Tue 16 Jan 2018, 6:43AM

468X60

ಮೊಬೈಲ್‌ನಿಂದ ಪಂಪ್ ನಿರ್ವಹಣೆ ಆರ್‌ಡಿಪಿಆರ್ ರಾಜ್ಯ ಕಾರ್ಯದರ್ಶಿ ವೀಕ್ಷಣೆ

Friday, October 18th, 2013 | suddiblt | no responses

ಹೊಸಂಗಡಿ: ಮೊಬೈಲ್‌ನಿಂದ ಕುಡಿಯುವ ನೀರಿನ ಪಂಪ್ ನಿರ್ವಹಿಸುವ ಮೂಲಕ ಹೊಸಂಗಡಿ ಗ್ರಾಮ ಪಂಚಾಯತ್ ರಾಜ್ಯದಲ್ಲಿಯೇ ವಿನೂತನ ಪ್ರಯೋಗ ಮಾಡಿದೆ.

ಇದನ್ನು ಹಾಗೂ  ಕಂಪ್ಯೂಟರ್ ಮೂಲಕ ನೀರಿನ ಬಿಲ್ ಕೊಡುವ ವ್ಯವಸ್ಥೆಯನ್ನು ವೀಕ್ಷಿಸಲು ರಾಜ್ಯ ಪಂಚಾಯತ್ ರಾಜ್ ಮತ್ತು ಗ್ರಾಮೀಣಾಭಿವೃದ್ದಿ ಇಲಾಖೆ ಮುಖ್ಯ ಕಾರ್ಯದರ್ಶಿ ಟಿ.ಎನ್ ವಿಜಯ ಭಾಸ್ಕರ ಅವರ ಅ.೫ ರಂದು ಹೊಸಂಗಡಿ ಗ್ರಾಮ ಪಂಚಾಂiiತ್‌ಗೆ ಭೇಟಿ ನೀಡಿದರು. ಕುಡಿಯುವ ನೀರಿನ ಮೋಟಾರನ್ನು ಚಾಲನೆ ಮಾಡಲು ಮತ್ತು ನೀರು ತುಂಬಿದ ಅನಂತರ ನಿಲ್ಲಿಸಲು ಪಂಪ್ ನಿರ್ವಾಹಕ ಟ್ಯಾಂಕ್‌ನ ಬಳಿ ಹೋಗದೆ ಪಂಚಾಯತ್ ಅಥವಾ ಮನೆಯಿಂದಲೇ ಮೊಬೈಲ್ ಮೂಲಕ ನಿಯಂತ್ರಿಸುವ ವ್ಯವಸ್ಥೆ ಹೊಸಂಗಡಿ ಗ್ರಾ.ಪಂನಲ್ಲಿ ಇದರ ಸಮಗ್ರ ವಿವರವನ್ನು ಸುದ್ಧಿ ಪತ್ರಿಕೆ ಆರು ತಿಂಗಳ ಹಿಂದೆ ಪ್ರಕಟಿಸಿತ್ತು. ಈ ಸಂದರ್ಭ ಜಿ.ಪಂ ಮುಖ್ಯ ಕಾರ್ಯನಿರ್ವಹಣಾಧಿಕಾರಿ ತುಳಸಿ ಮದ್ದಿನೇನಿ, ಉಪ ಕಾರ್ಯದರ್ಶಿ ಉಮೇಶ್ ಎನ್.ಆರ್ ಕಾರ್ಯಪಾಲಕ ಎಂಜಿನಿಯರ್ ಎಲ್.ಎಸ್ ಸತ್ಯನಾರಾಯಣ , ಜಿಲ್ಲಾ ನೆರವು ಘಟಕದ ಮಂಜುಳಾ, ತಾ.ಪಂ ಕಾರ್‍ಯನಿರ್ವಹಣಾಧಿಕಾರಿ ನರೇಂದ್ರ ಹೊಸಂಗಡಿ ಪಂಚಾಯತ್ ಅಧ್ಯಕ್ಷ ಪಿ.ಹರಿಪ್ರಸಾದ್ ಜಿ.ಪಂ ಮಾಜಿ ಉಪಾಧ್ಯಕ್ಷ ಧರಣೇಂದ್ರ ಕುಮಾರ್, ಪಿಡಿಒ ಜೀವನ್ ದೇವಾಡಿಗ ಇದ್ದರು.

Mobil ninda pampu Nivahane copy

Leave a Reply


ಸುಭಾಷಿತ

ಜೀವನ ನೈಜವಾದುದು. ಉತ್ಸಾಹ ಪರಿಪೂರ್ಣವಾದುದು

-ಲಾಂಗ್ ಫೆಲೋ

ಚಿತ್ರ-ವಿಚಿತ್ರ

ಸುದ್ದಿ ಸ್ಪೆಷಲ್

Finding the right hotel just got a whole lot easier - HotelsCombined.com

ನಮ್ಮ ಬಗ್ಗೆ

ಮೊದಲಿಗೆ ಕೇವಲ ಒಂದು ಹಾಳೆಯಲ್ಲಿ ಪ್ರಕಟವಾಗುತ್ತಿದ್ದ ಪುತ್ತೂರು ಸುದ್ದಿ ಬಿಡುಗಡೆ ಪತ್ರಿಕೆ ಇಂದು ಪ್ರತಿದಿನ ಆರು ಪುಟಗಳಿಂದ
... ಮುಂದೆ ಓದಿ

ಸಲಹೆ- ಸೂಚನೆ

ನಿಮ್ಮ ಸಲಹೆ ಸೂಚನೆಗಳಿಗೆ ಹಾರ್ದಿಕ ಸ್ವಾಗತ

ಇಲ್ಲಿ ಕ್ಲಿಕ್ಕಿಸಿ

Copyright © 2018 Suddinews.com . All Rights Reserved.
^ Back to Top