಿ ಶುಭ ಕೋರಿದರು. ಇದಕ್ಕೆ ನೆರವು ನೀಡಿದ ಎಲ್ಲರೂ ಅಭಿನಂದನಾರ್ಹರು ಎಂದೂ ತಿಳಿಸಿದರು.

ತೋಟತ್ತಾಡಿ: ಇತ್ತೀಚೆಗೆ ಸೋಮಂತಡ್ಕ ಎಂಬಲ್ಲಿ ರಸ್ತೆ ಅಪಘಾತದಲ್ಲಿ ಮರಣವನ್ನಪ್ಪಿದ ತೋಟತ್ತಾಡಿ ಗ್ರಾಮದ ಕುತ್ರಿಜಾಲು ನಿವಾಸಿ ಟೋಮಿ ಮೂಲನ್ ಅವರ ಮನೆಯವರ ಸಂಕಷ್ಟವನ್ನು ಅರಿತು ತೋಟತ್ತಾಡಿ ಸಂತ ಅಂತೋನಿ ಚರ್ಚ್‌ನ ಸದಸ್ಯರ ಸಹಕಾರದಿಂದ ನೂತನವಾಗಿ ಮನೆ ನಿರ್ಮಿಸಿಕೊಟ್ಟು ಆದರ್ಶ ಮೆರೆಯಲಾಗಿದೆ.
ಈ ನೂತನ ಮನೆಯ ಕೀಲಿಕೈ ಹಸ್ತಾಂತರ ಕಾರ್ಯಕ್ರಮ ನ. 29 ರಂದು ಬೆಳ್ತಂಗಡಿ ಧರ್ಮಪ್ರಾಂತ್ಯದ ಧರ್ಮಾಧ್ಯಕ್ಷ ಬಿಷಪ್ ಲಾರೆನ್ಸ್ ಮುಕ್ಕುಯಿ, ದಿ. ಟೋಮಿ ಅವರ ಧರ್ಮಪತ್ನಿ ಶೈಲಾ ಅವರಿಗೆ ಹಸ್ತಾಂತರಿಸಿದರು.
ಈ ಸಂದರ್ಭ ತೋಟತ್ತಾಡಿ ಸಂತ ಅಂತೋನಿ ಚರ್ಚ್‌ನ ಧರ್ಮಗುರುಗಳಾದ ರೆ. ಫಾ. ತೋಮಸ್ ಪಾರೆಕ್ಕಾಟಿಲ್, ಸಹದರ್ಮ ಗುರುಗಳಾದ ರೆ. ಫಾ. ಜೋಸೆಫ್ ಮುಕ್ಕಾಟ್, ಟ್ರಸ್ಟಿಗಳಾದ ಸಂತೋಷ್ ಕೆ.ಜೆ, ಆಂಟನಿ ಐಕರ, ಆಂಟನಿ ವಾಳೂಕಾರನ್, ಸನ್ನಿ ನಿರ್ಮಲ, ಗ್ರಾ.ಪಂ. ಸದಸ್ಯ ಶಾಜಿ ತೋಪಿಲ್, ಧರ್ಮ ಭಗಿನಿಯರು ಮತ್ತು ಊರವರು ಉಪಸ್ಥಿತರಿದ್ದರು. ರೆ. ಫಾ. ತೋಮಸ್ ಪಾರೇಕ್ಕಾಟಿಲ್ ಅವರು ಧನ್ಯವಾದವಿತ್ತರು.

mahila co operative bankge prasatiಬೆಳ್ತಂಗಡಿ : ದಕ್ಷಿಣ ಕನ್ನಡ ಜಿಲ್ಲಾ ಮಹಿಳಾ ಕೋ-ಆಪರೇಟಿವ್ ಬ್ಯಾಂಕ್‌ಗೆ 2016-17 ನೇ ಸಾಲಿನ ರಾಜ್ಯ ಮಟ್ಟದ ಅತ್ಯುತ್ತಮ ಮಹಿಳಾ ಸಹಕಾರಿ ಬ್ಯಾಂಕ್ ಪ್ರಶಸ್ತಿ ದೊರೆತಿದೆ.
ಮಂಗಳೂರಿನಲ್ಲಿ ನಡೆದ ರಾಜ್ಯ ಮಟ್ಟದ ಸಹಕಾರಿ ಸಪ್ತಾಹದ ಸಮಾರಂಭದಲ್ಲಿ ರಾಜ್ಯದ ಸಹಕಾರಿ ಸಚಿವ ರಮೇಶ್ ಜಾರಕಿಹೊಳಿ ಹಾಗು ಅರಣ್ಯ ಸಚಿವ ಬಿ ರಮಾನಾಥ ರೈ ಇವರ ಉಪಸ್ಥಿಯಲ್ಲಿ ಮೀನುಗಾರಿಕಾ ಹಾಗು ಯುವಜನ ಸೇವೆ ಸಚಿವ ಪ್ರಮೋದ್ ಮದ್ವರಾಜ್ ಇವರು ಪ್ರಶಸ್ತಿ ವಿತರಿಸಿದರು. ಬ್ಯಾಂಕಿನ ಅಧ್ಯಕ್ಷರಾದ ಶ್ರೀಮತಿ ಸುಜೀತಾ ವಿ ಬಂಗೇರ ಮತ್ತು ಪ್ರಧಾನ ವ್ಯವಸ್ಥಾಪಕಾರದ ಶೀಮತಿ ಪ್ರತಿಭಾ ಶೆಟ್ಟಿ ಪ್ರಶಸ್ತಿಯನ್ನು ಸ್ವೀಕರಿಸಿದರು. ಬ್ಯಾಂಕಿನ ಸ್ಥಾಪಕ ಅಧ್ಯಕ್ಷೆ ಶ್ರೀಮತಿ ಸರಳಾ ಬಿ ಕಾಂಚನ್ ಉಪಸ್ಥಿರಿದ್ದರು. ವೇದಿಕೆಯಲ್ಲಿ ಎಸ್.ಸಿ.ಡಿ.ಸಿ.ಸಿ ಬ್ಯಾಂಕ್ ಅಧ್ಯಕ್ಷ ರಾಜೇಂದ್ರ ಕುಮಾರ್, ಸಹಕಾರಿ ಸಂಘಗಳ ಉಪ ನಿಬಂಧಕ ಬಿಕೆ ಸಲೀಂ, ದ,ಕ ಸಹಕಾರಿ ಯೂನಿಯನ್ ಅಧ್ಯಕ್ಷ ಹರೀಶ್ ಅಚಾರ್ ಹಾಗೂ ಇತರ ಗಣ್ಯರು ಉಪಸ್ಥಿತರಿದ್ದರು.

Angel beaytiparlourಬೆಳ್ತಂಗಡಿ : ಬೆಳ್ತಂಗಡಿ ಬಸ್‌ನಿಲ್ದಾಣದ ಮುಂಭಾಗದ ಸಂತೋಮ್ ಟವರ್‍ಸ್‌ನಲ್ಲಿ ಹವಾನಿಯಂತ್ರಿತ ಸೇರಿದಂತೆ ಸುಸಜ್ಜಿತ ಸೌಲಭ್ಯವನ್ನು ಒಳಗೊಂಡ ಏಂಜಲ್ಸ್ ಬ್ಯೂಟಿ ಪಾರ್ಲರ್ ಡಿ. 4ರಂದು ಸ್ಥಳಾಂತರಗೊಂಡು ಶುಭಾರಂಭಗೊಂಡಿತು.
ಸ್ಥಳಾಂತರಗೊಂಡ ನೂತನ ಸಂಸ್ಥೆಯನ್ನು ಒಂದು ಮೊಟ್ಟೆ ಕಥೆ ಚಲನಚಿತ್ರದ ಖ್ಯಾತ ನಾಯಕಿ ಶೈಲಶ್ರೀ ಉದ್ಘಾಟಿಸಿ, ಮನುಷ್ಯನಿಗೆ ಸೌಂದರ್ಯ ಮುಖ್ಯ ಪ್ರತಿಯೊಬ್ಬರೂ ಇದನ್ನು ಬಯಸುತ್ತಾರೆ. ಬಾಹ್ಯ ಸೌಂದರ್ಯದಂತೆ ನಮ್ಮ ಆಂತರಿಕ ಸೌಂದರ್ಯವೂ ಉತ್ತಮವಾಗಿರಬೇಕು. ನಮ್ಮ ಕೊರಳಲ್ಲಿ ಬಂಗಾರ ಇಲ್ಲದಿದ್ದರೂ, ಮುಖದಲ್ಲಿನ ನಗು ಇದು ಬಂಗಾರ ಇದ್ದಂತೆ. ಗ್ರಾಹಕರ ಜೊತೆ ನಗುಮುಖದ ಸೇವೆ ಉದ್ಯಮದ ಯಶಸ್ವಿಗೆ ಕಾರಣವಾಗುತ್ತದೆ ಎಂದರು.
ಅಧ್ಯಕ್ಷತೆಯನ್ನು ವಹಿಸಿದ್ದ ಬೆಳ್ತಂಗಡಿ ನ.ಪಂ ಅಧ್ಯಕ್ಷ ಮುಗುಳಿ ನಾರಾಯಣ ರಾವ್ ಮಾತನಾಡಿ, ಪಲ್ಲವಿರಾಜು, ಶಾಂತಾ ಬಂಗೇರ, ರೇಖಾ ವಿನ್ಸೆಂಟ್ ಇವರ ನಡುವೆ ಗುರು ಶಿಷ್ಯರ ಸಂಬಂಧವಿದೆ. ಗುರುಗಳನ್ನು ಗೌರವಿಸುವ ಮೂಲಕ ರೇಖಾ ಅವರು ತಮ್ಮ ಉದಾರತೆಯನ್ನು ಮೆರೆದಿದ್ದಾರೆ. ಬ್ಯೂಟಿ ಪಾರ್ಲರ್ ಎಂಬುದು ನಮ್ಮ ಸೌಂದರ್ಯವನ್ನು ಮಾತ್ರ ಉತ್ತಮ ಪಡಿಸುವ ಕಾರ್ಯ ಮಾಡುವುದಲ್ಲ, ಜೊತೆಗೆ ನಮ್ಮ ಆರೋಗ್ಯದ ಹಿತದೃಷ್ಟಿಯಲ್ಲೂ ಕೆಲಸ ಮಾಡುತ್ತದೆ. ಇಲ್ಲಿ ದೊರೆಯುವ ಮಸಾಜ್‌ಗಳಿಂದ ಅನೇಕ ಕಾಯಿಲೆಗಳು, ಶರೀರದ ನೋವುಗಳು ಗುಣವಾಗುತ್ತದೆ ಎಂದು ಹೇಳಿ ನೂತನ ಸಂಸ್ಥೆಗೆ ಶುಭ ಹಾರೈಸಿದರು.
ಭಾರತೀಯ ಮಾನವ ಹಕ್ಕುಗಳ ಸಮಿತಿ ರಾಷ್ಟ್ರಾಧ್ಯಕ್ಷರಾದ ರಾಬರ್ಟ್ ಡಿ’ಸೋಜಾ ಮಾತನಾಡಿ ಇಂದು ಬ್ಯೂಟಿಷಿಯನ್ ತರಬೇತಿ ಪಡೆದವರಿಗೆ ಹೆಚ್ಚಿನ ಬೇಡಿಕೆಯಿದ್ದು, ತರಬೇತಿ ಪಡೆದವರು ಹೆಚ್ಚು ಸಂಪಾದನೆಗೆ ವಿದೇಶಗಳಿಗೆ ಹೋಗುತ್ತಾರೆ. ಆದರೆ ರೇಖಾ ವಿನ್ಸೆಂಟ್ ಲೋಬೊ ಅವರು ಊರಿನಲ್ಲೇ ಜನರ ಅನುಕೂಲಕ್ಕಾಗಿ ಸಂಸ್ಥೆಯನ್ನು ತೆರೆದಿರುವುದು ಅವರ ಧೈರ್ಯವನ್ನು ಮೆಚ್ಚಬೇಕಾಗಿದೆ ಎಂದರು. ಮಂಗಳೂರು ಬ್ಯೂಟಿಷಿಯನ್ ಎಸೋಸಿ ಯೇಶನ್ ಜಿಲ್ಲಾಧ್ಯಕ್ಷೆ ಬಬಿತಾ ಯು. ಶೆಟ್ಟಿ ಅವರು ಮಾತನಾಡಿ ಸೌಂದರ್ಯ ಎನ್ನುವುದು ದೇವರು ಕೊಟ್ಟ ವರ. ಬ್ಯೂಟಿ ಪಾರ್ಲರ್‌ನಲ್ಲಿ ಸೌಂದರ್ಯವನ್ನು ಬದಲಾಯಿಸಲು ಆಗುವುದಿಲ್ಲ, ಅವರ ದೇಹಕ್ಕೆ ಅನುಗುಣವಾಗಿ ಇರುವ ಸೌಂದರ್ಯವನ್ನು ಹೆಚ್ಚಿಸಲು ಸಾಧ್ಯವಿದೆ. ಸಂಸ್ಥೆಗಳಲ್ಲಿ ಗ್ರಾಹಕರ ನಡುವೆ ಪ್ರೀತಿಯಿಂದ ವ್ಯವಹರಿಸಿದಾಗ ಉನ್ನತಿ ಸಾಧ್ಯವಿದೆ ಎಂದರು.
ಬ್ಯೂಟಿಪಾರ್ಲರ್ ಎಸೋಸಿಯೇಶನ್ ತಾಲೂಕು ಅಧ್ಯಕ್ಷೆ ಪಲ್ಲವಿರಾಜು ಅವರು ತಾನೂ ಬ್ಯೂಟಿಷಿಯನ್ ಬಗ್ಗೆ ಹಲವಾರು ತರಬೇತಿಗಳನ್ನು ನೀಡಿದ್ದೇನೆ. ನೂರಾರು ಮಂದಿ ತರಬೇತಿ ಪಡೆದ ವರಲ್ಲಿ ಅನೇಕ ಮಂದಿ ಸ್ವಂತ ಉದ್ಯೋಗವನ್ನು ಮಾಡಿದ್ದಾರೆ. ಇಂತಹ ಸಂಸ್ಥೆಗಳಿಗೆ ಜನರ ಪ್ರೋತ್ಸಾಹ ಅಗತ್ಯ ಎಂದರು. ತುಳು ಚಲನ ಚಿತ್ರ ನಟಿ ನವ್ಯ ಪೂಜಾರಿ ನೂತನ ಸಂಸ್ಥೆಗೆ ಶುಭ ಕೋರಿದರು.ಬೆಳ್ತಂಗಡಿ ಹೋಲಿ ರೆಡಿಮರ್ ಚರ್ಚ್‌ನ ಸಹಾಯಕ ಧರ್ಮಗುರು ಫಾ| ಅನಿಲ್ ಪ್ರಕಾಶ್ ಡಿ’ಸೋಜಾ ಆಶೀರ್ವಚನ ವಿಧಿ ನೆರವೇರಿ ಸಿದರು. ಕಾರ್ಯಕ್ರಮದಲ್ಲಿ ಡಿಕೆಆರ್‌ಡಿಎಸ್‌ನ ನಿರ್ದೇಶಕ ಫಾ| ಜೋಸ್ ಆಯಂಗುಡಿ, ಫಾ| ಸಲೀಂ ಜೋಸೆಫ್, ನ.ಪಂ. ಸದಸ್ಯ ಸಂತೋಷ್ ಕುಮಾರ್ ಜೈನ್ ಮೊದಲಾದವರು ಉಪಸ್ಥಿತರಿ ದ್ದರು. ಸಂಸ್ಥೆಯ ಮಾಲಕಿ ಶ್ರೀಮತಿ ರೇಖಾ ವಿನ್ಸೆಂಟ್ ಲೋಬೊ ಸ್ವಾಗತಿಸಿದರು. ವಿಜಯ ಕುಮಾರ್ ನಾವರ ಕಾರ್ಯಕ್ರಮ ನಿರೂಪಿಸಿ, ಸಿರಿ ಗ್ರಾಮೋದ್ಯೋಗ ಸಂಸ್ಥೆಯ ಮಾರ್ಕೇಟಿಂಗ್ ಮೆನೇಜರ್ ವಿನ್ಸೆಂಟ್ ಲೋಬೋ ಧನ್ಯವಾದವಿತ್ತರು.

mohan narayana bilkodugeಗೌರವ ಸ್ವೀಕರಿಸಿ ಮಾತನಾಡಿದ ಡಾ.ಕೆ.ಎಸ್.ಮೋಹನನಾರಾಯಣ ಸಂಸ್ಥೆಯೊಂದಿಗಿನ ವೃತ್ತಿಪರ ಬಾಂಧವ್ಯದ ಕುರಿತು ಪ್ರಸ್ತಾಪಿಸಿದರು. ಹಿರಿಯರ ಮಾರ್ಗದರ್ಶನದ ನೆರವಿನೊಂದಿಗೆ ಸಂಸ್ಥೆಯ ಬೆಳವಣಿಗೆಯ ಹೆಜ್ಜೆಗಳೊಂದಿಗೆ ಕ್ರಮಿಸಿದ್ದನ್ನು ಉಲ್ಲೇಖಿಸಿದರು. ಆರಂಭದಿಂದಲೂ ನಿವೃತ್ತಿಯಾಗು ವವರೆಗೂ ಲಭ್ಯವಾದ ಸಹೋದ್ಯೋಗಿ ಗಳ ಸಹಕಾರ-ಬೆಂಬಲವನ್ನು ಸ್ಮರಿಸಿದರು.
ಸಂಸ್ಥೆಗಾಗಿ ಕಾರ್ಯನಿರ್ವಹಿಸಿದ ಆತ್ಮತೃಪ್ತಿ ನನ್ನೊಂದಿಗಿದೆ. ಪ್ರಾಮಾಣಿಕತೆ ಯಿಂದ ದುಡಿದ ತೃಪ್ತಿಯಿದೆ. ಪ್ರಾಂಶುಪಾಲ ಹುದ್ದೆಯ ನಿರ್ವಹಣೆಯ ವೇಳೆ ಪ್ರತಿಯೊಬ್ಬರಿಗೂ ಸ್ವಾತಂತ್ರ್ಯ ನೀಡಿ ವೃತ್ತಿಪರ ಮತ್ತು ಸಾಂಸ್ಥಿಕ ಸಾಧನೆಗೆ ಮಹತ್ವ ನೀಡಿದೆ. ಅದಕ್ಕನುಗುಣವಾಗಿ ಎಲ್ಲರೂ ಸ್ಪಂದಿಸಿದ್ದು ಕಾರ್ಯನಿರ್ವಹಣೆಯ ಉತ್ಸಾಹವನ್ನು ಹೆಚ್ಚಿಸಿತು ಎಂದು ಹೇಳಿದರು.

ಉಜಿರೆ : ಎಸ್.ಡಿ.ಎಂ ಕಾಲೇಜಿನ ಬೆಳವಣಿಗೆಗೆ ಮೌಲಿಕ ಸೇವೆ ಸಲ್ಲಿಸಿ ನಿವೃತ್ತರಾದ ಪ್ರಾಂಶುಪಾಲ ಡಾ.ಕೆ.ಎಸ್. ಮೋಹನನಾರಾಯಣ ಅವರಿಗೆ ಇತ್ತೀಚೆಗೆ ಹೃತ್ಪೂರ್ವಕ ಬೀಳ್ಕೊಡುಗೆ ನೀಡಲಾಯಿತು.
ಡಾ.ಕೆ.ಎಸ್.ಮೋಹನನಾರಾಯಣ ಅವರ ಅವಧಿಯಲ್ಲಿ ಸಂಸ್ಥೆಗೆ ಕೇಂದ್ರದ ಮಾನವ ಸಂಪನ್ಮೂಲ ಸಚಿವಾಲಯದ ಎನ್‌ಆರ್‌ಐಎಫ್ ಮನ್ನಣೆ ದೊರಕಿರುವುದು ಸಂತಸದ ಸಂಗತಿ. ನಿರಂತರ ಕಾರ್ಯಬದ್ಧತೆಯೊಂದಿಗಿನ ಪ್ರಜ್ಞೆಯು ಸಂಸ್ಥೆಯ ಸರ್ವತೋಮುಖ ಬೆಳವಣಿಗೆಗೆ ಪೂರಕವಾಗುತ್ತದೆ. ಅಲ್ಲದೇ ಶೈಕ್ಷಣಿಕ ವಲಯದಲ್ಲಿ ವೃತ್ತಿಪರ ಘನತೆಯನ್ನು ಕಾಯ್ದುಕೊಳ್ಳುವುದಕ್ಕೂ ನೆರವಾಗುತ್ತದೆ. ಅದಕ್ಕೆ ಎನ್‌ಆರ್‌ಐಎಫ್ ಮನ್ನಣೆಯೇ ಸಾಕ್ಷಿ ಎಂದು ಸಂಸ್ಥೆಯ ಕಾರ್ಯದರ್ಶಿ ಡಾ.ಬಿ.ಯಶೋವರ್ಮ ಅವರು ಅಭಿಪ್ರಾಯಪಟ್ಟರು.
ಎಸ್‌ಡಿಎಂ ಪದವಿಪೂರ್ವ ಕಾಲೇಜಿನ ಪ್ರಾಂಶುಪಾಲರಾದ ಪ್ರೊ.ದಿನೇಶ್ ಚೌಟ ಅವರು ಡಾ.ಕೆ.ಎಸ್.ಮೋಹನನಾರಾಯಣ ಅವರ ವೃತ್ತಿಪರ ಬದುಕು ಮತ್ತು ವ್ಯಕ್ತಿತ್ವದ ವಿಶೇಷತೆಗಳನ್ನು ಪರಿಚಯಿಸಿದರು. ಪ್ರಾಧ್ಯಾಪಕ ಪ್ರೊ.ಎಸ್.ಎನ್. ಕಾಕತ್ಕರ್ ಅವರು ಮಾತನಾಡಿ ಡಾ.ಕೆ.ಎಸ್. ಮೋಹನನಾರಾಯಣ ಅವರದ್ದು ಸಾರ್ಥಕ ಬದುಕು ಎಂದರು. ಮೃದು ಮನಸಿನೊಂದಿಗಿನ ವ್ಯಕ್ತಿತ್ವ ಅವರದ್ದು ಎಂದು ಗುರುತಿಸಿದರು.
ನಿವೃತ್ತರಾದ ಪ್ರಾಂಶುಪಾಲ ಡಾ.ಕೆ.ಎಸ್. ಮೋಹನನಾರಾಯಣ ಅವರಿಗೆ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಸಂಸ್ಥೆಯ ಉಪಾಧ್ಯಕ್ಷರಾದ ಪ್ರೊ.ಕೆ.ಎಸ್.ಪ್ರಭಾಕರ್ ಗೌರವ ಸಮರ್ಪಿಸಿ ಮಾತನಾಡಿದರು.
ಮೋಹನನಾರಾಯಣ ಅವರು ಆರಂಭದಿಂದಲೂ ನಿವೃತ್ತಿಯಾಗು ವವರೆಗೆ ಕಾರ್ಯನಿರ್ವಹಿಸಿದ ವಿವರಗಳನ್ನು ನೆನಪಿಸಿಕೊಂಡರು. ನಿವೃತ್ತಿ ಜೀವನದ ಯಶಸ್ಸು ಹಾರೈಸಿದರು.
ಇದೇ ಸಂದರ್ಭದಲ್ಲಿ ಪ್ರೊ.ಟಿ.ಎನ್.ಕೇಶವ್ ಅವರನ್ನು ಎಸ್.ಡಿ.ಎಂ. ಕಾಲೇಜಿನ ಪ್ರಾಂಶುಪಾಲ ರನ್ನಾಗಿ ನಿಯೋಜಿಸಿದ್ದನ್ನು ಘೋಷಿಸ ಲಾಯಿತು. ಡಾ.ಕೆ.ಎಸ್. ಮೋಹನ ನಾರಾಯಣ ಅವರ ಪತ್ನಿ ಪೂರ್ಣಿಮಾ ಮೋಹನನಾರಾಯಣ ಉಪಸ್ಥಿತರಿದ್ದರು.

ರತ್ನಮಾನಸ ಉಚಿತ ವಿದ್ಯಾರ್ಥಿ ನಿಲಯಕ್ಕೆ ಅರ್ಜಿ ಆಹ್ವಾನಿಸಲಾಗಿದೆ

Friday, March 10th, 2017 | suddiblt | no responses ಉಜಿರೆ: ಶ್ರೀ ಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿ ವೀರೇಂದ್ರ ಹೆಗ್ಗಡೆಯವರು ನೆಡೆಸಲ್ವಡುವ ರತ್ನಮಾನಸ ಉಚಿತ… ಮುಂದೆ ಓದಿ

ಉಜಿರೆ ಎಸ್.ಡಿ.ಎಂ. ಬಿ.ಎಡ್. ಕಾಲೇಜಿಗೆ 3 ರ‍್ಯಾಂಕ್‌ಗಳು

Thursday, February 23rd, 2017 | Suddi Belthangady | no responses ಉಜಿರೆ : ಮಂಗಳೂರು ವಿಶ್ವವಿದ್ಯಾನಿಲಯ ಕಳೆದ ನವೆಂಬರ್/ಡಿಸೆಂಬರ್ 2015 ರಲ್ಲಿ ನಡೆಸಿದ ಬಿ.ಎಡ್.… ಮುಂದೆ ಓದಿ

ಸರಕಾರಿ ಪ್ರೌಢಶಾಲೆ ಮಚ್ಚಿನ ಸಾಧನಾ ಸನ್ಮಾನ

ಸರಕಾರಿ ಪ್ರೌಢಶಾಲೆ ಮಚ್ಚಿನ ಸಾಧನಾ ಸನ್ಮಾನ

Thursday, February 16th, 2017 | Suddi Belthangady | no responses ಮಚ್ಚಿನ : ಸರಕಾರಿ ಪ್ರೌಢ ಶಾಲೆ, ಮಚ್ಚಿನ ಇಲ್ಲಿ 2015-16ನೇ ಸಾಲಿನಲ್ಲಿ ಎಸ್.ಎಸ್.ಎಲ್.ಸಿ… ಮುಂದೆ ಓದಿ

ಉಜಿರೆ ಕಾಲೇಜಿನಲ್ಲಿ ಸಾಹಿತ್ಯ ಅಧ್ಯಯನ ಶಿಬಿರ

ಉಜಿರೆ ಕಾಲೇಜಿನಲ್ಲಿ ಸಾಹಿತ್ಯ ಅಧ್ಯಯನ ಶಿಬಿರ

Friday, February 10th, 2017 | Suddi Belthangady | no responses ಹೆಗ್ಗೋಡಿನ ನೀನಾಸಂ ಪ್ರತಿಷ್ಠಾನದ ಸಹಯೋಗದಲ್ಲಿ ಉಜಿರೆಯ ಶ್ರೀ ಧ.ಮಂ. ಪದವಿ ಕಾಲೇಜಿನಲ್ಲಿ ಫೆಬ್ರವರಿ… ಮುಂದೆ ಓದಿ

ಉಜಿರೆ : ಎಸ್‌ಡಿಎಂ ’ನುಡಿದನಿ’ ಅನಾವರಣ

ಉಜಿರೆ : ಎಸ್‌ಡಿಎಂ ’ನುಡಿದನಿ’ ಅನಾವರಣ

Saturday, January 28th, 2017 | Suddi Belthangady | no responses ಉಜಿರೆ : ಉಜಿರೆಯಲ್ಲಿ ನಡೆಯುತ್ತಿರುವ ೨೧ನೇ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನದ ಪ್ರಯುಕ್ತ… ಮುಂದೆ ಓದಿ

ವಾಣಿ ಪದವಿ ಪೂರ್ವ ಕಾಲೇಜಿನಲ್ಲಿ ಗಣರಾಜ್ಯೋತ್ಸವ ದಿನಾಚರಣೆ

Thursday, January 26th, 2017 | Suddi Belthangady | no responses ಬೆಳ್ತಂಗಡಿ : ಇಲ್ಲಿನ ಹಳೆಕೋಟೆ ವಾಣಿ ಪದವಿ ಪೂರ್ವ ಕಾಲೇಜು ಮೈದಾನದಲ್ಲಿ ಇಂದು… ಮುಂದೆ ಓದಿ

ಪ್ರಾಚೀನ ಹಸ್ತಪ್ರತಿ ಗ್ರಂಥಗಳ ರಕ್ಷಣೆ ಅತ್ಯವಶ್ಯಕ

Thursday, January 12th, 2017 | Suddi Belthangady | no responses ಉಜಿರೆ : ಪ್ರಾಚೀನ ಹಸ್ತ ಪ್ರತಿಗಳ ಗ್ರಂಥದಲ್ಲಿ ಅತ್ಯಮೂಲ್ಯ ಜ್ಞಾನರಾಶಿಯೇ ಅಡಗಿದೆ. ಭಾರತದಲ್ಲಿ… ಮುಂದೆ ಓದಿ

ಕುಂಟಿನಿ ಶಾಲೆಯಲ್ಲಿ 16 ವರ್ಷಗಳ ನಂತರ ಮೊದಲ ಬಾರಿಗೆ ಸಂಭ್ರಮದ ವಾರ್ಷಿಕೋತ್ಸವ

Tuesday, December 27th, 2016 | Suddi Belthangady | no responses ಉಜಿರೆ: ಇಲ್ಲಿಯ ಕಿ.ಪ್ರಾ.ಶಾಲೆ ಕುಂಟಿನಿಯಲ್ಲಿ 16 ವರ್ಷಗಳ ನಂತರ ಮೊದಲ ಬಾರಿಗೆ ವಾರ್ಷಿಕೋತ್ಸವವನ್ನು… ಮುಂದೆ ಓದಿ

ಸಂಭ್ರಮದ ವಾರ್ಷಿಕ ಕ್ರೀಡೋತ್ಸವ- ಧರ್ಮಸ್ಥಳ ಆಂಗ್ಲ ಮಾಧ್ಯಮ ಶಾಲೆ

Monday, December 26th, 2016 | Suddi Belthangady | no responses ಧರ್ಮಸ್ಥಳ: ಸಂಭ್ರಮದ ವಾರ್ಷಿಕ ಕ್ರೀಡೋತ್ಸವ ಕಾರ್ಯಕ್ರಮವು ಧರ್ಮಸ್ಥಳ ಆಂಗ್ಲ ಮಾಧ್ಯಮ ಶಾಲೆಯಲ್ಲಿ ವೈಭವದಿಂದ… ಮುಂದೆ ಓದಿ

ಶಿಕ್ಷಕರ ತರಬೇತಿಗೆ ಅರ್ಜಿ ಆಹ್ವಾನ

ಶಿಕ್ಷಕರ ತರಬೇತಿಗೆ ಅರ್ಜಿ ಆಹ್ವಾನ

Thursday, December 22nd, 2016 | Suddi Belthangady | no responses ಉಜಿರೆ : ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ  ಶಿಕ್ಷಣ ಮಹಾವಿದ್ಯಾಲಯ  (ಬಿ.ಎಡ್)ದಲ್ಲಿ 2016-17ನೇ ಸಾಲಿನ… ಮುಂದೆ ಓದಿ

ರಾಷ್ಟ್ರಮಟ್ಟದಲ್ಲಿ ಮಿಂಚು ಹರಿಸಲಿದ್ದಾರೆ ಕಾಶಿಪಟ್ಣ ಸರ್ಕಾರಿ ಪ್ರೌಢಶಾಲೆ ಮಕ್ಕಳು

Thursday, December 15th, 2016 | Suddi Belthangady | no responses ವಿದ್ಯಾರ್ಥಿಗಳಿಗೆ ತಂದೆ ತಾಯಿಯ ಆಶೀರ್ವಾದ, ಶಾಲಾ ಶಿಕ್ಷಕ ವೃಂದದ ಸಹಕಾರ, ಊರ ಜನರ… ಮುಂದೆ ಓದಿ

ದಿಲ್ಲಿಯಲ್ಲಿ ಸದ್ದು ಮಾಡಿದ ಹಳ್ಳಿಯ ಅಂಗನವಾಡಿ ಕುಕ್ಕೇಡಿಯ ನಿಷ್ಠಾವಂತ ಕಾರ್ಯಕರ್ತೆ ಜಾನಕಿಯವರಿಗೆ ರಾಷ್ಟ್ರ ಪ್ರಶಸ್ತಿ

Thursday, December 15th, 2016 | Suddi Belthangady | no responses ವೇಣೂರು: ಕುಕ್ಕೇಡಿ ಗ್ರಾಮ ಪಂಚಾಯತು ವ್ಯಾಪ್ತಿಯ ಕುಂಡದಬೆಟ್ಟು ಅಂಗನವಾಡಿ ಕೇಂದ್ರ ಇದೀಗ ರಾಷ್ಟ್ರಮಟ್ಟದಲ್ಲಿ… ಮುಂದೆ ಓದಿ

ಮಕ್ಕಳ ರಾಷ್ಟ್ರೀಯ ವಿಜ್ಞಾನ ಮಾದರಿ ಸ್ಪರ್ಧೆ_ರಾಷ್ಟ್ರಮಟ್ಟಕ್ಕೆ ಆಯ್ಕೆ

Monday, December 12th, 2016 | Suddi Belthangady | no responses ಧರ್ಮಸ್ಥಳ : ಸುಧಾನ ವಸತಿ ಶಾಲೆ, ಪುತ್ತೂರುನಲ್ಲಿ ರಾಜ್ಯ ಮಟ್ಟದ ಮಕ್ಕಳ ರಾಷ್ಟ್ರೀಯ… ಮುಂದೆ ಓದಿ

ಕೋಯ ನಗರ ಅಂಗನವಾಡಿಯಲ್ಲಿ ಮಕ್ಕಳ ದಿನಾಚರಣೆ

ಕೋಯ ನಗರ ಅಂಗನವಾಡಿಯಲ್ಲಿ ಮಕ್ಕಳ ದಿನಾಚರಣೆ

Monday, November 14th, 2016 | Suddi Belthangady | no responses ಇಂದಬೆಟ್ಟು: ಗ್ರಾಮದ ಕೋಯ ನಗರ ಅಂಗನವಾಡಿ ಕೇಂದ್ರದಲ್ಲಿ ಮಕ್ಕಳ ದಿನಾಚರಣೆಯನ್ನು ನ. 14 … ಮುಂದೆ ಓದಿ

ಮಾನವೀಯತೆಯಿಂದ ಸಮಾಜಕ್ಕೆ ಸಣ್ಣ ಕೆಲಸಗಳನ್ನಾದರೂ ಮಾಡುವ ತುಡಿತ ನಮ್ಮದಾಗಬೇಕು: ತ್ರಿಶಾಲ ಜೈನ್ ಕೆ .ಎಸ್

Saturday, October 15th, 2016 | Suddi Belthangady | no responses ಮಡಂತ್ಯಾರು: ಸುಮಾರು ಮೂವತ್ತು ವರ್ಷಗಳ ಹಿಂದಿನ ದಿನಗಳನ್ನು ಸ್ಮರಿಸಿಕೊಂಡರೆ, ನಮ್ಮ ಮಡಂತ್ಯಾರು ಸಾಕಷ್ಟು… ಮುಂದೆ ಓದಿ

ಕುಂಟಾಲಪಲ್ಕೆ: ಶಾಲಾ ಸಮುದಾಯದತ್ತ ಕಾರ್ಯಕ್ರಮ ಹಾಗೂ ವಿಶ್ವ ಕೈ ತೊಳೆಯುವ ದಿನಾಚರಣೆ..

Monday, October 10th, 2016 | Suddi Belthangady | no responses ಬಂದಾರು: ಇಲ್ಲಿನ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಕುಂಟಾಲಪಲ್ಕೆಯಲ್ಲಿ 2016-17 ನೆ ಸಾಲಿನ… ಮುಂದೆ ಓದಿ

ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲಾ ಶಾಲಾ ವಿದ್ಯಾರ್ಥಿಗಳಿಗೆ ರಜೆ ಮುಂದೂಡಿಕೆಯ ಸಂತಸದ ಸುದ್ದಿ

Saturday, October 8th, 2016 | Suddi Belthangady | no responses ಕಾವೇರಿ ನದಿ ನೀರು ಹಂಚಿಕೆ ಮತ್ತು ವಿವಿಧ ಬಂದ್ ಹಿನ್ನೆಲೆಯಲ್ಲಿ ಶಾಲಾ ಕಾಲೇಜುಗಳಿಗೆ… ಮುಂದೆ ಓದಿ

ರೋಟರಿ ಕ್ಲಬ್‌ನಿಂದ ವಾಷ್ ಇನ್ ಸ್ಕೂಲ್ ಕಾರ್ಯಕ್ರಮ

Thursday, October 6th, 2016 | Suddi Belthangady | no responses ನಡ : ವಿಶ್ವ ಕೈ ತೊಳೆಯುವ ದಿನ ದ ಪ್ರಯುಕ್ತ ರೋಟರಿ ಕ್ಲಬ್… ಮುಂದೆ ಓದಿ

ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ವಿದ್ಯಾರ್ಥಿಗಳಿಗೆ ವಿಶೇಷ ಶೈಕ್ಷಣಿಕ ತರಬೇತಿ

Saturday, October 1st, 2016 | Suddi Belthangady | no responses ಬೆಳ್ತಂಗಡಿ :  ಸರ್ಕಾರಿ ಪದವಿ ಪೂರ್ವ ಕಾಲೇಜುಗಳಲ್ಲಿ ಓದುತ್ತಿರುವ ಪರಿಶಿಷ್ಟ ಜಾತಿ ಮತ್ತು… ಮುಂದೆ ಓದಿ

ಶಾಲಾ-ಕಾಲೇಜುಗಳಿಗೆ ದಸರಾ ರಜೆಯಲ್ಲಿ ಕಡಿತ

ಶಾಲಾ-ಕಾಲೇಜುಗಳಿಗೆ ದಸರಾ ರಜೆಯಲ್ಲಿ ಕಡಿತ

Thursday, September 22nd, 2016 | Suddi Belthangady | no responses ಅ.7 ಸಮುದಾಯದತ್ತ ಶಾಲೆ   ಅ.9 ರಿಂದ 30ರ ವರೆಗೆ ರಜೆ ಬೆಳ್ತಂಗಡಿ : ಮುಂದೆ ಓದಿ

ಜಿಲ್ಲಾ ಪ್ರಶಸ್ತಿ ಪುರಸ್ಕೃತ ಧರ್ಣಪ್ಪರಿಗೆ ಅಭಿನಂದನೆ

Thursday, September 15th, 2016 | Suddi Belthangady | no responses ಧರ್ಮಸ್ಥಳ : ಶ್ರೀ ಮಂಜುನಾಥ ಸ್ವಾಮಿ ಅನುದಾನಿತ ಹಿರಿಯ ಪ್ರಾಥಮಿಕ ಶಾಲೆ ಧರ್ಮಸ್ಥಳದಲ್ಲಿ… ಮುಂದೆ ಓದಿ

ಕಕ್ಕಿಂಜೆ: ಸರಕಾರಿ ಶಾಲೆಗೆ ಹಳೆವಿದ್ಯಾರ್ಥಿ ಸಂಘದಿಂದ ಹೋದೋಟ ಮತ್ತು ಆವರಣದ ಕೊಡುಗೆ

Monday, August 29th, 2016 | Suddi Belthangady | no responses ಕಕ್ಕಂಜೆ: ಕಕ್ಕಿಂಜೆ ಸರಕಾರಿ ಶಾಲಾ ಹಳೆ ವಿದ್ಯಾರ್ಥಿಗಳ ಸಂಘದ ವತಿಯಿಂದ ಅಂದಾಜು 2 … ಮುಂದೆ ಓದಿ

ಸುಧಾರಿತ ತಂತ್ರಜ್ಞಾನದಿಂದ ವಿವಿಧ ಪ್ರಯೋಜನ

ಸುಧಾರಿತ ತಂತ್ರಜ್ಞಾನದಿಂದ ವಿವಿಧ ಪ್ರಯೋಜನ

Thursday, August 25th, 2016 | Suddi Belthangady | no responses ಉಜಿರೆ: ಸಂಗ್ರಹಿತ ರಕ್ತದಲ್ಲಿರುವ ಅಂಶಗಳನ್ನು ಬೇರ್ಪಡಿಸಿ ವಿವಿಧ ಚಿಕಿತ್ಸೆಗಳಿಗೆ ಉಪಯೋಗಿಸ ಬಹುದಾದ ತಂತ್ರಜ್ಞಾನವು… ಮುಂದೆ ಓದಿ

ಧರ್ಮಸ್ಥಳ : ನೈತಿಕ ಮೌಲ್ಯಾಧಾರಿತ ಪುಸ್ತಕಗಳ ಬಿಡುಗಡೆ ಸಮಾರಂಭ

Saturday, August 20th, 2016 | Suddi Belthangady | no responses ಧರ್ಮಸ್ಥಳ : ಗಿನ್ನೆಸ್ ಪ್ರಶಸ್ತಿ ಪುರಸ್ಕೃತ ಸಂಸ್ಥೆ ಶಾಂತಿವನ ಟ್ರಸ್ಟ್ (ರಿ) ಶ್ರೀ.ಕ್ಷೇ.ಧರ್ಮಸ್ಥಳ… ಮುಂದೆ ಓದಿ

ಲಾಯಿಲ : ಸೈಂಟ್ ಮೇರೀಸ್ ಶಾಲೆಯಲ್ಲಿ ಸ್ವಾತಂತ್ರ್ಯ ದಿನಾಚರಣೆ

Monday, August 15th, 2016 | Suddi Belthangady | no responses ಲಾಯಿಲ : ಆ.15ರಂದು ಲಾಯಿಲ ಸೈಂಟ್ ಮೇರೀಸ್ ಶಾಲೆಯಲ್ಲಿ ಸ್ವಾತಂತ್ರ್ಯ ದಿನಾಚರಣೆಯನ್ನು ಆಚರಿಸಲಾಯಿತು.… ಮುಂದೆ ಓದಿ

ಕಕ್ಕಿಂಜೆ : ಕಾರುಣ್ಯ ಶಾಲೆಯ ವಿದ್ಯಾರ್ಥಿಗಳ ಪಥಸಂಚನದ ಮೂಲಕ ಸ್ವಾತಂತ್ರ್ಯೋತ್ಸವ ಆಚರಣೆ

Monday, August 15th, 2016 | Suddi Belthangady | no responses ಕಕ್ಕಿಂಜೆ :  ಕಾರುಣ್ಯ ಶಾಲೆಯಲ್ಲಿ 70ನೇ ಸ್ವಾತಂತ್ರ್ಯೋತ್ಸವವು ವಿದ್ಯಾರ್ಥಿಗಳ ಪಥಸಂಚನದ ಮೂಲಕ ವಿಶೇಷ… ಮುಂದೆ ಓದಿ

ಎನ್. ಎ ಗೋಪಾಲ ಶೆಟ್ಟಿ ಫ್ಯಾಮಿಲಿ ಟ್ರಸ್ಟ್ ವತಿಯಿಂದ ಪಡ್ಲಾಡಿ ಸರಕಾರಿ ಶಾಲಾ ಮಕ್ಕಳಿಗೆ ಉಚಿತ ಪುಸ್ತಕ ವಿತರಣೆ

Monday, August 1st, 2016 | Suddi Belthangady | no responses ಲಾಯಿಲ: ಎನ್. ಎ ಗೋಪಾಲ ಶೆಟ್ಟಿ ಫ್ಯಾಮಿಲಿ ಟ್ರಸ್ಟ್, ಲಯನ್ಸ್ ಕ್ಲಬ್ ಬೆಳ್ತಂಗಡಿ,… ಮುಂದೆ ಓದಿ

ಉಜಿರೆ : ಎಸ್.ಡಿ.ಎಂ ಕಾಲೇಜಿನಲ್ಲಿ ಬೇಂದ್ರೆ ಕಾವ್ಯಾನುಭವ ಕಾರ್ಯಕ್ರಮ

Saturday, July 30th, 2016 | Suddi Belthangady | no responses ಉಜಿರೆ : ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಕಾಲೇಜು ಉಜಿರೆ ಹಾಗೂ ಕನ್ನಡ ಸಂಘ… ಮುಂದೆ ಓದಿ

ಜು.17 : ಕಾನ್ಸ್‌ಟೇಬಲ್ ಹುದ್ದೆಗೆ ಲಿಖಿತ ಪರೀಕ್ಷೆ

Thursday, July 14th, 2016 | Suddi Belthangady | no responses ಮಂಗಳೂರು ನಗರ ಪೊಲೀಸ್ ಕಮೀಷನರೇಟ್‌ಗೆ ಸಂಬಂದಿಸಿ ಸಿವಿಲ್ ಪೊಲೀಸ್ ಕಾನ್ಸ್‌ಟೇಬಲ್ ಹಾಗೂ ಮಹಿಳಾ… ಮುಂದೆ ಓದಿ

ಹೆಗ್ಗಡೆ ಸಂಘದಿಂದ ವಿದ್ಯಾರ್ಥಿ ವೇತನಕ್ಕೆ ಅರ್ಜಿ ಆಹ್ವಾನ

Thursday, July 14th, 2016 | Suddi Belthangady | no responses ಬೆಳ್ತಂಗಡಿ : ದ.ಕ ಜಿಲ್ಲಾ ಹೆಗ್ಗಡೆ ಸಮಾಜ ಸಂಘ ಕೋಟೆಬಾಗಿಲು ಇದರ ವತಿಯಿಂದ… ಮುಂದೆ ಓದಿ

nalike samudaya bhavanaಬೆಳ್ತಂಗಡಿ : ಇಲ್ಲಿನ ನಲಿಕೆಯವರ ಸಮುದಾಯ ಭವನದ ಉದ್ಘಾಟನೆಯು ಡಿ. 10ರಂದು ನಡೆಯಿತು.
ಸಮುದಾಯ ಭವನದ ಉದ್ಘಾಟನೆಯನ್ನು ಶಾಸಕ ಕೆ. ವಸಂತ ಬಂಗೇರ ನೆರವೇರಿಸಿದರು. ಈ ಸಂದರ್ಭದಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಬಿ. ರಮಾನಾಥ ರೈ, ಅಳದಂಗಡಿ ಸತ್ಯದೇವತಾ ದೈವಸ್ಥಾನದ ಆಡಳಿತದಾರ ಶಿವಪ್ರಸಾದ್ ಅಜಿಲ, ಬೆಳ್ತಂಗಡಿ ನಲಿಕೆಯವರ ಸಮಾಜ ಸೇವಾ ಸಂಘದ ಅಧ್ಯಕ್ಷ ಸೇಸಪ್ಪ ಕೆ. ನಲಿಕೆ, ಶ್ರೀ ಕ್ಷೇತ್ರ ಧರ್ಮಸ್ಥಳ ಸಮುದಾಯ ಅಭಿವೃದ್ಧಿ ವಿಭಾಗದ ನಿರ್ದೇಶಕ ಜಯರಾಮ ನೆಲ್ಲಿತ್ತಾಯ, ಜಿ.ಪಂ ಸದಸ್ಯ ಶೇಖರ ಕುಕ್ಕೇಡಿ, ಬೆಳ್ತಂಗಡಿ ನಲಿಕೆಯವರ ಸಮಾಜ ಸೇವಾ ಸಂಘದ ಗೌರವಾಧ್ಯಕ್ಷ ಸುರೇಶ್ ಬಾಬು ಪಣೆಜಾಲು, ಮಂಗಳೂರು ಭಾರತೀಯ ತೈಲ ನಿಗಮದ ಬಿ.ಎಸ್ ಸುಂದರ್, ಜಿಲ್ಲಾ ನಲಿಕೆಯವರ ಯುವ ವೇದಿಕೆಯ ಅಧ್ಯಕ್ಷ ಸುಬ್ರಾಯ ಕಲ್ಮಂಜ, ಸಂಘದ ಕೋಶಾಧಿಕಾರಿ ಸುರೇಶ್ ಬಿ.ಕೆ., ಕಾರ್ಯದರ್ಶಿ ಸತೀಶ್ ಪಿ., ಉಪಾಧ್ಯಕ್ಷ ಎಸ್ ಪ್ರಭಾಕರ ಮೊದಲಾವರು ಉಪಸ್ಥಿತರಿದ್ದರು.

kotichennayaಬೆಳ್ತಂಗಡಿ ಶ್ರೀ ಗುರುನಾರಾಯಣ ಸ್ವಾಮಿ ಸೇವಾ ಸಂಘದ ಕೋಟಿ ಚೆನ್ನಯ ಕ್ರೀಡಾಕೂಟವು ಡಿ. 31 ರಂದು ನಡೆಯಲಿದ್ದು, ಇದರ ಆಮಂತ್ರಣ ಪತ್ರಿಕೆಯನ್ನು ಸಂಘದ ಗೌರವಾಧ್ಯಕ್ಷ ಶಾಸಕ ಕೆ. ವಸಂತ ಬಂಗೇರರವರು ಬಿಡುಗಡೆಗೊಳಿಸಿದರು.
ಈ ಸಂದರ್ಭದಲ್ಲಿ ಸಂಘದ ಅಧ್ಯಕ್ಷ ಸೋಮನಾಥ ಬಂಗೇರ, ಹಾಗೂ ಸಂಘದ ಎಲ್ಲಾ ನಿರ್ದೇಶಕರುಗಳು, ಪದಾಧಿಕಾರಿಗಳು ಉಪಸ್ಥಿತರಿದ್ದರು.

marody shanipooje

marody shanipooje1ಮರೋಡಿ : ಮರೋಡಿ ಉಮಾಮಹೇಶ್ವರ ದೇವಸ್ಥಾನ ಇದರ ಸಹಕಾರದಲ್ಲಿ ಶ್ರೀ ಉಮಾಮಹೇಶ್ವರ ಯಂಗ್ ಸ್ಟಾರ್ ಫ್ರೆಂಡ್ಸ್ ಇದರ 4ನೇ ವರ್ಷದ ವಾರ್ಷಿಕೋತ್ಸವ ಮತ್ತು ಸಾರ್ವಜನಿಕ ಶನಿಪೂಜೆಯು ಸುಬ್ರಹ್ಮಣ್ಯ ಪ್ರಸಾದ್ ಭಟ್ ಅವರ ನೇತೃತ್ವದಲ್ಲಿ ಡಿ. 9ರಂದು ದೇವಸ್ಥಾನದ ವಠಾರದಲ್ಲಿ ಜರಗಿತು.
ಧಾರ್ಮಿಕ ಸಭೆಯಲ್ಲಿ ರಾಜ್ಯ ಸಂಸ್ಕಾರ ಭಾರತಿ ಲೋಕ ಕಲಾವಿದ ಪ್ರಮುಖ್, ತುಳುವ ಬೊಳ್ಳಿ ದಯಾನಂದ ಕತ್ತಲ್‌ಸಾರ್ ಧಾರ್ಮಿಕ ಉಪನ್ಯಾಸ ನೀಡಿದರು. ದೇವಸ್ಥಾನದ ಆಡಳಿತ ಮೊಕ್ತೇಸರ ಕೊಡಂಗೆ ದೇವೇಂದ್ರ ಹೆಗ್ಡೆ ಕೊಕ್ರಾಡಿ ಅಧ್ಯಕ್ಷತೆ ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ಬಿಜೆಪಿ ಯುವ ಮೋರ್ಚಾ ಜಿಲ್ಲಾಧ್ಯಕ್ಷ ಹರೀಶ್ ಪೂಂಜ, ತಾ.ಪಂ. ಸ್ಥಾಯಿ ಸಮಿತಿ ಮಾಜಿ ಅಧ್ಯಕ್ಷ ಜಯಂತ ಕೋಟ್ಯಾನ್, ತಾ.ಪಂ. ಸದಸ್ಯೆ ರೂಪಲತಾ, ಕೇಳ ಮಾಗಣೆ ಬಸದಿಯ ಆಡಳಿತ ಮೊಕ್ತೇಸರ ಡಾ.ಆಶೀರ್ವಾದ್, ಮುಂಬೈ ಉದ್ಯಮಿ ನಾರಾಯಣ ಸುವರ್ಣ, ಉದ್ಯಮಿ ರತ್ನಾಕರ ಬುಣ್ಣಾನ್ ಮರೋಡಿ, ಸಾವ್ಯ ಗುಜ್ಜೊಟ್ಟು ಶ್ರೀ ಅಯ್ಯಪ್ಪ ಸ್ವಾಮಿ ಸೇವಾ ಸಮಿತಿ ಗೌರವಾಧ್ಯಕ್ಷ ಶ್ರೀಧರ ಪೂಜಾರಿ ಭೂತಡ್ಕ, ಮುಂಬೈ ಉದ್ಯಮಿ ಸುರೇಶ್ ಅಂಚನ್  ಹಾಗೂ ಮೊದಲಾದವರು ಭಾಗವಹಿಸಿದ್ದರು.

gurujayanthi

gurujayanthi1

gurujayanthi2

gurujayanthi3

gurujayanthi4ಕುಕ್ಕೆಡಿ ಬ್ರಹ್ಮಶ್ರೀ ಗುರುನಾರಾಯಣ ಸ್ವಾಮಿ ಸೇವಾ ಸಮಿತಿ ಕುಂಡದಬೆಟ್ಟು -ಕುಕ್ಕೇಡಿ-ನಿಟ್ಟಡೆ, ಬಿಲ್ಲವ ಮಹಿಳಾ ವೇದಿಕೆ ಮತ್ತು ಯುವ ಬಿಲ್ಲವ ವೇದಿಕೆ, ಹಾಗೂ ಯುವವಾಹಿನಿ ಸಂಚಾಲನ ಸಮಿತಿ, ಕುಂಡದಬೆಟ್ಟು -ಕುಕ್ಕೇಡಿ-ನಿಟ್ಟಡೆ ಇವುಗಳ ಸಂಯುಕ್ತ ಆಶ್ರಯದಲ್ಲಿ ಡಿ. 10 ರಂದು ಡಾ| ಬಿ.ಆರ್. ಅಂಬೇಡ್ಕರ್ ಭವನ, ಕುಕ್ಕೇಡಿ-ಕುಂಡದಬೆಟ್ಟು ಇಲ್ಲಿ ಬ್ರಹ್ಮಶ್ರೀ ನಾರಾಯಣ ಗುರುಗಳ 163ನೇ ಗುರುಜಯಂತಿ ಹಾಗೂ ಪ್ರತಿಭಾ ಪುರಸ್ಕಾರ ಕಾರ್ಯಕ್ರಮ ನಡೆಯಿತು.
ನಿಟ್ಟಡೆ ಗ್ರಾಮದ ಗೋಳಿಯಂಗಡಿ ಪಾಣೂರು ಬಳಿ ಕುಕ್ಕೇಡಿ ಗ್ರಾಮ ಪಂಚಾಯತು ವತಿಯಿಂದ ನಿರ್ಮಿಸಲ್ಪಟ್ಟ ಬ್ರಹ್ಮಶ್ರೀ ನಾರಾಯಣಗುರು ವೃತ್ತ ಉದ್ಘಾಟನೆಯನ್ನು ಶಾಸಕ ಕೆ. ವಸಂತ ಬಂಗೇರ ನೆರವೇರಿಸಿದರು. ಸಭಾಕಾರ್ಯಕ್ರಮದ ಅಧ್ಯಕ್ಷತೆಯನ್ನು ಸಂಘದ ಅಧ್ಯಕ್ಷ ಕೆ. ಸುಂದರ ಪೂಜಾರಿ ಅಮೇಯಿ ವಹಿಸಿದ್ದರು.
ಈ ಸಂದರ್ಭದಲ್ಲಿ ಮಂಗಳೂರು ಬ್ರಹ್ಮಶ್ರೀ ನಾರಾಯಣಗುರು ಅಧ್ಯಾಯನ ಪೀಠ ವಿಶ್ವವಿದ್ಯಾನಿಲಯದ ನಿರ್ದೇಶಕ ಮುದ್ದು ಮೂಡುಬೆಳ್ಳೆ, ಸರಕಾರಿ ಪ್ರೌಢ ಶಾಲೆ, ಕಲ್ಲಾಡಿ ಮಂಗಳೂರು ಮುಖ್ಯೋಪಾಧ್ಯಾಯಿನಿ ಸುರೇಖಾ ಕೆ.ಇ.ಎಸ್, ಬೆಳ್ತಂಗಡಿ ಶ್ರೀ.ಗು.ನಾ.ಸ್ವಾ.ಸೇ ಸಂಘದ ಅಧ್ಯಕ್ಷ ಸೋಮನಾಥ ಬಂಗೇರ ವರ್ಪಾಳೆ, ನಿಕಟಪೂರ್ವ ಅಧ್ಯಕ್ಷ ಭಗೀರಥ ಜಿ. ಯುವ ಬಿಲ್ಲವ ವೇದಿಕೆ ಅಧ್ಯಕ್ಷ ಸಂತೋಷ್ ಕುಮಾರ್ ಉಪ್ಪಾರು, ಮಹಿಳಾ ವೇದಿಕೆ ಅಧ್ಯಕ್ಷೆ ಶ್ರೀಮತಿ ರಾಜಶ್ರೀ ರಮಣ್, ಪ್ರಧಾನ ಕಾರ್ಯದರ್ಶಿ ರಾಕೇಶ್ ಕುಮಾರ್ ಮೂಡುಕೋಡಿ, ಕುಕ್ಕೇಡಿ ಗ್ರಾ.ಪಂ ಅಧ್ಯಕ್ಷೆ ತೇಜಾಕ್ಷಿ, ಕುಕ್ಕೇಡಿ ಯುವ ಬಿಲ್ಲವ ವೇದಿಕೆ ಅಧ್ಯಕ್ಷ ನಿತೀಶ್ ಎಚ್, ಬಿಲ್ಲವ ವೇದಿಕೆ ಅಧ್ಯಕ್ಷೆ ಲೀಲಾವತಿ ನಿಟ್ಟಡೆ ಯುವವಾಹಿನಿ ಅಧ್ಯಕ್ಷ ಎಚ್.ಎಲ್. ಉದಯ ಹಾಗೂ ಮೊದಲಾದವರು ಉಪಸ್ಥಿತರಿದ್ದರು.

ಆಕಾಶವಾಣಿ ಮಂಗಳೂರು ಇಲ್ಲಿ ಶ್ರೀ ಮದವೂರ ವಿಘ್ನೇಶ ಕಲಾ ಸಂಘ ಗೇರುಕಟ್ಟೆ ಇದರ ಸದಸ್ಯರಿಂದ ಡಿ.10 ರಂದು ಮಧ್ಯಾಹ್ನ 2.35 ಕ್ಕೆ ಯಕ್ಷಗಾನ ತಾಳಮದ್ದಳೆ ಶ್ರೀ ಮಹಿಷ ಮರ್ಧಿನಿ ಪ್ರಸಾರವಾಗಲಿದೆ.
ಹಿಮ್ಮೆಳದಲ್ಲಿ ರವಿಚಂದ್ರ ಕನ್ನಡಿಕಟ್ಟೆ, ಗುರು ಪ್ರಸಾದ, ಚೈತನ್ಯ ಕೃಷ್ಣ ಪದ್ಯಾಣ, ಮುಮ್ಮೇಳದಲ್ಲಿ ಪ್ರೋ. ಮಧೂರು ಮೋಹನ ಕಲ್ಲೂರಾಯ, ದಿವಾಕರಾಚಾರ್ಯ ಗೇರುಕಟ್ಟೆ, ಉದಯಶಂಕರ್ ಭಟ್, ಸುಂದರ ಕೃಷ್ಣ ಮಧೂರು, ದಿನೇಶ ಬಳಂಜ, ಸುರೇಶ ಕಲ್ಲೂರಾಯ, ಶ್ರೀಮತಿ ಕೆ.ಆರ್ ಸುವರ್ಣ ಕುಮಾರಿ ಭಾಗವಹಿಸಲಿದ್ದಾರೆ. ಮಧೂರ ಮೋಹನ ಕಲ್ಲೂರಾಯ ಸಂಯೋಜಿಸಿದ್ದಾರೆ.

ಕೊಕ್ಕಡ : ಶ್ರೀಕ್ಷೇತ್ರ ಸೌತಡ್ಕ ಕ್ಷೇತ್ರದಲ್ಲಿ ಬಯಲು ಆಲಯದ ಗಣೇಶನ ಕಟ್ಟೆಯ ಹಿಂಭಾಗದಲ್ಲಿ ಅಂದಾಜು 50 ಲಕ್ಷ ವೆಚ್ಚದಲ್ಲಿ ಪಶ್ಚಿಮ ಭಾಗದ ನೂತನ ಗೋಪುರದ ಕಟ್ಟಡ ನಿರ್ಮಾಣದ ಶಂಕುಸ್ಥಾಪನೆಯು ಡಿ.11 ರಂದು ಬೆಳಗ್ಗೆ 10.30 ಕ್ಕೆ ನಡೆಯಲಿದೆ. ಬೆಳ್ತಂಗಡಿಯ ಶಾಸಕ ಕೆ. ವಸಂತ ಬಂಗೇರ ಶಂಕುಸ್ಥಾಪನೆ ನೆರವೇರಿಸಲಿದ್ದು ಈ ಸಂದರ್ಭ ಕುಕ್ಕೆ ಸುಬ್ರಹ್ಮಣ್ಯದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ನಿತ್ಯಾನಂದ ಮುಂಡೋಡಿ, ಸೌತಡ್ಕ ಕ್ಷೇತ್ರದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಕೆ. ಸುಬ್ರಹ್ಮಣ್ಯ ಶಬರಾಯ, ಸದಸ್ಯರುಗಳಾದ ಕೆ.ವಿಶ್ವನಾಥ ಕೊಲ್ಲಾಜೆ, ಪಿ. ವಿಶ್ವನಾಥ ಶೆಟ್ಟಿ, ಪ್ರಶಾಂತ್ ರೈ, ಅಣ್ಣಪ್ಪ ಗೌಡ ಕಾಶಿ, ಗಣೇಶ್ ಪಿ.ಕೆ., ಸಿನಿ ಗುರುದೇವನ್, ಸೌಮ್ಯ , ಅರ್ಚಕ ಸದಸ್ಯರಾದ ಸತ್ಯಪ್ರಿಯ ಕಲ್ಲೂರಾಯ, ಮುಖ್ಯ ಕಾರ್ಯನಿರ್ವಹಣಾಧಿಕಾರಿ ಹರಿಶ್ಚಂದ್ರ ಮುಂತಾದವರು ಭಾಗವಹಿಸಲಿದ್ದಾರೆ ಎಂದು ದೇವಳದ ಪ್ರಕಟಣೆ ತಿಳಿಸಿದೆ.

Ladru D'sozaನಡ : ಮಂಜೊಟ್ಟಿ ಕೊಲ್ಯೊಟ್ಟು ನಿವಾಸಿ ಲಾದ್ರು ಡಿಸೋಜ(58ವ)ರವರು ಡಿ. 7ರಂದು ತೋಟದಲ್ಲಿ ತೆಂಗಿನಕಾಯಿ ಕೀಳುತ್ತಿದ್ದಾಗ ಆಯತಪ್ಪಿ ಬಿದ್ದು ಮೃತಪಟ್ಟಿದ್ದಾರೆ.
ಮೃತರು ನಡ ಹಾಲು ಉತ್ಪಾದಕರ ಸಹಕಾರಿ ಸಂಘದ ಮಾಜಿ ಅಧ್ಯಕ್ಷರು ಹಾಗೂ ಹಾಲಿ ನಿರ್ದೇಶಕರಾಗಿದ್ದರು.
ಮೃತರು ಪತ್ನಿ ಸೆಲಿನ್ ಡಿಸೋಜ, ಪುತ್ರಿಯರಾದ ಜಾನೆಟ್, ಲಿನೆಟ್, ವೈಲೆಟ್ ಹಾಗೂ ಬಂಧು ವರ್ಗದವರನ್ನು ಅಗಲಿದ್ದಾರೆ.

pathrikagosti

pathrikagosti1ಬೆಳ್ತಂಗಡಿ : ಜಿಲ್ಲೆಯಲ್ಲಿ ಶಾಂತಿ ಸಾಮರಸ್ಯ ವಾತಾವರಣ ಕಾಪಾಡುವ ಉದ್ದೇಶದಿಂದ ಡಿ. 12ರಂದು ಫರಂಗಿಪೇಟೆಯಿಂದ ಮಾಣಿಯವರೆಗೆ ಸಾಮರಸ್ಯ ನಡಿಗೆ ನಡೆಯಲಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಬಿ. ರಮಾನಾಥ ರೈ ಹೇಳಿದರು.
ಅವರು ಡಿ. 8ರಂದು ಬೆಳ್ತಂಗಡಿ ಪ್ರವಾಸಿ ಮಂದಿರದಲ್ಲಿ ನಡೆದ ಪತ್ರಿಕಾಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದರು. ಜಿಲ್ಲೆಯಲ್ಲಿ ಸಾಮರಸ್ಯದ ವಾತಾವರಣ ಮೂಡಿಸುವ ನಿಟ್ಟಿನಲ್ಲಿ ಇದೊಂದು ಮಹತ್ವವಾದ ಹೆಜ್ಜೆ ಆಗಬೇಕಿದೆ ಎಂದು ಹೇಳಿದರು.
ಪತ್ರಿಕಾಗೋಷ್ಠಿಯಲ್ಲಿ ಶಾಸಕ ಕೆ. ವಸಂತ ಬಂಗೇರ, ಕಾಂಗ್ರೆಸ್ ಜಿಲ್ಲಾಧ್ಯಕ್ಷ ಹರೀಶ್ ಕುಮಾರ್, ಕೆಪಿಸಿಸಿ ಸದಸ್ಯರಾದ ಪೀತಾಂಬರ ಹೇರಾಜೆ, ರಾಮಚಂದ್ರ ಗೌಡ, ಬ್ಲಾಕ್ ಕಾಂಗ್ರೆಸ್ ಗ್ರಾಮೀಣ ಅಧ್ಯಕ್ಷ ಶ್ರೀನಿವಾಸ ಕಿಣಿ, ನಗರ ಅಧ್ಯಕ್ಷ ರಾಜಶೇಖರ ಅಜ್ರಿ, ತಾ.ಪಂ, ಜಿ.ಪಂ ಸದಸ್ಯರು, ವಿವಿಧ ಘಟಕಗಳ ಪದಾಧಿಕಾರಿಗಳು, ಜೆಡಿಎಸ್, ಸಿಪಿಐ(ಎಂ), ಡಿಎಸ್‌ಎಸ್. ಮಲೆಕುಡಿಯರ ಸಂಘ ಸೇರಿದಂತೆ ವಿವಿಧ ಸಂಘಟನೆಗಳ ಮುಖ್ಯಸ್ಥರು ಉಪಸ್ಥಿತರಿದ್ದರು.

ENT chikisthalaya subarambaಬೆಳ್ತಂಗಡಿ : ಇಲ್ಲಿನ ಮುಖ್ಯ ರಸ್ತೆಯ ಎಂಆರ್‌ಎಫ್ ಟಯರ್‍ಸ್ ಕಾಂಪ್ಲೆಕ್ಸ್‌ನಲ್ಲಿ ನೂತನವಾಗಿ ಪ್ರಾರಂಭಿಸಿದ ಡಾ| ಶಿಲ್ಪಾ ಹೆಗಡೆ ಮತ್ತು ಡಾ| ಶ್ರೀಹರ್ಷ ತುಳುಪುಳೆ ಯವರ ಮಕ್ಕಳ ಮತ್ತು ಇಎನ್‌ಟಿ ಚಿಕಿತ್ಸಾಲಯದ ಉದ್ಘಾಟನಾ ಸಮಾರಂಭವು ಡಿ.3 ರಂದು ನಡೆಯಿತು.
ಚಿಕಿತ್ಸಾಲಯವನ್ನು ಬೆಳ್ತಂಗಡಿಯ ಹಿರಿಯ ವೈದ್ಯರಾದ ಡಾ| ಟಿ.ಎನ್ ತುಳುಪುಳೆಯವರು ದೀಪಬೆಳಗಿಸಿ ನೆರವೇರಿಸಿ ಶುಭಹಾರೈಸಿದರು.
ಈ ಸಮಾರಂಭದಲ್ಲಿ ಅಳದಂಗಡಿಯ ವೈದ್ಯರಾದ ಡಾ| ಎನ್.ಎಂ ತುಳುಪುಳೆ, ಗೀತಾ ತುಳುಪುಳೆ, ಎಸ್.ಎಂ ತುಳುಪುಳೆ, ನರೇಂದ್ರ ತುಳುಪುಳೆ, ಎಂಆರ್‌ಎಫ್ ಟಯರ್‍ಸ್‌ನ ಪ್ರಕಾಶ್ ತುಳುಪುಳೆ, ಪಲ್ಲವಿ ತುಳುಪುಳೆ, ಅಶ್ಮಿತಾ, ಅಶ್ವಿನ್ ತುಳುಪುಳೆ, ಮತ್ತು ಬಂಧು-ಮಿತ್ರರು ಉಪಸ್ಥಿತರಿದ್ದರು. ಪ್ರತಿ ಆದಿತ್ಯವಾರದಂದು ಡಾ| ಶಿಲ್ಪಾ ಹೆಗಡೆ ಮತ್ತು ಡಾ| ಶ್ರೀಹರ್ಷ ತುಳುಪುಳೆ ಇಬ್ಬರೂ ವೈದ್ಯರು ಪೂರ್ವಾಹ್ನ ಗಂಟೆ 10 ರಿಂದ ಅಪರಾಹ್ನ ಗಂಟೆ 2 ರ ತನಕ ಭೇಟಿಗೆ ಲಭ್ಯವಿರುತ್ತಾರೆ. ಹಾಗೂ ಮಕ್ಕಳ ಎಲ್ಲಾ ರೀತಿಯ ವ್ಯಾದಿಗಳ ತಪಾಸಣೆ ಮತ್ತು ಚಿಕಿತ್ಸೆ ಎಲ್ಲಾ ವಿಧದ ರೋಗ ನಿರೋಧಕ ಚುಚ್ಚುಮದ್ದುಗಳನ್ನು ಮಕ್ಕಳಿಗೆ ಕೊಡಲಾಗುವುದು. ಕಿವಿ, ಮೂಗು ಮತ್ತು ಗಂಟಲು ವ್ಯಾದಿಗಳ ಸಮಸ್ಯೆ ತಪಾಸಣೆ ಮತ್ತು ಚಿಕಿತ್ಸೆ ನೀಡಲಾಗುವುದು ಎಂದು ತಿಳಿಸಿದ್ದರು.

suddi COLORpdf BLDY  1, 3, 5, 7, 9, 11, 13, 15, 17, 19, 21.p65

suddi COLORpdf BLDY  1, 3, 5, 7, 9, 11, 13, 15, 17, 19, 21.p65

Jeevitha Nಮಾಲಾಡಿ ಶ್ರೀಮನೆ ಪೆರ್ಡೆ ನಾಗೇಶ್ ಹೆಗ್ಡೆ ಮತ್ತು ಮಮತಾ ದಂಪತಿ ಪುತ್ರಿ ಜೀವಿತಾ ಎನ್ ರವರ 7ನೇ ವರ್ಷದ ಹುಟ್ಟುಹಬವನ್ನು ಡಿ.8ರಂದು ಆಚರಿಸಲಾಯಿತು.

Prishalಪಡಂಗಡಿ, ಪೊಯ್ಯೆಗುಡ್ಡೆ ಮನೆಯ ಪೀಟರ್ ಮೊನಿಸ್ ಮತ್ತು ಲವಿನಾ ಮೊನಿಸ್ ದಂಪತಿ ಪುತ್ರಿ ಪ್ರಿಶಲ್‌ಳ 5ನೇ ವರ್ಷದ ಹುಟ್ಟುಹಬ್ಬವನ್ನು ನ. 29ರಂದು ಆಚರಿಸಲಾಯಿತು.

ahammad mumithವೇಣೂರಿನ ಜಾಸ್ಮೀನ್ ಮತ್ತು ಶಂಶುದ್ದೀನ್ ಕಲ್ಕಾರ್ ದಂಪತಿ ಪುತ್ರ ಅಹಮ್ಮದ್ ಮುಮೀತ್‌ನ ೬ನೇ ವರ್ಷದ ಹುಟ್ಟುಹಬ್ಬವನ್ನು ಡಿ. 4ರಂದು ದುಬೈಯಲ್ಲಿ ಆಚರಿಸಲಾಯಿತು.

Jeevitha N Kಮಚ್ಚಿನ ನಿಡ್ಡಾಜೆ ಮನೆ ಕೃಷ್ಣಪ್ಪ ಮತ್ತು ಶ್ರೀಮತಿ ದಿವ್ಯ ದಂಪತಿ ಪುತ್ರಿ ಜೀವಿತಾಳ ಪ್ರಥಮ ವರ್ಷದ ಹುಟ್ಟುಹಬ್ಬವನ್ನು ಡಿ.3ರಂದು ಆಚರಿಸಲಾಯಿತು.

Mithun nithyaಓಡಿಲ್ನಾಳ ಗ್ರಾಮದ ಉಪ್ಪಡ್ಕ ಚೈತನ್ಯ ನಿವಾಸ ವಿಠಲ ಶೆಟ್ಟಿಯವರ ಪುತ್ರ ಮಿಥುನ್ ರವರ ವಿವಾಹವು ಪೆರಾಡಿ ಮೇರುಗುಡ್ಡೆ ಕರಿಯ ಶೆಟ್ಟಿಯವರ ಪುತ್ರಿ ನಿತ್ಯಾರೊಂದಿಗೆ  ಡಿ 3 ರಂದು ಬೆಳ್ತಂಗಡಿ ಶ್ರೀ ದರ್ಮಸ್ಥಳ ಮಂಜುನಾಥ ಸ್ವಾಮಿ ಕಲಾಭವನದಲ್ಲಿ ಜರಗಿತು.

Bavya rajeshಕಡಿರುದ್ಯಾವರ ಗ್ರಾಮದ ಕಾನರ್ಪ ಭರತ್ ನಿಲಯದ ವಿನಯ ಮತ್ತು ರುಕ್ಮಯ್ಯ ಗೌಡರ ಪುತ್ರಿ ಭವ್ಯರವರ ವಿವಾಹವು ಕಡಿರುದ್ಯಾವರ ಗ್ರಾಮದ ಮುಂಡಹಲಸು ಮನೆ ಸುಶೀಲ ಮತ್ತು ಸಂಜೀವ ಗೌಡರ ಪುತ್ರ ರಾಜೇಶರೊಂದಿಗೆ ಡಿ. 3 ರಂದು ಉಜಿರೆ ಶ್ರೀ ಗಣೇಶ ಕೃಪಾ ಕಲ್ಯಾಣ ಮಂಟಪದಲ್ಲಿ ಜರಗಿತು.

ranjith-shruthiಬಳಂಜ ಗ್ರಾಮದ ಸುಧಾಮ ಮನೆಯ ದೇಜಪ್ಪ ಪೂಜಾರಿಯವರ ಪುತ್ರ ಮೂಡಬಿದ್ರೆ ಎಂಐಟಿಇನಲ್ಲಿ ಅಸಿಸ್ಟೆಂಟ್ ಪ್ರೊಫೆಸರ್ ಆಗಿರುವ ರಂಜಿತ್ ಎಚ್.ಡಿ ಯವರ ವಿವಾಹ ನಿಶ್ಚಿತಾರ್ಥವು ಪುಂಜಾಲಕಟ್ಟೆ ಪಿಲಾತ ಬೆಟ್ಟು ಗ್ರಾಮದ ಶುತಿ ನಿವಾಸದ ಜಿ.ಪಂ ಸದಸ್ಯ ತುಂಗಪ್ಪ ಬಂಗೇರರ ಪುತ್ರಿ ಶುತಿ ಟಿ. ಬಂಗೇರ ರವರೊಂದಿಗೆ ನ.29 ರಂದು ವಧುವಿನ ಮನೆಯಲ್ಲಿ ಜರಗಿತು.

ranjini-dineshವೇಣೂರು ಬಜಿರೆ ಗ್ರಾಮದ ವಿಶ್ವನಾಥ ಪೂಜಾರಿ ಮತ್ತು ವಿಮಲ ದಂಪತಿಗಳ ಪುತ್ರಿ ರಂಜಿನಿಯವರ ವಿವಾಹವು ಸಿದ್ಧಕಟ್ಟೆ ನಂದಗೋಕುಲ ಅಲಕ್ಕೆ ದಿ| ಕೊರಗ ಪೂಜಾರಿಯವರ ಪುತ್ರ ದಿನೇಶ್‌ರೊಂದಿಗೆ ನ-29 ರಂದು ಕಟೀಲು ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದಲ್ಲಿ ಜರಗಿತು.

ganesh deekshaಶಿರ್ಲಾಲು ಗ್ರಾಮದ ಮುರಲ್ದೋಡಿ ಬಾಕ್ಯಾರ್ ದಿ| ಶಿವಪ್ಪ ಪೂಜಾರಿಯವರ ಪುತ್ರ ಪ್ರಜಾವಾಣಿ ಪತ್ರಿಕೆಯ ವರದಿಗಾರ ಗಣೇಶ್ ರವರ ವಿವಾಹವು ಆರಂಬೋಡಿ ಗ್ರಾಮದ ಸೂರಂಟೆ ಅಣ್ಣಿ ಪೂಜಾರಿಯವರ ಪುತ್ರಿ ದೀಕ್ಷಾರವರೊಂದಿಗೆ ಡಿ.1 ರಂದು ಬೆಳ್ತಂಗಡಿಯ ಶ್ರೀ ನಾರಾಯಣ ಗುರು ವಾಣಿಜ್ಯ ಸಂಕೀರ್ಣದ ಆಶಾ ಸಾಲಿಯನ್ ಕಲ್ಯಾಣ ಮಂಟಪದಲ್ಲಿ ಜರಗಿತು.

Varun sannidhiಧರ್ಮಸ್ಥಳ ಜುಮಾ ಉಗ್ರಾಣದ ಮುತ್ಸದ್ಧಿ, ಚಂದ್ರಗಿರಿ ನಗರ ಚಿನ್ಮಯದ ಶ್ರೀಮತಿ ಶಾಲಿನಿ ಮತ್ತು ಬಿ. ಭುಜಬಲಿ ದಂಪತಿಗಳ ಪುತ್ರ ವರಣ್‌ರವರ ವಿವಾಹವು ಸನ್ನಿಧಿಯೊಂದಿಗೆ ನ. 26ರಂದು ಆದಿಚುಂಚನಗಿರಿ ಚುಂಚನಾದ್ರಿ ಕಲ್ಯಾಣ ಮಂಟಪದಲ್ಲಿ ಹಾಗೂ ಆರತಕ್ಷತೆ ಸಮಾರಂಭವು ಡಿ. 1 ರಂದು ಶ್ರೀ ಕ್ಷೇತ್ರ ಧರ್ಮಸ್ಥಳದ ಮಹೋತ್ಸವ ಸಭಾಂಗಣದಲ್ಲಿ ನಡೆಯಿತು. ಡಾ| ಹೆಗಡೆಯವರ ಕುಟುಂಬ ವರ್ಗ, ಜಿಲ್ಲಾ ಉಸ್ತುವಾರಿ ಸಚಿವ ರಮಾನಾಥ ರೈ, ಶಾಸಕ ಕೆ. ವಸಂತ ಬಂಗೇರ, ಮಾಜಿ ಶಾಸಕ ಪ್ರಭಾಕರ ಬಂಗೇರ, ಜಿಲ್ಲಾ ಯುವ ಮೋರ್ಚಾದ ಅಧ್ಯಕ್ಷ ಹರೀಶ್ ಪೂಂಜ ಗಣ್ಯ ಅತಿಥಿಗಳು, ಜನಪ್ರತಿನಿಧಿಗಳು ಹಾಗೂ ಅಪ್ತೇಷ್ಟರು ಆಗಮಿಸಿ ಶುಭಕೋರಿದರು.

Sushan M. - Pooja J.K.ಗುರುವಾಯನಕೆರೆ ಪೂಜಾಫಲ ನಿವಾಸದ ಜಗನ್ನಾಥ.ಕೆ ರವರ ಪುತ್ರಿ ಡಾ| ಪೂಜಾರವರ ವಿವಾಹವು ಬಂಟ್ವಾಳ ತಾಲೂಕು ನೆಲ್ಲ ಮುಡ್ನೂರು ಗ್ರಾಮದ ಮಾದೇಲು ಸೋಮಪ್ಪ ಪೂಜಾರಿಯವರ ಪುತ್ರ ಸುಶಾನ್ ಎಂ.ರೊಂದಿಗೆ ಡಿ. 3 ರಂದು ಬಿ.ಸಿ ರೋಡ್ ಗಾಣದಪಡ್ಡು ಬ್ರಹ್ಮಶ್ರೀ ನಾರಾಯಣ ಗುರು ಸಭಾಭವನದಲ್ಲಿ ಜರಗಿತು.

add1

sinchana Mಬೆಳ್ತಂಗಡಿ : ಡಿ.2 ಮತ್ತು 3ರಂದು ಮಂಗಳೂರಿನಲ್ಲಿ ನಡೆದ ರಾಷ್ಟ್ರೀಯ ಮುಕ್ತ ಕರಾಟೆ ಸ್ಪರ್ಧೆಯಲ್ಲಿ, ಸೈಂಟ್ ಮೇರೀಸ್ ಸ್ಕೂಲ್ ಲಾಯಿಲ ಇಲ್ಲಿನ 9ನೇ ತರಗತಿ ವಿದ್ಯಾರ್ಥಿನಿ ಸಿಂಚನಾ ಯಂ.ಡಿ. ಕಟಾ ಮತ್ತು ಕುಮಿತೆ(ಬ್ಲಾಕ್ ಬೆಲ್ಟ್) ಯಲ್ಲಿ ಪ್ರಥಮ ಸ್ಥಾನ ಪಡೆದಿದ್ದಾರೆ.
ಇವರು ಬೆಳ್ತಂಗಡಿ ಪೋಲೀಸ್ ಠಾಣೆಯ ಹೆಡ್‌ಕಾನ್ಸ್ಟೇಬಲ್ ದುರ್ಗಾಪ್ರಸಾದ್ ಮತ್ತು ರೇವತಿ ದಂಪತಿಯ ಪುತ್ರಿ. ಕರಾಟೆ ಶಿಕ್ಷಕ ಅಶೋಕ್ ಆಚಾರ್ಯ ಅವರಿಂದ ತರಬೇತಿ ಪಡೆಯುತ್ತಿದ್ದಾರೆ.

Vincent Dsouza1ಬೆಳ್ತಂಗಡಿ : ಭಾರತೀಯ ಜೀವವಿಮಾ ನಿಗಮದಲ್ಲಿ ಕಳೆದ 17 ವರ್ಷಗಳಿಂದ ಪ್ರತಿನಿಧಿಯಾಗಿ ವಿವಿಧ ಹುದ್ದೆಗಳೊಂದಿಗೆ ಕ್ರಿಯಾಶೀಲವಾಗಿ ಕಾರ್ಯನಿರ್ವಹಿಸುತ್ತಿರುವ ಲ| ವಿನ್ಸೆಂಟ್ ಟಿ ಡಿಸೋಜಾ ಅವರು ಈ ಬಾರಿ ಕೂಡ ಸತತ ಐದನೇ ಬಾರಿಗೆ ಬಂಟ್ವಾಳ ಹಾಗೂ ಬೆಳ್ತಂಗಡಿ ಉಪಗೃಹ ಶಾಖೆಯಲ್ಲಿ ಪ್ರಥಮ ಎಮ್‌ಡಿಆರ್‌ಟಿ ಆಗಿ ಹೊರಹೊಮ್ಮುವ ಮೂಲಕ ಜೂನ್ ತಿಂಗಳಲ್ಲಿ ಲಾಸ್ ಎಂಜಲೀಸ್ ನಡೆಯುವ ಸಮಾವೇಶಕ್ಕೆ ಅರ್ಹತೆ ಪಡೆದಿದ್ದಾರೆ ಎಂದು ಬೆಳ್ತಂಗಡಿ ಉಪಗೃಹ ಶಾಖೆಯ ಶಾಖಾಧಿಕಾರಿ ಯೋಗೇಂದ್ರ ಆರ್.ಡಿ ತಿಳಿಸಿದ್ದಾರೆ.
ಎಲ್‌ಐಸಿ ಚೇರ್‌ಮೆನ್ ಕ್ಲಬ್ ಸದಸ್ಯರಾಗಿ, ಮುಖ್ಯ ವಿಮಾ ಸಲಹೆಗಾರರಾಗಿ, ಬೆಳ್ತಂಗಡಿ ಬಸ್ಸು ನಿಲ್ದಾಣದ ಬಳಿ ವಿಮಾ ಇನ್ಸೂರೆನ್ಸ್ ಕನ್ಸಲ್ಟೆಂಟ್ ಎನ್ನುವ ನೂತನ ಸಂಪೂರ್ಣ ಕಂಪ್ಯೂಟರೀಕೃತ ಸಂಸ್ಥೆ ಸ್ಥಾಪಿಸಿ ಗ್ರಾಹಕರಿಗೆ ಅತ್ಯುತ್ತಮ ಸೇವೆ ನೀಡುತ್ತಿದ್ದಾರೆ. ಲಾಯಿಲ ಗ್ರಾಮವನ್ನು ಸತತ ಮೂರು ಬಾರಿಗೆ ಹ್ಯಾಟ್ರಿಕ್ ಆಗಿ ಸಂಪೂರ್ಣ ವಿಮಾ ಗ್ರಾಮ ಎಂಬುದಾಗಿ ಮಾಡಿ ಇದೀಗ ನಾಲ್ಕನೇ ಬಾರಿಗೂ ಘೋಷಣೆಯ ಹೊಸ್ತಿಲಿಗೆ ತಂದು ನಿಲ್ಲಿಸಿದ್ದಾರೆ. ಈ ಬಾಬ್ತು ಬಂದಿರುವ ತಲಾ 1 ಲಕ್ಷದಂತೆ ಅನುದಾನವನ್ನು ಪಂಚಾಯತ್ ಮೂಲಕ ಗ್ರಾಮದ ಅಭಿವೃದ್ಧಿಗೆ ಒದಗುವಂತೆ ಮಾಡಿದ್ದಾರೆ.
ಜೊತೆಗೆ ಯುನೈಟೆಡ್ ಇಂಡಿಯಾ ಇನ್ಸೂರೆನ್ಸ್ ಕಂಪೆನಿ ಸಹಿತ ಯಾವುದೇ ಕಂಪೆನಿಯ ವಾಹನ ವಿಮೆ, ಸ್ಟಾರ್ ಇನ್ಸೂರೆನ್ಸ್ ಮೂಲಕ ಆರೋಗ್ಯ ವಿಮೆ ಸೇವೆಕೂಡ ದೊರಕಿಸಿಕೊಟ್ಟು ಬಂಟ್ವಾಳ ಶಾಖೆಯಲ್ಲಿ ಪ್ರಥಮ ಸ್ಥಾನಿಯಾಗಿದ್ದಾರೆ. ಅತ್ಯುತ್ತಮ ಸಂಘಟಕರೂ ಆಗಿರುವ ಅವರು ಅಂತಾರಾಷ್ಟ್ರೀಯ ಲಯನ್ಸ್ ಕ್ಲಬ್ ಬೆಳ್ತಂಗಡಿ ಇದರ ಕೋಶಾಧಿಕಾರಿಯಾಗಿ, ಸಹಿತ ಹಲವು ಸಂಘ ಸಂಸ್ಥೆಗಳಲ್ಲಿ ತನ್ನನ್ನು ಸೇವಾ ಕ್ಷೇತ್ರದಲ್ಲಿ ತೊಡಗಿಸಿಕೊಂಡಿದ್ದಾರೆ.

gajanana

gajanana1

Gajanana2ಬೆಳ್ತಂಗಡಿ : ಇಲ್ಲಿನ ಮೂರು ಮಾರ್ಗದ ಬಳಿಯ ಲಕ್ಷ್ಮಿ ಕಾಂಪ್ಲೆಕ್ಸ್‌ನಲ್ಲಿ ಗಜಾನನ ಗ್ಲಾಸ್ ಮತ್ತು ಫ್ಲೈವುಡ್ಸ್ ಉದ್ಘಾಟನೆಯನ್ನು ನ. 7ರಂದು ಕಾರ್ಕಳ ತಾಜ್ ಗ್ಲಾಸ್ ಆಂಡ್ ಫ್ಲೈವುಡ್ಸ್ ಮಾಲಕ ಎಂ. ಗಣಪತಿ ಪೈ ನೆರವೇರಿಸಿದರು.
ಈ ಸಂದರ್ಭದಲ್ಲಿ ನ.ಪಂ ಅಧ್ಯಕ್ಷ ನಾರಾಯಣ ಭಟ್ ಮುಗುಳಿ, ಕೆನರ ಬ್ಯಾಂಕ್‌ನ ಎ.ಜಿ.ಎಂ ವಸಂತ ಶೆಟ್ಟಿ, ಲಾಯಿಲ ವೆಂಕಟರಮಣ ದೇವಸ್ಥಾನದ ಆಡಳಿತ ಮೊಕ್ತೇಸರ ಎಂ. ವಿವೇಕಾನಂದ ಪ್ರಭು, ಬೆಂಗಳೂರಿನ ವುಡ್ ಪ್ಲೈ ಡಿಸ್ಟ್ರಿಬ್ಯೂಟರ್‍ಸ್‌ನ ಸೂರ್ಯ ನಾರಾಯಣ, ಕಲ್ಲೇರಿ ಇಂದಿರಾ ಆಟೊ ಪ್ಯೂಯೆಲ್ಸ್‌ನ ಬಿ. ಸುರೇಶ್ ಭಟ್ ಲಾಲ, ಕಟ್ಟಡದ ಮಾಲಕ ಸುಂದರ ಆಚಾರ್ಯ ಮತ್ತಿತರರು ಉಪಸ್ಥಿತರಿದ್ದರು. ಬಂದಂತಹ ಅತಿಥಿ ಗಣ್ಯರನ್ನು ಮಾಲಕರಾದ ಸುಧೀರ್ ಭಟ್, ಶಿವಶಂಕರ್ ನಾಯಕ್ ಸ್ವಾಗತಿಸಿ, ವಂದಿಸಿದರು.

maneತಮ್ಮ ವ್ಯಾಪ್ತಿಯಲ್ಲೇ ಇರುವ ಅರ್ಹರಿಗೆ ಸಹಾಯ ಮಾಡೋಣ : ಬಿಷಪ್ ಲಾರೆನ್ಸ್ ಮುಕ್ಕುಯಿ
ಸೇವಾ ಚಟುವಟಿಕೆ ಮಾಡಲು ಊರಿಡೀ ಅಲೆಯಬೇಕಾಗಿಲ್ಲ, ತಮ್ಮ ವ್ಯಾಪ್ತಿಯಲ್ಲಿ, ಅಕ್ಕ ಪಕ್ಕದಲ್ಲಿ ಯಾರು ಸಹಾಯ ಪಡೆಯಲು ಅರ್ಹರಿದ್ದಾರೆ ಅಂತವರನ್ನು ನಾವೇ ಮನಗಂಡು ನೆರವು ನೀಡುವ ಮೂಲಕ ಸಮಾಜ ಸೇವೆ ಮಾಡಬೇಕು. ಶೈಲಾ ಅವರಿಗೆ ಮನೆ ನಿರ್ಮಿಸಿಕೊಡುವ ಮೂಲಕ ಅಂತಹಾ ಮಹತ್ಕಾರ್ಯಕ್ಕೆ ಈ ಕಾರ್ಯಕ್ರಮ ಮಾದರಿಯಾಗಿದೆ ಎಂದು ಬೆಳ್ತಂಗಡಿ ಧರ್ಮಪ್ರಾಂತ್ಯದ ಧರ್ಮಾಧ್ಯಕ್ಷ ಬಿಷಪ್ ಲಾರೆನ್ಸ್ ಮುಕ್ಕುಯಿ ಶುಭ ಕೋರಿದರು. ಇದಕ್ಕೆ ನೆರವು ನೀಡಿದ ಎಲ್ಲರೂ ಅಭಿನಂದನಾರ್ಹರು ಎಂದೂ ತಿಳಿಸಿದರು.

ತೋಟತ್ತಾಡಿ: ಇತ್ತೀಚೆಗೆ ಸೋಮಂತಡ್ಕ ಎಂಬಲ್ಲಿ ರಸ್ತೆ ಅಪಘಾತದಲ್ಲಿ ಮರಣವನ್ನಪ್ಪಿದ ತೋಟತ್ತಾಡಿ ಗ್ರಾಮದ ಕುತ್ರಿಜಾಲು ನಿವಾಸಿ ಟೋಮಿ ಮೂಲನ್ ಅವರ ಮನೆಯವರ ಸಂಕಷ್ಟವನ್ನು ಅರಿತು ತೋಟತ್ತಾಡಿ ಸಂತ ಅಂತೋನಿ ಚರ್ಚ್‌ನ ಸದಸ್ಯರ ಸಹಕಾರದಿಂದ ನೂತನವಾಗಿ ಮನೆ ನಿರ್ಮಿಸಿಕೊಟ್ಟು ಆದರ್ಶ ಮೆರೆಯಲಾಗಿದೆ.
ಈ ನೂತನ ಮನೆಯ ಕೀಲಿಕೈ ಹಸ್ತಾಂತರ ಕಾರ್ಯಕ್ರಮ ನ. 29 ರಂದು ಬೆಳ್ತಂಗಡಿ ಧರ್ಮಪ್ರಾಂತ್ಯದ ಧರ್ಮಾಧ್ಯಕ್ಷ ಬಿಷಪ್ ಲಾರೆನ್ಸ್ ಮುಕ್ಕುಯಿ, ದಿ. ಟೋಮಿ ಅವರ ಧರ್ಮಪತ್ನಿ ಶೈಲಾ ಅವರಿಗೆ ಹಸ್ತಾಂತರಿಸಿದರು.
ಈ ಸಂದರ್ಭ ತೋಟತ್ತಾಡಿ ಸಂತ ಅಂತೋನಿ ಚರ್ಚ್‌ನ ಧರ್ಮಗುರುಗಳಾದ ರೆ. ಫಾ. ತೋಮಸ್ ಪಾರೆಕ್ಕಾಟಿಲ್, ಸಹದರ್ಮ ಗುರುಗಳಾದ ರೆ. ಫಾ. ಜೋಸೆಫ್ ಮುಕ್ಕಾಟ್, ಟ್ರಸ್ಟಿಗಳಾದ ಸಂತೋಷ್ ಕೆ.ಜೆ, ಆಂಟನಿ ಐಕರ, ಆಂಟನಿ ವಾಳೂಕಾರನ್, ಸನ್ನಿ ನಿರ್ಮಲ, ಗ್ರಾ.ಪಂ. ಸದಸ್ಯ ಶಾಜಿ ತೋಪಿಲ್, ಧರ್ಮ ಭಗಿನಿಯರು ಮತ್ತು ಊರವರು ಉಪಸ್ಥಿತರಿದ್ದರು. ರೆ. ಫಾ. ತೋಮಸ್ ಪಾರೇಕ್ಕಾಟಿಲ್ ಅವರು ಧನ್ಯವಾದವಿತ್ತರು.

mahila co operative bankge prasatiಬೆಳ್ತಂಗಡಿ : ದಕ್ಷಿಣ ಕನ್ನಡ ಜಿಲ್ಲಾ ಮಹಿಳಾ ಕೋ-ಆಪರೇಟಿವ್ ಬ್ಯಾಂಕ್‌ಗೆ 2016-17 ನೇ ಸಾಲಿನ ರಾಜ್ಯ ಮಟ್ಟದ ಅತ್ಯುತ್ತಮ ಮಹಿಳಾ ಸಹಕಾರಿ ಬ್ಯಾಂಕ್ ಪ್ರಶಸ್ತಿ ದೊರೆತಿದೆ.
ಮಂಗಳೂರಿನಲ್ಲಿ ನಡೆದ ರಾಜ್ಯ ಮಟ್ಟದ ಸಹಕಾರಿ ಸಪ್ತಾಹದ ಸಮಾರಂಭದಲ್ಲಿ ರಾಜ್ಯದ ಸಹಕಾರಿ ಸಚಿವ ರಮೇಶ್ ಜಾರಕಿಹೊಳಿ ಹಾಗು ಅರಣ್ಯ ಸಚಿವ ಬಿ ರಮಾನಾಥ ರೈ ಇವರ ಉಪಸ್ಥಿಯಲ್ಲಿ ಮೀನುಗಾರಿಕಾ ಹಾಗು ಯುವಜನ ಸೇವೆ ಸಚಿವ ಪ್ರಮೋದ್ ಮದ್ವರಾಜ್ ಇವರು ಪ್ರಶಸ್ತಿ ವಿತರಿಸಿದರು. ಬ್ಯಾಂಕಿನ ಅಧ್ಯಕ್ಷರಾದ ಶ್ರೀಮತಿ ಸುಜೀತಾ ವಿ ಬಂಗೇರ ಮತ್ತು ಪ್ರಧಾನ ವ್ಯವಸ್ಥಾಪಕಾರದ ಶೀಮತಿ ಪ್ರತಿಭಾ ಶೆಟ್ಟಿ ಪ್ರಶಸ್ತಿಯನ್ನು ಸ್ವೀಕರಿಸಿದರು. ಬ್ಯಾಂಕಿನ ಸ್ಥಾಪಕ ಅಧ್ಯಕ್ಷೆ ಶ್ರೀಮತಿ ಸರಳಾ ಬಿ ಕಾಂಚನ್ ಉಪಸ್ಥಿರಿದ್ದರು. ವೇದಿಕೆಯಲ್ಲಿ ಎಸ್.ಸಿ.ಡಿ.ಸಿ.ಸಿ ಬ್ಯಾಂಕ್ ಅಧ್ಯಕ್ಷ ರಾಜೇಂದ್ರ ಕುಮಾರ್, ಸಹಕಾರಿ ಸಂಘಗಳ ಉಪ ನಿಬಂಧಕ ಬಿಕೆ ಸಲೀಂ, ದ,ಕ ಸಹಕಾರಿ ಯೂನಿಯನ್ ಅಧ್ಯಕ್ಷ ಹರೀಶ್ ಅಚಾರ್ ಹಾಗೂ ಇತರ ಗಣ್ಯರು ಉಪಸ್ಥಿತರಿದ್ದರು.

Angel beaytiparlourಬೆಳ್ತಂಗಡಿ : ಬೆಳ್ತಂಗಡಿ ಬಸ್‌ನಿಲ್ದಾಣದ ಮುಂಭಾಗದ ಸಂತೋಮ್ ಟವರ್‍ಸ್‌ನಲ್ಲಿ ಹವಾನಿಯಂತ್ರಿತ ಸೇರಿದಂತೆ ಸುಸಜ್ಜಿತ ಸೌಲಭ್ಯವನ್ನು ಒಳಗೊಂಡ ಏಂಜಲ್ಸ್ ಬ್ಯೂಟಿ ಪಾರ್ಲರ್ ಡಿ. 4ರಂದು ಸ್ಥಳಾಂತರಗೊಂಡು ಶುಭಾರಂಭಗೊಂಡಿತು.
ಸ್ಥಳಾಂತರಗೊಂಡ ನೂತನ ಸಂಸ್ಥೆಯನ್ನು ಒಂದು ಮೊಟ್ಟೆ ಕಥೆ ಚಲನಚಿತ್ರದ ಖ್ಯಾತ ನಾಯಕಿ ಶೈಲಶ್ರೀ ಉದ್ಘಾಟಿಸಿ, ಮನುಷ್ಯನಿಗೆ ಸೌಂದರ್ಯ ಮುಖ್ಯ ಪ್ರತಿಯೊಬ್ಬರೂ ಇದನ್ನು ಬಯಸುತ್ತಾರೆ. ಬಾಹ್ಯ ಸೌಂದರ್ಯದಂತೆ ನಮ್ಮ ಆಂತರಿಕ ಸೌಂದರ್ಯವೂ ಉತ್ತಮವಾಗಿರಬೇಕು. ನಮ್ಮ ಕೊರಳಲ್ಲಿ ಬಂಗಾರ ಇಲ್ಲದಿದ್ದರೂ, ಮುಖದಲ್ಲಿನ ನಗು ಇದು ಬಂಗಾರ ಇದ್ದಂತೆ. ಗ್ರಾಹಕರ ಜೊತೆ ನಗುಮುಖದ ಸೇವೆ ಉದ್ಯಮದ ಯಶಸ್ವಿಗೆ ಕಾರಣವಾಗುತ್ತದೆ ಎಂದರು.
ಅಧ್ಯಕ್ಷತೆಯನ್ನು ವಹಿಸಿದ್ದ ಬೆಳ್ತಂಗಡಿ ನ.ಪಂ ಅಧ್ಯಕ್ಷ ಮುಗುಳಿ ನಾರಾಯಣ ರಾವ್ ಮಾತನಾಡಿ, ಪಲ್ಲವಿರಾಜು, ಶಾಂತಾ ಬಂಗೇರ, ರೇಖಾ ವಿನ್ಸೆಂಟ್ ಇವರ ನಡುವೆ ಗುರು ಶಿಷ್ಯರ ಸಂಬಂಧವಿದೆ. ಗುರುಗಳನ್ನು ಗೌರವಿಸುವ ಮೂಲಕ ರೇಖಾ ಅವರು ತಮ್ಮ ಉದಾರತೆಯನ್ನು ಮೆರೆದಿದ್ದಾರೆ. ಬ್ಯೂಟಿ ಪಾರ್ಲರ್ ಎಂಬುದು ನಮ್ಮ ಸೌಂದರ್ಯವನ್ನು ಮಾತ್ರ ಉತ್ತಮ ಪಡಿಸುವ ಕಾರ್ಯ ಮಾಡುವುದಲ್ಲ, ಜೊತೆಗೆ ನಮ್ಮ ಆರೋಗ್ಯದ ಹಿತದೃಷ್ಟಿಯಲ್ಲೂ ಕೆಲಸ ಮಾಡುತ್ತದೆ. ಇಲ್ಲಿ ದೊರೆಯುವ ಮಸಾಜ್‌ಗಳಿಂದ ಅನೇಕ ಕಾಯಿಲೆಗಳು, ಶರೀರದ ನೋವುಗಳು ಗುಣವಾಗುತ್ತದೆ ಎಂದು ಹೇಳಿ ನೂತನ ಸಂಸ್ಥೆಗೆ ಶುಭ ಹಾರೈಸಿದರು.
ಭಾರತೀಯ ಮಾನವ ಹಕ್ಕುಗಳ ಸಮಿತಿ ರಾಷ್ಟ್ರಾಧ್ಯಕ್ಷರಾದ ರಾಬರ್ಟ್ ಡಿ’ಸೋಜಾ ಮಾತನಾಡಿ ಇಂದು ಬ್ಯೂಟಿಷಿಯನ್ ತರಬೇತಿ ಪಡೆದವರಿಗೆ ಹೆಚ್ಚಿನ ಬೇಡಿಕೆಯಿದ್ದು, ತರಬೇತಿ ಪಡೆದವರು ಹೆಚ್ಚು ಸಂಪಾದನೆಗೆ ವಿದೇಶಗಳಿಗೆ ಹೋಗುತ್ತಾರೆ. ಆದರೆ ರೇಖಾ ವಿನ್ಸೆಂಟ್ ಲೋಬೊ ಅವರು ಊರಿನಲ್ಲೇ ಜನರ ಅನುಕೂಲಕ್ಕಾಗಿ ಸಂಸ್ಥೆಯನ್ನು ತೆರೆದಿರುವುದು ಅವರ ಧೈರ್ಯವನ್ನು ಮೆಚ್ಚಬೇಕಾಗಿದೆ ಎಂದರು. ಮಂಗಳೂರು ಬ್ಯೂಟಿಷಿಯನ್ ಎಸೋಸಿ ಯೇಶನ್ ಜಿಲ್ಲಾಧ್ಯಕ್ಷೆ ಬಬಿತಾ ಯು. ಶೆಟ್ಟಿ ಅವರು ಮಾತನಾಡಿ ಸೌಂದರ್ಯ ಎನ್ನುವುದು ದೇವರು ಕೊಟ್ಟ ವರ. ಬ್ಯೂಟಿ ಪಾರ್ಲರ್‌ನಲ್ಲಿ ಸೌಂದರ್ಯವನ್ನು ಬದಲಾಯಿಸಲು ಆಗುವುದಿಲ್ಲ, ಅವರ ದೇಹಕ್ಕೆ ಅನುಗುಣವಾಗಿ ಇರುವ ಸೌಂದರ್ಯವನ್ನು ಹೆಚ್ಚಿಸಲು ಸಾಧ್ಯವಿದೆ. ಸಂಸ್ಥೆಗಳಲ್ಲಿ ಗ್ರಾಹಕರ ನಡುವೆ ಪ್ರೀತಿಯಿಂದ ವ್ಯವಹರಿಸಿದಾಗ ಉನ್ನತಿ ಸಾಧ್ಯವಿದೆ ಎಂದರು.
ಬ್ಯೂಟಿಪಾರ್ಲರ್ ಎಸೋಸಿಯೇಶನ್ ತಾಲೂಕು ಅಧ್ಯಕ್ಷೆ ಪಲ್ಲವಿರಾಜು ಅವರು ತಾನೂ ಬ್ಯೂಟಿಷಿಯನ್ ಬಗ್ಗೆ ಹಲವಾರು ತರಬೇತಿಗಳನ್ನು ನೀಡಿದ್ದೇನೆ. ನೂರಾರು ಮಂದಿ ತರಬೇತಿ ಪಡೆದ ವರಲ್ಲಿ ಅನೇಕ ಮಂದಿ ಸ್ವಂತ ಉದ್ಯೋಗವನ್ನು ಮಾಡಿದ್ದಾರೆ. ಇಂತಹ ಸಂಸ್ಥೆಗಳಿಗೆ ಜನರ ಪ್ರೋತ್ಸಾಹ ಅಗತ್ಯ ಎಂದರು. ತುಳು ಚಲನ ಚಿತ್ರ ನಟಿ ನವ್ಯ ಪೂಜಾರಿ ನೂತನ ಸಂಸ್ಥೆಗೆ ಶುಭ ಕೋರಿದರು.ಬೆಳ್ತಂಗಡಿ ಹೋಲಿ ರೆಡಿಮರ್ ಚರ್ಚ್‌ನ ಸಹಾಯಕ ಧರ್ಮಗುರು ಫಾ| ಅನಿಲ್ ಪ್ರಕಾಶ್ ಡಿ’ಸೋಜಾ ಆಶೀರ್ವಚನ ವಿಧಿ ನೆರವೇರಿ ಸಿದರು. ಕಾರ್ಯಕ್ರಮದಲ್ಲಿ ಡಿಕೆಆರ್‌ಡಿಎಸ್‌ನ ನಿರ್ದೇಶಕ ಫಾ| ಜೋಸ್ ಆಯಂಗುಡಿ, ಫಾ| ಸಲೀಂ ಜೋಸೆಫ್, ನ.ಪಂ. ಸದಸ್ಯ ಸಂತೋಷ್ ಕುಮಾರ್ ಜೈನ್ ಮೊದಲಾದವರು ಉಪಸ್ಥಿತರಿ ದ್ದರು. ಸಂಸ್ಥೆಯ ಮಾಲಕಿ ಶ್ರೀಮತಿ ರೇಖಾ ವಿನ್ಸೆಂಟ್ ಲೋಬೊ ಸ್ವಾಗತಿಸಿದರು. ವಿಜಯ ಕುಮಾರ್ ನಾವರ ಕಾರ್ಯಕ್ರಮ ನಿರೂಪಿಸಿ, ಸಿರಿ ಗ್ರಾಮೋದ್ಯೋಗ ಸಂಸ್ಥೆಯ ಮಾರ್ಕೇಟಿಂಗ್ ಮೆನೇಜರ್ ವಿನ್ಸೆಂಟ್ ಲೋಬೋ ಧನ್ಯವಾದವಿತ್ತರು.

mohan narayana bilkodugeಗೌರವ ಸ್ವೀಕರಿಸಿ ಮಾತನಾಡಿದ ಡಾ.ಕೆ.ಎಸ್.ಮೋಹನನಾರಾಯಣ ಸಂಸ್ಥೆಯೊಂದಿಗಿನ ವೃತ್ತಿಪರ ಬಾಂಧವ್ಯದ ಕುರಿತು ಪ್ರಸ್ತಾಪಿಸಿದರು. ಹಿರಿಯರ ಮಾರ್ಗದರ್ಶನದ ನೆರವಿನೊಂದಿಗೆ ಸಂಸ್ಥೆಯ ಬೆಳವಣಿಗೆಯ ಹೆಜ್ಜೆಗಳೊಂದಿಗೆ ಕ್ರಮಿಸಿದ್ದನ್ನು ಉಲ್ಲೇಖಿಸಿದರು. ಆರಂಭದಿಂದಲೂ ನಿವೃತ್ತಿಯಾಗು ವವರೆಗೂ ಲಭ್ಯವಾದ ಸಹೋದ್ಯೋಗಿ ಗಳ ಸಹಕಾರ-ಬೆಂಬಲವನ್ನು ಸ್ಮರಿಸಿದರು.
ಸಂಸ್ಥೆಗಾಗಿ ಕಾರ್ಯನಿರ್ವಹಿಸಿದ ಆತ್ಮತೃಪ್ತಿ ನನ್ನೊಂದಿಗಿದೆ. ಪ್ರಾಮಾಣಿಕತೆ ಯಿಂದ ದುಡಿದ ತೃಪ್ತಿಯಿದೆ. ಪ್ರಾಂಶುಪಾಲ ಹುದ್ದೆಯ ನಿರ್ವಹಣೆಯ ವೇಳೆ ಪ್ರತಿಯೊಬ್ಬರಿಗೂ ಸ್ವಾತಂತ್ರ್ಯ ನೀಡಿ ವೃತ್ತಿಪರ ಮತ್ತು ಸಾಂಸ್ಥಿಕ ಸಾಧನೆಗೆ ಮಹತ್ವ ನೀಡಿದೆ. ಅದಕ್ಕನುಗುಣವಾಗಿ ಎಲ್ಲರೂ ಸ್ಪಂದಿಸಿದ್ದು ಕಾರ್ಯನಿರ್ವಹಣೆಯ ಉತ್ಸಾಹವನ್ನು ಹೆಚ್ಚಿಸಿತು ಎಂದು ಹೇಳಿದರು.

ಉಜಿರೆ : ಎಸ್.ಡಿ.ಎಂ ಕಾಲೇಜಿನ ಬೆಳವಣಿಗೆಗೆ ಮೌಲಿಕ ಸೇವೆ ಸಲ್ಲಿಸಿ ನಿವೃತ್ತರಾದ ಪ್ರಾಂಶುಪಾಲ ಡಾ.ಕೆ.ಎಸ್. ಮೋಹನನಾರಾಯಣ ಅವರಿಗೆ ಇತ್ತೀಚೆಗೆ ಹೃತ್ಪೂರ್ವಕ ಬೀಳ್ಕೊಡುಗೆ ನೀಡಲಾಯಿತು.
ಡಾ.ಕೆ.ಎಸ್.ಮೋಹನನಾರಾಯಣ ಅವರ ಅವಧಿಯಲ್ಲಿ ಸಂಸ್ಥೆಗೆ ಕೇಂದ್ರದ ಮಾನವ ಸಂಪನ್ಮೂಲ ಸಚಿವಾಲಯದ ಎನ್‌ಆರ್‌ಐಎಫ್ ಮನ್ನಣೆ ದೊರಕಿರುವುದು ಸಂತಸದ ಸಂಗತಿ. ನಿರಂತರ ಕಾರ್ಯಬದ್ಧತೆಯೊಂದಿಗಿನ ಪ್ರಜ್ಞೆಯು ಸಂಸ್ಥೆಯ ಸರ್ವತೋಮುಖ ಬೆಳವಣಿಗೆಗೆ ಪೂರಕವಾಗುತ್ತದೆ. ಅಲ್ಲದೇ ಶೈಕ್ಷಣಿಕ ವಲಯದಲ್ಲಿ ವೃತ್ತಿಪರ ಘನತೆಯನ್ನು ಕಾಯ್ದುಕೊಳ್ಳುವುದಕ್ಕೂ ನೆರವಾಗುತ್ತದೆ. ಅದಕ್ಕೆ ಎನ್‌ಆರ್‌ಐಎಫ್ ಮನ್ನಣೆಯೇ ಸಾಕ್ಷಿ ಎಂದು ಸಂಸ್ಥೆಯ ಕಾರ್ಯದರ್ಶಿ ಡಾ.ಬಿ.ಯಶೋವರ್ಮ ಅವರು ಅಭಿಪ್ರಾಯಪಟ್ಟರು.
ಎಸ್‌ಡಿಎಂ ಪದವಿಪೂರ್ವ ಕಾಲೇಜಿನ ಪ್ರಾಂಶುಪಾಲರಾದ ಪ್ರೊ.ದಿನೇಶ್ ಚೌಟ ಅವರು ಡಾ.ಕೆ.ಎಸ್.ಮೋಹನನಾರಾಯಣ ಅವರ ವೃತ್ತಿಪರ ಬದುಕು ಮತ್ತು ವ್ಯಕ್ತಿತ್ವದ ವಿಶೇಷತೆಗಳನ್ನು ಪರಿಚಯಿಸಿದರು. ಪ್ರಾಧ್ಯಾಪಕ ಪ್ರೊ.ಎಸ್.ಎನ್. ಕಾಕತ್ಕರ್ ಅವರು ಮಾತನಾಡಿ ಡಾ.ಕೆ.ಎಸ್. ಮೋಹನನಾರಾಯಣ ಅವರದ್ದು ಸಾರ್ಥಕ ಬದುಕು ಎಂದರು. ಮೃದು ಮನಸಿನೊಂದಿಗಿನ ವ್ಯಕ್ತಿತ್ವ ಅವರದ್ದು ಎಂದು ಗುರುತಿಸಿದರು.
ನಿವೃತ್ತರಾದ ಪ್ರಾಂಶುಪಾಲ ಡಾ.ಕೆ.ಎಸ್. ಮೋಹನನಾರಾಯಣ ಅವರಿಗೆ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಸಂಸ್ಥೆಯ ಉಪಾಧ್ಯಕ್ಷರಾದ ಪ್ರೊ.ಕೆ.ಎಸ್.ಪ್ರಭಾಕರ್ ಗೌರವ ಸಮರ್ಪಿಸಿ ಮಾತನಾಡಿದರು.
ಮೋಹನನಾರಾಯಣ ಅವರು ಆರಂಭದಿಂದಲೂ ನಿವೃತ್ತಿಯಾಗು ವವರೆಗೆ ಕಾರ್ಯನಿರ್ವಹಿಸಿದ ವಿವರಗಳನ್ನು ನೆನಪಿಸಿಕೊಂಡರು. ನಿವೃತ್ತಿ ಜೀವನದ ಯಶಸ್ಸು ಹಾರೈಸಿದರು.
ಇದೇ ಸಂದರ್ಭದಲ್ಲಿ ಪ್ರೊ.ಟಿ.ಎನ್.ಕೇಶವ್ ಅವರನ್ನು ಎಸ್.ಡಿ.ಎಂ. ಕಾಲೇಜಿನ ಪ್ರಾಂಶುಪಾಲ ರನ್ನಾಗಿ ನಿಯೋಜಿಸಿದ್ದನ್ನು ಘೋಷಿಸ ಲಾಯಿತು. ಡಾ.ಕೆ.ಎಸ್. ಮೋಹನ ನಾರಾಯಣ ಅವರ ಪತ್ನಿ ಪೂರ್ಣಿಮಾ ಮೋಹನನಾರಾಯಣ ಉಪಸ್ಥಿತರಿದ್ದರು.

ನಮ್ಮ ಬಗ್ಗೆ

ಮೊದಲಿಗೆ ಕೇವಲ ಒಂದು ಹಾಳೆಯಲ್ಲಿ ಪ್ರಕಟವಾಗುತ್ತಿದ್ದ ಬೆಳ್ತಂಗಡಿ ತಾಲೂಕಿನ “ಸುದ್ದಿ ಬಿಡುಗಡೆ “ಪತ್ರಿಕೆ ಇಂದು ಪ್ರತಿದಿನ  22
.. ಮುಂದೆ ಓದಿ

ಸಲಹೆ- ಸೂಚನೆ

ನಿಮ್ಮ ಸಲಹೆ ಸೂಚನೆಗಳಿಗೆ ಹಾರ್ದಿಕ ಸ್ವಾಗತ

ಇಲ್ಲಿ ಕ್ಲಿಕ್ಕಿಸಿ

Copyright © 2017 Suddinews.com . All Rights Reserved.
^ Back to Top