Fri 19 Jan 2018, 11:06AM

468X60

ಈಶ್ವರಮಂಗಲ: ಮಕ್ಕಳ ಆಶ್ರಮ ’ವಾಲ್ಮಿಕಿ ವಿಹಾರ’ ಲೋಕಾರ್ಪಣೆ

Saturday, June 7th, 2014 | suddiputtur | no responses

ಪುತ್ತೂರು: ಧರ್ಮಶ್ರೀ ಪ್ರತಿಷ್ಠಾನ ಹನುಮಗಿರಿ ಈಶ್ವರಮಂಗಲ ಇದರ ವತಿಯಿಂದ ನಿರ್ಮಿಸಲಾದ ಮಕ್ಕಳ ಆಶ್ರಮ ’ವಾಲ್ಮೀಕಿ ವಿಹಾರ’ ಮತ್ತು ’ಧರ್ಮಪಥ’ ಯೋಜನೆಯನ್ನು ಕರ್ನಾಟಕ ಉಚ್ಚ ನ್ಯಾಯಾಲಯದ ಹಿರಿಯ ನ್ಯಾಯಮೂರ್ತಿ ನ್ಯಾ| ಎನ್.ಕೆ. ಪಾಟೀಲ್‌ರವರು ಉದ್ಘಾಟಿಸಿದರು. ಸಂಸದ ನಳಿನ್ ಕುಮಾರ್ ಕಟೀಲು ಅಧ್ಯಕ್ಷತೆ ವಹಿಸಿದ್ದರು. ಖ್ಯಾತ ಅಭಿನೇತ್ರ ಮತ್ತು ಸಾಮಾಜಿಕ ಕಾರ್ಯಕರ್ತೆ ಮಾಳವಿಕ ಅವಿನಾಶ್ ಆಶಯ ನುಡಿಗಳನ್ನಾಡಿದರು. ಸಮಾರಂಭದಲ್ಲಿ ನ್ಯಾಯವಾದಿ ಸುಬ್ರಹ್ಮಣ್ಯ ಕೊಳತ್ತಾಯ, ಮಂಗಳೂರು ಕರಾವಳಿ ಶಿಕ್ಷಣ ಸಂಸ್ಥೆಯ ಮುಖ್ಯಸ್ಥ ಗಣೇಶ್ ರಾವ್, ಮಹಾರಾಷ್ಟ್ರ  ಇನ್ನೋವೇಟಿವ್ ಇಂಜಿನಿಯರಿಂಗ್ ಎಜುಕೇಶನ್ ಸೊಸೈಟಿ ಟ್ರಸ್ಟೀ ಪ್ರಶಾಂತ್ ಭಂಡಾರಿ, ಗಜಾನನ ವಿದ್ಯಾ ಸಂಸ್ಥೆಯ ಉಪಾಧ್ಯಕ್ಷ ಕುದ್ಕಾಡಿ ನಾರಾಯಣ ರೈ ಕಟ್ಟೆ, ಪ್ರಗತಿಪರ ಕೃಷಿಕ ಸೂರ್ಯನಾರಾಯಣ ಭಟ್, ನ್ಯಾಯವಾದಿ ಇಂದ್ರೇಸ್, ಧರ್ಮಶ್ರೀ ಪ್ರತಿಷ್ಠಾನದ ಮಹಾಪೋಷಕ ಕೊನೆತೋಟ ಮಹಾಬಲೇಶ್ವರ ಭಟ್ ಉಪಸ್ಥಿತರಿದ್ದರು. ಪ್ರತಿಷ್ಠಾನದ ಆಡಳಿತ ಧರ್ಮದರ್ಶಿ ನನ್ಯ ಅಚ್ಚುತ ಮೂಡೆತ್ತಾಯ ಸ್ವಾಗತಿಸಿದರು. ಶಿವರಾಮ ಶರ್ಮ ವಂದಿಸಿದರು.

Leave a Reply


ಸುಭಾಷಿತ

ನಿನ್ನೆ ಸತ್ತಿಹುದೀಗ, ನಾಳೆ ಹುಟ್ಟದೇ ಇರಬಹುದು, ಇಂದು ಸೊಗಸಿರುವುದು, ಅದನ್ನು ಯಾಕೆ ಮರೆಯಬೇಕು.

-ಉಮರ್ ಖಯ್ಯಾದ್

ಚಿತ್ರ-ವಿಚಿತ್ರ

ಸುದ್ದಿ ಸ್ಪೆಷಲ್

Finding the right hotel just got a whole lot easier - HotelsCombined.com

ನಮ್ಮ ಬಗ್ಗೆ

ಮೊದಲಿಗೆ ಕೇವಲ ಒಂದು ಹಾಳೆಯಲ್ಲಿ ಪ್ರಕಟವಾಗುತ್ತಿದ್ದ ಪುತ್ತೂರು ಸುದ್ದಿ ಬಿಡುಗಡೆ ಪತ್ರಿಕೆ ಇಂದು ಪ್ರತಿದಿನ ಆರು ಪುಟಗಳಿಂದ
... ಮುಂದೆ ಓದಿ

ಸಲಹೆ- ಸೂಚನೆ

ನಿಮ್ಮ ಸಲಹೆ ಸೂಚನೆಗಳಿಗೆ ಹಾರ್ದಿಕ ಸ್ವಾಗತ

ಇಲ್ಲಿ ಕ್ಲಿಕ್ಕಿಸಿ

Copyright © 2018 Suddinews.com . All Rights Reserved.
^ Back to Top