Thu 18 Jan 2018, 5:00PM

468X60

ಅರೆಭಾಷೆ ಅಕಾಡೆಮಿಗೆ ಅಧ್ಯಕ್ಷ – ಸದಸ್ಯರ ನೇಮಕ

Monday, August 18th, 2014 | suddisullia | no responses

ಕೆಲವು ತಿಂಗಳುಗಳಿಂದ ನೆನೆಗುದಿಗೆ ಬಿದ್ದಿದ್ದ ಕರ್ನಾಟಕ ಅರೆಭಾಷೆ ಸಾಹಿತ್ಯ ಮತ್ತು ಸಂಸ್ಕೃತಿ ಅಕಾಡೆಮಿಗೆ ನೂತನ ಅಧ್ಯಕ್ಷರ ಮತ್ತು ಸದಸ್ಯರ ನೇಮಕವಾಗಿದೆ. ಅಧ್ಯಕ್ಷತೆ ಈ ಹಿಂದೆ ವರದಿಯಾದಂತೆ ಸಾಹಿತಿ ವಿದ್ಯಾಧರ ಬಡ್ಡಡ್ಕರಿಗೆ ದೊರೆಯದೆ ಮಡಿಕೇರಿ ತಾಲೂಕಿನ ನಾಪೋಕ್ಲು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಕೊಲ್ಯದ ಗಿರೀಶ್‌ರವರಿಗೆ ದೊರೆತಿದ್ದು, ಅಕಾಡೆಮಿಗೆ ಒಟ್ಟು 6 ಸದಸ್ಯರನ್ನು ಸುಳ್ಯ ತಾಲೂಕಿನಿಂದ, ನಾಲ್ವರು ಸದಸ್ಯರನ್ನು ಕೊಡಗು ಮತ್ತು ಮೈಸೂರಿನಿಂದ ನೇಮಿಸಲಾಗಿದೆ. ಸುಳ್ಯದವರಾದ ಡಾ| ಪೂವಪ್ಪ ಕಣಿಯೂರು, ಡಾ| ಪ್ರಭಾಕರ ಶಿಶಿಲ, ಮೋಹನ್ ಸೋನಾ, ಯಶವಂತ ಕುಡೆಕಲ್ಲು, ಕು| ಶಾಹಿನಾ ಅನು ಸುಳ್ಯ, ಕೇಪು ಅಜಿಲ ಅರೆಭಾಷಾ ಅಕಾಡೆಮಿ ಸದಸ್ಯರಾಗಿದ್ದಾರೆ. ಮೂರ್ನಾಡಿನ ಡಾ| ಕೋರನ ಸರಸ್ವತಿ ಪ್ರಕಾಶ್, ಕೊಡಗಿನ ಅಮೆಮನೆಯ ವರಾಗಿದ್ದು ಮೈಸೂರಿನಲ್ಲಿ ನೆಲೆಸಿರುವ ಎ.ಕೆ.ಶಿವರಾಯ್, ಚೆಂಬು ಗ್ರಾಮದ ಹೊಸೂರಿನವರಾದ ಸಂಗೀತಾ ರವಿರಾಜ್, ಕೊಡಗಿನವರಾಗಿದ್ದು ಬೆಂಗಳೂರಿನಲ್ಲಿರುವ ಪೊನ್ನೇಟಿ ಸುನಿಲ್ – ನೇಮಕಗೊಂಡಿರುವ ಇತರ ಸದಸ್ಯರು.
ಕಳೆದ ಬಾರಿ ಅರೆಭಾಷೆ ಅಕಾ ಡೆಮಿ ಅಸ್ತಿತ್ವಕ್ಕೆ ಬಂದ ಪ್ರಥಮ ತಂಡದಲ್ಲಿ ಗೌಡ ಸಮುದಾಯದವ ರಿಗೆ ಮಾತ್ರ ಸದಸ್ಯತ್ವ ನೀಡಲಾಗಿತ್ತು. ಆದರೆ ಈ ಬಾರಿ ಅಕಾಡೆಮಿ ಸದಸ್ಯ ತ್ವಕ್ಕೆ ಜಾತ್ಯತೀತ ಸ್ವರೂಪ ಬಂದಿದೆ. ಗೌಡರಲ್ಲದ ಸಾಹಿತಿ ಡಾ| ಪ್ರಭಾಕರ ಶಿಶಿಲ, ಮುಸ್ಲಿಂ ಸಮುದಾಯದ ಕು| ಶಾಹಿನಾ ಅನು, ಪರಿಶಿಷ್ಟ ಜಾತಿಯ ಕೇಪು ಅಜಿಲ ರವರಿಗೆ ಸದಸ್ಯತ್ವ ನೀಡ ಲಾಗಿದೆ. ಸರಕಾರದ ಈ ಕ್ರಮಕ್ಕೆ ಪರ ವಿರೋಧ ಅಭಿಪ್ರಾಯಗಳು ಕೇಳಿ ಬರತೊಡಗಿವೆ.
ಅರೆಭಾಷೆ 10 ಕುಟುಂಬ 18 ಗೋತ್ರದ ಗೌಡ ಜನಾಂಗದವರ ಭಾಷೆ ಯಾಗಿರುವುದರಿಂದ ಆ ಜನಾಂಗದವ ರನ್ನು ಮಾತ್ರ ಅರೆಭಾಷೆ ಅಕಾಡೆಮಿಗೆ ಸದಸ್ಯರನ್ನಾಗಿ ಮಾಡ ಬೇಕು ಎಂಬ ಅಭಿಪ್ರಾಯ ಹಲವರದಿದ್ದರೆ, ಒಂದು ಭಾಷೆ ಒಂದು ಸಮುದಾಯಕ್ಕೆ ಮಾತ್ರ ಸೀಮಿತವಾಗಿದ್ದರೆ ಅದರ ಬೆಳವಣಿಗೆ ಸೀಮಿತಗೊಳ್ಳುತ್ತದೆ. ಅರೆಭಾಷೆ ಒಂದು ಪ್ರದೇಶದ ಭಾಷೆಯಾಗಿ ಬೆಳೆ ದಿರುವುದರಿಂದ ಆ ಭಾಷೆಯ ಮತ್ತು ಸಂಸ್ಕೃತಿಯ ಅರಿವಿರುವ ಇತರ ಸಮುದಾಯದವರನ್ನು ಅಕಾಡೆಮಿಗೆ ಸೇರಿಸಿಕೊಂಡು ಭಾಷೆಯನ್ನು ವಿಸ್ತರಿಸಬೇಕು ಎಂಬ ಅಭಿಪ್ರಾಯ ದವರೂ ಇದ್ದಾರೆ.
ಹಾಗಿದ್ದರೆ ಆ ಜಾತ್ಯತೀತ ಸ್ವರೂಪ ಅರೆಭಾಷಾ ಅಕಾಡೆಮಿ ಯಲ್ಲಿ ಮಾತ್ರ ಯಾಕೆ? ಕೊಡವ ಅಕಾಡೆಮಿಯಲ್ಲಿ ಕೊಡ ವರನ್ನು ಮಾತ್ರ ಸೇರಿಸಿಕೊಳ್ಳಲಾಗಿದೆ. ಬ್ಯಾರಿ ಅಕಾಡೆಮಿಯಲ್ಲಿ ಮುಸ್ಲಿಂ ಜನಾಂಗದ ವರನ್ನು ಮಾತ್ರ ನೇಮಿಸಲಾಗಿದೆ. ಅದರಲ್ಲಿ ಕೂಡಾ ಪರಿಶಿಷ್ಟ ಜಾತಿಯವರನ್ನು, ಅಲ್ಪಸಂಖ್ಯಾತರನ್ನು, ಹಿಂದುಳಿದ ವರ್ಗದವರನ್ನು ಸದಸ್ಯರನ್ನಾಗಿ ಮಾಡಲಿ – ಎಂಬ ಅಭಿಪ್ರಾಯ ಸುಳ್ಯದಲ್ಲಿ ವ್ಯಕ್ತವಾಗುತ್ತಿದೆ.
ಅರೆಭಾಷೆ ಅಕಾಡೆಮಿ ಸ್ಥಾಪನೆಯಾಗ ಬೇಕೆಂದು ಕೊಡಗು ಮೈಸೂರು ಭಾಗದ ಕೆಲವು ಮಂದಿ ಗೌಡ ನಾಯಕರು ಹಾಗೂ ಸುಳ್ಯದ ಗೌಡ ನಾಯಕರು ಪ್ರಯತ್ನ ನಡೆಸಿ, ಡಿ.ವಿ.ಸದಾನಂದ ಗೌಡರು ಮುಖ್ಯ ಮಂತ್ರಿಯಾ ಗಿರುವ ಸಮಯದಲ್ಲಿ ಅದು ಸಾಕಾರಗೊಂಡಿತ್ತು. ಪ್ರಥಮ ಅಧ್ಯಕ್ಷರಾಗಿ ಎನ್.ಎಸ್.ದೇವಿಪ್ರಸಾದ್ ಸಂಪಾಜೆಯವರು ನೇಮಕಗೊಂಡಿದ್ದರು.
ಆ ಸಂದರ್ಭ ಸುಳ್ಯ ಭಾಗದಿಂದ ಯಾರೆಲ್ಲ ಅಕಾಡೆಮಿ ಸದಸ್ಯರಾಗಬೇಕೆಂದು ಗೌಡರ ಯುವ ಸೇವಾ ಸಂಘದವರು ಪಟ್ಟಿ ಕೊಟ್ಟು ಪ್ರಯತ್ನ ನಡೆಸಿದ್ದರೋ ಅದು ಆಗದೆ ಬೇರೆಯವರು ಸದಸ್ಯತ್ವ ಪಡೆದಾಗ, ಗೌಡರ ಯುವ ಸೇವಾ ಸಂಘದವರು ತೀವ್ರ ಅಸಮಾ ಧಾನಗೊಂಡು ಮುಖ್ಯಮಂತ್ರಿ ಡಿ.ವಿ.ಸದಾನಂದ ಗೌಡರಿಗೆ ಆಕ್ರೋಶಪೂರಿತ ಪತ್ರ ಬರೆದಿದ್ದರು. ಈ ಬಾರಿ ಗೌಡರ ಯುವ ಸೇವಾ ಸಂಘದ ವರು ಈ ಭಾಗದ ನಾಲ್ವರು ಪ್ರಮುಖ ವ್ಯಕ್ತಿಗ ಳಾದ ಕೆ.ಆರ್.ಗಂಗಾಧರ್, ಮದುವೆಗದ್ದೆ ಭೋಜಪ್ಪಗೌಡ, ಎನ್.ಎ. ಜ್ಞಾನೇಶ್, ಕಾಮ ಧೇನು ಮಾಧವ ಗೌಡರ ಹೆಸರನ್ನು ಶಿಫಾರಸು ಮಾಡಿದ್ದರು. ಬ್ಲಾಕ್ ಕಾಂಗ್ರೆಸ್‌ನ ವತಿಯಿಂದ ಮದುವೆಗದ್ದೆ ಬೋಜಪ್ಪ ಗೌಡ, ಡಾ|ಎನ್.ಎ. ಜ್ಞಾನೇಶ್, ಕಾಮಧೇನು ಮಾಧವ ಗೌಡ,ಪಿ.ಸಿ. ಜಯರಾಮ, ಬಿ.ಸಿ.ವಸಂತ, ಹಾಗೂ ಸಿ.ಪಿ.ಜಯ ರಾಮ ಗೌಡರ ಹೆಸರು ಉಸ್ತುವಾರಿಸಚಿವರ ಮೂಲಕ ಸರಕಾರಕ್ಕೆ ಸಲ್ಲಿಸಲ್ಪಟ್ಟಿತ್ತು. ಆದರೆ ಈ ಬಾರಿಯೂ ಅವರು ಕೊಟ್ಟ ಹೆಸರುಗಳು ಪರಿಗಣನೆಗೆ ಬಂದಿಲ್ಲ. ಇದು ಅವರಲ್ಲಿ ತೀವ್ರ ಅಸಮಾಧಾನಕ್ಕೆ ಕಾರಣವಾಗಿದೆ.
ದೆಹಲಿಯಲ್ಲಿರುವ ಸುಳ್ಯದವರಾದ ಡಾ| ಪುರುಷೋತ್ತಮ ಬಿಳಿಮಲೆ ಯವರು ಸರಕಾರದ ನಿಕಟವರ್ತಿಗಳ ಮೂಲಕ ನೀಡಿದ ಪಟ್ಟಿಯ ಪ್ರಕಾರ ಸುಳ್ಯ ಭಾಗದ ಸದಸ್ಯರ ನೇಮಕವಾಗಿರು ವುದಾಗಿಯೂ, ಅಧ್ಯಕ್ಷರ ಮತ್ತು ಕೊಡಗು ಭಾಗದ ಸದಸ್ಯರ ನೇಮಕ ಮಾಜಿ ಸಂಸದ ಎಚ್.ವಿಶ್ವನಾಥರ ಶಿಫಾರಸಿನ ಪ್ರಕಾರ ಆಗಿರುವು ದಾಗಿಯೂ ಸುಳ್ಯದಲ್ಲಿ ವ್ಯಾಪಕ ಅಭಿಪ್ರಾಯವಿದೆ. ಬಿಳಿಮಲೆಯವರು ಅಕಾಡೆಮಿ ಸದಸ್ಯತ್ವಕ್ಕೆ ಕೆಲವು ಹೆಸರುಗಳನ್ನು ನೀಡಿದ್ದಾರೆಂದು, ವಿದ್ಯಾಧರ ಬಡ್ಡಡ್ಕರ ನೇಮಕವಾಗಿದೆ ಎಂಬ ವರದಿ ಬರು ವುದಕ್ಕಿಂತ ಮೊದಲೇ ಪ್ರಚಾರವಿತ್ತು. ಅವರು ತಾವಾಗಿಯೇ ಹೆಸರು ಕೊಟ್ಟಿದ್ದರೇ ಅಥವಾ ಸರಕಾರದ ಯಾರಾದರೂ ಕೇಳಿದ್ದರಿಂದ ಕೊಟ್ಟಿದ್ದರೇ ಎಂದು ತಿಳಿದು ಬಂದಿಲ್ಲ.
ಈ ಬಾರಿಯ ಅಕಾಡೆಮಿ ಅಧ್ಯಕ್ಷತೆಗೆ ವಿದ್ಯಾಧರ ಬಡ್ಡಡ್ಕರವರ ಹೆಸರು ಅಂತಿಮ ಗೊಂಡಿದೆ ಎಂದು ಮಾಧ್ಯಮಗಳಲ್ಲಿ ಪ್ರಕಟವಾ ದಾಗ ಮಡಿಕೇರಿ ತಾಲೂಕಿನ ಕಾಂಗ್ರೆಸ್ಸಿಗರ ಒತ್ತಡದ ಪರಿಣಾಮವಾಗಿ ಆಗಿನ ಸಂಸದ ಎಚ್.ವಿಶ್ವನಾಥರು ಸರಕಾರದ ಮೇಲೆ ಒತ್ತಡ ಹೇರಿ ಅರೆಭಾಷೆ ಮತ್ತು ಕೊಡವ ಅಕಾಡೆ ಮಿಯ ನೇಮಕವನ್ನು ತಡೆಹಿಡಿದಿದ್ದರು. ಈಗ ನಾಪೋಕ್ಲು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಕೊಲ್ಯದ ಗಿರೀಶರನ್ನು ಅರೆಭಾಷೆ ಅಕಾಡೆಮಿಗೆ ಅಧ್ಯಕ್ಷ ರನ್ನಾಗಿ ಹಾಗೂ ಕೊಡಗು ಜಿಲ್ಲಾ ಕಾಂಗ್ರೆಸ್ ವಕ್ತಾರ ಬಿದ್ದಾಟಂಡ ಎಸ್. ತಮ್ಮಯ್ಯರನ್ನು ಕೊಡವ ಅಕಾಡೆಮಿ ಅಧ್ಯಕ್ಷರನ್ನಾಗಿ ಮಾಡಿ ಘೋಷಣೆ ಮಾಡಲಾಗಿದೆ. ಆದರೆ ಅರೆಭಾಷೆ ಅಕಾಡೆಮಿಗೆ ಸದಸ್ಯರಾಗಿ ಆಯ್ಕೆಯಾಗಿರುವ ಇತರ ಒಂಬತ್ತು ಮಂದಿ ಕೂಡಾ ಯಾವುದೇ ರಾಜಕೀಯ ಪಕ್ಷದ ಕಾರ್ಯಕರ್ತರಲ್ಲ.
ಪೊನ್ನೇಟಿ ಸುನಿಲ್ ಎಂಬವರ ಬಗ್ಗೆ ಮಾಹಿತಿ ತಿಳಿದು ಬಂದಿಲ್ಲ.

 

Web

Leave a Reply


ಸುಭಾಷಿತ

ಜೀವನ ನೈಜವಾದುದು. ಉತ್ಸಾಹ ಪರಿಪೂರ್ಣವಾದುದು

-ಲಾಂಗ್ ಫೆಲೋ

ಚಿತ್ರ-ವಿಚಿತ್ರ

ಸುದ್ದಿ ಸ್ಪೆಷಲ್

Finding the right hotel just got a whole lot easier - HotelsCombined.com

ನಮ್ಮ ಬಗ್ಗೆ

ಮೊದಲಿಗೆ ಕೇವಲ ಒಂದು ಹಾಳೆಯಲ್ಲಿ ಪ್ರಕಟವಾಗುತ್ತಿದ್ದ ಪುತ್ತೂರು ಸುದ್ದಿ ಬಿಡುಗಡೆ ಪತ್ರಿಕೆ ಇಂದು ಪ್ರತಿದಿನ ಆರು ಪುಟಗಳಿಂದ
... ಮುಂದೆ ಓದಿ

ಸಲಹೆ- ಸೂಚನೆ

ನಿಮ್ಮ ಸಲಹೆ ಸೂಚನೆಗಳಿಗೆ ಹಾರ್ದಿಕ ಸ್ವಾಗತ

ಇಲ್ಲಿ ಕ್ಲಿಕ್ಕಿಸಿ

Copyright © 2018 Suddinews.com . All Rights Reserved.
^ Back to Top