Sat 20 Jan 2018, 1:05AM

468X60

ಮಗಳ ಸಹಪಾಠಿಯನ್ನೇ ಕೊಂದ ಶಿಕ್ಷಕಿ

Wednesday, February 10th, 2016 | webnews | no responses

ಆರನೇ ತರಗತಿ ಓದುತ್ತಿದ್ದ ಮಗಳು ಹಮ್ಜಾಳ ಸಹಪಾಠಿ ವಿನಯ್ ಮಹತೋನನ್ನು ಕೊಲೆ ಮಾಡಿದ್ದು, ಆತನ ಶಿಕ್ಷಕಿ ನಜಿಯಾ ಖತೂನ್ ಎಂದು ಪೊಲೀಸರು ತಿಳಿಸಿದ್ದಾರೆ. ನಜಿಯಾಳನ್ನು ಬಂಧಿಸಲಾಗಿದೆ. ಶುಕ್ರವಾರ ವಿನಯ್ ಮೃತದೇಹ ಶಿಕ್ಷಕರ ವಸತಿಗೃಹದ ಸಮೀಪ ಕಾಣಿಸಿಕೊಂಡಿತ್ತು, ಸಿಸಿಟಿವಿಯಲ್ಲಿ ಸೆರೆಹಿಡಿಯಲಾದ ವಿಡಿಯೋ ತುಣುಕುಗಳನ್ನು ವೀಕ್ಷಿಸಿದಾಗ ಸತ್ಯ ಹೊರ ಬಂದಿದೆ. ಶುಕ್ರವಾರ ರಾತ್ರಿ ವಿನಯ್ ಸ್ನೇಹಿತರನ್ನು ಭೇಟಿಯಾಗಲು ಹಾಸ್ಟೆಲ್‌ನ ಮುಖ್ಯದ್ವಾರದಲ್ಲಿ ಹೋಗಿದ್ದು, ಸ್ವಲ್ಪ ಸಮಯದ ನಂತರ ತೀವ್ರವಾಗಿ ಗಾಯಗೊಂಡ ಸ್ಥಿತಿಯಲ್ಲಿ ಪ್ರವೇಶದ್ವಾರದ ಬಳಿ ಕಾಣಿಸಿದ್ದ. ನಜಿಯಾ ಖತೂನ್ ಈ ರೀತಿ ದಾಳಿ ನಡೆಸಿ ಹತ್ಯೆ ಮಾಡಲು ಮಗಳು ಹಮ್ಜಾ ಜತೆಗೆ ವಿನಯ್ ಸ್ನೇಹದಿಂದಿರುವುದೆ ಕಾರಣ. ಆಕೆಗೆ ಈ ಸ್ನೇಹ ಇಷ್ಟವಿರಲಿಲ್ಲ ಎಂದು ಪೊಲೀಸರು ತಿಳಿಸಿದ್ದಾರೆ.

Leave a Reply


ಸುಭಾಷಿತ

ಓದುವುದನ್ನು ಬರೆಯುವುದನ್ನು ಕಲಿಯುವುದು ವಿದ್ಯಾಭ್ಯಾಸವಲ್ಲ. ವಿನಯವನ್ನು, ವಿವೇಕವನ್ನು ಕಲಿಸುವುದೇ ವಿದ್ಯಾಭ್ಯಾಸ

– ಸ್ವಾಮಿ ವಿವೇಕಾನಂದ

ಚಿತ್ರ-ವಿಚಿತ್ರ

ಸುದ್ದಿ ಸ್ಪೆಷಲ್

Finding the right hotel just got a whole lot easier - HotelsCombined.com

ನಮ್ಮ ಬಗ್ಗೆ

ಮೊದಲಿಗೆ ಕೇವಲ ಒಂದು ಹಾಳೆಯಲ್ಲಿ ಪ್ರಕಟವಾಗುತ್ತಿದ್ದ ಪುತ್ತೂರು ಸುದ್ದಿ ಬಿಡುಗಡೆ ಪತ್ರಿಕೆ ಇಂದು ಪ್ರತಿದಿನ ಆರು ಪುಟಗಳಿಂದ
... ಮುಂದೆ ಓದಿ

ಸಲಹೆ- ಸೂಚನೆ

ನಿಮ್ಮ ಸಲಹೆ ಸೂಚನೆಗಳಿಗೆ ಹಾರ್ದಿಕ ಸ್ವಾಗತ

ಇಲ್ಲಿ ಕ್ಲಿಕ್ಕಿಸಿ

Copyright © 2018 Suddinews.com . All Rights Reserved.
^ Back to Top