Fri 12 Jan 2018, 6:25AM

468X60

ಏಷ್ಯಾಕಪ್ ಟಿ20: ಭಾರತಕ್ಕೆ ಜಯ

Wednesday, February 24th, 2016 | webnews | no responses

ಬಾಂಗ್ಲಾದೇಶದ ಮೀರ್‌ಪುರ್‌ನಲ್ಲಿ ಫೆ.೨೪ರಂದು ನಡೆದ ಏಷ್ಯಾಕಪ್ ಟಿ-20 ಟೂರ್ನಿಯ ಆರಂಭಿಕ ಪಂದ್ಯದಲ್ಲಿ ಅತಿಥೇಯ ಬಾಂಗ್ಲಾದೇಶ ವಿರುದ್ಧ ಭಾರತ ೪೫ ರನ್‌ಗಳಿಂದ ಜಯಗಳಿಸಿದೆ. ಮೊದಲು ಬ್ಯಾಟಿಂಗ್ ಮಾಡಿದ ಭಾರತ ೨೦ ಓವರ್‌ಗಳಲ್ಲಿ ೬ ವಿಕೆಟ್ ಕಳೆದುಕೊಂಡು ೧೬೬ ರನ್‌ಗಳಿಸಿತ್ತು. ಭಾರತ ಪರ ರೋಹಿತ್ ಶರ್ಮಾ ೮೩, ಹಾರ್ದಿಕ್ ಪಾಂಡ್ಯ ೩೧, ಯುವರಾಜ್ ಸಿಂಗ್ ೧೫, ಸುರೇಶ್ ರೈನಾ ೧೩, ವಿರಾಟ್ ಕೊಹ್ಲಿ ೮, ಶಿಖರ್ ಧವನ್ ೨ ರನ್‌ಗಳಿಸಿದರು. ಬಾಂಗ್ಲಾ ಪರ ಅಲ್ ಅಮೀನ್ ಹುಸೇನ್ ೩ ವಿಕೆಟ್ ಪಡೆದುಕೊಂಡರು. ಗೆಲುವಿನ ಗುರಿ ಬೆಂಬತ್ತಿದ್ದ ಬಾಂಗ್ಲಾದೇಶ ೨೦ ಓವರ್‌ಗಳಲ್ಲಿ ೭ ವಿಕೆಟ್ ಕಳೆದುಕೊಂಡು ೧೨೧ ರನ್‌ಗಳಿಸಿ ಸೋಲೊಪ್ಪಿಕೊಂಡಿತು. ಬಾಂಗ್ಲಾ ಪರ ಶಬ್ಬೀರ್ ೪೪, ಮುಶಫಿರ್ ಅಜೇಯ ೧೬, ಟಾಸ್ಕಿನ್ ಅಜೇಯ ೧೫, ಕೆಯಿಸ್ ೧೪, ಸೌಮ್ಯ ಸರ‍್ಕಾರ್ ೧೧ ರನ್‌ಗಳಿಸಿದರು. ಭಾರತ ಪರ ನೆಹ್ರಾ ೩, ಬುಮ್ರಾ, ಪಾಂಡ್ಯ ಹಾಗೂ ಅಶ್ವಿನ್ ತಲಾ ೧ ವಿಕೆಟ್ ಪಡೆದುಕೊಂಡರು.

Leave a Reply


ಸುಭಾಷಿತ

ನಿನ್ನೆ ಸತ್ತಿಹುದೀಗ, ನಾಳೆ ಹುಟ್ಟದೇ ಇರಬಹುದು, ಇಂದು ಸೊಗಸಿರುವುದು, ಅದನ್ನು ಯಾಕೆ ಮರೆಯಬೇಕು.

-ಉಮರ್ ಖಯ್ಯಾದ್

ಚಿತ್ರ-ವಿಚಿತ್ರ

ಸುದ್ದಿ ಸ್ಪೆಷಲ್

Finding the right hotel just got a whole lot easier - HotelsCombined.com

ನಮ್ಮ ಬಗ್ಗೆ

ಮೊದಲಿಗೆ ಕೇವಲ ಒಂದು ಹಾಳೆಯಲ್ಲಿ ಪ್ರಕಟವಾಗುತ್ತಿದ್ದ ಪುತ್ತೂರು ಸುದ್ದಿ ಬಿಡುಗಡೆ ಪತ್ರಿಕೆ ಇಂದು ಪ್ರತಿದಿನ ಆರು ಪುಟಗಳಿಂದ
... ಮುಂದೆ ಓದಿ

ಸಲಹೆ- ಸೂಚನೆ

ನಿಮ್ಮ ಸಲಹೆ ಸೂಚನೆಗಳಿಗೆ ಹಾರ್ದಿಕ ಸ್ವಾಗತ

ಇಲ್ಲಿ ಕ್ಲಿಕ್ಕಿಸಿ

Copyright © 2018 Suddinews.com . All Rights Reserved.
^ Back to Top