Fri 19 Jan 2018, 11:01AM

468X60

ಸುಳ್ಯ: ವಿವಿಧ ಸಂಘಸಂಸ್ಥೆಗಳಿಂದ ಸ್ವಚ್ಚತಾ ಅಭಿಯಾನ

Sunday, November 1st, 2015 | sulliaeditor | no responses

halegetu  svaccata abhiyana copy

ನಗರ ಪಂಚಾಯತ್ ಸುಳ್ಯ, ಶಿವಾಜಿ ಯುವ ವೃಂದ ಹಳೆಗೇಟು ಸುಳ್ಯ, ಸಾಂಸ್ಕೃತಿಕ ಸಂಘ ಹಳೆಗೇಟು, ಆಟೋರಿಕ್ಷಾ ಚಾಲಕರು ಮತ್ತು ಮಾಲಕರು ಹಳೆಗೇಟು, ಶ್ರೀ ದುರ್ಗಾಶಕ್ತಿ  ಸೇವಾ ಬಳಗ ಹೊಸಗದ್ದೆ, ಹಳೆಗೇಟು ವರ್ತಕರ ಬಳಗ ಹಳೆಗೇಟು ಇದರ ಸಂಯುಕ್ತ ಆಶ್ರಯದಲ್ಲಿ ಕನ್ನಡ ರಾಜ್ಯೋತ್ಸವ ಪ್ರಯುಕ್ತ ಸ್ವಚ್ಛತಾ ಅಭಿಯಾನ ನ.1 ರಂದು ವಸಂತ ಕಟ್ಟೆ ಹಳೆಗೇಟು ಬಳಿ ನಡೆಯಿತು. 
ಕಾರ್ಯಕ್ರಮವನ್ನು ನಗರ ಪಂಚಾಯತ್ ಅಧ್ಯಕ್ಷರಾದ ಕೆ.ಪ್ರಕಾಶ್ ಹೆಗ್ಡೆ ಉದ್ಘಾಟಿಸಿದರು. ಮುಖ್ಯ ಅತಿಥಿಗಳಾಗಿ ರಂಗ ನಿರ್ದೇಶಕರಾದ  ಜೀವನ್ ರಾಂ ಸುಳ್ಯ, ಕೇಶವ ಕೃಪಾ ವಿದ್ಯಾನಗರದ ವೇ.ಮೂ.ಪುರೋಹಿತ ನಾಗರಾಜ್ ಭಟ್, ನಿವೃತ ಶಿಕ್ಷಕರಾದ ಕೇಶವ ಮಾಸ್ತರ್ ಹೊಸಗದ್ದೆ, ಹಳೆಗೇಟು ಸಾಂಸ್ಕೃತಿಕ ಸಂಘದ ಅಧ್ಯಕ್ಷರಾದ ದಿವಾಕರ ಸೇರ್ಕಜೆ, ಫ್ಯಾಮಿಲಿ ಸ್ಟೋರ್ ಹಳೆಗೇಟುವಿನ ಮಾಲಕರಾದ ಲತೀಫ್, ಕೆ.ಎಸ್.ಆರ್.ಟಿ.ಸಿ.ಪ್ರಶಸ್ತಿವಿಜೇತ ಚಾಲಕರಾದ ಶಂಕರ್ ರಾವ್ ಹಳೆಗೇಟು, ಸುಳ್ಯ ಶಿಕ್ಷಣ ಸಂಯೋಜಕರಾದ ಡಾ.ಸುಂದರ ಕೇನಾಜೆ, ಅಕ್ಷರ ದಾಸೋಹದ ಸಹಾಯಕ ನಿರ್ದೇಶಕರಾದ  ಚಂದ್ರಶೇಖರ ಪೇರಾಲು, ಗೃಹರಕ್ಷಕ ದಳದ ಘಟಕಾಧಿಕಾರಿಗಳಾದ ಜಯಂತ್ ಕೆ. ಶೆಟ್ಟಿ, ಸ.ಪ.ಪೂ.ಕಾ. ಬೆಳ್ಳಾರೆ ಪ್ರಾಂಶುಪಾಲರಾದ ಯು.ಸುಬ್ರಾಯ ಗೌಡ, ರಾಕೇಶ್ ಕುಂಟಿಕಾನ, ರೋಹಿತ್ , ಬಾಲಗೋಪಾಲ ಸೇರ್ಕಜೆ, ಎ.ವಿ.ತೀರ್ಥರಾಮ, ನಗರ ಪಂಚಾಯತ್ ಆರೋಗ್ಯ ನಿರೀಕ್ಷರಾದ ರವಿಕೃಷ್ಣ ಮೊದಲಾದವರು ಭಾಗವಹಿಸಿದ್ದರು.
ರಾಜ್ ಮುಖೇಶ್ ಹಳೆಗೇಟು ಸ್ವಾಗತಿಸಿ ವಂದಿಸಿದರು.

Leave a Reply


ಸುಭಾಷಿತ

ಧರ್ಮಗಳು ಆನಂದಗೊಳಿಸುವಂತಹ ದ್ವೀಪಗಳು,  ಆತ್ಮ ಮತ್ತು ಸ್ಪೂರ್ತಿಯ ತಾಣಗಳು.

– ಎ.ಪಿ.ಜೆ ಕಲಾಂ

ಚಿತ್ರ-ವಿಚಿತ್ರ

ಸುದ್ದಿ ಸ್ಪೆಷಲ್

Finding the right hotel just got a whole lot easier - HotelsCombined.com

ನಮ್ಮ ಬಗ್ಗೆ

ಮೊದಲಿಗೆ ಕೇವಲ ಒಂದು ಹಾಳೆಯಲ್ಲಿ ಪ್ರಕಟವಾಗುತ್ತಿದ್ದ ಪುತ್ತೂರು ಸುದ್ದಿ ಬಿಡುಗಡೆ ಪತ್ರಿಕೆ ಇಂದು ಪ್ರತಿದಿನ ಆರು ಪುಟಗಳಿಂದ
... ಮುಂದೆ ಓದಿ

ಸಲಹೆ- ಸೂಚನೆ

ನಿಮ್ಮ ಸಲಹೆ ಸೂಚನೆಗಳಿಗೆ ಹಾರ್ದಿಕ ಸ್ವಾಗತ

ಇಲ್ಲಿ ಕ್ಲಿಕ್ಕಿಸಿ

Copyright © 2018 Suddinews.com . All Rights Reserved.
^ Back to Top