Sat 13 Jan 2018, 7:43AM

468X60

ಬಳೆಂಜ ದೇವಸ್ಥಾನಕ್ಕೆ ಕಾಣಿಯೂರು ಶ್ರೀ ಭೇಟಿ

Wednesday, January 1st, 2014 | suddiblt | no responses

ಬಳಂಜ: ಉಡುಪಿಯ ಪರ್ಯಾಯ ಪೀಠವನ್ನೇರಲಿರುವ ಉಡುಪಿ ಕಾಣಿಯೂರು ಮಠದ ವಿದ್ಯಾವಲ್ಲಭ ತೀರ್ಥ ಸ್ವಾಮೀಜಿ ನೂತನವಾಗಿ ನಿರ್ಮಾಣಗೊಳ್ಳುತ್ತಿರುವ ಬಳಂಜ ಶ್ರೀ ಪಂಚಲಿಂಗೇಶ್ವರ ದೇವಸ್ಥಾನಕ್ಕೆ ಭೇಟಿ ನೀಡಿ ದೇವಸ್ಥಾನದ ಜೀರ್ಣೋದ್ಧಾರ ಕಾಮಗಾರಿಗಳನ್ನು ವೀಕ್ಷಿಸಿದರು.
ನಂತರ ಆಶೀರ್ವಚನ ನೀಡಿ ಇತಿಹಾಸ ಪ್ರಸಿದ್ಧ ಕ್ಷೇತ್ರವಾದ ಪಂಚಲಿಂಗೇಶ್ವರ ದೇವಸ್ಥಾನವು ಸುಮಾರು ರೂ.3ಕೋಟಿ ವೆಚ್ಚದಲ್ಲಿ ನಿರ್ಮಾಣಗೊಳ್ಳುತ್ತಿರುವುದು ಬಹಳ ಸಂತಸ ತಂದಿದೆ. ದೇವರ ಅನುಗ್ರಹದಿಂದ ಸರ್ವ ಭಕ್ತರ ಸಹಕಾರದಿಂದ ಶೀಘ್ರ ಕಾಮಗಾರಿ ಪೂರ್ಣಗೊಳ್ಳಲಿ ಎಂದರು.
ಈ ಸಂದರ್ಭದಲ್ಲಿ ವೇಣೂರು ವಲಯ ವಿಶ್ವ ಹಿಂದೂ ಪರಿಷತ್‌ನ ಅಧ್ಯಕ್ಷ ಶಶಾಂಕ ಭಟ್, ಜೀರ್ಣೋದ್ಧಾರ ಸಮಿತಿಯ ಅಧ್ಯಕ್ಷ ಸತೀಶ್ ರೈ ಬಾರ್‍ದಡ್ಕ, ಕಾರ್ಯದರ್ಶಿ ಅನಿಲ್ ನಾಯ್ಗ, ಸಮಿತಿಯ ಪದಾಧಿಕಾರಿಗಳಾದ ಹೆಚ್. ಧರ್ಣಪ್ಪ ಪೂಜಾರಿ, ಶೀತಲ್ ಪಡಿವಾಳ್, ಪ್ರಭಾಕರ ಜೈನ್, ರಾಘವೇಂದ್ರ ಭಟ್, ಬಾಲಕೃಷ್ಣ ಶೆಟ್ಟಿ, ಸುಂದರ, ಸದಾಶಿವ, ಸುರೇಶ್ ಶೆಟ್ಟಿ, ಶೇಖರ್, ಗಣೇಶ್, ಮತ್ತು ಸಮಿತಿಯ ಸದಸ್ಯರು ಉಪಸ್ಥಿತರಿದ್ದರು.
ಸುಮಾರು 3ಕೋಟಿ ವೆಚ್ಚದಲ್ಲಿ ದೇವಸ್ಥಾನದ ಜೀರ್ಣೋದ್ಧಾರ ಕಾಮಗಾರಿಗಳು ನಡೆಯುತ್ತಿದ್ದು, ಮುಂದಿನ ಎಪ್ರಿಲ್‌ನಲ್ಲಿ ಬ್ರಹ್ಮಕಲಶೋತ್ಸವ ನಡೆಯಲಿದೆ. ಸಂಪೂರ್ಣವಾಗಿ ಶಿಲಾಮಯವಾಗಿ ನಿರ್ಮಾಣಗೊಳ್ಳುತ್ತಿರುವ ದೇವಸ್ಥಾನದಲ್ಲಿ ಈಗಾಗಲೇ ರೂ.೧.೫೦ಕೋಟಿ ವೆಚ್ಚದ ಕಾಮಗಾರಿ ಪೂರ್ಣಗೊಂಡಿದ್ದು, ಮುಂದಿನ ಕಾಮಗಾರಿ ಭರದಿಂದ ಸಾಗುತ್ತಿದೆ. ದೇವಸ್ಥಾನದ ಅಭಿವೃದ್ಧಿ ಕಾಮಗಾರಿಗೆ ಊರವರು ಸುಮಾರು ರೂ.೨೫ಲಕ್ಷ ಮೌಲ್ಯದ ಮರಗಳನ್ನು ದಾನವಾಗಿ ನೀಡಿದ್ದಾರೆ.

Balanja devasthanakke kaniyoor shree copy

Leave a Reply


ಸುಭಾಷಿತ

ಪ್ರತಿಯೊಂದು ದಿನವೂ ನಮ್ಮ ಅಂತಿಮ ದಿನ ಎನ್ನುವ ಹಾಗೆ ಜೀವಿಸಬೇಕು.

– ಎಡ್ವರ್ಡ್ ಡೌಡಸ್

ಚಿತ್ರ-ವಿಚಿತ್ರ

ಸುದ್ದಿ ಸ್ಪೆಷಲ್

Finding the right hotel just got a whole lot easier - HotelsCombined.com

ನಮ್ಮ ಬಗ್ಗೆ

ಮೊದಲಿಗೆ ಕೇವಲ ಒಂದು ಹಾಳೆಯಲ್ಲಿ ಪ್ರಕಟವಾಗುತ್ತಿದ್ದ ಪುತ್ತೂರು ಸುದ್ದಿ ಬಿಡುಗಡೆ ಪತ್ರಿಕೆ ಇಂದು ಪ್ರತಿದಿನ ಆರು ಪುಟಗಳಿಂದ
... ಮುಂದೆ ಓದಿ

ಸಲಹೆ- ಸೂಚನೆ

ನಿಮ್ಮ ಸಲಹೆ ಸೂಚನೆಗಳಿಗೆ ಹಾರ್ದಿಕ ಸ್ವಾಗತ

ಇಲ್ಲಿ ಕ್ಲಿಕ್ಕಿಸಿ

Copyright © 2018 Suddinews.com . All Rights Reserved.
^ Back to Top