Mon 15 Jan 2018, 9:18PM

468X60

ಅಧ್ಯಕ್ಷರ ಹತ್ಯೆಗೆ ಸಂಚು: ಬಂಧನ

Sunday, October 25th, 2015 | webnews | no responses

ಮಾಲ್ದೀವ್ಸ್ ಅಧ್ಯಕ್ಷ ಅಬ್ದುಲ್ಲಾ ಯಾಮೀನ್ ಅವರ ಹತ್ಯೆ ಯತ್ನ ಪ್ರಕರಣದಲ್ಲಿ ಉಪಾಧ್ಯಕ್ಷ ಅಹಮದ್ ಅದೀಬ್ ಅವರ ಕೈವಾಡ ಇರುವ ಸುಳಿವು ಲಭಿಸಿದೆ. ಈ ಸಂಬಂಧ ಅದೀಬ್ ಅವರನ್ನು ಬಂಧಿಸಲಾಗಿದೆ. ಅಧ್ಯಕ್ಷನ ಹತ್ಯೆಗೆ ಉಪಾಧ್ಯಕ್ಷನೇ ಯತ್ನಿಸಿರುವ ಈ ಘಟನೆ ಅಪರೂಪ ಎನ್ನಲಾಗಿದೆ. ಅದೀಬ್ ಅವರು ಸಿಂಗಾಪುರದಿಂದ ಬಂದಿಳಿಯುತ್ತಿದ್ದಂತೆ ಪೊಲೀಸರು ಅವರನ್ನು ಬಂಧಿಸಿದ್ದಾರೆ. ಸೆ.೨೮ರಂದು ಅಧ್ಯಕ್ಷ ಯಾಮೀನ್ ಅವರು ಸಪತ್ನ್ಪಿಕರಾಗಿ ಮೆಕ್ಕಾ ಯಾತ್ರೆ ಮುಗಿಸಿ ಸ್ವದೇಶಕ್ಕೆ ಮರಳುವ ವೇಳೆ, ಸ್ಪೀಡ್‌ಬೋಟ್ ಮೂಲಕ ರಾಜಧಾನಿ ಮಾಲೆಗೆ ಆಗಮಿಸುತ್ತಿದ್ದರು. ಈ ವೇಳೆ ಅವರು ಚಲಿಸುತ್ತಿದ್ದ ಬೋಟ್‌ನಲ್ಲಿ ಏಕಾಏಕಿ ಸ್ಫೋಟ ಸಂಭವಿಸಿತ್ತು. ಅದೃಷ್ಟವಶಾತ್ ಯಾಮೀನ್ ಪಾರಾಗಿ ಅವರ ಪತ್ನಿಗೆ ಸಣ್ಣಪುಟ್ಟ ಗಾಯವಾಗಿತ್ತು.

Leave a Reply


ಸುಭಾಷಿತ

ಧರ್ಮಗಳು ಆನಂದಗೊಳಿಸುವಂತಹ ದ್ವೀಪಗಳು,  ಆತ್ಮ ಮತ್ತು ಸ್ಪೂರ್ತಿಯ ತಾಣಗಳು.

– ಎ.ಪಿ.ಜೆ ಕಲಾಂ

ಚಿತ್ರ-ವಿಚಿತ್ರ

ಸುದ್ದಿ ಸ್ಪೆಷಲ್

Finding the right hotel just got a whole lot easier - HotelsCombined.com

ನಮ್ಮ ಬಗ್ಗೆ

ಮೊದಲಿಗೆ ಕೇವಲ ಒಂದು ಹಾಳೆಯಲ್ಲಿ ಪ್ರಕಟವಾಗುತ್ತಿದ್ದ ಪುತ್ತೂರು ಸುದ್ದಿ ಬಿಡುಗಡೆ ಪತ್ರಿಕೆ ಇಂದು ಪ್ರತಿದಿನ ಆರು ಪುಟಗಳಿಂದ
... ಮುಂದೆ ಓದಿ

ಸಲಹೆ- ಸೂಚನೆ

ನಿಮ್ಮ ಸಲಹೆ ಸೂಚನೆಗಳಿಗೆ ಹಾರ್ದಿಕ ಸ್ವಾಗತ

ಇಲ್ಲಿ ಕ್ಲಿಕ್ಕಿಸಿ

Copyright © 2018 Suddinews.com . All Rights Reserved.
^ Back to Top