Mon 15 Jan 2018, 6:33PM

468X60

ವಿದ್ಯುತ್ ಕಂಬಕ್ಕೆ ಬೋರ್ ವೆಲ್ ಲಾರಿ ಡಿಕ್ಕಿ: ವಿದ್ಯುತ್ ಸರಬರಾಜು ಸ್ಥಗಿತ

Thursday, November 13th, 2014 | webnews | no responses

ಶನಿವಾರಸಂತೆ:ನ.12:-ಬೊರ್‌ವೆಲ್ ಲಾರಿಯೊಂದು ವಿದ್ಯುತ್‌ ಕಂಬಕ್ಕೆ ಡಿಕ್ಕಿ ಹೊಡೆದ ಪರಿಣಾಮ 6 ವಿದ್ಯುತ್‌ ಕಂಬಗಳು ಮುರಿದು ಇದರಿಂದ ವಿದ್ಯುತ್ ಸರಬರಾಜು ಸ್ಥಗಿತಗೊಂಡಿರುವ ಘಟನೆ ಮಂಗಳವಾರ ಸಂಜೆ ಎಡಳ್ಳಿ ಗ್ರಾಮದಲ್ಲಿ ನಡೆದಿದೆ. ಮಂಗಳವಾರ ಚಂಗಡಹಳ್ಳಿ ಗ್ರಾಮದ ದಿನೇಶ್ ಎಂಬುವರು ತನ್ನ ಜಮೀನಿನಲ್ಲಿ ಕೊಳವೆಬಾವಿ ಕೊರೆಯಲು ಕುಶಾಲನಗರದ ಮಣಿ ಎಂಬುವರಿಗೆ ಸೇರಿದ ಬೋರ್‌ವೆಲ್ ಲಾರಿಯಲ್ಲಿ ಕೊಳವೆಬಾವಿ ಕೊರೆಸುತ್ತಿದ್ದರು, ಸಂಜೆ ಕೊಳವೆಬಾವಿ ಕೆಲಸ ಮುಗಿಸಿಕೊಂಡು ಲಾರಿ ಮಾಲೀಕ ಮಣಿ ಲಾರಿಯನ್ನು ಚಾಲನೆ ಮಾಡಿಕೊಮಡು ಕುಶಾಲನಗರಕ್ಕೆ ವಾಪಾಸಾಗುತ್ತಿದ್ದಾಗ ದುಂಡಳ್ಳಿ ಸಮೀಪದ ಎಡಳ್ಳಿ ಗ್ರಾಮದ ರಸ್ತೆಯ ಬದಿಯಲ್ಲಿದ್ದ ೧೧ಕೆ ವಿ ವಿದ್ಯುತ್ ಮಾರ್ಗದ ವಿದ್ಯುತ್‌ಕಂಬಕ್ಕೆ ಡಿಕ್ಕಿಹೊಡೆದ ಪರಿಣಾಮವಾಗಿ ೬ ವಿದ್ಯುತ್ ಕಂಬಗಳು ಮುರಿದು ಬಿದ್ದಿದೆ ಇದರಿಂದ ಲಾರಿಯೂ ಮಗುಚಿ ಬಿದ್ದಿದೆ ಇದರಿಂದ ಸುತ್ತಮುತ್ತಲಿನ ಗ್ರಾಮಗಳಲ್ಲಿ ವಿದ್ಯುತ್ ಸಂಪರ್ಕ ಕಡಿತಗೊಂಡಿದೆ. ಚಾಲಕ ಮಣಿ ಘಟನೆ ವೇಳೆಯಲ್ಲಿ ಲಾರಿಯನ್ನು ಸ್ಥಳದಿಂದ ಪರಾರಿಯಾಗಿದ್ದಾನೆ, ಘಟನೆ ವೇಳೆ ಬೋರ್‌ವೆಲ್ ಲಾರಿಯಲ್ಲಿ 4 ಮಂದಿ ಕಾರ್ಮಿಕರಿದ್ದು ಅಪಾಯದಿಂದ ಪರಾರಿಯಾಗಿದ್ದಾರೆ, ಲಾರಿ ಚಾಲಕ ವಿಫರಿತ ಮದ್ಯಸೇವನೆ ಮಾಡಿ ಲಾರಿಯನ್ನು ವೇಗವಾಗಿ ಚಲಾಯಿಸುತ್ತಿದ್ದು ಅವಘಡಕ್ಕೆ ಕಾರಣವಾಗಿದೆ ಎಂದು ಸ್ಥಳೀಯ ಪ್ರತೇಕದರ್ಶಿಗಳು ಹೇಳುತ್ತಾರೆ. ಘಟನೆ ಸ್ಥಳಕ್ಕೆ ಶನಿವಾರಸಂತೆ ಸೆಸ್ಕ್ ಅಧಿಕಾರಿಗಳು ಬೇಟಿ ನೀಡಿ ಕಾನೂನು ಕ್ರಮ ಕೈಗೊಂಡಿದ್ದಾರೆ.

12ss1,laari maguchiddu.

Leave a Reply


ಸುಭಾಷಿತ

ಯಾವುದೇ ಮಗು ತತ್ವಜ್ಞಾನಿಯಾಗುವಂತೆ ಮಾಡುವುದೇ ಶಿಕ್ಷಣ.

– ಫ್ಲೇಟೋ

ಚಿತ್ರ-ವಿಚಿತ್ರ

ಸುದ್ದಿ ಸ್ಪೆಷಲ್

Finding the right hotel just got a whole lot easier - HotelsCombined.com

ನಮ್ಮ ಬಗ್ಗೆ

ಮೊದಲಿಗೆ ಕೇವಲ ಒಂದು ಹಾಳೆಯಲ್ಲಿ ಪ್ರಕಟವಾಗುತ್ತಿದ್ದ ಪುತ್ತೂರು ಸುದ್ದಿ ಬಿಡುಗಡೆ ಪತ್ರಿಕೆ ಇಂದು ಪ್ರತಿದಿನ ಆರು ಪುಟಗಳಿಂದ
... ಮುಂದೆ ಓದಿ

ಸಲಹೆ- ಸೂಚನೆ

ನಿಮ್ಮ ಸಲಹೆ ಸೂಚನೆಗಳಿಗೆ ಹಾರ್ದಿಕ ಸ್ವಾಗತ

ಇಲ್ಲಿ ಕ್ಲಿಕ್ಕಿಸಿ

Copyright © 2018 Suddinews.com . All Rights Reserved.
^ Back to Top