Wed 17 Jan 2018, 12:48AM

468X60

ಜತೆಯಾಗಿ ಆಡಲಿರುವ ನಡಾಲ್, ಪೇಸ್

Monday, November 2nd, 2015 | webnews | no responses

ಭಾರತದ ಲಿಯಾಂಡರ್ ಪೇಸ್ ಮುಂದಿನ ವಾರ ನಡೆಯಲಿರುವ ಪ್ಯಾರಿಸ್ ಮ್ಯಾಸ್ಟರ್ಸ್ ಓಪನ್ ಟೂರ್ನಿಯಲ್ಲಿ ಸ್ಪೇನ್ ಆಟಗಾರ ರಫೆಲ್ ನಡಾಲ್ ಅವರೊಂದಿಗೆ ಡಬಲ್ಸ್ ಆಡಲಿದ್ದಾರೆ. ಬರ್ಸಿಯ ಪಲಾಯಿಸ್ ಒಮ್ನಿ ಸ್ಪೋರ್ಟ್ಸ್‌ನ ಒಳಾಂಗಣ ಕೋರ್ಟ್‌ನಲ್ಲಿ ನಡೆಯಲಿರುವ ಟೂರ್ನಿಯಲ್ಲಿ ಇಬ್ಬರೂ ಆಡಲಿದ್ದಾರೆ. ೧೪ ಗ್ರ್ಯಾಂಡ್‌ಸ್ಲಾಮ್ ಪ್ರಶಸ್ತಿ ಗೆದ್ದಿರುವ ನಡಾಲ್ ಮತ್ತು ಭಾರತದ ಚಾಂಪಿಯನ್ ಆಟಗಾರ ನಡಾಲ್ ಪೊಲೆಂಡ್‌ನ ಲುಕಾಸ್ ಕುಬೊಟ್ ಅವರೊಂದಿಗೆ ವಾಲೆನ್ಸಿಯಾ ಡಬಲ್ಸ್ ಕ್ವಾರ್ಟರ್‌ಫೈನಲ್ ಆಡಿದ್ದರು. ಈ ಋತುವಿನಲ್ಲಿ ಅವರ ಡಬಲ್ಸ್ ಸಾಧನೆ ಚೆನ್ನಾಗಿಲ್ಲ. ಆದರೆ, ಪೇಸ್ ಅವರು ಈ ಋತುವಿನಲ್ಲಿ ಹಲವು ಮಹತ್ವದ ಸಾಧನೆಗಳನ್ನು ದಾಖಲಿಸಿದ್ದಾರೆ. ಮಿಶ್ರ ಡಬಲ್ಸ್‌ನಲ್ಲಿ ಅವರು ಮಾರ್ಟಿನಾ ಹಿಂಗಿಸ್ ಜೊತೆಗೂಡಿ ಆಸ್ಟ್ರೇಲಿಯಾ ಓಪನ್, ವಿಂಬಲ್ಡನ್, ಅಮೆರಿಕ ಓಪನ್ ಪ್ರಶಸ್ತಿಗಳನ್ನು ಗೆದ್ದಿದ್ದಾರೆ.

Leave a Reply


ಸುಭಾಷಿತ

ಒಳ್ಳೆಯವರು ನಿಷ್ಕ್ರಿಯರಾದಾಗ ತಪ್ಪುಗಳು ಕೆಡುಕುಗಳು ವಿಜೃಂಭಿಸುತ್ತದೆ.

-ವಿದುರ ನೀತಿ

ಚಿತ್ರ-ವಿಚಿತ್ರ

ಸುದ್ದಿ ಸ್ಪೆಷಲ್

Finding the right hotel just got a whole lot easier - HotelsCombined.com

ನಮ್ಮ ಬಗ್ಗೆ

ಮೊದಲಿಗೆ ಕೇವಲ ಒಂದು ಹಾಳೆಯಲ್ಲಿ ಪ್ರಕಟವಾಗುತ್ತಿದ್ದ ಪುತ್ತೂರು ಸುದ್ದಿ ಬಿಡುಗಡೆ ಪತ್ರಿಕೆ ಇಂದು ಪ್ರತಿದಿನ ಆರು ಪುಟಗಳಿಂದ
... ಮುಂದೆ ಓದಿ

ಸಲಹೆ- ಸೂಚನೆ

ನಿಮ್ಮ ಸಲಹೆ ಸೂಚನೆಗಳಿಗೆ ಹಾರ್ದಿಕ ಸ್ವಾಗತ

ಇಲ್ಲಿ ಕ್ಲಿಕ್ಕಿಸಿ

Copyright © 2018 Suddinews.com . All Rights Reserved.
^ Back to Top