Thu 18 May 2017, 1:44PM

ಹೆಚ್ಚಿನ ಸುದ್ದಿಗಳು

5

ಬೆಳ್ತಂಗಡಿ : ಪ್ರತಿಷ್ಠಿತ ಜೆಸಿಐ ಬೆಳ್ತಂಗಡಿ ಮಂಜುಶ್ರೀ ಇದರ ವತಿಯಿಂದ ವಲಯದ ಪ್ರತಿಷ್ಠಿತ ಕಾರ್ಯಕ್ರಮಗಳೊಂದಾದ ಟೇಕ್ ಆಪ್-೨೦೧೭ ತರಬೇತಿ ಕಾರ್ಯಕ್ರಮದ ಉದ್ಘಾಟನೆಯು ಮೇ.೧೫ ರಂದು ಜೆಸಿಐ ಬೆಳ್ತಂಗಡಿ ಮಂಜುಶ್ರೀ ಭವನದಲ್ಲಿ ಜರುಗಿತು
ತರಬೇತಿ ಕಾರ್ಯಕ್ರಮದ ಉದ್ಘಾಟನೆಯನ್ನು ಬೆಳ್ತಂಗಡಿ ಸುದ್ದಿ ಬಿಡುಗಡೆ ಪತ್ರಿಕೆಯ ವ್ಯವಸ್ಥಾಪಕರಾದ ಮಂಜುನಾಥ ರೈಯವರು ದೀಪ ಬೆಳಗಿಸುವುದರ ಮೂಲಕ ನೆರವೇರಿಸಿ ಮಾತನಾಡಿ ಇಂದಿನ ಯುವ ಪೀಳಿಗೆಗೆ ಸೂಕ್ತವಾದ ತರಬೇತಿ, ಮಾರ್ಗದರ್ಶನ ಸಿಕ್ಕಾಗ ನಮ್ಮ ಸಮಾಜ ಬಲಿಷ್ಠವಾಗಲು ಸಾಧ್ಯವಾಗುತ್ತದೆ. ವ್ಯಕ್ತಿತ್ವ ವಿಕಸನದಂತಹ ಅನೇಕ ಸಮಾಜಮುಖಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುವುದರ ಜೊತೆಗೆ ಯುವಕರನ್ನು ಸಮಾಜದ ಮುಖ್ಯವಾಹಿನಿಗೆ ತರುವಲ್ಲಿ ಜೆಸಿ ಸಂಸ್ಥೆಯ ಕೊಡುಗೆ ಅನನ್ಯವಾದದ್ದು ಎಂದರು. ರಾಷ್ಟ್ರೀಯ ತರಬೇತುದಾರ ಸತೀಶ್ ಭಟ್ ಬಿಳಿನೆಲೆಯವರು ಮಾತನಾಡಿ ಜೆಸಿಯಂತಹ ಅಂತರಾಷ್ಟ್ರೀಯ ಸಂಸ್ಥೆ ಇಂದು ಉತ್ತಮವಾದ ಸಮಾಜ ಕಟ್ಟುವ ಕೆಲಸವನ್ನು ಮಾಡುತ್ತಿದ್ದು ಯುವಕರು ಹೆಚ್ಚು ಈ ಸಂಸ್ಥೆಗೆ ಸೇರಿ ತಮ್ಮ ವ್ಯಕ್ತಿತ್ವ ವಿಕಸನಗೊಳಿಸಿ ಸಮಾಜದಲ್ಲಿ ಉತ್ತಮ ನಾಗರಿಕರಾಗಿ ಬಾಳಲು ಸಾಧ್ಯವಾಗುತ್ತದೆ ಎಂದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಜೆಸಿಐ ಬೆಳ್ತಂಗಡಿ ಮಂಜುಶ್ರೀ ಅಧ್ಯಕ್ಷ ಸಂತೋಷ್ ಪಿ ಕೋಟ್ಯಾನ್ ವಹಿಸಿದ್ದರು. ನಿಕಟಪೂರ್ವಾಧ್ಯಕ್ಷ ವಲಯಾಧಿಕಾರಿ ವಸಂತ ಶೆಟ್ಟಿ ಶ್ರದ್ಧಾ, ವಲಯಾಧಿಕಾರಿ ಚಿದಾನಂದ ಇಡ್ಯಾ, ಕಾರ್ಯದರ್ಶಿ ರಂಜಿತ್ ಎಚ್.ಡಿ, ಕಾರ್ಯಕ್ರಮ ಸಂಯೋಜಕ ಪ್ರಸಾದ್ ಬಿ.ಎಸ್, ಜೂನಿಯರ್ ಜೆಸಿ ಅಧ್ಯಕ್ಷ ಮನೋಜ್ ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಘಟಕದ ಉಪಾಧ್ಯಕ್ಷ ಪ್ರಶಾಂತ್ ಲಾಲ ಅತಿಥಿಗಳನ್ನು ವೇದಿಕೆಗೆ ಆಹ್ವಾನಿಸಿದರು, ಸದಸ್ಯ ವಿಜಯ ನಿಡಿಗಲ್ ಜೇಸಿವಾಣಿ ಉದ್ಘೋಷಿಸಿದರು, ಸದಸ್ಯರಾದ ಗುರುರಾಜ್ ಹಾಗೂ ಸತೀಶ್ ಸುವರ್ಣ ರವರು ಅತಿಥಿಗಳ ಪರಿಚಯ ಪತ್ರ ಓದಿದರು, ಅಧ್ಯಕ್ಷ ಸಂತೋಷ್ ಪಿ ಕೋಟ್ಯಾನ್ ಸ್ವಾಗತಿಸಿ, ಕಾರ್ಯದರ್ಶಿ ರಂಜಿತ್ ಎಚ್.ಡಿ ಧನ್ಯವಾದವಿತ್ತರು. ನಂತರ ಜೆಸಿಐ ಬೆಳ್ತಂಗಡಿ ಮಂಜುಶ್ರೀ, ಜೆಸಿ ಮಡಂತ್ಯಾರು, ಜೆಸಿ ಉಜಿರೆ ಇದರ ವತಿಯಿಂದ ಟೇಕ್ ಆಫ್ ೨೦೧೭ ತರಬೇತಿಯನ್ನು ನಡೆಸಲಾಯಿತು.

4

ಲಾಲ : ಕುಟುಂಬ ರಾಜಕಾರಣದಿಂದ ದಾಸ್ಯತನಕ್ಕೆ ಒಳಗಾಗಿದ್ದ ಭಾರತ ಇಂದು ನರೇಂದ್ರ ಮೋದಿಯವರ ಸಂದೇಶವಾದ ಸಬ್‌ಕಾ ಸಾಥ್ ಸಬ್‌ಕಾ ವಿಕಾಸ್ ಮಂತ್ರದಡಿ ಮತ್ತೆ ಬದಲಾಗುತ್ತಿದೆ. ಯುವಜನತೆಯ ದೇಶ ಪ್ರೇಮವನ್ನು ಪ್ರಜ್ವಲಿಸುವಂತೆ ಮಾಡುವ ನಿಟ್ಟಿನಲ್ಲಿ ಯುವ ಮೋರ್ಚಾ ದೇಶಾಧ್ಯಂತ ಈ ವಿನೂತನ ಗ್ರಾಮೀಣ ಕ್ರೀಡೋತ್ಸವ ಹಮ್ಮಿಕೊಂಡಿದೆ ಎಂದು ವಿಧಾನ ಪರಿಷತ್ ಪ್ರತಿಪಕ್ಷದ ಮುಖ್ಯ ಸಚೇತಕ ಕ್ಯಾಪ್ಟನ್ ಗಣೇಶ್ ಕಾರ್ಣಿಕ್ ಹೇಳಿದರು. ಭಾರತೀಯ ಜನತಾ ಪಾರ್ಟಿ ಯುವ ಮೋರ್ಚಾ ಬೆಳ್ತಂಗಡಿ ಮಂಡಲ ಇದರ ವತಿಯಿಂದ ಪಂಡಿತ ದೀನ್‌ದಯಾಳ್ ಉಪಾಧ್ಯಾಯರ ಜನ್ಮಶತಾಬ್ಧಿ ವರ್ಷಾಚರಣೆ ಅಂಗವಾಗಿ
ಮೇ. ೧೩ ರಂದು
ಲಾಲ ಪ್ರಸನ್ನ ಶಿಕ್ಷಣ ಸಮುಚ್ಚಯದ ಮೈದಾನದಲ್ಲಿ ಹಮ್ಮಿಕೊಂಡಿದ್ದ ಹೊನಲು ಬೆಳಕಿನ ಆಹ್ವಾನಿತ ತಂಡಗಳ ಪ್ರೋ ಮಾದರಿ ಕಬಡ್ಡಿ ಮತ್ತು ಹಗ್ಗ ಜಗ್ಗಾಟ “ಪಂಡಿತ ದೀನ್‌ದಯಾಳ್ ಟ್ರೋಫಿ- ೨೦೧೭” ಇದರ ಉದ್ಘಾಟನಾ ಸಮಾರಂಭದಲ್ಲಿ ಸೈನಿಕರಿಗೆ ಗೌರವಾರ್ಪಣೆಗೈದು ಬಳಿಕ ಅವರು ಮಾತನಾಡುತ್ತಿದ್ದರು.
ಉದ್ಘಾಟನೆ ನೆರವೇರಿಸಿ ಮಾತನಾಡಿದ ಬಿಜೆಪಿ ಜಿಲ್ಲಾಧ್ಯಕ್ಷ ಸಂಜೀವ ಮಠಂದೂರು ಅವರು ಮಾತನಾಡಿ, ಕ್ರೀಡಾಕೂಟದ ಮೂಲಕ ತಾಲೂಕಿನ ೪೯ ಪಂಚಾಯತ್ ಸಮಿತಿಗಳನ್ನು ಒಂದುಗೂಡಿಸುವ ಕೆಲಸ ಆಗಿದೆ. ಗ್ರಾಮೀಣ ಕಬಡ್ಡಿ ಕ್ರೀಡೆಗೆ ಜಾಗತಿಕ ಮನ್ನಣೆ ಕೂಡುವ ಉದ್ದೇಶ ಕೂಡ ಈಡೇರಿದೆ.
ದೇಶದ ಪ್ರಧಾನಿ ನರೇಂದ್ರ ಮೋದೀಜಿ ಮತ್ತು ರಾಷ್ಟ್ರಾಧ್ಯಕ್ಷ ಅಮಿತ್‌ಶಾ ಅವರ ಕನಸಿನ ಯೋಜನೆಯಾದ ಈ ಕಾರ್ಯವನ್ನು ಬೆಳ್ತಂಗಡಿ ಮಂಡಲ ಮತ್ತು ಯುವ ಮೋರ್ಚಾ ಅಚ್ಚುಕಟ್ಟಾಗಿ ನಿರ್ವಹಿಸುವ ಮೂಲಕ ಮೆಚ್ಚುಗೆಗೆ ಪಾತ್ರವಾಗಿದೆ. ಪಂಚಾಯತ್‌ನಿಂದ ಪಾರ್ಲಿಮೆಂಟ್‌ವರೆಗೆ, ಹಳ್ಳಿಯಿಂದ ದಿಲ್ಲಿವರೆಗೆ ಯುವಕರು ಒಂದಾಗಬೇಕು, ದೈಹಿಕ ಬಲಾಢ್ಯರಾಗಬೇಕು ಎಂದರು. ಮುಖ್ಯ ಅತಿಥಿಯಾಗಿದ್ದ ರಾಜ್ಯ ಯುವ ಮೋರ್ಚಾದ ಮಹಾ ಪ್ರಧಾನ ಕಾರ್ಯದರ್ಶಿ ಬಸವರಾಜ್ ಅವರು ಮಾತನಾಡಿ, ಕ್ರಿಕೆಟ್ ಹಾವಳಿ ಮೂಲಕ ಕಬಡ್ಡಿ ಸೊರಗಿ ಹೋಗಿದ್ದ ಕಾಲದಲ್ಲಿ ಮತ್ತೆ ಅದರ ಸೊಬಗು ಉಳಿಯವಂತೆ ಯುವ ಮೋರ್ಚಾ ಮಾಡಿದೆ. ರಾಜ್ಯಾಧ್ಯಂತ ೨೫ ಸಾವಿರ ತಂಡಗಳು ಭಾಗಿಯಾಗಿ ಕ್ರೀಡಾಕೂಟ ನಡೆದು ಸದೃಢ ಭಾರತವಾಗಲಿದೆ ಎಂದರು. ಜಿಲ್ಲಾ ಯುವ ಮೋರ್ಚಾ ಅಧ್ಯಕ್ಷ ಹರೀಶ್ ಪೂಂಜ, ಮಾಜಿ ಶಾಸಕ ಪ್ರಭಾಕರ ಬಂಗೇರ, ಅಯ್ಯಪ್ಪ ದೇವಸ್ಥಾನ ಬಳಿಯಿಂದ ಮೆರವಣಿಗೆ ಉದ್ಘಾಟಿಸಿದ ಮಾಜಿ ಶಾಸಕ ರುಕ್ಮಯ್ಯ ಪೂಜಾರಿ, ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ಬಿಜೆಪಿ ಬೆಳ್ತಂಗಡಿ ಮಂಡಲದ ಅಧ್ಯಕ್ಷ ರಂಜನ್ ಜಿ ಗೌಡ ಇವರುಗಳು ಮಾತನಾಡಿದರು. ವೇದಿಕೆಯಲ್ಲಿ ಮಂಗಳೂರು ವಿಭಾಗ ಸಹಪ್ರಭಾರಿ ಪ್ರತಾಪಸಿಂಹ ನಾಯಕ್, ಜಿಲ್ಲಾ ಬಿಜೆಪಿ ಉಪಾಧ್ಯಕ್ಷೆ ಶಾರದಾ ಆರ್ ರೈ, ತಾ.ಪಂ ಉಪಾಧ್ಯಕ್ಷೆ ವೇದಾವತಿ, ಜಿಲ್ಲಾ ಪ್ರ. ಕಾರ್ಯದರ್ಶಿ ಕೆ ಕೊರಗಪ್ಪ ನಾಯ್ಕ, ಹಿಂದುಳಿದ ವರ್ಗಗಳ ಜಿಲ್ಲಾ ನಾಯಕ ಕೃಷ್ಣಪ್ಪ ಕಲ್ಲಡ್ಕ, ಜಿ.ಪಂ ಸದಸ್ಯೆ ಸೌಮ್ಯಲತಾ ಜಯಂತ ಗೌಡ, ತಾ.ಪಂ ಸದಸ್ಯರಾದ ಸುಧಾರಕ ಬಿ.ಎಲ್, ಕೊರಗಪ್ಪ ಗೌಡ ಅರಣಪಾದೆ, ಎಂ ಶಶಿಧರ ಕಲ್ಮಂಜ, ವಿಜಯ ಗೌಡ ವೇಣೂರು, ತಾ.ಪಂ ಸ್ಥಾಯಿ ಸಮಿತಿ ಅಧ್ಯಕ್ಷ ಸುಧೀರ್ ಆರ್ ಸುವರ್ಣ, ಪಕ್ಷದ ಕಾರ್ಯದರ್ಶಿಗಳಾದ ಪ್ರಭಾಕರ ಶೆಟ್ಟಿ ಉಪ್ಪಡ್ಕ ಮತ್ತು ಸೀತಾರಾಮ ಬಿ.ಎಸ್ ಇವರುಗಳು ಉಪಸ್ಥಿತರಿದ್ದರು. ಬಿಜೆಪಿ ಯುವ ಮೋರ್ಚಾ ತಾ| ಅಧ್ಯಕ್ಷ ಸಂಪತ್ ಬಿ ಸುವರ್ಣ ಪ್ರಾಸ್ತಾವಿಕವಾಗಿ ಮಾತನಾಡಿ, ಸ್ವಾಗತಿಸಿದರು. ತುಳಸಿದಾಸ್ ಪೈ ಮಡಂತ್ಯಾರು ಕಾರ್ಯಕ್ರಮ ನಿರೂಪಿಸಿದರು. ಯವ ಮೋರ್ಚಾ ಪ್ರ. ಕಾರ್ಯದರ್ಶಿ ರಕ್ಷಿತ್ ಶೆಟ್ಟಿ ವಂದಿಸಿದರು. ಕ್ರೀಡಾಕೂಟದ ಸಂಚಾಲಕರುಗಳಾಗಿದ್ದ ಮಿಥುನ್ ಕುಲಾಲ್, ಚಂದ್ರಕಾಂತ ಗೌಡ ಮಚ್ಚಿನ, ದೀಕ್ಷಿತ್ ಶೆಟ್ಟಿ ಮುದ್ದಿಗೆ, ರಾಜೇಶ್ ಮಿತ್ತಬಾಗಿಲು, ಹಾಗೂ ಯುವ ಮೋರ್ಚಾದ ಪದಾಧಿಕಾರಿಗಳು ಹಾಗೂ ಸದಸ್ಯರುಗಳು ಉಪಸ್ಥಿತರಿದ್ದು ಸಹಕಾರ ನೀಡಿದರು.

3

ಉಜಿರೆ : ಸಂತ ಅಂತೋನಿ ಚರ್ಚ್‌ನ ಬಹುದಿನಗಳ ಬೇಡಿಕೆಯಾಗಿರುವ ಚರ್ಚ್ ಸಭಾಭವನ ನಿರ್ಮಾಣಕ್ಕೆ ಕ್ಷಣಗಣನೆ ಪ್ರಾರಂಭಗೊಂಡಿದೆ. ಸುಮಾರು ರೂ. ೨.೫೦ ಕೋಟಿ ವೆಚ್ಚದಲ್ಲಿ ಅತ್ಯಾಧುನಿಕ ಸೌಲಭ್ಯದೊಂದಿಗೆ ಸಮುದಾಯ ಭವನ ನಿರ್ಮಾಣಗೊಳ್ಳಲಿದೆ. ಇದರ ಶಿಲಾನ್ಯಾಸ ಕಾರ್ಯಕ್ರಮವು ಮೇ.೧೪ ರಂದು ಶಾಸಕ ಕೆ. ವಸಂತ ಬಂಗೇರ ನೆರವೇರಿಸಿ ಶುಭ ಹಾರೈಸಿದರು.

ಮಂಗಳೂರಿನ ಧರ್ಮಪ್ರಾಂತ್ಯದ ಮೊನ್ಸಿಂಜೋರ್ ವಂ.ಫಾ| ಡೇನಿಸ್ ಮೋರಾಸ್ ಪ್ರಭು ದಿವ್ಯ ಬಲಿ ಪೂಜೆ ಅರ್ಪಿಸಿ ಆಶೀರ್ವಚನ ನೆರವೇರಿಸಿ ಶುಭ ಹಾರೈಸಿದರು. ಈ ಸಂದರ್ಭದಲ್ಲಿ ಉಜಿರೆ ಗ್ರಾ.ಪಂ ಅಧ್ಯಕ್ಷ ಶ್ರೀಧರ ಪೂಜಾರಿ, ಅಹಮದಾಬಾದ್‌ನ ಧರ್ಮಗುರು ಮೊನ್ಸಿಂಜೋರ್, ವಂ.ಫಾ| ರೋಕಿ ಪಿಂಟೊ, ಅನುಗ್ರಹ ಶಿಕ್ಷಣ ಸಂಸ್ಥೆಗಳ ಪ್ರಾಂಶುಪಾಲರಾದ ವಂ.ಫಾ| ಉದಯ್ ಜೋಸೆಫ್ ಫೆರ್ನಾಂಡೀಸ್, ಚರ್ಚ್ ಪಾಲನಾ ಮಂಡಳಿಯ ಉಪಾಧ್ಯಕ್ಷ ಅರುಣ್ ರೆಬೆಲ್ಲೊ ಉಪಸ್ಥಿತರಿದ್ದರು. ಚರ್ಚ್‌ನ ಪ್ರಧಾನ ಧರ್ಮಗುರು ವಂ.ಫಾ| ಜೊಸೆಫ್ ಮಸ್ಕರೇನಸ್ ಸರ್ವರನ್ನು ಸ್ವಾಗತಿಸಿದರು. ಪಾಲನಾ ಮಂಡಳಿಯ ಕಾರ್ಯದರ್ಶಿ ವಲೇರಿಯನ್ ರೊಡ್ರಿಗಸ್ ವಂದಿಸಿದರು.
ಶ್ರೀಮತಿ ಲವಿನಾ ಫೆರ್ನಾಂಡಿಸ್ ಕಾರ್ಯಕ್ರಮ ನಿರೂಪಿಸಿದರು. ಬೆಳ್ತಂಗಡಿ ತಾಲೂಕು ಕಾಂಗ್ರೆಸ್ ಸಮಿತಿಯ ಪ್ರಧಾನ ಕಾರ್ಯದರ್ಶಿ ಗ್ರೇಶಿಯಾಸ್ ವೇಗಸ್, ಗುತ್ತಿಗೆದಾರ ಅನಿಲ್ ಡಿಸೋಜ, ಗುತ್ತಿಗೆದಾರ ಹಾಗೂ ಮಾಜಿ ಪಾಲನಾ ಮಂಡಳಿ ಉಪಾಧ್ಯಕ್ಷ ಸಿಲ್ವೆಸ್ಟರ್ ಮೊನೀಸ್ ಸ್ಟ್ಯಾನಿ ಪಿಂಟೊ, ಧರ್ಮ ಭಗಿನಿಯರು, ಪಾಲನಾ ಮಂಡಳಿಯ ಸರ್ವಸದಸ್ಯರು, ಗುರಿಕಾರರು ಸಮಸ್ತ ಕ್ರೈಸ್ತ ಭಾಂಧವರು ಉಪಸ್ಥಿತರಿದ್ದರು.

2

ಬೆಳ್ತಂಗಡಿ : ಕಳೆದ ಎಪ್ರಿಲ್ ತಿಂಗಳಲ್ಲಿ ನಡೆದ ಎಸ್.ಎಸ್.ಎಲ್.ಸಿ. ಪಬ್ಲಿಕ್ ಪರೀಕ್ಷೆಯ ಫಲಿತಾಂಶ ಮೇ ೧೨ ರಂದು ಪ್ರಕಟಗೊಂಡಿದ್ದು, ಬೆಳ್ತಂಗಡಿ ತಾಲೂಕಿನ ಸರಕಾರಿ, ಅನುದಾನಿತ ಹಾಗೂ ಅನುದಾನ ರಹಿತ ಸೇರಿದಂತೆ ಒಟ್ಟು ೬೫ ಪ್ರೌಢ ಶಾಲೆಗಳಿಂದ ಪರೀಕ್ಷೆಗೆ ಕುಳಿತ ೩,೮೫೫ ವಿದ್ಯಾರ್ಥಿ-ವಿದ್ಯಾರ್ಥಿನಿಯರಲ್ಲಿ ೩,೨೫೯ ಮಂದಿ ಉತ್ತೀರ್ಣರಾಗಿ ತಾಲೂಕಿಗೆ ಶೇ ೮೪.೫೪ ಫಲಿತಾಂಶ ಲಭಿಸಿದೆ. ಕಳೆದ ವರ್ಷ ತಾಲೂಕಿಗೆ ಶೇ ೮೭.೯೮ ಫಲಿತಾಂಶ ಬಂದಿದ್ದು, ಕಳೆದ ವರ್ಷಕ್ಕೆ ಹೋಲಿಸಿದಲ್ಲಿ ಈ ವರ್ಷ ಫಲಿತಾಂಶದಲ್ಲಿ ಶೇ ೩.೪೪ರಷ್ಟು ಇಳಿಕೆಯಾಗಿದೆ.
ಬೆಳ್ತಂಗಡಿ ತಾಲೂಕಿನ ೩೬ ಸರಕಾರಿ ಪ್ರೌಢ ಶಾಲೆ, ೯ ಅನುದಾನಿತ ಪ್ರೌಢ ಶಾಲೆ, ಹಾಗೂ ೨೦ ಅನುದಾನಿತ ರಹಿತ ಪ್ರೌಢ ಶಾಲೆ ಸೇರಿದಂತೆ ಒಟ್ಟು ೬೫ ಪ್ರೌಢ ಶಾಲೆಗಳಿಂದ ೧,೯೦೬ ವಿದ್ಯಾರ್ಥಿಗಳು ಮತ್ತು ೧,೯೪೯ ವಿದ್ಯಾರ್ಥಿನಿಯರು ಸೇರಿದಂತೆ ಒಟ್ಟು ೩,೮೫೫ ಮಂದಿ ಪರೀಕ್ಷೆಗೆ ಹಾಜರಾಗಿದ್ದರು. ಇವರಲ್ಲಿ ೧,೫೫೩ ವಿದ್ಯಾರ್ಥಿಗಳು ಮತ್ತು ೧,೭೦೬ ವಿದ್ಯಾರ್ಥಿನಿಯರು
ಸೇರಿದಂತೆ ಒಟ್ಟು ೩,೨೫೯ ಮಂದಿ ಉತ್ತೀರ್ಣರಾಗಿ ಶೇ ೮೪.೫೪ ಫಲಿತಾಂಶ ದಾಖಲಾಗಿದೆ. ವಿದ್ಯಾರ್ಥಿಗಳು ಶೇ ೮೧.೪೮ ಹಾಗೂ ವಿದ್ಯಾರ್ಥಿನಿಯರು ಶೇ ೮೭.೫೩ ಉತ್ತೀರ್ಣರಾಗಿದ್ದು, ಫಲಿತಾಂಶದಲ್ಲಿ ವಿದ್ಯಾರ್ಥಿನಿಯರು ಮೇಲುಗೈ ಸಾಧಿಸಿದ್ದಾರೆ. ಪರೀಕ್ಷೆಗೆ ಹಾಜರಾದ ೩,೮೫೫ ವಿದ್ಯಾರ್ಥಿಗಳಲ್ಲಿ ೫೯೬ ಮಂದಿ ಅನುತ್ತೀರ್ಣಗೊಂಡಿದ್ದಾರೆ.
೨೨೩ ವಿದ್ಯಾರ್ಥಿಗಳಿಗೆ ಎ+ ಶ್ರೇಣಿ:
ತಾಲೂಕಿನ ೬೫ ಪ್ರೌಢ ಶಾಲೆಗಳಿಂದ ಉತ್ತೀರ್ಣರಾದ ೩,೨೫೯ ವಿದ್ಯಾರ್ಥಿ-ವಿದ್ಯಾರ್ಥಿನಿಯರಲ್ಲಿ ೨೨೩ ಮಂದಿ ವಿದ್ಯಾರ್ಥಿಗಳು ಎ+ ಶ್ರೇಣಿಯನ್ನು ಪಡೆದುಕೊಂಡಿದ್ದಾರೆ. ೬೧೮ ಮಂದಿ ಎ ಶ್ರೇಣಿ, ೮೨೬ ಮಂದಿ ಬಿ+ ಶ್ರೇಣಿ, ೮೮೫ ಮಂದಿ ಬಿ ಶ್ರೇಣಿ, ೬೦೯ ಮಂದಿ ಸಿ+ ಶ್ರೇಣಿ, ೯೮ ಮಂದಿ ವಿದ್ಯಾರ್ಥಿಗಳು ಸಿ ಶ್ರೇಣಿಯನ್ನು ಪಡೆದುಕೊಂಡಿದ್ದಾರೆ.
ಅತೀ ಹೆಚ್ಚು ಎ+ ಶ್ರೇಣಿ ಪಡೆದ ಶಾಲೆಗಳು:
ಸರಕಾರಿ ಶಾಲೆಗಳಲ್ಲಿ ಮೊರಾರ್ಜಿ ದೇಸಾಯಿ ಮಚ್ಚಿನ ೧೯, ಸರಕಾರಿ ಪ್ರೌಢ ಶಾಲೆ ಮಚ್ಚಿನ ೫, ಸರಕಾರಿ ಪ್ರೌಢ ಶಾಲೆ ಗೇರುಕಟ್ಟೆ ೫, ಹಾಗೂ ಖಾಸಗಿ ಶಾಲೆಗಳಲ್ಲಿ ನಾರಾವಿ ಪ್ರೌಢ ಶಾಲೆ ೧೦, ಎಸ್.ಡಿ.ಎಂ ಸೆಕೆಂಡರಿ ಶಾಲೆ ಉಜಿರೆ ೧೨, ಸೈಂಟ್‌ಮೇರಿಸ್ ಲಾಲ ೧೮, ಸೈಂಟ್ ಪೀಟರ್ ಅಳದಂಗಡಿ ೫, ಸೈಂಟ್ ಸಾವಿಯೋ ಬೆಂದ್ರಾಳ ೯, ಎಸ್.ಡಿ.ಎಂ ಆಂಗ್ಲ ಮಾಧ್ಯಮ ಉಜಿರೆ ೧೩, ಎಸ್.ಡಿ.ಎಂ ಆಂಗ್ಲ ಮಾಧ್ಯಮ ಧರ್ಮಸ್ಥಳ ೭, ಹೋಲಿ ರೆಡಿಮರ್ ಆಂ.ಮಾ.ಪ್ರೌಢ ಶಾಲೆ ಬೆಳ್ತಂಗಡಿ ೬, ಅನುಗ್ರಹ ಆಂಗ್ಲ ಮಾಧ್ಯಮ ಉಜಿರೆ ೨೫, ವಾಣಿ ಆಂ.ಮಾ. ಹಳೆಕೋಟೆ ೭, ಸೇ.ಹಾ. ಮಡಂತ್ಯಾರು ೧೭ ಅತಿ ಹೆಚ್ಚು ಎ+ ಶ್ರೇಣಿ ಪಡೆದ ಶಾಲೆಗಳಾಗಿವೆ.
೧೦ ಪ್ರೌಢ ಶಾಲೆಗಳಿಗೆ ಶೇ ೧೦೦ ಫಲಿತಾಂಶ:
ತಾಲೂಕಿನ ೨ ಸರಕಾರಿ ಮತ್ತು ೮ ಖಾಸಗಿ ಸೇರಿದಂತೆ ಒಟ್ಟು ೧೦ ಪ್ರೌಢ ಶಾಲೆಗಳು ಶೇ ೧೦೦ ಫಲಿತಾಂಶವನ್ನು ಪಡೆದುಕೊಂಡ ದಾಖಲೆಯನ್ನು ನಿರ್ಮಿಸಿದೆ. ಸರಕಾರಿ ಶಾಲೆಗಳಲ್ಲಿ ಸ.ಪ್ರೌ. ಶಾಲೆ ಗುರುವಾಯನಕೆರೆ ಮತ್ತು ಮೊರಾರ್ಜಿ ದೇಸಾಯಿ ವಸತಿ ಶಾಲೆ ಮಚ್ಚಿನ ಶೇ ೧೦೦ ಫಲಿತಾಂಶ ಪಡೆದ ಕೀರ್ತಿಗೆ ಈ ವರ್ಷ ಪಾತ್ರವಾಗಿದೆ. ಖಾಸಗಿ ಶಾಲೆಗಳಲ್ಲಿ ಸೈಂಟ್ ಮೇರಿಸ್ ಪ್ರೌ.ಶಾಲೆ ಲಾಯಿಲ, ಕುಂಭಶ್ರೀ ಆಂಗ್ಲ ಮಾಧ್ಯಮ ಶಾಲೆ ನಿಟ್ಟಡೆ, ದಿವ್ಯಜ್ಯೋತಿ ಆಂಗ್ಲ ಮಾಧ್ಯಮ ಕಾಯರ್ತಡ್ಕ, ಸೈಂಟ್ ಸಾವಿಯೋ ಬೆಂದ್ರಾಳ, ಹೋಲಿ ರೆಡೀಮರ್ ಆಂ.ಮಾ. ಪ್ರೌ.ಶಾಲೆ ಬೆಳ್ತಂಗಡಿ, ಸೈಂಟ್ ಪೀಟರ್ ಅಳದಂಗಡಿ, ಎಸ್.ಡಿ.ಎಂ ಧರ್ಮಸ್ಥಳ, ಎಸ್.ಡಿ.ಎಂ ಆಂ.ಮಾ ಉಜಿರೆ ಶಾಲೆಗಳು ಶೇ ೧೦೦ ಫಲಿತಾಂಶ ಪಡೆದುಕೊಂಡ ಹಿರಿಮೆಗೆ ಪಾತ್ರವಾಗಿದೆ.
ಶೇ ೯೦ಕ್ಕಿಂತ ಹೆಚ್ಚು ಫಲಿತಾಂಶ ದಾಖಲು:
ಸರಕಾರಿ ಶಾಲೆಗಳಲ್ಲಿ ಮೊರಾರ್ಜಿ ದೇಸಾಯಿ ಮುಂಡಾಜೆ, ಸ.ಪ್ರೌ. ಶಾಲೆ ಪೆರ್ಲಬೈಪಾಡಿ, ಸ.ಪ.ಪೂ. ಕಾಲೇಜು ಕೊಕ್ರಾಡಿ, ಸ.ಪ್ರೌ.ಶಾಲೆ ಸವಣಾಲು,ಸ.ಪ.ಪೂ.ಕಾಲೇಜು ಕೊಯ್ಯೂರು, ಸ.ಪ್ರೌ.ಶಾಲೆ ನೇಲ್ಯಡ್ಕ, ಸ.ಪ.ಪೂ.ಕಾ. ಕೊಕ್ಕಡ, ಸ.ಪ್ರೌ.ಶಾ. ಹಳೆಪೇಟೆ ಉಜಿರೆ ಹಾಗೂ ಅನುದಾನಿತ ಶಾಲೆಗಳಲ್ಲಿ ನಾರಾವಿ ಪ್ರೌಢ ಶಾಲೆ, ಸಂತ ತೆರೆಸಾ ಬೆಳ್ತಂಗಡಿ, ಎಸ್.ಡಿ.ಎಂ ಸೆಕೆಂಡರಿ ಉಜಿರೆ, ಎಸ್.ಡಿ.ಎಂ ಧರ್ಮಸ್ಥಳ, ಅನುದಾನ ರಹಿತ ಶಾಲೆಗಳಲ್ಲಿ ಅನುಗ್ರಹ ಆಂಗ್ಲ ಮಾಧ್ಯಮ ಉಜಿರೆ, ಸಂತ ತೆರೆಸಾ ಆಂ.ಮಾ.ಬೆಳ್ತಂಗಡಿ, ವಾಣಿ ಆಂ.ಮಾ. ಹಳೆಕೋಟೆ, ಸೈಂಟ್ ಪಾವಲ್ಸ್ ನಾರಾವಿ, ಗುಡ್‌ಫ್ಯೂಚರ್ ಆಂ.ಮಾ. ಪಿಲ್ಯ, ಆತ್ಮಾನಂದ ಸರಸ್ವತಿ ಶಾಲೆ ದೇವರಗುಡ್ಡೆ, ಸೇ.ಹಾ.ಆಂ.ಮಾ.ಶಾಲೆ ಮಡಂತ್ಯಾರು, ರೆಹಮಾನಿಯಾ ಪ್ರೌ. ಶಾಲೆ ಕಾಜೂರು ಶೇ ೯೦ಕ್ಕಿಂತ ಹೆಚ್ಚು ಫಲಿತಾಂಶ ಪಡೆದುಕೊಂಡಿದೆ.
ಸರಕಾರಿ ಶಾಲೆಗಳಲ್ಲಿ ಗುರುವಾಯನಕೆರೆ ಸರಕಾರಿ ಪ್ರೌಢ ಶಾಲೆ ಸತತ ೬ನೇ ಬಾರಿಗೆ ಶೇ ೧೦೦ ಫಲಿತಾಂಶ ಪಡೆದ ರಾಜ್ಯದ ಏಕೈಕ ಸರಕಾರಿ ಪ್ರೌಢ ಶಾಲೆ ಎಂಬ ದಾಖಲೆಯನ್ನು ಪಡೆದುಕೊಂಡಿದೆ. ಮುಖ್ಯೋಪಾಧ್ಯಾಯರು, ಶಿಕ್ಷಕರು ಸೇರಿದಂತೆ ವಿವಿಧ ಸಮಸ್ಯೆಗಳನ್ನು ಎದುರಿಸುತ್ತಿರುವ ತಾಲೂಕಿನ ೩೬ ಸರಕಾರಿ ಶಾಲೆಗಳು ಶೇ ೫೭ಕ್ಕಿಂತ ಹೆಚ್ಚು ಫಲಿತಾಂಶ ಪಡೆದುಕೊಳ್ಳುವಲ್ಲಿ ಯಶಸ್ವಿಯಾಗಿದೆ. ಕಳೆದ ಬಾರಿ ಶೇ ೧೦೦ ಫಲಿತಾಂಶ ಪಡೆದ ಪೆರ್ಲಬೈಪಾಡಿ ಪ್ರೌಢ ಶಾಲೆಯ ಓರ್ವ ವಿದ್ಯಾರ್ಥಿಗೆ ಇಂಗ್ಲೀಷ್‌ನಲ್ಲಿ ಕಡಿಮೆ ಅಂಕ ಬಂದಿದ್ದು, ಮರು ಮೌಲ್ಯಮಾನಕ್ಕೆ ಹಾಕಲಾಗಿದ್ದು, ಆತ ಉತ್ತೀರ್ಣಗೊಂಡರೆ ಶೇ ೧೦೦ ಫಲಿತಾಂಶ ದಾಖಲಾಗಲಿದೆ. ಖಾಸಗಿ ಶಾಲೆಗಳಲ್ಲಿ ಕುಂಭಶ್ರೀ ಆಂಗ್ಲ ಮಾಧ್ಯಮ ವಸತಿ ಶಾಲೆ ನಿಟ್ಟಡೆ ಸತತ ೭ನೇ ಬಾರಿಗೆ ಶೇ ೧೦೦ ಫಲಿತಾಂಶ ಪಡೆದ ಕೀರ್ತಿಗೆ ಪಾತ್ರವಾಗಿದೆ.
ಈ ಬಾರಿಯ ಎಸ್.ಎಸ್.ಎಲ್.ಸಿ ಪಬ್ಲಿಕ್ ಪರೀಕ್ಷೆಯಲ್ಲಿ ಅಂಕಗಳಿಸುವಿಕೆಯಲ್ಲಿ ಉಜಿರೆ ಅನುಗ್ರಹ ಆಂಗ್ಲ ಮಾಧ್ಯಮ ಪ್ರೌಢ ಶಾಲೆಯ ವಿದ್ಯಾರ್ಥಿಗಳು ಪ್ರಥಮ, ದ್ವಿತೀಯ ಹಾಗೂ ತೃತೀಯ ಸ್ಥಾನವನ್ನು ಪಡೆದುಕೊಂಡ ಹಿರಿಮೆಗೆ ಪಾತ್ರರಾಗಿದ್ದಾರೆ.
ಜೋಯಲ್ ಆಂಟನಿ ೬೨೦ ಅಂಕಗಳಿಸಿ ತಾಲೂಕಿನಲ್ಲಿ ಪ್ರಥಮ, ಇದೇ ಶಾಲೆಯ ಅಧಿತಿ ಪ್ರಭು ೬೧೯ ಅಂಕಗಳಿಸಿ ದ್ವಿತೀಯ ಹಾಗೂ ಇದೇ ಶಾಲೆಯ ನಿಯೋಗ್ ಮೋಹನ್ ೬೧೭ ಅಂಕಗಳಿಸಿ ತೃತೀಯ ಸ್ಥಾನ ಪಡೆದುಕೊಂಡಿದ್ದಾರೆ.
ಸರಕಾರಿ ಪ್ರೌಢ ಶಾಲೆಗಳಲ್ಲಿ ಮೊರಾರ್ಜಿ ದೇಸಾಯಿ ಮಚ್ಚಿನದ ನವೀನ ೬೧೧ ಅಂಕಗಳಿಸಿ ಪ್ರಥಮ ಹಾಗೂ ಇದೇ ಶಾಲೆಯ ಜಿನ್ಸಿ ಕೆ., ಸ.ಪ್ರೌ.ಶಾಲೆ ಮಚ್ಚಿನದ ಸಪ್ರೀನಾ ಬಾನು, ಸ.ಪ್ರೌ.ಶಾಲೆ ಕಾಶಿಪಟ್ನದ ಪ್ರಜೇಶ್, ಸ.ಪ.ಪೂ.ಕಾ. ಗೇರುಕಟ್ಟೆಯ ಮೋಹಿನಿ ಹೆಚ್. ತಲಾ ೬೦೨ ಅಂಕ ಗಳಿಸಿ ದ್ವಿತೀಯ ಮತ್ತು ಸ.ಪ್ರೌ. ಶಾಲೆ ಮಚ್ಚಿನದ ಜಯಶ್ರೀ ೬೦೦ ಅಂಕಗಳಿಸಿ ತೃತೀಯ ಸ್ಥಾನ, ಸ.ಪ.ಪೂ.ಕಾಲೇಜು ಪುಂಜಾಲಕಟ್ಟೆಯ ಎಸ್. ಪೂರ್ಣೇಶ್ ಶೆಟ್ಟಿ ೫೯೮ ಅಂಕಗಳಿಸಿ ನಾಲ್ಕನೇ ಸ್ಥಾನ, ಸ.ಪ್ರೌ.ಶಾಲೆ ನಾರಾವಿಯ ಮೇಘ ೫೯೭ ಅಂಕ ಗಳಿಸಿ ಐದನೇಯ ಸ್ಥಾನ, ಗುರುವಾಯನಕೆರೆ ಪ್ರೌಢ ಶಾಲೆಯ ಪವಿತ್ರ ಮತ್ತು ಸ.ಪ್ರೌ.ಶಾಲೆ ನಾವೂರಿನ ಯಶ್ಮಿತಾ ತಲಾ ೫೯೪ ಅಂಕಗಳಿಸಿ ಆರನೇ ಸ್ಥಾನ, ಗುರುವಾಯನಕೆರೆ ಸ. ಪ್ರೌ.ಶಾಲೆಯ ಶ್ರಾವ್ಯ ೫೯೩ ಅಂಕಗಳಿಸಿ ಏಳನೇ ಸ್ಥಾನ ಪಡೆದುಕೊಂಡಿದ್ದಾರೆ.
ಅನುದಾನಿತ ಪ್ರೌಢ ಶಾಲೆಗಳಲ್ಲಿ ನಾರಾವಿ ಪ್ರೌ. ಶಾಲೆಯ ಚೈತ್ರಾ ೬೧೧ ಅಂಕಗಳಿಸಿ ಪ್ರಥಮ, ಇದೇ ಶಾಲೆಯ ಸ್ವಾತಿ ಪಿ.ಹೆಗಡೆ ೬೦೩ ಅಂಕಗಳಿಸಿ ದ್ವಿತೀಯ, ಎಸ್.ಡಿ.ಎಂ ಸೆಕೆಂಡರಿ ಉಜಿರೆಯ ನಂದಿನಿ ೫೯೫ ಅಂಕಗಳಿಸಿ ತೃತೀಯ ಸ್ಥಾನ, ಸೇ.ಹಾ. ಮಡಂತ್ಯಾರಿನ ಅಪೇಕ್ಷಾ ಕೆ. ೫೯೪ ಅಂಕ ಗಳಿಸಿ ನಾಲ್ಕನೇ ಸ್ಥಾನ ಪಡೆದುಕೊಂಡಿದ್ದಾರೆ.
ಅನುದಾನ ರಹಿತ ಪ್ರೌಢ ಶಾಲೆಗಳಲ್ಲಿ ಸೇ.ಹಾ.ಮಡಂತ್ಯಾರಿನ ಶ್ರೇಯಾ ೬೧೬ ಅಂಕಗಳಿಸಿ ನಾಲ್ಕನೇ ಸ್ಥಾನ, ಸೈಂಟ್ ಸಾವಿಯೋ ಬೆಂದ್ರಾಳದ ಡಯಾನ ಮತ್ತು ವಾಣಿ ಆಂ. ಮಾ. ಶಾ.ಹಳೆಕೋಟೆಯ ವಿಮರ್ಶ ತಲಾ ೬೧೫ ಅಂಕಗಳಿಸಿ ಐದನೇ ಸ್ಥಾನ, ಸೇ.ಹಾ. ಆಂ.ಮಾ.ಶಾ. ಮಡಂತ್ಯಾರಿನ ಸಾತ್ವಿಕ್ ಜಿ. ಶೆಟ್ಟಿ ೬೧೪ ಅಂಕಗಳಿಸಿ ಆರನೇ ಸ್ಥಾನ, ಎಸ್.ಡಿ.ಎಂ ಆಂ.ಮಾ. ಉಜಿರೆಯ ಶಿವಪ್ರಸಾದ್ ೬೧೩ ಅಂಕಗಳಿಸಿ ಏಳನೇ ಸ್ಥಾನ, ವಾಣಿ ಆಂ.ಮಾ.ಶಾ.ಹಳೆಕೋಟೆಯ ಪ್ರಿಯ ೬೧೨ ಅಂಕಗಳಿಸಿ ಎಂಟನೇ ಸ್ಥಾನ, ಅನುಗ್ರಹ ಆಂ.ಮಾ. ಉಜಿರೆಯ ವಿನಿತ್ ಸಿಕ್ವೇರಾ ೬೧೦ ಅಂಕಗಳಿಸಿ ಒಂಭತ್ತನೇಯ ಸ್ಥಾನ ಪಡೆದುಕೊಂಡಿದ್ದಾರೆ.

1

ಬೆಳ್ತಂಗಡಿ ಕರ್ನಾಟಕ ರಾಜ್ಯ ಪದವಿ ಪೂರ್ವ ಶಿಕ್ಷಣ ಮಂಡಳಿ ಎಪ್ರಿಲ್ ತಿಂಗಳಲ್ಲಿ ನಡೆಸಿದ ದ್ವಿತೀಯ ಪಿ.ಯು.ಸಿ. ಪಬ್ಲಿಕ್ ಪರೀಕ್ಷೆಯ ಫಲಿತಾಂಶವು ಮೇ 12 ರಂದು ಎಲ್ಲಾ ಕಾಲೇಜುಗಳಲ್ಲಿ ಪ್ರಕಟಗೊಂಡಿದ್ದು, ತಾಲೂಕಿನ ಖಾಸಗಿ ಮತ್ತು ಸರಕಾರಿ ಪ. ಪೂ ಕಾಲೇಜುಗಳು ಸೇರಿ ಒಟ್ಟು 20 ಕಾಲೇಜು ಮೂಲಕ ಪರೀಕ್ಷೆ ಬರೆದಿದ್ದ 3512 ಮಂದಿಯ ಪೈಕಿ 3328 ಮಂದಿ ಉತ್ತೀರ್ಣರಾಗಿದ್ದು ತಾಲೂಕಿಗೆ ಶೇ. 94.76 ಫಲಿತಾಂಶ ಬಂದಿದೆ. ಕಾಲೇಜುವಾರು ಸಂಪೂರ್ಣ ವಿವರಗಳನ್ನು ಒಳ ಪುಟ ೧೬ರಲ್ಲಿ ಪ್ರಕಟಿಸಲಾಗಿದೆ. ಬೆಳ್ತಂಗಡಿ ತಾಲೂಕಿ ನಲ್ಲಿ ಸರಕಾರಿ ಕಾಲೇಜುಗಳಲ್ಲಿ ಅರಸಿನಮಕ್ಕಿ ಪ.ಪೂ. ಕಾಲೇಜು ಶೇ. 100 ಫಲಿತಾಂಶ ಪಡೆದು ಸರಕಾರಿ ಕಾಲೇಜುಗಳಲ್ಲಿ ಅತೀ ಹೆಚ್ಚು ಫಲಿತಾಂಶ ಪಡೆದ ಕೀರ್ತಿಗೆ ಪಾತ್ರವಾಗಿದೆ. ಪುಂಜಾಲಕಟ್ಟೆ ಸರಕಾರಿ ಪ.ಪೂ. ಕಾಲೇಜು ಶೇ ೯೬.೫೩ ಫಲಿತಾಂಶ ಪಡೆದು ದ್ವಿತೀಯ ಸ್ಥಾನದಲ್ಲಿದೆ. ಅಂತೆಯೇ ಖಾಸಗಿ ಕಾಲೇಜುಗಳಲ್ಲಿ ಪ್ರಥಮ ಸ್ಥಾನವನ್ನು ಉಜಿರೆ ಎಸ್.ಡಿ.ಎಂ. ಸನಿವಾಸ ಕಾಲೇಜು (ರೆಸಿಡೆನ್ಶಿಯಲ್) ಶೇ.೯೯.೩೪ ಫಲಿತಾಂಶ ಪಡೆದರೆ ಅನುಗ್ರಹ ಪ.ಪೂ ಕಾಲೇಜು ಶೇ. ೯೮.೩೩ ಫಲಿತಾಂಶ ಪಡೆದು ದ್ವಿತೀಯ ಸ್ಥಾನದಲ್ಲಿದೆ.
ತಾಲೂಕಿನಲ್ಲಿ ಕಲಾ ವಿಭಾಗದಲ್ಲಿ ಎಸ್.ಡಿ.ಎಂ. ಉಜಿರೆ ಪದವಿ ಪೂರ್ವ ಕಾಲೇಜಿನ ಭಾರ್ಗವಿ ಆರ್ ಶೇಠ್ ೫೫೮ ಅಂಕ ಪಡೆದು ಪ್ರಥಮ, ವಾಣಿಜ್ಯ ವಿಭಾಗದಲ್ಲಿ ಅರ್ಜುನ್ ಶೆಣೈ ೫೮೬ ಅಂಕಗಳಿಸಿ ಪ್ರಥಮ, ವಿಜ್ಞಾನ ವಿಭಾಗದಲ್ಲಿ ಉಜಿರೆ ಎಸ್.ಡಿ.ಎಂ. ಪ. ಪೂರ್ವ ಕಾಲೇಜಿನ ಪ್ರಣವ್ ಭಟ್ ೫೯೪ ಅಂಕ ಪಡೆದು ಪ್ರಥಮ ಸ್ಥಾನ ಪಡೆದುಕೊಂಡಿದ್ದಾರೆ.
ಪ್ರಣವ್ ಭಟ್‌ಗೆ ರಾಜ್ಯ ಮಟ್ಟದಲ್ಲಿ ತೃತೀಯ ಸ್ಥಾನ :
ಉಜಿರೆ ಎಸ್‌ಡಿಎಂ ಪ.ಪೂ. ಕಾಲೇಜಿನ ವಿಜ್ಞಾನ ವಿಭಾಗದ ವಿದ್ಯಾರ್ಥಿ ಪ್ರಣವ್ ಭಟ್ ಅವರಿಗೆ ಈ ಬಾರಿ ಪರೀಕ್ಷೆಯಲ್ಲಿ ೫೯೪ ಅಂಕಗಳು ಬಂದಿದ್ದು ಇದು ರಾಜ್ಯಮಟ್ಟದಲ್ಲಿ ಮೂರನೇ ಸ್ಥಾನದಲ್ಲಿದೆ ಎಂದು ಕಾಲೇಜಿನ ಪ್ರಾಂಶುಪಾಲ ದಿನೇಶ್ ಚೌಟ ತಿಳಿಸಿದ್ದಾರೆ.
ಈ ಬಾರಿ ಕಲಾ ವಿಭಾಗದಲ್ಲಿ ವಾಣಿ ಪ. ಪೂ. ಕಾಲೇಜು, ಅನುಗ್ರಹ ಪ. ಪೂ ಕಾಲೇಜು, ಅರಸಿನಮಕ್ಕಿ ಸರಕಾರಿ ಪ. ಪೂ ಕಾಲೇಜು ಶೇ. ೧೦೦ ಫಲಿತಾಂಶ ದಾಖಲಿಸಿದೆ.
ಅಂತೆಯೇ ವಾಣಿಜ್ಯ ವಿಭಾಗದಲ್ಲೂ ಅರಸಿನಮಕ್ಕಿ ಸರಕಾರಿ ಪ. ಪೂ ಕಾಲೇಜು ಶೇ. ೧೦೦ ಫಲಿತಾಂಶ ಪಡೆದುಕೊಂಡಿದೆ.
ವಿಜ್ಞಾನ ವಿಭಾಗದಲ್ಲಿ ಎಸ್‌ಡಿಎಂ ರೆಸಿಡೆನ್ಶಿಯಲ್ ಕಾಲೇಜು ಶೇ. ೯೯.೩೪ ಅತಿ ಹೆಚ್ಚು ಫಲಿತಾಂಶ ಪಡೆದುಕೊಂಡಿದ್ದರೆ, ವಾಣಿ ಪ. ಪೂ ಕಾಲೇಜು ಶೇ. ೯೮.೧೬ ಫಲಿತಾಂಶ ಪಡೆದುಕೊಂಡು ದ್ವಿತೀಯ ಸ್ಥಾನದಲ್ಲಿದೆ. ವಾಣಿಜ್ಯ ವಿಭಾಗದಲ್ಲಿ ಶ್ರೀ ಗುರುದೇವ ಕಾಲೇಜು ಬಿ ವಿಭಾಗ ಶೇ. ೧೦೦ ಫಲಿತಾಂಶ ದಾಖಲಿಸಿದೆ.
ಎಸ್.ಡಿ.ಎಂ. ಪ.ಪೂ. ಕಾಲೇಜಿನಲ್ಲಿ ೨೨೭ ಮಂದಿ, ವಾಣಿ ಪ.ಪೂ. ಕಾಲೇಜಿನಲ್ಲಿ ೭೯ ಮಂದಿ, ಸೇ.ಹಾ. ಪ.ಪೂ. ಕಾಲೇಜು ಮಡಂತ್ಯಾರಿನಲ್ಲಿ ೪೬ ಮಂದಿ, ಉಜಿರೆ ಎಸ್.ಡಿ.ಎಂ. ಸನಿವಾಸ ಕಾಲೇಜಿನಲ್ಲಿ ೬೦ ಮಂದಿ, ಸೈಂಟ್ ಆಂಟನಿ ಪ.ಪೂ ಕಾಲೇಜು ನಾರಾವಿಯಲ್ಲಿ ೨೮ ಮಕ್ಕಳು ಹೆಚ್ಚು ಸಂಖ್ಯೆಯಲ್ಲಿ ಡಿಸ್ಟಿಂಕ್ಷನ್ ಪಡೆದುಕೊಂಡಿದ್ದಾರೆ. ಉಳಿದ ಎಲ್ಲ ಕಾಲೇಜುಗಳೂ ಕೂಡ ಡಿಸ್ಟಿಂಕ್ಷನ್ ಗಳಿಸಿಕೊಂಡಿವೆ.

ksmca copy

ksmca2ಬೆಳ್ತಂಗಡಿ : ಕೆಎಸ್‌ಎಂಸಿಎ ಯ ಸಮಾವೇಶ ಇಂದು(ಮೇ.17) ಬೆಳ್ತಂಗಡಿ ಸಭಾಗಂಣದಲ್ಲಿ ನಡೆಯಿತು.

charmadi1

charmadi

charmadi.2

charmadi.3ಚಾರ್ಮಾಡಿ ಕಣಿವೆ ರಸ್ತೆಯ ಮೂರನೇ ತಿರುವಿನಲ್ಲಿ ಇಂದು ಕೇರಳ ನೋಂದಾವಣೆಯ ಬಸ್ಸು ಪ್ರಪಾತಕ್ಕೆ ಉರುಳಿ ಬಿದ್ದಿದೆ ಎಂಬ ಮಾಹಿತಿ ಲಭ್ಯವಾಗಿದೆ. ಬಸ್ಸಿನಲ್ಲಿದ್ದ ಪ್ರಯಾಣಿಕರ ಪೈಕಿ ಇಬ್ಬರು ಮೃತ ಪಟ್ಟಿದ್ದು, ಹಲವರಿಗೆ ಗಾಯಗಳಾಗಿವೆ ಎಂದು ಮಾಹಿತಿ ಲಭ್ಯವಾಗಿದೆ. ಮೃತ ದೇಹವನ್ನು ಸರಕಾರಿ ಆಸ್ಪತ್ರೆಗೆ ಸ್ಥಳಾಂತರಿಸಲಾಗಿದೆ. ಗಾಯಾಳುಗಳಿಗೆ ವಿವಿಧ ಆಸ್ಪತ್ರಗಳಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.

SDPI BALENJAಬಳೆಂಜ : ಮೇ. 15 ರಂದು ಸೋಶಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾ ತೆಂಕಕಾರಂದೂರು ಗ್ರಾಮ ಸಮಿತಿ ವತಿಯಿಂದ ನೀರಿನ ಬೆಲೆ ಏರಿಕೆಯ ವಿರುದ್ಧ ಬಳಂಜ ಗ್ರಾಮ ಪಂಚಾಯತ್ ಎದುರು ಪ್ರತಿಭಟನೆ ನಡೆಸಿ ನೀರಿನ ಬೆಲೆ ಇಳಿಸುವಂತೆ ಮನವಿ ಸಲ್ಲಿಸಲಾಯಿತು.
ಪ್ರತಿಭಟನೆಯ ನೇತೃತ್ವ ಎಸ್‌ಡಿಪಿಐ ತೆಂಕಕಾರಂದೂರು ಗ್ರಾಮ ಸಮಿತಿ ಅಧ್ಯಕ್ಷ ಹಸನ್ ಗಿಂಡಾಡಿ ವಹಿಸಿದ್ದರು. ತಾಲೂಕು ಅಧ್ಯಕ್ಷ ಅಕ್ಬರ್ ಬೆಳ್ತಂಗಡಿ, ಸ್ಥಳೀಯ ಮುಖಂಡರಾದ ನವಾಝ್ ಶರೀಫ್, ಅಂತೋಣಿ, ಗೀತಾ, ದಾಸಪ್ಪ ಗೌಡ, ನೀಲಯ್ಯ ಪೂಜಾರಿ, ಸಯ್ಯದ್ ಅಲಿ, ಮುಸ್ತಪಾ, ರಿಝ್ವಾನ್, ಅಶ್ರಪ್ ಕಾಪಿನಡ್ಕ, ನಿಯಾಝ್ ಮೊದಲಾದವರು ಉಪಸ್ಥಿತರಿದ್ದರು.

ಬೆಳ್ತಂಗಡಿ : ನಿರ್ವಹಣೆ ಕಾಮಗಾರಿಯ ಪ್ರಯುಕ್ತ 33 ಕೆವಿ ಕಕ್ಕಿಂಜೆ ವಿದ್ಯುತ್ ಉಪಕೇಂದ್ರದಿಂದ ಹೊರಹೊಮ್ಮುವ ಎಲ್ಲಾ 11 ಕೆವಿ ಫೀಡರುಗಳಲ್ಲಿ ಮೇ.16 ರಂದು ಬೆಳಗ್ಗೆ 9.30 ರಿಂದ ಸಂಜೆ 5.30 ರವರೆಗೆ ಹಾಗೂ ಗುರುವಾಯನಕೆರೆ ಉಪಕೇಂದ್ರದಲ್ಲಿ ತುರ್ತು ಕಾಮಗಾರಿಯನ್ನು ಕೈಗೊಳ್ಳಬೇಕಾದ ಹಿನ್ನಲೆಯಲ್ಲಿ ಮೇ. 17 ಮತ್ತು 19ರಂದು ಗುರುವಾಯನಕೆರೆ ಉಪಕೇಂದ್ರದಿಂದ ಹೊರಹೊಮ್ಮುವ ವೇಣೂರು ಮತ್ತು ಆರಂಬೋಡಿ ಫೀಡರ್‌ಗಳಲ್ಲಿ ಬೆಳಿಗ್ಗೆ 8.00ರಿಂದ ಸಂಜೆ 4.00ರ ತನಕ ವಿದ್ಯುತ್ ನಿಲುಗಡೆಯಾಗಲಿದೆ ಎಂದು ಮೆಸ್ಕಾಂ ಪ್ರಕಟಣೆಯಲ್ಲಿ ತಿಳಿಸಿದೆ.

laila 1

lailaಲಾಯಿಲ : ಭಾರತೀಯ ಜನತಾ ಪಾರ್ಟಿ ಯುವ ಮೋರ್ಚಾ ಬೆಳ್ತಂಗಡಿ ಮಂಡಲ ಇದರ ವತಿಯಿಂದ ಪಂಡಿತ ದೀನ್‌ದಯಾಳ್ ಉಪಾಧ್ಯಾಯರ ಜನ್ಮಶತಾಬ್ಧಿ ವರ್ಷಾಚರಣೆ ಅಂಗವಾಗಿ ಮೇ. 13 ರಂದು ಲಾಯಿಲ ಪ್ರಸನ್ನ ಶಿಕ್ಷಣ ಸಮುಚ್ಚಯದ ಮೈದಾನದಲ್ಲಿ ಹಮ್ಮಿಕೊಂಡಿದ್ದ ಹೊನಲು ಬೆಳಕಿನ ಆಹ್ವಾನಿತ ತಂಡಗಳ ಪ್ರೋ ಮಾದರಿ ಕಬಡ್ಡಿ ಮತ್ತು ಹಗ್ಗ ಜಗ್ಗಾಟ ಪಂಡಿತ ದೀನ್‌ದಯಾಳ್ ಟ್ರೋಫಿ- ೨೦೧೭ ಇದರ ಉದ್ಘಾಟನೆಯನ್ನು ಬಿಜೆಪಿ ಜಿಲ್ಲಾಧ್ಯಕ್ಷ ಸಂಜೀವ ಮಠಂದೂರು ನೆರವೇರಿಸಿದರು. ಮುಖ್ಯ ಅತಿಥಿಯಾಗಿ ರಾಜ್ಯ ಯುವ ಮೋರ್ಚಾದ ಮಹಾ ಪ್ರಧಾನ ಕಾರ್ಯದರ್ಶಿ ಬಸವರಾಜ್ ಭಾಗವಹಿಸಿದ್ದರು. ಬಿಜೆಪಿ ಬೆಳ್ತಂಗಡಿ ಮಂಡಲದ ಅಧ್ಯಕ್ಷ ರಂಜನ್ ಜಿ ಗೌಡ ಸಮಾರಂಭದ ಅಧ್ಯಕ್ಷತೆ ವಹಿಸಿದ್ದರು.
ವೇದಿಕೆಯಲ್ಲಿ ವಿಧಾನ ಪರಿಷತ್ ಪ್ರತಿಪಕ್ಷದ ಮುಖ್ಯ ಸಚೇತನ ಕ್ಯಾ| ಗಣೇಶ್ ಕಾರ್ಣಿಕ್, ಜಿಲ್ಲಾ ಯುವ ಮೋರ್ಚಾ ಅಧ್ಯಕ್ಷ ಹರೀಶ್ ಪೂಂಜ, ಮಾಜಿ ಶಾಸಕ ಪ್ರಭಾಕರ ಬಂಗೇರ, ಮಾಜಿ ಶಾಸಕ ರುಕ್ಮಯ್ಯ ಪೂಜಾರಿ, ಮಂಗಳೂರು ವಿಭಾಗ ಸಹಪ್ರಭಾರಿ ಪ್ರತಾಪಸಿಂಹ ನಾಯಕ್, ಜಿಲ್ಲಾ ಬಿಜೆಪಿ ಉಪಾಧ್ಯಕ್ಷೆ ಶಾರದಾ ಆರ್ ರೈ, ತಾ.ಪಂ ಉಪಾಧ್ಯಕ್ಷೆ ವೇದಾವತಿ, ಜಿಲ್ಲಾ ಪ್ರ. ಕಾರ್ಯದರ್ಶಿ ಕೆ ಕೊರಗಪ್ಪ ನಾಯ್ಕ, ಹಿಂದುಳಿದ ವರ್ಗಗಳ ಜಿಲ್ಲಾ ನಾಯಕ ಕೃಷ್ಣಪ್ಪ ಕಲ್ಲಡ್ಕ, ಜಿ.ಪಂ ಸದಸ್ಯೆ ಸೌಮ್ಯಲತಾ ಜಯಂತ ಗೌಡ, ತಾ.ಪಂ ಸದಸ್ಯರಾದ ಸುಧಾರಕ ಬಿ.ಎಲ್, ಕೊರಗಪ್ಪ ಗೌಡ ಅರಣಪಾದೆ, ಎಂ ಶಶಿಧರ ಕಲ್ಮಂಜ, ವಿಜಯ ಗೌಡ ವೇಣೂರು, ತಾ.ಪಂ ಸ್ಥಾಯಿ ಸಮಿತಿ ಅಧ್ಯಕ್ಷ ಸುಧೀರ್ ಆರ್ ಸುವರ್ಣ, ಪಕ್ಷದ ಕಾರ್ಯದರ್ಶಿಗಳಾದ ಪ್ರಭಾಕರ ಶೆಟ್ಟಿ ಉಪ್ಪಡ್ಕ ಮತ್ತು ಸೀತಾರಾಮ ಬಿ.ಎಸ್ ಇವರುಗಳು ಉಪಸ್ಥಿತರಿದ್ದರು.
ಬಿಜೆಪಿ ಯುವ ಮೋರ್ಚಾ ತಾ| ಅಧ್ಯಕ್ಷ ಸಂಪತ್ ಬಿ ಸುವರ್ಣ ಪ್ರಾಸ್ತಾವಿಕವಾಗಿ ಮಾತನಾಡಿ, ಸ್ವಾಗತಿಸಿದರು.
ತುಳಸಿದಾಸ್ ಪೈ ಮಡಂತ್ಯಾರು ಕಾರ್ಯಕ್ರಮ ನಿರೂಪಿಸಿದರು. ಯುವ ಮೋರ್ಚಾ ಪ್ರ. ಕಾರ್ಯದರ್ಶಿ ರಕ್ಷಿತ್ ಶೆಟ್ಟಿ ವಂದಿಸಿದರು.
ಕ್ರೀಡಾಕೂಟದ ಸಂಚಾಲಯರುಗಳಾಗಿದ್ದ ಮಿಥುನ್ ಕುಲಾಲ್, ಚಂದ್ರಕಾಂತ ಗೌಡ ಮಚ್ಚಿನ, ದೀಕ್ಷಿತ್ ಶೆಟ್ಟಿ ಮುದ್ದಿಗೆ, ರಾಜೇಶ್ ಮಿತ್ತಬಾಗಿಲು, ಹಾಗೂ ಯುವ ಮೋರ್ಚಾದ ಪದಾಧಿಕಾರಿಗಳು ಹಾಗೂ ಸದಸ್ಯರುಗಳು ಉಪಸ್ಥಿತರಿದ್ದು ಸಹಕಾರ ನೀಡಿದರು.

sslcಬೆಳ್ತಂಗಡಿ: ತೊಕ್ಕೊಟ್ಟು ಸಮೀಪದ ಬಬ್ಬುಕಟ್ಟೆ ಖೈರಿಯಾ ಟ್ರಸ್ಟ್ ಅಧೀನದಲ್ಲಿರುವ ಖೈರಿಯಾ ಶೆಲ್ಟರ್ ಇದರ ಹೆಣ್ಣುಮಕ್ಕಳ ಸಂಸ್ಥೆಯಲ್ಲಿರುವ 13 ವಿದ್ಯಾರ್ಥಿಗಳ ಪೈಕಿ ಈ ಬಾರಿಯ ಪಿಯುಸಿ ಪರೀಕ್ಷೆಯಲ್ಲಿ ಬೆಳ್ತಂಗಡಿಯ ಹನ್ನತ್ ಬೀಬಿ ಅವರು ಡಿಸ್ಟಿಂಕ್ಷನ್ ಮೂಲಕ ಉತ್ತೀರ್ಣರಾಗಿ ತಾಲೂಕಿಗೆ ಕೀರ್ತಿ ತಂದಿದ್ದಾರೆ.
ಬೆಳ್ತಂಗಡಿ ಸರಕಾರಿ ಆಸ್ಪತ್ರೆ ನಿವೃತ ಸಿಬಂದಿ, ಪ್ರಸ್ತುತ ಗುರುವಾಯನಕೆರೆ ಸುನ್ನತ್‌ಕೆರೆಯಲ್ಲಿ ನೆಲೆಸಿರುವ ಪಿ.ಕೆ ಅಬ್ದುಲ್ ರಹಿಮಾನ್ ಮತ್ತು ಬೀಫಾತಿಮಾ ದಂಪತಿ ಪುತ್ರಿ, ಬೆಳ್ತಂಗಡಿ ಸೈಂಟ್ ತರೇಸಾ ಶಾಲಾ ಹಳೆವಿದ್ಯಾರ್ಥಿನಿ ಹನ್ನತ್ ಬೀಬಿ ಅವರು 510 ಅಂಕಗಳನ್ನು ಪಡೆದು ಉತ್ತೀರ್ಣರಾಗುವ ಮೂಲಕ ಖೈರಿಯಾ ಕ್ಯಾಂಪಸ್‌ಗೂ ಪ್ರಥಮ ಸ್ಥಾನಿಯಾಗಿ ಹೊರಹೊಮ್ಮಿದ್ದಾರೆ. ಈ ಬಗ್ಗೆ ಸಂಸ್ಥೆಯ ಚೇರ್‌ಮೆನ್, ದ. ಕ ಜಿಲ್ಲಾ ವಕ್ಫ್ ಸಲಹಾ ಮಂಡಳಿ ಅಧ್ಯಕ್ಷರೂ ಆಗಿರುವ ಎಸ್. ಎಂ ರಶೀದ್ ಹಾಜಿ ಪ್ರಕಟಣೆ ನೀಡಿದ್ದಾರೆ. ಪ್ರತಿಭಾನ್ವಿತ ವಿದ್ಯಾರ್ಥಿನಿಯಾಗಿರುವ ಹನ್ನತ್ ಬೀಬಿ ಅವರು ಕಲಿಕೆ ಮಾತ್ರವಲ್ಲದೆ ಕಲಿಕೇತರ ಕ್ಷೇತ್ರಗಳಲ್ಲೂ ಮುಂದಿದ್ದು ಶೈಕ್ಷಣಿಕ ವರ್ಷದಲ್ಲಿ ಹಲವು ಬಹುಮಾನಗಳನ್ನು ಪಡೆದುಕೊಂಡಿದ್ದಾರೆ.

add1

dkrds

dkrds1ಬೆಳ್ತಂಗಡಿ : ದಕ್ಷಿಣ ಕನ್ನಡ ರೂರಲ್ ಡೆವಲಪ್‌ಮೆಂಟ್ ಸೊಸೈಟಿ ಬೆಳ್ತಂಗಡಿ, ನವಜೀವನ ಆರೈಕೆ ಮತ್ತು ಬೆಂಬಲ ಕೇಂದ್ರ ಬೆಳ್ತಂಗಡಿ ಇವರ ಆಶ್ರಯದಲ್ಲಿ ಮಕ್ಕಳ ಬೇಸಿಗೆ ಶಿಬಿರ ಹಾಗೂ ಪುಸ್ತಕ ಮತ್ತು ಪೌಷ್ಟಿಕಾಹಾರ ವಿತರಣಾ ಕಾರ್ಯಕ್ರಮವು ಮೇ. 12 ಮತ್ತು 13ರಂದು ಬೆಳ್ತಂಗಡಿ ಸಾನ್‌ತೋಮ್ ಟವರ್‌ನಲ್ಲಿ ನಡೆಯಿತು.
ಸಭಾ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಬೆಳ್ತಂಗಡಿ ಡಿ.ಕೆ.ಆರ್.ಡಿ.ಎಸ್ ಅಧ್ಯಕ್ಷ ಅತೀಂ ವಂ ಲಾರೆನ್ಸ್ ಮುಕ್ಕುಝಿ ವಹಿಸಿದ್ದರು. ಅತಿಥಿಗಳಾಗಿ ಬೆಳ್ತಂಗಡಿ ಲಯನ್ಸ್ ಕ್ಲಬ್ ಅಧ್ಯಕ್ಷೆ ಶ್ರೀಮತಿ ಸುಶೀಲ ಎಸ್. ಹೆಗ್ಡೆ, ಸುದ್ದಿ ಬಿಡುಗಡೆ ವರದಿಗಾರ ಅಶ್ರಫ್ ಆಲಿ ಕುಂಞ, ಶ್ರೀಮತಿ ಎಲಿಜಬೆತ್ ನೀಲಿಯಾರ ಮಂಗಳೂರು ಭಾಗವಹಿಸಿದ್ದರು. ಬೆಳ್ತಂಗಡಿ ನವಚೈತನ್ಯ ಸಂಘದ ಅಧ್ಯಕ್ಷೆ ಶ್ರೀಮತಿ ಪ್ರೇಮ ಉಪಸ್ಥಿತರಿದ್ದರು.
ಬೆಳ್ತಂಗಡಿ ಡಿ.ಕೆ.ಆರ್.ಡಿ.ಎಸ್ ನಿರ್ದೇಶಕ ವಂ. ಫಾ| ಆಯಾಂಕುಡಿ ಸ್ವಾಗತಿಸಿ, ಡಿ.ಕೆ.ಆರ್.ಡಿ.ಎಸ್ ಸಹಾಯಕ ನಿರ್ದೇಶಕ ವಂ. ಫಾ| ವರ್ಕಿ ಧನ್ಯವಾದವಿತ್ತರು.

sanjeeva gowda 1

sanjeeva gowda 2

sanjeeva gowda 3

sanjeeva gowdaಧರ್ಮಸ್ಥಳ ಠಾಣಾ ವ್ಯಾಪ್ತಿಯ ಬೆಳಾಲು ಗ್ರಾಮದ ಮಾಯದಪಲ್ಕೆ ಎಂಬಲ್ಲಿ, ಗ್ರಾಮದ ಕಾವಟೆಗುಡ್ಡೆ ನಿವಾಸಿ ಸಂಜೀವ ಗೌಡ(45 ವ.) ಎಂಬವರು ಮೇ 12 ರಂದು ರಾತ್ರಿ ಮೇ 13 ರ ಬೆಳಗ್ಗಿನ ಮಧ್ಯೆ ರಾತ್ರಿ ಸಮಯದಲ್ಲಿ ಕಿರು ಸೇತುವೆಯಿಂದ ಆಕಸ್ಮಿಕವಾಗಿ ಆಯತಪ್ಪಿ ತೋಡಿಗೆ ಬಿದ್ದು ಮೃತಪಟ್ಟ ಘಟನೆ ನಡೆದಿದೆ. ಮಾನಸಿಕ ಅಸ್ವಸ್ಥರಾಗಿದ್ದ ಅವರು ನಿನ್ನೆ ರಾತ್ರಿಯಿಂದ ಮನೆಗೆ ಬಾರದೇ ಇದ್ದವರ ಮೃತದೇಹ ಇಂದು(ಮೇ.13) ಬೆಳಿಗ್ಗೆ ಕಿರುಸೇತುವೆ ಕೆಳಗೆ ಪತ್ತೆಯಾಗಿದೆ. ಸ್ಥಳಕ್ಕೆ ಧರ್ಮಸ್ಥಳ ಠಾಣಾಧಿಕಾರಿ ರಾಮ ನಾಯ್ಕ ಅವರು ಭೇಟಿ ನೀಡಿದ್ದು ಕೇಸು ದಾಖಲಿಸಿಕೊಂಡಿದ್ದಾರೆ.

vijaya1vijaya
ಬೆಳ್ತಂಗಡಿ : ಕಾಶಿಬೆಟ್ಟು ಸಮೀಪದಲ್ಲಿ ನಿರ್ಮಾಣ ಹಂತದಲ್ಲಿದ್ದ ತನ್ನದೇ ಮನೆಯ ಮೇಲಿನ ಪಿಲ್ಲರ್‌ವೊಂದಕ್ಕೆ ನೀರು ಹಾಕುತಿದ್ದ ಸಂದರ್ಭದಲ್ಲಿ ಆಯತಪ್ಪಿ ಕೆಳಗೆ ಬಿದ್ದು ತಲೆಗೆ ಗಂಭೀರ ಗಾಯಗೊಂಡ ಕಾಶಿಬೆಟ್ಟು ನಿವಾಸಿ ವಿಜಯ ಗೌಡ (45ವ)ಆಸ್ಪತ್ರೆಗೆ ಸಾಗಿಸುವ ದಾರಿ ಮಧ್ಯೆ ಸಾವನ್ನಪ್ಪಿದಾರೆ. ಇವರು ಧರ್ಮಸ್ಥಳದ ಕಲ್ಲೇರಿ ಎಂಬಲ್ಲಿ ಗ್ಯಾರೆಜ್ ಮಾಲಿಕರಾಗಿದ್ದಾರೆ. ಮೃತದೇಹವನ್ನು ಬೆಳ್ತಂಗಡಿ ಆಸ್ಪತ್ರೆಯ ಶವಾಗಾರದಲ್ಲಿಡಲಾಗಿದೆ.

manvi copyಚಾರ್ಮಾಡಿ ಗ್ರಾಮದ ಪರ್ಲಾಣಿ ಮನೆ ಹರೀಶ್ ಮತ್ತು ವಿದ್ಯಾ ದಂಪತಿಗಳ ಪುತ್ರಿ ಮಾನ್ವಿರವರ 3ನೇ ವರ್ಷದ ಹುಟ್ಟುಹಬ್ಬವನ್ನು ಪರ್ಲಾಣಿ ಮನೆಯಲ್ಲಿ ಆಚರಿಸಲಾಯಿತು.

Exif_JPEG_420

ಕನ್ಯಾಡಿ : ಬರಾಯ ಕನ್ಯಾಡಿ ಅಲೆಕ್ಕಿ ನಿವಾಸಿ ರಾಜೇಶ್ ಜಿ. ಮತ್ತು ಯಶಸ್ವಿ ಆರ್. ದಂಪತಿ ಪುತ್ರಿ ತನ್ವಿ ಆರ್.ಜಿ.,ಳ ಪ್ರಥಮ ವರ್ಷದ ಹುಟ್ಟುಹಬ್ಬವನ್ನು ಮೇ. 5ರಂದು ಆಚರಿಸಲಾಯಿತು.

Yuva kreedakuta copyಬೆಳ್ತಂಗಡಿ: ಭಾರತೀಯ ಜನತಾ ಪಾರ್ಟಿ ಯುವ ಮೋರ್ಚಾ ಬೆಳ್ತಂಗಡಿ ಮಂಡಲ ಇದರ ನೇತೃತ್ವದಲ್ಲಿ ಪಂಡಿತ ದೀನ್ ದಯಾಳ್ ಉಪಾಧ್ಯಾಯರ ಜನ್ಮಶತಾಬ್ದಿ ವರ್ಷಾಚರಣೆ ಅಂಗವಾಗಿ ಆಹ್ವಾನಿತ ತಂಡಗಳ ಪ್ರೊ. ಮಾದರಿಯ ಕಬಡ್ಡಿ ಮತ್ತು ಹಗ್ಗಜಗ್ಗಾಟ ಪಂಡಿತ್ ದೀನದಯಾಳ್ ಟ್ರೋಪಿ-2017 ಹೊನಲು ಬೆಳಕಿನ ಯುವ ಕ್ರೀಡೋತ್ಸವ ಮೇ 13ರಂದು ಸಂಜೆ ಪ್ರಸನ್ನ ವಿದ್ಯಾಸಂಸ್ಥೆಗಳ ಮೈದಾನ ಲಾಯಿಲದಲ್ಲಿ ನಡೆಯಲಿದೆ ಎಂದು ಭಾ.ಜ.ಪ. ಯುವ ಮೋರ್ಚಾದ ಅಧ್ಯಕ್ಷ ಸಂಪತ್ ಬಿ. ಸುವರ್ಣ ಹೇಳಿದರು.
ಅವರು ಮೇ 5ರಂದು ಬೆಳ್ತಂಗಡಿ ಪ್ರೆಸ್‌ಕ್ಲಬ್‌ನಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಕ್ರೀಡಾ ಕೂಟದ ಬಗ್ಗೆ ವಿವರ ನೀಡಿದರು. ಕ್ರೀಡಾ ಕೂಟವನ್ನು ಸಂಸದ ನಳಿನ್‌ಕುಮಾರ್ ಕಟೀಲ್ ಉದ್ಘಾಟಿಸಲಿದ್ದು, ಬಿಜೆಪಿ ಯುವ ಮೋರ್ಚಾದ ರಾಜ್ಯ ಪ್ರಧಾನ ಕಾರ್ಯದರ್ಶಿ ತಮ್ಮೇಶ್ ಗೌಡ ಅಧ್ಯಕ್ಷತೆ ವಹಿಸಲಿದ್ದಾರೆ. ಅತಿಥಿಗಳಾಗಿ ಜನಪ್ರತಿನಿಧಿಗಳು, ಪಕ್ಷದ ತಾಲೂಕು, ಜಿಲ್ಲೆ ಹಾಗೂ ರಾಜ್ಯಮಟ್ಟದ ವಿವಿಧ ಮುಖಂಡರುಗಳು ಭಾಗವಹಿಸಲಿದ್ದಾರೆ. ಬೆಳ್ತಂಗಡಿ ನಗರ ಪಂಚಾಯತು ಸೇರಿದಂತೆ ತಾಲೂಕಿನ 49 ಪಂಚಾಯತು ಸಮಿತಿ ಹೆಸರಿನಲ್ಲಿ ತಂಡಗಳು ಸ್ಪರ್ಧಿಸಲಿದೆ. ತಂಡಗಳಲ್ಲಿ ಪಕ್ಷ ಭೇದವಿಲ್ಲದೆ ಎಲ್ಲಾ ಕ್ರೀಡಾಪಟುಗಳಿಗೂ ಭಾಗವಹಿಸಲು ಅವಕಾಶವಿದೆ. ಕ್ರೀಡಾಪಟುಗಳ ತಂಡವನ್ನು ಆಯಾ ಗ್ರಾಮದ ಗ್ರಾಮ ಸಮಿತಿ ಆಯ್ಕೆ ಮಾಡಲಿದೆ. ವಿಜೇತ ತಂಡಗಳಿಗೆ ಪ್ರಥಮ, ದ್ವಿತೀಯ, ತೃತೀಯ, ಚತುರ್ಥ ನಗದು ಬಹುಮಾನ ಜೊತೆಗೆ ಪಂಡಿತ್ ದೀನ್‌ದಯಾಳ್ ಟ್ರೋಫಿ ನೀಡಲಾಗುವುದು, ತಾಲೂಕು ಮಟ್ಟದ ಕ್ರೀಡಾ ಕೂಟದಲ್ಲಿ ಸ್ಪರ್ಧಿಸಿ ಪ್ರಥಮ ಹಾಗೂ ದ್ವಿತೀಯ ಪ್ರಶಸ್ತಿ ಪಡೆದ ತಂಡ ಜಿಲ್ಲಾ ಮಟ್ಟದ ಕ್ರೀಡಾಕೂಟಕ್ಕೆ ಆಯ್ಕೆಯಾಗಲಿದೆ ಎಂದು ತಿಳಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಬೆಳ್ತಂಗಡಿ ಮಂಡಲ ಬಿಜೆಪಿ ಅಧ್ಯಕ್ಷ ರಂಜನ್ ಜಿ. ಗೌಡ, ಪ್ರಧಾನ ಕಾರ್ಯದರ್ಶಿ ಪ್ರಭಾಕರ ಶೆಟ್ಟಿ ಉಪ್ಪಡ್ಕ, ಬಿಜೆಪಿ ಯುವ ಮೋರ್ಚಾದ ಪ್ರಧಾನ ಕಾರ್ಯದರ್ಶಿ ರಕ್ಷಿತ್ ಶೆಟ್ಟಿ, ಕಾರ್ಯದರ್ಶಿ ದೀಪಕ್ ಶೆಟ್ಟಿ ಅರಸಿನಮಕ್ಕಿ ಉಪಸ್ಥಿತರಿದ್ದು, ಪೂರಕ ಮಾಹಿತಿ ನೀಡಿದರು.

venur bus stand shilanyasa copyವೇಣೂರು: ವೇಣೂರು ಕೆಳಗಿನ ಪೇಟೆಯ ಶ್ರೀರಾಮ ನಗರದಲ್ಲಿ ವೇಣೂರಿನ ಹಿರಿಯ ಉದ್ಯಮಿಯಾಗಿದ್ದ ದಿ| ಲ. ಹಿಲಾರಿ ಪಿರೇರಾರವರ ಸ್ಮರಣಾರ್ಥ ರೂ. 10 ಲಕ್ಷ ವೆಚ್ಚದಲ್ಲಿ ನಿರ್ಮಾಣವಾಗಲಿರುವ ಬಸ್ ತಂಗುದಾಣಕ್ಕೆ ಶುಕ್ರವಾರ ಹಿಲಾರಿ ಪಿರೇರಾರವರ ಪುತ್ರ ಉದ್ಯಮಿ ವಾಲ್ಟರ್ ಪಿರೇರಾ ಶಿಲಾನ್ಯಾಸ ನೆರವೇರಿಸಿದರು.
ವೇಣೂರು ಗ್ರಾ.ಪಂ. ರೂ. 2.50 ಲಕ್ಷದ ಅನುದಾನದೊಂದಿಗೆ ವಾಲ್ಟರ್ ಪಿರೇರಾ ಅವರು ಕೊಡುಗೆಯಾಗಿ ಬಸ್ ತಂಗುದಾಣ ನಿರ್ಮಿಸುತ್ತಿದ್ದಾರೆ. ಈ ಸಂದರ್ಭ ಮಾತನಾಡಿದ ಅವರು, ತಂದೆಯ ಸವಿನೆನಪಿಗಾಗಿ ಊರಿಗೆ ಶಾಶ್ವತ ಕೊಡುಗೆ ನೀಡುವ ಉದ್ದೇಶದಿಂದ ಈ ಯೋಜನೆ ಹಮ್ಮಿಕೊಳ್ಳಲಾಗಿದೆ ಎಂದರು.
ಈ ಸಂದರ್ಭದಲ್ಲಿ ವೇಣೂರು ಜೈನ ತೀರ್ಥಕ್ಷೇತ್ರ ಸಮಿತಿ ಕಾರ್ಯದರ್ಶಿ ಯಂ. ವಿಜಯರಾಜ ಅಧಿಕಾರಿ ಮಾರಗುತ್ತು, ಉದ್ಯಮಿ ಭಾಸ್ಕರ ಪೈ, ವಿಶ್ವನಾಥ ಪೈ, ವೇಣೂರು ಗ್ರಾ.ಪಂ. ಅಧ್ಯಕ್ಷೆ ಮೋಹಿನಿ ವಿ. ಶೆಟ್ಟಿ, ಉಪಾಧ್ಯಕ್ಷ ಅರುಣ್ ಕ್ರಾಸ್ತ, ತಾ.ಪಂ. ಸದಸ್ಯ ಕೆ. ವಿಜಯ ಗೌಡ, ಪಂ. ಅಭಿವೃದ್ಧಿ ಅಧಿಕಾರಿ, ಸದಸ್ಯರು ಹಾಗೂ ಗ್ರಾಮಸ್ಥರು ಉಪಸ್ಥಿತರಿದ್ದರು.

Deepika nagesh copyಬೆಳ್ತಂಗಡಿ ಅಚ್ಚಿನಡ್ಕ ನೋಣಯ್ಯ ಗಾಣಿಗರ ಪುತ್ರಿ ದೀಪಿಕಾ ರವರ ವಿವಾಹವು ದಿ| ಸಂಜೀವ ಗಾಣಿಗರ ಪುತ್ರ ನಾಗೇಶ್ ರೊಂದಿಗೆ ಮೇ. 7ರಂದು ಬೋಳಿಯಾರ್ ಎಸ್.ಎಚ್ ಸಭಾಭವನದಲ್ಲಿ ಜರಗಿತು.

Sowmya surendra copyಮರೋಡಿ ಗ್ರಾಮದ ಧನಲಕ್ಷ್ಮೀ ನಿವಾಸ ದಿ| ಸಂಜೀವ ಪೂಜಾರಿಯವರ ಪುತ್ರ ಸುರೇಂದ್ರರವರ ವಿವಾಹವು ಬಜಿರೆ ಗುಡ್ಡೆಮಾರು ಆನಂದ ಪೂಜಾರಿಯವರ ಪುತ್ರಿ ಸೌಮ್ಯರೊಂದಿಗೆ ಮೇ.7 ರಂದು ನಾರಾವಿ ಬಸದಿಯ ಧರ್ಮಶ್ರೀ ಸಭಾಭವನ ದಲ್ಲಿ ಜರುಗಿತು.

SANDHYA DHANANJAY copyನಾಲ್ಕೂರು ಗ್ರಾಮದ ಸಂಧ್ಯಾದೀಪಾ ಮನೆಯ ತಾ.ಪಂ. ಮಾಜಿ ಸದಸ್ಯ ಹೆಚ್ ಧರ್ಣಪ್ಪ ಪೂಜಾರಿ ಮತ್ತು ಅನಸೂಯರವರ ಪುತ್ರಿ ಅಳದಂಗಡಿ ಎಸ್.ಸಿ.ಡಿ.ಸಿ.ಸಿ ಬ್ಯಾಂಕ್ ಉದ್ಯೋಗಿ ಸಂಧ್ಯಾ ರವರ ವಿವಾಹವು ವೇಣೂರು ಗುಂಡೂರಿ ಲಕ್ಷ್ಮೀ ನಿವಾಸದ ಸಂಜೀವ ಪೂಜಾರಿಯವರ ಪುತ್ರ ಧನಂಜಯರೊಂದಿಗೆ ಮೇ.7 ರಂದು ಗುರುವಾಯನಕೆರೆ ಕಿನ್ಯಮ್ಮ ಯಾನೆ ಗುಣವತಿ ಅಮ್ಮ ಸಭಾ ಭವನದಲ್ಲಿ ಜರಗಿತು.    ಈ ವಿವಾಹ ಸಮಾರಂಭಕ್ಕೆ ಅಳದಂಗಡಿ ಅರಮನೆಯ ತಿಮ್ಮಣ್ಣರಸರಾದ ಡಾ| ಪದ್ಮಪ್ರಸಾದ್ ಅಜಿಲರು, ಬೆಳ್ತಂಗಡಿ ಶಾಸಕ ಕೆ. ವಸಂತ ಬಂಗೇರ, ಎಸ್.ಸಿ.ಡಿ.ಸಿ.ಸಿ ಬ್ಯಾಂಕ್ ಅಧ್ಯಕ್ಷ ಡಾ. ಎಂ.ಎನ್ ರಾಜೇಂದ್ರ ಕುಮಾರ್, ಮಾಜಿ ಶಾಸಕ ಪ್ರಭಾಕರ ಬಂಗೇರ, ಬಿಜೆಪಿ ಯುವ ಮೋಚಾದ ಜಿಲ್ಲಾಧ್ಯಕ್ಷ ಹರೀಶ್ ಪೂಂಜ, ಹಾಗೂ ವಿವಿಧ ಕ್ಷೇತ್ರದ ಗಣ್ಯರು, ರಾಜಕೀಯ ಮುಖಂಡರು ಆಗಮಿಸಿ ವಧು-ವರರನ್ನು ಹರಸಿದರು.

KDP sabhe copyಬೆಳ್ತಂಗಡಿ : ಬೆಳ್ತಂಗಡಿ ತಾಲೂಕು ಪಂಚಾಯತದ ಮಾಸಿಕ ಕೆ.ಡಿ.ಪಿ. ಸಭೆ ತಾ.ಪಂ ಅಧ್ಯಕ್ಷೆ ದಿವ್ಯಜ್ಯೋತಿ ಅವರ ಅಧ್ಯಕ್ಷತೆಯಲ್ಲಿ ಮೇ 5ರಂದು ತಾ.ಪಂ. ಸಭಾಂಗಣದಲ್ಲಿ ಜರುಗಿತು.
ಉಪಾಧ್ಯಕ್ಷೆ ವೇದಾವತಿ, ಸ್ಥಾಯಿ ಸಮಿತಿ ಅಧ್ಯಕ್ಷ ಸುದೀರ್ ಆರ್. ಸುವರ್ಣ, ಕಾರ್ಯನಿರ್ವಾಹಣಾಧಿಕಾರಿ ಸಿ.ಆರ್. ನರೇಂದ್ರ, ತಾ.ಪಂ. ಸಹಾಯಕ ಲೆಕ್ಕ ಅಧೀಕ್ಷಕ ಗಣೇಶ್ ಸುವರ್ಣ, ವಿವಿಧ ಇಲಾಖೆಗಳ ಅಧಿಕಾರಿಗಳು ಉಪಸ್ಥಿತರಿದ್ದರು.
ಆರೋಗ್ಯ ಇಲಾಖೆಯಿಂದ ಹೋಟೆಲ್‌ಗಳ ಸ್ವಚ್ಛತೆ ಬಗ್ಗೆ ಪರಿಶೀಲನೆ ನಡೆಯುತ್ತಿದೆ. ಸ್ವಚ್ಛತೆ ಬಗ್ಗೆ ಕ್ರಮ ಕೈಗೊಳ್ಳಲು ಸೂಚನೆ ನೀಡಲಾಗಿದೆ ಎಂದು ಆರೋಗ್ಯ ಅಧಿಕಾರಿ ಡಾ| ಕಲಾಮಧು ಮಾಹಿತಿ ನೀಡಿದರು. ಹೋಟೆಲ್‌ಗಳಲ್ಲಿ ಅಡುಗೆ ಕೋಣೆ ಮತ್ತು ಕುಡಿಯುವ ನೀರನ್ನು ಪರಿಶೀಲನೆ ನಡೆಸಲು ಇ.ಒ ಆರೋಗ್ಯ ಇಲಾಖೆಗಳಿಗೆ ಸೂಚನೆ ನೀಡಿದರು.
ತೋಟಗಾರಿಕಾ ಇಲಾಖೆಯಿಂದ ಹೂವಿನ ಕುಂಡಗಳನ್ನು ಒದಗಿಸಲಾಗುತ್ತಿದ್ದು, ಗ್ರಾಮ ಪಂಚಾಯತುಗಳಲ್ಲಿ ಗಾರ್ಡನ್ ಮಾಡಲು ಅಗತ್ಯವಿದ್ದರೆ ಪಂಚಾಯತು ಬೇಡಿಕೆ ಸಲ್ಲಿಸುವಂತೆ ಸೂಚಿಸಲಾಯಿತು. ತಾಲೂಕಿನ 25 ಗ್ರಾಮ ಪಂಚಾಯತುಗಳಲ್ಲಿ ಅನಧಿಕೃತ ವಿದ್ಯುತ್ ಸಂಪರ್ಕ ಇದೆ. ಇದನ್ನು ಪಂಚಾಯತು ಅಧಿಕೃತ ಗೊಳಿಸಬೇಕು. ಇಲ್ಲವಾದಲ್ಲಿ ಮೆಸ್ಕಾಂನಿಂದ ಕಡಿತಗೊಳಿಸಲು ಆದೇಶವಾಗಿದೆ ಕುವೆಟ್ಟು ಗ್ರಾ.ಪಂ. ವ್ಯಾಪ್ತಿಯಲ್ಲಿ ಅನಧಿಕೃತ ಸಂಪರ್ಕ ಇದ್ದು, ಪಂಚಾಯತು ರೂ.1.95 ಲಕ್ಷ ಹಣ ಕಟ್ಟಿದೆ ಎಂದು ಸ.ಕಾ. ಇಂಜಿನಿಯರ್ ಶಿವಶಂಕರ್ ತಿಳಿಸಿದರು.
ದೀನದಯಾಳ್ ಯೋಜನೆ: ತಾಲೂಕಿಗೆ ದೀನ್‌ದಯಾಳ್ ಯೋಜನೆಯಲ್ಲಿ ಅನುದಾನ ಮಂಜೂರಾಗಿದ್ದು, ಬಿ.ಪಿ.ಎಲ್ ಕುಟುಂಬಗಳ ಮನೆಗಳಿಗೆ ವಿದ್ಯುತ್ ಸಂಪರ್ಕ ನೀಡಲಾಗುವುದು. ಕಳೆದ ಮಾ.31ರ ತನಕ ಬಿಪಿಎಲ್ ಕಾರ್ಡ್ ಹೊಂದಿದ ಕುಟುಂಬದ ಯಾವುದೇ ಮನೆ ಬಾಕಿಯಾಗಬಾರದು ಇದರ ಬಗ್ಗೆ ಪಂಚಾಯತಕ್ಕೆ ನೋಟೀಸು ಕಳುಹಿಸಲು ನಿರ್ಣಯಿಸಲಾಯಿತು. ಅಭಯಾರಣ್ಯದೊಳಗೆ ಲೈನ್ ಎಳೆಯಲು ಅನುಮತಿಗಾಗಿ ಫಲಾನುಭವಿಗಳು ಅರಣ್ಯ ಹಕ್ಕು ಸಮಿತಿ ಮೂಲಕ ಅರ್ಜಿಗಳನ್ನು ನೀಡಿ ಅನುಮತಿಯನ್ನು ಪಡೆದುಕೊಳ್ಳಬೇಕು ಎಂದು ಸಭೆಗೆ ತಿಳಿಸಲಾಯಿತು.
ಗಂಗಾಕಲ್ಯಾಣ ಯೋಜನೆ: ಗಂಗಾ ಕಲ್ಯಾಣ ಯೋಜನೆಯಲ್ಲಿ ತಾಲೂಕಿನಲ್ಲಿ ಎಂಟು ಕಡೆ ವಿದ್ಯುತ್ ಸಂಪರ್ಕ ನೀಡಲಾಗಿದೆ. 31 ಕಡೆಗಳಲ್ಲಿ ಸಂಪರ್ಕ ನೀಡಲು ಬಾಕಿಯಿದೆ ಎಂದು ಶಿವಶಂಕರ್ ವಿವರಿಸಿದರು. ಗಂಗಾ ಕಲ್ಯಾಣ ಯೋಜನೆಯಲ್ಲಿ ವಿದ್ಯುತ್ ಲೈನ್ ಎಳೆಯುವುದು ಮೆಸ್ಕಾಂ ಕೆಲಸ, ಪಂಪು ಇಳಿಸುವುದು, ವಯರಿಂಗ್ ನಿಗಮದ ವತಿಯಿಂದ ಮಾಡಬೇಕು. ಆದರೆ ಅವರು ಮಾಡುವುದಿಲ್ಲ, ವಯರಿಂಗ್‌ಗೆ ಫಲಾನುಭವಿಗಳಿಂದ ಹಣ ವಸೂಲಿ ಮಾಡಲಾಗುತ್ತದೆ ಎಂಬ ಆರೋಪದ ಬಗ್ಗೆ ಸಭೆಯಲ್ಲಿ ಚರ್ಚೆ ನಡೆಯಿತು. ಈ ಗೊಂದಲಗಳ ಬಗ್ಗೆ ಮಾಹಿತಿ ನೀಡಲು ನಿಗಮದ ಅಧಿಕಾರಿಗಳು ಮುಂದಿನ ಸಭೆಗೆ ಕಡ್ಡಾಯವಾಗಿ ಬರುವಂತೆ ನಿರ್ಣಯಿಸಲಾಯಿತು.
5961 ಅರ್ಜಿ: ಭಾಗ್ಯಲಕ್ಷ್ಮೀ ಯೋಜನೆಯಲ್ಲಿ ಇದುವರೆಗೆ 5961 ಅರ್ಜಿಗಳು ಬಂದಿದ್ದು, ಬಾಂಡ್‌ಗಳನ್ನು ಫಲಾನುಭವಿಗಳಿಗೆ ವಿತರಿಸಲಾಗಿದೆ ಎಂದು ಸಿಡಿಪಿಒ ಮಾಹಿತಿ ನೀಡಿದರು. ಬಂಗೆರಕಟ್ಟದಲ್ಲಿ ಅಕ್ಷರಕರಾವಳಿ ಕಟ್ಟಡದಲ್ಲಿ ಅಂಗನವಾಡಿ ನಡೆಯುತ್ತಿದ್ದು, ಇದು ಗ್ರಾ.ಪಂ.ಕ್ಕೆ ಸೇರಿದ ಕಟ್ಟಡ, ಅಂಗನವಾಡಿ ಕಟ್ಟಡಕ್ಕೆ ಮಂಜೂರಾದ ಜಾಗ ಯಾವುದು ಎಂದು ಗಡಿ ಗುರುತು ಮಾಡುವಂತೆ ಇ.ಒ ಅಧಿಕಾರಿಗಳಿಗೆ ಸೂಚನೆ ನೀಡಿದರು.
ಬೆಳ್ತಂಗಡಿ ತಾಲೂಕಿಗೆ ಸಂಚಾರಿ ಪಶು ಚಿಕಿತ್ಸಾ ಘಟಕ ಮಂಜೂರಾಗಿದ್ದು, ಕಾರ‍್ಯಾರಂಭ ಮಾಡಿದೆ ಎಂದು ಸಹಾಯಕ ನಿರ್ದೇಶಕ ಡಾ| ರತ್ನಾಕರ ಮಲ್ಯ ತಿಳಿಸಿದರು.
ಸಮಾಜ ಕಲ್ಯಾಣ, ಅರಣ್ಯ, ಸಾಮಾಜಿಕ ಅರಣ್ಯ, ಅಕ್ಷರ ದಾಸೋಹ, ರೇಷ್ಮೆ ಮೊದಲಾದ ಇಲಾಖೆಯ ಅಧಿಕಾರಿಗಳು ತಮ್ಮ ಇಲಾಖಾ ಪ್ರಗತಿಯನ್ನು ನೀಡಿದರು. ತಾಲೂಕು ಸಂಯೋಜಕ ಜಯಾನಂದ ವಂದಿಸಿದರು.

12

hallingeri belaku copyಕೊಕ್ಕಡ : ಕೊಕ್ಕಡ ಗ್ರಾಮದ ಹಳ್ಳಿಂಗೇರಿ ಪ್ರದೇಶದ ಜನರ ಕಳೆದ 15 ವರ್ಷಗಳ ಬೇಡಿಕೆಯಾದ ಪ್ರತ್ಯೇಕ ವಿದ್ಯುತ್ ಟಿಸಿ ನಿರ್ಮಿಸಿ ವಿದ್ಯುತ್ ಸಮಸ್ಯೆ ನೀಗಿಸಬೇಕೆಂಬುದಾಗಿತ್ತು. ಕೇವಲ ಬಲ್ಬಿನ ಒಳಗಿನ ವಯರಷ್ಟೇ ಕೆಂಪಾಗಿ ಉರಿಯುವಷ್ಟು ಮಾತ್ರ ವಿದ್ಯುತ್ ಸಿಗುತ್ತಿತ್ತು. ನಿವಾಸಿಗಳು ಬಿಲ್ಲು ಕಟ್ಟುವ ಗ್ರಾಹಕರಷ್ಟೇ ಆಗಿದ್ದರು. ಈ ಜನರ ಸಮಸ್ಯೆ ಕೊನೆಗೂ ಕರ್ನಾಟಕ ಪ್ರಾಂತ ಸಂಘ ಬೆಳ್ತಂಗಡಿ ತಾಲೂಕು ಸಮಿತಿ ನೇತೃತ್ವದ ಹೋರಾಟದ ಮೂಲಕ ನೆರವೇರಿತು ಎಂಬುದು ಸಂತೋಷದ ವಿಚಾರವಾಗಿದೆ ಎಂದು ಪ್ರಾಂತ ರೈತ ಸಂಘದ ತಾಲೂಕು ಮುಖಂಡರೂ, ಪಟ್ರಮೆ ಗ್ರಾಮ ಪಂಚಾಯತು ಸದಸ್ಯರೂ ಆದ ಶ್ಯಾಮರಾಜ್ ಹೇಳಿದರು.
ಅವರು ಮೆಸ್ಕಾಂ ಇಲಾಖೆಯು ಹೋರಾಟದ ಮೂಲಕ ನಿರ್ಮಾಣವಾದ ಹೊಸ ಟಿಸಿಗೆ ವಿದ್ಯುತ್ ಸಂಪರ್ಕ ಒದಗಿಸಿದ ಸಂದರ್ಭ ಸೇರಿದ ಜನರನ್ನುದ್ದೇಶಿಸಿ ಮಾತಾಡುತ್ತಿದ್ದರು. ಗೆದ್ದಿರುವ ರಾಜಕೀಯ ಪಕ್ಷಗಳೂ ಚುನಾವಣೆ ಸಮಯ ಬಂದು ಈ ಸಮಸ್ಯೆಯನ್ನು ಬಗೆಹರಿಸುತ್ತೇವೆಂದು ಸುಳ್ಳು ಭರವಸೆಯನ್ನಷ್ಟೇ ನೀಡಿ ಮತ ಪಡೆದುಗೆದ್ದ ಬಳಿಕ ತಿರುಗಿಯೂ ನೋಡುತ್ತಿರಲಿಲ್ಲ ಎಂಬುದೇ ಈ ಭಾಗದಜನರ ನೋವಾಗಿತ್ತು. ಕೊನೆಗೆ ಇಲ್ಲಿಯ ನಿವಾಸಿಗಳು ತಮ್ಮ ಬೇಡಿಕೆ ಈಡೇರಿಕೆಗಾಗಿ ರೈತ ಮುಖಂಡರಾದ ಬಿ.ಎಂ.ಭಟ್ ಅವರನ್ನು ಕಳೆದ 2017 ಫೆಬ್ರವರಿಯಲ್ಲಿ ಸಂಪರ್ಕಿಸಿ ಬೇಡಿಕೆ ಈಡೇರಿಸಲು ವಿನಂತಿಸಿದರು. ಈ ಬಗ್ಗೆ ತಕ್ಷಣ ಸ್ಪಂದಿಸಿದ ಅವರು ಹಳ್ಳಿಂಗೇರಿಯಲ್ಲಿ ಸಮುದಾಯ ಸಮಿತಿಯೊಂದನ್ನು ರಚಿಸಿ ಜನರನ್ನು ಹೋರಾಟಕ್ಕೆ ಇಳಿಸಿದ್ದರ ಪರಿಣಾಮವೇ ಕೇವಲ 2 ತಿಂಗಳಲ್ಲಿ ಇಂದಿನ ಈ ಬೆಳಕು ಮೂಡಲು ಕಾರಣವಾಗಿದೆ ಎಂದರು. ಕಳೆದ ಮಾರ್ಚಲ್ಲಿ ತಾಲೂಕು ಕೇಂದ್ರದಲ್ಲಿ ನಡೆದ ಹೋರಾಟಕ್ಕೆ ಸ್ಪಂದಿಸಿದ ಮೆಸ್ಕಾಂ ಇಲಾಖೆ ಎಪ್ರೀಲ್ ತಿಂಗಳ ಒಳಗೆ ನೂತನ ಟಿಸಿ ನಿರ್ಮಿಸಿ ಜನರ ಸಂಕಷ್ಟವನ್ನು ನೀಗಿಸುವುದಾಗಿ ಹೇಳಿದ್ದರು. ಕೊಟ್ಟ ಮಾತಿನಂತೆ ಇಂದು ಈ ಶುಭಗಳಿಗೆ ಬಂದಿದೆ, ಈ ಹೋರಾಟದ ಸ್ಪೂರ್ತಿಯನ್ನು ಇನ್ನಷ್ಟು ಬಲಗೊಳಿಸಿ, ವಿಸ್ತರಿಸಬೇಕೆಂದು ಆ ಮೂಲಕ ಇನ್ನಷ್ಟು ಅಭಿವೃದ್ದಿಗಳಾಗಲು ಕಾರಣರಾಗಬೇಕೆಂದು ಅವರು ಜನರಿಗೆ ಕರೆ ನೀಡಿದರು. ಈ ಸಂದರ್ಭದಲ್ಲಿ ನಡೆದ ಹೋರಾಟದ ಸಮಯ ಪಟ್ರಮೆ ಗ್ರಾಮದ ಉಳಿಯ ಎಂಬಲ್ಲಿಗೂ ಪ್ರತ್ಯೇಕ ಟಿಸಿ ನಿರ್ಮಾಣಕ್ಕೆ ಮನವಿ ನೀಡಲಾಗಿದ್ದು, ಇದರ ಜೊತೆ ಉಳಿಯ ಟಿಸಿಗೂ ಇಂದು ಸಂಪರ್ಕ ಸಿಕ್ಕಿದೆ ಎಂದವರು ಹೇಳಿದರು.
ಹಳ್ಳಿಂಗೇರಿಯ ಸಮುದಾಯ ಸಮಿತಿಯ ಗೌರವಾದ್ಯಕ್ಷ ಯೂಸ್‌ಪ್ ಮಾತನಾಡಿ ಈ ಪ್ರದೇಶದ ಕತ್ತಲೆ ನೀಗಿಸಿ ಬೆಳಕು ಹರಿಸಲು ಕಾರಣರಾದ ನಮ್ಮ ನಾಯಕರಾದ ಬಿ.ಎಂ.ಭಟ್, ಶ್ಯಾಮರಾಜ, ರೈತ ಮುಖಂಡರಾದ ಮಹಮ್ಮದ್ ಅನಸ್, ಡಿ.ವೈ.ಎಫ್.ಐ. ತಾಲೂಕು ಅಧ್ಯಕ್ಷ ಧನಂಜಯ ಗೌಡ ಮೊದಲಾದವರನ್ನೂ ಮತ್ತು ಬೆಳಕಿನ ದಾರಿತೋರಿಸಿದ ಕರ್ನಾಟಕ ಪ್ರಾಂತ ರೈತ ಸಂಘವನ್ನೂ ಈ ಪ್ರದೇಶದ ಜನ ಎಂದಿಗೂ ಮರೆಯುವುದಿಲ್ಲ ಎಂದರು. ಸಮುದಾಯ ಸಮಿತಿಯ ಅಧ್ಯಕ್ಷ ಇಸ್ಮಾಯಿಲ್, ಹಳ್ಳಿಂಗೇರಿ ಪ್ರದೇಶದ ನೀರಿನ ಸಮಸ್ಯೆ, ರಸ್ತೆ ಸಮಸ್ಯೆಗಳನ್ನೂ ನಿವೇಶನ ಸಮಸ್ಯೆಗಳನ್ನೂ, ಹೋರಾಟದ ಮೂಲಕ ಬಗೆಹರಿಸಲು ಮುಂದಾಗೋಣ ಎಂದರು.
ಈ ಸಂದಭ ಮೆಸ್ಕಾಂನ ಧರ್ಮಸ್ಥಳ ಜೆ.ಇ., ಲೈನ್‌ಮೇನ್ ರವಿ, ಸ್ಥಳೀಯ ಸಮುದಾಯ ಸಮಿತಿಯ ಮುಖಂಡರುಗಳಾದ ಚಂದ್ರ, ಶ್ರೀಮತಿ ಗೀತಾ ಹೇಮಂತ್, ಖಾಲಿದ್ ಮತ್ತು ಕಣ್ಣನ್ ಮೊದಲಾದವರು ಉಪಸ್ಥಿತರಿದ್ದರು.

Shalini prathistana laila copyಲಾಯಿಲ : ಶಾಲಿನಿ ಸೇವಾ ಪ್ರತಿಷ್ಠಾನ ಲಾಯಿಲ, ಬೆಳ್ತಂಗಡಿ ಇದರ ವತಿಯಿಂದ ದಿ| ಶಾಲಿನಿ ಅವರ ಪುಣ್ಯಸ್ಮರಣೆ ಹಾಗೂ ಶಾಲಿನಿ ಸೇವಾ ಪ್ರತಿಷ್ಠಾನದ 2ನೇ ವರ್ಷದ ಸೇವಾ ಕಾರ್ಯಕ್ರಮ ಮೇ 5ರಂದು ಲಾಯಿಲ ಶ್ರೀ ಗುರು ರಾಘವೇಂದ್ರ ಮಠದ ಸಭಾಂಗಣದಲ್ಲಿ ಜರುಗಿತು.
ಶೈಕ್ಷಣಿಕ ಕಾರ್ಯಕ್ರಮದ ಅಂಗವಾಗಿ ಶಾಲಿನಿ ಸೇವಾ ಟ್ರಸ್ಟ್‌ನಿಂದ ದತ್ತು ಸ್ವೀಕರಿಸಿದ ವಿದ್ಯಾರ್ಥಿನಿ ನಿಶಾ ಶೆಟ್ಟಿಯವರಿಗೆ ಅವರ ವಿದ್ಯಾಭ್ಯಾಸದ ಖರ್ಚಿನ ಹಸ್ತಾಂತರ, ವಿದ್ಯಾರ್ಥಿನಿಯರಾದ ಕು| ಚೈತ್ರಾ ಮತ್ತು ಕು| ಅರ್ಚನಾ ಇವರಿಗೆ ವಿದ್ಯಾನಿಧಿ ವಿತರಣೆ, ಸೀತಾರಾಮ ಶೆಟ್ಟಿ ಸೋಣಂದೂರು ಇವರಿಗೆ ಕ್ಷೇಮ ನಿಧಿ ವಿತರಣೆ ಮಾಡಲಾಯಿತು. ಸಾಧಕರ ಸನ್ಮಾನ ಕಾರ್ಯಕ್ರಮದಲ್ಲಿ ಹಿರಿಯ ಆಯುರ್ವೇದ ವೈದ್ಯ ಡಾ| ಕೆ.ಜಿ. ಪಣಿಕ್ಕರ್, ಉದಯವಾಣಿ ಪತ್ರಿಕೆ ವರದಿಗಾರ ಲಕ್ಷ್ಮೀ ಮಚ್ಚಿನ, ಯುವ ಯಕ್ಷಗಾನ ಕಲಾವಿದ ಗಣೇಶ್ ಶೆಟ್ಟಿ ಕನ್ನಡಿಕಟ್ಟೆ ಇವರನ್ನು ಶಾಲು ಹೊದಿಸಿ, ಸ್ಮರಣಿಕೆ ನೀಡಿ ಗೌರವಿಸಲಾಯಿತು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಶ್ರೀ ಕ್ಷೇತ್ರ ನಂದಿಬೆಟ್ಟ ಗರ್ಡಾಡಿ ಇದರ ಆಡಳಿತ ಮೊಕ್ತೇಸರ ಜಯರಾಮ ಶೆಟ್ಟಿ ಸೂರಜ್ ಫಾರ್ಮ್ಸ್ ಅವರು ಮಾತನಾಡಿ, ಪರಸ್ಪರ ವಿಶ್ವಾಸವೇ ಈ ಕಾರ್ಯಕ್ರಮಕ್ಕೆ ಸಾಕ್ಷಿಯಾಗಿದ್ದು, ತನ್ನ ಕಷ್ಟವನ್ನು ಮರೆಯಲು ತಾರಾನಾಥ ಶೆಟ್ಟಿಯವರು ಶಾಲಿನಿ ಸೇವಾ ಪ್ರತಿಷ್ಠಾನ ಸ್ಥಾಪಿಸಿ, ಇದರ ಮೂಲಕ ಸಮಾಜ ಸೇವಾ ಚಟುವಟಿಕೆಗಳನ್ನು ಮಾಡುತ್ತಿ ದ್ದಾರೆ, ತಾನು ದುಡಿದ ಸಂಪಾದನೆಯಲ್ಲಿ ಸ್ವಲ್ಪ ಅಂಶವನ್ನು ಸಮಾಜಕ್ಕೆ ನೀಡುವ ತಾರಾನಾಥ ಶೆಟ್ಟಿಯವರ ಕಾರ್ಯ ಶ್ಲಾಘನೀಯ ಎಂದು ತಿಳಿಸಿದರು. ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದ ಶ್ರೀ ರಾಘವೇಂದ್ರ ಸೇವಾ ಪ್ರತಿಷ್ಠಾನದ ಗೌರವಾಧ್ಯಕ್ಷ, ನಿವೃತ್ತ ಎಸ್.ಪಿ. ಪೀತಾಂಬರ ಹೆರಾಜೆಯವರು ಮಾತನಾಡಿ, ಶಾಲಿಯವರ ನೆನಪು ಹೃದಯದಲ್ಲಿ ಇರಬೇಕು ಮತ್ತು ಸಮಾಜದಲ್ಲಿ ಶಾಶ್ವತವಾಗಿ ಉಳಿಯಬೇಕು ಎಂಬ ನಿಟ್ಟಿನಲ್ಲಿ ಅವರ ಹೆಸರಿನಲ್ಲಿ ಪ್ರತಿಷ್ಠಾನ ಸ್ಥಾಪಿಸಿ, ಶೈಕ್ಷಣಿಕ, ವೈದ್ಯಕೀಯ ಮತ್ತು ಸಮಾಜದಲ್ಲಿ ಸಾಧಕರನ್ನು ಗುರುತಿಸುವ ಕಾರ್ಯ ಮಾಡುತ್ತಿದ್ದಾರೆ ಇದು ಇನ್ನು ಮುಂದುವರಿಯಲಿ ಎಂದು ಹಾರೈಸಿದರು. ಮುಖ್ಯ ಅತಿಥಿ ಲಾಯಿಲ ಗ್ರಾ.ಪಂ. ಉಪಾಧ್ಯಕ್ಷ ಗಿರೀಶ್ ಡೋಂಗ್ರೆ ಅವರು ಮಾತನಾಡಿ, ಶಾಲಿನಿ ಸೇವಾ ಪ್ರತಿಷ್ಠಾನ ಮಾಡುತ್ತಿರುವ ಉತ್ತಮ ಕಾರ್ಯಕ್ರಮಕ್ಕೆ ತನ್ನ ಗ್ರಾ.ಪಂ.ದ ಆರು ತಿಂಗಳ ಗೌರವ ಧನವನ್ನು ನೀಡುವುದಾಗಿ ಘೋಷಿಸಿದರು. ಮಡಂತ್ಯಾರು-ಪುಂಜಾಲಕಟ್ಟೆ ವರ್ತಕರ ಸಂಘದ ಅಧ್ಯಕ್ಷ ಜಯಂತ ಶೆಟ್ಟಿ ಮಡಂತ್ಯಾರು, ಶ್ರೀ ದುರ್ಗಾ ವುಡ್ ಇಂಡಸ್ಟ್ರೀಸ್ ಮಡಂತ್ಯಾರಿನ ಉಮೇಶ್ ಶೆಟ್ಟಿ, ಬೆಳ್ತಂಗಡಿ ಪತ್ರಕರ್ತರ ಸಂಘದ ಅಧ್ಯಕ್ಷ ದೇವಿಪ್ರಸಾದ್, ಪಾರೆಂಕಿ ಮಹಿಷ ಮರ್ದಿನಿ ದೇವಸ್ಥಾನದ ಶ್ರೀಧರ ರಾವ್, ಹಿರಿಯರಾದ ಚಿತ್ತರಂಜನ್ ಶೆಟ್ಟಿ ಮಾತನಾಡಿ ಶಾಲಿನಿ ಸೇವಾ ಪ್ರತಿಷ್ಠಾನ ದಿಂದ ಮಾಡುತ್ತಿರುವ ಸಮಾಜ ಮುಖಿ ಕಾರ್ಯಕ್ರಮಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದರು. ಬಿಜೆಪಿ ಯುವಮೋರ್ಚಾದ ದ.ಕ. ಜಿಲ್ಲಾ ಅಧ್ಯಕ್ಷ ಹರೀಶ್ ಪೂಂಜ, ಜನಾರ್ದನ ಶೆಟ್ಟಿ ಪೆಂರ್ದಿಲೆ ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಕಾರ್ಯಕ್ರಮದಲ್ಲಿ ಪ್ರತಿಷ್ಠಾನದ ಪದಾಧಿಕಾರಿಗಳಾದ ನಿರಂಜನ್ ಶೆಟ್ಟಿ, ಸುರೇಶ್ ಶೆಟ್ಟಿ, ಕು| ಜಯಶ್ರೀ ಇವರನ್ನು ಗೌರವಿಸಲಾಯಿತು. ಸನ್ಮಾನಿತರ ಪರವಾಗಿ ಡಾ. ಕೆ.ಜಿ. ಪಣಿಕ್ಕರ್ ಅನಿಸಿಕೆ ವ್ಯಕ್ತಪಡಿಸಿದರು. ಪ್ರತಿಷ್ಠಾನದ ಅಧ್ಯಕ್ಷ ತಾರಾನಾಥ ಶೆಟ್ಟಿ ಸ್ವಾಗತಿಸಿದರು. ಉಪನ್ಯಾಸಕಿ ಕು| ಜಯಶ್ರೀ ವರದಿ ವಾಚಿಸಿದರು. ತೇಜಾಕ್ಷಿ, ಜಯಲಕ್ಷ್ಮೀ, ದಿವ್ಯಾಶ್ರೀ ಸನ್ಮಾನಿತರನ್ನು ಪರಿಚಯಿಸಿದರು. ಉಪನ್ಯಾಸಕ ಶಿವರಾಜ್ ಗಟ್ಟಿ ಕಕ್ಕೆಪದವು ಕಾರ್ಯಕ್ರಮ ನಿರೂಪಿಸಿ, ಪ್ರತಿಷ್ಠಾನದ ಪ್ರಧಾನ ಕಾರ್ಯದರ್ಶಿ ಸುರೇಶ್ ಶೆಟ್ಟಿ ಧನ್ಯವಾದವಿತ್ತರು.
ಸಾಂಸ್ಕೃತಿಕ ಕಾರ್ಯಕ್ರಮ: ಸಂಜೆ 6 ರಿಂದ ಲಾಯಿಲದ ಮನಿಷಾ ಮತ್ತು ಮಾನಸ ಸಹೋದರಿಯರಿಂದ ಭರತ ನಾಟ್ಯ ಹಾಗೂ ರಾತ್ರಿ 9.30ರಿಂದ ಲ| ಕಿಶೋರ್ ಡಿ. ಶೆಟ್ಟಿಯವರ ನೇತೃತ್ವದಲ್ಲಿ ಶ್ರೀ ಲಲಿತ ಕಲಾವಿದರಿಂದ ಶ್ರೀ ಕಟೀಲ್ದಪ್ಪೆ ಉಳಾಳ್ತಿ ಎಂಬ ಪೌರಣಿಕ ನಾಟಕ ವಿನೂತನ ರಂಗ ಸಂಯೋಜನೆಗಳೊಂದಿಗೆ ಪ್ರದರ್ಶನಗೊಂಡಿತು.

Prasad copyಅಂಡಿಂಜೆ ಗ್ರಾಮದ ನವಜ್ಯೋತಿ ಮನೆ ಪಿಜಿನ ಪೂಜಾರಿಯವರ ಪುತ್ರ ಪ್ರಸಾದ್‌ರವರ ವಿವಾಹವು ಕೊಳಕ್ಕೆ ಬೈಲು ದಿ. ವಸಂತ ಪೂಜಾರಿ ಯವರ ಪುತ್ರಿ ಅಕ್ಷತಾರೊಂದಿಗೆ ಕೊಕ್ರಾಡಿ ಬ್ರಹ್ಮಶ್ರೀ ಗುರುನಾರಾಯಣ ಸ್ವಾಮಿ ಸೇವಾ ಸಂಘದಲ್ಲಿ ಮೇ 7 ರಂದು ಜರಗಿತು.

dinesh sumana copyಪುಂಜಾಲಕಟ್ಟೆ: ಅಜ್ಜಿಬೆಟ್ಟು ಗ್ರಾಮದ ಮುಂಡಾಲಬೆಟ್ಟು ಶ್ರೀ ಸಾನಿಧ್ಯ ಮನೆಯ ಶ್ರೀಮತಿ ಬೇಬಿ ಮತ್ತು ಕೃಷ್ಣ ಬಂಗೇರರ ಪುತ್ರ ದಿನೇಶ್‌ರವರ ವಿವಾಹವು ಹಿರೇಭಂಡಾಡಿ ಗ್ರಾಮದ ಅಡೆಕಲ್ ಲೋಕೇಶ್ ಮಡಿವಾಳರವರ ಪುತ್ರಿ ಸುಮನರೊಂದಿಗೆ ಮೂಡಬಿದಿರೆ ಸಮಾಜ ಮಂದಿರದಲ್ಲಿ ಮೇ 7ರಂದು ಜರುಗಿತು.

adike uthpanna adyana copyಉಜಿರೆ : ನಿವೇದನ್ ಎಂಬಾತ ಎಆರ್‌ಡಿಎಫ್ ಸಹಕಾರದೊಂದಿಗೆ ಅಡಿಕೆ ಚಹಾ ಉತ್ಪಾದನೆ ಶೋಧಿಸಿ ಜನಪ್ರಿಯವಾಗಿದ್ದು ಇತರ ಪರ್ಯಾಯ ಉತ್ಪನ್ನಗಳ ತಯಾರಿಗೆ ಮುಂದಾಗಿದ್ದಾರೆ. ಅಂತೆಯೇ ವಿಜ್ಞಾನಿಗಳು, ಕೃಷಿಕರು ಹಾಗೂ ವಿದ್ಯಾರ್ಥಿಗಳು ಅಡಿಕೆಯ ಪರ್ಯಾಯ ಉತ್ಪನ್ನಗಳ ಅಧ್ಯಯನ, ಸಂಶೋದನೆ ನಡೆಸಿ, ಉದ್ಯಮಶೀಲರಾಗಿ ದೇಶದ ಅಭಿವೃದ್ಧಿಗೆ ಕಾರಣರಾಗಬೇಕೆಂದು ಧರ್ಮಸ್ಥಳ ಧರ್ಮಾಧಿಕಾರಿ, ಎಆರ್‌ಡಿಎಫ್ ಅಧ್ಯಕ್ಷ ಡಾ| ಡಿ. ವೀರೇಂದ್ರ ಹೆಗ್ಗಡೆ ನುಡಿದರು
ಅವರು ಮೇ. 9ರಂದು ಉಜಿರೆಯ ಶ್ರೀ.ಧ.ಮಂ ತಾಂತ್ರಿಕ ಮಹಾವಿದ್ಯಾಲಯದಲ್ಲಿ ಕಾಲೇಜು ಮತ್ತು ಮಂಗಳೂರಿನ ಅರಕನಟ್ ರಿಸರ್ಚ್ ಎಂಡ್ ಡೆವಲಪ್‌ಮೆಂಟ್ ಪೌಂಡೇಶನ್(ಎಆರ್‌ಡಿಎಫ್) ಸಹಕಾರ ಹಾಗೂ ಕ್ಯಾಂಪ್ಕೋ ಸಹಯೋಗದೊಂದಿಗೆ ನಡೆದ ಒಂದು ದಿನದ ಉದ್ಯಮಾಭಿವೃದ್ಧಿ ಮತ್ತು ಅಡಿಕೆ ಉದ್ಯಮದಲ್ಲಿ ಅವಕಾಶಗಳು ಕುರಿತಾದ ವಿಚಾರ ಸಂಕಿರಣ ಉದ್ಘಾಟಿಸಿ ಮಾತನಾಡುತ್ತಿದ್ದರು. ಅಡಿಕೆ ಮರಕ್ಕೆ ರಾಸಾಯನಿಕ ಸಿಂಪಡಿಸಲು ಡ್ರೋನ್ ಬಳಸಿ ಯಶಸ್ವಿಯಾದಂತೆ ಅಡಿಕೆ ಮತ್ತು ಅದರ ಉತ್ಪನ್ನಗಳ ಬಗ್ಗೆ ವಿಜ್ಞಾನಿಗಳು ಹಾಗೂ ಕೃಷಿಕರು ಹೊಸ ಹೊಸ ಸಂಶೋಧನೆ ನಡೆಸುವ ಮೂಲಕ ಅಡಿಕೆ ಮಾರುಕಟ್ಟೆಗೆ ಹೊಸ ಕಾಯಕಲ್ಪ ನೀಡಿದಲ್ಲಿ ಅಡಿಕೆ ಕೃಷಿಕರು ಧಾರಣೆಯ ಏರುಪೇರಿನಲ್ಲಿ ಧೃತಿಗೆಡಬೇಕಾಗಿಲ್ಲ, ಅಡಿಕೆಯೂ ಬಡ ಕೃಷಿಕನ ಕೈ ಹಿಡಿದು ದೇಶದ ಅಭಿವೃದ್ಧಿಯಲ್ಲಿ ಮಹತ್ವದ ಪಾತ್ರ ವಹಿಸಬಲ್ಲರೆಂದು ನುಡಿದರು.
ಮುಖ್ಯ ಅತಿಥಿ ಕ್ಯಾಂಪ್ಕೋ ಅಧ್ಯಕ್ಷ ಎಸ್.ಆರ್ ಸತೀಶ್ಚಂದ್ರ ನಮ್ಮದು ಋಷಿ ಸಂಸ್ಕೃತಿ ಮತ್ತು ಕೃಷಿ ಸಂಸ್ಕೃತಿಯನ್ನು ಒಪ್ಪಿಕೊಂಡ ದೇಶ. ಕರಾವಳಿಯ ಜೀವನಾಡಿ ಅಡಿಕೆ. ಅದು ನಮಗೆ ಸ್ವಾವಲಂಬಿ ಯಾಗಿ ಬದುಕಲು ಅವಕಾಶ ಮಾಡಿ ಕೊಟ್ಟಿದೆ. ಅದು ಜಿಲ್ಲೆಯ ಸಹಕಾರ ಕ್ಷೇತ್ರ ಹಾಗೂ ವೈಜ್ಞಾನಿಕ ಅನುಭವದಿಂದ ಸಾಧ್ಯವಾಗಿದೆ. ಅಡಿಕೆಯಿಂದ ಇದುವರೆಗೆ ಸುಮಾರು 30 ಪರ್ಯಾಯ ಉತ್ಪನ್ನಗಳನ್ನು ತಯಾರಿಸಲು ಸಾಧ್ಯವಾಗಿದ್ದು, ವೈದ್ಯಕೀಯ ಗುಣ ಹಾಗೂ ಉತ್ತಮ ಅಂಶಗಳನ್ನೊಗೊಂಡ ಅಡಿಕೆಯಿಂದ ಮತ್ತಷ್ಟು ಹೊಸ ಉತ್ಪನ್ನಗಳ ತಯಾರಿಗೆ ಯುವಕರು ಮುಂದೆ ಬರಬೇಕೆಂದರು. ಕಾಲೇಜು ಪ್ರಾಚಾರ್ಯ ಡಾ| ಕೆ. ಸುರೇಶ್ ಅಧ್ಯಕ್ಷತೆ ವಹಿಸಿದ್ದರು. ವೇದಿಕೆಯಲ್ಲಿ ಕಾಸರಗೋಡು ಸಿಪಿಸಿಆರ್‌ಐ ನಿರ್ದೇಶಕ ಡಾ| ಪಿ. ಚೌಡಪ್ಪ, ಎಆರ್‌ಡಿಎಫ್ ಕಾರ್ಯನಿರ್ವಾಹಣಾಧಿಕಾರಿ ಡಾ| ಕೇಶವ ಭಟ್, ಅಖಿಲ ಭಾರತ ಅಡಿಕೆ ಬೆಳೆಗಾರರ ಸಂಘದ ಅಧ್ಯಕ್ಷ ಮಂಚಿ ಶ್ರೀನಿವಾಸ್ ಆಚಾರ್ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಪ್ರೋ. ಮಹೇಶ್ ಎಂ, ಪ್ರೋ. ಎಚ್ ಮನೋಜ್ ಗಡಿಯಾರ್ ಮುಖ್ಯ ಅತಿಥಿಗಳನ್ನು ಪರಿಚಯಿಸಿದರು. ಪ್ರೋ. ಬಸವರಾಜ ಪಾಟೀಲ್ ನಿರೂಪಿಸಿದ ಕಾರ್ಯಕ್ರಮದಲ್ಲಿ ಡಾ| ಬಸವ ಡಿ ಸ್ವಾಗತಿಸಿ, ಪ್ರೋ ಅವಿನಾಶ್ ವಂದಿಸಿದರು. ಇಡೀ ದಿನ ನಡೆದ ವಿಚಾರ ಸಂಕೀರ್ಣದಲ್ಲಿ ತಜ್ಞ ಕೃಷಿಕರು, ವಿಜ್ಞಾನಿಗಳು ತಮ್ಮ ಅನುಭವಗಳು ಹಾಗೂ ಸಾಧ್ಯತೆಗಳ ಬಗೆಗೆ ಉಪನ್ಯಾಸ ನೀಡಿದರು. ಅಡಿಕೆ ಉತ್ಪನ್ನ ಹಾಗೂ ಕ್ಯಾಂಪ್ಕೋ ಉತ್ಪನ್ನಗಳ ಪ್ರದರ್ಶನ ಏರ್ಪಡಿಸಲಾಗಿತ್ತು.

hosapatna rangamandira lokarpane copyಬಜಿರೆ: ಶ್ರೀ ಸತ್ಯನಾರಾಯಣ ಪೂಜಾ ಸೇವಾ ಸಮಿತಿ ಹೊಸಪಟ್ಣ-ಬಜಿರೆ ಹಾಗೂ ಶ್ರೀ ಸತ್ಯನಾರಾಯಣ ರಂಗಮಂದಿರ ನಿರ್ಮಾಣ ಸಮಿತಿ ಹಾಗೂ ಶ್ರೀ ಸತ್ಯನಾರಾಯಣ ಫ್ರೆಂಡ್ಸ್ ಕ್ಲಬ್ ಆಶ್ರಯದಲ್ಲಿ ಶ್ರೀ ಸತ್ಯನಾರಾಯಣ ಭಜನಾ ಮಂಡಳಿ ಸಹಕಾರದೊಂದಿಗೆ ೩೮ನೇ ವರ್ಷದ ಸಾಮೂಹಿಕ ಶ್ರೀ ಸತ್ಯನಾರಾಯಣ ಪೂಜೆ, ನೂತನ ರಂಗಮಂದಿರದ ಉದ್ಘಾಟನಾ ಸಮಾರಂಭ, ವಿವಿಧ ಕ್ಷೇತ್ರಗಳ ಸಾಧಕರ ಸನ್ಮಾನ ಕಾರ್ಯಕ್ರಮವು ಮೇ. 3 ರಂದು ವಿವಿಧ ಧಾರ್ಮಿಕ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳೊಂದಿಗೆ ಜರಗಿ ಸಂಪನ್ನಗೊಂಡಿತು.
ನೂತನ ರಂಗಮಂದಿರದ ಲೋಕಾರ್ಪಣೆಯನ್ನು ಪೆರಿಂಜೆ ಶ್ರೀ ಕ್ಷೇತ್ರ ಪಡ್ಡ್ಯಾರಬೆಟ್ಟದ ಧರ್ಮದರ್ಶಿ ಎ. ಜೀವಂಧರ ಕುಮಾರ್ ಅವರು ನೆರವೇರಿಸಿ ಶುಭ ಹಾರೈಸಿದರು. ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದ ಅಳದಂಗಡಿ ಶ್ರೀ ಸತ್ಯದೇವತೆ ದೈವಸ್ಥಾನದ ಆಡಳಿತದಾರ ಶಿವಪ್ರಸಾದ್ ಅಜಿಲರು ಮಾತನಾಡಿ, ಸಮಾಜಕ್ಕೆ ಇಲ್ಲಿನ ಯುವಕರು ಶಾಶ್ವತ ಕೊಡುಗೆ ನೀಡಿದ್ದಾರೆ. ಜಾತಿ, ಮತ, ಬೇಧವಿಲ್ಲದೆ ಒಗ್ಗಟ್ಟಾಗಿ ನಿರ್ಮಾಣ ಮಾಡಿದ ರಂಗಮಂದಿರ ಬಡ ಜನತೆಗೆ ಉಪಯೋಗವಾಗುವಂತಾಗಲಿ ಎಂದರು.
ದ.ಕ. ಜಿಲ್ಲಾ ಯುವ ಮೋರ್ಚಾದ ಅಧ್ಯಕ್ಷ ಹರೀಶ್ ಪೂಂಜ ಮಾತನಾಡಿ, ಸಮಾಜಕ್ಕೆ ಪ್ರೇರಣೆ ನೀಡುವ ಕೆಲಸ ಇಲ್ಲಿ ನಡೆದಿದ್ದು, ಇವರ ಪ್ರಾಮಾಣಿಕ ಸೇವೆಗೆ ದೇವರ ಅನುಗ್ರಹ ಪ್ರಾಪ್ತಿಯಾಗಲಿದೆ ಎಂದರು.
ಸನ್ಮಾನ: ಶಿಕ್ಷಣ ಕ್ಷೇತ್ರದಲ್ಲಿ ಸಾಧನೆಗೈದ ವಿ. ಪ್ರಭಾಕರ ಹೆಗ್ಡೆ ಹಟ್ಟಾಜೆಗುತ್ತು, ಸಾಮಾಜಿಕ ಕ್ಷೇತ್ರದಲ್ಲಿ ಸಾಧನೆಗೈದಿರುವ ಡಾ| ವರದರಾಜ ಪೈ, ಹರೀಶ್ ಡಿ. ಪೂಜಾರಿ, ವಿಜಯ ಹೆಗ್ಡೆ, ರಮೇಶ್ ಪೂಜಾರಿ, ಭರತ್‌ರಾಜ್ ಪಾಪುದಡ್ಕಗುತ್ತು ಹಾಗೂ ಚೆನ್ನಪ್ಪ ಪೂಜಾರಿ ಬಜಿರೆಗುತ್ತು ಅವರನ್ನು ಸನ್ಮಾನಿಸಲಾಯಿತು.
ಶ್ರೀ ಸತ್ಯನಾರಾಯಣ ಪೂಜಾ ಸೇವಾ ಸಮಿತಿ ಕಾರ್ಯದರ್ಶಿ ಭಾಸ್ಕರ ಪೂಜಾರಿ ನಾಯರ‍್ಮೇರು ಪ್ರಾಸ್ತಾವಿಕವಾಗಿ ಮಾತನಾಡಿ, ಊರವರ ಹಾಗೂ ದಾನಿಗಳ ಸಹಕಾರದಿಂದ ಸುಸಜ್ಜಿತ ರಂಗಮಂದಿರ ನಿರ್ಮಾಣ ಮಾಡಲಾಗಿದೆ. ಮುಂದಿನ ಎರಡು, ಮೂರು ವರ್ಷದಲ್ಲಿ ಸಭಾಭವನ ಹಾಗೂ ಅನ್ನಛತ್ರದ ನಿರ್ಮಾಣ ಮಾಡುವ ಇರಾದೆ ಇದೆ ಎಂದರು.
ರಾಜ್ಯ ಅರಣ್ಯ ಸಚಿವ ಬಿ. ರಮಾನಾಥ ರೈ, ನಾರಾವಿ ಜಿ.ಪಂ. ಸದಸ್ಯ ಪಿ. ಧರಣೇಂದ್ರ ಕುಮಾರ್, ಅಳದಂಗಡಿ ಜಿ.ಪಂ. ಸದಸ್ಯ ಶೇಖರ ಕುಕ್ಕೇಡಿ, ಬೆಳಾಲು ಎಸ್‌ಡಿಎಂ ಪ್ರೌಢಶಾಲೆಯ ಮುಖ್ಯ ಶಿಕ್ಷಕ ರಾಮಕೃಷ್ಣ ಭಟ್ ಸಿ., ವೇಣೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಆಡಳಿತಾಧಿಕಾರಿ ಕೆ. ಜಯಕೀರ್ತಿ ಜೈನ್ ಧರ್ಮಸ್ಥಳ, ವೇಣೂರು ತಾ.ಪಂ. ಸದಸ್ಯ ಕೆ. ವಿಜಯ ಗೌಡ, ಪಿಲಾತ್ತಬೆಟ್ಟು ತಾ.ಪಂ. ಸದಸ್ಯ ರಮೇಶ್ ಕುಡ್ಮೇರು, ಪೂಜಾ ಸೇವಾ ಸಮಿತಿ ಗೌರವಾಧ್ಯಕ್ಷ ಪದ್ಮನಾಭ ರೈ ಬ್ರಾಣಿಗೇರಿ, ರಂಗಮಂದಿರ ನಿರ್ಮಾಣ ಸಮಿತಿ ಗೌರವಾಧ್ಯಕ್ಷ ಓಬಯ್ಯ ಪೂಜಾರಿ, ಅಧ್ಯಕ್ಷ ಕಿಶೋರ್ ಪೂಜಾರಿ ನಾಯರ್‌ಮೇರು, ಉಪಾಧ್ಯಕ್ಷ ಸತೀಶ್ ಹೆಗ್ಡೆ, ಪ್ರಧಾನ ಕಾರ್ಯದರ್ಶಿ ಮೋಹನ ಬಿ.ಸಿ. ಹಾಗೂ ಮತ್ತಿತರರು ಉಪಸ್ಥಿತರಿದ್ದರು. ಪೂಜಾ ಸೇವಾ ಸಮಿತಿ ಹಾಗೂ ರಂಗಮಂದಿರ ನಿರ್ಮಾಣ ಸಮಿತಿ ಪದಾಧಿಕಾರಿಗಳು ಸಹಕರಿಸಿದರು. ರಂಗಮಂದಿರ ನಿರ್ಮಾಣ ಸಮಿತಿ ಪ್ರಧಾನ ಸಂಚಾಲಕ ಗಣೇಶ್ ಪೂಜಾರಿ ಸ್ವಾಗತಿಸಿ ಪೂಜಾ ಸಮಿತಿ ಅಧ್ಯಕ್ಷ ಪ್ರವೀಣ್ ಕುಮಾರ್ ಜಾರಿಗೆದಡಿ ವಂದಿಸಿದರು. ಗೊಪಾಲ್ ಅಂಚನ್ ಕಾರ್ಯಕ್ರಮ ನಿರ್ವಹಿಸಿದರು. ಬೆಳಿಗ್ಗೆ ಸಾಮೂಹಿಕ ಶ್ರೀ ಸತ್ಯನಾರಾಯಣ ಪೂಜೆ ಹಾಗೂ ರಾತ್ರಿ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮ ಜರಗಿತು.

ಹೊಸಪಟ್ಣ ನೂತನ ರಂಗಮಂದಿರದ ಲೋಕಾರ್ಪಣೆ

ಹೊಸಪಟ್ಣ ನೂತನ ರಂಗಮಂದಿರದ ಲೋಕಾರ್ಪಣೆ

Thursday, May 11th, 2017 | Suddi Belthangady | no responses ಬಜಿರೆ: ಶ್ರೀ ಸತ್ಯನಾರಾಯಣ ಪೂಜಾ ಸೇವಾ ಸಮಿತಿ ಹೊಸಪಟ್ಣ-ಬಜಿರೆ ಹಾಗೂ ಶ್ರೀ ಸತ್ಯನಾರಾಯಣ… ಮುಂದೆ ಓದಿ

ತೆಂಕಕಾರಂದೂರು : ಶ್ರೀ ಕುಂಭಕಂಠಿನಿ ದೈವದ ಶಿಲಾಮಯ ಮಂಟಪದ ಕಲಶಾಭಿಷೇಕ

Thursday, May 11th, 2017 | Suddi Belthangady | no responses ತೆಂಕಕಾರಂದೂರು : ಶ್ರೀ ಕುಂಭಕಂಠಿನಿ ದೈವಸ್ಥಾನ ತೆಂಕಕಾರಂದೂರು ಪೆರೋಡಿತ್ತಾಯ ಕಟ್ಟೆ ಇಲ್ಲಿನ ಕುಂಭಕಂಠಿನಿ… ಮುಂದೆ ಓದಿ

ಲಕ್ಷ್ಮೀನರಸಿಂಹ ಉತ್ಸವ ಪ್ರಯುಕ್ತ ಹೊರೆಕಾಣಿಕೆ

ಲಕ್ಷ್ಮೀನರಸಿಂಹ ಉತ್ಸವ ಪ್ರಯುಕ್ತ ಹೊರೆಕಾಣಿಕೆ

Tuesday, May 9th, 2017 | Suddi Belthangady | no responses ಬೆಳ್ತಂಗಡಿ : ಲಕ್ಷ್ಮೀನರಸಿಂಹ ಉತ್ಸವ ಸಮಿತಿ ಮತ್ತು ನರಸಿಂಹಘಡ ಸಂರಕ್ಷಣಾ ಸಮಿತಿ ವತಿಯಿಂದ … ಮುಂದೆ ಓದಿ

ಮಠ ಶ್ರೀ ಲಕ್ಷ್ಮೀ ವೆಂಕಟೇಶ್ವರ ದೇವಸ್ಥಾನ, ಕಡಿರುದ್ಯಾವರ ಬ್ರಹ್ಮಕಲಶೋತ್ಸವ

Tuesday, May 9th, 2017 | Suddi Belthangady | no responses ಕಡಿರುದ್ಯಾವರ : ಮಠ ಶ್ರೀಲಕ್ಷ್ಮೀ ವೆಂಕಟೇಶ್ವರ ದೇವಸ್ಥಾನ ಕಡಿರುದ್ಯಾವರ ಬ್ರಹ್ಮಕಲಶೋತ್ಸವ ಅಂಗವಾಗಿ ಶ್ರೀ… ಮುಂದೆ ಓದಿ

ಮಠ ದೇವಸ್ಥಾನ ನೂತನ ಸಭಾಭವನ, ಕಲಾವೇದಿಕೆ ಉದ್ಘಾಟನೆ

Monday, May 8th, 2017 | Suddi Belthangady | no responses ಕಡಿರುದ್ಯಾವರ : ಮಠ ಶ್ರೀ ಲಕ್ಷ್ಮೀ ವೆಂಕಟೇಶ್ವರ ದೇವಸ್ಥಾನ ಕಡಿರುದ್ಯಾವರದ ಬ್ರಹ್ಮಕಲಶೋತ್ಸವ ಅಂಗವಾಗಿ… ಮುಂದೆ ಓದಿ

ಮೇ 11 - 14 : ಶ್ರೀ ಗುರುರಾಘವೇಂದ್ರ ಸ್ವಾಮಿ ಮತ್ತು ಕಾರ್ಯಸಿದ್ಧಿ ಶ್ರೀ ವೀರಾಂಜನೇಯ ಸ್ವಾಮಿಯ ಪ್ರತಿಷ್ಠಾ ಬ್ರಹ್ಮಕಲಶ - ಆರಾಧನೋತ್ಸವ

ಮೇ 11 – 14 : ಶ್ರೀ ಗುರುರಾಘವೇಂದ್ರ ಸ್ವಾಮಿ ಮತ್ತು ಕಾರ್ಯಸಿದ್ಧಿ ಶ್ರೀ ವೀರಾಂಜನೇಯ ಸ್ವಾಮಿಯ ಪ್ರತಿಷ್ಠಾ ಬ್ರಹ್ಮಕಲಶ – ಆರಾಧನೋತ್ಸವ

Saturday, May 6th, 2017 | Suddi Belthangady | no responses ಮಡಂತ್ಯಾರು : ಕಾಮಧೇನು ಶ್ರೀ ಗುರು ರಾಘವೇಂದ್ರ ಬೃಂದಾವನ ಕಾರ್ಯಸಿದ್ಧಿ ಶ್ರೀ ವೀರಾಂಜನೆಯ… ಮುಂದೆ ಓದಿ

ಮಠ ಶ್ರೀ ಲಕ್ಷ್ಮೀ ವೆಂಕಟೇಶ್ವರ ದೇವಸ್ಥಾನ, ಕಡಿರುದ್ಯಾವರ ಬ್ರಹ್ಮಕಲಶೋತ್ಸವ ಪ್ರಾರಂಭ

Friday, May 5th, 2017 | Suddi Belthangady | no responses ಕಡಿರುದ್ಯಾವರ : ಮಠ ಶ್ರೀ ಲಕ್ಷ್ಮೀ ವೆಂಕಟೇಶ್ವರ ದೇವಸ್ಥಾನ, ಕಡಿರುದ್ಯಾವರ ಇಲ್ಲಿ ದೇವಸ್ಥಾನದ… ಮುಂದೆ ಓದಿ

ಹೊಸಂಗಡಿ - ಬಡಕೋಡಿ ಒಕ್ಕೂಟದ ಪದಗ್ರಹಣ-ಸತ್ಯನಾರಾಯಣ ಪೂಜೆ : ಒಕ್ಕೂಟಗಳ ಸಹಕಾರದಿಂದ ಗ್ರಾಮಾಭಿವೃದ್ಧಿ ಯೋಜನೆಯ ಕಾರ‍್ಯಕ್ರಮ ಪರಿಣಾಮಕಾರಿ ಅನುಷ್ಠಾನ

ಹೊಸಂಗಡಿ – ಬಡಕೋಡಿ ಒಕ್ಕೂಟದ ಪದಗ್ರಹಣ-ಸತ್ಯನಾರಾಯಣ ಪೂಜೆ : ಒಕ್ಕೂಟಗಳ ಸಹಕಾರದಿಂದ ಗ್ರಾಮಾಭಿವೃದ್ಧಿ ಯೋಜನೆಯ ಕಾರ‍್ಯಕ್ರಮ ಪರಿಣಾಮಕಾರಿ ಅನುಷ್ಠಾನ

Friday, May 5th, 2017 | Suddi Belthangady | no responses ಪೆರಿಂಜೆ: ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಅನುಷ್ಠಾನದ ಬಳಿಕ ತಾಲೂಕಿನ ಗ್ರಾಮೀಣ ಭಾಗದ ಜನತೆ… ಮುಂದೆ ಓದಿ

ನಾರಾವಿಯಲ್ಲಿ ಗುರುಜಯಂತಿ, ಶ್ರೀ ಸತ್ಯನಾರಾಯಣ ಪೂಜೆ, ದೀಕ್ಷಾ ಗ್ರಂಥಿ ಧಾರಣೆ

Thursday, May 4th, 2017 | Suddi Belthangady | no responses ಸಂಘಟನೆಗಾಗಿ ಜಾತಿ ಇರಲಿ, ಸಾಮಾಜಿಕ ಸೇವೆಯಲ್ಲಿ ಅದನ್ನು ಮೀರಿ ನಡೆಯೋಣ: ಬಲ್ಯೊಟ್ಟು ಶ್ರೀ… ಮುಂದೆ ಓದಿ

ಕಲ್ಮಂಜ ಅಂತರಬೈಲಿನಲ್ಲಿ ಸಾರ್ವಜನಿಕ ಶ್ರೀ ಸತ್ಯನಾರಾಯಣ ಪೂಜೆ ಮನಸ್ಸು ಸ್ವಚ್ಛವಾದರೆ ಭಗವಂತನ ಅನುಗ್ರಹ: ಬ್ರಹ್ಮಾನಂದ ಶ್ರೀ

Thursday, May 4th, 2017 | Suddi Belthangady | no responses ಕಲ್ಮಂಜ : ಮನುಷ್ಯ ತನ್ನ ಮನಸ್ಸು ಮತ್ತು ಇಂದ್ರಿಯಗಳನ್ನು ಹತೋಟಿಯಲ್ಲಿಟ್ಟುಕೊಂಡು ವ್ಯಕ್ತಿತ್ವವನ್ನು ರೂಪಿಸಿಕೊಳ್ಳಬೇಕು,… ಮುಂದೆ ಓದಿ

ಬಳ್ಳಮಂಜದಲ್ಲಿ ಮಹಾರಥೋತ್ಸವ

ಬಳ್ಳಮಂಜದಲ್ಲಿ ಮಹಾರಥೋತ್ಸವ

Monday, May 1st, 2017 | Suddi Belthangady | no responses ಬಳ್ಳಮಂಜ: ಇತಿಹಾಸ ಪ್ರಸಿದ್ಧ ಬಳ್ಳಮಂಜ ಮಹತೋಭಾರ ಶ್ರೀ ಅನಂತೇಶ್ವರ ಸ್ವಾಮಿ ದೇವಸ್ಥಾನದಲ್ಲಿ ಎ.23… ಮುಂದೆ ಓದಿ

ಮೇ 3 : ಹೊಸಪಟ್ಣ ನೂತನ ರಂಗಮಂದಿರದ ಲೋಕಾರ್ಪಣೆ  ವಿವಿಧ ಕ್ಷೇತ್ರಗಳ ಸಾಧಕರ ಸನ್ಮಾನ - ವೈವಿದ್ಯಮಯ ಸಾಂಸ್ಕೃತಿಕ ವೈಭವ

ಮೇ 3 : ಹೊಸಪಟ್ಣ ನೂತನ ರಂಗಮಂದಿರದ ಲೋಕಾರ್ಪಣೆ ವಿವಿಧ ಕ್ಷೇತ್ರಗಳ ಸಾಧಕರ ಸನ್ಮಾನ – ವೈವಿದ್ಯಮಯ ಸಾಂಸ್ಕೃತಿಕ ವೈಭವ

Friday, April 28th, 2017 | Suddi Belthangady | no responses ಹೊಸಪಟ್ಣ: ಶ್ರೀ ಸತ್ಯ ನಾರಾಯಣ ಪೂಜಾ ಸೇವಾ ಸಮಿತಿ ಹೊಸಪಟ್ಣ-ಬಜಿರೆ ಹಾಗೂ ಶ್ರೀ… ಮುಂದೆ ಓದಿ

ಎ.30: ಬೆಳ್ತಂಗಡಿಯ ಕುತ್ಯಾರು ನಾಗಬ್ರಹ್ಮ ದೇವರ ಪುನರ್ ಪ್ರತಿಷ್ಠಾ ಮಹೋತ್ಸವ

Friday, April 28th, 2017 | Suddi Belthangady | no responses ಬೆಳ್ತಂಗಡಿ ನಗರ ಪಂಚಾಯತ್ ವ್ಯಾಪ್ತಿಯ ರಾಮನಗರದ ಕುತ್ಯಾರು ರಸ್ತೆಯಲ್ಲಿರುವ ನಾಗಬ್ರಹ್ಮ ದೇವರ ಪುನಾರ್… ಮುಂದೆ ಓದಿ

ಪಾಲಡ್ಕ ಕ್ಷೇತ್ರದ ಬ್ರಹ್ಮಕಲಶೋತ್ಸವ ಆಮಂತ್ರಣ ಪತ್ರಿಕೆ ಬಿಡುಗಡೆ

Friday, April 28th, 2017 | Suddi Belthangady | no responses ಪಾಲಡ್ಕ : ಮಚ್ಚಿನ ಗ್ರಾಮದ ಪಾಲಡ್ಕ ಶ್ರೀ ಬ್ರಹ್ಮಮುಗೇರು, ಕೊರಗಜ್ಜ, ಪಂಜುರ್ಲಿ ಕ್ಷೇತ್ರದ… ಮುಂದೆ ಓದಿ

ಎ.30ರಂದು ಬಳ್ಳಮಂಜದಲ್ಲಿ ಮಹಾರಥೋತ್ಸವ

ಎ.30ರಂದು ಬಳ್ಳಮಂಜದಲ್ಲಿ ಮಹಾರಥೋತ್ಸವ

Friday, April 28th, 2017 | Suddi Belthangady | no responses ಬಳ್ಳಮಂಜ: ಇತಿಹಾಸ ಪ್ರಸಿದ್ಧ ಬಳ್ಳಮಂಜ ಮಹತೋಭಾರ ಶ್ರೀ ಅನಂತೇಶ್ವರ ಸ್ವಾಮಿ ದೇವಸ್ಥಾನದಲ್ಲಿ ಎ.23… ಮುಂದೆ ಓದಿ

ಬೆಳಾಲು ಶ್ರೀ ಅನಂತ ಪದ್ಮನಾಭ ದೇವಸ್ಥಾನದಲ್ಲಿ ಷಢಾಧಾರ ಪ್ರತಿಷ್ಠೆ - ನಿಧಿಕುಂಭ ಸಮರ್ಪಣೆ ಮತ್ತು ಗರ್ಭನ್ಯಾಸ

ಬೆಳಾಲು ಶ್ರೀ ಅನಂತ ಪದ್ಮನಾಭ ದೇವಸ್ಥಾನದಲ್ಲಿ ಷಢಾಧಾರ ಪ್ರತಿಷ್ಠೆ – ನಿಧಿಕುಂಭ ಸಮರ್ಪಣೆ ಮತ್ತು ಗರ್ಭನ್ಯಾಸ

Thursday, April 27th, 2017 | Suddi Belthangady | no responses ಬೆಳಾಲು : ಇಲ್ಲಿಯ ಅನಂತೋಡಿಯಲ್ಲಿ ಜೀರ್ಣೋದ್ಧಾರ ಗೊಳ್ಳುತ್ತಿರುವ ಶ್ರೀ ಅನಂತ ಪದ್ಮನಾಭ ದೇವಸ್ಥಾನದಲ್ಲಿ… ಮುಂದೆ ಓದಿ

ಬಳ್ಳಮಂಜ ಮೇಷ ಜಾತ್ರೆಯ ಪ್ರಯುಕ್ತ ಪಿಲಿಚಾಮುಂಡಿ ನೇಮ

Thursday, April 27th, 2017 | Suddi Belthangady | no responses ಬಳ್ಳಮಂಜ : ಇತಿಹಾಸ ಪ್ರಸಿದ್ಧ ಮಹತೋಭಾರ ಶ್ರೀ ಅನಂತೇಶ್ವರ ಸ್ವಾಮಿ ದೇವಸ್ಥಾನ ಬಳ್ಳಮಂಜದಲ್ಲಿ… ಮುಂದೆ ಓದಿ

ಮೇಲಂತಬೆಟ್ಟು ಶ್ರೀ ಭಗವತಿ ಕ್ಷೇತ್ರದಲ್ಲಿ ವಾರ್ಷಿಕ ವರ್ಧಂತ್ಯುತ್ಸವ-ಅಗ್ನಿಗುಳಿಗ ದೈವದ ನರ್ತನ ಸೇವೆ ಸಾನಿಧ್ಯದ ಶಕ್ತಿಯಿಂದ ಭಕ್ತರಿಗೆ-ಊರಿಗೆ ಬೆಳಕು: ಸ್ವಾಮೀಜಿ

Thursday, April 27th, 2017 | Suddi Belthangady | no responses ಮೇಲಂತಬೆಟ್ಟು : ಶ್ರೀ ದೇವಿ ಭಗವತಿ ಅಮ್ಮನವರ ದೇವಸ್ಥಾನ ಮೇಲಂತಬೆಟ್ಟುವಿನಲ್ಲಿ ಪ್ರತಿಷ್ಠಾಷ್ಟಬಂಧ ಬ್ರಹ್ಮಕಲಶೋತ್ಸವದ… ಮುಂದೆ ಓದಿ

ಅರಸಿನಮಕ್ಕಿ ಶ್ರೀನಿವಾಸ ಕಲ್ಯಾಣೋತ್ಸವ

ಅರಸಿನಮಕ್ಕಿ ಶ್ರೀನಿವಾಸ ಕಲ್ಯಾಣೋತ್ಸವ

Monday, April 24th, 2017 | Suddi Belthangady | no responses ಅರಸಿನಮಕ್ಕಿ ಶ್ರೀನಿವಾಸ ಕಲ್ಯಾಣೋತ್ಸವವು ವಿಜೃಂಭಣೆಯಿಂದ ಎ. 22ರಂದು ನಡೆಯಿತು.… ಮುಂದೆ ಓದಿ

ಧರ್ಮಸ್ಥಳದಲ್ಲಿ ಬ್ರಹ್ಮರಥೋತ್ಸವ

ಧರ್ಮಸ್ಥಳದಲ್ಲಿ ಬ್ರಹ್ಮರಥೋತ್ಸವ

Friday, April 21st, 2017 | Suddi Belthangady | no responses ಉಜಿರೆ: ವಿಷು ಜಾತ್ರೆ ಸಂದರ್ಭ ಧರ್ಮಸ್ಥಳದಲ್ಲಿ ಗುರುವಾರ ರಾತ್ರಿ ಬ್ರಹ್ಮರಥೋತ್ಸವ ನಡೆಯಿತು.
ರಾಜ್ಯ… ಮುಂದೆ ಓದಿ

ಇಂದು ಬೆಳಾಲು ಅನಂತ ಪದ್ಮನಾಭ ದೇವಸ್ಥಾನದಲ್ಲಿ ನಾಗಶಿಲಾ ಪ್ರತಿಷ್ಠೆ

Thursday, April 20th, 2017 | Suddi Belthangady | no responses ಬೆಳಾಲು : ಇಲ್ಲಿಯ ಅನಂತೋಡಿಯಲ್ಲಿ ಜೀರ್ಣೋದ್ಧಾರಗೊಳ್ಳುತ್ತಿರುವ ಶ್ರೀ ಅನಂತ ಪದ್ಮನಾಭ ದೇವಸ್ಥಾನದಲ್ಲಿ ಜೀರ್ಣೋದ್ಧಾರ… ಮುಂದೆ ಓದಿ

ಪೆರಣಮಂಜ ಶ್ರೀ ಮೂಜಿಲ್ನಾಯ ಬ್ರಹ್ಮ ದೈವಸ್ಥಾನ ಬ್ರಹ್ಮಕಲಶೋತ್ಸವ  ಶ್ರದ್ಧಾ ಕೇಂದ್ರಗಳಿಂದ ಆತ್ಮ ಶಕ್ತಿಯ ಜಾಗೃತಿ: ಪ್ರತಾಪಸಿಂಹ ನಾಯಕ್

Thursday, April 20th, 2017 | Suddi Belthangady | no responses ಪಡಂಗಡಿ : ಮನಸ್ಸು ಸ್ಥಿರವಾದಾಗ ಜಗತ್ತಿನ ಸತ್ಯ ಅರಿವಾಗುತ್ತದೆ. ಇದಕ್ಕಾಗಿ ನಮ್ಮ ಹಿರಿಯರು… ಮುಂದೆ ಓದಿ

ಪೂಂಜ ಶ್ರೀ ಪಂಚದುರ್ಗಾಪರಮೇಶ್ವರಿ ದೇವಳದ ಜಾತ್ರೋತ್ಸವ ನಂಬಿಕೆ ಧರ್ಮ ಮಾರ್ಗದಲ್ಲಿ ನಡೆಯಲು ಸಹಕಾರಿ: ಧರಣೇಂದ್ರ ಕುಮಾರ್

Thursday, April 20th, 2017 | Suddi Belthangady | no responses ಆರಂಬೋಡಿ: ಬದುಕು ನಂಬಿಕೆಯ ನೆಲೆಗಟ್ಟಿನಲ್ಲಿ ನಿಂತಿದೆ. ರೋಗಿಯ ರೋಗ ಶಮನವಾಗಲು ವೈದ್ಯರ ಔಷಧಕ್ಕಿಂತ… ಮುಂದೆ ಓದಿ

ಮಠ ಶ್ರೀ ಲಕ್ಷ್ಮೀ ವೆಂಕಟೇಶ್ವರ ದೇವಸ್ಥಾನ ಕಡಿರುದ್ಯಾವರ ಬ್ರಹ್ಮಕಲಶೋತ್ಸವ ಸಮಿತಿ   ಅಧ್ಯಕ್ಷರಾಗಿ ರಂಜನ್ ಜಿ. ಗೌಡ, ಕಾರ್ಯಾಧ್ಯಕ್ಷರಾಗಿ ಅಶೋಕ್ ಕುಮಾರ್ ಮಠ

Thursday, April 20th, 2017 | Suddi Belthangady | no responses ಕಡಿರುದ್ಯಾವರ: ಮಠ ಶ್ರೀ ಲಕ್ಷ್ಮೀ ವೆಂಕಟೇಶ್ವರ ದೇವಸ್ಥಾನ ಕಡಿರುದ್ಯಾವರ ಇದರ ಸುವರ್ಣ ಮಹೋತ್ಸವ… ಮುಂದೆ ಓದಿ

ವೀರಕೇಸರಿ: ಸಾರ್ವಜನಿಕ ಶ್ರೀ ಶನೈಶ್ಚರ ಪೂಜೋತ್ಸವ - ಸಾಧಕರಿಗೆ ಸನ್ಮಾನ

ವೀರಕೇಸರಿ: ಸಾರ್ವಜನಿಕ ಶ್ರೀ ಶನೈಶ್ಚರ ಪೂಜೋತ್ಸವ – ಸಾಧಕರಿಗೆ ಸನ್ಮಾನ

Thursday, April 20th, 2017 | Suddi Belthangady | no responses ಯುವ ಸಮುದಾಯದಿಂದ ಧರ್ಮ-ಸಂಸ್ಕೃತಿಯ ಸಂರಕ್ಷಣಾ ಕಾರ್ಯ ನಡೆಯಲಿ: ಸುಬ್ರಹ್ಮಣ್ಯ ಶ್ರೀ ವಿವಿಧ ಕ್ಷೇತ್ರಗಳ ಮುಂದೆ ಓದಿ

ಪೆರಣಮಂಜ ಶ್ರೀ ಮೂಜಿಲ್ನಾಯ ಬ್ರಹ್ಮ ದೈವಸ್ಥಾನದಲ್ಲಿ ಜಾತ್ರಾ ಮಹೋತ್ಸವ

Monday, April 17th, 2017 | Suddi Belthangady | no responses ವೇಣೂರು: ಪಡಂಗಡಿ ಗ್ರಾಮದ ಪೆರಣಮಂಜ ಶ್ರೀ ಮೂಜಿಲ್ನಾಯ ಬ್ರಹ್ಮ ದೈವಸ್ಥಾನದಲ್ಲಿ ಜಾತ್ರಾ ಮಹೋತ್ಸವವು… ಮುಂದೆ ಓದಿ

ವೇಣೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ವರ್ಷಾವಧಿ ಜಾತ್ರಾ ಮಹೋತ್ಸವ

Monday, April 17th, 2017 | Suddi Belthangady | no responses ವೇಣೂರು: ಇಲ್ಲಿಯ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ವರ್ಷಾವಧಿ ಜಾತ್ರಾ ಮಹೋತ್ಸವವು ಎ.13ರಂದು ಚಾಲನೆ… ಮುಂದೆ ಓದಿ

ಮಿಯಾರು ಶ್ರೀ ವನದುರ್ಗಾಪರಮೇಶ್ವರೀ ದೇವಸ್ಥಾನ ಬ್ರಹ್ಮಕಲಶೋತ್ಸವ ಆಮಂತ್ರಣ ಪತ್ರಿಕೆ ಬಿಡುಗಡೆ

Saturday, April 15th, 2017 | Suddi Belthangady | no responses ಧರ್ಮಸ್ಥಳ: ಮೇ 7ರಿಂದ 12ರ ವರೆಗೆ ಇತಿಹಾಸ ಪ್ರಸಿದ್ಧ ಮಿಯಾರು ಶ್ರೀ ವನದುರ್ಗಾಪರಮೇಶ್ವರೀ… ಮುಂದೆ ಓದಿ

ಶ್ರೀ ಲಕ್ಷ್ಮೀ ವೆಂಕಟೇಶ್ವರ ದೇವಸ್ಥಾನ ಮಠ ಕಡಿರುದ್ಯಾವರ ಇದರ ಬ್ರಹ್ಮಕಲಶೋತ್ಸವದ ಆಮಂತ್ರಣ ಪತ್ರಿಕೆ ಬಿಡುಗಡೆ

Saturday, April 15th, 2017 | Suddi Belthangady | no responses ಕಡಿರುದ್ಯಾವರ : ಶ್ರೀ ಲಕ್ಷ್ಮೀ ವೆಂಕಟೇಶ್ವರ ದೇವಸ್ಥಾನ ಮಠ ಕಡಿರುದ್ಯಾವರ ಇದರ ಬ್ರಹ್ಮಕಲಶೋತ್ಸವದ… ಮುಂದೆ ಓದಿ

ಪುದುವೆಟ್ಟು ಶ್ರೀ ವನದುರ್ಗಾ ಪರಮೇಶ್ವರೀ ಕ್ಷೇತ್ರದಲ್ಲಿ ಚಪ್ಪರ ಮೂಹೂರ್ತ

Thursday, April 13th, 2017 | Suddi Belthangady | no responses ಪುದುವೆಟ್ಟು : ಪುದುವೆಟ್ಟು ಗ್ರಾಮದ ಮಿಯಾರು ಶ್ರೀ ವನದುರ್ಗಾಪರಮೇಶ್ವರೀ ಕ್ಷೇತ್ರವು ನವೀಕರಣ ಪುನರ್‌ಪ್ರತಿಷ್ಠಾ,… ಮುಂದೆ ಓದಿ

5

ಬೆಳ್ತಂಗಡಿ : ಪ್ರತಿಷ್ಠಿತ ಜೆಸಿಐ ಬೆಳ್ತಂಗಡಿ ಮಂಜುಶ್ರೀ ಇದರ ವತಿಯಿಂದ ವಲಯದ ಪ್ರತಿಷ್ಠಿತ ಕಾರ್ಯಕ್ರಮಗಳೊಂದಾದ ಟೇಕ್ ಆಪ್-೨೦೧೭ ತರಬೇತಿ ಕಾರ್ಯಕ್ರಮದ ಉದ್ಘಾಟನೆಯು ಮೇ.೧೫ ರಂದು ಜೆಸಿಐ ಬೆಳ್ತಂಗಡಿ ಮಂಜುಶ್ರೀ ಭವನದಲ್ಲಿ ಜರುಗಿತು
ತರಬೇತಿ ಕಾರ್ಯಕ್ರಮದ ಉದ್ಘಾಟನೆಯನ್ನು ಬೆಳ್ತಂಗಡಿ ಸುದ್ದಿ ಬಿಡುಗಡೆ ಪತ್ರಿಕೆಯ ವ್ಯವಸ್ಥಾಪಕರಾದ ಮಂಜುನಾಥ ರೈಯವರು ದೀಪ ಬೆಳಗಿಸುವುದರ ಮೂಲಕ ನೆರವೇರಿಸಿ ಮಾತನಾಡಿ ಇಂದಿನ ಯುವ ಪೀಳಿಗೆಗೆ ಸೂಕ್ತವಾದ ತರಬೇತಿ, ಮಾರ್ಗದರ್ಶನ ಸಿಕ್ಕಾಗ ನಮ್ಮ ಸಮಾಜ ಬಲಿಷ್ಠವಾಗಲು ಸಾಧ್ಯವಾಗುತ್ತದೆ. ವ್ಯಕ್ತಿತ್ವ ವಿಕಸನದಂತಹ ಅನೇಕ ಸಮಾಜಮುಖಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುವುದರ ಜೊತೆಗೆ ಯುವಕರನ್ನು ಸಮಾಜದ ಮುಖ್ಯವಾಹಿನಿಗೆ ತರುವಲ್ಲಿ ಜೆಸಿ ಸಂಸ್ಥೆಯ ಕೊಡುಗೆ ಅನನ್ಯವಾದದ್ದು ಎಂದರು. ರಾಷ್ಟ್ರೀಯ ತರಬೇತುದಾರ ಸತೀಶ್ ಭಟ್ ಬಿಳಿನೆಲೆಯವರು ಮಾತನಾಡಿ ಜೆಸಿಯಂತಹ ಅಂತರಾಷ್ಟ್ರೀಯ ಸಂಸ್ಥೆ ಇಂದು ಉತ್ತಮವಾದ ಸಮಾಜ ಕಟ್ಟುವ ಕೆಲಸವನ್ನು ಮಾಡುತ್ತಿದ್ದು ಯುವಕರು ಹೆಚ್ಚು ಈ ಸಂಸ್ಥೆಗೆ ಸೇರಿ ತಮ್ಮ ವ್ಯಕ್ತಿತ್ವ ವಿಕಸನಗೊಳಿಸಿ ಸಮಾಜದಲ್ಲಿ ಉತ್ತಮ ನಾಗರಿಕರಾಗಿ ಬಾಳಲು ಸಾಧ್ಯವಾಗುತ್ತದೆ ಎಂದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಜೆಸಿಐ ಬೆಳ್ತಂಗಡಿ ಮಂಜುಶ್ರೀ ಅಧ್ಯಕ್ಷ ಸಂತೋಷ್ ಪಿ ಕೋಟ್ಯಾನ್ ವಹಿಸಿದ್ದರು. ನಿಕಟಪೂರ್ವಾಧ್ಯಕ್ಷ ವಲಯಾಧಿಕಾರಿ ವಸಂತ ಶೆಟ್ಟಿ ಶ್ರದ್ಧಾ, ವಲಯಾಧಿಕಾರಿ ಚಿದಾನಂದ ಇಡ್ಯಾ, ಕಾರ್ಯದರ್ಶಿ ರಂಜಿತ್ ಎಚ್.ಡಿ, ಕಾರ್ಯಕ್ರಮ ಸಂಯೋಜಕ ಪ್ರಸಾದ್ ಬಿ.ಎಸ್, ಜೂನಿಯರ್ ಜೆಸಿ ಅಧ್ಯಕ್ಷ ಮನೋಜ್ ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಘಟಕದ ಉಪಾಧ್ಯಕ್ಷ ಪ್ರಶಾಂತ್ ಲಾಲ ಅತಿಥಿಗಳನ್ನು ವೇದಿಕೆಗೆ ಆಹ್ವಾನಿಸಿದರು, ಸದಸ್ಯ ವಿಜಯ ನಿಡಿಗಲ್ ಜೇಸಿವಾಣಿ ಉದ್ಘೋಷಿಸಿದರು, ಸದಸ್ಯರಾದ ಗುರುರಾಜ್ ಹಾಗೂ ಸತೀಶ್ ಸುವರ್ಣ ರವರು ಅತಿಥಿಗಳ ಪರಿಚಯ ಪತ್ರ ಓದಿದರು, ಅಧ್ಯಕ್ಷ ಸಂತೋಷ್ ಪಿ ಕೋಟ್ಯಾನ್ ಸ್ವಾಗತಿಸಿ, ಕಾರ್ಯದರ್ಶಿ ರಂಜಿತ್ ಎಚ್.ಡಿ ಧನ್ಯವಾದವಿತ್ತರು. ನಂತರ ಜೆಸಿಐ ಬೆಳ್ತಂಗಡಿ ಮಂಜುಶ್ರೀ, ಜೆಸಿ ಮಡಂತ್ಯಾರು, ಜೆಸಿ ಉಜಿರೆ ಇದರ ವತಿಯಿಂದ ಟೇಕ್ ಆಫ್ ೨೦೧೭ ತರಬೇತಿಯನ್ನು ನಡೆಸಲಾಯಿತು.

4

ಲಾಲ : ಕುಟುಂಬ ರಾಜಕಾರಣದಿಂದ ದಾಸ್ಯತನಕ್ಕೆ ಒಳಗಾಗಿದ್ದ ಭಾರತ ಇಂದು ನರೇಂದ್ರ ಮೋದಿಯವರ ಸಂದೇಶವಾದ ಸಬ್‌ಕಾ ಸಾಥ್ ಸಬ್‌ಕಾ ವಿಕಾಸ್ ಮಂತ್ರದಡಿ ಮತ್ತೆ ಬದಲಾಗುತ್ತಿದೆ. ಯುವಜನತೆಯ ದೇಶ ಪ್ರೇಮವನ್ನು ಪ್ರಜ್ವಲಿಸುವಂತೆ ಮಾಡುವ ನಿಟ್ಟಿನಲ್ಲಿ ಯುವ ಮೋರ್ಚಾ ದೇಶಾಧ್ಯಂತ ಈ ವಿನೂತನ ಗ್ರಾಮೀಣ ಕ್ರೀಡೋತ್ಸವ ಹಮ್ಮಿಕೊಂಡಿದೆ ಎಂದು ವಿಧಾನ ಪರಿಷತ್ ಪ್ರತಿಪಕ್ಷದ ಮುಖ್ಯ ಸಚೇತಕ ಕ್ಯಾಪ್ಟನ್ ಗಣೇಶ್ ಕಾರ್ಣಿಕ್ ಹೇಳಿದರು. ಭಾರತೀಯ ಜನತಾ ಪಾರ್ಟಿ ಯುವ ಮೋರ್ಚಾ ಬೆಳ್ತಂಗಡಿ ಮಂಡಲ ಇದರ ವತಿಯಿಂದ ಪಂಡಿತ ದೀನ್‌ದಯಾಳ್ ಉಪಾಧ್ಯಾಯರ ಜನ್ಮಶತಾಬ್ಧಿ ವರ್ಷಾಚರಣೆ ಅಂಗವಾಗಿ
ಮೇ. ೧೩ ರಂದು
ಲಾಲ ಪ್ರಸನ್ನ ಶಿಕ್ಷಣ ಸಮುಚ್ಚಯದ ಮೈದಾನದಲ್ಲಿ ಹಮ್ಮಿಕೊಂಡಿದ್ದ ಹೊನಲು ಬೆಳಕಿನ ಆಹ್ವಾನಿತ ತಂಡಗಳ ಪ್ರೋ ಮಾದರಿ ಕಬಡ್ಡಿ ಮತ್ತು ಹಗ್ಗ ಜಗ್ಗಾಟ “ಪಂಡಿತ ದೀನ್‌ದಯಾಳ್ ಟ್ರೋಫಿ- ೨೦೧೭” ಇದರ ಉದ್ಘಾಟನಾ ಸಮಾರಂಭದಲ್ಲಿ ಸೈನಿಕರಿಗೆ ಗೌರವಾರ್ಪಣೆಗೈದು ಬಳಿಕ ಅವರು ಮಾತನಾಡುತ್ತಿದ್ದರು.
ಉದ್ಘಾಟನೆ ನೆರವೇರಿಸಿ ಮಾತನಾಡಿದ ಬಿಜೆಪಿ ಜಿಲ್ಲಾಧ್ಯಕ್ಷ ಸಂಜೀವ ಮಠಂದೂರು ಅವರು ಮಾತನಾಡಿ, ಕ್ರೀಡಾಕೂಟದ ಮೂಲಕ ತಾಲೂಕಿನ ೪೯ ಪಂಚಾಯತ್ ಸಮಿತಿಗಳನ್ನು ಒಂದುಗೂಡಿಸುವ ಕೆಲಸ ಆಗಿದೆ. ಗ್ರಾಮೀಣ ಕಬಡ್ಡಿ ಕ್ರೀಡೆಗೆ ಜಾಗತಿಕ ಮನ್ನಣೆ ಕೂಡುವ ಉದ್ದೇಶ ಕೂಡ ಈಡೇರಿದೆ.
ದೇಶದ ಪ್ರಧಾನಿ ನರೇಂದ್ರ ಮೋದೀಜಿ ಮತ್ತು ರಾಷ್ಟ್ರಾಧ್ಯಕ್ಷ ಅಮಿತ್‌ಶಾ ಅವರ ಕನಸಿನ ಯೋಜನೆಯಾದ ಈ ಕಾರ್ಯವನ್ನು ಬೆಳ್ತಂಗಡಿ ಮಂಡಲ ಮತ್ತು ಯುವ ಮೋರ್ಚಾ ಅಚ್ಚುಕಟ್ಟಾಗಿ ನಿರ್ವಹಿಸುವ ಮೂಲಕ ಮೆಚ್ಚುಗೆಗೆ ಪಾತ್ರವಾಗಿದೆ. ಪಂಚಾಯತ್‌ನಿಂದ ಪಾರ್ಲಿಮೆಂಟ್‌ವರೆಗೆ, ಹಳ್ಳಿಯಿಂದ ದಿಲ್ಲಿವರೆಗೆ ಯುವಕರು ಒಂದಾಗಬೇಕು, ದೈಹಿಕ ಬಲಾಢ್ಯರಾಗಬೇಕು ಎಂದರು. ಮುಖ್ಯ ಅತಿಥಿಯಾಗಿದ್ದ ರಾಜ್ಯ ಯುವ ಮೋರ್ಚಾದ ಮಹಾ ಪ್ರಧಾನ ಕಾರ್ಯದರ್ಶಿ ಬಸವರಾಜ್ ಅವರು ಮಾತನಾಡಿ, ಕ್ರಿಕೆಟ್ ಹಾವಳಿ ಮೂಲಕ ಕಬಡ್ಡಿ ಸೊರಗಿ ಹೋಗಿದ್ದ ಕಾಲದಲ್ಲಿ ಮತ್ತೆ ಅದರ ಸೊಬಗು ಉಳಿಯವಂತೆ ಯುವ ಮೋರ್ಚಾ ಮಾಡಿದೆ. ರಾಜ್ಯಾಧ್ಯಂತ ೨೫ ಸಾವಿರ ತಂಡಗಳು ಭಾಗಿಯಾಗಿ ಕ್ರೀಡಾಕೂಟ ನಡೆದು ಸದೃಢ ಭಾರತವಾಗಲಿದೆ ಎಂದರು. ಜಿಲ್ಲಾ ಯುವ ಮೋರ್ಚಾ ಅಧ್ಯಕ್ಷ ಹರೀಶ್ ಪೂಂಜ, ಮಾಜಿ ಶಾಸಕ ಪ್ರಭಾಕರ ಬಂಗೇರ, ಅಯ್ಯಪ್ಪ ದೇವಸ್ಥಾನ ಬಳಿಯಿಂದ ಮೆರವಣಿಗೆ ಉದ್ಘಾಟಿಸಿದ ಮಾಜಿ ಶಾಸಕ ರುಕ್ಮಯ್ಯ ಪೂಜಾರಿ, ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ಬಿಜೆಪಿ ಬೆಳ್ತಂಗಡಿ ಮಂಡಲದ ಅಧ್ಯಕ್ಷ ರಂಜನ್ ಜಿ ಗೌಡ ಇವರುಗಳು ಮಾತನಾಡಿದರು. ವೇದಿಕೆಯಲ್ಲಿ ಮಂಗಳೂರು ವಿಭಾಗ ಸಹಪ್ರಭಾರಿ ಪ್ರತಾಪಸಿಂಹ ನಾಯಕ್, ಜಿಲ್ಲಾ ಬಿಜೆಪಿ ಉಪಾಧ್ಯಕ್ಷೆ ಶಾರದಾ ಆರ್ ರೈ, ತಾ.ಪಂ ಉಪಾಧ್ಯಕ್ಷೆ ವೇದಾವತಿ, ಜಿಲ್ಲಾ ಪ್ರ. ಕಾರ್ಯದರ್ಶಿ ಕೆ ಕೊರಗಪ್ಪ ನಾಯ್ಕ, ಹಿಂದುಳಿದ ವರ್ಗಗಳ ಜಿಲ್ಲಾ ನಾಯಕ ಕೃಷ್ಣಪ್ಪ ಕಲ್ಲಡ್ಕ, ಜಿ.ಪಂ ಸದಸ್ಯೆ ಸೌಮ್ಯಲತಾ ಜಯಂತ ಗೌಡ, ತಾ.ಪಂ ಸದಸ್ಯರಾದ ಸುಧಾರಕ ಬಿ.ಎಲ್, ಕೊರಗಪ್ಪ ಗೌಡ ಅರಣಪಾದೆ, ಎಂ ಶಶಿಧರ ಕಲ್ಮಂಜ, ವಿಜಯ ಗೌಡ ವೇಣೂರು, ತಾ.ಪಂ ಸ್ಥಾಯಿ ಸಮಿತಿ ಅಧ್ಯಕ್ಷ ಸುಧೀರ್ ಆರ್ ಸುವರ್ಣ, ಪಕ್ಷದ ಕಾರ್ಯದರ್ಶಿಗಳಾದ ಪ್ರಭಾಕರ ಶೆಟ್ಟಿ ಉಪ್ಪಡ್ಕ ಮತ್ತು ಸೀತಾರಾಮ ಬಿ.ಎಸ್ ಇವರುಗಳು ಉಪಸ್ಥಿತರಿದ್ದರು. ಬಿಜೆಪಿ ಯುವ ಮೋರ್ಚಾ ತಾ| ಅಧ್ಯಕ್ಷ ಸಂಪತ್ ಬಿ ಸುವರ್ಣ ಪ್ರಾಸ್ತಾವಿಕವಾಗಿ ಮಾತನಾಡಿ, ಸ್ವಾಗತಿಸಿದರು. ತುಳಸಿದಾಸ್ ಪೈ ಮಡಂತ್ಯಾರು ಕಾರ್ಯಕ್ರಮ ನಿರೂಪಿಸಿದರು. ಯವ ಮೋರ್ಚಾ ಪ್ರ. ಕಾರ್ಯದರ್ಶಿ ರಕ್ಷಿತ್ ಶೆಟ್ಟಿ ವಂದಿಸಿದರು. ಕ್ರೀಡಾಕೂಟದ ಸಂಚಾಲಕರುಗಳಾಗಿದ್ದ ಮಿಥುನ್ ಕುಲಾಲ್, ಚಂದ್ರಕಾಂತ ಗೌಡ ಮಚ್ಚಿನ, ದೀಕ್ಷಿತ್ ಶೆಟ್ಟಿ ಮುದ್ದಿಗೆ, ರಾಜೇಶ್ ಮಿತ್ತಬಾಗಿಲು, ಹಾಗೂ ಯುವ ಮೋರ್ಚಾದ ಪದಾಧಿಕಾರಿಗಳು ಹಾಗೂ ಸದಸ್ಯರುಗಳು ಉಪಸ್ಥಿತರಿದ್ದು ಸಹಕಾರ ನೀಡಿದರು.

3

ಉಜಿರೆ : ಸಂತ ಅಂತೋನಿ ಚರ್ಚ್‌ನ ಬಹುದಿನಗಳ ಬೇಡಿಕೆಯಾಗಿರುವ ಚರ್ಚ್ ಸಭಾಭವನ ನಿರ್ಮಾಣಕ್ಕೆ ಕ್ಷಣಗಣನೆ ಪ್ರಾರಂಭಗೊಂಡಿದೆ. ಸುಮಾರು ರೂ. ೨.೫೦ ಕೋಟಿ ವೆಚ್ಚದಲ್ಲಿ ಅತ್ಯಾಧುನಿಕ ಸೌಲಭ್ಯದೊಂದಿಗೆ ಸಮುದಾಯ ಭವನ ನಿರ್ಮಾಣಗೊಳ್ಳಲಿದೆ. ಇದರ ಶಿಲಾನ್ಯಾಸ ಕಾರ್ಯಕ್ರಮವು ಮೇ.೧೪ ರಂದು ಶಾಸಕ ಕೆ. ವಸಂತ ಬಂಗೇರ ನೆರವೇರಿಸಿ ಶುಭ ಹಾರೈಸಿದರು.

ಮಂಗಳೂರಿನ ಧರ್ಮಪ್ರಾಂತ್ಯದ ಮೊನ್ಸಿಂಜೋರ್ ವಂ.ಫಾ| ಡೇನಿಸ್ ಮೋರಾಸ್ ಪ್ರಭು ದಿವ್ಯ ಬಲಿ ಪೂಜೆ ಅರ್ಪಿಸಿ ಆಶೀರ್ವಚನ ನೆರವೇರಿಸಿ ಶುಭ ಹಾರೈಸಿದರು. ಈ ಸಂದರ್ಭದಲ್ಲಿ ಉಜಿರೆ ಗ್ರಾ.ಪಂ ಅಧ್ಯಕ್ಷ ಶ್ರೀಧರ ಪೂಜಾರಿ, ಅಹಮದಾಬಾದ್‌ನ ಧರ್ಮಗುರು ಮೊನ್ಸಿಂಜೋರ್, ವಂ.ಫಾ| ರೋಕಿ ಪಿಂಟೊ, ಅನುಗ್ರಹ ಶಿಕ್ಷಣ ಸಂಸ್ಥೆಗಳ ಪ್ರಾಂಶುಪಾಲರಾದ ವಂ.ಫಾ| ಉದಯ್ ಜೋಸೆಫ್ ಫೆರ್ನಾಂಡೀಸ್, ಚರ್ಚ್ ಪಾಲನಾ ಮಂಡಳಿಯ ಉಪಾಧ್ಯಕ್ಷ ಅರುಣ್ ರೆಬೆಲ್ಲೊ ಉಪಸ್ಥಿತರಿದ್ದರು. ಚರ್ಚ್‌ನ ಪ್ರಧಾನ ಧರ್ಮಗುರು ವಂ.ಫಾ| ಜೊಸೆಫ್ ಮಸ್ಕರೇನಸ್ ಸರ್ವರನ್ನು ಸ್ವಾಗತಿಸಿದರು. ಪಾಲನಾ ಮಂಡಳಿಯ ಕಾರ್ಯದರ್ಶಿ ವಲೇರಿಯನ್ ರೊಡ್ರಿಗಸ್ ವಂದಿಸಿದರು.
ಶ್ರೀಮತಿ ಲವಿನಾ ಫೆರ್ನಾಂಡಿಸ್ ಕಾರ್ಯಕ್ರಮ ನಿರೂಪಿಸಿದರು. ಬೆಳ್ತಂಗಡಿ ತಾಲೂಕು ಕಾಂಗ್ರೆಸ್ ಸಮಿತಿಯ ಪ್ರಧಾನ ಕಾರ್ಯದರ್ಶಿ ಗ್ರೇಶಿಯಾಸ್ ವೇಗಸ್, ಗುತ್ತಿಗೆದಾರ ಅನಿಲ್ ಡಿಸೋಜ, ಗುತ್ತಿಗೆದಾರ ಹಾಗೂ ಮಾಜಿ ಪಾಲನಾ ಮಂಡಳಿ ಉಪಾಧ್ಯಕ್ಷ ಸಿಲ್ವೆಸ್ಟರ್ ಮೊನೀಸ್ ಸ್ಟ್ಯಾನಿ ಪಿಂಟೊ, ಧರ್ಮ ಭಗಿನಿಯರು, ಪಾಲನಾ ಮಂಡಳಿಯ ಸರ್ವಸದಸ್ಯರು, ಗುರಿಕಾರರು ಸಮಸ್ತ ಕ್ರೈಸ್ತ ಭಾಂಧವರು ಉಪಸ್ಥಿತರಿದ್ದರು.

2

ಬೆಳ್ತಂಗಡಿ : ಕಳೆದ ಎಪ್ರಿಲ್ ತಿಂಗಳಲ್ಲಿ ನಡೆದ ಎಸ್.ಎಸ್.ಎಲ್.ಸಿ. ಪಬ್ಲಿಕ್ ಪರೀಕ್ಷೆಯ ಫಲಿತಾಂಶ ಮೇ ೧೨ ರಂದು ಪ್ರಕಟಗೊಂಡಿದ್ದು, ಬೆಳ್ತಂಗಡಿ ತಾಲೂಕಿನ ಸರಕಾರಿ, ಅನುದಾನಿತ ಹಾಗೂ ಅನುದಾನ ರಹಿತ ಸೇರಿದಂತೆ ಒಟ್ಟು ೬೫ ಪ್ರೌಢ ಶಾಲೆಗಳಿಂದ ಪರೀಕ್ಷೆಗೆ ಕುಳಿತ ೩,೮೫೫ ವಿದ್ಯಾರ್ಥಿ-ವಿದ್ಯಾರ್ಥಿನಿಯರಲ್ಲಿ ೩,೨೫೯ ಮಂದಿ ಉತ್ತೀರ್ಣರಾಗಿ ತಾಲೂಕಿಗೆ ಶೇ ೮೪.೫೪ ಫಲಿತಾಂಶ ಲಭಿಸಿದೆ. ಕಳೆದ ವರ್ಷ ತಾಲೂಕಿಗೆ ಶೇ ೮೭.೯೮ ಫಲಿತಾಂಶ ಬಂದಿದ್ದು, ಕಳೆದ ವರ್ಷಕ್ಕೆ ಹೋಲಿಸಿದಲ್ಲಿ ಈ ವರ್ಷ ಫಲಿತಾಂಶದಲ್ಲಿ ಶೇ ೩.೪೪ರಷ್ಟು ಇಳಿಕೆಯಾಗಿದೆ.
ಬೆಳ್ತಂಗಡಿ ತಾಲೂಕಿನ ೩೬ ಸರಕಾರಿ ಪ್ರೌಢ ಶಾಲೆ, ೯ ಅನುದಾನಿತ ಪ್ರೌಢ ಶಾಲೆ, ಹಾಗೂ ೨೦ ಅನುದಾನಿತ ರಹಿತ ಪ್ರೌಢ ಶಾಲೆ ಸೇರಿದಂತೆ ಒಟ್ಟು ೬೫ ಪ್ರೌಢ ಶಾಲೆಗಳಿಂದ ೧,೯೦೬ ವಿದ್ಯಾರ್ಥಿಗಳು ಮತ್ತು ೧,೯೪೯ ವಿದ್ಯಾರ್ಥಿನಿಯರು ಸೇರಿದಂತೆ ಒಟ್ಟು ೩,೮೫೫ ಮಂದಿ ಪರೀಕ್ಷೆಗೆ ಹಾಜರಾಗಿದ್ದರು. ಇವರಲ್ಲಿ ೧,೫೫೩ ವಿದ್ಯಾರ್ಥಿಗಳು ಮತ್ತು ೧,೭೦೬ ವಿದ್ಯಾರ್ಥಿನಿಯರು
ಸೇರಿದಂತೆ ಒಟ್ಟು ೩,೨೫೯ ಮಂದಿ ಉತ್ತೀರ್ಣರಾಗಿ ಶೇ ೮೪.೫೪ ಫಲಿತಾಂಶ ದಾಖಲಾಗಿದೆ. ವಿದ್ಯಾರ್ಥಿಗಳು ಶೇ ೮೧.೪೮ ಹಾಗೂ ವಿದ್ಯಾರ್ಥಿನಿಯರು ಶೇ ೮೭.೫೩ ಉತ್ತೀರ್ಣರಾಗಿದ್ದು, ಫಲಿತಾಂಶದಲ್ಲಿ ವಿದ್ಯಾರ್ಥಿನಿಯರು ಮೇಲುಗೈ ಸಾಧಿಸಿದ್ದಾರೆ. ಪರೀಕ್ಷೆಗೆ ಹಾಜರಾದ ೩,೮೫೫ ವಿದ್ಯಾರ್ಥಿಗಳಲ್ಲಿ ೫೯೬ ಮಂದಿ ಅನುತ್ತೀರ್ಣಗೊಂಡಿದ್ದಾರೆ.
೨೨೩ ವಿದ್ಯಾರ್ಥಿಗಳಿಗೆ ಎ+ ಶ್ರೇಣಿ:
ತಾಲೂಕಿನ ೬೫ ಪ್ರೌಢ ಶಾಲೆಗಳಿಂದ ಉತ್ತೀರ್ಣರಾದ ೩,೨೫೯ ವಿದ್ಯಾರ್ಥಿ-ವಿದ್ಯಾರ್ಥಿನಿಯರಲ್ಲಿ ೨೨೩ ಮಂದಿ ವಿದ್ಯಾರ್ಥಿಗಳು ಎ+ ಶ್ರೇಣಿಯನ್ನು ಪಡೆದುಕೊಂಡಿದ್ದಾರೆ. ೬೧೮ ಮಂದಿ ಎ ಶ್ರೇಣಿ, ೮೨೬ ಮಂದಿ ಬಿ+ ಶ್ರೇಣಿ, ೮೮೫ ಮಂದಿ ಬಿ ಶ್ರೇಣಿ, ೬೦೯ ಮಂದಿ ಸಿ+ ಶ್ರೇಣಿ, ೯೮ ಮಂದಿ ವಿದ್ಯಾರ್ಥಿಗಳು ಸಿ ಶ್ರೇಣಿಯನ್ನು ಪಡೆದುಕೊಂಡಿದ್ದಾರೆ.
ಅತೀ ಹೆಚ್ಚು ಎ+ ಶ್ರೇಣಿ ಪಡೆದ ಶಾಲೆಗಳು:
ಸರಕಾರಿ ಶಾಲೆಗಳಲ್ಲಿ ಮೊರಾರ್ಜಿ ದೇಸಾಯಿ ಮಚ್ಚಿನ ೧೯, ಸರಕಾರಿ ಪ್ರೌಢ ಶಾಲೆ ಮಚ್ಚಿನ ೫, ಸರಕಾರಿ ಪ್ರೌಢ ಶಾಲೆ ಗೇರುಕಟ್ಟೆ ೫, ಹಾಗೂ ಖಾಸಗಿ ಶಾಲೆಗಳಲ್ಲಿ ನಾರಾವಿ ಪ್ರೌಢ ಶಾಲೆ ೧೦, ಎಸ್.ಡಿ.ಎಂ ಸೆಕೆಂಡರಿ ಶಾಲೆ ಉಜಿರೆ ೧೨, ಸೈಂಟ್‌ಮೇರಿಸ್ ಲಾಲ ೧೮, ಸೈಂಟ್ ಪೀಟರ್ ಅಳದಂಗಡಿ ೫, ಸೈಂಟ್ ಸಾವಿಯೋ ಬೆಂದ್ರಾಳ ೯, ಎಸ್.ಡಿ.ಎಂ ಆಂಗ್ಲ ಮಾಧ್ಯಮ ಉಜಿರೆ ೧೩, ಎಸ್.ಡಿ.ಎಂ ಆಂಗ್ಲ ಮಾಧ್ಯಮ ಧರ್ಮಸ್ಥಳ ೭, ಹೋಲಿ ರೆಡಿಮರ್ ಆಂ.ಮಾ.ಪ್ರೌಢ ಶಾಲೆ ಬೆಳ್ತಂಗಡಿ ೬, ಅನುಗ್ರಹ ಆಂಗ್ಲ ಮಾಧ್ಯಮ ಉಜಿರೆ ೨೫, ವಾಣಿ ಆಂ.ಮಾ. ಹಳೆಕೋಟೆ ೭, ಸೇ.ಹಾ. ಮಡಂತ್ಯಾರು ೧೭ ಅತಿ ಹೆಚ್ಚು ಎ+ ಶ್ರೇಣಿ ಪಡೆದ ಶಾಲೆಗಳಾಗಿವೆ.
೧೦ ಪ್ರೌಢ ಶಾಲೆಗಳಿಗೆ ಶೇ ೧೦೦ ಫಲಿತಾಂಶ:
ತಾಲೂಕಿನ ೨ ಸರಕಾರಿ ಮತ್ತು ೮ ಖಾಸಗಿ ಸೇರಿದಂತೆ ಒಟ್ಟು ೧೦ ಪ್ರೌಢ ಶಾಲೆಗಳು ಶೇ ೧೦೦ ಫಲಿತಾಂಶವನ್ನು ಪಡೆದುಕೊಂಡ ದಾಖಲೆಯನ್ನು ನಿರ್ಮಿಸಿದೆ. ಸರಕಾರಿ ಶಾಲೆಗಳಲ್ಲಿ ಸ.ಪ್ರೌ. ಶಾಲೆ ಗುರುವಾಯನಕೆರೆ ಮತ್ತು ಮೊರಾರ್ಜಿ ದೇಸಾಯಿ ವಸತಿ ಶಾಲೆ ಮಚ್ಚಿನ ಶೇ ೧೦೦ ಫಲಿತಾಂಶ ಪಡೆದ ಕೀರ್ತಿಗೆ ಈ ವರ್ಷ ಪಾತ್ರವಾಗಿದೆ. ಖಾಸಗಿ ಶಾಲೆಗಳಲ್ಲಿ ಸೈಂಟ್ ಮೇರಿಸ್ ಪ್ರೌ.ಶಾಲೆ ಲಾಯಿಲ, ಕುಂಭಶ್ರೀ ಆಂಗ್ಲ ಮಾಧ್ಯಮ ಶಾಲೆ ನಿಟ್ಟಡೆ, ದಿವ್ಯಜ್ಯೋತಿ ಆಂಗ್ಲ ಮಾಧ್ಯಮ ಕಾಯರ್ತಡ್ಕ, ಸೈಂಟ್ ಸಾವಿಯೋ ಬೆಂದ್ರಾಳ, ಹೋಲಿ ರೆಡೀಮರ್ ಆಂ.ಮಾ. ಪ್ರೌ.ಶಾಲೆ ಬೆಳ್ತಂಗಡಿ, ಸೈಂಟ್ ಪೀಟರ್ ಅಳದಂಗಡಿ, ಎಸ್.ಡಿ.ಎಂ ಧರ್ಮಸ್ಥಳ, ಎಸ್.ಡಿ.ಎಂ ಆಂ.ಮಾ ಉಜಿರೆ ಶಾಲೆಗಳು ಶೇ ೧೦೦ ಫಲಿತಾಂಶ ಪಡೆದುಕೊಂಡ ಹಿರಿಮೆಗೆ ಪಾತ್ರವಾಗಿದೆ.
ಶೇ ೯೦ಕ್ಕಿಂತ ಹೆಚ್ಚು ಫಲಿತಾಂಶ ದಾಖಲು:
ಸರಕಾರಿ ಶಾಲೆಗಳಲ್ಲಿ ಮೊರಾರ್ಜಿ ದೇಸಾಯಿ ಮುಂಡಾಜೆ, ಸ.ಪ್ರೌ. ಶಾಲೆ ಪೆರ್ಲಬೈಪಾಡಿ, ಸ.ಪ.ಪೂ. ಕಾಲೇಜು ಕೊಕ್ರಾಡಿ, ಸ.ಪ್ರೌ.ಶಾಲೆ ಸವಣಾಲು,ಸ.ಪ.ಪೂ.ಕಾಲೇಜು ಕೊಯ್ಯೂರು, ಸ.ಪ್ರೌ.ಶಾಲೆ ನೇಲ್ಯಡ್ಕ, ಸ.ಪ.ಪೂ.ಕಾ. ಕೊಕ್ಕಡ, ಸ.ಪ್ರೌ.ಶಾ. ಹಳೆಪೇಟೆ ಉಜಿರೆ ಹಾಗೂ ಅನುದಾನಿತ ಶಾಲೆಗಳಲ್ಲಿ ನಾರಾವಿ ಪ್ರೌಢ ಶಾಲೆ, ಸಂತ ತೆರೆಸಾ ಬೆಳ್ತಂಗಡಿ, ಎಸ್.ಡಿ.ಎಂ ಸೆಕೆಂಡರಿ ಉಜಿರೆ, ಎಸ್.ಡಿ.ಎಂ ಧರ್ಮಸ್ಥಳ, ಅನುದಾನ ರಹಿತ ಶಾಲೆಗಳಲ್ಲಿ ಅನುಗ್ರಹ ಆಂಗ್ಲ ಮಾಧ್ಯಮ ಉಜಿರೆ, ಸಂತ ತೆರೆಸಾ ಆಂ.ಮಾ.ಬೆಳ್ತಂಗಡಿ, ವಾಣಿ ಆಂ.ಮಾ. ಹಳೆಕೋಟೆ, ಸೈಂಟ್ ಪಾವಲ್ಸ್ ನಾರಾವಿ, ಗುಡ್‌ಫ್ಯೂಚರ್ ಆಂ.ಮಾ. ಪಿಲ್ಯ, ಆತ್ಮಾನಂದ ಸರಸ್ವತಿ ಶಾಲೆ ದೇವರಗುಡ್ಡೆ, ಸೇ.ಹಾ.ಆಂ.ಮಾ.ಶಾಲೆ ಮಡಂತ್ಯಾರು, ರೆಹಮಾನಿಯಾ ಪ್ರೌ. ಶಾಲೆ ಕಾಜೂರು ಶೇ ೯೦ಕ್ಕಿಂತ ಹೆಚ್ಚು ಫಲಿತಾಂಶ ಪಡೆದುಕೊಂಡಿದೆ.
ಸರಕಾರಿ ಶಾಲೆಗಳಲ್ಲಿ ಗುರುವಾಯನಕೆರೆ ಸರಕಾರಿ ಪ್ರೌಢ ಶಾಲೆ ಸತತ ೬ನೇ ಬಾರಿಗೆ ಶೇ ೧೦೦ ಫಲಿತಾಂಶ ಪಡೆದ ರಾಜ್ಯದ ಏಕೈಕ ಸರಕಾರಿ ಪ್ರೌಢ ಶಾಲೆ ಎಂಬ ದಾಖಲೆಯನ್ನು ಪಡೆದುಕೊಂಡಿದೆ. ಮುಖ್ಯೋಪಾಧ್ಯಾಯರು, ಶಿಕ್ಷಕರು ಸೇರಿದಂತೆ ವಿವಿಧ ಸಮಸ್ಯೆಗಳನ್ನು ಎದುರಿಸುತ್ತಿರುವ ತಾಲೂಕಿನ ೩೬ ಸರಕಾರಿ ಶಾಲೆಗಳು ಶೇ ೫೭ಕ್ಕಿಂತ ಹೆಚ್ಚು ಫಲಿತಾಂಶ ಪಡೆದುಕೊಳ್ಳುವಲ್ಲಿ ಯಶಸ್ವಿಯಾಗಿದೆ. ಕಳೆದ ಬಾರಿ ಶೇ ೧೦೦ ಫಲಿತಾಂಶ ಪಡೆದ ಪೆರ್ಲಬೈಪಾಡಿ ಪ್ರೌಢ ಶಾಲೆಯ ಓರ್ವ ವಿದ್ಯಾರ್ಥಿಗೆ ಇಂಗ್ಲೀಷ್‌ನಲ್ಲಿ ಕಡಿಮೆ ಅಂಕ ಬಂದಿದ್ದು, ಮರು ಮೌಲ್ಯಮಾನಕ್ಕೆ ಹಾಕಲಾಗಿದ್ದು, ಆತ ಉತ್ತೀರ್ಣಗೊಂಡರೆ ಶೇ ೧೦೦ ಫಲಿತಾಂಶ ದಾಖಲಾಗಲಿದೆ. ಖಾಸಗಿ ಶಾಲೆಗಳಲ್ಲಿ ಕುಂಭಶ್ರೀ ಆಂಗ್ಲ ಮಾಧ್ಯಮ ವಸತಿ ಶಾಲೆ ನಿಟ್ಟಡೆ ಸತತ ೭ನೇ ಬಾರಿಗೆ ಶೇ ೧೦೦ ಫಲಿತಾಂಶ ಪಡೆದ ಕೀರ್ತಿಗೆ ಪಾತ್ರವಾಗಿದೆ.
ಈ ಬಾರಿಯ ಎಸ್.ಎಸ್.ಎಲ್.ಸಿ ಪಬ್ಲಿಕ್ ಪರೀಕ್ಷೆಯಲ್ಲಿ ಅಂಕಗಳಿಸುವಿಕೆಯಲ್ಲಿ ಉಜಿರೆ ಅನುಗ್ರಹ ಆಂಗ್ಲ ಮಾಧ್ಯಮ ಪ್ರೌಢ ಶಾಲೆಯ ವಿದ್ಯಾರ್ಥಿಗಳು ಪ್ರಥಮ, ದ್ವಿತೀಯ ಹಾಗೂ ತೃತೀಯ ಸ್ಥಾನವನ್ನು ಪಡೆದುಕೊಂಡ ಹಿರಿಮೆಗೆ ಪಾತ್ರರಾಗಿದ್ದಾರೆ.
ಜೋಯಲ್ ಆಂಟನಿ ೬೨೦ ಅಂಕಗಳಿಸಿ ತಾಲೂಕಿನಲ್ಲಿ ಪ್ರಥಮ, ಇದೇ ಶಾಲೆಯ ಅಧಿತಿ ಪ್ರಭು ೬೧೯ ಅಂಕಗಳಿಸಿ ದ್ವಿತೀಯ ಹಾಗೂ ಇದೇ ಶಾಲೆಯ ನಿಯೋಗ್ ಮೋಹನ್ ೬೧೭ ಅಂಕಗಳಿಸಿ ತೃತೀಯ ಸ್ಥಾನ ಪಡೆದುಕೊಂಡಿದ್ದಾರೆ.
ಸರಕಾರಿ ಪ್ರೌಢ ಶಾಲೆಗಳಲ್ಲಿ ಮೊರಾರ್ಜಿ ದೇಸಾಯಿ ಮಚ್ಚಿನದ ನವೀನ ೬೧೧ ಅಂಕಗಳಿಸಿ ಪ್ರಥಮ ಹಾಗೂ ಇದೇ ಶಾಲೆಯ ಜಿನ್ಸಿ ಕೆ., ಸ.ಪ್ರೌ.ಶಾಲೆ ಮಚ್ಚಿನದ ಸಪ್ರೀನಾ ಬಾನು, ಸ.ಪ್ರೌ.ಶಾಲೆ ಕಾಶಿಪಟ್ನದ ಪ್ರಜೇಶ್, ಸ.ಪ.ಪೂ.ಕಾ. ಗೇರುಕಟ್ಟೆಯ ಮೋಹಿನಿ ಹೆಚ್. ತಲಾ ೬೦೨ ಅಂಕ ಗಳಿಸಿ ದ್ವಿತೀಯ ಮತ್ತು ಸ.ಪ್ರೌ. ಶಾಲೆ ಮಚ್ಚಿನದ ಜಯಶ್ರೀ ೬೦೦ ಅಂಕಗಳಿಸಿ ತೃತೀಯ ಸ್ಥಾನ, ಸ.ಪ.ಪೂ.ಕಾಲೇಜು ಪುಂಜಾಲಕಟ್ಟೆಯ ಎಸ್. ಪೂರ್ಣೇಶ್ ಶೆಟ್ಟಿ ೫೯೮ ಅಂಕಗಳಿಸಿ ನಾಲ್ಕನೇ ಸ್ಥಾನ, ಸ.ಪ್ರೌ.ಶಾಲೆ ನಾರಾವಿಯ ಮೇಘ ೫೯೭ ಅಂಕ ಗಳಿಸಿ ಐದನೇಯ ಸ್ಥಾನ, ಗುರುವಾಯನಕೆರೆ ಪ್ರೌಢ ಶಾಲೆಯ ಪವಿತ್ರ ಮತ್ತು ಸ.ಪ್ರೌ.ಶಾಲೆ ನಾವೂರಿನ ಯಶ್ಮಿತಾ ತಲಾ ೫೯೪ ಅಂಕಗಳಿಸಿ ಆರನೇ ಸ್ಥಾನ, ಗುರುವಾಯನಕೆರೆ ಸ. ಪ್ರೌ.ಶಾಲೆಯ ಶ್ರಾವ್ಯ ೫೯೩ ಅಂಕಗಳಿಸಿ ಏಳನೇ ಸ್ಥಾನ ಪಡೆದುಕೊಂಡಿದ್ದಾರೆ.
ಅನುದಾನಿತ ಪ್ರೌಢ ಶಾಲೆಗಳಲ್ಲಿ ನಾರಾವಿ ಪ್ರೌ. ಶಾಲೆಯ ಚೈತ್ರಾ ೬೧೧ ಅಂಕಗಳಿಸಿ ಪ್ರಥಮ, ಇದೇ ಶಾಲೆಯ ಸ್ವಾತಿ ಪಿ.ಹೆಗಡೆ ೬೦೩ ಅಂಕಗಳಿಸಿ ದ್ವಿತೀಯ, ಎಸ್.ಡಿ.ಎಂ ಸೆಕೆಂಡರಿ ಉಜಿರೆಯ ನಂದಿನಿ ೫೯೫ ಅಂಕಗಳಿಸಿ ತೃತೀಯ ಸ್ಥಾನ, ಸೇ.ಹಾ. ಮಡಂತ್ಯಾರಿನ ಅಪೇಕ್ಷಾ ಕೆ. ೫೯೪ ಅಂಕ ಗಳಿಸಿ ನಾಲ್ಕನೇ ಸ್ಥಾನ ಪಡೆದುಕೊಂಡಿದ್ದಾರೆ.
ಅನುದಾನ ರಹಿತ ಪ್ರೌಢ ಶಾಲೆಗಳಲ್ಲಿ ಸೇ.ಹಾ.ಮಡಂತ್ಯಾರಿನ ಶ್ರೇಯಾ ೬೧೬ ಅಂಕಗಳಿಸಿ ನಾಲ್ಕನೇ ಸ್ಥಾನ, ಸೈಂಟ್ ಸಾವಿಯೋ ಬೆಂದ್ರಾಳದ ಡಯಾನ ಮತ್ತು ವಾಣಿ ಆಂ. ಮಾ. ಶಾ.ಹಳೆಕೋಟೆಯ ವಿಮರ್ಶ ತಲಾ ೬೧೫ ಅಂಕಗಳಿಸಿ ಐದನೇ ಸ್ಥಾನ, ಸೇ.ಹಾ. ಆಂ.ಮಾ.ಶಾ. ಮಡಂತ್ಯಾರಿನ ಸಾತ್ವಿಕ್ ಜಿ. ಶೆಟ್ಟಿ ೬೧೪ ಅಂಕಗಳಿಸಿ ಆರನೇ ಸ್ಥಾನ, ಎಸ್.ಡಿ.ಎಂ ಆಂ.ಮಾ. ಉಜಿರೆಯ ಶಿವಪ್ರಸಾದ್ ೬೧೩ ಅಂಕಗಳಿಸಿ ಏಳನೇ ಸ್ಥಾನ, ವಾಣಿ ಆಂ.ಮಾ.ಶಾ.ಹಳೆಕೋಟೆಯ ಪ್ರಿಯ ೬೧೨ ಅಂಕಗಳಿಸಿ ಎಂಟನೇ ಸ್ಥಾನ, ಅನುಗ್ರಹ ಆಂ.ಮಾ. ಉಜಿರೆಯ ವಿನಿತ್ ಸಿಕ್ವೇರಾ ೬೧೦ ಅಂಕಗಳಿಸಿ ಒಂಭತ್ತನೇಯ ಸ್ಥಾನ ಪಡೆದುಕೊಂಡಿದ್ದಾರೆ.

1

ಬೆಳ್ತಂಗಡಿ ಕರ್ನಾಟಕ ರಾಜ್ಯ ಪದವಿ ಪೂರ್ವ ಶಿಕ್ಷಣ ಮಂಡಳಿ ಎಪ್ರಿಲ್ ತಿಂಗಳಲ್ಲಿ ನಡೆಸಿದ ದ್ವಿತೀಯ ಪಿ.ಯು.ಸಿ. ಪಬ್ಲಿಕ್ ಪರೀಕ್ಷೆಯ ಫಲಿತಾಂಶವು ಮೇ 12 ರಂದು ಎಲ್ಲಾ ಕಾಲೇಜುಗಳಲ್ಲಿ ಪ್ರಕಟಗೊಂಡಿದ್ದು, ತಾಲೂಕಿನ ಖಾಸಗಿ ಮತ್ತು ಸರಕಾರಿ ಪ. ಪೂ ಕಾಲೇಜುಗಳು ಸೇರಿ ಒಟ್ಟು 20 ಕಾಲೇಜು ಮೂಲಕ ಪರೀಕ್ಷೆ ಬರೆದಿದ್ದ 3512 ಮಂದಿಯ ಪೈಕಿ 3328 ಮಂದಿ ಉತ್ತೀರ್ಣರಾಗಿದ್ದು ತಾಲೂಕಿಗೆ ಶೇ. 94.76 ಫಲಿತಾಂಶ ಬಂದಿದೆ. ಕಾಲೇಜುವಾರು ಸಂಪೂರ್ಣ ವಿವರಗಳನ್ನು ಒಳ ಪುಟ ೧೬ರಲ್ಲಿ ಪ್ರಕಟಿಸಲಾಗಿದೆ. ಬೆಳ್ತಂಗಡಿ ತಾಲೂಕಿ ನಲ್ಲಿ ಸರಕಾರಿ ಕಾಲೇಜುಗಳಲ್ಲಿ ಅರಸಿನಮಕ್ಕಿ ಪ.ಪೂ. ಕಾಲೇಜು ಶೇ. 100 ಫಲಿತಾಂಶ ಪಡೆದು ಸರಕಾರಿ ಕಾಲೇಜುಗಳಲ್ಲಿ ಅತೀ ಹೆಚ್ಚು ಫಲಿತಾಂಶ ಪಡೆದ ಕೀರ್ತಿಗೆ ಪಾತ್ರವಾಗಿದೆ. ಪುಂಜಾಲಕಟ್ಟೆ ಸರಕಾರಿ ಪ.ಪೂ. ಕಾಲೇಜು ಶೇ ೯೬.೫೩ ಫಲಿತಾಂಶ ಪಡೆದು ದ್ವಿತೀಯ ಸ್ಥಾನದಲ್ಲಿದೆ. ಅಂತೆಯೇ ಖಾಸಗಿ ಕಾಲೇಜುಗಳಲ್ಲಿ ಪ್ರಥಮ ಸ್ಥಾನವನ್ನು ಉಜಿರೆ ಎಸ್.ಡಿ.ಎಂ. ಸನಿವಾಸ ಕಾಲೇಜು (ರೆಸಿಡೆನ್ಶಿಯಲ್) ಶೇ.೯೯.೩೪ ಫಲಿತಾಂಶ ಪಡೆದರೆ ಅನುಗ್ರಹ ಪ.ಪೂ ಕಾಲೇಜು ಶೇ. ೯೮.೩೩ ಫಲಿತಾಂಶ ಪಡೆದು ದ್ವಿತೀಯ ಸ್ಥಾನದಲ್ಲಿದೆ.
ತಾಲೂಕಿನಲ್ಲಿ ಕಲಾ ವಿಭಾಗದಲ್ಲಿ ಎಸ್.ಡಿ.ಎಂ. ಉಜಿರೆ ಪದವಿ ಪೂರ್ವ ಕಾಲೇಜಿನ ಭಾರ್ಗವಿ ಆರ್ ಶೇಠ್ ೫೫೮ ಅಂಕ ಪಡೆದು ಪ್ರಥಮ, ವಾಣಿಜ್ಯ ವಿಭಾಗದಲ್ಲಿ ಅರ್ಜುನ್ ಶೆಣೈ ೫೮೬ ಅಂಕಗಳಿಸಿ ಪ್ರಥಮ, ವಿಜ್ಞಾನ ವಿಭಾಗದಲ್ಲಿ ಉಜಿರೆ ಎಸ್.ಡಿ.ಎಂ. ಪ. ಪೂರ್ವ ಕಾಲೇಜಿನ ಪ್ರಣವ್ ಭಟ್ ೫೯೪ ಅಂಕ ಪಡೆದು ಪ್ರಥಮ ಸ್ಥಾನ ಪಡೆದುಕೊಂಡಿದ್ದಾರೆ.
ಪ್ರಣವ್ ಭಟ್‌ಗೆ ರಾಜ್ಯ ಮಟ್ಟದಲ್ಲಿ ತೃತೀಯ ಸ್ಥಾನ :
ಉಜಿರೆ ಎಸ್‌ಡಿಎಂ ಪ.ಪೂ. ಕಾಲೇಜಿನ ವಿಜ್ಞಾನ ವಿಭಾಗದ ವಿದ್ಯಾರ್ಥಿ ಪ್ರಣವ್ ಭಟ್ ಅವರಿಗೆ ಈ ಬಾರಿ ಪರೀಕ್ಷೆಯಲ್ಲಿ ೫೯೪ ಅಂಕಗಳು ಬಂದಿದ್ದು ಇದು ರಾಜ್ಯಮಟ್ಟದಲ್ಲಿ ಮೂರನೇ ಸ್ಥಾನದಲ್ಲಿದೆ ಎಂದು ಕಾಲೇಜಿನ ಪ್ರಾಂಶುಪಾಲ ದಿನೇಶ್ ಚೌಟ ತಿಳಿಸಿದ್ದಾರೆ.
ಈ ಬಾರಿ ಕಲಾ ವಿಭಾಗದಲ್ಲಿ ವಾಣಿ ಪ. ಪೂ. ಕಾಲೇಜು, ಅನುಗ್ರಹ ಪ. ಪೂ ಕಾಲೇಜು, ಅರಸಿನಮಕ್ಕಿ ಸರಕಾರಿ ಪ. ಪೂ ಕಾಲೇಜು ಶೇ. ೧೦೦ ಫಲಿತಾಂಶ ದಾಖಲಿಸಿದೆ.
ಅಂತೆಯೇ ವಾಣಿಜ್ಯ ವಿಭಾಗದಲ್ಲೂ ಅರಸಿನಮಕ್ಕಿ ಸರಕಾರಿ ಪ. ಪೂ ಕಾಲೇಜು ಶೇ. ೧೦೦ ಫಲಿತಾಂಶ ಪಡೆದುಕೊಂಡಿದೆ.
ವಿಜ್ಞಾನ ವಿಭಾಗದಲ್ಲಿ ಎಸ್‌ಡಿಎಂ ರೆಸಿಡೆನ್ಶಿಯಲ್ ಕಾಲೇಜು ಶೇ. ೯೯.೩೪ ಅತಿ ಹೆಚ್ಚು ಫಲಿತಾಂಶ ಪಡೆದುಕೊಂಡಿದ್ದರೆ, ವಾಣಿ ಪ. ಪೂ ಕಾಲೇಜು ಶೇ. ೯೮.೧೬ ಫಲಿತಾಂಶ ಪಡೆದುಕೊಂಡು ದ್ವಿತೀಯ ಸ್ಥಾನದಲ್ಲಿದೆ. ವಾಣಿಜ್ಯ ವಿಭಾಗದಲ್ಲಿ ಶ್ರೀ ಗುರುದೇವ ಕಾಲೇಜು ಬಿ ವಿಭಾಗ ಶೇ. ೧೦೦ ಫಲಿತಾಂಶ ದಾಖಲಿಸಿದೆ.
ಎಸ್.ಡಿ.ಎಂ. ಪ.ಪೂ. ಕಾಲೇಜಿನಲ್ಲಿ ೨೨೭ ಮಂದಿ, ವಾಣಿ ಪ.ಪೂ. ಕಾಲೇಜಿನಲ್ಲಿ ೭೯ ಮಂದಿ, ಸೇ.ಹಾ. ಪ.ಪೂ. ಕಾಲೇಜು ಮಡಂತ್ಯಾರಿನಲ್ಲಿ ೪೬ ಮಂದಿ, ಉಜಿರೆ ಎಸ್.ಡಿ.ಎಂ. ಸನಿವಾಸ ಕಾಲೇಜಿನಲ್ಲಿ ೬೦ ಮಂದಿ, ಸೈಂಟ್ ಆಂಟನಿ ಪ.ಪೂ ಕಾಲೇಜು ನಾರಾವಿಯಲ್ಲಿ ೨೮ ಮಕ್ಕಳು ಹೆಚ್ಚು ಸಂಖ್ಯೆಯಲ್ಲಿ ಡಿಸ್ಟಿಂಕ್ಷನ್ ಪಡೆದುಕೊಂಡಿದ್ದಾರೆ. ಉಳಿದ ಎಲ್ಲ ಕಾಲೇಜುಗಳೂ ಕೂಡ ಡಿಸ್ಟಿಂಕ್ಷನ್ ಗಳಿಸಿಕೊಂಡಿವೆ.

ksmca copy

ksmca2ಬೆಳ್ತಂಗಡಿ : ಕೆಎಸ್‌ಎಂಸಿಎ ಯ ಸಮಾವೇಶ ಇಂದು(ಮೇ.17) ಬೆಳ್ತಂಗಡಿ ಸಭಾಗಂಣದಲ್ಲಿ ನಡೆಯಿತು.

charmadi1

charmadi

charmadi.2

charmadi.3ಚಾರ್ಮಾಡಿ ಕಣಿವೆ ರಸ್ತೆಯ ಮೂರನೇ ತಿರುವಿನಲ್ಲಿ ಇಂದು ಕೇರಳ ನೋಂದಾವಣೆಯ ಬಸ್ಸು ಪ್ರಪಾತಕ್ಕೆ ಉರುಳಿ ಬಿದ್ದಿದೆ ಎಂಬ ಮಾಹಿತಿ ಲಭ್ಯವಾಗಿದೆ. ಬಸ್ಸಿನಲ್ಲಿದ್ದ ಪ್ರಯಾಣಿಕರ ಪೈಕಿ ಇಬ್ಬರು ಮೃತ ಪಟ್ಟಿದ್ದು, ಹಲವರಿಗೆ ಗಾಯಗಳಾಗಿವೆ ಎಂದು ಮಾಹಿತಿ ಲಭ್ಯವಾಗಿದೆ. ಮೃತ ದೇಹವನ್ನು ಸರಕಾರಿ ಆಸ್ಪತ್ರೆಗೆ ಸ್ಥಳಾಂತರಿಸಲಾಗಿದೆ. ಗಾಯಾಳುಗಳಿಗೆ ವಿವಿಧ ಆಸ್ಪತ್ರಗಳಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.

SDPI BALENJAಬಳೆಂಜ : ಮೇ. 15 ರಂದು ಸೋಶಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾ ತೆಂಕಕಾರಂದೂರು ಗ್ರಾಮ ಸಮಿತಿ ವತಿಯಿಂದ ನೀರಿನ ಬೆಲೆ ಏರಿಕೆಯ ವಿರುದ್ಧ ಬಳಂಜ ಗ್ರಾಮ ಪಂಚಾಯತ್ ಎದುರು ಪ್ರತಿಭಟನೆ ನಡೆಸಿ ನೀರಿನ ಬೆಲೆ ಇಳಿಸುವಂತೆ ಮನವಿ ಸಲ್ಲಿಸಲಾಯಿತು.
ಪ್ರತಿಭಟನೆಯ ನೇತೃತ್ವ ಎಸ್‌ಡಿಪಿಐ ತೆಂಕಕಾರಂದೂರು ಗ್ರಾಮ ಸಮಿತಿ ಅಧ್ಯಕ್ಷ ಹಸನ್ ಗಿಂಡಾಡಿ ವಹಿಸಿದ್ದರು. ತಾಲೂಕು ಅಧ್ಯಕ್ಷ ಅಕ್ಬರ್ ಬೆಳ್ತಂಗಡಿ, ಸ್ಥಳೀಯ ಮುಖಂಡರಾದ ನವಾಝ್ ಶರೀಫ್, ಅಂತೋಣಿ, ಗೀತಾ, ದಾಸಪ್ಪ ಗೌಡ, ನೀಲಯ್ಯ ಪೂಜಾರಿ, ಸಯ್ಯದ್ ಅಲಿ, ಮುಸ್ತಪಾ, ರಿಝ್ವಾನ್, ಅಶ್ರಪ್ ಕಾಪಿನಡ್ಕ, ನಿಯಾಝ್ ಮೊದಲಾದವರು ಉಪಸ್ಥಿತರಿದ್ದರು.

ಬೆಳ್ತಂಗಡಿ : ನಿರ್ವಹಣೆ ಕಾಮಗಾರಿಯ ಪ್ರಯುಕ್ತ 33 ಕೆವಿ ಕಕ್ಕಿಂಜೆ ವಿದ್ಯುತ್ ಉಪಕೇಂದ್ರದಿಂದ ಹೊರಹೊಮ್ಮುವ ಎಲ್ಲಾ 11 ಕೆವಿ ಫೀಡರುಗಳಲ್ಲಿ ಮೇ.16 ರಂದು ಬೆಳಗ್ಗೆ 9.30 ರಿಂದ ಸಂಜೆ 5.30 ರವರೆಗೆ ಹಾಗೂ ಗುರುವಾಯನಕೆರೆ ಉಪಕೇಂದ್ರದಲ್ಲಿ ತುರ್ತು ಕಾಮಗಾರಿಯನ್ನು ಕೈಗೊಳ್ಳಬೇಕಾದ ಹಿನ್ನಲೆಯಲ್ಲಿ ಮೇ. 17 ಮತ್ತು 19ರಂದು ಗುರುವಾಯನಕೆರೆ ಉಪಕೇಂದ್ರದಿಂದ ಹೊರಹೊಮ್ಮುವ ವೇಣೂರು ಮತ್ತು ಆರಂಬೋಡಿ ಫೀಡರ್‌ಗಳಲ್ಲಿ ಬೆಳಿಗ್ಗೆ 8.00ರಿಂದ ಸಂಜೆ 4.00ರ ತನಕ ವಿದ್ಯುತ್ ನಿಲುಗಡೆಯಾಗಲಿದೆ ಎಂದು ಮೆಸ್ಕಾಂ ಪ್ರಕಟಣೆಯಲ್ಲಿ ತಿಳಿಸಿದೆ.

laila 1

lailaಲಾಯಿಲ : ಭಾರತೀಯ ಜನತಾ ಪಾರ್ಟಿ ಯುವ ಮೋರ್ಚಾ ಬೆಳ್ತಂಗಡಿ ಮಂಡಲ ಇದರ ವತಿಯಿಂದ ಪಂಡಿತ ದೀನ್‌ದಯಾಳ್ ಉಪಾಧ್ಯಾಯರ ಜನ್ಮಶತಾಬ್ಧಿ ವರ್ಷಾಚರಣೆ ಅಂಗವಾಗಿ ಮೇ. 13 ರಂದು ಲಾಯಿಲ ಪ್ರಸನ್ನ ಶಿಕ್ಷಣ ಸಮುಚ್ಚಯದ ಮೈದಾನದಲ್ಲಿ ಹಮ್ಮಿಕೊಂಡಿದ್ದ ಹೊನಲು ಬೆಳಕಿನ ಆಹ್ವಾನಿತ ತಂಡಗಳ ಪ್ರೋ ಮಾದರಿ ಕಬಡ್ಡಿ ಮತ್ತು ಹಗ್ಗ ಜಗ್ಗಾಟ ಪಂಡಿತ ದೀನ್‌ದಯಾಳ್ ಟ್ರೋಫಿ- ೨೦೧೭ ಇದರ ಉದ್ಘಾಟನೆಯನ್ನು ಬಿಜೆಪಿ ಜಿಲ್ಲಾಧ್ಯಕ್ಷ ಸಂಜೀವ ಮಠಂದೂರು ನೆರವೇರಿಸಿದರು. ಮುಖ್ಯ ಅತಿಥಿಯಾಗಿ ರಾಜ್ಯ ಯುವ ಮೋರ್ಚಾದ ಮಹಾ ಪ್ರಧಾನ ಕಾರ್ಯದರ್ಶಿ ಬಸವರಾಜ್ ಭಾಗವಹಿಸಿದ್ದರು. ಬಿಜೆಪಿ ಬೆಳ್ತಂಗಡಿ ಮಂಡಲದ ಅಧ್ಯಕ್ಷ ರಂಜನ್ ಜಿ ಗೌಡ ಸಮಾರಂಭದ ಅಧ್ಯಕ್ಷತೆ ವಹಿಸಿದ್ದರು.
ವೇದಿಕೆಯಲ್ಲಿ ವಿಧಾನ ಪರಿಷತ್ ಪ್ರತಿಪಕ್ಷದ ಮುಖ್ಯ ಸಚೇತನ ಕ್ಯಾ| ಗಣೇಶ್ ಕಾರ್ಣಿಕ್, ಜಿಲ್ಲಾ ಯುವ ಮೋರ್ಚಾ ಅಧ್ಯಕ್ಷ ಹರೀಶ್ ಪೂಂಜ, ಮಾಜಿ ಶಾಸಕ ಪ್ರಭಾಕರ ಬಂಗೇರ, ಮಾಜಿ ಶಾಸಕ ರುಕ್ಮಯ್ಯ ಪೂಜಾರಿ, ಮಂಗಳೂರು ವಿಭಾಗ ಸಹಪ್ರಭಾರಿ ಪ್ರತಾಪಸಿಂಹ ನಾಯಕ್, ಜಿಲ್ಲಾ ಬಿಜೆಪಿ ಉಪಾಧ್ಯಕ್ಷೆ ಶಾರದಾ ಆರ್ ರೈ, ತಾ.ಪಂ ಉಪಾಧ್ಯಕ್ಷೆ ವೇದಾವತಿ, ಜಿಲ್ಲಾ ಪ್ರ. ಕಾರ್ಯದರ್ಶಿ ಕೆ ಕೊರಗಪ್ಪ ನಾಯ್ಕ, ಹಿಂದುಳಿದ ವರ್ಗಗಳ ಜಿಲ್ಲಾ ನಾಯಕ ಕೃಷ್ಣಪ್ಪ ಕಲ್ಲಡ್ಕ, ಜಿ.ಪಂ ಸದಸ್ಯೆ ಸೌಮ್ಯಲತಾ ಜಯಂತ ಗೌಡ, ತಾ.ಪಂ ಸದಸ್ಯರಾದ ಸುಧಾರಕ ಬಿ.ಎಲ್, ಕೊರಗಪ್ಪ ಗೌಡ ಅರಣಪಾದೆ, ಎಂ ಶಶಿಧರ ಕಲ್ಮಂಜ, ವಿಜಯ ಗೌಡ ವೇಣೂರು, ತಾ.ಪಂ ಸ್ಥಾಯಿ ಸಮಿತಿ ಅಧ್ಯಕ್ಷ ಸುಧೀರ್ ಆರ್ ಸುವರ್ಣ, ಪಕ್ಷದ ಕಾರ್ಯದರ್ಶಿಗಳಾದ ಪ್ರಭಾಕರ ಶೆಟ್ಟಿ ಉಪ್ಪಡ್ಕ ಮತ್ತು ಸೀತಾರಾಮ ಬಿ.ಎಸ್ ಇವರುಗಳು ಉಪಸ್ಥಿತರಿದ್ದರು.
ಬಿಜೆಪಿ ಯುವ ಮೋರ್ಚಾ ತಾ| ಅಧ್ಯಕ್ಷ ಸಂಪತ್ ಬಿ ಸುವರ್ಣ ಪ್ರಾಸ್ತಾವಿಕವಾಗಿ ಮಾತನಾಡಿ, ಸ್ವಾಗತಿಸಿದರು.
ತುಳಸಿದಾಸ್ ಪೈ ಮಡಂತ್ಯಾರು ಕಾರ್ಯಕ್ರಮ ನಿರೂಪಿಸಿದರು. ಯುವ ಮೋರ್ಚಾ ಪ್ರ. ಕಾರ್ಯದರ್ಶಿ ರಕ್ಷಿತ್ ಶೆಟ್ಟಿ ವಂದಿಸಿದರು.
ಕ್ರೀಡಾಕೂಟದ ಸಂಚಾಲಯರುಗಳಾಗಿದ್ದ ಮಿಥುನ್ ಕುಲಾಲ್, ಚಂದ್ರಕಾಂತ ಗೌಡ ಮಚ್ಚಿನ, ದೀಕ್ಷಿತ್ ಶೆಟ್ಟಿ ಮುದ್ದಿಗೆ, ರಾಜೇಶ್ ಮಿತ್ತಬಾಗಿಲು, ಹಾಗೂ ಯುವ ಮೋರ್ಚಾದ ಪದಾಧಿಕಾರಿಗಳು ಹಾಗೂ ಸದಸ್ಯರುಗಳು ಉಪಸ್ಥಿತರಿದ್ದು ಸಹಕಾರ ನೀಡಿದರು.

sslcಬೆಳ್ತಂಗಡಿ: ತೊಕ್ಕೊಟ್ಟು ಸಮೀಪದ ಬಬ್ಬುಕಟ್ಟೆ ಖೈರಿಯಾ ಟ್ರಸ್ಟ್ ಅಧೀನದಲ್ಲಿರುವ ಖೈರಿಯಾ ಶೆಲ್ಟರ್ ಇದರ ಹೆಣ್ಣುಮಕ್ಕಳ ಸಂಸ್ಥೆಯಲ್ಲಿರುವ 13 ವಿದ್ಯಾರ್ಥಿಗಳ ಪೈಕಿ ಈ ಬಾರಿಯ ಪಿಯುಸಿ ಪರೀಕ್ಷೆಯಲ್ಲಿ ಬೆಳ್ತಂಗಡಿಯ ಹನ್ನತ್ ಬೀಬಿ ಅವರು ಡಿಸ್ಟಿಂಕ್ಷನ್ ಮೂಲಕ ಉತ್ತೀರ್ಣರಾಗಿ ತಾಲೂಕಿಗೆ ಕೀರ್ತಿ ತಂದಿದ್ದಾರೆ.
ಬೆಳ್ತಂಗಡಿ ಸರಕಾರಿ ಆಸ್ಪತ್ರೆ ನಿವೃತ ಸಿಬಂದಿ, ಪ್ರಸ್ತುತ ಗುರುವಾಯನಕೆರೆ ಸುನ್ನತ್‌ಕೆರೆಯಲ್ಲಿ ನೆಲೆಸಿರುವ ಪಿ.ಕೆ ಅಬ್ದುಲ್ ರಹಿಮಾನ್ ಮತ್ತು ಬೀಫಾತಿಮಾ ದಂಪತಿ ಪುತ್ರಿ, ಬೆಳ್ತಂಗಡಿ ಸೈಂಟ್ ತರೇಸಾ ಶಾಲಾ ಹಳೆವಿದ್ಯಾರ್ಥಿನಿ ಹನ್ನತ್ ಬೀಬಿ ಅವರು 510 ಅಂಕಗಳನ್ನು ಪಡೆದು ಉತ್ತೀರ್ಣರಾಗುವ ಮೂಲಕ ಖೈರಿಯಾ ಕ್ಯಾಂಪಸ್‌ಗೂ ಪ್ರಥಮ ಸ್ಥಾನಿಯಾಗಿ ಹೊರಹೊಮ್ಮಿದ್ದಾರೆ. ಈ ಬಗ್ಗೆ ಸಂಸ್ಥೆಯ ಚೇರ್‌ಮೆನ್, ದ. ಕ ಜಿಲ್ಲಾ ವಕ್ಫ್ ಸಲಹಾ ಮಂಡಳಿ ಅಧ್ಯಕ್ಷರೂ ಆಗಿರುವ ಎಸ್. ಎಂ ರಶೀದ್ ಹಾಜಿ ಪ್ರಕಟಣೆ ನೀಡಿದ್ದಾರೆ. ಪ್ರತಿಭಾನ್ವಿತ ವಿದ್ಯಾರ್ಥಿನಿಯಾಗಿರುವ ಹನ್ನತ್ ಬೀಬಿ ಅವರು ಕಲಿಕೆ ಮಾತ್ರವಲ್ಲದೆ ಕಲಿಕೇತರ ಕ್ಷೇತ್ರಗಳಲ್ಲೂ ಮುಂದಿದ್ದು ಶೈಕ್ಷಣಿಕ ವರ್ಷದಲ್ಲಿ ಹಲವು ಬಹುಮಾನಗಳನ್ನು ಪಡೆದುಕೊಂಡಿದ್ದಾರೆ.

add1

dkrds

dkrds1ಬೆಳ್ತಂಗಡಿ : ದಕ್ಷಿಣ ಕನ್ನಡ ರೂರಲ್ ಡೆವಲಪ್‌ಮೆಂಟ್ ಸೊಸೈಟಿ ಬೆಳ್ತಂಗಡಿ, ನವಜೀವನ ಆರೈಕೆ ಮತ್ತು ಬೆಂಬಲ ಕೇಂದ್ರ ಬೆಳ್ತಂಗಡಿ ಇವರ ಆಶ್ರಯದಲ್ಲಿ ಮಕ್ಕಳ ಬೇಸಿಗೆ ಶಿಬಿರ ಹಾಗೂ ಪುಸ್ತಕ ಮತ್ತು ಪೌಷ್ಟಿಕಾಹಾರ ವಿತರಣಾ ಕಾರ್ಯಕ್ರಮವು ಮೇ. 12 ಮತ್ತು 13ರಂದು ಬೆಳ್ತಂಗಡಿ ಸಾನ್‌ತೋಮ್ ಟವರ್‌ನಲ್ಲಿ ನಡೆಯಿತು.
ಸಭಾ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಬೆಳ್ತಂಗಡಿ ಡಿ.ಕೆ.ಆರ್.ಡಿ.ಎಸ್ ಅಧ್ಯಕ್ಷ ಅತೀಂ ವಂ ಲಾರೆನ್ಸ್ ಮುಕ್ಕುಝಿ ವಹಿಸಿದ್ದರು. ಅತಿಥಿಗಳಾಗಿ ಬೆಳ್ತಂಗಡಿ ಲಯನ್ಸ್ ಕ್ಲಬ್ ಅಧ್ಯಕ್ಷೆ ಶ್ರೀಮತಿ ಸುಶೀಲ ಎಸ್. ಹೆಗ್ಡೆ, ಸುದ್ದಿ ಬಿಡುಗಡೆ ವರದಿಗಾರ ಅಶ್ರಫ್ ಆಲಿ ಕುಂಞ, ಶ್ರೀಮತಿ ಎಲಿಜಬೆತ್ ನೀಲಿಯಾರ ಮಂಗಳೂರು ಭಾಗವಹಿಸಿದ್ದರು. ಬೆಳ್ತಂಗಡಿ ನವಚೈತನ್ಯ ಸಂಘದ ಅಧ್ಯಕ್ಷೆ ಶ್ರೀಮತಿ ಪ್ರೇಮ ಉಪಸ್ಥಿತರಿದ್ದರು.
ಬೆಳ್ತಂಗಡಿ ಡಿ.ಕೆ.ಆರ್.ಡಿ.ಎಸ್ ನಿರ್ದೇಶಕ ವಂ. ಫಾ| ಆಯಾಂಕುಡಿ ಸ್ವಾಗತಿಸಿ, ಡಿ.ಕೆ.ಆರ್.ಡಿ.ಎಸ್ ಸಹಾಯಕ ನಿರ್ದೇಶಕ ವಂ. ಫಾ| ವರ್ಕಿ ಧನ್ಯವಾದವಿತ್ತರು.

sanjeeva gowda 1

sanjeeva gowda 2

sanjeeva gowda 3

sanjeeva gowdaಧರ್ಮಸ್ಥಳ ಠಾಣಾ ವ್ಯಾಪ್ತಿಯ ಬೆಳಾಲು ಗ್ರಾಮದ ಮಾಯದಪಲ್ಕೆ ಎಂಬಲ್ಲಿ, ಗ್ರಾಮದ ಕಾವಟೆಗುಡ್ಡೆ ನಿವಾಸಿ ಸಂಜೀವ ಗೌಡ(45 ವ.) ಎಂಬವರು ಮೇ 12 ರಂದು ರಾತ್ರಿ ಮೇ 13 ರ ಬೆಳಗ್ಗಿನ ಮಧ್ಯೆ ರಾತ್ರಿ ಸಮಯದಲ್ಲಿ ಕಿರು ಸೇತುವೆಯಿಂದ ಆಕಸ್ಮಿಕವಾಗಿ ಆಯತಪ್ಪಿ ತೋಡಿಗೆ ಬಿದ್ದು ಮೃತಪಟ್ಟ ಘಟನೆ ನಡೆದಿದೆ. ಮಾನಸಿಕ ಅಸ್ವಸ್ಥರಾಗಿದ್ದ ಅವರು ನಿನ್ನೆ ರಾತ್ರಿಯಿಂದ ಮನೆಗೆ ಬಾರದೇ ಇದ್ದವರ ಮೃತದೇಹ ಇಂದು(ಮೇ.13) ಬೆಳಿಗ್ಗೆ ಕಿರುಸೇತುವೆ ಕೆಳಗೆ ಪತ್ತೆಯಾಗಿದೆ. ಸ್ಥಳಕ್ಕೆ ಧರ್ಮಸ್ಥಳ ಠಾಣಾಧಿಕಾರಿ ರಾಮ ನಾಯ್ಕ ಅವರು ಭೇಟಿ ನೀಡಿದ್ದು ಕೇಸು ದಾಖಲಿಸಿಕೊಂಡಿದ್ದಾರೆ.

vijaya1vijaya
ಬೆಳ್ತಂಗಡಿ : ಕಾಶಿಬೆಟ್ಟು ಸಮೀಪದಲ್ಲಿ ನಿರ್ಮಾಣ ಹಂತದಲ್ಲಿದ್ದ ತನ್ನದೇ ಮನೆಯ ಮೇಲಿನ ಪಿಲ್ಲರ್‌ವೊಂದಕ್ಕೆ ನೀರು ಹಾಕುತಿದ್ದ ಸಂದರ್ಭದಲ್ಲಿ ಆಯತಪ್ಪಿ ಕೆಳಗೆ ಬಿದ್ದು ತಲೆಗೆ ಗಂಭೀರ ಗಾಯಗೊಂಡ ಕಾಶಿಬೆಟ್ಟು ನಿವಾಸಿ ವಿಜಯ ಗೌಡ (45ವ)ಆಸ್ಪತ್ರೆಗೆ ಸಾಗಿಸುವ ದಾರಿ ಮಧ್ಯೆ ಸಾವನ್ನಪ್ಪಿದಾರೆ. ಇವರು ಧರ್ಮಸ್ಥಳದ ಕಲ್ಲೇರಿ ಎಂಬಲ್ಲಿ ಗ್ಯಾರೆಜ್ ಮಾಲಿಕರಾಗಿದ್ದಾರೆ. ಮೃತದೇಹವನ್ನು ಬೆಳ್ತಂಗಡಿ ಆಸ್ಪತ್ರೆಯ ಶವಾಗಾರದಲ್ಲಿಡಲಾಗಿದೆ.

manvi copyಚಾರ್ಮಾಡಿ ಗ್ರಾಮದ ಪರ್ಲಾಣಿ ಮನೆ ಹರೀಶ್ ಮತ್ತು ವಿದ್ಯಾ ದಂಪತಿಗಳ ಪುತ್ರಿ ಮಾನ್ವಿರವರ 3ನೇ ವರ್ಷದ ಹುಟ್ಟುಹಬ್ಬವನ್ನು ಪರ್ಲಾಣಿ ಮನೆಯಲ್ಲಿ ಆಚರಿಸಲಾಯಿತು.

Exif_JPEG_420

ಕನ್ಯಾಡಿ : ಬರಾಯ ಕನ್ಯಾಡಿ ಅಲೆಕ್ಕಿ ನಿವಾಸಿ ರಾಜೇಶ್ ಜಿ. ಮತ್ತು ಯಶಸ್ವಿ ಆರ್. ದಂಪತಿ ಪುತ್ರಿ ತನ್ವಿ ಆರ್.ಜಿ.,ಳ ಪ್ರಥಮ ವರ್ಷದ ಹುಟ್ಟುಹಬ್ಬವನ್ನು ಮೇ. 5ರಂದು ಆಚರಿಸಲಾಯಿತು.

Yuva kreedakuta copyಬೆಳ್ತಂಗಡಿ: ಭಾರತೀಯ ಜನತಾ ಪಾರ್ಟಿ ಯುವ ಮೋರ್ಚಾ ಬೆಳ್ತಂಗಡಿ ಮಂಡಲ ಇದರ ನೇತೃತ್ವದಲ್ಲಿ ಪಂಡಿತ ದೀನ್ ದಯಾಳ್ ಉಪಾಧ್ಯಾಯರ ಜನ್ಮಶತಾಬ್ದಿ ವರ್ಷಾಚರಣೆ ಅಂಗವಾಗಿ ಆಹ್ವಾನಿತ ತಂಡಗಳ ಪ್ರೊ. ಮಾದರಿಯ ಕಬಡ್ಡಿ ಮತ್ತು ಹಗ್ಗಜಗ್ಗಾಟ ಪಂಡಿತ್ ದೀನದಯಾಳ್ ಟ್ರೋಪಿ-2017 ಹೊನಲು ಬೆಳಕಿನ ಯುವ ಕ್ರೀಡೋತ್ಸವ ಮೇ 13ರಂದು ಸಂಜೆ ಪ್ರಸನ್ನ ವಿದ್ಯಾಸಂಸ್ಥೆಗಳ ಮೈದಾನ ಲಾಯಿಲದಲ್ಲಿ ನಡೆಯಲಿದೆ ಎಂದು ಭಾ.ಜ.ಪ. ಯುವ ಮೋರ್ಚಾದ ಅಧ್ಯಕ್ಷ ಸಂಪತ್ ಬಿ. ಸುವರ್ಣ ಹೇಳಿದರು.
ಅವರು ಮೇ 5ರಂದು ಬೆಳ್ತಂಗಡಿ ಪ್ರೆಸ್‌ಕ್ಲಬ್‌ನಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಕ್ರೀಡಾ ಕೂಟದ ಬಗ್ಗೆ ವಿವರ ನೀಡಿದರು. ಕ್ರೀಡಾ ಕೂಟವನ್ನು ಸಂಸದ ನಳಿನ್‌ಕುಮಾರ್ ಕಟೀಲ್ ಉದ್ಘಾಟಿಸಲಿದ್ದು, ಬಿಜೆಪಿ ಯುವ ಮೋರ್ಚಾದ ರಾಜ್ಯ ಪ್ರಧಾನ ಕಾರ್ಯದರ್ಶಿ ತಮ್ಮೇಶ್ ಗೌಡ ಅಧ್ಯಕ್ಷತೆ ವಹಿಸಲಿದ್ದಾರೆ. ಅತಿಥಿಗಳಾಗಿ ಜನಪ್ರತಿನಿಧಿಗಳು, ಪಕ್ಷದ ತಾಲೂಕು, ಜಿಲ್ಲೆ ಹಾಗೂ ರಾಜ್ಯಮಟ್ಟದ ವಿವಿಧ ಮುಖಂಡರುಗಳು ಭಾಗವಹಿಸಲಿದ್ದಾರೆ. ಬೆಳ್ತಂಗಡಿ ನಗರ ಪಂಚಾಯತು ಸೇರಿದಂತೆ ತಾಲೂಕಿನ 49 ಪಂಚಾಯತು ಸಮಿತಿ ಹೆಸರಿನಲ್ಲಿ ತಂಡಗಳು ಸ್ಪರ್ಧಿಸಲಿದೆ. ತಂಡಗಳಲ್ಲಿ ಪಕ್ಷ ಭೇದವಿಲ್ಲದೆ ಎಲ್ಲಾ ಕ್ರೀಡಾಪಟುಗಳಿಗೂ ಭಾಗವಹಿಸಲು ಅವಕಾಶವಿದೆ. ಕ್ರೀಡಾಪಟುಗಳ ತಂಡವನ್ನು ಆಯಾ ಗ್ರಾಮದ ಗ್ರಾಮ ಸಮಿತಿ ಆಯ್ಕೆ ಮಾಡಲಿದೆ. ವಿಜೇತ ತಂಡಗಳಿಗೆ ಪ್ರಥಮ, ದ್ವಿತೀಯ, ತೃತೀಯ, ಚತುರ್ಥ ನಗದು ಬಹುಮಾನ ಜೊತೆಗೆ ಪಂಡಿತ್ ದೀನ್‌ದಯಾಳ್ ಟ್ರೋಫಿ ನೀಡಲಾಗುವುದು, ತಾಲೂಕು ಮಟ್ಟದ ಕ್ರೀಡಾ ಕೂಟದಲ್ಲಿ ಸ್ಪರ್ಧಿಸಿ ಪ್ರಥಮ ಹಾಗೂ ದ್ವಿತೀಯ ಪ್ರಶಸ್ತಿ ಪಡೆದ ತಂಡ ಜಿಲ್ಲಾ ಮಟ್ಟದ ಕ್ರೀಡಾಕೂಟಕ್ಕೆ ಆಯ್ಕೆಯಾಗಲಿದೆ ಎಂದು ತಿಳಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಬೆಳ್ತಂಗಡಿ ಮಂಡಲ ಬಿಜೆಪಿ ಅಧ್ಯಕ್ಷ ರಂಜನ್ ಜಿ. ಗೌಡ, ಪ್ರಧಾನ ಕಾರ್ಯದರ್ಶಿ ಪ್ರಭಾಕರ ಶೆಟ್ಟಿ ಉಪ್ಪಡ್ಕ, ಬಿಜೆಪಿ ಯುವ ಮೋರ್ಚಾದ ಪ್ರಧಾನ ಕಾರ್ಯದರ್ಶಿ ರಕ್ಷಿತ್ ಶೆಟ್ಟಿ, ಕಾರ್ಯದರ್ಶಿ ದೀಪಕ್ ಶೆಟ್ಟಿ ಅರಸಿನಮಕ್ಕಿ ಉಪಸ್ಥಿತರಿದ್ದು, ಪೂರಕ ಮಾಹಿತಿ ನೀಡಿದರು.

venur bus stand shilanyasa copyವೇಣೂರು: ವೇಣೂರು ಕೆಳಗಿನ ಪೇಟೆಯ ಶ್ರೀರಾಮ ನಗರದಲ್ಲಿ ವೇಣೂರಿನ ಹಿರಿಯ ಉದ್ಯಮಿಯಾಗಿದ್ದ ದಿ| ಲ. ಹಿಲಾರಿ ಪಿರೇರಾರವರ ಸ್ಮರಣಾರ್ಥ ರೂ. 10 ಲಕ್ಷ ವೆಚ್ಚದಲ್ಲಿ ನಿರ್ಮಾಣವಾಗಲಿರುವ ಬಸ್ ತಂಗುದಾಣಕ್ಕೆ ಶುಕ್ರವಾರ ಹಿಲಾರಿ ಪಿರೇರಾರವರ ಪುತ್ರ ಉದ್ಯಮಿ ವಾಲ್ಟರ್ ಪಿರೇರಾ ಶಿಲಾನ್ಯಾಸ ನೆರವೇರಿಸಿದರು.
ವೇಣೂರು ಗ್ರಾ.ಪಂ. ರೂ. 2.50 ಲಕ್ಷದ ಅನುದಾನದೊಂದಿಗೆ ವಾಲ್ಟರ್ ಪಿರೇರಾ ಅವರು ಕೊಡುಗೆಯಾಗಿ ಬಸ್ ತಂಗುದಾಣ ನಿರ್ಮಿಸುತ್ತಿದ್ದಾರೆ. ಈ ಸಂದರ್ಭ ಮಾತನಾಡಿದ ಅವರು, ತಂದೆಯ ಸವಿನೆನಪಿಗಾಗಿ ಊರಿಗೆ ಶಾಶ್ವತ ಕೊಡುಗೆ ನೀಡುವ ಉದ್ದೇಶದಿಂದ ಈ ಯೋಜನೆ ಹಮ್ಮಿಕೊಳ್ಳಲಾಗಿದೆ ಎಂದರು.
ಈ ಸಂದರ್ಭದಲ್ಲಿ ವೇಣೂರು ಜೈನ ತೀರ್ಥಕ್ಷೇತ್ರ ಸಮಿತಿ ಕಾರ್ಯದರ್ಶಿ ಯಂ. ವಿಜಯರಾಜ ಅಧಿಕಾರಿ ಮಾರಗುತ್ತು, ಉದ್ಯಮಿ ಭಾಸ್ಕರ ಪೈ, ವಿಶ್ವನಾಥ ಪೈ, ವೇಣೂರು ಗ್ರಾ.ಪಂ. ಅಧ್ಯಕ್ಷೆ ಮೋಹಿನಿ ವಿ. ಶೆಟ್ಟಿ, ಉಪಾಧ್ಯಕ್ಷ ಅರುಣ್ ಕ್ರಾಸ್ತ, ತಾ.ಪಂ. ಸದಸ್ಯ ಕೆ. ವಿಜಯ ಗೌಡ, ಪಂ. ಅಭಿವೃದ್ಧಿ ಅಧಿಕಾರಿ, ಸದಸ್ಯರು ಹಾಗೂ ಗ್ರಾಮಸ್ಥರು ಉಪಸ್ಥಿತರಿದ್ದರು.

Deepika nagesh copyಬೆಳ್ತಂಗಡಿ ಅಚ್ಚಿನಡ್ಕ ನೋಣಯ್ಯ ಗಾಣಿಗರ ಪುತ್ರಿ ದೀಪಿಕಾ ರವರ ವಿವಾಹವು ದಿ| ಸಂಜೀವ ಗಾಣಿಗರ ಪುತ್ರ ನಾಗೇಶ್ ರೊಂದಿಗೆ ಮೇ. 7ರಂದು ಬೋಳಿಯಾರ್ ಎಸ್.ಎಚ್ ಸಭಾಭವನದಲ್ಲಿ ಜರಗಿತು.

Sowmya surendra copyಮರೋಡಿ ಗ್ರಾಮದ ಧನಲಕ್ಷ್ಮೀ ನಿವಾಸ ದಿ| ಸಂಜೀವ ಪೂಜಾರಿಯವರ ಪುತ್ರ ಸುರೇಂದ್ರರವರ ವಿವಾಹವು ಬಜಿರೆ ಗುಡ್ಡೆಮಾರು ಆನಂದ ಪೂಜಾರಿಯವರ ಪುತ್ರಿ ಸೌಮ್ಯರೊಂದಿಗೆ ಮೇ.7 ರಂದು ನಾರಾವಿ ಬಸದಿಯ ಧರ್ಮಶ್ರೀ ಸಭಾಭವನ ದಲ್ಲಿ ಜರುಗಿತು.

SANDHYA DHANANJAY copyನಾಲ್ಕೂರು ಗ್ರಾಮದ ಸಂಧ್ಯಾದೀಪಾ ಮನೆಯ ತಾ.ಪಂ. ಮಾಜಿ ಸದಸ್ಯ ಹೆಚ್ ಧರ್ಣಪ್ಪ ಪೂಜಾರಿ ಮತ್ತು ಅನಸೂಯರವರ ಪುತ್ರಿ ಅಳದಂಗಡಿ ಎಸ್.ಸಿ.ಡಿ.ಸಿ.ಸಿ ಬ್ಯಾಂಕ್ ಉದ್ಯೋಗಿ ಸಂಧ್ಯಾ ರವರ ವಿವಾಹವು ವೇಣೂರು ಗುಂಡೂರಿ ಲಕ್ಷ್ಮೀ ನಿವಾಸದ ಸಂಜೀವ ಪೂಜಾರಿಯವರ ಪುತ್ರ ಧನಂಜಯರೊಂದಿಗೆ ಮೇ.7 ರಂದು ಗುರುವಾಯನಕೆರೆ ಕಿನ್ಯಮ್ಮ ಯಾನೆ ಗುಣವತಿ ಅಮ್ಮ ಸಭಾ ಭವನದಲ್ಲಿ ಜರಗಿತು.    ಈ ವಿವಾಹ ಸಮಾರಂಭಕ್ಕೆ ಅಳದಂಗಡಿ ಅರಮನೆಯ ತಿಮ್ಮಣ್ಣರಸರಾದ ಡಾ| ಪದ್ಮಪ್ರಸಾದ್ ಅಜಿಲರು, ಬೆಳ್ತಂಗಡಿ ಶಾಸಕ ಕೆ. ವಸಂತ ಬಂಗೇರ, ಎಸ್.ಸಿ.ಡಿ.ಸಿ.ಸಿ ಬ್ಯಾಂಕ್ ಅಧ್ಯಕ್ಷ ಡಾ. ಎಂ.ಎನ್ ರಾಜೇಂದ್ರ ಕುಮಾರ್, ಮಾಜಿ ಶಾಸಕ ಪ್ರಭಾಕರ ಬಂಗೇರ, ಬಿಜೆಪಿ ಯುವ ಮೋಚಾದ ಜಿಲ್ಲಾಧ್ಯಕ್ಷ ಹರೀಶ್ ಪೂಂಜ, ಹಾಗೂ ವಿವಿಧ ಕ್ಷೇತ್ರದ ಗಣ್ಯರು, ರಾಜಕೀಯ ಮುಖಂಡರು ಆಗಮಿಸಿ ವಧು-ವರರನ್ನು ಹರಸಿದರು.

KDP sabhe copyಬೆಳ್ತಂಗಡಿ : ಬೆಳ್ತಂಗಡಿ ತಾಲೂಕು ಪಂಚಾಯತದ ಮಾಸಿಕ ಕೆ.ಡಿ.ಪಿ. ಸಭೆ ತಾ.ಪಂ ಅಧ್ಯಕ್ಷೆ ದಿವ್ಯಜ್ಯೋತಿ ಅವರ ಅಧ್ಯಕ್ಷತೆಯಲ್ಲಿ ಮೇ 5ರಂದು ತಾ.ಪಂ. ಸಭಾಂಗಣದಲ್ಲಿ ಜರುಗಿತು.
ಉಪಾಧ್ಯಕ್ಷೆ ವೇದಾವತಿ, ಸ್ಥಾಯಿ ಸಮಿತಿ ಅಧ್ಯಕ್ಷ ಸುದೀರ್ ಆರ್. ಸುವರ್ಣ, ಕಾರ್ಯನಿರ್ವಾಹಣಾಧಿಕಾರಿ ಸಿ.ಆರ್. ನರೇಂದ್ರ, ತಾ.ಪಂ. ಸಹಾಯಕ ಲೆಕ್ಕ ಅಧೀಕ್ಷಕ ಗಣೇಶ್ ಸುವರ್ಣ, ವಿವಿಧ ಇಲಾಖೆಗಳ ಅಧಿಕಾರಿಗಳು ಉಪಸ್ಥಿತರಿದ್ದರು.
ಆರೋಗ್ಯ ಇಲಾಖೆಯಿಂದ ಹೋಟೆಲ್‌ಗಳ ಸ್ವಚ್ಛತೆ ಬಗ್ಗೆ ಪರಿಶೀಲನೆ ನಡೆಯುತ್ತಿದೆ. ಸ್ವಚ್ಛತೆ ಬಗ್ಗೆ ಕ್ರಮ ಕೈಗೊಳ್ಳಲು ಸೂಚನೆ ನೀಡಲಾಗಿದೆ ಎಂದು ಆರೋಗ್ಯ ಅಧಿಕಾರಿ ಡಾ| ಕಲಾಮಧು ಮಾಹಿತಿ ನೀಡಿದರು. ಹೋಟೆಲ್‌ಗಳಲ್ಲಿ ಅಡುಗೆ ಕೋಣೆ ಮತ್ತು ಕುಡಿಯುವ ನೀರನ್ನು ಪರಿಶೀಲನೆ ನಡೆಸಲು ಇ.ಒ ಆರೋಗ್ಯ ಇಲಾಖೆಗಳಿಗೆ ಸೂಚನೆ ನೀಡಿದರು.
ತೋಟಗಾರಿಕಾ ಇಲಾಖೆಯಿಂದ ಹೂವಿನ ಕುಂಡಗಳನ್ನು ಒದಗಿಸಲಾಗುತ್ತಿದ್ದು, ಗ್ರಾಮ ಪಂಚಾಯತುಗಳಲ್ಲಿ ಗಾರ್ಡನ್ ಮಾಡಲು ಅಗತ್ಯವಿದ್ದರೆ ಪಂಚಾಯತು ಬೇಡಿಕೆ ಸಲ್ಲಿಸುವಂತೆ ಸೂಚಿಸಲಾಯಿತು. ತಾಲೂಕಿನ 25 ಗ್ರಾಮ ಪಂಚಾಯತುಗಳಲ್ಲಿ ಅನಧಿಕೃತ ವಿದ್ಯುತ್ ಸಂಪರ್ಕ ಇದೆ. ಇದನ್ನು ಪಂಚಾಯತು ಅಧಿಕೃತ ಗೊಳಿಸಬೇಕು. ಇಲ್ಲವಾದಲ್ಲಿ ಮೆಸ್ಕಾಂನಿಂದ ಕಡಿತಗೊಳಿಸಲು ಆದೇಶವಾಗಿದೆ ಕುವೆಟ್ಟು ಗ್ರಾ.ಪಂ. ವ್ಯಾಪ್ತಿಯಲ್ಲಿ ಅನಧಿಕೃತ ಸಂಪರ್ಕ ಇದ್ದು, ಪಂಚಾಯತು ರೂ.1.95 ಲಕ್ಷ ಹಣ ಕಟ್ಟಿದೆ ಎಂದು ಸ.ಕಾ. ಇಂಜಿನಿಯರ್ ಶಿವಶಂಕರ್ ತಿಳಿಸಿದರು.
ದೀನದಯಾಳ್ ಯೋಜನೆ: ತಾಲೂಕಿಗೆ ದೀನ್‌ದಯಾಳ್ ಯೋಜನೆಯಲ್ಲಿ ಅನುದಾನ ಮಂಜೂರಾಗಿದ್ದು, ಬಿ.ಪಿ.ಎಲ್ ಕುಟುಂಬಗಳ ಮನೆಗಳಿಗೆ ವಿದ್ಯುತ್ ಸಂಪರ್ಕ ನೀಡಲಾಗುವುದು. ಕಳೆದ ಮಾ.31ರ ತನಕ ಬಿಪಿಎಲ್ ಕಾರ್ಡ್ ಹೊಂದಿದ ಕುಟುಂಬದ ಯಾವುದೇ ಮನೆ ಬಾಕಿಯಾಗಬಾರದು ಇದರ ಬಗ್ಗೆ ಪಂಚಾಯತಕ್ಕೆ ನೋಟೀಸು ಕಳುಹಿಸಲು ನಿರ್ಣಯಿಸಲಾಯಿತು. ಅಭಯಾರಣ್ಯದೊಳಗೆ ಲೈನ್ ಎಳೆಯಲು ಅನುಮತಿಗಾಗಿ ಫಲಾನುಭವಿಗಳು ಅರಣ್ಯ ಹಕ್ಕು ಸಮಿತಿ ಮೂಲಕ ಅರ್ಜಿಗಳನ್ನು ನೀಡಿ ಅನುಮತಿಯನ್ನು ಪಡೆದುಕೊಳ್ಳಬೇಕು ಎಂದು ಸಭೆಗೆ ತಿಳಿಸಲಾಯಿತು.
ಗಂಗಾಕಲ್ಯಾಣ ಯೋಜನೆ: ಗಂಗಾ ಕಲ್ಯಾಣ ಯೋಜನೆಯಲ್ಲಿ ತಾಲೂಕಿನಲ್ಲಿ ಎಂಟು ಕಡೆ ವಿದ್ಯುತ್ ಸಂಪರ್ಕ ನೀಡಲಾಗಿದೆ. 31 ಕಡೆಗಳಲ್ಲಿ ಸಂಪರ್ಕ ನೀಡಲು ಬಾಕಿಯಿದೆ ಎಂದು ಶಿವಶಂಕರ್ ವಿವರಿಸಿದರು. ಗಂಗಾ ಕಲ್ಯಾಣ ಯೋಜನೆಯಲ್ಲಿ ವಿದ್ಯುತ್ ಲೈನ್ ಎಳೆಯುವುದು ಮೆಸ್ಕಾಂ ಕೆಲಸ, ಪಂಪು ಇಳಿಸುವುದು, ವಯರಿಂಗ್ ನಿಗಮದ ವತಿಯಿಂದ ಮಾಡಬೇಕು. ಆದರೆ ಅವರು ಮಾಡುವುದಿಲ್ಲ, ವಯರಿಂಗ್‌ಗೆ ಫಲಾನುಭವಿಗಳಿಂದ ಹಣ ವಸೂಲಿ ಮಾಡಲಾಗುತ್ತದೆ ಎಂಬ ಆರೋಪದ ಬಗ್ಗೆ ಸಭೆಯಲ್ಲಿ ಚರ್ಚೆ ನಡೆಯಿತು. ಈ ಗೊಂದಲಗಳ ಬಗ್ಗೆ ಮಾಹಿತಿ ನೀಡಲು ನಿಗಮದ ಅಧಿಕಾರಿಗಳು ಮುಂದಿನ ಸಭೆಗೆ ಕಡ್ಡಾಯವಾಗಿ ಬರುವಂತೆ ನಿರ್ಣಯಿಸಲಾಯಿತು.
5961 ಅರ್ಜಿ: ಭಾಗ್ಯಲಕ್ಷ್ಮೀ ಯೋಜನೆಯಲ್ಲಿ ಇದುವರೆಗೆ 5961 ಅರ್ಜಿಗಳು ಬಂದಿದ್ದು, ಬಾಂಡ್‌ಗಳನ್ನು ಫಲಾನುಭವಿಗಳಿಗೆ ವಿತರಿಸಲಾಗಿದೆ ಎಂದು ಸಿಡಿಪಿಒ ಮಾಹಿತಿ ನೀಡಿದರು. ಬಂಗೆರಕಟ್ಟದಲ್ಲಿ ಅಕ್ಷರಕರಾವಳಿ ಕಟ್ಟಡದಲ್ಲಿ ಅಂಗನವಾಡಿ ನಡೆಯುತ್ತಿದ್ದು, ಇದು ಗ್ರಾ.ಪಂ.ಕ್ಕೆ ಸೇರಿದ ಕಟ್ಟಡ, ಅಂಗನವಾಡಿ ಕಟ್ಟಡಕ್ಕೆ ಮಂಜೂರಾದ ಜಾಗ ಯಾವುದು ಎಂದು ಗಡಿ ಗುರುತು ಮಾಡುವಂತೆ ಇ.ಒ ಅಧಿಕಾರಿಗಳಿಗೆ ಸೂಚನೆ ನೀಡಿದರು.
ಬೆಳ್ತಂಗಡಿ ತಾಲೂಕಿಗೆ ಸಂಚಾರಿ ಪಶು ಚಿಕಿತ್ಸಾ ಘಟಕ ಮಂಜೂರಾಗಿದ್ದು, ಕಾರ‍್ಯಾರಂಭ ಮಾಡಿದೆ ಎಂದು ಸಹಾಯಕ ನಿರ್ದೇಶಕ ಡಾ| ರತ್ನಾಕರ ಮಲ್ಯ ತಿಳಿಸಿದರು.
ಸಮಾಜ ಕಲ್ಯಾಣ, ಅರಣ್ಯ, ಸಾಮಾಜಿಕ ಅರಣ್ಯ, ಅಕ್ಷರ ದಾಸೋಹ, ರೇಷ್ಮೆ ಮೊದಲಾದ ಇಲಾಖೆಯ ಅಧಿಕಾರಿಗಳು ತಮ್ಮ ಇಲಾಖಾ ಪ್ರಗತಿಯನ್ನು ನೀಡಿದರು. ತಾಲೂಕು ಸಂಯೋಜಕ ಜಯಾನಂದ ವಂದಿಸಿದರು.

12

hallingeri belaku copyಕೊಕ್ಕಡ : ಕೊಕ್ಕಡ ಗ್ರಾಮದ ಹಳ್ಳಿಂಗೇರಿ ಪ್ರದೇಶದ ಜನರ ಕಳೆದ 15 ವರ್ಷಗಳ ಬೇಡಿಕೆಯಾದ ಪ್ರತ್ಯೇಕ ವಿದ್ಯುತ್ ಟಿಸಿ ನಿರ್ಮಿಸಿ ವಿದ್ಯುತ್ ಸಮಸ್ಯೆ ನೀಗಿಸಬೇಕೆಂಬುದಾಗಿತ್ತು. ಕೇವಲ ಬಲ್ಬಿನ ಒಳಗಿನ ವಯರಷ್ಟೇ ಕೆಂಪಾಗಿ ಉರಿಯುವಷ್ಟು ಮಾತ್ರ ವಿದ್ಯುತ್ ಸಿಗುತ್ತಿತ್ತು. ನಿವಾಸಿಗಳು ಬಿಲ್ಲು ಕಟ್ಟುವ ಗ್ರಾಹಕರಷ್ಟೇ ಆಗಿದ್ದರು. ಈ ಜನರ ಸಮಸ್ಯೆ ಕೊನೆಗೂ ಕರ್ನಾಟಕ ಪ್ರಾಂತ ಸಂಘ ಬೆಳ್ತಂಗಡಿ ತಾಲೂಕು ಸಮಿತಿ ನೇತೃತ್ವದ ಹೋರಾಟದ ಮೂಲಕ ನೆರವೇರಿತು ಎಂಬುದು ಸಂತೋಷದ ವಿಚಾರವಾಗಿದೆ ಎಂದು ಪ್ರಾಂತ ರೈತ ಸಂಘದ ತಾಲೂಕು ಮುಖಂಡರೂ, ಪಟ್ರಮೆ ಗ್ರಾಮ ಪಂಚಾಯತು ಸದಸ್ಯರೂ ಆದ ಶ್ಯಾಮರಾಜ್ ಹೇಳಿದರು.
ಅವರು ಮೆಸ್ಕಾಂ ಇಲಾಖೆಯು ಹೋರಾಟದ ಮೂಲಕ ನಿರ್ಮಾಣವಾದ ಹೊಸ ಟಿಸಿಗೆ ವಿದ್ಯುತ್ ಸಂಪರ್ಕ ಒದಗಿಸಿದ ಸಂದರ್ಭ ಸೇರಿದ ಜನರನ್ನುದ್ದೇಶಿಸಿ ಮಾತಾಡುತ್ತಿದ್ದರು. ಗೆದ್ದಿರುವ ರಾಜಕೀಯ ಪಕ್ಷಗಳೂ ಚುನಾವಣೆ ಸಮಯ ಬಂದು ಈ ಸಮಸ್ಯೆಯನ್ನು ಬಗೆಹರಿಸುತ್ತೇವೆಂದು ಸುಳ್ಳು ಭರವಸೆಯನ್ನಷ್ಟೇ ನೀಡಿ ಮತ ಪಡೆದುಗೆದ್ದ ಬಳಿಕ ತಿರುಗಿಯೂ ನೋಡುತ್ತಿರಲಿಲ್ಲ ಎಂಬುದೇ ಈ ಭಾಗದಜನರ ನೋವಾಗಿತ್ತು. ಕೊನೆಗೆ ಇಲ್ಲಿಯ ನಿವಾಸಿಗಳು ತಮ್ಮ ಬೇಡಿಕೆ ಈಡೇರಿಕೆಗಾಗಿ ರೈತ ಮುಖಂಡರಾದ ಬಿ.ಎಂ.ಭಟ್ ಅವರನ್ನು ಕಳೆದ 2017 ಫೆಬ್ರವರಿಯಲ್ಲಿ ಸಂಪರ್ಕಿಸಿ ಬೇಡಿಕೆ ಈಡೇರಿಸಲು ವಿನಂತಿಸಿದರು. ಈ ಬಗ್ಗೆ ತಕ್ಷಣ ಸ್ಪಂದಿಸಿದ ಅವರು ಹಳ್ಳಿಂಗೇರಿಯಲ್ಲಿ ಸಮುದಾಯ ಸಮಿತಿಯೊಂದನ್ನು ರಚಿಸಿ ಜನರನ್ನು ಹೋರಾಟಕ್ಕೆ ಇಳಿಸಿದ್ದರ ಪರಿಣಾಮವೇ ಕೇವಲ 2 ತಿಂಗಳಲ್ಲಿ ಇಂದಿನ ಈ ಬೆಳಕು ಮೂಡಲು ಕಾರಣವಾಗಿದೆ ಎಂದರು. ಕಳೆದ ಮಾರ್ಚಲ್ಲಿ ತಾಲೂಕು ಕೇಂದ್ರದಲ್ಲಿ ನಡೆದ ಹೋರಾಟಕ್ಕೆ ಸ್ಪಂದಿಸಿದ ಮೆಸ್ಕಾಂ ಇಲಾಖೆ ಎಪ್ರೀಲ್ ತಿಂಗಳ ಒಳಗೆ ನೂತನ ಟಿಸಿ ನಿರ್ಮಿಸಿ ಜನರ ಸಂಕಷ್ಟವನ್ನು ನೀಗಿಸುವುದಾಗಿ ಹೇಳಿದ್ದರು. ಕೊಟ್ಟ ಮಾತಿನಂತೆ ಇಂದು ಈ ಶುಭಗಳಿಗೆ ಬಂದಿದೆ, ಈ ಹೋರಾಟದ ಸ್ಪೂರ್ತಿಯನ್ನು ಇನ್ನಷ್ಟು ಬಲಗೊಳಿಸಿ, ವಿಸ್ತರಿಸಬೇಕೆಂದು ಆ ಮೂಲಕ ಇನ್ನಷ್ಟು ಅಭಿವೃದ್ದಿಗಳಾಗಲು ಕಾರಣರಾಗಬೇಕೆಂದು ಅವರು ಜನರಿಗೆ ಕರೆ ನೀಡಿದರು. ಈ ಸಂದರ್ಭದಲ್ಲಿ ನಡೆದ ಹೋರಾಟದ ಸಮಯ ಪಟ್ರಮೆ ಗ್ರಾಮದ ಉಳಿಯ ಎಂಬಲ್ಲಿಗೂ ಪ್ರತ್ಯೇಕ ಟಿಸಿ ನಿರ್ಮಾಣಕ್ಕೆ ಮನವಿ ನೀಡಲಾಗಿದ್ದು, ಇದರ ಜೊತೆ ಉಳಿಯ ಟಿಸಿಗೂ ಇಂದು ಸಂಪರ್ಕ ಸಿಕ್ಕಿದೆ ಎಂದವರು ಹೇಳಿದರು.
ಹಳ್ಳಿಂಗೇರಿಯ ಸಮುದಾಯ ಸಮಿತಿಯ ಗೌರವಾದ್ಯಕ್ಷ ಯೂಸ್‌ಪ್ ಮಾತನಾಡಿ ಈ ಪ್ರದೇಶದ ಕತ್ತಲೆ ನೀಗಿಸಿ ಬೆಳಕು ಹರಿಸಲು ಕಾರಣರಾದ ನಮ್ಮ ನಾಯಕರಾದ ಬಿ.ಎಂ.ಭಟ್, ಶ್ಯಾಮರಾಜ, ರೈತ ಮುಖಂಡರಾದ ಮಹಮ್ಮದ್ ಅನಸ್, ಡಿ.ವೈ.ಎಫ್.ಐ. ತಾಲೂಕು ಅಧ್ಯಕ್ಷ ಧನಂಜಯ ಗೌಡ ಮೊದಲಾದವರನ್ನೂ ಮತ್ತು ಬೆಳಕಿನ ದಾರಿತೋರಿಸಿದ ಕರ್ನಾಟಕ ಪ್ರಾಂತ ರೈತ ಸಂಘವನ್ನೂ ಈ ಪ್ರದೇಶದ ಜನ ಎಂದಿಗೂ ಮರೆಯುವುದಿಲ್ಲ ಎಂದರು. ಸಮುದಾಯ ಸಮಿತಿಯ ಅಧ್ಯಕ್ಷ ಇಸ್ಮಾಯಿಲ್, ಹಳ್ಳಿಂಗೇರಿ ಪ್ರದೇಶದ ನೀರಿನ ಸಮಸ್ಯೆ, ರಸ್ತೆ ಸಮಸ್ಯೆಗಳನ್ನೂ ನಿವೇಶನ ಸಮಸ್ಯೆಗಳನ್ನೂ, ಹೋರಾಟದ ಮೂಲಕ ಬಗೆಹರಿಸಲು ಮುಂದಾಗೋಣ ಎಂದರು.
ಈ ಸಂದಭ ಮೆಸ್ಕಾಂನ ಧರ್ಮಸ್ಥಳ ಜೆ.ಇ., ಲೈನ್‌ಮೇನ್ ರವಿ, ಸ್ಥಳೀಯ ಸಮುದಾಯ ಸಮಿತಿಯ ಮುಖಂಡರುಗಳಾದ ಚಂದ್ರ, ಶ್ರೀಮತಿ ಗೀತಾ ಹೇಮಂತ್, ಖಾಲಿದ್ ಮತ್ತು ಕಣ್ಣನ್ ಮೊದಲಾದವರು ಉಪಸ್ಥಿತರಿದ್ದರು.

Shalini prathistana laila copyಲಾಯಿಲ : ಶಾಲಿನಿ ಸೇವಾ ಪ್ರತಿಷ್ಠಾನ ಲಾಯಿಲ, ಬೆಳ್ತಂಗಡಿ ಇದರ ವತಿಯಿಂದ ದಿ| ಶಾಲಿನಿ ಅವರ ಪುಣ್ಯಸ್ಮರಣೆ ಹಾಗೂ ಶಾಲಿನಿ ಸೇವಾ ಪ್ರತಿಷ್ಠಾನದ 2ನೇ ವರ್ಷದ ಸೇವಾ ಕಾರ್ಯಕ್ರಮ ಮೇ 5ರಂದು ಲಾಯಿಲ ಶ್ರೀ ಗುರು ರಾಘವೇಂದ್ರ ಮಠದ ಸಭಾಂಗಣದಲ್ಲಿ ಜರುಗಿತು.
ಶೈಕ್ಷಣಿಕ ಕಾರ್ಯಕ್ರಮದ ಅಂಗವಾಗಿ ಶಾಲಿನಿ ಸೇವಾ ಟ್ರಸ್ಟ್‌ನಿಂದ ದತ್ತು ಸ್ವೀಕರಿಸಿದ ವಿದ್ಯಾರ್ಥಿನಿ ನಿಶಾ ಶೆಟ್ಟಿಯವರಿಗೆ ಅವರ ವಿದ್ಯಾಭ್ಯಾಸದ ಖರ್ಚಿನ ಹಸ್ತಾಂತರ, ವಿದ್ಯಾರ್ಥಿನಿಯರಾದ ಕು| ಚೈತ್ರಾ ಮತ್ತು ಕು| ಅರ್ಚನಾ ಇವರಿಗೆ ವಿದ್ಯಾನಿಧಿ ವಿತರಣೆ, ಸೀತಾರಾಮ ಶೆಟ್ಟಿ ಸೋಣಂದೂರು ಇವರಿಗೆ ಕ್ಷೇಮ ನಿಧಿ ವಿತರಣೆ ಮಾಡಲಾಯಿತು. ಸಾಧಕರ ಸನ್ಮಾನ ಕಾರ್ಯಕ್ರಮದಲ್ಲಿ ಹಿರಿಯ ಆಯುರ್ವೇದ ವೈದ್ಯ ಡಾ| ಕೆ.ಜಿ. ಪಣಿಕ್ಕರ್, ಉದಯವಾಣಿ ಪತ್ರಿಕೆ ವರದಿಗಾರ ಲಕ್ಷ್ಮೀ ಮಚ್ಚಿನ, ಯುವ ಯಕ್ಷಗಾನ ಕಲಾವಿದ ಗಣೇಶ್ ಶೆಟ್ಟಿ ಕನ್ನಡಿಕಟ್ಟೆ ಇವರನ್ನು ಶಾಲು ಹೊದಿಸಿ, ಸ್ಮರಣಿಕೆ ನೀಡಿ ಗೌರವಿಸಲಾಯಿತು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಶ್ರೀ ಕ್ಷೇತ್ರ ನಂದಿಬೆಟ್ಟ ಗರ್ಡಾಡಿ ಇದರ ಆಡಳಿತ ಮೊಕ್ತೇಸರ ಜಯರಾಮ ಶೆಟ್ಟಿ ಸೂರಜ್ ಫಾರ್ಮ್ಸ್ ಅವರು ಮಾತನಾಡಿ, ಪರಸ್ಪರ ವಿಶ್ವಾಸವೇ ಈ ಕಾರ್ಯಕ್ರಮಕ್ಕೆ ಸಾಕ್ಷಿಯಾಗಿದ್ದು, ತನ್ನ ಕಷ್ಟವನ್ನು ಮರೆಯಲು ತಾರಾನಾಥ ಶೆಟ್ಟಿಯವರು ಶಾಲಿನಿ ಸೇವಾ ಪ್ರತಿಷ್ಠಾನ ಸ್ಥಾಪಿಸಿ, ಇದರ ಮೂಲಕ ಸಮಾಜ ಸೇವಾ ಚಟುವಟಿಕೆಗಳನ್ನು ಮಾಡುತ್ತಿ ದ್ದಾರೆ, ತಾನು ದುಡಿದ ಸಂಪಾದನೆಯಲ್ಲಿ ಸ್ವಲ್ಪ ಅಂಶವನ್ನು ಸಮಾಜಕ್ಕೆ ನೀಡುವ ತಾರಾನಾಥ ಶೆಟ್ಟಿಯವರ ಕಾರ್ಯ ಶ್ಲಾಘನೀಯ ಎಂದು ತಿಳಿಸಿದರು. ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದ ಶ್ರೀ ರಾಘವೇಂದ್ರ ಸೇವಾ ಪ್ರತಿಷ್ಠಾನದ ಗೌರವಾಧ್ಯಕ್ಷ, ನಿವೃತ್ತ ಎಸ್.ಪಿ. ಪೀತಾಂಬರ ಹೆರಾಜೆಯವರು ಮಾತನಾಡಿ, ಶಾಲಿಯವರ ನೆನಪು ಹೃದಯದಲ್ಲಿ ಇರಬೇಕು ಮತ್ತು ಸಮಾಜದಲ್ಲಿ ಶಾಶ್ವತವಾಗಿ ಉಳಿಯಬೇಕು ಎಂಬ ನಿಟ್ಟಿನಲ್ಲಿ ಅವರ ಹೆಸರಿನಲ್ಲಿ ಪ್ರತಿಷ್ಠಾನ ಸ್ಥಾಪಿಸಿ, ಶೈಕ್ಷಣಿಕ, ವೈದ್ಯಕೀಯ ಮತ್ತು ಸಮಾಜದಲ್ಲಿ ಸಾಧಕರನ್ನು ಗುರುತಿಸುವ ಕಾರ್ಯ ಮಾಡುತ್ತಿದ್ದಾರೆ ಇದು ಇನ್ನು ಮುಂದುವರಿಯಲಿ ಎಂದು ಹಾರೈಸಿದರು. ಮುಖ್ಯ ಅತಿಥಿ ಲಾಯಿಲ ಗ್ರಾ.ಪಂ. ಉಪಾಧ್ಯಕ್ಷ ಗಿರೀಶ್ ಡೋಂಗ್ರೆ ಅವರು ಮಾತನಾಡಿ, ಶಾಲಿನಿ ಸೇವಾ ಪ್ರತಿಷ್ಠಾನ ಮಾಡುತ್ತಿರುವ ಉತ್ತಮ ಕಾರ್ಯಕ್ರಮಕ್ಕೆ ತನ್ನ ಗ್ರಾ.ಪಂ.ದ ಆರು ತಿಂಗಳ ಗೌರವ ಧನವನ್ನು ನೀಡುವುದಾಗಿ ಘೋಷಿಸಿದರು. ಮಡಂತ್ಯಾರು-ಪುಂಜಾಲಕಟ್ಟೆ ವರ್ತಕರ ಸಂಘದ ಅಧ್ಯಕ್ಷ ಜಯಂತ ಶೆಟ್ಟಿ ಮಡಂತ್ಯಾರು, ಶ್ರೀ ದುರ್ಗಾ ವುಡ್ ಇಂಡಸ್ಟ್ರೀಸ್ ಮಡಂತ್ಯಾರಿನ ಉಮೇಶ್ ಶೆಟ್ಟಿ, ಬೆಳ್ತಂಗಡಿ ಪತ್ರಕರ್ತರ ಸಂಘದ ಅಧ್ಯಕ್ಷ ದೇವಿಪ್ರಸಾದ್, ಪಾರೆಂಕಿ ಮಹಿಷ ಮರ್ದಿನಿ ದೇವಸ್ಥಾನದ ಶ್ರೀಧರ ರಾವ್, ಹಿರಿಯರಾದ ಚಿತ್ತರಂಜನ್ ಶೆಟ್ಟಿ ಮಾತನಾಡಿ ಶಾಲಿನಿ ಸೇವಾ ಪ್ರತಿಷ್ಠಾನ ದಿಂದ ಮಾಡುತ್ತಿರುವ ಸಮಾಜ ಮುಖಿ ಕಾರ್ಯಕ್ರಮಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದರು. ಬಿಜೆಪಿ ಯುವಮೋರ್ಚಾದ ದ.ಕ. ಜಿಲ್ಲಾ ಅಧ್ಯಕ್ಷ ಹರೀಶ್ ಪೂಂಜ, ಜನಾರ್ದನ ಶೆಟ್ಟಿ ಪೆಂರ್ದಿಲೆ ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಕಾರ್ಯಕ್ರಮದಲ್ಲಿ ಪ್ರತಿಷ್ಠಾನದ ಪದಾಧಿಕಾರಿಗಳಾದ ನಿರಂಜನ್ ಶೆಟ್ಟಿ, ಸುರೇಶ್ ಶೆಟ್ಟಿ, ಕು| ಜಯಶ್ರೀ ಇವರನ್ನು ಗೌರವಿಸಲಾಯಿತು. ಸನ್ಮಾನಿತರ ಪರವಾಗಿ ಡಾ. ಕೆ.ಜಿ. ಪಣಿಕ್ಕರ್ ಅನಿಸಿಕೆ ವ್ಯಕ್ತಪಡಿಸಿದರು. ಪ್ರತಿಷ್ಠಾನದ ಅಧ್ಯಕ್ಷ ತಾರಾನಾಥ ಶೆಟ್ಟಿ ಸ್ವಾಗತಿಸಿದರು. ಉಪನ್ಯಾಸಕಿ ಕು| ಜಯಶ್ರೀ ವರದಿ ವಾಚಿಸಿದರು. ತೇಜಾಕ್ಷಿ, ಜಯಲಕ್ಷ್ಮೀ, ದಿವ್ಯಾಶ್ರೀ ಸನ್ಮಾನಿತರನ್ನು ಪರಿಚಯಿಸಿದರು. ಉಪನ್ಯಾಸಕ ಶಿವರಾಜ್ ಗಟ್ಟಿ ಕಕ್ಕೆಪದವು ಕಾರ್ಯಕ್ರಮ ನಿರೂಪಿಸಿ, ಪ್ರತಿಷ್ಠಾನದ ಪ್ರಧಾನ ಕಾರ್ಯದರ್ಶಿ ಸುರೇಶ್ ಶೆಟ್ಟಿ ಧನ್ಯವಾದವಿತ್ತರು.
ಸಾಂಸ್ಕೃತಿಕ ಕಾರ್ಯಕ್ರಮ: ಸಂಜೆ 6 ರಿಂದ ಲಾಯಿಲದ ಮನಿಷಾ ಮತ್ತು ಮಾನಸ ಸಹೋದರಿಯರಿಂದ ಭರತ ನಾಟ್ಯ ಹಾಗೂ ರಾತ್ರಿ 9.30ರಿಂದ ಲ| ಕಿಶೋರ್ ಡಿ. ಶೆಟ್ಟಿಯವರ ನೇತೃತ್ವದಲ್ಲಿ ಶ್ರೀ ಲಲಿತ ಕಲಾವಿದರಿಂದ ಶ್ರೀ ಕಟೀಲ್ದಪ್ಪೆ ಉಳಾಳ್ತಿ ಎಂಬ ಪೌರಣಿಕ ನಾಟಕ ವಿನೂತನ ರಂಗ ಸಂಯೋಜನೆಗಳೊಂದಿಗೆ ಪ್ರದರ್ಶನಗೊಂಡಿತು.

Prasad copyಅಂಡಿಂಜೆ ಗ್ರಾಮದ ನವಜ್ಯೋತಿ ಮನೆ ಪಿಜಿನ ಪೂಜಾರಿಯವರ ಪುತ್ರ ಪ್ರಸಾದ್‌ರವರ ವಿವಾಹವು ಕೊಳಕ್ಕೆ ಬೈಲು ದಿ. ವಸಂತ ಪೂಜಾರಿ ಯವರ ಪುತ್ರಿ ಅಕ್ಷತಾರೊಂದಿಗೆ ಕೊಕ್ರಾಡಿ ಬ್ರಹ್ಮಶ್ರೀ ಗುರುನಾರಾಯಣ ಸ್ವಾಮಿ ಸೇವಾ ಸಂಘದಲ್ಲಿ ಮೇ 7 ರಂದು ಜರಗಿತು.

dinesh sumana copyಪುಂಜಾಲಕಟ್ಟೆ: ಅಜ್ಜಿಬೆಟ್ಟು ಗ್ರಾಮದ ಮುಂಡಾಲಬೆಟ್ಟು ಶ್ರೀ ಸಾನಿಧ್ಯ ಮನೆಯ ಶ್ರೀಮತಿ ಬೇಬಿ ಮತ್ತು ಕೃಷ್ಣ ಬಂಗೇರರ ಪುತ್ರ ದಿನೇಶ್‌ರವರ ವಿವಾಹವು ಹಿರೇಭಂಡಾಡಿ ಗ್ರಾಮದ ಅಡೆಕಲ್ ಲೋಕೇಶ್ ಮಡಿವಾಳರವರ ಪುತ್ರಿ ಸುಮನರೊಂದಿಗೆ ಮೂಡಬಿದಿರೆ ಸಮಾಜ ಮಂದಿರದಲ್ಲಿ ಮೇ 7ರಂದು ಜರುಗಿತು.

adike uthpanna adyana copyಉಜಿರೆ : ನಿವೇದನ್ ಎಂಬಾತ ಎಆರ್‌ಡಿಎಫ್ ಸಹಕಾರದೊಂದಿಗೆ ಅಡಿಕೆ ಚಹಾ ಉತ್ಪಾದನೆ ಶೋಧಿಸಿ ಜನಪ್ರಿಯವಾಗಿದ್ದು ಇತರ ಪರ್ಯಾಯ ಉತ್ಪನ್ನಗಳ ತಯಾರಿಗೆ ಮುಂದಾಗಿದ್ದಾರೆ. ಅಂತೆಯೇ ವಿಜ್ಞಾನಿಗಳು, ಕೃಷಿಕರು ಹಾಗೂ ವಿದ್ಯಾರ್ಥಿಗಳು ಅಡಿಕೆಯ ಪರ್ಯಾಯ ಉತ್ಪನ್ನಗಳ ಅಧ್ಯಯನ, ಸಂಶೋದನೆ ನಡೆಸಿ, ಉದ್ಯಮಶೀಲರಾಗಿ ದೇಶದ ಅಭಿವೃದ್ಧಿಗೆ ಕಾರಣರಾಗಬೇಕೆಂದು ಧರ್ಮಸ್ಥಳ ಧರ್ಮಾಧಿಕಾರಿ, ಎಆರ್‌ಡಿಎಫ್ ಅಧ್ಯಕ್ಷ ಡಾ| ಡಿ. ವೀರೇಂದ್ರ ಹೆಗ್ಗಡೆ ನುಡಿದರು
ಅವರು ಮೇ. 9ರಂದು ಉಜಿರೆಯ ಶ್ರೀ.ಧ.ಮಂ ತಾಂತ್ರಿಕ ಮಹಾವಿದ್ಯಾಲಯದಲ್ಲಿ ಕಾಲೇಜು ಮತ್ತು ಮಂಗಳೂರಿನ ಅರಕನಟ್ ರಿಸರ್ಚ್ ಎಂಡ್ ಡೆವಲಪ್‌ಮೆಂಟ್ ಪೌಂಡೇಶನ್(ಎಆರ್‌ಡಿಎಫ್) ಸಹಕಾರ ಹಾಗೂ ಕ್ಯಾಂಪ್ಕೋ ಸಹಯೋಗದೊಂದಿಗೆ ನಡೆದ ಒಂದು ದಿನದ ಉದ್ಯಮಾಭಿವೃದ್ಧಿ ಮತ್ತು ಅಡಿಕೆ ಉದ್ಯಮದಲ್ಲಿ ಅವಕಾಶಗಳು ಕುರಿತಾದ ವಿಚಾರ ಸಂಕಿರಣ ಉದ್ಘಾಟಿಸಿ ಮಾತನಾಡುತ್ತಿದ್ದರು. ಅಡಿಕೆ ಮರಕ್ಕೆ ರಾಸಾಯನಿಕ ಸಿಂಪಡಿಸಲು ಡ್ರೋನ್ ಬಳಸಿ ಯಶಸ್ವಿಯಾದಂತೆ ಅಡಿಕೆ ಮತ್ತು ಅದರ ಉತ್ಪನ್ನಗಳ ಬಗ್ಗೆ ವಿಜ್ಞಾನಿಗಳು ಹಾಗೂ ಕೃಷಿಕರು ಹೊಸ ಹೊಸ ಸಂಶೋಧನೆ ನಡೆಸುವ ಮೂಲಕ ಅಡಿಕೆ ಮಾರುಕಟ್ಟೆಗೆ ಹೊಸ ಕಾಯಕಲ್ಪ ನೀಡಿದಲ್ಲಿ ಅಡಿಕೆ ಕೃಷಿಕರು ಧಾರಣೆಯ ಏರುಪೇರಿನಲ್ಲಿ ಧೃತಿಗೆಡಬೇಕಾಗಿಲ್ಲ, ಅಡಿಕೆಯೂ ಬಡ ಕೃಷಿಕನ ಕೈ ಹಿಡಿದು ದೇಶದ ಅಭಿವೃದ್ಧಿಯಲ್ಲಿ ಮಹತ್ವದ ಪಾತ್ರ ವಹಿಸಬಲ್ಲರೆಂದು ನುಡಿದರು.
ಮುಖ್ಯ ಅತಿಥಿ ಕ್ಯಾಂಪ್ಕೋ ಅಧ್ಯಕ್ಷ ಎಸ್.ಆರ್ ಸತೀಶ್ಚಂದ್ರ ನಮ್ಮದು ಋಷಿ ಸಂಸ್ಕೃತಿ ಮತ್ತು ಕೃಷಿ ಸಂಸ್ಕೃತಿಯನ್ನು ಒಪ್ಪಿಕೊಂಡ ದೇಶ. ಕರಾವಳಿಯ ಜೀವನಾಡಿ ಅಡಿಕೆ. ಅದು ನಮಗೆ ಸ್ವಾವಲಂಬಿ ಯಾಗಿ ಬದುಕಲು ಅವಕಾಶ ಮಾಡಿ ಕೊಟ್ಟಿದೆ. ಅದು ಜಿಲ್ಲೆಯ ಸಹಕಾರ ಕ್ಷೇತ್ರ ಹಾಗೂ ವೈಜ್ಞಾನಿಕ ಅನುಭವದಿಂದ ಸಾಧ್ಯವಾಗಿದೆ. ಅಡಿಕೆಯಿಂದ ಇದುವರೆಗೆ ಸುಮಾರು 30 ಪರ್ಯಾಯ ಉತ್ಪನ್ನಗಳನ್ನು ತಯಾರಿಸಲು ಸಾಧ್ಯವಾಗಿದ್ದು, ವೈದ್ಯಕೀಯ ಗುಣ ಹಾಗೂ ಉತ್ತಮ ಅಂಶಗಳನ್ನೊಗೊಂಡ ಅಡಿಕೆಯಿಂದ ಮತ್ತಷ್ಟು ಹೊಸ ಉತ್ಪನ್ನಗಳ ತಯಾರಿಗೆ ಯುವಕರು ಮುಂದೆ ಬರಬೇಕೆಂದರು. ಕಾಲೇಜು ಪ್ರಾಚಾರ್ಯ ಡಾ| ಕೆ. ಸುರೇಶ್ ಅಧ್ಯಕ್ಷತೆ ವಹಿಸಿದ್ದರು. ವೇದಿಕೆಯಲ್ಲಿ ಕಾಸರಗೋಡು ಸಿಪಿಸಿಆರ್‌ಐ ನಿರ್ದೇಶಕ ಡಾ| ಪಿ. ಚೌಡಪ್ಪ, ಎಆರ್‌ಡಿಎಫ್ ಕಾರ್ಯನಿರ್ವಾಹಣಾಧಿಕಾರಿ ಡಾ| ಕೇಶವ ಭಟ್, ಅಖಿಲ ಭಾರತ ಅಡಿಕೆ ಬೆಳೆಗಾರರ ಸಂಘದ ಅಧ್ಯಕ್ಷ ಮಂಚಿ ಶ್ರೀನಿವಾಸ್ ಆಚಾರ್ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಪ್ರೋ. ಮಹೇಶ್ ಎಂ, ಪ್ರೋ. ಎಚ್ ಮನೋಜ್ ಗಡಿಯಾರ್ ಮುಖ್ಯ ಅತಿಥಿಗಳನ್ನು ಪರಿಚಯಿಸಿದರು. ಪ್ರೋ. ಬಸವರಾಜ ಪಾಟೀಲ್ ನಿರೂಪಿಸಿದ ಕಾರ್ಯಕ್ರಮದಲ್ಲಿ ಡಾ| ಬಸವ ಡಿ ಸ್ವಾಗತಿಸಿ, ಪ್ರೋ ಅವಿನಾಶ್ ವಂದಿಸಿದರು. ಇಡೀ ದಿನ ನಡೆದ ವಿಚಾರ ಸಂಕೀರ್ಣದಲ್ಲಿ ತಜ್ಞ ಕೃಷಿಕರು, ವಿಜ್ಞಾನಿಗಳು ತಮ್ಮ ಅನುಭವಗಳು ಹಾಗೂ ಸಾಧ್ಯತೆಗಳ ಬಗೆಗೆ ಉಪನ್ಯಾಸ ನೀಡಿದರು. ಅಡಿಕೆ ಉತ್ಪನ್ನ ಹಾಗೂ ಕ್ಯಾಂಪ್ಕೋ ಉತ್ಪನ್ನಗಳ ಪ್ರದರ್ಶನ ಏರ್ಪಡಿಸಲಾಗಿತ್ತು.

hosapatna rangamandira lokarpane copyಬಜಿರೆ: ಶ್ರೀ ಸತ್ಯನಾರಾಯಣ ಪೂಜಾ ಸೇವಾ ಸಮಿತಿ ಹೊಸಪಟ್ಣ-ಬಜಿರೆ ಹಾಗೂ ಶ್ರೀ ಸತ್ಯನಾರಾಯಣ ರಂಗಮಂದಿರ ನಿರ್ಮಾಣ ಸಮಿತಿ ಹಾಗೂ ಶ್ರೀ ಸತ್ಯನಾರಾಯಣ ಫ್ರೆಂಡ್ಸ್ ಕ್ಲಬ್ ಆಶ್ರಯದಲ್ಲಿ ಶ್ರೀ ಸತ್ಯನಾರಾಯಣ ಭಜನಾ ಮಂಡಳಿ ಸಹಕಾರದೊಂದಿಗೆ ೩೮ನೇ ವರ್ಷದ ಸಾಮೂಹಿಕ ಶ್ರೀ ಸತ್ಯನಾರಾಯಣ ಪೂಜೆ, ನೂತನ ರಂಗಮಂದಿರದ ಉದ್ಘಾಟನಾ ಸಮಾರಂಭ, ವಿವಿಧ ಕ್ಷೇತ್ರಗಳ ಸಾಧಕರ ಸನ್ಮಾನ ಕಾರ್ಯಕ್ರಮವು ಮೇ. 3 ರಂದು ವಿವಿಧ ಧಾರ್ಮಿಕ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳೊಂದಿಗೆ ಜರಗಿ ಸಂಪನ್ನಗೊಂಡಿತು.
ನೂತನ ರಂಗಮಂದಿರದ ಲೋಕಾರ್ಪಣೆಯನ್ನು ಪೆರಿಂಜೆ ಶ್ರೀ ಕ್ಷೇತ್ರ ಪಡ್ಡ್ಯಾರಬೆಟ್ಟದ ಧರ್ಮದರ್ಶಿ ಎ. ಜೀವಂಧರ ಕುಮಾರ್ ಅವರು ನೆರವೇರಿಸಿ ಶುಭ ಹಾರೈಸಿದರು. ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದ ಅಳದಂಗಡಿ ಶ್ರೀ ಸತ್ಯದೇವತೆ ದೈವಸ್ಥಾನದ ಆಡಳಿತದಾರ ಶಿವಪ್ರಸಾದ್ ಅಜಿಲರು ಮಾತನಾಡಿ, ಸಮಾಜಕ್ಕೆ ಇಲ್ಲಿನ ಯುವಕರು ಶಾಶ್ವತ ಕೊಡುಗೆ ನೀಡಿದ್ದಾರೆ. ಜಾತಿ, ಮತ, ಬೇಧವಿಲ್ಲದೆ ಒಗ್ಗಟ್ಟಾಗಿ ನಿರ್ಮಾಣ ಮಾಡಿದ ರಂಗಮಂದಿರ ಬಡ ಜನತೆಗೆ ಉಪಯೋಗವಾಗುವಂತಾಗಲಿ ಎಂದರು.
ದ.ಕ. ಜಿಲ್ಲಾ ಯುವ ಮೋರ್ಚಾದ ಅಧ್ಯಕ್ಷ ಹರೀಶ್ ಪೂಂಜ ಮಾತನಾಡಿ, ಸಮಾಜಕ್ಕೆ ಪ್ರೇರಣೆ ನೀಡುವ ಕೆಲಸ ಇಲ್ಲಿ ನಡೆದಿದ್ದು, ಇವರ ಪ್ರಾಮಾಣಿಕ ಸೇವೆಗೆ ದೇವರ ಅನುಗ್ರಹ ಪ್ರಾಪ್ತಿಯಾಗಲಿದೆ ಎಂದರು.
ಸನ್ಮಾನ: ಶಿಕ್ಷಣ ಕ್ಷೇತ್ರದಲ್ಲಿ ಸಾಧನೆಗೈದ ವಿ. ಪ್ರಭಾಕರ ಹೆಗ್ಡೆ ಹಟ್ಟಾಜೆಗುತ್ತು, ಸಾಮಾಜಿಕ ಕ್ಷೇತ್ರದಲ್ಲಿ ಸಾಧನೆಗೈದಿರುವ ಡಾ| ವರದರಾಜ ಪೈ, ಹರೀಶ್ ಡಿ. ಪೂಜಾರಿ, ವಿಜಯ ಹೆಗ್ಡೆ, ರಮೇಶ್ ಪೂಜಾರಿ, ಭರತ್‌ರಾಜ್ ಪಾಪುದಡ್ಕಗುತ್ತು ಹಾಗೂ ಚೆನ್ನಪ್ಪ ಪೂಜಾರಿ ಬಜಿರೆಗುತ್ತು ಅವರನ್ನು ಸನ್ಮಾನಿಸಲಾಯಿತು.
ಶ್ರೀ ಸತ್ಯನಾರಾಯಣ ಪೂಜಾ ಸೇವಾ ಸಮಿತಿ ಕಾರ್ಯದರ್ಶಿ ಭಾಸ್ಕರ ಪೂಜಾರಿ ನಾಯರ‍್ಮೇರು ಪ್ರಾಸ್ತಾವಿಕವಾಗಿ ಮಾತನಾಡಿ, ಊರವರ ಹಾಗೂ ದಾನಿಗಳ ಸಹಕಾರದಿಂದ ಸುಸಜ್ಜಿತ ರಂಗಮಂದಿರ ನಿರ್ಮಾಣ ಮಾಡಲಾಗಿದೆ. ಮುಂದಿನ ಎರಡು, ಮೂರು ವರ್ಷದಲ್ಲಿ ಸಭಾಭವನ ಹಾಗೂ ಅನ್ನಛತ್ರದ ನಿರ್ಮಾಣ ಮಾಡುವ ಇರಾದೆ ಇದೆ ಎಂದರು.
ರಾಜ್ಯ ಅರಣ್ಯ ಸಚಿವ ಬಿ. ರಮಾನಾಥ ರೈ, ನಾರಾವಿ ಜಿ.ಪಂ. ಸದಸ್ಯ ಪಿ. ಧರಣೇಂದ್ರ ಕುಮಾರ್, ಅಳದಂಗಡಿ ಜಿ.ಪಂ. ಸದಸ್ಯ ಶೇಖರ ಕುಕ್ಕೇಡಿ, ಬೆಳಾಲು ಎಸ್‌ಡಿಎಂ ಪ್ರೌಢಶಾಲೆಯ ಮುಖ್ಯ ಶಿಕ್ಷಕ ರಾಮಕೃಷ್ಣ ಭಟ್ ಸಿ., ವೇಣೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಆಡಳಿತಾಧಿಕಾರಿ ಕೆ. ಜಯಕೀರ್ತಿ ಜೈನ್ ಧರ್ಮಸ್ಥಳ, ವೇಣೂರು ತಾ.ಪಂ. ಸದಸ್ಯ ಕೆ. ವಿಜಯ ಗೌಡ, ಪಿಲಾತ್ತಬೆಟ್ಟು ತಾ.ಪಂ. ಸದಸ್ಯ ರಮೇಶ್ ಕುಡ್ಮೇರು, ಪೂಜಾ ಸೇವಾ ಸಮಿತಿ ಗೌರವಾಧ್ಯಕ್ಷ ಪದ್ಮನಾಭ ರೈ ಬ್ರಾಣಿಗೇರಿ, ರಂಗಮಂದಿರ ನಿರ್ಮಾಣ ಸಮಿತಿ ಗೌರವಾಧ್ಯಕ್ಷ ಓಬಯ್ಯ ಪೂಜಾರಿ, ಅಧ್ಯಕ್ಷ ಕಿಶೋರ್ ಪೂಜಾರಿ ನಾಯರ್‌ಮೇರು, ಉಪಾಧ್ಯಕ್ಷ ಸತೀಶ್ ಹೆಗ್ಡೆ, ಪ್ರಧಾನ ಕಾರ್ಯದರ್ಶಿ ಮೋಹನ ಬಿ.ಸಿ. ಹಾಗೂ ಮತ್ತಿತರರು ಉಪಸ್ಥಿತರಿದ್ದರು. ಪೂಜಾ ಸೇವಾ ಸಮಿತಿ ಹಾಗೂ ರಂಗಮಂದಿರ ನಿರ್ಮಾಣ ಸಮಿತಿ ಪದಾಧಿಕಾರಿಗಳು ಸಹಕರಿಸಿದರು. ರಂಗಮಂದಿರ ನಿರ್ಮಾಣ ಸಮಿತಿ ಪ್ರಧಾನ ಸಂಚಾಲಕ ಗಣೇಶ್ ಪೂಜಾರಿ ಸ್ವಾಗತಿಸಿ ಪೂಜಾ ಸಮಿತಿ ಅಧ್ಯಕ್ಷ ಪ್ರವೀಣ್ ಕುಮಾರ್ ಜಾರಿಗೆದಡಿ ವಂದಿಸಿದರು. ಗೊಪಾಲ್ ಅಂಚನ್ ಕಾರ್ಯಕ್ರಮ ನಿರ್ವಹಿಸಿದರು. ಬೆಳಿಗ್ಗೆ ಸಾಮೂಹಿಕ ಶ್ರೀ ಸತ್ಯನಾರಾಯಣ ಪೂಜೆ ಹಾಗೂ ರಾತ್ರಿ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮ ಜರಗಿತು.

ನಮ್ಮ ಬಗ್ಗೆ

ಮೊದಲಿಗೆ ಕೇವಲ ಒಂದು ಹಾಳೆಯಲ್ಲಿ ಪ್ರಕಟವಾಗುತ್ತಿದ್ದ ಬೆಳ್ತಂಗಡಿ ತಾಲೂಕಿನ “ಸುದ್ದಿ ಬಿಡುಗಡೆ “ಪತ್ರಿಕೆ ಇಂದು ಪ್ರತಿದಿನ  22
.. ಮುಂದೆ ಓದಿ

ಸಲಹೆ- ಸೂಚನೆ

ನಿಮ್ಮ ಸಲಹೆ ಸೂಚನೆಗಳಿಗೆ ಹಾರ್ದಿಕ ಸ್ವಾಗತ

ಇಲ್ಲಿ ಕ್ಲಿಕ್ಕಿಸಿ

Copyright © 2017 Suddinews.com . All Rights Reserved.
^ Back to Top