Mon 15 Jan 2018, 11:27PM

468X60

ಮುಂಡಾಜೆ: ಕಬಡ್ಡಿ, ವಾಲಿಬಾಲ್ ತಂಡಕ್ಕೆ ಸಮವಸ್ತ್ರ ವಿತರಣೆ

Sunday, September 14th, 2014 | suddiblt | no responses

mundaje (2)  mundaje  mundaje (1)ಮುಂಡಾಜೆ: ಮುಂಡಾಜೆ ಪ್ರೌಢ ಶಾಲೆಯನ್ನು ಪ್ರತಿನಿಧಿಸಿ ಜಿಲ್ಲಾ ಮಟ್ಟಕ್ಕೆ ಆಯ್ಕೆಯಾದ ವಾಲಿಬಾಲ್ ಮತ್ತು ಕಬಡ್ಡಿ ತಂಡಕ್ಕೆ ಕ್ರೀಡಾ ಸಮವಸ್ತ್ರವನ್ನು ಸೆ. ೧೨ ರಂದು ಶಿಕ್ಷಣ ಸಂಸ್ಥೆಯ ಅಧ್ಯಕ್ಷ, ಜಿಲ್ಲೆಯ ಹಿರಿಯ ಸಹಕಾರಿಗಳಲ್ಲೊರ್ವರಾದ ಶ್ರೀಧರ ಜಿ ಭಿಡೆ ಅವರು ವಿತರಿಸಿದರು. ಯಂಗ್ ಚಾಲೆಂಜರ್‍ಸ್‌ನ ಸಭಾಂಗಣದಲ್ಲಿ ನಡೆದ ಸರಳ ಸಮಾರಂಭದಲ್ಲಿ, ಸಂಘದ ಹಿರಿಯ ಆಟಗಾರರಾಗಿದ್ದು ಪ್ರಸ್ತುತ ವಿದೇಶದಲ್ಲಿರುವ ಹರ್ಷದ್ ಮತ್ತು ಅಲ್ತಾಫ್ ಅವರು ಪ್ರಾಯೋಜಿಸಿದ ಸಮವಸ್ತ್ರಗಳನ್ನು ಹಸ್ತಾಂತರಿಸಲಾಯಿತು. ಅಧ್ಯಕ್ಷತೆಯನ್ನು ಸಂಘದ ಉಪಾಧ್ಯಕ್ಷ ಅಶ್ರಫ್ ಆಲಿಕುಂಞಿ ವಹಿಸಿದ್ದರು. ಸಂಘದ ಸಂಚಾಲಕ ನಾಮದೇವ ರಾವ್ ಪ್ರಾಸ್ತಾವಿಕವಾಗಿ ಮಾತನಾಡಿದರು. ಪ್ರೌಢ ಶಾಲಾ ದೈಹಿಕ ಶಿಕ್ಷಣ ಶಿಕ್ಷಕ ಗುಣಪಾಲ ಎಂ. ಎಸ್ ಸ್ವಾಗತಿಸಿದರು. ಹರ್ಷದ್ ಅವರ ತಂದೆ ಇಸ್ಮಾಯಿಲ್, ದೈಹಿಕ ಶಿಕ್ಷಣ ಶಿಕ್ಷಕ ಜಯಾನಂದ ಮತ್ತು ಸಹಶಿಕ್ಷಕ ಜಂಶೀರ್ ಉಪಸ್ಥಿತರಿದ್ದರು. ಇದೇ ಸಂದರ್ಭದಲ್ಲಿ ಕಳೆದ ಬಾರಿಯ ಕ್ರೀಡಾ ಕೂಟದಲ್ಲಿ ರಾಜ್ಯ ಮತ್ತು ರಾಷ್ಟ್ರ ಮಟ್ಟದಲ್ಲಿ ಸಾಧನೆ ಮೆರೆದ ಕ್ರೀಡಾಪಟುಗಳನ್ನು ಶ್ರೀಧರ ಜಿ ಭಿಡೆ ಅವರು ಅಭಿನಂದಿಸಿದರು.

Leave a Reply


ಸುಭಾಷಿತ

ಪ್ರತಿಯೊಂದು ದಿನವೂ ನಮ್ಮ ಅಂತಿಮ ದಿನ ಎನ್ನುವ ಹಾಗೆ ಜೀವಿಸಬೇಕು.

– ಎಡ್ವರ್ಡ್ ಡೌಡಸ್

ಚಿತ್ರ-ವಿಚಿತ್ರ

ಸುದ್ದಿ ಸ್ಪೆಷಲ್

Finding the right hotel just got a whole lot easier - HotelsCombined.com

ನಮ್ಮ ಬಗ್ಗೆ

ಮೊದಲಿಗೆ ಕೇವಲ ಒಂದು ಹಾಳೆಯಲ್ಲಿ ಪ್ರಕಟವಾಗುತ್ತಿದ್ದ ಪುತ್ತೂರು ಸುದ್ದಿ ಬಿಡುಗಡೆ ಪತ್ರಿಕೆ ಇಂದು ಪ್ರತಿದಿನ ಆರು ಪುಟಗಳಿಂದ
... ಮುಂದೆ ಓದಿ

ಸಲಹೆ- ಸೂಚನೆ

ನಿಮ್ಮ ಸಲಹೆ ಸೂಚನೆಗಳಿಗೆ ಹಾರ್ದಿಕ ಸ್ವಾಗತ

ಇಲ್ಲಿ ಕ್ಲಿಕ್ಕಿಸಿ

Copyright © 2018 Suddinews.com . All Rights Reserved.
^ Back to Top