Wed 17 Jan 2018, 12:45AM

468X60

ಎಮ್ಮೆ ಮಾಂಸ, ಗೋಮಾಂಸವಲ್ಲ: ಕುಲಪತಿ

Sunday, February 21st, 2016 | webnews | no responses

ಅಲಿಗಢ ವಿಶ್ವವಿದ್ಯಾಲಯದ ವೈದ್ಯಕೀಯ ಕಾಲೇಜಿನ ಕ್ಯಾಂಟಿನ್‌ನಲ್ಲಿ ತಯಾರಿಸಲಾಗುವ ಬಿರಿಯಾನಿಗೆ ಎಮ್ಮೆ ಮಾಂಸ ಬಳಸಲಾಗುತ್ತದೆಯೇ ಹೊರತು ಗೋಮಾಂಸವನ್ನಲ್ಲ ಎಂದು ಅಲಿಗಢ ವಿವಿ ಕುಲಪತಿ ಭಾನುವಾರ ಸ್ಪಷ್ಟಪಡಿಸಿದ್ದಾರೆ. ಪ್ರಕರಣದ ಬಗ್ಗೆ ಪ್ರತಿಕ್ರಿಯಿಸಿದ ಕುಲಪತಿ ಜಮೀರ್ ಉದ್ದೀನ್ ಶಾ ಇದು ಸುಳ್ಳು ವದಂತಿಯಾಗಿದ್ದು, ಕೋಮುಗಲಭೆ ಹುಟ್ಟಿಸಲು ನಡೆಸಿರುವ ಸಂಚು ಎಂದು ತಿಳಿಸಿದ್ದಾರೆ. ದೇಶದ ಅಲ್ಪಸಂಖ್ಯಾತ ವಿಶ್ವವಿದ್ಯಾಲಯ ಎಂದು ಹೆಸರು ಪಡೆದಿರುವ ಅಲಿಗಢ ವಿಶ್ವವಿದ್ಯಾಲಯದ ವೈದ್ಯಕೀಯ ಕಾಲೇಜಿನ ಕ್ಯಾಂಟಿನ್‌ನಲ್ಲಿ ಗೋಮಾಂಸ ಬಳಸಲಾಗುತ್ತದೆ ಎಂಬ ವದಂತಿ ಶುಕ್ರವಾರ ಹರಡಿತ್ತು. ಗೋ ಮಾಂಸ ಬಳಕೆ ವಿರುದ್ಧ ಸಾಮಾಜಿಕ ಮಾಧ್ಯಮದಲ್ಲಿ ಕೂಡ ತೀವ್ರ ಟೀಕೆ ವ್ಯಕ್ತವಾಗಿತ್ತು.

Leave a Reply


ಸುಭಾಷಿತ

ಧರ್ಮಗಳು ಆನಂದಗೊಳಿಸುವಂತಹ ದ್ವೀಪಗಳು,  ಆತ್ಮ ಮತ್ತು ಸ್ಪೂರ್ತಿಯ ತಾಣಗಳು.

– ಎ.ಪಿ.ಜೆ ಕಲಾಂ

ಚಿತ್ರ-ವಿಚಿತ್ರ

ಸುದ್ದಿ ಸ್ಪೆಷಲ್

Finding the right hotel just got a whole lot easier - HotelsCombined.com

ನಮ್ಮ ಬಗ್ಗೆ

ಮೊದಲಿಗೆ ಕೇವಲ ಒಂದು ಹಾಳೆಯಲ್ಲಿ ಪ್ರಕಟವಾಗುತ್ತಿದ್ದ ಪುತ್ತೂರು ಸುದ್ದಿ ಬಿಡುಗಡೆ ಪತ್ರಿಕೆ ಇಂದು ಪ್ರತಿದಿನ ಆರು ಪುಟಗಳಿಂದ
... ಮುಂದೆ ಓದಿ

ಸಲಹೆ- ಸೂಚನೆ

ನಿಮ್ಮ ಸಲಹೆ ಸೂಚನೆಗಳಿಗೆ ಹಾರ್ದಿಕ ಸ್ವಾಗತ

ಇಲ್ಲಿ ಕ್ಲಿಕ್ಕಿಸಿ

Copyright © 2018 Suddinews.com . All Rights Reserved.
^ Back to Top