Wed 26 Apr 2017, 8:31AM

ಹೆಚ್ಚಿನ ಸುದ್ದಿಗಳು

ಬೆಳ್ತಂಗಡಿ : ಗುರುವಾಯನಕೆರೆ ಉಪಕೇಂದ್ರದಲ್ಲಿ ತುರ್ತು ಕಾಮಗಾರಿಯನ್ನು ಕೈಗೊಳ್ಳಬೇಕಾದ ಹಿನ್ನಲೆಯಲ್ಲಿ ಎ. 26 ಮತ್ತು 28ರಂದು ಗುರುವಾಯನಕೆರೆ ಉಪಕೇಂದ್ರದಿಂದ ಹೊರಹೊಮ್ಮುವ ವೇಣೂರು ಮತ್ತು ಆರಂಬೋಡಿ ಫೀಡರ್‌ಗಳಲ್ಲಿ ಬೆಳಿಗ್ಗೆ 9.00ರಿಂದ ಸಂಜೆ 5.00ರ ತನಕ ವಿದ್ಯುತ್ ನಿಲುಗಡೆಯಾಗಲಿದೆ ಎಂದು ಮೆಸ್ಕಾಂ ಪ್ರಕಟಣೆಯಲ್ಲಿ ತಿಳಿಸಿದೆ.

beo1

beoಬೆಳ್ತಂಗಡಿ: ಶಿಕ್ಷಕರ ವಿವಿಧ ಬೇಡಿಕೆಗಳನ್ನು ಮುಂದಿಟ್ಟು ಅಖಿಲ ಭಾರತ ಪ್ರಾಥಮಿಕ ಶಿಕ್ಷಕರ ಫೆಡರೇಶನ್ ವತಿಯಿಂದ ರಾಷ್ಟ್ರಾಧ್ಯಂತ ಹೋರಾಟಗಳನ್ನು ನಡೆಸಲಾಗುತ್ತಿದ್ದು ಅದರ ಎರಡನೇ ಹಂತದ ಕಾರ್ಯಕ್ರಮವಾಗಿ ಎ. 25 ರಂದು ದೇಶಾಧ್ಯಂತ ಎಲ್ಲಾ ಶಿಕ್ಷಣ ಇಲಾಖೇ ಕಚೇರಿ ಮುಂದೆ ಶಿಕ್ಷಕರ ಏಕದಿನ ಮೌನ ಧರಣಿ ನಡೆಯಲಿದ್ದು ಈ ಹಿನ್ನೆಲೆಯಲ್ಲಿ ಬೆಳ್ತಂಗಡಿ ಬಿಇಒ ಕಚೇರಿ ಎದುರು ಕೂಡ ನಡೆಯಿತು.
7ನೇ ವೇತನ ಆಯೋಗದ ಶಿಫಾರಸ್ಸುಗಳನ್ನು ಎಲ್ಲಾ ರಾಜ್ಯಗಳಲ್ಲಿ ಜಾರಿಗೆ ತರಬೇಕು, ನೂತನ ಪಿಂಚಣಿ ಯೋಜನೆ ರದ್ದುಗೊಳಿಸಿ ಹಳೇ ಪಿಂಚಣಿ ಯೋಜನೆ ಜಾರಿಗೆ ತರಬೇಕು, ಪ್ರಾಥಮಿಕ ಶಿಕ್ಷಣ ಮಂಡಳಿ ರಚಿಸಬೇಕು, ರಾಜ್ಯದ ಎಲ್ಲಾ ಶಾಲೆಗಳಲ್ಲಿ ಪೂರ್ವ ಪ್ರಾಥಮಿಕ ಶಿಕ್ಷಣ ಎಲ್‌ಕೆಜಿ, ಯುಕೆಜಿ ಆರಂಭಿಸಬೇಕು, ಶಾಲೆಗೊಬ್ಬ ಮುಖ್ಯೋಪಾಧ್ಯಾಯ ನೇಮಕ, ಶಿಕ್ಷಕ ಶಿಕ್ಷಕಿ ವಿದ್ಯಾರ್ಥಿ ಅನುಪಾತ ಮಾಡಬೇಕು ಎಂಬಿತ್ಯಾಧಿ ಪ್ರಮುಖ ಬೇಡಿಕೆಗಳು ಈ ಬಾರಿಯ ಹೋರಾಟದಲ್ಲಿತ್ತು.

beet rokars copyಬೆಳ್ತಂಗಡಿ: ಬೀಟ್ ರಾಕರ‍್ಸ್ ಡ್ಯಾನ್ಸ್ ಅಕಾಡೆಮಿ ಬೆಳ್ತಂಗಡಿ ಇದರ 6ನೇ ವರ್ಷದ ವಾರ್ಷಿಕೋತ್ಸವದ ಪ್ರಯುಕ್ತ ಎ. 22 ರಂದು ಬೆಳ್ತಂಗಡಿ ಮಾರಿಗುಡಿ ಮೈದಾನದಲ್ಲಿ ಬೆಳಕು ಶಬ್ಧತರಂಗದ ಅದ್ಭುತ ನೃತ್ಯ ಸಂಗೀತ ಸೆಲೆಬ್ರೆಟಿ ನೈಟ್ ವಿಶೇಷ ಕಾರ್ಯಕ್ರಮ, ರಾಜ್ಯ ಮಟ್ಟದ ಡ್ಯಾನ್ಸ್ ಸ್ಪರ್ಧೆಯೊಂದಿಗೆ ನಡೆಯಿತು.
ಅಧ್ಯಕ್ಷತೆಯನ್ನು ಕರಾವಳಿ ಕರ್ನಾಟಕ ಡ್ಯಾನ್ಸ್ ಅಕಾಡಮಿ ಯೂನಿಯನ್ ಅಧ್ಯಕ್ಷ ರಾಜೇಶ್ ಕಣ್ಣೂರು ವಹಿಸಿದ್ದರು.
ಮುಖ್ಯ ಅತಿಥಿಗಳಾಗಿ ಪಟ್ಟಣ ಪಂಚಾಯತ್ ಅಧ್ಯಕ್ಷ ಮುಗುಳಿ ನಾರಾಯಣ ರಾವ್, ಅನುಗ್ರಹ ಟ್ರೈನಿಂಗ್ ಕಾಲೇಜಿನ ಪ್ರಾಂಶುಪಾಲ ತಲ್‌ಹತ್ ಎಂ. ಜಿ, ಜೇಸಿಐ ಬೆಳ್ತಂಗಡಿ ಮಂಜುಶ್ರೀ ಅಧ್ಯಕ್ಷ ಸಂತೋಷ್ ಪಿ ಕೋಟ್ಯಾನ್, ಹೈಕೋರ್ಟ್ ನ್ಯಾಯವಾದಿ ಹರೀಶ್ ಪೂಂಜ, ಸುವರ್ಣ ಸಾಂಸ್ಕೃತಿಕ ಪ್ರತಿಷ್ಠಾನದ ಅಧ್ಯಕ್ಷ ಸಂಪತ್ ಬಿ ಸುವರ್ಣ, ತುಳು ಚಲನಚಿತ್ರ ನಿರ್ಮಾಪಕ ಹರೀಶ್ ರಾವ್, ಸಕಲೇಶ್‌ಪುರದ ರಿದಂ ಕೀಪಝ್ ಡ್ಯಾನ್ಸ್ ಅಕಾಡಮಿ ಅಧ್ಯಕ್ಷ ಕೃಷ್ಣೇ ಗೌಡ, ರಾಜ್ಯ ಸರಕಾರಿ ನೌಕರರ ಸಂಘದ ಸದಸ್ಯ ಕೆ ಧರಣೇಂದ್ರ ಕುಮಾರ್ ಜೈನ್, ಹೋಲಿ ರಿಡೀಮರ್ ಆಂಗ್ಲ ಮಾಧ್ಯಮ ಶಾಲೆ ಬೆಳ್ತಂಗಡಿಯ ಮುಖ್ಯೋಪಾಧ್ಯಾಯ ರೆ. ಫಾ ಅನಿಲ್ ಪ್ರಕಾಶ್ ಡಿಸಿಲ್ವ ಇವರುಗಳು ಶುಭ ಕೋರಿದರು.

beet rokars karate copyಬೆಳ್ತಂಗಡಿ: ಬೀಟ್ ರಾಕರ‍್ಸ್ ಡ್ಯಾನ್ಸ್ ಅಕಾಡಮಿ ಮತ್ತು ಶ್ರೀ ಸಾಯಿ ಕಾಸ್ಟ್ಯೂಮ್ಸ್ ವರ್ಲ್ಡ್ ಎಂಬ ಹೆಸರಿನಲ್ಲಿ ಬೆಳ್ತಂಗಡಿಯಲ್ಲಿ ಕಳೆದ ೬ ವರ್ಷಗಳಿಂದ ಕಾರ್ಯಾಚರಿಸುತ್ತಿರುವ ಸಂಸ್ಥೆಯ ವತಿಯಿಂದ ಮುಂದಕ್ಕೆ ಅನುಭವಿ ಕರಾಟೆ ಶಿಕ್ಷಕರಿಂದ ಕರಾಟೆ ತರಬೇತಿ ನೀಡಲು ಮತ್ತು ಕಲಾಸಕ್ತ ವಿದ್ಯಾರ್ಥಿಗಳಿಗೆ ನಾಟಕ ಮತ್ತು ರಂಗ ಅಭಿನಯ ತರಬೇತಿ ನೀಡುವ ವಿಭಾಗವು ಎ. 22 ರಂದು ಉದ್ಘಾಟನೆಗೊಂಡಿತು.
ಜೇಸಿಐ ಬೆಳ್ತಂಗಡಿ ಮಂಜುಶ್ರೀ ಇದರ ಪೂರ್ವಾಧ್ಯಕ್ಷ, ಸಂಘಟಕ ಹಾಗೂ ಉದ್ಯಮಿ ಪ್ರಮೋದ್ ಆರ್ ನಾಯಕ್ ಉದ್ಘಾಟನೆ ನೆರವೇರಿಸಿದರು. ಈ ಸಂದರ್ಭ ಜೇಸಿಐ ವಲಯಾಧ್ಯಕ್ಷ ಚಿದಾನಂದ ಇಡ್ಯ, ಸುದ್ದಿ ಬಿಡುಗಡೆ ವ್ಯವಸ್ಥಾಪಕ ಮಂಜುನಾಥ ರೈ, ಬೀಟ್ ರಾಕರ‍್ಸ್ ಡ್ಯಾನ್ಸ್ ಅಕಾಡಮಿ ಮುಖ್ಯಸ್ಥ ಜಿತೇಶ್ ಕುಮಾರ್, ಕರಾಟೆ ತರಬೇತುದಾರರು ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.

arasinamakki7

arasinamakki4 copy

arasinamakki5

arasinamakki6

arasinamakki

arasinamakki1

arasinamakki2

arasinamakki3ಅರಸಿನಮಕ್ಕಿ ಶ್ರೀನಿವಾಸ ಕಲ್ಯಾಣೋತ್ಸವವು ವಿಜೃಂಭಣೆಯಿಂದ ಎ. 22ರಂದು ನಡೆಯಿತು.

barengayaನಿಡ್ಲೆ : ನಿಸರ್ಗ ಯುವಜನೇತರ ಮಂಡಲ(ರಿ) ಬರೆಂಗಾಯ ಹಾಗೂ ದ.ಕ ಜಿಲ್ಲಾ ಅಮೆಚ್ಯೂರ್ ಜಿಲ್ಲಾ ಕಬಡ್ಡಿ ಅಸೋಸಿಯೇಷನ್ (ರಿ) ಇದರ ಸಹಯೋಗದೊಂದಿಗೆ ದ.ಕ, ಉಡುಪಿ, ಕಾಸರಗೊಡು ಜಿಲ್ಲೆಯ ೭೦ಕೆ.ಜಿ ವಿಭಾಗದ ಪುರುಷರ ಅಂತರ್ ಜಿಲ್ಲಾ ಮಟ್ಟದ ಹೊನಲು ಬೆಳಕಿನ ಕಬಡ್ಡಿ ಪಂದ್ಯಾಟವು ಹಿ.ಪ್ರಾ ಶಾಲೆ ಬರೆಂಗಾಯದಲ್ಲಿ ಎ. 22ರಂದು ಜರಗಿತು.
ನಿಡ್ಲೆ ಗ್ರಾ.ಪಂ ಅಧ್ಯಕ್ಷರಾದ ಶ್ರೀಮತಿ ಶುಭ ದೇವಧರ್ ಅಧ್ಯಕ್ಷತೆ ವಹಿಸಿದ್ದರು. ಬೆಂಗಳೂರು ಹೈಕೋರ್ಟ್ ನ್ಯಾಯಾವಾದಿ ಹರೀಶ್ ಪೂಂಜ ಕಾರ್ಯಕ್ರಮ ಉದ್ಘಾಟಿಸಿದರು. ಮುಖ್ಯ ಅತಿಥಿಗಳಾಗಿ ಬೆಳ್ತಂಗಡಿ ಸಹಾಯಕ ಯುವ ಸಬಲೀಕರಣ ಮತ್ತು ಕ್ರೀಡಾಧಿಕಾರಿ ಪ್ರಭಾಕರ ನಾರಾವಿ, ಕಳೆಂಜ ಗ್ರಾ.ಪಂ ಸದಸ್ಯೆ ಶ್ರೀಮತಿ ಸುಶೀಲ ವಸಂತ ಗೌಡ, ನಿಡ್ಲೆ ಗ್ರಾ.ಪಂ ಉಪಾಧ್ಯಕ್ಷ ರುಕ್ಮಯ ಪೂಜಾರಿ ಪೊರ್ಕಳ, ನಿಡ್ಲೆ ಗ್ರಾ.ಪಂ ಸದಸ್ಯರಾದ ಹರೀಶ್ ಪೊಂರ್ದಿಲ, ಶ್ರೀಮತಿ ಲಲಿತಾ, ಬರೆಂಗಾಯ ನಿಸರ್ಗ ಯುವ ಜನೇತರ ಮಂಡಲ ಅಧ್ಯಕ್ಷರಾದ ಪುನೀತ್ ಪೊಂರ್ದಿಲ, ಬರೆಂಗಾಯ ಶಾಲಾ ಎಸ್.ಡಿ.ಎಂ.ಸಿ ಅಧ್ಯಕ್ಷ ಕೃಷ್ಣ ಕುಮಾರ್ ಕಾಟ್ಲ, ಬರೆಂಗಾಯ ಜ್ಯೋತಿ ಹಳೆ ವಿದ್ಯಾರ್ಥಿ ಸಂಘದ ಅಧ್ಯಕ್ಷ ಹೇಮಂತ್ ಗೌಡ ಕಜೆ, ಬರೆಂಗಾಯ ಶ್ರೀಕೃಷ್ಣ ಜನ್ಮಾಷ್ಟಮಿ ಸಮಿತಿ ಅಧ್ಯಕ್ಷ ಪ್ರವೀಣ್ ಹೆಬ್ಬರ್ ಪೊಂರ್ದಿಲ ಆಗಮಿಸಿದ್ದರು. ವೇದಿಕೆಯಲ್ಲಿ ತಾ.ಪಂ ಮಾಜಿ ಉಪಾಧ್ಯಕ್ಷ ವಿಷ್ಣು ಮರಾಠೆ, ಸನ್ಮಾನಗೊಳ್ಳಲಿದ್ದ ಬರೆಂಗಾಯ ಹಿ.ಪ್ರಾ ಶಾಲಾ ಮುಖ್ಯೋಪಾಧ್ಯಾಯ ಗೋಪಾಲ, ಮೂಡಬಿದ್ರೆ ಆಳ್ವಾಸ್ ಶಿಕ್ಷಣ ಸಂಸ್ಥೆಯ ಕನ್ನಡ ಉಪನ್ಯಾಸಕರಾದ ಚಂದ್ರಶೇಖರ್ ಗೌಡ ಕಜೆ ಉಪಸ್ಥಿತರಿದ್ದರು.

mundajeಮುಂಡಾಜೆ : ಯಂಗ್ ಚಾಲೆಂಜರ‍್ಸ್ ಕ್ರೀಡಾ ಸಂಘ ಮುಂಡಾಜೆ ಇದರ ವತಿಯಿಂದ ಆರ್.ಎನ್. ಭಿಡೆ ಸ್ಮರಣಾರ್ಥ ಇಂದು(ಎ.22) ಓವರ್ ಆರ್ಮ್ ಕ್ರಿಕೆಟ್ ಪಂದ್ಯಾಟದ ಉದ್ಘಾಟನಾ ಸಮಾರಂಭವು ಭಿಡೆ ನಾರಾಯಣ ಭಟ್ ಕ್ರೀಡಾಂಗಣ ಜೂನಿಯರ್ ಕಾಲೇಜು ಮುಂಡಾಜೆಯಲ್ಲಿ ನಡೆಯಿತು.
ಕಾರ್ಯಕ್ರಮದ ಉದ್ಘಾಟನೆಯನ್ನು ನ್ಯಾಯವಾದಿ ಶೈಲೇಶ್ ಠೋಸರ್ ನೆರವೇರಿಸಿದರು. ಅಧ್ಯಕ್ಷತೆಯನ್ನು ಯಂಗ್ ಚಾಲೆಂಜರ‍್ಸ್ ಕ್ರೀಡಾ ಸಂಘದ ಅಧ್ಯಕ್ಷ ಆಶ್ರಫ್ ಆಲಿಕುಂಞ ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ಮುಂಡಾಜೆ ಗ್ರಾ.ಪಂ ಸದಸ್ಯರುಗಳಾದ ನಾರಾಯಣ ಗೌಡ ದೇವಸ್ಯ, ಚೆನ್ನಕೇಶವ ನಾಯ್ಕ, ಸುರೇಶ್ ಹೆಗ್ಡೆ, ಗಣೇಶ್ ಬಂಗೇರ, ಮುಂಡಾಜೆ ಶತಾಬ್ದಿ ವಿದ್ಯಾಲಯ ಸಮಿತಿ ಜೊತೆ ಕಾರ್ಯದರ್ಶಿ ಅರವಿಂದ ಹೆಬ್ಬಾರ್ ಭಾಗವಹಿಸಿದ್ದರು. ಯಂಗ್ ಚಾಲೆಂಜರ‍್ಸ್ ಕ್ರೀಡಾ ಸಂಘದ ಸಂಚಾಲಕ ನಾಮದೇವ ರಾವ್, ಶಶಿಧರ ಠೋಸರ್ ಉಪಸ್ಥಿತರಿದ್ದರು.

charmadi.jpg1

charmadiಚಾರ್ಮಾಡಿ : ಗುರುವಾರ ಮಧ್ಯರಾತ್ರಿ ಮಂಗಳೂರಿನಿಂದ ಭದ್ರಾವತಿ ಕಡೆ ತೆರಳುತ್ತಿದ್ದ ಡಿಸೇಲ್ ಟ್ಯಾಂಕರ್ ಚಾರ್ಮಾಡಿ ಘಾಟಿಯಲ್ಲಿ ಪ್ರಪಾತಕ್ಕೆ ಬಿದ್ದು,  ಜಖಂಗೊಂಡಿದೆ. ಚಾಲಕನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.

gerukatte

gerukatte1ಗೇರುಕಟ್ಟೆ : ಕೋಳಿ ಸಾಗಾಟ ಮಾಡುತ್ತಿದ್ದ ಪಿಕಪ್ ವಾಹನ ಮಗುಚಿ ಬಿದ್ದ ಘಟನೆ ಗೇರುಕಟ್ಟೆಯ ರೇಶ್ಮೆ ಕ್ರಾಸ್ ಬಳಿ ನಡೆದಿದೆ.

Bisu Jathre Photo copy

Bisu Jathre Photo copy1

Bisu Jathre Photo copy2ಉಜಿರೆ: ವಿಷು ಜಾತ್ರೆ ಸಂದರ್ಭ ಧರ್ಮಸ್ಥಳದಲ್ಲಿ ಗುರುವಾರ ರಾತ್ರಿ ಬ್ರಹ್ಮರಥೋತ್ಸವ ನಡೆಯಿತು.
ರಾಜ್ಯ ವಿವಿಧ ಭಾಗಗಳಿಂದ ಬಂದ ಸುಮಾರು ಇನ್ನೂರು ಮಂದಿ ಕಲಾವಿದರು ಶಂಖ, ತಾಳ, ಬ್ಯಾಂಡ್, ಚೆಂಡೆ ವಾದನದ ಮೂಲಕ ಕಲಾ ಸೇವೆ ಮಾಡಿದರು. ಸಹಸ್ರಾರು ಮಂದಿ ಭಕ್ತಾದಿಗಳು ರಥೋತ್ಸವ ವೀಕ್ಷಿಸಿ ಧನ್ಯತೆ ಪಡೆದರು.

¸swacchthe

sw

WhatsApp Image 2017-04-21 at 11.18ಗುರುವಾಯನಕೆರೆಯಲ್ಲಿ ಎಸ್.ಡಿ.ಎಂ ವಿದ್ಯಾರ್ಥಿಗಳಿಂದ ಹಾಗೂ ಊರ ಸಂಘ ಸಂಸ್ಥೆಗಳಿಂದ ಸ್ವಚ್ಛತಾ ಕಾರ್ಯಕ್ರಮವು ಇಂದು ನಡೆಯಿತು.

adike mara yanthra copyಉಜಿರೆ: ಇಲ್ಲಿನ ಎಸ್‌ಡಿಎಂ ಪಾಲಿಟೆಕ್ನಿಕ್ ಕಾಲೇಜಿನ ವಿದ್ಯಾರ್ಥಿಗಳು ಕೃಷಿ ಕೆಲಸಕ್ಕೆ ಪೂರಕವಾಗಿರುವ ಮತ್ತು ಅತ್ಯಂತ ಕಡಿಮೆ ದರದಲ್ಲಿ ಬಳಕೆ ಮಾಡಬಹುದಾದ ರೀತಿಯ ಕೆಲವೊಂದು ಯಂತ್ರೋಪಕರಣಗಳನ್ನು ತಮ್ಮದೇ ಕಲ್ಪನೆಯಲ್ಲಿ ಆವಿಷ್ಕರಿಸಿದ್ದು ಉತ್ತಮ ಮಾರುಕಟ್ಟೆ ಕೇಂದ್ರೀಕರಿಸುವ ಎಲ್ಲಾ ಅರ್ಹತೆಗಳನ್ನು ಪಡೆದುಕೊಂಡಿದೆ.
ವಿದ್ಯಾರ್ಥಿಗಳು ತಯಾರುಗೊಳಿಸಿದ ಕೆಲವೊಂದು ಆವಿಷ್ಕಾರಗಳಲ್ಲಿ ಅಡಿಕೆ ಮರಕ್ಕೆ ಹತ್ತುವ ಮತ್ತು ಔಷಧಿ ಸಿಂಪಡಿಸುವ ಯಂತ್ರವೂ ಒಂದು.
ಈ ಪ್ರಾಜೆಕ್ಟ್‌ಗೆ ಕೇವಲ 10 ಸಾವಿರ ರೂ. ಗಳು ಮಾತ್ರ ಖರ್ಚು ತಗುಲಲಿದೆ.
ಆವಿಷ್ಕಾರ ತಂಡದ ಸದಸ್ಯ ವಿದ್ಯಾರ್ಥಿಗಳು ಯಾರ‍್ಯಾರು?
ಭರತ್ ಎಚ್, ಅಕಾಶ್ ಕೆ, ಅಶ್ವಿನಿ, ದರ್ಶನ್ ಕುಮಾರ್, ದಿವ್ಯಾ ಎಸ್, ಮತ್ತು ಉತ್ತಮ್ ಎನ್ ಇವರ ತಂಡ ಈ ಆವಿಷ್ಕಾರ ನಡೆಸಿ ಯಶಸ್ಸು ಸಾಧಿಸಿದೆ. ಇವರಿಗೆ ಅವನೀಶ್ ಅವರು ಮಾರ್ಗದರ್ಶನ ನೀಡಿದ್ದಾರೆ. ಈ ಯಂತ್ರವು ಸುಲಭವಾಗಿ ಅಡಿಕೆ ಮರ ಹತ್ತಲು ಮತ್ತು ಅಡಿಕೆ ಬೆಳೆಗೆ ಕೀಟ ನಾಶಕ ಸಿಂಪಡಿಸಲು ಸಹಾಯಕವಾಗಿ ಕಾರ್ಯನಿರ್ವಹಿಸುತ್ತದೆ.
ಉಪಯೋಗಗಳು:
ಇಂದಿನ ದಿನಗಳಲ್ಲಿ ಅಡಿಕೆ ಮರಕ್ಕೆ ಮದ್ದನ್ನು ಸಿಂಪಡಿಸುವುದು ಕಷ್ಟವಾಗಿದೆ. ಅದನ್ನು ಅರಿತು ಈ ಯಂತ್ರ ಸಿದ್ದಪಡಿಸಲಾಗಿದೆ. 12 ವೋಲ್ಟ್ ವೈಪರ್ ಮೋಟಾರು ಬಳಸಿಕೊಂಡು ಮೇಲಕ್ಕೆ ಹತ್ತುವ ಅತ್ಯಂತ ಸರಳ ಮಾದರಿಯಿಂದ ರೂಪಿತವಾಗಿದೆ. ಕೇಲವ ಎರಡೇ ನಿಮಿಷದಲ್ಲಿ ಅಡಿಕೆ ಮರ ಏರುವ ಸಾಮರ್ಥ್ಯ ಹೊಂದಿರುವ ಈ ಯಂತ್ರ ಡಿ.ಸಿ ಮೋಟರನ್ನು ಬಳಸಿ ಲಂಬವಾಗಿ ಮತ್ತು ಅಡ್ಡವಾಗಿ, ಒಂದು ಅಡಿಕೆ ಮರ ಕೇಂದ್ರೀಕರಿಸಿ ಪಕ್ಕದ 7-8 ಮರಗಳಿಗೆ ಕೀಟನಾಶಕ ಸಿಂಪಡಿಸುವ ಸಾಮರ್ಥ್ಯ ಹೊಂದಿದೆ.
ಸೆಲ್ಫ್ ಲುಕ್ಕಿಂಗ್ ನಿಯಮದ ಪ್ರಕಾರ ಕಾರ್ಯನಿರ್ವಹಿಸುವ ಈ ಯಂತ್ರವು ಪರಿಸರ ಸ್ನೇಹಿಯಾಗಿದ್ದು 12 ವೋಲ್ಟೇಜ್ ಬ್ಯಾಟರಿ ಮೂಲಕವೂ ಕಾರ್ಯನಿರ್ವಹಿಸುವ ಕ್ಷಮತೆ ಹೊಂದಿದೆ. ಕೇವಲ ಎರಡೇ ಸೆಕುಂಡುಗಳಲ್ಲಿ ಮರಕ್ಕೆ ಯಂತ್ರವನ್ನು ಅಳವಡಿಸಬಹುದಾಗಿದೆ. ಯಂತ್ರಕ್ಕೆ ನೆಲದಿಂದ ಕೀಟ ನಾಶಕವನ್ನು ಪವರ್ ಸ್ಪ್ರೇಯರ್ ಅಥವಾ ಗಟರ್ ಪಂಪ್‌ನ ಮೂಲಕ ಪೈಪ್‌ಮೂಲಕ ಕಳುಹಿಸಿಕೊಡಬಹುದಾಗಿದೆ. ಇದರ ನಿಯಂತ್ರಣವನ್ನು ಕೇವಲ ಒಬ್ಬನೇ ವ್ಯಕ್ತಿ ಮಾಡಬಹುದಾಗಿದ್ದು, ಅಡಿಕೆ ಕೃಷಿ ಕ್ಷೇತ್ರದಲ್ಲಿ ಬಹಳ ಬೇಡಿಕೆಯ ಕೂಲಿ ಕಾರ್ಮಿಕರ ಕೊರತೆಯ ಜಾಗವನ್ನು ಈ ಯಂತ್ರ ತುಂಬುವುದರಲ್ಲಿ ಸಂದೇಹವಿಲ್ಲ.
ಇದೇ ಯಂತ್ರದ ಮೂಲಕ ಮುಂದಕ್ಕೆ ಗೊನೆ ಕೀಳುವುದು ಮತ್ತು ಕಂಪ್ಯೂಟರೀಕೃತವಾಗಿ ಅಭಿವೃದ್ಧಿ ಪಡಿಸುವ ಉದ್ಧೇಶವಿದೆ ಎಂದು ಪ್ರಾಧ್ಯಾಪಕರಾದ ಅವನೀಶ್ ಅವರು ತಿಳಿಸುತ್ತಾರೆ.

thrisha copyಕನ್ಯಾಡಿ 1 ಇಲ್ಲಿಯ ಕಂಬಳದಡ್ಡ ಮನೆಯ ಸುರೇಶ್ ಗೌಡ ಮತ್ತು ಸತ್ಯ ದಂಪತಿಯ ಪುತ್ರಿ ತ್ರಿಶಾಳ 3ನೇ ವರ್ಷದ ಹುಟ್ಟುಹಬ್ಬವನ್ನು ಎ. 17ರಂದು ಆಚರಿಸಲಾಯಿತು.

bhavish copyಚಿಬಿದ್ರೆ ಗ್ರಾಮದ ಪೆರಿಯಡ್ಕ ಬರಮೇಲು ಮನೆ ಲಕ್ಷ್ಮಣ ಗೌಡ ಮತ್ತು ವೇದಾವತಿ ದಂಪತಿ ಪುತ್ರ ಭವಿಷ್‌ನ 5ನೇ ವರ್ಷದ ಹುಟ್ಟುಹಬ್ಬವನ್ನು ಎ. 12ರಂದು ಆಚರಿಸಲಾಯಿತು.

samyuk copyಲಾಯಿಲ ಗ್ರಾಮದ ಸುರುಳಿ ಸ್ಫೂರ್ತಿ ನಿಲಯ ಗಣೇಶ್ ಶೆಟ್ಟಿ ಮತ್ತು ವಿಶಾಲಾಕ್ಷಿ ದಂಪತಿ ಪುತ್ರ ಸಮ್ಯಕ್ ಜಿ. ಶೆಟ್ಟಿ ಯ ಮೊದಲನೇ ವರ್ಷದ ಹುಟ್ಟುಹಬ್ಬ ಎ. 11ರಂದು ಜರಗಿತು.

baby copyಬಜಿರೆ ಗ್ರಾಮದ ಹೊಸಪಟ್ಣ ಹೊಸವಕ್ಲು ಮಜಲು  ದಯಾನಂದ ಪೂಜಾರಿ ಮತ್ತು ಶ್ರೀಮತಿ ವನಿತಾ ದಂಪತಿಯ ಪುತ್ರ ಧನಿಷ್  ಈತನ ಪ್ರಥಮ ವರ್ಷದ ಹುಟ್ಟುಹಬ್ಬವು ಎ.16ರಂದು ಜರುಗಿತು.

umesh-shailaja copyಬೆಳಾಲು ಗ್ರಾಮದ ಪೊಯ್ಯೋದಡ್ಡ ಮನೆ ಬಾಬು ಗೌಡರ ಪುತ್ರ ಉಮೇಶ ಪಿ. ಗೌಡ ರವರ ವಿವಾಹವು ಹುಣ್ಸೆಕಟ್ಟೆ ಶ್ರೀಮತಿ ಕಮಲಾ ಮತ್ತು  ಕೆ. ಎನ್ ಮಂಜುನಾಥ ಗೌಡರ ಪುತ್ರಿ ಶೈಲಜಾ ರೊಂದಿಗೆ ಎ. 10ರಂದು ಬೆಳ್ತಂಗಡಿ ಸಿ.ವಿ.ಸಿ  ಹಾಲ್‌ನಲ್ಲಿ ಜರುಗಿತು.

add1

ಬೆಳ್ತಂಗಡಿ : ಗುರುವಾಯನಕೆರೆ ಉಪಕೇಂದ್ರದಲ್ಲಿ ತುರ್ತು ಕಾಮಗಾರಿಯನ್ನು ಕೈಗೊಳ್ಳಬೇಕಾದ ಹಿನ್ನಲೆಯಲ್ಲಿ ಎ. 22ರಂದು ಗುರುವಾಯನಕೆರೆ ಉಪಕೇಂದ್ರದಿಂದ ಹೊರಹೊಮ್ಮುವ ವೇಣೂರು ಮತ್ತು ಆರಂಬೋಡಿ ಫೀಡರ್‌ಗಳಲ್ಲಿ ಬೆಳಿಗ್ಗೆ 9.00ರಿಂದ ಸಂಜೆ 5.00ರ ತನಕ ವಿದ್ಯುತ್ ನಿಲುಗಡೆಯಾಗಲಿದೆ ಎಂದು ಮೆಸ್ಕಾಂ ಪ್ರಕಟಣೆಯಲ್ಲಿ ತಿಳಿಸಿದೆ.

venur vikasana shibira samaropa copyವೇಣೂರು: ಶಿಬಿರಗಳಲ್ಲಿ ತತ್ವ ಸಿದ್ದಾಂತ ಮುಖ್ಯ. ಆದ್ಯಾತ್ಮಿಕ ಚಿಂತನೆಯನ್ನು ವಿಕಸನಗೊಳಿಸುವುದು ಇದರ ಮೂಲ ಧ್ಯೇಯವಾಗಬೇಕೆ ಹೊರತು ಮನೋರಂಜನೆ ಆಗಬಾರದು. ಇಂತಹ ಧಾರ್ಮಿಕ ಶಿಬಿರಗಳಲ್ಲಿ ಮಠ, ಮಠಾಧೀಶರ ಪರಿಚಯ ಮೂಡಿಸುವುದ ಜೊತೆಗೆ ಅಲ್ಲಿಗೆ ಭೇಟಿ ನೀಡುವುದಕ್ಕೆ ಪ್ರೇರಣೆಯಾಗಲಿ ಎಂದು ಮೂಡಬಿದಿರೆ ಜೈನ ಮಠದ ಭಾರತ ಭೂಷಣ ಶ್ರೀ ಭಟ್ಟಾರಕ ಚಾರುಕೀರ್ತಿ ಪಂಡಿತಾಚಾರ್ಯವರ್ಯ ಮಹಾ ಸ್ವಾಮೀಜಿ ನುಡಿದರು.
ಅವರು ಎ.16 ರಂದು ವೇಣೂರು ಶ್ರೀ ಬಾಹುಬಲಿ ಸಭಾಭವನದಲ್ಲಿ ಇಲ್ಲಿಯ ಬಾಹುಬಲಿ ಯುವಜನ ಸಂಘ ಮತ್ತು ಶ್ರೀ ದಿಗಂಬರ ತೀರ್ಥ ಕ್ಷೇತ್ರ ಸಮಿತಿ ಆಶ್ರಯದಲ್ಲಿ ಜರಗಿದ ಜೈನ ಬಾಲಕ-ಬಾಲಕಿಯರ 17ನೇ ವರ್ಷದ ಧಾರ್ಮಿಕ ಹಾಗೂ ವ್ಯಕ್ತಿತ್ವ ವಿಕಸನ ಶಿಬಿರದ ಸಮಾರೋಪ ಕಾರ್ಯಕ್ರಮದಲ್ಲಿ ಆಶೀರ್ವಚನ ನೀಡಿದರು. ಮಠಗಳ ಬಗ್ಗೆ ಗುರು ಹಾಗೂ ಪರಂಪರೆಯನ್ನು ವಿರೋಧ ಕಟ್ಟಿಕೊಂಡು ಅಂತರ್ಜಾಲಗಳಲ್ಲಿ ಚರ್ಚೆ ನಡೆಯುತ್ತಿರುವುದು ಬೇಸರ ಸಂಗತಿ. ಮಕ್ಕಳಿಗೆ ಮಠ, ಮಠಾಧೀಶರ ಪರಿಚಯ ಮಾಡಿಸಬೇಕು. ಇದು ಅವರು ಧರ್ಮ ಮಾರ್ಗದಲ್ಲಿ ನಡೆಯಲು ಸಹಕಾರಿಯಾಗಲಿದೆ ಎಂದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದ ಉಜಿರೆ ಶ್ರೀ ಧ.ಮಂ. ಪ.ಪೂ. ಕಾಲೇಜಿನ ಪ್ರಾಂಶುಪಾಲ ಪ್ರೊ| ಎನ್. ದಿನೇಶ್ ಚೌಟ ಮಾತನಾಡಿ, ಭಾಷೆಯ ಬಗ್ಗೆ ಸಂವಹನಶೀಲತೆ ಬೆಳೆಸಿ ಕೊಂಡವರಿಗೆ ಸಮಾಜದಲ್ಲಿ ಮಾನ್ಯತೆ ಜಾಸ್ತಿ. ಅದು ಇಂತಹ ಶಿಬಿರಗಳು ತಿಳಿಸುತ್ತದೆ. ಇಂದು ಜೈನ ಧರ್ಮೀಯರು ಬೇರೆ ಧರ್ಮದತ್ತ ವಾಲುತ್ತಿದ್ದಾರೆ. ಇದಕ್ಕಾಗಿ ಮಕ್ಕಳಿರುವಾಗಲೇ ಅವರಿಗೆ ಜೈನ ಧರ್ಮ ತತ್ವ ಸಿದ್ದಾಂತಗಳನ್ನು ಮೂಡಿಸಬೇಕಾಗಿದೆ ಎಂದರು.
ಶಿಬಿರದ ನಿರ್ವಾಹಕ ಮುನಿರಾಜ ರೇಂಜಾಳ ಮಾತನಾಡಿ, ಜೈನರ ಬಗೆಗಿನ ತತ್ವ ಸಿದ್ದಾಂತಗಳನ್ನು ಇಂತಹ ಧಾರ್ಮಿಕ ಶಿಬಿರಗಳಿಂದ ಮಾತ್ರ ಕಲಿಯಲು ಸಾಧ್ಯ ಎಂದರು.
ಮುಖ್ಯ ಅತಿಥಿಗಳಾಗಿ ಮಾಣಿ ಶ್ರೀ ಮಹಾವೀರ ಇಂಡಸ್ಟ್ರೀಸ್‌ನ ಮಹಾವೀರ ಪ್ರಸಾದ್, ಮೂಡಬಿದಿರೆ ಪಂಡಿತ್ ರೆಸಾರ್ಟ್‌ನ ರಜನಿಲಾಲ್ ಗೋಯಲ್ ಜೈನ್, ಶಿಬಿರದ ಸಂಚಾಲಕ ಜ್ಞಾನಚಂದ್ರ, ವೇಣೂರು ಜೈನ ತೀರ್ಥಕ್ಷೇತ್ರ ಸಮಿತಿ ಕಾರ್ಯದರ್ಶಿ ಯಂ. ವಿಜಯರಾಜ ಅಧಿಕಾರಿ, ಶ್ರೀ ಬಾಹುಬಲಿ ಯುವಜನ ಸಂಘದ ಅಧ್ಯಕ್ಷ ಶರ್ಮಿತ್ ಕುಮಾರ್ ವೇದಿಕೆಯಲ್ಲಿದ್ದರು.
ಸಂಪನ್ಮೂಲ ವ್ಯಕ್ತಿಗಳಾಗಿ ಯೋಗರಾಜ ಶಾಸ್ತ್ರಿ ಕಾರ್ಕಳ, ನವೀನ್ ಕುಮಾರ್ ಜೈನ್, ಉದಯ ಕುಮಾರ್, ಮಂಜುಳಾ, ಅಜಿತ್ ಕುಮಾರ್, ನಿರಂಜನ ಎ., ಶಾಂತಿರಾಜ ಜೈನ್, ಮಹಾವೀರ ಜೈನ್, ಕು| ಅಶ್ವಿನಿ ಜೈನ್ ಶಿಬಿರವನ್ನು ನಡೆಸಿಕೊಟ್ಟರು. ೪ ದಿನಗಳ ಕಾಲ ಜರಗಿದ ಶಿಬಿರದಲ್ಲಿ ೭೨ ಶಿಬಿರಾರ್ಥಿಗಳು ಪಾಲ್ಗೊಂಡಿದ್ದರು.
ಕು| ಪೂರ್ಣಿಮಾ ಬಳಗ ಪ್ರಾರ್ಥಿಸಿ ಪ್ರಮೋದ್ ಕುಮಾರ್ ಬಜಿರೆ ಪ್ರಾಸ್ತಾವಿಕವಾಗಿ ಮಾತನಾಡಿ ಸ್ವಾಗತಿಸಿದರು. ನಿರಂಜನ ಅಳಿಯೂರು ಕಾರ್ಯಕ್ರಮ ನಿರೂಪಿಸಿ, ಸುಧೀರ್ ಕುಮಾರ್ ಬಜಿರೆ ವಂದಿಸಿದರು.

chandrashekar - pavithra copyಲಾಯಿಲ ಗ್ರಾಮದ ಕುಂಠಿನಿ ಶ್ರೀ ದೇವಿಪ್ರಸಾದ್ ಮನೆ ಶ್ರೀಮತಿ ವಸಂತಿ ಮತ್ತು ಬಿ. ಗಿರಿಧರ ಶೆಟ್ಟಿ ಯವರ ಪುತ್ರಿ ಪವಿತ್ರರವರ ವಿವಾಹವು ಮಜಲೋಡಿ ಶ್ರೀದುರ್ಗಾ ನಿಲಯ ಸಾಂತಪ್ಪ ಶೆಟ್ಟಿಯವರ ಪುತ್ರ ಚಂದ್ರಶೇಖರ ರೊಂದಿಗೆ ಎ. 10ರಂದು ಬೆಳ್ತಂಗಡಿ ಶ್ರೀ ಗುರುನಾರಾಯಣ ವಾಣಿಜ್ಯ ಸಂಕೀರ್ಣದ ಆಶಾ ಸಾಲಿಯಾನ್ ಕಲ್ಯಾಣ ಮಂಟಪದಲ್ಲಿ ಜರಗಿತು.

dinesh-rekha copyಬೆಳಾಲು ಗ್ರಾಮದ ಪೊಯ್ಯೋದಡ್ಡ ಮನೆ ಬಾಬು ಗೌಡರ ಪುತ್ರ ದಿನೇಶ್ ಪಿ. ಗೌಡ ರವರ ವಿವಾಹವು ಕೊಯ್ಯೂರು ಗ್ರಾಮದ ಕಲ್ಲೇರಿ ಮನೆ ಕುಶಾಲಪ್ಪ ಗೌಡರ ಪುತ್ರಿ ರೇಖಾ ರೊಂದಿಗೆ ಎ. 10ರಂದು ಬೆಳ್ತಂಗಡಿ ಸಿ.ವಿ.ಸಿ ಹಾಲ್‌ನಲ್ಲಿ ಜರುಗಿತು.

Rajesh news copyವೇಣೂರು : ವೇಣೂರು ವಲಯದ ಅಳದಂಗಡಿ ಶಾಖೆಯಲ್ಲಿ ಉಪವಲಯ ಅರಣ್ಯಾಧಿಕಾರಿಯಾಗಿ ಕಳೆದ 5 ವರ್ಷಗಳಿಂದ ಸೇವೆ ಸಲ್ಲಿಸುತ್ತಿದ್ದ ರಾಜೇಶ್ ಇವರಿಗೆ ವಲಯ ಅರಣ್ಯಾಧಿಕಾರಿಯಾಗಿ ಭಡ್ತಿ ನೀಡಿ ರಾಯಚೂರು ಜಿಲ್ಲೆಯ ಲಿಂಗಸಗೂರು ವಲಯಕ್ಕೆ ನಿಯುಕ್ತಿಗೊಳಿಸಲಾಗಿದೆ.
2007ರಲ್ಲಿ ಬೆಳ್ತಂಗಡಿ ವನ್ಯಜೀವಿ ವಲಯದಲ್ಲಿ ಉಪ ವಲಯ ಅರಣ್ಯಾಧಿಕಾರಿಯಾಗಿ ಸೇವೆಗೆ ಸೇರಿದ ರಾಜೇಶ್ ಅವರು 5 ವರ್ಷಗಳ ಸೇವೆ ಬಳಿಕ 2012ರಲ್ಲಿ ವೇಣೂರು ವಲಯದ ಅಳದಂಗಡಿ ಶಾಖೆಗೆ ವರ್ಗಾವಣೆಗೊಂಡು ಸೇವೆ ಸಲ್ಲಿಸುತ್ತಿದ್ದರು. ಕಳೆದ 6ತಿಂಗಳ ಹಿಂದೆ ಅಳದಂಗಡಿ ಶಾಖೆ ಜೊತೆಗೆ ನಾರಾವಿ ಶಾಖೆಯ ಹೆಚ್ಚುವರಿ ಪ್ರಭಾರವನ್ನು ವಹಿಸಿಕೊಂಡು ಉತ್ತಮವಾಗಿ ಕರ್ತವ್ಯವನ್ನು ನಿರ್ವಹಿಸಿದ್ದರು.

vijay kumar-ashwini copyಕಲ್ಮಂಜ ಗ್ರಾಮದ ಬಳ್ಳಿದಡ್ಡ ಸುರೇಶ್ ಬಂಗೇರರ ಪುತ್ರಿ ಅಶ್ವಿನಿಯವರ ವಿವಾಹ ಮಂಡೂರು ಗ್ರಾಮದ ಹೇಡ್ಯದಡ್ಡ ನಾಣ್ಯಪ್ಪ ಪೂಜಾರಿಯವರ ಪುತ್ರ ವಿಜಯ್ ಕುಮಾರ್ ರೊಂದಿಗೆ ಎ. 10ರಂದು ಉಜಿರೆ ಎಸ್.ಕೆ ಮೆಮೋರಿಯಲ್ ಹಾಲ್‌ನಲ್ಲಿ ಜರಗಿತು.

reshma copyಬಜಿರೆ ಗ್ರಾಮದ ಹೊಸಪಟ್ಣ  ಪೊಂಗರ್‌ತ್ಯಾರು ಮನೆ ಶ್ಯಾಮ ಹೆಗ್ಡೆಯವರ ಪುತ್ರಿ ರೇಶ್ಮಾರವರ ವಿವಾಹವು ನಾರಾವಿ ಪಾಣಾಲು ದರ್ಖಾಸು ಸೋಮಯ್ಯ ಹೆಗ್ಡೆಯವರ ಪುತ್ರ ರಘುಚಂದ್ರರೊಂದಿಗೆ   ನಾರಾವಿ ಧರ್ಮಶ್ರೀ ಸಭಾಭವನದಲ್ಲಿ ಎ.10ರಂದು ಜರುಗಿತು.

Veerakesari sahayadana copyಕನ್ಯಾಡಿ ||: ವೀರಕೇಸರಿ ಧರ್ಮಸ್ಥಳ ಬೆಳ್ತಂಗಡಿ ಹಾಗೂ ಶ್ರೀ ಶನೈಶ್ಚರ ಪೂಜಾ ಸಮಿತಿ ಕನ್ಯಾಡಿ || ಇದರ ಸಹಯೋಗದೊಂದಿಗೆ ಎ.15ರಂದು ಹಿ.ಪ್ರಾ ಶಾಲಾ ಮೈದಾನ ಕನ್ಯಾಡಿ || ಇಲ್ಲಿ ಜರುಗಿದ 6ನೇ ವರ್ಷದ ಸಾರ್ವಜನಿಕ ಶ್ರೀ ಶನೈಶ್ಚರ ಪೂಜೋತ್ಸವ ಮತ್ತು ವಿವಿಧ ಕ್ಷೇತ್ರಗಳ ಸಾಧಕರಿಗೆ ಸನ್ಮಾನ ಕಾರ್ಯಕ್ರಮದಲ್ಲಿ 27ನೇ ಸೇವಾಯೋಜನೆಯಾಗಿ ನಿಡ್ಲೆ ಸ.ಹಿ.ಪ್ರಾ. ಶಾಲೆಯ 9ನೇ ತರಗತಿ ವಿದ್ಯಾರ್ಥಿ ಪದ್ಮರಾಜ್ ಇವರು ಮಾನಸಿಕ ಅನಾರೋಗ್ಯದಿಂದ ಬಳಲುತ್ತಿದ್ದು ಇವರ ಚಿಕಿತ್ಸೆಗೆ ರೂ. 15 ಸಾವಿರದ ಚೆಕ್ಕನ್ನು ಆತನ ತಾಯಿಗೆ ಹಸ್ತಾಂತರಿಸಲಾಯಿತು. ಇದೇ ಸಂದರ್ಭದಲ್ಲಿ 28ನೇ ಯೋಜನೆಯಾಗಿ ತನ್ನ ಎರಡು ಕಣ್ಣುಗಳನ್ನು ಕಳೆದುಕೊಂಡಿರುವ ಪೂರ್ಣೇಶ ಅವರ ಚಿಕಿತ್ಸೆಗೆ 15ಸಾವಿರ ರೂಗಳ ಚೆಕ್ಕನ್ನು ನೀಡಲಾಯಿತು. ವೀರಕೇಸರಿ ಬೆಳ್ತಂಗಡಿಯ ಮಾಸಿಕ ಸೇವಾ ಯೋಜನೆಯಂತೆ ಎಪ್ರಿಲ್ ತಿಂಗಳಲ್ಲಿ ಎರಡು ಸೇವಾ ಯೋಜನೆಯನ್ನು ಯಶಸ್ವಿಯಾಗಿ ತಲುಪಿದ್ದು 11 ತಿಂಗಳಲ್ಲಿ 28 ಸೇವಾ ಯೋಜನೆ ಮೂಲಕ 28 ಕುಟುಂಬಗಳಿಗೆ ಆಸರೆಯಾಗಿ ಯಶಸ್ಸಿನ ಹಾದಿಯಲ್ಲಿ ಮುನ್ನಡೆಯುತ್ತಿದೆ. ಇದೀಗ ತಾಲೂಕಿನ ದೊಡ್ಡ ಸಂಘಟನೆಯಾಗಿ ಬೆಳೆದಿರುವ ವೀರಕೇಸರಿ ತಂಡ ಪ್ರತಿಯೊಬ್ಬ ಸದಸ್ಯನ ನೆರವಿನಿಂದ ಪ್ರತಿ ತಿಂಗಳು ಸೇವಾಯೋಜನೆಗಳನ್ನು ಮಾಡಿ ಸಮಾಜಸೇವೆಯಲ್ಲಿ ಅಗ್ರಮಾನ್ಯ ಸಂಘಟನೆಯಾಗಿ ಮುನ್ನುಗ್ಗುತ್ತಿದೆ.

Puduvettu sethuve veekshane copyಪುದುವೆಟ್ಟು : ಪುದುವೆಟ್ಟು ಗ್ರಾಮದ ಬೊಲ್ಮನಾರು ಎಂಬಲ್ಲಿ ಅಂತಿಮ ಹಂತದ ನಿರ್ಮಾಣದಲ್ಲಿದ್ದು ಶೀಘ್ರವೇ ಜನೋಪಯೋಗಕ್ಕೆ ಅರ್ಪಣೆಯಾಗಲಿರುವ ಸುಮಾರು 7 ಕೋಟಿಗೂ ಅಧಿಕ ವೆಚ್ಚದ ನೂತನ ಸೇತುವೆ ಕಾಮಗಾರಿಯನ್ನು ಶಾಸಕ ವಸಂತ ಬಂಗೇರ ಎ. 13ರಂದು ವೀಕ್ಷಣೆ ನಡೆಸಿದರು.
ಗುತ್ತಿಗೆದಾರ ಹಾಗೂ ಇಂಜಿನಿಯರ್ ಜೊತೆ ಮಾತುಕತೆ ನಡೆಸಿ ಕಾಮಗಾರಿಯ ವಿವರ ಪಡೆದ ಅವರು ಮಳೆಗಾಲಕ್ಕೂ ಮುನ್ನವೇ ಕಾಮಗಾರಿ ಪೂರ್ತಿಗೊಳಿಸುವಂತೆ ಸೂಚನೆ ನೀಡಿದರು.
ಈ ಸಂದರ್ಭ ಉಜಿರೆ ಜಿ.ಪಂ. ಸದಸ್ಯೆ ನಮಿತಾ ಕೆ. ಪೂಜಾರಿ, ತಾ.ಪಂ. ಸದಸ್ಯ ವಿ.ಟಿ. ಸೆಬಾಸ್ಟಿಯನ್, ಎಪಿಎಂಸಿ ಸದಸ್ಯ ಅಬ್ದುಲ್ ಗಫೂರ್, ಪುದುವೆಟ್ಟು ಗ್ರಾ.ಪಂ. ಅಧ್ಯಕ್ಷೆ ನೀಲಮ್ಮ, ಉಪಾಧ್ಯಕ್ಷ ಬೊಮ್ಮಣ್ಣ ಗೌಡ ಮಠ, ನೆರಿಯ ಗ್ರಾ.ಪಂ. ಸದಸ್ಯ ಬಿ. ಅಶ್ರಫ್ ನೆರಿಯ, ಗುತ್ತಿಗೆದಾರ ರಿಯಾಝ್ ಪೆರಾಲ್ದರಕಟ್ಟೆ ಮೊದಲಾದವರು ಉಪಸ್ಥಿತರಿದ್ದರು.

belalu anantha padmanabha nagashila prathiste copyಬೆಳಾಲು : ಇಲ್ಲಿಯ ಅನಂತೋಡಿಯಲ್ಲಿ ಜೀರ್ಣೋದ್ಧಾರಗೊಳ್ಳುತ್ತಿರುವ ಶ್ರೀ ಅನಂತ ಪದ್ಮನಾಭ ದೇವಸ್ಥಾನದಲ್ಲಿ ಜೀರ್ಣೋದ್ಧಾರ ಸಮಿತಿಯ ಗೌರವಾಧ್ಯಕ್ಷರು ಧರ್ಮಸ್ಥಳದ ಡಾ| ಡಿ. ವೀರೇಂದ್ರ ಹೆಗ್ಗಡೆಯವರ ಆಶೀರ್ವಾದದೊಂದಿಗೆ ಉಜಿರೆ ಶ್ರೀ ಜನಾರ್ದನ ದೇವಸ್ಥಾನದ ಆಡಳಿತ ಮೊಕ್ತೇಸರ ಯು. ವಿಜಯ ರಾಘವ ಪಡ್ವೆಟ್ನಾಯರ ಮಾರ್ಗದರ್ಶನದಲ್ಲಿ ಬ್ರಹ್ಮಶ್ರೀ ಆಲಂಬಾಡಿ ಪದ್ಮನಾಭ ತಂತ್ರಿಗಳ ನೇತೃತ್ವದಲ್ಲಿ ಎ. 20ರಂದು(ಇಂದು) ಶ್ರೀ ನಾಗಶಿಲಾ ಪ್ರತಿಷ್ಠೆ ಜರಗಿತು. ಜೀರ್ಣೋದ್ಧಾರ ಸಮಿತಿಯ ಪದಾಧಿಕಾರಿಗಳು, ಭಜನಾ ಮಂಡಳಿಯ ಪದಾಧಿಕಾರಿಗಳು ಶ್ರೀಕ್ಷೇತ್ರ ಧ. ಗ್ರಾ. ಯೋಜನೆಯ ಒಕ್ಕೂಟದ ಪದಾಧಿಕಾರಿಗಳು, ಊರವರು, ಭಕ್ತಾಧಿಗಳು ಹೆಚ್ಚಿನ ಸಂಖ್ಯೆಯಲ್ಲಿ ಹಾಜರಿದ್ದರು.

Peranamanja sabhe prathapasimha copyಪಡಂಗಡಿ : ಮನಸ್ಸು ಸ್ಥಿರವಾದಾಗ ಜಗತ್ತಿನ ಸತ್ಯ ಅರಿವಾಗುತ್ತದೆ. ಇದಕ್ಕಾಗಿ ನಮ್ಮ ಹಿರಿಯರು ಇಂತಹ ಶ್ರದ್ಧಾಕೇಂದ್ರಗಳನ್ನು ನಿರ್ಮಿಸಿದ್ದಾರೆ. ಆತ್ಮ ಶಕ್ತಿಯನ್ನು ಜಾಗೃತ ಮಾಡುವ ಸ್ಥಳಗಳೇ ದೇವಸ್ಥಾನ, ದೈವಸ್ಥಾನಗಳಾಗಿವೆ ಎಂದು ಬಿಜೆಪಿ ಮಾಜಿ ಜಿಲ್ಲಾಧ್ಯಕ್ಷ, ನ್ಯಾಯವಾದಿ ಪ್ರತಾಪಸಿಂಹ ನಾಯಕ್ ಹೇಳಿದರು.
ಅವರು ಎ.13ರಂದು ಪಡಂಗಡಿ ಗ್ರಾಮದ ಪೆರಣಮಂಜು ಶ್ರೀ ಮೂಜಿಲ್ನಾಯ ಬ್ರಹ್ಮ ದೈವಸ್ಥಾನ ಬ್ರಹ್ಮಕಲಶೋತ್ಸವ ಮತ್ತು ಜಾತ್ರಾ ಮಹೋತ್ಸವದ ಅಂಗವಾಗಿ ನಡೆದ ಧಾರ್ಮಿಕ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಮನುಷ್ಯನಿಗೆ ಭೌತಿಕ ಸುಖ ಮುಖ್ಯವಲ್ಲ, ಆಧ್ಯಾತ್ಮಿಕ ಸುಖ ಮಾತ್ರ ನಮ್ಮನ್ನು ಮೋಕ್ಷದೆಡೆಗೆ ಸಾಗಿಸಬಹುದು. ಅಂತಹ ಸುಖವನ್ನು ನೀಡುವ ದೈವ, ದೇವರ ನಾಡಾದ ಭಾರತ ಒಂದು ದಿನ ಜಗತ್ತಿಗೆ ವಿಶ್ವಗುರುವಾಗಿ ನಿಲ್ಲಲಿದೆ. ಭಾರತದಲ್ಲಿ ಪ್ರಾಚೀನ ಕಾಲದಿಂದಲೂ ಇದ್ದ ಯೋಗ ಇಂದು ವಿಶ್ವದೆಲ್ಲೇಡೆ ಪಸರಿಸಿದೆ. ಭಗವಂತನ ಸಾಕ್ಷಾತ್ಕಾರಕ್ಕೆ ಯೋಗ ಸುಲಭ ಮಾರ್ಗವಾಗಿದೆ ಎಂದರು.
ಧಾರ್ಮಿಕ ಉಪನ್ಯಾಸ ನೀಡಿದ ಮೈಸೂರು ಮಾನಸ ಗಂಗೋತ್ರಿಯ ಪ್ರೊ| ಸುರೇಶ್ ಪಡಿವಾಳ್ ಮನಸ್ಸು, ವಚನ, ಕಾಯಗಳ ಜೊತೆ ಆತ್ಮ ಸಂಯೋಜನೆಗೊಂಡು ನಮ್ಮ ದೇಹದ ಚೇತನ ಕ್ರಿಯೆ ನಡೆದಾಗ ನಾವು ತಿಳಿಯುವ, ನೋಡುವ ಕ್ರಿಯೆ ನಡೆಯುತ್ತದೆ. ನಮ್ಮಲ್ಲಿರುವ ಅರಿಷಡ್ವರ್ಗಗಳು ನಿವಾರಣೆಯಾಗಲು ಇಂತಹ ಧಾರ್ಮಿಕ ಕೇಂದ್ರಗಳಿಗೆ ಬಂದು, ಧರ್ಮ ಕ್ರಿಯೆ ಮೂಲಕ ಆತ್ಮೋನ್ನತಿ ಮಾಡಿಕೊಳ್ಳಬೇಕು ಎಂದು ತಿಳಿಸಿದರು.
ಮುಖ್ಯ ಅತಿಥಿ ಬೆಳ್ತಂಗಡಿ ವಿನಾಯಕ ರೈಸ್‌ಮಿಲ್‌ನ ಮಾಲಕ ರೋ| ಶ್ರೀಕಾಂತ ಕಾಮತ್ ಮಾತನಾಡಿ, ಊರಿನ ದೇವಸ್ಥಾನ, ದೈವಸ್ಥಾನಗಳು ಜೀರ್ಣೋದ್ಧಾರ ಹೊಂದಿದಾಗ ಊರಿನ ಅಭಿವೃದ್ಧಿಯ ಜೊತೆ ಸಮಾಜದ ಪ್ರಗತಿಯಾಗುತ್ತದೆ. ನಾವು ನಂಬಿಕೊಂಡು ಬಂದಂತಹ ಶ್ರದ್ಧಾಕೇಂದ್ರಗಳು ಅವನತಿಗೊಂಡಾಗ ನಮ್ಮ ಜೀವನದ ಮೇಲೂ ಪರಿಣಾಮಗಳಾಗುತ್ತದೆ. ಅವುಗಳ ಪ್ರಗತಿಯಾದಾಗ ನಮ್ಮ ಜೀವನದಲ್ಲೂ ಉನ್ನತಿಯನ್ನು ಕಾಣಬಹುದು ಎಂದು ತಿಳಿಸಿದರು.
ಉದ್ಯಮಿ ಉದಯ ಶೆಟ್ಟಿ ಕಾಂತವರ ಮಾತನಾಡಿ ಇಂದಿನ ವೈಜ್ಞಾನಿಕ ಯುಗದಲ್ಲಿ ಮಕ್ಕಳಿಗೆ ನಮ್ಮ ಸಂಸ್ಕೃತಿ, ಧಾರ್ಮಿಕ ನಂಬಿಕೆಗಳ ಅರಿವು ಮೂಡಿಸುವುದು ಅವಶ್ಯ ಎಂದು ಹೇಳಿದರು. ಈ ಸಂದರ್ಭದಲ್ಲಿ ಕ್ಷೇತ್ರ ನಿರ್ಮಾಣಕ್ಕೆ ಸಹಕಾರ ನೀಡಿದ ಸ್ವಸ್ತಿಕ್ ಪಡಂಗಡಿಯ ಸಂಪತ್ ಕುಮಾರ್ ಕುಟುಂಬಸ್ಥರನ್ನು ಹಾಗೂ ನವೀನ್‌ಚಂದ್ ಬಲ್ಲಾಳ್, ಉದಯ ಶೆಟ್ಟಿ ಕಾಂತಾವರ ಇವರನ್ನು ದೇವಸ್ಥಾನದ ವತಿಯಿಂದ ಅಭಿನಂದಿಸಲಾಯಿತು. ಬ್ರಹ್ಮಕಲಶೋತ್ಸವ ಸಮಿತಿ ಅಧ್ಯಕ್ಷ ಪ್ರವೀಣ್‌ಚಂದ್ರ ಜೈನ್ ನಡಿಬೆಟ್ಟುಗುತ್ತು ಕಾರ್ಯಕ್ರಮ ನಿರ್ವಹಿಸಿದರು.
ವೇದಿಕೆಯಲ್ಲಿ ಆಡಳಿತ ಮೊಕ್ತೇಸರ ನೇಮಿರಾಜ್ ಶೆಟ್ಟಿ ನಡಿಬೆಟ್ಟು ಗುತ್ತು, ಬ್ರಹ್ಮಕಲಶೋತ್ಸವ ಸಮಿತಿ ಗೌರವಾಧ್ಯಕ್ಷ ಎಸ್. ಜಯರಾಮ ಶೆಟ್ಟಿ, ಪ್ರಧಾನ ಕಾರ್ಯದರ್ಶಿ ಶಾಂತಿರಾಜ ಜೈನ್ ಅಮೃತ, ಕಾರ್ಯದರ್ಶಿ ಜಗದೀಶ್ ಪೈ ಮೂಜುರು, ಕೋಶಾಧಿಕಾರಿ ವಾiನ ಬಾಳಿಗ ಉಪಿಸ್ಥಿತರಿದ್ದರು. ಸಂಜನಾ ಎಸ್.ಜೈನ್ ಇವರ ಪ್ರಾರ್ಥನೆ ಬಳಿಕ ಶ್ರೀಮತಿ ಉಷಾರಾಣಿ ನಡಿಬೆಟ್ಟುಗುತ್ತು ಸ್ವಾಗತಿಸಿದರು. ಪುಂಜಾಲಕಟ್ಟೆ ಶಾಲಾ ಶಿಕ್ಷಕ ಲ| ಧರಣೇಂದ್ರ ಕೆ. ಜೈನ್ ಕಾರ್ಯಕ್ರಮ ನಿರೂಪಿಸಿ, ಎಸ್‌ಕೆಡಿಆರ್‌ಡಿಪಿ ತುಮಕೂರಿನ ಯೋಜನಾಧಿಕಾರಿ ಪ್ರಶಾಂತ್ ಗೌಡ ವಂದಿಸಿದರು. ಬಳಿಕ ಕಲ್ಲಡ್ಕ ವಿಠಲ ನಾಯಕ್ ಬಳಗದವರಿಂದ ‘ಗೀತ ಸಾಹಿತ್ಯ ಸಂಭ್ರಮ’ನಡೆಯಿತು.

kulal kreedakuta samaropa copyವಿವಿಧ ಕ್ಷೇತ್ರದ ಸಾಧಕರಿಗೆ ಸಮ್ಮಾನ
ಕಾರ್ಯಕ್ರಮದಲ್ಲಿ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ಮೂರು ಮಂದಿ ಸಾಧಕರನ್ನು ಕ್ರೀಡಾ ಸಮಿತಿಯ ವತಿಯಿಂದ ವೇದಿಕೆಯಲ್ಲಿದ್ದ ಗಣ್ಯರು, ಅತಿಥಿಗಳು ಸಮ್ಮಾನಿಸಿದರು. ಎಂ.ಎ. ಪದವಿ ರಾಜ್ಯ ಶಾಸ್ತ್ರದಲ್ಲಿ ಪ್ರಥಮ ಸ್ಥಾನ ಪಡೆದ ಕು| ಸಚಿತಾ, ರೋಹಿತ್ ಕುಮಾರ್ ಬರಾಯ, ಹಾಗೂ ಕಂಬಳ ಕ್ಷೇತ್ರದ ಮೋಹನ್‌ಕುಮಾರ್ ಕಬ್ಬಿನ ಹಿತ್ಲು ಅವರನ್ನು ಶಾಲು ಹೊದಿಸಿ, ಸ್ಮರಣಿಕೆ ನೀಡಿ ಸಮಿತಿ ವತಿಯಿಂದ ಗೌರವಿಸಲಾಯಿತು.

ಗುರುವಾಯನಕೆರೆ : ಬೆಳ್ತಂಗಡಿ ತಾಲೂಕು ಮೂಲ್ಯರ ಯಾನೆ ಕುಂಬಾರರ ಸೇವಾ ಸಂಘ ಗುರುವಾಯನಕೆರೆ, ಕುಲಾಲ-ಕುಂಬಾರರ ಯುವ ವೇದಿಕೆ ಮತ್ತು ತಾಲೂಕು ಕ್ರೀಡಾ ಸಮಿತಿ, ಕುಲಾಲ ಕುಂಬಾರ ಸಾಂಸ್ಕೃತಿಕ ಸಮಿತಿ ಇದರ ಸಹಯೋಗದೊಂದಿಗೆ ತಾಲೂಕಿನ ಸ್ವಜಾತಿ ಬಾಂಧವರಿಗಾಗಿ ನಡೆದ ತಾಲೂಕು ಮಟ್ಟದ ಕುಲಾಲ ಕ್ರೀಡೋತ್ಸವದ ಸಮಾರೋಪ ಸಮಾರಂಭ ಎ.16ರಂದು ಕೆರೆ ಬಳಿಯ ಮೈದಾನದಲ್ಲಿ ನಡೆಯಿತು.
ಮುಖ್ಯ ಅತಿಥಿಗಳಾಗಿ ಭಾಗವಹಿಸಿದ ಬಂಟ್ವಾಳ ಯೋಜನಾ ಪ್ರಾಧಿಕಾರದ ಅಧ್ಯಕ್ಷ ಸದಾಶಿವ ಬಂಗೇರ ಮಾತನಾಡಿ, ಕುಲಾಲ-ಕುಂಬಾರ ಸಮಾಜ ಸಂಘಟನೆಗೆ ಇಂತಹ ಕ್ರೀಡಾ ಕೂಟಗಳು ಪ್ರೇರಣೆಯಾಗುವುದರ ಜೊತೆಗೆ ಯುವ ಸಮುದಾಯಕ್ಕೆ ತಮ್ಮ ಶಕ್ತಿಯ ಪ್ರದರ್ಶನಕ್ಕೆ ವೇದಿಕೆಯಾಗಿದೆ ಎಂದರು. ಯುವ ಸಂಪತ್ತು ಸಮಾಜದ ಉನ್ನತಿಗೆ ಉಪಯೋಗವಾಗಬೇಕು, ಸಂಘಟನೆಗೆ ಬಲ ಬರಬೇಕಾದರೆ ತಾಲೂಕಿನ ಸಮಾಜ ಬಾಂಧವರು ಇಂತಹ ಕಾರ್ಯಗಳಲ್ಲಿ ಕೈಜೋಡಿಸುವುದರೊಂದಿಗೆ ಸಮಾಜದ ಮುಂಚೂಣಿಯಲ್ಲಿ ಪ್ರಮುಖ ಪಾತ್ರವಹಿಸಬೇಕಾದ ಅಗತ್ಯವಿದೆ. ಈ ನಿಟ್ಟಿನಲ್ಲಿ ಮಾತೃ ಸಂಘದ ನೇತೃತ್ವದಲ್ಲಿ ರಾಜ್ಯ ಮಟ್ಟದ ಕಬಡ್ಡಿಯನ್ನು ಹಮ್ಮಿಕೊಳ್ಳುವ ಯೋಜನೆಯಿದ್ದು, ತಾಲೂಕಿನ ತಂಡವೂ ಇದರಲ್ಲಿ ಭಾಗವಹಿಸಬೇಕು ಎಂದು ಕರೆ ನೀಡಿದರು.
ಸಮಾರಂಭದ ಅಧ್ಯಕ್ಷತೆಯನ್ನು ತಾಲೂಕು ಕ್ರೀಡಾ ಸಮಿತಿ ಅಧ್ಯಕ್ಷ ತಿಲಕ್‌ರಾಜ್ ವಹಿಸಿ, ಕ್ರೀಡೋತ್ಸವದ ಯಶಸ್ವಿಗೆ ಸಹಕರಿಸಿದ ಎಲ್ಲರಿಗೂ ಕೃತಜ್ಞತೆ ಸಲ್ಲಿಸಿದರು. ಕುಲಾಲ-ಕುಂಬಾರರ ಯುವ ವೇದಿಕೆ ರಾಜ್ಯ ಸಂಘಟನಾ ಕಾರ್ಯದರ್ಶಿ ಹರೀಶ್ ಕಾರಿಂಜ ಸ್ವಾಗತಿಸಿ, ಯುವ ಸಮುದಾಯದ ಸಂಘಟನೆ ಹಾಗೂ ಬಲವರ್ಧನೆಗೆ ಈ ಕ್ರೀಡಾಕೂಟ ಪೂರಕವಾಗಿ ನಡೆಯುತ್ತಿದ್ದು, ಇಂದು ಅತ್ಯಂತ ಯಶಸ್ವಿಯಾಗಿ ಕಾರ್ಯಕ್ರಮ ನಡೆಸಿದ ಕ್ರೀಡಾ ಸಮಿತಿಯ ಪದಾಧಿಕಾರಿಗಳನ್ನು ಅಭಿನಂದಿಸಿದರು.
ಅತಿಥಿಗಳಾಗಿ ಕುಲಾಲ ಕುಂಬಾರರ ಯುವ ವೇದಿಕೆ ಬೆಳ್ತಂಗಡಿ ತಾಲೂಕು ಅಧ್ಯಕ್ಷ ಲೋಕೇಶ್ ಕಂಚಿಂಜ, ವಾಣಿಜ್ಯ ತೆರಿಗೆ ನಿರೀಕ್ಷಕ ಯತೀಶ್ ಸಿರಿಮಜಲು, ಶ್ರೀ ಕ್ಷೇ.ಧ.ಗ್ರಾ. ಯೋಜನೆ ಧರ್ಮಸ್ಥಳದ ಯೋಜನಾಧಿಕಾರಿ ಕಮಲಾಕ್ಷ, ಕುಲಾಲ ಕುಂಬಾರ ಯುವ ವೇದಿಕೆ ಬೆಳ್ತಂಗಡಿ ಇದರ ಕೋಶಾಧಿಕಾರಿ ಉಮೇಶ್ ಕುಲಾಲ್, ಸುದ್ದಿ ಪತ್ರಿಕೆಯ ಮುಖ್ಯ ವರದಿಗಾರ ಬಿ.ಎಸ್. ಕುಲಾಲ್ ಭಾಗವಹಿಸಿ ಶುಭ ಕೋರಿದರು. ಬೆಳಗ್ಗೆ 11ರಿಂದ ಸಂಜೆ 7.30ರ ವರೆಗೆ ಅತ್ಯಂತ ಯಶಸ್ವಿಯಾಗಿ ಹಾಗೂ ಶಿಸ್ತುಬದ್ಧವಾಗಿ ಕ್ರೀಡೋತ್ಸವ ನಡೆಯಿತು. ಈ ಸಂದರ್ಭದಲ್ಲಿ ಮಕ್ಕಳಿಗೆ, ಮಹಿಳೆಯರಿಗೆ ಹಾಗೂ ಪುರುಷರಿಗೆ ಹಮ್ಮಿಕೊಂಡ ವಿವಿಧ ಸ್ಪರ್ಧಾ ವಿಜೇತರಿಗೆ ಬಹುಮಾನಗಳನ್ನು ವಿತರಿಸಲಾಯಿತು.
ಕ್ರೀಡೋತ್ಸವದ ತೀರ್ಪುಗಾರರಾಗಿ, ಗಿರೀಶ್, ಮಿಥುನ್, ಗೋಪಾಲ್, ಶೀತಲ್ ಸಹಕರಿಸಿದರು. ಹರೀಶ್ ಕಾರಿಂಜ ಸ್ವಾಗತಿಸಿದರು. ಜಿಲ್ಲಾ ಸಂಘದ ಪ್ರಧಾನ ಕಾರ್ಯದರ್ಶಿ ಪ್ರಸಾದ್‌ಕುಮಾರ್ ಕಾರ್ಯಕ್ರಮ ನಿರೂಪಿಸಿ, ಯತೀಶ್ ಸಿರಿಮಜಲು ವಂದಿಸಿದರು. ಸಮಿತಿಯ ಉಪಾಧ್ಯಕ್ಷ ಜಗದೀಶ್ ಬರಾಯ, ಕಾರ್ಯದರ್ಶಿ ಪ್ರವೀಣ್ ಬರಾಯ, ಜೊತೆ ಕಾರ್ಯದರ್ಶಿ ಜಯಮತ್ ಕಟ್ಟೆ, ಮಿಥುನ್ ಮಡಂತ್ಯಾರು, ಕೋಶಾಧಿಕಾರಿ ಜೀವನ್ ಕುಲಾಲ್ ಸಿರಿಮಜಲು, ಸಂಘಟನಾ ಕಾರ್ಯದರ್ಶಿ ನವೀನ್ ಕುಲಾಲ್, ಮುಖೇಶ್ ಕುಲಾಲ್ ಬರಾಯ ಹಾಗೂ ಸಮಿತಿಯ ಎಲ್ಲಾ ಸದಸ್ಯರು ಉಪಸ್ಥಿತರಿದ್ದರು.

ವಿದ್ಯುತ್ ನಿಲುಗಡೆ

ವಿದ್ಯುತ್ ನಿಲುಗಡೆ

Tuesday, April 25th, 2017 | Suddi Belthangady | no responses ಬೆಳ್ತಂಗಡಿ : ಗುರುವಾಯನಕೆರೆ ಉಪಕೇಂದ್ರದಲ್ಲಿ ತುರ್ತು ಕಾಮಗಾರಿಯನ್ನು ಕೈಗೊಳ್ಳಬೇಕಾದ ಹಿನ್ನಲೆಯಲ್ಲಿ ಎ. 26 … ಮುಂದೆ ಓದಿ

ಬೆಳ್ತಂಗಡಿ ಬಿಇಒ ಕಚೇರಿ ಎದುರು ಶಿಕ್ಷಕರ ಏಕದಿನ ಧರಣಿ

Tuesday, April 25th, 2017 | Suddi Belthangady | no responses ಬೆಳ್ತಂಗಡಿ: ಶಿಕ್ಷಕರ ವಿವಿಧ ಬೇಡಿಕೆಗಳನ್ನು ಮುಂದಿಟ್ಟು ಅಖಿಲ ಭಾರತ ಪ್ರಾಥಮಿಕ ಶಿಕ್ಷಕರ ಫೆಡರೇಶನ್… ಮುಂದೆ ಓದಿ

ಎತ್ತಿನ ಹೊಳೆ ನೀರಿಗಾಗಿ ಸಹಕಾರ ಕೋರಿದ ಮಧುಗಿರಿ ನಾಗರಿಕರು ಧರ್ಮಸ್ಥಳದಲ್ಲಿ ಡಾ. ಹೆಗ್ಗಡೆಯವರಿಗೆ ಮನವಿ

Thursday, April 13th, 2017 | Suddi Belthangady | no responses ಧರ್ಮಸ್ಥಳ: ತುಮಕೂರು ಜಿಲ್ಲೆಯ ಮಧುಗಿರಿ, ಕೊರಟಗೆರೆ ಹಾಗೂ ಕೋಲಾರ ಸೇರಿದಂತೆ ಬರಪೀಡಿತ ಪ್ರದೇಶಗಳಿಗೆ… ಮುಂದೆ ಓದಿ

ಲಾಲ ಜೇನು ಕೃಷಿ ತರಬೇತಿ ಕೇಂದ್ರ ‘ಮಧುವನ’

ಲಾಲ ಜೇನು ಕೃಷಿ ತರಬೇತಿ ಕೇಂದ್ರ ‘ಮಧುವನ’

Thursday, April 13th, 2017 | Suddi Belthangady | no responses
  •  ಮುಚ್ಚಿದ ಬಾಗಿಲು
  •  ಕುಸಿಯುವ ಹಂತದಲ್ಲಿ ಕಟ್ಟಡಗಳು –
  • ಬಿ.ಎಸ್. ಕುಲಾಲ್ ಬೆಳ್ತಂಗಡಿ
    ಬೆಳ್ತಂಗಡಿ:
ಮುಂದೆ ಓದಿ

ಕೊಕ್ಕಡ- ಎಂಡೋ ಸಂತ್ರಸ್ಥರ ಬೃಹತ್ ಸಮಾಲೋಚನಾ ಸಭೆ

Saturday, April 8th, 2017 | Suddi Belthangady | no responses ಕರ್ನಾಟಕ ಸರಕಾರ ಎಂಡೋ ಸಂತ್ರಸ್ಥರಿಗಾಗಿ ಈವರೆಗೆ ಯಾವುದೇ ಪರಿಣಾಮಕಾರಿಯಾದ ಪುನರ್ವಸತಿಯನ್ನು ಕಲ್ಪಿಸಿಲ್ಲ ಎನ್ನುವ… ಮುಂದೆ ಓದಿ

ಚಾರ್ಮಾಡಿ-ಶಿರಾಡಿ ಘಾಟಿ ಪರ್ಯಾಯ ರಸ್ತೆಗೆ ಸರ್ವೆ ಮೂಡಿಗೆರೆ-ಬೈರಾಪುರ-ನಾಯಿಹಳ್ಳ-ಪೇರಿಕೆ ರಸ್ತೆ ನಿರ್ಮಾಣ

Thursday, April 6th, 2017 | suddiblt | no responses ಬೆಳ್ತಂಗಡಿ : ಚಾರ್ಮಾಡಿ ಮತ್ತು ಶಿರಾಡಿ ಘಾಟಿ ರಸ್ತೆಗಳಿಗೆ ಪರ್ಯಾಯವಾಗಿ ಮೂಡಿಗೆರೆ-ಬೈರಾಪುರ-ನಾಯಿಹಳ್ಳ-ಪೇರಿಕೆ ಮೂಲಕ… ಮುಂದೆ ಓದಿ

ಗ್ರಾ.ಪಂ. ಸಿಬ್ಬಂದಿಗಳಿಂದ ಜಿ.ಪಂ. ಕಚೇರಿ ಬಳಿ ಪ್ರತಿಭಟನೆ ಕರ್ತವ್ಯದ ಒತ್ತಡ ನಿವಾರಿಸಲು ಬೇಡಿಕೆ; ಗ್ರಾ.ಪಂ. ಕಚೇರಿಗೆ ಹಾಜರಾಗದೆ ಬೇಡಿಕೆ ಈಡೇರಿಕೆಗೆ ಒತ್ತಾಯ

Thursday, April 6th, 2017 | suddiblt | no responses ಬೆಳ್ತಂಗಡಿ: ಗ್ರಾಮ ಪಂಚಾಯತ್ ಕಚೇರಿಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ಪಿಡಿಒ ಸಹಿತ ವಿವಿಧ ಮಟ್ಟದ ಸಿಬ್ಬಂದಿಗಳನ್ನು… ಮುಂದೆ ಓದಿ

ಶಾಲಾ ದಾಖಲಾತಿಗೆ ಜನ್ಮ ದಿನಾಂಕ ಕಡ್ಡಾಯ

ಶಾಲಾ ದಾಖಲಾತಿಗೆ ಜನ್ಮ ದಿನಾಂಕ ಕಡ್ಡಾಯ

Thursday, April 6th, 2017 | suddiblt | no responses ಬೆಳ್ತಂಗಡಿ : 2017-18ನೇ ಸಾಲಿನಿಂದ 1ನೇ ತರಗತಿಗೆ ಸೇರ‍್ಪಡೆಗೊಳ್ಳಬೇಕಾದರೆ ಮಗುವಿಗೆ ಖಡ್ಡಾಯವಾಗಿ 5… ಮುಂದೆ ಓದಿ

ಕೊಕ್ಕಡ : ಪತ್ರಿಕಾ ವರದಿಗಾರರಿಗೆ ಹಲ್ಲೆ

ಕೊಕ್ಕಡ : ಪತ್ರಿಕಾ ವರದಿಗಾರರಿಗೆ ಹಲ್ಲೆ

Thursday, February 23rd, 2017 | Suddi Belthangady | no responses ಕೊಕ್ಕಡ : ಸುದ್ದಿ ಬಿಡುಗಡೆ ಪತ್ರಿಕೆಯ ಗೌರವ ವರದಿಗಾರ, ವಿಜಯ ಕರ್ನಾಟಕ ಪತ್ರಿಕೆಯ… ಮುಂದೆ ಓದಿ

ಬೆಳ್ತಂಗಡಿ : ಸಿಪಿಐ (ಎಂ) ಬೆಳ್ತಂಗಡಿ ತಾಲೂಕು ಸಮಿತಿ ನೇತೃತ್ವದಲ್ಲಿ ಕೇಂದ್ರ ಸರಕಾರದ ಜನವಿರೋದಿ ನೀತಿ ವಿರುದ್ದ ಪ್ರತಿಭಟನೆ

Monday, February 13th, 2017 | Suddi Belthangady | no responses ಬೆಳ್ತಂಗಡಿ : ಕೇಂದ್ರದಲ್ಲಿರುವುದು ಬಿಜೆಪಿ ಸರ್ಕಾರವಲ್ಲ , ಬದಲಾಗಿ ಮೋದಿ-ಅದಾನಿ ಸರ್ಕಾರ ,… ಮುಂದೆ ಓದಿ

ಕೊಕ್ಕಡ ಗ್ರಾ.ಪಂ ಅಧ್ಯಕ್ಷರಿಗೆ ಅವಮಾನ ಡಿ.ವೈ.ಎಫ್.ಐ ಖಂಡನೆ

Monday, February 6th, 2017 | Suddi Belthangady | no responses ಕೊಕ್ಕಡ : ಸರಕಾರದ ನೆರವಿನಿಂದ ನಡೆದ ಸೌತಡ್ಕ ಮಹಾಗಣಪತಿ ದೇವಸ್ಥಾನದ ವಿವಿಧ ಕಾಮಗಾರಿಗಳ… ಮುಂದೆ ಓದಿ

ಮೊಗ್ರು : ದಂಪತಿ ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನ

Friday, January 27th, 2017 | Suddi Belthangady | no responses ಮೊಗ್ರು ಗ್ರಾಮದ ಪರಾರಿ ಎಂಬಲ್ಲಿನ ದಂಪತಿಗಳಾದ ಮೋಹನದಾಸ(30ವ) ಮತ್ತು ಪತ್ನಿ ಲಕ್ಷ್ಮೀ(28ವ) ತಮ್ಮ… ಮುಂದೆ ಓದಿ

ಬೆಳ್ತಂಗಡಿ : ಸರಕಾರಿ ಬಸ್ ಬೈಕ್‌ಗೆ ಡಿಕ್ಕಿ, ಬೈಕ್ ಸವಾರ ಅಪಾಯದಿಂದ ಪಾರು  

Wednesday, January 18th, 2017 | Suddi Belthangady | no responses ಬೆಳ್ತಂಗಡಿ : ಬೆಳ್ತಂಗಡಿ ಬಸ್ ನಿಲ್ದಾಣದ ಬಳಿ ಸರಕಾರಿ ಬಸ್ ಬೈಕ್‌ಗೆ ಹಿಂಬದಿಯಿಂದ… ಮುಂದೆ ಓದಿ

ಕೊಕ್ಕಡ : ಮಾನಸಿಕ ಖಿನ್ನತೆಗೆ ಒಳಗಾಗಿದ್ದ ಕುಟುಂಬ ಸಾಮೂಹಿಕ ಆತ್ಮಹತ್ಯೆ

Thursday, January 5th, 2017 | Suddi Belthangady | no responses ಪುತ್ರ ನಿತ್ಯಾನಂದ ಗೌಡ ಆತ್ಮಹತ್ಯೆ ಮಾಡಿಕೊಂಡ ಲಕ್ಷ್ಮೀ ನಾರಾಯಣ ಭಟ್‌ಎಂಬವರ ಮನೆಯ ಕೆರೆಮುಂದೆ ಓದಿ

ಬೆಳ್ತಂಗಡಿ : ವಿದ್ಯುತ್ ಸ್ಟೇ ವಯರಿಗೆ ಡಿಕ್ಕಿ ಹೊಡೆದ ಕಾರು,  ಸಣ್ಣ ಪುಟ್ಟ ಗಾಯಗಳಿಂದ ಸವಾರರು ಪಾರು

Friday, December 16th, 2016 | Suddi Belthangady | no responses ಬೆಳ್ತಂಗಡಿ : ಇಂದು ಬೆಳಿಗ್ಗೆ 7 ಗಂಟೆ ಸುಮಾರಿಗೆ ಉಜಿರೆ ಟಿ.ಬಿ.ಕ್ರಾಸ್ ಬಳಿ… ಮುಂದೆ ಓದಿ

ಉಜಿರೆ : ದಮಾಸ್ ಗೋಲ್ಡ್ ಜ್ಯುವೆಲ್ಲರಿ ಅಂಗಡಿ ಕಳವಿನ ಆರೋಪಿಗಳ ಬಂಧನ

Tuesday, December 13th, 2016 | Suddi Belthangady | no responses ಉಜಿರೆ : ಜೂ.10ರಂದು ಉಜಿರೆ ಪೇಟೆಯಲ್ಲಿರುವ ದಮಾಸ್ ಗೋಲ್ಡ್ ಜ್ಯುವೆಲ್ಲರಿ ಅಂಗಡಿ ಶಟರ್… ಮುಂದೆ ಓದಿ

ಕೊಯ್ಯೂರು : ಅಪರಿಮಿತ ವಿದ್ಯುತ್ ಪ್ರವಾಹ, ಲಕ್ಷಾಂತರ ರೂ.ನಷ್ಟ

Monday, December 5th, 2016 | Suddi Belthangady | no responses ಕೊಯ್ಯೂರು : ಕೊಯ್ಯೂರು ಗ್ರಾಮದ ಉಣ್ಣಾಲು ಪರಿಸರದಲ್ಲಿ ಭಾರೀ ವಿದ್ಯುತ್ ವ್ಯತ್ಯಯವಾಗಿ ಅಪರಿಮಿತ… ಮುಂದೆ ಓದಿ

ಕಾಪಿನಡ್ಕ : ಕಾರು ಅಪಘಾತದಿಂದ ಬೈಕ್ ನಿಯಂತ್ರಣ ತಪ್ಪಿ ಓರ್ವ ಮೃತ್ಯು

Tuesday, November 29th, 2016 | Suddi Belthangady | no responses ಕಾಪಿನಡ್ಕ : ತಾಲೂಕಿನ ಕಾಪಿನಡ್ಕ ಎಂಬಲ್ಲಿ ಬೈಕ್‌ನಲ್ಲಿ ಫ್ಲೆಕ್ಸ್ ಕೊಂಡುಹೋಗುವ ಸಂದರ್ಭದಲ್ಲಿ ಕಾರು… ಮುಂದೆ ಓದಿ

ಚಾರ್ಮಾಡಿ : ಉಡ ಜಾತಿಯ ಕಾಡು ಪ್ರಾಣಿ ಭೇಟೆ, ಆರೋಪಿಗಳನ್ನು ಬಂಧನಕ್ಕೆ ಒಳಹಪಡಿಸುವಂತೆ ಆದೇಶ

Friday, November 4th, 2016 | Suddi Belthangady | no responses ಚಾರ್ಮಾಡಿ : ಉಡ ಜಾತಿಯ ಕಾಡು ಪ್ರಾಣಿಯನ್ನು ಮಾಂಸ ಮಾಡುವ ಉದ್ದೇಶದಿಂದ ಭೇಟೆಯಾಡಿ… ಮುಂದೆ ಓದಿ

ಗೇರುಕಟ್ಟೆ : ಕುಕ್ಕರ್ ಸಿಡಿದು ಮಕ್ಕಳಿಬ್ಬರಿಗೆ ಗಂಭೀರ ಗಾಯ

Tuesday, November 1st, 2016 | Suddi Belthangady | no responses ಗೇರುಕಟ್ಟೆ : ಗೇರುಕಟ್ಟೆ ಸಮೀಪದ ಬಟ್ಟೆಮಾರುವಿನಲ್ಲಿ ಅ.31ರಂದು ಕುಕ್ಕರ್ ಸಿಡಿದು ಇಬ್ಬರು ಮಕ್ಕಳಿಗೆ… ಮುಂದೆ ಓದಿ

ಬೆಳ್ತಂಗಡಿ : ಆಲಡ್ಕ ವಾಟ್ಸ್ಯಾಪ್ ಗ್ರೂಪ್‌ನಿಂದ ಮನೆ ಹಸ್ತಾಂತರ

Tuesday, November 1st, 2016 | Suddi Belthangady | no responses ಬೆಳ್ತಂಗಡಿ : ವಾಟ್ಸ್ಯಾಪ್ ಗ್ರೂಪ್‌ನ ಸದಸ್ಯರ ಮೊದಲ ಯೋಜನೆಯ ಆಸರೆ ಎಂಬ ಮನೆಯನ್ನು… ಮುಂದೆ ಓದಿ

ಬಿ.ಸಿ.ಎಂ ಇಲಾಖಾ ಉಜಿರೆ ಹಾಸ್ಟೇಲಿನ ಜಾಗ ಖಾಸಗಿ ವ್ಯಕ್ತಿಯಿಂದ ಅತಿಕ್ರಮಣ : ರೂ.43 ಲಕ್ಷಕ್ಕೆ ಮಾರಾಟ

Thursday, October 27th, 2016 | Suddi Belthangady | no responses ತ್ರೈಮಾಸಿಕ ಕೆಡಿಪಿ ಸಭೆ ಬೆಳ್ತಂಗಡಿ : ಬಿ.ಸಿ.ಎಂ. ಇಲಾಖೆಗೆ ಸೇರಿದ ಉಜಿರೆಯ ಮೆಟ್ರಿಕ್… ಮುಂದೆ ಓದಿ

ಗುರಿಪಳ್ಳ : ನಿಯಂತ್ರಣ ತಪ್ಪಿ ಕೆರೆಯಲ್ಲಿ ಬಿದ್ದು ಇಬ್ಬರ ಮರಣ

Monday, October 24th, 2016 | Suddi Belthangady | no responses ಸಂಧ್ಯಾ (ಕೆಲಸದಾಕೆ ) ನಾವಳೆ ರಾಮಚಂದ್ರ ಹೆಬ್ಬಾರ್ ಗುರಿಪಳ್ಳ : ನಿಡ್ಗಲ್- ಗುರಿಪಳ್ಳ… ಮುಂದೆ ಓದಿ

ರೆಂಕೆದಗುತ್ತು : 6 ತಿಂಗಳಿಂದ ತಾಯಿಯಿಂದಲೇ ಪುತ್ರಿಗೆ ಹಿಂಸೆ

Saturday, October 22nd, 2016 | Suddi Belthangady | no responses ಬೆಳ್ತಂಗಡಿ : ಬೆಳ್ತಂಗಡಿಯ ರೆಂಕೆದಗುತ್ತು ಎಂಬಲ್ಲಿ ತಾಯಿಯೊಬ್ಬಳು ಪುತ್ರಿಗೆ ಕಳೆದ 6ತಿಂಗಳಿಂದ ಹಿಂಸಿಸುತ್ತಿರುವುದು… ಮುಂದೆ ಓದಿ

ಚೆಕ್‌ಬೌನ್ಸ್ ಪ್ರಕರಣ :  ನಗರ ಪಂಚಾಯತ್ ಮುಖ್ಯಾಧಿಕಾರಿ ಜೆಸಿಂತ ಲೂಯಿಸ್‌ ಬಂಧನ

Tuesday, October 18th, 2016 | Suddi Belthangady | no responses ಬೆಳ್ತಂಗಡಿ : ಚೆಕ್‌ಬೌನ್ಸ್ ಪ್ರಕರಣವೊಂದಕ್ಕೆ ಸಂಬಂಧಿಸಿದಂತೆ ಬೆಳ್ತಂಗಡಿ ನಗರ ಪಂಚಾಯತ್ ಮುಖ್ಯಾಧಿಕಾರಿ ಜೆಸಿಂತ… ಮುಂದೆ ಓದಿ

ಮದ್ದಡ್ಕ-ಮುದಲೆ-ಕುದ್ರಂಜ-ಕೆಲ್ಲಾರೆ ರಸ್ತೆ ಬೇಡಿಕೆ - ಹಗ್ಗದ ಮೇಲಿನ ಮಕ್ಕಳ ಬದುಕು ಸಾರ್ವಜನಿಕ ರಸ್ತೆಗಾಗಿ ಭೂಮಿ ಬಿಟ್ಟುಕೊಡಲು ಮುಂದಾಗಿರುವ ಜಮೀನುದಾರರು

ಮದ್ದಡ್ಕ-ಮುದಲೆ-ಕುದ್ರಂಜ-ಕೆಲ್ಲಾರೆ ರಸ್ತೆ ಬೇಡಿಕೆ – ಹಗ್ಗದ ಮೇಲಿನ ಮಕ್ಕಳ ಬದುಕು ಸಾರ್ವಜನಿಕ ರಸ್ತೆಗಾಗಿ ಭೂಮಿ ಬಿಟ್ಟುಕೊಡಲು ಮುಂದಾಗಿರುವ ಜಮೀನುದಾರರು

Thursday, October 13th, 2016 | Suddi Belthangady | no responses ಅಚ್ಚು ಮುಂಡಾಜೆ…ನಮ್ಮ 40 ಸೆಂಟ್ಸ್ ಭೂಮಿ
ಬಿಟ್ಟು ಕೊಡುತ್ತೇವೆ: ಮುಹಮ್ಮದ್ ನಮ್ಮ ಮುಂದೆ ಓದಿ

ಸೌಜನ್ಯ ಅತ್ಯಾಚಾರ ಮತ್ತು ಕೊಲೆ ಪ್ರಕರಣದ ನ್ಯಾಯ ವಿಳಂಬನೆಯ ವಿರುದ್ಧ ಕ್ಯಾಂಪಸ್ ಫ್ರಂಟ್ ಆಫ್ ಇಂಡಿಯಾ ವತಿಯಿಂದ ಪ್ರತಿಭಟನೆ

Monday, October 10th, 2016 | Suddi Belthangady | no responses ಸೌಜನ್ಯ ಅತ್ಯಾಚಾರ ಮತ್ತು ಕೊಲೆ ಪ್ರಕರಣದ ನ್ಯಾಯ ವಿಳಂಬನೆಯ ವಿರುದ್ಧ ಕ್ಯಾಂಪಸ್ ಫ್ರಂಟ್… ಮುಂದೆ ಓದಿ

ಕೊಕ್ರಾಡಿ: ಖೋಖೋ ಪಂದ್ಯಾಟದಲ್ಲಿ ರಾಜ್ಯಮಟ್ಟಕ್ಕೆ ಆಯ್ಕೆಯಾಗಿದ್ದ ಪಿ.ಯು.ಸಿ ವಿದ್ಯಾರ್ಥಿನಿ ಸುಶ್ಮಿತಾ ಬಾವಿಗೆ ಹಾರಿ ಆತ್ಮೆಹತ್ಯೆ

Saturday, October 8th, 2016 | Suddi Belthangady | no responses ಸುಶ್ಮಿತಾ ಖೋಖೋ ಪಂದ್ಯಾವಳಿಯಲ್ಲಿ ರಾಜ್ಯ ಮಟ್ಟಕ್ಕೆ ಆಯ್ಕೆಗೊಂಡಿದ್ದ ಪ್ರತಿಭಾವಂತ ವಿದ್ಯಾರ್ಥಿನಿ ಬಾವಿಗೆ ಹಾರಿ… ಮುಂದೆ ಓದಿ

ಬೆಳ್ತಂಗಡಿ : ದಲಿತ ಯುವತಿಯ ಅತ್ಯಾಚಾರ, ಯುವಕನ ಬಂಧನ

Saturday, October 1st, 2016 | Suddi Belthangady | no responses ಬೆಳ್ತಂಗಡಿ : ದಲಿತ ಯುವತಿಯನ್ನು ಅತ್ಯಾಚಾರ ಮಾಡಿ ಗರ್ಭಿಣಿ ಮಾಡಿದ ಯುವಕನನ್ನು ಬಂದಿಸಲಾಗಿದೆ.… ಮುಂದೆ ಓದಿ

ಸವಣಾಲು : ಹೊಳೆಯಲ್ಲಿ ಸ್ನಾನಕ್ಕೆ ಹೋಗಿದ್ದ ಯುವಕ ಮೃತ

Friday, September 30th, 2016 | Suddi Belthangady | no responses ಸವಣಾಲು : ಸೆ.29ರಂದು ಬೆಳಿಗ್ಗೆ ಸವಣಾಲು ಹೊಳೆಯಲ್ಲಿ ಸ್ನಾನಕ್ಕೆ ಹೋಗಿದ್ದ ಯುವಕ ನೀರಿನಲ್ಲಿ… ಮುಂದೆ ಓದಿ

ಬೆಳ್ತಂಗಡಿ : ಗುರುವಾಯನಕೆರೆ ಉಪಕೇಂದ್ರದಲ್ಲಿ ತುರ್ತು ಕಾಮಗಾರಿಯನ್ನು ಕೈಗೊಳ್ಳಬೇಕಾದ ಹಿನ್ನಲೆಯಲ್ಲಿ ಎ. 26 ಮತ್ತು 28ರಂದು ಗುರುವಾಯನಕೆರೆ ಉಪಕೇಂದ್ರದಿಂದ ಹೊರಹೊಮ್ಮುವ ವೇಣೂರು ಮತ್ತು ಆರಂಬೋಡಿ ಫೀಡರ್‌ಗಳಲ್ಲಿ ಬೆಳಿಗ್ಗೆ 9.00ರಿಂದ ಸಂಜೆ 5.00ರ ತನಕ ವಿದ್ಯುತ್ ನಿಲುಗಡೆಯಾಗಲಿದೆ ಎಂದು ಮೆಸ್ಕಾಂ ಪ್ರಕಟಣೆಯಲ್ಲಿ ತಿಳಿಸಿದೆ.

beo1

beoಬೆಳ್ತಂಗಡಿ: ಶಿಕ್ಷಕರ ವಿವಿಧ ಬೇಡಿಕೆಗಳನ್ನು ಮುಂದಿಟ್ಟು ಅಖಿಲ ಭಾರತ ಪ್ರಾಥಮಿಕ ಶಿಕ್ಷಕರ ಫೆಡರೇಶನ್ ವತಿಯಿಂದ ರಾಷ್ಟ್ರಾಧ್ಯಂತ ಹೋರಾಟಗಳನ್ನು ನಡೆಸಲಾಗುತ್ತಿದ್ದು ಅದರ ಎರಡನೇ ಹಂತದ ಕಾರ್ಯಕ್ರಮವಾಗಿ ಎ. 25 ರಂದು ದೇಶಾಧ್ಯಂತ ಎಲ್ಲಾ ಶಿಕ್ಷಣ ಇಲಾಖೇ ಕಚೇರಿ ಮುಂದೆ ಶಿಕ್ಷಕರ ಏಕದಿನ ಮೌನ ಧರಣಿ ನಡೆಯಲಿದ್ದು ಈ ಹಿನ್ನೆಲೆಯಲ್ಲಿ ಬೆಳ್ತಂಗಡಿ ಬಿಇಒ ಕಚೇರಿ ಎದುರು ಕೂಡ ನಡೆಯಿತು.
7ನೇ ವೇತನ ಆಯೋಗದ ಶಿಫಾರಸ್ಸುಗಳನ್ನು ಎಲ್ಲಾ ರಾಜ್ಯಗಳಲ್ಲಿ ಜಾರಿಗೆ ತರಬೇಕು, ನೂತನ ಪಿಂಚಣಿ ಯೋಜನೆ ರದ್ದುಗೊಳಿಸಿ ಹಳೇ ಪಿಂಚಣಿ ಯೋಜನೆ ಜಾರಿಗೆ ತರಬೇಕು, ಪ್ರಾಥಮಿಕ ಶಿಕ್ಷಣ ಮಂಡಳಿ ರಚಿಸಬೇಕು, ರಾಜ್ಯದ ಎಲ್ಲಾ ಶಾಲೆಗಳಲ್ಲಿ ಪೂರ್ವ ಪ್ರಾಥಮಿಕ ಶಿಕ್ಷಣ ಎಲ್‌ಕೆಜಿ, ಯುಕೆಜಿ ಆರಂಭಿಸಬೇಕು, ಶಾಲೆಗೊಬ್ಬ ಮುಖ್ಯೋಪಾಧ್ಯಾಯ ನೇಮಕ, ಶಿಕ್ಷಕ ಶಿಕ್ಷಕಿ ವಿದ್ಯಾರ್ಥಿ ಅನುಪಾತ ಮಾಡಬೇಕು ಎಂಬಿತ್ಯಾಧಿ ಪ್ರಮುಖ ಬೇಡಿಕೆಗಳು ಈ ಬಾರಿಯ ಹೋರಾಟದಲ್ಲಿತ್ತು.

beet rokars copyಬೆಳ್ತಂಗಡಿ: ಬೀಟ್ ರಾಕರ‍್ಸ್ ಡ್ಯಾನ್ಸ್ ಅಕಾಡೆಮಿ ಬೆಳ್ತಂಗಡಿ ಇದರ 6ನೇ ವರ್ಷದ ವಾರ್ಷಿಕೋತ್ಸವದ ಪ್ರಯುಕ್ತ ಎ. 22 ರಂದು ಬೆಳ್ತಂಗಡಿ ಮಾರಿಗುಡಿ ಮೈದಾನದಲ್ಲಿ ಬೆಳಕು ಶಬ್ಧತರಂಗದ ಅದ್ಭುತ ನೃತ್ಯ ಸಂಗೀತ ಸೆಲೆಬ್ರೆಟಿ ನೈಟ್ ವಿಶೇಷ ಕಾರ್ಯಕ್ರಮ, ರಾಜ್ಯ ಮಟ್ಟದ ಡ್ಯಾನ್ಸ್ ಸ್ಪರ್ಧೆಯೊಂದಿಗೆ ನಡೆಯಿತು.
ಅಧ್ಯಕ್ಷತೆಯನ್ನು ಕರಾವಳಿ ಕರ್ನಾಟಕ ಡ್ಯಾನ್ಸ್ ಅಕಾಡಮಿ ಯೂನಿಯನ್ ಅಧ್ಯಕ್ಷ ರಾಜೇಶ್ ಕಣ್ಣೂರು ವಹಿಸಿದ್ದರು.
ಮುಖ್ಯ ಅತಿಥಿಗಳಾಗಿ ಪಟ್ಟಣ ಪಂಚಾಯತ್ ಅಧ್ಯಕ್ಷ ಮುಗುಳಿ ನಾರಾಯಣ ರಾವ್, ಅನುಗ್ರಹ ಟ್ರೈನಿಂಗ್ ಕಾಲೇಜಿನ ಪ್ರಾಂಶುಪಾಲ ತಲ್‌ಹತ್ ಎಂ. ಜಿ, ಜೇಸಿಐ ಬೆಳ್ತಂಗಡಿ ಮಂಜುಶ್ರೀ ಅಧ್ಯಕ್ಷ ಸಂತೋಷ್ ಪಿ ಕೋಟ್ಯಾನ್, ಹೈಕೋರ್ಟ್ ನ್ಯಾಯವಾದಿ ಹರೀಶ್ ಪೂಂಜ, ಸುವರ್ಣ ಸಾಂಸ್ಕೃತಿಕ ಪ್ರತಿಷ್ಠಾನದ ಅಧ್ಯಕ್ಷ ಸಂಪತ್ ಬಿ ಸುವರ್ಣ, ತುಳು ಚಲನಚಿತ್ರ ನಿರ್ಮಾಪಕ ಹರೀಶ್ ರಾವ್, ಸಕಲೇಶ್‌ಪುರದ ರಿದಂ ಕೀಪಝ್ ಡ್ಯಾನ್ಸ್ ಅಕಾಡಮಿ ಅಧ್ಯಕ್ಷ ಕೃಷ್ಣೇ ಗೌಡ, ರಾಜ್ಯ ಸರಕಾರಿ ನೌಕರರ ಸಂಘದ ಸದಸ್ಯ ಕೆ ಧರಣೇಂದ್ರ ಕುಮಾರ್ ಜೈನ್, ಹೋಲಿ ರಿಡೀಮರ್ ಆಂಗ್ಲ ಮಾಧ್ಯಮ ಶಾಲೆ ಬೆಳ್ತಂಗಡಿಯ ಮುಖ್ಯೋಪಾಧ್ಯಾಯ ರೆ. ಫಾ ಅನಿಲ್ ಪ್ರಕಾಶ್ ಡಿಸಿಲ್ವ ಇವರುಗಳು ಶುಭ ಕೋರಿದರು.

beet rokars karate copyಬೆಳ್ತಂಗಡಿ: ಬೀಟ್ ರಾಕರ‍್ಸ್ ಡ್ಯಾನ್ಸ್ ಅಕಾಡಮಿ ಮತ್ತು ಶ್ರೀ ಸಾಯಿ ಕಾಸ್ಟ್ಯೂಮ್ಸ್ ವರ್ಲ್ಡ್ ಎಂಬ ಹೆಸರಿನಲ್ಲಿ ಬೆಳ್ತಂಗಡಿಯಲ್ಲಿ ಕಳೆದ ೬ ವರ್ಷಗಳಿಂದ ಕಾರ್ಯಾಚರಿಸುತ್ತಿರುವ ಸಂಸ್ಥೆಯ ವತಿಯಿಂದ ಮುಂದಕ್ಕೆ ಅನುಭವಿ ಕರಾಟೆ ಶಿಕ್ಷಕರಿಂದ ಕರಾಟೆ ತರಬೇತಿ ನೀಡಲು ಮತ್ತು ಕಲಾಸಕ್ತ ವಿದ್ಯಾರ್ಥಿಗಳಿಗೆ ನಾಟಕ ಮತ್ತು ರಂಗ ಅಭಿನಯ ತರಬೇತಿ ನೀಡುವ ವಿಭಾಗವು ಎ. 22 ರಂದು ಉದ್ಘಾಟನೆಗೊಂಡಿತು.
ಜೇಸಿಐ ಬೆಳ್ತಂಗಡಿ ಮಂಜುಶ್ರೀ ಇದರ ಪೂರ್ವಾಧ್ಯಕ್ಷ, ಸಂಘಟಕ ಹಾಗೂ ಉದ್ಯಮಿ ಪ್ರಮೋದ್ ಆರ್ ನಾಯಕ್ ಉದ್ಘಾಟನೆ ನೆರವೇರಿಸಿದರು. ಈ ಸಂದರ್ಭ ಜೇಸಿಐ ವಲಯಾಧ್ಯಕ್ಷ ಚಿದಾನಂದ ಇಡ್ಯ, ಸುದ್ದಿ ಬಿಡುಗಡೆ ವ್ಯವಸ್ಥಾಪಕ ಮಂಜುನಾಥ ರೈ, ಬೀಟ್ ರಾಕರ‍್ಸ್ ಡ್ಯಾನ್ಸ್ ಅಕಾಡಮಿ ಮುಖ್ಯಸ್ಥ ಜಿತೇಶ್ ಕುಮಾರ್, ಕರಾಟೆ ತರಬೇತುದಾರರು ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.

arasinamakki7

arasinamakki4 copy

arasinamakki5

arasinamakki6

arasinamakki

arasinamakki1

arasinamakki2

arasinamakki3ಅರಸಿನಮಕ್ಕಿ ಶ್ರೀನಿವಾಸ ಕಲ್ಯಾಣೋತ್ಸವವು ವಿಜೃಂಭಣೆಯಿಂದ ಎ. 22ರಂದು ನಡೆಯಿತು.

barengayaನಿಡ್ಲೆ : ನಿಸರ್ಗ ಯುವಜನೇತರ ಮಂಡಲ(ರಿ) ಬರೆಂಗಾಯ ಹಾಗೂ ದ.ಕ ಜಿಲ್ಲಾ ಅಮೆಚ್ಯೂರ್ ಜಿಲ್ಲಾ ಕಬಡ್ಡಿ ಅಸೋಸಿಯೇಷನ್ (ರಿ) ಇದರ ಸಹಯೋಗದೊಂದಿಗೆ ದ.ಕ, ಉಡುಪಿ, ಕಾಸರಗೊಡು ಜಿಲ್ಲೆಯ ೭೦ಕೆ.ಜಿ ವಿಭಾಗದ ಪುರುಷರ ಅಂತರ್ ಜಿಲ್ಲಾ ಮಟ್ಟದ ಹೊನಲು ಬೆಳಕಿನ ಕಬಡ್ಡಿ ಪಂದ್ಯಾಟವು ಹಿ.ಪ್ರಾ ಶಾಲೆ ಬರೆಂಗಾಯದಲ್ಲಿ ಎ. 22ರಂದು ಜರಗಿತು.
ನಿಡ್ಲೆ ಗ್ರಾ.ಪಂ ಅಧ್ಯಕ್ಷರಾದ ಶ್ರೀಮತಿ ಶುಭ ದೇವಧರ್ ಅಧ್ಯಕ್ಷತೆ ವಹಿಸಿದ್ದರು. ಬೆಂಗಳೂರು ಹೈಕೋರ್ಟ್ ನ್ಯಾಯಾವಾದಿ ಹರೀಶ್ ಪೂಂಜ ಕಾರ್ಯಕ್ರಮ ಉದ್ಘಾಟಿಸಿದರು. ಮುಖ್ಯ ಅತಿಥಿಗಳಾಗಿ ಬೆಳ್ತಂಗಡಿ ಸಹಾಯಕ ಯುವ ಸಬಲೀಕರಣ ಮತ್ತು ಕ್ರೀಡಾಧಿಕಾರಿ ಪ್ರಭಾಕರ ನಾರಾವಿ, ಕಳೆಂಜ ಗ್ರಾ.ಪಂ ಸದಸ್ಯೆ ಶ್ರೀಮತಿ ಸುಶೀಲ ವಸಂತ ಗೌಡ, ನಿಡ್ಲೆ ಗ್ರಾ.ಪಂ ಉಪಾಧ್ಯಕ್ಷ ರುಕ್ಮಯ ಪೂಜಾರಿ ಪೊರ್ಕಳ, ನಿಡ್ಲೆ ಗ್ರಾ.ಪಂ ಸದಸ್ಯರಾದ ಹರೀಶ್ ಪೊಂರ್ದಿಲ, ಶ್ರೀಮತಿ ಲಲಿತಾ, ಬರೆಂಗಾಯ ನಿಸರ್ಗ ಯುವ ಜನೇತರ ಮಂಡಲ ಅಧ್ಯಕ್ಷರಾದ ಪುನೀತ್ ಪೊಂರ್ದಿಲ, ಬರೆಂಗಾಯ ಶಾಲಾ ಎಸ್.ಡಿ.ಎಂ.ಸಿ ಅಧ್ಯಕ್ಷ ಕೃಷ್ಣ ಕುಮಾರ್ ಕಾಟ್ಲ, ಬರೆಂಗಾಯ ಜ್ಯೋತಿ ಹಳೆ ವಿದ್ಯಾರ್ಥಿ ಸಂಘದ ಅಧ್ಯಕ್ಷ ಹೇಮಂತ್ ಗೌಡ ಕಜೆ, ಬರೆಂಗಾಯ ಶ್ರೀಕೃಷ್ಣ ಜನ್ಮಾಷ್ಟಮಿ ಸಮಿತಿ ಅಧ್ಯಕ್ಷ ಪ್ರವೀಣ್ ಹೆಬ್ಬರ್ ಪೊಂರ್ದಿಲ ಆಗಮಿಸಿದ್ದರು. ವೇದಿಕೆಯಲ್ಲಿ ತಾ.ಪಂ ಮಾಜಿ ಉಪಾಧ್ಯಕ್ಷ ವಿಷ್ಣು ಮರಾಠೆ, ಸನ್ಮಾನಗೊಳ್ಳಲಿದ್ದ ಬರೆಂಗಾಯ ಹಿ.ಪ್ರಾ ಶಾಲಾ ಮುಖ್ಯೋಪಾಧ್ಯಾಯ ಗೋಪಾಲ, ಮೂಡಬಿದ್ರೆ ಆಳ್ವಾಸ್ ಶಿಕ್ಷಣ ಸಂಸ್ಥೆಯ ಕನ್ನಡ ಉಪನ್ಯಾಸಕರಾದ ಚಂದ್ರಶೇಖರ್ ಗೌಡ ಕಜೆ ಉಪಸ್ಥಿತರಿದ್ದರು.

mundajeಮುಂಡಾಜೆ : ಯಂಗ್ ಚಾಲೆಂಜರ‍್ಸ್ ಕ್ರೀಡಾ ಸಂಘ ಮುಂಡಾಜೆ ಇದರ ವತಿಯಿಂದ ಆರ್.ಎನ್. ಭಿಡೆ ಸ್ಮರಣಾರ್ಥ ಇಂದು(ಎ.22) ಓವರ್ ಆರ್ಮ್ ಕ್ರಿಕೆಟ್ ಪಂದ್ಯಾಟದ ಉದ್ಘಾಟನಾ ಸಮಾರಂಭವು ಭಿಡೆ ನಾರಾಯಣ ಭಟ್ ಕ್ರೀಡಾಂಗಣ ಜೂನಿಯರ್ ಕಾಲೇಜು ಮುಂಡಾಜೆಯಲ್ಲಿ ನಡೆಯಿತು.
ಕಾರ್ಯಕ್ರಮದ ಉದ್ಘಾಟನೆಯನ್ನು ನ್ಯಾಯವಾದಿ ಶೈಲೇಶ್ ಠೋಸರ್ ನೆರವೇರಿಸಿದರು. ಅಧ್ಯಕ್ಷತೆಯನ್ನು ಯಂಗ್ ಚಾಲೆಂಜರ‍್ಸ್ ಕ್ರೀಡಾ ಸಂಘದ ಅಧ್ಯಕ್ಷ ಆಶ್ರಫ್ ಆಲಿಕುಂಞ ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ಮುಂಡಾಜೆ ಗ್ರಾ.ಪಂ ಸದಸ್ಯರುಗಳಾದ ನಾರಾಯಣ ಗೌಡ ದೇವಸ್ಯ, ಚೆನ್ನಕೇಶವ ನಾಯ್ಕ, ಸುರೇಶ್ ಹೆಗ್ಡೆ, ಗಣೇಶ್ ಬಂಗೇರ, ಮುಂಡಾಜೆ ಶತಾಬ್ದಿ ವಿದ್ಯಾಲಯ ಸಮಿತಿ ಜೊತೆ ಕಾರ್ಯದರ್ಶಿ ಅರವಿಂದ ಹೆಬ್ಬಾರ್ ಭಾಗವಹಿಸಿದ್ದರು. ಯಂಗ್ ಚಾಲೆಂಜರ‍್ಸ್ ಕ್ರೀಡಾ ಸಂಘದ ಸಂಚಾಲಕ ನಾಮದೇವ ರಾವ್, ಶಶಿಧರ ಠೋಸರ್ ಉಪಸ್ಥಿತರಿದ್ದರು.

charmadi.jpg1

charmadiಚಾರ್ಮಾಡಿ : ಗುರುವಾರ ಮಧ್ಯರಾತ್ರಿ ಮಂಗಳೂರಿನಿಂದ ಭದ್ರಾವತಿ ಕಡೆ ತೆರಳುತ್ತಿದ್ದ ಡಿಸೇಲ್ ಟ್ಯಾಂಕರ್ ಚಾರ್ಮಾಡಿ ಘಾಟಿಯಲ್ಲಿ ಪ್ರಪಾತಕ್ಕೆ ಬಿದ್ದು,  ಜಖಂಗೊಂಡಿದೆ. ಚಾಲಕನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.

gerukatte

gerukatte1ಗೇರುಕಟ್ಟೆ : ಕೋಳಿ ಸಾಗಾಟ ಮಾಡುತ್ತಿದ್ದ ಪಿಕಪ್ ವಾಹನ ಮಗುಚಿ ಬಿದ್ದ ಘಟನೆ ಗೇರುಕಟ್ಟೆಯ ರೇಶ್ಮೆ ಕ್ರಾಸ್ ಬಳಿ ನಡೆದಿದೆ.

Bisu Jathre Photo copy

Bisu Jathre Photo copy1

Bisu Jathre Photo copy2ಉಜಿರೆ: ವಿಷು ಜಾತ್ರೆ ಸಂದರ್ಭ ಧರ್ಮಸ್ಥಳದಲ್ಲಿ ಗುರುವಾರ ರಾತ್ರಿ ಬ್ರಹ್ಮರಥೋತ್ಸವ ನಡೆಯಿತು.
ರಾಜ್ಯ ವಿವಿಧ ಭಾಗಗಳಿಂದ ಬಂದ ಸುಮಾರು ಇನ್ನೂರು ಮಂದಿ ಕಲಾವಿದರು ಶಂಖ, ತಾಳ, ಬ್ಯಾಂಡ್, ಚೆಂಡೆ ವಾದನದ ಮೂಲಕ ಕಲಾ ಸೇವೆ ಮಾಡಿದರು. ಸಹಸ್ರಾರು ಮಂದಿ ಭಕ್ತಾದಿಗಳು ರಥೋತ್ಸವ ವೀಕ್ಷಿಸಿ ಧನ್ಯತೆ ಪಡೆದರು.

¸swacchthe

sw

WhatsApp Image 2017-04-21 at 11.18ಗುರುವಾಯನಕೆರೆಯಲ್ಲಿ ಎಸ್.ಡಿ.ಎಂ ವಿದ್ಯಾರ್ಥಿಗಳಿಂದ ಹಾಗೂ ಊರ ಸಂಘ ಸಂಸ್ಥೆಗಳಿಂದ ಸ್ವಚ್ಛತಾ ಕಾರ್ಯಕ್ರಮವು ಇಂದು ನಡೆಯಿತು.

adike mara yanthra copyಉಜಿರೆ: ಇಲ್ಲಿನ ಎಸ್‌ಡಿಎಂ ಪಾಲಿಟೆಕ್ನಿಕ್ ಕಾಲೇಜಿನ ವಿದ್ಯಾರ್ಥಿಗಳು ಕೃಷಿ ಕೆಲಸಕ್ಕೆ ಪೂರಕವಾಗಿರುವ ಮತ್ತು ಅತ್ಯಂತ ಕಡಿಮೆ ದರದಲ್ಲಿ ಬಳಕೆ ಮಾಡಬಹುದಾದ ರೀತಿಯ ಕೆಲವೊಂದು ಯಂತ್ರೋಪಕರಣಗಳನ್ನು ತಮ್ಮದೇ ಕಲ್ಪನೆಯಲ್ಲಿ ಆವಿಷ್ಕರಿಸಿದ್ದು ಉತ್ತಮ ಮಾರುಕಟ್ಟೆ ಕೇಂದ್ರೀಕರಿಸುವ ಎಲ್ಲಾ ಅರ್ಹತೆಗಳನ್ನು ಪಡೆದುಕೊಂಡಿದೆ.
ವಿದ್ಯಾರ್ಥಿಗಳು ತಯಾರುಗೊಳಿಸಿದ ಕೆಲವೊಂದು ಆವಿಷ್ಕಾರಗಳಲ್ಲಿ ಅಡಿಕೆ ಮರಕ್ಕೆ ಹತ್ತುವ ಮತ್ತು ಔಷಧಿ ಸಿಂಪಡಿಸುವ ಯಂತ್ರವೂ ಒಂದು.
ಈ ಪ್ರಾಜೆಕ್ಟ್‌ಗೆ ಕೇವಲ 10 ಸಾವಿರ ರೂ. ಗಳು ಮಾತ್ರ ಖರ್ಚು ತಗುಲಲಿದೆ.
ಆವಿಷ್ಕಾರ ತಂಡದ ಸದಸ್ಯ ವಿದ್ಯಾರ್ಥಿಗಳು ಯಾರ‍್ಯಾರು?
ಭರತ್ ಎಚ್, ಅಕಾಶ್ ಕೆ, ಅಶ್ವಿನಿ, ದರ್ಶನ್ ಕುಮಾರ್, ದಿವ್ಯಾ ಎಸ್, ಮತ್ತು ಉತ್ತಮ್ ಎನ್ ಇವರ ತಂಡ ಈ ಆವಿಷ್ಕಾರ ನಡೆಸಿ ಯಶಸ್ಸು ಸಾಧಿಸಿದೆ. ಇವರಿಗೆ ಅವನೀಶ್ ಅವರು ಮಾರ್ಗದರ್ಶನ ನೀಡಿದ್ದಾರೆ. ಈ ಯಂತ್ರವು ಸುಲಭವಾಗಿ ಅಡಿಕೆ ಮರ ಹತ್ತಲು ಮತ್ತು ಅಡಿಕೆ ಬೆಳೆಗೆ ಕೀಟ ನಾಶಕ ಸಿಂಪಡಿಸಲು ಸಹಾಯಕವಾಗಿ ಕಾರ್ಯನಿರ್ವಹಿಸುತ್ತದೆ.
ಉಪಯೋಗಗಳು:
ಇಂದಿನ ದಿನಗಳಲ್ಲಿ ಅಡಿಕೆ ಮರಕ್ಕೆ ಮದ್ದನ್ನು ಸಿಂಪಡಿಸುವುದು ಕಷ್ಟವಾಗಿದೆ. ಅದನ್ನು ಅರಿತು ಈ ಯಂತ್ರ ಸಿದ್ದಪಡಿಸಲಾಗಿದೆ. 12 ವೋಲ್ಟ್ ವೈಪರ್ ಮೋಟಾರು ಬಳಸಿಕೊಂಡು ಮೇಲಕ್ಕೆ ಹತ್ತುವ ಅತ್ಯಂತ ಸರಳ ಮಾದರಿಯಿಂದ ರೂಪಿತವಾಗಿದೆ. ಕೇಲವ ಎರಡೇ ನಿಮಿಷದಲ್ಲಿ ಅಡಿಕೆ ಮರ ಏರುವ ಸಾಮರ್ಥ್ಯ ಹೊಂದಿರುವ ಈ ಯಂತ್ರ ಡಿ.ಸಿ ಮೋಟರನ್ನು ಬಳಸಿ ಲಂಬವಾಗಿ ಮತ್ತು ಅಡ್ಡವಾಗಿ, ಒಂದು ಅಡಿಕೆ ಮರ ಕೇಂದ್ರೀಕರಿಸಿ ಪಕ್ಕದ 7-8 ಮರಗಳಿಗೆ ಕೀಟನಾಶಕ ಸಿಂಪಡಿಸುವ ಸಾಮರ್ಥ್ಯ ಹೊಂದಿದೆ.
ಸೆಲ್ಫ್ ಲುಕ್ಕಿಂಗ್ ನಿಯಮದ ಪ್ರಕಾರ ಕಾರ್ಯನಿರ್ವಹಿಸುವ ಈ ಯಂತ್ರವು ಪರಿಸರ ಸ್ನೇಹಿಯಾಗಿದ್ದು 12 ವೋಲ್ಟೇಜ್ ಬ್ಯಾಟರಿ ಮೂಲಕವೂ ಕಾರ್ಯನಿರ್ವಹಿಸುವ ಕ್ಷಮತೆ ಹೊಂದಿದೆ. ಕೇವಲ ಎರಡೇ ಸೆಕುಂಡುಗಳಲ್ಲಿ ಮರಕ್ಕೆ ಯಂತ್ರವನ್ನು ಅಳವಡಿಸಬಹುದಾಗಿದೆ. ಯಂತ್ರಕ್ಕೆ ನೆಲದಿಂದ ಕೀಟ ನಾಶಕವನ್ನು ಪವರ್ ಸ್ಪ್ರೇಯರ್ ಅಥವಾ ಗಟರ್ ಪಂಪ್‌ನ ಮೂಲಕ ಪೈಪ್‌ಮೂಲಕ ಕಳುಹಿಸಿಕೊಡಬಹುದಾಗಿದೆ. ಇದರ ನಿಯಂತ್ರಣವನ್ನು ಕೇವಲ ಒಬ್ಬನೇ ವ್ಯಕ್ತಿ ಮಾಡಬಹುದಾಗಿದ್ದು, ಅಡಿಕೆ ಕೃಷಿ ಕ್ಷೇತ್ರದಲ್ಲಿ ಬಹಳ ಬೇಡಿಕೆಯ ಕೂಲಿ ಕಾರ್ಮಿಕರ ಕೊರತೆಯ ಜಾಗವನ್ನು ಈ ಯಂತ್ರ ತುಂಬುವುದರಲ್ಲಿ ಸಂದೇಹವಿಲ್ಲ.
ಇದೇ ಯಂತ್ರದ ಮೂಲಕ ಮುಂದಕ್ಕೆ ಗೊನೆ ಕೀಳುವುದು ಮತ್ತು ಕಂಪ್ಯೂಟರೀಕೃತವಾಗಿ ಅಭಿವೃದ್ಧಿ ಪಡಿಸುವ ಉದ್ಧೇಶವಿದೆ ಎಂದು ಪ್ರಾಧ್ಯಾಪಕರಾದ ಅವನೀಶ್ ಅವರು ತಿಳಿಸುತ್ತಾರೆ.

thrisha copyಕನ್ಯಾಡಿ 1 ಇಲ್ಲಿಯ ಕಂಬಳದಡ್ಡ ಮನೆಯ ಸುರೇಶ್ ಗೌಡ ಮತ್ತು ಸತ್ಯ ದಂಪತಿಯ ಪುತ್ರಿ ತ್ರಿಶಾಳ 3ನೇ ವರ್ಷದ ಹುಟ್ಟುಹಬ್ಬವನ್ನು ಎ. 17ರಂದು ಆಚರಿಸಲಾಯಿತು.

bhavish copyಚಿಬಿದ್ರೆ ಗ್ರಾಮದ ಪೆರಿಯಡ್ಕ ಬರಮೇಲು ಮನೆ ಲಕ್ಷ್ಮಣ ಗೌಡ ಮತ್ತು ವೇದಾವತಿ ದಂಪತಿ ಪುತ್ರ ಭವಿಷ್‌ನ 5ನೇ ವರ್ಷದ ಹುಟ್ಟುಹಬ್ಬವನ್ನು ಎ. 12ರಂದು ಆಚರಿಸಲಾಯಿತು.

samyuk copyಲಾಯಿಲ ಗ್ರಾಮದ ಸುರುಳಿ ಸ್ಫೂರ್ತಿ ನಿಲಯ ಗಣೇಶ್ ಶೆಟ್ಟಿ ಮತ್ತು ವಿಶಾಲಾಕ್ಷಿ ದಂಪತಿ ಪುತ್ರ ಸಮ್ಯಕ್ ಜಿ. ಶೆಟ್ಟಿ ಯ ಮೊದಲನೇ ವರ್ಷದ ಹುಟ್ಟುಹಬ್ಬ ಎ. 11ರಂದು ಜರಗಿತು.

baby copyಬಜಿರೆ ಗ್ರಾಮದ ಹೊಸಪಟ್ಣ ಹೊಸವಕ್ಲು ಮಜಲು  ದಯಾನಂದ ಪೂಜಾರಿ ಮತ್ತು ಶ್ರೀಮತಿ ವನಿತಾ ದಂಪತಿಯ ಪುತ್ರ ಧನಿಷ್  ಈತನ ಪ್ರಥಮ ವರ್ಷದ ಹುಟ್ಟುಹಬ್ಬವು ಎ.16ರಂದು ಜರುಗಿತು.

umesh-shailaja copyಬೆಳಾಲು ಗ್ರಾಮದ ಪೊಯ್ಯೋದಡ್ಡ ಮನೆ ಬಾಬು ಗೌಡರ ಪುತ್ರ ಉಮೇಶ ಪಿ. ಗೌಡ ರವರ ವಿವಾಹವು ಹುಣ್ಸೆಕಟ್ಟೆ ಶ್ರೀಮತಿ ಕಮಲಾ ಮತ್ತು  ಕೆ. ಎನ್ ಮಂಜುನಾಥ ಗೌಡರ ಪುತ್ರಿ ಶೈಲಜಾ ರೊಂದಿಗೆ ಎ. 10ರಂದು ಬೆಳ್ತಂಗಡಿ ಸಿ.ವಿ.ಸಿ  ಹಾಲ್‌ನಲ್ಲಿ ಜರುಗಿತು.

add1

ಬೆಳ್ತಂಗಡಿ : ಗುರುವಾಯನಕೆರೆ ಉಪಕೇಂದ್ರದಲ್ಲಿ ತುರ್ತು ಕಾಮಗಾರಿಯನ್ನು ಕೈಗೊಳ್ಳಬೇಕಾದ ಹಿನ್ನಲೆಯಲ್ಲಿ ಎ. 22ರಂದು ಗುರುವಾಯನಕೆರೆ ಉಪಕೇಂದ್ರದಿಂದ ಹೊರಹೊಮ್ಮುವ ವೇಣೂರು ಮತ್ತು ಆರಂಬೋಡಿ ಫೀಡರ್‌ಗಳಲ್ಲಿ ಬೆಳಿಗ್ಗೆ 9.00ರಿಂದ ಸಂಜೆ 5.00ರ ತನಕ ವಿದ್ಯುತ್ ನಿಲುಗಡೆಯಾಗಲಿದೆ ಎಂದು ಮೆಸ್ಕಾಂ ಪ್ರಕಟಣೆಯಲ್ಲಿ ತಿಳಿಸಿದೆ.

venur vikasana shibira samaropa copyವೇಣೂರು: ಶಿಬಿರಗಳಲ್ಲಿ ತತ್ವ ಸಿದ್ದಾಂತ ಮುಖ್ಯ. ಆದ್ಯಾತ್ಮಿಕ ಚಿಂತನೆಯನ್ನು ವಿಕಸನಗೊಳಿಸುವುದು ಇದರ ಮೂಲ ಧ್ಯೇಯವಾಗಬೇಕೆ ಹೊರತು ಮನೋರಂಜನೆ ಆಗಬಾರದು. ಇಂತಹ ಧಾರ್ಮಿಕ ಶಿಬಿರಗಳಲ್ಲಿ ಮಠ, ಮಠಾಧೀಶರ ಪರಿಚಯ ಮೂಡಿಸುವುದ ಜೊತೆಗೆ ಅಲ್ಲಿಗೆ ಭೇಟಿ ನೀಡುವುದಕ್ಕೆ ಪ್ರೇರಣೆಯಾಗಲಿ ಎಂದು ಮೂಡಬಿದಿರೆ ಜೈನ ಮಠದ ಭಾರತ ಭೂಷಣ ಶ್ರೀ ಭಟ್ಟಾರಕ ಚಾರುಕೀರ್ತಿ ಪಂಡಿತಾಚಾರ್ಯವರ್ಯ ಮಹಾ ಸ್ವಾಮೀಜಿ ನುಡಿದರು.
ಅವರು ಎ.16 ರಂದು ವೇಣೂರು ಶ್ರೀ ಬಾಹುಬಲಿ ಸಭಾಭವನದಲ್ಲಿ ಇಲ್ಲಿಯ ಬಾಹುಬಲಿ ಯುವಜನ ಸಂಘ ಮತ್ತು ಶ್ರೀ ದಿಗಂಬರ ತೀರ್ಥ ಕ್ಷೇತ್ರ ಸಮಿತಿ ಆಶ್ರಯದಲ್ಲಿ ಜರಗಿದ ಜೈನ ಬಾಲಕ-ಬಾಲಕಿಯರ 17ನೇ ವರ್ಷದ ಧಾರ್ಮಿಕ ಹಾಗೂ ವ್ಯಕ್ತಿತ್ವ ವಿಕಸನ ಶಿಬಿರದ ಸಮಾರೋಪ ಕಾರ್ಯಕ್ರಮದಲ್ಲಿ ಆಶೀರ್ವಚನ ನೀಡಿದರು. ಮಠಗಳ ಬಗ್ಗೆ ಗುರು ಹಾಗೂ ಪರಂಪರೆಯನ್ನು ವಿರೋಧ ಕಟ್ಟಿಕೊಂಡು ಅಂತರ್ಜಾಲಗಳಲ್ಲಿ ಚರ್ಚೆ ನಡೆಯುತ್ತಿರುವುದು ಬೇಸರ ಸಂಗತಿ. ಮಕ್ಕಳಿಗೆ ಮಠ, ಮಠಾಧೀಶರ ಪರಿಚಯ ಮಾಡಿಸಬೇಕು. ಇದು ಅವರು ಧರ್ಮ ಮಾರ್ಗದಲ್ಲಿ ನಡೆಯಲು ಸಹಕಾರಿಯಾಗಲಿದೆ ಎಂದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದ ಉಜಿರೆ ಶ್ರೀ ಧ.ಮಂ. ಪ.ಪೂ. ಕಾಲೇಜಿನ ಪ್ರಾಂಶುಪಾಲ ಪ್ರೊ| ಎನ್. ದಿನೇಶ್ ಚೌಟ ಮಾತನಾಡಿ, ಭಾಷೆಯ ಬಗ್ಗೆ ಸಂವಹನಶೀಲತೆ ಬೆಳೆಸಿ ಕೊಂಡವರಿಗೆ ಸಮಾಜದಲ್ಲಿ ಮಾನ್ಯತೆ ಜಾಸ್ತಿ. ಅದು ಇಂತಹ ಶಿಬಿರಗಳು ತಿಳಿಸುತ್ತದೆ. ಇಂದು ಜೈನ ಧರ್ಮೀಯರು ಬೇರೆ ಧರ್ಮದತ್ತ ವಾಲುತ್ತಿದ್ದಾರೆ. ಇದಕ್ಕಾಗಿ ಮಕ್ಕಳಿರುವಾಗಲೇ ಅವರಿಗೆ ಜೈನ ಧರ್ಮ ತತ್ವ ಸಿದ್ದಾಂತಗಳನ್ನು ಮೂಡಿಸಬೇಕಾಗಿದೆ ಎಂದರು.
ಶಿಬಿರದ ನಿರ್ವಾಹಕ ಮುನಿರಾಜ ರೇಂಜಾಳ ಮಾತನಾಡಿ, ಜೈನರ ಬಗೆಗಿನ ತತ್ವ ಸಿದ್ದಾಂತಗಳನ್ನು ಇಂತಹ ಧಾರ್ಮಿಕ ಶಿಬಿರಗಳಿಂದ ಮಾತ್ರ ಕಲಿಯಲು ಸಾಧ್ಯ ಎಂದರು.
ಮುಖ್ಯ ಅತಿಥಿಗಳಾಗಿ ಮಾಣಿ ಶ್ರೀ ಮಹಾವೀರ ಇಂಡಸ್ಟ್ರೀಸ್‌ನ ಮಹಾವೀರ ಪ್ರಸಾದ್, ಮೂಡಬಿದಿರೆ ಪಂಡಿತ್ ರೆಸಾರ್ಟ್‌ನ ರಜನಿಲಾಲ್ ಗೋಯಲ್ ಜೈನ್, ಶಿಬಿರದ ಸಂಚಾಲಕ ಜ್ಞಾನಚಂದ್ರ, ವೇಣೂರು ಜೈನ ತೀರ್ಥಕ್ಷೇತ್ರ ಸಮಿತಿ ಕಾರ್ಯದರ್ಶಿ ಯಂ. ವಿಜಯರಾಜ ಅಧಿಕಾರಿ, ಶ್ರೀ ಬಾಹುಬಲಿ ಯುವಜನ ಸಂಘದ ಅಧ್ಯಕ್ಷ ಶರ್ಮಿತ್ ಕುಮಾರ್ ವೇದಿಕೆಯಲ್ಲಿದ್ದರು.
ಸಂಪನ್ಮೂಲ ವ್ಯಕ್ತಿಗಳಾಗಿ ಯೋಗರಾಜ ಶಾಸ್ತ್ರಿ ಕಾರ್ಕಳ, ನವೀನ್ ಕುಮಾರ್ ಜೈನ್, ಉದಯ ಕುಮಾರ್, ಮಂಜುಳಾ, ಅಜಿತ್ ಕುಮಾರ್, ನಿರಂಜನ ಎ., ಶಾಂತಿರಾಜ ಜೈನ್, ಮಹಾವೀರ ಜೈನ್, ಕು| ಅಶ್ವಿನಿ ಜೈನ್ ಶಿಬಿರವನ್ನು ನಡೆಸಿಕೊಟ್ಟರು. ೪ ದಿನಗಳ ಕಾಲ ಜರಗಿದ ಶಿಬಿರದಲ್ಲಿ ೭೨ ಶಿಬಿರಾರ್ಥಿಗಳು ಪಾಲ್ಗೊಂಡಿದ್ದರು.
ಕು| ಪೂರ್ಣಿಮಾ ಬಳಗ ಪ್ರಾರ್ಥಿಸಿ ಪ್ರಮೋದ್ ಕುಮಾರ್ ಬಜಿರೆ ಪ್ರಾಸ್ತಾವಿಕವಾಗಿ ಮಾತನಾಡಿ ಸ್ವಾಗತಿಸಿದರು. ನಿರಂಜನ ಅಳಿಯೂರು ಕಾರ್ಯಕ್ರಮ ನಿರೂಪಿಸಿ, ಸುಧೀರ್ ಕುಮಾರ್ ಬಜಿರೆ ವಂದಿಸಿದರು.

chandrashekar - pavithra copyಲಾಯಿಲ ಗ್ರಾಮದ ಕುಂಠಿನಿ ಶ್ರೀ ದೇವಿಪ್ರಸಾದ್ ಮನೆ ಶ್ರೀಮತಿ ವಸಂತಿ ಮತ್ತು ಬಿ. ಗಿರಿಧರ ಶೆಟ್ಟಿ ಯವರ ಪುತ್ರಿ ಪವಿತ್ರರವರ ವಿವಾಹವು ಮಜಲೋಡಿ ಶ್ರೀದುರ್ಗಾ ನಿಲಯ ಸಾಂತಪ್ಪ ಶೆಟ್ಟಿಯವರ ಪುತ್ರ ಚಂದ್ರಶೇಖರ ರೊಂದಿಗೆ ಎ. 10ರಂದು ಬೆಳ್ತಂಗಡಿ ಶ್ರೀ ಗುರುನಾರಾಯಣ ವಾಣಿಜ್ಯ ಸಂಕೀರ್ಣದ ಆಶಾ ಸಾಲಿಯಾನ್ ಕಲ್ಯಾಣ ಮಂಟಪದಲ್ಲಿ ಜರಗಿತು.

dinesh-rekha copyಬೆಳಾಲು ಗ್ರಾಮದ ಪೊಯ್ಯೋದಡ್ಡ ಮನೆ ಬಾಬು ಗೌಡರ ಪುತ್ರ ದಿನೇಶ್ ಪಿ. ಗೌಡ ರವರ ವಿವಾಹವು ಕೊಯ್ಯೂರು ಗ್ರಾಮದ ಕಲ್ಲೇರಿ ಮನೆ ಕುಶಾಲಪ್ಪ ಗೌಡರ ಪುತ್ರಿ ರೇಖಾ ರೊಂದಿಗೆ ಎ. 10ರಂದು ಬೆಳ್ತಂಗಡಿ ಸಿ.ವಿ.ಸಿ ಹಾಲ್‌ನಲ್ಲಿ ಜರುಗಿತು.

Rajesh news copyವೇಣೂರು : ವೇಣೂರು ವಲಯದ ಅಳದಂಗಡಿ ಶಾಖೆಯಲ್ಲಿ ಉಪವಲಯ ಅರಣ್ಯಾಧಿಕಾರಿಯಾಗಿ ಕಳೆದ 5 ವರ್ಷಗಳಿಂದ ಸೇವೆ ಸಲ್ಲಿಸುತ್ತಿದ್ದ ರಾಜೇಶ್ ಇವರಿಗೆ ವಲಯ ಅರಣ್ಯಾಧಿಕಾರಿಯಾಗಿ ಭಡ್ತಿ ನೀಡಿ ರಾಯಚೂರು ಜಿಲ್ಲೆಯ ಲಿಂಗಸಗೂರು ವಲಯಕ್ಕೆ ನಿಯುಕ್ತಿಗೊಳಿಸಲಾಗಿದೆ.
2007ರಲ್ಲಿ ಬೆಳ್ತಂಗಡಿ ವನ್ಯಜೀವಿ ವಲಯದಲ್ಲಿ ಉಪ ವಲಯ ಅರಣ್ಯಾಧಿಕಾರಿಯಾಗಿ ಸೇವೆಗೆ ಸೇರಿದ ರಾಜೇಶ್ ಅವರು 5 ವರ್ಷಗಳ ಸೇವೆ ಬಳಿಕ 2012ರಲ್ಲಿ ವೇಣೂರು ವಲಯದ ಅಳದಂಗಡಿ ಶಾಖೆಗೆ ವರ್ಗಾವಣೆಗೊಂಡು ಸೇವೆ ಸಲ್ಲಿಸುತ್ತಿದ್ದರು. ಕಳೆದ 6ತಿಂಗಳ ಹಿಂದೆ ಅಳದಂಗಡಿ ಶಾಖೆ ಜೊತೆಗೆ ನಾರಾವಿ ಶಾಖೆಯ ಹೆಚ್ಚುವರಿ ಪ್ರಭಾರವನ್ನು ವಹಿಸಿಕೊಂಡು ಉತ್ತಮವಾಗಿ ಕರ್ತವ್ಯವನ್ನು ನಿರ್ವಹಿಸಿದ್ದರು.

vijay kumar-ashwini copyಕಲ್ಮಂಜ ಗ್ರಾಮದ ಬಳ್ಳಿದಡ್ಡ ಸುರೇಶ್ ಬಂಗೇರರ ಪುತ್ರಿ ಅಶ್ವಿನಿಯವರ ವಿವಾಹ ಮಂಡೂರು ಗ್ರಾಮದ ಹೇಡ್ಯದಡ್ಡ ನಾಣ್ಯಪ್ಪ ಪೂಜಾರಿಯವರ ಪುತ್ರ ವಿಜಯ್ ಕುಮಾರ್ ರೊಂದಿಗೆ ಎ. 10ರಂದು ಉಜಿರೆ ಎಸ್.ಕೆ ಮೆಮೋರಿಯಲ್ ಹಾಲ್‌ನಲ್ಲಿ ಜರಗಿತು.

reshma copyಬಜಿರೆ ಗ್ರಾಮದ ಹೊಸಪಟ್ಣ  ಪೊಂಗರ್‌ತ್ಯಾರು ಮನೆ ಶ್ಯಾಮ ಹೆಗ್ಡೆಯವರ ಪುತ್ರಿ ರೇಶ್ಮಾರವರ ವಿವಾಹವು ನಾರಾವಿ ಪಾಣಾಲು ದರ್ಖಾಸು ಸೋಮಯ್ಯ ಹೆಗ್ಡೆಯವರ ಪುತ್ರ ರಘುಚಂದ್ರರೊಂದಿಗೆ   ನಾರಾವಿ ಧರ್ಮಶ್ರೀ ಸಭಾಭವನದಲ್ಲಿ ಎ.10ರಂದು ಜರುಗಿತು.

Veerakesari sahayadana copyಕನ್ಯಾಡಿ ||: ವೀರಕೇಸರಿ ಧರ್ಮಸ್ಥಳ ಬೆಳ್ತಂಗಡಿ ಹಾಗೂ ಶ್ರೀ ಶನೈಶ್ಚರ ಪೂಜಾ ಸಮಿತಿ ಕನ್ಯಾಡಿ || ಇದರ ಸಹಯೋಗದೊಂದಿಗೆ ಎ.15ರಂದು ಹಿ.ಪ್ರಾ ಶಾಲಾ ಮೈದಾನ ಕನ್ಯಾಡಿ || ಇಲ್ಲಿ ಜರುಗಿದ 6ನೇ ವರ್ಷದ ಸಾರ್ವಜನಿಕ ಶ್ರೀ ಶನೈಶ್ಚರ ಪೂಜೋತ್ಸವ ಮತ್ತು ವಿವಿಧ ಕ್ಷೇತ್ರಗಳ ಸಾಧಕರಿಗೆ ಸನ್ಮಾನ ಕಾರ್ಯಕ್ರಮದಲ್ಲಿ 27ನೇ ಸೇವಾಯೋಜನೆಯಾಗಿ ನಿಡ್ಲೆ ಸ.ಹಿ.ಪ್ರಾ. ಶಾಲೆಯ 9ನೇ ತರಗತಿ ವಿದ್ಯಾರ್ಥಿ ಪದ್ಮರಾಜ್ ಇವರು ಮಾನಸಿಕ ಅನಾರೋಗ್ಯದಿಂದ ಬಳಲುತ್ತಿದ್ದು ಇವರ ಚಿಕಿತ್ಸೆಗೆ ರೂ. 15 ಸಾವಿರದ ಚೆಕ್ಕನ್ನು ಆತನ ತಾಯಿಗೆ ಹಸ್ತಾಂತರಿಸಲಾಯಿತು. ಇದೇ ಸಂದರ್ಭದಲ್ಲಿ 28ನೇ ಯೋಜನೆಯಾಗಿ ತನ್ನ ಎರಡು ಕಣ್ಣುಗಳನ್ನು ಕಳೆದುಕೊಂಡಿರುವ ಪೂರ್ಣೇಶ ಅವರ ಚಿಕಿತ್ಸೆಗೆ 15ಸಾವಿರ ರೂಗಳ ಚೆಕ್ಕನ್ನು ನೀಡಲಾಯಿತು. ವೀರಕೇಸರಿ ಬೆಳ್ತಂಗಡಿಯ ಮಾಸಿಕ ಸೇವಾ ಯೋಜನೆಯಂತೆ ಎಪ್ರಿಲ್ ತಿಂಗಳಲ್ಲಿ ಎರಡು ಸೇವಾ ಯೋಜನೆಯನ್ನು ಯಶಸ್ವಿಯಾಗಿ ತಲುಪಿದ್ದು 11 ತಿಂಗಳಲ್ಲಿ 28 ಸೇವಾ ಯೋಜನೆ ಮೂಲಕ 28 ಕುಟುಂಬಗಳಿಗೆ ಆಸರೆಯಾಗಿ ಯಶಸ್ಸಿನ ಹಾದಿಯಲ್ಲಿ ಮುನ್ನಡೆಯುತ್ತಿದೆ. ಇದೀಗ ತಾಲೂಕಿನ ದೊಡ್ಡ ಸಂಘಟನೆಯಾಗಿ ಬೆಳೆದಿರುವ ವೀರಕೇಸರಿ ತಂಡ ಪ್ರತಿಯೊಬ್ಬ ಸದಸ್ಯನ ನೆರವಿನಿಂದ ಪ್ರತಿ ತಿಂಗಳು ಸೇವಾಯೋಜನೆಗಳನ್ನು ಮಾಡಿ ಸಮಾಜಸೇವೆಯಲ್ಲಿ ಅಗ್ರಮಾನ್ಯ ಸಂಘಟನೆಯಾಗಿ ಮುನ್ನುಗ್ಗುತ್ತಿದೆ.

Puduvettu sethuve veekshane copyಪುದುವೆಟ್ಟು : ಪುದುವೆಟ್ಟು ಗ್ರಾಮದ ಬೊಲ್ಮನಾರು ಎಂಬಲ್ಲಿ ಅಂತಿಮ ಹಂತದ ನಿರ್ಮಾಣದಲ್ಲಿದ್ದು ಶೀಘ್ರವೇ ಜನೋಪಯೋಗಕ್ಕೆ ಅರ್ಪಣೆಯಾಗಲಿರುವ ಸುಮಾರು 7 ಕೋಟಿಗೂ ಅಧಿಕ ವೆಚ್ಚದ ನೂತನ ಸೇತುವೆ ಕಾಮಗಾರಿಯನ್ನು ಶಾಸಕ ವಸಂತ ಬಂಗೇರ ಎ. 13ರಂದು ವೀಕ್ಷಣೆ ನಡೆಸಿದರು.
ಗುತ್ತಿಗೆದಾರ ಹಾಗೂ ಇಂಜಿನಿಯರ್ ಜೊತೆ ಮಾತುಕತೆ ನಡೆಸಿ ಕಾಮಗಾರಿಯ ವಿವರ ಪಡೆದ ಅವರು ಮಳೆಗಾಲಕ್ಕೂ ಮುನ್ನವೇ ಕಾಮಗಾರಿ ಪೂರ್ತಿಗೊಳಿಸುವಂತೆ ಸೂಚನೆ ನೀಡಿದರು.
ಈ ಸಂದರ್ಭ ಉಜಿರೆ ಜಿ.ಪಂ. ಸದಸ್ಯೆ ನಮಿತಾ ಕೆ. ಪೂಜಾರಿ, ತಾ.ಪಂ. ಸದಸ್ಯ ವಿ.ಟಿ. ಸೆಬಾಸ್ಟಿಯನ್, ಎಪಿಎಂಸಿ ಸದಸ್ಯ ಅಬ್ದುಲ್ ಗಫೂರ್, ಪುದುವೆಟ್ಟು ಗ್ರಾ.ಪಂ. ಅಧ್ಯಕ್ಷೆ ನೀಲಮ್ಮ, ಉಪಾಧ್ಯಕ್ಷ ಬೊಮ್ಮಣ್ಣ ಗೌಡ ಮಠ, ನೆರಿಯ ಗ್ರಾ.ಪಂ. ಸದಸ್ಯ ಬಿ. ಅಶ್ರಫ್ ನೆರಿಯ, ಗುತ್ತಿಗೆದಾರ ರಿಯಾಝ್ ಪೆರಾಲ್ದರಕಟ್ಟೆ ಮೊದಲಾದವರು ಉಪಸ್ಥಿತರಿದ್ದರು.

belalu anantha padmanabha nagashila prathiste copyಬೆಳಾಲು : ಇಲ್ಲಿಯ ಅನಂತೋಡಿಯಲ್ಲಿ ಜೀರ್ಣೋದ್ಧಾರಗೊಳ್ಳುತ್ತಿರುವ ಶ್ರೀ ಅನಂತ ಪದ್ಮನಾಭ ದೇವಸ್ಥಾನದಲ್ಲಿ ಜೀರ್ಣೋದ್ಧಾರ ಸಮಿತಿಯ ಗೌರವಾಧ್ಯಕ್ಷರು ಧರ್ಮಸ್ಥಳದ ಡಾ| ಡಿ. ವೀರೇಂದ್ರ ಹೆಗ್ಗಡೆಯವರ ಆಶೀರ್ವಾದದೊಂದಿಗೆ ಉಜಿರೆ ಶ್ರೀ ಜನಾರ್ದನ ದೇವಸ್ಥಾನದ ಆಡಳಿತ ಮೊಕ್ತೇಸರ ಯು. ವಿಜಯ ರಾಘವ ಪಡ್ವೆಟ್ನಾಯರ ಮಾರ್ಗದರ್ಶನದಲ್ಲಿ ಬ್ರಹ್ಮಶ್ರೀ ಆಲಂಬಾಡಿ ಪದ್ಮನಾಭ ತಂತ್ರಿಗಳ ನೇತೃತ್ವದಲ್ಲಿ ಎ. 20ರಂದು(ಇಂದು) ಶ್ರೀ ನಾಗಶಿಲಾ ಪ್ರತಿಷ್ಠೆ ಜರಗಿತು. ಜೀರ್ಣೋದ್ಧಾರ ಸಮಿತಿಯ ಪದಾಧಿಕಾರಿಗಳು, ಭಜನಾ ಮಂಡಳಿಯ ಪದಾಧಿಕಾರಿಗಳು ಶ್ರೀಕ್ಷೇತ್ರ ಧ. ಗ್ರಾ. ಯೋಜನೆಯ ಒಕ್ಕೂಟದ ಪದಾಧಿಕಾರಿಗಳು, ಊರವರು, ಭಕ್ತಾಧಿಗಳು ಹೆಚ್ಚಿನ ಸಂಖ್ಯೆಯಲ್ಲಿ ಹಾಜರಿದ್ದರು.

Peranamanja sabhe prathapasimha copyಪಡಂಗಡಿ : ಮನಸ್ಸು ಸ್ಥಿರವಾದಾಗ ಜಗತ್ತಿನ ಸತ್ಯ ಅರಿವಾಗುತ್ತದೆ. ಇದಕ್ಕಾಗಿ ನಮ್ಮ ಹಿರಿಯರು ಇಂತಹ ಶ್ರದ್ಧಾಕೇಂದ್ರಗಳನ್ನು ನಿರ್ಮಿಸಿದ್ದಾರೆ. ಆತ್ಮ ಶಕ್ತಿಯನ್ನು ಜಾಗೃತ ಮಾಡುವ ಸ್ಥಳಗಳೇ ದೇವಸ್ಥಾನ, ದೈವಸ್ಥಾನಗಳಾಗಿವೆ ಎಂದು ಬಿಜೆಪಿ ಮಾಜಿ ಜಿಲ್ಲಾಧ್ಯಕ್ಷ, ನ್ಯಾಯವಾದಿ ಪ್ರತಾಪಸಿಂಹ ನಾಯಕ್ ಹೇಳಿದರು.
ಅವರು ಎ.13ರಂದು ಪಡಂಗಡಿ ಗ್ರಾಮದ ಪೆರಣಮಂಜು ಶ್ರೀ ಮೂಜಿಲ್ನಾಯ ಬ್ರಹ್ಮ ದೈವಸ್ಥಾನ ಬ್ರಹ್ಮಕಲಶೋತ್ಸವ ಮತ್ತು ಜಾತ್ರಾ ಮಹೋತ್ಸವದ ಅಂಗವಾಗಿ ನಡೆದ ಧಾರ್ಮಿಕ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಮನುಷ್ಯನಿಗೆ ಭೌತಿಕ ಸುಖ ಮುಖ್ಯವಲ್ಲ, ಆಧ್ಯಾತ್ಮಿಕ ಸುಖ ಮಾತ್ರ ನಮ್ಮನ್ನು ಮೋಕ್ಷದೆಡೆಗೆ ಸಾಗಿಸಬಹುದು. ಅಂತಹ ಸುಖವನ್ನು ನೀಡುವ ದೈವ, ದೇವರ ನಾಡಾದ ಭಾರತ ಒಂದು ದಿನ ಜಗತ್ತಿಗೆ ವಿಶ್ವಗುರುವಾಗಿ ನಿಲ್ಲಲಿದೆ. ಭಾರತದಲ್ಲಿ ಪ್ರಾಚೀನ ಕಾಲದಿಂದಲೂ ಇದ್ದ ಯೋಗ ಇಂದು ವಿಶ್ವದೆಲ್ಲೇಡೆ ಪಸರಿಸಿದೆ. ಭಗವಂತನ ಸಾಕ್ಷಾತ್ಕಾರಕ್ಕೆ ಯೋಗ ಸುಲಭ ಮಾರ್ಗವಾಗಿದೆ ಎಂದರು.
ಧಾರ್ಮಿಕ ಉಪನ್ಯಾಸ ನೀಡಿದ ಮೈಸೂರು ಮಾನಸ ಗಂಗೋತ್ರಿಯ ಪ್ರೊ| ಸುರೇಶ್ ಪಡಿವಾಳ್ ಮನಸ್ಸು, ವಚನ, ಕಾಯಗಳ ಜೊತೆ ಆತ್ಮ ಸಂಯೋಜನೆಗೊಂಡು ನಮ್ಮ ದೇಹದ ಚೇತನ ಕ್ರಿಯೆ ನಡೆದಾಗ ನಾವು ತಿಳಿಯುವ, ನೋಡುವ ಕ್ರಿಯೆ ನಡೆಯುತ್ತದೆ. ನಮ್ಮಲ್ಲಿರುವ ಅರಿಷಡ್ವರ್ಗಗಳು ನಿವಾರಣೆಯಾಗಲು ಇಂತಹ ಧಾರ್ಮಿಕ ಕೇಂದ್ರಗಳಿಗೆ ಬಂದು, ಧರ್ಮ ಕ್ರಿಯೆ ಮೂಲಕ ಆತ್ಮೋನ್ನತಿ ಮಾಡಿಕೊಳ್ಳಬೇಕು ಎಂದು ತಿಳಿಸಿದರು.
ಮುಖ್ಯ ಅತಿಥಿ ಬೆಳ್ತಂಗಡಿ ವಿನಾಯಕ ರೈಸ್‌ಮಿಲ್‌ನ ಮಾಲಕ ರೋ| ಶ್ರೀಕಾಂತ ಕಾಮತ್ ಮಾತನಾಡಿ, ಊರಿನ ದೇವಸ್ಥಾನ, ದೈವಸ್ಥಾನಗಳು ಜೀರ್ಣೋದ್ಧಾರ ಹೊಂದಿದಾಗ ಊರಿನ ಅಭಿವೃದ್ಧಿಯ ಜೊತೆ ಸಮಾಜದ ಪ್ರಗತಿಯಾಗುತ್ತದೆ. ನಾವು ನಂಬಿಕೊಂಡು ಬಂದಂತಹ ಶ್ರದ್ಧಾಕೇಂದ್ರಗಳು ಅವನತಿಗೊಂಡಾಗ ನಮ್ಮ ಜೀವನದ ಮೇಲೂ ಪರಿಣಾಮಗಳಾಗುತ್ತದೆ. ಅವುಗಳ ಪ್ರಗತಿಯಾದಾಗ ನಮ್ಮ ಜೀವನದಲ್ಲೂ ಉನ್ನತಿಯನ್ನು ಕಾಣಬಹುದು ಎಂದು ತಿಳಿಸಿದರು.
ಉದ್ಯಮಿ ಉದಯ ಶೆಟ್ಟಿ ಕಾಂತವರ ಮಾತನಾಡಿ ಇಂದಿನ ವೈಜ್ಞಾನಿಕ ಯುಗದಲ್ಲಿ ಮಕ್ಕಳಿಗೆ ನಮ್ಮ ಸಂಸ್ಕೃತಿ, ಧಾರ್ಮಿಕ ನಂಬಿಕೆಗಳ ಅರಿವು ಮೂಡಿಸುವುದು ಅವಶ್ಯ ಎಂದು ಹೇಳಿದರು. ಈ ಸಂದರ್ಭದಲ್ಲಿ ಕ್ಷೇತ್ರ ನಿರ್ಮಾಣಕ್ಕೆ ಸಹಕಾರ ನೀಡಿದ ಸ್ವಸ್ತಿಕ್ ಪಡಂಗಡಿಯ ಸಂಪತ್ ಕುಮಾರ್ ಕುಟುಂಬಸ್ಥರನ್ನು ಹಾಗೂ ನವೀನ್‌ಚಂದ್ ಬಲ್ಲಾಳ್, ಉದಯ ಶೆಟ್ಟಿ ಕಾಂತಾವರ ಇವರನ್ನು ದೇವಸ್ಥಾನದ ವತಿಯಿಂದ ಅಭಿನಂದಿಸಲಾಯಿತು. ಬ್ರಹ್ಮಕಲಶೋತ್ಸವ ಸಮಿತಿ ಅಧ್ಯಕ್ಷ ಪ್ರವೀಣ್‌ಚಂದ್ರ ಜೈನ್ ನಡಿಬೆಟ್ಟುಗುತ್ತು ಕಾರ್ಯಕ್ರಮ ನಿರ್ವಹಿಸಿದರು.
ವೇದಿಕೆಯಲ್ಲಿ ಆಡಳಿತ ಮೊಕ್ತೇಸರ ನೇಮಿರಾಜ್ ಶೆಟ್ಟಿ ನಡಿಬೆಟ್ಟು ಗುತ್ತು, ಬ್ರಹ್ಮಕಲಶೋತ್ಸವ ಸಮಿತಿ ಗೌರವಾಧ್ಯಕ್ಷ ಎಸ್. ಜಯರಾಮ ಶೆಟ್ಟಿ, ಪ್ರಧಾನ ಕಾರ್ಯದರ್ಶಿ ಶಾಂತಿರಾಜ ಜೈನ್ ಅಮೃತ, ಕಾರ್ಯದರ್ಶಿ ಜಗದೀಶ್ ಪೈ ಮೂಜುರು, ಕೋಶಾಧಿಕಾರಿ ವಾiನ ಬಾಳಿಗ ಉಪಿಸ್ಥಿತರಿದ್ದರು. ಸಂಜನಾ ಎಸ್.ಜೈನ್ ಇವರ ಪ್ರಾರ್ಥನೆ ಬಳಿಕ ಶ್ರೀಮತಿ ಉಷಾರಾಣಿ ನಡಿಬೆಟ್ಟುಗುತ್ತು ಸ್ವಾಗತಿಸಿದರು. ಪುಂಜಾಲಕಟ್ಟೆ ಶಾಲಾ ಶಿಕ್ಷಕ ಲ| ಧರಣೇಂದ್ರ ಕೆ. ಜೈನ್ ಕಾರ್ಯಕ್ರಮ ನಿರೂಪಿಸಿ, ಎಸ್‌ಕೆಡಿಆರ್‌ಡಿಪಿ ತುಮಕೂರಿನ ಯೋಜನಾಧಿಕಾರಿ ಪ್ರಶಾಂತ್ ಗೌಡ ವಂದಿಸಿದರು. ಬಳಿಕ ಕಲ್ಲಡ್ಕ ವಿಠಲ ನಾಯಕ್ ಬಳಗದವರಿಂದ ‘ಗೀತ ಸಾಹಿತ್ಯ ಸಂಭ್ರಮ’ನಡೆಯಿತು.

kulal kreedakuta samaropa copyವಿವಿಧ ಕ್ಷೇತ್ರದ ಸಾಧಕರಿಗೆ ಸಮ್ಮಾನ
ಕಾರ್ಯಕ್ರಮದಲ್ಲಿ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ಮೂರು ಮಂದಿ ಸಾಧಕರನ್ನು ಕ್ರೀಡಾ ಸಮಿತಿಯ ವತಿಯಿಂದ ವೇದಿಕೆಯಲ್ಲಿದ್ದ ಗಣ್ಯರು, ಅತಿಥಿಗಳು ಸಮ್ಮಾನಿಸಿದರು. ಎಂ.ಎ. ಪದವಿ ರಾಜ್ಯ ಶಾಸ್ತ್ರದಲ್ಲಿ ಪ್ರಥಮ ಸ್ಥಾನ ಪಡೆದ ಕು| ಸಚಿತಾ, ರೋಹಿತ್ ಕುಮಾರ್ ಬರಾಯ, ಹಾಗೂ ಕಂಬಳ ಕ್ಷೇತ್ರದ ಮೋಹನ್‌ಕುಮಾರ್ ಕಬ್ಬಿನ ಹಿತ್ಲು ಅವರನ್ನು ಶಾಲು ಹೊದಿಸಿ, ಸ್ಮರಣಿಕೆ ನೀಡಿ ಸಮಿತಿ ವತಿಯಿಂದ ಗೌರವಿಸಲಾಯಿತು.

ಗುರುವಾಯನಕೆರೆ : ಬೆಳ್ತಂಗಡಿ ತಾಲೂಕು ಮೂಲ್ಯರ ಯಾನೆ ಕುಂಬಾರರ ಸೇವಾ ಸಂಘ ಗುರುವಾಯನಕೆರೆ, ಕುಲಾಲ-ಕುಂಬಾರರ ಯುವ ವೇದಿಕೆ ಮತ್ತು ತಾಲೂಕು ಕ್ರೀಡಾ ಸಮಿತಿ, ಕುಲಾಲ ಕುಂಬಾರ ಸಾಂಸ್ಕೃತಿಕ ಸಮಿತಿ ಇದರ ಸಹಯೋಗದೊಂದಿಗೆ ತಾಲೂಕಿನ ಸ್ವಜಾತಿ ಬಾಂಧವರಿಗಾಗಿ ನಡೆದ ತಾಲೂಕು ಮಟ್ಟದ ಕುಲಾಲ ಕ್ರೀಡೋತ್ಸವದ ಸಮಾರೋಪ ಸಮಾರಂಭ ಎ.16ರಂದು ಕೆರೆ ಬಳಿಯ ಮೈದಾನದಲ್ಲಿ ನಡೆಯಿತು.
ಮುಖ್ಯ ಅತಿಥಿಗಳಾಗಿ ಭಾಗವಹಿಸಿದ ಬಂಟ್ವಾಳ ಯೋಜನಾ ಪ್ರಾಧಿಕಾರದ ಅಧ್ಯಕ್ಷ ಸದಾಶಿವ ಬಂಗೇರ ಮಾತನಾಡಿ, ಕುಲಾಲ-ಕುಂಬಾರ ಸಮಾಜ ಸಂಘಟನೆಗೆ ಇಂತಹ ಕ್ರೀಡಾ ಕೂಟಗಳು ಪ್ರೇರಣೆಯಾಗುವುದರ ಜೊತೆಗೆ ಯುವ ಸಮುದಾಯಕ್ಕೆ ತಮ್ಮ ಶಕ್ತಿಯ ಪ್ರದರ್ಶನಕ್ಕೆ ವೇದಿಕೆಯಾಗಿದೆ ಎಂದರು. ಯುವ ಸಂಪತ್ತು ಸಮಾಜದ ಉನ್ನತಿಗೆ ಉಪಯೋಗವಾಗಬೇಕು, ಸಂಘಟನೆಗೆ ಬಲ ಬರಬೇಕಾದರೆ ತಾಲೂಕಿನ ಸಮಾಜ ಬಾಂಧವರು ಇಂತಹ ಕಾರ್ಯಗಳಲ್ಲಿ ಕೈಜೋಡಿಸುವುದರೊಂದಿಗೆ ಸಮಾಜದ ಮುಂಚೂಣಿಯಲ್ಲಿ ಪ್ರಮುಖ ಪಾತ್ರವಹಿಸಬೇಕಾದ ಅಗತ್ಯವಿದೆ. ಈ ನಿಟ್ಟಿನಲ್ಲಿ ಮಾತೃ ಸಂಘದ ನೇತೃತ್ವದಲ್ಲಿ ರಾಜ್ಯ ಮಟ್ಟದ ಕಬಡ್ಡಿಯನ್ನು ಹಮ್ಮಿಕೊಳ್ಳುವ ಯೋಜನೆಯಿದ್ದು, ತಾಲೂಕಿನ ತಂಡವೂ ಇದರಲ್ಲಿ ಭಾಗವಹಿಸಬೇಕು ಎಂದು ಕರೆ ನೀಡಿದರು.
ಸಮಾರಂಭದ ಅಧ್ಯಕ್ಷತೆಯನ್ನು ತಾಲೂಕು ಕ್ರೀಡಾ ಸಮಿತಿ ಅಧ್ಯಕ್ಷ ತಿಲಕ್‌ರಾಜ್ ವಹಿಸಿ, ಕ್ರೀಡೋತ್ಸವದ ಯಶಸ್ವಿಗೆ ಸಹಕರಿಸಿದ ಎಲ್ಲರಿಗೂ ಕೃತಜ್ಞತೆ ಸಲ್ಲಿಸಿದರು. ಕುಲಾಲ-ಕುಂಬಾರರ ಯುವ ವೇದಿಕೆ ರಾಜ್ಯ ಸಂಘಟನಾ ಕಾರ್ಯದರ್ಶಿ ಹರೀಶ್ ಕಾರಿಂಜ ಸ್ವಾಗತಿಸಿ, ಯುವ ಸಮುದಾಯದ ಸಂಘಟನೆ ಹಾಗೂ ಬಲವರ್ಧನೆಗೆ ಈ ಕ್ರೀಡಾಕೂಟ ಪೂರಕವಾಗಿ ನಡೆಯುತ್ತಿದ್ದು, ಇಂದು ಅತ್ಯಂತ ಯಶಸ್ವಿಯಾಗಿ ಕಾರ್ಯಕ್ರಮ ನಡೆಸಿದ ಕ್ರೀಡಾ ಸಮಿತಿಯ ಪದಾಧಿಕಾರಿಗಳನ್ನು ಅಭಿನಂದಿಸಿದರು.
ಅತಿಥಿಗಳಾಗಿ ಕುಲಾಲ ಕುಂಬಾರರ ಯುವ ವೇದಿಕೆ ಬೆಳ್ತಂಗಡಿ ತಾಲೂಕು ಅಧ್ಯಕ್ಷ ಲೋಕೇಶ್ ಕಂಚಿಂಜ, ವಾಣಿಜ್ಯ ತೆರಿಗೆ ನಿರೀಕ್ಷಕ ಯತೀಶ್ ಸಿರಿಮಜಲು, ಶ್ರೀ ಕ್ಷೇ.ಧ.ಗ್ರಾ. ಯೋಜನೆ ಧರ್ಮಸ್ಥಳದ ಯೋಜನಾಧಿಕಾರಿ ಕಮಲಾಕ್ಷ, ಕುಲಾಲ ಕುಂಬಾರ ಯುವ ವೇದಿಕೆ ಬೆಳ್ತಂಗಡಿ ಇದರ ಕೋಶಾಧಿಕಾರಿ ಉಮೇಶ್ ಕುಲಾಲ್, ಸುದ್ದಿ ಪತ್ರಿಕೆಯ ಮುಖ್ಯ ವರದಿಗಾರ ಬಿ.ಎಸ್. ಕುಲಾಲ್ ಭಾಗವಹಿಸಿ ಶುಭ ಕೋರಿದರು. ಬೆಳಗ್ಗೆ 11ರಿಂದ ಸಂಜೆ 7.30ರ ವರೆಗೆ ಅತ್ಯಂತ ಯಶಸ್ವಿಯಾಗಿ ಹಾಗೂ ಶಿಸ್ತುಬದ್ಧವಾಗಿ ಕ್ರೀಡೋತ್ಸವ ನಡೆಯಿತು. ಈ ಸಂದರ್ಭದಲ್ಲಿ ಮಕ್ಕಳಿಗೆ, ಮಹಿಳೆಯರಿಗೆ ಹಾಗೂ ಪುರುಷರಿಗೆ ಹಮ್ಮಿಕೊಂಡ ವಿವಿಧ ಸ್ಪರ್ಧಾ ವಿಜೇತರಿಗೆ ಬಹುಮಾನಗಳನ್ನು ವಿತರಿಸಲಾಯಿತು.
ಕ್ರೀಡೋತ್ಸವದ ತೀರ್ಪುಗಾರರಾಗಿ, ಗಿರೀಶ್, ಮಿಥುನ್, ಗೋಪಾಲ್, ಶೀತಲ್ ಸಹಕರಿಸಿದರು. ಹರೀಶ್ ಕಾರಿಂಜ ಸ್ವಾಗತಿಸಿದರು. ಜಿಲ್ಲಾ ಸಂಘದ ಪ್ರಧಾನ ಕಾರ್ಯದರ್ಶಿ ಪ್ರಸಾದ್‌ಕುಮಾರ್ ಕಾರ್ಯಕ್ರಮ ನಿರೂಪಿಸಿ, ಯತೀಶ್ ಸಿರಿಮಜಲು ವಂದಿಸಿದರು. ಸಮಿತಿಯ ಉಪಾಧ್ಯಕ್ಷ ಜಗದೀಶ್ ಬರಾಯ, ಕಾರ್ಯದರ್ಶಿ ಪ್ರವೀಣ್ ಬರಾಯ, ಜೊತೆ ಕಾರ್ಯದರ್ಶಿ ಜಯಮತ್ ಕಟ್ಟೆ, ಮಿಥುನ್ ಮಡಂತ್ಯಾರು, ಕೋಶಾಧಿಕಾರಿ ಜೀವನ್ ಕುಲಾಲ್ ಸಿರಿಮಜಲು, ಸಂಘಟನಾ ಕಾರ್ಯದರ್ಶಿ ನವೀನ್ ಕುಲಾಲ್, ಮುಖೇಶ್ ಕುಲಾಲ್ ಬರಾಯ ಹಾಗೂ ಸಮಿತಿಯ ಎಲ್ಲಾ ಸದಸ್ಯರು ಉಪಸ್ಥಿತರಿದ್ದರು.

ನಮ್ಮ ಬಗ್ಗೆ

ಮೊದಲಿಗೆ ಕೇವಲ ಒಂದು ಹಾಳೆಯಲ್ಲಿ ಪ್ರಕಟವಾಗುತ್ತಿದ್ದ ಬೆಳ್ತಂಗಡಿ ತಾಲೂಕಿನ “ಸುದ್ದಿ ಬಿಡುಗಡೆ “ಪತ್ರಿಕೆ ಇಂದು ಪ್ರತಿದಿನ  22
.. ಮುಂದೆ ಓದಿ

ಸಲಹೆ- ಸೂಚನೆ

ನಿಮ್ಮ ಸಲಹೆ ಸೂಚನೆಗಳಿಗೆ ಹಾರ್ದಿಕ ಸ್ವಾಗತ

ಇಲ್ಲಿ ಕ್ಲಿಕ್ಕಿಸಿ

Copyright © 2017 Suddinews.com . All Rights Reserved.
^ Back to Top