Thu 18 Jan 2018, 7:44PM

468X60

ಏಲಡ್ಕ ಬಂಡಾಜೆ ಅಂಗನವಾಡಿಯಲ್ಲಿ ಬಾಲವಿಕಾಸ ಸಮಿತಿ ಸಭೆ- ಕೊಡುಗೆ

Wednesday, September 10th, 2014 | suddiputtur | no responses

ಕಾಣಿಯೂರು: ಏಲಡ್ಕ ಬಂಡಾಜೆ ಅಂಗನವಾಡಿ ಕೇಂದ್ರದ ಬಾಲವಿಕಾಸ ಸಮಿತಿಯ ಸಭೆಯು  ಸಮಿತಿಯ ಅಧ್ಯಕ್ಷ ಪದ್ಮಯ್ಯ ಗೌಡ ಅನಿಲರವರ ಅಧ್ಯಕ್ಷತೆಯಲ್ಲಿ ನಡೆಯಿತು. ಈ ಸಂದರ್ಭದಲ್ಲಿ ಅಂಗನವಾಡಿ ಕೇಂದ್ರಕ್ಕೆ ನಿವೃತ್ತ ಶಿಕ್ಷಕ ಜಯರಾಮ ಗೌಡ ಬಂಡಾಜೆಯವರು ನೀರಿನ ಡ್ರಮ್, ನಾವೂರು ಶ್ರೀ ಸುಬ್ರಹ್ಮಣ್ಯ ದೇವಸ್ಥಾನದ ಅರ್ಚಕ ಶಿವಭಟ್‌ರವರು ಪಾತ್ರೆ, ನಾವೂರು ಶ್ರೀ ಸುಬ್ರಹ್ಮಣ್ಯ ದೇವಸ್ಥಾನದ ಅನುವಂಶಿಕ ಮೊಕ್ತೇಸರರಾದ ಹರಿಯಪ್ಪ ಗೌಡ ನಾವೂರು ಪಾತ್ರೆ ಹಾಗೂ ಯಮುನಾ ಪಕೀರ ಬಂಡಾಜೆ, ಲೀಲಾವತಿ ಕುಂಞ ಬಂಡಾಜೆ, ರತಿ ತಿಪ್ಪ ಬಂಡಾಜೆಯವರು ಚಯರ್‌ಗಳನ್ನು ಕೊಡುಗೆಯಾಗಿ ನೀಡಿದರು. ಮೇಲ್ವೀಚಾರಕಿ ಸುಜಾತರವರು ಇಲಾಖೆಯ ಬಗ್ಗೆ ಮಾಹಿತಿ ನೀಡಿದರು. ಸಮಿತಿಯ ಸದಸ್ಯ ಉಮೇಶ್ ಬಂಡಾಜೆಯವರು ಅಂಗನವಾಡಿ ಕೇಂದ್ರದ ಕಟ್ಟಡದ ಕುರಿತು ಮಾಹಿತಿ ನೀಡಿದರು. ಆಶಾಕಾರ್ಯಕರ್ತೆ ವಾರಿಜ, ತೀರ್ಥೇಶ್ವರ ನಾವೂರು, ಮೇದಪ್ಪ ಗೌಡ ನಾವೂರು, ವೀಣಾ ಸೀತಾರಾಮ ನಾವೂರು ಹಾಗೂ ಸಮಿತಿ ಸದಸ್ಯರು ಉಪಸ್ಥಿತರಿದ್ದರು. ಅಂಗನವಾಡಿ ಕಾರ್ಯಕರ್ತೆ ಸುಮಿತ್ರಾರವಿರವರು ಸ್ವಾಗತಿಸಿ, ಮಾಲತಿ ಪ್ರಾರ್ಥಿಸಿದರು. ಉಮೇಶ್ ಬಂಡಾಜೆ ವಂದಿಸಿದರು.

 ಚಿತ್ರ: ದೀಪಿಕಾ ಕಾಣಿಯೂರು

yeladka photo

 

Leave a Reply


ಸುಭಾಷಿತ

ಧರ್ಮಗಳು ಆನಂದಗೊಳಿಸುವಂತಹ ದ್ವೀಪಗಳು,  ಆತ್ಮ ಮತ್ತು ಸ್ಪೂರ್ತಿಯ ತಾಣಗಳು.

– ಎ.ಪಿ.ಜೆ ಕಲಾಂ

ಚಿತ್ರ-ವಿಚಿತ್ರ

ಸುದ್ದಿ ಸ್ಪೆಷಲ್

Finding the right hotel just got a whole lot easier - HotelsCombined.com

ನಮ್ಮ ಬಗ್ಗೆ

ಮೊದಲಿಗೆ ಕೇವಲ ಒಂದು ಹಾಳೆಯಲ್ಲಿ ಪ್ರಕಟವಾಗುತ್ತಿದ್ದ ಪುತ್ತೂರು ಸುದ್ದಿ ಬಿಡುಗಡೆ ಪತ್ರಿಕೆ ಇಂದು ಪ್ರತಿದಿನ ಆರು ಪುಟಗಳಿಂದ
... ಮುಂದೆ ಓದಿ

ಸಲಹೆ- ಸೂಚನೆ

ನಿಮ್ಮ ಸಲಹೆ ಸೂಚನೆಗಳಿಗೆ ಹಾರ್ದಿಕ ಸ್ವಾಗತ

ಇಲ್ಲಿ ಕ್ಲಿಕ್ಕಿಸಿ

Copyright © 2018 Suddinews.com . All Rights Reserved.
^ Back to Top