Fri 19 Jan 2018, 11:10AM

468X60

ಟಿ-20ಗೆ ವಿಂಡೀಸ್ ಸಜ್ಜು

Monday, February 15th, 2016 | webnews | no responses

ವೆಸ್ಟ್ ಇಂಡೀಸ್ ಕ್ರಿಕೆಟಿಗರ ವೇತನ ಬಿಕ್ಕಟ್ಟು ಕೊನೆಗೂ ಅಂತ್ಯ ಕಂಡಿದ್ದು, ಮುಂಬರುವ ಟ್ವೆಂಟಿ20 ವಿಶ್ವಕಪ್ ಟೂರ್ನಿಯಲ್ಲಿ ಆಡಲು ಡರೇನ್ ಸಮಿ ಬಳಗ ಸಜ್ಜಾಗಿದೆ. ಮುಂಬರುವ ವಿಶ್ವಕಪ್ ಟೂರ್ನಿಯಲ್ಲಿ ಆಡುವ ನಿಟ್ಟಿನಲ್ಲಿ ತಾರಾ ಕ್ರಿಕೆಟಿಗ ಕ್ರಿಸ್ ಗೇಲ್, ನಾಯಕ ಡರೇನ್ ಸಮಿ, ಸುಲೇಮಾನ್ ಬೆನ್, ಜಾಸನ್ ಹೋಲ್ಡರ್, ಆಂಡ್ರ್ಯೆ ಫ್ಲೆಚರ್, ಡ್ವೇನ್ ಬ್ರಾವೊ, ಸಮ್ಯುಯೆಲ್ ಬದ್ರಿ, ಲೆಂಡ್ಲಿ ಸಿಮನ್ಸ್, ಜೆರೊಮ್ ಟೇಲರ್, ಆಂಡ್ರೆ ರಸೆಲ್ಸ್, ಮರ್ಲಾನ್ ಸ್ಯಾಮುಯೆಲ್ಸ್ ಹಾಗೂ ದಿನೇಶ್ ರಾಮ್ದಿನ್ ಅವರು ಒಪ್ಪಂದಗಳಿಗೆ ಸಹಿ ಹಾಕಿದ್ದಾರೆ ಎಂದು ವೆಸ್ಟ್ ಇಂಡೀಸ್ ಕ್ರಿಕೆಟ್ ಮಂಡಳಿ ಹೇಳಿದೆ. ಒಪ್ಪಂದಗಳಿಗೆ ಅಂಕಿತ ಹಾಕಲು ಫೆ.೧೪ ಕೊನೆಯ ಕೊನೆಯ ದಿನವಾಗಿತ್ತು. ಆದರೆ, ಬ್ಯಾಟ್ಸಮನ್ ಡರೇನ್ ಬ್ರಾವೋ ಅವರು ಟೆಸ್ಟ್ ಕ್ರಿಕೆಟ್ ಹಾಗೂ ೫೦ ಓವರ್‌ಗಳ ಪಂದ್ಯಗಳತ್ತ ಗಮನ ನೀಡುವುದಾಗಿ ಹೇಳಿಕೊಂಡಿದ್ದಾರೆ. ಬ್ರಾವೊ ತಂಡದಿಂದ ಹೊರಗುಳಿದ ಮೂರನೇ ಆಟಗಾರ. ಸುನಿಲ್ ನರೇನ್ ಹಾಗೂ ಕಿರಣ್ ಪೋಲಾರ್ಡ್ ಅವರೂ ತಂಡದಿಂದ ಹೊರಗೆ ಉಳಿದಿದ್ದಾರೆ. ಈ ಮೂವರು ಒಪ್ಪಂದಕ್ಕೆ ಸಹಿ ಹಾಕದೇ ಇರಲು ಯಾವುದೇ ಕಾರಣಗಳನ್ನು ನೀಡಿಲ್ಲ.

Leave a Reply


ಸುಭಾಷಿತ

ಯಾವುದೇ ಮಗು ತತ್ವಜ್ಞಾನಿಯಾಗುವಂತೆ ಮಾಡುವುದೇ ಶಿಕ್ಷಣ.

– ಫ್ಲೇಟೋ

ಚಿತ್ರ-ವಿಚಿತ್ರ

ಸುದ್ದಿ ಸ್ಪೆಷಲ್

Finding the right hotel just got a whole lot easier - HotelsCombined.com

ನಮ್ಮ ಬಗ್ಗೆ

ಮೊದಲಿಗೆ ಕೇವಲ ಒಂದು ಹಾಳೆಯಲ್ಲಿ ಪ್ರಕಟವಾಗುತ್ತಿದ್ದ ಪುತ್ತೂರು ಸುದ್ದಿ ಬಿಡುಗಡೆ ಪತ್ರಿಕೆ ಇಂದು ಪ್ರತಿದಿನ ಆರು ಪುಟಗಳಿಂದ
... ಮುಂದೆ ಓದಿ

ಸಲಹೆ- ಸೂಚನೆ

ನಿಮ್ಮ ಸಲಹೆ ಸೂಚನೆಗಳಿಗೆ ಹಾರ್ದಿಕ ಸ್ವಾಗತ

ಇಲ್ಲಿ ಕ್ಲಿಕ್ಕಿಸಿ

Copyright © 2018 Suddinews.com . All Rights Reserved.
^ Back to Top