Tue 16 Jan 2018, 11:45PM

468X60

ಟಿ20: ಮಾ:21ರಂದು ಭಾರತ, ಪಾಕ್ ಸೆಣಸು

Friday, March 21st, 2014 | webnews | no responses

ಬಾಂಗ್ಲಾದೇಶದಲ್ಲಿ ನಡೆಯುತ್ತಿರುವ ಟಿ20 ವಿಶ್ವಕಪ್‌ನಲ್ಲಿ ಮಾ.೨೧ರಂದು ಭಾರತ ಮತ್ತು ಅದರ ಪರಂಪರಾಗತ ಪ್ರತಿಸ್ಪರ್ಧಿ ಪಾಕಿಸ್ಥಾನ ಮುಖಾಮುಖಿಯಾಗಲಿವೆ. ಈ ಎರಡು ತಂಡಗಳ ನಡುವಿನ ಯಾವುದೇ ಪಂದ್ಯ ಮಾಧ್ಯಮಗಳಲ್ಲಿ ಹಾಗೂ ಎರಡು ರಾಷ್ಟ್ರಗಳಲ್ಲಿ ಕುತೂಹಲವನ್ನು ಕೆರಳಿಸುತ್ತದೆ. ಪ್ರಥಮ ಟಿ೨೦ ವಿಶ್ವಕಪ್‌ನಲ್ಲಿ ಭಾರತವು ಜಯಶೀಲವಾಗಿದ್ದರೆ ೨ನೇಯ ವಿಶ್ವಕಪ್‌ನ್ನು ಪಾಕಿಸ್ತಾನವು ಗೆದ್ದುಕೊಂಡಿತು. ಪಾಕಿಸ್ತಾನವು ಅತ್ಯಂತ ಪ್ರತಿಭಾನ್ವಿತ ತಂಡ ಎಂಬುದರಲ್ಲಿ ಎರಡು ಮಾತಿಲ್ಲ. ಆದರೆ ಭಾರತ ಹಾಗೂ ಪಾಕಿಸ್ತಾನಗಳ ನಡುವೆ ಒಂದು ಸಾಮ್ಯತೆ ಇದೆ. ಒಂದು ದಿನ ಎರಡೂ ತಂಡಗಳು ಸೋಲಿನ ದವಡೆಯಿಂದ ಹೊರ ಬಂದು ವಿರೋಧಿ ತಂಡವನ್ನು ಧೂಳಿಪಟ ಮಾಡಬಲ್ಲವು. ಮಗದೊಂದು ದಿನ ಸುಲಭವಾಗಿ ಜಯಿಸಬಹುದಾದ ಪಂದ್ಯವನ್ನು ಕಾರಣ ಇಲ್ಲದೆ ಸೋತು ಅಭಿಮಾನಿಗಳಿಗೆ ತೀವ್ರ ನಿರಾಸೆ ತರಬಲ್ಲುದು. ಪಾಕಿಸ್ತಾನ ತಂಡದ ಬೌಲಿಂಗ್ ಉತ್ತಮವಾದರೆ ಭಾರತದ ಬ್ಯಾಟಿಂಗ್ ಪ್ರಬಲವಾಗಿದೆ. ಅಲ್ಲದೇ ಏಷ್ಯಾ ಕಪ್‌ನಲ್ಲಿ ಅಫ್ರಿದಿಯ ಸಾಹಸದಿಂದ ಭಾರತಕ್ಕೆ ಮುಖಭಂಗವಾದುದ್ದನ್ನು ಧೋನಿ ತಂಡ ನೆನಪಿಸಿಕೊಳ್ಳುವ ಅಗತ್ಯತೆ ಇದೆ. ಕೊಹ್ಲಿ, ಧವನ್, ಶರ್ಮ, ಧೋನಿ ಹಾಗೂ ಯುವರಾಜ ಬ್ಯಾಟಿಂಗ್‌ಗೆ ಪ್ರಾಬಲ್ಯವನ್ನು ನೀಡಿರುತ್ತಾರೆ. ಆದರೆ ಬೌಲಿಂಗ್ ಅಷ್ಟೊಂದು ತೀಕ್ಷ್ಣವಾಗಿಲ್ಲ. ಪಾಕಿಸ್ತಾನ ಪಡೆಯಲ್ಲಿ ಉಮರ್ ಗುಲ್, ಜುನೈದ್, ಸೊಹೈಲ್, ಸ್ಪಿನ್ನರ್ ಅಜ್ಮಲ್ ಯಾವ ತಂಡಕ್ಕು ಕಡಿವಾಣ ಹಾಕಬಲ್ಲರು. ಭಾರತ ಇಂದಿನ ಪಂದ್ಯವನ್ನು ಗೆದ್ದು ಶುಭಾರಂಭ ಮಾಡಲಿ ಎಂದು ಹಾರೈಸೋಣ.

Leave a Reply


ಸುಭಾಷಿತ

ವಿಚಾರ ಮಾಡದಿರುವ ದಾರಿಗಳಲ್ಲಿ ವಿಚಾರ ಮಾಡಲು ಸದಾ ನೀನು ಸಿದ್ದನಿರು.

-ಎ.ಪಿ.ಜೆ ಕಲಾಂ

ಚಿತ್ರ-ವಿಚಿತ್ರ

ಸುದ್ದಿ ಸ್ಪೆಷಲ್

Finding the right hotel just got a whole lot easier - HotelsCombined.com

ನಮ್ಮ ಬಗ್ಗೆ

ಮೊದಲಿಗೆ ಕೇವಲ ಒಂದು ಹಾಳೆಯಲ್ಲಿ ಪ್ರಕಟವಾಗುತ್ತಿದ್ದ ಪುತ್ತೂರು ಸುದ್ದಿ ಬಿಡುಗಡೆ ಪತ್ರಿಕೆ ಇಂದು ಪ್ರತಿದಿನ ಆರು ಪುಟಗಳಿಂದ
... ಮುಂದೆ ಓದಿ

ಸಲಹೆ- ಸೂಚನೆ

ನಿಮ್ಮ ಸಲಹೆ ಸೂಚನೆಗಳಿಗೆ ಹಾರ್ದಿಕ ಸ್ವಾಗತ

ಇಲ್ಲಿ ಕ್ಲಿಕ್ಕಿಸಿ

Copyright © 2018 Suddinews.com . All Rights Reserved.
^ Back to Top