Sun 21 Jan 2018, 1:06AM

468X60

ಪಿಸಿಬಿಗೆ ಐಸಿಸಿ ಎಚ್ಚರಿಕೆ

Monday, February 15th, 2016 | webnews | no responses

ಮುಂಬರುವ ಟಿ20 ವಿಶ್ವಕಪ್ ಪಂದ್ಯಾವಳಿ ಭಾರತದಲ್ಲಿ ನಡೆಯುತ್ತಿದ್ದು ಈ ಪಂದ್ಯಾವಳಿಯಲ್ಲಿ ಭಾಗವಹಿಸುವ ಬಗ್ಗೆ ಪಾಕಿಸ್ತಾನ ತಕರಾರು ಎತ್ತಿದ್ದ ಬೆನ್ನಲ್ಲೇ ಅಂತಾರಾಷ್ಟ್ರೀಯ ಕ್ರಿಕೆಟ್ ಮಂಡಳಿ(ಐಸಿಸಿ) ಪಿಸಿಬಿಗೆ ಖಡಕ್ ಎಚ್ಚರಿಕೆ ನೀಡಿದೆ. ಅಭದ್ರತೆ ಕಾರಣ ನೀಡಿ ಪಂದ್ಯಾವಳಿಯಿಂದ ಹಿಂದೆ ಸರಿದೆರೆ ಕಠಿಣ ಕಾನೂನು ಕ್ರಮ ಎದುರಿಸಲು ಸಿದ್ದರಾಗಿ ಎಂದು ಐಸಿಸಿ ಎಚ್ಚರಿಕೆ ನೀಡಿದೆ. ಭಾರತದ ಭದ್ರತೆ ಬಗ್ಗೆ ಪಾಕಿಸ್ತಾನ ಕ್ರಿಕೆಟ್ ಮಂಡಳಿ ಎತ್ತಿರುವ ಅಪಸ್ವರ ಆಧಾರ ರಹಿತ ಎಂದು ಐಸಿಸಿ ಛೀಮಾರಿ ಹಾಕಿದ್ದು, ಟಿ೨೦ ಸರಣಿಗೆ ಬಿಸಿಸಿಐ ಒದಗಿಸುವ ಭದ್ರತೆ ಕುರಿತಂತೆ ಐಸಿಸಿ ತೃಪ್ತಿ ವ್ಯಕ್ತಪಡಿಸಿದೆ. ಪಿಸಿಬಿಯ ದ್ವಂದ್ವ ಧೋರಣೆಯನ್ನೂ ಬಯಲು ಮಾಡಿರುವ ಐಸಿಸಿ, ಗುವಾಹಟಿಯಲ್ಲಿ ನಡೆದ ಸೌತ್ ಏಶಿಯನ್ ಗೇಮ್ಸ್‌ಗಾಗಿ ೧೦೦ ಅಥ್ಲಿಟ್‌ಗಳು ಭಾರತಕ್ಕೆ ಬಂದು ಹೋಗಲು ಸರ್ಕಾರ ಅನುಮತಿ ನೀಡಿದೆ. ಕೇವಲ ೨೦ ಜನರು ವಿಶ್ವಕಪ್‌ಗೆ ಬಂದು ಹೋಗಲು ಅಲ್ಲಿನ ಸರ್ಕಾರ ಅನುಮತಿ ನೀಡುವುದಿಲ್ಲ ಎಂಬುದಕ್ಕೆ ಯಾವುದೇ ಕಾರಣವಿಲ್ಲ ಎಂದು ಐಸಿಸಿ ಅಧಿಕಾರಿಯೊಬ್ಬರು ಅಭಿಪ್ರಾಯಪಟ್ಟಿದ್ದಾರೆ.

Leave a Reply


ಸುಭಾಷಿತ

ಜೀವನ ನೈಜವಾದುದು. ಉತ್ಸಾಹ ಪರಿಪೂರ್ಣವಾದುದು

-ಲಾಂಗ್ ಫೆಲೋ

ಚಿತ್ರ-ವಿಚಿತ್ರ

ಸುದ್ದಿ ಸ್ಪೆಷಲ್

Finding the right hotel just got a whole lot easier - HotelsCombined.com

ನಮ್ಮ ಬಗ್ಗೆ

ಮೊದಲಿಗೆ ಕೇವಲ ಒಂದು ಹಾಳೆಯಲ್ಲಿ ಪ್ರಕಟವಾಗುತ್ತಿದ್ದ ಪುತ್ತೂರು ಸುದ್ದಿ ಬಿಡುಗಡೆ ಪತ್ರಿಕೆ ಇಂದು ಪ್ರತಿದಿನ ಆರು ಪುಟಗಳಿಂದ
... ಮುಂದೆ ಓದಿ

ಸಲಹೆ- ಸೂಚನೆ

ನಿಮ್ಮ ಸಲಹೆ ಸೂಚನೆಗಳಿಗೆ ಹಾರ್ದಿಕ ಸ್ವಾಗತ

ಇಲ್ಲಿ ಕ್ಲಿಕ್ಕಿಸಿ

Copyright © 2018 Suddinews.com . All Rights Reserved.
^ Back to Top