Wed 17 Jan 2018, 2:21PM

468X60

ಲಯನ್ಸ್ ವತಿಯಿಂದ ಸುಳ್ಯದ ಅಟೋ ಚಾಲಕರಿಗೆ ರಾಷ್ಟ್ರಧ್ವಜ ವಿತರಣೆ

Thursday, August 13th, 2015 | sulliaeditor | no responses

ಸುಳ್ಯ ಲಯನ್ಸ್ ಕ್ಲಬ್ ವತಿಯಿಂದ ಸುಳ್ಯದ ಅಟೋ ಚಾಲಕರಿಗೆ ರಾಷ್ಟ್ರಶ್ವಜಗಳನ್ನು ಇಂದು ಸಂಜೆ ವಿತರಿಸಲಾಯಿತು.
ಸುಳ್ಯ ಬಸ್ ನಿಲ್ದಾಣ ಬಳಿಯ ರಿಕ್ಷಾ ಪಾರ್ಕಿಂಗ್‌ನಲ್ಲಿ ನಡೆದ ಕಾರ್ಯಕ್ರಮದಲ್ಲಿ ಲಯನ್ಸ್ ಮಾಝಿ ರಾಜ್ಯಪಾಲ ಎಂ.ಬಿ.ಸದಾಶಿವರು ರಾಷ್ಟ್ರಧ್ವಜ ಕೊಡುಗೆಯ ಮಹತ್ವವನ್ನು ಹೇಳಿದರು. ಬಿ.ಎಂ.ಎಸ್. ತಾಲೂಕು ಅಧ್ಯಕ್ಷ ಪಿ.ಗೋಪಾಲಕೃಷ್ಣ ಭಟ್ ಲಯನ್ಸ್ ಕ್ಲಬ್‌ನ್ನು ಶ್ಲಾಘಿಸಿ ಮಾತನಾಡಿದರು. ಲಯನ್ ರಾಧಾಕೃಷ್ಣ ಮಾಣಿಬೆಟ್ಟು, ಲಯನ್ ಪ್ರಸಾದ್ ಮಿತ್ತಮಜಲು, ಲಯನೆಸ್ ಶ್ರೀಮತಿ ಹರಿಣಿ ಸದಾಶಿವ, ಲಯನ್ ಎನ್.ಜಯಪ್ರಕಾಶ್ ರೈ, ಲಯನ್ ಜಗನ್ನಾಥ ಶೆಟ್ಟಿ, ಲಯನ್ ಜಯಂತ ಶೆಟ್ಟಿ, ಲಯನ್ ಗಿರೀಶ್ ಡಿ.ಎಸ್., ಲಯನ್ ಸಂತೋಷ್ ಮಡ್ತಿಲ, ಲಯನ್ ಶಶಿಧರ ಶೆಟ್ಟಿ, ಲಯನ್ ಎ.ಆರ್.ಮನಮೋಹನ್ ಮೊದಲಾದವರು ಉಪಸ್ಥಿತರಿದ್ದರು. ಬಿ.ಎಂ.ಎಸ್. ರಿಕ್ಷಾ ಚಾಲಕರ ಸಂಘದ ಅಧ್ಯಕ್ಷ ರಾಧಾಕೃಷ್ಣ ಬೈತಡ್ಕ ೩೦೦ ಧ್ವಜಗಳನ್ನು ಪಡೆದುಕೊಂಡರೆ, ಸಿ.ಐ.ಟಿ.ಯು. ರಿಕ್ಷಾ ಚಾಲಕರ ಸಂಘದ ಅಧ್ಯಕ್ಷ ಉಸ್ಮಾನ್ ೫೦ ರಾಷ್ಟ್ರಧ್ವಜಗಳನ್ನು ಪಡೆದುಕೊಂಡರು. ರಿಕ್ಷಾ ಚಾಲಕರು ಬಹು ಸಂಖ್ಯೆಯಲ್ಲಿ ಸೇರಿದ್ದರು.
ಲಯನ್ಸ್ ಅಧ್ಯಕ್ಷ ಜಯರಾಮ ದೇರಪ್ಪಜನಮನೆ ಕಾರ್ಯಕ್ರಮ ನೇತೃತ್ವ ವಹಿಸಿ ಸ್ವಾಗತಗೈದು ಪ್ರಾಸ್ತಾವಿಕ ಮಾತನಾಡಿದರು. ನಿಕಟಪೂರ್ವಾಧ್ಯಕ್ಷ ಎಸ್.ಆರ್.ಹೂವಯ್ಯ ವಂದಿಸಿದರು.

lions vathiyinda auto chalakarige dwaja vitharane (1) lions vathiyinda auto chalakarige dwaja vitharane (2) lions vathiyinda auto chalakarige dwaja vitharane (3)lions vathiyinda auto chalakarige dwaja vitharane (4)

Leave a Reply


ಸುಭಾಷಿತ

ಒಳ್ಳೆಯವರು ನಿಷ್ಕ್ರಿಯರಾದಾಗ ತಪ್ಪುಗಳು ಕೆಡುಕುಗಳು ವಿಜೃಂಭಿಸುತ್ತದೆ.

-ವಿದುರ ನೀತಿ

ಚಿತ್ರ-ವಿಚಿತ್ರ

ಸುದ್ದಿ ಸ್ಪೆಷಲ್

Finding the right hotel just got a whole lot easier - HotelsCombined.com

ನಮ್ಮ ಬಗ್ಗೆ

ಮೊದಲಿಗೆ ಕೇವಲ ಒಂದು ಹಾಳೆಯಲ್ಲಿ ಪ್ರಕಟವಾಗುತ್ತಿದ್ದ ಪುತ್ತೂರು ಸುದ್ದಿ ಬಿಡುಗಡೆ ಪತ್ರಿಕೆ ಇಂದು ಪ್ರತಿದಿನ ಆರು ಪುಟಗಳಿಂದ
... ಮುಂದೆ ಓದಿ

ಸಲಹೆ- ಸೂಚನೆ

ನಿಮ್ಮ ಸಲಹೆ ಸೂಚನೆಗಳಿಗೆ ಹಾರ್ದಿಕ ಸ್ವಾಗತ

ಇಲ್ಲಿ ಕ್ಲಿಕ್ಕಿಸಿ

Copyright © 2018 Suddinews.com . All Rights Reserved.
^ Back to Top