Sun 14 Jan 2018, 9:10AM

468X60

ಗಾಡ್ಗಿಳ್ ವರದಿ – ಕಸ್ತೂರಿ ರಂಗನ್ ವರದಿ ಬಗ್ಗೆ ಹೆದರಬೇಕಾಗಿಲ : ಪ್ರತಾಪ್‌ಸಿಂಹ

Monday, September 8th, 2014 | suddisullia | no responses

ಕೊ.ಸಂಪಾಜೆ, ಚೆಂಬು, ಪೆರಾಜೆ ಬಿಜೆಪಿ ವತಿಯಿಂದ ಸನ್ಮಾನ
ಪಶ್ಚಿಮ ಘಟ್ಟದ ಕುರಿತು ಮತ್ತು ಇಲ್ಲಿನ ಅರಣ್ಯದಂಚಿನ ಜನಗಳ ಸಮಸ್ಯೆ ಕುರಿತು ಕೇಂದ್ರ ಪರಿಸರ ಸಚಿ ವರಿಗೆ ಅರಿವಿದೆ. ಯಾವುದೇ ಕಾರ ಣಕ್ಕೂ ಅವರು ಆತಂಕದಿಂದ ಬದುಕು ವುದು ಬೇಡ. ಮಾಧವ ಗಾಡ್ಗಿಳ್ ಹಾಗೂ ಕಸ್ತೂರಿ ರಂಗನ್ ಸಮಿತಿಗ ಳನ್ನು ಹಿಂದಿನ ಕೇಂದ್ರ ನೇಮಿಸಿದ್ದು, ಆಗಿನ ಸರಕಾರಕ್ಕೆ ಸಮಿತಿಗಳು ವರದಿ ಸಲ್ಲಿಸಿದ್ದವು. ಗಾಡ್ಗಿಳ್ ಸಮಿತಿ ವರದಿ ಯನ್ನು ಕೇಂದ್ರ ಸರಕಾರ ಮೂಲೆ ತಳ್ಳಿದೆ. ಕಸ್ತೂರಿ ರಂಗನ್ ವರದಿಯನ್ನು ಅದೇ ರೀತಿ ಮಾಡಲಿದ್ದೇವೆ ಆದ್ದರಿಂದ ಎಲ್ಲರೂ ನಿಶ್ಚಿಂತೆಯಿಂದ ಇರಿ ಎಂದು ಮೈಸೂರು ಲೋಕಸಭಾ ಕ್ಷೇತ್ರದ ಸಂಸದ ಪ್ರತಾಪ್‌ಸಿಂಹ ಹೇಳಿದರು.
ಅವರು ಸೆ.೭ರಂದು ಭಾರತೀಯ ಜನತಾ ಪಾರ್ಟಿಯ ಮಡಿಕೇರಿ ತಾಲೂಕು ಘಟಕ ಹಾಗೂ ಸಂಪಾಜೆ, ಚೆಂಬು, ಪೆರಾಜೆ ಸ್ಥಾನೀಯ ಸಮಿತಿ ಗಳ ಆಶ್ರಯದಲ್ಲಿ ಏರ್ಪಡಿಸಿದ ಅಭಿನಂದನಾ ಕಾರ್ಯಕ್ರಮದಲ್ಲಿ ಮಾತನಾ ಡಿದರು.
ಪ್ರತಿ ಸಂಸತ್ ಸದಸ್ಯರ ಕ್ಷೇತ್ರಲ್ಲಿ ಒಂದು ಗ್ರಾಮವನ್ನು ದತ್ತು ಪಡೆದು ಮಾದರಿ ಗ್ರಾಮವಾಗಿ ಅಭಿವೃದ್ಧಿ ಪಡಿ ಸುವ ಪ್ರಧಾನಿ ನರೇಂದ್ರ ಮೋದಿ ಅವರ ಯೋಜನೆ ಅಕ್ಟೋಬರ್ 11ರಂದು ಜಾರಿಗೆ ಬರಲಿದ್ದು, ಸಂಪಾಜೆ ಗ್ರಾಮ ವನ್ನು ಆಯ್ಕೆ ಮಾಡಬೇಕೆಂದು, ಅಡಿಕೆ ಹಳದಿ ಎಲೆರೋಗದ ಸಾಲಮನ್ನಾ, ಕಾಡು ಪ್ರಾಣಿಗಳ ಹಾವಳಿ, ರಬ್ಬರ್ ಬೆಲೆ ಕುಸಿತ, ಮರಳು ಸಮಸ್ಯೆ, ಹೀಗೆ ಅನೇಕ ಸಮಸ್ಯೆಗಳ ಬಗ್ಗೆ ಗಮನ ಹರಿ ಸುವಂತೆ ಸಂಪಾಜೆ ಪಯಸ್ವಿನಿ ಸಹ ಕಾರಿ ಬ್ಯಾಂಕ್ ಅಧ್ಯಕ್ಷ ಬಾಲಚಂದ್ರ ಕಳಗಿ ಮನವಿ ಮಾಡಿದರು.
ಸಂಪಾಜೆಯ ಪಯಸ್ವಿನಿ ಸಹ ಕಾರಿ ಬ್ಯಾಂಕ್ ಸಭಾಂಗಣದಲ್ಲಿ ನಡೆದ ಕಾರ್ಯಕ್ರಮದಲ್ಲಿ ಪ್ರತಾಪ್ ಸಿಂಹ ಅವರನ್ನು ಸನ್ಮಾನಿಸಲಾಯಿತು. ಯುವ ಬ್ರಿಗೇಡ್ ವತಿಯಿಂದಲೂ ಸನ್ಮಾನಿ ಸಲಾಯಿತು.
ಅಧ್ಯಕ್ಷತೆಯನ್ನು ಸ್ಥಾನೀಯ ಸಮಿ ತಿಯ ಅಧ್ಯಕ್ಷ ಕುಮಾರ್ ಚಿದ್ಗಾರ್ ವಹಿಸಿದರು. ಶಾಸಕ ಕೆ.ಜಿ.ಬೋಪಯ್ಯ, ಬಿಜೆಪಿ ಜಿಲ್ಲಾಧ್ಯಕ್ಷ ಸುಜಾ ಕುಶಾಲಪ್ಪ, ಬಿಜೆಪಿ ತಾಲೂಕು ಸಮಿತಿ ಕಾರ್ಯದರ್ಶಿ ರವಿ ಬಸಪ್ಪ, ವಕ್ತಾರ ಸುಬ್ರಹ್ಮಣ್ಯ ಉಪಾಧ್ಯಾಯ, ಜಿಲ್ಲಾ ಪಂಚಾಯತ್ ಉಪಾಧ್ಯಕ್ಷೆ ಬೀನಾ ಬೊಳ್ಳಪ್ಪ, ಸದಸ್ಯೆ ಬಬ್ಬೀರ ಸರಸ್ವತಿ, ತಾಲೂಕು ಪಂಚಾಯತ್ ಸದಸ್ಯೆ ಯಶೋದಾ ಮೋನಪ್ಪ, ಗ್ರಾಮ ಪಂಚಾಯತ್ ಅಧ್ಯಕ್ಷೆ ಅನಿತಾ ಚಂದ್ರಶೇಖರ್, ರಾಜ್ಯ ಅರೆಭಾಷೆ ಅಕಾಡೆಮಿಯ ಮಾಜಿ ಅಧ್ಯಕ್ಷ ಎನ್.ಎಸ್.ದೇವಿಪ್ರಸಾದ್ ಅತಿಥಿಗಳಾಗಿದ್ದರು.
ಚೆಂಬು : ಚೆಂಬು ಗ್ರಾಮ ಪಂಚಾಯತ್ ಸಭಾಂಗಣದಲ್ಲಿ ನಾಗರಿಕ ಸನ್ಮಾನ ಸ್ವೀಕರಿಸಿ ಅವರು ಮಾತನಾಡಿ100 ದಿನದಲ್ಲಿ ತಾನು 54 ದಿನಗಳನ್ನು ಸಂಸತ್ತಿನಲ್ಲಿಯೇ ಕಳೆದಿದ್ದೇನೆ. ಸಮಸತ್ತಿಗೆ ಹೊಸಬನಾದರೂ 544 ಸಂಸದರ ಪೈಕಿ 12ನೇ ಸ್ಥಾನ ಪಡೆದಿದ್ದೇನೆ. ಸಂಸದ ನಿಧಿಯಿಂದ ಕ್ಷೇತ್ರಕ್ಕೆ ಎರಡೂವರೆ ಕೋಟಿ ಬಿಡುಗಡೆ ಮಾಡಿಸಿದ್ದೇನೆ ಈ ಅನುದಾನವನ್ನು ಪಕ್ಷದ, ಶಾಸಕರೊಂದಿಗೆ ಚರ್ಚಿಸಿ ಪಡೆದುಕೊಳ್ಳಿ ಎಂದವರು ಹೇಳಿದರು.
ಶಾಸಕ ಕೆ.ಜಿ.ಬೋಪಯ್ಯ, ಬಿಜೆಪಿ ಜಿಲ್ಲಾಧ್ಯಕ್ಷ ಸುಜಾ ಕುಶಾಲಪ್ಪ, ಸ್ಥಾನೀಯ ಸಮಿತಿ ಅಧ್ಯಕ್ಷ ಪಿ.ಜೆ.ಮಾಧವ, ಬಿಜೆಪಿ ತಾಲೂಕು ಸಮಿತಿ ಕಾರ್ಯದರ್ಶಿ ರವಿ ಬಸಪ್ಪ, ವಕ್ತಾರ ಸುಬ್ರಹ್ಮಣ್ಯ ಉಪಾಧ್ಯಾಯ, ಜಿಲ್ಲಾ ಪಂಚಾಯತ್ ಉಪಾಧ್ಯಕ್ಷೆ ಬೀನಾ ಬೊಳ್ಳಪ್ಪ, ಸದಸ್ಯೆ ಬಬ್ಬೀರ ಸರಸ್ವತಿ, ತಾಲೂಕು ಪಂಚಾಯತ್ ಸದಸ್ಯೆ ಯಶೋದಾ ಮೋನಪ್ಪ, ಗ್ರಾಮ ಪಂಚಾಯತ್ ಅಧ್ಯಕ್ಷೆ ತಾರಾವತಿ, ಸಂಪಾಜೆ ಪಯಸ್ವಿನಿ ಸಹಕಾರಿ ಬ್ಯಾಂಕ್ ಅಧ್ಯಕ್ಷ ಬಾಲಚಂದ್ರ ಕಳಗಿ ಅತಿಥಿಗಳಾಗಿದ್ದರು. ಗೋಪಾಲಕೃಷ್ಣ ಹೊಸೂರು, ಗ್ರಾ.ಪಂ.ಸದಸ್ಯರಾದ ಅನಂತ ಎನ್.ಸಿ, ಕೃಷ್ಣಪ್ಪ ನಡುಬೆಟ್ಟು, ಗಾಯತ್ರಿ ಉಪಸ್ಥಿತರಿದ್ದರು.
ಗ್ರಾ.ಪಂ.ಸದಸ್ಯ ಎನ್.ಸಿ.ಅನಂತ ಪ್ರಾಸ್ತಾವಿಕ ಮಾತನಾಡಿ ಅರಣ್ಯ ಇಲಾಖೆ ಮತ್ತು ರೆವಿನ್ಯೂ ಇಲಾಖೆಯಿಂದ ರೈತರಿಗೆ ನೋಟಿಸ್ ಜಾರಿ ಕುರಿತು, ರಬ್ಬರ್ ಧಾರಣೆ ಕುಸಿತ, ಅಡಿಕೆ ಹಳದಿರೋಗ ಕುರಿತು ಗಮನ ಹರಿಸುವಂತೆ ಮನವಿ ಮಾಡಿದರು.
ಪೆರಾಜೆ : ಪೆರಾಜೆಯಲ್ಲಿ ಗ್ರಾಮ ಪಂಚಾಯತ್ ಸಭಾಂಗಣದಲ್ಲಿ ನಡೆದ ಅಭಿನಂದನಾ ಸಭೆಯಲ್ಲಿ ಬಿಜೆಪಿ ಮುಖಂಡ ನಾಗೇಶ್ ಕುಂದಲ್ಪಾಡಿ ಪ್ರಾಸ್ತಾವಿಕ ಮಾತನಾಡಿ ಅಡಿಕೆಕೊಳೆರೋಗ, ಹಳದಿರೋಗ, ಗ್ರಾಮದ ರಸ್ತೆ ಸಮಸ್ಯೆಗಳ ಬಗ್ಗೆ ಗಮನ ಹರಿಸುವಂತೆ ಮನವಿ ಮಾಡಿದರು.
ಸಂಸದರು ಪೆರಾಜೆ ದೇವಸ್ಥಾನಕ್ಕೆ ಭೇಟಿ ನೀಡಿ ಅನ್ನಪ್ರಸಾದ ಸ್ವೀಕರಿಸಿದರು. ಶಾಸಕ ಕೆ.ಜಿ.ಬೋಪಯ್ಯ, ಬಿಜೆಪಿ ಜಿಲ್ಲಾಧ್ಯಕ್ಷ ಸುಜಾ ಕುಶಾಲಪ್ಪ, ಬಿಜೆಪಿ ತಾಲೂಕು ಸಮಿತಿ ಕಾರ್ಯದರ್ಶಿ ರವಿ ಬಸಪ್ಪ, ವಕ್ತಾರ ಸುಬ್ರಹ್ಮಣ್ಯ ಉಪಾಧ್ಯಾಯ, ಜಿ.ಪಂ. ಉಪಾಧ್ಯಕ್ಷೆ ಬೀನಾ ಬೊಳ್ಳಪ್ಪ, ಸದಸ್ಯೆ ಬಬ್ಬೀರ ಸರಸ್ವತಿ, ತಾಲೂಕು ಪಂಚಾಯತ್ ಸದಸ್ಯೆ ಯಶೋದಾ ಮೋನಪ್ಪ, ಗ್ರಾಮ ಪಂಚಾಯತ್ ಅಧ್ಯಕ್ಷೆ ಗೀತಾ ಮನಮೋಹನ, ಸಂಪಾಜೆ ಪಯಸ್ವಿನಿ ಸಹಕಾರಿ ಬ್ಯಾಂಕ್ ಅಧ್ಯಕ್ಷ ಬಾಲಚಂದ್ರ ಕಳಗಿ ಅತಿಥಿಗಳಾಗಿದ್ದರು. ಪದ್ಮಾ ತಿರುಮಲೇಶ್ವರ, ಪ್ರಮೀಳಾ ಭಾರದ್ವಜ್, ಪ್ರಸನ್ನ ನೆಕ್ಕಿಲ, ನಂಜಪ್ಪ ನಿಡ್ಯಮಲೆ, ಎ.ಸಿ.ಹೊನ್ನಪ್ಪ, ಗ್ರಾ.ಪಂ.ಸದಸ್ಯರಾದ ಗಾಂಧಿಪ್ರಸಾದ್ ಬಂಗಾರಕೋಡಿ, ಬಾಲಕೃಷ್ಣ ಆಚಾರಿ ಕುಂಬಳಚೇರಿ, ಅಲ್ಪಸಂಖ್ಯಾತ ಜಿಲ್ಲಾ ಕಾರ್ಯದರ್ಶಿ ಯೂಸುಫ್ ಬಯಂಬು ಉಪಸ್ಥಿತರಿದ್ದರು.

ಪೆರಾಜೆ ಪೊಟೋ

Leave a Reply


ಸುಭಾಷಿತ

ಒಳ್ಳೆಯವರು ನಿಷ್ಕ್ರಿಯರಾದಾಗ ತಪ್ಪುಗಳು ಕೆಡುಕುಗಳು ವಿಜೃಂಭಿಸುತ್ತದೆ.

-ವಿದುರ ನೀತಿ

ಚಿತ್ರ-ವಿಚಿತ್ರ

ಸುದ್ದಿ ಸ್ಪೆಷಲ್

Finding the right hotel just got a whole lot easier - HotelsCombined.com

ನಮ್ಮ ಬಗ್ಗೆ

ಮೊದಲಿಗೆ ಕೇವಲ ಒಂದು ಹಾಳೆಯಲ್ಲಿ ಪ್ರಕಟವಾಗುತ್ತಿದ್ದ ಪುತ್ತೂರು ಸುದ್ದಿ ಬಿಡುಗಡೆ ಪತ್ರಿಕೆ ಇಂದು ಪ್ರತಿದಿನ ಆರು ಪುಟಗಳಿಂದ
... ಮುಂದೆ ಓದಿ

ಸಲಹೆ- ಸೂಚನೆ

ನಿಮ್ಮ ಸಲಹೆ ಸೂಚನೆಗಳಿಗೆ ಹಾರ್ದಿಕ ಸ್ವಾಗತ

ಇಲ್ಲಿ ಕ್ಲಿಕ್ಕಿಸಿ

Copyright © 2018 Suddinews.com . All Rights Reserved.
^ Back to Top