Thu 11 Jan 2018, 3:46AM

468X60

ಸಾಂಸ್ಕೃತಿಕ ಸ್ಪರ್ಧೆ : ಕೆ.ಎಸ್.ಎಸ್.ಗೆ ರಾಜ್ಯ ಪ್ರಶಸ್ತಿ

Thursday, September 18th, 2014 | suddisullia | no responses

ವಿಶ್ವ ಮಾನವ ವಿದ್ಯಾರ್ಥಿ ಯುವ ವೇದಿಕೆ ಮೈಸೂರು ಇದರ ಆಶ್ರಯದಲ್ಲಿ ಮೈಸೂರಿನ ಎಂ.ಎಂ.ಸಿ.ಕಲಾ ಮಂದಿರದಲ್ಲಿ ನಡೆದ ಎರಡು ದಿನಗಳ ರಾಜ್ಯ ಮಟ್ಟದ ಅಂತರ್ ಕಾಲೇಜು ಸಾಂಸ್ಕೃತಿಕ ಮೇಳದಲ್ಲಿ ಸುಬ್ರಹ್ಮಣ್ಯದ ಕೆ.ಎಸ್.ಎಸ್.ಕಾಲೇಜಿನ ಸಾಂಸ್ಕೃತಿಕ ತಂಡವು ರಾಜ್ಯಮಟ್ಟದಲ್ಲಿ ಐದು ತಂಡ ಪ್ರಶಸ್ತಿಯನ್ನು ಪಡೆದುಕೊಂಡಿದೆ. ಅಲ್ಲದೆ ಮೈಸೂರು ದಸರಾದ ಯುವ ಸಂಭ್ರಮದಲ್ಲಿ ಭಾಗವಹಿಸುವ ಅವಕಾಶ ಗಿಟ್ಟಿಸಿಕೊಂಡಿದೆ.

ಕಾಲೇಜಿನ ಸುಮಾರು 22 ಪ್ರತಿಭಾನ್ವಿತ ವಿದ್ಯಾರ್ಥಿಗಳನ್ನೊಳಗೊಂಡ ತಂಡವು ಪ್ರದರ್ಶಿಸಿದ ಪಾಶ್ಚಾತ್ಯ ಸಮೂಹ ನೃತ್ಯ, ಸಮೂಹ ಮೂಕಾಭಿನಯ, ಪಾರಂಪರಿಕ ವೇಷಭೂ ಷಣ (ಸಮೂಹ) ವಿಭಾಗದಲ್ಲಿ ಪ್ರಥಮ ಸ್ಥಾನ ಗಳಿಸಿತು. ಉಳಿದಂತೆ ಜನಪದ ನೃತ್ಯ (ಸಮೂಹ), ಭರತನಾಟ್ಯ (ಸಮೂಹ) ವಿಭಾಗದಲ್ಲಿ ದ್ವಿತೀಯ ಪ್ರಶಸ್ತಿಯನ್ನು ತನ್ನದಾಗಿಸಿಕೊಂಡಿತು. ಕಲಾ ಸ್ಪರ್ಧೆ ಯಲ್ಲಿ ಕಾಲೇಜಿನ ವಿದ್ಯಾರ್ಥಿ ಗಳಾದ ಅಶ್ವಿನಿ ಕೆ.ಜಿ, ಪ್ರಜ್ವಲ್, ಜಲಜಾಕ್ಷಿ, ಸುಷ್ಮಾ ಕೆ.ಎಚ್, ವಿಜೇತ್ ಕುಮಾರ್ ರೈ, ಭರತೇಶ್, ಅಕ್ಷತಾ ಕೆ.ಆರ್, ಭವ್ಯಾ ಆರ್., ಚೈತ್ರಾ ಕೆ.ಜೆ, ಪ್ರಸಾದ್, ಪೂಜಾ.ಎಚ್, ಪ್ರಶಾಂತ್, ದಿವ್ಯಾ.ಡಿ, ಪ್ರತೀಕಾ, ಮಾನಸ ಎಸ್.ಶೆಟ್ಟಿ, ನಯನಾ, ಶ್ವೇತಾ, ನಮಿತ, ಶಾಲಿನಿ, ದೇವಿಕಾ, ಅರುಣ್ ಕುಮಾರ್, ಚೈತ್ರಾ ಬಿ.ಆರ್ ಭಾಗವಹಿಸಿದ್ದರು. ವಿದ್ಯಾರ್ಥಿಗಳಿಗೆ ವಾಣಿಜ್ಯ ಶಾಸ್ತ್ರ ಉಪನ್ಯಾಸಕ ಬಾಲಕೃಷ್ಣ ಪೈ ಮಾರ್ಗದರ್ಶನ ನೀಡಿ ದ್ದಾರೆ. ನೃತ್ಯಗುರು ಪ್ರಮೋದ್ ಕುಮಾರ್ ರೈ ಬೆಳ್ಳಾರೆ ನೃತ್ಯ ನಿರ್ದೇಶನ ನೀಡಿದ್ದಾರೆ. ಉಪನ್ಯಾಸಕಿ ಸುವರ್ಣಾ ಸಹ ನಿರ್ದೇಶನ ಒದಗಿಸಿದ್ದಾರೆ. ಅಶೋಕ್ ಮತ್ತು ಸನತ್ ಸಹಕರಿಸಿದ್ದರು.

College Subramanya

Leave a Reply


ಸುಭಾಷಿತ

ಯಾವುದೇ ಮಗು ತತ್ವಜ್ಞಾನಿಯಾಗುವಂತೆ ಮಾಡುವುದೇ ಶಿಕ್ಷಣ.

– ಫ್ಲೇಟೋ

ಚಿತ್ರ-ವಿಚಿತ್ರ

ಸುದ್ದಿ ಸ್ಪೆಷಲ್

Finding the right hotel just got a whole lot easier - HotelsCombined.com

ನಮ್ಮ ಬಗ್ಗೆ

ಮೊದಲಿಗೆ ಕೇವಲ ಒಂದು ಹಾಳೆಯಲ್ಲಿ ಪ್ರಕಟವಾಗುತ್ತಿದ್ದ ಪುತ್ತೂರು ಸುದ್ದಿ ಬಿಡುಗಡೆ ಪತ್ರಿಕೆ ಇಂದು ಪ್ರತಿದಿನ ಆರು ಪುಟಗಳಿಂದ
... ಮುಂದೆ ಓದಿ

ಸಲಹೆ- ಸೂಚನೆ

ನಿಮ್ಮ ಸಲಹೆ ಸೂಚನೆಗಳಿಗೆ ಹಾರ್ದಿಕ ಸ್ವಾಗತ

ಇಲ್ಲಿ ಕ್ಲಿಕ್ಕಿಸಿ

Copyright © 2018 Suddinews.com . All Rights Reserved.
^ Back to Top