Wed 17 Jan 2018, 10:48PM

468X60

ಬೆಳ್ಳಾರೆ ಆಸ್ಪತ್ರೆಗೆ ಪೂರ್ಣಕಾಲಿಕ ಸೇವೆಗೆ ವೈದ್ಯರಿಗೆ ಆದೇಶ – ಪ್ರತಿಭಟನೆ ಹಿಂಪಡೆದ ಡಿಎಸ್‌ಎಸ್

Thursday, July 9th, 2015 | suddisullia | no responses

ಬೆಳ್ಳಾರೆಯಲ್ಲಿ ಕರ್ತವ್ಯದಲ್ಲಿರುವ ಕಡ್ಡಾಯ ಗ್ರಾಮೀಣ ಸೇವೆಯ ವೈದ್ಯರು ಜು.೪ರಿಂದ ಕೇಂದ್ರ ಸ್ಥಾನದಲ್ಲಿ ವಾಸವಿದ್ದು, ತುರ್ತು ಸೇವೆಗೆ ಲಭ್ಯವಿರುವುದರಿಂದ ಜು.9ರ ಪ್ರತಿಭಟನೆಯನ್ನು ರದ್ದು ಮಾಡಲಾಗಿದೆ ಎಂದು ದಲಿತ ಸಂಘರ್ಷ ಸಮಿತಿ ಜಿಲ್ಲಾ ಸಂಘಟನಾ ಕಾರ್ಯದರ್ಶಿ ಆನಂದ ಬೆಳ್ಳಾರೆ ಹೇಳಿದ್ದಾರೆ.
ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಬೆಳ್ಳಾರೆ 24×7 ಅರೋಗ್ಯ ಕೇಂದ್ರವಾಗಿದ್ದು, ಇಲ್ಲಿ ವೈದ್ಯರ ಕೊರತೆ ಇದ್ದು, ರೋಗಿಗಳ ಸಂಕಷ್ಟ ಅನುಭವಿಸುತ್ತಿರುವ ಬಗ್ಗೆ ಪ್ರತಿಭಟನೆಗೆ ಕರೆ ನೀಡಲಾಗಿತ್ತು. ಆದರೆ ಸ್ಪಂದಿಸಿದ ಜಿಲ್ಲಾ ಆರೋಗ್ಯಾಧಿಕಾರಿಗಳು ಈಗ ಇರುವ ವೈದ್ಯೆ ಡಾ.ಅರ್ಚನಾ ಅವರಿಗೆ ಕೇಂದ್ರ ಸ್ಥಾನದಲ್ಲಿ ಇರಬೇಕೆಂದು ಸೂಚಿಸಿದ್ದು, ಸಮಸ್ಯೆ ಪರಿಹಾರವಾಗಿದೆ ಎಂದರು.
ತಾಲೂಕು ಸಂಘಟನಾ ಸಂಚಾಲಕರಾದ ವಿಶ್ವನಾಥ ಅಲೆಕ್ಕಾಡಿ, ರಾಮಚಂದ್ರ ಐವರ್ನಾಡು ಪತ್ರಿಕಾಗೋಷ್ಠಿಯಲ್ಲಿದ್ದರು.

bellare hospital

Leave a Reply


ಸುಭಾಷಿತ

ಒಳ್ಳೆಯವರು ನಿಷ್ಕ್ರಿಯರಾದಾಗ ತಪ್ಪುಗಳು ಕೆಡುಕುಗಳು ವಿಜೃಂಭಿಸುತ್ತದೆ.

-ವಿದುರ ನೀತಿ

ಚಿತ್ರ-ವಿಚಿತ್ರ

ಸುದ್ದಿ ಸ್ಪೆಷಲ್

Finding the right hotel just got a whole lot easier - HotelsCombined.com

ನಮ್ಮ ಬಗ್ಗೆ

ಮೊದಲಿಗೆ ಕೇವಲ ಒಂದು ಹಾಳೆಯಲ್ಲಿ ಪ್ರಕಟವಾಗುತ್ತಿದ್ದ ಪುತ್ತೂರು ಸುದ್ದಿ ಬಿಡುಗಡೆ ಪತ್ರಿಕೆ ಇಂದು ಪ್ರತಿದಿನ ಆರು ಪುಟಗಳಿಂದ
... ಮುಂದೆ ಓದಿ

ಸಲಹೆ- ಸೂಚನೆ

ನಿಮ್ಮ ಸಲಹೆ ಸೂಚನೆಗಳಿಗೆ ಹಾರ್ದಿಕ ಸ್ವಾಗತ

ಇಲ್ಲಿ ಕ್ಲಿಕ್ಕಿಸಿ

Copyright © 2018 Suddinews.com . All Rights Reserved.
^ Back to Top