Sat 20 Jan 2018, 8:01PM

468X60

ಪುತ್ತೂರು ಈದ್ ಮಿಲಾದ್ ಸಮಿತಿ ಸಭೆ – ಪುತ್ತೂರಿನಲ್ಲಿ ಮಿಲಾದ್ ಸಮಾವೇಶಕ್ಕೆ ನಿರ್ಧಾರ, ವಾಹನ ರ‍್ಯಾಲಿ ಇಲ್ಲ

Saturday, November 28th, 2015 | webnews | no responses

Magariಪುತ್ತೂರು: ಪುತ್ತೂರು ಈದ್ ಮಿಲಾದ್ ಸಮಿತಿ ಸಭೆಯು ಪುತ್ತೂರು ತಾಲೂಕು ಮುಸ್ಲಿಂ ಯುವಜನ ಪರಿಷತ್‌ನ ಸಂಚಾಲಕ ನ್ಯಾಯವಾದಿ ಎಂ.ಪಿ ಅಬೂಬಕ್ಕರ್ ರವರ ಅಧ್ಯಕ್ಷತೆಯಲ್ಲಿ ಜರಗಿತು. ವರ್ಷಂಪ್ರತಿಯಂತೆ ಪುತ್ತೂರಿನಲ್ಲಿ ಈದ್ ಮಿಲಾದ್ ದಿನದಂದು ಬೃಹತ್ ಮಿಲಾದ್ ಸಮಾವೇಶವನ್ನು ನಡಸುವುದೆಂದು ತೀರ್ಮಾನಿಸಲಾಯಿತು. ಆದರೆ ವರ್ಷಂಪ್ರತಿಯಂತೆ ಕಬಕದಿಂದ ಪುತ್ತೂರಿನವರೆಗೆ ನಡೆಸಲಾಗುತ್ತಿದ್ದ ಬೃಹತ್ ವಾಹನ ರ‍್ಯಾಲಿಯನ್ನು ಕೈಬಿಡುವುದೆಂದು ತೀರ್ಮಾನಿಸಲಾಯಿತು. ವಾಹನ ರ‍್ಯಾಲಿಯಿಂದಾಗಿ ಸಾರ್ವಜನಿಕರಿಗೆ ತೀವ್ರ ಅನಾನುಕೂಲವಾಗುತ್ತಿದ್ದು, ಮಾತ್ರವಲ್ಲದೆ ವರ್ಷದಿಂದ ವರ್ಷಕ್ಕೆ ರ‍್ಯಾಲಿಗೆ ಬರುವ ವಾಹನಗಳ ಸಂಖ್ಯೆ ಹೆಚ್ಚಾಗುತ್ತಿದ್ದು ನಿಯಂತ್ರಣಕ್ಕೆ ಕಷ್ಟವಾಗುತ್ತಿರುವ ಹಿನ್ನೆಲೆಯಲ್ಲಿ ಸಾರ್ವಜನಿಕರ ಹಿತ ದೃಷ್ಠಿಯಿಂದ ವಾಹನ ರ‍್ಯಾಲಿಯನ್ನು ಕೈ ಬಿಡಲಾಯಿತು. ಅಲ್ಲದೆ ಸಭೆಯಲ್ಲಿ ವಿವಿಧ ವಿಷಯಗಳ ಬಗ್ಗೆ ಚರ್ಚಿಸಲಾಯಿತು. ಸಭೆಯಲ್ಲಿ ಉಪಸ್ಥಿತರಿದ್ದ ನ್ಯಾಯವಾದಿ ಎಂ.ಪಿ ಅಬೂಬಕ್ಕರ್, ನ್ಯಾಯವಾದಿ ನೂರುದ್ದೀನ್ ಸಾಲ್ಮರ ಮುಸ್ಲಿಂ ಯುವಜನ ಪರಿಷತ್ ನ ಅಧ್ಯಕ್ಷ ಸೂಫಿ ಪಡೀಲ್, ಕಾರ್ಯದರ್ಶಿ ಪುತ್ತುಸೇಟ್, ಈದ್ ಮಿಲಾದ್ ಸಮಿತಿಯ ಅಶ್ರಫ್ ಕಲ್ಲೇಗ, ಸಾಲ್ಮರ ಮುಹಮ್ಮದ್ ಶರೀಫ್ ಮೊದಲಾದವರು ಮಾತನಾಡಿ ವಿವಿಧ ಸಲಹೆ ಸೂಚನೆಗಳನ್ನು ನೀಡಿದರು. ಅಲ್ಲದೆ ನೂತನ ಸಮಿತಿಯನ್ನು ರಚಿಸಲಾಯಿತು.

ಈದ್ ಮಿಲಾದ್ ಸಮಿತಿ ರಚನೆ : ಅಧ್ಯಕ್ಷ ಅಶ್ರಫ್ ಬಾವ ಪಡೀಲ್, ಕಾರ್ಯದರ್ಶಿ ಅಶ್ರಫ್ ಕಲ್ಲೇಗ

ಈದ್ ಮಿಲಾದ್ ಸಮಿತಿ ಪುತ್ತೂರು ಇದರ ನೂತನ ಅಧ್ಯಕ್ಷರಾಗಿ ಅಶ್ರಫ್ ಬಾವ ಪಡೀಲ್, ಪ್ರಧಾನ ಕಾರ್ಯದರ್ಶಿ ಅಶ್ರಫ್ ಕಲ್ಲೇಗ, ಸಂಚಾಲಕರಾಗಿ ನೂರುದ್ದೀನ್ ಸಾಲ್ಮರರವರನ್ನು ಆಯ್ಕೆ ಮಾಡಲಾಯಿತು. ಉಪಾಧ್ಯಕ್ಷರಾಗಿ ಶಾಹುಲ್ ಹಮೀದ್ ಕೆಂಪಿ ಸಂಪ್ಯ, ಪಿ.ಬಿ ಹಸೈನಾರ್ ದರ್ಬೆ, ಮುಹಮ್ಮದ್ ಶರೀಫ್ ಮುಕ್ರಂಪಾಡಿ, ಖಜಾಂಜಿಯಾಗಿ ಸಾಲ್ಮರ ಮುಹಮ್ಮದ್ ಶರೀಫ್, ಜೊತೆ ಕಾರ್ಯದರ್ಶಿಯಾಗಿ ಅಶ್ರಫ್ ಮುಕ್ವೆ, ಅಬ್ದುಲ್ ಅಝೀಝ್ ಪಡೀಲ್, ಸಂಘಟನಾ ಕಾರ್ಯದರ್ಶಿಯಾಗಿ ಅನ್ಸಾರ್ ಸಂಪ್ಯ, ಉಸ್ಮಾನ್ ಕುಂಬ್ರ, ಸಿದ್ದೀಕ್ ಬೀಟಿಕೆ, ಹನೀಫ್, ನಝೀರ್ ಬಲ್ನಾಡ್, ಇಕ್ಬಾಲ್ ಬಪ್ಪಳಿಗೆ, ಸಲೀಂ ಮುರರವರನ್ನು ಆಯ್ಕೆ ಮಾಡಲಾಯಿತು. ಅಲ್ಲದೆ ಅಶ್ರಫ್ ಬೆಟ್ಟಂಪಾಡಿ, ಪುತ್ತು ಸೇಟ್, ಅದ್ದು ಪಡೀಲ್, ನಝೀರ್ ಬಪ್ಪಳಿಗೆರವರನ್ನು ಸದಸ್ಯರನ್ನಾಗಿ ನೇಮಿಸಲಾಯಿತು.

Leave a Reply


ಸುಭಾಷಿತ

ಒಳ್ಳೆಯವರು ನಿಷ್ಕ್ರಿಯರಾದಾಗ ತಪ್ಪುಗಳು ಕೆಡುಕುಗಳು ವಿಜೃಂಭಿಸುತ್ತದೆ.

-ವಿದುರ ನೀತಿ

ಚಿತ್ರ-ವಿಚಿತ್ರ

ಸುದ್ದಿ ಸ್ಪೆಷಲ್

Finding the right hotel just got a whole lot easier - HotelsCombined.com

ನಮ್ಮ ಬಗ್ಗೆ

ಮೊದಲಿಗೆ ಕೇವಲ ಒಂದು ಹಾಳೆಯಲ್ಲಿ ಪ್ರಕಟವಾಗುತ್ತಿದ್ದ ಪುತ್ತೂರು ಸುದ್ದಿ ಬಿಡುಗಡೆ ಪತ್ರಿಕೆ ಇಂದು ಪ್ರತಿದಿನ ಆರು ಪುಟಗಳಿಂದ
... ಮುಂದೆ ಓದಿ

ಸಲಹೆ- ಸೂಚನೆ

ನಿಮ್ಮ ಸಲಹೆ ಸೂಚನೆಗಳಿಗೆ ಹಾರ್ದಿಕ ಸ್ವಾಗತ

ಇಲ್ಲಿ ಕ್ಲಿಕ್ಕಿಸಿ

Copyright © 2018 Suddinews.com . All Rights Reserved.
^ Back to Top