Fri 12 Jan 2018, 9:49PM

468X60

ಯುವಶಕ್ತಿ ದೇಶದ ಶಕ್ತಿ – ಜಿ.ಪಂ. ಅಧ್ಯಕ್ಷ ಬಿ.ಶಿವಪ್ಪ

Tuesday, December 31st, 2013 | webmanager | no responses

ಸೋಮವಾರಪೇಟೆ,ಡಿ.೩೧- ಯುವಶಕ್ತಿಯನ್ನು ಸಂಪೂರ್ಣವಾಗಿ ಬಳಸಿಕೊಂಡಲ್ಲಿ ಮಾತ್ರ ದೇಶದ ಅಭಿವೃದ್ಧಿ ಸಾಧ್ಯ ಎಂದು ಜಿ.ಪಂ. ಅಧ್ಯಕ್ಷ ಬಿ. ಶಿವಪ್ಪ ಅಭಿಪ್ರಾಯಪಟ್ಟರು. ಮಂಗಳವಾರ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಕೊಡಗು ಜಿಲ್ಲಾ ಯುವ ಒಕ್ಕೂಟ, ತಾಲೂಕು ಯುವ ಒಕ್ಕೂಟ, ತೋಳೂರು ಶೆಟ್ಟಳ್ಳಿಯ ಕಾವೇರಿ ಮಾತಾ ಮಹಿಳಾ ಒಕ್ಕೂಟದ ಸಂಯುಕ್ತಾಶ್ರಯದಲ್ಲಿ ನಡೆದ ತಾಲ್ಲೂಕು ಮಟ್ಟದ ಯುವ ಜನ ಮೇಳದ ಸಮಾರೋಪ ಸಮಾರಂಭದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ಕೊಡಗು ಜಿಲ್ಲೆಯು ಕ್ರೀಡೆಯ ತವರೂರು. ಸರ್ಕಾರವು ಯುವ ಜನಾಂಗಕ್ಕೆ ಪೂರಕವಾದ ಕ್ರೀಡಾ ಚಟುವಟಿಕೆಗಳನ್ನು ಹಮ್ಮಿಕೊಳ್ಳಬೇಕು. ಜಿಲ್ಲೆಯ ಎಲ್ಲಾ ಯುವಕ ಯುವತಿ ಮಂಡಳಿಗಳು ಕ್ರೀಡಾ ಪ್ರತಿಭೆಗಳನ್ನು ಗುರುತಿಸಿ ಪ್ರೋತ್ಸಾಹಿಸಬೇಕೆಂದು ಕರೆ ನೀಡಿದರು. ಯುವಜನ ಮೇಳದಲ್ಲಿ ಭಾವಗೀತೆ, ರಂಗಗೀತೆ, ಏಕಪಾತ್ರಾಭಿನಯ, ಲಾವಣಿ, ಸೋಭಾನೆ ಪದ, ರಾಗೀ ಬೀಸುವ ಪದ, ಜನಪದ ಗೀತೆ, ಗೀಗೀ ಪದ, ಭಜನೆ, ಕೋಲಾಟ, ಜನಪದ ನೃತ್ಯ ನಡೆದವು.

ವೇದಿಕೆಯಲ್ಲಿ ತಾ.ಪಂ. ಅಧ್ಯಕ್ಷ ಜಿ.ಬಿ.ಸೋಮಯ್ಯ, ತಾಲ್ಲೂಕು ಯುವ ಒಕ್ಕೂಟದ ಅಧ್ಯಕ್ಷ ಸುರೇಶ್, ತೋಳೂರುಶೆಟ್ಟಳ್ಳಿ ಗ್ರಾಮ ಪಂಚಾಯಿತಿ ಸದಸ್ಯೆ ಲಲಿತಾ, ಕಾವೇರಿ ಮಾತ ಮಹಿಳಾ ಒಕ್ಕೂಟದ ಅಧ್ಯಕ್ಷೆ ಮಹಾಲಕ್ಷ್ಮಿ ಚಂದ್ರಶೇಖರ್, ಪ್ರಮುಖರಾದ ಸುಧಾಕರ್ ಉಪಸ್ಥಿತರಿದ್ದರು.

ಸೋಮವಾರಪೇಟೆಯ ಸಮೀಪದ ತೋಳೂರುಶೆಟ್ಟಳ್ಳಿಯಲ್ಲಿ ನಡೆದ ತಾಲ್ಲೂಕು ಯುವಜನಮೇಳದಲ್ಲಿ ಬಹುಮಾನ ವಿತರಿಸಿದ ಜಿ.ಪಂ. ಅಧ್ಯಕ್ಷ ಬಿ.ಶಿವಪ್ಪ.

ಸೋಮವಾರಪೇಟೆಯ ಸಮೀಪದ ತೋಳೂರುಶೆಟ್ಟಳ್ಳಿಯಲ್ಲಿ ನಡೆದ ತಾಲ್ಲೂಕು ಯುವಜನಮೇಳದಲ್ಲಿ ಬಹುಮಾನ ವಿತರಿಸಿದ ಜಿ.ಪಂ. ಅಧ್ಯಕ್ಷ ಬಿ.ಶಿವಪ್ಪ.

Leave a Reply


ಸುಭಾಷಿತ

ವಿಚಾರ ಮಾಡದಿರುವ ದಾರಿಗಳಲ್ಲಿ ವಿಚಾರ ಮಾಡಲು ಸದಾ ನೀನು ಸಿದ್ದನಿರು.

-ಎ.ಪಿ.ಜೆ ಕಲಾಂ

ಚಿತ್ರ-ವಿಚಿತ್ರ

ಸುದ್ದಿ ಸ್ಪೆಷಲ್

Finding the right hotel just got a whole lot easier - HotelsCombined.com

ನಮ್ಮ ಬಗ್ಗೆ

ಮೊದಲಿಗೆ ಕೇವಲ ಒಂದು ಹಾಳೆಯಲ್ಲಿ ಪ್ರಕಟವಾಗುತ್ತಿದ್ದ ಪುತ್ತೂರು ಸುದ್ದಿ ಬಿಡುಗಡೆ ಪತ್ರಿಕೆ ಇಂದು ಪ್ರತಿದಿನ ಆರು ಪುಟಗಳಿಂದ
... ಮುಂದೆ ಓದಿ

ಸಲಹೆ- ಸೂಚನೆ

ನಿಮ್ಮ ಸಲಹೆ ಸೂಚನೆಗಳಿಗೆ ಹಾರ್ದಿಕ ಸ್ವಾಗತ

ಇಲ್ಲಿ ಕ್ಲಿಕ್ಕಿಸಿ

Copyright © 2018 Suddinews.com . All Rights Reserved.
^ Back to Top