Sat 20 Jan 2018, 2:40PM

468X60

ಪುತ್ತೂರು ಪೊಲೀಸ್ ಅರಣ್ಯ ಸಂಚಾರಿ ದಳದಿಂದ ಕೃಷ್ಣಮೃಗ ಚರ್ಮ ವಶ

Thursday, July 9th, 2015 | suddiputtur | no responses

ನೆಲ್ಯಾಡಿ: ಪುತ್ತೂರು ಅರಣ್ಯ ಸಂಚಾರಿ ದಳದ ಸಬ್ ಇನ್ಸ್‌ಪೆಕ್ಟರ್ ಉಮೇಶ್ ಉಪ್ಪಳಿಕೆ ನೇತೃತ್ವದಲ್ಲಿ ಸೌತಡ್ಕ ಶ್ರೀ ಮಹಾಗಣಪತಿ ದೇವಸ್ಥಾನದ ಬಳಿ 4 ಕೃಷ್ಣಮೃಗದ ಚರ್ಮವನ್ನು ವಶಪಡಿಸಿಕೊಂಡ ಘಟನೆ ಜು.9 ರಂದು ಬೆಳಿಗ್ಗೆ ನಡೆದಿದೆ.

ಖಚಿತ ಮಾಹಿತಿಯ ಮೇರೆಗೆ ಪುತ್ತೂರು ಪೊಲೀಸ್ ಅರಣ್ಯ ಸಂಚಾರಿ ದಳದವರು ಸೌತಡ್ಕ ದೇವಸ್ಥಾನದ ಬಳಿ ಚೀಲದಲ್ಲಿ ತುಂಬಿಡಲಾಗಿದ್ದ 4 ಕೃಷ್ಣಮೃಗಗಳ ಚರ್ಮವನ್ನು ಮಾರಾಟ ಮಾಡಲು ಹೊಂಚುಹಾಕುತ್ತಿದ್ದ ಶಿರಟ್ಟಿ-ಗದಗ ಮೂಲದ ಗಾಳಪ್ಪ ಮೇಗೇರಿ [ ಪ್ರಾಯ 35 ವರ್ಷ] ಎಂಬವನನ್ನು ವಶಕ್ಕೆ ಪಡೆದು ಚರ್ಮ ವಶಪಡಿಸಿಕೊಂಡ ಘಟನೆ ನಡೆಯಿತು. ಈ ಕಾರ‍್ಯಾಚರಣೆಯಲ್ಲಿ ಪೊಲೀಸ್ ಅರಣ್ಯ ಸಂಚಾರಿದಳದ ಸಿಬ್ಬಂದಿಗಳಾದ ಕರುಣಾಕರ, ಕುಶಾಲಪ್ಪ, ಕರುಣಾಕರ ಬಿ.ಎನ್, ರವೀಂದ್ರ, ಮತ್ತು ಚಾಲಕ ಉಮೇಶ್ ರಾವ್ ಮೊದಲಾದವರು ಪಾಲ್ಗೊಂಡರು.

k-001

k-003

Leave a Reply


ಸುಭಾಷಿತ

ಧರ್ಮಗಳು ಆನಂದಗೊಳಿಸುವಂತಹ ದ್ವೀಪಗಳು,  ಆತ್ಮ ಮತ್ತು ಸ್ಪೂರ್ತಿಯ ತಾಣಗಳು.

– ಎ.ಪಿ.ಜೆ ಕಲಾಂ

ಚಿತ್ರ-ವಿಚಿತ್ರ

ಸುದ್ದಿ ಸ್ಪೆಷಲ್

Finding the right hotel just got a whole lot easier - HotelsCombined.com

ನಮ್ಮ ಬಗ್ಗೆ

ಮೊದಲಿಗೆ ಕೇವಲ ಒಂದು ಹಾಳೆಯಲ್ಲಿ ಪ್ರಕಟವಾಗುತ್ತಿದ್ದ ಪುತ್ತೂರು ಸುದ್ದಿ ಬಿಡುಗಡೆ ಪತ್ರಿಕೆ ಇಂದು ಪ್ರತಿದಿನ ಆರು ಪುಟಗಳಿಂದ
... ಮುಂದೆ ಓದಿ

ಸಲಹೆ- ಸೂಚನೆ

ನಿಮ್ಮ ಸಲಹೆ ಸೂಚನೆಗಳಿಗೆ ಹಾರ್ದಿಕ ಸ್ವಾಗತ

ಇಲ್ಲಿ ಕ್ಲಿಕ್ಕಿಸಿ

Copyright © 2018 Suddinews.com . All Rights Reserved.
^ Back to Top