Tue 16 Jan 2018, 12:46PM

468X60

ಕೇಜ್ರಿವಾಲ್ ಮೇಲೆ ಮೊಟ್ಟೆ, ಇಂಕ್ ಎಸೆತ

Wednesday, March 26th, 2014 | webnews | no responses

ವಾರಾಣಸಿಯಲ್ಲಿ ಸ್ಪರ್ಧಿಸುವ ಸಂಬಂಧ ಜನಾಭಿಪ್ರಾಯ ಸಂಗ್ರಹಿಸಲು ಬಂದಿರುವ ದೆಹಲಿ ಮಾಜಿ ಮುಖ್ಯ ಮಂತ್ರಿ ಅರವಿಂದ ಕೇಜ್ರಿವಾಲ್‌ಗೆ ವಿರೋಧ ವ್ಯಕ್ತವಾಗಿದ್ದು, ಕೇಜ್ರಿವಾಲ್ ಮೇಲೆ ದುಷ್ಕರ್ಮಿಗಳು ಮೊಟ್ಟೆ ಮತ್ತು ಇಂಕ್ ಎಸೆದು ವಿರೋಧ ವ್ಯಕ್ತಪಡಿಸಿದ್ದಾರೆ. ಬಿಜೆಪಿ ಪ್ರಧಾನಿ ಅಭ್ಯರ್ಥಿ ನರೇಂದ್ರ ಮೋದಿ ವಿರುದ್ಧ ವಾರಾಣಸಿಯಿಂದ ನಿಲ್ಲಲು ಜನಾಭಿಪ್ರಾಯ ಸಂಗ್ರಹಣೆಗಾಗಿ ಬಂದಿರುವ ಕೇಜ್ರಿವಾಲ್‌ಗೆ ವಾರಾಣಸಿಯಲ್ಲಿ ವಿರೋಧ ವ್ಯಕ್ತವಾಗಿದೆ.  ಕೆಲ ಗಂಟೆಗಳ ಹಿಂದಷ್ಟೇ ಕಾಶಿ ವಿಶ್ವನಾಥ ದೇವಾಲಯದಿಂದ ಹಿಂತಿರುಗುತ್ತಿದ್ದ ವೇಳೆ ದುಷ್ಕರ್ಮಿಗಳು ಮೊಟ್ಟೆ ಎಸೆದಿದ್ದರು.  ಇದರಿಂದಾಗಿ ಕೇಜ್ರಿವಾಲ್ ಅಲ್ಲಿಂದ ತೆರಳಬೇಕಾಯಿತು. ಈ ವೇಳೆ ಕೇಜ್ರಿವಾಲ್ ಮೇಲೆ ಇಂಕ್ ಎಸೆದಿರುವ ಘಟನೆ ನಡೆದಿದ್ದು, ಇದರಲ್ಲಿ ಕೇಜ್ರಿವಾಲ್ ಜೊತೆಗಿದ್ದ ಎ.ಎ.ಪಿ. ನಾಯಕ ಮನೀಶ್ ಸಿಸೋಡಿಯಾ ಮೇಲೆ ಇಂಕ್ ಬಿದ್ದಿದೆ.  ಈ ಕೃತ್ಯವನ್ನು ಹಿಂದೂ ವಾಹಿನಿ ಕಾರ್ಯಕರ್ತರು ಎಸಗಿದ್ದಾರೆಂದು ಶಂಕಿಸಲಾಗಿದೆ.

Leave a Reply


ಸುಭಾಷಿತ

ಜೀವನ ನೈಜವಾದುದು. ಉತ್ಸಾಹ ಪರಿಪೂರ್ಣವಾದುದು

-ಲಾಂಗ್ ಫೆಲೋ

ಚಿತ್ರ-ವಿಚಿತ್ರ

ಸುದ್ದಿ ಸ್ಪೆಷಲ್

Finding the right hotel just got a whole lot easier - HotelsCombined.com

ನಮ್ಮ ಬಗ್ಗೆ

ಮೊದಲಿಗೆ ಕೇವಲ ಒಂದು ಹಾಳೆಯಲ್ಲಿ ಪ್ರಕಟವಾಗುತ್ತಿದ್ದ ಪುತ್ತೂರು ಸುದ್ದಿ ಬಿಡುಗಡೆ ಪತ್ರಿಕೆ ಇಂದು ಪ್ರತಿದಿನ ಆರು ಪುಟಗಳಿಂದ
... ಮುಂದೆ ಓದಿ

ಸಲಹೆ- ಸೂಚನೆ

ನಿಮ್ಮ ಸಲಹೆ ಸೂಚನೆಗಳಿಗೆ ಹಾರ್ದಿಕ ಸ್ವಾಗತ

ಇಲ್ಲಿ ಕ್ಲಿಕ್ಕಿಸಿ

Copyright © 2018 Suddinews.com . All Rights Reserved.
^ Back to Top