Sat 20 Jan 2018, 2:37AM

468X60

ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ: ಪದಗ್ರಹಣ ಸಮಾರಂಭ

Tuesday, December 31st, 2013 | suddisullia | no responses

ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಸುಳ್ಯ ವಲಯ ಬಿ. ಕಾರ್ಯಕ್ಷೇತ್ರದ ಕೇರ್ಪಳ, ಜಟ್ಟಿಪಳ್ಳ ಜಯನಗರ ಒಕ್ಕೂಟಗಳ ನೂತನ ಪದಾಧಿಕಾರಿಗಳ ಪದಗ್ರಹಣ ಸಮಾರಂಭವು ಡಿ.29 ರಂದು ಸುಳ್ಯ ಕೆವಿಜಿ ಪುರಭವನದಲ್ಲಿ ನಡೆಯಿತು. ಚೆನ್ನಕೇಶವ ದೇವಸ್ಥಾನದ ಆಡಳಿತ ಮೊಕ್ತೇಸರ ಡಾ| ಹರಪ್ರಸಾದ್ ತುದಿಯಡ್ಕ ಸಮಾರಂಭವನ್ನು ಉದ್ಘಾಟಿಸಿದರು. ಜನಜಾಗೃತಿ ವೇದಿಕೆಯ ಸ್ಥಾಪಕಾಧ್ಯಕ್ಷ ಎನ್.ಎ. ರಾಮಚಂದ್ರ ಅಧ್ಯಕ್ಷತೆ ವಹಿಸಿದ್ದರು. ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಸಮುದಾಯ ವಿಭಾಗದ ಅನುಷ್ಠಾನ ಅಧಿಕಾರಿ ಗಣೇಶ್ ಭಟ್, ಪತ್ರಕರ್ತ ದುರ್ಗಾಕುಮಾರ್ ನಾಯರ್‌ಕೆರೆ, ನಗರ ಪಂಚಾಯತ್ ಸದಸ್ಯ ಕೆ.ಎಂ. ಮುಸ್ತಫ ಮುಖ್ಯ ಅತಿಥಿಯಾಗಿದ್ದರು. ಒಕ್ಕೂಟದ ನಿಕಟಪೂರ್ವ ಪದಾಧಿಕಾರಿಗಳಾದ ಕುಸುಮಾಧರ ರೈ ಬೂಡು, ಪ್ರಶಾಂತ್ ಭಟ್, ಮೋಹಿನಿ ನಾಗರಾಜ್, ಶೋಭಿತ, ಪ್ರೇಮಲತಾ, ಕವಿತಾ, ಖದೀಜಾ, ಉಮಾವತಿ, ಕನಕಲತಾ, ವೆಂಕಪ್ಪ ಆಚಾರ್ಯ, ನಿರ್ಮಲಾ ಸಾವಿತ್ರಿ, ಜಯಲಕ್ಷ್ಮಿ, ಲತಾ, ಮೀನಾಕ್ಷಿ, ನೂತನ ಪದಾಧಿಕಾರಿಗಳಾದ ಶೀಲಾ ಅರುಣ್, ಸುಜಾತ, ರೇಖಾ, ಆಶಾ ಗಣೇಶ್, ಸೌಮ್ಯ, ಜಯಂತಿ ಕೆ.ಆರ್. ಖದೀಜಾ ವನಿತಾ, ಉಮಾನಾಥ್, ಸೌಮ್ಯ, ವೇದಾವತಿ, ಗಿರಿಜಾ, ವೀಣಾ, ಪಾರ್ವತಿ, ಸಫಿಯಾ ವೇದಿಕೆಯಲ್ಲಿದ್ದರು. ಕೇಂದ್ರ ಒಕ್ಕೂಟದ ಮಾಜಿ ಅಧ್ಯಕ್ಷ ಬೂಡು ರಾಧಾಕೃಷ್ಣ ರೈ ಸ್ವಾಗತಿಸಿ ಸೇವಾ ಪ್ರತಿನಿಧಿ ಕುಶಾಲಪ್ಪ ವಂದಿಸಿದರು. ಮೇಲ್ವಿಚಾರಕ ಹೊನ್ನಪ್ಪ ಕಾರ್ಯಕ್ರಮ ನಿರೂಪಿಸಿದರು.

photo2

Leave a Reply


ಸುಭಾಷಿತ

ಯಾವುದೇ ಮಗು ತತ್ವಜ್ಞಾನಿಯಾಗುವಂತೆ ಮಾಡುವುದೇ ಶಿಕ್ಷಣ.

– ಫ್ಲೇಟೋ

ಚಿತ್ರ-ವಿಚಿತ್ರ

ಸುದ್ದಿ ಸ್ಪೆಷಲ್

Finding the right hotel just got a whole lot easier - HotelsCombined.com

ನಮ್ಮ ಬಗ್ಗೆ

ಮೊದಲಿಗೆ ಕೇವಲ ಒಂದು ಹಾಳೆಯಲ್ಲಿ ಪ್ರಕಟವಾಗುತ್ತಿದ್ದ ಪುತ್ತೂರು ಸುದ್ದಿ ಬಿಡುಗಡೆ ಪತ್ರಿಕೆ ಇಂದು ಪ್ರತಿದಿನ ಆರು ಪುಟಗಳಿಂದ
... ಮುಂದೆ ಓದಿ

ಸಲಹೆ- ಸೂಚನೆ

ನಿಮ್ಮ ಸಲಹೆ ಸೂಚನೆಗಳಿಗೆ ಹಾರ್ದಿಕ ಸ್ವಾಗತ

ಇಲ್ಲಿ ಕ್ಲಿಕ್ಕಿಸಿ

Copyright © 2018 Suddinews.com . All Rights Reserved.
^ Back to Top