Tue 16 Jan 2018, 5:57AM

468X60

ಮಿಕ್ಸಡ್ ಡಬಲ್ಸ್‌ನಲ್ಲಿ ಸಾನಿಯಾ ಸೆಮಿಗೆ

Thursday, January 29th, 2015 | webnews | no responses

ಮಿಕ್ಸಡ್ ಡಬ್ಬಲ್ಸ್‌ನಲ್ಲಿ ಅಗ್ರ ಶ್ರೇಯಾಂಕದ ಸಾನಿಯಾ ಮಿರ್ಜಾ ಬ್ರುನೂ ಸೌರೆಸ್ ಜೋಡಿ ಸೆಮಿ ಫೈನಲ್ ತಲುಪಿದೆ. ಇವರು ಡೆಲ್ಲಿ ಕ್ಪಾ-ಪಿಯರ್‍ಸ್ ಜತೆಯನ್ನು ೬-೨, ೬-೨ರ ನೇರ ಸೆಟ್ಟುಗಳಲ್ಲಿ ಸೋಲಿಸಿದರು. ೨೦೧೪ರಲ್ಲಿ ಇದೇ ಜೋಡಿ ಯು.ಎಸ್.ಓಪನ್ ಮಿಕ್ಸಡ್ ಪ್ರಶಸ್ತಿ ಗೆದ್ದುಕೊಂಡಿದೆ. ೫ ಭಾರಿ ಮಹಿಳಾ ಚಾಂಪಿಯನ್ ಸೆರಿನಾ ಸಹ ಸೆಮಿ ಫೈನಲ್ ತಲುಪಿದ್ದಾರೆ. ಕ್ವಾರ್ಟರ್ ಫೈನಲ್‌ನಲ್ಲಿ ಸೆರಿನಾ, ಸಿಬಲಕೋವಾರನ್ನು ೬-೨, ೬-೨ರ ಸುಲಭ ಪಂದ್ಯದಲ್ಲಿ ಸೋಲಿಸಿದರು. ಪುರುಷರ ಕ್ವಾರ್ಟರ್ ಫೈನಲ್‌ನಲ್ಲಿ ೨೦೧೪ರ ಚಾಂಪಿಯನ್ ವಾವ್ರಿಂಕಾ, ಜಪಾನಿನ ನಿಶಿಕೋರಿಯರನ್ನು ೬-೩, ೬-೪, ೭-೬ರ ನೇರ ಸೆಟ್ಟುಗಳಲ್ಲಿ ಸೋಲಿಸಿ ಕೊನೆಯ ೪ರ ಹಂತಕ್ಕೆ ಏರಿದ್ದಾರೆ. ಇನ್ನೊಂದು ಕ್ವಾರ್ಟರ್ ಫೈನಲ್‌ನಲ್ಲಿ ಅಗ್ರ ಶ್ರೇಯಾಂಕದ ಜೊಕೋವಿಚ್, ಕೆನಡಾ ದೇಶದ ರಾವೊನಿಕರನ್ನು ೭-೬, ೬-೪, ೬-೨ರ ನೇರ ಸೆಟ್ಟುಗಳಲ್ಲಿ ಸೋಲಿಸಿದರು.

Leave a Reply


ಸುಭಾಷಿತ

ಒಳ್ಳೆಯವರು ನಿಷ್ಕ್ರಿಯರಾದಾಗ ತಪ್ಪುಗಳು ಕೆಡುಕುಗಳು ವಿಜೃಂಭಿಸುತ್ತದೆ.

-ವಿದುರ ನೀತಿ

ಚಿತ್ರ-ವಿಚಿತ್ರ

ಸುದ್ದಿ ಸ್ಪೆಷಲ್

Finding the right hotel just got a whole lot easier - HotelsCombined.com

ನಮ್ಮ ಬಗ್ಗೆ

ಮೊದಲಿಗೆ ಕೇವಲ ಒಂದು ಹಾಳೆಯಲ್ಲಿ ಪ್ರಕಟವಾಗುತ್ತಿದ್ದ ಪುತ್ತೂರು ಸುದ್ದಿ ಬಿಡುಗಡೆ ಪತ್ರಿಕೆ ಇಂದು ಪ್ರತಿದಿನ ಆರು ಪುಟಗಳಿಂದ
... ಮುಂದೆ ಓದಿ

ಸಲಹೆ- ಸೂಚನೆ

ನಿಮ್ಮ ಸಲಹೆ ಸೂಚನೆಗಳಿಗೆ ಹಾರ್ದಿಕ ಸ್ವಾಗತ

ಇಲ್ಲಿ ಕ್ಲಿಕ್ಕಿಸಿ

Copyright © 2018 Suddinews.com . All Rights Reserved.
^ Back to Top