Fri 19 Jan 2018, 5:12PM

468X60

ಬಜತ್ತೂರು : ನಾಪತ್ತೆಯಾದ ಮಹಿಳೆಯ ಶವ ಪತ್ತೆ

Tuesday, August 19th, 2014 | suddiputtur | no responses

ಆತ್ಮಹತ್ಯೆ ಶಂಕೆ-ಅಗ್ನಿಶಾಮಕ ದಳದ ಯಶಸ್ವಿ ಕಾರ‍್ಯಾಚರಣೆ

ಪುತ್ತೂರು: ದಿನದ ಹಿಂದೆ ನಾಪತ್ತೆಯಾಗಿದ್ದ ಮಹಿಳೆಯೋರ್ವರ ಶವ ಆ.19ರಂದು ಸಂಜೆ ವೇಳೆಗೆ ಬೆದ್ರೋಡಿ ಬಳಿ ನೇತ್ರಾವತಿ ನದಿಯಲ್ಲಿ ಪತ್ತೆಯಾಗಿದ್ದು ಅವರು ನದಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿರಬಹುದೆಂದು ಶಂಕಿಸಲಾಗಿದೆ. ಈ ಮಧ್ಯೆ ಮಹಿಳೆ ನದಿಗೆ ಹಾರಿರಬಹುದೆಂಬ ಶಂಕೆ ಮೇಲೆ ದೋಣಿ ಮೂಲಕ ಅಗ್ನಿಶಾಮಕ ದಳದ ಸಿಬ್ಬಂದಿ ಹುಡುಕಾಟ ನಡೆಸಿ ಶವ ಪತ್ತೆ ಹಚ್ಚುವಲ್ಲಿ ಯಶಸ್ವಿಯಾಗಿದ್ದಾರೆ.

ಬಜತ್ತೂರು ಗ್ರಾಮದ ಕಾಂಚನ ಪದಕ ನಿವಾಸಿ ರಾಮಣ್ಣ ಗೌಡ ಎಂಬವರ ಪತ್ನಿ ತಿಮ್ಮಕ್ಕ(೬೮ವ.)ಮೃತಪಟ್ಟವರಾಗಿದ್ದಾರೆ. ತಿಮ್ಮಕ್ಕರವರು ಆ.೧೮ರಂದು ಮಧ್ಯಾಹ್ನ ಮನೆಯಿಂದ ಮಗಳ ಮನೆಗೆಂದು ಬಂದಿದ್ದು ಆ ಬಳಿಕ ನಾಪತ್ತೆಯಾಗಿದ್ದರು. ನಿನ್ನೆ ಸಂಜೆ ಹಾಗೂ ರಾತ್ರಿ ತಿಮ್ಮಕ್ಕರವರಿಗಾಗಿ ಅವರ ಮಗ ನೇಮಣ್ಣ ಹಾಗೂ ಇತರರು ಹುಡುಕಾಟ ನಡೆಸಿದರೂ ಯಾವುದೇ ಪ್ರಯೋಜನವಾಗಿರಲಿಲ್ಲ. ಆ.೧೯ರಂದು ಬೆಳಿಗ್ಗೆಯೂ ಮಹಿಳೆ ಮನೆಯವರು ಹುಡುಕಾಟ ನಡೆಸಿದ್ದರು. ಈ ಮಧ್ಯೆ ನಿನ್ನೆ ಸಂಜೆ ಮಹಿಳೆಯೋರ್ವರು ಬೆದ್ರೋಡಿಯಲ್ಲಿರುವ ತೂಗುಸೇತುವೆಯಿಂದ ನೇತ್ರಾವತಿ ನದಿಗೆ ಹಾರಿದ್ದರು ಎಂಬ ಸುದ್ದಿ ಮನೆಯವರಿಗೆ ತಿಳಿದು ಬಂತು. ಈ ಹಿನ್ನೆಲೆಯಲ್ಲಿ ಮಧ್ಯಾಹ್ನದ ವೇಳೆಗೆ ಅಗ್ನಿಶಾಮಕ ದಳದ ಸಿಬ್ಬಂದಿಗಳು ದೋಣಿಯ ಮೂಲಕ ನೇತ್ರಾವತಿ ನದಿಯಲ್ಲಿ ಹುಡುಕಾಟ ನಡೆಸಿದ್ದರು. ಈ ವೇಳೆ ತೂಗುಸೇತುವೆಯಿಂದ ಸುಮಾರು ೧ ಕಿ.ಮೀ.ದೂರದ ಕಡಪು ಎಂಬಲ್ಲಿ ಬಂಡೆಕಲ್ಲಿನ ಮಧ್ಯೆ ಮಹಿಳೆಯ ಶವ ಪತ್ತೆಯಾಗಿದೆ.

ಆತ್ಮಹತ್ಯೆ ಶಂಕೆ: ಮೃತ ತಿಮ್ಮಕ್ಕ ಹಾಗೂ ಅವರ ಪತಿ ರಾಮಣ್ಣ ಗೌಡರವರು ಅನಾರೋಗ್ಯದಿಂದ ಬಳಲುತ್ತಿದ್ದರು ಎನ್ನಲಾಗಿದೆ. ಮನೆಯಲ್ಲಿ ಇಬ್ಬರಿಗೂ ಅಸೌಖ್ಯದಿಂದ್ದ ಹಿನ್ನೆಲೆಯಲ್ಲಿ ಔಷಧಿ ಖರೀದಿಗೆ ವೆಚ್ಚವಾಗುತ್ತಿರುವ ಬಗ್ಗೆ ತಿಮ್ಮಕ್ಕರವರು ಮನನೊಂದಿದ್ದರು. ಈ ಬಗ್ಗೆ ಪುತ್ರ ನೇಮಣ್ಣರೊಂದಿಗೂ ಹೇಳಿಕೊಂಡಿದ್ದರು. ಆದರೆ ನೇಮಣ್ಣರವರು ತಾಯಿಯನ್ನು ಸಮಾಧಾನಪಡಿಸಿದ್ದರು. ಆ.೧೮ರಂದು ಮಧ್ಯಾಹ್ನ ಕಾಂಚನ ಕ್ರಾಸ್ ಬಳಿಯ ಉದರ್ಲ ಎಂಬಲ್ಲಿರುವ ಪುತ್ರಿ ಮುತ್ತಕ್ಕರ ಮನೆಗೆ ಹೋಗಿ ಸೋಣ ಶನಿವಾರ ಊಟ ಮಾಡಲು ಅಂಬಟೆ ತೆಗೆದುಕೊಂಡು ಬರುವುದಾಗಿ ಹೇಳಿ ಮನೆಯಿಂದ ಹೊರಟು ಬಂದಿದ್ದರು. ಆದರೆ ಅವರು ಮಗಳ ಮನೆಗೆ ಹೋಗದೇ ಬೆದ್ರೋಡಿಯಲ್ಲಿರುವ ಮುಗೇರಡ್ಕಕ್ಕೆ ಸಂಪರ್ಕ ಕಲ್ಪಿಸುವ ತೂಗುಸೇತುವೆಯಿಂದ ನದಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಹೇಳಲಾಗಿದೆ. ಮಹಿಳೆಯೋರ್ವರು ನದಿಗೆ ಹಾರಿ ನದಿಯಲ್ಲಿ ತೇಲಿಕೊಂಡು ಹೋಗಿರುವುದನ್ನು ಗಮನಿಸಿದ ಸ್ಥಳೀಯರೋರ್ವರು ಬೆದ್ರೋಡಿಯಲ್ಲಿ ಕೆಲವರಿಗೆ ಮಾಹಿತಿ ನೀಡಿದ್ದರು. ಆದರೆ ಈ ಬಗ್ಗೆ ಯಾರೂ ಪೊಲೀಸರಿಗೆ ಮಾಹಿತಿ ನೀಡಿರಲಿಲ್ಲ. ಆ.೧೯ರಂದು ಬೆಳಿಗ್ಗೆ ತಿಮ್ಮಕ್ಕರವರ ಪುತ್ರ ನೇಮಣ್ಣರವರು ತಾಯಿ ಕಾಣೆಯಾಗಿರುವ ಬಗ್ಗೆ ಬೆದ್ರೋಡಿಯಲ್ಲಿ ವಿಚಾರಿಸುತ್ತಿದ್ದ ವೇಳೆ ಅವರಿಗೆ ನಿನ್ನೆ ಮಹಿಳೆಯೋರ್ವರು ನದಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂಬ ಸುದ್ದಿ ತಿಳಿದು ಬಂತು. ಈ ಬಗ್ಗೆ ಅವರು ಜಿ.ಪಂ.ಸದಸ್ಯ ಕೇಶವ ಗೌಡ ಹಾಗೂ ಇತರರಿಗೆ ಮಾಹಿತಿ ನೀಡಿದ್ದರು. ಬಳಿಕ ಪೊಲೀಸರಿಗೆ ದೂರು ನೀಡಿ ಅಗ್ನಿಶಾಮಕ ದಳದವರನ್ನು ಕರೆಸಿ ಹುಡುಕಾಟ ನಡೆಸಲಾಗಿದ್ದು ಅವರ ಶವ ಪತ್ತೆಗೊಂಡಿದೆ. ಉಪ್ಪಿನಂಗಡಿ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪ್ರಕರಣ ದಾಖಲಿಸಿಕೊಂಡಿದ್ದಾರೆ. ಜಿ.ಪಂ.ಸದಸ್ಯ ಕೇಶವ ಗೌಡ ಹಾಗೂ ಮತ್ತಿತರ ಗಣ್ಯರು ಕಾರ‍್ಯಾಚರಣೆ ವೇಳೆ ಉಪಸ್ಥಿತರಿದ್ದರು.

DSCN9057

DSCN9059

DSCN9060

bajatturu

Leave a Reply


ಸುಭಾಷಿತ

ಯಾವುದೇ ಮಗು ತತ್ವಜ್ಞಾನಿಯಾಗುವಂತೆ ಮಾಡುವುದೇ ಶಿಕ್ಷಣ.

– ಫ್ಲೇಟೋ

ಚಿತ್ರ-ವಿಚಿತ್ರ

ಸುದ್ದಿ ಸ್ಪೆಷಲ್

Finding the right hotel just got a whole lot easier - HotelsCombined.com

ನಮ್ಮ ಬಗ್ಗೆ

ಮೊದಲಿಗೆ ಕೇವಲ ಒಂದು ಹಾಳೆಯಲ್ಲಿ ಪ್ರಕಟವಾಗುತ್ತಿದ್ದ ಪುತ್ತೂರು ಸುದ್ದಿ ಬಿಡುಗಡೆ ಪತ್ರಿಕೆ ಇಂದು ಪ್ರತಿದಿನ ಆರು ಪುಟಗಳಿಂದ
... ಮುಂದೆ ಓದಿ

ಸಲಹೆ- ಸೂಚನೆ

ನಿಮ್ಮ ಸಲಹೆ ಸೂಚನೆಗಳಿಗೆ ಹಾರ್ದಿಕ ಸ್ವಾಗತ

ಇಲ್ಲಿ ಕ್ಲಿಕ್ಕಿಸಿ

Copyright © 2018 Suddinews.com . All Rights Reserved.
^ Back to Top