Wed 17 Jan 2018, 8:13PM

468X60

ಬೆಟ್ಟಂಪಾಡಿ ಸ.ಪ್ರ.ದ ಕಾಲೇಜಿನಲ್ಲಿ ಪ್ರತಿಭಟನೆ

Monday, July 20th, 2015 | suddiputtur | no responses

ಬೆಟ್ಟಂಪಾಡಿ : ಉಪನ್ಯಾಸಕರ ನೇಮಕಕ್ಕಾಗ್ರಹಿಸಿ ಎಬಿವಿಪಿ ಘಟಕದಿಂದ ಪ್ರತಿಭಟನೆ

ಮುಂದಿನ 15 ದಿನದ ಒಳಗೆ ಉಪನ್ಯಾಸಕರ ನೇಮಕ ಮಾಡದಿದ್ದರೆ ಉಗ್ರ ಹೋರಾಟ – ಯತೀಶ್ ಶೆಟ್ಟಿ
ನಿಡ್ಪಳ್ಳಿ : ಕಳೆದ ಎರಡೂವರೆ ವರ್ಷಗಳ ಹಿಂದೆ ರಾಜ್ಯದಲ್ಲಿ ಅಧಿಕಾರಕ್ಕೆ ಬಂದ ಕಾಂಗ್ರೇಸ್ ಸರಕಾರ ವಿದ್ಯಾರ್ಥಿಗಳ ಭವಿಷ್ಯದಲ್ಲಿ ಚೆಲ್ಲಾಟ ನಡೆಸುತ್ತಾ ಬಂದಿದೆ.ಬಡ ವಿದ್ಯಾರ್ಥಿಗಳಿಗೆ ಮೌಲ್ಯಯುತ ಶಿಕ್ಷಣ ನೀಡುವಲ್ಲಿ ವಿಫಲಗೊಂಡು ಯಾವುದೇ ಮೂಲಭೂತ ಸೌಕರ್ಯವನ್ನು ನೀಡದೆ ಸತಾಯಿಸುತ್ತಿದೆ. ಉಪನ್ಯಾಸಕರ ಕೊರತೆ ಬೆಟ್ಟಂಪಾಡಿ ಕಾಲೇಜಿನಲ್ಲಿ ಮಾತ್ರ ಅಲ್ಲ ರಾಜ್ಯಾದ್ಯಂತ ಇದೆ. ಸರಕಾರಕ್ಕೆ ಶಾಸಕರಿಗೆ, ಶಿಕ್ಷಣ ಸಚಿವರಿಗೆ ಬಿಸಿ ಮುಟ್ಟಿಸುವ ಕೆಲಸ ಇಂದು ಬೆಟ್ಟಂಪಾಡಿ ಕಾಲೇಜಿನಿಂದ ಆರಂಭವಾಗಿದೆ. ಉಪನ್ಯಾಸಕರ ಕೊರತೆಯಿಂದ ಇಂದು ವಿದ್ಯಾರ್ಥಿಗಳು ಬೀದಿಗಿಳಿಯುವ ಪರಿಸ್ಥಿತಿಯನ್ನು ಸರಕಾರ ಸೃಷ್ಟಿಸಿದೆ. ಸಾರಿಗೆ ವ್ಯವಸ್ಥೆಯೂ ಇಲ್ಲಿಗೆ ಸರಿಯಾಗಿಲ್ಲ. ಆದುದರಿಂದ ಇನ್ನು 15 ದಿವಸದಲ್ಲಿ ಉಪನ್ಯಾಸಕರನ್ನು ನೇಮಕ ಮಾಡದಿದ್ದರೆ ಜಿಲ್ಲಾದ್ಯಂತ ಉಗ್ರ ಪ್ರತಿಭಟನೆ ನಡೆಸಲಾಗುವುದು ಎಂದು ಎಬಿವಿಪಿ ಪುತ್ತೂರು ತಾಲೂಕು ಘಟಕದ ಸಂಚಾಲಕ ಯತೀಶ್ ಶೆಟ್ಟಿ ನುಡಿದರು. ಅವರು ಜು.20 ರಂದು ಬೆಟ್ಟಂಪಾಡಿ ಪದವಿ ಕಾಲೇಜಿನಲ್ಲಿ ಎಬಿವಿಪಿ ಘಟಕದಿಂದ ನಡೆದ ಪ್ರತಿಭಟನೆಯನ್ನು ಉದ್ದೇಶಿಸಿ ಮಾತನಾಡಿದರು.

ವಿದ್ಯಾರ್ಥಿಗಳ ಭವಿಷ್ಯದಲ್ಲಿ ಚೆಲ್ಲಾಟವಾಡಬೇಡಿ ಪ್ರಜ್ವಲ್ ಬಂಗೇರ
ವಿದ್ಯಾರ್ಥಿಗಳ ಪ್ರತಿಭಟನೆಯನ್ನು ಉದ್ದೇಶಿಸಿ ಮಾತನಾಡಿದ ಎಬಿವಿಪಿ ಯ ರಾಜ್ಯ ಕಾರಕಾರಿಣಿ ಸದಸ್ಯ ಪ್ರಜ್ವಲ್ ಬಂಗೇರ ಮಾತನಾಡಿ , ಶಿಕ್ಷನ ಕ್ಷೇತ್ರ ತನ್ನ ಗಂಭೀರತೆಯನ್ನು ಕಳೆದುಕೊಂಡಿದೆ. ಶೈಕ್ಷಣಿಕ ಸಮಸ್ಯೆಗೆ ಶಾಶ್ವತ ಪರಿಹಾರ ಸರಕಾರ ನೀಡಬೇಕು .ಸೂಕ್ತವಾದ ವಿಷಯಗಳಿಗೆ ಸೂಕ್ತ ಉಪನ್ಯಾಸಕರನ್ನು ನೇಮಕಮಾಡಿ ವಿದ್ಯಾರ್ಥಿಗಳ ಮುಂದಿನ ಭವಿಷ್ಯಕ್ಕೆ ದಾರಿನೀಡಬೇಕಾಗಿದೆ. ಆದುದರಿಂದ ಕೂಡಲೇ ಎಲ್ಲಾ ಕಾಲೇಜುಗಳಿಗೆ ಉಪನ್ಯಾಸಕರ ನೇಮಕ ಮಾಡಲು ಶಿಕ್ಷಣ ಮಂತ್ರಿಗಳು ಕ್ರಮಕೈಗೊಳ್ಳಬೇಕು. ಇಲ್ಲದಿದ್ದರೆ ರಾಜ್ಯಾದ್ಯಂತ ಉಗ್ರ ಪ್ರತಿಭಟನೆ ನಡೆಸಲಾಗುವುದು ಎಂದು ಎಚ್ಚರಿಸಿದರು.

ಕಾಲೇಜು ಆರಂಭವಾಗಿ 1ತಿಂಗಳು ಕಳೆದರು ಯಾವುದೇ ಪಾಠಗಳು ನಡೆದಿಲ್ಲ . ಇನ್ನು ಒಂದು ವಾರದಲ್ಲಿ ಇಂಟರ್ನಲ್ ಪರೀಕ್ಷೆ ಬರುತ್ತದೆ ನಾವು ಹೇಗೆ ಬರೆಯುವುದು.ಕಾಲೇಜಿಗೆ ಬರುವುದು,ಹೋಗುವುದು ನೋಡಿ ಹೆತ್ತವರು ಸಾರ್ವಜನಿಕರು ತರಗತಿ ಇಲ್ಲವೆ ಎಂದು ಪ್ರಶ್ನಿಸುತ್ತಾರೆ. ಕಲಿಯುವುದನ್ನು ಬಿಟ್ಟು ಪ್ರತಿಭಟನೆ ಮಾಡುವ ಸ್ಥಿತಿ ನಿರ್ಮಾಣ ಆಗಿದೆ.ನಮ್ಮ ಬಗ್ಗೆ ಭಯ ನಿರ್ಮಾಣ ಆಗಿದೆ.ಆದುದರಿಂದ ಕೂಡಲೇ ಉಪನ್ಯಾಸಕರನ್ನು ನೇಮಕಮಾಡಬೇಕು -ವಿದ್ಯಾರ್ಥಿ, ವಿದ್ಯಾರ್ಥಿನಿ

ನಾವು ಕಾಲೇಜಿಗೆ ಕಲಿಯಲು ಬಂದಿದ್ದೇವೋ ,ತಿರುಗಳು ಬಂದಿದ್ದೇವು ಎಂದು ನಮಗೆ ತಿಳಿಯತ್ತಿಲ್ಲ.ಪಾಠ ಪ್ರವಚನ ಇಲ್ಲದೆ ಮುಂದಿನ ನಮ್ಮ ಭವಿಷ್ಯ ಏನಾಗುವುದೋ ಎಂಬ ಆತಂಕ ಹುಟ್ಟಿದೆ. ಇದಕ್ಕೆ ಕೂಟಲೇ ಸರಕಾರ ಎಚ್ಚೆತ್ತು ಉಪನ್ಯಾಸಕರನ್ನು ನೇಮಿಸಲಿ – ರಂಜನ್ ವಿದ್ಯಾರ್ಥಿ

ನಾವು ಇದುವರಗೆ ಮೌನವಹಿಸಿ ದೊಡ್ಡ ತಪ್ಪು ಮಾಡಿದ್ದೇವೆ. ಇದಕ್ಕೆ ಸರಿಯಾದ ಹೋರಾಟ ಹಿಂದಯೇ ನಡೆಸುತ್ತಿದ್ದರೆ ಸರಕಾರ ಎಚ್ಚೆತ್ತುಕೊಳ್ಳುತ್ತಿತ್ತೋ ಏನೋ.ಉಪನ್ಯಾಸಕರ ನೇಮಕಕ್ಕೆ ಹೋರಾಟದ ಕಿಡಿ ಬೆಟ್ಟಂಪಾಡಿಯಲ್ಲಿ ಹೊರಟಿದೆ . ಕೂಡಲೇ ಶಿಕ್ಷಣ ಇಲಾಖೆ ಉಪನ್ಯಾಸಕರ ನೇಮಕ ಮಾಡಲಿ – ನವಚೇತನ್ ಕುಮಾರ್ – ಎಬಿವಿಪಿ ಬೆಟ್ಟಂಪಾಡಿ ಘಟಕದ ಅಧ್ಯಕ್ಷ

ಪ್ರತಿಭಟನೆ ನಡೆಸಿ ಕಾಲೇಜಿನ ಪ್ರಾಂಶುಪಾಲರಿಗೆ ಮನವಿ ಸಲ್ಲಿಸಲಾಯಿತು. ಮನವಿ ಸ್ವೀಕರಿಸಿ ಉತ್ತರಿಸಿದ ಪ್ರಾಂಶುಪಾಲ ಡಾ| ವರದರಾಜ್ ಚಂದ್ರಗಿರಿ ಕಾಲೇಜಿಗೆ ಹತ್ತು ಉಪನ್ಯಾಸಕರ ನೇಮಕ ಆಗಬೇಕು.ಕಳೆದ ಅವದಿಯ ಅತಿಥಿ ಉಪನ್ಯಾಸಕರನ್ನು ನೇಮಕ ಮಾಡಲು ಸರಕಾರ ಆದೇಶ ನೀಡಿದೆ .ಆದರೆ ನೇಮಕಕ್ಕೆ ತಡ ಆಗಿದೆ . ಈಗಾಗಲೇ ಶಾಸಕರಲ್ಲಿಯೂ ಮನವಿ ನೀಡಿದ್ದೇನೆ. ನಿಮ್ಮ ಹೋರಾಟವೂ ಸರಿಯೇ .ಈ ಬಗ್ಗೆ ಸೂಕ್ತ ಕ್ರಮಕೈಗೊಳ್ಳಲು ನಾನು ಕ್ರಮಕೈಗೊಳ್ಳುತ್ತೇನೆ ಎಂದರು. ಸಂಪ್ಯ ಆರಕ್ಷಕ ಠಾಣೆಯ ಸಿಬ್ಬಂದಿಗಳು ಬಂದೋಬಸ್ತ್ ಒದಗಿಸಿದರು. ನವಚೇತನ್ ಕುಮಾರ್ ಸ್ವಾಗತಿಸಿ, ವಂದಿಸಿದರು.

20150720000411

20150720000411 (1)

20150720000411 (2)

20150720000411 (4)

20150720000413

Leave a Reply


ಸುಭಾಷಿತ

ಜೀವನ ನೈಜವಾದುದು. ಉತ್ಸಾಹ ಪರಿಪೂರ್ಣವಾದುದು

-ಲಾಂಗ್ ಫೆಲೋ

ಚಿತ್ರ-ವಿಚಿತ್ರ

ಸುದ್ದಿ ಸ್ಪೆಷಲ್

Finding the right hotel just got a whole lot easier - HotelsCombined.com

ನಮ್ಮ ಬಗ್ಗೆ

ಮೊದಲಿಗೆ ಕೇವಲ ಒಂದು ಹಾಳೆಯಲ್ಲಿ ಪ್ರಕಟವಾಗುತ್ತಿದ್ದ ಪುತ್ತೂರು ಸುದ್ದಿ ಬಿಡುಗಡೆ ಪತ್ರಿಕೆ ಇಂದು ಪ್ರತಿದಿನ ಆರು ಪುಟಗಳಿಂದ
... ಮುಂದೆ ಓದಿ

ಸಲಹೆ- ಸೂಚನೆ

ನಿಮ್ಮ ಸಲಹೆ ಸೂಚನೆಗಳಿಗೆ ಹಾರ್ದಿಕ ಸ್ವಾಗತ

ಇಲ್ಲಿ ಕ್ಲಿಕ್ಕಿಸಿ

Copyright © 2018 Suddinews.com . All Rights Reserved.
^ Back to Top