Fri 13 Oct 2017, 9:19PM

ಹೆಚ್ಚಿನ ಸುದ್ದಿಗಳು

suddi COLORpdf BLDY.p65

suddi COLORpdf BLDY.p65

suddi COLORpdf BLDY.p65

suddi COLORpdf BLDY.p65

suddi COLORpdf BLDY.p65

suddi COLORpdf BLDY.p65

suddi COLORpdf BLDY.p65

suddi COLORpdf BLDY.p65

Prakash devadigarige prashasthiಬೆಳ್ತಂಗಡಿ : ಆಕಾಶವಾಣಿ ಮತ್ತು ದೂರದರ್ಶನದ ಎ ಗ್ರೇಡ್ ಕಲಾವಿದರಾಗಿರುವ ಖ್ಯಾತ ಸ್ಯಾಕ್ಸೋಫೋನ್ ವಾದಕ ಧರ್ಮಸ್ಥಳ ಬಿ. ಪ್ರಕಾಶ್ ದೇವಾಡಿಗ ಕನ್ನಾಜೆ ಅವರಿಗೆ ತಮಿಳುನಾಡಿನ ವಿಶ್ವವಿಖ್ಯಾತ ಧಾರ್ಮಿಕ ಶ್ರದ್ಧಾ ಪೀಠವಾದ ಕಂಚಿಪುರಂ ಶಂಕರ ಮಠದಿಂದ ನೀಡಲ್ಪಡುವ ಪ್ರತಿಷ್ಠಿತ ಶ್ರೀ ಕಂಚಿ ಕಾಮಕೋಟಿ ಪೀಠಂ ಆಸ್ತಾನ ವಿದ್ವಾನ್ ಪುರಸ್ಕಾರ ಪ್ರದಾನ ಕಾರ್ಯಕ್ರಮ ಅ. 2 ರಂದು ಶ್ರೀ ಮಠದಲ್ಲಿ ಜರುಗಿತು. ಕ್ಷೇತ್ರದ ಯತಿಶ್ರೇಷ್ಠರಾದ ಪೂಜ್ಯಶ್ರೀ ಜಯೇಂದ್ರ ಸರಸ್ವತಿ ಶಂಕರಾಚಾರ್ಯ ಸ್ವಾಮೀಜಿಯವರು ದೇವಾಡಿಗ ಅವರಿಗೆ ಪುರಸ್ಕಾರ ನೀಡಿ ಗೌರವಿಸಿದರು.

kalenja shri sadasiveshwara temple shanku sthapaneಕಳೆಂಜ : ಶ್ರೀ ಸದಾಶಿವೇಶ್ವರ ದೇವಸ್ಥಾನ ಕಳೆಂಜ ಇಲ್ಲಿ ಅ. ೫ರಂದು ನೂತನ ಸಭಾ ಭವನದ ಶಂಕು ಸ್ಥಾಪನೆಯನ್ನು ಉಜಿರೆ ಶ್ರೀ ಜನಾರ್ಧನ ಸ್ವಾಮಿ ದೇವಸ್ಥಾನದ ಆಡಳಿತ ಮೊಕ್ತೇಸರ ವಿಜಯ ರಾಘವ ಪಡ್ವೆಟ್ನಾಯ ನೆರವೇರಿಸಿ ಈ ಸಭಾಭವನದ ಕೆಲಸಕ್ಕೆ ಊರಿನ ಎಲ್ಲರೂ ಒಂದೇ ಮನಸ್ಸಿನಿಂದ ಕೆಲಸ ಮಾಡಬೇಕು ಎಂದರು.
ಅಧ್ಯಕ್ಷತೆಯನ್ನು ಕಳೆಂಜ ಶ್ರೀ ಸದಾಶಿವೇಶ್ವರ ದೇವಸ್ಥಾನದ ಅಧ್ಯಕ್ಷ ಅರವಿಂದ ಕುಡ್ವ ವಹಿಸಿ ಮಾತನಾಡಿ ಈ ಕೆಲಸವು ನಿರ್ವಿಘ್ನವಾಗಿ ನಡೆಯಲಿ ಎಂದು ಶುಭ ಹಾರೈಸಿದರು. ಮುಖ್ಯ ಅತಿಥಿಗಳಾಗಿ ಶ್ರೀ.ಕ್ಷೇ.ಧ.ಗ್ರಾ.ಯೋಜನೆಯ ಸಮುದಾಯ ಅಭಿವೃದ್ಧಿ ಅಧಿಕಾರಿ ಜಯರಾಮ ನೆಲ್ಲಿತ್ತಾಯ ಭಾಗವಹಿಸಿ ನಿಮ್ಮ ಸಮಿತಿಯಲ್ಲಿ ನಾನೂ ಕೂಡ ಒಬ್ಬ ಸದಸ್ಯ. ತಿಂಗಳ ಸಭೆಯಲ್ಲಿ ನಾನೂ ಕೂಡ ಭಾಗವಹಿಸುತ್ತೇನೆ ಎಂದರು.
ಕೇಶವ ಕಳೆಂಜ ನಿರೂಪಿಸಿ, ಜಯಂತ ಗೌಡ ಸ್ವಾಗತಿಸಿ, ರುಕ್ಮಯ್ಯ ಗೌಡ ಕಳೆಂಜ ಧನ್ಯವಾದವಿತ್ತರು.

SR bar openingಉಜಿರೆ : ಉಜಿರೆಯಲ್ಲಿ ಕಳೆದ 25 ವರ್ಷಗಳನ್ನು ಪೂರೈಸಿದ ಎಸ್.ಆರ್ ಬಾರ್ & ರೆಸ್ಟೋರೆಂಟ್ ಸುಪ್ರೀಂ ಕೋರ್ಟ್ ಆದೇಶದ ಮೇರೆಗೆ ಉಜಿರೆ ಪೇಟೆಯಿಂದ ಉಜಿರೆ-ಬೆಳಾಲು ರಸ್ತೆಯ ನಿನ್ನಿಕಲ್ಲು ಎಂಬಲ್ಲಿಗೆ ಸ್ಥಳಾಂತರಗೊಂಡು ನೂತನವಾಗಿ ನಿರ್ಮಿಸಿದ ಕಟ್ಟಡದಲ್ಲಿ  ಅ.11 ರಂದು ಶುಭಾರಂಭಗೊಂಡಿತು. ಬೆಳ್ತಂಗಡಿಯ ಶಾಸಕರು ಸಣ್ಣ ಕೈಗಾರಿಕಾ ನಿಗಮದ ಅಧ್ಯಕ್ಷರಾಗಿರುವ ಕೆ.ವಸಂತ ಬಂಗೇರ ಉದ್ಘಾಟಿಸಿ ಶುಭ ಹಾರೈಸಿದರು. ಉಜಿರೆ ಸಿಂಡಿಕೇಟ್ ಬ್ಯಾಂಕಿನ ಪ್ರಬಂಧಕ ಶ್ರೀನಿವಾಸ ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದರು. ಈ ಸಂದರ್ಭದಲ್ಲಿ ಇ.ಸುಂದರ ಗೌಡ, ಯೋಗೀಶ್ ಕುಮಾರ್ ನಡಕ್ಕರ, ಜಿ.ಪಂ ಸದಸ್ಯ ಶೇಖರ ಕುಕ್ಕೇಡಿ, ಮಾಜಿ ಜಿ.ಪಂ ಸದಸ್ಯ ಶೈಲೇಶ್ ಕುಮಾರ್, ಮಾಜಿ ತಾ.ಪಂ ಸದಸ್ಯ ವಸಂತ ಪೂಜಾರಿ, ಉಜಿರೆ ಗ್ರಾ.ಪಂ ಅಧ್ಯಕ್ಷ ಶ್ರೀಧರ ಪೂಜಾರಿ, ಡಾ| ಕೇಶವ್, ಡಾ| ಜಗನ್ನಾಥ, ಡಾ| ರೂಪಲತಾ, ಅಶ್ವಿನಿ ಮೆಡಿಕಲ್ಸ್‌ನ ಚಂದ್ರಶೇಖರ್, ವಿಟ್ಲ ಸಾಲಿಯನ್ ಮೋಟಾರ್‍ಸ್ ಮಾಲಕ ಜಗನ್ನಾಥ ಸಾಲಿಯಾನ್, ತುಕಾರಾಮ್ ಬಂಗೇರ, ರಬ್ಬರ್ ಸೊಸೈಟಿ ಉಪಾಧ್ಯಕ್ಷ ಪದ್ಮನಾಭ ಮಾಣಿಂಜ, ಉಜಿರೆ ಸೇವಾ ಸಹಕಾರಿ ಬ್ಯಾಂಕಿನ ಉಪಾಧ್ಯಕ್ಷ ರಮೇಶ್.ಬಿ, ಸಹಕಾರಿ ಸಂಘದ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಚಂದ್ರೇಶ್ ಶೆಟ್ಟಿ, ಬಿಜೋಯಿ ಏಜೆನ್ಸೀಸ್‌ನ ಎ.ಕೆ ಶಿವಾನ್, ಹಳ್ಳಿಮನೆ ರೆಸ್ಟೋರೆಂಟ್‌ನ ಮಾಲಕ ಪ್ರವೀಣ್ ಫೆರ್ನಾಂಡಿಸ್, ಗುತ್ತಿಗೆದಾರ ಶ್ರೀನಿವಾಸ ಗೌಡ, ಉಜಿರೆ ಚರ್ಚ್ ಪಾಲನಾ ಮಂಡಳಿಯ ಉಪಾಧ್ಯಕ್ಷ ಅರುಣ್ ರೆಬೆಲ್ಲೊ, ಸ್ಟೇನ್ಲಿ ಜಯಕರ್, ಯುವ ಕಾಂಗ್ರೆಸ್ ಅಧ್ಯಕ್ಷ ಅಭಿನಂದನ್ ಹರೀಶ್ ಕುಮಾರ್, ಎಚ್.ಎನ್ ನಾಗರಾಜ್, ಶ್ರೀಮತಿ ಮಿತ್ರ ಯತೀಶ್ ಕುಮಾರ್ ಅವರ ಸಹೋದರರು, ಸಹೋದರಿಯರು ಮತ್ತು ಸಂಬಂಧಿಗಳು, ಸ್ನೇಹಿತವರ್ಗ ಉಪಸ್ಥಿತರಿದ್ದರು. ಆಗಮಿಸಿದ ಅತಿಥಿ ಗಣ್ಯರನ್ನು ಮಾಲಕರಾದ ಯತೀಶ್ ಕುಮಾರ್, ಪತ್ನಿ ಶ್ರೀಮತಿ ಮಿತ್ರ, ಮಕ್ಕಳಾದ ಶ್ರೀಮತಿ  ಯಶ್ಮಿತಾ ಅಭಿಜಿತ್, ಶರಣ್ಯ ಸ್ವಾಗತಿಸಿ ಸತ್ಕರಿಸಿದರು.

Rama khsathriyaಬೆಳ್ತಂಗಡಿ: ಸಂಘಟನೆ ಎಂದರೆ ತ್ಯಾಗ. ಅಲ್ಲಿ ನಮ್ಮ ವೈಯುಕ್ತಿಕ ವಿಚಾರಗಳಿರ ಕೂಡದು. ಸಂಘಟನೆ ಯೊಳಗೆ ಪ್ರತಿಷ್ಠೆ, ರಾಜಕೀಯ ಪ್ರವೇಶಿಸಿದರೆ ಸಂಘದ ಉದ್ದೇಶವೇ ಹಾಳಾಗುತ್ತದೆ. ಜಿಲ್ಲೆಯಲ್ಲಿ ಕನಿಷ್ಟ ಸಂಖ್ಯೆಯಲ್ಲಿರುವ ನಾವು ಇನ್ನಷ್ಟು ಸಂಘಟಿತರಾಗಿ ರಾಜಕೀಯವಾಗಿ ಮತ್ತು ಸಾಮಾಜಿಕವಾಗಿ ಗುರುತಿಸಲ್ಪ ಡುವಂತಾಗಬೇಕು ಎಂದು ಮಂಗಳೂರು ರಾಮ ಕ್ಷತ್ರೀಯ ಸಂಘದ ಅಧ್ಯಕ್ಷ ಹಾಗೂ ಲಯನ್ಸ್ ಮಾಜಿ ಗವರ್ನರ್ ಜೆ ಕೃಷ್ಣಾನಂದ ರಾವ್ ಹೇಳಿದರು.
ಬೆಳ್ತಂಗಡಿ ತಾಲೂಕು ರಾಮ ಕ್ಷತ್ರೀಯ ಸಂಘ ರಾಮನಗರ ಬೆಳ್ತಂಗಡಿ ಇದರ 17 ನೇ ವಾರ್ಷಿಕೋತ್ಸವ ಪ್ರಯುಕ್ತ ಬೆಳ್ತಂಗಡಿ ಸುವರ್ಣ ಆರ್ಕೆಡ್‌ನಲ್ಲಿ ನಡೆದ ಕ್ಷತ್ರೀಯ ಚೈತನ್ಯ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡುತ್ತಿದ್ದರು. ಅಧ್ಯಕ್ಷತೆ ವಹಿಸಿದ್ದ ಸಂಘದ ತಾ| ಅಧ್ಯಕ್ಷ ವಿಜಯ ಕುಮಾರ್ ಸ್ವಾಗತಿಸಿದರು. ಮುಖ್ಯ ಅತಿಥಿಗಳಾಗಿ ರಾಮಕ್ಷತ್ರೀಯ ಯುವ ವೇದಿಕೆ ಬೆಂಗಳೂರು ಸ್ಥಾಪಕಾಧ್ಯಕ್ಷ ಅಶೋಕ್ ಕುಮಾರ್ ಕೆ, ರಾಮಕ್ಷತ್ರೀಯ ಮಾಸ ಪತ್ರಿಕೆ ಸಂಪಾದಕ ಬಿ.ಎಂ ನಾಥ್, ಕೊಲ್ಲೂರು ಮೂಕಾಂಬಿಕಾ ದೇವಾಲಯದ ಧರ್ಮದರ್ಶಿ ಜಯಾನಂದ ಹೋಬಳಿದಾರ್, ಎನ್.ಟಿ.ಪಿ.ಸಿ ಬೆಂಗಳೂರು ಹಿರಿಯ ಅಧಿಕಾರಿ ಪಿ ಭುವನೇಶ್, ಹೆಬ್ರಿ ರಾಮ ಕ್ಷತ್ರೀಯ ಸಂಘದ ಅಧ್ಯಕ್ಷ ಶ್ರೀನಿವಾಸ ಸೇರ್ವೆಗಾರ್ ಭಾಗಿಯಾಗಿ ಶುಭ ಕೋರಿದರು.
ಅತಿಥಿಗಳ ಪರಿಚಯವನ್ನು ಕಾವ್ಯಾ, ರತ್ನಾಕರ ಮಾಸ್ಟ್ರ್, ಚೈತ್ರಾ, ವಿಜಯ ಮಾಸ್ಟರ್, ಬಾನುರೇಖಾ, ಮೈತ್ರಿ, ನಿಶ್ಮಿತಾ ನಡೆಸಿಕೊಟ್ಟರು. ನಿರುಪಮಾ, ಕಲಾವತಿ ಮತ್ತು ನಾಗರಾಜ್ ಕಾರ್ಯಕ್ರಮ ನಿರೂಪಿಸಿದರು. ಸಂಘದ ಗೌರವಾಧ್ಯಕ್ಷ ಸಿ. ಎಚ್ ಪ್ರಭಾಕರ್, ಸ್ಥಾಪಕಾಧ್ಯಕ್ಷ ಲ| ವಿ. ಆರ್ ನಾಯಕ್, ಪ್ರ. ಕಾರ್ಯದರ್ಶಿ ಕೆ ರಾಘವೇಂದ್ರ ರಾವ್ ಅರಸಿನಮಕ್ಕಿ ವೇದಿಕೆಯಲ್ಲಿದ್ದರು. ಪ್ರಮೋದ್ ಆರ್ ನಾಯಕ್ ಸಹಿತ ಸಂಘದ ಪದಾಧಿಕಾರಿಗಳು ಸಹಕಾರ ನೀಡಿದರು.
ಸಮಾರಂಭದಲ್ಲಿ ರಾಜ್ಯ ಪ್ರಶಸ್ತಿ ಪುರಸ್ಕೃತ ಶಿಕ್ಷಕಿ ಅಹಲ್ಯಾ ರಮಾನಂದ ಉಡುಪಿ ಜಿಲ್ಲೆಯ ಪರ್ಕಳ ಶಾಲೆ ಅವರನ್ನು ಸನ್ಮಾನಿಸಲಾಯಿತು.
ಕಾರ್ಯಕ್ರಮ ನಿಮಿತ್ತ ಸಮಾಜ ಬಂಧುಗಳಿಗೆ ವಿವಿಧ ಸ್ಪರ್ಧೆ ಏರ್ಪಡಿಸಿ ಬಹುಮಾನ ವಿತರಿಸಲಾಯಿತು. ಸಾಂಸ್ಕೃತಿಕ ಕಾರ್ಯಕ್ರಮಗಳೂ ಸಾದರಗೊಂಡವು.

Savanalu

savanalu1

savanalu2

savanalu4ಸವಣಾಲು : ಇಲ್ಲಿನ ಶ್ರೀ ದುರ್ಗಾ ಕಾಳಿಕಾಂಬ ಕ್ಷೇತ್ರಕ್ಕೆ ಸುರಪುರ ಸಂಸ್ಥಾನದ ಈಗಿನ ರಾಜರಾದ [17ನೇ ರಾಜರು] ರಾಜಾ ಕೃಷ್ಣಪ್ಪ ನಾಯಕ್‌ರವರು ಇಂದು(ಅ.12) ಭೇಟಿ ನೀಡಿದರು.
ಈ ಸಂದರ್ಭದಲ್ಲಿ ಕ್ಷೇತ್ರದ ನಿರ್ಮಾಪಕ ಹಾಗೂ ವ್ಯವಸ್ಥಾಪನಾ ಸಮಿತಿಯ ಅಧ್ಯಕ್ಷ ಬಿ.ಗಣೇಶ್. ಎನ್.ಭಂಡಾರಿ, ಕ್ಷೇತ್ರದ ನಿರ್ಮಾಪಕ ಎಂ.ಕೇಶವ ಭಟ್, ಅರ್ಚಕರಾದ ಮಂಜುನಾಥ ಭಟ್ ಮತ್ತು ಜಿ.ಬಾಲಕೃಷ್ಣ ಭಟ್(ವ್ಯವಸ್ಥಾಪನಾ ಸಮಿತಿ ಸದಸ್ಯರು),  ವ್ಯವಸ್ಥಾಪನಾ ಸಮಿತಿ ಸದಸ್ಯರಾದ ಮುರಳೀಧರ ಶರ್ಮ,  ಎಸ್.ಕೆ.ಮೋಹನ್ ರೈ, ಮಹಾಬಲ.ಎಂ.ಕೆ, ಡಿ.ರಾಮಚಂದ್ರ ಭಟ್, ರಾಮಯ್ಯ ಗೌಡ, ಶ್ರೀಮತಿ ಬೇಬಿ ಸುರೇಶ್ ಕುಮಾರ್, ಶ್ರೀಮತಿ ಪ್ರಮೀಳಾ ಚಂದ್ರಹಾಸ ಭಂಡಾರಿ ಮತ್ತು ಗ್ರಾಮಸ್ಥರು ಉಪಸ್ಥಿತರಿದ್ದರು.

Valmiki jayanthiಬೆಳ್ತಂಗಡಿ : ರಾಮ, ಸೀತೆ, ಲಕ್ಷ್ಮಣ ಇವರು ರಾಮಾಯಣ ಮಹಾಕಾವ್ಯದ ಪ್ರಮುಖ ವ್ಯಕ್ತಿಗಳಾಗಿದ್ದು ಅವರ ಬಗ್ಗೆ ಮಾತನಾಡುವ ಅನೇಕರನ್ನು ನಾವು ಇಂದು ಸಮಾಜದಲ್ಲಿ ಕಾಣಬಹುದಾಗಿದೆ. ಆದರೆ ಅಂತಹಾ ಮಹಾ ಕಾವ್ಯವನ್ನು ರಚಿಸಿದ, ಮಹಾ ತಪಸ್ವಿ, ಮೇಧಾವಿ ವಾಲ್ಮೀಕಿ ಮಹರ್ಷಿಗಳ ಬಗ್ಗೆ ಅರಿತು ಮಾತನಾಡುವವರು ಬಹಳ ವಿರಳ ಎಂದು ಜಿ.ಪಂ. ಶಿಕ್ಷಣ ಮತ್ತು ಆರೋಗ್ಯ ಸ್ಥಾಯಿ ಸಮಿತಿ ಅಧ್ಯಕ್ಷ ಕೆ.ಕೆ. ಶಾಹುಲ್ ಹಮೀದ್ ಹೇಳಿದರು. ಪರಿಶಿಷ್ಟ ವರ್ಗಗಳ ಕಲ್ಯಾಣ ಇಲಾಖೆ, ತಾಲೂಕು ಆಡಳಿತ, ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿ, ಪಟ್ಟಣ ಪಂಚಾಯತ್ ಬೆಳ್ತಂಗಡಿ, ತಾಲೂಕು ಸಮಾಜ ಕಲ್ಯಾಣ ಇಲಾಖೆ ಇವರುಗಳ ಸಂಯುಕ್ತ ಆಶ್ರಯದಲ್ಲಿ ತಾ.ಪಂ. ಸಭಾಂಗಣದಲ್ಲಿ ಅ. 5 ರಂದು ನಡೆದ ಶ್ರೀ ಮಹರ್ಷಿ ವಾಲ್ಮೀಕಿ ಜಯಂತಿ ಆಚರಣೆಯನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಪ್ರಪಂಚದ ಸಾಹಿತ್ಯಕ್ಕೆ ರಾಮಾಯಣ ಮಹಾಕಾವ್ಯ ಅತ್ಯಪೂರ್ವ ಕೊಡುಗೆ: ಕುಳಮರ್ವ
ಪ್ರಧಾನ ಉಪನ್ಯಾಸ ನೀಡಿದ ಪುಂಜಾಲಕಟ್ಟೆ ಸರಕಾರಿ ಪ್ರಥಮ ದರ್ಜೆ ಕಾಲೇಜು ಪ್ರಾಂಶುಪಾಲ ಗಣಪತಿ ಭಟ್ ಕುಳಮರ್ವ ಮಾತನಾಡಿ, ಪ್ರಪಂಚದ ಸಾಹಿತ್ಯಕ್ಕೆ ಶ್ರೀ ರಾಮಾಯಣ ಮಹಾ ಕಾವ್ಯ ಮೊತ್ತಮೊದಲ ಅಪೂರ್ವ ಕೊಡುಗೆ, ಇಲ್ಲಿ ಜಾತಿ ಮುಖ್ಯವಲ್ಲ, ಸಾಧನೆ ಮಾತ್ರಪರಿಗಣನೀಯ. ರಾಮಾಯಣ ಮಹಾಕಾವ್ಯವು ಹಲವಾರು ಟೀಕೆ, ಹೊಗಳಿಕೆ, ತೆಗಳಿಕೆಯನ್ನು ಮೆಟ್ಟಿನಿಂತ ಕಾವ್ಯವೂ ಕೂಡ ಹೌದು. ಅಂತಹಾ ಮೇಧಾವಿ ಕವಿ ಮಹಿರ್ಷಿ ವಾಲ್ಮೀಕಿಯವರು ಎಂದು ಬಣ್ಣಿಸಿದರು. ಅಧ್ಯಕ್ಷತೆಯನ್ನು ಜಿ.ಪಂ. ಸದಸ್ಯ ಪಿ. ಧರಣೇಂದ್ರ ಕುಮಾರ್ ವಹಿಸಿದ್ದರು. ತಾ.ಪಂ. ಸ್ಥಾಯಿ ಸಮಿತಿ ಅಧ್ಯಕ್ಷ ಸುಧೀರ್ ಆರ್. ಸುವರ್ಣ, ಜಿ.ಪಂ. ಸದಸ್ಯ ಶೇಖರ್ ಕುಕ್ಕೇಡಿ, ನಗರ ಪಂಚಾಯತ್ ಮುಖ್ಯಾಧಿಕಾರಿ ಜೆಸಿಂತಾ ಲೂಯಿಸ್, ತಾ.ಪಂ. ಕಾರ್ಯನಿರ್ವಹಣಾಧಿಕಾರಿ ಬಸವರಾಜ್ ಕೆ. ಅಯ್ಯಣ್ಣನವರ್, ತಾಲೂಕು ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿ ಅಧ್ಯಕ್ಷ, ತಹಶಿಲ್ದಾರ್ ಮುಹಮ್ಮದ್ ಇಸಾಕ್, ಮುಖ್ಯ ಅತಿಥಿಗಳಾಗಿ ಭಾಗಿಯಾಗಿದ್ದರು. ತಾಲೂಕು ಸಮಾಜ ಕಲ್ಯಾಣ ಇಲಾಖೆ ಸಹಾಯಕ ನಿರ್ದೇಶಕ ಮೋಹನ್ ಕುಮಾರ್ ಸ್ವಾಗತಿಸಿದರು. ಸಮಾಜ ಕಲ್ಯಾಣ ಇಲಾಖೆಯ ಹೇಮಾವತಿ ಕಾರ್ಯಕ್ರಮ ನಿರೂಪಿಸಿದರು.

ujirege balekudrushriಉಜಿರೆ: ಸನಾತನ ಸಂಸ್ಕೃತಿಯನ್ನು ನಾವು ದೂರವಿಟ್ಟರೂ ವಿದೇಶಿಯರು ಅದನ್ನು ಮೆಚ್ಚಿ ಅನುಸರಿಸುತ್ತಿದ್ದಾರೆ. ಯೋಗ, ಧ್ಯಾನ, ಆಯುರ್ವೇದಗಳಲ್ಲಿ ಆಸಕ್ತಿ ಬೆಳೆಸಿಕೊಂಡು ಉತ್ತಮ ಸಾಧನೆ ಮಾಡುತ್ತಿದ್ದಾರೆ. ವಿಶಿಷ್ಠ ಪರಂಪರೆಯುಳ್ಳ ನಮ್ಮ ದೇಶವನ್ನು ಪ್ರೀತಿಸಿದಾಗ ಮಾತ್ರ ನಮ್ಮ ಆಚರಣೆಗಳಿಗೆ ಅರ್ಥ ಬರುತ್ತದೆ ಎಂದು ಉಡುಪಿ ಹಂಗಾರಕಟ್ಟೆ ಬಾಳೆಕುದ್ರು ಮಠದ ಶ್ರೀ ನೃಸಿಂಹಾಶ್ರಮ ಸ್ವಾಮೀಜಿ ನುಡಿದರು. ಅವರು ಅ.7ರಂದು ಉಜಿರೆ ಶ್ರೀ ಜನಾರ್ದನ ದೇವಸ್ಥಾನಕ್ಕೆ ಭೇಟಿ ನೀಡಿ ಆಶೀರ್ವಚನ ನೀಡಿದರು. ದೇವಸ್ಥಾನದ ವತಿಯಿಂದ ವಾದ್ಯ ವೇದ ಘೋಷದೊಂದಿಗೆ ಶ್ರೀಗಳನ್ನು ಬರಮಾಡಿಕೊಂಡು ಆಡಳಿತ ಮೊಕ್ತೇಸರ ವಿಜಯರಾಘವ ಪಡ್ವೆಟ್ನಾಯ ಫಲಕಾಣಿಕೆ ಸಮರ್ಪಿಸಿ ಗೌರವಿಸಿದರು.
ತಾಲೂಕು ತುಳು ಶಿವಳ್ಳಿ ಸಭಾಧ್ಯಕ್ಷ ರಾಘವೇಂದ್ರ ಬೈಪಾಡಿತ್ತಾಯ, ಉಪಾಧ್ಯಕ್ಷ ನಾಗೇಶ್ ರಾವ್ ಮುಂಡ್ರುಪ್ಪಾಡಿ, ಶರತ್‌ಕೃಷ್ಣ ಪಡ್ವೆಟ್ನಾಯ, ಬಾಲಕೃಷ್ಣ ಅರಿಪಾಡಿತ್ತಾಯ, ಗಿರೀಶ ಕುದ್ರೆಂತಾಯ, ಸುರೇಶ ಕುದ್ರೆಂತಾಯ, ರವೀಂದ್ರ ಒಪ್ಪಂತ್ತಾಯ, ಮೊದಲಾದವರು ಉಪಸ್ಥಿತರಿದ್ದರು. ಶರತ್‌ಕೃಷ್ಣ ಪಡ್ವೆಟ್ನಾಯ ಸ್ವಾಗತಿಸಿ, ಮುರಳೀಕೃಷ್ಣ ಆಚಾರ್ ನಿರೂಪಿಸಿ, ವಂದಿಸಿದರು.
ಶ್ರೀ ಚಕ್ರಾರ್ಚನೆ: ಅಜಿತ್‌ನಗರ ಚಕ್ರಪಾಣಿ ಸರಳಾಯರ ಮನೆಯಲ್ಲಿ ಶ್ರೀಗಳವರು ಎರಡು ದಿನ ವಾಸ್ತವ್ಯವಿದ್ದು, ಶ್ರೀ ಚಕ್ರಾರ್ಚನೆ ಪೂಜೆ ನೆರವೇರಿಸಿದರು.

ujire sheni prasasti pradanaಇದೇ ಸಂದರ್ಭದಲ್ಲಿ ಉಜಿರೆಯ ಹಿರಿಯ ಯಕ್ಷಗಾನ ತಾಳಮದ್ದಳೆ ಅರ್ಥಧಾರಿ ಸುರೇಶ ಕುದ್ರೆಂತಾಯರಿಗೆ ಶೇಣಿ ಪ್ರಶಸ್ತಿ ಪ್ರದಾನ ಮಾಡಲಾಯಿತು. ಹಿರಿಯ ಮದ್ದಳೆ ವಾದಕ ಉಜಿರೆಯ ವಾಸುದೇವ ಆಚಾರ್ಯ ಅವರನ್ನು ಸನ್ಮಾನಿಸಲಾಯಿತು. ಯಕ್ಷಭಾರತಿ ಅಧ್ಯಕ್ಷ ಹರಿದಾಸ ಗಾಂಭೀರ ಪ್ರಶಸ್ತಿ ಸನ್ಮಾನಿತರನ್ನು ಅಭಿನಂದಿಸಿದರು. ರವೀಂದ್ರ ಶೆಟ್ಟಿ ಬಳೆಂಜ ಪ್ರಶಸ್ತಿ ಪತ್ರ ವಾಚಿಸಿದರು. ಸುರೇಶ ಕುದ್ರೆಂತಾಯರು ಶೇಣಿ ಕುರಿತಾದ ಆಶುಕವಿತೆಯನ್ನು ಹಾಡಿ ಪ್ರತಿವಚನ ನುಡಿದರು.

ಉಜಿರೆ : ಹಿರಿಯ ಕಲಾವಿದರು ನೇಪಥ್ಯಕ್ಕೆ ಸರಿದಾಗ ಕಿರಿಯ ಕಲಾವಿದರಿಗೆ ಅವಕಾಶ ಮಾಡಿಕೊಡುವ ಮೂಲಕ ಯಕ್ಷಗಾನ ಕಲೆ ಮತ್ತು ಕಲಾವಿದರನ್ನು ಪ್ರೋತ್ಸಾಹಿಸಬೇಕಾದುದು ಅತ್ಯಗತ್ಯ ಎಂದು ಉಜಿರೆ ಶ್ರೀ ಜನಾರ್ದನ ದೇವಸ್ಥಾನದ ಆಡಳಿತ ಮೊಕ್ತೇಸರ ವಿಜಯರಾಘವ ಪಡ್ವೆಟ್ನಾಯ ನುಡಿದರು.
ಅವರು ಅ.8ರಂದು ಉಜಿರೆ ಶ್ರೀ ಶಾರದಾ ಮಂಟಪದಲ್ಲಿ ಶ್ರೀ ಜನಾರ್ದನ ದೇವಸ್ಥಾನದ ಆಶ್ರಯದಲ್ಲಿ ಯಕ್ಷಗಾನ ತಾಳಮದ್ದಳೆ ಸಪ್ತಾಹ ಸಮಿತಿ, ಮಿತ್ರಮಂಡಳಿ ಮುಂಡಾಜೆ ಮತ್ತು ಯಕ್ಷಭಾರತಿ ಕನ್ಯಾಡಿ ನೇತೃತ್ವದಲ್ಲಿ ಶೇಣಿ ಜನ್ಮಶತಮಾನೋತ್ಸವದ ಅಂಗವಾಗಿ ನಡೆದ ಯಕ್ಷಗಾನ ತಾಳಮದ್ದಳೆ ಸಪ್ತಾಹ-2017ರ ಸಮಾರೋಪ ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಶೇಣಿ ಸಂಸ್ಮರಣೆಗೈದ ಯಕ್ಷಗಾನ ಬಯಲಾಟ ಅಕಾಡೆಮಿ ಮಾಜಿ ಸದಸ್ಯ ತಾರಾನಾಥ ಬಲ್ಯಾಯ ಶೇಣಿಯವರ ಮಾತುಗಳಲ್ಲಿ ಹೊಸತನ, ಸಮಕಾಲೀನ ವೈಚಾರಿಕ ಸಾಹಿತ್ಯ, ಸಾರ್ವಕಾಲಿಕ ಮೌಲ್ಯ ಹೊಂದಿದ್ದು, ಯಾವುದೇ ವಸ್ತುವನ್ನು ಸುಂದರ ಸಾಹಿತ್ಯಿಕ ಕಲಾಕೃತಿಯಾಗಿ ರೂಪಿಸಿದ ಕನ್ನಡ ಸಾಹಿತ್ಯದ ಯುಗಪುರುಷ ಎಂದರು.
ಮುಖ್ಯ ಅತಿಥಿಗಳಾಗಿ ಧರ್ಮಸ್ಥಳ ಜಮಾ ಉಗ್ರಾಣದ ಮುತ್ಸದ್ದಿ ಬಿ. ಭುಜಬಲಿ, ಬೆಳ್ತಂಗಡಿಯ ನೋಟರಿ ವಕೀಲ ಮರಳೀಧರ ಭಟ್, ಪ್ರಕಾಶ್ ಇಲೆಕ್ಟ್ರಾನಿಕ್ಸ್ ಸಮೂಹ ಮಾಲಕ ಪುಷ್ಪರಾಜ ಶೆಟ್ಟಿ, ಬೆಳ್ತಂಗಡಿ ಪದವಿ ಕಾಲೇಜಿನ ಪ್ರಾಧ್ಯಾಪಕ ಟಿ.ಕೆ ಶರತ್‌ಕುಮಾರ್ ಭಾಗವಹಿಸಿದ್ದರು. ಧರ್ಮಸ್ಥಳದ ನಾರಾಯಣ ಕುದ್ರೆಂತ್ತಾಯ, ಸಪ್ತಾಹದ ಕಾರ್ಯಾಧ್ಯಕ್ಷ ರಾಘವೇಂದ್ರ ಬೈಪಾಡಿತ್ತಾಯ ಉಪಸ್ಥಿತರಿದ್ದರು. ಶೇಣಿಗೋಪಾಲಕೃಷ್ಣ ಭಟ್ ಚಾರಿಟೇಬಲ್ ಟ್ರಸ್ಟಿನ ಪಿ.ವಿ. ರಾವ್ ಪ್ರಾಸ್ತಾವಿಕವಾಗಿ ಮಾತನಾಡಿದರು. ಸಮಿತಿ ಅಧ್ಯಕ್ಷ ಶರತ್‌ಕೃಷ್ಣ ಪಡ್ವೆಟ್ನಾಯ ಸ್ವಾಗತಿಸಿದರು. ಸಪ್ತಾಹ ಸಮಿತಿ ಪ್ರಧಾನ ಸಂಚಾಲಕ ಚಂದ್ರಮೋಹನ ಮರಾಠೆ ಕಾರ್ಯಕ್ರಮ ನಿರೂಪಿಸಿ, ದಿವಾಕರ ಆಚಾರ್ಯ ಗೇರುಕಟ್ಟೆ ವಂದಿಸಿದರು. ಹರೀಶ್ ಕೊಳ್ತಿಗೆ, ಮಹೇಶ್ ಕನ್ಯಾಡಿ ಮೊದಲಾದವರು ಸಹಕರಿಸಿದರು.
ಪುರುಷೋತ್ತಮ ಭಟ್ ನಿಡುವಜೆ ಮತ್ತು ಮಹೇಶ್ ಕನ್ಯಾಡಿ ಹಾಡುಗಾರಿಕೆಯಲ್ಲಿ `ಕರ್ಣಭೇದನ’ ತಾಳಮದ್ದಳೆ ಹಾಗೂ `ಸುದರ್ಶನ ವಿಜಯ ಅಗ್ರಪೂಜೆ’ ಯಕ್ಷಗಾನ ಬಯಲಾಟ ಪ್ರದರ್ಶಿಸಲ್ಪಟ್ಟಿತು.

Shirlalu vivida kamagari udgataneಬೆಳ್ತಂಗಡಿ : ಲೋಕೋಪಯೋಗಿ ಇಲಾಖೆ, ಸಣ್ಣ ನೀರಾವರಿ ಇಲಾಖೆ ಇದರ ಆಶ್ರಯದಲ್ಲಿ ಶಿರ್ಲಾಲು ಮತ್ತು ಬಳೆಂಜ ಗ್ರಾ.ಪಂ ವ್ಯಾಪ್ತಿಯಲ್ಲಿ ಒಟ್ಟು ರೂ. 8.86 ಕೋಟಿ ವೆಚ್ಚದ ವಿವಿಧ ಕಾಮಗಾರಿಗಳಿಗೆ ಶಿಲಾನ್ಯಾಸ ಹಾಗೂ ಉದ್ಘಾಟನೆಯನ್ನು ಬೆಳ್ತಂಗಡಿ ಕ್ಷೇತ್ರದ ಶಾಸಕ ಹಾಗೂ ಸಣ್ಣ ಕೈಗಾರಿಕಾ ನಿಗಮದ ಅಧ್ಯಕ್ಷ ಕೆ. ವಸಂತ ಬಂಗೇರ ಅವರು ಅ. 11ರಂದು ನೆರವೇರಿಸಿದರು.
ನಂತರ ಶಿರ್ಲಾಲು ಗ್ರಾ.ಪಂ ವಠಾರದಲ್ಲಿ ನಡೆದ ಸಮಾರಂಭವನ್ನು ಉದ್ದೇಶಿಸಿ ಮಾತನಾಡಿದ ಶಾಸಕರು ಬೆಳ್ತಂಗಡಿ ತಾಲೂಕಿನಲ್ಲಿ ಐದು ಬಾರಿ ಶಾಸಕನಾಗಿ ತಾಲೂಕಿನ 81 ಗ್ರಾಮಗಳಲ್ಲೂ ಅಭಿವೃದ್ಧಿ ಕಾರ್‍ಯವನ್ನು ನಡೆಸಿದ್ದೇನೆ. ರಸ್ತೆ ಸೇತುವೆ, ವಿದ್ಯುತ್, ಕುಡಿಯುವ ನೀರು ಸೇರಿದಂತೆ ಗ್ರಾಮದ ಮೂಲಭೂತ ಸೌಲಭ್ಯಗಳನ್ನು ಈಡೇರಿಸಿದ್ದೇನೆ. ಇಂದು ಶಿರ್ಲಾಲು ಮತ್ತು ಬಳೆಂಜ ಗ್ರಾ.ಪಂ.ನಲ್ಲಿ 8.86 ಕೋಟಿ ಕಾಮಗಾರಿಗಳ ಶಿಲಾನ್ಯಾಸ ಮತ್ತು ಉದ್ಘಾಟನೆಯನ್ನು ನೆರವೇರಿಸಿದ್ದೇನೆ ಎಂದರು.
ಬೆಳ್ತಂಗಡಿ ತಾಲೂಕಿನಲ್ಲಿ ವಿದ್ಯುತ್ ಅಭಿವೃದ್ಧಿಗಾಗಿ ಈಗಾಗಲೇ 18ಕೋಟಿ ಮಂಜೂರಾಗಿದ್ದು, ಟಿ.ಸಿ ಹಾಕುವ ಕೆಲಸಗಳು ನಡೆಯಲಿದೆ. 94ಸಿಯಲ್ಲಿ 16 ಸಾವಿರ ಮಂದಿಗೆ ಹಕ್ಕು ಪತ್ರ ನೀಡಿದ್ದೇನೆ. ಇನ್ನು 6 ತಿಂಗಳ ಅವಧಿ ಇದೆ. ಎಲ್ಲರಿಗೂ ಹಕ್ಕು ಪತ್ರ ಕೊಡುವ ಕೆಲಸ ಮಾಡುತ್ತೇನೆ ಎಂದು ಭರವಸೆ ನೀಡಿದರು. ತಾ.ಪಂ ಅಧ್ಯಕ್ಷೆ ದಿವ್ಯಜ್ಯೋತಿ ಮಾತನಾಡಿ ಬೆಳ್ತಂಗಡಿ ಕ್ಷೇತ್ರದ ಶಾಸಕರು ತಾಲೂಕಿನಲ್ಲಿ ಬಹಳಷ್ಟು ಕಾರ್‍ಯಗಳನ್ನು ಮಾಡಿದ್ದು, ಮುಂದೆಯೂ ಅವರೇ ಈ ಕ್ಷೇತ್ರದ ಶಾಸಕರಾಗಿ ಬರಬೇಕು ಎಂದರು.
ಜಿ.ಪಂ ಸದಸ್ಯ ಶೇಖರ ಕುಕ್ಕೇಡಿ ಮಾತನಾಡಿ ರಾಜ್ಯದಲ್ಲೇ ಭೌಗೋಳಿಕವಾಗಿ ಬೆಳ್ತಂಗಡಿ ತಾಲೂಕು 6ನೇ ದೊಡ್ಡ ತಾಲೂಕು ಆಗಿದ್ದು, ಪ.ಜಾತಿ-ಪಂಗಡದ 700 ರಸ್ತೆಗಳು ಕಾಂಕ್ರಿಟೀಕರಣವಾಗಿರುವುದು ರಾಜ್ಯದ ಇತಿಹಾಸದಲ್ಲೇ ಪ್ರಥಮವಾಗಿದೆ ಎಂದರು. ಲೋಕೋಪಯೋಗಿ ಇಲಾಖೆಯ ಸ.ಕಾ ಅಭಿಯಂತರ ಶಿವಪ್ರಸಾದ್ ಅವರು ಮಂಜೂರಾದ ಕಾಮಗಾರಿಗಳ ವಿವರ ನೀಡಿ, ಕಾಮಗಾರಿ ಅನುಷ್ಠಾನ ವೇಳೆ ಸಾರ್ವಜನಿಕರು ಸಹಕರಿಸುವಂತೆ ವಿನಂತಿಸಿದರು.
ಸಮಾರಂಭದ ಅಧ್ಯಕ್ಷತೆಯನ್ನು ಗ್ರಾ.ಪಂ ಅಧ್ಯಕ್ಷೆ ಶ್ರೀಮತಿ ಶಶಿಕಲಾ ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ತಾ.ಪಂ ಉಪಾಧ್ಯಕ್ಷೆ ವೇದಾವತಿ, ತಾ.ಪಂ ಸದಸ್ಯರಾದ ಶ್ರೀಮತಿ ಕೆ. ಜಯಶೀಲಾ, ಶ್ರೀಮತಿ ಸುಶೀಲ, ಶ್ರೀಮತಿ ವಿನೂಷಪ್ರಕಾಶ್, ಬಳೆಂಜ ಗ್ರಾ.ಪಂ ಅಧ್ಯಕ್ಷೆ ದೇವಕಿ, ಅಳದಂಗಡಿ ಗ್ರಾ.ಪಂ ಅಧ್ಯಕ್ಷ ಸತೀಶ್ ಮಿತ್ತಮಾರು, ನ.ಪಂ ಉಪಾಧ್ಯಕ್ಷ ಜಗದೀಶ್ ಡಿ., ಎಪಿಎಂಸಿ ಸದಸ್ಯ ಚಿದಾನಂದ ಪೂಜಾರಿ ಎಲ್ದಡ್ಕ ಭಾಗವಹಿಸಿದ್ದರು. ಕಾರ್ಯಕ್ರಮದಲ್ಲಿ ಕೆ.ಎಸ್ ಯೋಗೀಶ್ ಕುಮಾರ್ ನಡಕ್ಕರ, ಮಾಜಿ ತಾ.ಪಂ ಸದಸ್ಯ ಧರ್ಣಪ್ಪ ಪೂಜಾರಿ, ಲೋಕೋಪಯೋಗಿ ಇಲಾಖಾ ಸಹಾಯಕ ಕಾರ್ಯಪಾಲಕ ಅಭಿಯಂತರ ಶಿವಪ್ರಸಾದ್ ಅಜಿಲ, ಸಹಾಯಕ ಅಭಿಯಂತರ ಗುರುಪ್ರಸಾದ್, ಗುಣಮ್ಮ ಜೈನ್, ಗ್ರಾ.ಪಂ ಉಪಾಧ್ಯಕ್ಷ ಸಂಜೀವ ದೇವಾಡಿಗ, ಕಿಶೋರ್ ಹೆಗ್ಡೆ ಎರ್ಮೊತ್ತೋಡಿ, ಕಾಂಗ್ರೆಸ್ ಗ್ರಾಮೀಣ ಸಮಿತಿ ಅಧ್ಯಕ್ಷ ಶ್ರೀನಿವಾಸ್ ಕಿಣಿ, ನಾರಾಯಣ ರಾವ್, ಮಾಜಿ ಅಧ್ಯಕ್ಷ ಪುಷ್ಪರಾಜ್, ಇಸುಬು ಶಾಫಿ, ಶ್ರೀಮತಿ ಶೀಲಾ, ನವೀನ್ ಸಾಮಾನಿ, ಸುಬ್ರಹ್ಮಣ್ಯ ಭಟ್, ಸುಪ್ರಿಯ, ಅರುಣ್ ಕುಮಾರ್, ಕುಶಾಲಪ್ಪ ಗೌಡ, ಸರೋಜಿನಿ ಮೊದಲಾದವರು ಉಪಸ್ಥಿತರಿದ್ದರು.
ಈ ಸಂದರ್ಭದಲ್ಲಿ ಜಿ.ಪಂ ಸದಸ್ಯ ಶೇಖರ ಕುಕ್ಕೇಡಿ, ತಾ.ಪಂ ಸದಸ್ಯೆ ಜಯಾಶೀಲ, ಲೋಕೋಪಯೋಗಿ ಇಲಾಖಾ ಸಹಾಯಕ ಕಾರ್ಯಪಾಲಕ ಅಭಿಯಂತರ ಶಿವಪ್ರಸಾದ್ ಅಜಿಲ, ಗ್ರಾ.ಪಂ ಅಧ್ಯಕ್ಷೆ ಶಶಿಕಲಾ ಇವರನ್ನು ಅಭಿನಂದಿಸಲಾಯಿತು. ಶಾಸಕ ಕೆ. ವಸಂತ ಬಂಗೇರರನ್ನು ಊರವರು, ಸ್ಥಳೀಯ ಮಸೀದಿಯವರು ಹಾಗೂ ಊರಿನ ಗಣ್ಯರು ಶಾಲು ಹೊದಿಸಿ ಸ್ಮರಣಿಕೆ ನೀಡಿ ಗೌರವಿಸಿದರು. ಶಿರ್ಲಾಲು ಗ್ರಾ.ಪಂ ಅಭಿವೃದ್ಧಿ ಅಧಿಕಾರಿ ಶೇಖರ್ ಸ್ವಾಗತಿಸಿದರು. ಶಿರ್ಲಾಲು ಸಿ.ಎ ಬ್ಯಾಂಕ್ ಮುಖ್ಯ ಕಾರ್‍ಯನಿರ್ವಾಹಣಾಧಿಕಾರಿ ನಿತ್ಯಾನಂದ ಶೆಟ್ಟಿ ಪ್ರಸ್ತಾವಿಕವಾಗಿ ಮಾತನಾಡಿದರು. ತಾಲೂಕು ಸಂಯೋಜಕ ಜಯಾನಂದ ಲಾಯಿಲ ಕಾರ್ಯಕ್ರಮ ನಿರೂಪಿಸಿ, ಶ್ರೀಮತಿ ವಿಮಲ ಹೆಗ್ಡೆ ಧನ್ಯವಾದವಿತ್ತರು.

siri visesa riyayithi dara kaditha marata udhgataneಲಾಯಿಲ : ಶ್ರೀ ಧರ್ಮಸ್ಥಳ ಸಿರಿ ಗ್ರಾಮೋದ್ಯೋಗ ಸಂಸ್ಥೆ ಬೆಳ್ತಂಗಡಿ ಇದರ ಟಿ.ಬಿ ಕ್ರಾಸ್‌ನ ಬಳಿಯಿರುವ ಕೇಂದ್ರ ಕಛೇರಿಯಲ್ಲಿ ಅ.9 ರಂದು ದೀಪಾವಳಿ ಪ್ರಯುಕ್ತ ವಿಶೇಷ ರಿಯಾಯಿತಿ ದರ ಕಡಿತ ಮಾರಾಟ ಮತ್ತು ಪ್ರದರ್ಶನ ಮಳಿಗೆಯನ್ನು ಉಜಿರೆ ಎಸ್.ಡಿ.ಎಂ ಕಾಲೇಜಿನ ಪ್ರಾಂಶುಪಾಲ ಡಾ| ಮೋಹನ್ ನಾರಾಯಣ ಉದ್ಘಾಟಿಸಿ ಶುಭ ಹಾರೈಸಿದರು. ಸಿರಿ ಸಂಸ್ಥೆಯ ಯೋಜನಾಧಿಕಾರಿ ರೋಹಿತಾಕ್ಷ ಮಾತನಾಡುತ್ತ ಈ ಸಂಸ್ಥೆಯು ಕಳೆದ 2004 ರಿಂದ ಮಹಿಳೆಯರಿಗೆ ಉದ್ಯೋಗಾವಕಾಶ ನೀಡುವ ನಿಟ್ಟಿನಲ್ಲಿ ಲಾಭ ರಹಿತ ಉದ್ದೇಶವಾಗಿ ದುಡಿಯುವ ಸಂಸ್ಥೆಯಾಗಿದ್ದು ಮಾರುಕಟ್ಟೆಯಲ್ಲಿ ಸ್ಪರ್ಧಾತ್ಮಕವಾಗಿ ಬೆಳೆದು ಬಂದಿರುತ್ತದೆ. ಇದೀಗ ದೀಪಾವಳಿ ಪ್ರಯುಕ್ತ ಟಿ.ಬಿ.ಕ್ರಾಸ್‌ನ ಬಳಿಯಿರುವ ಕೇಂದ್ರ ಕಛೇರಿಯಲ್ಲಿ ಈ ಎಲ್ಲ ಉತ್ಪನ್ನಗಳನ್ನು ಪ್ರದರ್ಶನ ಮತ್ತು ರಿಯಾಯಿತಿ ದರದಲ್ಲಿ ಮಾರಾಟ ಮಾಡಲಾಗುತ್ತಿದ್ದು ಎಲ್ಲ ಗ್ರಾಹಕರು ಇದರ ಸದುಪಯೋಗ ಪಡೆಯುವಂತೆ ಮನವಿ ಮಾಡಿಕೊಂಡರು.

LICಬೆಳ್ತಂಗಡಿ : ಭಾರತೀಯ ಜೀವ ವಿಮಾ ನಿಗಮ ಬೆಳ್ತಂಗಡಿ ಉಪಗ್ರಹ ಶಾಖೆಯು ಪ್ರಾರಂಭಗೊಂಡು ಯಶಸ್ವಿ 10ವರ್ಷ ಪೂರೈಸಿ 11ನೇ ವರ್ಷಕ್ಕೆ ಪಾದಾರ್ಪಣೆಗೊಂಡ ವಾರ್ಷಿಕೋತ್ಸವ ಅ. 12(ಇಂದು) ಉಪಗ್ರಹ ಶಾಖೆಯಲ್ಲಿ ಜರಗಿತು.
ಬಂಟ್ವಾಳ ಶಾಖೆಯ ಹಿರಿಯ ಶಾಖಾಧಿಕಾರಿ ಬಾಲಕೃಷ್ಣ ದೀಪ ಬೆಳಗಿಸಿ ಉದ್ಘಾಟಿಸಿ ಶುಭ ಹಾರೈಸಿದರು. ಉಪಗ್ರಹ ಶಾಖಾಧಿಕಾರಿ ಆರ್.ಡಿ ಯೋಗೇಂದ್ರ ಪ್ರಸ್ತಾವಿಕವಾಗಿ ಮಾತನಾಡಿ ಸ್ವಾಗತಿಸಿದರು. ಅಭಿವೃದ್ಧಿ ಅಧಿಕಾರಿಗಳಾದ ಎ. ಜಯದೇವ್, ಎಂ.ವಿ ಶೆಟ್ಟಿ, ಟಿ.ಡಿ ರಾಘವೇಂದ್ರ, ಉದಯಶಂಕರ್, ಆಡಳಿತಾಧಿಕಾರಿಗಳಾದ ಕೇಶವ ಎಂ., ಶ್ರೀನಿವಾಸ್, ಪ್ರತಿನಿಧಿಗಳು, ಗ್ರಾಹಕರು ಉಪಸ್ಥಿತರಿದ್ದರು. ವಾರ್ಷಿಕೋತ್ಸವದ ಅಂಗವಾಗಿ ಹೊಸ ವ್ಯವಹಾರ ಸ್ಪರ್ಧೆಯಲ್ಲಿ ಸಾಧನೆಗೈದ ಪ್ರತಿನಿಧಿಗಳನ್ನು ಗುರುತಿಸಿ ಗೌರವಿಸಲಾಯಿತು.

Nagara panchayath vanijya sankeerna shilanyasaಬೆಳ್ತಂಗಡಿ : ಬೆಳ್ತಂಗಡಿ ನಗರ ಪಂಚಾಯತ್ ವತಿಯಿಂದ ಬೆಳ್ತಂಗಡಿ ಸಂತೆಕಟ್ಟೆಯಲ್ಲಿ ನೂತನವಾಗಿ ನಿರ್ಮಾಣವಾಗಲಿರುವ ರೂ. 1.50 ಕೋಟಿ ವೆಚ್ಚದ ವಾಣಿಜ್ಯ ಸಂಕೀರ್ಣಕ್ಕೆ ಅ.11ರಂದು ಶಾಸಕರು ಹಾಗೂ ರಾಜ್ಯ ಸಣ್ಣ ಕೈಗಾರಿಕಾ ನಿಗಮದ ಅಧ್ಯಕ್ಷ ಕೆ. ವಸಂತ ಬಂಗೇರ ಶಿಲಾನ್ಯಾಸ ನೆರವೇರಿಸಿದರು.
ನಂತರ ಮಾತನಾಡಿದ ಶಾಸಕರು ಬೆಳ್ತಂಗಡಿ ಸಂತೆಕಟ್ಟೆಯ ವ್ಯಾಪಾರಸ್ಥರ ಅನುಕೂಲಕ್ಕಾಗಿ ಈ ವಾಣಿಜ್ಯ ಸಂಕೀರ್ಣ ನಿರ್ಮಾಣವಾಗುತ್ತಿದ್ದು, ಇದರ ಸದುಪಯೋಗವನ್ನು ಪಡೆದುಕೊಳ್ಳುವಂತೆ ತಿಳಿಸಿದರು. ಅಧ್ಯಕ್ಷತೆಯನ್ನು ನ.ಪಂ ಅಧ್ಯಕ್ಷ ಮುಗುಳಿ ನಾರಾಯಣ ರಾವ್ ವಹಿಸಿದ್ದರು.
ಉಪಾಧ್ಯಕ್ಷ ಜಗದೀಶ್ ಡಿ., ನ.ಪಂ ಸ್ಥಾಯಿ ಸಮಿತಿ ಅಧ್ಯಕ್ಷೆ ಶ್ರೀಮತಿ ಮಮತಾ ಶೆಟ್ಟಿ, ಮಾಜಿ ಸ್ಥಾಯಿ ಸಮಿತಿ ಅಧ್ಯಕ್ಷ ಸಂತೋಷ್ ಕುಮಾರ್ ಜೈನ್, ನ.ಪಂ ಸದಸ್ಯರು, ಮುಖ್ಯಾಧಿಕಾರಿ ಜೆಸಿಂತಾ ಲೂಯಿಸ್, ಇಂಜಿನಿಯರ್ ಮಹಾವೀರ ಹಾಗೂ ನಾಗರಿಕರು ಉಪಸ್ಥಿತರಿದ್ದರು.

Milkತೋಟತ್ತಾಡಿ : 2016-17 ನೇ ಸಾಲಿನಲ್ಲಿ ಅತ್ಯುತ್ತಮ ಸಾಧನೆಗೈದ ಹಾಲು ಉತ್ಪಾದಕರ ಸಹಕಾರಿ ಸಂಘಗಳನ್ನು ಪ್ರೋತ್ಸಾಹಿಸುವ ನಿಟ್ಟಿನಲ್ಲಿ ದ. ಕ ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್ ವತಿಯಿಂದ ಕೊಡಮಾಡಿದ ಪ್ರೋತ್ಸಾಹ ಅತ್ಯುತ್ತಮ ಸಾಧನಾ ಪುರಸ್ಕಾರಕ್ಕೆ ತೋಟತ್ತಾಡಿ ಹಾಲು ಉತ್ಪಾದಕರ ಮಹಿಳಾ ಸಹಕಾರ ಸಂಘಕ್ಕೆ ಭಾಜನವಾಗಿದೆ.  ಸಹಕಾರಿ ಸಂಘದ ಅಧ್ಯಕ್ಷೆ ಪುಷ್ಪಾ ಶಾಜಿ, ಕಾರ್ಯದರ್ಶಿ ಗೀತಾ ಅವರು ಡಿಸಿಸಿ ಬ್ಯಾಂಕ್ ಅಧ್ಯಕ್ಷ ಡಾ| ಎಂ.ಎನ್ ರಾಜೇಂದ್ರ ಕುಮಾರ್ ಅವರಿಂದ ಪ್ರಶಸ್ತಿ ಸ್ವೀಕರಿಸಿದರು. ಚಿತ್ರ: ಕೆ.ಜೆ. ಸ್ಟುಡಿಯೋ.

BJP valmiki jayanthiಬೆಳ್ತಂಗಡಿ: ಭಾರತೀಯ ಜನತಾ ಪಾರ್ಟಿ ಬೆಳ್ತಂಗಡಿ ಮಂಡಲ ಹಾಗೂ ಎಸ್.ಟಿ ಮೋರ್ಚಾ ಬೆಳ್ತಂಗಡಿ ಮಂಡಲ ಇದರ ನೇತೃತ್ವದಲ್ಲಿ ವಿವಿಧ ಕ್ಷೇತ್ರಗಳ 100 ಮಂದಿ ಸಾಧಕರನ್ನು ಗುರುತಿಸಿ ಗೌರವಿಸುವುದರೊಂದಿಗೆ ಮಹರ್ಷಿ ವಾಲ್ಮೀಕಿ ಜಯಂತಿಯನ್ನು ಅ.೫ರಂದು ಸುವರ್ಣ ಆರ್ಕೇಡ್ ಸಭಾ ಭವನ ಬೆಳ್ತಂಗಡಿಯಲ್ಲಿ ಅರ್ಥ ಪೂರ್ಣವಾಗಿ ಆಚರಿಸಲಾಯಿತು.
ಸಮಾರಂಭದಲ್ಲಿ ಬೆಳ್ತಂಗಡಿ ತಾಲೂಕಿನ ವಿವಿಧ ಗ್ರಾಮಗಳ ನೂರು ಮಂದಿ ಸಾಧಕರನ್ನು ಶಾಲು ಹೊದಿಸಿ, ಸ್ಮರಣಿಕೆ ನೀಡಿ ಗಣ್ಯ ಅತಿಥಿಗಳನ್ನು ಸನ್ಮಾನಿಸಿ ಗೌರವ ಸಲ್ಲಿಸಿದರು. ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದ ಭಾ.ಜ.ಪ. ದ.ಕ. ಜಿಲ್ಲಾ ಅಧ್ಯಕ್ಷ ಸಂಜೀವ ಮಠಂದೂರು ಅವರು ಮಾತನಾಡಿ, ಕೃಷಿ ಮತ್ತು ಋಷಿ ಈ ದೇಶದ ಅಂತಸತ್ವ, ಇವರನ್ನು ಗೌರವಿಸುವ ಸಮಾಜ ನಮ್ಮದು, ರಾಮಾಯಾಣ ನಾವು ಹೇಗೆ ಬದುಕಬೇಕೆಂದು ವಿಶ್ವಕ್ಕೆ ಮಾರ್ಗದರ್ಶನ ನೀಡುವ ಗ್ರಂಥವಾ ಗಿದೆ. ಈ ದೇಶದ ಬದುಕು, ಸಂಸ್ಕೃತಿ, ರಾಮಾಧಾರಿತ ರಾಜಕಾರಣ ಹೇಗಿರ ಬೇಕು ಎಂಬುದನ್ನು ರಾಮಾಯಾಣದ ಮೂಲಕ ನಮಗೆ ದೊರೆಯುತ್ತದೆ. ರಾಮ ರಾಜ್ಯದ ಕಲ್ಪನೆ ಕೊಟ್ಟವರು ಮಹರ್ಷಿ ವಾಲ್ಮೀಕಿಯವರು ಮಹಾತ್ಮಾ ಗಾಂಧಿಯವರು ರಾಮರಾಜ್ಯದ ಕನಸು ಕಂಡಿದ್ದರು. ಪ್ರಧಾನಿ ನರೇಂದ್ರ ಮೋದಿಯವರು ರಾಮರಾಜ್ಯದ ಕನಸನ್ನು ಸಾಕಾರಗೊಳಿಸುವತ್ತಾ ಸಾಗುತ್ತಿದ್ದಾರೆ ಎಂದು ತಿಳಿಸಿದರು.
ಮುಖ್ಯ ಅತಿಥಿಗಳಾಗಿ ಭಾಗವಹಿ ಸಿದ್ದ ವಿಭಾಗ ಸಹ ಪ್ರಭಾರಿ ನ್ಯಾಯವಾದಿ ಪ್ರತಾಪಸಿಂಹ ನಾಯಕ್ ಅವರು ಮಾತನಾಡಿ, ವಾಲ್ಮೀಕಿಯವರು ಕಾಡಿನಲ್ಲಿ ಜೀವಿಸಿದರೂ ಜೀವನದ ಅರ್ಥವನ್ನು ಕಂಡುಕೊಂಡವರು, ರಾಮಾಯಾಣ ಮಹಾಕಾವ್ಯದ ಮೂಲಕ ಜಗತ್ತಿಗೆ ಉತ್ತಮ ಸಂದೇಶ ನೀಡಿದ್ದಾರೆ ಎಂದರು. ಬಿಜೆಪಿ ಯುವ ಮೋರ್ಚಾ ಜಿಲ್ಲಾಧ್ಯಕ್ಷ ಹರೀಶ್ ಪೂಂಜ ಮಾತನಾಡಿ ನೂರು ಮಂದಿ ಸಾಧಕರನ್ನು ಗುರುತಿಸುವು ದರೊಂದಿಗೆ ವಾಲ್ಮೀಕಿ ಜಯಂತಿಯನ್ನು ಅರ್ಥಪೂರ್ಣವಾಗಿ ಆಚರಿಸಲಾಗಿದೆ. ಇದು ಹಿಂದೂ ಸಮಾಜಕ್ಕೆ ಶಕ್ತಿ ಕೊಡುವ ಕಾರ್ಯ ಎಂದು ಮೆಚ್ಚುಗೆ ವ್ಯಕ್ತಪಡಿಸಿ ದರು. ಮಾಜಿ ಶಾಸಕ ಪ್ರಭಾಕರ ಬಂಗೇರ ಮಾತನಾಡಿ ಜಗತ್ತಿಗೆ ಜೀವನ ಸಂದೇಶ ನೀಡಿದ ವಾಲ್ಮೀಕಿಯವರ ಸಂದೇಶದಂತೆ ನಾವು ಬದುಕು ಸಾಗಿಸಬೇಕು ಎಂದು ಕರೆ ನೀಡಿದರು.
ಅಧ್ಯಕ್ಷತೆ ವಹಿಸಿದ್ದ ಮಂಡಲ ಅಧ್ಯಕ್ಷ ರಂಜನ್ ಗೌಡ ವಾಲ್ಮೀಕಿ ಸಮಾಜ ದವರನ್ನು ಗುರುತಿಸುವ ಕೆಲಸವನ್ನು ಇದುವರೆಗೆ ಯಾರೂ ಮಾಡಿಲ್ಲ ಭಾಜಪ ಇದನ್ನು ಮಾಡಿ ತೋರಿಸಿದೆ ಎಂದರು. ಎಸ್.ಕೆ.ಡಿ.ಆರ್.ಡಿ.ಪಿ.ಯ ಕೃಷಿ ಮೇಲ್ವಿಚಾರಕ ಉಮೇಶ್ ನಾಯ್ಕ ಕೇಳ್ದಡ್ಕ ವಾಲ್ಮೀಕಿ ಮಹರ್ಷಿಯವರು ಜೀವನದ ಬಗ್ಗೆ ಪ್ರಧಾನ ಭಾಷಣ ಮಾಡಿದರು. ಬೆಳ್ತಂಗಡಿ ಮಂಡಲ ಪ್ರಭಾರಿ ಕ್ಯಾ| ಬ್ರಿಜೇಶ್ ಚೌಟ ಕಾರ್ಯಕ್ರಮಕ್ಕೆ ಶುಭ ಹಾರೈಸಿದರು. ಗೋಪಾಲ ನಾಯ್ಕ ಮಾಚಾರು, ಜಿನ್ನಪ್ಪ ಮಲೆಕುಡಿಯ ನಾವೂರು, ಸರಸ್ವತಿ ಮಾಲಾಡಿ ಕಾರ್ಯಕ್ರಮವನ್ನು ದೀಪ ಬೆಳಗಿಸಿ ಉದ್ಘಾಟಿಸಿದರು.
ವೇದಿಕೆಯಲ್ಲಿ ಬಿಜೆಪಿ ಮಂಡಲ ಸಹ ಪ್ರಭಾರಿ ಭಾಗೀರಥಿ ಮುರುಳ್ಯ, ಬಿಜೆಪಿ ಯುವ ಮೋರ್ಚಾ ಅಧ್ಯಕ್ಷ ಸಂಪತ್ ಬಿ. ಸುವರ್ಣ, ಬಿಜೆಪಿ ಜಿಲ್ಲಾ ಉಪಾಧ್ಯಕ್ಷೆ ಶಾರದಾ ಆರ್.ರೈ, ತಾ.ಪಂ. ಉಪಾಧ್ಯಕ್ಷೆ ವೇದಾವತಿ, ಮಂಡಲ ಪ್ರಧಾನ ಕಾರ್ಯದರ್ಶಿ ಗಳಾದ ಸೀತಾರಾಮ ಬಿ.ಎಸ್, ಪ್ರಭಾಕರ ಶೆಟ್ಟಿ ಉಪ್ಪಡ್ಕ, ಎಸ್.ಟಿ. ಮೋರ್ಚಾ ಪ್ರಭಾರಿ ಲಿಂಗಪ್ಪ ನಾಕ, ತಾ.ಪಂ. ಸ್ಥಾಯಿ ಸಮಿತಿ ಅಧ್ಯಕ್ಷ ಸುಧೀರ್ ಆರ್.ಸುವರ್ಣ, ಜಿ.ಪಂ. ಸದಸ್ಯೆ ಸೌಮ್ಯಲತಾ, ತಾ.ಪಂ. ಸದಸ್ಯೆ ಲೀಲಾವತಿ, ಎಸ್.ಟಿ. ಮೋರ್ಚಾ ಅಧ್ಯಕ್ಷ ಆನಂದ ನಾಯ್ಕ, ಪ್ರಧಾನ ಕಾರ್ಯದರ್ಶಿ ಪ್ರಸಾದ್ ನಾಯ್ಕ, ನ.ಪಂ. ಸದಸ್ಯೆ ಲಲಿತಾ ಉಪಸ್ಥಿತರಿದ್ದರು.
ನಾರಾಯಣ ಆಚಾರ್ ಗೀತೆ ಹಾಡಿದರು. ಅಪ್ಪು ನಾಯ್ಕ ಮತ್ತು ಬಳಗದವರು ಪ್ರಾರ್ಥನೆ ಹಾಡಿದರು. ಜಿಲ್ಲಾ ಕಾರ್ಯದರ್ಶಿ ಹಾಗೂ ಜಿಲ್ಲಾ ಎಸ್.ಟಿ. ಮೋರ್ಚಾ ಪ್ರಭಾರಿ ಕೊರಗಪ್ಪ ನಾಯ್ಕ ಸ್ವಾಗತಿಸಿದರು. ರಾಜೇಶ್ ಪೆರ್ಮುಡ ಸನ್ಮಾನಿತರ ಪಟ್ಟಿ ವಾಚಿಸಿದರು. ತಾ.ಪಂ.ಸ. ವಿಜಯ ಗೌಡ ಕಾರ್ಯಕ್ರಮ ನಿರೂಪಿಸಿ, ಲಿಂಗಪ್ಪ ನಾಕ ವಂದಿಸಿದರು.

madanthyar jcಸನ್ಮಾನ, ಪುರಸ್ಕಾರ: ಸಮಾರೋಪದ ವೇದಿಕೆಯಲ್ಲಿ ರಿದಂ ಸಾಂಸ್ಕೃತಿಕ ವಿಕಾಸ ಕೇಂದ್ರ ಸುರತ್ಕಲ್ ಇದರ ನಿರ್ದೇಶಕ ಸುಧಾಕರ್ ಎನ್. ಸುರತ್ಕಲ್ ಅವರಿಗೆ ಜೇಸಿ ಕಲಾರತ್ನ ಪ್ರಶಸ್ತಿ, ವ್ಯವಹಾರ ಕ್ಷೇತ್ರದ ಸಾಧನೆಗಾಗಿ ಗಿರೀಶ್ ಪೈ ಕೊಲ್ಪೆದಬೈಲು ಅವರಿಗೆ ಸಾಧನಾಶ್ರೀ ಪುರಸ್ಕಾರ, ಪ್ರಗತಿಪರ ಕೃಷಿಕ ಕೃಷ್ಣಪ್ಪ ನಾಯ್ಕ್ ಅವರಿಗೆ ಜೈ ಕಿಸಾನ್ ಪ್ರಸಸ್ತಿ, ಮಾಜಿ ಸೈನಿಕ ಕಾಂತಪ್ಪ ಗೌಡ ಅವರಿಗೆ ಜೈ ಜವಾನ್ ಪ್ರಶಸ್ತಿ, ಬಿಜೆಪಿ ಯುವ ಮೋರ್ಚಾ ಅಧ್ಯಕ್ಷರಾಗಿರುವ ಸಂಪತ್ ಬಿ. ಸುವರ್ಣ ಅವರಿಗೆ ಜೇಸಿರತ್ನ ಪುರಸ್ಕಾರ ನೀಡಿ ಗೌರವಿಸಲಾಯಿತು.

ಮಡಂತ್ಯಾರು: ಜನಸಂಖ್ಯಾ ಸ್ಪೋಟ ದೇಶಕ್ಕೆ ಮಾರಕ ಎಂಬ ಭಾವನೆ ಇತ್ತು. ಆದರೆ ಅದೇ ಜನಸಂಖ್ಯೆ ಮತ್ತು ಯುವ ಸಮೂಹವನ್ನು ಸಂಪನ್ಮೂಲವಾಗಿ ಬಳಕೆ ಮಾಡಿಕೊಂಡಾಗ ಮಾರಕವಾಗುವ ಜನತೆ ಸಂಪತ್ತಾಗಿ ಪರಿವರ್ತನೆಯಾಗುತ್ತಾರೆ. ಜಡತ್ವ ಮತ್ತು ಆಲಸ್ಯ ಸ್ವಭಾವ ದೇಶದ ಬೆಳವಣಿಗೆಯಲ್ಲಿ ಹಿನ್ನಡೆ ಕೊಡುವಂತದ್ದಾಗಿದ್ದು, ಕ್ರಿಯಾಶೀಲ ವ್ಯಕ್ತಿಗೆ ಜಡತ್ವದ ಪ್ರದರ್ಶನ ಸಾಧ್ಯವೇ ಇಲ್ಲ. ಕ್ರಿಯಾಶೀಲ ವ್ಯಕ್ತಿ ಹೆಚ್ಚು ಕೆಲಸದಲ್ಲಿ ತೊಡಗಿಕೊಂಡಿರುವುದೇ ಆತನಿಗೆ ವಿಶ್ರಾಂತಿ ಇದ್ದಂತೆ. ಅಂತಹಾ ಚಟುವಟಿಕೆಯುಕ್ತ ಜೀವನವನ್ನು ಜೇಸಿಯಂತಹಾ ಸಂಸ್ಥೆ ನೀಡುತ್ತದೆ ಎಂದು ಅರಣ್ಯ, ಪರಿಸರ ಮತ್ತು ಜೀವಿಶಾಸ್ತ್ರ ಸಚಿವ ಬಿ. ರಮಾನಾಥ ರೈ ಅವರು ಹೇಳಿದರು
ಜೇಸಿಐ ಮಡಂತ್ಯಾರು ಇವರ ವತಿಯಿಂದ ಅ. 2 ರಿಂದ ಅ. 8 ರವರೆಗೆ ಮಡಂತ್ಯಾರು ಕೊರೆಯ ಕಂಪೌಂಡ್‌ನಲ್ಲಿ ಆಯೋಜಿಸಿದ್ದ ಸಂಭ್ರಮದ ಜೇಸಿ ಸಪ್ತಾಹ ಆಕಾಶ ದೀಪ- 2017 ಸಮಾರೋಪ ಸಮಾರಂಭದಲ್ಲಿ ಅವರು ಮಾತನಾಡುತ್ತಿದ್ದರು.
ಒಟ್ಟಿಗೆ ಸೇರಿ ಬೆಳೆಯುವುದು, ಪರಸ್ಪರ ಅರ್ಥಮಾಡಿಕೊಳ್ಳುವುದು ಸಮಾಜದಲ್ಲಿ ಮುಖ್ಯವಾದ ವಿಚಾರ. ಸುಂದರ ಭಾರತ ನಿರ್ಮಾಣ ಇಂದಿನ ಯುವಜನತೆ ಮತ್ತು ವಿದ್ಯಾರ್ಥಿಗಳ ಕೈಯಲ್ಲಿದೆ. ಆಧುನಿಕ ತಂತ್ರಜ್ಞಾನಗಳು ಸರಳವಾಗಿದ್ದು ಅದನ್ನು ದುರುಪಯೋಗಪಡಿಸಿ ಕೊಂಡು ಸುಳ್ಳು ಪ್ರಚಾರಗಳನ್ನು ಮಾಡುವಂತಹದ್ದು ದೇಶದ್ರೋಹಕ್ಕೆ ಸಮವಾದದ್ದು ಎಂದು ಮಾರ್ಮಿಕ ವಾಗಿ ನುಡಿದರು. ಸಭಾಧ್ಯಕ್ಷತೆಯನ್ನು ಜೇಸಿಐ ಮಡಂತ್ಯಾರು ಅಧ್ಯಕ್ಷ ರಾಜೇಶ್ ಪಿ. ಪುಂಜಾಲಕಟ್ಟೆ ವಹಿಸಿ ಸಭೆ
ಮುನ್ನಡೆಸಿದರು. ಮುಖ್ಯ ಅತಿಥಿಯಾಗಿದ್ದ ಮಡಂತ್ಯಾರು ಸೇಕ್ರೆಡ್ ಹಾರ್ಟ್ ಚರ್ಚ್‌ನ ಧರ್ಮಗುರುಗಳಾದ ರೆ. ಫಾ. ಬೇಸಿಲ್ ವಾಸ್ ಅವರು ಮಾತನಾಡಿ, ನಾನು ನನ್ನದು ಎಂಬ ಸ್ವಾರ್ಥ ತೊರೆದು ಕೀಳರಿಮೆ ಹೋಗಲಾಡಿಸಿಕೊಂಡು, ಆತ್ಮವಿಶ್ವಾಸದಿಂದ ಬೆಳೆಯುವ ಕಲೆಯನ್ನು ಜೇಸಿ ಸಂಸ್ಥೆ ಕಲಿಸಿಕೊಡುತ್ತದೆ ಎಂದರು. ಪೂರ್ವ ವಲಯಾಧ್ಯಕ್ಷ ರಾಮಚಂದ್ರ ರಾವ್ ದಿಕ್ಸೂಚಿ ಭಾಷಣ ಮಾಡಿದರು.
ವೇದಿಕೆಯಲ್ಲಿ ರೋಟರಿ ಕ್ಲಬ್ ಅಧ್ಯಕ್ಷ ಡಾ| ಸುಧೀರ್ ಪ್ರಭು, ಮುರಗೇಂದ್ರ ಮಿತ್ರಮಂಡಳಿ ಪುಂಜಾಲಕಟ್ಟೆ ಅಧ್ಯಕ್ಷ ಮೋಹನ್ ಸಾಲ್ಯಾನ್, ಉಜಿರೆಯ ಉದ್ಯಮಿ ದಾಮೋಧರ ಕಾಮತ್, ಮಡಂತ್ಯಾರು ಎಂ.ಆರ್. ಸುಪಾರಿ ಮಾಲಕ ಹೈದರ್ ಎಂ.ಆರ್, ದುರ್ಗಾ ಟ್ರೇಡರ್‍ಸ್ ಮಾಲಕ ಯಶೋಧರ ಬಂಗೇರ, ಆಟೋ ರಿಕ್ಷಾ ಚಾಲಕ ಮಾಲಕರ ಸಂಘದ ಅಧ್ಯಕ್ಷ ಮುಹಮ್ಮದ್, ಯುವ ಕಾಂಗ್ರೆಸ್ ತಾ| ಅಧ್ಯಕ್ಷ ಅಭಿನಂದನ್, ಕೆಥೋಲಿಕ್ ಸಭಾ ಅಧ್ಯಕ್ಷ ರೋಹಣ್ ಡಿಸೋಜಾ ಮುಖ್ಯ ಅತಿಥಿಗಳಾಗಿ ಭಾಗಿಯಾಗಿದ್ದರು. ವೇದಿಕೆಯಲ್ಲಿ ಜೇಸಿಐ ಮಡಂತ್ಯಾರು ಕಾರ್ಯದರ್ಶಿ ನವೀನ್ ಕೋಡ್ಲಕ್ಕೆ, ಸಪ್ತಾಹ ನಿರ್ದೇಶಕ ಶ್ರೀಧರ ಆಚಾರ್ಯ, ಸಪ್ರಾಹ ಸಹಸಂಯೋಜಕ ವಿನ್ಸೆಂಟ್ ಮೋರಾಸ್, ನಿಕಟಪೂರ್ವಾಧ್ಯಕ್ಷ ಜಯೇಶ್ ಬರೆಟ್ಟೋ, ಜೂನಿಯರ್ ಜೇಸಿ ಅಧ್ಯಕ್ಷ ಪ್ರಜ್ವಲ್ ಶೆಟ್ಟಿ, ಜೇಸಿರೆಟ್ ಅಧ್ಯಕ್ಷೆ ದಿವ್ಯರಾಣಿ ಹಾಗೂ ಎಲ್ಲಾ ಸದಸ್ಯರುಗಳು ಉಪಸ್ಥಿತರಿದ್ದು ಸಹಕಾರ ನೀಡಿದರು.

suddi COLORpdf BLDY.p65ಬೆಳ್ತಂಗಡಿ : ಶ್ರೀ ಗುರುನಾರಾಯಣ ಸ್ವಾಮಿ ಸೇವಾ ಸಂಘದ ಮಹಾಸಭೆ ಇತ್ತೀಚೆಗೆ ನಡೆದು 23 ಮಂದಿ ನಿರ್ದೇಶಕರುಗಳ ಆಯ್ಕೆ ಮಾಡಲಾಯಿತು. ಆ.8 ರಂದು ಸಂಘದ ಗೌರವಾಧ್ಯಕ್ಷ ಶಾಸಕ ಕೆ.ವಸಂತ ಬಂಗೇರರ ಅಧ್ಯಕ್ಷತೆಯಲ್ಲಿ ನೂತನ ಪದಾಧಿಕಾರಿಗಳ ಆಯ್ಕೆ ಮಾಡಲಾಯಿತು. ಅಧ್ಯಕ್ಷರಾಗಿ ಸೋಮನಾಥ ಬಂಗೇರ ವರ್ಪಾಳೆ, ಉಪಾಧ್ಯಕ್ಷೆಯಾಗಿ ಶ್ರೀಮತಿ ಸುಜಿತಾ ವಿ.ಬಂಗೇರ, ಪ್ರಧಾನ ಕಾರ್ಯದರ್ಶಿಯಾಗಿ ರಾಕೇಶ್ ಮೂಡುಕೋಡಿ, ಕೋಶಾಧಿಕಾರಿಯಾಗಿ ಶೇಖರ ಬಂಗೇರ ಹೇರಾಜೆ, ಜತೆ ಕಾರ್ಯದರ್ಶಿಯಾಗಿ ಕರುಣಾಕರ ಮರೋಡಿ, ಸಂಘಟನ ಕಾರ್ಯದರ್ಶಿಯಾಗಿ ಸಚಿನ್ ಕುಮಾರ್ ನೂಜೋಡಿ ಆಯ್ಕೆಯಾಗಿದ್ದಾರೆ.
ಇತರ ನಿರ್ದೇಶಕರುಗಳಾಗಿ ಹರಿದಾಸ ಕೇದೆ, ಕೃಷ್ಣಪ್ಪ ಪೂಜಾರಿ ಲಾಯಿಲ, ಜಯವಿಕ್ರಮ ಕರಾಯ, ಪಿ.ಜಾರಪ್ಪ ಪೂಜಾರಿ ಬೆಳಾಲು, ನಾರಾಯಣ ಪೂಜಾರಿ ಮಚ್ಚಿನ, ಅಭಿನಂದನ್ ಹರೀಶ್ ಕುಮಾರ್ ನಡ, ಸೂರ್ಯನಾರಾಯಣ ಡಿ.ಕೆ ಕೊಕ್ರಾಡಿ, ಲಿಂಗಪ್ಪ ಸಾಲಿಯಾನ್ ಪುದುವೆಟ್ಟು, ಚಂದ್ರಶೇಖರ ಕೋಟ್ಯಾನ್ ಸೋಣಂದೂರು, ಮಹೇಶ್ ಬಂದಾರು, ಚಂದ್ರಶೇಖರ ಎಂ. ಇಂದಬೆಟ್ಟು, ನಿತ್ಯಾನಂದ ನಾವರ, ಶ್ರೀಮತಿ ಶಾಂಭವಿ ಪಿ.ಬಂಗೇರ ಕುವೆಟ್ಟು, ಯಶೋಧರ ಪೂಜಾರಿ ಚಾರ್ಮಾಡಿ, ಹರೀಶ್ ಬರಮೇಲು ಉಜಿರೆ, ಸಂತೋಷ್ ಪಿ.ಕೋಟ್ಯಾನ್ ಬಳಂಜ, ಹರೀಶ್ ಸುವರ್ಣ ಕನ್ಯಾಡಿ II ಆಯ್ಕೆಯಾದರು.
ಚಂದ್ರಹಾಸ ಕೇದೆ ಚುನಾವಣಾಧಿಕಾರಿಯಾಗಿ ಸಹಕರಿಸಿದರು.

blind walkಬೆಳ್ತಂಗಡಿ : ಬೆಳ್ತಂಗಡಿ ಧರ್ಮಪ್ರಾಂತ್ಯದ ಸಮಾಜಸೇವೆ ವಿಭಾಗದ ಡಿ.ಕೆ.ಆರ್.ಡಿ.ಎಸ್ ಸಂಸ್ಥೆಯ ಮುಂದಾಳತ್ವದಲ್ಲಿ, ಲಯನ್ಸ್ ಕ್ಲಬ್, ಸಿರೋ ಮಲಬಾರ್ ಯುವ ಸಂಘಟನೆ, ಕರ್ನಾಟಕ ಸಿರೋ ಮಲಬಾರ್ ಕ್ಯಾಥೋಲಿಕ್ ಎಸೋಸಿಯೇಶನ್, ಸಂತ ತೋಮಸ್ ಕಾಲೇಜು, ಯುನಿಕ್ ಎಜು ಸ್ಕಿಲ್ಸ್, ಕಲ್ಪತರು ನರ್ಸಿಂಗ್ ಸ್ಕೂಲ್, ಸ್ನಾತಕೋತ್ತರ ಸಮಾಜ ಕಾರ್ಯ ವಿಭಾಗ ಉಜಿರೆ, ಜ್ಯೋತಿ ಆಸ್ಪತ್ರೆ ಲಾಯಿಲ, ಸ್ನೇಹಜ್ಯೋತಿ ಮಹಿಳಾ ತಾಲೂಕು ಒಕ್ಕೂಟ ಹಾಗೂ ಸಂತ ಲಾರೆನ್ಸ್ ಪ್ರಧಾನ ದೇವಾಲಯ ಇವುಗಳ ಸಹಭಾಗಿತ್ವದಲ್ಲಿ ಬೆಳ್ತಂಗಡಿ ಬ್ಲೈಂಡ್ ವಾಕ್ ಕಾರ್ಯಕ್ರಮವು ಇಂದು(ಅ.12) ಬೆಳ್ತಂಗಡಿ ನ.ಪಂ ಬಳಿಯಿಂದ ಅಂಬೇಡ್ಕರ್ ಭವನದವರೆಗೆ ರ್‍ಯಾಲಿ ನಡೆಯಿತು.

shadhi mahalಗುರುವಾಯನಕೆರೆ : ಶಾದಿಮಹಲ್ ನಿರ್ಮಾಣಕ್ಕೆ ಈ ಹಿಂದೆ ಸರಕಾರ ಅಲ್ಪ ಸಂಖ್ಯಾತರ ಕಲ್ಯಾಣ ಇಲಾಖೆಯ ಮೂಲಕ ನಿಗಧಿಪಡಿಸಿದ್ದ ಗ್ರಾಮೀಣ ಪ್ರದೇಶದಲ್ಲಿ 50 ಲಕ್ಷ ರೂ ಇದ್ದುದನ್ನು 1 ಕೋಟಿಗೆ ಮತ್ತು ಪಟ್ಟಣಕ್ಕೆ 1 ಕೋಟಿಯಿಂದ 2 ಕೋಟಿ ರೂ. ಗಳಿಗೆ ದ್ವಿಗುಣಗೊಳಿಸಲಾಗಿದೆ. ಅಲ್ಲದೆ ನಾನು ಅಧಿಕಾರಕ್ಕೆ ಬಂದ 15 ತಿಂಗಳ ಅಂತರದಲ್ಲಿ ಅಪೂರ್ಣಾವಸ್ಥೆಯಲ್ಲಿದ್ದ ಶಾದಿಮಹಲ್ ಕಟ್ಟಡಗಳನ್ನು ಪೂರ್ಣಗೊಳಿಸಲು ಅಗತ್ಯವಿರುವ 113 ಕೋಟಿ ರೂ. ಗಳನ್ನು ಬಿಡುಗಡೆಗೊಳಿಸಲಾಗಿದೆ ಎಂದು ಕರ್ನಾಟಕ ಪ್ರೌಢ ಮತ್ತು ಪ್ರಾಥಮಿಕ ಶಿಕ್ಷಣ ಸಚಿವ, ವಕ್ಫ್ ಮತ್ತು ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆ ಸಚಿವ ತನ್ವೀರ್ ಸೇಠ್ ಹೇಳಿದರು.
ಗುರುವಾಯನಕೆರೆ ಹಝ್ರತ್ ಶೈಖ್ ಹಯಾತುಲ್ ಔಲಿಯಾ ದರ್ಗಾಶರೀಫ್ ಮತ್ತು ಜುಮ್ಮಾ ಮಸೀದಿ ಇದರ ವತಿಯಿಂದ ಸರಕಾರದ ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಯ ಅನುದಾನದಲ್ಲಿ ನೂತನವಾಗಿ ನಿರ್ಮಿಸಿದ ಶಾದಿಮಹಲ್ ಸಭಾಭವನವನ್ನು ಅ. 10 ರಂದು ಉದ್ಘಾಟಿಸಿ ಅವರು ಮಾತನಾಡುತ್ತಿದ್ದರು.
ಮುಖ್ಯ ಅತಿಥಿಯಾಗಿ ಮಾತನಾಡಿದ ಜಿಲ್ಲಾ ಉಸ್ತುವಾರಿ ಸಚಿವ ಬಿ ರಮಾನಾಥ ರೈ ಅವರು, ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಯ ಸೌಲಭ್ಯಗಳನ್ನು ಪಡೆಯುವಲ್ಲಿ ಜಿಲ್ಲಾ ಮಟ್ಟದಲ್ಲಿ ಕೆಲವೊಂದು ನಿಯಮಾವಳಿಗಳು ಕಠಿಣವಾಗಿದ್ದು ಅವುಗಳನ್ನು ಸ್ವಲ್ಪ ಮಟ್ಟಿಗೆ ಸಡಿಲಗೊಳಿಸಿದಲ್ಲಿ ಸಮುದಾಯಕ್ಕೆ ಇನ್ನಷ್ಟು ಅನುಕೂಲತೆ ದೊರೆಯಲಿದೆ. ನಮ್ಮ ಜಿಲ್ಲೆಯಲ್ಲಿ ಯಾವತ್ತೂ ಸರಿಕಾರಿ ಅನುದಾನದ ದುರುಪಯೋಗ ನಡೆಯುವುದಿಲ್ಲ. ಈ ಬಗ್ಗೆ ನಿಮಗೆ ಸಂದೇಹ ಬೇಡ. ಕಾಯ್ದೆ ಸರಳೀ
ಕರಣದ ಬಗ್ಗೆ ಅಧಿಕಾರಿಗಳಿಗೆ ಸೂಕ್ತ ನಿರ್ದೇಶನ ನೀಡಬೇಕು ಎಂದು ಕೋರಿದರು.
ಸಭಾಧ್ಯಕ್ಷತೆ ವಹಿಸಿದ್ದ ಶಾಸಕ ವಸಂತ ಬಂಗೇರ ಮಾತನಾಡಿ, ಈ ಕ್ಷೇತ್ರದಲ್ಲಿ ನನ್ನನ್ನು ಜನತೆ 5 ಬಾರಿ ವಿವಿಧ ಪಕ್ಷಗಳಿಂದ ಆರಿಸಿ ಜನ ಸೇವೆ ಮಾಡಲು ಅವಕಾಶ ಮಾಡಿ ಕೊಟ್ಟಿದ್ದಾರೆ. ಎಂದೂ ಕೂಡ ಮತದಾರರಿಗೆ ಅಗೌರವವಾಗುವ ರೀತಿಯಲ್ಲಿ ನಾನು ನಡೆದುಕೊಂಡಿಲ್ಲ, ಅಲ್ಪಸಂಖ್ಯಾತ ಸಮುದಾಯ ದವರು ಎಂದರೆ ಅವರು ನಮ್ಮವರು ಎಂದು ಭಾವಿಸಿದ್ದೇನೆ ಎಂದರು. ಗುರುವಾಯನಕೆರೆಯಲ್ಲಿ ಸರಕಾರಿ ಅನುದಾನದಿಂದ ಶಾದಿಮಹಲ್ ನಿರ್ಮಿಸಿ ಆದಾಯವನ್ನು ಸಮುದಾಯದ ಏಳಿಗೆಗೆ ವಿನಿಯೋಗಿಸಲು ನಿರ್ಧರಿಸಿದ್ದಾರೆ. ಈ ಕಟ್ಟಡಕ್ಕೆ 50 ಲಕ್ಷ ರೂ. ಸರಕಾರ ನೀಡಿದೆ. ಆ ಅನುದಾನಕ್ಕೆ ಹೆಚ್ಚುವರಿಯಾಗಿ ಸೇರಿಸಿ ಸುಂದರವಾದ ಕಟ್ಟಡ ನಿರ್ಮಿಸಿದ್ದಾರೆ. ಈಗ ಸಮಿತಿಯ ಮುಂದೆ 35 ಲಕ್ಷದಷ್ಟು ಸಾಲವಿದ್ದು, ನೀವು ಬೆಂಗಳೂರಿಗೆ ಹೋದ ತಕ್ಷಣ ಉಳಿಕೆ 50 ಲಕ್ಷ ರೂ. ಅನುದಾನವನ್ನು ಬಿಡುಗಡೆಗೊಳಿಸಿ ನೆರವು ನೀಡಬೇಕು.
ಶಾಲಾ ದುರಸ್ತಿಗೆ ಇನ್ನೂ 3 ಕೋಟಿ ರೂ ಬೇಡಿಕೆ:
ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವರಾಗಿರುವ ತಾವು ಈಗಾಗಲೇ ತಾಲೂಕಿನ ಶಾಲೆಗಳ ದುರಸ್ಥಿಗೆ 2 ಕೋಟಿ ರೂ. ಒದಗಿಸಿಕೊಟ್ಟಿದ್ದೀರಿ. ಇನ್ನೂ ಕೆಲವು ಶಾಲೆಗಳು ತುರ್ತು ದುರಸ್ಥಿಯ ಅವಶ್ಯಕತೆ ಇದ್ದು ಇಲ್ಲಿ ಅಪಾಯಗಳು ಸಂಭವಿಸಿ ನಮ್ಮ ಸರಕಾರಕ್ಕೆ ಕೆಟ್ಟ ಹೆಸರು ಬರುವ ಮುನ್ನ ಇನ್ನೂ 3 ಕೋಟಿ ರೂ. ಗಳನ್ನು ದುರಸ್ಥಿಗಾಗಿ ಬಿಡುಗಡೆಮಾಡಬೇಕು ಎಂದು ಮನವಿ ಮಾಡಿದ ಶಾಸಕರು, ಸರಕಾರ ನೌಕರರ ಪೈಕಿ ಅತ್ಯಂತ ಪ್ರಾಮಾಣಿಕವಾಗಿ ಕೆಲಸ ಮಾಡುವವರು ಅಧ್ಯಾಪಕವೃಂದ ಎಂದು ಮೊದಲಿಸಿದರು.
ಮುಖ್ಯ ಅತಿಥಿಗಳಾಗಿದ್ದ ಜಿ.ಪಂ ಶಿಕ್ಷಣ ಮತ್ತು ಆರೋಗ್ಯ ಸ್ಥಾಯಿ ಸಮಿತಿ ಅಧ್ಯಕ್ಷ ಕೆ.ಕೆ ಶಾಹುಲ್ ಹಮೀದ್, ಭಾರತ್ ಸೇವಾದಳದ ರಾಜ್ಯ ಸಂಘಟಕ ಅಲ್ಫೋನ್ಸ್ ಫ್ರಾಂಕೋ ಸಂದರ್ಭೋಚಿತವಾಗಿ ಶುಭ ಕೋರಿದರು. ಪಟ್ಟಣ ಪಂಚಾಯತ್ ಅಧ್ಯಕ್ಷ ಮುಗುಳಿ ನಾರಾಯಣ ರಾವ್, ಜಿಲ್ಲಾ ವಕ್ಫ್ ಅಧಿಕಾರಿ ಹಾಜಿ ಅಬೂಬಕ್ಕರ್, ಜಿಲ್ಲಾ ಅಲ್ಪಸಂಖ್ಯಾತ ಕಲ್ಯಾಣಾಧಿಕಾರಿ ಎ ಉಸ್ಮಾನ್, ಜಿ.ಪಂ ಸದಸ್ಯ ಪಿ ಧರಣೇಂದ್ರ, ವಕ್ಫ್ ಸಚಿವರ ಸರಕಾರಿ ಆಪ್ತ ಕಾರ್ಯದರ್ಶಿ ಸಿದ್ದೀಕ್ ಪಾಶಾ, ಗುರುವಾಯನಕೆರೆ ಮುದರ್ರಿಸ್ ಕೆ.ಎ ಸುಲೈಮಾನ್ ಫಾಳಿಲಿ, ಸಹಾಯಕ ಖತೀಬ್ ಮುಹಮ್ಮದ್ ಶರೀಫ್ ಸಅದಿ, ದರ್ಗಾ ಸಮಿತಿ ಅಧ್ಯಕ್ಷ ಉಸ್ಮಾನ್ ಶಾಫಿ, ಪ್ರ. ಕಾರ್ಯದರ್ಶಿ ಮುಹಮ್ಮದ್ ರಫಿ, ದರ್ಗಾ ಸಮಿತಿ ಮಾಜಿ ಅಧ್ಯಕ್ಷ ಅಬೂಬಕ್ಕರ್ ಬಾವುಂಞಿ ಹಾಜಿ, ಅಲ್ಪ ಸಂಖ್ಯಾತರ ಕಲ್ಯಾಣ ಇಲಾಖೆ ವ್ಯವಸ್ಥಾಪಕ ಶ್ರೀಧರ ಭಂಡಾರಿ ಉಪಸ್ಥಿತರಿದ್ದರು.
ಸಚಿವರು ಮತ್ತು ಶಾಸಕರಿಗೆ ಅದ್ದೂರಿ ಸನ್ಮಾನ:
ಶಾದಿಮಹಲ್ ಉದ್ಘಾಟನೆ ನಡೆಸಿಕೊಟ್ಟ ವಕ್ಫ್ ಸಚಿವ ತನ್ವೀರ್ ಸೇಠ್ ಅವರಿಗೆ ಮುಸ್ಲಿಂ ಸಂಪ್ರದಾಯದ ಉಲ್ಲನ್ ಟೋಪಿ ಧರಿಸುವ ಮೂಲಕ ಸನ್ಮಾನ ನಡೆದರೆ ಸಭಾಧ್ಯಕ್ಷತೆ ವಹಿಸಿದ್ ಶಾಸಕ ವಸಂತ ಬಂಗೇರ ಅವರಿಗೆ ವಿಶೇಷ ಪೇಠ ತೊಡಿಸಿ ಅದ್ದೂರಿಯಾಗಿ ಸನ್ಮಾನ ನಡೆಸಲಾಯಿತು.
ಸ್ಮರಣಿಕೆ, ಪುರಸ್ಕಾರ:
ಶಾದಿಮಹಲ್ ನೀಲಿನಕಾಶೆ ತಯಾರಿಸಿದ ತಾಹಿರ್ ಇಂಜಿನಿಯರ್, ಗುತ್ತಿಗೆ ನಿರ್ವಹಿಸಿದ ಯೂಸುಫ್ ಕನ್ನಡಿಕಟ್ಟೆ ಮತ್ತು ಸಾದಿಕ್, ಸಹಕಾರ ನೀಡಿದ ಕುವೆಟ್ಟು ಗ್ರಾ.ಪಂ ಅಧ್ಯಕ್ಷ ರಿಯಾಝ್ ಅಹಮ್ಮದ್, ನಿಕಟಪೂರ್ವ ಅಧ್ಯಕ್ಷ ಯಾಕೂಬ್ ಮುಸ್ಲಿಯಾರ್ ಮೇಲಂತಬೆಟ್ಟು, ಇಂಟರ್‌ಲಾಕ್ ಕಾಮಗಾರಿ ನಿರ್ವಹಿಸಿದ ರಿಯಾಝ್ ಪೆರಾಲ್ದರಕಟ್ಟೆ, ಮಾಜಿ ಅಧ್ಯಕ್ಷ ಹಾಜಿ ಸುಲೈಮಾನ್ ಕರಾವಳಿ ಅವರನ್ನು ಶಾಲು, ಸ್ಮರಣಿಕೆ ನೀಡಿ ಪುರಸ್ಕರಿಸಲಾಯಿತು. ಸಚಿವರು ಮಸೀದಿ ವಠಾರಕ್ಕೆ ಆಗಮಿಸುತ್ತಿದ್ದಂತೆ ಹಝ್ರತ್ ಶೈಖ್ ಹಯಾತುಲ್ ಔಲಿಯಾ ದರ್ಗಾ ಶರೀಫ್‌ನಲ್ಲಿ ಸಾಮೂಹಿಕ ಪ್ರಾರ್ಥನೆ ನೆರವೇರಿಸಲಾಯಿತು. ಬಳಿಕ ಶಾಸಕರ ಅನುದಾನದಲ್ಲಿ ಮಸೀದಿ ಆವರಣದಲ್ಲಿ ಅಳವಡಿಸಿರುವ ಇಂಟರ್‌ಲಾಕ್ ಅಂಗಣವನ್ನು ಶಾಸಕರು ಮತ್ತು ಸಚಿವರು ಜಂಟಿಯಾಗಿ ಉದ್ಘಾಟಿಸಿದರು. ಬಳಿಕ ನೂತನ ಸಭಾಭವನದಲ್ಲಿ ನಡೆದ ಸಭಾ ಕಾರ್ಯಕ್ರಮದ ಪ್ರಾರಂಭದಲ್ಲಿ ಸುನ್ನೀ ಸಂಯುಕ್ತ ಜಮಾಅತ್ ಸಹಾಯಕ ಖಾಝಿ, ಗುರುವಾಯನಕರೆ ಮಸೀದಿ ಖತೀಬ್ ಸಯ್ಯಿದ್ ಅಬ್ದುರ್ರಹ್ಮಾನ್ ಸಾದಾತ್ ತಂಙಳ್ ಬಾಅಲವಿ ದುಆ ಪ್ರಾರ್ಥನೆ ನಡೆಸಿಕೊಟ್ಟರು. ಜಮಾಅತ್ ಆಡಳಿತ ಮಂಡಳಿ ಸದಸ್ಯ ಹಸೈನಾರ್ ಶಾಫಿ ಸ್ವಾಗತಿಸಿ ಪ್ರಸ್ತಾವನೆಗೈದರು. ಲ| ಅಶ್ರಫ್ ಆಲಿಕುಂಞಿ ಕಾರ್ಯಕ್ರಮ ನಿರೂಪಿಸಿದರು. ಜಮಾಅತ್ ಸಮಿತಿ ನೂತನ ಅಧ್ಯಕ್ಷ ಉಸ್ಮಾನ್ ಬಳೆಂಜ ಧನ್ಯವಾದವಿತ್ತರು.

thaluku panchayath pragathi parisheelana sabheಬೆಳ್ತಂಗಡಿ : ಕಳೆದ ನಾಲ್ಕೂವರೆ ವರ್ಷದಲ್ಲಿ ತಾಲೂಕಿನಲ್ಲಿ ದಾಖಲೆ ಮೊತ್ತದ ಕಾಮಗಾರಿ ನಡೆದಿದೆ. 1 ಸಾವಿರ ಕೋಟಿಯ ಅಭಿವೃದ್ಧಿ ಕಾಮಗಾರಿಗಳನ್ನು ಅನುಷ್ಠಾನ ಮಾಡಲಾಗಿದೆ. ವಿವಿಧ ಯೋಜನೆಗಳ ಮೂಲಕ 16,978 ಮನೆಗಳನ್ನು ಮಂಜೂರು ಗೊಳಿಸಿ ಬಡವರಿಗೆ ಹಂಚಿಕೆ ಮಾಡಿದ್ದೇನೆ ಎಂದು ಬೆಳ್ತಂಗಡಿ ಕ್ಷೇತ್ರದ ಶಾಸಕ ಹಾಗೂ ರಾಜ್ಯ ಸಣ್ಣ ಕೈಗಾರಿಕಾ ಅಭಿವೃದ್ಧಿ ನಿಗಮದ ಅಧ್ಯಕ್ಷ ಕೆ. ವಸಂತ ಬಂಗೇರ ಹೇಳಿದರು.
ಅವರು ಅ.9ರಂದು ಬೆಳ್ತಂಗಡಿ ತಾಲೂಕು ಪಂಚಾಯತು ಸಭಾಂಗಣದಲ್ಲಿ ಬೆಳ್ತಂಗಡಿ ತಾಲೂಕಿನ ಗ್ರಾಮ ಪಂಚಾಯತುಗಳ ಅಭಿವೃದ್ಧಿ ಅಧಿಕಾರಿ ಮತ್ತು ಕಾರ್ಯದರ್ಶಿಗಳ ಪ್ರಗತಿ ಪರಿಶೀಲನೆ ನಡೆಸಿ ನಂತರ ಸಭೆ ಯನ್ನು ಉದ್ದೇಶಿಸಿ ಮಾತನಾಡಿದರು.
ಕಳೆದ ಒಂದು ವರ್ಷದಲ್ಲಿ ೧೭ ಸೇತುವೆಗಳು ತಾಲೂಕಿಗೆ ಮಂಜೂರು ಆಗಿದೆ. 72 ಕಾಮಗಾರಿಗಳು ಈಗಾಗಲೇ ಸರಕಾರದಿಂದ ಮಂಜೂರಾಗಿ ಬಂದಿದ್ದು, ಇದರ ಶಂಕುಸ್ಥಾಪನೆಯನ್ನು ಶೀಘ್ರವಾಗಿ ನೆರವೇರಿಸಲಿದ್ದೇನೆ. ಈಗಾಗಲೇ ಪ.ಜಾತಿ ಮತ್ತು ಪಂಗಡದ 600ಕ್ಕೂ ಮಿಕ್ಕಿ ರಸ್ತೆಗಳನ್ನು ಕಾಂಕ್ರೀಟಿಕರಣ ಮಾಡ ಲಾಗಿದ್ದು, ಇನ್ನೂ 400ಕ್ಕೂ ಮಿಕ್ಕಿ ರಸ್ತೆಗಳನ್ನು ಅಭಿವೃದ್ಧಿ ಪಡಿಸಲಾಗು ವುದು, ತಾಲೂಕಿನ ೪೮ ಗ್ರಾ.ಪಂ. ವ್ಯಾಪ್ತಿಯಲ್ಲಿ ರೂ.438 ಕೋಟಿಗಳ ಅಭಿವೃದ್ಧಿ
ಕಾಮಗಾರಿ ನಡೆಸಲಾಗಿದೆ ಎಂದು ತಿಳಿಸಿದರು.
ಇನ್ನು ಒಂದು ತಿಂಗಳ ಒಳಗೆ ಎಲ್ಲಾ ಮನೆ ನಿವೇಶನಗಳ ಜಾಗವನ್ನು ಪಂಚಾಯತುಗಳಿಗೆ ಹಸ್ತಾಂತರ ಮಾಡಲು ಕ್ರಮ ಜರುಗಿಸಲಾಗುವುದು, ಪ್ರತಿ ಗ್ರಾಮ ಪಂಚಾಯತುಗಳಲ್ಲಿ ಕಂಪ್ಯೂಟರ್ ಅಪರೇಟರ್ ಹುದ್ದೆ ಗಳಿಗೆ ನೇಮಕಾತಿ ನಡೆಸಲು ಪ್ರಯತ್ನಿ ಸಲಾಗುವುದು,
ತಾಲೂಕು ಕಚೇರಿಯಲ್ಲಿ ದಳ್ಳಾಳಿಗಳ ಹಾವಳಿ ಹೆಚ್ಚಿದ್ದು, ಇನ್ನೂ 15 ದಿನಗಳ ಒಳಗೆ ಎಲ್ಲಾ ಗ್ರಾಮ ಕರಣಿಕರ ಮತ್ತು ಗ್ರಾಮ ಸಹಾಯಕರ ಸಭೆಯನ್ನು ನಡೆಸಲಾಗುವುದು ಕಳೆದ ಮೂರು ವರ್ಷಗಳ ಹಿಂದೆ ಕಿನ್ಯಮ್ಮ ಸಭಾಂಗಣದಲ್ಲಿ ನಡೆಸಿದ ಸಮಾವೇಶದಲ್ಲಿ ಬಂದ ಬೇಡಿಕೆಗಳಲ್ಲಿ ಶೇ. 80 ಬೇಡಿಕೆಗಳನ್ನು ಈಡೇರಿಸಲಾಗಿದೆ ಎಂದು ಹೇಳಿದರು.
ಮನೆ ಹಂಚಿಕೆಯಲ್ಲಿ ಯಾವುದೇ ತಾರತಮ್ಯ ಮಾಡಬೇಡಿ, ನಾನು ಯಾವುದೇ ಪಕ್ಷ ನೋಡಿ ಅನುದಾನ ಹಂಚಿಲ್ಲ, ಎಲ್ಲಾ ಪಂಚಾಯತಿಗೂ ಸಮಾನವಾಗಿ ಹಂಚಿಕೆ ಮಾಡಿದ್ದೇನೆ. ಪಿಡಿಒಗಳು ಕೂಡಾ ಯಾವುದೇ ತಾರತಮ್ಯ ಮಾಡಬಾರದು ಎಂದು ಶಾಸಕರು ಕಿವಿ ಮಾತು ಹೇಳಿದರು. ಈಗಾಗಲೇ ತಾಲೂಕಿಗೆ ೫೦೦ ಮನೆಗಳನ್ನು ಹೆಚ್ಚುವರಿಯಾಗಿ ತರಿಸಿ ವಿತರಣೆ ಮಾಡಿದ್ದೇನೆ. ಪ್ರತಿ ಗ್ರಾಮ ಪಂಚಾಯತು ಪಿಡಿಒ ಕಾರ್ಯದರ್ಶಿಗಳಿಗೆ ಎರಡು ಮನೆಗಳನ್ನು ನೀಡುತ್ತೇನೆ ಇದನ್ನು ಬಡವರನ್ನು ಗುರುತಿಸಿ ಅವರಿಗೆ ವಿತರಣೆ ಮಾಡಿ ಎಂದು ಶಾಸಕರು ಈ ಸಂದರ್ಭದಲ್ಲಿ ಹೇಳಿದರು.
ಪ್ರಾಸ್ತಾವಿಕವಾಗಿ ಮಾತನಾಡಿದ ಪಿಡಿಒ ಪ್ರಕಾಶ್ ಶೆಟ್ಟಿಯವರು ಈ ಸರಕಾರದ ಅವಧಿಯಲ್ಲಿ ನಾಲ್ಕೂವರೆ ವರ್ಷಗಳ ಅವಧಿಯಲ್ಲಿ ಪ್ರತಿ ಪಂಚಾಯತ್‌ಗೆ ರೂ. 5 ರಿಂದ ರೂ.6 ಕೋಟಿ ಅನುದಾನ ಬಂದಿದ್ದು, ಕಾಮಗಾರಿಗಳನ್ನು ಸಮರ್ಪಕವಾಗಿ ಅನುಷ್ಠಾನ ಮಾಡಲಾಗಿದೆ ಎಂದರು.
ಸಭೆಯಲ್ಲಿ ಶಾಸಕರು ಗ್ರಾಮ ಪಂಚಾಯತುಗಳ ಪ್ರಗತಿಯನ್ನು ಪರಿಶೀಲಿಸಿದರು. ಪಂಚಾಯತ್ ಅಭಿವೃದ್ಧಿ ಅಧಿಕಾರಿ ಹಾಗೂ ಕಾರ್ಯದರ್ಶಿಗಳು ತಮ್ಮ ಪಂಚಾಯತದಲ್ಲಿ ಕಳೆದ ನಾಲ್ಕೂವರೆ ವರ್ಷಗಳಲ್ಲಿ ಆದ ಪ್ರಗತಿಯ ವಿವರಗಳನ್ನು ನೀಡಿದರು. ಲೋಕೋಪಯೋಗಿ ಇಲಾಖೆಯಲ್ಲಿ ತಾಲೂಕಿನಾದ್ಯಂತ ನಾಲ್ಕೂವರೆ ವರ್ಷದಲ್ಲಿ ರೂ.119.17 ಕೋಟಿಯ ಅಭಿವೃದ್ಧಿ ಕಾಮಗಾರಿ ನಡೆಸಲಾಗಿದೆ ಎಂದು ಸಹಾಯಕ ಅಭಿಯಂತರ ಶಿವಪ್ರಸಾದ ಅಜಿಲ ಸಭೆಗೆ ಮಾಹಿತಿ ನೀಡಿದರು. ಕುಡಿಯುವ ನೀರಿನ ಯೋಜನೆಯಲ್ಲಿ ರೂ. 10.76 ಕೋಟಿಯ ಕಾಮಗಾರಿ ನಡೆಸಲಾಗಿದೆ ಎಂದು ಅಧಿಕಾರಿ ಮಾಹಿತಿ ಇತ್ತರು. ಗ್ರಾಮಾಂತರ ಪ್ರದೇಶದಲ್ಲಿ ಅಗತ್ಯ ಕುಡಿಯುವ ನೀರಿಗಾಗಿ ೩೬ ನೀರಿನ ಬೂತ್ ರಚನೆಗೊಂಡು ವರ್ಷಗಳು ಕಳೆದರೂ ಇದುವರೆಗೂ ಇದರ ಪ್ರಯೋಜನ ಜನರಿಗೆ ಲಭಿಸಿಲ್ಲ ಎಂದು ಶಾಸಕರು ಅಸಮಾಧಾನ ವ್ಯಕ್ತಪಡಿಸಿ, ಇದರ ಕಾಮಗಾರಿಯನ್ನು ಶೀಘ್ರವಾಗಿ ಮಾಡುವಂತೆ ಶಾಸಕರು ಅಧಿಕಾರಿಗಳಿಗೆ ಸೂಚನೆ ನೀಡಿದರು. ಕುವೆಟ್ಟು ಗ್ರಾಮವನ್ನು ನಗರ ಎಂದು ಪರಿಗಣಿಸಿರುವುದರಿಂದ ಕೇವಲ 10 ಮನೆಗಳು ಮಾತ್ರ ದೊರಕಿದೆ ಎಂದು ಅಭಿವೃದ್ಧಿ ಅಧಿಕಾರಿ ರವೀಂದ್ರ ನಾಯಕ್ ಶಾಸಕರ ಗಮನಕ್ಕೆ ತಂದಾಗ ರಾಜ್ಯದಲ್ಲಿ 127 ಗ್ರಾಮಗಳನ್ನು ನಗರ ಎಂದು ಪರಿವರ್ತಿಸಲಾಗಿದೆ. ಇದರಲ್ಲಿ ಬೆಳ್ತಂಗಡಿ ತಾಲೂಕಿನಲ್ಲಿ ಕುವೆಟ್ಟು ಗ್ರಾಮ ಸೇರಿದೆ ಎಂದು ಶಾಸಕರು ತಿಳಿಸಿದರು. ಹೊಸಂಗಡಿ ಗ್ರಾಮದ ಅಂಚೆ ಪಿನ್‌ಕೋಡು ಬದಲಾವಣೆ ಮಾಡಿರುವುದರಿಂದ ಪಡಿತರ ಮತ್ತು ಆಧಾರ್ ಕಾರ್ಡ್ ಮಾಡಲು ಸಮಸ್ಯೆಯಾಗಿದೆ ಎಂದು ಪಿಡಿಒ ಹೇಳಿದಾಗ ಇದನ್ನು ಸರಿಪಡಿಸಲು ಕ್ರಮ ಜರುಗಿಸುವಂತೆ ಶಾಸಕರು ಕಾರ್ಯನಿರ್ವಾಹಣಾಧಿಕಾರಿಗಳಿಗೆ ಸೂಚನೆ ನೀಡಿದರು. ಮಡಂತ್ಯಾರಿನಲ್ಲಿ ಪಂಚಾಯತು ಮನೆ ನಿವೇಶನದ ಜಾಗದಲ್ಲಿ ಸಾಮಾಜಿಕ ಅರಣ್ಯ ಇಲಾಖೆ ನೆಡುತೋಪು ಇರುವುದರಿಂದ ಸಮಸ್ಯೆಯಾಗಿರುವ ವಿಷಯವನ್ನು ಪಿಡಿಓ ನಾಗೇಶ್ ಶಾಸಕರ ಗಮನಕ್ಕೆ ತಂದರು. ಇದನ್ನು ಕೂಡಲೇ ಕಟಾವು ಮಾಡಿ ಜಾಗ ಬಿಟ್ಟುಕೊಡಲು ಅರಣ್ಯಾಧಿಕಾರಿಗಳಿಗೆ ಶಾಸಕರು ಸೂಚನೆ ನೀಡಿದರು. ಪಾಂಡವರ ಕಲ್ಲು ರಸ್ತೆ ಅಭಿವೃದ್ಧಿ ಬಗ್ಗೆ ಪಿಡಿಒ ಪ್ರಶ್ನಿಸಿದಾಗ ಈ ರಸ್ತೆಯನ್ನು ಮೇಲ್ದರ್ಜೆಗೇರಿಸಲು ಕ್ರಮ ಜರುಗುತ್ತಿದೆ ಎಂದರು.
ಸುಲ್ಕೇರಿಯಲ್ಲಿ ಖಾಸಗಿ ಶಾಲೆಯ ಸಮಸ್ಯೆ ಬಗ್ಗೆ ಪಿಡಿಒ ರವಿ ಶಾಸಕರ ಗಮನಕ್ಕೆ ತಂದಾಗ ಇದನ್ನು ಸರಕಾರದ ವಶಕ್ಕೆ ಪಡೆದುಕೊಳ್ಳುವ ಚಿಂತನೆ ಇದ್ದರೂ, ಸ್ವಾಮೀಜಿಯೋರ್ವರು ಇದನ್ನು ನಡೆಸಲು ಮುಂದೆ ಬಂದಿರುವುದನ್ನು ಶಾಸಕರು ಸಭೆಗೆ ವಿವರಿಸಿದರು. ಮುಂಡಾಜೆಯ ಕೊಂಬಿನಡ್ಕ ಶಾಲೆ ಒಂದು ಭಾಗ ಮಳೆಗೆ ಕುಸಿದಿದೆ ಎಂದು ಸಂಜೀವ ನಾಯ್ಕ ಸಭೆಗೆ ತಿಳಿಸಿದಾಗ ಮಾತನಾಡಿದ ಶಾಸಕರು ಈಗಾಗಲೇ ಶಾಲೆಗಳ ದುರಸ್ಥಿಗೆ ರೂ. 2.50 ಕೋಟಿ ಅನುದಾನ ಬಂದಿದ್ದು, ಪುನಃ ರೂ.3 ಕೋಟಿ ಅನುದಾನಕ್ಕೆ ಸರಕಾರಕ್ಕೆ ಬರೆಯಲಾಗಿದೆ ಎಂದರು. ನಾರಾವಿಯಲ್ಲಿ ಮೆಸ್ಕಾಂ ಉಪಕೇಂದ್ರದ ಜಾಗ ಅರಣ್ಯ ಇಲಾಖೆ ಸಮಸ್ಯೆ ಕುರಿತು ಪಿಡಿಒ ನಿರ್ಮಲ್‌ಕುಮಾರ್ ಸಭೆಗೆ ಮಾಹಿತಿ ನೀಡಿದಾಗ ಇದರ ಬಗ್ಗೆ ಕ್ರಮ ಕೈಗೊಳ್ಳಲು ಶಾಸಕರು ಅರಣ್ಯ ಇಲಾಖೆಯ ಅಧಿಕಾರಿಗಳಿಗೆ ತಿಳಿಸಿದರು. ಬೆಳ್ತಂಗಡಿ-ಕೊಯ್ಯೂರು ರಸ್ತೆ ಅಭಿವೃದ್ಧಿ ಕುರಿತು ಪಿಡಿಒ ಶ್ರೀನಿವಾಸ್ ಅವರ ಪ್ರಸ್ತಾಪಕ್ಕೆ ಉತ್ತರಿಸಿದ ಶಾಸಕರು ಈ ರಸ್ತೆಯನ್ನು ಮೇಲ್ದರ್ಜೆಗೇರಿಸಿ ಅಭಿವೃದ್ಧಿ ಪಡಿಸಲಾಗುವುದು ಎಂದರು. ವೇದಿಕೆಯಲ್ಲಿ ತಾ.ಪಂ. ಅಧ್ಯಕ್ಷೆ ದಿವ್ಯಜ್ಯೋತಿ, ಉಪಾಧ್ಯಕ್ಷ ವೇದಾವತಿ, ಸ್ಥಾಯಿ ಸಮಿತಿ ಅಧ್ಯಕ್ಷ ಸುಧೀರ್ ಆರ್.ಸುವರ್ಣ, ಉದ್ಯೋಗ ಖಾತರಿ ಯೋಜನೆಯ ಸಹಾಯಕ ನಿರ್ದೇಶಕ ಕುಸುಮಾಧರ್, ಸಹಾಯಕ ಕಾರ್ಯಪಾಲಕ ಅಭಿಯಂತರ ಸಿ.ಆರ್. ನರೇಂದ್ರ, ತಾ.ಪಂ. ಸಹಾಯಕ ಲೆಕ್ಕ ಅಧೀಕ್ಷಕ ಗಣೇಶ್ ಪೂಜಾರಿ, ವ್ಯವಸ್ಥಾಪಕಿ ಸುವರ್ಣ ಕುಮಾರಿ ಉಪಸ್ಥಿತರಿದ್ದರು. ಕಾರ್ಯನಿರ್ವಾಹ ಣಾಧಿಕಾರಿ ಬಸವರಾಜ್ ಸ್ವಾಗತಿಸಿದರು. ಪಿಡಿಒ ಪ್ರಕಾಶ್ ಶೆಟ್ಟಿ ಪ್ರಾಸ್ತಾವಿಕವಾಗಿ ಮಾತನಾಡಿದರು. ತಾಲೂಕು ಸಂಯೋಜಕ ಜಯಾನಂದ ಕಾರ್ಯಕ್ರಮ ನಿರೂಪಿಸಿ, ಪಿಡಿಒ ಗಾಯತ್ರಿ ವಂದಿಸಿದರು.

abhinandane

abhinandane1ಗುರುವಾಯನಕೆರೆ : ಸ.ಪ್ರೌ.ಶಾಲೆ ಗುರುವಾಯನಕೆರೆಯಲ್ಲಿ ಎಸ್.ಎಸ್.ಎಲ್.ಸಿ ವಾರ್ಷಿಕ ಪರೀಕ್ಷೆಯಲ್ಲಿ ಸತತ 6ನೇ ಬಾರಿಗೆ 100% ಫಲಿತಾಂಶ ಪಡೆದ 2016-17ನೇ ಸಾಲಿನ ಶಾಲಾ ವಿದ್ಯಾರ್ಥಿಗಳಿಗೆ ಹಾಗೂ ಶಾಲಾ ಶಿಕ್ಷಕರಿಗೆ ಅಭಿನಂದನಾ ಕಾರ್ಯಕ್ರಮ ಇಂದು(ಅ.10) ನಡೆಯಿತು.
ಕಾರ್ಯಕ್ರಮವನ್ನು ಅಲ್ಪಸಂಖ್ಯಾತರ ಕಲ್ಯಾಣ ಮತ್ತು ವಕ್ಫ್ ಸಚಿವ ತನ್ವೀರ್ ಸೇಠ್ ಉದ್ಘಾಟಿಸಿದರು. ಅಧ್ಯಕ್ಷತೆಯನ್ನು ಶಾಸಕ ಕೆ. ವಸಂತ ಬಂಗೇರ ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ತಾ.ಪಂ ಅಧ್ಯಕ್ಷೆ ಶ್ರೀಮತಿ ದಿವ್ಯ ಜ್ಯೋತಿ, ಜಿ.ಪಂ ಸದಸ್ಯ ಧರಣೇಂದ್ರ ಕುಮಾರ್, ಡಯಲ್ ಪ್ರಿನ್ಸಿಪಾಲ್ ಸಿಪ್ರಿಯಾನ್ ಮೊಂತೆರೊ, ಜಿ.ಪಂ ಸದಸ್ಯೆ ಶ್ರೀಮತಿ ಮಮತಾ ಎಂ.ಶೆಟ್ಟಿ, ಶಿಕ್ಷಣ ಮತ್ತು ಆರೋಗ್ಯ ಸ್ಥಾಯಿ ಸಮಿತಿ ಅಧ್ಯಕ್ಷ ಕೆ.ಕೆ ಶಾಹುಲ್ ಹಮೀದ್, ಕುವೆಟ್ಟು ಗ್ರಾ.ಪಂ ಅಧ್ಯಕ್ಷ ಅಶೋಕ ಕೋಟ್ಯಾನ್, ತಾ.ಪಂ ಸದಸ್ಯ ಗೋಪಿನಾಥ್ ನಾಯಕ್, ಸಾರ್ವಜನಿಕ ಶಿಕ್ಷಣ ಇಲಾಖೆಯ ಉಪನಿರ್ದೇಶಕ ವೈ. ಶಿವರಾಮಯ್ಯ, ಬೆಳ್ತಂಗಡಿ ಶಿಕ್ಷಣಾಧಿಕಾರಿ ಎ.ಎನ್ ಗುರುಪ್ರಸಾದ್ ಭಾಗವಹಿಸಿದ್ದರು.

dharma samsadಧರ್ಮಸ್ಥಳ : ಉಡುಪಿಯಲ್ಲಿ ನ. 24 ರಿಂದ 26 ರ ವರೆಗೆ ನಡೆಯಲಿರುವ ಧರ್ಮ ಸಂಸತ್‌ನ ಆಮಂತ್ರಣ ಪತ್ರವನ್ನು ಧರ್ಮಾಧಿಕಾರಿ ಡಿ. ವೀರೇಂದ್ರ ಹೆಗ್ಗಡೆಯವರು ಅ.9ರಂದು ಧರ್ಮಸ್ಥಳದಲ್ಲಿ ಬಿಡುಗಡೆಗೊಳಿಸಿದರು.
ಈ ಸಂದರ್ಭ ಡಾ. ಕೃಷ್ಣಪ್ರಸಾದ್, ಶರಣ್ ಪಂಪ್‌ವೆಲ್, ವಿಲಾಸ್ ನಾಯಕ್, ಜಗದೀಶ ಶೇಣವ, ಸುನಿಲ್ ಕೆ.ಆರ್., ಉಜಿರೆಯ ಡಾ. ಎಂ.ಎಂ. ದಯಾಕರ್, ಶರತ್‌ಕೃಷ್ಣ ಪಡ್ವೆಟ್ನಾಯ, ಡಾ. ಬಿ. ಯಶೋವರ್ಮ, ಹರೀಶ್ ಪೂಂಜ ಮತ್ತು ಭಾಸ್ಕರ ಧರ್ಮಸ್ಥಳ ಉಪಸ್ಥಿತರಿದ್ದರು. ಕೃಷ್ಣಮೂರ್ತಿ ಸ್ವಾಗತಿಸಿ, ವಿಲಾಸ್ ನಾಯಕ್ ಧನ್ಯವಾದವಿತ್ತರು.

ravishankar thantri 1

ravishankar thantriಬೆಳ್ತಂಗಡಿ : 2010 ರಲ್ಲಿ ಬೆಳ್ತಂಗಡಿ ನಿವಾಸಿಯೋರ್ವರನ್ನು ಮದುವೆಯಾಗಿ ಬಳಿಕ ನಗದು ಹಾಗೂ ಒಡವೆಯೊಂದಿಗೆ ಪರಾರಿಯಾಗಿ ವಂಚಿಸಿದ ಮೂಡಿಗೆರೆ ಸಾಗರ ವಿಳಾಸ ಹೊಂದಿದ್ದ ರವಿಶಂಕರ್ ತಂತ್ರಿ ಬಿ.ಎಸ್(ರವೀಂದ್ರ ಶೆಟ್ಟಿ, ರವೀಂದ್ರ ಮೂರ್ತಿ) ಈತನನ್ನು ಬೆಳ್ತಂಗಡಿ ಪೊಲೀಸರು ಶಂಕರನಾರಾಯಣ ಪೊಲೀಸ್ ಠಾಣಾ ಸರಹದ್ದಿನ ಜೆಡ್ಡು ಶಾಲಾ ಬಳಿಯ ಮನೆಯಿಂದ ದಸ್ತಗಿರಿ ಮಾಡಿ ಬೆಳ್ತಂಗಡಿ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದಾರೆ.

ಸ್ಯಾಕ್ಸೋಫೋನ್ ವಾದಕ ಡಿ. ಬಿ ಪ್ರಕಾಶ ದೇವಾಡಿಗರಿಗೆ  ಶ್ರೀ ಕಂಚಿ ಕಾಮಕೋಟಿ ಪೀಠಂ ಆಸ್ತಾನ ವಿಧ್ವಾನ್ ಪುರಸ್ಕಾರ

Friday, October 13th, 2017 | Suddi Belthangady | no responses ಬೆಳ್ತಂಗಡಿ : ಆಕಾಶವಾಣಿ ಮತ್ತು ದೂರದರ್ಶನದ ಎ ಗ್ರೇಡ್ ಕಲಾವಿದರಾಗಿರುವ ಖ್ಯಾತ ಸ್ಯಾಕ್ಸೋಫೋನ್… ಮುಂದೆ ಓದಿ

ತೋಟತ್ತಾಡಿ  ಹಾ.ಉ.ಮಹಿಳಾ ಸಹಕಾರ ಸಂಘಕ್ಕೆ ಡಿಸಿಸಿ ಬ್ಯಾಂಕ್‌ನಿಂದ ಸಾಧನಾ ಪುರಸ್ಕಾರ

Thursday, October 12th, 2017 | Suddi Belthangady | no responses ತೋಟತ್ತಾಡಿ : 2016-17 ನೇ ಸಾಲಿನಲ್ಲಿ ಅತ್ಯುತ್ತಮ ಸಾಧನೆಗೈದ ಹಾಲು ಉತ್ಪಾದಕರ ಸಹಕಾರಿ… ಮುಂದೆ ಓದಿ

ಬೆಳಾಲಿನ ಶಿಲ್ಪಿ ಶಶಿಧರ ಆಚಾರ್ಯರಿಗೆ ಮೈಸೂರು ದಸರಾದಲ್ಲಿ ಸನ್ಮಾನ

Thursday, October 5th, 2017 | Suddi Belthangady | no responses ಬೆಳಾಲು : ಮೈಸೂರು ದಸರಾ ಮಹೋತ್ಸವದ ಸಂದರ್ಭದಲ್ಲಿ ಕರ್ನಾಟಕ ಶಿಲ್ಪಾ ಕಲಾ ಅಕಾಡೆಮಿ… ಮುಂದೆ ಓದಿ

ಯಕ್ಷಗಾನ ತಾಳಮದ್ದಲೆ ಅರ್ಥಧಾರಿ ಸುರೇಶ ಕುದ್ರೆಂತಾಯರಿಗೆ ಶೇಣಿ ಪ್ರಶಸ್ತಿ

Thursday, October 5th, 2017 | Suddi Belthangady | no responses ಬೆಳ್ತಂಗಡಿ : ಉನ್ನತ ಸರ್ಕಾರಿ ಹುದ್ದೆಯಲ್ಲಿದ್ದು ಕೊಂಡು ಸಾಹಿತ್ಯ, ಸಂಗೀತ, ಯಕ್ಷಗಾನ, ಪುರಾಣ… ಮುಂದೆ ಓದಿ

ಧರ್ಮಸ್ಥಳ ಬಿ. ಪ್ರಕಾಶ ದೇವಾಡಿಗರಿಗೆ  ಶ್ರೀ ಕಂಚಿ ಕಾಮಕೋಟಿ ಪೀಠಂ ಆಸ್ತಾನ ವಿದ್ವಾನ್ ಪ್ರಶಸ್ತಿ

Thursday, September 28th, 2017 | Suddi Belthangady | no responses ಬೆಳ್ತಂಗಡಿ: ಆಕಾಶವಾಣಿ ಮತ್ತು ದೂರದರ್ಶನದ ಎ ಗ್ರೇಡ್ ಕಲಾವಿದರಾಗಿರುವ ಖ್ಯಾತ ಸ್ಯಾಕ್ಸೋಫೋನ್ ವಾದಕ… ಮುಂದೆ ಓದಿ

ಇಶಾ ಶರ್ಮಾ ರಾಷ್ಟ್ರಮಟ್ಟದ ಸಾಧನೆ

ಇಶಾ ಶರ್ಮಾ ರಾಷ್ಟ್ರಮಟ್ಟದ ಸಾಧನೆ

Thursday, September 28th, 2017 | Suddi Belthangady | no responses ಉಜಿರೆ: ಇತ್ತೀಚೆಗೆ ಪಾಟ್ನಾದಲ್ಲಿ ಆಲ್ ಇಂಡಿಯಾ ಚೆಸ್ ಫೆಡರೇಶನ್ ಆಯೋಜಿಸಿದ 32ನೇ ರಾಷ್ಟ್ರೀಯ … ಮುಂದೆ ಓದಿ

ತಾಲೂಕಿನ ಇಬ್ಬರು ಸಾಧಕರಿಗೆ ಐಕಾನ್ ಆಫ್ ದಿ ಇಯರ್-2017 ಪ್ರತಿಷ್ಠಿತ ಪ್ರಶಸ್ತಿ

Thursday, September 21st, 2017 | Suddi Belthangady | no responses ಬೆಳ್ತಂಗಡಿ : ಬಳಂಜ ನಿವಾಸಿ ಯುವ ಉದ್ಯಮಿ, ಎನ್ವಿಗ್ರೀನ್ ಬಯೋಟೆಕ್ ಇಂಡಿಯಾ ಪ್ರೈವೇಟ್… ಮುಂದೆ ಓದಿ

ಮಕ್ಕಳಿಗೆ ಸಂಸ್ಕಾರ ಭರಿತ ಶಿಕ್ಷಣ ದೊರೆಯಲಿ : ಉಮಾನಾಥ ಕೋಟ್ಯಾನ್

Thursday, September 21st, 2017 | Suddi Belthangady | no responses ಬೆಳ್ತಂಗಡಿ: ಜಗತ್ತಿಗೆ ವಿಶೇಷ ಸಂದೇಶ ಸಾರಿದ ಬ್ರಹ್ಮಶ್ರೀ ನಾರಾಯಣ ಗುರುಗಳ ತತ್ವ, ಆದರ್ಶಗಳನ್ನು… ಮುಂದೆ ಓದಿ

ಧರ್ಮಸ್ಥಳದಲ್ಲಿ ಭಜನಾ ತರಬೇತಿ ಕಮ್ಮಟ : ಸಮಾರೋಪ ಸಮಾರಂಭ

Monday, September 18th, 2017 | Suddi Belthangady | no responses ಧರ್ಮಸ್ಥಳ : ಧರ್ಮಸ್ಥಳದಲ್ಲಿ 19ನೇ ವರ್ಷದ ಭಜನಾ ತರಬೇತಿ ಕಮ್ಮಟದ ಸಮಾರೋಪ ಸಮಾರಂಭ… ಮುಂದೆ ಓದಿ

ಬಂಗಾಡಿ ಸಹಕಾರಿ ವ್ಯವಸಾಯ ಸಂಘಕ್ಕೆ ರಾಜ್ಯ ಅಪೆಕ್ಸ್ ಬ್ಯಾಂಕ್ ಪ್ರಶಸ್ತಿ

Friday, September 15th, 2017 | Suddi Belthangady | no responses ಬಂಗಾಡಿ : ತಾಲೂಕಿನ ಪ್ರತಿಷ್ಟಿತ ಸಹಕಾರಿ ಸಂಸ್ಥೆಯಾದ ಬಂಗಾಡಿ ಸಹಕಾರಿ ವ್ಯವಸಾಯಿಕ ಸಂಘವು… ಮುಂದೆ ಓದಿ

ಬೆಳ್ತಂಗಡಿ ಜೇಸಿ ಸಪ್ತಾಹದಲ್ಲಿ ರಾಜ್ಯಮಟ್ಟದ ಫಿಲ್ಮಿ ಡ್ಯಾನ್ಸ್ ಸ್ಪರ್ಧೆ ನ್ಯೂ ತ್ರಿಲೋಕ್ ಡ್ಯಾನ್ಸ್ ಉಜಿರೆ ಪ್ರಥಮ: ತಿವಾ ಡ್ಯಾನ್ಸ್ ಬೆಳ್ತಂಗಡಿ ದ್ವಿತೀಯ

Thursday, September 14th, 2017 | Suddi Belthangady | no responses ಬೆಳ್ತಂಗಡಿ: ಜೇಸಿಐ ಬೆಳ್ತಂಗಡಿ ಮಂಜುಶ್ರೀ ಇದರ ವತಿಯಿಂದ ಜೇಸಿ ಸಪ್ತಾಹ ಹೊಂಗನಸು ಇದರಂಗವಾಗಿ… ಮುಂದೆ ಓದಿ

ಉತ್ತಮ ಆಡಳಿತ - ಸರಕಾರಿ ಅನುದಾನ ಸದ್ಬಳಕೆ ಕುವೆಟ್ಟು ಗ್ರಾ.ಪಂ.ಗೆ `ಗಾಂಧಿ ಗ್ರಾಮ ಪುರಸ್ಕಾರ'

ಉತ್ತಮ ಆಡಳಿತ – ಸರಕಾರಿ ಅನುದಾನ ಸದ್ಬಳಕೆ ಕುವೆಟ್ಟು ಗ್ರಾ.ಪಂ.ಗೆ `ಗಾಂಧಿ ಗ್ರಾಮ ಪುರಸ್ಕಾರ’

Thursday, September 7th, 2017 | Suddi Belthangady | no responses ಕುವೆಟ್ಟು ಗ್ರಾಮ ಪಂಚಾಯತು ಗಾಂಧಿ ಗ್ರಾಮ ಪುರಸ್ಕಾರ ಪಡೆಯಲು ಪಂಚಾಯತು ವ್ಯಾಪ್ತಿಯಲ್ಲಿ ನಡೆದ ಮುಂದೆ ಓದಿ

ವಿದ್ಯಾರ್ಥಿಗಳು ಮಾನವೀಯ ಹೃದಯವುಳ್ಳ ಪ್ರಜೆಗಳಾಗಿ ರೂಪುಗೊಳ್ಳಬೇಕು: ಡಾ. ಹೆಗ್ಗಡೆ

Thursday, September 7th, 2017 | Suddi Belthangady | no responses
  • 29 ಮಂದಿ ನಿವೃತ್ತ ಶಿಕ್ಷಕರಿಗೆ ಸನ್ಮಾನ
  • ಶೇ 100 ಫಲಿತಾಂಶ ಪಡೆದ 10 
ಮುಂದೆ ಓದಿ

ಉಜಿರೆಯಲ್ಲಿ ಎಸ್.ಎಸ್. ವುಡ್ ಆರ್ಟ್ಸ್ ಶುಭಾರಂಭ

Friday, August 18th, 2017 | Suddi Belthangady | no responses ಉಜಿರೆ: ಇಲ್ಲಿಯ ಅನುಗ್ರಹ ಶಾಲೆಯ ಹತ್ತಿರದ ಟ್ರಿನಿಟಿ ಕಾಂಪ್ಲೆಕ್ಸ್‌ನಲ್ಲಿ ಕಂಪ್ಯೂಟರೀಕೃತ ಮರದ ಕೆತ್ತನೆಯ… ಮುಂದೆ ಓದಿ

ಆರ್‌ಸೆಟಿಗಳ ರಾಷ್ಟ್ರೀಯ ಶ್ರೇಷ್ಠತಾ ಕೇಂದ್ರಕ್ಕೆ ರಾಷ್ಟ್ರೀಯ ಉದ್ಯಮಶೀಲತಾ ಅಭಿವೃದ್ಧಿ ಪುರಸ್ಕಾರ

Thursday, August 17th, 2017 | Suddi Belthangady | no responses ಧರ್ಮಸ್ಥಳ : ಕೇಂದ್ರ ಸರ್ಕಾರದ ಉದ್ಯಮಶೀಲತಾ ಅಭಿವೃದ್ಧಿ ಮಂತ್ರಾಲಯದ 2016-17ನೇ ಸಾಲಿನ ರಾಷ್ಟ್ರೀಯ… ಮುಂದೆ ಓದಿ

ಉಜಿರೆಯ ಎಸ್.ಡಿ.ಎಂ ಆಸ್ಪತ್ರೆಗೆ ಜಿಲ್ಲಾ ಪರಿಸರ ಪ್ರಶಸ್ತಿ ಪ್ರದಾನ

Thursday, August 10th, 2017 | Suddi Belthangady | no responses ಉಜಿರೆ : ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ ವತಿಯಿಂದ ಆಸ್ಪತ್ರೆ ವಿಭಾಗದಲ್ಲಿ ಉಜಿರೆಯ… ಮುಂದೆ ಓದಿ

ಐ.ಸಿ.ವೈ.ಎಂ ಮಡಂತ್ಯಾರು ಘಟಕಕ್ಕೆ ಶ್ರೇಷ್ಠ ಪ್ರಶಸ್ತಿ

Friday, August 4th, 2017 | Suddi Belthangady | no responses ಮಡಂತ್ಯಾರು : 2016-17 ಸಾಲಿನ ಮಂಗಳೂರು ಧರ್ಮಪ್ರಾಂತ್ಯ ಮಟ್ಟದ ಶ್ರೇಷ್ಠ ಕಾರ್‍ಯಕ್ರಮ ಪ್ರಶಸ್ತಿ… ಮುಂದೆ ಓದಿ

ಜಾನ್ ಅರ್ವಿನ್ ಡಿಸೋಜರಿಗೆ  ಸ್ಟಾರ್ ಡೆವಲಪ್‌ಮೆಂಟ್ ಆಫಿಸರ್ ಪುರಸ್ಕಾರ

Friday, August 4th, 2017 | Suddi Belthangady | no responses ಬೆಳ್ತಂಗಡಿ : ಇತ್ತೀಚೆಗೆ  ಪಂಜಾಬಿನ ಛತ್ತಿಸ್‌ಘಡದಲ್ಲಿ  ನಡೆದ  ನ್ಯಾಷನಲ್  ಇನ್ಸೂರೆನ್ಸ್  ಕಂಪನಿಯ ಅಭಿವೃದ್ಧಿ… ಮುಂದೆ ಓದಿ

ಮಂಗಳೂರು ಧರ್ಮಪ್ರಾಂತ್ಯದಿಂದ ವೇಣೂರು ಐಸಿವೈಎಂಗೆ ಪ್ರಶಸ್ತಿ

Friday, July 21st, 2017 | suddiblt | no responses ವೇಣೂರು: ಭಾರತೀಯ ಕಥೊಲಿಕ್ ಯುವ ಸಂಚಲನ (ಐಸಿವೈಎಂ), ಕ್ರಿಸ್ತರಾಜ ದೇವಾಲಯ ವೇಣೂರು ಘಟಕಕ್ಕೆ… ಮುಂದೆ ಓದಿ

ಶ್ರೀಕಾಂತ ರಾವ್‌ಗೆ ಅರಣ್ಯಮಿತ್ರ ಪ್ರಶಸ್ತಿ ಪ್ರದಾನ

Friday, July 21st, 2017 | suddiblt | no responses ಉಜಿರೆ: ಕರ್ನಾಟಕ ರಾಜ್ಯ ಅರಣ್ಯ ಇಲಾಖೆ ಮತ್ತು ಇತರ ಸಂಸ್ಥೆಗಳ ಜಂಟಿ ಆಶ್ರಯದಲ್ಲಿ… ಮುಂದೆ ಓದಿ

ಕಾಂಗ್ರೆಸ್ ಪಕ್ಷದ ಪ್ರತಿಷ್ಠಿತ ಹುದ್ದೆಗಳಿಗೆ ಐವರ ನೇಮಕ

Thursday, June 29th, 2017 | Suddi Belthangady | no responses ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿಗೆ (ಕೆಪಿಸಿಸಿ) ಬೆಳ್ತಂಗಡಿ ತಾಲೂಕಿನಿಂದ ಇಬ್ಬರು ಸದಸ್ಯರುಗಳು, ಬೆಳ್ತಂಗಡಿ… ಮುಂದೆ ಓದಿ

ಅಮೆರಿಕಾದಲ್ಲಿ ಡಾ. ಹೆಗ್ಗಡೆಯವರಿಂದ ಎಸ್.ಡಿ.ಎಂ. ಐ.ಎಂ.ಡಿ. ಯ ಅಂತರರಾಷ್ಟ್ರೀಯ ಮಾನ್ಯತೆಯ ಪ್ರಶಸ್ತಿ ಸ್ವೀಕಾರ

Tuesday, June 27th, 2017 | Suddi Belthangady | no responses ಮೈಸೂರಿನ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಇನ್ಸ್ಟಿಟ್ಯೂಟ್ ಫಾರ್ ಮ್ಯಾನೇಜ್ಮೆಂಟ್ ಡೆವಲೆಪ್ಮೆಂಟ್ ಸಂಸ್ಥೆಯ (SDMIMD)… ಮುಂದೆ ಓದಿ

ಭಾರತೀಯ ಜೀವ ವಿಮಾ ನಿಗಮ ಅಭಿವೃದ್ಧಿ ಅಧಿಕಾರಿ ವೈ. ಧರ್ಮರಾಜ್‌ರವರಿಗೆ ಬೀಳ್ಕೊಡುಗೆ

Thursday, June 22nd, 2017 | Suddi Belthangady | no responses ಬೆಳ್ತಂಗಡಿ : ಭಾರತೀಯ ಜೀವ ವಿಮಾ ನಿಗಮ ಬಂಟ್ವಾಳ ಶಾಖೆಯಲ್ಲಿ ಕಳೆದ 28 … ಮುಂದೆ ಓದಿ

ಇ ಪಾಸ್ ಮಾನ್ಯತೆ

ಇ ಪಾಸ್ ಮಾನ್ಯತೆ

Monday, June 19th, 2017 | Suddi Belthangady | no responses ಜರ್ಮನಿಯ ಬರ್ಲಿನ್ ನಗರದಲ್ಲಿ ನಡೆದ ಯುರೋಪಿಯನ್ ಫೌಂಡೇಶನ್ ಫಾರ್ ಮ್ಯಾನೇಜ್‌ಮೆಂಟ್ ಡೆವೆಲಪ್‌ಮೆಂಟ್ (EFMD)… ಮುಂದೆ ಓದಿ

ಜೆಸಿಐ ಬೆಳ್ತಂಗಡಿ ಮಂಜುಶ್ರೀಗೆ 2017ರ ಅತ್ಯುತ್ತಮ ಘಟಕ ಪ್ರಶಸ್ತಿ

Thursday, June 1st, 2017 | Suddi Belthangady | no responses ಬೆಳ್ತಂಗಡಿ : ಜೆಸಿಐ ವಿಟ್ಲ ಇದರ ಅತಿಥ್ಯದಲ್ಲಿ ಮೇ-28ರಂದು ನಡೆದ ದ.ಕ, ಉಡುಪಿ,… ಮುಂದೆ ಓದಿ

ಮದಿಪು ಚಲನ ಚಿತ್ರದ ನಿರ್ದೇಶನ ಚೇತನ್ ಮುಂಡಾಡಿಯವರಿಗೆ ರಾಷ್ಟ್ರ ಪ್ರಶಸ್ತಿ

Thursday, June 1st, 2017 | Suddi Belthangady | no responses ಸೋಣಂದೂರು : ಇಲ್ಲಿಯ ಮುಂಡಾಡಿಗುತ್ತು ರಾಜರಾಮ ಶೆಟ್ಟಿ ಮತ್ತು ಶ್ರೀಮತಿ ಶುಭಾವತಿ ದಂಪತಿಯ… ಮುಂದೆ ಓದಿ

ಫೆಲ್ಸಿ ಜ್ಯೋತಿ ಸೆರಾವೊರಿಗೆ ಪಿ.ಹೆಚ್.ಡಿ ಪದವಿ

Thursday, June 1st, 2017 | Suddi Belthangady | no responses ಮಡಂತ್ಯಾರು : ಮಡಂತ್ಯಾರಿನ ದಿ. ಬ್ಯಾಪ್ಪಿಸ್ಟ್ ಸೆರಾವೊ ಮತ್ತು ಶ್ರೀಮತಿ ಬ್ರಿಜಿತ್ ಸೆರಾವೊ… ಮುಂದೆ ಓದಿ

ಜೆಸಿಐ ಬೆಳ್ತಂಗಡಿ ಮಂಜುಶ್ರೀಗೆ  ಸಪ್ತ ವಿಭೂಷಣ ಪ್ರಶಸ್ತಿ

Thursday, June 1st, 2017 | Suddi Belthangady | no responses ಬೆಳ್ತಂಗಡಿ : ಪ್ರತಿಷ್ಠಿತ ಜೆಸಿಐ ಬೆಳ್ತಂಗಡಿ ಮಂಜುಶ್ರೀ ವಲಯ 15ರಲ್ಲಿ ಅತ್ಯುತ್ತಮ ಘಟಕವಾಗಿದ್ದು… ಮುಂದೆ ಓದಿ

ಯಕ್ಷಗಾನ ಮೇರು ಕಲಾವಿದ ಕೆ. ಗೋವಿಂದ ಭಟ್ಟರಿಗೆ ಕೇಂದ್ರ ಸಂಗೀತ ನಾಟಕ ಅಕಾಡೆಮಿ ಪುರಸ್ಕಾರ

Wednesday, May 31st, 2017 | Suddi Belthangady | no responses ಬೆಳ್ತಂಗಡಿ : ಪ್ರಸಕ್ತ 2016ನೇ ಸಾಲಿನ ಕೇಂದ್ರ ಸಂಗೀತ ನಾಟಕ ಅಕಾಡೆಮಿ ಪ್ರಶಸ್ತಿ… ಮುಂದೆ ಓದಿ

ಚಾರ್ಮಾಡಿ ಗ್ರಾ.ಪಂ. ವ್ಯಾಪ್ತಿಯ ಬಜಿಲುಮಾರುನಲ್ಲಿ ಮಹಿಳೆಯರಿಂದಲೇ ಕಿಂಡಿಅಣೆಕಟ್ಟು ನಿರ್ಮಾಣ : ಕಾಮಗಾರಿಗೆ ಶಿಲಾನ್ಯಾಸ

Thursday, May 25th, 2017 | Suddi Belthangady | no responses ಚಾರ್ಮಾಡಿ : ಚಾರ್ಮಾಡಿ ಗ್ರಾ.ಪಂ. ವ್ಯಾಪ್ತಿಯ ಬಜಿಲುಮಾರು ಎಂಬಲ್ಲಿ ರೂ.5 ಲಕ್ಷ ವೆಚ್ಚದಲ್ಲಿ… ಮುಂದೆ ಓದಿ

suddi COLORpdf BLDY.p65

suddi COLORpdf BLDY.p65

suddi COLORpdf BLDY.p65

suddi COLORpdf BLDY.p65

suddi COLORpdf BLDY.p65

suddi COLORpdf BLDY.p65

suddi COLORpdf BLDY.p65

suddi COLORpdf BLDY.p65

Prakash devadigarige prashasthiಬೆಳ್ತಂಗಡಿ : ಆಕಾಶವಾಣಿ ಮತ್ತು ದೂರದರ್ಶನದ ಎ ಗ್ರೇಡ್ ಕಲಾವಿದರಾಗಿರುವ ಖ್ಯಾತ ಸ್ಯಾಕ್ಸೋಫೋನ್ ವಾದಕ ಧರ್ಮಸ್ಥಳ ಬಿ. ಪ್ರಕಾಶ್ ದೇವಾಡಿಗ ಕನ್ನಾಜೆ ಅವರಿಗೆ ತಮಿಳುನಾಡಿನ ವಿಶ್ವವಿಖ್ಯಾತ ಧಾರ್ಮಿಕ ಶ್ರದ್ಧಾ ಪೀಠವಾದ ಕಂಚಿಪುರಂ ಶಂಕರ ಮಠದಿಂದ ನೀಡಲ್ಪಡುವ ಪ್ರತಿಷ್ಠಿತ ಶ್ರೀ ಕಂಚಿ ಕಾಮಕೋಟಿ ಪೀಠಂ ಆಸ್ತಾನ ವಿದ್ವಾನ್ ಪುರಸ್ಕಾರ ಪ್ರದಾನ ಕಾರ್ಯಕ್ರಮ ಅ. 2 ರಂದು ಶ್ರೀ ಮಠದಲ್ಲಿ ಜರುಗಿತು. ಕ್ಷೇತ್ರದ ಯತಿಶ್ರೇಷ್ಠರಾದ ಪೂಜ್ಯಶ್ರೀ ಜಯೇಂದ್ರ ಸರಸ್ವತಿ ಶಂಕರಾಚಾರ್ಯ ಸ್ವಾಮೀಜಿಯವರು ದೇವಾಡಿಗ ಅವರಿಗೆ ಪುರಸ್ಕಾರ ನೀಡಿ ಗೌರವಿಸಿದರು.

kalenja shri sadasiveshwara temple shanku sthapaneಕಳೆಂಜ : ಶ್ರೀ ಸದಾಶಿವೇಶ್ವರ ದೇವಸ್ಥಾನ ಕಳೆಂಜ ಇಲ್ಲಿ ಅ. ೫ರಂದು ನೂತನ ಸಭಾ ಭವನದ ಶಂಕು ಸ್ಥಾಪನೆಯನ್ನು ಉಜಿರೆ ಶ್ರೀ ಜನಾರ್ಧನ ಸ್ವಾಮಿ ದೇವಸ್ಥಾನದ ಆಡಳಿತ ಮೊಕ್ತೇಸರ ವಿಜಯ ರಾಘವ ಪಡ್ವೆಟ್ನಾಯ ನೆರವೇರಿಸಿ ಈ ಸಭಾಭವನದ ಕೆಲಸಕ್ಕೆ ಊರಿನ ಎಲ್ಲರೂ ಒಂದೇ ಮನಸ್ಸಿನಿಂದ ಕೆಲಸ ಮಾಡಬೇಕು ಎಂದರು.
ಅಧ್ಯಕ್ಷತೆಯನ್ನು ಕಳೆಂಜ ಶ್ರೀ ಸದಾಶಿವೇಶ್ವರ ದೇವಸ್ಥಾನದ ಅಧ್ಯಕ್ಷ ಅರವಿಂದ ಕುಡ್ವ ವಹಿಸಿ ಮಾತನಾಡಿ ಈ ಕೆಲಸವು ನಿರ್ವಿಘ್ನವಾಗಿ ನಡೆಯಲಿ ಎಂದು ಶುಭ ಹಾರೈಸಿದರು. ಮುಖ್ಯ ಅತಿಥಿಗಳಾಗಿ ಶ್ರೀ.ಕ್ಷೇ.ಧ.ಗ್ರಾ.ಯೋಜನೆಯ ಸಮುದಾಯ ಅಭಿವೃದ್ಧಿ ಅಧಿಕಾರಿ ಜಯರಾಮ ನೆಲ್ಲಿತ್ತಾಯ ಭಾಗವಹಿಸಿ ನಿಮ್ಮ ಸಮಿತಿಯಲ್ಲಿ ನಾನೂ ಕೂಡ ಒಬ್ಬ ಸದಸ್ಯ. ತಿಂಗಳ ಸಭೆಯಲ್ಲಿ ನಾನೂ ಕೂಡ ಭಾಗವಹಿಸುತ್ತೇನೆ ಎಂದರು.
ಕೇಶವ ಕಳೆಂಜ ನಿರೂಪಿಸಿ, ಜಯಂತ ಗೌಡ ಸ್ವಾಗತಿಸಿ, ರುಕ್ಮಯ್ಯ ಗೌಡ ಕಳೆಂಜ ಧನ್ಯವಾದವಿತ್ತರು.

SR bar openingಉಜಿರೆ : ಉಜಿರೆಯಲ್ಲಿ ಕಳೆದ 25 ವರ್ಷಗಳನ್ನು ಪೂರೈಸಿದ ಎಸ್.ಆರ್ ಬಾರ್ & ರೆಸ್ಟೋರೆಂಟ್ ಸುಪ್ರೀಂ ಕೋರ್ಟ್ ಆದೇಶದ ಮೇರೆಗೆ ಉಜಿರೆ ಪೇಟೆಯಿಂದ ಉಜಿರೆ-ಬೆಳಾಲು ರಸ್ತೆಯ ನಿನ್ನಿಕಲ್ಲು ಎಂಬಲ್ಲಿಗೆ ಸ್ಥಳಾಂತರಗೊಂಡು ನೂತನವಾಗಿ ನಿರ್ಮಿಸಿದ ಕಟ್ಟಡದಲ್ಲಿ  ಅ.11 ರಂದು ಶುಭಾರಂಭಗೊಂಡಿತು. ಬೆಳ್ತಂಗಡಿಯ ಶಾಸಕರು ಸಣ್ಣ ಕೈಗಾರಿಕಾ ನಿಗಮದ ಅಧ್ಯಕ್ಷರಾಗಿರುವ ಕೆ.ವಸಂತ ಬಂಗೇರ ಉದ್ಘಾಟಿಸಿ ಶುಭ ಹಾರೈಸಿದರು. ಉಜಿರೆ ಸಿಂಡಿಕೇಟ್ ಬ್ಯಾಂಕಿನ ಪ್ರಬಂಧಕ ಶ್ರೀನಿವಾಸ ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದರು. ಈ ಸಂದರ್ಭದಲ್ಲಿ ಇ.ಸುಂದರ ಗೌಡ, ಯೋಗೀಶ್ ಕುಮಾರ್ ನಡಕ್ಕರ, ಜಿ.ಪಂ ಸದಸ್ಯ ಶೇಖರ ಕುಕ್ಕೇಡಿ, ಮಾಜಿ ಜಿ.ಪಂ ಸದಸ್ಯ ಶೈಲೇಶ್ ಕುಮಾರ್, ಮಾಜಿ ತಾ.ಪಂ ಸದಸ್ಯ ವಸಂತ ಪೂಜಾರಿ, ಉಜಿರೆ ಗ್ರಾ.ಪಂ ಅಧ್ಯಕ್ಷ ಶ್ರೀಧರ ಪೂಜಾರಿ, ಡಾ| ಕೇಶವ್, ಡಾ| ಜಗನ್ನಾಥ, ಡಾ| ರೂಪಲತಾ, ಅಶ್ವಿನಿ ಮೆಡಿಕಲ್ಸ್‌ನ ಚಂದ್ರಶೇಖರ್, ವಿಟ್ಲ ಸಾಲಿಯನ್ ಮೋಟಾರ್‍ಸ್ ಮಾಲಕ ಜಗನ್ನಾಥ ಸಾಲಿಯಾನ್, ತುಕಾರಾಮ್ ಬಂಗೇರ, ರಬ್ಬರ್ ಸೊಸೈಟಿ ಉಪಾಧ್ಯಕ್ಷ ಪದ್ಮನಾಭ ಮಾಣಿಂಜ, ಉಜಿರೆ ಸೇವಾ ಸಹಕಾರಿ ಬ್ಯಾಂಕಿನ ಉಪಾಧ್ಯಕ್ಷ ರಮೇಶ್.ಬಿ, ಸಹಕಾರಿ ಸಂಘದ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಚಂದ್ರೇಶ್ ಶೆಟ್ಟಿ, ಬಿಜೋಯಿ ಏಜೆನ್ಸೀಸ್‌ನ ಎ.ಕೆ ಶಿವಾನ್, ಹಳ್ಳಿಮನೆ ರೆಸ್ಟೋರೆಂಟ್‌ನ ಮಾಲಕ ಪ್ರವೀಣ್ ಫೆರ್ನಾಂಡಿಸ್, ಗುತ್ತಿಗೆದಾರ ಶ್ರೀನಿವಾಸ ಗೌಡ, ಉಜಿರೆ ಚರ್ಚ್ ಪಾಲನಾ ಮಂಡಳಿಯ ಉಪಾಧ್ಯಕ್ಷ ಅರುಣ್ ರೆಬೆಲ್ಲೊ, ಸ್ಟೇನ್ಲಿ ಜಯಕರ್, ಯುವ ಕಾಂಗ್ರೆಸ್ ಅಧ್ಯಕ್ಷ ಅಭಿನಂದನ್ ಹರೀಶ್ ಕುಮಾರ್, ಎಚ್.ಎನ್ ನಾಗರಾಜ್, ಶ್ರೀಮತಿ ಮಿತ್ರ ಯತೀಶ್ ಕುಮಾರ್ ಅವರ ಸಹೋದರರು, ಸಹೋದರಿಯರು ಮತ್ತು ಸಂಬಂಧಿಗಳು, ಸ್ನೇಹಿತವರ್ಗ ಉಪಸ್ಥಿತರಿದ್ದರು. ಆಗಮಿಸಿದ ಅತಿಥಿ ಗಣ್ಯರನ್ನು ಮಾಲಕರಾದ ಯತೀಶ್ ಕುಮಾರ್, ಪತ್ನಿ ಶ್ರೀಮತಿ ಮಿತ್ರ, ಮಕ್ಕಳಾದ ಶ್ರೀಮತಿ  ಯಶ್ಮಿತಾ ಅಭಿಜಿತ್, ಶರಣ್ಯ ಸ್ವಾಗತಿಸಿ ಸತ್ಕರಿಸಿದರು.

Rama khsathriyaಬೆಳ್ತಂಗಡಿ: ಸಂಘಟನೆ ಎಂದರೆ ತ್ಯಾಗ. ಅಲ್ಲಿ ನಮ್ಮ ವೈಯುಕ್ತಿಕ ವಿಚಾರಗಳಿರ ಕೂಡದು. ಸಂಘಟನೆ ಯೊಳಗೆ ಪ್ರತಿಷ್ಠೆ, ರಾಜಕೀಯ ಪ್ರವೇಶಿಸಿದರೆ ಸಂಘದ ಉದ್ದೇಶವೇ ಹಾಳಾಗುತ್ತದೆ. ಜಿಲ್ಲೆಯಲ್ಲಿ ಕನಿಷ್ಟ ಸಂಖ್ಯೆಯಲ್ಲಿರುವ ನಾವು ಇನ್ನಷ್ಟು ಸಂಘಟಿತರಾಗಿ ರಾಜಕೀಯವಾಗಿ ಮತ್ತು ಸಾಮಾಜಿಕವಾಗಿ ಗುರುತಿಸಲ್ಪ ಡುವಂತಾಗಬೇಕು ಎಂದು ಮಂಗಳೂರು ರಾಮ ಕ್ಷತ್ರೀಯ ಸಂಘದ ಅಧ್ಯಕ್ಷ ಹಾಗೂ ಲಯನ್ಸ್ ಮಾಜಿ ಗವರ್ನರ್ ಜೆ ಕೃಷ್ಣಾನಂದ ರಾವ್ ಹೇಳಿದರು.
ಬೆಳ್ತಂಗಡಿ ತಾಲೂಕು ರಾಮ ಕ್ಷತ್ರೀಯ ಸಂಘ ರಾಮನಗರ ಬೆಳ್ತಂಗಡಿ ಇದರ 17 ನೇ ವಾರ್ಷಿಕೋತ್ಸವ ಪ್ರಯುಕ್ತ ಬೆಳ್ತಂಗಡಿ ಸುವರ್ಣ ಆರ್ಕೆಡ್‌ನಲ್ಲಿ ನಡೆದ ಕ್ಷತ್ರೀಯ ಚೈತನ್ಯ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡುತ್ತಿದ್ದರು. ಅಧ್ಯಕ್ಷತೆ ವಹಿಸಿದ್ದ ಸಂಘದ ತಾ| ಅಧ್ಯಕ್ಷ ವಿಜಯ ಕುಮಾರ್ ಸ್ವಾಗತಿಸಿದರು. ಮುಖ್ಯ ಅತಿಥಿಗಳಾಗಿ ರಾಮಕ್ಷತ್ರೀಯ ಯುವ ವೇದಿಕೆ ಬೆಂಗಳೂರು ಸ್ಥಾಪಕಾಧ್ಯಕ್ಷ ಅಶೋಕ್ ಕುಮಾರ್ ಕೆ, ರಾಮಕ್ಷತ್ರೀಯ ಮಾಸ ಪತ್ರಿಕೆ ಸಂಪಾದಕ ಬಿ.ಎಂ ನಾಥ್, ಕೊಲ್ಲೂರು ಮೂಕಾಂಬಿಕಾ ದೇವಾಲಯದ ಧರ್ಮದರ್ಶಿ ಜಯಾನಂದ ಹೋಬಳಿದಾರ್, ಎನ್.ಟಿ.ಪಿ.ಸಿ ಬೆಂಗಳೂರು ಹಿರಿಯ ಅಧಿಕಾರಿ ಪಿ ಭುವನೇಶ್, ಹೆಬ್ರಿ ರಾಮ ಕ್ಷತ್ರೀಯ ಸಂಘದ ಅಧ್ಯಕ್ಷ ಶ್ರೀನಿವಾಸ ಸೇರ್ವೆಗಾರ್ ಭಾಗಿಯಾಗಿ ಶುಭ ಕೋರಿದರು.
ಅತಿಥಿಗಳ ಪರಿಚಯವನ್ನು ಕಾವ್ಯಾ, ರತ್ನಾಕರ ಮಾಸ್ಟ್ರ್, ಚೈತ್ರಾ, ವಿಜಯ ಮಾಸ್ಟರ್, ಬಾನುರೇಖಾ, ಮೈತ್ರಿ, ನಿಶ್ಮಿತಾ ನಡೆಸಿಕೊಟ್ಟರು. ನಿರುಪಮಾ, ಕಲಾವತಿ ಮತ್ತು ನಾಗರಾಜ್ ಕಾರ್ಯಕ್ರಮ ನಿರೂಪಿಸಿದರು. ಸಂಘದ ಗೌರವಾಧ್ಯಕ್ಷ ಸಿ. ಎಚ್ ಪ್ರಭಾಕರ್, ಸ್ಥಾಪಕಾಧ್ಯಕ್ಷ ಲ| ವಿ. ಆರ್ ನಾಯಕ್, ಪ್ರ. ಕಾರ್ಯದರ್ಶಿ ಕೆ ರಾಘವೇಂದ್ರ ರಾವ್ ಅರಸಿನಮಕ್ಕಿ ವೇದಿಕೆಯಲ್ಲಿದ್ದರು. ಪ್ರಮೋದ್ ಆರ್ ನಾಯಕ್ ಸಹಿತ ಸಂಘದ ಪದಾಧಿಕಾರಿಗಳು ಸಹಕಾರ ನೀಡಿದರು.
ಸಮಾರಂಭದಲ್ಲಿ ರಾಜ್ಯ ಪ್ರಶಸ್ತಿ ಪುರಸ್ಕೃತ ಶಿಕ್ಷಕಿ ಅಹಲ್ಯಾ ರಮಾನಂದ ಉಡುಪಿ ಜಿಲ್ಲೆಯ ಪರ್ಕಳ ಶಾಲೆ ಅವರನ್ನು ಸನ್ಮಾನಿಸಲಾಯಿತು.
ಕಾರ್ಯಕ್ರಮ ನಿಮಿತ್ತ ಸಮಾಜ ಬಂಧುಗಳಿಗೆ ವಿವಿಧ ಸ್ಪರ್ಧೆ ಏರ್ಪಡಿಸಿ ಬಹುಮಾನ ವಿತರಿಸಲಾಯಿತು. ಸಾಂಸ್ಕೃತಿಕ ಕಾರ್ಯಕ್ರಮಗಳೂ ಸಾದರಗೊಂಡವು.

Savanalu

savanalu1

savanalu2

savanalu4ಸವಣಾಲು : ಇಲ್ಲಿನ ಶ್ರೀ ದುರ್ಗಾ ಕಾಳಿಕಾಂಬ ಕ್ಷೇತ್ರಕ್ಕೆ ಸುರಪುರ ಸಂಸ್ಥಾನದ ಈಗಿನ ರಾಜರಾದ [17ನೇ ರಾಜರು] ರಾಜಾ ಕೃಷ್ಣಪ್ಪ ನಾಯಕ್‌ರವರು ಇಂದು(ಅ.12) ಭೇಟಿ ನೀಡಿದರು.
ಈ ಸಂದರ್ಭದಲ್ಲಿ ಕ್ಷೇತ್ರದ ನಿರ್ಮಾಪಕ ಹಾಗೂ ವ್ಯವಸ್ಥಾಪನಾ ಸಮಿತಿಯ ಅಧ್ಯಕ್ಷ ಬಿ.ಗಣೇಶ್. ಎನ್.ಭಂಡಾರಿ, ಕ್ಷೇತ್ರದ ನಿರ್ಮಾಪಕ ಎಂ.ಕೇಶವ ಭಟ್, ಅರ್ಚಕರಾದ ಮಂಜುನಾಥ ಭಟ್ ಮತ್ತು ಜಿ.ಬಾಲಕೃಷ್ಣ ಭಟ್(ವ್ಯವಸ್ಥಾಪನಾ ಸಮಿತಿ ಸದಸ್ಯರು),  ವ್ಯವಸ್ಥಾಪನಾ ಸಮಿತಿ ಸದಸ್ಯರಾದ ಮುರಳೀಧರ ಶರ್ಮ,  ಎಸ್.ಕೆ.ಮೋಹನ್ ರೈ, ಮಹಾಬಲ.ಎಂ.ಕೆ, ಡಿ.ರಾಮಚಂದ್ರ ಭಟ್, ರಾಮಯ್ಯ ಗೌಡ, ಶ್ರೀಮತಿ ಬೇಬಿ ಸುರೇಶ್ ಕುಮಾರ್, ಶ್ರೀಮತಿ ಪ್ರಮೀಳಾ ಚಂದ್ರಹಾಸ ಭಂಡಾರಿ ಮತ್ತು ಗ್ರಾಮಸ್ಥರು ಉಪಸ್ಥಿತರಿದ್ದರು.

Valmiki jayanthiಬೆಳ್ತಂಗಡಿ : ರಾಮ, ಸೀತೆ, ಲಕ್ಷ್ಮಣ ಇವರು ರಾಮಾಯಣ ಮಹಾಕಾವ್ಯದ ಪ್ರಮುಖ ವ್ಯಕ್ತಿಗಳಾಗಿದ್ದು ಅವರ ಬಗ್ಗೆ ಮಾತನಾಡುವ ಅನೇಕರನ್ನು ನಾವು ಇಂದು ಸಮಾಜದಲ್ಲಿ ಕಾಣಬಹುದಾಗಿದೆ. ಆದರೆ ಅಂತಹಾ ಮಹಾ ಕಾವ್ಯವನ್ನು ರಚಿಸಿದ, ಮಹಾ ತಪಸ್ವಿ, ಮೇಧಾವಿ ವಾಲ್ಮೀಕಿ ಮಹರ್ಷಿಗಳ ಬಗ್ಗೆ ಅರಿತು ಮಾತನಾಡುವವರು ಬಹಳ ವಿರಳ ಎಂದು ಜಿ.ಪಂ. ಶಿಕ್ಷಣ ಮತ್ತು ಆರೋಗ್ಯ ಸ್ಥಾಯಿ ಸಮಿತಿ ಅಧ್ಯಕ್ಷ ಕೆ.ಕೆ. ಶಾಹುಲ್ ಹಮೀದ್ ಹೇಳಿದರು. ಪರಿಶಿಷ್ಟ ವರ್ಗಗಳ ಕಲ್ಯಾಣ ಇಲಾಖೆ, ತಾಲೂಕು ಆಡಳಿತ, ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿ, ಪಟ್ಟಣ ಪಂಚಾಯತ್ ಬೆಳ್ತಂಗಡಿ, ತಾಲೂಕು ಸಮಾಜ ಕಲ್ಯಾಣ ಇಲಾಖೆ ಇವರುಗಳ ಸಂಯುಕ್ತ ಆಶ್ರಯದಲ್ಲಿ ತಾ.ಪಂ. ಸಭಾಂಗಣದಲ್ಲಿ ಅ. 5 ರಂದು ನಡೆದ ಶ್ರೀ ಮಹರ್ಷಿ ವಾಲ್ಮೀಕಿ ಜಯಂತಿ ಆಚರಣೆಯನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಪ್ರಪಂಚದ ಸಾಹಿತ್ಯಕ್ಕೆ ರಾಮಾಯಣ ಮಹಾಕಾವ್ಯ ಅತ್ಯಪೂರ್ವ ಕೊಡುಗೆ: ಕುಳಮರ್ವ
ಪ್ರಧಾನ ಉಪನ್ಯಾಸ ನೀಡಿದ ಪುಂಜಾಲಕಟ್ಟೆ ಸರಕಾರಿ ಪ್ರಥಮ ದರ್ಜೆ ಕಾಲೇಜು ಪ್ರಾಂಶುಪಾಲ ಗಣಪತಿ ಭಟ್ ಕುಳಮರ್ವ ಮಾತನಾಡಿ, ಪ್ರಪಂಚದ ಸಾಹಿತ್ಯಕ್ಕೆ ಶ್ರೀ ರಾಮಾಯಣ ಮಹಾ ಕಾವ್ಯ ಮೊತ್ತಮೊದಲ ಅಪೂರ್ವ ಕೊಡುಗೆ, ಇಲ್ಲಿ ಜಾತಿ ಮುಖ್ಯವಲ್ಲ, ಸಾಧನೆ ಮಾತ್ರಪರಿಗಣನೀಯ. ರಾಮಾಯಣ ಮಹಾಕಾವ್ಯವು ಹಲವಾರು ಟೀಕೆ, ಹೊಗಳಿಕೆ, ತೆಗಳಿಕೆಯನ್ನು ಮೆಟ್ಟಿನಿಂತ ಕಾವ್ಯವೂ ಕೂಡ ಹೌದು. ಅಂತಹಾ ಮೇಧಾವಿ ಕವಿ ಮಹಿರ್ಷಿ ವಾಲ್ಮೀಕಿಯವರು ಎಂದು ಬಣ್ಣಿಸಿದರು. ಅಧ್ಯಕ್ಷತೆಯನ್ನು ಜಿ.ಪಂ. ಸದಸ್ಯ ಪಿ. ಧರಣೇಂದ್ರ ಕುಮಾರ್ ವಹಿಸಿದ್ದರು. ತಾ.ಪಂ. ಸ್ಥಾಯಿ ಸಮಿತಿ ಅಧ್ಯಕ್ಷ ಸುಧೀರ್ ಆರ್. ಸುವರ್ಣ, ಜಿ.ಪಂ. ಸದಸ್ಯ ಶೇಖರ್ ಕುಕ್ಕೇಡಿ, ನಗರ ಪಂಚಾಯತ್ ಮುಖ್ಯಾಧಿಕಾರಿ ಜೆಸಿಂತಾ ಲೂಯಿಸ್, ತಾ.ಪಂ. ಕಾರ್ಯನಿರ್ವಹಣಾಧಿಕಾರಿ ಬಸವರಾಜ್ ಕೆ. ಅಯ್ಯಣ್ಣನವರ್, ತಾಲೂಕು ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿ ಅಧ್ಯಕ್ಷ, ತಹಶಿಲ್ದಾರ್ ಮುಹಮ್ಮದ್ ಇಸಾಕ್, ಮುಖ್ಯ ಅತಿಥಿಗಳಾಗಿ ಭಾಗಿಯಾಗಿದ್ದರು. ತಾಲೂಕು ಸಮಾಜ ಕಲ್ಯಾಣ ಇಲಾಖೆ ಸಹಾಯಕ ನಿರ್ದೇಶಕ ಮೋಹನ್ ಕುಮಾರ್ ಸ್ವಾಗತಿಸಿದರು. ಸಮಾಜ ಕಲ್ಯಾಣ ಇಲಾಖೆಯ ಹೇಮಾವತಿ ಕಾರ್ಯಕ್ರಮ ನಿರೂಪಿಸಿದರು.

ujirege balekudrushriಉಜಿರೆ: ಸನಾತನ ಸಂಸ್ಕೃತಿಯನ್ನು ನಾವು ದೂರವಿಟ್ಟರೂ ವಿದೇಶಿಯರು ಅದನ್ನು ಮೆಚ್ಚಿ ಅನುಸರಿಸುತ್ತಿದ್ದಾರೆ. ಯೋಗ, ಧ್ಯಾನ, ಆಯುರ್ವೇದಗಳಲ್ಲಿ ಆಸಕ್ತಿ ಬೆಳೆಸಿಕೊಂಡು ಉತ್ತಮ ಸಾಧನೆ ಮಾಡುತ್ತಿದ್ದಾರೆ. ವಿಶಿಷ್ಠ ಪರಂಪರೆಯುಳ್ಳ ನಮ್ಮ ದೇಶವನ್ನು ಪ್ರೀತಿಸಿದಾಗ ಮಾತ್ರ ನಮ್ಮ ಆಚರಣೆಗಳಿಗೆ ಅರ್ಥ ಬರುತ್ತದೆ ಎಂದು ಉಡುಪಿ ಹಂಗಾರಕಟ್ಟೆ ಬಾಳೆಕುದ್ರು ಮಠದ ಶ್ರೀ ನೃಸಿಂಹಾಶ್ರಮ ಸ್ವಾಮೀಜಿ ನುಡಿದರು. ಅವರು ಅ.7ರಂದು ಉಜಿರೆ ಶ್ರೀ ಜನಾರ್ದನ ದೇವಸ್ಥಾನಕ್ಕೆ ಭೇಟಿ ನೀಡಿ ಆಶೀರ್ವಚನ ನೀಡಿದರು. ದೇವಸ್ಥಾನದ ವತಿಯಿಂದ ವಾದ್ಯ ವೇದ ಘೋಷದೊಂದಿಗೆ ಶ್ರೀಗಳನ್ನು ಬರಮಾಡಿಕೊಂಡು ಆಡಳಿತ ಮೊಕ್ತೇಸರ ವಿಜಯರಾಘವ ಪಡ್ವೆಟ್ನಾಯ ಫಲಕಾಣಿಕೆ ಸಮರ್ಪಿಸಿ ಗೌರವಿಸಿದರು.
ತಾಲೂಕು ತುಳು ಶಿವಳ್ಳಿ ಸಭಾಧ್ಯಕ್ಷ ರಾಘವೇಂದ್ರ ಬೈಪಾಡಿತ್ತಾಯ, ಉಪಾಧ್ಯಕ್ಷ ನಾಗೇಶ್ ರಾವ್ ಮುಂಡ್ರುಪ್ಪಾಡಿ, ಶರತ್‌ಕೃಷ್ಣ ಪಡ್ವೆಟ್ನಾಯ, ಬಾಲಕೃಷ್ಣ ಅರಿಪಾಡಿತ್ತಾಯ, ಗಿರೀಶ ಕುದ್ರೆಂತಾಯ, ಸುರೇಶ ಕುದ್ರೆಂತಾಯ, ರವೀಂದ್ರ ಒಪ್ಪಂತ್ತಾಯ, ಮೊದಲಾದವರು ಉಪಸ್ಥಿತರಿದ್ದರು. ಶರತ್‌ಕೃಷ್ಣ ಪಡ್ವೆಟ್ನಾಯ ಸ್ವಾಗತಿಸಿ, ಮುರಳೀಕೃಷ್ಣ ಆಚಾರ್ ನಿರೂಪಿಸಿ, ವಂದಿಸಿದರು.
ಶ್ರೀ ಚಕ್ರಾರ್ಚನೆ: ಅಜಿತ್‌ನಗರ ಚಕ್ರಪಾಣಿ ಸರಳಾಯರ ಮನೆಯಲ್ಲಿ ಶ್ರೀಗಳವರು ಎರಡು ದಿನ ವಾಸ್ತವ್ಯವಿದ್ದು, ಶ್ರೀ ಚಕ್ರಾರ್ಚನೆ ಪೂಜೆ ನೆರವೇರಿಸಿದರು.

ujire sheni prasasti pradanaಇದೇ ಸಂದರ್ಭದಲ್ಲಿ ಉಜಿರೆಯ ಹಿರಿಯ ಯಕ್ಷಗಾನ ತಾಳಮದ್ದಳೆ ಅರ್ಥಧಾರಿ ಸುರೇಶ ಕುದ್ರೆಂತಾಯರಿಗೆ ಶೇಣಿ ಪ್ರಶಸ್ತಿ ಪ್ರದಾನ ಮಾಡಲಾಯಿತು. ಹಿರಿಯ ಮದ್ದಳೆ ವಾದಕ ಉಜಿರೆಯ ವಾಸುದೇವ ಆಚಾರ್ಯ ಅವರನ್ನು ಸನ್ಮಾನಿಸಲಾಯಿತು. ಯಕ್ಷಭಾರತಿ ಅಧ್ಯಕ್ಷ ಹರಿದಾಸ ಗಾಂಭೀರ ಪ್ರಶಸ್ತಿ ಸನ್ಮಾನಿತರನ್ನು ಅಭಿನಂದಿಸಿದರು. ರವೀಂದ್ರ ಶೆಟ್ಟಿ ಬಳೆಂಜ ಪ್ರಶಸ್ತಿ ಪತ್ರ ವಾಚಿಸಿದರು. ಸುರೇಶ ಕುದ್ರೆಂತಾಯರು ಶೇಣಿ ಕುರಿತಾದ ಆಶುಕವಿತೆಯನ್ನು ಹಾಡಿ ಪ್ರತಿವಚನ ನುಡಿದರು.

ಉಜಿರೆ : ಹಿರಿಯ ಕಲಾವಿದರು ನೇಪಥ್ಯಕ್ಕೆ ಸರಿದಾಗ ಕಿರಿಯ ಕಲಾವಿದರಿಗೆ ಅವಕಾಶ ಮಾಡಿಕೊಡುವ ಮೂಲಕ ಯಕ್ಷಗಾನ ಕಲೆ ಮತ್ತು ಕಲಾವಿದರನ್ನು ಪ್ರೋತ್ಸಾಹಿಸಬೇಕಾದುದು ಅತ್ಯಗತ್ಯ ಎಂದು ಉಜಿರೆ ಶ್ರೀ ಜನಾರ್ದನ ದೇವಸ್ಥಾನದ ಆಡಳಿತ ಮೊಕ್ತೇಸರ ವಿಜಯರಾಘವ ಪಡ್ವೆಟ್ನಾಯ ನುಡಿದರು.
ಅವರು ಅ.8ರಂದು ಉಜಿರೆ ಶ್ರೀ ಶಾರದಾ ಮಂಟಪದಲ್ಲಿ ಶ್ರೀ ಜನಾರ್ದನ ದೇವಸ್ಥಾನದ ಆಶ್ರಯದಲ್ಲಿ ಯಕ್ಷಗಾನ ತಾಳಮದ್ದಳೆ ಸಪ್ತಾಹ ಸಮಿತಿ, ಮಿತ್ರಮಂಡಳಿ ಮುಂಡಾಜೆ ಮತ್ತು ಯಕ್ಷಭಾರತಿ ಕನ್ಯಾಡಿ ನೇತೃತ್ವದಲ್ಲಿ ಶೇಣಿ ಜನ್ಮಶತಮಾನೋತ್ಸವದ ಅಂಗವಾಗಿ ನಡೆದ ಯಕ್ಷಗಾನ ತಾಳಮದ್ದಳೆ ಸಪ್ತಾಹ-2017ರ ಸಮಾರೋಪ ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಶೇಣಿ ಸಂಸ್ಮರಣೆಗೈದ ಯಕ್ಷಗಾನ ಬಯಲಾಟ ಅಕಾಡೆಮಿ ಮಾಜಿ ಸದಸ್ಯ ತಾರಾನಾಥ ಬಲ್ಯಾಯ ಶೇಣಿಯವರ ಮಾತುಗಳಲ್ಲಿ ಹೊಸತನ, ಸಮಕಾಲೀನ ವೈಚಾರಿಕ ಸಾಹಿತ್ಯ, ಸಾರ್ವಕಾಲಿಕ ಮೌಲ್ಯ ಹೊಂದಿದ್ದು, ಯಾವುದೇ ವಸ್ತುವನ್ನು ಸುಂದರ ಸಾಹಿತ್ಯಿಕ ಕಲಾಕೃತಿಯಾಗಿ ರೂಪಿಸಿದ ಕನ್ನಡ ಸಾಹಿತ್ಯದ ಯುಗಪುರುಷ ಎಂದರು.
ಮುಖ್ಯ ಅತಿಥಿಗಳಾಗಿ ಧರ್ಮಸ್ಥಳ ಜಮಾ ಉಗ್ರಾಣದ ಮುತ್ಸದ್ದಿ ಬಿ. ಭುಜಬಲಿ, ಬೆಳ್ತಂಗಡಿಯ ನೋಟರಿ ವಕೀಲ ಮರಳೀಧರ ಭಟ್, ಪ್ರಕಾಶ್ ಇಲೆಕ್ಟ್ರಾನಿಕ್ಸ್ ಸಮೂಹ ಮಾಲಕ ಪುಷ್ಪರಾಜ ಶೆಟ್ಟಿ, ಬೆಳ್ತಂಗಡಿ ಪದವಿ ಕಾಲೇಜಿನ ಪ್ರಾಧ್ಯಾಪಕ ಟಿ.ಕೆ ಶರತ್‌ಕುಮಾರ್ ಭಾಗವಹಿಸಿದ್ದರು. ಧರ್ಮಸ್ಥಳದ ನಾರಾಯಣ ಕುದ್ರೆಂತ್ತಾಯ, ಸಪ್ತಾಹದ ಕಾರ್ಯಾಧ್ಯಕ್ಷ ರಾಘವೇಂದ್ರ ಬೈಪಾಡಿತ್ತಾಯ ಉಪಸ್ಥಿತರಿದ್ದರು. ಶೇಣಿಗೋಪಾಲಕೃಷ್ಣ ಭಟ್ ಚಾರಿಟೇಬಲ್ ಟ್ರಸ್ಟಿನ ಪಿ.ವಿ. ರಾವ್ ಪ್ರಾಸ್ತಾವಿಕವಾಗಿ ಮಾತನಾಡಿದರು. ಸಮಿತಿ ಅಧ್ಯಕ್ಷ ಶರತ್‌ಕೃಷ್ಣ ಪಡ್ವೆಟ್ನಾಯ ಸ್ವಾಗತಿಸಿದರು. ಸಪ್ತಾಹ ಸಮಿತಿ ಪ್ರಧಾನ ಸಂಚಾಲಕ ಚಂದ್ರಮೋಹನ ಮರಾಠೆ ಕಾರ್ಯಕ್ರಮ ನಿರೂಪಿಸಿ, ದಿವಾಕರ ಆಚಾರ್ಯ ಗೇರುಕಟ್ಟೆ ವಂದಿಸಿದರು. ಹರೀಶ್ ಕೊಳ್ತಿಗೆ, ಮಹೇಶ್ ಕನ್ಯಾಡಿ ಮೊದಲಾದವರು ಸಹಕರಿಸಿದರು.
ಪುರುಷೋತ್ತಮ ಭಟ್ ನಿಡುವಜೆ ಮತ್ತು ಮಹೇಶ್ ಕನ್ಯಾಡಿ ಹಾಡುಗಾರಿಕೆಯಲ್ಲಿ `ಕರ್ಣಭೇದನ’ ತಾಳಮದ್ದಳೆ ಹಾಗೂ `ಸುದರ್ಶನ ವಿಜಯ ಅಗ್ರಪೂಜೆ’ ಯಕ್ಷಗಾನ ಬಯಲಾಟ ಪ್ರದರ್ಶಿಸಲ್ಪಟ್ಟಿತು.

Shirlalu vivida kamagari udgataneಬೆಳ್ತಂಗಡಿ : ಲೋಕೋಪಯೋಗಿ ಇಲಾಖೆ, ಸಣ್ಣ ನೀರಾವರಿ ಇಲಾಖೆ ಇದರ ಆಶ್ರಯದಲ್ಲಿ ಶಿರ್ಲಾಲು ಮತ್ತು ಬಳೆಂಜ ಗ್ರಾ.ಪಂ ವ್ಯಾಪ್ತಿಯಲ್ಲಿ ಒಟ್ಟು ರೂ. 8.86 ಕೋಟಿ ವೆಚ್ಚದ ವಿವಿಧ ಕಾಮಗಾರಿಗಳಿಗೆ ಶಿಲಾನ್ಯಾಸ ಹಾಗೂ ಉದ್ಘಾಟನೆಯನ್ನು ಬೆಳ್ತಂಗಡಿ ಕ್ಷೇತ್ರದ ಶಾಸಕ ಹಾಗೂ ಸಣ್ಣ ಕೈಗಾರಿಕಾ ನಿಗಮದ ಅಧ್ಯಕ್ಷ ಕೆ. ವಸಂತ ಬಂಗೇರ ಅವರು ಅ. 11ರಂದು ನೆರವೇರಿಸಿದರು.
ನಂತರ ಶಿರ್ಲಾಲು ಗ್ರಾ.ಪಂ ವಠಾರದಲ್ಲಿ ನಡೆದ ಸಮಾರಂಭವನ್ನು ಉದ್ದೇಶಿಸಿ ಮಾತನಾಡಿದ ಶಾಸಕರು ಬೆಳ್ತಂಗಡಿ ತಾಲೂಕಿನಲ್ಲಿ ಐದು ಬಾರಿ ಶಾಸಕನಾಗಿ ತಾಲೂಕಿನ 81 ಗ್ರಾಮಗಳಲ್ಲೂ ಅಭಿವೃದ್ಧಿ ಕಾರ್‍ಯವನ್ನು ನಡೆಸಿದ್ದೇನೆ. ರಸ್ತೆ ಸೇತುವೆ, ವಿದ್ಯುತ್, ಕುಡಿಯುವ ನೀರು ಸೇರಿದಂತೆ ಗ್ರಾಮದ ಮೂಲಭೂತ ಸೌಲಭ್ಯಗಳನ್ನು ಈಡೇರಿಸಿದ್ದೇನೆ. ಇಂದು ಶಿರ್ಲಾಲು ಮತ್ತು ಬಳೆಂಜ ಗ್ರಾ.ಪಂ.ನಲ್ಲಿ 8.86 ಕೋಟಿ ಕಾಮಗಾರಿಗಳ ಶಿಲಾನ್ಯಾಸ ಮತ್ತು ಉದ್ಘಾಟನೆಯನ್ನು ನೆರವೇರಿಸಿದ್ದೇನೆ ಎಂದರು.
ಬೆಳ್ತಂಗಡಿ ತಾಲೂಕಿನಲ್ಲಿ ವಿದ್ಯುತ್ ಅಭಿವೃದ್ಧಿಗಾಗಿ ಈಗಾಗಲೇ 18ಕೋಟಿ ಮಂಜೂರಾಗಿದ್ದು, ಟಿ.ಸಿ ಹಾಕುವ ಕೆಲಸಗಳು ನಡೆಯಲಿದೆ. 94ಸಿಯಲ್ಲಿ 16 ಸಾವಿರ ಮಂದಿಗೆ ಹಕ್ಕು ಪತ್ರ ನೀಡಿದ್ದೇನೆ. ಇನ್ನು 6 ತಿಂಗಳ ಅವಧಿ ಇದೆ. ಎಲ್ಲರಿಗೂ ಹಕ್ಕು ಪತ್ರ ಕೊಡುವ ಕೆಲಸ ಮಾಡುತ್ತೇನೆ ಎಂದು ಭರವಸೆ ನೀಡಿದರು. ತಾ.ಪಂ ಅಧ್ಯಕ್ಷೆ ದಿವ್ಯಜ್ಯೋತಿ ಮಾತನಾಡಿ ಬೆಳ್ತಂಗಡಿ ಕ್ಷೇತ್ರದ ಶಾಸಕರು ತಾಲೂಕಿನಲ್ಲಿ ಬಹಳಷ್ಟು ಕಾರ್‍ಯಗಳನ್ನು ಮಾಡಿದ್ದು, ಮುಂದೆಯೂ ಅವರೇ ಈ ಕ್ಷೇತ್ರದ ಶಾಸಕರಾಗಿ ಬರಬೇಕು ಎಂದರು.
ಜಿ.ಪಂ ಸದಸ್ಯ ಶೇಖರ ಕುಕ್ಕೇಡಿ ಮಾತನಾಡಿ ರಾಜ್ಯದಲ್ಲೇ ಭೌಗೋಳಿಕವಾಗಿ ಬೆಳ್ತಂಗಡಿ ತಾಲೂಕು 6ನೇ ದೊಡ್ಡ ತಾಲೂಕು ಆಗಿದ್ದು, ಪ.ಜಾತಿ-ಪಂಗಡದ 700 ರಸ್ತೆಗಳು ಕಾಂಕ್ರಿಟೀಕರಣವಾಗಿರುವುದು ರಾಜ್ಯದ ಇತಿಹಾಸದಲ್ಲೇ ಪ್ರಥಮವಾಗಿದೆ ಎಂದರು. ಲೋಕೋಪಯೋಗಿ ಇಲಾಖೆಯ ಸ.ಕಾ ಅಭಿಯಂತರ ಶಿವಪ್ರಸಾದ್ ಅವರು ಮಂಜೂರಾದ ಕಾಮಗಾರಿಗಳ ವಿವರ ನೀಡಿ, ಕಾಮಗಾರಿ ಅನುಷ್ಠಾನ ವೇಳೆ ಸಾರ್ವಜನಿಕರು ಸಹಕರಿಸುವಂತೆ ವಿನಂತಿಸಿದರು.
ಸಮಾರಂಭದ ಅಧ್ಯಕ್ಷತೆಯನ್ನು ಗ್ರಾ.ಪಂ ಅಧ್ಯಕ್ಷೆ ಶ್ರೀಮತಿ ಶಶಿಕಲಾ ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ತಾ.ಪಂ ಉಪಾಧ್ಯಕ್ಷೆ ವೇದಾವತಿ, ತಾ.ಪಂ ಸದಸ್ಯರಾದ ಶ್ರೀಮತಿ ಕೆ. ಜಯಶೀಲಾ, ಶ್ರೀಮತಿ ಸುಶೀಲ, ಶ್ರೀಮತಿ ವಿನೂಷಪ್ರಕಾಶ್, ಬಳೆಂಜ ಗ್ರಾ.ಪಂ ಅಧ್ಯಕ್ಷೆ ದೇವಕಿ, ಅಳದಂಗಡಿ ಗ್ರಾ.ಪಂ ಅಧ್ಯಕ್ಷ ಸತೀಶ್ ಮಿತ್ತಮಾರು, ನ.ಪಂ ಉಪಾಧ್ಯಕ್ಷ ಜಗದೀಶ್ ಡಿ., ಎಪಿಎಂಸಿ ಸದಸ್ಯ ಚಿದಾನಂದ ಪೂಜಾರಿ ಎಲ್ದಡ್ಕ ಭಾಗವಹಿಸಿದ್ದರು. ಕಾರ್ಯಕ್ರಮದಲ್ಲಿ ಕೆ.ಎಸ್ ಯೋಗೀಶ್ ಕುಮಾರ್ ನಡಕ್ಕರ, ಮಾಜಿ ತಾ.ಪಂ ಸದಸ್ಯ ಧರ್ಣಪ್ಪ ಪೂಜಾರಿ, ಲೋಕೋಪಯೋಗಿ ಇಲಾಖಾ ಸಹಾಯಕ ಕಾರ್ಯಪಾಲಕ ಅಭಿಯಂತರ ಶಿವಪ್ರಸಾದ್ ಅಜಿಲ, ಸಹಾಯಕ ಅಭಿಯಂತರ ಗುರುಪ್ರಸಾದ್, ಗುಣಮ್ಮ ಜೈನ್, ಗ್ರಾ.ಪಂ ಉಪಾಧ್ಯಕ್ಷ ಸಂಜೀವ ದೇವಾಡಿಗ, ಕಿಶೋರ್ ಹೆಗ್ಡೆ ಎರ್ಮೊತ್ತೋಡಿ, ಕಾಂಗ್ರೆಸ್ ಗ್ರಾಮೀಣ ಸಮಿತಿ ಅಧ್ಯಕ್ಷ ಶ್ರೀನಿವಾಸ್ ಕಿಣಿ, ನಾರಾಯಣ ರಾವ್, ಮಾಜಿ ಅಧ್ಯಕ್ಷ ಪುಷ್ಪರಾಜ್, ಇಸುಬು ಶಾಫಿ, ಶ್ರೀಮತಿ ಶೀಲಾ, ನವೀನ್ ಸಾಮಾನಿ, ಸುಬ್ರಹ್ಮಣ್ಯ ಭಟ್, ಸುಪ್ರಿಯ, ಅರುಣ್ ಕುಮಾರ್, ಕುಶಾಲಪ್ಪ ಗೌಡ, ಸರೋಜಿನಿ ಮೊದಲಾದವರು ಉಪಸ್ಥಿತರಿದ್ದರು.
ಈ ಸಂದರ್ಭದಲ್ಲಿ ಜಿ.ಪಂ ಸದಸ್ಯ ಶೇಖರ ಕುಕ್ಕೇಡಿ, ತಾ.ಪಂ ಸದಸ್ಯೆ ಜಯಾಶೀಲ, ಲೋಕೋಪಯೋಗಿ ಇಲಾಖಾ ಸಹಾಯಕ ಕಾರ್ಯಪಾಲಕ ಅಭಿಯಂತರ ಶಿವಪ್ರಸಾದ್ ಅಜಿಲ, ಗ್ರಾ.ಪಂ ಅಧ್ಯಕ್ಷೆ ಶಶಿಕಲಾ ಇವರನ್ನು ಅಭಿನಂದಿಸಲಾಯಿತು. ಶಾಸಕ ಕೆ. ವಸಂತ ಬಂಗೇರರನ್ನು ಊರವರು, ಸ್ಥಳೀಯ ಮಸೀದಿಯವರು ಹಾಗೂ ಊರಿನ ಗಣ್ಯರು ಶಾಲು ಹೊದಿಸಿ ಸ್ಮರಣಿಕೆ ನೀಡಿ ಗೌರವಿಸಿದರು. ಶಿರ್ಲಾಲು ಗ್ರಾ.ಪಂ ಅಭಿವೃದ್ಧಿ ಅಧಿಕಾರಿ ಶೇಖರ್ ಸ್ವಾಗತಿಸಿದರು. ಶಿರ್ಲಾಲು ಸಿ.ಎ ಬ್ಯಾಂಕ್ ಮುಖ್ಯ ಕಾರ್‍ಯನಿರ್ವಾಹಣಾಧಿಕಾರಿ ನಿತ್ಯಾನಂದ ಶೆಟ್ಟಿ ಪ್ರಸ್ತಾವಿಕವಾಗಿ ಮಾತನಾಡಿದರು. ತಾಲೂಕು ಸಂಯೋಜಕ ಜಯಾನಂದ ಲಾಯಿಲ ಕಾರ್ಯಕ್ರಮ ನಿರೂಪಿಸಿ, ಶ್ರೀಮತಿ ವಿಮಲ ಹೆಗ್ಡೆ ಧನ್ಯವಾದವಿತ್ತರು.

siri visesa riyayithi dara kaditha marata udhgataneಲಾಯಿಲ : ಶ್ರೀ ಧರ್ಮಸ್ಥಳ ಸಿರಿ ಗ್ರಾಮೋದ್ಯೋಗ ಸಂಸ್ಥೆ ಬೆಳ್ತಂಗಡಿ ಇದರ ಟಿ.ಬಿ ಕ್ರಾಸ್‌ನ ಬಳಿಯಿರುವ ಕೇಂದ್ರ ಕಛೇರಿಯಲ್ಲಿ ಅ.9 ರಂದು ದೀಪಾವಳಿ ಪ್ರಯುಕ್ತ ವಿಶೇಷ ರಿಯಾಯಿತಿ ದರ ಕಡಿತ ಮಾರಾಟ ಮತ್ತು ಪ್ರದರ್ಶನ ಮಳಿಗೆಯನ್ನು ಉಜಿರೆ ಎಸ್.ಡಿ.ಎಂ ಕಾಲೇಜಿನ ಪ್ರಾಂಶುಪಾಲ ಡಾ| ಮೋಹನ್ ನಾರಾಯಣ ಉದ್ಘಾಟಿಸಿ ಶುಭ ಹಾರೈಸಿದರು. ಸಿರಿ ಸಂಸ್ಥೆಯ ಯೋಜನಾಧಿಕಾರಿ ರೋಹಿತಾಕ್ಷ ಮಾತನಾಡುತ್ತ ಈ ಸಂಸ್ಥೆಯು ಕಳೆದ 2004 ರಿಂದ ಮಹಿಳೆಯರಿಗೆ ಉದ್ಯೋಗಾವಕಾಶ ನೀಡುವ ನಿಟ್ಟಿನಲ್ಲಿ ಲಾಭ ರಹಿತ ಉದ್ದೇಶವಾಗಿ ದುಡಿಯುವ ಸಂಸ್ಥೆಯಾಗಿದ್ದು ಮಾರುಕಟ್ಟೆಯಲ್ಲಿ ಸ್ಪರ್ಧಾತ್ಮಕವಾಗಿ ಬೆಳೆದು ಬಂದಿರುತ್ತದೆ. ಇದೀಗ ದೀಪಾವಳಿ ಪ್ರಯುಕ್ತ ಟಿ.ಬಿ.ಕ್ರಾಸ್‌ನ ಬಳಿಯಿರುವ ಕೇಂದ್ರ ಕಛೇರಿಯಲ್ಲಿ ಈ ಎಲ್ಲ ಉತ್ಪನ್ನಗಳನ್ನು ಪ್ರದರ್ಶನ ಮತ್ತು ರಿಯಾಯಿತಿ ದರದಲ್ಲಿ ಮಾರಾಟ ಮಾಡಲಾಗುತ್ತಿದ್ದು ಎಲ್ಲ ಗ್ರಾಹಕರು ಇದರ ಸದುಪಯೋಗ ಪಡೆಯುವಂತೆ ಮನವಿ ಮಾಡಿಕೊಂಡರು.

LICಬೆಳ್ತಂಗಡಿ : ಭಾರತೀಯ ಜೀವ ವಿಮಾ ನಿಗಮ ಬೆಳ್ತಂಗಡಿ ಉಪಗ್ರಹ ಶಾಖೆಯು ಪ್ರಾರಂಭಗೊಂಡು ಯಶಸ್ವಿ 10ವರ್ಷ ಪೂರೈಸಿ 11ನೇ ವರ್ಷಕ್ಕೆ ಪಾದಾರ್ಪಣೆಗೊಂಡ ವಾರ್ಷಿಕೋತ್ಸವ ಅ. 12(ಇಂದು) ಉಪಗ್ರಹ ಶಾಖೆಯಲ್ಲಿ ಜರಗಿತು.
ಬಂಟ್ವಾಳ ಶಾಖೆಯ ಹಿರಿಯ ಶಾಖಾಧಿಕಾರಿ ಬಾಲಕೃಷ್ಣ ದೀಪ ಬೆಳಗಿಸಿ ಉದ್ಘಾಟಿಸಿ ಶುಭ ಹಾರೈಸಿದರು. ಉಪಗ್ರಹ ಶಾಖಾಧಿಕಾರಿ ಆರ್.ಡಿ ಯೋಗೇಂದ್ರ ಪ್ರಸ್ತಾವಿಕವಾಗಿ ಮಾತನಾಡಿ ಸ್ವಾಗತಿಸಿದರು. ಅಭಿವೃದ್ಧಿ ಅಧಿಕಾರಿಗಳಾದ ಎ. ಜಯದೇವ್, ಎಂ.ವಿ ಶೆಟ್ಟಿ, ಟಿ.ಡಿ ರಾಘವೇಂದ್ರ, ಉದಯಶಂಕರ್, ಆಡಳಿತಾಧಿಕಾರಿಗಳಾದ ಕೇಶವ ಎಂ., ಶ್ರೀನಿವಾಸ್, ಪ್ರತಿನಿಧಿಗಳು, ಗ್ರಾಹಕರು ಉಪಸ್ಥಿತರಿದ್ದರು. ವಾರ್ಷಿಕೋತ್ಸವದ ಅಂಗವಾಗಿ ಹೊಸ ವ್ಯವಹಾರ ಸ್ಪರ್ಧೆಯಲ್ಲಿ ಸಾಧನೆಗೈದ ಪ್ರತಿನಿಧಿಗಳನ್ನು ಗುರುತಿಸಿ ಗೌರವಿಸಲಾಯಿತು.

Nagara panchayath vanijya sankeerna shilanyasaಬೆಳ್ತಂಗಡಿ : ಬೆಳ್ತಂಗಡಿ ನಗರ ಪಂಚಾಯತ್ ವತಿಯಿಂದ ಬೆಳ್ತಂಗಡಿ ಸಂತೆಕಟ್ಟೆಯಲ್ಲಿ ನೂತನವಾಗಿ ನಿರ್ಮಾಣವಾಗಲಿರುವ ರೂ. 1.50 ಕೋಟಿ ವೆಚ್ಚದ ವಾಣಿಜ್ಯ ಸಂಕೀರ್ಣಕ್ಕೆ ಅ.11ರಂದು ಶಾಸಕರು ಹಾಗೂ ರಾಜ್ಯ ಸಣ್ಣ ಕೈಗಾರಿಕಾ ನಿಗಮದ ಅಧ್ಯಕ್ಷ ಕೆ. ವಸಂತ ಬಂಗೇರ ಶಿಲಾನ್ಯಾಸ ನೆರವೇರಿಸಿದರು.
ನಂತರ ಮಾತನಾಡಿದ ಶಾಸಕರು ಬೆಳ್ತಂಗಡಿ ಸಂತೆಕಟ್ಟೆಯ ವ್ಯಾಪಾರಸ್ಥರ ಅನುಕೂಲಕ್ಕಾಗಿ ಈ ವಾಣಿಜ್ಯ ಸಂಕೀರ್ಣ ನಿರ್ಮಾಣವಾಗುತ್ತಿದ್ದು, ಇದರ ಸದುಪಯೋಗವನ್ನು ಪಡೆದುಕೊಳ್ಳುವಂತೆ ತಿಳಿಸಿದರು. ಅಧ್ಯಕ್ಷತೆಯನ್ನು ನ.ಪಂ ಅಧ್ಯಕ್ಷ ಮುಗುಳಿ ನಾರಾಯಣ ರಾವ್ ವಹಿಸಿದ್ದರು.
ಉಪಾಧ್ಯಕ್ಷ ಜಗದೀಶ್ ಡಿ., ನ.ಪಂ ಸ್ಥಾಯಿ ಸಮಿತಿ ಅಧ್ಯಕ್ಷೆ ಶ್ರೀಮತಿ ಮಮತಾ ಶೆಟ್ಟಿ, ಮಾಜಿ ಸ್ಥಾಯಿ ಸಮಿತಿ ಅಧ್ಯಕ್ಷ ಸಂತೋಷ್ ಕುಮಾರ್ ಜೈನ್, ನ.ಪಂ ಸದಸ್ಯರು, ಮುಖ್ಯಾಧಿಕಾರಿ ಜೆಸಿಂತಾ ಲೂಯಿಸ್, ಇಂಜಿನಿಯರ್ ಮಹಾವೀರ ಹಾಗೂ ನಾಗರಿಕರು ಉಪಸ್ಥಿತರಿದ್ದರು.

Milkತೋಟತ್ತಾಡಿ : 2016-17 ನೇ ಸಾಲಿನಲ್ಲಿ ಅತ್ಯುತ್ತಮ ಸಾಧನೆಗೈದ ಹಾಲು ಉತ್ಪಾದಕರ ಸಹಕಾರಿ ಸಂಘಗಳನ್ನು ಪ್ರೋತ್ಸಾಹಿಸುವ ನಿಟ್ಟಿನಲ್ಲಿ ದ. ಕ ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್ ವತಿಯಿಂದ ಕೊಡಮಾಡಿದ ಪ್ರೋತ್ಸಾಹ ಅತ್ಯುತ್ತಮ ಸಾಧನಾ ಪುರಸ್ಕಾರಕ್ಕೆ ತೋಟತ್ತಾಡಿ ಹಾಲು ಉತ್ಪಾದಕರ ಮಹಿಳಾ ಸಹಕಾರ ಸಂಘಕ್ಕೆ ಭಾಜನವಾಗಿದೆ.  ಸಹಕಾರಿ ಸಂಘದ ಅಧ್ಯಕ್ಷೆ ಪುಷ್ಪಾ ಶಾಜಿ, ಕಾರ್ಯದರ್ಶಿ ಗೀತಾ ಅವರು ಡಿಸಿಸಿ ಬ್ಯಾಂಕ್ ಅಧ್ಯಕ್ಷ ಡಾ| ಎಂ.ಎನ್ ರಾಜೇಂದ್ರ ಕುಮಾರ್ ಅವರಿಂದ ಪ್ರಶಸ್ತಿ ಸ್ವೀಕರಿಸಿದರು. ಚಿತ್ರ: ಕೆ.ಜೆ. ಸ್ಟುಡಿಯೋ.

BJP valmiki jayanthiಬೆಳ್ತಂಗಡಿ: ಭಾರತೀಯ ಜನತಾ ಪಾರ್ಟಿ ಬೆಳ್ತಂಗಡಿ ಮಂಡಲ ಹಾಗೂ ಎಸ್.ಟಿ ಮೋರ್ಚಾ ಬೆಳ್ತಂಗಡಿ ಮಂಡಲ ಇದರ ನೇತೃತ್ವದಲ್ಲಿ ವಿವಿಧ ಕ್ಷೇತ್ರಗಳ 100 ಮಂದಿ ಸಾಧಕರನ್ನು ಗುರುತಿಸಿ ಗೌರವಿಸುವುದರೊಂದಿಗೆ ಮಹರ್ಷಿ ವಾಲ್ಮೀಕಿ ಜಯಂತಿಯನ್ನು ಅ.೫ರಂದು ಸುವರ್ಣ ಆರ್ಕೇಡ್ ಸಭಾ ಭವನ ಬೆಳ್ತಂಗಡಿಯಲ್ಲಿ ಅರ್ಥ ಪೂರ್ಣವಾಗಿ ಆಚರಿಸಲಾಯಿತು.
ಸಮಾರಂಭದಲ್ಲಿ ಬೆಳ್ತಂಗಡಿ ತಾಲೂಕಿನ ವಿವಿಧ ಗ್ರಾಮಗಳ ನೂರು ಮಂದಿ ಸಾಧಕರನ್ನು ಶಾಲು ಹೊದಿಸಿ, ಸ್ಮರಣಿಕೆ ನೀಡಿ ಗಣ್ಯ ಅತಿಥಿಗಳನ್ನು ಸನ್ಮಾನಿಸಿ ಗೌರವ ಸಲ್ಲಿಸಿದರು. ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದ ಭಾ.ಜ.ಪ. ದ.ಕ. ಜಿಲ್ಲಾ ಅಧ್ಯಕ್ಷ ಸಂಜೀವ ಮಠಂದೂರು ಅವರು ಮಾತನಾಡಿ, ಕೃಷಿ ಮತ್ತು ಋಷಿ ಈ ದೇಶದ ಅಂತಸತ್ವ, ಇವರನ್ನು ಗೌರವಿಸುವ ಸಮಾಜ ನಮ್ಮದು, ರಾಮಾಯಾಣ ನಾವು ಹೇಗೆ ಬದುಕಬೇಕೆಂದು ವಿಶ್ವಕ್ಕೆ ಮಾರ್ಗದರ್ಶನ ನೀಡುವ ಗ್ರಂಥವಾ ಗಿದೆ. ಈ ದೇಶದ ಬದುಕು, ಸಂಸ್ಕೃತಿ, ರಾಮಾಧಾರಿತ ರಾಜಕಾರಣ ಹೇಗಿರ ಬೇಕು ಎಂಬುದನ್ನು ರಾಮಾಯಾಣದ ಮೂಲಕ ನಮಗೆ ದೊರೆಯುತ್ತದೆ. ರಾಮ ರಾಜ್ಯದ ಕಲ್ಪನೆ ಕೊಟ್ಟವರು ಮಹರ್ಷಿ ವಾಲ್ಮೀಕಿಯವರು ಮಹಾತ್ಮಾ ಗಾಂಧಿಯವರು ರಾಮರಾಜ್ಯದ ಕನಸು ಕಂಡಿದ್ದರು. ಪ್ರಧಾನಿ ನರೇಂದ್ರ ಮೋದಿಯವರು ರಾಮರಾಜ್ಯದ ಕನಸನ್ನು ಸಾಕಾರಗೊಳಿಸುವತ್ತಾ ಸಾಗುತ್ತಿದ್ದಾರೆ ಎಂದು ತಿಳಿಸಿದರು.
ಮುಖ್ಯ ಅತಿಥಿಗಳಾಗಿ ಭಾಗವಹಿ ಸಿದ್ದ ವಿಭಾಗ ಸಹ ಪ್ರಭಾರಿ ನ್ಯಾಯವಾದಿ ಪ್ರತಾಪಸಿಂಹ ನಾಯಕ್ ಅವರು ಮಾತನಾಡಿ, ವಾಲ್ಮೀಕಿಯವರು ಕಾಡಿನಲ್ಲಿ ಜೀವಿಸಿದರೂ ಜೀವನದ ಅರ್ಥವನ್ನು ಕಂಡುಕೊಂಡವರು, ರಾಮಾಯಾಣ ಮಹಾಕಾವ್ಯದ ಮೂಲಕ ಜಗತ್ತಿಗೆ ಉತ್ತಮ ಸಂದೇಶ ನೀಡಿದ್ದಾರೆ ಎಂದರು. ಬಿಜೆಪಿ ಯುವ ಮೋರ್ಚಾ ಜಿಲ್ಲಾಧ್ಯಕ್ಷ ಹರೀಶ್ ಪೂಂಜ ಮಾತನಾಡಿ ನೂರು ಮಂದಿ ಸಾಧಕರನ್ನು ಗುರುತಿಸುವು ದರೊಂದಿಗೆ ವಾಲ್ಮೀಕಿ ಜಯಂತಿಯನ್ನು ಅರ್ಥಪೂರ್ಣವಾಗಿ ಆಚರಿಸಲಾಗಿದೆ. ಇದು ಹಿಂದೂ ಸಮಾಜಕ್ಕೆ ಶಕ್ತಿ ಕೊಡುವ ಕಾರ್ಯ ಎಂದು ಮೆಚ್ಚುಗೆ ವ್ಯಕ್ತಪಡಿಸಿ ದರು. ಮಾಜಿ ಶಾಸಕ ಪ್ರಭಾಕರ ಬಂಗೇರ ಮಾತನಾಡಿ ಜಗತ್ತಿಗೆ ಜೀವನ ಸಂದೇಶ ನೀಡಿದ ವಾಲ್ಮೀಕಿಯವರ ಸಂದೇಶದಂತೆ ನಾವು ಬದುಕು ಸಾಗಿಸಬೇಕು ಎಂದು ಕರೆ ನೀಡಿದರು.
ಅಧ್ಯಕ್ಷತೆ ವಹಿಸಿದ್ದ ಮಂಡಲ ಅಧ್ಯಕ್ಷ ರಂಜನ್ ಗೌಡ ವಾಲ್ಮೀಕಿ ಸಮಾಜ ದವರನ್ನು ಗುರುತಿಸುವ ಕೆಲಸವನ್ನು ಇದುವರೆಗೆ ಯಾರೂ ಮಾಡಿಲ್ಲ ಭಾಜಪ ಇದನ್ನು ಮಾಡಿ ತೋರಿಸಿದೆ ಎಂದರು. ಎಸ್.ಕೆ.ಡಿ.ಆರ್.ಡಿ.ಪಿ.ಯ ಕೃಷಿ ಮೇಲ್ವಿಚಾರಕ ಉಮೇಶ್ ನಾಯ್ಕ ಕೇಳ್ದಡ್ಕ ವಾಲ್ಮೀಕಿ ಮಹರ್ಷಿಯವರು ಜೀವನದ ಬಗ್ಗೆ ಪ್ರಧಾನ ಭಾಷಣ ಮಾಡಿದರು. ಬೆಳ್ತಂಗಡಿ ಮಂಡಲ ಪ್ರಭಾರಿ ಕ್ಯಾ| ಬ್ರಿಜೇಶ್ ಚೌಟ ಕಾರ್ಯಕ್ರಮಕ್ಕೆ ಶುಭ ಹಾರೈಸಿದರು. ಗೋಪಾಲ ನಾಯ್ಕ ಮಾಚಾರು, ಜಿನ್ನಪ್ಪ ಮಲೆಕುಡಿಯ ನಾವೂರು, ಸರಸ್ವತಿ ಮಾಲಾಡಿ ಕಾರ್ಯಕ್ರಮವನ್ನು ದೀಪ ಬೆಳಗಿಸಿ ಉದ್ಘಾಟಿಸಿದರು.
ವೇದಿಕೆಯಲ್ಲಿ ಬಿಜೆಪಿ ಮಂಡಲ ಸಹ ಪ್ರಭಾರಿ ಭಾಗೀರಥಿ ಮುರುಳ್ಯ, ಬಿಜೆಪಿ ಯುವ ಮೋರ್ಚಾ ಅಧ್ಯಕ್ಷ ಸಂಪತ್ ಬಿ. ಸುವರ್ಣ, ಬಿಜೆಪಿ ಜಿಲ್ಲಾ ಉಪಾಧ್ಯಕ್ಷೆ ಶಾರದಾ ಆರ್.ರೈ, ತಾ.ಪಂ. ಉಪಾಧ್ಯಕ್ಷೆ ವೇದಾವತಿ, ಮಂಡಲ ಪ್ರಧಾನ ಕಾರ್ಯದರ್ಶಿ ಗಳಾದ ಸೀತಾರಾಮ ಬಿ.ಎಸ್, ಪ್ರಭಾಕರ ಶೆಟ್ಟಿ ಉಪ್ಪಡ್ಕ, ಎಸ್.ಟಿ. ಮೋರ್ಚಾ ಪ್ರಭಾರಿ ಲಿಂಗಪ್ಪ ನಾಕ, ತಾ.ಪಂ. ಸ್ಥಾಯಿ ಸಮಿತಿ ಅಧ್ಯಕ್ಷ ಸುಧೀರ್ ಆರ್.ಸುವರ್ಣ, ಜಿ.ಪಂ. ಸದಸ್ಯೆ ಸೌಮ್ಯಲತಾ, ತಾ.ಪಂ. ಸದಸ್ಯೆ ಲೀಲಾವತಿ, ಎಸ್.ಟಿ. ಮೋರ್ಚಾ ಅಧ್ಯಕ್ಷ ಆನಂದ ನಾಯ್ಕ, ಪ್ರಧಾನ ಕಾರ್ಯದರ್ಶಿ ಪ್ರಸಾದ್ ನಾಯ್ಕ, ನ.ಪಂ. ಸದಸ್ಯೆ ಲಲಿತಾ ಉಪಸ್ಥಿತರಿದ್ದರು.
ನಾರಾಯಣ ಆಚಾರ್ ಗೀತೆ ಹಾಡಿದರು. ಅಪ್ಪು ನಾಯ್ಕ ಮತ್ತು ಬಳಗದವರು ಪ್ರಾರ್ಥನೆ ಹಾಡಿದರು. ಜಿಲ್ಲಾ ಕಾರ್ಯದರ್ಶಿ ಹಾಗೂ ಜಿಲ್ಲಾ ಎಸ್.ಟಿ. ಮೋರ್ಚಾ ಪ್ರಭಾರಿ ಕೊರಗಪ್ಪ ನಾಯ್ಕ ಸ್ವಾಗತಿಸಿದರು. ರಾಜೇಶ್ ಪೆರ್ಮುಡ ಸನ್ಮಾನಿತರ ಪಟ್ಟಿ ವಾಚಿಸಿದರು. ತಾ.ಪಂ.ಸ. ವಿಜಯ ಗೌಡ ಕಾರ್ಯಕ್ರಮ ನಿರೂಪಿಸಿ, ಲಿಂಗಪ್ಪ ನಾಕ ವಂದಿಸಿದರು.

madanthyar jcಸನ್ಮಾನ, ಪುರಸ್ಕಾರ: ಸಮಾರೋಪದ ವೇದಿಕೆಯಲ್ಲಿ ರಿದಂ ಸಾಂಸ್ಕೃತಿಕ ವಿಕಾಸ ಕೇಂದ್ರ ಸುರತ್ಕಲ್ ಇದರ ನಿರ್ದೇಶಕ ಸುಧಾಕರ್ ಎನ್. ಸುರತ್ಕಲ್ ಅವರಿಗೆ ಜೇಸಿ ಕಲಾರತ್ನ ಪ್ರಶಸ್ತಿ, ವ್ಯವಹಾರ ಕ್ಷೇತ್ರದ ಸಾಧನೆಗಾಗಿ ಗಿರೀಶ್ ಪೈ ಕೊಲ್ಪೆದಬೈಲು ಅವರಿಗೆ ಸಾಧನಾಶ್ರೀ ಪುರಸ್ಕಾರ, ಪ್ರಗತಿಪರ ಕೃಷಿಕ ಕೃಷ್ಣಪ್ಪ ನಾಯ್ಕ್ ಅವರಿಗೆ ಜೈ ಕಿಸಾನ್ ಪ್ರಸಸ್ತಿ, ಮಾಜಿ ಸೈನಿಕ ಕಾಂತಪ್ಪ ಗೌಡ ಅವರಿಗೆ ಜೈ ಜವಾನ್ ಪ್ರಶಸ್ತಿ, ಬಿಜೆಪಿ ಯುವ ಮೋರ್ಚಾ ಅಧ್ಯಕ್ಷರಾಗಿರುವ ಸಂಪತ್ ಬಿ. ಸುವರ್ಣ ಅವರಿಗೆ ಜೇಸಿರತ್ನ ಪುರಸ್ಕಾರ ನೀಡಿ ಗೌರವಿಸಲಾಯಿತು.

ಮಡಂತ್ಯಾರು: ಜನಸಂಖ್ಯಾ ಸ್ಪೋಟ ದೇಶಕ್ಕೆ ಮಾರಕ ಎಂಬ ಭಾವನೆ ಇತ್ತು. ಆದರೆ ಅದೇ ಜನಸಂಖ್ಯೆ ಮತ್ತು ಯುವ ಸಮೂಹವನ್ನು ಸಂಪನ್ಮೂಲವಾಗಿ ಬಳಕೆ ಮಾಡಿಕೊಂಡಾಗ ಮಾರಕವಾಗುವ ಜನತೆ ಸಂಪತ್ತಾಗಿ ಪರಿವರ್ತನೆಯಾಗುತ್ತಾರೆ. ಜಡತ್ವ ಮತ್ತು ಆಲಸ್ಯ ಸ್ವಭಾವ ದೇಶದ ಬೆಳವಣಿಗೆಯಲ್ಲಿ ಹಿನ್ನಡೆ ಕೊಡುವಂತದ್ದಾಗಿದ್ದು, ಕ್ರಿಯಾಶೀಲ ವ್ಯಕ್ತಿಗೆ ಜಡತ್ವದ ಪ್ರದರ್ಶನ ಸಾಧ್ಯವೇ ಇಲ್ಲ. ಕ್ರಿಯಾಶೀಲ ವ್ಯಕ್ತಿ ಹೆಚ್ಚು ಕೆಲಸದಲ್ಲಿ ತೊಡಗಿಕೊಂಡಿರುವುದೇ ಆತನಿಗೆ ವಿಶ್ರಾಂತಿ ಇದ್ದಂತೆ. ಅಂತಹಾ ಚಟುವಟಿಕೆಯುಕ್ತ ಜೀವನವನ್ನು ಜೇಸಿಯಂತಹಾ ಸಂಸ್ಥೆ ನೀಡುತ್ತದೆ ಎಂದು ಅರಣ್ಯ, ಪರಿಸರ ಮತ್ತು ಜೀವಿಶಾಸ್ತ್ರ ಸಚಿವ ಬಿ. ರಮಾನಾಥ ರೈ ಅವರು ಹೇಳಿದರು
ಜೇಸಿಐ ಮಡಂತ್ಯಾರು ಇವರ ವತಿಯಿಂದ ಅ. 2 ರಿಂದ ಅ. 8 ರವರೆಗೆ ಮಡಂತ್ಯಾರು ಕೊರೆಯ ಕಂಪೌಂಡ್‌ನಲ್ಲಿ ಆಯೋಜಿಸಿದ್ದ ಸಂಭ್ರಮದ ಜೇಸಿ ಸಪ್ತಾಹ ಆಕಾಶ ದೀಪ- 2017 ಸಮಾರೋಪ ಸಮಾರಂಭದಲ್ಲಿ ಅವರು ಮಾತನಾಡುತ್ತಿದ್ದರು.
ಒಟ್ಟಿಗೆ ಸೇರಿ ಬೆಳೆಯುವುದು, ಪರಸ್ಪರ ಅರ್ಥಮಾಡಿಕೊಳ್ಳುವುದು ಸಮಾಜದಲ್ಲಿ ಮುಖ್ಯವಾದ ವಿಚಾರ. ಸುಂದರ ಭಾರತ ನಿರ್ಮಾಣ ಇಂದಿನ ಯುವಜನತೆ ಮತ್ತು ವಿದ್ಯಾರ್ಥಿಗಳ ಕೈಯಲ್ಲಿದೆ. ಆಧುನಿಕ ತಂತ್ರಜ್ಞಾನಗಳು ಸರಳವಾಗಿದ್ದು ಅದನ್ನು ದುರುಪಯೋಗಪಡಿಸಿ ಕೊಂಡು ಸುಳ್ಳು ಪ್ರಚಾರಗಳನ್ನು ಮಾಡುವಂತಹದ್ದು ದೇಶದ್ರೋಹಕ್ಕೆ ಸಮವಾದದ್ದು ಎಂದು ಮಾರ್ಮಿಕ ವಾಗಿ ನುಡಿದರು. ಸಭಾಧ್ಯಕ್ಷತೆಯನ್ನು ಜೇಸಿಐ ಮಡಂತ್ಯಾರು ಅಧ್ಯಕ್ಷ ರಾಜೇಶ್ ಪಿ. ಪುಂಜಾಲಕಟ್ಟೆ ವಹಿಸಿ ಸಭೆ
ಮುನ್ನಡೆಸಿದರು. ಮುಖ್ಯ ಅತಿಥಿಯಾಗಿದ್ದ ಮಡಂತ್ಯಾರು ಸೇಕ್ರೆಡ್ ಹಾರ್ಟ್ ಚರ್ಚ್‌ನ ಧರ್ಮಗುರುಗಳಾದ ರೆ. ಫಾ. ಬೇಸಿಲ್ ವಾಸ್ ಅವರು ಮಾತನಾಡಿ, ನಾನು ನನ್ನದು ಎಂಬ ಸ್ವಾರ್ಥ ತೊರೆದು ಕೀಳರಿಮೆ ಹೋಗಲಾಡಿಸಿಕೊಂಡು, ಆತ್ಮವಿಶ್ವಾಸದಿಂದ ಬೆಳೆಯುವ ಕಲೆಯನ್ನು ಜೇಸಿ ಸಂಸ್ಥೆ ಕಲಿಸಿಕೊಡುತ್ತದೆ ಎಂದರು. ಪೂರ್ವ ವಲಯಾಧ್ಯಕ್ಷ ರಾಮಚಂದ್ರ ರಾವ್ ದಿಕ್ಸೂಚಿ ಭಾಷಣ ಮಾಡಿದರು.
ವೇದಿಕೆಯಲ್ಲಿ ರೋಟರಿ ಕ್ಲಬ್ ಅಧ್ಯಕ್ಷ ಡಾ| ಸುಧೀರ್ ಪ್ರಭು, ಮುರಗೇಂದ್ರ ಮಿತ್ರಮಂಡಳಿ ಪುಂಜಾಲಕಟ್ಟೆ ಅಧ್ಯಕ್ಷ ಮೋಹನ್ ಸಾಲ್ಯಾನ್, ಉಜಿರೆಯ ಉದ್ಯಮಿ ದಾಮೋಧರ ಕಾಮತ್, ಮಡಂತ್ಯಾರು ಎಂ.ಆರ್. ಸುಪಾರಿ ಮಾಲಕ ಹೈದರ್ ಎಂ.ಆರ್, ದುರ್ಗಾ ಟ್ರೇಡರ್‍ಸ್ ಮಾಲಕ ಯಶೋಧರ ಬಂಗೇರ, ಆಟೋ ರಿಕ್ಷಾ ಚಾಲಕ ಮಾಲಕರ ಸಂಘದ ಅಧ್ಯಕ್ಷ ಮುಹಮ್ಮದ್, ಯುವ ಕಾಂಗ್ರೆಸ್ ತಾ| ಅಧ್ಯಕ್ಷ ಅಭಿನಂದನ್, ಕೆಥೋಲಿಕ್ ಸಭಾ ಅಧ್ಯಕ್ಷ ರೋಹಣ್ ಡಿಸೋಜಾ ಮುಖ್ಯ ಅತಿಥಿಗಳಾಗಿ ಭಾಗಿಯಾಗಿದ್ದರು. ವೇದಿಕೆಯಲ್ಲಿ ಜೇಸಿಐ ಮಡಂತ್ಯಾರು ಕಾರ್ಯದರ್ಶಿ ನವೀನ್ ಕೋಡ್ಲಕ್ಕೆ, ಸಪ್ತಾಹ ನಿರ್ದೇಶಕ ಶ್ರೀಧರ ಆಚಾರ್ಯ, ಸಪ್ರಾಹ ಸಹಸಂಯೋಜಕ ವಿನ್ಸೆಂಟ್ ಮೋರಾಸ್, ನಿಕಟಪೂರ್ವಾಧ್ಯಕ್ಷ ಜಯೇಶ್ ಬರೆಟ್ಟೋ, ಜೂನಿಯರ್ ಜೇಸಿ ಅಧ್ಯಕ್ಷ ಪ್ರಜ್ವಲ್ ಶೆಟ್ಟಿ, ಜೇಸಿರೆಟ್ ಅಧ್ಯಕ್ಷೆ ದಿವ್ಯರಾಣಿ ಹಾಗೂ ಎಲ್ಲಾ ಸದಸ್ಯರುಗಳು ಉಪಸ್ಥಿತರಿದ್ದು ಸಹಕಾರ ನೀಡಿದರು.

suddi COLORpdf BLDY.p65ಬೆಳ್ತಂಗಡಿ : ಶ್ರೀ ಗುರುನಾರಾಯಣ ಸ್ವಾಮಿ ಸೇವಾ ಸಂಘದ ಮಹಾಸಭೆ ಇತ್ತೀಚೆಗೆ ನಡೆದು 23 ಮಂದಿ ನಿರ್ದೇಶಕರುಗಳ ಆಯ್ಕೆ ಮಾಡಲಾಯಿತು. ಆ.8 ರಂದು ಸಂಘದ ಗೌರವಾಧ್ಯಕ್ಷ ಶಾಸಕ ಕೆ.ವಸಂತ ಬಂಗೇರರ ಅಧ್ಯಕ್ಷತೆಯಲ್ಲಿ ನೂತನ ಪದಾಧಿಕಾರಿಗಳ ಆಯ್ಕೆ ಮಾಡಲಾಯಿತು. ಅಧ್ಯಕ್ಷರಾಗಿ ಸೋಮನಾಥ ಬಂಗೇರ ವರ್ಪಾಳೆ, ಉಪಾಧ್ಯಕ್ಷೆಯಾಗಿ ಶ್ರೀಮತಿ ಸುಜಿತಾ ವಿ.ಬಂಗೇರ, ಪ್ರಧಾನ ಕಾರ್ಯದರ್ಶಿಯಾಗಿ ರಾಕೇಶ್ ಮೂಡುಕೋಡಿ, ಕೋಶಾಧಿಕಾರಿಯಾಗಿ ಶೇಖರ ಬಂಗೇರ ಹೇರಾಜೆ, ಜತೆ ಕಾರ್ಯದರ್ಶಿಯಾಗಿ ಕರುಣಾಕರ ಮರೋಡಿ, ಸಂಘಟನ ಕಾರ್ಯದರ್ಶಿಯಾಗಿ ಸಚಿನ್ ಕುಮಾರ್ ನೂಜೋಡಿ ಆಯ್ಕೆಯಾಗಿದ್ದಾರೆ.
ಇತರ ನಿರ್ದೇಶಕರುಗಳಾಗಿ ಹರಿದಾಸ ಕೇದೆ, ಕೃಷ್ಣಪ್ಪ ಪೂಜಾರಿ ಲಾಯಿಲ, ಜಯವಿಕ್ರಮ ಕರಾಯ, ಪಿ.ಜಾರಪ್ಪ ಪೂಜಾರಿ ಬೆಳಾಲು, ನಾರಾಯಣ ಪೂಜಾರಿ ಮಚ್ಚಿನ, ಅಭಿನಂದನ್ ಹರೀಶ್ ಕುಮಾರ್ ನಡ, ಸೂರ್ಯನಾರಾಯಣ ಡಿ.ಕೆ ಕೊಕ್ರಾಡಿ, ಲಿಂಗಪ್ಪ ಸಾಲಿಯಾನ್ ಪುದುವೆಟ್ಟು, ಚಂದ್ರಶೇಖರ ಕೋಟ್ಯಾನ್ ಸೋಣಂದೂರು, ಮಹೇಶ್ ಬಂದಾರು, ಚಂದ್ರಶೇಖರ ಎಂ. ಇಂದಬೆಟ್ಟು, ನಿತ್ಯಾನಂದ ನಾವರ, ಶ್ರೀಮತಿ ಶಾಂಭವಿ ಪಿ.ಬಂಗೇರ ಕುವೆಟ್ಟು, ಯಶೋಧರ ಪೂಜಾರಿ ಚಾರ್ಮಾಡಿ, ಹರೀಶ್ ಬರಮೇಲು ಉಜಿರೆ, ಸಂತೋಷ್ ಪಿ.ಕೋಟ್ಯಾನ್ ಬಳಂಜ, ಹರೀಶ್ ಸುವರ್ಣ ಕನ್ಯಾಡಿ II ಆಯ್ಕೆಯಾದರು.
ಚಂದ್ರಹಾಸ ಕೇದೆ ಚುನಾವಣಾಧಿಕಾರಿಯಾಗಿ ಸಹಕರಿಸಿದರು.

blind walkಬೆಳ್ತಂಗಡಿ : ಬೆಳ್ತಂಗಡಿ ಧರ್ಮಪ್ರಾಂತ್ಯದ ಸಮಾಜಸೇವೆ ವಿಭಾಗದ ಡಿ.ಕೆ.ಆರ್.ಡಿ.ಎಸ್ ಸಂಸ್ಥೆಯ ಮುಂದಾಳತ್ವದಲ್ಲಿ, ಲಯನ್ಸ್ ಕ್ಲಬ್, ಸಿರೋ ಮಲಬಾರ್ ಯುವ ಸಂಘಟನೆ, ಕರ್ನಾಟಕ ಸಿರೋ ಮಲಬಾರ್ ಕ್ಯಾಥೋಲಿಕ್ ಎಸೋಸಿಯೇಶನ್, ಸಂತ ತೋಮಸ್ ಕಾಲೇಜು, ಯುನಿಕ್ ಎಜು ಸ್ಕಿಲ್ಸ್, ಕಲ್ಪತರು ನರ್ಸಿಂಗ್ ಸ್ಕೂಲ್, ಸ್ನಾತಕೋತ್ತರ ಸಮಾಜ ಕಾರ್ಯ ವಿಭಾಗ ಉಜಿರೆ, ಜ್ಯೋತಿ ಆಸ್ಪತ್ರೆ ಲಾಯಿಲ, ಸ್ನೇಹಜ್ಯೋತಿ ಮಹಿಳಾ ತಾಲೂಕು ಒಕ್ಕೂಟ ಹಾಗೂ ಸಂತ ಲಾರೆನ್ಸ್ ಪ್ರಧಾನ ದೇವಾಲಯ ಇವುಗಳ ಸಹಭಾಗಿತ್ವದಲ್ಲಿ ಬೆಳ್ತಂಗಡಿ ಬ್ಲೈಂಡ್ ವಾಕ್ ಕಾರ್ಯಕ್ರಮವು ಇಂದು(ಅ.12) ಬೆಳ್ತಂಗಡಿ ನ.ಪಂ ಬಳಿಯಿಂದ ಅಂಬೇಡ್ಕರ್ ಭವನದವರೆಗೆ ರ್‍ಯಾಲಿ ನಡೆಯಿತು.

shadhi mahalಗುರುವಾಯನಕೆರೆ : ಶಾದಿಮಹಲ್ ನಿರ್ಮಾಣಕ್ಕೆ ಈ ಹಿಂದೆ ಸರಕಾರ ಅಲ್ಪ ಸಂಖ್ಯಾತರ ಕಲ್ಯಾಣ ಇಲಾಖೆಯ ಮೂಲಕ ನಿಗಧಿಪಡಿಸಿದ್ದ ಗ್ರಾಮೀಣ ಪ್ರದೇಶದಲ್ಲಿ 50 ಲಕ್ಷ ರೂ ಇದ್ದುದನ್ನು 1 ಕೋಟಿಗೆ ಮತ್ತು ಪಟ್ಟಣಕ್ಕೆ 1 ಕೋಟಿಯಿಂದ 2 ಕೋಟಿ ರೂ. ಗಳಿಗೆ ದ್ವಿಗುಣಗೊಳಿಸಲಾಗಿದೆ. ಅಲ್ಲದೆ ನಾನು ಅಧಿಕಾರಕ್ಕೆ ಬಂದ 15 ತಿಂಗಳ ಅಂತರದಲ್ಲಿ ಅಪೂರ್ಣಾವಸ್ಥೆಯಲ್ಲಿದ್ದ ಶಾದಿಮಹಲ್ ಕಟ್ಟಡಗಳನ್ನು ಪೂರ್ಣಗೊಳಿಸಲು ಅಗತ್ಯವಿರುವ 113 ಕೋಟಿ ರೂ. ಗಳನ್ನು ಬಿಡುಗಡೆಗೊಳಿಸಲಾಗಿದೆ ಎಂದು ಕರ್ನಾಟಕ ಪ್ರೌಢ ಮತ್ತು ಪ್ರಾಥಮಿಕ ಶಿಕ್ಷಣ ಸಚಿವ, ವಕ್ಫ್ ಮತ್ತು ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆ ಸಚಿವ ತನ್ವೀರ್ ಸೇಠ್ ಹೇಳಿದರು.
ಗುರುವಾಯನಕೆರೆ ಹಝ್ರತ್ ಶೈಖ್ ಹಯಾತುಲ್ ಔಲಿಯಾ ದರ್ಗಾಶರೀಫ್ ಮತ್ತು ಜುಮ್ಮಾ ಮಸೀದಿ ಇದರ ವತಿಯಿಂದ ಸರಕಾರದ ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಯ ಅನುದಾನದಲ್ಲಿ ನೂತನವಾಗಿ ನಿರ್ಮಿಸಿದ ಶಾದಿಮಹಲ್ ಸಭಾಭವನವನ್ನು ಅ. 10 ರಂದು ಉದ್ಘಾಟಿಸಿ ಅವರು ಮಾತನಾಡುತ್ತಿದ್ದರು.
ಮುಖ್ಯ ಅತಿಥಿಯಾಗಿ ಮಾತನಾಡಿದ ಜಿಲ್ಲಾ ಉಸ್ತುವಾರಿ ಸಚಿವ ಬಿ ರಮಾನಾಥ ರೈ ಅವರು, ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಯ ಸೌಲಭ್ಯಗಳನ್ನು ಪಡೆಯುವಲ್ಲಿ ಜಿಲ್ಲಾ ಮಟ್ಟದಲ್ಲಿ ಕೆಲವೊಂದು ನಿಯಮಾವಳಿಗಳು ಕಠಿಣವಾಗಿದ್ದು ಅವುಗಳನ್ನು ಸ್ವಲ್ಪ ಮಟ್ಟಿಗೆ ಸಡಿಲಗೊಳಿಸಿದಲ್ಲಿ ಸಮುದಾಯಕ್ಕೆ ಇನ್ನಷ್ಟು ಅನುಕೂಲತೆ ದೊರೆಯಲಿದೆ. ನಮ್ಮ ಜಿಲ್ಲೆಯಲ್ಲಿ ಯಾವತ್ತೂ ಸರಿಕಾರಿ ಅನುದಾನದ ದುರುಪಯೋಗ ನಡೆಯುವುದಿಲ್ಲ. ಈ ಬಗ್ಗೆ ನಿಮಗೆ ಸಂದೇಹ ಬೇಡ. ಕಾಯ್ದೆ ಸರಳೀ
ಕರಣದ ಬಗ್ಗೆ ಅಧಿಕಾರಿಗಳಿಗೆ ಸೂಕ್ತ ನಿರ್ದೇಶನ ನೀಡಬೇಕು ಎಂದು ಕೋರಿದರು.
ಸಭಾಧ್ಯಕ್ಷತೆ ವಹಿಸಿದ್ದ ಶಾಸಕ ವಸಂತ ಬಂಗೇರ ಮಾತನಾಡಿ, ಈ ಕ್ಷೇತ್ರದಲ್ಲಿ ನನ್ನನ್ನು ಜನತೆ 5 ಬಾರಿ ವಿವಿಧ ಪಕ್ಷಗಳಿಂದ ಆರಿಸಿ ಜನ ಸೇವೆ ಮಾಡಲು ಅವಕಾಶ ಮಾಡಿ ಕೊಟ್ಟಿದ್ದಾರೆ. ಎಂದೂ ಕೂಡ ಮತದಾರರಿಗೆ ಅಗೌರವವಾಗುವ ರೀತಿಯಲ್ಲಿ ನಾನು ನಡೆದುಕೊಂಡಿಲ್ಲ, ಅಲ್ಪಸಂಖ್ಯಾತ ಸಮುದಾಯ ದವರು ಎಂದರೆ ಅವರು ನಮ್ಮವರು ಎಂದು ಭಾವಿಸಿದ್ದೇನೆ ಎಂದರು. ಗುರುವಾಯನಕೆರೆಯಲ್ಲಿ ಸರಕಾರಿ ಅನುದಾನದಿಂದ ಶಾದಿಮಹಲ್ ನಿರ್ಮಿಸಿ ಆದಾಯವನ್ನು ಸಮುದಾಯದ ಏಳಿಗೆಗೆ ವಿನಿಯೋಗಿಸಲು ನಿರ್ಧರಿಸಿದ್ದಾರೆ. ಈ ಕಟ್ಟಡಕ್ಕೆ 50 ಲಕ್ಷ ರೂ. ಸರಕಾರ ನೀಡಿದೆ. ಆ ಅನುದಾನಕ್ಕೆ ಹೆಚ್ಚುವರಿಯಾಗಿ ಸೇರಿಸಿ ಸುಂದರವಾದ ಕಟ್ಟಡ ನಿರ್ಮಿಸಿದ್ದಾರೆ. ಈಗ ಸಮಿತಿಯ ಮುಂದೆ 35 ಲಕ್ಷದಷ್ಟು ಸಾಲವಿದ್ದು, ನೀವು ಬೆಂಗಳೂರಿಗೆ ಹೋದ ತಕ್ಷಣ ಉಳಿಕೆ 50 ಲಕ್ಷ ರೂ. ಅನುದಾನವನ್ನು ಬಿಡುಗಡೆಗೊಳಿಸಿ ನೆರವು ನೀಡಬೇಕು.
ಶಾಲಾ ದುರಸ್ತಿಗೆ ಇನ್ನೂ 3 ಕೋಟಿ ರೂ ಬೇಡಿಕೆ:
ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವರಾಗಿರುವ ತಾವು ಈಗಾಗಲೇ ತಾಲೂಕಿನ ಶಾಲೆಗಳ ದುರಸ್ಥಿಗೆ 2 ಕೋಟಿ ರೂ. ಒದಗಿಸಿಕೊಟ್ಟಿದ್ದೀರಿ. ಇನ್ನೂ ಕೆಲವು ಶಾಲೆಗಳು ತುರ್ತು ದುರಸ್ಥಿಯ ಅವಶ್ಯಕತೆ ಇದ್ದು ಇಲ್ಲಿ ಅಪಾಯಗಳು ಸಂಭವಿಸಿ ನಮ್ಮ ಸರಕಾರಕ್ಕೆ ಕೆಟ್ಟ ಹೆಸರು ಬರುವ ಮುನ್ನ ಇನ್ನೂ 3 ಕೋಟಿ ರೂ. ಗಳನ್ನು ದುರಸ್ಥಿಗಾಗಿ ಬಿಡುಗಡೆಮಾಡಬೇಕು ಎಂದು ಮನವಿ ಮಾಡಿದ ಶಾಸಕರು, ಸರಕಾರ ನೌಕರರ ಪೈಕಿ ಅತ್ಯಂತ ಪ್ರಾಮಾಣಿಕವಾಗಿ ಕೆಲಸ ಮಾಡುವವರು ಅಧ್ಯಾಪಕವೃಂದ ಎಂದು ಮೊದಲಿಸಿದರು.
ಮುಖ್ಯ ಅತಿಥಿಗಳಾಗಿದ್ದ ಜಿ.ಪಂ ಶಿಕ್ಷಣ ಮತ್ತು ಆರೋಗ್ಯ ಸ್ಥಾಯಿ ಸಮಿತಿ ಅಧ್ಯಕ್ಷ ಕೆ.ಕೆ ಶಾಹುಲ್ ಹಮೀದ್, ಭಾರತ್ ಸೇವಾದಳದ ರಾಜ್ಯ ಸಂಘಟಕ ಅಲ್ಫೋನ್ಸ್ ಫ್ರಾಂಕೋ ಸಂದರ್ಭೋಚಿತವಾಗಿ ಶುಭ ಕೋರಿದರು. ಪಟ್ಟಣ ಪಂಚಾಯತ್ ಅಧ್ಯಕ್ಷ ಮುಗುಳಿ ನಾರಾಯಣ ರಾವ್, ಜಿಲ್ಲಾ ವಕ್ಫ್ ಅಧಿಕಾರಿ ಹಾಜಿ ಅಬೂಬಕ್ಕರ್, ಜಿಲ್ಲಾ ಅಲ್ಪಸಂಖ್ಯಾತ ಕಲ್ಯಾಣಾಧಿಕಾರಿ ಎ ಉಸ್ಮಾನ್, ಜಿ.ಪಂ ಸದಸ್ಯ ಪಿ ಧರಣೇಂದ್ರ, ವಕ್ಫ್ ಸಚಿವರ ಸರಕಾರಿ ಆಪ್ತ ಕಾರ್ಯದರ್ಶಿ ಸಿದ್ದೀಕ್ ಪಾಶಾ, ಗುರುವಾಯನಕೆರೆ ಮುದರ್ರಿಸ್ ಕೆ.ಎ ಸುಲೈಮಾನ್ ಫಾಳಿಲಿ, ಸಹಾಯಕ ಖತೀಬ್ ಮುಹಮ್ಮದ್ ಶರೀಫ್ ಸಅದಿ, ದರ್ಗಾ ಸಮಿತಿ ಅಧ್ಯಕ್ಷ ಉಸ್ಮಾನ್ ಶಾಫಿ, ಪ್ರ. ಕಾರ್ಯದರ್ಶಿ ಮುಹಮ್ಮದ್ ರಫಿ, ದರ್ಗಾ ಸಮಿತಿ ಮಾಜಿ ಅಧ್ಯಕ್ಷ ಅಬೂಬಕ್ಕರ್ ಬಾವುಂಞಿ ಹಾಜಿ, ಅಲ್ಪ ಸಂಖ್ಯಾತರ ಕಲ್ಯಾಣ ಇಲಾಖೆ ವ್ಯವಸ್ಥಾಪಕ ಶ್ರೀಧರ ಭಂಡಾರಿ ಉಪಸ್ಥಿತರಿದ್ದರು.
ಸಚಿವರು ಮತ್ತು ಶಾಸಕರಿಗೆ ಅದ್ದೂರಿ ಸನ್ಮಾನ:
ಶಾದಿಮಹಲ್ ಉದ್ಘಾಟನೆ ನಡೆಸಿಕೊಟ್ಟ ವಕ್ಫ್ ಸಚಿವ ತನ್ವೀರ್ ಸೇಠ್ ಅವರಿಗೆ ಮುಸ್ಲಿಂ ಸಂಪ್ರದಾಯದ ಉಲ್ಲನ್ ಟೋಪಿ ಧರಿಸುವ ಮೂಲಕ ಸನ್ಮಾನ ನಡೆದರೆ ಸಭಾಧ್ಯಕ್ಷತೆ ವಹಿಸಿದ್ ಶಾಸಕ ವಸಂತ ಬಂಗೇರ ಅವರಿಗೆ ವಿಶೇಷ ಪೇಠ ತೊಡಿಸಿ ಅದ್ದೂರಿಯಾಗಿ ಸನ್ಮಾನ ನಡೆಸಲಾಯಿತು.
ಸ್ಮರಣಿಕೆ, ಪುರಸ್ಕಾರ:
ಶಾದಿಮಹಲ್ ನೀಲಿನಕಾಶೆ ತಯಾರಿಸಿದ ತಾಹಿರ್ ಇಂಜಿನಿಯರ್, ಗುತ್ತಿಗೆ ನಿರ್ವಹಿಸಿದ ಯೂಸುಫ್ ಕನ್ನಡಿಕಟ್ಟೆ ಮತ್ತು ಸಾದಿಕ್, ಸಹಕಾರ ನೀಡಿದ ಕುವೆಟ್ಟು ಗ್ರಾ.ಪಂ ಅಧ್ಯಕ್ಷ ರಿಯಾಝ್ ಅಹಮ್ಮದ್, ನಿಕಟಪೂರ್ವ ಅಧ್ಯಕ್ಷ ಯಾಕೂಬ್ ಮುಸ್ಲಿಯಾರ್ ಮೇಲಂತಬೆಟ್ಟು, ಇಂಟರ್‌ಲಾಕ್ ಕಾಮಗಾರಿ ನಿರ್ವಹಿಸಿದ ರಿಯಾಝ್ ಪೆರಾಲ್ದರಕಟ್ಟೆ, ಮಾಜಿ ಅಧ್ಯಕ್ಷ ಹಾಜಿ ಸುಲೈಮಾನ್ ಕರಾವಳಿ ಅವರನ್ನು ಶಾಲು, ಸ್ಮರಣಿಕೆ ನೀಡಿ ಪುರಸ್ಕರಿಸಲಾಯಿತು. ಸಚಿವರು ಮಸೀದಿ ವಠಾರಕ್ಕೆ ಆಗಮಿಸುತ್ತಿದ್ದಂತೆ ಹಝ್ರತ್ ಶೈಖ್ ಹಯಾತುಲ್ ಔಲಿಯಾ ದರ್ಗಾ ಶರೀಫ್‌ನಲ್ಲಿ ಸಾಮೂಹಿಕ ಪ್ರಾರ್ಥನೆ ನೆರವೇರಿಸಲಾಯಿತು. ಬಳಿಕ ಶಾಸಕರ ಅನುದಾನದಲ್ಲಿ ಮಸೀದಿ ಆವರಣದಲ್ಲಿ ಅಳವಡಿಸಿರುವ ಇಂಟರ್‌ಲಾಕ್ ಅಂಗಣವನ್ನು ಶಾಸಕರು ಮತ್ತು ಸಚಿವರು ಜಂಟಿಯಾಗಿ ಉದ್ಘಾಟಿಸಿದರು. ಬಳಿಕ ನೂತನ ಸಭಾಭವನದಲ್ಲಿ ನಡೆದ ಸಭಾ ಕಾರ್ಯಕ್ರಮದ ಪ್ರಾರಂಭದಲ್ಲಿ ಸುನ್ನೀ ಸಂಯುಕ್ತ ಜಮಾಅತ್ ಸಹಾಯಕ ಖಾಝಿ, ಗುರುವಾಯನಕರೆ ಮಸೀದಿ ಖತೀಬ್ ಸಯ್ಯಿದ್ ಅಬ್ದುರ್ರಹ್ಮಾನ್ ಸಾದಾತ್ ತಂಙಳ್ ಬಾಅಲವಿ ದುಆ ಪ್ರಾರ್ಥನೆ ನಡೆಸಿಕೊಟ್ಟರು. ಜಮಾಅತ್ ಆಡಳಿತ ಮಂಡಳಿ ಸದಸ್ಯ ಹಸೈನಾರ್ ಶಾಫಿ ಸ್ವಾಗತಿಸಿ ಪ್ರಸ್ತಾವನೆಗೈದರು. ಲ| ಅಶ್ರಫ್ ಆಲಿಕುಂಞಿ ಕಾರ್ಯಕ್ರಮ ನಿರೂಪಿಸಿದರು. ಜಮಾಅತ್ ಸಮಿತಿ ನೂತನ ಅಧ್ಯಕ್ಷ ಉಸ್ಮಾನ್ ಬಳೆಂಜ ಧನ್ಯವಾದವಿತ್ತರು.

thaluku panchayath pragathi parisheelana sabheಬೆಳ್ತಂಗಡಿ : ಕಳೆದ ನಾಲ್ಕೂವರೆ ವರ್ಷದಲ್ಲಿ ತಾಲೂಕಿನಲ್ಲಿ ದಾಖಲೆ ಮೊತ್ತದ ಕಾಮಗಾರಿ ನಡೆದಿದೆ. 1 ಸಾವಿರ ಕೋಟಿಯ ಅಭಿವೃದ್ಧಿ ಕಾಮಗಾರಿಗಳನ್ನು ಅನುಷ್ಠಾನ ಮಾಡಲಾಗಿದೆ. ವಿವಿಧ ಯೋಜನೆಗಳ ಮೂಲಕ 16,978 ಮನೆಗಳನ್ನು ಮಂಜೂರು ಗೊಳಿಸಿ ಬಡವರಿಗೆ ಹಂಚಿಕೆ ಮಾಡಿದ್ದೇನೆ ಎಂದು ಬೆಳ್ತಂಗಡಿ ಕ್ಷೇತ್ರದ ಶಾಸಕ ಹಾಗೂ ರಾಜ್ಯ ಸಣ್ಣ ಕೈಗಾರಿಕಾ ಅಭಿವೃದ್ಧಿ ನಿಗಮದ ಅಧ್ಯಕ್ಷ ಕೆ. ವಸಂತ ಬಂಗೇರ ಹೇಳಿದರು.
ಅವರು ಅ.9ರಂದು ಬೆಳ್ತಂಗಡಿ ತಾಲೂಕು ಪಂಚಾಯತು ಸಭಾಂಗಣದಲ್ಲಿ ಬೆಳ್ತಂಗಡಿ ತಾಲೂಕಿನ ಗ್ರಾಮ ಪಂಚಾಯತುಗಳ ಅಭಿವೃದ್ಧಿ ಅಧಿಕಾರಿ ಮತ್ತು ಕಾರ್ಯದರ್ಶಿಗಳ ಪ್ರಗತಿ ಪರಿಶೀಲನೆ ನಡೆಸಿ ನಂತರ ಸಭೆ ಯನ್ನು ಉದ್ದೇಶಿಸಿ ಮಾತನಾಡಿದರು.
ಕಳೆದ ಒಂದು ವರ್ಷದಲ್ಲಿ ೧೭ ಸೇತುವೆಗಳು ತಾಲೂಕಿಗೆ ಮಂಜೂರು ಆಗಿದೆ. 72 ಕಾಮಗಾರಿಗಳು ಈಗಾಗಲೇ ಸರಕಾರದಿಂದ ಮಂಜೂರಾಗಿ ಬಂದಿದ್ದು, ಇದರ ಶಂಕುಸ್ಥಾಪನೆಯನ್ನು ಶೀಘ್ರವಾಗಿ ನೆರವೇರಿಸಲಿದ್ದೇನೆ. ಈಗಾಗಲೇ ಪ.ಜಾತಿ ಮತ್ತು ಪಂಗಡದ 600ಕ್ಕೂ ಮಿಕ್ಕಿ ರಸ್ತೆಗಳನ್ನು ಕಾಂಕ್ರೀಟಿಕರಣ ಮಾಡ ಲಾಗಿದ್ದು, ಇನ್ನೂ 400ಕ್ಕೂ ಮಿಕ್ಕಿ ರಸ್ತೆಗಳನ್ನು ಅಭಿವೃದ್ಧಿ ಪಡಿಸಲಾಗು ವುದು, ತಾಲೂಕಿನ ೪೮ ಗ್ರಾ.ಪಂ. ವ್ಯಾಪ್ತಿಯಲ್ಲಿ ರೂ.438 ಕೋಟಿಗಳ ಅಭಿವೃದ್ಧಿ
ಕಾಮಗಾರಿ ನಡೆಸಲಾಗಿದೆ ಎಂದು ತಿಳಿಸಿದರು.
ಇನ್ನು ಒಂದು ತಿಂಗಳ ಒಳಗೆ ಎಲ್ಲಾ ಮನೆ ನಿವೇಶನಗಳ ಜಾಗವನ್ನು ಪಂಚಾಯತುಗಳಿಗೆ ಹಸ್ತಾಂತರ ಮಾಡಲು ಕ್ರಮ ಜರುಗಿಸಲಾಗುವುದು, ಪ್ರತಿ ಗ್ರಾಮ ಪಂಚಾಯತುಗಳಲ್ಲಿ ಕಂಪ್ಯೂಟರ್ ಅಪರೇಟರ್ ಹುದ್ದೆ ಗಳಿಗೆ ನೇಮಕಾತಿ ನಡೆಸಲು ಪ್ರಯತ್ನಿ ಸಲಾಗುವುದು,
ತಾಲೂಕು ಕಚೇರಿಯಲ್ಲಿ ದಳ್ಳಾಳಿಗಳ ಹಾವಳಿ ಹೆಚ್ಚಿದ್ದು, ಇನ್ನೂ 15 ದಿನಗಳ ಒಳಗೆ ಎಲ್ಲಾ ಗ್ರಾಮ ಕರಣಿಕರ ಮತ್ತು ಗ್ರಾಮ ಸಹಾಯಕರ ಸಭೆಯನ್ನು ನಡೆಸಲಾಗುವುದು ಕಳೆದ ಮೂರು ವರ್ಷಗಳ ಹಿಂದೆ ಕಿನ್ಯಮ್ಮ ಸಭಾಂಗಣದಲ್ಲಿ ನಡೆಸಿದ ಸಮಾವೇಶದಲ್ಲಿ ಬಂದ ಬೇಡಿಕೆಗಳಲ್ಲಿ ಶೇ. 80 ಬೇಡಿಕೆಗಳನ್ನು ಈಡೇರಿಸಲಾಗಿದೆ ಎಂದು ಹೇಳಿದರು.
ಮನೆ ಹಂಚಿಕೆಯಲ್ಲಿ ಯಾವುದೇ ತಾರತಮ್ಯ ಮಾಡಬೇಡಿ, ನಾನು ಯಾವುದೇ ಪಕ್ಷ ನೋಡಿ ಅನುದಾನ ಹಂಚಿಲ್ಲ, ಎಲ್ಲಾ ಪಂಚಾಯತಿಗೂ ಸಮಾನವಾಗಿ ಹಂಚಿಕೆ ಮಾಡಿದ್ದೇನೆ. ಪಿಡಿಒಗಳು ಕೂಡಾ ಯಾವುದೇ ತಾರತಮ್ಯ ಮಾಡಬಾರದು ಎಂದು ಶಾಸಕರು ಕಿವಿ ಮಾತು ಹೇಳಿದರು. ಈಗಾಗಲೇ ತಾಲೂಕಿಗೆ ೫೦೦ ಮನೆಗಳನ್ನು ಹೆಚ್ಚುವರಿಯಾಗಿ ತರಿಸಿ ವಿತರಣೆ ಮಾಡಿದ್ದೇನೆ. ಪ್ರತಿ ಗ್ರಾಮ ಪಂಚಾಯತು ಪಿಡಿಒ ಕಾರ್ಯದರ್ಶಿಗಳಿಗೆ ಎರಡು ಮನೆಗಳನ್ನು ನೀಡುತ್ತೇನೆ ಇದನ್ನು ಬಡವರನ್ನು ಗುರುತಿಸಿ ಅವರಿಗೆ ವಿತರಣೆ ಮಾಡಿ ಎಂದು ಶಾಸಕರು ಈ ಸಂದರ್ಭದಲ್ಲಿ ಹೇಳಿದರು.
ಪ್ರಾಸ್ತಾವಿಕವಾಗಿ ಮಾತನಾಡಿದ ಪಿಡಿಒ ಪ್ರಕಾಶ್ ಶೆಟ್ಟಿಯವರು ಈ ಸರಕಾರದ ಅವಧಿಯಲ್ಲಿ ನಾಲ್ಕೂವರೆ ವರ್ಷಗಳ ಅವಧಿಯಲ್ಲಿ ಪ್ರತಿ ಪಂಚಾಯತ್‌ಗೆ ರೂ. 5 ರಿಂದ ರೂ.6 ಕೋಟಿ ಅನುದಾನ ಬಂದಿದ್ದು, ಕಾಮಗಾರಿಗಳನ್ನು ಸಮರ್ಪಕವಾಗಿ ಅನುಷ್ಠಾನ ಮಾಡಲಾಗಿದೆ ಎಂದರು.
ಸಭೆಯಲ್ಲಿ ಶಾಸಕರು ಗ್ರಾಮ ಪಂಚಾಯತುಗಳ ಪ್ರಗತಿಯನ್ನು ಪರಿಶೀಲಿಸಿದರು. ಪಂಚಾಯತ್ ಅಭಿವೃದ್ಧಿ ಅಧಿಕಾರಿ ಹಾಗೂ ಕಾರ್ಯದರ್ಶಿಗಳು ತಮ್ಮ ಪಂಚಾಯತದಲ್ಲಿ ಕಳೆದ ನಾಲ್ಕೂವರೆ ವರ್ಷಗಳಲ್ಲಿ ಆದ ಪ್ರಗತಿಯ ವಿವರಗಳನ್ನು ನೀಡಿದರು. ಲೋಕೋಪಯೋಗಿ ಇಲಾಖೆಯಲ್ಲಿ ತಾಲೂಕಿನಾದ್ಯಂತ ನಾಲ್ಕೂವರೆ ವರ್ಷದಲ್ಲಿ ರೂ.119.17 ಕೋಟಿಯ ಅಭಿವೃದ್ಧಿ ಕಾಮಗಾರಿ ನಡೆಸಲಾಗಿದೆ ಎಂದು ಸಹಾಯಕ ಅಭಿಯಂತರ ಶಿವಪ್ರಸಾದ ಅಜಿಲ ಸಭೆಗೆ ಮಾಹಿತಿ ನೀಡಿದರು. ಕುಡಿಯುವ ನೀರಿನ ಯೋಜನೆಯಲ್ಲಿ ರೂ. 10.76 ಕೋಟಿಯ ಕಾಮಗಾರಿ ನಡೆಸಲಾಗಿದೆ ಎಂದು ಅಧಿಕಾರಿ ಮಾಹಿತಿ ಇತ್ತರು. ಗ್ರಾಮಾಂತರ ಪ್ರದೇಶದಲ್ಲಿ ಅಗತ್ಯ ಕುಡಿಯುವ ನೀರಿಗಾಗಿ ೩೬ ನೀರಿನ ಬೂತ್ ರಚನೆಗೊಂಡು ವರ್ಷಗಳು ಕಳೆದರೂ ಇದುವರೆಗೂ ಇದರ ಪ್ರಯೋಜನ ಜನರಿಗೆ ಲಭಿಸಿಲ್ಲ ಎಂದು ಶಾಸಕರು ಅಸಮಾಧಾನ ವ್ಯಕ್ತಪಡಿಸಿ, ಇದರ ಕಾಮಗಾರಿಯನ್ನು ಶೀಘ್ರವಾಗಿ ಮಾಡುವಂತೆ ಶಾಸಕರು ಅಧಿಕಾರಿಗಳಿಗೆ ಸೂಚನೆ ನೀಡಿದರು. ಕುವೆಟ್ಟು ಗ್ರಾಮವನ್ನು ನಗರ ಎಂದು ಪರಿಗಣಿಸಿರುವುದರಿಂದ ಕೇವಲ 10 ಮನೆಗಳು ಮಾತ್ರ ದೊರಕಿದೆ ಎಂದು ಅಭಿವೃದ್ಧಿ ಅಧಿಕಾರಿ ರವೀಂದ್ರ ನಾಯಕ್ ಶಾಸಕರ ಗಮನಕ್ಕೆ ತಂದಾಗ ರಾಜ್ಯದಲ್ಲಿ 127 ಗ್ರಾಮಗಳನ್ನು ನಗರ ಎಂದು ಪರಿವರ್ತಿಸಲಾಗಿದೆ. ಇದರಲ್ಲಿ ಬೆಳ್ತಂಗಡಿ ತಾಲೂಕಿನಲ್ಲಿ ಕುವೆಟ್ಟು ಗ್ರಾಮ ಸೇರಿದೆ ಎಂದು ಶಾಸಕರು ತಿಳಿಸಿದರು. ಹೊಸಂಗಡಿ ಗ್ರಾಮದ ಅಂಚೆ ಪಿನ್‌ಕೋಡು ಬದಲಾವಣೆ ಮಾಡಿರುವುದರಿಂದ ಪಡಿತರ ಮತ್ತು ಆಧಾರ್ ಕಾರ್ಡ್ ಮಾಡಲು ಸಮಸ್ಯೆಯಾಗಿದೆ ಎಂದು ಪಿಡಿಒ ಹೇಳಿದಾಗ ಇದನ್ನು ಸರಿಪಡಿಸಲು ಕ್ರಮ ಜರುಗಿಸುವಂತೆ ಶಾಸಕರು ಕಾರ್ಯನಿರ್ವಾಹಣಾಧಿಕಾರಿಗಳಿಗೆ ಸೂಚನೆ ನೀಡಿದರು. ಮಡಂತ್ಯಾರಿನಲ್ಲಿ ಪಂಚಾಯತು ಮನೆ ನಿವೇಶನದ ಜಾಗದಲ್ಲಿ ಸಾಮಾಜಿಕ ಅರಣ್ಯ ಇಲಾಖೆ ನೆಡುತೋಪು ಇರುವುದರಿಂದ ಸಮಸ್ಯೆಯಾಗಿರುವ ವಿಷಯವನ್ನು ಪಿಡಿಓ ನಾಗೇಶ್ ಶಾಸಕರ ಗಮನಕ್ಕೆ ತಂದರು. ಇದನ್ನು ಕೂಡಲೇ ಕಟಾವು ಮಾಡಿ ಜಾಗ ಬಿಟ್ಟುಕೊಡಲು ಅರಣ್ಯಾಧಿಕಾರಿಗಳಿಗೆ ಶಾಸಕರು ಸೂಚನೆ ನೀಡಿದರು. ಪಾಂಡವರ ಕಲ್ಲು ರಸ್ತೆ ಅಭಿವೃದ್ಧಿ ಬಗ್ಗೆ ಪಿಡಿಒ ಪ್ರಶ್ನಿಸಿದಾಗ ಈ ರಸ್ತೆಯನ್ನು ಮೇಲ್ದರ್ಜೆಗೇರಿಸಲು ಕ್ರಮ ಜರುಗುತ್ತಿದೆ ಎಂದರು.
ಸುಲ್ಕೇರಿಯಲ್ಲಿ ಖಾಸಗಿ ಶಾಲೆಯ ಸಮಸ್ಯೆ ಬಗ್ಗೆ ಪಿಡಿಒ ರವಿ ಶಾಸಕರ ಗಮನಕ್ಕೆ ತಂದಾಗ ಇದನ್ನು ಸರಕಾರದ ವಶಕ್ಕೆ ಪಡೆದುಕೊಳ್ಳುವ ಚಿಂತನೆ ಇದ್ದರೂ, ಸ್ವಾಮೀಜಿಯೋರ್ವರು ಇದನ್ನು ನಡೆಸಲು ಮುಂದೆ ಬಂದಿರುವುದನ್ನು ಶಾಸಕರು ಸಭೆಗೆ ವಿವರಿಸಿದರು. ಮುಂಡಾಜೆಯ ಕೊಂಬಿನಡ್ಕ ಶಾಲೆ ಒಂದು ಭಾಗ ಮಳೆಗೆ ಕುಸಿದಿದೆ ಎಂದು ಸಂಜೀವ ನಾಯ್ಕ ಸಭೆಗೆ ತಿಳಿಸಿದಾಗ ಮಾತನಾಡಿದ ಶಾಸಕರು ಈಗಾಗಲೇ ಶಾಲೆಗಳ ದುರಸ್ಥಿಗೆ ರೂ. 2.50 ಕೋಟಿ ಅನುದಾನ ಬಂದಿದ್ದು, ಪುನಃ ರೂ.3 ಕೋಟಿ ಅನುದಾನಕ್ಕೆ ಸರಕಾರಕ್ಕೆ ಬರೆಯಲಾಗಿದೆ ಎಂದರು. ನಾರಾವಿಯಲ್ಲಿ ಮೆಸ್ಕಾಂ ಉಪಕೇಂದ್ರದ ಜಾಗ ಅರಣ್ಯ ಇಲಾಖೆ ಸಮಸ್ಯೆ ಕುರಿತು ಪಿಡಿಒ ನಿರ್ಮಲ್‌ಕುಮಾರ್ ಸಭೆಗೆ ಮಾಹಿತಿ ನೀಡಿದಾಗ ಇದರ ಬಗ್ಗೆ ಕ್ರಮ ಕೈಗೊಳ್ಳಲು ಶಾಸಕರು ಅರಣ್ಯ ಇಲಾಖೆಯ ಅಧಿಕಾರಿಗಳಿಗೆ ತಿಳಿಸಿದರು. ಬೆಳ್ತಂಗಡಿ-ಕೊಯ್ಯೂರು ರಸ್ತೆ ಅಭಿವೃದ್ಧಿ ಕುರಿತು ಪಿಡಿಒ ಶ್ರೀನಿವಾಸ್ ಅವರ ಪ್ರಸ್ತಾಪಕ್ಕೆ ಉತ್ತರಿಸಿದ ಶಾಸಕರು ಈ ರಸ್ತೆಯನ್ನು ಮೇಲ್ದರ್ಜೆಗೇರಿಸಿ ಅಭಿವೃದ್ಧಿ ಪಡಿಸಲಾಗುವುದು ಎಂದರು. ವೇದಿಕೆಯಲ್ಲಿ ತಾ.ಪಂ. ಅಧ್ಯಕ್ಷೆ ದಿವ್ಯಜ್ಯೋತಿ, ಉಪಾಧ್ಯಕ್ಷ ವೇದಾವತಿ, ಸ್ಥಾಯಿ ಸಮಿತಿ ಅಧ್ಯಕ್ಷ ಸುಧೀರ್ ಆರ್.ಸುವರ್ಣ, ಉದ್ಯೋಗ ಖಾತರಿ ಯೋಜನೆಯ ಸಹಾಯಕ ನಿರ್ದೇಶಕ ಕುಸುಮಾಧರ್, ಸಹಾಯಕ ಕಾರ್ಯಪಾಲಕ ಅಭಿಯಂತರ ಸಿ.ಆರ್. ನರೇಂದ್ರ, ತಾ.ಪಂ. ಸಹಾಯಕ ಲೆಕ್ಕ ಅಧೀಕ್ಷಕ ಗಣೇಶ್ ಪೂಜಾರಿ, ವ್ಯವಸ್ಥಾಪಕಿ ಸುವರ್ಣ ಕುಮಾರಿ ಉಪಸ್ಥಿತರಿದ್ದರು. ಕಾರ್ಯನಿರ್ವಾಹ ಣಾಧಿಕಾರಿ ಬಸವರಾಜ್ ಸ್ವಾಗತಿಸಿದರು. ಪಿಡಿಒ ಪ್ರಕಾಶ್ ಶೆಟ್ಟಿ ಪ್ರಾಸ್ತಾವಿಕವಾಗಿ ಮಾತನಾಡಿದರು. ತಾಲೂಕು ಸಂಯೋಜಕ ಜಯಾನಂದ ಕಾರ್ಯಕ್ರಮ ನಿರೂಪಿಸಿ, ಪಿಡಿಒ ಗಾಯತ್ರಿ ವಂದಿಸಿದರು.

abhinandane

abhinandane1ಗುರುವಾಯನಕೆರೆ : ಸ.ಪ್ರೌ.ಶಾಲೆ ಗುರುವಾಯನಕೆರೆಯಲ್ಲಿ ಎಸ್.ಎಸ್.ಎಲ್.ಸಿ ವಾರ್ಷಿಕ ಪರೀಕ್ಷೆಯಲ್ಲಿ ಸತತ 6ನೇ ಬಾರಿಗೆ 100% ಫಲಿತಾಂಶ ಪಡೆದ 2016-17ನೇ ಸಾಲಿನ ಶಾಲಾ ವಿದ್ಯಾರ್ಥಿಗಳಿಗೆ ಹಾಗೂ ಶಾಲಾ ಶಿಕ್ಷಕರಿಗೆ ಅಭಿನಂದನಾ ಕಾರ್ಯಕ್ರಮ ಇಂದು(ಅ.10) ನಡೆಯಿತು.
ಕಾರ್ಯಕ್ರಮವನ್ನು ಅಲ್ಪಸಂಖ್ಯಾತರ ಕಲ್ಯಾಣ ಮತ್ತು ವಕ್ಫ್ ಸಚಿವ ತನ್ವೀರ್ ಸೇಠ್ ಉದ್ಘಾಟಿಸಿದರು. ಅಧ್ಯಕ್ಷತೆಯನ್ನು ಶಾಸಕ ಕೆ. ವಸಂತ ಬಂಗೇರ ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ತಾ.ಪಂ ಅಧ್ಯಕ್ಷೆ ಶ್ರೀಮತಿ ದಿವ್ಯ ಜ್ಯೋತಿ, ಜಿ.ಪಂ ಸದಸ್ಯ ಧರಣೇಂದ್ರ ಕುಮಾರ್, ಡಯಲ್ ಪ್ರಿನ್ಸಿಪಾಲ್ ಸಿಪ್ರಿಯಾನ್ ಮೊಂತೆರೊ, ಜಿ.ಪಂ ಸದಸ್ಯೆ ಶ್ರೀಮತಿ ಮಮತಾ ಎಂ.ಶೆಟ್ಟಿ, ಶಿಕ್ಷಣ ಮತ್ತು ಆರೋಗ್ಯ ಸ್ಥಾಯಿ ಸಮಿತಿ ಅಧ್ಯಕ್ಷ ಕೆ.ಕೆ ಶಾಹುಲ್ ಹಮೀದ್, ಕುವೆಟ್ಟು ಗ್ರಾ.ಪಂ ಅಧ್ಯಕ್ಷ ಅಶೋಕ ಕೋಟ್ಯಾನ್, ತಾ.ಪಂ ಸದಸ್ಯ ಗೋಪಿನಾಥ್ ನಾಯಕ್, ಸಾರ್ವಜನಿಕ ಶಿಕ್ಷಣ ಇಲಾಖೆಯ ಉಪನಿರ್ದೇಶಕ ವೈ. ಶಿವರಾಮಯ್ಯ, ಬೆಳ್ತಂಗಡಿ ಶಿಕ್ಷಣಾಧಿಕಾರಿ ಎ.ಎನ್ ಗುರುಪ್ರಸಾದ್ ಭಾಗವಹಿಸಿದ್ದರು.

dharma samsadಧರ್ಮಸ್ಥಳ : ಉಡುಪಿಯಲ್ಲಿ ನ. 24 ರಿಂದ 26 ರ ವರೆಗೆ ನಡೆಯಲಿರುವ ಧರ್ಮ ಸಂಸತ್‌ನ ಆಮಂತ್ರಣ ಪತ್ರವನ್ನು ಧರ್ಮಾಧಿಕಾರಿ ಡಿ. ವೀರೇಂದ್ರ ಹೆಗ್ಗಡೆಯವರು ಅ.9ರಂದು ಧರ್ಮಸ್ಥಳದಲ್ಲಿ ಬಿಡುಗಡೆಗೊಳಿಸಿದರು.
ಈ ಸಂದರ್ಭ ಡಾ. ಕೃಷ್ಣಪ್ರಸಾದ್, ಶರಣ್ ಪಂಪ್‌ವೆಲ್, ವಿಲಾಸ್ ನಾಯಕ್, ಜಗದೀಶ ಶೇಣವ, ಸುನಿಲ್ ಕೆ.ಆರ್., ಉಜಿರೆಯ ಡಾ. ಎಂ.ಎಂ. ದಯಾಕರ್, ಶರತ್‌ಕೃಷ್ಣ ಪಡ್ವೆಟ್ನಾಯ, ಡಾ. ಬಿ. ಯಶೋವರ್ಮ, ಹರೀಶ್ ಪೂಂಜ ಮತ್ತು ಭಾಸ್ಕರ ಧರ್ಮಸ್ಥಳ ಉಪಸ್ಥಿತರಿದ್ದರು. ಕೃಷ್ಣಮೂರ್ತಿ ಸ್ವಾಗತಿಸಿ, ವಿಲಾಸ್ ನಾಯಕ್ ಧನ್ಯವಾದವಿತ್ತರು.

ravishankar thantri 1

ravishankar thantriಬೆಳ್ತಂಗಡಿ : 2010 ರಲ್ಲಿ ಬೆಳ್ತಂಗಡಿ ನಿವಾಸಿಯೋರ್ವರನ್ನು ಮದುವೆಯಾಗಿ ಬಳಿಕ ನಗದು ಹಾಗೂ ಒಡವೆಯೊಂದಿಗೆ ಪರಾರಿಯಾಗಿ ವಂಚಿಸಿದ ಮೂಡಿಗೆರೆ ಸಾಗರ ವಿಳಾಸ ಹೊಂದಿದ್ದ ರವಿಶಂಕರ್ ತಂತ್ರಿ ಬಿ.ಎಸ್(ರವೀಂದ್ರ ಶೆಟ್ಟಿ, ರವೀಂದ್ರ ಮೂರ್ತಿ) ಈತನನ್ನು ಬೆಳ್ತಂಗಡಿ ಪೊಲೀಸರು ಶಂಕರನಾರಾಯಣ ಪೊಲೀಸ್ ಠಾಣಾ ಸರಹದ್ದಿನ ಜೆಡ್ಡು ಶಾಲಾ ಬಳಿಯ ಮನೆಯಿಂದ ದಸ್ತಗಿರಿ ಮಾಡಿ ಬೆಳ್ತಂಗಡಿ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದಾರೆ.

ಇಂದಿನ ಕಾರ್ಯಕ್ರಮ

ಶಿಕ್ಷಣ ಮಾರ್ಗದರ್ಶಿ

ಹಿಂದಿನ ಸುದ್ದಿಗಳು

October 2017
M T W T F S S
« Sep    
 1
2345678
9101112131415
16171819202122
23242526272829
3031  

ನಮ್ಮ ಬಗ್ಗೆ

ಮೊದಲಿಗೆ ಕೇವಲ ಒಂದು ಹಾಳೆಯಲ್ಲಿ ಪ್ರಕಟವಾಗುತ್ತಿದ್ದ ಬೆಳ್ತಂಗಡಿ ತಾಲೂಕಿನ “ಸುದ್ದಿ ಬಿಡುಗಡೆ “ಪತ್ರಿಕೆ ಇಂದು ಪ್ರತಿದಿನ  22
.. ಮುಂದೆ ಓದಿ

ಸಲಹೆ- ಸೂಚನೆ

ನಿಮ್ಮ ಸಲಹೆ ಸೂಚನೆಗಳಿಗೆ ಹಾರ್ದಿಕ ಸ್ವಾಗತ

ಇಲ್ಲಿ ಕ್ಲಿಕ್ಕಿಸಿ

Copyright © 2017 Suddinews.com . All Rights Reserved.
^ Back to Top