Thu 11 Jan 2018, 7:23PM

468X60

ರಬ್ಬರ್‌ಗೆ ಬೆಂಬಲ ಬೆಲೆಗಾಗಿ ಧ್ವನಿ ಎತ್ತುವೆ: ಶಾಸಕ ಬಂಗೇರ ಭರವಸೆ

Thursday, August 13th, 2015 | suddiblt | no responses

   rabbar ujireಬೆಳ್ತಂಗಡಿ: ರಬ್ಬರ್ ಬೆಳೆಗಾರರ ಸಮಸ್ಯೆಗಳನ್ನು ಮತ್ತು ರಬ್ಬರ್‌ಗೆ ಬೆಂಬಲ ಬೆಲೆ ನಿಗದಿಪಡಿಸುವಂತೆ ರಾಜ್ಯ ಸರಕಾರವನ್ನು ಒತ್ತಾಯಿಸು ತ್ತೇನೆ. ಜಿಲ್ಲೆಯ ಎಲ್ಲಾ ಶಾಸಕರನ್ನು ಸೇರಿಸಿಕೊಂಡು ಸರಕಾರದ ಗಮನ ಸೆಳೆಯುತ್ತೇವೆ ಎಂದು ಶಾಸಕ ಕೆ.ವಸಂತ ಬಂಗೇರ ಹೇಳಿದರು. ಅವರು ಆ. ೧೦ ರಂದು ಉಜಿರೆ ರಬ್ಬರ್ ಸೊಸೈಟಿಯ ಕೀರ್ತಿಶೇಷ ಜಿ.ಎನ್.ಭಿಡೆ ಸಭಾಂಗಣದಲ್ಲಿ, ಕರ್ನಾಟಕ ರಾಜ್ಯ ರಬ್ಬರು ಬೆಳೆಗಾರರ ಹಿತರಕ್ಷಣಾ ವೇದಿಕೆ ಮತ್ತು ಬೆಳ್ತಂಗಡಿ ತಾಲೂಕು ರಬ್ಬರು ಬೆಳೆಗಾರರ ಮಾರಾಟ ಮತ್ತು ಸಂಸ್ಕೃರಣ ಸಹಕಾರಿ ಸಂಘ ಉಜಿರೆ ಇದರ ಆಶ್ರಯದಲ್ಲಿ ನಡೆದ ರಬ್ಬರು ಬೆಳೆಗಾರರ ಸಮಾ ಲೋಚನಾ ಸಭೆಯಲ್ಲಿ ರೈತರ ಮನವಿ ಯನ್ನು ಸ್ವೀಕರಿಸಿ ಮಾತನಾಡಿದರು.
ಕರ್ನಾಟಕ ರಾಜ್ಯ ರಬ್ಬರ್ ಬೆಳೆಗಾರರ ಹಿತರಕ್ಷಣಾ ವೇದಿಕೆ ಮತ್ತು ಬೆಳ್ತಂಗಡಿ ತಾಲೂಕು ರಬ್ಬರ್ ಬೆಳೆಗಾರರ ಮಾರಾಟ ಮತ್ತು ಸಂಸ್ಕರಣ ಸಹಕಾರಿ ಸಂಘದ ಅಧ್ಯಕ್ಷ ಶ್ರೀಧರ ಭಿಡೆ ಮನವಿ ನೀಡುತ್ತಾ, ರಬ್ಬರ್‌ಗೆ ರೂ. ೧೫೦ ಬೆಂಬಲ ಬೆಲೆಯನ್ನು ನಿಗದಿಗೊಳಿಸ ಬೇಕು. ಕೇಂದ್ರ ಸರಕಾರ ರಬ್ಬರನ್ನು ರಫ್ತು ಮಾಡುತ್ತಿದೆ. ಹೀಗಾಗಿ ಇಲ್ಲಿ ಬೆಲೆ ಕಡಿಮೆಯಾಗಿದೆ. ಸಾಲ ಮಾಡಿ ಕೃಷಿ ಮಾಡಿದ ಕೃಷಿಕರು ತತ್ತರಿಸಿ ಹೋಗುತ್ತಿ ದ್ದಾರೆ. ಪರಿಸ್ಥಿತಿ ವಿಕೋಪಕ್ಕೆ ಹೋಗುವ ಮೊದಲು ಎಚ್ಚೆತ್ತು ಕೊಳ್ಳಬೇಕು. ರಾಜ್ಯ ಸರಕಾರ ಕೇರಳದಂತೆ ಪ್ರೋತ್ಸಾಹ ಧನ ನೀಡಬೇಕು. ಕೇಂದ್ರ ಸರಕಾರವು ನೈಜ ರಬ್ಬರಿನ ಆಮದನ್ನು ಕೂಡಲೇ ತಡೆಹಿಡಿಯಬೇಕು. ನಮ್ಮ ದೇಶದ ಅಗತ್ಯಕ್ಕೆ ಕೊರತೆಯಾಗಿರುವ ಪರಿಮಾಣದ ರಬ್ಬರನ್ನು ಮಾತ್ರ ಆಮದು ಮಾಡಬೇಕು. ಪ್ರಸಕ್ತ ಆಮದು ಸುಂಕ ಶೇ.೨೫ ಇರುತ್ತಿದ್ದು ಇದನ್ನು ಕನಿಷ್ಠ ಶೇ. ೭೦ ಕ್ಕೆ ಏರಿಸಬೇಕು. ಎಲ್ಲಾ ರಬ್ಬರ್ ಬೆಳೆಗಾರರ ಪ್ರತಿನಿಧಿಯಾಗಿ ಶಾಸಕ ವಸಂತ ಬಂಗೇರ ಅವರು ಸರಕಾರದ ಗಮನ ಸೆಳೆಯಬೇಕು. ನಮ್ಮ ಹೋರಾಟಕ್ಕೆ ನಿಮ್ಮ ಬೆಂಬಲ ಅಗತ್ಯ ಎಂದರು. ಸಭೆಯಲ್ಲಿ ರಬ್ಬರ್ ಸೊಸೈಟಿ ಉಪಾಧ್ಯಕ್ಷ ಎನ್. ಪದ್ಮನಾಭ, ಮುಖ್ಯ ಕಾರ್ಯನಿರ್ವಹಣಾಧಿಕಾರಿ ರಾಜುಶೆಟ್ಟಿ, ಸೇರಿದಂತೆ ನಿರ್ದೇಶಕರು ಗಳು, ತಾಲೂಕಿನ ವಿವಿಧ ಗ್ರಾಮದ ರಬ್ಬರು ಬೆಳೆಗಾರರು, ವೇದಿಕೆಯ ಸದಸ್ಯರು ಮತ್ತಿತರರು ಭಾಗವಹಿಸಿದ್ದರು.

Leave a Reply


ಸುಭಾಷಿತ

ಧರ್ಮಗಳು ಆನಂದಗೊಳಿಸುವಂತಹ ದ್ವೀಪಗಳು,  ಆತ್ಮ ಮತ್ತು ಸ್ಪೂರ್ತಿಯ ತಾಣಗಳು.

– ಎ.ಪಿ.ಜೆ ಕಲಾಂ

ಚಿತ್ರ-ವಿಚಿತ್ರ

ಸುದ್ದಿ ಸ್ಪೆಷಲ್

Finding the right hotel just got a whole lot easier - HotelsCombined.com

ನಮ್ಮ ಬಗ್ಗೆ

ಮೊದಲಿಗೆ ಕೇವಲ ಒಂದು ಹಾಳೆಯಲ್ಲಿ ಪ್ರಕಟವಾಗುತ್ತಿದ್ದ ಪುತ್ತೂರು ಸುದ್ದಿ ಬಿಡುಗಡೆ ಪತ್ರಿಕೆ ಇಂದು ಪ್ರತಿದಿನ ಆರು ಪುಟಗಳಿಂದ
... ಮುಂದೆ ಓದಿ

ಸಲಹೆ- ಸೂಚನೆ

ನಿಮ್ಮ ಸಲಹೆ ಸೂಚನೆಗಳಿಗೆ ಹಾರ್ದಿಕ ಸ್ವಾಗತ

ಇಲ್ಲಿ ಕ್ಲಿಕ್ಕಿಸಿ

Copyright © 2018 Suddinews.com . All Rights Reserved.
^ Back to Top