Sat 20 Jan 2018, 5:56PM

468X60

ಸೌರಾಷ್ಟ್ರ, ರಣಜಿ ಟ್ರೋಫಿ ಫೈನಲಿಗೆ

Monday, February 15th, 2016 | webnews | no responses

ವಡೋಧರಾದಲ್ಲಿ ನಡೆಯುತ್ತಿರುವ ರಣಜೀ ಟ್ರೋಫಿ ಸೆಮಿಫೈನಲಿನಲ್ಲಿ ಸೌರಾಷ್ಟ್ರವು ಅಸ್ಸಾಂನ್ನು ೧೦ ವಿಕೆಟುಗಳ ಅಂತರದಲ್ಲಿ ಸೋಲಿಸಿ, ಫೈನಲ್ ಪ್ರವೇಶ ಮಾಡಿದೆ. ಪ್ರಥಮ ಇನ್ನಿಂಗ್ಸ್‌ನಲ್ಲಿ ಅಸ್ಸಾಂ ಅಮಿತ್ ವರ್ಮ(೯೮), ಅರುಣ್ ಕಾರ್ತಿಕ್(೫೯) ಸಹಾಯದಿಂದ ೨೩೪ರನ್ನುಗಳನ್ನು ಸೇರಿಸಿತು. ಸೌರಾಷ್ಟ್ರ ಪರವಾಗಿ ಜಯದೇವ್ ಉನಾಡ್‌ಕಟ್ (೬/೭೭) ಮಾರಕ ದಾಳಿ ನಡೆಸಿದರು. ಸೌರಾಷ್ಟ್ರವು ಪುಜಾರಾ (೧೨೬) ಶತಕ ಹಾಗು ಜಾಕ್ಸನ್ (೪೭)ಸಹಾಯದಿಂದ ೩೫೩ ರನ್ನುಗಳಿಗೆ ಆಲ್-ಔಟಾಗಿ, ೧೧೯ರನ್ನುಗಳನ್ನು ಲೀಡ್ ಪಡೆಯಿತು. ೨ನೇಯ ಇನ್ನಿಂಗ್ಸ್‌ನಲ್ಲಿ ಮತ್ತೊಮ್ಮೆ ಉನಡ್‌ಕಟ್ (೫/೪೫) ವೇಗದ ದಾಳಿಗೆ ಗುರಿಯಾಗಿ ಅಸ್ಸಾಂ ಬರೇ ೧೩೯ ರನ್ನುಗಳಿಗೆ ಆಲ್-ಔಟಾಯಿತು. ಸೌರಾಷ್ಟ್ರ ಬೇಕಾಗಿದ್ದ ೨೧ರನ್ನುಗಳನ್ನು ವಿಕೆಟು ನಷ್ಟವಿಲ್ಲದೆ ಗಳಿಸಿ ಫೈನಲಿಗೆ ಏರಿತು.

Leave a Reply


ಸುಭಾಷಿತ

ಜೀವನ ನೈಜವಾದುದು. ಉತ್ಸಾಹ ಪರಿಪೂರ್ಣವಾದುದು

-ಲಾಂಗ್ ಫೆಲೋ

ಚಿತ್ರ-ವಿಚಿತ್ರ

ಸುದ್ದಿ ಸ್ಪೆಷಲ್

Finding the right hotel just got a whole lot easier - HotelsCombined.com

ನಮ್ಮ ಬಗ್ಗೆ

ಮೊದಲಿಗೆ ಕೇವಲ ಒಂದು ಹಾಳೆಯಲ್ಲಿ ಪ್ರಕಟವಾಗುತ್ತಿದ್ದ ಪುತ್ತೂರು ಸುದ್ದಿ ಬಿಡುಗಡೆ ಪತ್ರಿಕೆ ಇಂದು ಪ್ರತಿದಿನ ಆರು ಪುಟಗಳಿಂದ
... ಮುಂದೆ ಓದಿ

ಸಲಹೆ- ಸೂಚನೆ

ನಿಮ್ಮ ಸಲಹೆ ಸೂಚನೆಗಳಿಗೆ ಹಾರ್ದಿಕ ಸ್ವಾಗತ

ಇಲ್ಲಿ ಕ್ಲಿಕ್ಕಿಸಿ

Copyright © 2018 Suddinews.com . All Rights Reserved.
^ Back to Top