Fri 12 Jan 2018, 6:36AM

468X60

ಆಯ್ದ ಪುರಸಭೆ/ನಗರಸಭೆ, ಗ್ರಾ. ಪಂ ಗೆ ತ್ಯಾಜ್ಯ ಶುದ್ಧೀಕರಣ ಘಟಕಕ್ಕೆ ಪರಿಕರಗಳ ಒದಗಣೆ: ರೈ ಘೋಶಿಣೆ

Monday, November 10th, 2014 | suddiblt | no responses

DSC_4459ಧರ್ಮಸ್ಥಳದಲ್ಲಿ ತ್ಯಾಜ್ಯ ಜಲ ಶುದ್ಧೀಕರಣ ಘಟಕ ಉದ್ಘಾಟನೆ

ಧರ್ಮಸ್ಥಳ: ಸರಕಾರದ ಮಾಲಿನ ನಿಯಂತ್ರಣ ಮಂಡಳಿಯ ಮೂಲಕ ರಾಜ್ಯದ ಒಂದು ಹಂತದಲ್ಲಿ ಪುರಸಭೆ ಅಥವಾ ನಗರ ಸಭೆ, ಇನ್ನೊಂದು ಹಂತದಲ್ಲಿ ಗ್ರಾ. ಪಂ ಗೆ ತ್ಯಾಜ್ಯ ಜಲ ಶುದ್ಧೀಕರಣ ವ್ಯವಸ್ಥೆಗೆ ಪೂರಕವಾಗುವಂತೆ ಸಣ್ಣ ಘಟಕ ಸ್ಥಾಪನೆಗೆ ಅಗತ್ಯ ಪರಿಕರಗಳನ್ನು ಒದಗಿಸುವ ಕಾರ್ಯ ಮಾಡಲಾಗುವುದು ಎಂದು ರಾಜ್ಯದ ಪರಿಸರ ಮತ್ತು ಜೀವಶಾಸ್ತ್ರ ಸಚಿವ, ಅರಣ್ಯ ಸಚಿವ ಬಿ ರಮಾನಾಥ ರೈ ಘೋಶಿಸಿದರು.
ಶ್ರೀ ಕ್ಷೇತ್ರ ಧರ್ಮಸ್ಥಳದಲ್ಲಿ ನ. ೯ ರಂದು, ಸುಮಾರು ೮ ಕೋಟಿ ರೂ. ವೆಚ್ಚದಲ್ಲಿ ನೂತನವಾಗಿ ನಿರ್ಮಾಣಗೊಳಿಸಲಾದ ತ್ಯಾಜ್ಯ ಜಲ ಶುದ್ಧೀಕರಣ ಘಟಕವನ್ನು ಉದ್ಘಾಟಿಸಿ ಅವರು ಮಾತನಾಡಿದರು. ಹರ್ಷೇಂದ್ರ ಕುಮಾರ್ ಸ್ವಾಗತಿಸಿ ಪ್ರಸ್ತಾವನೆಗೈದು, ಧರ್ಮಸ್ಥಳದಲ್ಲಿ ಒಟ್ಟು ೧೭೯೦ ಶೌಚಾಲಯ, ೧೪೦೬ ಸ್ನಾನಗೃಹವಿದೆ. ಇದರಿಂದ ದಿನ ನಿತ್ಯ ಉತ್ಪತ್ತಿಯಾಗುವ ತ್ಯಾಜವನ್ನು ಈ ರೀತಿ ಶುದ್ಧೀಕರಿಸುವ ಕಾರ್ಯ ನಡೆಯಲಿದೆ ಎಂದರು. ವೇದಿಕೆಯಲ್ಲಿ ತಾ.ಪಂ ಅಧ್ಯಕ್ಷೆ ಜಯಂತಿ ಪಾಲೇದು, ಜಿ. ಪಂ ಸದಸ್ಯೆ ಧನಲಕ್ಷ್ಮೀ ಜನಾರ್ದನ್, ಗ್ರಾ. ಪಂ ಅಧ್ಯಕ್ಷೆ ಗೀತಾ ಉಪಸ್ಥಿತರಿದ್ದರು.
ಚೈತ್ರಾ ಪ್ರಾರ್ಥನೆ ಹಾಡಿದರು. ತಂತ್ರಜ್ಞಾನವನ್ನು ಅಳವಡಿಸಿದ ಟಕ್ನೋಲೋಜೀಸ್ ಕಂಪೆನಿಯ ಪವನ್ ಕುಮಾರ್ ಜೈನ್ ಮತ್ತು ಶೈಲಾ ಅಯ್ಯರ್, ಎಲ್ಲಾಂಟಿ ಕಂಪೆನಿಯ ಗೋಪಿ ಅವರನ್ನು ಸನ್ಮಾನಿಸಲಾಯಿತು. ಶ್ರೀನಿವಾಸ್ ರಾವ್ ಕಾರ್ಯಕ್ರಮ ನಿರೂಪಿಸಿ, ಹಿರಿಯ ಪ್ರಬಂಧಕ ರಾಮಕೃಷ್ಣ ಉಡುಪ ವಂದಿಸಿದರು.
ಜಲ ತ್ಯಾಜ್ಯ ಶುದ್ಧೀಕರಣ ಘಟಕ:
ಸುಮಾರು ೮ ಕೋಟಿ ರೂ. ವೆಚ್ಚದಲ್ಲಿ ೩.೬ ಎಂ. ಎಲ್.ಡಿ ಸಾಮರ್ಥ್ಯದ ಈ ತ್ಯಾಜ್ಯ ಘಟಕ ಕಳೆದ ೩ ವರ್ಷಗಳ ಅವಧಿಯಲ್ಲಿ ನಿರ್ಮಾಣಗೊಂಡಿದೆ. ಈ ಘಟಕಕ್ಕೆ ಧರ್ಮಸ್ಥಳ ಅನ್ನಛತ್ರ, ವಸತಿ ನಿಲಯಗಳು, ನಗರದ ಸುತ್ತಮುತ್ತಲಿನ ಎಲ್ಲಾ ಮೂಲಗಳಿಂದ ಉತ್ಪತ್ತಿಯಾಗುವ ಸುಮಾರು ೨೫ ಲಕ್ಷ ಲೀ. ತ್ಯಾಜ್ಯ ನೀರು ಬಂದು ನೈಸರ್ಗೀಕೃತವಾಗಿ ಶುದ್ಧಿಯಾಗಿ ಕೃಷಿಗೆ ಮರುಬಳಕೆಗೆ ಯೋಗ್ಯವಾಗಲಿದೆ. ಇದರಲ್ಲಿ ಮುಖ್ಯವಾಗಿ ಶೌಚಾಲಯದ ತ್ಯಾಜ್ಯ ಕೂಡ ಒಳಗೊಂಡಿದೆ. ಈ ಘಟಕ ದಿನಕ್ಕೆ ೩೫ ಲಕ್ಷ ಲೀ. ತ್ಯಾಜ್ಯದ ಶುದ್ಧೀಕರಣ ಸಾಮರ್ಥ್ಯ ಹೊಂದಿದೆ. ತಕ್ಷಣಕ್ಕೆ ಒಂದು ಯಂತ್ರವೇನಾದರೂ ಕೆಟ್ಟರೆ ಇನ್ನೊಂದು ಸಿದ್ಧವಿರುವಂತೆ ಕ್ರಮ ಕೈಗೊಳ್ಳಲಾಗಿದೆ. ಕಚ್ಚಾ ತ್ಯಾಜ್ಯ ಒಂದು ಕಡೆಗೆ ಪೈಪ್‌ಲೈನ್ ಮೂಲಕ ತ್ಯಾಜ್ಯ ಬರುವಂತೆ ಮಾಡಿದ್ದು ಅಲ್ಲಿಂದ ಕಂಪ್ರೆಶರ್ ಮೂಲಕ ಈ ಘಟಕಕ್ಕೆ ಹರಿದು ಬರುವಂತೆ ಮಾಡಲಾಗಿದೆ. ಅಲ್ಲಿ ಆಧುನಿಕ ತಂತ್ರಜ್ಞಾನದ ಮೂಲಕ ಅದನ್ನು ನೈಸರ್ಗಿಕವಾಗಿ ಶುದ್ಧೀಕರಣಗೊಳಿಸುವ ಕಾರ್ಯ ನಡೆಯುತ್ತದೆ. ಘಟಕದ ಸಂಪೂರ್ಣ ಮೇಲುಸ್ತುವಾರಿಯನ್ನು ಡಿ ಹರ್ಷೇಂದ್ರ ಕುಮಾರ್ ಅವರು ನೋಡಿಕೊಂಡಿದ್ದಾರೆ.

Leave a Reply


ಸುಭಾಷಿತ

ಪ್ರತಿಯೊಂದು ದಿನವೂ ನಮ್ಮ ಅಂತಿಮ ದಿನ ಎನ್ನುವ ಹಾಗೆ ಜೀವಿಸಬೇಕು.

– ಎಡ್ವರ್ಡ್ ಡೌಡಸ್

ಚಿತ್ರ-ವಿಚಿತ್ರ

ಸುದ್ದಿ ಸ್ಪೆಷಲ್

Finding the right hotel just got a whole lot easier - HotelsCombined.com

ನಮ್ಮ ಬಗ್ಗೆ

ಮೊದಲಿಗೆ ಕೇವಲ ಒಂದು ಹಾಳೆಯಲ್ಲಿ ಪ್ರಕಟವಾಗುತ್ತಿದ್ದ ಪುತ್ತೂರು ಸುದ್ದಿ ಬಿಡುಗಡೆ ಪತ್ರಿಕೆ ಇಂದು ಪ್ರತಿದಿನ ಆರು ಪುಟಗಳಿಂದ
... ಮುಂದೆ ಓದಿ

ಸಲಹೆ- ಸೂಚನೆ

ನಿಮ್ಮ ಸಲಹೆ ಸೂಚನೆಗಳಿಗೆ ಹಾರ್ದಿಕ ಸ್ವಾಗತ

ಇಲ್ಲಿ ಕ್ಲಿಕ್ಕಿಸಿ

Copyright © 2018 Suddinews.com . All Rights Reserved.
^ Back to Top