Thu 18 Jan 2018, 11:47AM

468X60

ಸಣ್ಣ ತೊರೆಗಳಲ್ಲಿ ಸರಣಿ ಗಲ್ಲಿಡ್ಯಾಂಗಳು : ಅರಣ್ಯ ಇಲಾಖೆಯಿಂದ ವಿಶಿಷ್ಟ ಯೋಜನೆ

Monday, July 20th, 2015 | sulliaeditor | no responses

ಅರಣ್ಯ ಪ್ರದೇಶದಲ್ಲಿ ಹರಿಯುವ ಸಣ್ಣ ತೊರೆಗಳಲ್ಲಿ ಗಲ್ಲಿಡ್ಯಾಂಗಳನ್ನು ನಿರ್ಮಿಸುವ ಮೂಲಕ ನೀರಿಂಗಿಸುವ ವಿಶಿಷ್ಟ ಯೋಜನೆಯನ್ನು ಅರಣ್ಯ ಇಲಾಖೆಯು ಈ ವರ್ಷದಿಂದ ಆರಂಭಿ ಸಿದ್ದು, ಸುಳ್ಯ ಅರಣ್ಯ ವಲಯದಲ್ಲಿ ಈಗಾಗಲೇ ೩೦೦೦ ಕ್ಯೂಬಿಕ್ ಮೀಟರ್ ಕಾಮಗಾರಿ ನಡೆದಿದೆ.
ಓಡುವ ನೀರನ್ನು ಹರಿಯುವಂತೆ ಮಾಡಿ, ತೆವಳುವ ನೀರನ್ನು ಹರಿಯು ವಂತೆ ಮಾಡಿ ನೀರನ್ನು ಇಂಗಿಸಬೇಕು, ಆ ಮೂಲಕ ಅಂತರ್ಜಲವನ್ನು ಹೆಚ್ಚಿಸಬೇಕು ಎಂಬ ಉದ್ದೇಶದಿಂದ ಅರಣ್ಯ ಇಲಾಖೆಯ ಅಧಿಕಾರಿಗಳು ಈ ಯೋಜನೆಯನ್ನು ಜಾರಿಗೆ ತಂದಿ ದ್ದಾರೆ. ವಾಸ್ತವವಾಗಿ ಇಲಾಖಾ ಬಜೆಟ್ ನಲ್ಲಿ ಇದಕ್ಕೆ ವಿಶೇಷ ಅನುದಾನ ಮೀಸಲಿಟ್ಟಿಲ್ಲ. ಅರಣ್ಯ ಪ್ರದೇಶದಲ್ಲಿ ಗಿಡ ನೆಡುವ ಯೋಜನೆ ಇದೆ. ಅವುಗಳ ಮಧ್ಯೆ ಅಲ್ಲಲ್ಲಿ ಇಂಗುಗುಂಡಿಗಳನ್ನು ನಿರ್ಮಿಸಲು ಅನುದಾನ ಇದೆ. ಇದೇ ಅನುದಾನವನ್ನು ಪರ್ಯಾಯವಾಗಿ ಗಲ್ಲಿಡ್ಯಾಂ ನಿರ್ಮಿಸಲು ಬಳಕೆ ಮಾಡ ಲು ಅವಕಾಶ ನೀಡಲಾಗಿದೆ. ಸುಳ್ಯ ವಲಯದ ಮೀಸಲು ಅರಣ್ಯದಲ್ಲಿ ಸ್ವಾಭಾವಿಕವಾಗಿ ಹರಿಯುವ ತೊರೆ ಗಳು ಸಾಕಷ್ಟು ಸಂಖ್ಯೆಯಲ್ಲಿವೆ. ಕೇವಲ ಮಳೆಗಾಲ ಮಾತ್ರವಲ್ಲ, ಬೇಸಿಗೆಯ ಲ್ಲೂ ಈ ತೊರೆಗಳಲ್ಲಿ ನೀರು ಹರಿಯು ತ್ತದೆ. ನೀರು ಇಳಿಜಾರಾಗಿ ಹರಿದು ಸಮತಟ್ಟು ಪ್ರದೇಶಕ್ಕೆ ಬಂದಾಗ ಇಂತಹ ಗಲ್ಲಿಡ್ಯಾಂಗಳನ್ನು ನಿರ್ಮಿಸಲಾಗುತ್ತದೆ. ೧೦ರಿಂದ ೫೦ ಮೀಟರ್ ದೂರಕ್ಕೆ ಒಂದರಂತೆ ಅನುಕೂಲ ನೋಡಿಕೊಂ ಡು ಪ್ರತಿ ಕಿ.ಮೀ. ಉದ್ದದ ತೊರೆಗೆ ೨೦ರಿಂದ ೨೫ರಷ್ಟು ಗಲ್ಲಿಡ್ಯಾಂಗಳನ್ನು ನಿರ್ಮಿಸಲಾಗಿದೆ.
ಸಾಮಾನ್ಯವಾಗಿ ಸ್ಥಳೀಯವಾಗಿ ಸಿಗುವ ಕಾಡುಗಲ್ಲುಗಳನ್ನು ಬಳಸಿ ಇವುಗಳನ್ನು ನಿರ್ಮಿಸಲಾಗುತ್ತದೆ. ಸುಮಾರು ೭ ಮೀಟರ್ ಉದ್ದಕ್ಕೆ ೧ ಮೀಟರ್ ಎತ್ತರಕ್ಕೆ ತೊರೆಗೆ ಅಡ್ಡಲಾಗಿ ಇಳಿಜಾರಾಗಿ ಕಲ್ಲುಗಳನ್ನು ಹಾಸಲಾ ಗುತ್ತದೆ. ಹಾವೇರಿ ಮೂಲದ ಕಾರ್ಮಿ ಕರು ವಿಶಿಷ್ಟವಾಗಿ ಇಂತಹ ಗಲ್ಲಿಡ್ಯಾಂ ಗಳನ್ನು ನಿರ್ಮಿಸುತ್ತಾರೆ. ಒಂದು ಮೀಟರ್ ಎತ್ತರದ ಈ ಗಲ್ಲಿ ಡ್ಯಾಂನಲ್ಲಿ ೧೦ರಿಂದ ೧೫ ಮೀಟರ್ ಉದ್ದಕ್ಕೆ ನೀರು ಸಂಗ್ರಹವಾಗುತ್ತದೆ. ಹೆಚ್ಚಿನ ನೀರು ಕಲ್ಲುಗಳ ಸೆರೆಯಲ್ಲಿ ಮತ್ತು ಮೇಲಿ ನಿಂದ ಹರಿದು ಹೋಗುತ್ತದೆ. ಮಣ್ಣಿನ ಸವಕಳಿ ತಡೆಗೆ ಇದು ಉತ್ತಮ ಉಪಾಯವಾಗಿದ್ದು, ಕಾಡಿನಲ್ಲಿ ನೀರನ್ನು ಇಂಗಿಸುವ, ಕಾಡನ್ನು ತಂಪಾಗಿಸುವು ದರ ಜೊತೆಗೆ ಹತ್ತಿರದ ಹಳ್ಳಿಗಳಿಗೂ ನೀರಿನ ಕೊರತೆ ಆಗದಂತೆ ಅಂತರ್ಜಲ ಹೆಚ್ಚಿಸಲು ಇವುಗಳು ಸಹಕಾರಿಯಾ ಗಿವೆ.
ಆಲೆಟ್ಟಿ ಗ್ರಾಮದ ಬಟ್ಟಂಗಾಯ ಪ್ರದೇಶದಲ್ಲಿರುವ ಗಲ್ಲಿ ಡ್ಯಾಂ ವೀಕ್ಷಣೆಗೆ ಅರಣ್ಯ ಇಲಾಖಾ ಅಧಿಕಾರಿಗಳೊಂ ದಿಗೆ ಸುದ್ದಿ ಬಿಡುಗಡೆ ಪತ್ರಿಕೆ ಮತ್ತು ‘ಸುದ್ದಿ ಚಾನೆಲ್’ ತಂಡ ಕೂಡಾ ತೆರಳಿ ದ್ದು, ಸುಳ್ಯ ವಲಯಾರಣ್ಯಾಧಿಕಾರಿ ಸುಬ್ಬ ಯ್ಯ ನಾಯ್ಕ್, ಆಲೆಟ್ಟಿ ಉಪವಲಯ ಅರಣ್ಯಾಧಿಕಾರಿ ಯಶೋಧರ, ವಾಚರ್ ದೇವಪ್ಪ ತಂಡದಲ್ಲಿದ್ದರು.
ಆಲೆಟ್ಟಿ ಗ್ರಾಮದ ಬಟ್ಟಂಗಾಯ, ಕಣಕ್ಕೂರು, ಕೋಲ್ಚಾರು, ಅರಂ ಬೂರು ನಾಂಗುಳಿ, ಮಾಣಿಮರ್ದು, ಮಂಡೆ ಕೋಲು ಗ್ರಾಮದ ಮೀಸಲು ಅರಣ್ಯಗಳಲ್ಲಿ ಹಲವೆಡೆ ಇಂತಹ ಗಲ್ಲಿಡ್ಯಾಂಗಳನ್ನು ಈ ವರ್ಷ ನಿರ್ಮಿ ಸಲಾಗಿದೆ. ಉಳಿದಂತೆ ಇತರ ಕಡೆಗಳಲ್ಲೂ ಮುಂದಿನ ವರ್ಷಗಳಲ್ಲಿ ನಿರ್ಮಿಸಲಾಗುತ್ತದೆ ಎನ್ನುತ್ತಾರೆ ಸುಳ್ಯ ವಲಯ ಅರಣ್ಯಾಧಿಕಾರಿ ಸುಬ್ಬಯ್ಯ ನಾಯ್ಕ್.

3

Leave a Reply


ಸುಭಾಷಿತ

ಓದುವುದನ್ನು ಬರೆಯುವುದನ್ನು ಕಲಿಯುವುದು ವಿದ್ಯಾಭ್ಯಾಸವಲ್ಲ. ವಿನಯವನ್ನು, ವಿವೇಕವನ್ನು ಕಲಿಸುವುದೇ ವಿದ್ಯಾಭ್ಯಾಸ

– ಸ್ವಾಮಿ ವಿವೇಕಾನಂದ

ಚಿತ್ರ-ವಿಚಿತ್ರ

ಸುದ್ದಿ ಸ್ಪೆಷಲ್

Finding the right hotel just got a whole lot easier - HotelsCombined.com

ನಮ್ಮ ಬಗ್ಗೆ

ಮೊದಲಿಗೆ ಕೇವಲ ಒಂದು ಹಾಳೆಯಲ್ಲಿ ಪ್ರಕಟವಾಗುತ್ತಿದ್ದ ಪುತ್ತೂರು ಸುದ್ದಿ ಬಿಡುಗಡೆ ಪತ್ರಿಕೆ ಇಂದು ಪ್ರತಿದಿನ ಆರು ಪುಟಗಳಿಂದ
... ಮುಂದೆ ಓದಿ

ಸಲಹೆ- ಸೂಚನೆ

ನಿಮ್ಮ ಸಲಹೆ ಸೂಚನೆಗಳಿಗೆ ಹಾರ್ದಿಕ ಸ್ವಾಗತ

ಇಲ್ಲಿ ಕ್ಲಿಕ್ಕಿಸಿ

Copyright © 2018 Suddinews.com . All Rights Reserved.
^ Back to Top