Tue 16 Jan 2018, 6:55PM

468X60

ನಾಯ್ದಗುರಿ ಮಲೆಕುಡಿಯರ ಮನೆ ಧ್ವಂಸ ಪ್ರಕರಣ: ಆರ್‌ಐ ಸೇರಿ ೯ ಮಂದಿಯ ವಿರುದ್ಧ ಎಟ್ರಾಸಿಟಿ ಕ್ರಿಮಿನಲ್ ಕೇಸ್

Sunday, October 6th, 2013 | suddiblt | no responses

ಬೆಳ್ತಂಗಡಿ: ಸುಲ್ಕೇರಿ ಗ್ರಾಮದ ನಾಯ್ದಗುರಿ ಎಂಬಲ್ಲಿ ೨೦೧೧ ರಲ್ಲಿ ಸರಕಾರಿ ಜಾಗದಲ್ಲಿ ಜಿಲ್ಲಾಧಿಕಾರಿಗಳ ಭರವಸೆ ನಂಬಿ ಅಭಯಾರಣ್ಯ ತೊರೆದು ಇಲ್ಲಿ ಮನೆಮಾಡಿ ನೆಲೆಸಿದ್ದ ೫ ಮಂದಿ ಮಲೆಕುಡಿಯ ಕುಟುಂಬಸ್ತರ ಮನೆಧ್ವಂಸ ಮಾಡಿದ ಪ್ರಕರಣಕ್ಕೆ ಸಂಬಂಧಿಸಿ ಕಂದಾಯ ನಿರೀಕ್ಷಕ, ಗ್ರಾ. ಪಂ ಸದಸ್ಯರೂ ಸೇರಿದಂತೆ ಒಟ್ಟು ೯ ಮಂದಿಯ ವಿರುದ್ಧ ಜಿಲ್ಲಾ ಸೆಷನ್ಸ್ ನ್ಯಾಯಾಲಯ ಎಟ್ರಾಸಿಟಿ ಕೇಸು ದಾಖಲಿಸಿ ಆದೇಶ ನೀಡಿದೆ.
ಅಂದಿನ ಕಂದಾಯ ವೇಣೂರು ನಿರೀಕ್ಷಕರಾಗಿದ್ದ ನಾರಾಯಣ ಗೌಡ, ಕೊಕ್ರಾಡಿ ಗ್ರಾಮ ಕರಣಿಕ ಶಿವಕುಮಾರ್, ಜಗದೀಶ್ ಸುಲ್ಕೇರಿ, ಗ್ರಾಮ ಪಂಚಾಯಿತಿ ಸದಸ್ಯ ಸಂಜೀವ ಶೆಟ್ಟಿ, ಲೋಕಯ್ಯ ಪೂಜಾರಿ, ಆನಂದ ಪೂಜಾರಿ ಸುಲ್ಕೇರಿ, ವಾಸುದೇವ ರಾವ್, ಸೋಮಯ್ಯ ಮತ್ತು ದಯಾನಂದ ಶೆಟ್ಟಿ ವಿರುದ್ಧ ದಲಿತ ದೌರ್ಜನ್ಯ ತಡೆ ಕಾಯಿದೆಯಂತೆ ಜಾತಿನಿಂದನೆ, ಬೆದರಿಕೆ ಕ್ರಿಮಿನಲ್ ಕೇಸು ದಾಖಲಿಸಲು ನ್ಯಾಯಾಲಯ ಸೂಚನೆ ನೀಡಿದೆ.
ಬೆಳ್ತಂಗಡಿ, ಪುತ್ತೂರು, ಕುದುರೆಮುಖ ರಾಷ್ಟ್ರೀಯ ಉದ್ಯಾನವನ ವ್ಯಾಪ್ತಿಯಲ್ಲಿ ತಲೆತಲಾಂತರಗಳಿಂದ ವಾಸಿಸುತ್ತಾ ಕೃಷಿ ವಗೈರೆ ಚಟುವಟಿಕೆ ನಿರತರಾಗಿದ್ದ ಕುಟುಂಬಗಳನ್ನು ಸರಕಾರ ಸೂಕ್ತ ಪರಿಹಾರ ಯೋಜನೆಯಡಿ ಕಾಡುಬಿಟ್ಟು ಹೊರಬರುವಂತೆ ಸರಕಾರ ಒತ್ತಾಯಿಸುತ್ತಾ ಬಂದಿತ್ತು. ಅಲ್ಲದೆ ಹೀಗೆ ಕಾಡುಬಿಟ್ಟು ಬರುವ ಕುಟುಂಬಸ್ತರಿಗೆ ಸೂಕ್ತವಾಗಿ ಸರಕಾರಿ ಜಾಗವನ್ನೂ ಮಂಜೂರುಗೊಳಿಸುವುದಾಗಿ ಆಗಿನ ಜಿಲ್ಲಾಧಿಕಾರಿ ಡಾ ಪೊನ್ನುರಾಜ್ ಭರವಸೆಯನ್ನೂ ನೀಡಿದ್ದರು. ಅಂತೆಯೇ ನಾಯ್ದಗುರಿ ಎಂಬಲ್ಲಿ ಈ ೫ ಮಲೆಕುಡಿಯ ಕುಟುಂಬಗಳು ವಾಸವಾಗಿದ್ದುದನ್ನು ಸಮೀಪದ ಶ್ರೀಮಂತರು ಸರಕಾರಿ ಅಧಿಕಾರಿಗಳ ಮೇಲೆ ಒತ್ತಡ ತಂದು ಅವರನ್ನು ಇಲ್ಲಿಂದ ಒಕ್ಕಲೆಬ್ಬಿಸುವಲ್ಲಿ ಯಶಶ್ವಿಯಾಗಿದ್ದರು. ಕಂದಾಯ ಇಲಾಖಾ ಅಧಿಕಾರಿಗಳು ಮಲೆಕುಡಿಯರಾದ ಲಕ್ಷ್ಮಣ ಮಲೆಕುಡಿಯ, ರಾಮು ಮಲೆಕುಡಿಯ, ಹೊನ್ನಮ್ಮ ಮಲೆಕುಡಿಯ, ಚಂದು ಮಲೆಕುಡಿಯ ಮತ್ತು ವಸಂತಿ ಅವರಿಗೆ ಯಾವುದೇ ಪೂರ್ವ ಸೂಚನೆ, ನೋಟೀಸು ವಗೈರೆ ನೀಡದೆ ಏಕಾಏಕಿ ಬಂದು ಅವರ ಮನೆಗಳನ್ನು ನೆಲಸಮ ಮಾಡಿದ್ದರು. ದಿಕ್ಕೆಟ್ಟ ಕುಟುಂಬಗಳು ರಾತ್ರಿ ಇಡೀ ಮೇಲ್ಚಾವಣಿ ಇಲ್ಲದೆ, ಮಾನವ ಹಕ್ಕು ಉಲ್ಲಂಗನೆಗೊಳಗಾಗಿ ಅನ್ಯಾಯಕ್ಕೊಳಗಾಗಿದ್ದರು. ಬಳಿಕ ಈ ಬಗ್ಗೆ ಜಿಲ್ಲಾ ಕೇಂದ್ರದಲ್ಲೂ ಪ್ರತಿಭಟನೆಗಳು, ಮಾನವಹಕ್ಕು ಆಯೋಗದ ಅಧ್ಯಕ್ಷರು ಸೇರಿದಂತೆ ವಿವಿಧ ಸ್ತರದ ಕಂದಾಯ ಅಧಿಕಾರಿಗಳ ಬೇಟಿ ನಡೆದಿತ್ತು. ರಾಜಕಾರಣಿಗಳೂ ಬೇಟಿ ನೀಡಿ ಸಂದರ್ಭದ ಲಾಭ ಪಡೆಯಲು ಯತ್ನಿಸಿದ್ದರು. ಹೀಗಿರುವಂತೆಯೇ ಪ್ರಕರಣನ್ನು ತನಿಖೆ ನಡೆಸಿದ್ದ ಆಗಿನ ಪುತ್ತೂರು ಎಎಸ್‌ಪಿ ರೋಹಿಣಿ ಕಟ್ಟೋಚಿ ಅವರು, ಸರಕಾರಿ ಜಾಗ ಅತಿಕ್ರಮಣವಾಗಿರುವುದರಿಂದ ತೆರವು ನಡೆಸಲಾಗಿತ್ತು ಎಂದು ಮೇಲಧಿಕಾರಿಗಳಿಗೆ ವರದಿ ನೀಡಿದ್ದರು. ಅದಾಗ್ಯೂ ಪ್ರಕರಣದ ಬಗ್ಗೆ ನ್ಯಾಯವಾಗಿ ಪಿ ಪಿ ಹೆಗ್ಡೆ ಅವರು ಮಲೆಕುಡಿಯರ ಪರ ಸೆಷನ್ಸ್ ನ್ಯಾಯಾಲಯದಲ್ಲಿ ವಾದ ಮಂಡಿಸಿ, ದಲಿತರಿಗೆ ಔರ್ಜನ್ಯ ನಡೆಸಿದ ಬಗ್ಗೆ, ಜಾತಿನಿಂದನೆ ನಡೆಸಿದ ಬಗ್ಗೆ ದಾಖಲೆಗಳು ಇವೆ ಎಂದು ನ್ಯಾಯಾಧೀಶರಿಗೆ ಮನವರಿಕೆ ಮಾಡಿಕೊಟ್ಟಿದ್ದು ಆ ಹಿನ್ನಲೆಯಲ್ಲಿ ಪ್ರಕರಣದ ಆರೋಪಿಗಳ ವಿರುದ್ಧ ಕ್ರಮಕ್ಕೆ ನ್ಯಾಯಾಲಯ ಸೂಚನೆ ನೀಡಿದೆ. ಆರೋಪಿಗಳು ಈ ಸಂಬಂಧ ನ್ಯಾಯಾಲಯದಿಂದ ಜಾಮೀನು ಪಡೆದುಕೊಂಡಿದ್ದಾರೆ. ವಿಪರ್ಯಾಸ ವೆಂದರೆ, ನೆಲಸಮ ಮಾಡಲಾಗಿದ್ದ ದೌರ್ಜನ್ಯಪೀಡಿತ ಕುಟುಂಬಕ್ಕೆ ಇಂದಿಗೂ ಸರಕಾರ ಭೂಮಿ ಮಂಜೂರುಗೊಳಿಸದೆ ನಿಷ್ಕ್ರೀಯತೆ ತೋರಿದೆ.

Leave a Reply


ಸುಭಾಷಿತ

ಧರ್ಮಗಳು ಆನಂದಗೊಳಿಸುವಂತಹ ದ್ವೀಪಗಳು,  ಆತ್ಮ ಮತ್ತು ಸ್ಪೂರ್ತಿಯ ತಾಣಗಳು.

– ಎ.ಪಿ.ಜೆ ಕಲಾಂ

ಚಿತ್ರ-ವಿಚಿತ್ರ

ಸುದ್ದಿ ಸ್ಪೆಷಲ್

Finding the right hotel just got a whole lot easier - HotelsCombined.com

ನಮ್ಮ ಬಗ್ಗೆ

ಮೊದಲಿಗೆ ಕೇವಲ ಒಂದು ಹಾಳೆಯಲ್ಲಿ ಪ್ರಕಟವಾಗುತ್ತಿದ್ದ ಪುತ್ತೂರು ಸುದ್ದಿ ಬಿಡುಗಡೆ ಪತ್ರಿಕೆ ಇಂದು ಪ್ರತಿದಿನ ಆರು ಪುಟಗಳಿಂದ
... ಮುಂದೆ ಓದಿ

ಸಲಹೆ- ಸೂಚನೆ

ನಿಮ್ಮ ಸಲಹೆ ಸೂಚನೆಗಳಿಗೆ ಹಾರ್ದಿಕ ಸ್ವಾಗತ

ಇಲ್ಲಿ ಕ್ಲಿಕ್ಕಿಸಿ

Copyright © 2018 Suddinews.com . All Rights Reserved.
^ Back to Top