Fri 12 Jan 2018, 2:33AM

468X60

ನ್ಯೂಜಿಲೆಂಡ್ ಫೇವರಿಟ್: ದ್ರಾವಿಡ್

Thursday, January 29th, 2015 | webnews | no responses

ಈ ಬಾರಿ ನ್ಯೂಜಿಲೆಂಡ್ ತಂಡ ವಿಶ್ವಕಪ್ ಕ್ರಿಕೆಟ್ ಗೆಲ್ಲುವ ಫೆವರೆಟ್ ತಂಡಗಳಲ್ಲಿ ಒಂದು ಎಂದು ಟೀಮ್ ಇಂಡಿಯಾ ಮಾಜಿ ಆಟಗಾರ ರಾಹುಲ್ ದ್ರಾವಿಡ್ ಅಭಿಪ್ರಾಯಪಟ್ಟಿದ್ದಾರೆ. ಬ್ರೆಂಡಾನ್ ಮೆಕಲಮ್ ಅವರ ನಾಯಕತ್ವ ನ್ಯೂಜಿಲೆಂಡ್ ತಂಡ ಈ ಬಾರಿಯ ವಿಶ್ವಕಪ್ ಗೆಲ್ಲಲು ಸಮರ್ಥವಾಗಿದೆ. ಮೆಕಲಮ್ ರೂಪದಲ್ಲಿ ನ್ಯೂಜಿಲೆಂಡ್ ತಂಡಕ್ಕೆ ಒಳ್ಳೆಯ ನಾಯಕತ್ವ ಸಿಕ್ಕಿದೆ. ಟಿಮ್ ಸೌಥೀ ನೇತೃತ್ವದ ಬೌಲಿಂಗ್ ಬಳಗ ನಿಜಕ್ಕೂ ಮಾರಕವಾಗಿದೆ. ಸೌಥೀಯವರಂತೂ ಒತ್ತಡದ ಸನ್ನಿವೇಶದಲ್ಲೂ ಯಾರ್ಕರ್ ಹಾಕುವ ಸಾಮರ್ಥ್ಯ ಹೊಂದಿದ್ದಾರೆ. ಬ್ಯಾಟಿಂಗ್ ವಿಷಯದಲ್ಲಿ ಬ್ರೆಂಡಾನ್ ಮೆಕಲಮ್, ಕೇನ್ ವಿಲಿಯಮ್ಸನ್ ಅವರ ಸ್ಫೋಟಕ ಬ್ಯಾಟಿಂಗ್’ನಿಂದ ನ್ಯೂಜಿಲೆಂಡ್ ಒಂದು ಬಲಿಷ್ಠ ಪಡೆಯಾಗಿ ಹೊರಹೊಮ್ಮಿದೆ ಎಂದು ರಾಹುಲ್ ದ್ರಾವಿಡ್ ಹೇಳಿದ್ದಾರೆ.

Leave a Reply


ಸುಭಾಷಿತ

ವಿಚಾರ ಮಾಡದಿರುವ ದಾರಿಗಳಲ್ಲಿ ವಿಚಾರ ಮಾಡಲು ಸದಾ ನೀನು ಸಿದ್ದನಿರು.

-ಎ.ಪಿ.ಜೆ ಕಲಾಂ

ಚಿತ್ರ-ವಿಚಿತ್ರ

ಸುದ್ದಿ ಸ್ಪೆಷಲ್

Finding the right hotel just got a whole lot easier - HotelsCombined.com

ನಮ್ಮ ಬಗ್ಗೆ

ಮೊದಲಿಗೆ ಕೇವಲ ಒಂದು ಹಾಳೆಯಲ್ಲಿ ಪ್ರಕಟವಾಗುತ್ತಿದ್ದ ಪುತ್ತೂರು ಸುದ್ದಿ ಬಿಡುಗಡೆ ಪತ್ರಿಕೆ ಇಂದು ಪ್ರತಿದಿನ ಆರು ಪುಟಗಳಿಂದ
... ಮುಂದೆ ಓದಿ

ಸಲಹೆ- ಸೂಚನೆ

ನಿಮ್ಮ ಸಲಹೆ ಸೂಚನೆಗಳಿಗೆ ಹಾರ್ದಿಕ ಸ್ವಾಗತ

ಇಲ್ಲಿ ಕ್ಲಿಕ್ಕಿಸಿ

Copyright © 2018 Suddinews.com . All Rights Reserved.
^ Back to Top