Thu 18 Jan 2018, 3:12PM

468X60

ಜನಸಾಮಾನ್ಯನ ಮನೆ ತಲುಪಬೇಕಾದ ಆಧಾರ್ ಕಾರ್ಡ್ ಗುಜರಿ ಅಂಗಡಿಯಲ್ಲಿ..!

Tuesday, April 21st, 2015 | suddisullia | no responses

adhar-a adhar-b

ಆಧಾರ್ ಕಾರ್ಡ್ ಕಡ್ಡಾಯವೆಂಬ ಮಾತು ಗಳು ಕೇಳಿಬರುತ್ತಿರುವಂತೆ ತಾಸುಗಟ್ಟಲೆ ಆಧಾರ್ ನೋಂದಣಿ ಕೇಂದ್ರದಲ್ಲಿ ನಿ.ಂತು ಕಷ್ಟಪಟ್ಟು ಆಧಾರ್ ನೋಂದಣಿ ಮಾಡಿಸಿದ ಜನಸಾಮಾ ನ್ಯನ ಆಧಾರ್ ಕಾರ್ಡ್ ಆತನ ಮನೆ ತಲುಪದೇ ಗುಜರಿ ಅಂಗಡಿಯಲ್ಲಿ ಪತ್ತೆಯಾಗಿದೆ.
ಬೆಳ್ಳಾರೆಯ ಗುಜರಿ ಅಂಗಡಿಯಲ್ಲಿ ಗುಜರಿ ಪೇಪರ್ ಜೊತೆಗೆ 30ಕ್ಕೂ ಅಧಿಕ ಆಧಾರ್ ಕಾರ್ಡ್‌ಗಳು ದೊರೆತಿದ್ದು, ಜನಸಾಮಾನ್ಯರ ವಿಳಾಸಕ್ಕೆ ಈ ಆಧಾರ್ ಕಾರ್ಡ್‌ಗಳು ತಲುಪದೇ ನೇರವಾಗಿ ಗುಜರಿ ಅಂಗಡಿಗೆ ಬಂದಿರುವುದು ಅಂಚೆಯಣ್ಣನ ಮೇಲೆ ಸಂಶಯಕ್ಕೆ ಎಡೆಮಾಡಿ ಕೊಟ್ಟಿದೆ. ಬೆಳ್ಳಾರೆಯ ಗುಜರಿ ಅಂಗಡಿ ಯೊಂದಕ್ಕೆ ಗ್ರಾಹಕರೊಬ್ಬರು ನೀಡಿದ ಗುಜರಿಯನ್ನು ಬಿಚ್ಚಿ ನೋಡಿದಾಗ ಪೇಪರ್ ಬಂಡಲ್‌ಗಳ ಒಳಗೆ ಆಧಾರ್ ಕಾರ್ಡ್‌ಗಳು ಗಮನಕ್ಕೆ ಬಂದಿದೆ ಈ ಎಲ್ಲಾ ಆಧಾರ್ ಕಾರ್ಡ್‌ಗಳಲ್ಲಿ ಸುಳ್ಯ ತಾಲೂಕಿನ ಅಮರ ಪಡ್ನೂರು ಗ್ರಾಮದ ಚೊಕ್ಕಾಡಿಯ ವಿಳಾ ಸಗಳಿವೆ. ಚೊಕ್ಕಾಡಿ ಅಂಚೆ ಕಚೇರಿಗೆ ಬಂದಿರುವ ಈ ಆಧಾರ್ ಕಾರ್ಡ್‌ಗಳು ಕಾರ್ಡ್‌ದಾರರ ವಿಳಾ ಸಕ್ಕೆ ತಲುಪದೆ ಇರುವುದು ಇದರಿಂದ ಸಾಬೀ ತಾಗಿದೆ.
ಮೊಬೈಲ್ ಸಿಮ್ ತೆಗೆದುಕೊಳ್ಳಲು ಹೋಗಿ, ಬ್ಯಾಂಕ್ ಅಕೌಂಟ್ ಮಾಡಿ ಸಲು ಹೋಗಿ, ಪಾಸ್ ಪೋರ್ಟ್ ಮಾಡಿಸಲು ಹೋಗಿ ಆಧಾರ್ ಕಾರ್ಡ್ ಸಂಖ್ಯೆ ಕೊಡಿ ಕೇಳುತ್ತಾರೆ. ಭಾರತದ ಪ್ರಜೆಗ ಳಾಗಿದ್ದರೆ ಹಲವು ಸರಕಾರಿ ಸೇವೆಗಳನ್ನು ಪಡೆಯಲು, ವಿಳಾಸ ದೃಢೀಕರಣಕ್ಕೆ ಆಧಾರ್ ಕಾರ್ಡ್ ಕಡ್ಡಾಯವಾಗಿದೆ. ಕೇಂದ್ರ ಸರಕಾರದ ಎಲ್.ಪಿ.ಜಿ ಸಬ್ಸಿಡಿ ಪಡೆಯಲು ಆಧಾರ್ ಕಾರ್ಡ್ ಅಗತ್ಯ. ಭಾರತೀಯ ರಾಷ್ಟ್ರೀಯ ಗುರುತಿನ ಚೀಟಿ ಪ್ರಾಧೀಕಾರಡುವ 12 ಅಂಕಿಗಳ ಆಧಾರ್ ಕಾರ್ಡ್‌ಗೆ ಅಷ್ಟು ಪ್ರಾಮು ಖ್ಯತೆ ಇದೆ. ಆದರೆ ಆಧಾರ್ ನೋಂದಣಿ ಮಾಡಿಸಲು ಶ್ರಮ ಪಟ್ಟ ಜನಸಾಮಾನ್ಯನ ಕಷ್ಟವನ್ನು ಪರಿಗ ಣಿಸದೇ ಆಧಾರ್ ಕಾರ್ಡ್ ಗುಜರಿ ಅಂಗಡಿ ಸೇರಿರು ವುದು ಜಕ್ಕೂ ವಿಪರ್‍ಯಾಸವೇ ಸರಿ.
ಆಧಾರ್ ನೋಂದಣಿ ಮಾಡಿಸದ ಕೆಲವರು ತಮಗೆ ಆಧಾರ್ ಕಾರ್ಡ್ ಬಂದಿಲ್ಲವೆಂದು ಆಧಾರ್ ನಂಬರ್‌ಗಾಗಿ ಸೈಬರ್ ಕೇಂದ್ರಕ್ಕೆ ಅಥವಾ ಕಂಪ್ಯೂಟರ್ ಕೇಂದ್ರಕ್ಕೆ ಹೋದರೆ 50-100 ರೂಪಾಯಿ ಕೊಡಬೇಕಾಗುತ್ತದೆ ಅಥವಾ ಆದಾರ್ ನೋಂದಣಿ ಮತ್ತೆ ಮಾಡಿಸಲು ಆಧಾರ್ ನೋಂದಣಿ ಕೇಂದ್ರಕ್ಕೆ ಹೊದರೆ ಅಲ್ಲಿ ಗಂಟೆ ಗಟ್ಟಲೆ ಕಾಯಿಸಿ ಆಧಾರ್ ನೋಂದಣಿ ಮತ್ತೆ ಮಾಡಿಸಲು ಸಾಧ್ಯವಿಲ್ಲವೆಂದು ಹೇಳುತ್ತಾರೆ. ಬಡ ಜನಸಾಮಾನ್ಯರ ಮನೆ ತಲುಪಬೇಕಾದ ಆಧಾರ್ ಕಾರ್ಡ್‌ಗಳನ್ನು ಪೋಸ್ಟ್‌ಮ್ಯಾನ್ ಎಲ್ಲೆಂದರಲ್ಲಿ ಕೊಟ್ಟು ತಮ್ಮ ಕೆಲಸ ಮುಗಿಸಿರುವುದು ಇಲ್ಲಿ ಸಾಬೀತಾಗಿದೆ.
ಬೆಳ್ಳಾರೆಯ ಗುಜರಿ ಅಂಗಡಿಯಲ್ಲಿ ದೊರೆ ತಿರುವ ಆಧಾರ್ ಕಾರ್ಡ್‌ಗಳು ಚೊಕ್ಕಾಡಿ ಅಂಚೆಯ ವಿಳಾಸಕ್ಕೆ ಬಂದಿದ್ದು ಇನ್ನೆಷ್ಟು ಆಧಾರ್ ಕಾರ್ಡ್‌ಗಳು ಜನಸಾಮಾನ್ಯರ ಮನೆ ತಲುಪದೆ ಗುಜರಿ ಅಂಗಡಿ ಸೇರಿವೆಯೋ ಗೊತ್ತಿಲ್ಲ. ಗುಜರಿ ಅಂಗಡಿಯಲ್ಲಿ ಪತ್ತೆಯಾಗಿರುವ ಆಧಾರ್ ಕಾರ್ಡ್‌ಗಳನ್ನು ವ್ಯಕ್ತಿಯೊಬ್ಬರು ನೀಡಿದ್ದು ಆಧಾರ್ ಕಾರ್ಡ್ ಪಡೆಯದವರು ಅಂಚೆ ಕಛೇರಿಯನ್ನು ಸಂಪರ್ಕಿಸಿ ತಮ್ಮ ಆಧರ್‌ಕಾರ್ಡ್‌ಗಳ ಬಗ್ಗೆ ವಿಚಾರಿಸಬೇಕಿದೆ.
ಚಿತ್ರ-ವರದಿ : ಉಮೇಶ್ ಮಣಿಕ್ಕಾರ

Leave a Reply


ಸುಭಾಷಿತ

ಜೀವನ ನೈಜವಾದುದು. ಉತ್ಸಾಹ ಪರಿಪೂರ್ಣವಾದುದು

-ಲಾಂಗ್ ಫೆಲೋ

ಚಿತ್ರ-ವಿಚಿತ್ರ

ಸುದ್ದಿ ಸ್ಪೆಷಲ್

Finding the right hotel just got a whole lot easier - HotelsCombined.com

ನಮ್ಮ ಬಗ್ಗೆ

ಮೊದಲಿಗೆ ಕೇವಲ ಒಂದು ಹಾಳೆಯಲ್ಲಿ ಪ್ರಕಟವಾಗುತ್ತಿದ್ದ ಪುತ್ತೂರು ಸುದ್ದಿ ಬಿಡುಗಡೆ ಪತ್ರಿಕೆ ಇಂದು ಪ್ರತಿದಿನ ಆರು ಪುಟಗಳಿಂದ
... ಮುಂದೆ ಓದಿ

ಸಲಹೆ- ಸೂಚನೆ

ನಿಮ್ಮ ಸಲಹೆ ಸೂಚನೆಗಳಿಗೆ ಹಾರ್ದಿಕ ಸ್ವಾಗತ

ಇಲ್ಲಿ ಕ್ಲಿಕ್ಕಿಸಿ

Copyright © 2018 Suddinews.com . All Rights Reserved.
^ Back to Top