Wed 17 Jan 2018, 7:51AM

468X60

ಮಕ್ಕಳಿಗೆ ಕಂಕಟವಾದ ಮೃತ್ಯುಕೂಪ ! ಮುಚ್ಚಿದರೆ ಬಜಿರೆ ಶಾಲೆಗೆ ವರದಾನ

Thursday, September 18th, 2014 | suddiblt | no responses

          bajire koreವೇಣೂರು: ಮಕ್ಕಳ ಪಾಲಿಗೆ ಮೃತ್ಯು ಕೂಪವಾಗಬಲ್ಲ ಕಲ್ಲಿನ ಕೋರೆಯೊಂದು ವೇಣೂರು ವಲಯದ ಬಜಿರೆ ಗ್ರಾಮದ ಮುದ್ದಾಡಿ ಹಿ.ಪ್ರಾ. ಶಾಲಾ ಶಾಲೆಯ ಮೈದಾನಕ್ಕೆ ಸೇರಿದ ಜಾಗದಲ್ಲಿದೆ.
ಹತ್ತಾರು ವರ್ಷಗಳಾದರೂ ಈ ಕಲ್ಲಿನ ಕೋರೆಯನ್ನು ಸಂಬಂಧಿತರು ಮುಚ್ಚಿ ಹಾಕಿಲ್ಲ. ಸರಕಾರಿ ಅನುದಾನ ಅಲಭ್ಯತೆಯಿಂದಾಗಿ ಬಾಯ್ತೆರೆದು ಕೊಂಡಿರುವ ಕೋರೆ ಗುಂಡಿಗಳನ್ನು ಮುಚ್ಚಲು ಅಥವಾ ತಡೆಬೇಲಿ ನಿರ್ಮಿ ಸುವ ಕಾರ್‍ಯ ಇನ್ನೂ ವಿಫಲವಾಗಿದೆ. ಕೋರೆ ಗುಂಡಿಗೆ ಪೊದೆಗಳು ಆವರಿಸಿ ಹೊಂಡವೇ ಕಾಣದಾಗಿದ್ದು, ಮಾರ್ಗ ಬದಿಯೇ ಇರುವುದರಿಂದ ಅಪಾಯದ ಮಟ್ಟದಲ್ಲಿದ್ದು, ಗಣಿಗಾರಿಕೆ ಸ್ಥಳದಲ್ಲಿ ಅದರಲ್ಲೂ ಮಳೆಗಾಲದಲ್ಲಿ ರು ಶೇಖರಣೆಯಿಂದಾಗಿ ಸುರಕ್ಷೆ ಮರೀಚಿಕೆ ಯಾಗಿದೆ. ಪಕ್ಕದಲ್ಲೇ ಅಂಗನವಾಡಿ ಕೇಂದ್ರ ಇದ್ದು, ಪುಟಾಣಿ ಮಕ್ಕಳ ಪ್ರಾಣಕ್ಕೆ ಸಂಚಕಾರ ತಂದೊಡ್ಡಿದೆ. ಪ್ರತೀ ವರ್ಷ ಮಳೆಗಾಲದಲ್ಲಿ ರು ತುಂಬುತ್ತಲೇ ಇದೆ. ಪ್ರತೀ ಬಾರಿಯೂ ಅಪಾಯವನ್ನು ಆಹ್ವಾನಿಸುತ್ತಲೇ ಇದೆ. ಹಣದ ದಾಹಕ್ಕೆ ಕೊರೆದಿದ್ದ ಕಲ್ಲುಕೋರೆ ಗುಂಡಿಗಳಿಗೆ ಏನೂ ಹರಿಯದ ಪುಟಾಣಿ ಮಕ್ಕಳು ಜಿಲ್ಲೆಯ ಅಲ್ಲಲ್ಲಿ ನಡೆಯುತ್ತಿರುವುದು ವರದಿಯಾಗುತ್ತಲೇ ಇದೆ. ಕಲ್ಲುಗಳನ್ನು ತೆಗೆದಮೇಲೆ ಕೋರೆಗುಂಡಿಗೆ ಮಣ್ಣು ಮುಚ್ಚಿ ಸಮತಟ್ಟು ಮಾಡುವುದು, ಕಲ್ಲು ತೆಗೆಯುತ್ತಿರುವಾಗಲೇ ಅಪಾಯಗಳು ಸಂಭವಿಸದಂತೆ ತಡೆಬೇಲಿ ರ್ಮಿಸು ವುದು ಇತ್ಯಾದಿ ಸೂಚನೆ, ಷರತ್ತು ಕಲ್ಲು ಕೋರೆ ನಡೆಸುವವರಿಗೆ ಡಲಾಗುತ್ತದೆ. ಆದರೆ ಹೊಂಡಗೆದು ಹಾಗೇ ಬಿಟ್ಟು ಹೋಗುವ ಗುತ್ತಿಗೆದಾರರು ಇಂತಹ ದುರಂತಗಳಿಗೆ ನೇರಹೊಣೆಯಾಗಿ ದ್ದರೂ ಅವರನ್ನು ಕೇಳುವವರಿಲ್ಲವಾಗಿ ದೆ. ಸುಮಾರು ೧೧.೬೭ಎಕ್ರೆ ವಿಸ್ತೀರ್ಣ ಹೊಂದಿರುವ ಬಜಿರೆ ಶಾಲೆಗೆ ಕೊರೆ ಯಲಾದ ಕೋರೆ ಜಾಗವೂ ಸೇರಿದ್ದು, ತಮತಟ್ಟು ಮಾಡಿ ಆವರಣ ನಿರ್ಮಿಸಿ ದರೆ ಮಕ್ಕಳಿಗೆ ಮೈದಾನದ ಪೂರ್ಣ ಪ್ರಯೋಜನವಾಗಿ ಅಪಾಯವೂ ತಪ್ಪಲಿದೆ.

Leave a Reply


ಸುಭಾಷಿತ

ವಿಚಾರ ಮಾಡದಿರುವ ದಾರಿಗಳಲ್ಲಿ ವಿಚಾರ ಮಾಡಲು ಸದಾ ನೀನು ಸಿದ್ದನಿರು.

-ಎ.ಪಿ.ಜೆ ಕಲಾಂ

ಚಿತ್ರ-ವಿಚಿತ್ರ

ಸುದ್ದಿ ಸ್ಪೆಷಲ್

Finding the right hotel just got a whole lot easier - HotelsCombined.com

ನಮ್ಮ ಬಗ್ಗೆ

ಮೊದಲಿಗೆ ಕೇವಲ ಒಂದು ಹಾಳೆಯಲ್ಲಿ ಪ್ರಕಟವಾಗುತ್ತಿದ್ದ ಪುತ್ತೂರು ಸುದ್ದಿ ಬಿಡುಗಡೆ ಪತ್ರಿಕೆ ಇಂದು ಪ್ರತಿದಿನ ಆರು ಪುಟಗಳಿಂದ
... ಮುಂದೆ ಓದಿ

ಸಲಹೆ- ಸೂಚನೆ

ನಿಮ್ಮ ಸಲಹೆ ಸೂಚನೆಗಳಿಗೆ ಹಾರ್ದಿಕ ಸ್ವಾಗತ

ಇಲ್ಲಿ ಕ್ಲಿಕ್ಕಿಸಿ

Copyright © 2018 Suddinews.com . All Rights Reserved.
^ Back to Top