Tue 16 Jan 2018, 9:14PM

468X60

ವರ್ಷಧಾರೆಯಲ್ಲಿ ಭೋರ್ಗರೆದ ಧರ್ಮ ಜಾಗೃತಿ ಸಮಾವೇಶ

Sunday, November 1st, 2015 | suddiputtur | no responses

ಇದು ಸಮಾವೇಶದುದ್ದಕ್ಕೂ ಕೇಳಿ ಬಂದ ಮಾತುಗಳು..

* ರಾಮಚಂದ್ರಾಪುರ ಮಠದ ರಾಘವೇಶ್ವರ ಭಾರತೀ ಸ್ವಾಮೀಜಿ ನಿರಪರಾಧಿ

* ಸಾಧು ಸಂತರ ಮೇಲಿನ ದೌರ್ಜನ್ಯಕ್ಕೆ ತಕ್ಕ ಶಾಸ್ತಿ ಮಾಡಲಿದ್ದೇವೆ

* ಹಿಂದೂ ಸಮಾಜಕ್ಕೆ ದ್ರೋಹ ಬಗೆದರೆ ಸಹಿಸಲ್ಲ

* ಸರಕಾರ ಗೋಹತ್ಯೆ ನಿಷೇಧ ಕಾನೂನು ಕಟ್ಟುನಿಟ್ಟಾಗಿ ಜಾರಿ ತರಬೇಕು

ವಿಶೇಷತೆಗಳು

ಮಳೆಗೆ ಅಡ್ಡಿಯಾಗದಂತೆ ವೇದಿಕೆ ನಿರ್ಮಾಣ

ಬಯಲು ಸಭಾಂಗಣದಲ್ಲಿ ಪ್ರೇಕ್ಷಕರ ಆಸನ

* ಕಾರ್ಯಕ್ರಮದ ಆರಂಭದಲ್ಲಿ ಗೋಪೂಜೆ, ಭಾರತ ಮಾತೆಗೆ ಪುಷ್ಪಾರ್ಚನೆ

* ಮೊಳಗಿದ ಶಂಖನಾದನ

* ಕಾರ್ಯಕ್ರಮಕ್ಕೆ ಆರಂಭಕ್ಕೇ ಶುರು ಹಚ್ಚಿಕೊಂಡು ಕಾರ್ಯಕ್ರಮದುದ್ದಕ್ಕೂ ಸುರಿದ ವರ್ಷಧಾರೆ

* ಕುಳಿತ ಆಸನಗಳಿಂದ ಕದಲದ ಜನಸ್ತೋಮ

* ಕೊಡೆ, ಕುರ್ಚಿ ತಲೆ ಮೇಲೆ ಹಿಡಿದೇ ಕಾರ್ಯಕ್ರಮ ವೀಕ್ಷಣೆ

* ದೌರ್ಜನ್ಯಕ್ಕೊಳಗಾದ ಪ್ರಶಾಂತ್ ಪೂಜಾರಿ ಸೇರಿದಂತೆ ಹಲವರ ಮನೆಗೆ ಪರಿಹಾರ ಧನ ವಿತರಣೆ

* ಮಾಣಿಲ ಶ್ರೀ, ಒಡಿಯೂರು ಶ್ರೀ, ವಜ್ರದೇಹಿ ಶ್ರೀ, ಕಣಿಯಾರು ಶ್ರೀ, ಬಾಳೆಕೋಡಿ ಶ್ರೀ ಗಳಿಂದ ಆಶೀರ್ವಚನ

* ಸಿಡಿಲಬ್ಬರದ ಭಾಷಣಗೈದ ನಿಖೇತ್ ರಾಜ್ ಮೌರ್ಯ

* ವೇದಿಕೆಯಲ್ಲಿ ಸಂಸದ ನಳಿನ್, ಶಾಸಕ ಅಂಗಾರ, ಹರಿಕೃಷ್ಣ ಪುನರೂರು

darma

ಬೈಕ್ ರೇಲಿ ಮೂಲಕ ಬಂದ ಹಿಂದೂ ಕಾರ್ಯಕರ್ತರು

darma1

ಲಾರಿಯಲ್ಲಿ ಆಗಮಿಸಿದ ಕಾರ್ಯಕರ್ತರು

darma2

ಬೆಲ್ಲ ನೀರು ವಿತರಣೆ

darma3

ತೆಂಕಿಲ ಬೈಪಾಸ್ ರಸ್ತೆಯುದ್ದಕ್ಕೂ ವಾಹನ ಪಾರ್ಕಿಂಗ್

darma11

darma12

ಮೈದಾನದಲ್ಲಿ ಕಂಡುಬಂದ ಪ್ರಶಾಂತ್ ಪೂಜಾರಿ ಹಾಗೂ ಗುರುಕೃಷ್ಣ ಉಲ್ಲೇಖಿತ ಕಟೌಟ್

darma13

ಮೈದಾನದಲ್ಲಿ ಹಾಕಲಾದ ರಾಘವೇಶ್ವರ ಶ್ರೀ ಗಳ ಭಾವಚಿತ್ರವಿರುವ ಕಟೌಟ್ ಬ್ಯಾನರ್

darma16

ಆಗಮಿಸಿದ ಹಿಂದೂ ಭಾಂದವರಿಗೆ ಮಜ್ಜಿಗೆ, ನೀರು, ಬೆಲ್ಲ, ಅರಿಶಿನ ಕುಂಕುಮ ವಿತರಣೆ

ಧರ್ಮ ಎಂಬುವುದು ಮೈಕಾದಲ್ಲಿ ಮಾತನಾಡುವುದಲ್ಲಒಡಿಯೂರು ಶ್ರೀ

ಸತ್ ಸಂದೇಶ ಪ್ರಪಂಚಕ್ಕೆ ನೀಡುವ ಕೆಲಸ ಧರ್ಮದಿಂದಾಗಬೇಕಿದೆಮಾಣಿಲ ಶ್ರೀ

ಪ್ರಶಾಂತ್ ಪೂಜಾರಿ ಮೇಲೆ ಯಾವುದೇ ಕೇಸ್ ಇಲ್ಲ, ಕಾನೂನು ಕುರುಡನ ಕೈಯ ಲಾಟೀನು ಆಗಿದೆವಜ್ರದೇಹಿ ಶ್ರೀ

ಧರ್ಮಾಭಿಮಾನ ಉಳಿಸಿಕೊಳ್ಳೋಣಬಾಳೆಕೋಡಿ ಶ್ರೀ

ಜಾತಿ, ಪಂಗಡಗಳಲ್ಲಿ ಮಠದ ವಿಭಜನೆ ಬೇಡ, ಎಲ್ಲಾ ಮಠಗಳು ಹಿಂದೂ ಸಮಾಜಕ್ಕಾಗಿಕಣಿಯೂರು ಶ್ರೀ

ಪುತ್ತೂರು: ಹಿಂದೂ ಸಂತರ ಮೇಲೆ ನಿರಂತರ ಷಡ್ಯಂತ್ರಗಳು ನಡೆಯುತ್ತಲೇ ಇದೆ. ಇದಕ್ಕೆ ಹಿಂದೂ ಸಮಾಜ ಜಾಗೃತರಾಗಿ ಸಿಡಿದೇಳೆಬೇಕಾಗಿದೆ. ಹಿಂದು ಸಮಾಜದ ಸಂತರ ಮೇಲೆ ನಡೆದ ದಾಳಿಗಳ ಸಂದರ್ಭವೇ ಎಚ್ಚೆತ್ತುಕೊಳ್ಳದಿರುವುದು ಇಂದಿನ ದುರಂತಕ್ಕೆ ಕಾರಣ ಎಂದು ಭಾರತ್ ಸ್ವಾಭಿಮಾನ್ ಟ್ರಸ್ಟ್‌ನ ಯುವಭಾರತ್ ರಾಜ್ಯ ಪ್ರಭಾರಿ ನಿಕೇತ್ ರಾಜ್ ಮೌರ್ಯ ಹೇಳಿದರು.

ಸಾಧು ಸಂತರ, ಧಾರ್ಮಿಕ ಗ್ರಂಥಗಳ, ಗೋಮಾತೆ ವಿರುದ್ಧ ನಡೆಯುತ್ತಿರುವ ಷಡ್ಯಂತ್ರದ ಬಗ್ಗೆ ಜನಜಾಗೃತಿಗಾಗಿ ನ.1ರಂದು ತೆಂಕಿಲ ವಿವೇಕಾನಂದ ಶಾಲಾ ಮೈದಾನದಲ್ಲಿ ಆಯೋಜಿಸಿದ ಧರ್ಮ ಜಾಗೃತಿ ಸಮಾವೇಶದಲ್ಲಿ ಅವರು ಪ್ರಧಾನ ಭಾಷಣ ಮಾಡಿದರು. ವಿಶ್ವಕ್ಕೆ ಯೋಗ ಕಲಿಸಿದ ಬಾಬಾ ರಾಮ್‌ದೇವ್‌ರವರ ಮೇಲೂ ಷಡ್ಯಂತ್ರ ನಡೆದು ಅವರನ್ನು ಬಂಧಿಸಲು ಮುಂದಾದಾಗ ಅನಾಥರಂತೆ ಓಡುವ ಪ್ರಸಂಗ ಎದುರಾಯಿತು. ನಿತ್ಯಾನಂದ ಶ್ರೀಗಳ ವಿರುದ್ಧ ಆರೋಪ ಮಾಡುತ್ತಾ ಸಿಡಿ ನಿದರ್ಶನ ನೀಡಿದರು. ಆದರೆ ಅದನ್ನು ದೃಢಪಡಿಸಲಾಗಲಿಲ್ಲ. ಈ ನಡುವೆ ಅವರ ಮಠ ಮಂದಿರ ಮೇಲೆ ದಾಳಿ ನಡೆಸುವ ಹುನ್ನಾರ ಮಾಡಿದರು. ಆದರೆ ಅಂದು ಯಾರೂ ಬೀದಿಗಿಳಿಯಲಿಲ್ಲ. ಅಂದೇ ಹಿಂದು ಸಮಾಜ ಎಚ್ಚರ ಆಗಿರುತ್ತಿದ್ದರೆ, ರಾಘವೇಶ್ವರ ಶ್ರೀಗಳ ವಿರುದ್ಧ ಇನ್ನೊಂದು ಷಡ್ಯಂತ್ರ ನಡೆಯುತ್ತಿರಲಿಲ್ಲ. ಸಾಧ್ವಿ ಪ್ರಜ್ಞಾ ಸಿಂಗ್ ಮಸೀದಿಗಳಿಗೆ ಬಾಂಬ್ ಹಾಕಿದ್ದರೆಂದು ಅವರನ್ನು ಬಂಧಿಸಿದರು. ಆದರೆ ಅವರ ಮೇಲಿನ ಆರೋಪ ಸಾಬೀತಾಗಿಲ್ಲ. ಆದರೆ ಇಂದು ನೋವು ಅನುಭವಿಸುತ್ತಿದ್ದಾರೆ. 80 ವರ್ಷದ ಹಿರಿಯ ಅಸಾರಾಂ ಬಾಪು 17 ವರ್ಷದ ಬಾಲಕಿ ಮೇಲೆ ಅತ್ಯಾಚಾರ ಮಾಡಿದರು ಎಂದು ಆರೋಪ ಹೊರಿಸಿದರು. ಆದರೆ ತನಿಖೆಯಿಂದ ಬಂದ ಉತ್ತಮ ಅಂಶವನ್ನು ಮಾಧ್ಯಮಗಳು ಬಿಂಬಿಸಲಿಲ್ಲ. ಹಿಂದು ಸಂಸ್ಕೃತಿಯ ಪ್ರತಿನಿಧಿಗಳಾದ ಸಂತರ ವಿರುದ್ಧದ ಸುಳ್ಳು ಆರೋಪಗಳ ಸಂದರ್ಭವೇ ಹಿಂದೂ ಸಮಾಜ ಎಚ್ಚರವಾಗಬೇಕಿತ್ತು ಎಂದು ಅವರು ಸ್ವಾಮಿಗಳ ವಿರುದ್ಧ ಒಂದು ಕೊಳಕು ಮನಸ್ಸಿನ (ಸಮಾನ ಮನಸ್ಕರ) ಎಂದು ಕರೆಯಲ್ಪಡುವ ಒಂದು ಗ್ರೂಪ್ ಮಾಡುತ್ತಿರುವ ಷಡ್ಯಂತ್ರಕ್ಕೆ ಉಳಿಗಾಲವಿಲ್ಲ ಎಂದರು. ರಾಘವೇಶ್ವರ ಶ್ರೀಯವರು ಹಿಂದುಳಿದ ಜನಾಂಗದವರನ್ನು ಸಮಾನವಾಗಿ ನೋಡುತ್ತಿದ್ದರಿಂದ ಅವರ ಬಂಧನಕ್ಕೆ ಬಂದ ವೇಳೆ ಹಿಂದುಳಿದ ವರ್ಗದ ಜನರು ಶ್ರೀಗಳ ಬೆಂಗಾವಲಿಗೆ ನಿಂತರು. ಈ ನಿಟ್ಟಿನಲ್ಲಿ ಅವರ ಬಂಧನ ಸಾಧ್ಯವಾಗಲಿಲ್ಲ ಎಂದರು.

ಶ್ರೀಗಳು ಪ್ರಾಣ ತ್ಯಾಗಕ್ಕೂ ಸಿದ್ಧ: ಪ್ರೇಮಲತಾ ದಿವಾಕರ್‌ರವರ ಮೇಲೆ ಶ್ರೀಗಳು ಅತ್ಯಾಚಾರ ಮಾಡಿದ್ದಾರೆ ಎಂದು ಸಾಬೀತು ಮಾಡಿಸಿದ್ದೇ ಆದರೆ ನಮ್ಮ ರಾಮನಾದ ರಾಘವೇಶ್ವರ ಸ್ವಾಮಿಗಳು ಪೀಠ ತ್ಯಾಗದ ಜೊತೆಗೆ ಪ್ರಾಣ ತ್ಯಾಗಕ್ಕೂ ಸಿದ್ಧರಾಗಿದ್ದಾರೆ ಎಂದು ಹೇಳಿದ ನಿಕೇತ್ ರಾಜ್‌ರವರು ನಾವೆಲ್ಲ ನಮ್ಮ ಮನೆಯಲ್ಲಿ ಕೈ ಜೋಡಿಸಿ ರಾಮನಿಗೆ ನ್ಯಾಯ ಒದಗಿಸುವಂತೆ ಭಗವಂತನಲ್ಲಿ ಪ್ರಾರ್ಥನೆ ಮಾಡಬೇಕು. ಆಗ ಜಗತ್ತಿನಲ್ಲಿ ರಾಮ ಶಕ್ತಿಗಿಂತ ಕಾಮ ಶಕ್ತಿ ದೊಡ್ಡದಲ್ಲ ಎಂಬುದನ್ನು ತೋರಿಸಿಕೊಡಬೇಕು. ಕೇವಲ ಕಾಮ ಶಕ್ತಿಯನ್ನು ವೈಭವೀಕರಿಸುತ್ತಿರುವ ಒಂದಷ್ಟು ಜನ ರಾಮ ಶಕ್ತಿ ಗೆ ಸವಾಲು ಹಾಕಿದ್ದಾರೆ. ರಾಮ ಶಕ್ತಿಯ ಮುಂದೆ ಕಾಮ ಶಕ್ತಿ ಯಾವತ್ತೂ ನಿಲ್ಲಲು ಸಾಧ್ಯವಿಲ್ಲ. ಸ್ವಾಮಿಗಳ ಮೇಲೆ ಆರೋಪ ಮಾಡುತ್ತಾರೆ ಎಂದಾಗ ಗುರುಬಂಧುಗಳು ಶ್ರದ್ಧೆ ಕಳೆದು ಕೊಳ್ಳಬೇಡಿ ಎಂದರು.

ರಾಮನ ಹೋರಾಟ ರಾವಣನ ಜೊತೆ, ಶೂರ್ಪನಖಿ ಜತೆಯಲ್ಲ: ರಾಘವೇಶ್ವರ ಸ್ವಾಮೀಜಿಯವರ ಪ್ರಕರಣ ನ್ಯಾಯಾಲಯದಲ್ಲಿರುವ ಕಾರಣ ಕಾರ್ಯಕ್ರಮ ನಡೆಸುವುದು ತೊಂದರೆಗೆ ದಾರಿ ಎಂದು ಹೇಳುವುದು ಸರಿಯಲ್ಲ. ಈ ಬಗ್ಗೆ ಮಾಧ್ಯಮಗಳಲ್ಲಿ, ಬೀದಿ- ಬದಿ ನಿಂತು ಮಾತನಾಡುವುದು ಸರಿಯೇ?  ಕಾನೂನು, ಕೋರ್ಟ್ ತಮ್ಮ ಕೆಲಸ ಮಾಡುತ್ತಿದೆ. ಹಾಗೆಂದು ಹಿಂದು ಸಮಾಜ ಕೈಕಟ್ಡಿ ಕುಳಿತುಕೊಳ್ಳುವಂತಿಲ್ಲ. ರಾಮಾಯಣದ ಕೊನೆ ಆಶಯವೇ ಸತ್ಯಮೇವ ಜಯತೇ. ಅದರಂತೆ ಸತ್ಯಕ್ಕೆ ಸಾವಿಲ್ಲ ಎನ್ನುವುದನ್ನು ಮರೆಯದಿರಿ ಎಂದ ಅವರು ರಾಮನ ಹೋರಾಟ ರಾವಣನ ಜತೆಗೆ ಹೊರತು, ಶೂರ್ಪನಖಿ ಜತೆಗಲ್ಲ ಎಂದರು.

ಡಿ.ಎನ್.. ಪರೀಕ್ಷೆ ಶ್ರೀಗಳು ಒಪ್ಪಿಗೆ ಸಲ್ಲದು: ರಾಘವೇಶ್ವರ ಸ್ವಾಮೀಜಿಯವರ ಮೇಲಿನ ಆರೋಪದ ಮೇಲೆ ಡಿ.ಎನ್.ಎ ಪರೀಕ್ಷೆಗೆ ಸ್ವಾಮೀಜಿಯವರು ಒಪ್ಪುವುದಿಲ್ಲ ಎಂಬ ಕಾರಣಕ್ಕೆ ಅವರ ಮೇಲೆ ಇನ್ನೂ ಆರೋಪವನ್ನು ಬಲಪಡಿಸುವುದು ಸರಿಯಲ್ಲ. ಒಬ್ಬ ಸ್ವಾಮೀಜಿ ಅದವರು ವೀರ್ಯ ಸ್ಕಲನ ಮಾಡಿದರೆ ಆ ಸಾಧು ಸತ್ತಂತೆ. ಸಾಧು ಆದವನು ವೀರ‍್ಯ ಸ್ಕಲನ ಮಾಡುವಂತಿಲ್ಲ ಎಂಬುದು ಸಮಾಜ ತಿಳಿಯಬೇಕಾದ ವಿಚಾರ. ಅಲ್ಲದೆ ಓರ್ವ ಲೋಟದಲ್ಲಿ ಕಚ್ಚಿ ಕುಡಿದರೆ ಅದೇ ಕಚ್ಚಿದ ಲೋಟಕ್ಕೆ ಚಡ್ಡಿಯನ್ನು ತಿಕ್ಕಿದರೆ ಅಲ್ಲಿಯೂ ಡಿ.ಎನ್.ಎ. ಸಿಗುತ್ತದೆ. ಹೀಗಾಗಿ ವೀರ‍್ಯ ರಾಘವೇಶ್ವರ ಸ್ವಾಮೀಜಿಯವರದ್ದೇ ಎಂದು ಹೇಳುವ ಆರೋಪ ಸರಿಯಲ್ಲ ಎಂದು ನಿಕೇತ್ ರಾಜ್ ಹೇಳಿದರು.

ಧರ್ಮ ಹೃದಯದಲ್ಲಿ ಸ್ಥಾಪಿಸುವ ಪ್ರಯತ್ನ ಆಗಬೇಕುಒಡಿಯೂರು ಶ್ರೀ : ಮಳೆಯಲ್ಲೂ ಅಲುಗಾಡದೆ ಕುಳಿತಲ್ಲೇ ಕುಳಿತ ದೃಶ್ಯ ನೋಡಿದಾಗ ಇಲ್ಲಿ ಧರ್ಮ ರಕ್ಷಣೆ ಆಗುತ್ತಾ ಇದೆ ಎಂಬ ಸೂಚನೆ ಸಿಗುತ್ತಿದೆ ಎಂದು ಹೇಳಿದ ಒಡಿಯೂರು ಶ್ರೀ ಗುರುದೇವಾನಂದ ಸ್ವಾಮೀಜಿಯವರು ಧರ್ಮ ಅನ್ನುವುದು ಮೈಕದಲ್ಲಿ ಮಾತನಾಡುವಂತಹುದು ಅಲ್ಲ.  ಸಾಧ್ಯ ಆದರೆ ನಮ್ಮ ಹೃದಯದಲ್ಲಿ ಅದನ್ನು ಸ್ಥಾಪಿಸುವ ಪ್ರಯತ್ನ ಆಗಬೇಕು. ಧರ್ಮ ಬದುಕನ್ನು ರೂಪಿಸಲು ಇರುವ ವ್ಯವಸ್ಥೆ ಎಂದರು. ಕನ್ನಡ ರಾಜ್ಯೋತ್ಸವ ಆಗುವುದರಿಂದ ಕನ್ನಡ ಉಳಿಸುವ ಕಾರ‍್ಯಕ್ರಮವಾದರೆ ಇನ್ನೊಂದೆಡೆ ಹಿಂದಿ ದೇಶದ ಭಾಷೆ ಮತ್ತೊಂದು ಕಡೆ ತಾಯಿ ಭಾಷೆಯಾದಂತಹ ತುಳು ಭಾಷೆಯನ್ನು ಉಳಿಸಲು ಪ್ರಯತ್ನ ಮಾಡಬೇಕು. ಈ ನಿಟ್ಟಿನಲ್ಲಿ ಸನಾತನ ಹಿಂದೂ ಧರ್ಮಕ್ಕೆ ಯಾವತ್ತೂ ಅಪಾಯವಿಲ್ಲ. ನಮ್ಮ ತುಳುರಾಜ್ಯ ಕಾಸರಗೋಡಿಗೆ ತುಂಡಾಗಿ ಹೋಗಿದೆ. ಸ್ವಲ್ಪ ಉಡುಪಿ ಜಿಲ್ಲೆಗೂ ಹೋಗಿದೆ. ಸಾಧ್ಯವಾದರೆ ದ.ಕ.ಜಿಲ್ಲೆಯನ್ನು ತುಳುನಾಡು ಎಂದು ಘೋಷಣೆ ಮಾಡಬೇಕೆಂಬ ಪ್ರಯತ್ನ ಬೇಕು ಎಂದರಲ್ಲದೆ  ನೇತ್ರಾವತಿ- ಎತ್ತಿನಹೊಳೆ ಯೋಜನೆ ವಿರುದ್ಧವೂ ಇಂತಹ ಹೋರಾಟ ಸಂಘಟಿಸಬೇಕು. ಧರ್ಮ, ಸಂತರ ಮೇಲಾಗುತ್ತಿರುವ ಅನ್ಯಾಯದ ವಿರುದ್ಧ ಎಚ್ಚೆತ್ತುಕೊಳ್ಳಬೇಕು ಎಂದರು.

ಅಸ್ಪೃಶ್ಯತೆಯನ್ನು ಹೋಗಲಾಡಿಸಿದವರು ರಾಘವೇಶ್ವರ ಶ್ರೀಗಳುಮಂಜುಳಾ ಮುಕ್ರಿ : ಪರಿಶಿಷ್ಟ ಜಾತಿಯವರನ್ನು ಯಾವ ರೀತಿ ಸೇರಿಸಿಕೊಂಡಿದ್ದಾರೆ ಎಂಬುದು ಎಲ್ಲರಿಗೂ ಆಶ್ಚರ್ಯ ಮೂಡಿಸಬಹುದು. ಗುರು, ಮಠ ಎಂಬುದು ಗೊತ್ತಿಲ್ಲದ ನಮ್ಮಲ್ಲಿನ ಅಸ್ಪೃಶ್ಯತೆಯನ್ನು ಹೋಗಲಾಡಿಸಿ ನಮ್ಮೆಲ್ಲರನ್ನು ಒಟ್ಟಿಗೆ ಸೇರಿಸಿಕೊಂಡಿರುವ ಹೆಗ್ಗಳಿಕೆ ರಾಘವೇಶ್ವರ ಸ್ವಾಮೀಜಿಯವರದ್ದು, ಡಾ. ಬಿ.ಆರ್ ಅಂಬೇಡ್ಕರ್‌ರವರು ಅಸ್ಪೃಶ್ಯತೆ ಹೋಗಲಾಡಿಸಲು ಹೋರಾಟ

ಹಿಂದೂ ಸಮಾಜದ ಭದ್ರತೆಗೆ ತೊಡಕಾದಾಗ ಒಗ್ಗಟ್ಟಾಗಬೇಕುಮಾಣಿಲ ಶ್ರೀ: ಋಷಿಮುನಿಗಳು ತೋರಿಸಿಕೊಟ್ಟಂತಹ ಮಾರ್ಗದಲ್ಲಿ ನಡೆಯಬೇಕಾದ ವೇಳೆ ಋಷಿಮುನಿಗಳ ಮೇಲೆ ಕೆಟ್ಟ ಭಾವನೆ ತೋರಿದಾಗ ಸಮಾಜ ಒಗ್ಗಟ್ಟಾಗಬೇಕು. ನಾವು ಆಚಾರವಂತರಾಗಿ ವಿಚಾರವಂತರಾಗಿ ಸಮಾಜದಲ್ಲಿನ ಇಡೀ ನ್ಯೂನ್ಯತೆಗಳನ್ನು ತೊಡೆದು ಹಾಕಬೇಕು ಎಂದು ಮಾಣಿಲ ಶ್ರೀ ಮೋಹನದಾಸ ಸ್ವಾಮೀಜಿಯವರು ಹೇಳಿದರಲ್ಲದೆ ಮಾತಿನ ಪ್ರತಿಪಾದನೆಯಿಂದ ಸಮಾಜದಲ್ಲಿ ಅಶಾಂತಿ ಮೂಡುವುದಕ್ಕಿಂತ ಮಾನವಿಯ ಮೌಲ್ಯಗಳನ್ನು ಅರಿತುಕೊಳ್ಳಬೇಕು. ಅನ್ಯಮತಿಯರ ಆಕ್ರಮಣಗಳಿಂದ ದೌರ್ಬಲ್ಯ ಎನ್ನುವುದಕ್ಕಿಂತ ನಾವೆಲ್ಲ ಸಂಘಟಿತರಾಗಿ ಸಮಾವೇಶದಲ್ಲಿ ಧರ್ಮಗ್ರಂಥಗಳ ಪಠಣಗಳನ್ನು ಪಠಿಸುವುದರ ಮೂಲಕ ಸಮಾಜಕ್ಕೆ ಒಳ್ಳೆಯ ಸಂದೇಶವನ್ನು ವಿಚಾರವಂತರಿಗೆ ನೀಡುವ ಕೆಲಸ ಆಗಬೇಕು ಎಂದ ಅವರು ಎಲ್ಲಾ ಅನ್ಯಾಯಕ್ಕೂ ದೇವರು ಸರಿಯಾದ ಉತ್ತರ ನೀಡಲಿದ್ದಾನೆ ಎಂದರು.

ಸಂತನಿಂದ ಸಮಾಜ ಉದ್ಧಾರವಜ್ರದೇಹಿ ಸ್ವಾಮೀಜಿ : ಸಂತನೋರ್ವ ಸಮುದ್ರದಲ್ಲಿನ ಮೀನಿನಂತೆ ಕಲ್ಮಶವನ್ನು ತೆಗೆದು ಹಾಕುತ್ತಾನೆ. ಅವನಿಂದ ಸಮಾಜ ಉದ್ಧಾರ ಆಗುವುದೇ ಹೊರತು ಹಾನಿಯಾಗುವುದಿಲ್ಲ ಎಂದು ವಜ್ರದೇಹಿ ಮಠದ ಶ್ರೀ ರಾಜಶೇಖರಾನಂದ ಸ್ವಾಮೀಜಿ ಹೇಳಿದರು. ಮೂಡುಬಿದರೆ ಪ್ರಶಾಂತ್ ಮೇಲೆ ಯಾವುದೇ ಪ್ರಕರಣಗಳು ದಾಖಲಾಗಿಲ್ಲ. ಆದರೂ ಅಪರಾಧ ದಾಖಲಾಗಿದೆ ಎಂದು ಅಪಪ್ರಚಾರ ಮಾಡಿಕೊಂಡು ಬರುತ್ತಿದ್ದಾರೆ. ಹಿಂದು ಸಮಾಜಕ್ಕಾಗಿರುವ ಹಾನಿಯೇ ಅಸಹಿಷ್ಣುತೆಯಾಗಿ ಪರಿವರ್ತಿತವಾಗಿದೆ. ಭಾರತ ಅಸಹಿಷ್ಣುತೆಯ ಕೇಂದ್ರವಾಗಿದೆ ಎಂದು ಹೇಳುವ ಆರ್‌ಬಿಐ ಗವರ್ನರ್ ಹಿಂದೂಗಳು ಮೂರ್ಖರಲ್ಲ ಎಂಬುದನ್ನು ತಿಳಿದುಕೊಳ್ಳಲಿ.  ಕಾನೂನು ಕುರುಡನ ಕೈಯಲ್ಲಿ ಲಾಟೀನು ನೀಡಿದಂತಾಗಿದೆ ಎಂದ ಅವರು ಇದಕ್ಕೆ ಸರಿಯಾಗಿ ಚಾನೆಲ್‌ನವರು ಟಿ.ಆರ್.ಪಿ.ಗಾಗಿ ಏನು ಮಾಡಲೂ ತಯಾರಿದ್ದಾರೆ. 15 ವರ್ಷಗಳ ಕಾಲ ಮಠದ ಅನ್ನ ತಿಂದವ ಅನ್ನ ನೀಡಿದ ಗುರುಗಳನ್ನು ಕಳ್ಳ ಎಂದು ಹೇಳುತ್ತಿದ್ದಾನೆ. ಸಂತನಿರುವುದು ಸಮಾಜದ ಉದ್ಧಾರಕ್ಕಾಗಿ ಅಂತಹ ಸಂತನಿಗೆ ಅವಮಾನವಾದಾಗ ಇಡೀ ಸಮಾಜ ಎದ್ದು ನಿಲ್ಲುವ ಕಾಲ ಬಂದಿದೆ ಎಂದು ಎಚ್ಚರಿಸಿದರು.

ಬೆದರಿಕೆ ಕರೆ:ಕಾರ್ಯಕ್ರಮಕ್ಕೆ ಆಗಮಿಸುವ ಮೊದಲು ನಾಲ್ಕು ಬೆದರಿಕೆ ಕರೆ ಬಂದಿದೆ ಎಂದು ವಜ್ರದೇಹಿ ಮಠದ ಶ್ರೀ ರಾಜಶೇಖರಾನಂದ ಸ್ವಾಮೀಜಿ ಹೇಳಿದರು. ಬೆದರಿಕೆ ಕರೆಗೆ ಹೆದರುವುದಿಲ್ಲ. ನಿಮ್ಮ ಜತೆ ರಸ್ತೆಯಲ್ಲಿ ಕುಳಿತು ಹೋರಾಟ ನಡೆಸಲು ಸಿದ್ಧ ಎಂದು ಶ್ರೀಗಳು ಹೇಳಿದರು. ಕಾರ್ಯಕ್ರಮಕ್ಕೆ ಬಂದರೆ ತೊಂದರೆ ನೀವು ಅಲ್ಲಿಗೆ ಹೋಗಬೇಡಿ ಎಂದು ಹೇಳಿದ್ದರೂ ಅಂಜದೆ ಕಾರ‍್ಯಕ್ರಮಕ್ಕೆ ಆಗಮಿಸಿದ ವಜ್ರದೇಹಿ ಶ್ರೀಗಳದ್ದು ವಜ್ರದಂತಹ ಶರೀರ ಎಂದು ನಿಕೇತ್ ರಾಜ್ ಭಾಷಣದ ನಡುವೆ ಉಲ್ಲೇಖಿಸಿದರು.

ಸ್ವಾರ್ಥ ಸಾಧನೆ ಮಾಡುವ ಉದ್ದೇಶಬಾಳೆಕೋಡಿ ಸ್ವಾಮೀಜಿ : ಸ್ವಾರ್ಥ ಸಾಧನೆ ಮಾಡುವ ಉದ್ದೇಶದಿಂದ ಗುರುವರ್ಯರಾದ ರಾಘವೇಶ್ವರ ಸ್ವಾಮೀಜಿಗಳ ಮೇಲೆ ಅತ್ಯಾಚಾರ ಆರೋಪ ನಡೆಯುತ್ತಿದೆ ಎಂದು ಹೇಳಿದ ಬಾಳೆಕೋಡಿ ಶ್ರೀ ಸದ್ಗುರು ಶಶಿಕಾಂತಮಣಿ ಸ್ವಾಮೀಜಿಯವರು ಧರ್ಮದ ಮೇಲಿನ ಅಭಿಮಾನ ನಮ್ಮಲ್ಲಿ ಉಳಿದಾಗ ಈ ಆರೋಪವನ್ನು ಎದುರಿಸುವ ಶಕ್ತಿ ಸಮಾಜದಿಂದ ಸಿಗಲಿದೆ ಎಂದು ಹೇಳಿದರು.

ಸಾಮೂಹಿಕ ಪ್ರಾರ್ಥನೆಯಿಂದ ವಿರೋಧಿ ಶಕ್ತಿಗಳ ನಾಶಕಣಿಯೂರು ಶ್ರೀ : ಸಂತನಿಗೆ ಬಂದ ಆರೋಪ ಇಡೀ ದೇಶಕ್ಕೆ ಬಂದ ದುರಂತ. ಸಾಮೂಹಿಕ ಪ್ರಾರ್ಥನೆ ಮೂಲಕ ವಿರೋಧಿ ಶಕ್ತಿಗಳನ್ನು ನಾಶ ಮಾಡಬಹುದು. ನಮ್ಮಲ್ಲಿ ಜಾತಿ ಪಂಗಡಗಳ ಆಧಾರದಲ್ಲಿ ಮಠಗಳನ್ನು ವಿಭಜಿಸಬಾರದು ಎಂದು ಕಣಿಯೂರು ಶ್ರೀ ಚಾಮುಂಡೇಶ್ವರಿ ಕ್ಷೇತ್ರದ ಮಹಾಬಲ ಸ್ವಾಮೀಜಿ ಹೇಳಿದರು.

ಭಗವಾನ್ ತಾಕತ್ತಿದ್ದರೆ ಅನ್ಯ ಮತೀಯರ ದೇವರನ್ನು ನಿಂದಿಸಲಿಕುಂಟಾರು ರವೀಶ ತಂತ್ರಿ : ಕರ್ನಾಟಕ ರಾಜ್ಯದಲ್ಲಿ ಇಡೀ ಹಿಂದು ಸಮಾಜದ ಮೇಲೆ ಆಕ್ರಮಣ ಮಾಡುತ್ತಿರುವ ಭಗವಾನ್‌ರವರು ಹಿಂದೂ ದೇವತೆಗಳನ್ನು ದೂಷಿಸುತ್ತಾರೆ. ಶಾಂತಿ ಪ್ರಿಯರಾಗಿರುವ ಹಿಂದುಗಳ ಆಚಾರ ವಿಚಾರಕ್ಕೆ ಕೈ ಹಾಕುವ ಭಗವಾನ್‌ರವರು ತಾಕತ್ತಿದ್ದರೆ ಮುಸಲ್ಮಾನ, ಕ್ರಿಶ್ಚಿಯನ್‌ರವರ ದೇವರನ್ನು ನಿಂದಿಸುವ ಪ್ರಯತ್ನ ಮಾಡಿ. ಆ ಪ್ರಯತ್ನದ ಮೇಲೂ ನಿಮಗೆ ಏನೂ ತೊಂದರೆ ಆಗಲಿಲ್ಲ ಎಂದಾದರೆ ನಿಮ್ಮ ಅಭಿವ್ಯಕ್ತಿ ಸ್ವಾತಂತ್ರ್ಯಕ್ಕೆ ಹಿಂದೂಗಳು ವ್ಯವಸ್ಥೆ ಕಲ್ಪಿಸುತ್ತಾರೆ ಎಂದು   ಧರ್ಮ ಜಾಗೃತಿ ಸಮಾವೇಶದ ಗೌರವಾಧ್ಯಕ್ಷ ಕುಂಟಾರು ರವೀಶ ತಂತ್ರಿ ಹೇಳಿದರು. ಅವರು ಪ್ರಾಸ್ತಾವಿಕವಾಗಿ ಮಾತನಾಡಿ ಸಾಹಿತ್ಯದ ದುಷ್ಟ ಜಂತುಗಳನ್ನು ನಾಶ ಮಾಡಲು ಹಿಂದೂ ಸಮಾಜ ತಯಾರಾಗಿದೆ. ಮಠ  ಮಂದಿರ, ಸಾಧು ಸಂತರ ಮೇಲೆ ತೇಜೋವಧೆ, ಆರೋಪ ಸಾಬೀತಾಗುವ  ಮುನ್ನ ಅವರನ್ನು ಜೈಲಿಗಟ್ಟುವ ಪ್ರಯತ್ನ ನಡೆಸಿ ಹಿಂದೂ ಸಮಾಜವನ್ನು ಶಮನಗೊಳಿಸುವ ಪ್ರಯತ್ನ ನಡೆಯುತ್ತಿದೆ. ಗೋವಿನ ಸಂದೇಶ ಸಾರಿ ದೇಶಿ ತಳಿಯನ್ನು ರಕ್ಷಿಸುವ ಪ್ರಯತ್ನ ಮಾಡುತ್ತಿರುವ ರಾಘವೇಶ್ವರ ಸ್ವಾಮೀಜಿ ಮೇಲೆ ಅತ್ಯಾಚಾರ ಆರೋಪ ಹೊರಿಸಿ ಅವರನ್ನೂ ಜೈಲಿಗಟ್ಟುವ ಪ್ರಯತ್ನ ನಡೆಯುತ್ತಿದೆ. ಇದಕ್ಕೆ ಭವಿಷ್ಯತ್ತಿನಲ್ಲಿ ಸರಿಯಾದ ಉತ್ತರ ನೀಡಬೇಕಾಗಿದೆ. ಇಂದು ನಡೆಯುವ ಸಮಾವೇಶಕ್ಕೆ ಬಂದವರು ಅನೇಕರು ಹಿಂದೂ ಸಮಾಜದ ಭಕ್ತರು ಆದರೆ ಕೆಲವರು ನಾವು ಏನನ್ನು ಹೇಳುತ್ತೇವೆ ಎಂಬುದನ್ನು ತಿಳಿಯಲು ಬಂದಿರುವವರೂ ಇದ್ದಾರೆ. ಒಬ್ಬ ಧಾರ್ಮಿಕ ನೇತಾರನ ತಪ್ಪುಗಳನ್ನು ಗಮನಿಸುವುದಕ್ಕಿಂತ ಅವರಿಂದ ಸಮಾಜಕ್ಕೆ ಏನು ಸೇವೆ ಸಿಕ್ಕಿದೆ ಎಂಬುದನ್ನು ನೋಡಬೇಕು ಆಗ ನಮ್ಮ ದೇಶ ಮುಂದುವರಿಯುತ್ತದೆ ಎಂದು ಅವರು ಹೇಳಿದರು.  ಸಂಸದ ನಳಿನ್ ಕುಮಾರ್ ಕಟೀಲ್, ಸುಳ್ಯ ಶಾಸಕ ಅಂಗಾರ ಎಸ್, ಮಾಜಿ ಶಾಸಕ ಉರಿಮಜಲು ರಾಮ ಭಟ್, ಕಸಪಾ ಮಾಜಿ ಅಧ್ಯಕ್ಷ ಹರಿಕೃಷ್ಣ ಪುನರೂರು, ಹಿಂದೂ ಧರ್ಮ ಜಾಗೃತಿ ಸಮಾವೇಶದ ಪ್ರಧಾನ ಕಾರ‍್ಯದರ್ಶಿಗಳಾದ ವಿಶ್ವೇಶ್ವರ ಭಟ್ ಬಂಗಾರಡ್ಕ, ಸತ್ಯನಾರಾಯಣ ಕೋಡಿಬೈಲು ವೇದಿಕೆಯಲ್ಲಿ ಉಪಸ್ಥಿತರಿದ್ದರು. ನಗರಸಭಾ ಪ್ರಭಾರ ಅಧ್ಯಕ್ಷ ಜೀವಂಧರ್ ಜೈನ್, ಅರುಣ್ ಕುಮಾರ್ ಪುತ್ತಿಲ, ಆನಂದ ಮುಕ್ರುಂಪಾಡಿ, ಕ್ಯಾಂಪ್ಕೋ ನಿರ್ದೇಶಕ ಚನಿಲ ತಿಮ್ಮಪ್ಪ ಶೆಟ್ಟಿ, ಬಜರಂಗದಳದ ಧನ್ಯ ಕುಮಾರ್ ಬೆಳಂದೂರು, ಪುತ್ತೂರು ಕೋ ಆಪರೇಟಿವ್ ಟೌನ್ ಬ್ಯಾಂಕ್ ನಿರ್ದೇಶಕ ಚಂದ್ರಶೇಖರ್ ರಾವ್ ಬಪ್ಪಳಿಗೆ, ನಗರಸಭಾ ಸದಸ್ಯ ವಿನಯ ಭಂಡಾರಿ, ರಾಧಾಕೃಷ್ಣ ಬೋರ್ಕರ್, ವಿದ್ಯಾಗೌರಿ, ಕೃಷ್ಣ ಪ್ರಸಾದ್ ದಂಪತಿ, ವಿಶ್ವಹಿಂದೂ ಪರಿಷತ್ ಜಿಲ್ಲಾಧ್ಯಕ್ಷ ಡೀಕಯ್ಯ ಪೆರ‍್ವೋಡಿ, ಭಜರಂಗದಳ ಮಂಗಳೂರು ವಿಭಾಗ ಸಂಚಾಲಕ ಮುರಳೀಕೃಷ್ಣ ಹಸಂತಡ್ಕ ಸ್ವಾಮೀಜಿಗಳನ್ನು ಮತ್ತು  ಅತಿಥಿಗಳನ್ನು ಗೌರವಿಸಿದರು. ಲಲಿತಾ ಕೃಷ್ಣ ಮೂರ್ತಿ ಸರಕಾರಕ್ಕೆ ಸಲ್ಲಿಸುವ ಸಭೆಯ ನಿರ್ಣಯ ಮಂಡಿಸಿದರು. ಕೇಶವ ಪ್ರಸಾದ್‌ರವರ ಶಂಖನಾದದೊಂದಿಗೆ ಕಾರ‍್ಯಕ್ರಮ ಪ್ರಾರಂಭಗೊಂಡಿತು. ಸಿಂಧೂರ ಲಕ್ಷ್ಮೀ ಪ್ರಾರ್ಥಿಸಿ,  ಹಿಂದೂ ಧರ್ಮ ಜಾಗೃತಿ ಸಮಾವೇಶದ ಅಧ್ಯಕ್ಷ ಅಶೋಕ್ ಕುಮಾರ್ ರೈ ಕೋಡಿಂಬಾಡಿ ಸ್ವಾಗತಿಸಿ, ಸದಸ್ಯ ರಾಜಾರಾಮ ಶೆಟ್ಟಿ ಕೋಲ್ಪೆಗುತ್ತು ವಂದಿಸಿದರು. ನಗರಸಭಾ  ಸದಸ್ಯ ರಾಜೇಶ್ ಬನ್ನೂರು ಕಾರ‍್ಯಕ್ರಮ ನಿರೂಪಿಸಿದರು. ನ್ಯಾಯವಾದಿ ಮುರಳಿಕೃಷ್ಣ ಚಲ್ಲಂಗಾರು ಐಕ್ಯಮಂತ್ರ ಹೇಳಿದರು.

ಆರೋಪ ಪಟ್ಟಿಯನ್ನು ಮಾತ್ರ ತೋರಿಸುವ ಮಾಧ್ಯಮಗಳು ಸತ್ಯ ವಿಚಾರ ತೋರಿಸುತ್ತಿಲ್ಲ: ಬಾಬಾ ರಾಮ್‌ದೇವ್, ಸಾಧ್ವಿ ಪ್ರಜ್ಞಾಸಿಂಗ್, ನಿತ್ಯಾನಂದ ಸ್ವಾಮೀಜಿ, ಕಂಚಿ ಶ್ರೀ ಗಳ ಮತ್ತು ರಾಘವೇಶ್ವರ ಶ್ರೀಗಳ ಮೇಲಿನ ಆರೋಪವನ್ನು ಮಾತ್ರ ಮಾಧ್ಯಮಗಳು ಬೆಂಬಿಸುತ್ತವೆ ಹೊರತು. ಸತ್ಯ ವಿಚಾರವನ್ನು ಎಲ್ಲಿಯೂ ತೋರಿಸುತ್ತಿಲ್ಲ. ೮೦ ವರ್ಷದ ಅಸಾರಾಂ ಬಾಪು ಅತ್ಯಾಚಾರ ಮಾಡಿದ್ದಾರೆಂದು ಆರೋಪವನ್ನು ಟಿ.ವಿ. ಮಾಧ್ಯಮದಲ್ಲಿ ನಿರಂತರ ಪ್ರಚಾರಪಡಿಸಿದರು. ಆದರೆ ಅವರು ನಿರಪರಾಧಿ ಎಂದು ಸಾಬೀತಾದ ಮೇಲೆ ಮಾಧ್ಯಮಗಳು ಅದನ್ನು ತೋರಿಸುವ ಎದೆಗಾರಿಕೆ ಮಾಡಿಲ್ಲ. ಕೇವಲ ಅರೋಪಗಳ ಪಟ್ಟಿಯನ್ನು ಮಾತ್ರ ತೋರಿಸುತ್ತವೆ ಎಂದ ನಿಕೇತ್ ರಾಜ್ ಮಾಧ್ಯಮಗಳು ಪೈಡ್ ನ್ಯೂಸ್ ಎಂದು ಹೇಳುವುದು ಸುಳ್ಳಲ್ಲ ಎಂದು ಕಿಡಿ ಕಾರಿದರು.

ಆರ್ಥಿಕ ನಿಧಿ ಹಸ್ತಾಂತರ: ಗೋ ರಕ್ಷಕರಾಗಿದ್ದ ಮೂಡಬಿದಿರೆಯ ದಿ. ಪ್ರಶಾಂತ್ ಪೂಜಾರಿ ಹೆತ್ತವರಿಗೆ ರೂ. 2 ಲಕ್ಷ, ಸುಳ್ಯದ ಗುರುಕೃಷ್ಣರವರ ತಂದೆ ಚಂದ್ರಶೇಖರ್ ಮತ್ತು ತಾಯಿ ಪ್ರಮೀಳಾ ನಾಯಕ್‌ರವರಿಗೆ ರೂ. 2 ಲಕ್ಷ ಮತ್ತು ಗೋ ರಕ್ಷಣೆ ಮಾಡುತ್ತಿದ್ದ ವೇಳೆ ಹಲ್ಲೆಗೊಳಗಾದ ವಾಸು ಕಾರ್ಕಳರವರಿಗೆ ರೂ.50ಸಾವಿರ ಮತ್ತು ಗೋ ರಕ್ಷಣೆ ವೇಳೆ ಕೇಸರಿ ಬಟ್ಟೆ ಧರಿಸಿರುವ ಹಿನ್ನೆಲೆಯಲ್ಲಿ ತೀವ್ರ ಹಲ್ಲೆಗೊಳಗಾದ ಅಶೋಕ್ ಪೂಜಾರಿವಯರಿಗೆ ರೂ. 1ಲಕ್ಷ ನಿಧಿ ಕಾರ‍್ಯಕ್ರಮದ ನಡುವೆ ಹಸ್ತಾಂತರಿಸಲಾಯಿತು.

ಭೋರ್ಗರೆದು ಸುರಿದ ಮಳೆ: ಸಮಾವೇಶ ಪ್ರಾರಂಭವಾಗುವಾಗಲೇ ಹನಿ ಹನಿಯಾಗಿ ಸುರಿಯಲು ಪ್ರಾರಂಭಿಸಿದ ಮಳೆ ಒಮ್ಮೆಲೆ ಜೋರಾಗಿ ಸುರಿಯಲು ಆರಂಭಿಸಿತು. ಸಮಾವೇಶದ ಕೊನೆವರೆಗೂ ಜೋರಾಗಿ ಸುರಿದ ಮಳೆ ಕಾರ್ಯಕ್ರಮ ಮುಗಿಯುತ್ತಿದ್ದಂತೆ ಮಾಯವಾಗಿತ್ತು. ಬಹುತೇಕ ಮಂದಿ ಮಳೆಯಲ್ಲಿ ನೆನೆಯುತ್ತಲೇ ಕಾರ್ಯಕ್ರಮ ವೀಕ್ಷಿಸಿದರು. ಇನ್ನೂ ಕೆಲವರು ಕೊಡೆ ಹಿಡಿದು, ಕುಳಿತ ಕುರ್ಚಿ ಮತ್ತು ಪೇಪರನ್ನು ತಲೆಗೆ ಹಿಡಿದು ಆಶ್ರಯ ಪಡೆದುಕೊಂಡರು. ಕೆಲವರು ತಾವು ಬಂದ ವಾಹನದಲ್ಲಿಯೇ ಕುಳಿತು ಕಾರ‍್ಯಕ್ರಮ ವೀಕ್ಷಿಸಿದರು. ಮೈದಾನ ಪೂರ್ತಿ ಕೆಸರುಮಯವಾಗಿತ್ತು.

ರಾರಾಜಿಸಿದ ಗೋಹತ್ಯಾ ನಿಷೇಧ, ರಾಘವೇಶ್ವರ ಶ್ರೀಗಳ ಕಟೌಟ್

ಪ್ರಶಾಂತ್ ಪೂಜಾರಿ ಹಾಗೂ ಗುರುಕೃಷ್ಣ ಭಾವಚಿತ್ರವನ್ನೊಳಗೊಂಡ ಗೋಹತ್ಯಾ ನಿಷೇಧ ಬ್ಯಾನರ್ ಕಟೌಟ್ ಹಾಗೂ ‘ಶ್ರೀ ರಾಮಚಂದ್ರಾಪುರದ ಶ್ರೀ ರಾಘವೇಶ್ವರ ಭಾರತೀ ಮಹಾಸ್ವಾಮಿಗಳ ಜೊತೆ ನಾವಿದ್ದೇವೆ ನಾವಿದ್ದೇವೆ ಸಮಾಜ ಸಮಷ್ಟಿ’ ಬರಹ ಹೊಂದಿದ ಸ್ವಾಮೀಜಿಯವರ ಭಾವಚಿತ್ರವಿರುವ ಬ್ಯಾನರ್ ಕಟೌಟ್ ನ್ನು ಮೈದಾನದಲ್ಲಿ ಳವಡಿಸಲಾಗಿತ್ತು.

ಬೃಹತ್ ವೇದಿಕೆಸಿ.ಸಿ.ಕ್ಯಾಮರಾ ಅಳವಡಿಕೆ

ಕಾರ‍್ಯಕ್ರಮಕ್ಕಾಗಿ ಬೃಹತ್ ಎತ್ತರದ ವೇದಿಕೆ ನಿರ್ಮಾಣ ಮಾಡಲಾಗಿತ್ತು. ವೇದಿಕೆಯ ಬಲ ಭಾಗದಲ್ಲಿ ಮಹಿಳೆಯರಿಗೆ ಮತ್ತು ಎಡಭಾಗದಲ್ಲಿ ಪುರುಷರಿಗೆ ಆಸನದ ವ್ಯವಸ್ಥೆ ಕಲ್ಪಿಸಲಾಗಿತ್ತು. ವೇದಿಕೆ ಎರಡೂ ಭಾಗದಲ್ಲೂ ಸಿ.ಸಿ.ಕ್ಯಾಮರ ಅಳವಡಿಸಲಾಗಿತ್ತು. ಕಾರ‍್ಯಕ್ರಮಕ್ಕೆ ಆಗಮಿಸಿದವರಿಗೆ ಮೈದಾನದ ಪ್ರವೇಶ ಭಾಗದಲ್ಲಿ ಅರಶಿನ, ಕುಂಕುಮ, ಸೇವಂತಿಗೆ ಹೂವು ಮತ್ತು ಬೆಲ್ಲ ನೀರು, ಮಜ್ಜಿಗೆ ವಿತರಣೆ ನಡೆಯಿತು. ಸಭಾಕಾರ‍್ಯಕ್ರಮ ಪ್ರಾರಂಭದಲ್ಲಿ ಬಾಳೆಕೋಡಿ ಶ್ರೀ ಸದ್ಗುರು ಶಶಿಕಾಂತಮಣಿ ಸ್ವಾಮೀಜಿಯವರು ಊರಿನ ತಳಿಯ ಗೋವಿಗೆ ಪೂಜೆ ಸಲ್ಲಿಸಿದರು. ಭಾರತ ಮಾತೆಗೆ ಪುಷ್ಪಾರ್ಚನೆ ಮಾಡಿದರು. ಶಾಲಾ ಕೊನೆಯ ಮೈದಾನದಲ್ಲಿ ವಾಹನ ನಿಲುಗಡೆಗೆ ಅವಕಾಶ ನೀಡಲಾಗಿತ್ತು. ಸುಳ್ಯ, ಬೆಳ್ತಂಗಡಿ, ಮಂಗಳೂರು, ಕಲ್ಲಡ್ಕ, ಕಾಸರಗೋಡು ಕಡೆಗಳಿಂದ ಬಸ್, ಲಾರಿ, ವ್ಯಾನ್‌ಗಳಲ್ಲಿ ಬಂದು ಕಾರ‍್ಯಕ್ರಮದಲ್ಲಿ ಭಾಗವಹಿಸಿದರು. ಸುಮಾರು ೪ ಸಾವಿರ ಮಂದಿ ಸಭೆಯಲ್ಲಿ ಭಾಗವಹಿಸಿದ್ದರು. ಕಾರ‍್ಯಕ್ರಮದ ಹಿನ್ನೆಲೆಯಲ್ಲಿ ಪೊಲೀಸರು ಬಿಗಿ ಬಂದೋಬಸ್ತ್ ವ್ಯವಸ್ಥೆ ಕಲ್ಪಿಸಿದ್ದರು. ತಾಲೂಕಿನ ವಿವಿಧ ಕಡೆ ಆಯಕಟ್ಟಿನ ಪ್ರದೇಶಗಳಲ್ಲಿ ಪೊಲೀಸ್ ಬಂದೋಬಸ್ತ್ ವ್ಯವಸ್ಥೆ ಮಾಡಲಾಗಿತ್ತು ಹೆಚ್ಚುವರಿ ಪೊಲೀಸರನ್ನು ನಿಯೋಜಿಸಲಾಗಿದೆ.

ಧರ್ಮ ಜಾಗೃತಿ ಸಮಾವೇಶದ ನಿರ್ಣಯಗಳು

ಧರ್ಮ ಜಾಗೃತಿ ಸಮಾವೇಶದಲ್ಲಿ ಕೈಗೊಂಡ ನಿರ್ಣಯಗಳನ್ನು ಕರ್ನಾಟಕ ಮುಖ್ಯಮಂತ್ರಿ ಸಿದ್ಧರಾಮಯ್ಯನವರಿಗೆ ಪತ್ರ ಮುಖೇನ ಕಳುಹಿಸಲಾಯಿತು.

ನಿರ್ಣಯಗಳು ಇವಿಷ್ಟು..

*ಗೋಹತ್ಯೆ ನಿಷೇಧ ಕಾನೂನು ಜಾರಿಯಾಗಬೇಕು

*ರಾಘವೇಶ್ವರ ಶ್ರೀ ಹಾಗೂ ವಿಶ್ವೇಶ ತೀರ್ಥ ಶ್ರೀಗಳ ವಿರುದ್ಧ ನಡೆಯುವ ಮತ್ತು ನಡೆಯುತ್ತಿರುವ ಷಡ್ಯಂತ್ರದ   ಹಿನ್ನೆಲೆಯನ್ನು ಸ್ಪಷ್ಟಪಡಿಸಬೇಕು.

*ಹಿಂದೂ ಪವಿತ್ರ ಗ್ರಂಥ ಮತ್ತು ದೇವರ ಅವಹೇಳನ ಮಾಡಿದರೆ ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕು.

IMG_1854

IMG_1855

IMG_1856

IMG_1857

IMG_1860

IMG_1862

IMG_1863

IMG_1865

 

IMG_1868

IMG_1870

IMG_1871

IMG_1891

darma4

darma5

ಮೈದಾನದಲ್ಲಿ ನೆರೆದ ಜನಸ್ತೋಮ

IMG_1858

darma6

darma7

darma9

IMG_1875

IMG_1876

IMG_1877

IMG_1879

IMG_1880

IMG_1882

IMG_1886

 

darma10

ಮಾಣಿಲ ಮೋಹನದಾಸ ಸ್ವಾಮೀಜಿಯವರ ಆಶಿರ್ವಚನ

ಅಶೋಕ್ ಕುಮಾರ್ ರೈ ಕೋಡಿಂಬಾಡಿ ಅಧ್ಯಕ್ಷತೆ ವಹಿಸಿ ಮಾತನಾಡುತ್ತಿರುವುದು.

ಅಶೋಕ್ ಕುಮಾರ್ ರೈ ಕೋಡಿಂಬಾಡಿಯವರಿಂದ ಸ್ವಾಗತ ಭಾಷಣ

ನಿಕೇತ್ ರಾಜ್ ರವರ ಪ್ರಧಾನ ಭಾಷಣ

ನಿಕೇತ್ ರಾಜ್ ರವರ ಪ್ರಧಾನ ಭಾಷಣ

ಕಣಿಯೂರು ಮಹಾಬಲ ಸ್ವಾಮೀಜಯವರ ಆಶಿರ್ವಚನ

ಕಣಿಯೂರು ಮಹಾಬಲ ಸ್ವಾಮೀಜಯವರ ಆಶಿರ್ವಚನ

ಬಾಳೆಕೋಡಿ ಶಶಿಕಾಂತ ಸ್ವಾಮೀಜಿಯವರ ಆಶೀರ್ವಚನ

ಬಾಳೆಕೋಡಿ ಶಶಿಕಾಂತ ಸ್ವಾಮೀಜಿಯವರ ಆಶೀರ್ವಚನ

 
Leave a Reply


ಸುಭಾಷಿತ

ನಿನ್ನೆ ಸತ್ತಿಹುದೀಗ, ನಾಳೆ ಹುಟ್ಟದೇ ಇರಬಹುದು, ಇಂದು ಸೊಗಸಿರುವುದು, ಅದನ್ನು ಯಾಕೆ ಮರೆಯಬೇಕು.

-ಉಮರ್ ಖಯ್ಯಾದ್

ಚಿತ್ರ-ವಿಚಿತ್ರ

ಸುದ್ದಿ ಸ್ಪೆಷಲ್

Finding the right hotel just got a whole lot easier - HotelsCombined.com

ನಮ್ಮ ಬಗ್ಗೆ

ಮೊದಲಿಗೆ ಕೇವಲ ಒಂದು ಹಾಳೆಯಲ್ಲಿ ಪ್ರಕಟವಾಗುತ್ತಿದ್ದ ಪುತ್ತೂರು ಸುದ್ದಿ ಬಿಡುಗಡೆ ಪತ್ರಿಕೆ ಇಂದು ಪ್ರತಿದಿನ ಆರು ಪುಟಗಳಿಂದ
... ಮುಂದೆ ಓದಿ

ಸಲಹೆ- ಸೂಚನೆ

ನಿಮ್ಮ ಸಲಹೆ ಸೂಚನೆಗಳಿಗೆ ಹಾರ್ದಿಕ ಸ್ವಾಗತ

ಇಲ್ಲಿ ಕ್ಲಿಕ್ಕಿಸಿ

Copyright © 2018 Suddinews.com . All Rights Reserved.
^ Back to Top