Thu 27 Apr 2017, 6:58AM

ಹೆಚ್ಚಿನ ಸುದ್ದಿಗಳು

ಬೆಳ್ತಂಗಡಿ : ಗುರುವಾಯನಕೆರೆ ಉಪಕೇಂದ್ರದಲ್ಲಿ ತುರ್ತು ಕಾಮಗಾರಿಯನ್ನು ಕೈಗೊಳ್ಳಬೇಕಾದ ಹಿನ್ನಲೆಯಲ್ಲಿ ಎ. 26 ಮತ್ತು 28ರಂದು ಗುರುವಾಯನಕೆರೆ ಉಪಕೇಂದ್ರದಿಂದ ಹೊರಹೊಮ್ಮುವ ವೇಣೂರು ಮತ್ತು ಆರಂಬೋಡಿ ಫೀಡರ್‌ಗಳಲ್ಲಿ ಬೆಳಿಗ್ಗೆ 9.00ರಿಂದ ಸಂಜೆ 5.00ರ ತನಕ ವಿದ್ಯುತ್ ನಿಲುಗಡೆಯಾಗಲಿದೆ ಎಂದು ಮೆಸ್ಕಾಂ ಪ್ರಕಟಣೆಯಲ್ಲಿ ತಿಳಿಸಿದೆ.

beo1

beoಬೆಳ್ತಂಗಡಿ: ಶಿಕ್ಷಕರ ವಿವಿಧ ಬೇಡಿಕೆಗಳನ್ನು ಮುಂದಿಟ್ಟು ಅಖಿಲ ಭಾರತ ಪ್ರಾಥಮಿಕ ಶಿಕ್ಷಕರ ಫೆಡರೇಶನ್ ವತಿಯಿಂದ ರಾಷ್ಟ್ರಾಧ್ಯಂತ ಹೋರಾಟಗಳನ್ನು ನಡೆಸಲಾಗುತ್ತಿದ್ದು ಅದರ ಎರಡನೇ ಹಂತದ ಕಾರ್ಯಕ್ರಮವಾಗಿ ಎ. 25 ರಂದು ದೇಶಾಧ್ಯಂತ ಎಲ್ಲಾ ಶಿಕ್ಷಣ ಇಲಾಖೇ ಕಚೇರಿ ಮುಂದೆ ಶಿಕ್ಷಕರ ಏಕದಿನ ಮೌನ ಧರಣಿ ನಡೆಯಲಿದ್ದು ಈ ಹಿನ್ನೆಲೆಯಲ್ಲಿ ಬೆಳ್ತಂಗಡಿ ಬಿಇಒ ಕಚೇರಿ ಎದುರು ಕೂಡ ನಡೆಯಿತು.
7ನೇ ವೇತನ ಆಯೋಗದ ಶಿಫಾರಸ್ಸುಗಳನ್ನು ಎಲ್ಲಾ ರಾಜ್ಯಗಳಲ್ಲಿ ಜಾರಿಗೆ ತರಬೇಕು, ನೂತನ ಪಿಂಚಣಿ ಯೋಜನೆ ರದ್ದುಗೊಳಿಸಿ ಹಳೇ ಪಿಂಚಣಿ ಯೋಜನೆ ಜಾರಿಗೆ ತರಬೇಕು, ಪ್ರಾಥಮಿಕ ಶಿಕ್ಷಣ ಮಂಡಳಿ ರಚಿಸಬೇಕು, ರಾಜ್ಯದ ಎಲ್ಲಾ ಶಾಲೆಗಳಲ್ಲಿ ಪೂರ್ವ ಪ್ರಾಥಮಿಕ ಶಿಕ್ಷಣ ಎಲ್‌ಕೆಜಿ, ಯುಕೆಜಿ ಆರಂಭಿಸಬೇಕು, ಶಾಲೆಗೊಬ್ಬ ಮುಖ್ಯೋಪಾಧ್ಯಾಯ ನೇಮಕ, ಶಿಕ್ಷಕ ಶಿಕ್ಷಕಿ ವಿದ್ಯಾರ್ಥಿ ಅನುಪಾತ ಮಾಡಬೇಕು ಎಂಬಿತ್ಯಾಧಿ ಪ್ರಮುಖ ಬೇಡಿಕೆಗಳು ಈ ಬಾರಿಯ ಹೋರಾಟದಲ್ಲಿತ್ತು.

beet rokars copyಬೆಳ್ತಂಗಡಿ: ಬೀಟ್ ರಾಕರ‍್ಸ್ ಡ್ಯಾನ್ಸ್ ಅಕಾಡೆಮಿ ಬೆಳ್ತಂಗಡಿ ಇದರ 6ನೇ ವರ್ಷದ ವಾರ್ಷಿಕೋತ್ಸವದ ಪ್ರಯುಕ್ತ ಎ. 22 ರಂದು ಬೆಳ್ತಂಗಡಿ ಮಾರಿಗುಡಿ ಮೈದಾನದಲ್ಲಿ ಬೆಳಕು ಶಬ್ಧತರಂಗದ ಅದ್ಭುತ ನೃತ್ಯ ಸಂಗೀತ ಸೆಲೆಬ್ರೆಟಿ ನೈಟ್ ವಿಶೇಷ ಕಾರ್ಯಕ್ರಮ, ರಾಜ್ಯ ಮಟ್ಟದ ಡ್ಯಾನ್ಸ್ ಸ್ಪರ್ಧೆಯೊಂದಿಗೆ ನಡೆಯಿತು.
ಅಧ್ಯಕ್ಷತೆಯನ್ನು ಕರಾವಳಿ ಕರ್ನಾಟಕ ಡ್ಯಾನ್ಸ್ ಅಕಾಡಮಿ ಯೂನಿಯನ್ ಅಧ್ಯಕ್ಷ ರಾಜೇಶ್ ಕಣ್ಣೂರು ವಹಿಸಿದ್ದರು.
ಮುಖ್ಯ ಅತಿಥಿಗಳಾಗಿ ಪಟ್ಟಣ ಪಂಚಾಯತ್ ಅಧ್ಯಕ್ಷ ಮುಗುಳಿ ನಾರಾಯಣ ರಾವ್, ಅನುಗ್ರಹ ಟ್ರೈನಿಂಗ್ ಕಾಲೇಜಿನ ಪ್ರಾಂಶುಪಾಲ ತಲ್‌ಹತ್ ಎಂ. ಜಿ, ಜೇಸಿಐ ಬೆಳ್ತಂಗಡಿ ಮಂಜುಶ್ರೀ ಅಧ್ಯಕ್ಷ ಸಂತೋಷ್ ಪಿ ಕೋಟ್ಯಾನ್, ಹೈಕೋರ್ಟ್ ನ್ಯಾಯವಾದಿ ಹರೀಶ್ ಪೂಂಜ, ಸುವರ್ಣ ಸಾಂಸ್ಕೃತಿಕ ಪ್ರತಿಷ್ಠಾನದ ಅಧ್ಯಕ್ಷ ಸಂಪತ್ ಬಿ ಸುವರ್ಣ, ತುಳು ಚಲನಚಿತ್ರ ನಿರ್ಮಾಪಕ ಹರೀಶ್ ರಾವ್, ಸಕಲೇಶ್‌ಪುರದ ರಿದಂ ಕೀಪಝ್ ಡ್ಯಾನ್ಸ್ ಅಕಾಡಮಿ ಅಧ್ಯಕ್ಷ ಕೃಷ್ಣೇ ಗೌಡ, ರಾಜ್ಯ ಸರಕಾರಿ ನೌಕರರ ಸಂಘದ ಸದಸ್ಯ ಕೆ ಧರಣೇಂದ್ರ ಕುಮಾರ್ ಜೈನ್, ಹೋಲಿ ರಿಡೀಮರ್ ಆಂಗ್ಲ ಮಾಧ್ಯಮ ಶಾಲೆ ಬೆಳ್ತಂಗಡಿಯ ಮುಖ್ಯೋಪಾಧ್ಯಾಯ ರೆ. ಫಾ ಅನಿಲ್ ಪ್ರಕಾಶ್ ಡಿಸಿಲ್ವ ಇವರುಗಳು ಶುಭ ಕೋರಿದರು.

beet rokars karate copyಬೆಳ್ತಂಗಡಿ: ಬೀಟ್ ರಾಕರ‍್ಸ್ ಡ್ಯಾನ್ಸ್ ಅಕಾಡಮಿ ಮತ್ತು ಶ್ರೀ ಸಾಯಿ ಕಾಸ್ಟ್ಯೂಮ್ಸ್ ವರ್ಲ್ಡ್ ಎಂಬ ಹೆಸರಿನಲ್ಲಿ ಬೆಳ್ತಂಗಡಿಯಲ್ಲಿ ಕಳೆದ ೬ ವರ್ಷಗಳಿಂದ ಕಾರ್ಯಾಚರಿಸುತ್ತಿರುವ ಸಂಸ್ಥೆಯ ವತಿಯಿಂದ ಮುಂದಕ್ಕೆ ಅನುಭವಿ ಕರಾಟೆ ಶಿಕ್ಷಕರಿಂದ ಕರಾಟೆ ತರಬೇತಿ ನೀಡಲು ಮತ್ತು ಕಲಾಸಕ್ತ ವಿದ್ಯಾರ್ಥಿಗಳಿಗೆ ನಾಟಕ ಮತ್ತು ರಂಗ ಅಭಿನಯ ತರಬೇತಿ ನೀಡುವ ವಿಭಾಗವು ಎ. 22 ರಂದು ಉದ್ಘಾಟನೆಗೊಂಡಿತು.
ಜೇಸಿಐ ಬೆಳ್ತಂಗಡಿ ಮಂಜುಶ್ರೀ ಇದರ ಪೂರ್ವಾಧ್ಯಕ್ಷ, ಸಂಘಟಕ ಹಾಗೂ ಉದ್ಯಮಿ ಪ್ರಮೋದ್ ಆರ್ ನಾಯಕ್ ಉದ್ಘಾಟನೆ ನೆರವೇರಿಸಿದರು. ಈ ಸಂದರ್ಭ ಜೇಸಿಐ ವಲಯಾಧ್ಯಕ್ಷ ಚಿದಾನಂದ ಇಡ್ಯ, ಸುದ್ದಿ ಬಿಡುಗಡೆ ವ್ಯವಸ್ಥಾಪಕ ಮಂಜುನಾಥ ರೈ, ಬೀಟ್ ರಾಕರ‍್ಸ್ ಡ್ಯಾನ್ಸ್ ಅಕಾಡಮಿ ಮುಖ್ಯಸ್ಥ ಜಿತೇಶ್ ಕುಮಾರ್, ಕರಾಟೆ ತರಬೇತುದಾರರು ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.

arasinamakki7

arasinamakki4 copy

arasinamakki5

arasinamakki6

arasinamakki

arasinamakki1

arasinamakki2

arasinamakki3ಅರಸಿನಮಕ್ಕಿ ಶ್ರೀನಿವಾಸ ಕಲ್ಯಾಣೋತ್ಸವವು ವಿಜೃಂಭಣೆಯಿಂದ ಎ. 22ರಂದು ನಡೆಯಿತು.

barengayaನಿಡ್ಲೆ : ನಿಸರ್ಗ ಯುವಜನೇತರ ಮಂಡಲ(ರಿ) ಬರೆಂಗಾಯ ಹಾಗೂ ದ.ಕ ಜಿಲ್ಲಾ ಅಮೆಚ್ಯೂರ್ ಜಿಲ್ಲಾ ಕಬಡ್ಡಿ ಅಸೋಸಿಯೇಷನ್ (ರಿ) ಇದರ ಸಹಯೋಗದೊಂದಿಗೆ ದ.ಕ, ಉಡುಪಿ, ಕಾಸರಗೊಡು ಜಿಲ್ಲೆಯ ೭೦ಕೆ.ಜಿ ವಿಭಾಗದ ಪುರುಷರ ಅಂತರ್ ಜಿಲ್ಲಾ ಮಟ್ಟದ ಹೊನಲು ಬೆಳಕಿನ ಕಬಡ್ಡಿ ಪಂದ್ಯಾಟವು ಹಿ.ಪ್ರಾ ಶಾಲೆ ಬರೆಂಗಾಯದಲ್ಲಿ ಎ. 22ರಂದು ಜರಗಿತು.
ನಿಡ್ಲೆ ಗ್ರಾ.ಪಂ ಅಧ್ಯಕ್ಷರಾದ ಶ್ರೀಮತಿ ಶುಭ ದೇವಧರ್ ಅಧ್ಯಕ್ಷತೆ ವಹಿಸಿದ್ದರು. ಬೆಂಗಳೂರು ಹೈಕೋರ್ಟ್ ನ್ಯಾಯಾವಾದಿ ಹರೀಶ್ ಪೂಂಜ ಕಾರ್ಯಕ್ರಮ ಉದ್ಘಾಟಿಸಿದರು. ಮುಖ್ಯ ಅತಿಥಿಗಳಾಗಿ ಬೆಳ್ತಂಗಡಿ ಸಹಾಯಕ ಯುವ ಸಬಲೀಕರಣ ಮತ್ತು ಕ್ರೀಡಾಧಿಕಾರಿ ಪ್ರಭಾಕರ ನಾರಾವಿ, ಕಳೆಂಜ ಗ್ರಾ.ಪಂ ಸದಸ್ಯೆ ಶ್ರೀಮತಿ ಸುಶೀಲ ವಸಂತ ಗೌಡ, ನಿಡ್ಲೆ ಗ್ರಾ.ಪಂ ಉಪಾಧ್ಯಕ್ಷ ರುಕ್ಮಯ ಪೂಜಾರಿ ಪೊರ್ಕಳ, ನಿಡ್ಲೆ ಗ್ರಾ.ಪಂ ಸದಸ್ಯರಾದ ಹರೀಶ್ ಪೊಂರ್ದಿಲ, ಶ್ರೀಮತಿ ಲಲಿತಾ, ಬರೆಂಗಾಯ ನಿಸರ್ಗ ಯುವ ಜನೇತರ ಮಂಡಲ ಅಧ್ಯಕ್ಷರಾದ ಪುನೀತ್ ಪೊಂರ್ದಿಲ, ಬರೆಂಗಾಯ ಶಾಲಾ ಎಸ್.ಡಿ.ಎಂ.ಸಿ ಅಧ್ಯಕ್ಷ ಕೃಷ್ಣ ಕುಮಾರ್ ಕಾಟ್ಲ, ಬರೆಂಗಾಯ ಜ್ಯೋತಿ ಹಳೆ ವಿದ್ಯಾರ್ಥಿ ಸಂಘದ ಅಧ್ಯಕ್ಷ ಹೇಮಂತ್ ಗೌಡ ಕಜೆ, ಬರೆಂಗಾಯ ಶ್ರೀಕೃಷ್ಣ ಜನ್ಮಾಷ್ಟಮಿ ಸಮಿತಿ ಅಧ್ಯಕ್ಷ ಪ್ರವೀಣ್ ಹೆಬ್ಬರ್ ಪೊಂರ್ದಿಲ ಆಗಮಿಸಿದ್ದರು. ವೇದಿಕೆಯಲ್ಲಿ ತಾ.ಪಂ ಮಾಜಿ ಉಪಾಧ್ಯಕ್ಷ ವಿಷ್ಣು ಮರಾಠೆ, ಸನ್ಮಾನಗೊಳ್ಳಲಿದ್ದ ಬರೆಂಗಾಯ ಹಿ.ಪ್ರಾ ಶಾಲಾ ಮುಖ್ಯೋಪಾಧ್ಯಾಯ ಗೋಪಾಲ, ಮೂಡಬಿದ್ರೆ ಆಳ್ವಾಸ್ ಶಿಕ್ಷಣ ಸಂಸ್ಥೆಯ ಕನ್ನಡ ಉಪನ್ಯಾಸಕರಾದ ಚಂದ್ರಶೇಖರ್ ಗೌಡ ಕಜೆ ಉಪಸ್ಥಿತರಿದ್ದರು.

mundajeಮುಂಡಾಜೆ : ಯಂಗ್ ಚಾಲೆಂಜರ‍್ಸ್ ಕ್ರೀಡಾ ಸಂಘ ಮುಂಡಾಜೆ ಇದರ ವತಿಯಿಂದ ಆರ್.ಎನ್. ಭಿಡೆ ಸ್ಮರಣಾರ್ಥ ಇಂದು(ಎ.22) ಓವರ್ ಆರ್ಮ್ ಕ್ರಿಕೆಟ್ ಪಂದ್ಯಾಟದ ಉದ್ಘಾಟನಾ ಸಮಾರಂಭವು ಭಿಡೆ ನಾರಾಯಣ ಭಟ್ ಕ್ರೀಡಾಂಗಣ ಜೂನಿಯರ್ ಕಾಲೇಜು ಮುಂಡಾಜೆಯಲ್ಲಿ ನಡೆಯಿತು.
ಕಾರ್ಯಕ್ರಮದ ಉದ್ಘಾಟನೆಯನ್ನು ನ್ಯಾಯವಾದಿ ಶೈಲೇಶ್ ಠೋಸರ್ ನೆರವೇರಿಸಿದರು. ಅಧ್ಯಕ್ಷತೆಯನ್ನು ಯಂಗ್ ಚಾಲೆಂಜರ‍್ಸ್ ಕ್ರೀಡಾ ಸಂಘದ ಅಧ್ಯಕ್ಷ ಆಶ್ರಫ್ ಆಲಿಕುಂಞ ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ಮುಂಡಾಜೆ ಗ್ರಾ.ಪಂ ಸದಸ್ಯರುಗಳಾದ ನಾರಾಯಣ ಗೌಡ ದೇವಸ್ಯ, ಚೆನ್ನಕೇಶವ ನಾಯ್ಕ, ಸುರೇಶ್ ಹೆಗ್ಡೆ, ಗಣೇಶ್ ಬಂಗೇರ, ಮುಂಡಾಜೆ ಶತಾಬ್ದಿ ವಿದ್ಯಾಲಯ ಸಮಿತಿ ಜೊತೆ ಕಾರ್ಯದರ್ಶಿ ಅರವಿಂದ ಹೆಬ್ಬಾರ್ ಭಾಗವಹಿಸಿದ್ದರು. ಯಂಗ್ ಚಾಲೆಂಜರ‍್ಸ್ ಕ್ರೀಡಾ ಸಂಘದ ಸಂಚಾಲಕ ನಾಮದೇವ ರಾವ್, ಶಶಿಧರ ಠೋಸರ್ ಉಪಸ್ಥಿತರಿದ್ದರು.

charmadi.jpg1

charmadiಚಾರ್ಮಾಡಿ : ಗುರುವಾರ ಮಧ್ಯರಾತ್ರಿ ಮಂಗಳೂರಿನಿಂದ ಭದ್ರಾವತಿ ಕಡೆ ತೆರಳುತ್ತಿದ್ದ ಡಿಸೇಲ್ ಟ್ಯಾಂಕರ್ ಚಾರ್ಮಾಡಿ ಘಾಟಿಯಲ್ಲಿ ಪ್ರಪಾತಕ್ಕೆ ಬಿದ್ದು,  ಜಖಂಗೊಂಡಿದೆ. ಚಾಲಕನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.

gerukatte

gerukatte1ಗೇರುಕಟ್ಟೆ : ಕೋಳಿ ಸಾಗಾಟ ಮಾಡುತ್ತಿದ್ದ ಪಿಕಪ್ ವಾಹನ ಮಗುಚಿ ಬಿದ್ದ ಘಟನೆ ಗೇರುಕಟ್ಟೆಯ ರೇಶ್ಮೆ ಕ್ರಾಸ್ ಬಳಿ ನಡೆದಿದೆ.

Bisu Jathre Photo copy

Bisu Jathre Photo copy1

Bisu Jathre Photo copy2ಉಜಿರೆ: ವಿಷು ಜಾತ್ರೆ ಸಂದರ್ಭ ಧರ್ಮಸ್ಥಳದಲ್ಲಿ ಗುರುವಾರ ರಾತ್ರಿ ಬ್ರಹ್ಮರಥೋತ್ಸವ ನಡೆಯಿತು.
ರಾಜ್ಯ ವಿವಿಧ ಭಾಗಗಳಿಂದ ಬಂದ ಸುಮಾರು ಇನ್ನೂರು ಮಂದಿ ಕಲಾವಿದರು ಶಂಖ, ತಾಳ, ಬ್ಯಾಂಡ್, ಚೆಂಡೆ ವಾದನದ ಮೂಲಕ ಕಲಾ ಸೇವೆ ಮಾಡಿದರು. ಸಹಸ್ರಾರು ಮಂದಿ ಭಕ್ತಾದಿಗಳು ರಥೋತ್ಸವ ವೀಕ್ಷಿಸಿ ಧನ್ಯತೆ ಪಡೆದರು.

¸swacchthe

sw

WhatsApp Image 2017-04-21 at 11.18ಗುರುವಾಯನಕೆರೆಯಲ್ಲಿ ಎಸ್.ಡಿ.ಎಂ ವಿದ್ಯಾರ್ಥಿಗಳಿಂದ ಹಾಗೂ ಊರ ಸಂಘ ಸಂಸ್ಥೆಗಳಿಂದ ಸ್ವಚ್ಛತಾ ಕಾರ್ಯಕ್ರಮವು ಇಂದು ನಡೆಯಿತು.

adike mara yanthra copyಉಜಿರೆ: ಇಲ್ಲಿನ ಎಸ್‌ಡಿಎಂ ಪಾಲಿಟೆಕ್ನಿಕ್ ಕಾಲೇಜಿನ ವಿದ್ಯಾರ್ಥಿಗಳು ಕೃಷಿ ಕೆಲಸಕ್ಕೆ ಪೂರಕವಾಗಿರುವ ಮತ್ತು ಅತ್ಯಂತ ಕಡಿಮೆ ದರದಲ್ಲಿ ಬಳಕೆ ಮಾಡಬಹುದಾದ ರೀತಿಯ ಕೆಲವೊಂದು ಯಂತ್ರೋಪಕರಣಗಳನ್ನು ತಮ್ಮದೇ ಕಲ್ಪನೆಯಲ್ಲಿ ಆವಿಷ್ಕರಿಸಿದ್ದು ಉತ್ತಮ ಮಾರುಕಟ್ಟೆ ಕೇಂದ್ರೀಕರಿಸುವ ಎಲ್ಲಾ ಅರ್ಹತೆಗಳನ್ನು ಪಡೆದುಕೊಂಡಿದೆ.
ವಿದ್ಯಾರ್ಥಿಗಳು ತಯಾರುಗೊಳಿಸಿದ ಕೆಲವೊಂದು ಆವಿಷ್ಕಾರಗಳಲ್ಲಿ ಅಡಿಕೆ ಮರಕ್ಕೆ ಹತ್ತುವ ಮತ್ತು ಔಷಧಿ ಸಿಂಪಡಿಸುವ ಯಂತ್ರವೂ ಒಂದು.
ಈ ಪ್ರಾಜೆಕ್ಟ್‌ಗೆ ಕೇವಲ 10 ಸಾವಿರ ರೂ. ಗಳು ಮಾತ್ರ ಖರ್ಚು ತಗುಲಲಿದೆ.
ಆವಿಷ್ಕಾರ ತಂಡದ ಸದಸ್ಯ ವಿದ್ಯಾರ್ಥಿಗಳು ಯಾರ‍್ಯಾರು?
ಭರತ್ ಎಚ್, ಅಕಾಶ್ ಕೆ, ಅಶ್ವಿನಿ, ದರ್ಶನ್ ಕುಮಾರ್, ದಿವ್ಯಾ ಎಸ್, ಮತ್ತು ಉತ್ತಮ್ ಎನ್ ಇವರ ತಂಡ ಈ ಆವಿಷ್ಕಾರ ನಡೆಸಿ ಯಶಸ್ಸು ಸಾಧಿಸಿದೆ. ಇವರಿಗೆ ಅವನೀಶ್ ಅವರು ಮಾರ್ಗದರ್ಶನ ನೀಡಿದ್ದಾರೆ. ಈ ಯಂತ್ರವು ಸುಲಭವಾಗಿ ಅಡಿಕೆ ಮರ ಹತ್ತಲು ಮತ್ತು ಅಡಿಕೆ ಬೆಳೆಗೆ ಕೀಟ ನಾಶಕ ಸಿಂಪಡಿಸಲು ಸಹಾಯಕವಾಗಿ ಕಾರ್ಯನಿರ್ವಹಿಸುತ್ತದೆ.
ಉಪಯೋಗಗಳು:
ಇಂದಿನ ದಿನಗಳಲ್ಲಿ ಅಡಿಕೆ ಮರಕ್ಕೆ ಮದ್ದನ್ನು ಸಿಂಪಡಿಸುವುದು ಕಷ್ಟವಾಗಿದೆ. ಅದನ್ನು ಅರಿತು ಈ ಯಂತ್ರ ಸಿದ್ದಪಡಿಸಲಾಗಿದೆ. 12 ವೋಲ್ಟ್ ವೈಪರ್ ಮೋಟಾರು ಬಳಸಿಕೊಂಡು ಮೇಲಕ್ಕೆ ಹತ್ತುವ ಅತ್ಯಂತ ಸರಳ ಮಾದರಿಯಿಂದ ರೂಪಿತವಾಗಿದೆ. ಕೇಲವ ಎರಡೇ ನಿಮಿಷದಲ್ಲಿ ಅಡಿಕೆ ಮರ ಏರುವ ಸಾಮರ್ಥ್ಯ ಹೊಂದಿರುವ ಈ ಯಂತ್ರ ಡಿ.ಸಿ ಮೋಟರನ್ನು ಬಳಸಿ ಲಂಬವಾಗಿ ಮತ್ತು ಅಡ್ಡವಾಗಿ, ಒಂದು ಅಡಿಕೆ ಮರ ಕೇಂದ್ರೀಕರಿಸಿ ಪಕ್ಕದ 7-8 ಮರಗಳಿಗೆ ಕೀಟನಾಶಕ ಸಿಂಪಡಿಸುವ ಸಾಮರ್ಥ್ಯ ಹೊಂದಿದೆ.
ಸೆಲ್ಫ್ ಲುಕ್ಕಿಂಗ್ ನಿಯಮದ ಪ್ರಕಾರ ಕಾರ್ಯನಿರ್ವಹಿಸುವ ಈ ಯಂತ್ರವು ಪರಿಸರ ಸ್ನೇಹಿಯಾಗಿದ್ದು 12 ವೋಲ್ಟೇಜ್ ಬ್ಯಾಟರಿ ಮೂಲಕವೂ ಕಾರ್ಯನಿರ್ವಹಿಸುವ ಕ್ಷಮತೆ ಹೊಂದಿದೆ. ಕೇವಲ ಎರಡೇ ಸೆಕುಂಡುಗಳಲ್ಲಿ ಮರಕ್ಕೆ ಯಂತ್ರವನ್ನು ಅಳವಡಿಸಬಹುದಾಗಿದೆ. ಯಂತ್ರಕ್ಕೆ ನೆಲದಿಂದ ಕೀಟ ನಾಶಕವನ್ನು ಪವರ್ ಸ್ಪ್ರೇಯರ್ ಅಥವಾ ಗಟರ್ ಪಂಪ್‌ನ ಮೂಲಕ ಪೈಪ್‌ಮೂಲಕ ಕಳುಹಿಸಿಕೊಡಬಹುದಾಗಿದೆ. ಇದರ ನಿಯಂತ್ರಣವನ್ನು ಕೇವಲ ಒಬ್ಬನೇ ವ್ಯಕ್ತಿ ಮಾಡಬಹುದಾಗಿದ್ದು, ಅಡಿಕೆ ಕೃಷಿ ಕ್ಷೇತ್ರದಲ್ಲಿ ಬಹಳ ಬೇಡಿಕೆಯ ಕೂಲಿ ಕಾರ್ಮಿಕರ ಕೊರತೆಯ ಜಾಗವನ್ನು ಈ ಯಂತ್ರ ತುಂಬುವುದರಲ್ಲಿ ಸಂದೇಹವಿಲ್ಲ.
ಇದೇ ಯಂತ್ರದ ಮೂಲಕ ಮುಂದಕ್ಕೆ ಗೊನೆ ಕೀಳುವುದು ಮತ್ತು ಕಂಪ್ಯೂಟರೀಕೃತವಾಗಿ ಅಭಿವೃದ್ಧಿ ಪಡಿಸುವ ಉದ್ಧೇಶವಿದೆ ಎಂದು ಪ್ರಾಧ್ಯಾಪಕರಾದ ಅವನೀಶ್ ಅವರು ತಿಳಿಸುತ್ತಾರೆ.

thrisha copyಕನ್ಯಾಡಿ 1 ಇಲ್ಲಿಯ ಕಂಬಳದಡ್ಡ ಮನೆಯ ಸುರೇಶ್ ಗೌಡ ಮತ್ತು ಸತ್ಯ ದಂಪತಿಯ ಪುತ್ರಿ ತ್ರಿಶಾಳ 3ನೇ ವರ್ಷದ ಹುಟ್ಟುಹಬ್ಬವನ್ನು ಎ. 17ರಂದು ಆಚರಿಸಲಾಯಿತು.

bhavish copyಚಿಬಿದ್ರೆ ಗ್ರಾಮದ ಪೆರಿಯಡ್ಕ ಬರಮೇಲು ಮನೆ ಲಕ್ಷ್ಮಣ ಗೌಡ ಮತ್ತು ವೇದಾವತಿ ದಂಪತಿ ಪುತ್ರ ಭವಿಷ್‌ನ 5ನೇ ವರ್ಷದ ಹುಟ್ಟುಹಬ್ಬವನ್ನು ಎ. 12ರಂದು ಆಚರಿಸಲಾಯಿತು.

samyuk copyಲಾಯಿಲ ಗ್ರಾಮದ ಸುರುಳಿ ಸ್ಫೂರ್ತಿ ನಿಲಯ ಗಣೇಶ್ ಶೆಟ್ಟಿ ಮತ್ತು ವಿಶಾಲಾಕ್ಷಿ ದಂಪತಿ ಪುತ್ರ ಸಮ್ಯಕ್ ಜಿ. ಶೆಟ್ಟಿ ಯ ಮೊದಲನೇ ವರ್ಷದ ಹುಟ್ಟುಹಬ್ಬ ಎ. 11ರಂದು ಜರಗಿತು.

baby copyಬಜಿರೆ ಗ್ರಾಮದ ಹೊಸಪಟ್ಣ ಹೊಸವಕ್ಲು ಮಜಲು  ದಯಾನಂದ ಪೂಜಾರಿ ಮತ್ತು ಶ್ರೀಮತಿ ವನಿತಾ ದಂಪತಿಯ ಪುತ್ರ ಧನಿಷ್  ಈತನ ಪ್ರಥಮ ವರ್ಷದ ಹುಟ್ಟುಹಬ್ಬವು ಎ.16ರಂದು ಜರುಗಿತು.

umesh-shailaja copyಬೆಳಾಲು ಗ್ರಾಮದ ಪೊಯ್ಯೋದಡ್ಡ ಮನೆ ಬಾಬು ಗೌಡರ ಪುತ್ರ ಉಮೇಶ ಪಿ. ಗೌಡ ರವರ ವಿವಾಹವು ಹುಣ್ಸೆಕಟ್ಟೆ ಶ್ರೀಮತಿ ಕಮಲಾ ಮತ್ತು  ಕೆ. ಎನ್ ಮಂಜುನಾಥ ಗೌಡರ ಪುತ್ರಿ ಶೈಲಜಾ ರೊಂದಿಗೆ ಎ. 10ರಂದು ಬೆಳ್ತಂಗಡಿ ಸಿ.ವಿ.ಸಿ  ಹಾಲ್‌ನಲ್ಲಿ ಜರುಗಿತು.

add1

ಬೆಳ್ತಂಗಡಿ : ಗುರುವಾಯನಕೆರೆ ಉಪಕೇಂದ್ರದಲ್ಲಿ ತುರ್ತು ಕಾಮಗಾರಿಯನ್ನು ಕೈಗೊಳ್ಳಬೇಕಾದ ಹಿನ್ನಲೆಯಲ್ಲಿ ಎ. 22ರಂದು ಗುರುವಾಯನಕೆರೆ ಉಪಕೇಂದ್ರದಿಂದ ಹೊರಹೊಮ್ಮುವ ವೇಣೂರು ಮತ್ತು ಆರಂಬೋಡಿ ಫೀಡರ್‌ಗಳಲ್ಲಿ ಬೆಳಿಗ್ಗೆ 9.00ರಿಂದ ಸಂಜೆ 5.00ರ ತನಕ ವಿದ್ಯುತ್ ನಿಲುಗಡೆಯಾಗಲಿದೆ ಎಂದು ಮೆಸ್ಕಾಂ ಪ್ರಕಟಣೆಯಲ್ಲಿ ತಿಳಿಸಿದೆ.

venur vikasana shibira samaropa copyವೇಣೂರು: ಶಿಬಿರಗಳಲ್ಲಿ ತತ್ವ ಸಿದ್ದಾಂತ ಮುಖ್ಯ. ಆದ್ಯಾತ್ಮಿಕ ಚಿಂತನೆಯನ್ನು ವಿಕಸನಗೊಳಿಸುವುದು ಇದರ ಮೂಲ ಧ್ಯೇಯವಾಗಬೇಕೆ ಹೊರತು ಮನೋರಂಜನೆ ಆಗಬಾರದು. ಇಂತಹ ಧಾರ್ಮಿಕ ಶಿಬಿರಗಳಲ್ಲಿ ಮಠ, ಮಠಾಧೀಶರ ಪರಿಚಯ ಮೂಡಿಸುವುದ ಜೊತೆಗೆ ಅಲ್ಲಿಗೆ ಭೇಟಿ ನೀಡುವುದಕ್ಕೆ ಪ್ರೇರಣೆಯಾಗಲಿ ಎಂದು ಮೂಡಬಿದಿರೆ ಜೈನ ಮಠದ ಭಾರತ ಭೂಷಣ ಶ್ರೀ ಭಟ್ಟಾರಕ ಚಾರುಕೀರ್ತಿ ಪಂಡಿತಾಚಾರ್ಯವರ್ಯ ಮಹಾ ಸ್ವಾಮೀಜಿ ನುಡಿದರು.
ಅವರು ಎ.16 ರಂದು ವೇಣೂರು ಶ್ರೀ ಬಾಹುಬಲಿ ಸಭಾಭವನದಲ್ಲಿ ಇಲ್ಲಿಯ ಬಾಹುಬಲಿ ಯುವಜನ ಸಂಘ ಮತ್ತು ಶ್ರೀ ದಿಗಂಬರ ತೀರ್ಥ ಕ್ಷೇತ್ರ ಸಮಿತಿ ಆಶ್ರಯದಲ್ಲಿ ಜರಗಿದ ಜೈನ ಬಾಲಕ-ಬಾಲಕಿಯರ 17ನೇ ವರ್ಷದ ಧಾರ್ಮಿಕ ಹಾಗೂ ವ್ಯಕ್ತಿತ್ವ ವಿಕಸನ ಶಿಬಿರದ ಸಮಾರೋಪ ಕಾರ್ಯಕ್ರಮದಲ್ಲಿ ಆಶೀರ್ವಚನ ನೀಡಿದರು. ಮಠಗಳ ಬಗ್ಗೆ ಗುರು ಹಾಗೂ ಪರಂಪರೆಯನ್ನು ವಿರೋಧ ಕಟ್ಟಿಕೊಂಡು ಅಂತರ್ಜಾಲಗಳಲ್ಲಿ ಚರ್ಚೆ ನಡೆಯುತ್ತಿರುವುದು ಬೇಸರ ಸಂಗತಿ. ಮಕ್ಕಳಿಗೆ ಮಠ, ಮಠಾಧೀಶರ ಪರಿಚಯ ಮಾಡಿಸಬೇಕು. ಇದು ಅವರು ಧರ್ಮ ಮಾರ್ಗದಲ್ಲಿ ನಡೆಯಲು ಸಹಕಾರಿಯಾಗಲಿದೆ ಎಂದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದ ಉಜಿರೆ ಶ್ರೀ ಧ.ಮಂ. ಪ.ಪೂ. ಕಾಲೇಜಿನ ಪ್ರಾಂಶುಪಾಲ ಪ್ರೊ| ಎನ್. ದಿನೇಶ್ ಚೌಟ ಮಾತನಾಡಿ, ಭಾಷೆಯ ಬಗ್ಗೆ ಸಂವಹನಶೀಲತೆ ಬೆಳೆಸಿ ಕೊಂಡವರಿಗೆ ಸಮಾಜದಲ್ಲಿ ಮಾನ್ಯತೆ ಜಾಸ್ತಿ. ಅದು ಇಂತಹ ಶಿಬಿರಗಳು ತಿಳಿಸುತ್ತದೆ. ಇಂದು ಜೈನ ಧರ್ಮೀಯರು ಬೇರೆ ಧರ್ಮದತ್ತ ವಾಲುತ್ತಿದ್ದಾರೆ. ಇದಕ್ಕಾಗಿ ಮಕ್ಕಳಿರುವಾಗಲೇ ಅವರಿಗೆ ಜೈನ ಧರ್ಮ ತತ್ವ ಸಿದ್ದಾಂತಗಳನ್ನು ಮೂಡಿಸಬೇಕಾಗಿದೆ ಎಂದರು.
ಶಿಬಿರದ ನಿರ್ವಾಹಕ ಮುನಿರಾಜ ರೇಂಜಾಳ ಮಾತನಾಡಿ, ಜೈನರ ಬಗೆಗಿನ ತತ್ವ ಸಿದ್ದಾಂತಗಳನ್ನು ಇಂತಹ ಧಾರ್ಮಿಕ ಶಿಬಿರಗಳಿಂದ ಮಾತ್ರ ಕಲಿಯಲು ಸಾಧ್ಯ ಎಂದರು.
ಮುಖ್ಯ ಅತಿಥಿಗಳಾಗಿ ಮಾಣಿ ಶ್ರೀ ಮಹಾವೀರ ಇಂಡಸ್ಟ್ರೀಸ್‌ನ ಮಹಾವೀರ ಪ್ರಸಾದ್, ಮೂಡಬಿದಿರೆ ಪಂಡಿತ್ ರೆಸಾರ್ಟ್‌ನ ರಜನಿಲಾಲ್ ಗೋಯಲ್ ಜೈನ್, ಶಿಬಿರದ ಸಂಚಾಲಕ ಜ್ಞಾನಚಂದ್ರ, ವೇಣೂರು ಜೈನ ತೀರ್ಥಕ್ಷೇತ್ರ ಸಮಿತಿ ಕಾರ್ಯದರ್ಶಿ ಯಂ. ವಿಜಯರಾಜ ಅಧಿಕಾರಿ, ಶ್ರೀ ಬಾಹುಬಲಿ ಯುವಜನ ಸಂಘದ ಅಧ್ಯಕ್ಷ ಶರ್ಮಿತ್ ಕುಮಾರ್ ವೇದಿಕೆಯಲ್ಲಿದ್ದರು.
ಸಂಪನ್ಮೂಲ ವ್ಯಕ್ತಿಗಳಾಗಿ ಯೋಗರಾಜ ಶಾಸ್ತ್ರಿ ಕಾರ್ಕಳ, ನವೀನ್ ಕುಮಾರ್ ಜೈನ್, ಉದಯ ಕುಮಾರ್, ಮಂಜುಳಾ, ಅಜಿತ್ ಕುಮಾರ್, ನಿರಂಜನ ಎ., ಶಾಂತಿರಾಜ ಜೈನ್, ಮಹಾವೀರ ಜೈನ್, ಕು| ಅಶ್ವಿನಿ ಜೈನ್ ಶಿಬಿರವನ್ನು ನಡೆಸಿಕೊಟ್ಟರು. ೪ ದಿನಗಳ ಕಾಲ ಜರಗಿದ ಶಿಬಿರದಲ್ಲಿ ೭೨ ಶಿಬಿರಾರ್ಥಿಗಳು ಪಾಲ್ಗೊಂಡಿದ್ದರು.
ಕು| ಪೂರ್ಣಿಮಾ ಬಳಗ ಪ್ರಾರ್ಥಿಸಿ ಪ್ರಮೋದ್ ಕುಮಾರ್ ಬಜಿರೆ ಪ್ರಾಸ್ತಾವಿಕವಾಗಿ ಮಾತನಾಡಿ ಸ್ವಾಗತಿಸಿದರು. ನಿರಂಜನ ಅಳಿಯೂರು ಕಾರ್ಯಕ್ರಮ ನಿರೂಪಿಸಿ, ಸುಧೀರ್ ಕುಮಾರ್ ಬಜಿರೆ ವಂದಿಸಿದರು.

chandrashekar - pavithra copyಲಾಯಿಲ ಗ್ರಾಮದ ಕುಂಠಿನಿ ಶ್ರೀ ದೇವಿಪ್ರಸಾದ್ ಮನೆ ಶ್ರೀಮತಿ ವಸಂತಿ ಮತ್ತು ಬಿ. ಗಿರಿಧರ ಶೆಟ್ಟಿ ಯವರ ಪುತ್ರಿ ಪವಿತ್ರರವರ ವಿವಾಹವು ಮಜಲೋಡಿ ಶ್ರೀದುರ್ಗಾ ನಿಲಯ ಸಾಂತಪ್ಪ ಶೆಟ್ಟಿಯವರ ಪುತ್ರ ಚಂದ್ರಶೇಖರ ರೊಂದಿಗೆ ಎ. 10ರಂದು ಬೆಳ್ತಂಗಡಿ ಶ್ರೀ ಗುರುನಾರಾಯಣ ವಾಣಿಜ್ಯ ಸಂಕೀರ್ಣದ ಆಶಾ ಸಾಲಿಯಾನ್ ಕಲ್ಯಾಣ ಮಂಟಪದಲ್ಲಿ ಜರಗಿತು.

dinesh-rekha copyಬೆಳಾಲು ಗ್ರಾಮದ ಪೊಯ್ಯೋದಡ್ಡ ಮನೆ ಬಾಬು ಗೌಡರ ಪುತ್ರ ದಿನೇಶ್ ಪಿ. ಗೌಡ ರವರ ವಿವಾಹವು ಕೊಯ್ಯೂರು ಗ್ರಾಮದ ಕಲ್ಲೇರಿ ಮನೆ ಕುಶಾಲಪ್ಪ ಗೌಡರ ಪುತ್ರಿ ರೇಖಾ ರೊಂದಿಗೆ ಎ. 10ರಂದು ಬೆಳ್ತಂಗಡಿ ಸಿ.ವಿ.ಸಿ ಹಾಲ್‌ನಲ್ಲಿ ಜರುಗಿತು.

Rajesh news copyವೇಣೂರು : ವೇಣೂರು ವಲಯದ ಅಳದಂಗಡಿ ಶಾಖೆಯಲ್ಲಿ ಉಪವಲಯ ಅರಣ್ಯಾಧಿಕಾರಿಯಾಗಿ ಕಳೆದ 5 ವರ್ಷಗಳಿಂದ ಸೇವೆ ಸಲ್ಲಿಸುತ್ತಿದ್ದ ರಾಜೇಶ್ ಇವರಿಗೆ ವಲಯ ಅರಣ್ಯಾಧಿಕಾರಿಯಾಗಿ ಭಡ್ತಿ ನೀಡಿ ರಾಯಚೂರು ಜಿಲ್ಲೆಯ ಲಿಂಗಸಗೂರು ವಲಯಕ್ಕೆ ನಿಯುಕ್ತಿಗೊಳಿಸಲಾಗಿದೆ.
2007ರಲ್ಲಿ ಬೆಳ್ತಂಗಡಿ ವನ್ಯಜೀವಿ ವಲಯದಲ್ಲಿ ಉಪ ವಲಯ ಅರಣ್ಯಾಧಿಕಾರಿಯಾಗಿ ಸೇವೆಗೆ ಸೇರಿದ ರಾಜೇಶ್ ಅವರು 5 ವರ್ಷಗಳ ಸೇವೆ ಬಳಿಕ 2012ರಲ್ಲಿ ವೇಣೂರು ವಲಯದ ಅಳದಂಗಡಿ ಶಾಖೆಗೆ ವರ್ಗಾವಣೆಗೊಂಡು ಸೇವೆ ಸಲ್ಲಿಸುತ್ತಿದ್ದರು. ಕಳೆದ 6ತಿಂಗಳ ಹಿಂದೆ ಅಳದಂಗಡಿ ಶಾಖೆ ಜೊತೆಗೆ ನಾರಾವಿ ಶಾಖೆಯ ಹೆಚ್ಚುವರಿ ಪ್ರಭಾರವನ್ನು ವಹಿಸಿಕೊಂಡು ಉತ್ತಮವಾಗಿ ಕರ್ತವ್ಯವನ್ನು ನಿರ್ವಹಿಸಿದ್ದರು.

vijay kumar-ashwini copyಕಲ್ಮಂಜ ಗ್ರಾಮದ ಬಳ್ಳಿದಡ್ಡ ಸುರೇಶ್ ಬಂಗೇರರ ಪುತ್ರಿ ಅಶ್ವಿನಿಯವರ ವಿವಾಹ ಮಂಡೂರು ಗ್ರಾಮದ ಹೇಡ್ಯದಡ್ಡ ನಾಣ್ಯಪ್ಪ ಪೂಜಾರಿಯವರ ಪುತ್ರ ವಿಜಯ್ ಕುಮಾರ್ ರೊಂದಿಗೆ ಎ. 10ರಂದು ಉಜಿರೆ ಎಸ್.ಕೆ ಮೆಮೋರಿಯಲ್ ಹಾಲ್‌ನಲ್ಲಿ ಜರಗಿತು.

reshma copyಬಜಿರೆ ಗ್ರಾಮದ ಹೊಸಪಟ್ಣ  ಪೊಂಗರ್‌ತ್ಯಾರು ಮನೆ ಶ್ಯಾಮ ಹೆಗ್ಡೆಯವರ ಪುತ್ರಿ ರೇಶ್ಮಾರವರ ವಿವಾಹವು ನಾರಾವಿ ಪಾಣಾಲು ದರ್ಖಾಸು ಸೋಮಯ್ಯ ಹೆಗ್ಡೆಯವರ ಪುತ್ರ ರಘುಚಂದ್ರರೊಂದಿಗೆ   ನಾರಾವಿ ಧರ್ಮಶ್ರೀ ಸಭಾಭವನದಲ್ಲಿ ಎ.10ರಂದು ಜರುಗಿತು.

Veerakesari sahayadana copyಕನ್ಯಾಡಿ ||: ವೀರಕೇಸರಿ ಧರ್ಮಸ್ಥಳ ಬೆಳ್ತಂಗಡಿ ಹಾಗೂ ಶ್ರೀ ಶನೈಶ್ಚರ ಪೂಜಾ ಸಮಿತಿ ಕನ್ಯಾಡಿ || ಇದರ ಸಹಯೋಗದೊಂದಿಗೆ ಎ.15ರಂದು ಹಿ.ಪ್ರಾ ಶಾಲಾ ಮೈದಾನ ಕನ್ಯಾಡಿ || ಇಲ್ಲಿ ಜರುಗಿದ 6ನೇ ವರ್ಷದ ಸಾರ್ವಜನಿಕ ಶ್ರೀ ಶನೈಶ್ಚರ ಪೂಜೋತ್ಸವ ಮತ್ತು ವಿವಿಧ ಕ್ಷೇತ್ರಗಳ ಸಾಧಕರಿಗೆ ಸನ್ಮಾನ ಕಾರ್ಯಕ್ರಮದಲ್ಲಿ 27ನೇ ಸೇವಾಯೋಜನೆಯಾಗಿ ನಿಡ್ಲೆ ಸ.ಹಿ.ಪ್ರಾ. ಶಾಲೆಯ 9ನೇ ತರಗತಿ ವಿದ್ಯಾರ್ಥಿ ಪದ್ಮರಾಜ್ ಇವರು ಮಾನಸಿಕ ಅನಾರೋಗ್ಯದಿಂದ ಬಳಲುತ್ತಿದ್ದು ಇವರ ಚಿಕಿತ್ಸೆಗೆ ರೂ. 15 ಸಾವಿರದ ಚೆಕ್ಕನ್ನು ಆತನ ತಾಯಿಗೆ ಹಸ್ತಾಂತರಿಸಲಾಯಿತು. ಇದೇ ಸಂದರ್ಭದಲ್ಲಿ 28ನೇ ಯೋಜನೆಯಾಗಿ ತನ್ನ ಎರಡು ಕಣ್ಣುಗಳನ್ನು ಕಳೆದುಕೊಂಡಿರುವ ಪೂರ್ಣೇಶ ಅವರ ಚಿಕಿತ್ಸೆಗೆ 15ಸಾವಿರ ರೂಗಳ ಚೆಕ್ಕನ್ನು ನೀಡಲಾಯಿತು. ವೀರಕೇಸರಿ ಬೆಳ್ತಂಗಡಿಯ ಮಾಸಿಕ ಸೇವಾ ಯೋಜನೆಯಂತೆ ಎಪ್ರಿಲ್ ತಿಂಗಳಲ್ಲಿ ಎರಡು ಸೇವಾ ಯೋಜನೆಯನ್ನು ಯಶಸ್ವಿಯಾಗಿ ತಲುಪಿದ್ದು 11 ತಿಂಗಳಲ್ಲಿ 28 ಸೇವಾ ಯೋಜನೆ ಮೂಲಕ 28 ಕುಟುಂಬಗಳಿಗೆ ಆಸರೆಯಾಗಿ ಯಶಸ್ಸಿನ ಹಾದಿಯಲ್ಲಿ ಮುನ್ನಡೆಯುತ್ತಿದೆ. ಇದೀಗ ತಾಲೂಕಿನ ದೊಡ್ಡ ಸಂಘಟನೆಯಾಗಿ ಬೆಳೆದಿರುವ ವೀರಕೇಸರಿ ತಂಡ ಪ್ರತಿಯೊಬ್ಬ ಸದಸ್ಯನ ನೆರವಿನಿಂದ ಪ್ರತಿ ತಿಂಗಳು ಸೇವಾಯೋಜನೆಗಳನ್ನು ಮಾಡಿ ಸಮಾಜಸೇವೆಯಲ್ಲಿ ಅಗ್ರಮಾನ್ಯ ಸಂಘಟನೆಯಾಗಿ ಮುನ್ನುಗ್ಗುತ್ತಿದೆ.

Puduvettu sethuve veekshane copyಪುದುವೆಟ್ಟು : ಪುದುವೆಟ್ಟು ಗ್ರಾಮದ ಬೊಲ್ಮನಾರು ಎಂಬಲ್ಲಿ ಅಂತಿಮ ಹಂತದ ನಿರ್ಮಾಣದಲ್ಲಿದ್ದು ಶೀಘ್ರವೇ ಜನೋಪಯೋಗಕ್ಕೆ ಅರ್ಪಣೆಯಾಗಲಿರುವ ಸುಮಾರು 7 ಕೋಟಿಗೂ ಅಧಿಕ ವೆಚ್ಚದ ನೂತನ ಸೇತುವೆ ಕಾಮಗಾರಿಯನ್ನು ಶಾಸಕ ವಸಂತ ಬಂಗೇರ ಎ. 13ರಂದು ವೀಕ್ಷಣೆ ನಡೆಸಿದರು.
ಗುತ್ತಿಗೆದಾರ ಹಾಗೂ ಇಂಜಿನಿಯರ್ ಜೊತೆ ಮಾತುಕತೆ ನಡೆಸಿ ಕಾಮಗಾರಿಯ ವಿವರ ಪಡೆದ ಅವರು ಮಳೆಗಾಲಕ್ಕೂ ಮುನ್ನವೇ ಕಾಮಗಾರಿ ಪೂರ್ತಿಗೊಳಿಸುವಂತೆ ಸೂಚನೆ ನೀಡಿದರು.
ಈ ಸಂದರ್ಭ ಉಜಿರೆ ಜಿ.ಪಂ. ಸದಸ್ಯೆ ನಮಿತಾ ಕೆ. ಪೂಜಾರಿ, ತಾ.ಪಂ. ಸದಸ್ಯ ವಿ.ಟಿ. ಸೆಬಾಸ್ಟಿಯನ್, ಎಪಿಎಂಸಿ ಸದಸ್ಯ ಅಬ್ದುಲ್ ಗಫೂರ್, ಪುದುವೆಟ್ಟು ಗ್ರಾ.ಪಂ. ಅಧ್ಯಕ್ಷೆ ನೀಲಮ್ಮ, ಉಪಾಧ್ಯಕ್ಷ ಬೊಮ್ಮಣ್ಣ ಗೌಡ ಮಠ, ನೆರಿಯ ಗ್ರಾ.ಪಂ. ಸದಸ್ಯ ಬಿ. ಅಶ್ರಫ್ ನೆರಿಯ, ಗುತ್ತಿಗೆದಾರ ರಿಯಾಝ್ ಪೆರಾಲ್ದರಕಟ್ಟೆ ಮೊದಲಾದವರು ಉಪಸ್ಥಿತರಿದ್ದರು.

belalu anantha padmanabha nagashila prathiste copyಬೆಳಾಲು : ಇಲ್ಲಿಯ ಅನಂತೋಡಿಯಲ್ಲಿ ಜೀರ್ಣೋದ್ಧಾರಗೊಳ್ಳುತ್ತಿರುವ ಶ್ರೀ ಅನಂತ ಪದ್ಮನಾಭ ದೇವಸ್ಥಾನದಲ್ಲಿ ಜೀರ್ಣೋದ್ಧಾರ ಸಮಿತಿಯ ಗೌರವಾಧ್ಯಕ್ಷರು ಧರ್ಮಸ್ಥಳದ ಡಾ| ಡಿ. ವೀರೇಂದ್ರ ಹೆಗ್ಗಡೆಯವರ ಆಶೀರ್ವಾದದೊಂದಿಗೆ ಉಜಿರೆ ಶ್ರೀ ಜನಾರ್ದನ ದೇವಸ್ಥಾನದ ಆಡಳಿತ ಮೊಕ್ತೇಸರ ಯು. ವಿಜಯ ರಾಘವ ಪಡ್ವೆಟ್ನಾಯರ ಮಾರ್ಗದರ್ಶನದಲ್ಲಿ ಬ್ರಹ್ಮಶ್ರೀ ಆಲಂಬಾಡಿ ಪದ್ಮನಾಭ ತಂತ್ರಿಗಳ ನೇತೃತ್ವದಲ್ಲಿ ಎ. 20ರಂದು(ಇಂದು) ಶ್ರೀ ನಾಗಶಿಲಾ ಪ್ರತಿಷ್ಠೆ ಜರಗಿತು. ಜೀರ್ಣೋದ್ಧಾರ ಸಮಿತಿಯ ಪದಾಧಿಕಾರಿಗಳು, ಭಜನಾ ಮಂಡಳಿಯ ಪದಾಧಿಕಾರಿಗಳು ಶ್ರೀಕ್ಷೇತ್ರ ಧ. ಗ್ರಾ. ಯೋಜನೆಯ ಒಕ್ಕೂಟದ ಪದಾಧಿಕಾರಿಗಳು, ಊರವರು, ಭಕ್ತಾಧಿಗಳು ಹೆಚ್ಚಿನ ಸಂಖ್ಯೆಯಲ್ಲಿ ಹಾಜರಿದ್ದರು.

Peranamanja sabhe prathapasimha copyಪಡಂಗಡಿ : ಮನಸ್ಸು ಸ್ಥಿರವಾದಾಗ ಜಗತ್ತಿನ ಸತ್ಯ ಅರಿವಾಗುತ್ತದೆ. ಇದಕ್ಕಾಗಿ ನಮ್ಮ ಹಿರಿಯರು ಇಂತಹ ಶ್ರದ್ಧಾಕೇಂದ್ರಗಳನ್ನು ನಿರ್ಮಿಸಿದ್ದಾರೆ. ಆತ್ಮ ಶಕ್ತಿಯನ್ನು ಜಾಗೃತ ಮಾಡುವ ಸ್ಥಳಗಳೇ ದೇವಸ್ಥಾನ, ದೈವಸ್ಥಾನಗಳಾಗಿವೆ ಎಂದು ಬಿಜೆಪಿ ಮಾಜಿ ಜಿಲ್ಲಾಧ್ಯಕ್ಷ, ನ್ಯಾಯವಾದಿ ಪ್ರತಾಪಸಿಂಹ ನಾಯಕ್ ಹೇಳಿದರು.
ಅವರು ಎ.13ರಂದು ಪಡಂಗಡಿ ಗ್ರಾಮದ ಪೆರಣಮಂಜು ಶ್ರೀ ಮೂಜಿಲ್ನಾಯ ಬ್ರಹ್ಮ ದೈವಸ್ಥಾನ ಬ್ರಹ್ಮಕಲಶೋತ್ಸವ ಮತ್ತು ಜಾತ್ರಾ ಮಹೋತ್ಸವದ ಅಂಗವಾಗಿ ನಡೆದ ಧಾರ್ಮಿಕ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಮನುಷ್ಯನಿಗೆ ಭೌತಿಕ ಸುಖ ಮುಖ್ಯವಲ್ಲ, ಆಧ್ಯಾತ್ಮಿಕ ಸುಖ ಮಾತ್ರ ನಮ್ಮನ್ನು ಮೋಕ್ಷದೆಡೆಗೆ ಸಾಗಿಸಬಹುದು. ಅಂತಹ ಸುಖವನ್ನು ನೀಡುವ ದೈವ, ದೇವರ ನಾಡಾದ ಭಾರತ ಒಂದು ದಿನ ಜಗತ್ತಿಗೆ ವಿಶ್ವಗುರುವಾಗಿ ನಿಲ್ಲಲಿದೆ. ಭಾರತದಲ್ಲಿ ಪ್ರಾಚೀನ ಕಾಲದಿಂದಲೂ ಇದ್ದ ಯೋಗ ಇಂದು ವಿಶ್ವದೆಲ್ಲೇಡೆ ಪಸರಿಸಿದೆ. ಭಗವಂತನ ಸಾಕ್ಷಾತ್ಕಾರಕ್ಕೆ ಯೋಗ ಸುಲಭ ಮಾರ್ಗವಾಗಿದೆ ಎಂದರು.
ಧಾರ್ಮಿಕ ಉಪನ್ಯಾಸ ನೀಡಿದ ಮೈಸೂರು ಮಾನಸ ಗಂಗೋತ್ರಿಯ ಪ್ರೊ| ಸುರೇಶ್ ಪಡಿವಾಳ್ ಮನಸ್ಸು, ವಚನ, ಕಾಯಗಳ ಜೊತೆ ಆತ್ಮ ಸಂಯೋಜನೆಗೊಂಡು ನಮ್ಮ ದೇಹದ ಚೇತನ ಕ್ರಿಯೆ ನಡೆದಾಗ ನಾವು ತಿಳಿಯುವ, ನೋಡುವ ಕ್ರಿಯೆ ನಡೆಯುತ್ತದೆ. ನಮ್ಮಲ್ಲಿರುವ ಅರಿಷಡ್ವರ್ಗಗಳು ನಿವಾರಣೆಯಾಗಲು ಇಂತಹ ಧಾರ್ಮಿಕ ಕೇಂದ್ರಗಳಿಗೆ ಬಂದು, ಧರ್ಮ ಕ್ರಿಯೆ ಮೂಲಕ ಆತ್ಮೋನ್ನತಿ ಮಾಡಿಕೊಳ್ಳಬೇಕು ಎಂದು ತಿಳಿಸಿದರು.
ಮುಖ್ಯ ಅತಿಥಿ ಬೆಳ್ತಂಗಡಿ ವಿನಾಯಕ ರೈಸ್‌ಮಿಲ್‌ನ ಮಾಲಕ ರೋ| ಶ್ರೀಕಾಂತ ಕಾಮತ್ ಮಾತನಾಡಿ, ಊರಿನ ದೇವಸ್ಥಾನ, ದೈವಸ್ಥಾನಗಳು ಜೀರ್ಣೋದ್ಧಾರ ಹೊಂದಿದಾಗ ಊರಿನ ಅಭಿವೃದ್ಧಿಯ ಜೊತೆ ಸಮಾಜದ ಪ್ರಗತಿಯಾಗುತ್ತದೆ. ನಾವು ನಂಬಿಕೊಂಡು ಬಂದಂತಹ ಶ್ರದ್ಧಾಕೇಂದ್ರಗಳು ಅವನತಿಗೊಂಡಾಗ ನಮ್ಮ ಜೀವನದ ಮೇಲೂ ಪರಿಣಾಮಗಳಾಗುತ್ತದೆ. ಅವುಗಳ ಪ್ರಗತಿಯಾದಾಗ ನಮ್ಮ ಜೀವನದಲ್ಲೂ ಉನ್ನತಿಯನ್ನು ಕಾಣಬಹುದು ಎಂದು ತಿಳಿಸಿದರು.
ಉದ್ಯಮಿ ಉದಯ ಶೆಟ್ಟಿ ಕಾಂತವರ ಮಾತನಾಡಿ ಇಂದಿನ ವೈಜ್ಞಾನಿಕ ಯುಗದಲ್ಲಿ ಮಕ್ಕಳಿಗೆ ನಮ್ಮ ಸಂಸ್ಕೃತಿ, ಧಾರ್ಮಿಕ ನಂಬಿಕೆಗಳ ಅರಿವು ಮೂಡಿಸುವುದು ಅವಶ್ಯ ಎಂದು ಹೇಳಿದರು. ಈ ಸಂದರ್ಭದಲ್ಲಿ ಕ್ಷೇತ್ರ ನಿರ್ಮಾಣಕ್ಕೆ ಸಹಕಾರ ನೀಡಿದ ಸ್ವಸ್ತಿಕ್ ಪಡಂಗಡಿಯ ಸಂಪತ್ ಕುಮಾರ್ ಕುಟುಂಬಸ್ಥರನ್ನು ಹಾಗೂ ನವೀನ್‌ಚಂದ್ ಬಲ್ಲಾಳ್, ಉದಯ ಶೆಟ್ಟಿ ಕಾಂತಾವರ ಇವರನ್ನು ದೇವಸ್ಥಾನದ ವತಿಯಿಂದ ಅಭಿನಂದಿಸಲಾಯಿತು. ಬ್ರಹ್ಮಕಲಶೋತ್ಸವ ಸಮಿತಿ ಅಧ್ಯಕ್ಷ ಪ್ರವೀಣ್‌ಚಂದ್ರ ಜೈನ್ ನಡಿಬೆಟ್ಟುಗುತ್ತು ಕಾರ್ಯಕ್ರಮ ನಿರ್ವಹಿಸಿದರು.
ವೇದಿಕೆಯಲ್ಲಿ ಆಡಳಿತ ಮೊಕ್ತೇಸರ ನೇಮಿರಾಜ್ ಶೆಟ್ಟಿ ನಡಿಬೆಟ್ಟು ಗುತ್ತು, ಬ್ರಹ್ಮಕಲಶೋತ್ಸವ ಸಮಿತಿ ಗೌರವಾಧ್ಯಕ್ಷ ಎಸ್. ಜಯರಾಮ ಶೆಟ್ಟಿ, ಪ್ರಧಾನ ಕಾರ್ಯದರ್ಶಿ ಶಾಂತಿರಾಜ ಜೈನ್ ಅಮೃತ, ಕಾರ್ಯದರ್ಶಿ ಜಗದೀಶ್ ಪೈ ಮೂಜುರು, ಕೋಶಾಧಿಕಾರಿ ವಾiನ ಬಾಳಿಗ ಉಪಿಸ್ಥಿತರಿದ್ದರು. ಸಂಜನಾ ಎಸ್.ಜೈನ್ ಇವರ ಪ್ರಾರ್ಥನೆ ಬಳಿಕ ಶ್ರೀಮತಿ ಉಷಾರಾಣಿ ನಡಿಬೆಟ್ಟುಗುತ್ತು ಸ್ವಾಗತಿಸಿದರು. ಪುಂಜಾಲಕಟ್ಟೆ ಶಾಲಾ ಶಿಕ್ಷಕ ಲ| ಧರಣೇಂದ್ರ ಕೆ. ಜೈನ್ ಕಾರ್ಯಕ್ರಮ ನಿರೂಪಿಸಿ, ಎಸ್‌ಕೆಡಿಆರ್‌ಡಿಪಿ ತುಮಕೂರಿನ ಯೋಜನಾಧಿಕಾರಿ ಪ್ರಶಾಂತ್ ಗೌಡ ವಂದಿಸಿದರು. ಬಳಿಕ ಕಲ್ಲಡ್ಕ ವಿಠಲ ನಾಯಕ್ ಬಳಗದವರಿಂದ ‘ಗೀತ ಸಾಹಿತ್ಯ ಸಂಭ್ರಮ’ನಡೆಯಿತು.

kulal kreedakuta samaropa copyವಿವಿಧ ಕ್ಷೇತ್ರದ ಸಾಧಕರಿಗೆ ಸಮ್ಮಾನ
ಕಾರ್ಯಕ್ರಮದಲ್ಲಿ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ಮೂರು ಮಂದಿ ಸಾಧಕರನ್ನು ಕ್ರೀಡಾ ಸಮಿತಿಯ ವತಿಯಿಂದ ವೇದಿಕೆಯಲ್ಲಿದ್ದ ಗಣ್ಯರು, ಅತಿಥಿಗಳು ಸಮ್ಮಾನಿಸಿದರು. ಎಂ.ಎ. ಪದವಿ ರಾಜ್ಯ ಶಾಸ್ತ್ರದಲ್ಲಿ ಪ್ರಥಮ ಸ್ಥಾನ ಪಡೆದ ಕು| ಸಚಿತಾ, ರೋಹಿತ್ ಕುಮಾರ್ ಬರಾಯ, ಹಾಗೂ ಕಂಬಳ ಕ್ಷೇತ್ರದ ಮೋಹನ್‌ಕುಮಾರ್ ಕಬ್ಬಿನ ಹಿತ್ಲು ಅವರನ್ನು ಶಾಲು ಹೊದಿಸಿ, ಸ್ಮರಣಿಕೆ ನೀಡಿ ಸಮಿತಿ ವತಿಯಿಂದ ಗೌರವಿಸಲಾಯಿತು.

ಗುರುವಾಯನಕೆರೆ : ಬೆಳ್ತಂಗಡಿ ತಾಲೂಕು ಮೂಲ್ಯರ ಯಾನೆ ಕುಂಬಾರರ ಸೇವಾ ಸಂಘ ಗುರುವಾಯನಕೆರೆ, ಕುಲಾಲ-ಕುಂಬಾರರ ಯುವ ವೇದಿಕೆ ಮತ್ತು ತಾಲೂಕು ಕ್ರೀಡಾ ಸಮಿತಿ, ಕುಲಾಲ ಕುಂಬಾರ ಸಾಂಸ್ಕೃತಿಕ ಸಮಿತಿ ಇದರ ಸಹಯೋಗದೊಂದಿಗೆ ತಾಲೂಕಿನ ಸ್ವಜಾತಿ ಬಾಂಧವರಿಗಾಗಿ ನಡೆದ ತಾಲೂಕು ಮಟ್ಟದ ಕುಲಾಲ ಕ್ರೀಡೋತ್ಸವದ ಸಮಾರೋಪ ಸಮಾರಂಭ ಎ.16ರಂದು ಕೆರೆ ಬಳಿಯ ಮೈದಾನದಲ್ಲಿ ನಡೆಯಿತು.
ಮುಖ್ಯ ಅತಿಥಿಗಳಾಗಿ ಭಾಗವಹಿಸಿದ ಬಂಟ್ವಾಳ ಯೋಜನಾ ಪ್ರಾಧಿಕಾರದ ಅಧ್ಯಕ್ಷ ಸದಾಶಿವ ಬಂಗೇರ ಮಾತನಾಡಿ, ಕುಲಾಲ-ಕುಂಬಾರ ಸಮಾಜ ಸಂಘಟನೆಗೆ ಇಂತಹ ಕ್ರೀಡಾ ಕೂಟಗಳು ಪ್ರೇರಣೆಯಾಗುವುದರ ಜೊತೆಗೆ ಯುವ ಸಮುದಾಯಕ್ಕೆ ತಮ್ಮ ಶಕ್ತಿಯ ಪ್ರದರ್ಶನಕ್ಕೆ ವೇದಿಕೆಯಾಗಿದೆ ಎಂದರು. ಯುವ ಸಂಪತ್ತು ಸಮಾಜದ ಉನ್ನತಿಗೆ ಉಪಯೋಗವಾಗಬೇಕು, ಸಂಘಟನೆಗೆ ಬಲ ಬರಬೇಕಾದರೆ ತಾಲೂಕಿನ ಸಮಾಜ ಬಾಂಧವರು ಇಂತಹ ಕಾರ್ಯಗಳಲ್ಲಿ ಕೈಜೋಡಿಸುವುದರೊಂದಿಗೆ ಸಮಾಜದ ಮುಂಚೂಣಿಯಲ್ಲಿ ಪ್ರಮುಖ ಪಾತ್ರವಹಿಸಬೇಕಾದ ಅಗತ್ಯವಿದೆ. ಈ ನಿಟ್ಟಿನಲ್ಲಿ ಮಾತೃ ಸಂಘದ ನೇತೃತ್ವದಲ್ಲಿ ರಾಜ್ಯ ಮಟ್ಟದ ಕಬಡ್ಡಿಯನ್ನು ಹಮ್ಮಿಕೊಳ್ಳುವ ಯೋಜನೆಯಿದ್ದು, ತಾಲೂಕಿನ ತಂಡವೂ ಇದರಲ್ಲಿ ಭಾಗವಹಿಸಬೇಕು ಎಂದು ಕರೆ ನೀಡಿದರು.
ಸಮಾರಂಭದ ಅಧ್ಯಕ್ಷತೆಯನ್ನು ತಾಲೂಕು ಕ್ರೀಡಾ ಸಮಿತಿ ಅಧ್ಯಕ್ಷ ತಿಲಕ್‌ರಾಜ್ ವಹಿಸಿ, ಕ್ರೀಡೋತ್ಸವದ ಯಶಸ್ವಿಗೆ ಸಹಕರಿಸಿದ ಎಲ್ಲರಿಗೂ ಕೃತಜ್ಞತೆ ಸಲ್ಲಿಸಿದರು. ಕುಲಾಲ-ಕುಂಬಾರರ ಯುವ ವೇದಿಕೆ ರಾಜ್ಯ ಸಂಘಟನಾ ಕಾರ್ಯದರ್ಶಿ ಹರೀಶ್ ಕಾರಿಂಜ ಸ್ವಾಗತಿಸಿ, ಯುವ ಸಮುದಾಯದ ಸಂಘಟನೆ ಹಾಗೂ ಬಲವರ್ಧನೆಗೆ ಈ ಕ್ರೀಡಾಕೂಟ ಪೂರಕವಾಗಿ ನಡೆಯುತ್ತಿದ್ದು, ಇಂದು ಅತ್ಯಂತ ಯಶಸ್ವಿಯಾಗಿ ಕಾರ್ಯಕ್ರಮ ನಡೆಸಿದ ಕ್ರೀಡಾ ಸಮಿತಿಯ ಪದಾಧಿಕಾರಿಗಳನ್ನು ಅಭಿನಂದಿಸಿದರು.
ಅತಿಥಿಗಳಾಗಿ ಕುಲಾಲ ಕುಂಬಾರರ ಯುವ ವೇದಿಕೆ ಬೆಳ್ತಂಗಡಿ ತಾಲೂಕು ಅಧ್ಯಕ್ಷ ಲೋಕೇಶ್ ಕಂಚಿಂಜ, ವಾಣಿಜ್ಯ ತೆರಿಗೆ ನಿರೀಕ್ಷಕ ಯತೀಶ್ ಸಿರಿಮಜಲು, ಶ್ರೀ ಕ್ಷೇ.ಧ.ಗ್ರಾ. ಯೋಜನೆ ಧರ್ಮಸ್ಥಳದ ಯೋಜನಾಧಿಕಾರಿ ಕಮಲಾಕ್ಷ, ಕುಲಾಲ ಕುಂಬಾರ ಯುವ ವೇದಿಕೆ ಬೆಳ್ತಂಗಡಿ ಇದರ ಕೋಶಾಧಿಕಾರಿ ಉಮೇಶ್ ಕುಲಾಲ್, ಸುದ್ದಿ ಪತ್ರಿಕೆಯ ಮುಖ್ಯ ವರದಿಗಾರ ಬಿ.ಎಸ್. ಕುಲಾಲ್ ಭಾಗವಹಿಸಿ ಶುಭ ಕೋರಿದರು. ಬೆಳಗ್ಗೆ 11ರಿಂದ ಸಂಜೆ 7.30ರ ವರೆಗೆ ಅತ್ಯಂತ ಯಶಸ್ವಿಯಾಗಿ ಹಾಗೂ ಶಿಸ್ತುಬದ್ಧವಾಗಿ ಕ್ರೀಡೋತ್ಸವ ನಡೆಯಿತು. ಈ ಸಂದರ್ಭದಲ್ಲಿ ಮಕ್ಕಳಿಗೆ, ಮಹಿಳೆಯರಿಗೆ ಹಾಗೂ ಪುರುಷರಿಗೆ ಹಮ್ಮಿಕೊಂಡ ವಿವಿಧ ಸ್ಪರ್ಧಾ ವಿಜೇತರಿಗೆ ಬಹುಮಾನಗಳನ್ನು ವಿತರಿಸಲಾಯಿತು.
ಕ್ರೀಡೋತ್ಸವದ ತೀರ್ಪುಗಾರರಾಗಿ, ಗಿರೀಶ್, ಮಿಥುನ್, ಗೋಪಾಲ್, ಶೀತಲ್ ಸಹಕರಿಸಿದರು. ಹರೀಶ್ ಕಾರಿಂಜ ಸ್ವಾಗತಿಸಿದರು. ಜಿಲ್ಲಾ ಸಂಘದ ಪ್ರಧಾನ ಕಾರ್ಯದರ್ಶಿ ಪ್ರಸಾದ್‌ಕುಮಾರ್ ಕಾರ್ಯಕ್ರಮ ನಿರೂಪಿಸಿ, ಯತೀಶ್ ಸಿರಿಮಜಲು ವಂದಿಸಿದರು. ಸಮಿತಿಯ ಉಪಾಧ್ಯಕ್ಷ ಜಗದೀಶ್ ಬರಾಯ, ಕಾರ್ಯದರ್ಶಿ ಪ್ರವೀಣ್ ಬರಾಯ, ಜೊತೆ ಕಾರ್ಯದರ್ಶಿ ಜಯಮತ್ ಕಟ್ಟೆ, ಮಿಥುನ್ ಮಡಂತ್ಯಾರು, ಕೋಶಾಧಿಕಾರಿ ಜೀವನ್ ಕುಲಾಲ್ ಸಿರಿಮಜಲು, ಸಂಘಟನಾ ಕಾರ್ಯದರ್ಶಿ ನವೀನ್ ಕುಲಾಲ್, ಮುಖೇಶ್ ಕುಲಾಲ್ ಬರಾಯ ಹಾಗೂ ಸಮಿತಿಯ ಎಲ್ಲಾ ಸದಸ್ಯರು ಉಪಸ್ಥಿತರಿದ್ದರು.

ಇಂದು ಕಾರ್ಮಿಕ ಸಂಘಟನೆಗಳಿಂದ ಮುಷ್ಕರಕ್ಕೆ ಕರೆ

ಇಂದು ಕಾರ್ಮಿಕ ಸಂಘಟನೆಗಳಿಂದ ಮುಷ್ಕರಕ್ಕೆ ಕರೆ

Friday, September 2nd, 2016 | Suddi Belthangady | no responses     ಬೆಳ್ತಂಗಡಿ : ಬೆಳಗ್ಗೆ 6ರಿಂದ ಸಂಜೆ 6ಗಂಟೆಯವರೆಗೆ ಕಾರ್ಮಿಕ ಸಂಘಟನೆಗಳಿಂದ… ಮುಂದೆ ಓದಿ

ಮುಖ್ಯಮಂತ್ರಿ ಸಾಂತ್ವನ ಹರೀಶ್ ಯೋಜನೆಯಡಿ ತಾಲೂಕಿನ 5 ಖಾಸಗಿ ಆಸ್ಪತ್ರೆಗಳಲ್ಲಿ ಸೌಲಭ್ಯ

Thursday, August 11th, 2016 | Suddi Belthangady | no responses ಬೆಳ್ತಂಗಡಿ : ರಾಜ್ಯ ಸರಕಾರದ ಮಹತ್ವಾಕಾಂಕ್ಷೆ ಯೋಜನೆಯಡಿ ಮುಖ್ಯಮಂತ್ರಿ ಸಾಂತ್ವನ ಹರೀಶ್ ಯೋಜನೆ… ಮುಂದೆ ಓದಿ

ಕೆಎಸ್‌ಆರ್‌ಟಿಸಿ ನೌಕರರ ಮುಷ್ಕರ ಹಿಂತೆಗೆತ

ಕೆಎಸ್‌ಆರ್‌ಟಿಸಿ ನೌಕರರ ಮುಷ್ಕರ ಹಿಂತೆಗೆತ

Thursday, July 28th, 2016 | Suddi Belthangady | no responses ಬೆಳ್ತಂಗಡಿ : ಜು.25ರಿಂದ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಕೆಎಸ್‌ಆರ್‌ಟಿಸಿ ನೌಕರರು ನಡೆಸುತ್ತಿ ರುವ… ಮುಂದೆ ಓದಿ

ಧರ್ಮಸ್ಥಳ : ಕೆಎಸ್‌ಆರ್‌ಟಿಸಿ ಧರ್ಮಸ್ಥಳ ಡಿಪೋದಲ್ಲಿ ನೌಕರರು ಕರ್ತವ್ಯಕ್ಕೆ ಹಾಜರಾಗದೆ ಮುಷ್ಕರ

Tuesday, July 26th, 2016 | Suddi Belthangady | no responses ಧರ್ಮಸ್ಥಳ :  ಜು.25 ಮತ್ತು ಜು.26 ರಂದು ಕೆಎಸ್‌ಆರ್‌ಟಿಸಿ ಧರ್ಮಸ್ಥಳ ಡಿಪೋದಲ್ಲಿ ನೌಕರರು… ಮುಂದೆ ಓದಿ

ಕೊಕ್ಕಡ : ಸರಕಾರಿ ಬಸ್ಸ್‌ಗಳ ನಡುವೆ ಮುಖಾ-ಮುಖಿ ಡಿಕ್ಕಿ

Saturday, June 4th, 2016 | Suddi Belthangady | no responses ಬೆಳ್ತಂಗಡಿ : ಕೊಕ್ಕಡ ಗ್ರಾಮದ ಪಾರ್ಪಿಕಲ್ ಬಳಿ ಸರಕಾರಿ ಬಸ್ಸ್‌ಗಳ ನಡುವೆ ಮುಖಾ-ಮುಖಿ… ಮುಂದೆ ಓದಿ

ನಿವೃತಿಯ ನಂತರವೂ ಕಂದಾಯ ಇಲಾಖೆಯಲ್ಲಿ ಕರ್ತವ್ಯ: ದೂರು

Monday, May 30th, 2016 | Suddi Belthangady | no responses ಬೆಳ್ತಂಗಡಿ: ಇಲ್ಲಿನ ಕಂದಾಯ ಇಲಾಖೆಯಲ್ಲಿ ಉಪತಹಶಿಲ್ದಾರರಾಗಿ ನಿವೃತಿ ಹೊಂದಿದ ಬಳಿಕವೂ ಇಲಾಖಾ ಕರ್ತವ್ಯಕ್ಕೆ… ಮುಂದೆ ಓದಿ

ಜೂ.೨ : ರಾಜ್ಯ ಸರಕಾರಿ ನೌಕರರ ಮುಷ್ಕರ

ಜೂ.೨ : ರಾಜ್ಯ ಸರಕಾರಿ ನೌಕರರ ಮುಷ್ಕರ

Friday, May 27th, 2016 | Suddi Belthangady | no responses ಬೆಳ್ತಂಗಡಿ : ಕರ್ನಾಟಕ ರಾಜ್ಯ ಸರಕಾರಿ ನೌಕರರ ಸಂಘವು ಕೇಂದ್ರ ಸರಕಾರಿ ನೌಕರರಿಗೆ… ಮುಂದೆ ಓದಿ

ಏ.೧ರಿಂದ ೩ ದಿನ ಮಾತ್ರ ಬ್ಯಾಂಕುಗಳಿಗೆ ರಜೆ

ಏ.೧ರಿಂದ ೩ ದಿನ ಮಾತ್ರ ಬ್ಯಾಂಕುಗಳಿಗೆ ರಜೆ

Monday, March 30th, 2015 | Suddi Belthangady | no responses ಮಾರ್ಚ್ ೩೧ರ ನಂತರ ಬ್ಯಾಂಕ್‌ಗಳಿಗೆ ಎಷ್ಟು ದಿನ ಸರಣೆ ರಜೆ ಇದೆ ?… ಮುಂದೆ ಓದಿ

ಅಪಘಾತ ರಹಿತ ಚಾಲಕರಿಗೆ ರೋಟರಿಯಿಂದ ಸನ್ಮಾನ

ಅಪಘಾತ ರಹಿತ ಚಾಲಕರಿಗೆ ರೋಟರಿಯಿಂದ ಸನ್ಮಾನ

Thursday, February 19th, 2015 | Suddi Belthangady | no responses ಧರ್ಮಸ್ಥಳ: ಚಾಲಕ ವೃತ್ತಿ ಬಹಳ ಜವಾಬ್ದಾರಿಯುತ ಹಾಗೂ ಜನಸೇವೆಯ ಅನುಪಮ ವೃತ್ತಿ. ಅಪಘಾತ… ಮುಂದೆ ಓದಿ

ಮಾಯಾ ಶಾಲೆಯಲ್ಲಿ ಸೈಕಲ್ ವಿತರಣೆ

ಮಾಯಾ ಶಾಲೆಯಲ್ಲಿ ಸೈಕಲ್ ವಿತರಣೆ

Saturday, January 24th, 2015 | Suddi Belthangady | no responses ಬೆಳಾಲು: ಸರಕಾರಿ ಉನ್ನತೀಕರಿಸಿದ ಹಿ.ಪ್ರಾ.ಮಾಯಾ ಇಲ್ಲಿ ೮ನೇ ತರಗತಿಯ ವಿದ್ಯಾರ್ಥಿಗಳಿಗೆ ಸೈಕಲ್ ವಿತರಣಾ… ಮುಂದೆ ಓದಿ

  ವಿಜಯ ಕ್ರೆಡಿಟ್ ಕೋ ಆಪರೇಟಿವ್ ಸೊಸೈಟಿ ಕಲ್ಲೇರಿ ಶಾಖೆ ಉದ್ಘಾಟನೆ

Thursday, January 22nd, 2015 | suddiblt | no responses ತಣ್ಣೀರುಪಂತ: ವಿಜಯ ಕ್ರೆಡಿಟ್ ಕೋ ಆಪರೇಟಿವ್ ಸೊಸೈಟಿ ಇದರ ೧೪ ನೇ ಶಾಖೆಯ… ಮುಂದೆ ಓದಿ

ಮುಂಡಾಜೆ ಸ.ಹಿ.ಪ್ರಾ.ಶಾಲಾ ಮಕ್ಕಳಿಂದ ಗ್ರಾಮ ಸಭೆ

Saturday, January 17th, 2015 | suddiblt | no responses ಮುಂಡಾಜೆ: ಗ್ರಾಮ ಪಂಚಾಯತ್ ವ್ಯಾಪ್ತಿಯ ಜಿ.ಪಂ.ಹಿ.ಪ್ರಾ.ಶಾಲೆಗಳಿಗೆ ಸಂಬಂಧಿಸಿದ ಮಕ್ಕಳ ಗ್ರಾಮ ಸಭೆಯನ್ನು ಮುಂಡಾಜೆ… ಮುಂದೆ ಓದಿ

ತಾಲೂಕಿನಲ್ಲಿ ೫ ನೂತನ ಗ್ರಾ.ಪಂ.ಗಳು ಅಸ್ತಿತ್ವಕ್ಕೆ ಒಟ್ಟು ಪಂಚಾಯತ್‌ಗಳ ಸಂಖ್ಯೆ ೪೮ಕ್ಕೆ ಏರಿಕೆ

Thursday, January 15th, 2015 | Suddi Belthangady | no responses ಬೆಳ್ತಂಗಡಿ : ಸರಕಾರದ ನೂತನ ಆದೇಶದಂತೆ ಜನಸಂಖ್ಯೆ ಆಧಾರಿಸಿ ದ. ಕನ್ನಡ ಜಿಲ್ಲೆಯಲ್ಲಿ… ಮುಂದೆ ಓದಿ

ಜ.೧೮, ೨೨: ಪಲ್ಸ್ ಪೋಲಿಯೋ  ಲಸಿಕಾ ಅಭಿಯಾನ

ಜ.೧೮, ೨೨: ಪಲ್ಸ್ ಪೋಲಿಯೋ ಲಸಿಕಾ ಅಭಿಯಾನ

Thursday, January 15th, 2015 | Suddi Belthangady | no responses ಬೆಳ್ತಂಗಡಿ: ತಾಲೂಕು ಆರೋಗ್ಯಾಧಿಕಾರಿಯವರ ನೇತೃತ್ವದಲ್ಲಿ ತಾಲೂಕಿನ ಎಲ್ಲಾ ಪ್ರಾಥಮಿಕ ಕೇಂದ್ರಗಳಲ್ಲಿ ಮತ್ತು ಗ್ರಾಮದ… ಮುಂದೆ ಓದಿ

ಮಲವಂತಿಗೆ: ತಡೆಹಿಡಿಯಲಾದ ಕಾಮಗಾರಿಗಳಿಗೆ ಮತ್ತೆ ಚಾಲನೆ ಪುನರ್ವಸತಿ, ಮೂಲಭೂತ ಅಭಿವೃದ್ಧಿಗೆ ಅನುದಾನದ ಕೊರತೆ ಇಲ್ಲ : ಡಿ.ಸಿ

Thursday, January 15th, 2015 | suddiblt | no responses ಮಲವಂತಿಗೆ : ನಕ್ಸಲ್ ಪೀಡಿತ ಪ್ರದೇಶಗಳ ಪುನರ್ವಸತಿ ಮತ್ತು ಅಭಿವೃದ್ಧಿ ಕಾಮಗಾರಿಗಳಿಗೆ ಅನುದಾನದ… ಮುಂದೆ ಓದಿ

ಮುಂಡಾಜೆ ಗ್ರಾಮ ಪಂಚಾಯತಿನಲ್ಲಿ ಸಾಮಾಜಿಕ ಪರಿಶೋಧನೆ

Tuesday, January 13th, 2015 | suddiblt | no responses ಬೆಳ್ತಂಗಡಿ: ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋeನೆಯಡಿ ೨೦೧೪-೧೫ರ ಸಾಲಿನಲ್ಲಿ… ಮುಂದೆ ಓದಿ

ಜ.೨ರಿಂದ ಶಿರಾಡಿ ಘಾಟಿ ರಸ್ತೆ ಸಂಚಾರ ಬಂದ್

ಜ.೨ರಿಂದ ಶಿರಾಡಿ ಘಾಟಿ ರಸ್ತೆ ಸಂಚಾರ ಬಂದ್

Friday, January 2nd, 2015 | suddiblt | no responses ಬೆಂಗಳೂರು – ಮಂಗಳೂರು ಪ್ರಮುಖ ಸಂಪರ್ಕದ ಕೊಂಡಿಯಾಗಿರುವ ಶಿರಾಡಿ ಘಾಟ್ ರಸ್ತೆ ಜ.೨… ಮುಂದೆ ಓದಿ

ಜ.೧ರಿಂದ ಎಲ್‌ಪಿಜಿ ನೇರ ನಗದು ವರ್ಗಾವಣೆ ಜಾರಿ ಬುಕ್ ಮಾಡಿದ ಹತ್ತು ದಿನದೊಳಗೆ ಗ್ಯಾಸ್ ವಿತರಣೆ : ಡಿ.ಸಿ

Thursday, January 1st, 2015 | suddiblt | no responses ಬೆಳ್ತಂಗಡಿ : ಗೃಹ ಬಳಕೆ ಅಡುಗೆ ಅನಿಲ ಸಿಲಿಂಡರ್‌ಗೆ ಸಹಾಯಧನ ಪಡೆಯುವ ಪರಿಷ್ಕೃತ… ಮುಂದೆ ಓದಿ

ಮನೆ ನಂಬರ್‌ಗಾಗಿ ಧರಣಿ  ಸಂಧಾನ ಸಫಲ: ಪ್ರತಿಭಟನೆ ಅಂತ್ಯ

Friday, December 26th, 2014 | suddiblt | no responses ಬೆಳ್ತಂಗಡಿ: ಉಜಿರೆಯ ಅರಳಿಯ ನಿವಾಸಿಗಳಿಗೆ ಮನೆ ನಂಬರ್‌ಗಾಗಿ ಮತ್ತು ಇತರ ಬೇಡಿಕೆಗಳನ್ನು ಮುಂದಿಟ್ಟು… ಮುಂದೆ ಓದಿ

ಬೆಳ್ತಂಗಡಿ: ನ.ಪಂ.ಸಭೆಯಲ್ಲಿ ಕಣ್ಣೀರಿಟ್ಟ ಮಹಿಳಾ ಸಿಬಂದಿ

Saturday, December 20th, 2014 | suddiblt | no responses ಬೆಳ್ತಂಗಡಿ : ಡಿ.18ರಂದು ನಡೆದ ನಗರ ಪಂಚಾಯತ್ ಸಾಮಾನ್ಯ ಸಭೆಯಲ್ಲಿ ಸ್ಥಾಯಿ ಸಮಿತಿ… ಮುಂದೆ ಓದಿ

ನಾಯ್ದಗುರಿ ಸಂತ್ರಸ್ತರಿಗೆ ಸರಕಾರಿ ಭೂಮಿ  ವಾರದೊಳಗೆ ಹಣಕಾಸು ಪರಿಹಾರ: ಜಿಲ್ಲಾಧಿಕಾರಿ

Thursday, December 18th, 2014 | suddiblt | no responses ಕುತ್ಲೂರು : ಕುದುರೆಮುಖ ರಾಷ್ಟ್ರೀಯ ಉದ್ಯಾನವನ ವ್ಯಾಪ್ತಿ ಪ್ರದೇಶದಿಂದ ಸ್ವಯಂಪ್ರೇರಿತವಾಗಿ ಒಕ್ಕಲೆದ್ದು ಹೊರಬರುವವರಿಗೆ… ಮುಂದೆ ಓದಿ

ಶಿಬಾಜೆ ಅಂಗನವಾಡಿಗೆ ಜಿಲ್ಲಾಧಿಕಾರಿಗಳ ಭೇಟಿ:ಇತ್ಯರ್ಥವಾಗದ ವಿವಾದ: ಕಾರ್ಯಕರ್ತೆಯಿಂದ ದೂರು

Thursday, December 11th, 2014 | suddiblt | no responses ಶಿಬಾಜೆ: ಶಿಬಾಜೆ ಮೊಂಟೆತ್ತಡ್ಕ ಅಂಗನವಾಡಿಯಲ್ಲಿ ಕಾರ್ಯಕರ್ತೆ ಮತ್ತು ಪೋಷಕರ ನಡುವೆ ಕಳೆದ ಕೆಲ… ಮುಂದೆ ಓದಿ

ಮೂವರು ಪೊಲೀಸ್ ಅಧಿಕಾರಿಗಳ ಅಮಾನತು ಆದೇಶ ರದ್ದು

Friday, November 28th, 2014 | suddiblt | no responses      ಬೆಳ್ತಂಗಡಿ: ದಕ್ಷಿಣ ಕನ್ನಡ ಜಿಲ್ಲಾ ಎಸ್ಪಿ ಡಾ.ಶರಣಪ್ಪ ಮತ್ತು ಬೆಳ್ತಂಗಡಿ ಇನ್‌ಸ್ಪೆಕ್ಟರ್ ಲಿಂಗಪ್ಪ… ಮುಂದೆ ಓದಿ

ಎಟಿಎಂ ಬಳಕೆ 5 ಸಲ ಮೀರಿದರೆ ಶುಲ್ಕ

ಎಟಿಎಂ ಬಳಕೆ 5 ಸಲ ಮೀರಿದರೆ ಶುಲ್ಕ

Thursday, November 6th, 2014 | suddiblt | no responses ತಿಂಗಳಿಗೆ 5 ಸಲಕ್ಕಿಂತ ಹೆಚ್ಚಿನದಾಗಿ ಎಟಿಎಂಗಳನ್ನು ಬಳಸಿದರೆ, ಪ್ರತಿಸಲ ವ್ಯವಹಾರ ಶುಲ್ಕವಾಗಿ 20… ಮುಂದೆ ಓದಿ

ಬಡ ಕುಟುಂಬಗಳ ಬಿಪಿಎಲ್ ಪಡಿತರ ಚೀಟಿ ರದ್ದು ಸಂಕಷ್ಟದಲ್ಲಿ ಫಲಾನುಭವಿಗಳು     ಪರ್ಯಾಯ ವ್ಯವಸ್ಥೆಗೆ ತಾ.ಪಂ ಸದಸ್ಯರ ಒತ್ತಾಯ

Thursday, November 6th, 2014 | suddiblt | no responses ಬೆಳ್ತಂಗಡಿ: ಬೆಳ್ತಂಗಡಿ ತಾಲೂಕಿನಲ್ಲಿ ಯಾವುದೇ ಕಾರಣ ನೀಡದೆ ಬಡ ಕುಟುಂಬಗಳ ಬಿ.ಪಿ.ಎಲ್ ಪಡಿತರ… ಮುಂದೆ ಓದಿ

ಸಿಂಡಿಕೇಟ್ ಬ್ಯಾಂಕ್‌ನ ರಾಜೇಂದ್ರ ಕಾಮತ್ ಸೇವಾ ನಿವೃತ್ತಿ

Thursday, November 6th, 2014 | suddiblt | no responses ಉಜಿರೆ: ಸಿಂಡಿಕೆಟ್ ಬ್ಯಾಂಕಿನಲ್ಲಿ ಮೆನೇಜರ್ ಆಗಿ ಸೇವೆ ಸಲ್ಲಿಸುತ್ತಿದ್ದ ಉಜಿರೆಯ ರಾಜೇಂದ್ರ ಕಾಮತ್… ಮುಂದೆ ಓದಿ

ಮತ್ತೆ ಮುರಿದುಬಿದ್ದ ಗ್ಯಾಸ್ ಪೈಪ್‌ಲೈನ್ ಪಂಪ್‌ಹೌಸ್ ಜಾಗದ ಮಾತುಕತೆ ಜಿಲ್ಲಾಧಿಕಾರಿಯಿಂದ ೪ ಜಾಗಗಳ ಪರಿಶೀಲನೆ: ರೈತರಿಗೆ ಕನಿಷ್ಠ ತೊಂದರೆಯಾಗುವ ಜಾಗದ ಆಯ್ಕೆ: ಡಿ.ಸಿ.ಯಿಂದ ಭರವಸೆ

Thursday, July 10th, 2014 | suddiblt | no responses ಬೆಳ್ತಂಗಡಿ: ನೆರಿಯ ಗ್ರಾಮದಲ್ಲಿ ಗ್ಯಾಸ್ ಪೈಪ್‌ಲೈನ್‌ನ ಪಂಪ್‌ಹೌಸ್‌ಗೆ ಭೂಸ್ವಾಧೀನ ನಡೆಸಲು ಸರಕಾರ ಉದ್ಧೇಶಿಸಿ… ಮುಂದೆ ಓದಿ

ಬೀಡಿ ಕಾರ್ಮಿಕರ ಮಕ್ಕಳ ವಿದ್ಯಾರ್ಥಿ ವೇತನಕ್ಕೆ ಅರ್ಜಿ

Wednesday, July 9th, 2014 | suddiblt | no responses ಬೆಳ್ತಂಗಡಿ: ಬೀಡಿ ಕಾರ್ಮಿಕರ ಮಕ್ಕಳಿಗೆ ವಿದ್ಯಾರ್ಥಿ ವೇತನದ ೨೦೧೪-೨೦೧೫ ನೇ ಸಾಲಿನ ಶೈಕ್ಷಣಿಕ… ಮುಂದೆ ಓದಿ

ಅಕ್ರಮ- ಸಕ್ರಮ ತಾಲೂಕು ಸಮಿತಿ ರಚನೆ

ಅಕ್ರಮ- ಸಕ್ರಮ ತಾಲೂಕು ಸಮಿತಿ ರಚನೆ

Thursday, March 6th, 2014 | suddiblt | no responses ಬೆಳ್ತಂಗಡಿ: ಬೆಳ್ತಂಗಡಿ ವಿಧಾನಸಭಾ ಕ್ಷೇತ್ರದ ಬಗರ್ ಹುಕುಂ ಸಾಗುವಳಿ ಸಕ್ರಮೀಕರಣ ಸಮಿತಿಯನ್ನು ರಚಿಸಿ… ಮುಂದೆ ಓದಿ

ಆಧಾರ್ ಕಾರ್ಡ್ ನೋಂದಣೆ

ಆಧಾರ್ ಕಾರ್ಡ್ ನೋಂದಣೆ

Wednesday, February 19th, 2014 | suddiblt | no responses ಬೆಳ್ತಂಗಡಿ: ತಾಲೂಕಿನಲ್ಲಿ ದ್ವಿತೀಯ ಹಂತದ ಆಧಾರ್ ಕಾರ್ಡ್ ನೋಂದಣಿ ಪ್ರಗತಿಯಲ್ಲಿದ್ದು ಲಾಯಿಲ ಗ್ರಾ.ಪಂ… ಮುಂದೆ ಓದಿ

ಬೆಳ್ತಂಗಡಿ : ಗುರುವಾಯನಕೆರೆ ಉಪಕೇಂದ್ರದಲ್ಲಿ ತುರ್ತು ಕಾಮಗಾರಿಯನ್ನು ಕೈಗೊಳ್ಳಬೇಕಾದ ಹಿನ್ನಲೆಯಲ್ಲಿ ಎ. 26 ಮತ್ತು 28ರಂದು ಗುರುವಾಯನಕೆರೆ ಉಪಕೇಂದ್ರದಿಂದ ಹೊರಹೊಮ್ಮುವ ವೇಣೂರು ಮತ್ತು ಆರಂಬೋಡಿ ಫೀಡರ್‌ಗಳಲ್ಲಿ ಬೆಳಿಗ್ಗೆ 9.00ರಿಂದ ಸಂಜೆ 5.00ರ ತನಕ ವಿದ್ಯುತ್ ನಿಲುಗಡೆಯಾಗಲಿದೆ ಎಂದು ಮೆಸ್ಕಾಂ ಪ್ರಕಟಣೆಯಲ್ಲಿ ತಿಳಿಸಿದೆ.

beo1

beoಬೆಳ್ತಂಗಡಿ: ಶಿಕ್ಷಕರ ವಿವಿಧ ಬೇಡಿಕೆಗಳನ್ನು ಮುಂದಿಟ್ಟು ಅಖಿಲ ಭಾರತ ಪ್ರಾಥಮಿಕ ಶಿಕ್ಷಕರ ಫೆಡರೇಶನ್ ವತಿಯಿಂದ ರಾಷ್ಟ್ರಾಧ್ಯಂತ ಹೋರಾಟಗಳನ್ನು ನಡೆಸಲಾಗುತ್ತಿದ್ದು ಅದರ ಎರಡನೇ ಹಂತದ ಕಾರ್ಯಕ್ರಮವಾಗಿ ಎ. 25 ರಂದು ದೇಶಾಧ್ಯಂತ ಎಲ್ಲಾ ಶಿಕ್ಷಣ ಇಲಾಖೇ ಕಚೇರಿ ಮುಂದೆ ಶಿಕ್ಷಕರ ಏಕದಿನ ಮೌನ ಧರಣಿ ನಡೆಯಲಿದ್ದು ಈ ಹಿನ್ನೆಲೆಯಲ್ಲಿ ಬೆಳ್ತಂಗಡಿ ಬಿಇಒ ಕಚೇರಿ ಎದುರು ಕೂಡ ನಡೆಯಿತು.
7ನೇ ವೇತನ ಆಯೋಗದ ಶಿಫಾರಸ್ಸುಗಳನ್ನು ಎಲ್ಲಾ ರಾಜ್ಯಗಳಲ್ಲಿ ಜಾರಿಗೆ ತರಬೇಕು, ನೂತನ ಪಿಂಚಣಿ ಯೋಜನೆ ರದ್ದುಗೊಳಿಸಿ ಹಳೇ ಪಿಂಚಣಿ ಯೋಜನೆ ಜಾರಿಗೆ ತರಬೇಕು, ಪ್ರಾಥಮಿಕ ಶಿಕ್ಷಣ ಮಂಡಳಿ ರಚಿಸಬೇಕು, ರಾಜ್ಯದ ಎಲ್ಲಾ ಶಾಲೆಗಳಲ್ಲಿ ಪೂರ್ವ ಪ್ರಾಥಮಿಕ ಶಿಕ್ಷಣ ಎಲ್‌ಕೆಜಿ, ಯುಕೆಜಿ ಆರಂಭಿಸಬೇಕು, ಶಾಲೆಗೊಬ್ಬ ಮುಖ್ಯೋಪಾಧ್ಯಾಯ ನೇಮಕ, ಶಿಕ್ಷಕ ಶಿಕ್ಷಕಿ ವಿದ್ಯಾರ್ಥಿ ಅನುಪಾತ ಮಾಡಬೇಕು ಎಂಬಿತ್ಯಾಧಿ ಪ್ರಮುಖ ಬೇಡಿಕೆಗಳು ಈ ಬಾರಿಯ ಹೋರಾಟದಲ್ಲಿತ್ತು.

beet rokars copyಬೆಳ್ತಂಗಡಿ: ಬೀಟ್ ರಾಕರ‍್ಸ್ ಡ್ಯಾನ್ಸ್ ಅಕಾಡೆಮಿ ಬೆಳ್ತಂಗಡಿ ಇದರ 6ನೇ ವರ್ಷದ ವಾರ್ಷಿಕೋತ್ಸವದ ಪ್ರಯುಕ್ತ ಎ. 22 ರಂದು ಬೆಳ್ತಂಗಡಿ ಮಾರಿಗುಡಿ ಮೈದಾನದಲ್ಲಿ ಬೆಳಕು ಶಬ್ಧತರಂಗದ ಅದ್ಭುತ ನೃತ್ಯ ಸಂಗೀತ ಸೆಲೆಬ್ರೆಟಿ ನೈಟ್ ವಿಶೇಷ ಕಾರ್ಯಕ್ರಮ, ರಾಜ್ಯ ಮಟ್ಟದ ಡ್ಯಾನ್ಸ್ ಸ್ಪರ್ಧೆಯೊಂದಿಗೆ ನಡೆಯಿತು.
ಅಧ್ಯಕ್ಷತೆಯನ್ನು ಕರಾವಳಿ ಕರ್ನಾಟಕ ಡ್ಯಾನ್ಸ್ ಅಕಾಡಮಿ ಯೂನಿಯನ್ ಅಧ್ಯಕ್ಷ ರಾಜೇಶ್ ಕಣ್ಣೂರು ವಹಿಸಿದ್ದರು.
ಮುಖ್ಯ ಅತಿಥಿಗಳಾಗಿ ಪಟ್ಟಣ ಪಂಚಾಯತ್ ಅಧ್ಯಕ್ಷ ಮುಗುಳಿ ನಾರಾಯಣ ರಾವ್, ಅನುಗ್ರಹ ಟ್ರೈನಿಂಗ್ ಕಾಲೇಜಿನ ಪ್ರಾಂಶುಪಾಲ ತಲ್‌ಹತ್ ಎಂ. ಜಿ, ಜೇಸಿಐ ಬೆಳ್ತಂಗಡಿ ಮಂಜುಶ್ರೀ ಅಧ್ಯಕ್ಷ ಸಂತೋಷ್ ಪಿ ಕೋಟ್ಯಾನ್, ಹೈಕೋರ್ಟ್ ನ್ಯಾಯವಾದಿ ಹರೀಶ್ ಪೂಂಜ, ಸುವರ್ಣ ಸಾಂಸ್ಕೃತಿಕ ಪ್ರತಿಷ್ಠಾನದ ಅಧ್ಯಕ್ಷ ಸಂಪತ್ ಬಿ ಸುವರ್ಣ, ತುಳು ಚಲನಚಿತ್ರ ನಿರ್ಮಾಪಕ ಹರೀಶ್ ರಾವ್, ಸಕಲೇಶ್‌ಪುರದ ರಿದಂ ಕೀಪಝ್ ಡ್ಯಾನ್ಸ್ ಅಕಾಡಮಿ ಅಧ್ಯಕ್ಷ ಕೃಷ್ಣೇ ಗೌಡ, ರಾಜ್ಯ ಸರಕಾರಿ ನೌಕರರ ಸಂಘದ ಸದಸ್ಯ ಕೆ ಧರಣೇಂದ್ರ ಕುಮಾರ್ ಜೈನ್, ಹೋಲಿ ರಿಡೀಮರ್ ಆಂಗ್ಲ ಮಾಧ್ಯಮ ಶಾಲೆ ಬೆಳ್ತಂಗಡಿಯ ಮುಖ್ಯೋಪಾಧ್ಯಾಯ ರೆ. ಫಾ ಅನಿಲ್ ಪ್ರಕಾಶ್ ಡಿಸಿಲ್ವ ಇವರುಗಳು ಶುಭ ಕೋರಿದರು.

beet rokars karate copyಬೆಳ್ತಂಗಡಿ: ಬೀಟ್ ರಾಕರ‍್ಸ್ ಡ್ಯಾನ್ಸ್ ಅಕಾಡಮಿ ಮತ್ತು ಶ್ರೀ ಸಾಯಿ ಕಾಸ್ಟ್ಯೂಮ್ಸ್ ವರ್ಲ್ಡ್ ಎಂಬ ಹೆಸರಿನಲ್ಲಿ ಬೆಳ್ತಂಗಡಿಯಲ್ಲಿ ಕಳೆದ ೬ ವರ್ಷಗಳಿಂದ ಕಾರ್ಯಾಚರಿಸುತ್ತಿರುವ ಸಂಸ್ಥೆಯ ವತಿಯಿಂದ ಮುಂದಕ್ಕೆ ಅನುಭವಿ ಕರಾಟೆ ಶಿಕ್ಷಕರಿಂದ ಕರಾಟೆ ತರಬೇತಿ ನೀಡಲು ಮತ್ತು ಕಲಾಸಕ್ತ ವಿದ್ಯಾರ್ಥಿಗಳಿಗೆ ನಾಟಕ ಮತ್ತು ರಂಗ ಅಭಿನಯ ತರಬೇತಿ ನೀಡುವ ವಿಭಾಗವು ಎ. 22 ರಂದು ಉದ್ಘಾಟನೆಗೊಂಡಿತು.
ಜೇಸಿಐ ಬೆಳ್ತಂಗಡಿ ಮಂಜುಶ್ರೀ ಇದರ ಪೂರ್ವಾಧ್ಯಕ್ಷ, ಸಂಘಟಕ ಹಾಗೂ ಉದ್ಯಮಿ ಪ್ರಮೋದ್ ಆರ್ ನಾಯಕ್ ಉದ್ಘಾಟನೆ ನೆರವೇರಿಸಿದರು. ಈ ಸಂದರ್ಭ ಜೇಸಿಐ ವಲಯಾಧ್ಯಕ್ಷ ಚಿದಾನಂದ ಇಡ್ಯ, ಸುದ್ದಿ ಬಿಡುಗಡೆ ವ್ಯವಸ್ಥಾಪಕ ಮಂಜುನಾಥ ರೈ, ಬೀಟ್ ರಾಕರ‍್ಸ್ ಡ್ಯಾನ್ಸ್ ಅಕಾಡಮಿ ಮುಖ್ಯಸ್ಥ ಜಿತೇಶ್ ಕುಮಾರ್, ಕರಾಟೆ ತರಬೇತುದಾರರು ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.

arasinamakki7

arasinamakki4 copy

arasinamakki5

arasinamakki6

arasinamakki

arasinamakki1

arasinamakki2

arasinamakki3ಅರಸಿನಮಕ್ಕಿ ಶ್ರೀನಿವಾಸ ಕಲ್ಯಾಣೋತ್ಸವವು ವಿಜೃಂಭಣೆಯಿಂದ ಎ. 22ರಂದು ನಡೆಯಿತು.

barengayaನಿಡ್ಲೆ : ನಿಸರ್ಗ ಯುವಜನೇತರ ಮಂಡಲ(ರಿ) ಬರೆಂಗಾಯ ಹಾಗೂ ದ.ಕ ಜಿಲ್ಲಾ ಅಮೆಚ್ಯೂರ್ ಜಿಲ್ಲಾ ಕಬಡ್ಡಿ ಅಸೋಸಿಯೇಷನ್ (ರಿ) ಇದರ ಸಹಯೋಗದೊಂದಿಗೆ ದ.ಕ, ಉಡುಪಿ, ಕಾಸರಗೊಡು ಜಿಲ್ಲೆಯ ೭೦ಕೆ.ಜಿ ವಿಭಾಗದ ಪುರುಷರ ಅಂತರ್ ಜಿಲ್ಲಾ ಮಟ್ಟದ ಹೊನಲು ಬೆಳಕಿನ ಕಬಡ್ಡಿ ಪಂದ್ಯಾಟವು ಹಿ.ಪ್ರಾ ಶಾಲೆ ಬರೆಂಗಾಯದಲ್ಲಿ ಎ. 22ರಂದು ಜರಗಿತು.
ನಿಡ್ಲೆ ಗ್ರಾ.ಪಂ ಅಧ್ಯಕ್ಷರಾದ ಶ್ರೀಮತಿ ಶುಭ ದೇವಧರ್ ಅಧ್ಯಕ್ಷತೆ ವಹಿಸಿದ್ದರು. ಬೆಂಗಳೂರು ಹೈಕೋರ್ಟ್ ನ್ಯಾಯಾವಾದಿ ಹರೀಶ್ ಪೂಂಜ ಕಾರ್ಯಕ್ರಮ ಉದ್ಘಾಟಿಸಿದರು. ಮುಖ್ಯ ಅತಿಥಿಗಳಾಗಿ ಬೆಳ್ತಂಗಡಿ ಸಹಾಯಕ ಯುವ ಸಬಲೀಕರಣ ಮತ್ತು ಕ್ರೀಡಾಧಿಕಾರಿ ಪ್ರಭಾಕರ ನಾರಾವಿ, ಕಳೆಂಜ ಗ್ರಾ.ಪಂ ಸದಸ್ಯೆ ಶ್ರೀಮತಿ ಸುಶೀಲ ವಸಂತ ಗೌಡ, ನಿಡ್ಲೆ ಗ್ರಾ.ಪಂ ಉಪಾಧ್ಯಕ್ಷ ರುಕ್ಮಯ ಪೂಜಾರಿ ಪೊರ್ಕಳ, ನಿಡ್ಲೆ ಗ್ರಾ.ಪಂ ಸದಸ್ಯರಾದ ಹರೀಶ್ ಪೊಂರ್ದಿಲ, ಶ್ರೀಮತಿ ಲಲಿತಾ, ಬರೆಂಗಾಯ ನಿಸರ್ಗ ಯುವ ಜನೇತರ ಮಂಡಲ ಅಧ್ಯಕ್ಷರಾದ ಪುನೀತ್ ಪೊಂರ್ದಿಲ, ಬರೆಂಗಾಯ ಶಾಲಾ ಎಸ್.ಡಿ.ಎಂ.ಸಿ ಅಧ್ಯಕ್ಷ ಕೃಷ್ಣ ಕುಮಾರ್ ಕಾಟ್ಲ, ಬರೆಂಗಾಯ ಜ್ಯೋತಿ ಹಳೆ ವಿದ್ಯಾರ್ಥಿ ಸಂಘದ ಅಧ್ಯಕ್ಷ ಹೇಮಂತ್ ಗೌಡ ಕಜೆ, ಬರೆಂಗಾಯ ಶ್ರೀಕೃಷ್ಣ ಜನ್ಮಾಷ್ಟಮಿ ಸಮಿತಿ ಅಧ್ಯಕ್ಷ ಪ್ರವೀಣ್ ಹೆಬ್ಬರ್ ಪೊಂರ್ದಿಲ ಆಗಮಿಸಿದ್ದರು. ವೇದಿಕೆಯಲ್ಲಿ ತಾ.ಪಂ ಮಾಜಿ ಉಪಾಧ್ಯಕ್ಷ ವಿಷ್ಣು ಮರಾಠೆ, ಸನ್ಮಾನಗೊಳ್ಳಲಿದ್ದ ಬರೆಂಗಾಯ ಹಿ.ಪ್ರಾ ಶಾಲಾ ಮುಖ್ಯೋಪಾಧ್ಯಾಯ ಗೋಪಾಲ, ಮೂಡಬಿದ್ರೆ ಆಳ್ವಾಸ್ ಶಿಕ್ಷಣ ಸಂಸ್ಥೆಯ ಕನ್ನಡ ಉಪನ್ಯಾಸಕರಾದ ಚಂದ್ರಶೇಖರ್ ಗೌಡ ಕಜೆ ಉಪಸ್ಥಿತರಿದ್ದರು.

mundajeಮುಂಡಾಜೆ : ಯಂಗ್ ಚಾಲೆಂಜರ‍್ಸ್ ಕ್ರೀಡಾ ಸಂಘ ಮುಂಡಾಜೆ ಇದರ ವತಿಯಿಂದ ಆರ್.ಎನ್. ಭಿಡೆ ಸ್ಮರಣಾರ್ಥ ಇಂದು(ಎ.22) ಓವರ್ ಆರ್ಮ್ ಕ್ರಿಕೆಟ್ ಪಂದ್ಯಾಟದ ಉದ್ಘಾಟನಾ ಸಮಾರಂಭವು ಭಿಡೆ ನಾರಾಯಣ ಭಟ್ ಕ್ರೀಡಾಂಗಣ ಜೂನಿಯರ್ ಕಾಲೇಜು ಮುಂಡಾಜೆಯಲ್ಲಿ ನಡೆಯಿತು.
ಕಾರ್ಯಕ್ರಮದ ಉದ್ಘಾಟನೆಯನ್ನು ನ್ಯಾಯವಾದಿ ಶೈಲೇಶ್ ಠೋಸರ್ ನೆರವೇರಿಸಿದರು. ಅಧ್ಯಕ್ಷತೆಯನ್ನು ಯಂಗ್ ಚಾಲೆಂಜರ‍್ಸ್ ಕ್ರೀಡಾ ಸಂಘದ ಅಧ್ಯಕ್ಷ ಆಶ್ರಫ್ ಆಲಿಕುಂಞ ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ಮುಂಡಾಜೆ ಗ್ರಾ.ಪಂ ಸದಸ್ಯರುಗಳಾದ ನಾರಾಯಣ ಗೌಡ ದೇವಸ್ಯ, ಚೆನ್ನಕೇಶವ ನಾಯ್ಕ, ಸುರೇಶ್ ಹೆಗ್ಡೆ, ಗಣೇಶ್ ಬಂಗೇರ, ಮುಂಡಾಜೆ ಶತಾಬ್ದಿ ವಿದ್ಯಾಲಯ ಸಮಿತಿ ಜೊತೆ ಕಾರ್ಯದರ್ಶಿ ಅರವಿಂದ ಹೆಬ್ಬಾರ್ ಭಾಗವಹಿಸಿದ್ದರು. ಯಂಗ್ ಚಾಲೆಂಜರ‍್ಸ್ ಕ್ರೀಡಾ ಸಂಘದ ಸಂಚಾಲಕ ನಾಮದೇವ ರಾವ್, ಶಶಿಧರ ಠೋಸರ್ ಉಪಸ್ಥಿತರಿದ್ದರು.

charmadi.jpg1

charmadiಚಾರ್ಮಾಡಿ : ಗುರುವಾರ ಮಧ್ಯರಾತ್ರಿ ಮಂಗಳೂರಿನಿಂದ ಭದ್ರಾವತಿ ಕಡೆ ತೆರಳುತ್ತಿದ್ದ ಡಿಸೇಲ್ ಟ್ಯಾಂಕರ್ ಚಾರ್ಮಾಡಿ ಘಾಟಿಯಲ್ಲಿ ಪ್ರಪಾತಕ್ಕೆ ಬಿದ್ದು,  ಜಖಂಗೊಂಡಿದೆ. ಚಾಲಕನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.

gerukatte

gerukatte1ಗೇರುಕಟ್ಟೆ : ಕೋಳಿ ಸಾಗಾಟ ಮಾಡುತ್ತಿದ್ದ ಪಿಕಪ್ ವಾಹನ ಮಗುಚಿ ಬಿದ್ದ ಘಟನೆ ಗೇರುಕಟ್ಟೆಯ ರೇಶ್ಮೆ ಕ್ರಾಸ್ ಬಳಿ ನಡೆದಿದೆ.

Bisu Jathre Photo copy

Bisu Jathre Photo copy1

Bisu Jathre Photo copy2ಉಜಿರೆ: ವಿಷು ಜಾತ್ರೆ ಸಂದರ್ಭ ಧರ್ಮಸ್ಥಳದಲ್ಲಿ ಗುರುವಾರ ರಾತ್ರಿ ಬ್ರಹ್ಮರಥೋತ್ಸವ ನಡೆಯಿತು.
ರಾಜ್ಯ ವಿವಿಧ ಭಾಗಗಳಿಂದ ಬಂದ ಸುಮಾರು ಇನ್ನೂರು ಮಂದಿ ಕಲಾವಿದರು ಶಂಖ, ತಾಳ, ಬ್ಯಾಂಡ್, ಚೆಂಡೆ ವಾದನದ ಮೂಲಕ ಕಲಾ ಸೇವೆ ಮಾಡಿದರು. ಸಹಸ್ರಾರು ಮಂದಿ ಭಕ್ತಾದಿಗಳು ರಥೋತ್ಸವ ವೀಕ್ಷಿಸಿ ಧನ್ಯತೆ ಪಡೆದರು.

¸swacchthe

sw

WhatsApp Image 2017-04-21 at 11.18ಗುರುವಾಯನಕೆರೆಯಲ್ಲಿ ಎಸ್.ಡಿ.ಎಂ ವಿದ್ಯಾರ್ಥಿಗಳಿಂದ ಹಾಗೂ ಊರ ಸಂಘ ಸಂಸ್ಥೆಗಳಿಂದ ಸ್ವಚ್ಛತಾ ಕಾರ್ಯಕ್ರಮವು ಇಂದು ನಡೆಯಿತು.

adike mara yanthra copyಉಜಿರೆ: ಇಲ್ಲಿನ ಎಸ್‌ಡಿಎಂ ಪಾಲಿಟೆಕ್ನಿಕ್ ಕಾಲೇಜಿನ ವಿದ್ಯಾರ್ಥಿಗಳು ಕೃಷಿ ಕೆಲಸಕ್ಕೆ ಪೂರಕವಾಗಿರುವ ಮತ್ತು ಅತ್ಯಂತ ಕಡಿಮೆ ದರದಲ್ಲಿ ಬಳಕೆ ಮಾಡಬಹುದಾದ ರೀತಿಯ ಕೆಲವೊಂದು ಯಂತ್ರೋಪಕರಣಗಳನ್ನು ತಮ್ಮದೇ ಕಲ್ಪನೆಯಲ್ಲಿ ಆವಿಷ್ಕರಿಸಿದ್ದು ಉತ್ತಮ ಮಾರುಕಟ್ಟೆ ಕೇಂದ್ರೀಕರಿಸುವ ಎಲ್ಲಾ ಅರ್ಹತೆಗಳನ್ನು ಪಡೆದುಕೊಂಡಿದೆ.
ವಿದ್ಯಾರ್ಥಿಗಳು ತಯಾರುಗೊಳಿಸಿದ ಕೆಲವೊಂದು ಆವಿಷ್ಕಾರಗಳಲ್ಲಿ ಅಡಿಕೆ ಮರಕ್ಕೆ ಹತ್ತುವ ಮತ್ತು ಔಷಧಿ ಸಿಂಪಡಿಸುವ ಯಂತ್ರವೂ ಒಂದು.
ಈ ಪ್ರಾಜೆಕ್ಟ್‌ಗೆ ಕೇವಲ 10 ಸಾವಿರ ರೂ. ಗಳು ಮಾತ್ರ ಖರ್ಚು ತಗುಲಲಿದೆ.
ಆವಿಷ್ಕಾರ ತಂಡದ ಸದಸ್ಯ ವಿದ್ಯಾರ್ಥಿಗಳು ಯಾರ‍್ಯಾರು?
ಭರತ್ ಎಚ್, ಅಕಾಶ್ ಕೆ, ಅಶ್ವಿನಿ, ದರ್ಶನ್ ಕುಮಾರ್, ದಿವ್ಯಾ ಎಸ್, ಮತ್ತು ಉತ್ತಮ್ ಎನ್ ಇವರ ತಂಡ ಈ ಆವಿಷ್ಕಾರ ನಡೆಸಿ ಯಶಸ್ಸು ಸಾಧಿಸಿದೆ. ಇವರಿಗೆ ಅವನೀಶ್ ಅವರು ಮಾರ್ಗದರ್ಶನ ನೀಡಿದ್ದಾರೆ. ಈ ಯಂತ್ರವು ಸುಲಭವಾಗಿ ಅಡಿಕೆ ಮರ ಹತ್ತಲು ಮತ್ತು ಅಡಿಕೆ ಬೆಳೆಗೆ ಕೀಟ ನಾಶಕ ಸಿಂಪಡಿಸಲು ಸಹಾಯಕವಾಗಿ ಕಾರ್ಯನಿರ್ವಹಿಸುತ್ತದೆ.
ಉಪಯೋಗಗಳು:
ಇಂದಿನ ದಿನಗಳಲ್ಲಿ ಅಡಿಕೆ ಮರಕ್ಕೆ ಮದ್ದನ್ನು ಸಿಂಪಡಿಸುವುದು ಕಷ್ಟವಾಗಿದೆ. ಅದನ್ನು ಅರಿತು ಈ ಯಂತ್ರ ಸಿದ್ದಪಡಿಸಲಾಗಿದೆ. 12 ವೋಲ್ಟ್ ವೈಪರ್ ಮೋಟಾರು ಬಳಸಿಕೊಂಡು ಮೇಲಕ್ಕೆ ಹತ್ತುವ ಅತ್ಯಂತ ಸರಳ ಮಾದರಿಯಿಂದ ರೂಪಿತವಾಗಿದೆ. ಕೇಲವ ಎರಡೇ ನಿಮಿಷದಲ್ಲಿ ಅಡಿಕೆ ಮರ ಏರುವ ಸಾಮರ್ಥ್ಯ ಹೊಂದಿರುವ ಈ ಯಂತ್ರ ಡಿ.ಸಿ ಮೋಟರನ್ನು ಬಳಸಿ ಲಂಬವಾಗಿ ಮತ್ತು ಅಡ್ಡವಾಗಿ, ಒಂದು ಅಡಿಕೆ ಮರ ಕೇಂದ್ರೀಕರಿಸಿ ಪಕ್ಕದ 7-8 ಮರಗಳಿಗೆ ಕೀಟನಾಶಕ ಸಿಂಪಡಿಸುವ ಸಾಮರ್ಥ್ಯ ಹೊಂದಿದೆ.
ಸೆಲ್ಫ್ ಲುಕ್ಕಿಂಗ್ ನಿಯಮದ ಪ್ರಕಾರ ಕಾರ್ಯನಿರ್ವಹಿಸುವ ಈ ಯಂತ್ರವು ಪರಿಸರ ಸ್ನೇಹಿಯಾಗಿದ್ದು 12 ವೋಲ್ಟೇಜ್ ಬ್ಯಾಟರಿ ಮೂಲಕವೂ ಕಾರ್ಯನಿರ್ವಹಿಸುವ ಕ್ಷಮತೆ ಹೊಂದಿದೆ. ಕೇವಲ ಎರಡೇ ಸೆಕುಂಡುಗಳಲ್ಲಿ ಮರಕ್ಕೆ ಯಂತ್ರವನ್ನು ಅಳವಡಿಸಬಹುದಾಗಿದೆ. ಯಂತ್ರಕ್ಕೆ ನೆಲದಿಂದ ಕೀಟ ನಾಶಕವನ್ನು ಪವರ್ ಸ್ಪ್ರೇಯರ್ ಅಥವಾ ಗಟರ್ ಪಂಪ್‌ನ ಮೂಲಕ ಪೈಪ್‌ಮೂಲಕ ಕಳುಹಿಸಿಕೊಡಬಹುದಾಗಿದೆ. ಇದರ ನಿಯಂತ್ರಣವನ್ನು ಕೇವಲ ಒಬ್ಬನೇ ವ್ಯಕ್ತಿ ಮಾಡಬಹುದಾಗಿದ್ದು, ಅಡಿಕೆ ಕೃಷಿ ಕ್ಷೇತ್ರದಲ್ಲಿ ಬಹಳ ಬೇಡಿಕೆಯ ಕೂಲಿ ಕಾರ್ಮಿಕರ ಕೊರತೆಯ ಜಾಗವನ್ನು ಈ ಯಂತ್ರ ತುಂಬುವುದರಲ್ಲಿ ಸಂದೇಹವಿಲ್ಲ.
ಇದೇ ಯಂತ್ರದ ಮೂಲಕ ಮುಂದಕ್ಕೆ ಗೊನೆ ಕೀಳುವುದು ಮತ್ತು ಕಂಪ್ಯೂಟರೀಕೃತವಾಗಿ ಅಭಿವೃದ್ಧಿ ಪಡಿಸುವ ಉದ್ಧೇಶವಿದೆ ಎಂದು ಪ್ರಾಧ್ಯಾಪಕರಾದ ಅವನೀಶ್ ಅವರು ತಿಳಿಸುತ್ತಾರೆ.

thrisha copyಕನ್ಯಾಡಿ 1 ಇಲ್ಲಿಯ ಕಂಬಳದಡ್ಡ ಮನೆಯ ಸುರೇಶ್ ಗೌಡ ಮತ್ತು ಸತ್ಯ ದಂಪತಿಯ ಪುತ್ರಿ ತ್ರಿಶಾಳ 3ನೇ ವರ್ಷದ ಹುಟ್ಟುಹಬ್ಬವನ್ನು ಎ. 17ರಂದು ಆಚರಿಸಲಾಯಿತು.

bhavish copyಚಿಬಿದ್ರೆ ಗ್ರಾಮದ ಪೆರಿಯಡ್ಕ ಬರಮೇಲು ಮನೆ ಲಕ್ಷ್ಮಣ ಗೌಡ ಮತ್ತು ವೇದಾವತಿ ದಂಪತಿ ಪುತ್ರ ಭವಿಷ್‌ನ 5ನೇ ವರ್ಷದ ಹುಟ್ಟುಹಬ್ಬವನ್ನು ಎ. 12ರಂದು ಆಚರಿಸಲಾಯಿತು.

samyuk copyಲಾಯಿಲ ಗ್ರಾಮದ ಸುರುಳಿ ಸ್ಫೂರ್ತಿ ನಿಲಯ ಗಣೇಶ್ ಶೆಟ್ಟಿ ಮತ್ತು ವಿಶಾಲಾಕ್ಷಿ ದಂಪತಿ ಪುತ್ರ ಸಮ್ಯಕ್ ಜಿ. ಶೆಟ್ಟಿ ಯ ಮೊದಲನೇ ವರ್ಷದ ಹುಟ್ಟುಹಬ್ಬ ಎ. 11ರಂದು ಜರಗಿತು.

baby copyಬಜಿರೆ ಗ್ರಾಮದ ಹೊಸಪಟ್ಣ ಹೊಸವಕ್ಲು ಮಜಲು  ದಯಾನಂದ ಪೂಜಾರಿ ಮತ್ತು ಶ್ರೀಮತಿ ವನಿತಾ ದಂಪತಿಯ ಪುತ್ರ ಧನಿಷ್  ಈತನ ಪ್ರಥಮ ವರ್ಷದ ಹುಟ್ಟುಹಬ್ಬವು ಎ.16ರಂದು ಜರುಗಿತು.

umesh-shailaja copyಬೆಳಾಲು ಗ್ರಾಮದ ಪೊಯ್ಯೋದಡ್ಡ ಮನೆ ಬಾಬು ಗೌಡರ ಪುತ್ರ ಉಮೇಶ ಪಿ. ಗೌಡ ರವರ ವಿವಾಹವು ಹುಣ್ಸೆಕಟ್ಟೆ ಶ್ರೀಮತಿ ಕಮಲಾ ಮತ್ತು  ಕೆ. ಎನ್ ಮಂಜುನಾಥ ಗೌಡರ ಪುತ್ರಿ ಶೈಲಜಾ ರೊಂದಿಗೆ ಎ. 10ರಂದು ಬೆಳ್ತಂಗಡಿ ಸಿ.ವಿ.ಸಿ  ಹಾಲ್‌ನಲ್ಲಿ ಜರುಗಿತು.

add1

ಬೆಳ್ತಂಗಡಿ : ಗುರುವಾಯನಕೆರೆ ಉಪಕೇಂದ್ರದಲ್ಲಿ ತುರ್ತು ಕಾಮಗಾರಿಯನ್ನು ಕೈಗೊಳ್ಳಬೇಕಾದ ಹಿನ್ನಲೆಯಲ್ಲಿ ಎ. 22ರಂದು ಗುರುವಾಯನಕೆರೆ ಉಪಕೇಂದ್ರದಿಂದ ಹೊರಹೊಮ್ಮುವ ವೇಣೂರು ಮತ್ತು ಆರಂಬೋಡಿ ಫೀಡರ್‌ಗಳಲ್ಲಿ ಬೆಳಿಗ್ಗೆ 9.00ರಿಂದ ಸಂಜೆ 5.00ರ ತನಕ ವಿದ್ಯುತ್ ನಿಲುಗಡೆಯಾಗಲಿದೆ ಎಂದು ಮೆಸ್ಕಾಂ ಪ್ರಕಟಣೆಯಲ್ಲಿ ತಿಳಿಸಿದೆ.

venur vikasana shibira samaropa copyವೇಣೂರು: ಶಿಬಿರಗಳಲ್ಲಿ ತತ್ವ ಸಿದ್ದಾಂತ ಮುಖ್ಯ. ಆದ್ಯಾತ್ಮಿಕ ಚಿಂತನೆಯನ್ನು ವಿಕಸನಗೊಳಿಸುವುದು ಇದರ ಮೂಲ ಧ್ಯೇಯವಾಗಬೇಕೆ ಹೊರತು ಮನೋರಂಜನೆ ಆಗಬಾರದು. ಇಂತಹ ಧಾರ್ಮಿಕ ಶಿಬಿರಗಳಲ್ಲಿ ಮಠ, ಮಠಾಧೀಶರ ಪರಿಚಯ ಮೂಡಿಸುವುದ ಜೊತೆಗೆ ಅಲ್ಲಿಗೆ ಭೇಟಿ ನೀಡುವುದಕ್ಕೆ ಪ್ರೇರಣೆಯಾಗಲಿ ಎಂದು ಮೂಡಬಿದಿರೆ ಜೈನ ಮಠದ ಭಾರತ ಭೂಷಣ ಶ್ರೀ ಭಟ್ಟಾರಕ ಚಾರುಕೀರ್ತಿ ಪಂಡಿತಾಚಾರ್ಯವರ್ಯ ಮಹಾ ಸ್ವಾಮೀಜಿ ನುಡಿದರು.
ಅವರು ಎ.16 ರಂದು ವೇಣೂರು ಶ್ರೀ ಬಾಹುಬಲಿ ಸಭಾಭವನದಲ್ಲಿ ಇಲ್ಲಿಯ ಬಾಹುಬಲಿ ಯುವಜನ ಸಂಘ ಮತ್ತು ಶ್ರೀ ದಿಗಂಬರ ತೀರ್ಥ ಕ್ಷೇತ್ರ ಸಮಿತಿ ಆಶ್ರಯದಲ್ಲಿ ಜರಗಿದ ಜೈನ ಬಾಲಕ-ಬಾಲಕಿಯರ 17ನೇ ವರ್ಷದ ಧಾರ್ಮಿಕ ಹಾಗೂ ವ್ಯಕ್ತಿತ್ವ ವಿಕಸನ ಶಿಬಿರದ ಸಮಾರೋಪ ಕಾರ್ಯಕ್ರಮದಲ್ಲಿ ಆಶೀರ್ವಚನ ನೀಡಿದರು. ಮಠಗಳ ಬಗ್ಗೆ ಗುರು ಹಾಗೂ ಪರಂಪರೆಯನ್ನು ವಿರೋಧ ಕಟ್ಟಿಕೊಂಡು ಅಂತರ್ಜಾಲಗಳಲ್ಲಿ ಚರ್ಚೆ ನಡೆಯುತ್ತಿರುವುದು ಬೇಸರ ಸಂಗತಿ. ಮಕ್ಕಳಿಗೆ ಮಠ, ಮಠಾಧೀಶರ ಪರಿಚಯ ಮಾಡಿಸಬೇಕು. ಇದು ಅವರು ಧರ್ಮ ಮಾರ್ಗದಲ್ಲಿ ನಡೆಯಲು ಸಹಕಾರಿಯಾಗಲಿದೆ ಎಂದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದ ಉಜಿರೆ ಶ್ರೀ ಧ.ಮಂ. ಪ.ಪೂ. ಕಾಲೇಜಿನ ಪ್ರಾಂಶುಪಾಲ ಪ್ರೊ| ಎನ್. ದಿನೇಶ್ ಚೌಟ ಮಾತನಾಡಿ, ಭಾಷೆಯ ಬಗ್ಗೆ ಸಂವಹನಶೀಲತೆ ಬೆಳೆಸಿ ಕೊಂಡವರಿಗೆ ಸಮಾಜದಲ್ಲಿ ಮಾನ್ಯತೆ ಜಾಸ್ತಿ. ಅದು ಇಂತಹ ಶಿಬಿರಗಳು ತಿಳಿಸುತ್ತದೆ. ಇಂದು ಜೈನ ಧರ್ಮೀಯರು ಬೇರೆ ಧರ್ಮದತ್ತ ವಾಲುತ್ತಿದ್ದಾರೆ. ಇದಕ್ಕಾಗಿ ಮಕ್ಕಳಿರುವಾಗಲೇ ಅವರಿಗೆ ಜೈನ ಧರ್ಮ ತತ್ವ ಸಿದ್ದಾಂತಗಳನ್ನು ಮೂಡಿಸಬೇಕಾಗಿದೆ ಎಂದರು.
ಶಿಬಿರದ ನಿರ್ವಾಹಕ ಮುನಿರಾಜ ರೇಂಜಾಳ ಮಾತನಾಡಿ, ಜೈನರ ಬಗೆಗಿನ ತತ್ವ ಸಿದ್ದಾಂತಗಳನ್ನು ಇಂತಹ ಧಾರ್ಮಿಕ ಶಿಬಿರಗಳಿಂದ ಮಾತ್ರ ಕಲಿಯಲು ಸಾಧ್ಯ ಎಂದರು.
ಮುಖ್ಯ ಅತಿಥಿಗಳಾಗಿ ಮಾಣಿ ಶ್ರೀ ಮಹಾವೀರ ಇಂಡಸ್ಟ್ರೀಸ್‌ನ ಮಹಾವೀರ ಪ್ರಸಾದ್, ಮೂಡಬಿದಿರೆ ಪಂಡಿತ್ ರೆಸಾರ್ಟ್‌ನ ರಜನಿಲಾಲ್ ಗೋಯಲ್ ಜೈನ್, ಶಿಬಿರದ ಸಂಚಾಲಕ ಜ್ಞಾನಚಂದ್ರ, ವೇಣೂರು ಜೈನ ತೀರ್ಥಕ್ಷೇತ್ರ ಸಮಿತಿ ಕಾರ್ಯದರ್ಶಿ ಯಂ. ವಿಜಯರಾಜ ಅಧಿಕಾರಿ, ಶ್ರೀ ಬಾಹುಬಲಿ ಯುವಜನ ಸಂಘದ ಅಧ್ಯಕ್ಷ ಶರ್ಮಿತ್ ಕುಮಾರ್ ವೇದಿಕೆಯಲ್ಲಿದ್ದರು.
ಸಂಪನ್ಮೂಲ ವ್ಯಕ್ತಿಗಳಾಗಿ ಯೋಗರಾಜ ಶಾಸ್ತ್ರಿ ಕಾರ್ಕಳ, ನವೀನ್ ಕುಮಾರ್ ಜೈನ್, ಉದಯ ಕುಮಾರ್, ಮಂಜುಳಾ, ಅಜಿತ್ ಕುಮಾರ್, ನಿರಂಜನ ಎ., ಶಾಂತಿರಾಜ ಜೈನ್, ಮಹಾವೀರ ಜೈನ್, ಕು| ಅಶ್ವಿನಿ ಜೈನ್ ಶಿಬಿರವನ್ನು ನಡೆಸಿಕೊಟ್ಟರು. ೪ ದಿನಗಳ ಕಾಲ ಜರಗಿದ ಶಿಬಿರದಲ್ಲಿ ೭೨ ಶಿಬಿರಾರ್ಥಿಗಳು ಪಾಲ್ಗೊಂಡಿದ್ದರು.
ಕು| ಪೂರ್ಣಿಮಾ ಬಳಗ ಪ್ರಾರ್ಥಿಸಿ ಪ್ರಮೋದ್ ಕುಮಾರ್ ಬಜಿರೆ ಪ್ರಾಸ್ತಾವಿಕವಾಗಿ ಮಾತನಾಡಿ ಸ್ವಾಗತಿಸಿದರು. ನಿರಂಜನ ಅಳಿಯೂರು ಕಾರ್ಯಕ್ರಮ ನಿರೂಪಿಸಿ, ಸುಧೀರ್ ಕುಮಾರ್ ಬಜಿರೆ ವಂದಿಸಿದರು.

chandrashekar - pavithra copyಲಾಯಿಲ ಗ್ರಾಮದ ಕುಂಠಿನಿ ಶ್ರೀ ದೇವಿಪ್ರಸಾದ್ ಮನೆ ಶ್ರೀಮತಿ ವಸಂತಿ ಮತ್ತು ಬಿ. ಗಿರಿಧರ ಶೆಟ್ಟಿ ಯವರ ಪುತ್ರಿ ಪವಿತ್ರರವರ ವಿವಾಹವು ಮಜಲೋಡಿ ಶ್ರೀದುರ್ಗಾ ನಿಲಯ ಸಾಂತಪ್ಪ ಶೆಟ್ಟಿಯವರ ಪುತ್ರ ಚಂದ್ರಶೇಖರ ರೊಂದಿಗೆ ಎ. 10ರಂದು ಬೆಳ್ತಂಗಡಿ ಶ್ರೀ ಗುರುನಾರಾಯಣ ವಾಣಿಜ್ಯ ಸಂಕೀರ್ಣದ ಆಶಾ ಸಾಲಿಯಾನ್ ಕಲ್ಯಾಣ ಮಂಟಪದಲ್ಲಿ ಜರಗಿತು.

dinesh-rekha copyಬೆಳಾಲು ಗ್ರಾಮದ ಪೊಯ್ಯೋದಡ್ಡ ಮನೆ ಬಾಬು ಗೌಡರ ಪುತ್ರ ದಿನೇಶ್ ಪಿ. ಗೌಡ ರವರ ವಿವಾಹವು ಕೊಯ್ಯೂರು ಗ್ರಾಮದ ಕಲ್ಲೇರಿ ಮನೆ ಕುಶಾಲಪ್ಪ ಗೌಡರ ಪುತ್ರಿ ರೇಖಾ ರೊಂದಿಗೆ ಎ. 10ರಂದು ಬೆಳ್ತಂಗಡಿ ಸಿ.ವಿ.ಸಿ ಹಾಲ್‌ನಲ್ಲಿ ಜರುಗಿತು.

Rajesh news copyವೇಣೂರು : ವೇಣೂರು ವಲಯದ ಅಳದಂಗಡಿ ಶಾಖೆಯಲ್ಲಿ ಉಪವಲಯ ಅರಣ್ಯಾಧಿಕಾರಿಯಾಗಿ ಕಳೆದ 5 ವರ್ಷಗಳಿಂದ ಸೇವೆ ಸಲ್ಲಿಸುತ್ತಿದ್ದ ರಾಜೇಶ್ ಇವರಿಗೆ ವಲಯ ಅರಣ್ಯಾಧಿಕಾರಿಯಾಗಿ ಭಡ್ತಿ ನೀಡಿ ರಾಯಚೂರು ಜಿಲ್ಲೆಯ ಲಿಂಗಸಗೂರು ವಲಯಕ್ಕೆ ನಿಯುಕ್ತಿಗೊಳಿಸಲಾಗಿದೆ.
2007ರಲ್ಲಿ ಬೆಳ್ತಂಗಡಿ ವನ್ಯಜೀವಿ ವಲಯದಲ್ಲಿ ಉಪ ವಲಯ ಅರಣ್ಯಾಧಿಕಾರಿಯಾಗಿ ಸೇವೆಗೆ ಸೇರಿದ ರಾಜೇಶ್ ಅವರು 5 ವರ್ಷಗಳ ಸೇವೆ ಬಳಿಕ 2012ರಲ್ಲಿ ವೇಣೂರು ವಲಯದ ಅಳದಂಗಡಿ ಶಾಖೆಗೆ ವರ್ಗಾವಣೆಗೊಂಡು ಸೇವೆ ಸಲ್ಲಿಸುತ್ತಿದ್ದರು. ಕಳೆದ 6ತಿಂಗಳ ಹಿಂದೆ ಅಳದಂಗಡಿ ಶಾಖೆ ಜೊತೆಗೆ ನಾರಾವಿ ಶಾಖೆಯ ಹೆಚ್ಚುವರಿ ಪ್ರಭಾರವನ್ನು ವಹಿಸಿಕೊಂಡು ಉತ್ತಮವಾಗಿ ಕರ್ತವ್ಯವನ್ನು ನಿರ್ವಹಿಸಿದ್ದರು.

vijay kumar-ashwini copyಕಲ್ಮಂಜ ಗ್ರಾಮದ ಬಳ್ಳಿದಡ್ಡ ಸುರೇಶ್ ಬಂಗೇರರ ಪುತ್ರಿ ಅಶ್ವಿನಿಯವರ ವಿವಾಹ ಮಂಡೂರು ಗ್ರಾಮದ ಹೇಡ್ಯದಡ್ಡ ನಾಣ್ಯಪ್ಪ ಪೂಜಾರಿಯವರ ಪುತ್ರ ವಿಜಯ್ ಕುಮಾರ್ ರೊಂದಿಗೆ ಎ. 10ರಂದು ಉಜಿರೆ ಎಸ್.ಕೆ ಮೆಮೋರಿಯಲ್ ಹಾಲ್‌ನಲ್ಲಿ ಜರಗಿತು.

reshma copyಬಜಿರೆ ಗ್ರಾಮದ ಹೊಸಪಟ್ಣ  ಪೊಂಗರ್‌ತ್ಯಾರು ಮನೆ ಶ್ಯಾಮ ಹೆಗ್ಡೆಯವರ ಪುತ್ರಿ ರೇಶ್ಮಾರವರ ವಿವಾಹವು ನಾರಾವಿ ಪಾಣಾಲು ದರ್ಖಾಸು ಸೋಮಯ್ಯ ಹೆಗ್ಡೆಯವರ ಪುತ್ರ ರಘುಚಂದ್ರರೊಂದಿಗೆ   ನಾರಾವಿ ಧರ್ಮಶ್ರೀ ಸಭಾಭವನದಲ್ಲಿ ಎ.10ರಂದು ಜರುಗಿತು.

Veerakesari sahayadana copyಕನ್ಯಾಡಿ ||: ವೀರಕೇಸರಿ ಧರ್ಮಸ್ಥಳ ಬೆಳ್ತಂಗಡಿ ಹಾಗೂ ಶ್ರೀ ಶನೈಶ್ಚರ ಪೂಜಾ ಸಮಿತಿ ಕನ್ಯಾಡಿ || ಇದರ ಸಹಯೋಗದೊಂದಿಗೆ ಎ.15ರಂದು ಹಿ.ಪ್ರಾ ಶಾಲಾ ಮೈದಾನ ಕನ್ಯಾಡಿ || ಇಲ್ಲಿ ಜರುಗಿದ 6ನೇ ವರ್ಷದ ಸಾರ್ವಜನಿಕ ಶ್ರೀ ಶನೈಶ್ಚರ ಪೂಜೋತ್ಸವ ಮತ್ತು ವಿವಿಧ ಕ್ಷೇತ್ರಗಳ ಸಾಧಕರಿಗೆ ಸನ್ಮಾನ ಕಾರ್ಯಕ್ರಮದಲ್ಲಿ 27ನೇ ಸೇವಾಯೋಜನೆಯಾಗಿ ನಿಡ್ಲೆ ಸ.ಹಿ.ಪ್ರಾ. ಶಾಲೆಯ 9ನೇ ತರಗತಿ ವಿದ್ಯಾರ್ಥಿ ಪದ್ಮರಾಜ್ ಇವರು ಮಾನಸಿಕ ಅನಾರೋಗ್ಯದಿಂದ ಬಳಲುತ್ತಿದ್ದು ಇವರ ಚಿಕಿತ್ಸೆಗೆ ರೂ. 15 ಸಾವಿರದ ಚೆಕ್ಕನ್ನು ಆತನ ತಾಯಿಗೆ ಹಸ್ತಾಂತರಿಸಲಾಯಿತು. ಇದೇ ಸಂದರ್ಭದಲ್ಲಿ 28ನೇ ಯೋಜನೆಯಾಗಿ ತನ್ನ ಎರಡು ಕಣ್ಣುಗಳನ್ನು ಕಳೆದುಕೊಂಡಿರುವ ಪೂರ್ಣೇಶ ಅವರ ಚಿಕಿತ್ಸೆಗೆ 15ಸಾವಿರ ರೂಗಳ ಚೆಕ್ಕನ್ನು ನೀಡಲಾಯಿತು. ವೀರಕೇಸರಿ ಬೆಳ್ತಂಗಡಿಯ ಮಾಸಿಕ ಸೇವಾ ಯೋಜನೆಯಂತೆ ಎಪ್ರಿಲ್ ತಿಂಗಳಲ್ಲಿ ಎರಡು ಸೇವಾ ಯೋಜನೆಯನ್ನು ಯಶಸ್ವಿಯಾಗಿ ತಲುಪಿದ್ದು 11 ತಿಂಗಳಲ್ಲಿ 28 ಸೇವಾ ಯೋಜನೆ ಮೂಲಕ 28 ಕುಟುಂಬಗಳಿಗೆ ಆಸರೆಯಾಗಿ ಯಶಸ್ಸಿನ ಹಾದಿಯಲ್ಲಿ ಮುನ್ನಡೆಯುತ್ತಿದೆ. ಇದೀಗ ತಾಲೂಕಿನ ದೊಡ್ಡ ಸಂಘಟನೆಯಾಗಿ ಬೆಳೆದಿರುವ ವೀರಕೇಸರಿ ತಂಡ ಪ್ರತಿಯೊಬ್ಬ ಸದಸ್ಯನ ನೆರವಿನಿಂದ ಪ್ರತಿ ತಿಂಗಳು ಸೇವಾಯೋಜನೆಗಳನ್ನು ಮಾಡಿ ಸಮಾಜಸೇವೆಯಲ್ಲಿ ಅಗ್ರಮಾನ್ಯ ಸಂಘಟನೆಯಾಗಿ ಮುನ್ನುಗ್ಗುತ್ತಿದೆ.

Puduvettu sethuve veekshane copyಪುದುವೆಟ್ಟು : ಪುದುವೆಟ್ಟು ಗ್ರಾಮದ ಬೊಲ್ಮನಾರು ಎಂಬಲ್ಲಿ ಅಂತಿಮ ಹಂತದ ನಿರ್ಮಾಣದಲ್ಲಿದ್ದು ಶೀಘ್ರವೇ ಜನೋಪಯೋಗಕ್ಕೆ ಅರ್ಪಣೆಯಾಗಲಿರುವ ಸುಮಾರು 7 ಕೋಟಿಗೂ ಅಧಿಕ ವೆಚ್ಚದ ನೂತನ ಸೇತುವೆ ಕಾಮಗಾರಿಯನ್ನು ಶಾಸಕ ವಸಂತ ಬಂಗೇರ ಎ. 13ರಂದು ವೀಕ್ಷಣೆ ನಡೆಸಿದರು.
ಗುತ್ತಿಗೆದಾರ ಹಾಗೂ ಇಂಜಿನಿಯರ್ ಜೊತೆ ಮಾತುಕತೆ ನಡೆಸಿ ಕಾಮಗಾರಿಯ ವಿವರ ಪಡೆದ ಅವರು ಮಳೆಗಾಲಕ್ಕೂ ಮುನ್ನವೇ ಕಾಮಗಾರಿ ಪೂರ್ತಿಗೊಳಿಸುವಂತೆ ಸೂಚನೆ ನೀಡಿದರು.
ಈ ಸಂದರ್ಭ ಉಜಿರೆ ಜಿ.ಪಂ. ಸದಸ್ಯೆ ನಮಿತಾ ಕೆ. ಪೂಜಾರಿ, ತಾ.ಪಂ. ಸದಸ್ಯ ವಿ.ಟಿ. ಸೆಬಾಸ್ಟಿಯನ್, ಎಪಿಎಂಸಿ ಸದಸ್ಯ ಅಬ್ದುಲ್ ಗಫೂರ್, ಪುದುವೆಟ್ಟು ಗ್ರಾ.ಪಂ. ಅಧ್ಯಕ್ಷೆ ನೀಲಮ್ಮ, ಉಪಾಧ್ಯಕ್ಷ ಬೊಮ್ಮಣ್ಣ ಗೌಡ ಮಠ, ನೆರಿಯ ಗ್ರಾ.ಪಂ. ಸದಸ್ಯ ಬಿ. ಅಶ್ರಫ್ ನೆರಿಯ, ಗುತ್ತಿಗೆದಾರ ರಿಯಾಝ್ ಪೆರಾಲ್ದರಕಟ್ಟೆ ಮೊದಲಾದವರು ಉಪಸ್ಥಿತರಿದ್ದರು.

belalu anantha padmanabha nagashila prathiste copyಬೆಳಾಲು : ಇಲ್ಲಿಯ ಅನಂತೋಡಿಯಲ್ಲಿ ಜೀರ್ಣೋದ್ಧಾರಗೊಳ್ಳುತ್ತಿರುವ ಶ್ರೀ ಅನಂತ ಪದ್ಮನಾಭ ದೇವಸ್ಥಾನದಲ್ಲಿ ಜೀರ್ಣೋದ್ಧಾರ ಸಮಿತಿಯ ಗೌರವಾಧ್ಯಕ್ಷರು ಧರ್ಮಸ್ಥಳದ ಡಾ| ಡಿ. ವೀರೇಂದ್ರ ಹೆಗ್ಗಡೆಯವರ ಆಶೀರ್ವಾದದೊಂದಿಗೆ ಉಜಿರೆ ಶ್ರೀ ಜನಾರ್ದನ ದೇವಸ್ಥಾನದ ಆಡಳಿತ ಮೊಕ್ತೇಸರ ಯು. ವಿಜಯ ರಾಘವ ಪಡ್ವೆಟ್ನಾಯರ ಮಾರ್ಗದರ್ಶನದಲ್ಲಿ ಬ್ರಹ್ಮಶ್ರೀ ಆಲಂಬಾಡಿ ಪದ್ಮನಾಭ ತಂತ್ರಿಗಳ ನೇತೃತ್ವದಲ್ಲಿ ಎ. 20ರಂದು(ಇಂದು) ಶ್ರೀ ನಾಗಶಿಲಾ ಪ್ರತಿಷ್ಠೆ ಜರಗಿತು. ಜೀರ್ಣೋದ್ಧಾರ ಸಮಿತಿಯ ಪದಾಧಿಕಾರಿಗಳು, ಭಜನಾ ಮಂಡಳಿಯ ಪದಾಧಿಕಾರಿಗಳು ಶ್ರೀಕ್ಷೇತ್ರ ಧ. ಗ್ರಾ. ಯೋಜನೆಯ ಒಕ್ಕೂಟದ ಪದಾಧಿಕಾರಿಗಳು, ಊರವರು, ಭಕ್ತಾಧಿಗಳು ಹೆಚ್ಚಿನ ಸಂಖ್ಯೆಯಲ್ಲಿ ಹಾಜರಿದ್ದರು.

Peranamanja sabhe prathapasimha copyಪಡಂಗಡಿ : ಮನಸ್ಸು ಸ್ಥಿರವಾದಾಗ ಜಗತ್ತಿನ ಸತ್ಯ ಅರಿವಾಗುತ್ತದೆ. ಇದಕ್ಕಾಗಿ ನಮ್ಮ ಹಿರಿಯರು ಇಂತಹ ಶ್ರದ್ಧಾಕೇಂದ್ರಗಳನ್ನು ನಿರ್ಮಿಸಿದ್ದಾರೆ. ಆತ್ಮ ಶಕ್ತಿಯನ್ನು ಜಾಗೃತ ಮಾಡುವ ಸ್ಥಳಗಳೇ ದೇವಸ್ಥಾನ, ದೈವಸ್ಥಾನಗಳಾಗಿವೆ ಎಂದು ಬಿಜೆಪಿ ಮಾಜಿ ಜಿಲ್ಲಾಧ್ಯಕ್ಷ, ನ್ಯಾಯವಾದಿ ಪ್ರತಾಪಸಿಂಹ ನಾಯಕ್ ಹೇಳಿದರು.
ಅವರು ಎ.13ರಂದು ಪಡಂಗಡಿ ಗ್ರಾಮದ ಪೆರಣಮಂಜು ಶ್ರೀ ಮೂಜಿಲ್ನಾಯ ಬ್ರಹ್ಮ ದೈವಸ್ಥಾನ ಬ್ರಹ್ಮಕಲಶೋತ್ಸವ ಮತ್ತು ಜಾತ್ರಾ ಮಹೋತ್ಸವದ ಅಂಗವಾಗಿ ನಡೆದ ಧಾರ್ಮಿಕ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಮನುಷ್ಯನಿಗೆ ಭೌತಿಕ ಸುಖ ಮುಖ್ಯವಲ್ಲ, ಆಧ್ಯಾತ್ಮಿಕ ಸುಖ ಮಾತ್ರ ನಮ್ಮನ್ನು ಮೋಕ್ಷದೆಡೆಗೆ ಸಾಗಿಸಬಹುದು. ಅಂತಹ ಸುಖವನ್ನು ನೀಡುವ ದೈವ, ದೇವರ ನಾಡಾದ ಭಾರತ ಒಂದು ದಿನ ಜಗತ್ತಿಗೆ ವಿಶ್ವಗುರುವಾಗಿ ನಿಲ್ಲಲಿದೆ. ಭಾರತದಲ್ಲಿ ಪ್ರಾಚೀನ ಕಾಲದಿಂದಲೂ ಇದ್ದ ಯೋಗ ಇಂದು ವಿಶ್ವದೆಲ್ಲೇಡೆ ಪಸರಿಸಿದೆ. ಭಗವಂತನ ಸಾಕ್ಷಾತ್ಕಾರಕ್ಕೆ ಯೋಗ ಸುಲಭ ಮಾರ್ಗವಾಗಿದೆ ಎಂದರು.
ಧಾರ್ಮಿಕ ಉಪನ್ಯಾಸ ನೀಡಿದ ಮೈಸೂರು ಮಾನಸ ಗಂಗೋತ್ರಿಯ ಪ್ರೊ| ಸುರೇಶ್ ಪಡಿವಾಳ್ ಮನಸ್ಸು, ವಚನ, ಕಾಯಗಳ ಜೊತೆ ಆತ್ಮ ಸಂಯೋಜನೆಗೊಂಡು ನಮ್ಮ ದೇಹದ ಚೇತನ ಕ್ರಿಯೆ ನಡೆದಾಗ ನಾವು ತಿಳಿಯುವ, ನೋಡುವ ಕ್ರಿಯೆ ನಡೆಯುತ್ತದೆ. ನಮ್ಮಲ್ಲಿರುವ ಅರಿಷಡ್ವರ್ಗಗಳು ನಿವಾರಣೆಯಾಗಲು ಇಂತಹ ಧಾರ್ಮಿಕ ಕೇಂದ್ರಗಳಿಗೆ ಬಂದು, ಧರ್ಮ ಕ್ರಿಯೆ ಮೂಲಕ ಆತ್ಮೋನ್ನತಿ ಮಾಡಿಕೊಳ್ಳಬೇಕು ಎಂದು ತಿಳಿಸಿದರು.
ಮುಖ್ಯ ಅತಿಥಿ ಬೆಳ್ತಂಗಡಿ ವಿನಾಯಕ ರೈಸ್‌ಮಿಲ್‌ನ ಮಾಲಕ ರೋ| ಶ್ರೀಕಾಂತ ಕಾಮತ್ ಮಾತನಾಡಿ, ಊರಿನ ದೇವಸ್ಥಾನ, ದೈವಸ್ಥಾನಗಳು ಜೀರ್ಣೋದ್ಧಾರ ಹೊಂದಿದಾಗ ಊರಿನ ಅಭಿವೃದ್ಧಿಯ ಜೊತೆ ಸಮಾಜದ ಪ್ರಗತಿಯಾಗುತ್ತದೆ. ನಾವು ನಂಬಿಕೊಂಡು ಬಂದಂತಹ ಶ್ರದ್ಧಾಕೇಂದ್ರಗಳು ಅವನತಿಗೊಂಡಾಗ ನಮ್ಮ ಜೀವನದ ಮೇಲೂ ಪರಿಣಾಮಗಳಾಗುತ್ತದೆ. ಅವುಗಳ ಪ್ರಗತಿಯಾದಾಗ ನಮ್ಮ ಜೀವನದಲ್ಲೂ ಉನ್ನತಿಯನ್ನು ಕಾಣಬಹುದು ಎಂದು ತಿಳಿಸಿದರು.
ಉದ್ಯಮಿ ಉದಯ ಶೆಟ್ಟಿ ಕಾಂತವರ ಮಾತನಾಡಿ ಇಂದಿನ ವೈಜ್ಞಾನಿಕ ಯುಗದಲ್ಲಿ ಮಕ್ಕಳಿಗೆ ನಮ್ಮ ಸಂಸ್ಕೃತಿ, ಧಾರ್ಮಿಕ ನಂಬಿಕೆಗಳ ಅರಿವು ಮೂಡಿಸುವುದು ಅವಶ್ಯ ಎಂದು ಹೇಳಿದರು. ಈ ಸಂದರ್ಭದಲ್ಲಿ ಕ್ಷೇತ್ರ ನಿರ್ಮಾಣಕ್ಕೆ ಸಹಕಾರ ನೀಡಿದ ಸ್ವಸ್ತಿಕ್ ಪಡಂಗಡಿಯ ಸಂಪತ್ ಕುಮಾರ್ ಕುಟುಂಬಸ್ಥರನ್ನು ಹಾಗೂ ನವೀನ್‌ಚಂದ್ ಬಲ್ಲಾಳ್, ಉದಯ ಶೆಟ್ಟಿ ಕಾಂತಾವರ ಇವರನ್ನು ದೇವಸ್ಥಾನದ ವತಿಯಿಂದ ಅಭಿನಂದಿಸಲಾಯಿತು. ಬ್ರಹ್ಮಕಲಶೋತ್ಸವ ಸಮಿತಿ ಅಧ್ಯಕ್ಷ ಪ್ರವೀಣ್‌ಚಂದ್ರ ಜೈನ್ ನಡಿಬೆಟ್ಟುಗುತ್ತು ಕಾರ್ಯಕ್ರಮ ನಿರ್ವಹಿಸಿದರು.
ವೇದಿಕೆಯಲ್ಲಿ ಆಡಳಿತ ಮೊಕ್ತೇಸರ ನೇಮಿರಾಜ್ ಶೆಟ್ಟಿ ನಡಿಬೆಟ್ಟು ಗುತ್ತು, ಬ್ರಹ್ಮಕಲಶೋತ್ಸವ ಸಮಿತಿ ಗೌರವಾಧ್ಯಕ್ಷ ಎಸ್. ಜಯರಾಮ ಶೆಟ್ಟಿ, ಪ್ರಧಾನ ಕಾರ್ಯದರ್ಶಿ ಶಾಂತಿರಾಜ ಜೈನ್ ಅಮೃತ, ಕಾರ್ಯದರ್ಶಿ ಜಗದೀಶ್ ಪೈ ಮೂಜುರು, ಕೋಶಾಧಿಕಾರಿ ವಾiನ ಬಾಳಿಗ ಉಪಿಸ್ಥಿತರಿದ್ದರು. ಸಂಜನಾ ಎಸ್.ಜೈನ್ ಇವರ ಪ್ರಾರ್ಥನೆ ಬಳಿಕ ಶ್ರೀಮತಿ ಉಷಾರಾಣಿ ನಡಿಬೆಟ್ಟುಗುತ್ತು ಸ್ವಾಗತಿಸಿದರು. ಪುಂಜಾಲಕಟ್ಟೆ ಶಾಲಾ ಶಿಕ್ಷಕ ಲ| ಧರಣೇಂದ್ರ ಕೆ. ಜೈನ್ ಕಾರ್ಯಕ್ರಮ ನಿರೂಪಿಸಿ, ಎಸ್‌ಕೆಡಿಆರ್‌ಡಿಪಿ ತುಮಕೂರಿನ ಯೋಜನಾಧಿಕಾರಿ ಪ್ರಶಾಂತ್ ಗೌಡ ವಂದಿಸಿದರು. ಬಳಿಕ ಕಲ್ಲಡ್ಕ ವಿಠಲ ನಾಯಕ್ ಬಳಗದವರಿಂದ ‘ಗೀತ ಸಾಹಿತ್ಯ ಸಂಭ್ರಮ’ನಡೆಯಿತು.

kulal kreedakuta samaropa copyವಿವಿಧ ಕ್ಷೇತ್ರದ ಸಾಧಕರಿಗೆ ಸಮ್ಮಾನ
ಕಾರ್ಯಕ್ರಮದಲ್ಲಿ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ಮೂರು ಮಂದಿ ಸಾಧಕರನ್ನು ಕ್ರೀಡಾ ಸಮಿತಿಯ ವತಿಯಿಂದ ವೇದಿಕೆಯಲ್ಲಿದ್ದ ಗಣ್ಯರು, ಅತಿಥಿಗಳು ಸಮ್ಮಾನಿಸಿದರು. ಎಂ.ಎ. ಪದವಿ ರಾಜ್ಯ ಶಾಸ್ತ್ರದಲ್ಲಿ ಪ್ರಥಮ ಸ್ಥಾನ ಪಡೆದ ಕು| ಸಚಿತಾ, ರೋಹಿತ್ ಕುಮಾರ್ ಬರಾಯ, ಹಾಗೂ ಕಂಬಳ ಕ್ಷೇತ್ರದ ಮೋಹನ್‌ಕುಮಾರ್ ಕಬ್ಬಿನ ಹಿತ್ಲು ಅವರನ್ನು ಶಾಲು ಹೊದಿಸಿ, ಸ್ಮರಣಿಕೆ ನೀಡಿ ಸಮಿತಿ ವತಿಯಿಂದ ಗೌರವಿಸಲಾಯಿತು.

ಗುರುವಾಯನಕೆರೆ : ಬೆಳ್ತಂಗಡಿ ತಾಲೂಕು ಮೂಲ್ಯರ ಯಾನೆ ಕುಂಬಾರರ ಸೇವಾ ಸಂಘ ಗುರುವಾಯನಕೆರೆ, ಕುಲಾಲ-ಕುಂಬಾರರ ಯುವ ವೇದಿಕೆ ಮತ್ತು ತಾಲೂಕು ಕ್ರೀಡಾ ಸಮಿತಿ, ಕುಲಾಲ ಕುಂಬಾರ ಸಾಂಸ್ಕೃತಿಕ ಸಮಿತಿ ಇದರ ಸಹಯೋಗದೊಂದಿಗೆ ತಾಲೂಕಿನ ಸ್ವಜಾತಿ ಬಾಂಧವರಿಗಾಗಿ ನಡೆದ ತಾಲೂಕು ಮಟ್ಟದ ಕುಲಾಲ ಕ್ರೀಡೋತ್ಸವದ ಸಮಾರೋಪ ಸಮಾರಂಭ ಎ.16ರಂದು ಕೆರೆ ಬಳಿಯ ಮೈದಾನದಲ್ಲಿ ನಡೆಯಿತು.
ಮುಖ್ಯ ಅತಿಥಿಗಳಾಗಿ ಭಾಗವಹಿಸಿದ ಬಂಟ್ವಾಳ ಯೋಜನಾ ಪ್ರಾಧಿಕಾರದ ಅಧ್ಯಕ್ಷ ಸದಾಶಿವ ಬಂಗೇರ ಮಾತನಾಡಿ, ಕುಲಾಲ-ಕುಂಬಾರ ಸಮಾಜ ಸಂಘಟನೆಗೆ ಇಂತಹ ಕ್ರೀಡಾ ಕೂಟಗಳು ಪ್ರೇರಣೆಯಾಗುವುದರ ಜೊತೆಗೆ ಯುವ ಸಮುದಾಯಕ್ಕೆ ತಮ್ಮ ಶಕ್ತಿಯ ಪ್ರದರ್ಶನಕ್ಕೆ ವೇದಿಕೆಯಾಗಿದೆ ಎಂದರು. ಯುವ ಸಂಪತ್ತು ಸಮಾಜದ ಉನ್ನತಿಗೆ ಉಪಯೋಗವಾಗಬೇಕು, ಸಂಘಟನೆಗೆ ಬಲ ಬರಬೇಕಾದರೆ ತಾಲೂಕಿನ ಸಮಾಜ ಬಾಂಧವರು ಇಂತಹ ಕಾರ್ಯಗಳಲ್ಲಿ ಕೈಜೋಡಿಸುವುದರೊಂದಿಗೆ ಸಮಾಜದ ಮುಂಚೂಣಿಯಲ್ಲಿ ಪ್ರಮುಖ ಪಾತ್ರವಹಿಸಬೇಕಾದ ಅಗತ್ಯವಿದೆ. ಈ ನಿಟ್ಟಿನಲ್ಲಿ ಮಾತೃ ಸಂಘದ ನೇತೃತ್ವದಲ್ಲಿ ರಾಜ್ಯ ಮಟ್ಟದ ಕಬಡ್ಡಿಯನ್ನು ಹಮ್ಮಿಕೊಳ್ಳುವ ಯೋಜನೆಯಿದ್ದು, ತಾಲೂಕಿನ ತಂಡವೂ ಇದರಲ್ಲಿ ಭಾಗವಹಿಸಬೇಕು ಎಂದು ಕರೆ ನೀಡಿದರು.
ಸಮಾರಂಭದ ಅಧ್ಯಕ್ಷತೆಯನ್ನು ತಾಲೂಕು ಕ್ರೀಡಾ ಸಮಿತಿ ಅಧ್ಯಕ್ಷ ತಿಲಕ್‌ರಾಜ್ ವಹಿಸಿ, ಕ್ರೀಡೋತ್ಸವದ ಯಶಸ್ವಿಗೆ ಸಹಕರಿಸಿದ ಎಲ್ಲರಿಗೂ ಕೃತಜ್ಞತೆ ಸಲ್ಲಿಸಿದರು. ಕುಲಾಲ-ಕುಂಬಾರರ ಯುವ ವೇದಿಕೆ ರಾಜ್ಯ ಸಂಘಟನಾ ಕಾರ್ಯದರ್ಶಿ ಹರೀಶ್ ಕಾರಿಂಜ ಸ್ವಾಗತಿಸಿ, ಯುವ ಸಮುದಾಯದ ಸಂಘಟನೆ ಹಾಗೂ ಬಲವರ್ಧನೆಗೆ ಈ ಕ್ರೀಡಾಕೂಟ ಪೂರಕವಾಗಿ ನಡೆಯುತ್ತಿದ್ದು, ಇಂದು ಅತ್ಯಂತ ಯಶಸ್ವಿಯಾಗಿ ಕಾರ್ಯಕ್ರಮ ನಡೆಸಿದ ಕ್ರೀಡಾ ಸಮಿತಿಯ ಪದಾಧಿಕಾರಿಗಳನ್ನು ಅಭಿನಂದಿಸಿದರು.
ಅತಿಥಿಗಳಾಗಿ ಕುಲಾಲ ಕುಂಬಾರರ ಯುವ ವೇದಿಕೆ ಬೆಳ್ತಂಗಡಿ ತಾಲೂಕು ಅಧ್ಯಕ್ಷ ಲೋಕೇಶ್ ಕಂಚಿಂಜ, ವಾಣಿಜ್ಯ ತೆರಿಗೆ ನಿರೀಕ್ಷಕ ಯತೀಶ್ ಸಿರಿಮಜಲು, ಶ್ರೀ ಕ್ಷೇ.ಧ.ಗ್ರಾ. ಯೋಜನೆ ಧರ್ಮಸ್ಥಳದ ಯೋಜನಾಧಿಕಾರಿ ಕಮಲಾಕ್ಷ, ಕುಲಾಲ ಕುಂಬಾರ ಯುವ ವೇದಿಕೆ ಬೆಳ್ತಂಗಡಿ ಇದರ ಕೋಶಾಧಿಕಾರಿ ಉಮೇಶ್ ಕುಲಾಲ್, ಸುದ್ದಿ ಪತ್ರಿಕೆಯ ಮುಖ್ಯ ವರದಿಗಾರ ಬಿ.ಎಸ್. ಕುಲಾಲ್ ಭಾಗವಹಿಸಿ ಶುಭ ಕೋರಿದರು. ಬೆಳಗ್ಗೆ 11ರಿಂದ ಸಂಜೆ 7.30ರ ವರೆಗೆ ಅತ್ಯಂತ ಯಶಸ್ವಿಯಾಗಿ ಹಾಗೂ ಶಿಸ್ತುಬದ್ಧವಾಗಿ ಕ್ರೀಡೋತ್ಸವ ನಡೆಯಿತು. ಈ ಸಂದರ್ಭದಲ್ಲಿ ಮಕ್ಕಳಿಗೆ, ಮಹಿಳೆಯರಿಗೆ ಹಾಗೂ ಪುರುಷರಿಗೆ ಹಮ್ಮಿಕೊಂಡ ವಿವಿಧ ಸ್ಪರ್ಧಾ ವಿಜೇತರಿಗೆ ಬಹುಮಾನಗಳನ್ನು ವಿತರಿಸಲಾಯಿತು.
ಕ್ರೀಡೋತ್ಸವದ ತೀರ್ಪುಗಾರರಾಗಿ, ಗಿರೀಶ್, ಮಿಥುನ್, ಗೋಪಾಲ್, ಶೀತಲ್ ಸಹಕರಿಸಿದರು. ಹರೀಶ್ ಕಾರಿಂಜ ಸ್ವಾಗತಿಸಿದರು. ಜಿಲ್ಲಾ ಸಂಘದ ಪ್ರಧಾನ ಕಾರ್ಯದರ್ಶಿ ಪ್ರಸಾದ್‌ಕುಮಾರ್ ಕಾರ್ಯಕ್ರಮ ನಿರೂಪಿಸಿ, ಯತೀಶ್ ಸಿರಿಮಜಲು ವಂದಿಸಿದರು. ಸಮಿತಿಯ ಉಪಾಧ್ಯಕ್ಷ ಜಗದೀಶ್ ಬರಾಯ, ಕಾರ್ಯದರ್ಶಿ ಪ್ರವೀಣ್ ಬರಾಯ, ಜೊತೆ ಕಾರ್ಯದರ್ಶಿ ಜಯಮತ್ ಕಟ್ಟೆ, ಮಿಥುನ್ ಮಡಂತ್ಯಾರು, ಕೋಶಾಧಿಕಾರಿ ಜೀವನ್ ಕುಲಾಲ್ ಸಿರಿಮಜಲು, ಸಂಘಟನಾ ಕಾರ್ಯದರ್ಶಿ ನವೀನ್ ಕುಲಾಲ್, ಮುಖೇಶ್ ಕುಲಾಲ್ ಬರಾಯ ಹಾಗೂ ಸಮಿತಿಯ ಎಲ್ಲಾ ಸದಸ್ಯರು ಉಪಸ್ಥಿತರಿದ್ದರು.

ನಮ್ಮ ಬಗ್ಗೆ

ಮೊದಲಿಗೆ ಕೇವಲ ಒಂದು ಹಾಳೆಯಲ್ಲಿ ಪ್ರಕಟವಾಗುತ್ತಿದ್ದ ಬೆಳ್ತಂಗಡಿ ತಾಲೂಕಿನ “ಸುದ್ದಿ ಬಿಡುಗಡೆ “ಪತ್ರಿಕೆ ಇಂದು ಪ್ರತಿದಿನ  22
.. ಮುಂದೆ ಓದಿ

ಸಲಹೆ- ಸೂಚನೆ

ನಿಮ್ಮ ಸಲಹೆ ಸೂಚನೆಗಳಿಗೆ ಹಾರ್ದಿಕ ಸ್ವಾಗತ

ಇಲ್ಲಿ ಕ್ಲಿಕ್ಕಿಸಿ

Copyright © 2017 Suddinews.com . All Rights Reserved.
^ Back to Top